General

ಡಾ|| ಬಿ. ನಂಜುಂಡಸ್ವಾಮಿ

ಪಂಡಿತ ತಾರಾನಾಥ್ ಆಯುರ್ವೇದ ಚಿಕಿತ್ಸಾಲಯ

ತುಮಕೂರು ಷಾಪಿಂಗ್ ಕಾಂಪ್ಲೆಕ್ಸ್

ಬಿ.ಹೆಚ್. ರಸ್ತೆ, ತುಮಕೂರು-572102.

ಮೊ : 9880996196

 

ವಚನ ಸಾಹಿತ್ಯದ ಪ್ರಕಟಣೆ : ಪ್ರಥಮ ಘಟ್ಟ

ವಚನ ಸಾಹಿತ್ಯ ಪ್ರಕಟಣೆ ಇತಿಹಾÀಸದ ಬಗ್ಗೆ ಇನ್ನಷ್ಟು ಸಂಶೋಧನೆಯಾಗಬೇಕು. ನಮಗೆ ಗೊತ್ತಿರುವಂತ  ವಚನ ಸಾಹಿತ್ಯದ ಪ್ರಥಮ ಪ್ರಕಟಣೆ 1882ರಲ್ಲಿ `ಅಖಂಡೇಶ್ವರ ವಚನ’ ಪ್ರಕಟಿಸಿದವರು ಧಾರವಾಡದ ಬಸಪ್ಪ ಅಣ್ಣಾ ಜವಳಿ. ಬಸವಣ್ಣನವರ ಷಟ್‍ಸ್ಥಲ ವಚನದ ಪ್ರಥಮ ಪ್ರಕಟಣೆ 1886 ಮಾರ್ಚಿ ತಿಂಗಳು ಸಂಪಾದಕರು ಮರಿಶಂಕರದೇವರು ಬಳ್ಳಾರಿ ಪುಸ್ತಕ ವ್ಯಾಪಾರಿ ಮ.ರಾ.ಎನ್. ಕೋನೇರು ಶೆಟ್ಟರು. ಈ ಕಾಲಮಾನದಲ್ಲಿ ಇನ್ನು ಕೆಲವು ಪುಸ್ತಕಗಳು ಮುದ್ರಣವಾಗಿವೆ. ಈ ಆರಂಭ ಕಾಲದ ವಚನ ಸಾಹಿತ್ಯದ ಬಗ್ಗೆ ವಿವರವಾಗಿ ಅಧ್ಯಯನ ಮಾಡಬೇಕು.

  1. ಅಖಂಡೇಶ್ವರ ವಚನ 1882
  2. ಶಿಖಾರತ್ನ ಪ್ರಕಾಶವು 1883
  3. ಸಿದ್ಧೇಶ್ವರ ವಚನವು 1885

ತೋಂಟದ ಸಿದ್ಧಲಿಂಗೇಶ್ವರ ವಚನಗಳ ಸಂಕಲನ 697 ವಚನ ಇದೆ

701 ವಚನ ಇರಬೇಕು

  1. ನಿಃಕಲರ ವಚನವು 1885
  2. ಬಸವಣ್ಣನವರ ವಚನಗಳು (1886)
  3. ಅಖಂಡೇಶ್ವರ ವಚನವು (ಸಟೀಕಾ – 1887)
  4. ಅಖಂಡೇಶ್ವರ ವಚನಶಾಸ್ತ್ರವು 1890
  5. ಅಂಬಿಗರ ಚೌಡಯ್ಯನೆಂಬ ಶಿವಯೋಗಿಯಿಂದ ವಿರಚಿಸಲ್ಪಟ್ಟ

ಅಂಬಿಗರ ಚೌಡಯ್ಯನ ವಚನ ಶಾಸ್ತ್ರವು 1905

  1. ಘನಲಿಂಗಿದೇವರು ನಿರೂಪಿಸಿದ ಕನ್ನಡ ವೀರಶೈವ ಸಿದ್ಧಾಂತ ವಚನವು (1907)
  2. ಸಟೀಕಾ ಗಣಭಾಷ್ಯ ರತ್ನಮಾಲೆ (1909) ನಂ. ಶಿವಪ್ಪಶಾಸ್ತ್ರಿಗಳು
  3. ಅಖಂಡೇಶ್ವರ ವಚನಶಾಸ್ತ್ರವು (ನಾಲ್ಕನೇ ಮುದ್ರಣ) 1911
  4. ಚೆನ್ನಬಸವಣ್ಣನವರ ವಚನಗಳು-1914
  5. ಅಂಬಿಗರ ಚೌಡಯ್ಯನಿಂದ ವಿರಚಿತವಾದ ಅಂಬಿಗರ ಚೌಡಯ್ಯನ ವಚನಶಾಸ್ತ್ರವು      1924
  6. ಅಖಂಡೇಶ್ವರ ವಚನಶಾಸ್ತ್ರವು 1917
  7. ಬಸವಣ್ಣನವರ ವಚನವು 1923

ರಾ. ನರಸಿಂಹಾಚಾರ್ಯ

ಕರ್ನಾಟಕ ಕವಿಚರಿತೆ ಭಾಗ-1 1907, ದ್ವಿತೀಯ ಮುದ್ರಣ 1924 ಭಾಗ-2, 1919 ಭಾಗ-3 1929 ಈ ಮೂರು ಪುಸ್ತಕಗಳ ರಚನೆಯಲ್ಲಿ ಅನೇಕ ವಚನಗಾರರ ಪರಿಚಯ ಅವರು ರಚಿಸಿದ ವಚನಗಳ ಉಲ್ಲೇಖದಿಂದ ವಚನ ಸಾಹಿತ್ಯದ ವಿಸ್ತಾರ ವಿಪುಲ ವಚನಗಾರರ ಮತ್ತು ವಚನಕಾರ್ತಿಯರ ಪರಿಚಯವಾಯಿತು.

ಬೆಂಗಳೂರು ಗುಬ್ಬಿ ತೋಟದಪ್ಪನವರ ಛತ್ರದಲ್ಲಿ ಚಿತ್ರದುರ್ಗ ಶ್ರೀ ಜಯದೇವ ಜಗದ್ಗುರುಗಳ ಸಾನ್ನಿಧ್ಯದಲ್ಲಿ ವಚನ ಸಾಹಿತ್ಯದ ಸೇವೆ ಸುಮಾರು 1910ರಲ್ಲಿ ಉಪನ್ಯಾಸ ಮಾಡಿದ್ದನ್ನು ಡಿ.ವಿ.ಜಿ ದಾಖಲಿಸಿದ್ದಾರೆ. ವಚನ ಸಾಹಿತ್ಯ ಸಂಪಾದನೆಗೆ ಕವಿಚರಿತೆಗಾರರ ಕೊಡುಗೆ ಕುರಿತು ವಿಶೇಷವಾದ ಅಧ್ಯಯನವಾಗಬೇಕು.

ವಚನ ಸಾಹಿತ್ಯ ಸಂಪಾದನೆಯಲ್ಲಿ

ಡಾ. ಫ.ಗು. ಹಳಕಟ್ಟಿ

ಡಾ. ಫ.ಗು. ಹಳಕಟ್ಟಿಯವರ ಸಂಸ್ಮರಣ ಗ್ರಂಥದಲ್ಲಿ ಹಳಕಟ್ಟಿಯವರ ಕೃತಿಸೂಚಿ ಲೇಖಕಸೂಚಿ ಪ್ರಕಟವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಿಂದ 1967ರಲ್ಲಿ ಪ್ರಕಟವಾದ ಲೇಖಸೂಚಿ (ಜೀವನ, ಜಯಕರ್ನಾಟಕ ಮತ್ತು ಶಿವಾನುಭವ) ಪ್ರಕಟವಾಗಿದ್ದು ಇದನ್ನು ಸಿದ್ಧಪಡಿಸಿದವರು ಎಂ.ಆರ್. ಸಣ್ಣರಾಮೇಗೌಡರವರು ಬೆಂಗಳೂರು ವಿಶ್ವವಿದ್ಯಾನಿಲಯದಿಂದ 1973ರಲ್ಲಿ ಟಿ.ವಿ. ವೆಂಕಟರಮಣಯ್ಯನವರಿಂದ ಸಂಕಲನಗೊಂಡ ಕನ್ನಡ ಭಾಷಾ ಸಾಹಿತ್ಯ ಲೇಖನ ಸೂಚಿ ಪ್ರಕಟವಾಗಿದ್ದು ಇವರಲ್ಲಿ ಶಿವಾನುಭವ ಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳು ಸೂಚಿಯನ್ನು ಒಳಗೊಂಡಿದೆ. ಬೆಂಗಳೂರಿನ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದಿಂದ ಪ್ರಕಟವಾದ ಮಣಿಹ (1982) ವಿಶೇಷ ಸ್ಮರಣ ಸಂಪುಟ ದಿ|| ಪೂಜ್ಯ ಡಾ.ಫ.ಗು. ಹಳಕಟ್ಟಿ ಜನ್ಮಶತಮಾನೋತ್ಸವದ ಸಂಸ್ಮರಣ ಸಂಪುಟದಲ್ಲಿ ಡಾ. ಫ.ಗು. ಹಳಕಟ್ಟಿಯವರ ವಾಙ್ಮಯ ಸೂಚಿ ಪ್ರಕಟವಾಗಿದ್ದು ಇದನ್ನು ಸಿದ್ಧಪಡಿಸಿದವರು ಡಾ. ಎಸ್.ಆರ್. ಗುಂಜಾಳ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರು ಬರೆದ `ವಚನ ಗುಮ್ಮಟ’ ಫ.ಗು. ಹಳಕಟ್ಟಿ ಪುಸ್ತಕ 1998 ರಲ್ಲಿ ಪ್ರಕಟವಾಗಿದ್ದು ಪುಸ್ತಕದ ಅನುಬಂಧದಲ್ಲಿ ಹಿರಿಯ ಹಸ್ತಪ್ರತಿ ವಿದ್ವಾಂಸರು, ಆಕರ ವಿಜ್ಞಾನಿಗಳು ಆದ ಎಸ್. ಶಿವಣ್ಣನವರು ಹಳಕಟ್ಟಿ ಅವರ ಜೀವನದ ಕೆಲವು ಮುಖ್ಯ ಘಟ್ಟಗಳು ಕುಟುಂಬ ವರ್ಗ, ಶಿವಾನುಭವದಲ್ಲಿ ಹಳಕಟ್ಟಿಯವರ ಪ್ರಕಟಿತ ಲೇಖನಗಳು ಶಿವಾನುಭವದಲ್ಲಿ ಪ್ರಕಟವಾದ ಕೃತಿಸೂಚಿ, ಹಳಕಟ್ಟಿಯವರ ಅಧ್ಯಕ್ಷ ಭಾಷಣಗಳು ಹಳಕಟ್ಟಿಯವರ ಬಾನುಲಿ ಭಾಷಣ. ಹಳಕಟ್ಟಿಯವರಿಗೆ ಅರ್ಪಿಸಿದ ಮಾನಪತ್ರಗಳು ಡಾ. ಫ.ಗು. ಹಳಕಟ್ಟಿಯವರನ್ನು ಕುರಿತ ಪುಸ್ತಕಗಳು, ಡಾ. ಫ.ಗು. ಹಳಕಟ್ಟಿ ಕುರಿತ ಲೇಖನಗಳು ಸೂಚಿ ಪ್ರಕಟಿಸಿ, ಮುಂದಿನ ಯುವ ಸಂಶೋಧಕರಿಗೆ ಬಹಳ ಉಪಕಾರ ಮಾಡಿದ್ದಾರೆ. ಲಿಂ|| ಡಾ. ಫ.ಗು. ಹಳಕಟ್ಟಿಯವರು ಸಂಪಾದಿಸಿದ ವಚನ ಸಾಹಿತ್ಯ ಬಹಳ ವಿಸ್ತಾರವಾದದ್ದು.

ಬಸವೇಶ್ವರರ ವಚನಗಳು

ಡಾ. ಫ.ಗು. ಹಳಕಟ್ಟಿಯವರು ತಮ್ಮ ಶಿವಾನುಭವ ಮೊದಲ ಸಂಚಿಕೆಯಲ್ಲಿ ಮತ್ತು ದ್ವಿತೀಯ ಸಂಚಿಕೆಯಲ್ಲಿ ಬಸವೇಶ್ವರರ ಷಟ್ಥ ್ಸಲ ವಚನವನ್ನು ಪ್ರಕಟಿಸಿ 1926ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಎರಡನೇ ಆವೃತ್ತಿ 1930ರಲ್ಲಿ ಮೂರು ಹಸ್ತಪ್ರತಿಗಳ ಸಹಾಯದಿಂದ ಮುದ್ರಿಸಿದ್ದಾರೆ. ಮೂರನೇ ಆವೃತ್ತಿ 1934ರಲ್ಲಿ ಬಂದಿದೆ. 1940ರಲ್ಲಿ ನಾಲ್ಕನೇ ಆವೃತ್ತಿ ಹೊರತಂದಿದ್ದಾರೆ. ಈ ಪ್ರಕಟಣೆಗೆ ಇನ್ನು ಎರಡು ಹಸ್ತಪ್ರತಿಗಳನ್ನು ಬಳಸಿದ್ದಾರೆ. ಸಂಸ್ಕøತ ಶ್ಲೋಕಗಳನ್ನು ಈ ಆವೃತ್ತಿಯಲ್ಲಿ ತಿದ್ದಿದವರು ಬಾಗಲಕೋಟೆ ಸಂಸ್ಕøತ ಪಾಠಶಾಲೆಯ ಕಲಿಗಣನಾಥಶಾಸ್ತ್ರಿಗಳು. ಈ ಆವೃತ್ತಿಯಲ್ಲಿ ಬಾಗೇವಾಡಿ ಬಸವೇಶ್ವರ ದೇವಾಲಯದ ಎರಡು ಚಿತ್ರಗಳು, ಟಿಪ್ಪಣಿಗಳು ಅರ್ಜುನವಾಡದ ಶಿಲಾಲೇಖ, ಶಿಲಾಶಾಸನದ ಭಾಷಾಂತರ ಕಠಿಣ ಶಬ್ದಗಳ ಅರ್ಥವನ್ನು ಕೊಟ್ಟಿದ್ದಾರೆ. ಡಾ. ಫ.ಗು. ಹಳಕಟ್ಟಿಯವರ ಆವೃತ್ತಿಯೇ ಮುಂದೆ ಪ್ರೊ. ಶಿ.ಶಿ. ಬಸವನಾಳರಿಗೆ ಹೆಚ್ಚಿನ ಸಂಸ್ಮರಣೆ ಮಾಡಲು ಪ್ರೇರಣೆಯನ್ನಿತ್ತಿದೆ ಎಂದು ಡಾ. ಎಸ್.ಆರ್. ಗುಂಜಾಳರವರು ಅಭಿಪ್ರಾಯಪಟ್ಟಿದ್ದಾರೆ.

ಸಟೀಕ ಬಸವೇಶ್ವರನ ವಚನಗಳು

ಹಳಕಟ್ಟಿಯವರು ಇದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಸಾಧ್ಯವಾಗಲಿಲ್ಲ. ಶಿವಾನುಭವ ಸಂಪುಟ 27 ಸಂಚಿಕೆ 3, 5, 7, 9, 10ರಲ್ಲಿ 92 ವಚನಗಳ ಟೀಕೆಯನ್ನು ಪ್ರಕಟಿಸಿದ್ದಾರೆ. ಬಸವಣ್ಣನವರ ವಚನ ಸಟೀಕವಾದ ಹಸ್ತಪ್ರತಿ ದೊರೆತ ಬಗ್ಗೆ ಬಸವೇಶ್ವರನ ವಚನಗಳು ಮುನ್ನುಡಿಯಲ್ಲಿ ಈ ಮಾಹಿತಿ ನೀಡಿದ್ದಾರೆ.  “ಈ ಎರಡನೇ ಆವೃತ್ತಿಯು ಮೂರು ಕೈಬರಹದ ಗ್ರಂಥಗಳ ಸಹಾಯದಿಂದ ಸಿದ್ಧಗೊಳಿಸಿಲ್ಪಟ್ಟಿದೆ. ಇವುಗಳಲ್ಲಿ ಎರಡು ಗ್ರಂಥಗಳು ಶ್ರೀ ಶಿವಯೋಗಮಂದಿರದಿಂದ ದೊರಕಿದವುಗಳು. ಮೂರನೆಯ ಪ್ರತಿಯು ಶ್ರೀ ಶಿವಬಸವ ಸ್ವಾಮಿಗಳು ಹುಕ್ಕೇರಿಮಠ ಮುಕ್ಕಾಮ ಹಾವೇರಿ ಇವರದು ಇರುತ್ತದೆ. ಈ ಪ್ರತಿಯು ಟೀಕೆಯುಳ್ಳದಿದ್ದು ಇದರಿಂದ ಶುದ್ಧಪಾಠಗಳನ್ನು  ಕಂಡುಹಿಡಿಯಲು ನಮಗೆ ಬಹಳ ಅನುಕೂಲವಾಯಿತು ಎಂದಿದ್ದಾರೆ. ದೊರೆತ ಟೀಕಾಪ್ರತಿಯಿಂದ ಈ ಟೀಕೆ ಸಿದ್ಧಪಡಿಸಿರಬೇಕು. ಮೂಲಹಸ್ತಪ್ರತಿ ದೊರೆತರೆ ನಿರ್ಧರಿಸುವುದು ಸುಲಭ. ದೊರೆತ ಪ್ರಾಚೀನ ಟೀಕೆಯನ್ನು ಸ್ವಲ್ಪ ಹೊಸಗನ್ನಡ ಭಾಷೆಯಿಂದ ಸರಿಪಡಿಸಿರಬಹುದು. ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

ಹೊಸಪದ್ಧತಿಯ ಬಸವಣ್ಣನವರ ವಚನಗಳು

ಬಸವಣ್ಣನವರ ವಚನಗಳನ್ನು `ಷಟ್ಸ್ ್ಥಲವಚನಗಳನ್ನಾಗಿ’ ಸಂಕಲಿಸಿದವನು ಕನಕಪುರವರಾಧೀಶ್ವರ ಎಂಬ ಸುಳುಹು ಚಿತ್ರದುರ್ಗ ಬೃಹನ್‍ಮಠದ ಸರಸ್ವತಿ ಭಂಡಾರದಲ್ಲಿ ಇರುವ 693/1 ರ ಹಸ್ತಪ್ರತಿಯಲ್ಲಿ ಬಸವಣ್ಣನವರ ವಚನಗಳ್ನು ಸಂಕಲಿಸಿದ್ದು ಆ ಬಗ್ಗೆ ಸ್ಪಷ್ಟವಾದ ಮಾಹಿತಿ ಈ ಹಸ್ತಪ್ರತಿಯಲ್ಲಿ ಇದೆ. ಹಳಕಟ್ಟಿಯವರು ಹೊಸಪದ್ಧತಿ ವಚನವನ್ನು ಎಲ್ಲಾ ಧರ್ಮೀಯರಿಗೂ ಆಕರ್ಷಣೆಯಾಗುವಂತೆ ಹೊಸ ದೃಷ್ಟಿಕೋನದಿಂದ ವಿಭಾಗಿಸಿ `ಹೊಸ ಪದ್ಧತಿಯ ಬಸವೇಶ್ವರನ ವಚನಗಳು ಎಂಬ ಗ್ರಂಥವನ್ನ 1942ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಿಸಿದರು. ವಚನಗಳ ಆಯ್ಕೆ ಮತ್ತು ಜೋಡಣೆಯಲ್ಲಿ ವ್ಯತ್ಯಾಸಗೊಳಿಸಿದರು. 1950 ರಲ್ಲಿ ಒಂದು ಆವೃತ್ತಿ ಬಂದಿದೆ. 1999ರಲ್ಲಿ ಗದಗಿನ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ಪೀಠಾರೋಹಣ ರಜತ ಸಂಪುಟದ 15ನೇ ಕುಸುಮವಾಗಿ ಮುದ್ರಣವಾಗಿದೆ. 2008 ರಲ್ಲಿ ಪ್ರಕಟವಾದ ಫ.ಗು. ಹಳಕಟ್ಟಿಯವರ ಸಮಗ್ರ ಸಂಪುಟ-1 ರಲ್ಲಿ ಪ್ರಕಟವಾಗಿದೆ.

ಪ್ರಭುದೇವರ ವಚನಗಳು

ಮಹಾಲಿಂಗದೇವರು ಪ್ರಭುದೇವರ ಷಟ್‍ಸ್ಥಲ ವಚನಗಳನ್ನು ಸಂಕಲಿಸಿ ಅವಕ್ಕೆ ವ್ಯಾಖ್ಯಾನ ಬರೆದವರು. ಈ ಸಂಕಲನ ಆರಂಭಿಕ ಗದ್ಯದಿಂದ ಗುರು ಶಿಷ್ಯ ಸಂಬಂಧವನ್ನು ಈ ರೀತಿ ಗುರುತಿಸಬಹುದು. ಮಹಾಲಿಂಗದೇವ-ಕುಮಾರ ಬಂಕನಾಥದೇವರು-ಭಕ್ತಿಭಂಡಾರಿ ಜಕ್ಕಣ್ಣ ಕೃತಿಯ ಪ್ರಾರಂಭದಲ್ಲಿ ಪ್ರಭುದೇವರ ತಿಂಡಿ ಸಂಭವ ಗದ್ಯವಿದೆ. ಹಳಕಟ್ಟಿಯವರು ನಾಲ್ಕು ಹಸ್ತಪ್ರತಿಗಳಿಂದ ಕೃತಿಯನ್ನು ಸಂಪಾದಿಸಿದ್ದಾರೆ. ಈ ಕೃತಿಯ ಮುದ್ರಣ ಸಮಯದಲ್ಲಿ ಡಾ. ಎಸ್.ಸಿ. ನಂದೀಮಠ ಬಿಜಾಪುರದಲ್ಲಿ ಕೆಲವು ದಿವಸ ನಿಂತು ಗ್ರಂಥದ ಬಹುಭಾಗವನ್ನು ಬರೆಯಿಸಿ ತಿದ್ದಿ ಅಚ್ಚಿಗೆ ಸಿದ್ಧಗೊಳಿಸಿದರು. ಈ ಗ್ರಂಥದ ಮುದ್ರಣಕ್ಕೆ ಹುಬ್ಬಳ್ಳಿಯ ಮೂರುಸಾವಿರಮಠದ ಅಂದಿನ ಮಠಾಧೀಶರಾಗಿದ್ದ ಶ್ರೀಮಜ್ಜಗದ್ಗುರು ಶ್ರೀಗುರುಸಿದ್ಧರಾಜ ದೇಶಿಕೇಂದ್ರ ಮಹಾಸ್ವಾಮಿಗಳು 500 ರೂ ಧನಸಹಾಯ ಮಾಡಿದ್ದಾರೆ. 1931ರಲ್ಲಿ ಪ್ರಕಟವಾದ ಈ ಗ್ರಂಥದಲ್ಲಿ 694 ವಚನಗಳು ಟೀಕಾ ಸಮೇತ ಮುದ್ರಣವಾಗಿವೆ.

ಚನ್ನಬಸವೇಶ್ವರ ವಚನಗಳು

ಶಿವಾನುಭವ ಗ್ರಂಥಮಾಲೆಯ 32ನೆಯ ಪುಷ್ಪವಾಗಿ 1932ರಲ್ಲಿ ಪ್ರಕಟವಾದ ಚನ್ನಬಸವೇಶ್ವರನ ವಚನಗಳು ಗ್ರಂಥದ ಕಡೆಯಲ್ಲಿ “ಇಂತು ಷಟ್‍ಸ್ಥಲಕ್ಕೆ ಸೇರಿದ ವಚನ 319 ಕ್ಕೂ ಗ್ರಂಥ 90ಕ್ಕಂ ಮಂಗಳ ಮಹಾಶ್ರೀ” ಇಂತಿ ಚನ್ನಬಸವೇಶ್ವರ ದೇವರು ನಿರೂಪಿಸಿದ ಅನುಭಾವದ ವಚನ. ಈ ಸಮಾಪ್ತಿ ವಾಖ್ಯದ ನಂತರ ಚನ್ನಬಸವೇಶ್ವರ ದೇವರು ನಿರೂಪಿಸಿದ ಅನುಭಾವದ ವಚನವಿದೆ. ಕಡೆಯಲ್ಲಿ ಸ್ವರವಚನ ಇದ್ದು, ಈ ಸ್ವರವಚನದಲ್ಲಿ ಸಂಕಲನಗಾರ ಅನುಭಾವಿ ರಚಿಸಿರಬಹುದು. ಈ ಕೃತಿ ಧಾರವಾಡ ಸಮಾಜ ಪುಸ್ತಕಾಲಯದಿಂದ 1966ರಲ್ಲಿ ಮರುಮುದ್ರಣವಾಗಿದೆ. ಗದಗಿನ ವೀರಶೈವ ಅಧ್ಯಯನ ಸಂಸ್ಥೆಯಿಂದ 1990ರಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಂದ ಸಂಪಾದನೆಗೊಂಡ ಚನ್ನಬಸವಣ್ಣನವರ ಷಟ್ಸ್ ್ಥಲವಚನ ಮಹಾಸಂಪುಟದಲ್ಲಿ (266-414) ಮುದ್ರಣವಾಗಿದೆ. ಇಲ್ಲಿ 322 ವಚನಗಳಿವೆ. ಹಳಕಟ್ಟಿಯವರಿಗೆ ಈ ಪುಸ್ತಕ ವಿಜಾಪುರದ ಶಿ.ಮೂ. ಸೊಪ್ಪಯ್ಯನವರ ಮಠದಲ್ಲಿ ದೊರೆತದ್ದು ಮತ್ತೊಂದು ಗೋಕಾನಿಯಿಂದ ಡಾ. ಎಸ್.ಸಿ. ನಂದೀಮಠ ಅವರು ಕಳುಹಿಸಿ ಕೊಟ್ಟಿದ್ದು. ಈ ಪುಸ್ತಕಕ್ಕೆ ದ್ರವ್ಯ ಸಹಾಯ ಮಾಡಿದವರು ಹುಬ್ಬಳ್ಳಿಯ ರಾ.ರಾ. ವಿರೂಪಾಕ್ಷಪ್ಪ ಶಿವಲಿಂಗಪ್ಪ ಪಾವಟೆ.

ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆ

1930ರಲ್ಲಿ ಶಿವಾನುಭವ ಮಾಲೆಯ 22ನೇ ಪುಷ್ಪವಾಗಿ ಪ್ರಕಟಿಸಿದರು. ಈ ಗ್ರಂಥ ಮುದ್ರಣಕ್ಕೆ ಆರ್ಥಿಕ ಸಹಾಯಹಸ್ತ ನೀಡಿದವರು ರಾ.ರಾ. ವೀರಭದ್ರಪ್ಪ ಬಸಪ್ಪ ಹಾಲಭಾವಿಯವರು. ಇವರ ಸೂಚನೆ  ಮೇರೆಗೆ ಮಹಾಶಿವಾನುಭವಿಗಳಾದ ಶಿವಶರಣರ ಮಾರ್ಗವನ್ನು ಕೈಕೊಂಡು ಅವರಂತೆ ನಿತ್ಯ ಆಚರಿಸಿ ಸೊಲ್ಲಾಪುರದಲ್ಲಿ ವಾಸಿಸಿ, ಅಲ್ಲಿಯೇ ಕೆಲವು ವರ್ಷಗಳ ಹಿಂದೆ ಶಿವೈಕ್ಯರಾಗಿ ಹೋದ ನಾಲವತ್ತವಾಡದ ಶಿ.ಮೂ. ವೀರಯ್ಯನವರು ಶಿವಶರಣ ಇವರಿಗೆ ಸಮರ್ಪಿಸಲ್ಪಟ್ಟಿದೆ. ಶೂನ್ಯಸಂಪಾದನೆ ಇತಿಹಾಸ ಬಹಳ ದೊಡ್ಡದು. ಹಳಕಟ್ಟಿಯವರು ಮುದ್ರಣ ಮಾಡುವ ಮುಂಚೆ ಅಲ್ಲಲ್ಲಿ ಕೆಲವೇ ಜನ ಅನುಭಾವಿಗಳು ಈ ಗ್ರಂಥವನ್ನು ಅಧ್ಯಯನ ಮಾಡುತ್ತಾ ಇದ್ದರು. ಧಾರವಾಡ ಮುರುಘಾಮಠದಲ್ಲಿ 1925ನೆಯ ಜೂನ್ ತಿಂಗಳಲ್ಲಿ ಶ್ರೀಮನ್ ನಿರಂಜನ ಪ್ರಣವ ಸ್ವರೂಪಿ ಮೃತ್ಯುಂಜಯಸ್ವಾಮಿಗಳು ಕೈಲಾಸವಾಸಿ ಕಿಣಗಿ ಬಸವಲಿಂಗಪ್ಪನವರಿಂದ ವಚನ ಪ್ರವಚನ ಏರ್ಪಡಿಸಿದ್ದು ಆ ಸಂದರ್ಭದಲ್ಲಿ ಶೂನ್ಯಸಂಪಾದನೆಯ ಒಂದೆರಡು ಸಂಪಾದನಗಳ ಅರ್ಥವನ್ನು ಅವರಿಂದ ತಿಳಿದುಕೊಂಡಿದ್ದೆನು ಎಂದು ಹರ್ಡೇಕರ ಮಂಜಪ್ಪನವರು ನನ್ನ ಕಳೆದ ಮೂವತ್ತು ವರುಷಗಳ ಕಾಣಿಕೆ ಎಂಬ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.

ಸಾಂಗಲಿ ಸಂಸ್ಥಾನಕ್ಕೆ ಸೇರಿದ ರಬಕವಿ ಗ್ರಾಮದ ಕಾಗದದ ಹಸ್ತಪ್ರತಿ, ಮೈಸೂರು ಸಂಸ್ಥಾನದ ಕೋಲಾರ ಜಿಲ್ಲೆ ಮೃಗಮಲೆಯ ಶ್ರೀ ಬಸವರಾಜ ಮರಿದೇವರಲ್ಲಿ ದೊರೆತ ತಾಡೋಲೆ. ಈ ಎರಡು ಹಸ್ತಪ್ರತಿಗಳನ್ನು ಉಪಯೋಗಿಸಿಕೊಂಡು ಗೂಳೂರ ಸಿದ್ಧವೀರಣ್ಣೊಡೆಯರ ಶೂನ್ಯಸಂಪಾದನೆಯನ್ನು ಪ್ರಪ್ರಥಮವಾಗಿ ಸಂಪಾದಿಸಿ ಲೋಕಾರ್ಪಣೆ ಮಾಡಿದ ಕೀರ್ತಿ ಹಳಕಟ್ಟಿಯವರದು. ಈ ಮುದ್ರಿತ ಪ್ರತಿ ವಚನಸಾಹಿತ್ಯಾಸಕ್ತರಲ್ಲಿ ಬಹುದೊಡ್ಡ ಸಂಚಲನವನ್ನು ಉಂಟು ಮಾಡಿತು.

ಸಟೀಕ ಶೂನ್ಯಸಂಪಾದನೆ (ಸಿದ್ಧರಾಮಯ್ಯದೇವರ ಗುರುಕರುಣ) (ದಶಮೋಪದೇಶ)

ಈ ಟೀಕಾಕೃತಿ ಶಿವಾನುಭವ ಗ್ರಂಥಮಾಲಾ 78ನೇ ಕುಸುವiವಾಗಿ 1954ರಲ್ಲಿ ಮುದ್ರಣವಾಗಿದೆ. 8+37 ಪುಟದ ಈ ಪುಸ್ತಕದ ಅಂದಿನ ಬೆಲೆ 1 ರೂ 4 ಆಣೆ. ಕೃತಿಯನ್ನು ಅಥಣಿ ಶಿವಯೋಗಿಗಳಿಗೆ ಅರ್ಪಿಸಲಾಗಿದೆ. ಪೂಜ್ಯರ ಫೋಟೋ ಕೆಳಗೆ “ಬಸವಣ್ಣನವರ ಶಿವಧರ್ಮದಂತೆ ನಡೆದು ನುಡಿದು ಸಿದ್ಧಿಯನ್ನು ಪಡೆದ ಮಹಾಮಹಿಮರಾದ ಶ್ರೀ ಶ್ರೀ ಅಥಣಿ ಮುರುಘೇಂದ್ರ ಶಿವಯೋಗಿಗಳು ಎಂದು ಬರೆಯಲಾಗಿದೆ. ಕೃತಿ ಪ್ರಕಟಣೆಗೆ ಬೇಕಾದ ಹಸ್ತಪ್ರತಿ ಲಭ್ಯವಾದದ್ದು ಶಿವಯೋಗ ಮಂದಿರದಲ್ಲಿ ಗ್ರಂಥದ ಮುದ್ರಣಕ್ಕೆ ಬೇಕಾದ ದ್ರವ್ಯ ಸಹಾಯವನ್ನು ಮಾಡಿದವರು ಶ್ರೀಯುತ ಕುರುವತ್ತೆಪ್ಪ ಕುರವತ್ತಿ ಮುಕ್ಕಾಮ ರಾಣಿಬೆನ್ನೂರು ಇವರು.

ಗೂಳೂರು ಸಿದ್ಧವೀರಣ್ಣೊಡೆಯರ ಹತ್ತನೇ ಅಧ್ಯಾಯವನ್ನು ಸಂಪೂರ್ಣವಾಗಿ ಮುದ್ರಿಸಿ ಆ ನಂತರ ಭಾವಾರ್ಥ ಎಂದು ಬರೆಯಲಾಗಿದೆ. ಹಸ್ತಪ್ರತಿಯಲ್ಲಿ ಇದೇ ರೀತಿ ಇತ್ತೆ? ಅಥವಾ ಹಳಕಟ್ಟಿ ಅವರು ಟೀಕೆಯನ್ನು ಅಧ್ಯಯನ ಮಾಡಿ ಅವರ ಭಾವಾರ್ಥವನ್ನು ತಮ್ಮದೇ ಆದ ದಾಟಿಯಲ್ಲಿ ಬರೆದರೆ ಮೂಲ ಹಸ್ತಪ್ರತಿಯ ಜೊತೆ ತುಲನೆ ಮಾಡಿದರೆ ಮಾತ್ರ ಸ್ಪಷ್ಟವಾದ ಮಾಹಿತಿ ಲಭ್ಯವಾಗುತ್ತದೆ. ವೀರಶೈವ ಸಿದ್ಧಾಂತವನ್ನು ಅಧ್ಯಯನ ಮಾಡುವವರಿಗೆ ಈ ಭಾವಾರ್ಥ ಒಂದು ದೊಡ್ಡ ನಿಧಿ ಅಂಗದ ಮೇಲೆ ಲಿಂಗ ಧರಿಸಲೆಬೇಕು ಎಂದು ಗಟ್ಟಿಯಾಗಿ ಪ್ರತಿಪಾದಿಸುವ ಅಪರೂಪದ ಪುಸ್ತಕ. ಎಲ್ಲಾ ಪುರಾತನರಲ್ಲಿ ಅಲ್ಲಮಪ್ರಭುವು ಮಹಾನುಭಾವ ಸದ್‍ಗೋಷ್ಠಿಯನ್ನು ಮಾಡಿದ್ದನ್ನು ಶೂನ್ಯಸಂಪಾದನೆಯಲ್ಲಿ ಸಿದ್ಧರಾಮಯ್ಯದೇವರ ಗುರುಕಾರುಣ್ಯದ 10ನೇ ಉಪದೇಶವು ಇಲ್ಲಿಗೆ ಸಮಾಪ್ತವಾಯಿತು.

ಶೂನ್ಯ ಸಂಪಾದನೆ (ಭಕ್ತ ಜಂಗಮದ ಸ್ಥಲ) (ಪಂಚಮೋಪದೇಶ)

ಹಳಕಟ್ಟಿಯವರಿಂದ ಸಂಪಾದನೆಗೊಂಡು ಶಿವಾನುಭವ ಗ್ರಂಥಮಾಲಾ 79ನೇ ಗ್ರಂಥ 1954ರಲ್ಲಿ ಮುದ್ರಣವಾಗಿದ್ದು. ಅಂದಿನ ಬೆಲೆ 7 ಆಣಿ. ಇಲ್ಲಿ ಗೂಳೂರು ಸಿದ್ಧವೀರಣ್ಣೊಡೆಯನ ಶೂನ್ಯಸಂಪಾದನೆ ಗ್ರಂಥದ ಪಂಚಮೋಪದೇಶ ಅಧ್ಯಾಯ ಯಥಾವತ್ತಾಗಿ ಮುದ್ರಣವಾಗಿದ್ದು ಬಿಟ್ಟರೆ ಯಾವ ವಿಧವಾದ ಟೀಕೆಯು ಮುದ್ರಣವಾಗಿಲ್ಲ. ಯಾವುದೋ ಸಂದರ್ಭಕ್ಕೆ ಒಂದು ಅಧ್ಯಾಯವನ್ನು ಪುಸ್ತಕ ರೂಪದಲ್ಲಿ ಅಚ್ಚು ಮಾಡಿದ್ದಾರೆ. ಅಂದಿನ ಕಾರಣ ತಿಳಿದು ಬಂದಿಲ್ಲ. ಈ ಪುಸ್ತಕ ಮುದ್ರಣಕ್ಕೆ ಶ್ರೀ ಮ.ನಿ.ಪ್ರ ಹಾಲಕೆರೆ ಅನ್ನದಾನ ಸ್ವಾಮಿಗಳು ಮುದ್ರಣ ವೆಚ್ಚವನ್ನು ಆಶೀರ್ವದಿಸಿದ್ದಾರೆ. ಅವರ ಭಾವಚಿತ್ರವನ್ನು ಕೃತಿಯ ಆರಂಭದಲ್ಲಿ  ಮುದ್ರಿಸಲಾಗಿದೆ.

ಸಟೀಕ ಶೂನ್ಯಸಂಪಾದನೆ (ಸಿದ್ಧರಾಮಯ್ಯದೇವರ ಸಂಪಾದನೆ) (ತೃತಿಯೋಪದೇಶ)

ಹಳಕಟ್ಟಿಯವರಿಂದ ಸಂಪಾದನೆಗೊಂಡು ಶಿವಾನುಭವ ಗ್ರಂಥಮಾಲೆಯ 77ನೆಯ ಗ್ರಂಥವಾಗಿ 1954ರಲ್ಲಿ ಮುದ್ರಣಗೊಂಡಿದೆ. ಅಂದಿನ ದಿನಮಾನದ ಈ ಕಿರುಪುಸ್ತಕದ ಬೆಲೆ 1ರೂ. ನಾವು ಈ ಗ್ರಂಥವನ್ನು ಈ ಮೊದಲಿಗೆ ಪ್ರಸಿದ್ಧಿಸಿದ ಶೂನ್ಯಸಂಪಾದನೆ ಗ್ರಂಥ ಮತ್ತು ಶಿವಯೋಗ ಮಂದಿರದಲ್ಲಿ ದೊರೆತ ಕೈಬರಹದ ಪ್ರತಿ ಒಂದರ ಸಹಾಯದಿಂದ ಅಚ್ಚಿಗಾಗಿ ಸಿದ್ಧಪಡಿಸಿದ್ದೇನೆ.

ಗೊಳೂರು ಸಿದ್ಧವೀರಣ್ಣಡೆಯನ `ಸಿದ್ಧರಾಮಯ್ಯಗಳ ಸಂಪಾದನೆ’ ತೃತಿಯೋಪದೇಶವನ್ನು ಸಂಪೂರ್ಣವಾಗಿ ಮುದ್ರಿಸಿ ನಂತರ ಸಿದ್ಧರಾಮಯ್ಯದೇವರ ಸಂಪಾದನೆ ಭಾವಾರ್ಥ ಬರೆದಿದ್ದು `ದೇವಾಲಯಗಳ ನಿರಾಕರಣಿ’, `ಲಿಂಗತನುವಿನ ಸ್ವರೂಪ’ `ಪರಮಾತ್ಮನು ಸ್ತುತಿಪ್ರಿಯನಲ್ಲ’ – ಭಕ್ತಪ್ರಿಯನು ಮುಂತಾದ ವಿಷಯಗಳನ್ನು ವಿವರವಾಗಿ ಚರ್ಚಿಸಲಾಗಿದೆ.

ಸಿದ್ಧಲಿಂಗೇಶ್ವರನ ಏಕೋತ್ತರ ಶತಸ್ಥಲ

ಶಿವಾನುಭವ ಗ್ರಂಥಮಾಲಾ 14ನೇ ಪುಸ್ತಕವಾಗಿ ಪ್ರಕಟವಾದ ಈ ಪುಸ್ತಕದ ಮುದ್ರಣವರ್ಷ ನಮೂದಾಗಿಲ್ಲ. ಈ ಪುಸ್ತಕದ ಬೆಲೆ 1-4-0 ಹಳಕಟ್ಟಿಯವರಿಗೆ ಹಸ್ತಪ್ರತಿ ದೊರೆತದ್ದು ಆದವಾನಿಯ ರಾ.ರಾ. ಈಶ್ವರಪ್ಪ ಸೌದ್ರಿ ಎಂಬ ಮಹನೀಯರಿಂದ ಮಹಾಲಿಂಗದೇವರು (ಸು. 1430) ಏಕೋತ್ತರ ಶತಸ್ಥಲ ಕೃತಿಯನ್ನು ರಚಿಸಿದವರು. ಅವರ ಶಿಷ್ಯ ಜಕ್ಕಣ್ಣ ಅಥವಾ ಜಕ್ಕಣಾರ್ಯ (ಸು. 1430) ಸ್ವರ ಏಕೋತ್ತರ ಶತಸ್ಥಲದ ವಚನವನ್ನು ರಚಿಸಿದವನು. ಕೃತಿಯ ಅಂತ್ಯದಲ್ಲಿ ಸಿದ್ಧಲಿಂಗೇಶ್ವರ ಶತಕದ 1 ಒಂದೊಂದು ವೃತ್ತವನ್ನು ಸೇರಿಸಿದ್ದರಿಂದ ಕೃತಿಗೆ ಸಿದ್ಧಲಿಂಗೇಶ್ವರ ಏಕೋತ್ತರ ಶತಸ್ಥಲ ಎಂದು ಕರೆದರು. ಈ ಬಗ್ಗೆ ಇನ್ನು ನಿಖರವಾದ ಅಧ್ಯಯನವಾಗಿಲ್ಲ. ಈ ಹಿಂದೆ ಈ ವೃತ್ತಗಳು ವಿರಕ್ತ ತೋಂಟದಾರ್ಯ ರಚಿಸಿದ್ದು ಎಂದುಕೊಂಡಿದ್ದು ಆದರೆ ವಿರಕ್ತ ತೋಂಟದಾರ್ಯನ ಸಿದ್ಧಲಿಂಗೇಶ್ವರ ಶತಕದಲ್ಲಿ ನಿರಂಜನಲಿಂಗ ಅಂಕಿತವಿದೆ. ಸಿದ್ಧಲಿಂಗೇಶ್ವರ ಅಂಕಿತದ 101 ವೃತ್ತಗಳಲ್ಲಿ ನಿರಂಜನಲಿಂಗದ ಅಂಕಿತವಿಲ್ಲ.

ಅಂಬಿಗರ ಚೌಡಯ್ಯನ ವಚನಗಳು

ಶಿವಾನುಭವ ಗ್ರಂಥಮಾಲಾ ನಂ 40 ರ ಪುಸ್ತಕವಾಗಿ 1934ರಲ್ಲಿ ಪ್ರಕಟವಾಗಿದೆ. ಹಲವು ಹಸ್ತಪ್ರತಿಗಳ ಸಹಾಯದಿಂದ ವಚನಗಳನ್ನು ಒಂದೆಡೆ ಸಂಗ್ರಹಿಸಿ ವಿಷಯಾನುಸಾರ ಜೋಡಿಸಿ ಪ್ರತಿಯೊಂದು ವಚನಗಳಿಗೆ ಅದರ ಭಾವವನ್ನು ಬರೆಯಲಾಗಿದೆ. ಹಳಕಟ್ಟಿಯವರು ಈ ಕೃತಿ ಸಂಪಾದಿಸುವಾಗ ಮುದ್ರಿತ “ಅಂಬಿಗರ ಚೌಡಯ್ಯನ ವಚನವು ಪುಸ್ತಕ ಲಭ್ಯವಿತ್ತು. 1905ರಲ್ಲಿ ಮುದ್ರಣವಾದ ಈ ಪುಸ್ತಕದ ಸಂಪಾದಕರು “ಗಣೀಶೋಪಾಸಕ’’ ಈ ಕಾವ್ಯನಾಮದ ಕವಿಯ ಹೆಸರು ಗುಂಡಭಟ್ಟ ಬೆಳಗುಪ್ಪಿ.

ಬಸವಪಥ ಸಂಪುಟ 27 ಸಂಚಿಕೆ 8 2005 ನವೆಂಬರ್‍ನಲ್ಲಿ “ಅಂಬಿಗರ ಚೌಡಯ್ಯನ ವಚನವು’’ ವಚನ ಸಂಕಲನ ಗ್ರಂಥ ಶೋಧಿಸಿದ ಗಣೀಶೋಪಾಸಕನು ಯಾರು? ಎಂಬ ಲೇಖನದಲ್ಲಿ ವಿವರವಾಗಿ ಬರೆಯಲಾಗಿದೆ. 1924ರಲ್ಲಿ ಇದೇ ಪುಸ್ತಕದ ದ್ವಿತೀಯ ಮುದ್ರಣವಾಗಿದ್ದು ಪುಸ್ತಕದ ಹೆಸರು “ಅಂಬಿಗರ  ಚೌಡಯ್ಯನ ವಚನಶಾಸ್ತ್ರವು” ಎಂದು ಬದಲಾಯಿಸಲಾಗಿದೆ.

ಆತುರವೈರಿ ಮಾರೇಶ್ವರ ವಚನಗಳು

ಮಾರಿತಂದೆಯ ಪರಿಚಯ ಲೇಖನವನ್ನು ಮತ್ತು ಏಳು ವಚನಗಳನ್ನು ಶಿವಾನುಭವ ಪತ್ರಿಕೆಯ ಸಂಪುಟ 18 ಜೂನ್ ಸಂಚಿಕೆಯಲ್ಲಿ 1944ರಲ್ಲಿ ಅಚ್ಚು ಮಾಡಲಾಗಿದೆ. ಹಳಕಟ್ಟಿಯವರಿಗೆ ಅಂದಿನ ದಿನಮಾನಕ್ಕೆ ಇಪ್ಪತ್ತೈದು ವಚನಗಳು ಲಭ್ಯವಿದ್ದು ಆದರೆ ಏಳು ವಚನಗಳನ್ನು ಮಾತ್ರ ಮುದ್ರಿಸಿದ್ದರು.

ಆದಯ್ಯನ ವಚನವು

ಶಿವಾನುಭವ ಗ್ರಂಥಮಾಲೆಯ 23ನೇ ಪುಸ್ತಕವಾಗಿ 1931ರಲ್ಲಿ ಮುದ್ರಣವಾಗಿದೆ. ಹಲವು ಹಸ್ತಪ್ರತಿಗಳ ಸಂಗ್ರಹದಿಂದ 151 ವಚನಗಳನ್ನು ಒಂದೆಡೆ ಸಂಗ್ರಹಿಸಲಾಗಿದೆ. ಹತ್ತು ವಚನಗಳ ಪ್ರಾಚೀನ ಟೀಕೆಯನ್ನು ಯಥಾವತ್ತಾಗಿ ಮುದ್ರಿಸಲಾಗಿದೆ.

ಉರಿಲಿಂಗ ಪೆದ್ದಿಯ ವಚನಗಳು

ಶಿವಾನುಭವ ಗ್ರಂಥಮಾಲಾ 43ನೇ ಪುಸ್ತಕವಾಗಿ 1935ರಲ್ಲಿ ಉರಿಲಿಂಗ ಪೆದ್ದಿಯ ವಚನಗಳು ಮುದ್ರಣವಾಗಿದೆ. ಅಂದಿನ ಪುಸ್ತಕದ ಬೆಲೆ 1 ರೂಪಾಯಿ, ಉರಿಲಿಂಗ ಪೆದ್ದಿಯ ವಚನಗಳು ಒಂದೇ ಕಡೆ ದೊರೆಯುವುದಿಲ್ಲ, ಹಲವು ಹಸ್ತಪ್ರತಿಗಳ ಸಹಾಯದಿಂದ ಸಂಗ್ರಹಿಸಲಾಗಿದೆ. ಈ ವಚನಗಳಲ್ಲಿ ಸಂಸ್ಕøತ ಆಧಾರ ಶ್ಲೋಕಗಳು ಬಹಳವಾಗಿ ಬಂದಿರುತ್ತದೆ. ಅವು ಲಿಪಿಗಾರ ದೋಷದಿಂದ ಬಹಳ ಅಶುದ್ಧವಾಗಿವೆ. ಅವುಗಳನ್ನು ಶುದ್ಧಪಡಿಸುವುದು ಬಹಳ ಕಷ್ಟಕರವಾದದ್ದು ಎಂದಿದ್ದಾರೆ. ಪ್ರತಿಯೊಂದು ವಚನಕ್ಕೂ ವಚನಾರ್ಥವನ್ನು ವಚನದ ಭಾವ ಎಂದು ಹಳಕಟ್ಟಿಯವರೇ ಬರೆದಿದ್ದಾರೆ.

ಗಣದಾಸಿ ವೀರಣ್ಣನವರ ವಚನಗಳು

ಶಿವಾನುಭವ ಗ್ರಂಥಮಾಲಾ 7ನೇ ಪುಸ್ತಕವಾಗಿ 1926ರಲ್ಲಿ ಪ್ರಕಟವಾಯಿತು. ಅಂದಿನ ಪುಸ್ತಕದ ಬೆಲೆ ನಾಲ್ಕಾಣೆ ಮೂರು ಹಸ್ತಪ್ರತಿಗಳ ಸಹಾಯದಿಂದ ಈ ಗ್ರಂಥವನ್ನು ಸಂಪಾದಿಸಲಾಗಿದೆ. ಮೂವತ್ತೇಳು ವಚನಗಳ ಈ ಕೃತಿಯಲ್ಲಿ ಅಷ್ಟಾವರಣದ ಬಗ್ಗೆ ವಿಶೇಷವಾದ ವಚನಗಳಿವೆ.

ದೇವರ ದಾಸಿಮಯ್ಯನ ವಚನಗಳು = ಜೇಡರ ದಾಸಿಮಯ್ಯನ ವಚನಗಳು

ಶಿವಾನುಭವ ಗ್ರಂಥಮಾಲಾ 15ನೇ ಪುಸ್ತಕವಾಗಿ 1931ರಲ್ಲಿ ಮುದ್ರಣವಾಗಿದೆ. ಬಸವಣ್ಣನವರಿಗಿಂತ ಹಿಂದಿನವರು ಎಂದು ಹಳಕಟ್ಟಿಯವರು ತಮ್ಮ ಅಧ್ಯಯನದಿಂದ ನಿರ್ಧರಿಸಿದ್ದಾರೆ.  ಜೇಡರ ದಾಸಿಮಯ್ಯನ ವಚನವನ್ನು ಸಂಗ್ರಹಿಸಲು ಹಳಕಟ್ಟಿಯವರು ಹತ್ತಾರು ಹಸ್ತಪ್ರತಿಗಳನ್ನು ಉಪಯೋಗಿಸಿಕೊಂಡಿದ್ದಾರೆ. ದೇವರ ದಾಸಿಮಯ್ಯನ ಜೀವನ ವೃತ್ತಾಂತವನ್ನು ತಿಳಿಸುವ ಉಪಯುಕ್ತ ಗ್ರಂಥಗಳ ಒಂದು ಪಟ್ಟಿಯನ್ನು ನೀಡಿದ್ದಾರೆ. ಜೇಡರ ದಾಸಿಮಯ್ಯನ ವಚನಗಳಿಗೆ ಉಪಶೀರ್ಷಿಕೆಗಳನ್ನು ಕೊಟ್ಟು ಅವುಗಳ ಕೆಳಗೆ ವಚನಗಳನ್ನು ಮುದ್ರಣ ಮಾಡಿದ್ದಾರೆ. ಪ್ರತಿಯೊಂದು ವಚನದ ಭಾವಾರ್ಥವನ್ನು ಹೊಸಗನ್ನಡದಲ್ಲಿ ಕೊಟ್ಟಿದ್ದಾರೆ. ವಚನದ ಕೆಳಗೆ ಕಠಿಣಪದದ ಅರ್ಥಗಳನ್ನು ಕೊಟ್ಟಿದ್ದಾರೆ.

ಮಡಿವಾಳ ಮಾಚಿದೇವನ ವಚನಗಳು

ಶಿವಾನುಭವ ಗ್ರಂಥಮಾಲೆಯ 50ನೇ ಪುಸ್ತಕವಾಗಿ 1929ರಲ್ಲಿ ಹಳಕಟ್ಟಿಯವರು ಪ್ರಕಟಿಸಿದ್ದಾರೆ.  ಪುಸ್ತಕದ ಬೆಲೆ ಆರು ಆಣಿ. ಹಲವು ಹಸ್ತಪ್ರತಿಗಳಿಂದ ಸಂಗ್ರಹಿಸಿ ವಿಷಯಾನುಸಾರ ಹೊಂದಿಸಿ ಈ ಗ್ರಂಥವನ್ನು ರಚಿಸಿರುತ್ತಾರೆ. ಹಳಕಟ್ಟಿಯವರು ಮಡಿವಾಳ ಮಾಚಿದೇವನ ವಚನಗಳ ಬಗ್ಗೆ ಈ ರೀತಿ ಅಭಿಪ್ರಾಯಪಟ್ಟಿದ್ದಾರೆ. ಪುರಾತನ ವಚನಗಳಂತೆಯೇ ಅವನ ಓಜಸ್ಸು ಇದೆ, ಒಲವು ಇದೆ. ಅವು ಈಚಿನ ವಚನಗಳಂತೆ ಉದ್ದವಾದವುಗಳಲ್ಲ. ಅವುಗಳ ಭಾವಪೂರಿತವೂ ಅರ್ಥ ಬೋಧಕವೂ ಇರುತ್ತವೆ.

ಅವನ ವಚನಗಳಲ್ಲಿ ಅಲ್ಲಲ್ಲಿ ಸಂಸ್ಕøತ ಅವತರಣಗಳೂ ಕಂಡುಬರುತ್ತವೆ. ಇದರ ಮೇಲಿಂದ ಅವನು ಬಹುಶ್ರುತನೂ ವಿದ್ವಾಂಸನು ಆಗಿದ್ದನೆಂದು ತೋರುತ್ತವೆ.

ಮಹಾದೇವಿಯಕ್ಕನ ವಚನಗಳು

ಶಿವಾನುಭವ ಗ್ರಂಥಮಾಲಾ ಮೂರನೇ ಪುಸ್ತಕವಾಗಿ 1926ರಲ್ಲಿ ಮಹಾದೇವಿಯಕ್ಕನ ವಚನಗಳು ಪ್ರಕಟವಾಯಿತು. ಅಂದಿನ ಪುಸ್ತಕದ ಬೆಲೆ ಆರು ಆಣಿ. ಹಳಕಟ್ಟಿಯವರು ವಿವಿಧ ವಚನ ಸಂಕಲನಗಳಲ್ಲಿ ಇದ್ದ ಮಹಾದೇವಿಯಕ್ಕನ ವಚನಗಳನ್ನು ಸಂಗ್ರಹಿಸಿದ್ದಾರೆ. ಈ ಸಂಗ್ರಹಕ್ಕೆ ಹನ್ನೆರಡು ಹಸ್ತಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಮಹಾದೇವಿಯಕ್ಕನ ಚರಿತ್ರೆ ತಿಳಿಯಲು ಪ್ರಭುಲಿಂಗ ಲೀಲೆಯನ್ನು ಬಳಸಿ ಕೊಂಡಿದ್ದಾರೆ. ಈ ವಚನ ಸಂಕಲನ ಶರಣ ಸಾಹಿತ್ಯ ಅಭ್ಯಾಸಿಗಳಲ್ಲಿ ಒಂದು ಸಂಚಲನವನ್ನೆ ಉಂಟು ಮಾಡಿತು. 1950ನೇ ಇಸವಿಯಲ್ಲಿ ಇದೇ ಪುಸ್ತಕದ ಆರನೇ ಆವೃತ್ತಿಯ ಮುದ್ರಣವಾಗಿದೆ.

ಮೆರಮಿಂಡದೇವನ ವಚನಗಳು

ಶಿವಾನುಭವ ಗ್ರಂಥಮಾಲಾ 68ನೇ ಪುಸ್ತಕವಾಗಿ ಪ್ರಕಟವಾಗಿವೆ. ವಿವಿಧ ಹಸ್ತಪ್ರತಿಗಳಲ್ಲಿ ಸಂಗ್ರಹಿಸಿ 101 ವಚನಗಳನ್ನು ಸಂಪಾದಿಸಿದ್ದಾರೆ.

ಮೋಳಿಗೆ ಮಾರಯ್ಯನ ವಚನಗಳು

ಶಿವಾನುಭವ ಪತ್ರಿಕೆ ಸಂಪುಟ 11 ಸಂಚಿಕೆ 1 ಮತ್ತು 2 ರಲ್ಲಿ ಮೋಳಿಗೆ ಮಾರಯ್ಯನ ವಚನಗಳನ್ನು ಪ್ರಕಟಿಸಿದರು. ಈ ವಚನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಲಿಲ್ಲ. ಆದ್ದರಿಂದ ಮೋಳಿಗೆ ಮಾರಯ್ಯನ ಪರಿಚಯಾತ್ಮಕ ಲೇಖನ ಪ್ರಕಟವಾಗಲಿಲ್ಲ. “ಲಿಂಗಾಂಗ ಸಾಮರಸ್ಯ ಮತ್ತು ಲಿಂಗದ ಅರಿವು” ಎಂಬ ಉಪಶೀರ್ಷಿಕೆ ಕೊಟ್ಟು ವಚನಗಳನ್ನು ಮುದ್ರಣ ಮಾಡಲಾಗಿದೆ. 43 ವಚನಗಳಿಗೆ ಟೀಕೆ ಇಲ್ಲ.

44ನೇ ವಚನದಿಂದ 63ನೇ ವಚನದವರೆಗೆ ಪ್ರಾಚೀನ ಟೀಕೆ ಇದೆ.

ಲಿಂಗಮ್ಮನ ವಚನಗಳು

ಶಿವಾನುಭವ ಗ್ರಂಥಮಾಲೆಯ 17ನೇ ಪುಸ್ತಕವಾಗಿ ಲಿಂಗಮ್ಮನ ವಚನಗಳು ಮುದ್ರಣವಾಗಿವೆ. ಪುಸ್ತಕದ ಬೆಲೆ ಮೂರು ಆಣೆ. ಲಿಂಗಮ್ಮ ವಚನಕಾರ ಹಡಪದಪ್ಪಣ್ಣನ ಭಾರ್ಯೆ. ಈಕೆ ಬಸವೇಶ್ವರ, ಚೆನ್ನಬಸವೇಶ್ವರ ಮತ್ತು ಅಲ್ಲಮಪ್ರಭು ಮೊದಲಾದವರ ಬಗ್ಗೆ ಅತ್ಯಂತ ಭಕ್ತಿಭಾವವುಳ್ಳವಳಾಗಿದ್ದಾಳೆ. ಈ ಪ್ರಸ್ತಾವನೆ ಬರೆದಿದ್ದು 30.6.1929 ಪುಸ್ತಕ ಮುದ್ರಣವಾದ ವರ್ಷ 1929 ಎಂದು ಇಟ್ಟುಕೊಳ್ಳಬಹುದು.

ಸಕಲೇಶ ಮಾದರಸನ ವಚನಗಳು

ಶಿವಾನುಭವ ಗ್ರಂಥಮಾಲಾ ಇಪ್ಪತ್ತನೆಯ ಪುಸ್ತಕವಾಗಿ 1930ರಲ್ಲಿ ಮುದ್ರಣವಾಗಿದೆ. ಪುಸ್ತಕದ ಬೆಲೆ ಮೂರು ಆಣೆ. ಹಲವು ಹಸ್ತಪ್ರತಿಗಳ ಸಹಾಯದಿಂದ ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿದ್ದಾರೆ. ಸಕಲೇಶ ಮಾದರಸನ ಚರಿತ್ರೆಯನ್ನು ಅಧ್ಯಯನ ಪೂರ್ಣವಾಗಿ ಕೊಟ್ಟ ಕೀರ್ತಿ ಹಳಕಟ್ಟಿಯವರದು. ಹಳಕಟ್ಟಿಯವರಿಗೆ ದೊರೆತ 44 ವಚನಗಳನ್ನು ಉಪಶೀರ್ಷಿಕೆ ಅಡಿಯಲ್ಲಿ ಕೊಟ್ಟಿದ್ದಾರೆ.

ಸಿದ್ಧರಾಮೇಶ್ವರರ ವಚನಗಳು

ಶಿವಾನುಭವ ಗ್ರಂಥಮಾಲಾ 30ನೇ ಪುಸ್ತಕವಾಗಿ ಸಿದ್ಧರಾಮೇಶ್ವರನ ವಚನಗಳು ಪ್ರಕಟವಾಗಿದೆ. ಅಂದಿನ ಪುಸ್ತಕದ ಬೆಲೆ 1-0-0 ಎರಡು ಹಸ್ತಪ್ರತಿಗಳ ಸಹಾಯದಿಂದ ಈ ವಚನ ಗ್ರಂಥವನ್ನು ಸಂಪಾದಿಸಿದ್ದಾರೆ. ಸಿದ್ಧರಾಮೇಶ್ವರ ದೇವರು ನಿರೂಪಿಸಿದ ಷಟ್‍ಸ್ಥಲದ ವಚನಗಳು ಮುಖ್ಯ ಶೀರ್ಷಿಕೆ ಅಡಿಯಲ್ಲಿ ವಚನಗಳು ಮುದ್ರಣವಾಗಿವೆ.

ಹಡಪದಪ್ಪಣ್ಣನ ವಚನಗಳು

ಶಿವಾನುಭವ ಗ್ರಂಥಮಾಲಾ ಹದಿನಾರನೇ ಪುಸ್ತಕವಾಗಿ ಪ್ರಕಟವಾಗಿದೆ. ಹಳಕಟ್ಟಿಯವರು ಎರಡು ಹಸ್ತಪ್ರತಿಗಳ ಸಹಾಯದಿಂದ ಈ ವಚನ ಸಂಕಲನವನ್ನು ಮುದ್ರಿಸಿದ್ದಾರೆ. ಈ ಪುಸ್ತಕ ಮುದ್ರಣವಾದಾಗ ಹಡಪದಪ್ಪಣ್ಣನ ವೃತ್ತಾಂತವು ತಿಳಿದಿರಲಿಲ್ಲ. ಈತನ ಹೆಂಡತಿ ಲಿಂಗಮ್ಮನೂ ಒಳ್ಳೇ ಪಂಡಿತಳಾಗಿದ್ದಳು ಆಕೆಯ ಒಂದು ವಚನ ಉಪಲಬ್ಧವಿದೆ ಎಂದಿದ್ದಾರೆ. ಈ ಸಂಕಲನ ಮುದ್ರಣವಾದದ್ದು 1927ರಲ್ಲಿ

ಶಿವಶರಣರ ಸಂಕೀರ್ಣ ವಚನಗಳು ಭಾಗ-1

ಶಿವಾನುಭವ ಗ್ರಂಥಮಾಲಾ 47ನೇ ಪುಸ್ತಕವಾಗಿ 1938ರಲ್ಲಿ ಪ್ರಕಟವಾಗಿರುವ ಈ ಗ್ರಂಥದ ಬೆಲೆ 9 ಆಣಿ. ಈ ಸಂಕಲನದಲ್ಲಿ

1) ಗಜೇಶ ಮಸಣಯ್ಯ ವಚನಗಳು

ಈತನ ವಚನಗಳೂ ಲಿಂಗಾಂಗ ಸಾಮರಸ್ಯ ಬೋಧಕವಾಗಿರುತ್ತವೆ. ಈತನ ವಚನಗಳು ಶಿವಶರಣರ ವಚನಗಳಲ್ಲಿ ಬಹು ಸುಂದರವಾದವು.

2) ಚಂದಿಮರಸನ ವಚನಗಳು

ಹಲವು ಹಸ್ತಪ್ರತಗಳಿಂದ ವಚನಗಳನ್ನು ಸಂಗ್ರಹಿಸಿದ್ದಾರೆ. ಚಂದಿಮರಸನು ವಚನಕಾರರಲ್ಲಿ ಬಹುಪ್ರಸಿದ್ಧನಾದವನು. ಆದುದರಿಂದ ಅವನ ಉಕ್ತಿಗಳು ವಚನಗಳ ಪ್ರತಿಯೊಂದು ಸಂಗ್ರಹದಲ್ಲಿ ಬಹುಶಃ ದೊರೆಯುತ್ತವೆ ಎಂದಿದ್ದಾರೆ. ಈತನು ಬಸವನ ಬಾಗೇವಾಡಿ ಹತ್ತಿರ ಇರುವ ಸಿಮ್ಮಲಿಗೆ ಗ್ರಾಮದವನು. ಈ ಗ್ರಾಮ ಕೃಷ್ಣಾನದಿ ದಡದಲ್ಲಿದೆ. ಈತನ ಗುರುವಿನ ಹೆಸರು “ನಿಜಗುಣ ಶಿವಯೋಗಿ” ಘನಲಿಂಗ ಶಿವಯೋಗಿಗಳು ತಮ್ಮ ವಚನಗಳಲ್ಲಿ ಗುರುಶಿಷ್ಯರಿಬ್ಬರನ್ನು ಸ್ಮರಿಸಿರುವರು.

3) ಅರಿವಿನ ಮಾರಿತಂದೆಗಳ ವಚನಗಳು

ಗುಬ್ಬಿ ಮಲ್ಲಣ್ಣನ ಸಂಕಲಿಸಿದ “ಗಣಭಾಷ್ಯ ರತ್ನಮಾಲೆ” ಕೃತಿಯಲ್ಲಿ ಅರಿವಿನ ಮಾರಿತಂದೆ ವಚನಗಳು ಇವೆ. ಈತನ ಅನೇಕ ಬೆಡಗಿನ ವಚನಗಳಗೆ ಟೀಕೆ ಇದೆ. ಈ ಟೀಕೆಗಳು ಸಿಂಗಳದ ಸಿದ್ಧಬಸವ ವಿರಚಿತ “ಬೆಡಗಿನ ವಚನಗಳು” ಗ್ರಂಥದಿಂದ ಸ್ವೀಕರಿಸಿದ್ದು.

ಶಿವಶರಣರ ಸಂಕೀರ್ಣ ವಚನಗಳು ಭಾಗ 2

ಈ ಪುಸ್ತಕ 1940ರಲ್ಲಿ ಮುದ್ರಣವಾಗಿದೆ. ಅಂದು ಈ ಪುಸ್ತಕದ ಬೆಲೆ ಹನ್ನೆರಡಾಣೆ. ಈ ಪುಸ್ತಕದಲ್ಲಿ :

1) ಹಾವಿನಾಳ ಕಲ್ಲಿದೇವರ ವಚನಗಳು ಅನೇಕ ವಚನ ಸಂಕಲನದಿಂದ 60 ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿದ್ದಾರೆ. ಅವುಗಳನ್ನು ವಿಷಯಾನುಗುಣವಾಗಿ ಹೊಂದಿಸಿ ಈ ಗ್ರಂಥದಲ್ಲಿ ಮುದ್ರಿಸಲಾಗಿದೆ. ವೇದಗಳು ವಿಶಿಷ್ಟ ವರ್ಣದವರಿಗೋಸ್ಕರ ಇರದೆ, ಬೇಕಾದ ಪಂಗಡದವರು ಅವುಗಳ ಪಠಣ ಮಾಡಬಹುದೆಂಬುದನ್ನು ತೋರಿಸುವದಕ್ಕೋಸ್ಕರ ಹಾವಿನಾಳ ಕಲ್ಲಯ್ಯನ ಚರಿತ್ರೆಯನ್ನು ಅನೇಕ ವೀರಶೈವ ಗ್ರಂಥಕಾರರು ತಮ್ಮ ಗ್ರಂಥದಲ್ಲಿ ಉದಾಹರಿಸುವದುಂಟು. ಒಂದು ನಾಯಿಯ ಕಡೆಯಿಂದ ಹಾವಿನಹಾಳ ಕಲ್ಲಯ್ಯನು ವೇದಗಳನ್ನು ಉದ್ಘೋಷಿಸಿದನೆಂದೂ ಅವನ ಚರಿತ್ರೆಯಲ್ಲಿ ಬರುವ ಮುಖ್ಯ ವಿಷಯ. ಹಾವಿನಾಳ ವಿಜಾಪುರ ಜಿಲ್ಲೆ ಮಂಗಳವೇಡೆ ಗ್ರಾಮದ ಹತ್ತಿರವಿದೆ. ಸೊಲ್ಲಾಪುರದ ಸಿದ್ಧರಾಮೇಶ್ವರ ಪ್ರಭಾವಕ್ಕೆ ಒಳಗಾಗಿ ಅಲ್ಲಿಯೆ ವಿವಾಹವಾಗಿ `ಕಲ್ಲವ್ವೆ’ ಎಂಬ ಮಗಳನ್ನು ಪಡೆದನು. ಇವನ ಗದ್ದುಗೆ ಸೊಲ್ಲಾಪುರದಲ್ಲಿ ಸಿದ್ಧರಾಮೇಶ್ವರ ಗದ್ದುಗೆ ಸಮೀಪ ಇದೆ.

ಮಧುವರಸನ ವಚನಗಳು

ಮಧುವರಸನು ಬಿಜ್ಜಳ ಸೈನ್ಯದಲ್ಲಿ ಒಬ್ಬ ದಂಡಾಧೀಶನಾಗಿದ್ದು ಅವನ ಕೈಕೆಳಗೆ ಅನೇಕ ವರ್ಷ ಸೇವೆ ಮಾಡುತ್ತ ಬಂದವನೆಂದು ಆತನ ಬಗ್ಗೆ ದಂತಕಥೆಗಳಿವೆ. ಇವನ ಮೂಲ ಗ್ರಾಮವು ಮಂಗಳವಾಡವು ಇದು ಸಾಂಗಲಿ ಸಂಸ್ಥಾನದ ಮುಖ್ಯ ಗ್ರಾಮ. ಬಸವಣ್ಣನ ಶರಣ ಧರ್ಮವನ್ನು ಒಪ್ಪಿಗೊಂಡ ಮಧುವರಸ ಮುಂದೆ ತನ್ನ ಮಗಳನ್ನು ಹರಳಯ್ಯನ ಮಗನಿಗೆ ವಿವಾಹ ಮಾಡಿಕೊಟ್ಟ ನಂತರ ಕಲ್ಯಾಣಕ್ರಾಂತಿಯಾಯಿತು. ಮಧುವರಸನ ವಚನಗಳಿಗೆ ಸಿಂಗಳದ ಸಿದ್ಧಬಸವ ಟೀಕೆಗಳನ್ನು ಬರೆದಿದ್ದಾನೆ. ಫ.ಗು. ಹಳಕಟ್ಟಿಯವರು 35 ವಚನಗಳಿಗೆ ಟೀಕೆಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪ್ರಕಟವಾದ ಕೃತಿಯಲ್ಲಿ 33 ವಚನಗಳ ಟೀಕೆ ಮಾತ್ರ ಇವೆ.

ಸತ್ಯಕ್ಕನ ವಚನಗಳು

ಜಂಬೂರೆಯ ಪುರದಲ್ಲಿ ಸತ್ಯಕ್ಕವೆಂಬ ಶಿವಶರಣೆ ಇರುತಿರ್ದು ಶಿವಭಕ್ತಿ ಶಿವಭಕ್ತಿ ನಿಷ್ಠೆಯಿಂದ ಶಿವನ ಶಬ್ದವಲ್ಲದೆ ಅನ್ಯ ಶಬ್ದ ಕೇಳಲೊಲ್ಲೆನೆಂಬ ಭಾಷೆಯಂ ಮಾಡಿಕೊಂಡಿರುವ ಶಿವಭಕ್ತರ ಮನೆಯ ಅಂಗಳನುಡುಗಿ ಮನೆಯ ಸಮ್ಮಾರ್ಜನೆಯಂ ಮಾಡಿ ಅವರು ಕೊಟ್ಟ ಧಾನ್ಯದಿಂದ ಜಂಗಮಾರ್ಚನೆ ಮಾಡುತ್ತ ಇದ್ದಳು. ಈಕೆ ವಾಸವಿದ್ದ ಜಂಬೂರು ಗ್ರಾಮ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದ ಹತ್ತಿರವಿದೆ. ಜಂಬೂರು ಗ್ರಾಮದಲ್ಲಿ ಸತ್ಯಕ್ಕನ ದೇವಾಲಯವೂ ಇದೆ ಎಂದು ಹಳಕಟ್ಟಿಯವರು ತಿಳಿಸಿದ್ದಾರೆ. ವಿವಿಧ ಹಸ್ತಪ್ರತಿಗಳ ಸಹಾಯದಿಂದ ಇಪ್ಪತ್ತು ವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.

ಶಿವಲೆಂಕ ಮಂಚಣ್ಣಗಳ ವಚನಗಳು

ಪಂಡಿತತ್ರಯರೆಂದು ಪ್ರಸಿದ್ಧಿಯಾದವರು 1. ಮಲ್ಲಿಕಾರ್ಜುನ ಪಂಡಿತಾರಾಧ್ಯ 2. ಶ್ರೀಪತಿ ಪಂಡಿತಾರಾಧ್ಯ 3. ಶಿವಲೆಂಕ ಮಂಚಣ್ಣ ಪಂಡಿತಾರಾಧ್ಯ ಈ ಮೂವರನ್ನು ಆರಾಧ್ಯತ್ರಯರೆಂದು ಅಥವಾ ಪಂಡಿತತ್ರಯರೆಂದು ಕರೆಯಲಾಗುತ್ತದೆ. ಶಿವಲೆಂಕ ಮಂಚಣ್ಣ ಪಂಡಿತರು ಉತ್ತರ ಹಿಂದೂಸ್ಥಾನದವರು. ಇವರ ಚರಿತ್ರೆಯು ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರರತ್ನಾಕರ, ಶಿವಕಥಾಸಾಗರ, ಸಿಂಗಿರಾಜ ಪುರಾಣ ಈ ಮೊದಲಾದ ಗ್ರಂಥಗಳಲ್ಲಿ ದೊರೆಯುತ್ತದೆ. ವಾರಣಾಸಿಯ ಜಂಬುಭಟ್ಟನಿಗೆ ಮಗನಾಗಿ ಜನಿಸಿ ವೀರಶೈವ ದೀಕ್ಷೆಯನ್ನು ಹೊಂದಿ ಶಿವನೇ ಸರ್ವೋತ್ತಮನೆಂದು ಭಾವಿಸಿ ವಿಶ್ವನಾಥನನ್ನು ಭಕ್ತಿಯಿಂದ ಅರ್ಚಿಸುತ್ತ ಇರುತ್ತಿದ್ದನು. ಶಿವನು ಸರ್ವೋತ್ತಮನೆಂದು ಬ್ರಾಹ್ಮಣರಿಗೆ ತೋರಿಸಲು ಮಂಚಣ್ಣ ನಾರಾಯಣನನ್ನು ಆಹ್ವಾನಿಸಿ ವಿಶ್ವೇಶ್ವರನ ಪಾದಕ್ಕೆ ನಮಸ್ಕರಿಸುವಂತೆ ಮಾಡಿದನಂತೆ.

ಹಳಕಟ್ಟಿಯವರು 53 ವಚನಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅದರಲ್ಲಿ ಎಂಟು ವಚನಗಳು ಟೀಕಾ ಸಮೇತ ಮುದ್ರಣವಾಗಿವೆ. ಈ ಟೀಕೆ ತಿಂಗಳದ ಸಿದ್ಧಬಸವರಾಜ ದೇವರು ವ್ಯಾಖ್ಯಾನಿಸಲಾಗಿದೆ.

ಉರಿಲಿಂಗದೇವರ ವಚನಗಳು

ಹಳಕಟ್ಟಿಯವರು ತಮಗೆ ದೊರೆತ ಉರಿಲಿಂಗದೇವರ ವಚನಗಳನ್ನು ಹಲವು ಹಸ್ತಪ್ರತಿಗಳಿಂದ ಸಂಪಾದಿಸಿ ಸ್ಥಲಾನುಸಾರವಾಗಿ ಜೋಡಿಸಿದ್ದಾರೆ. ಇವನ ಗುರು ಉರುಲಿಂಗಪೆದ್ದಿ ಇವನು ಪ್ರಸಿದ್ಧ ವಚನಕಾರ ಹೀಗೆ ಗುರುಶಿಷ್ಯರಿಬ್ಬರು ಮೇಲುಮಟ್ಟದ ವಚನಗಳನ್ನು ರಚನೆ ಮಾಡಿದ್ದಾರೆ. ಹಳಕಟ್ಟಿಯವರು ವಿವಿಧ ಹಸ್ತಪ್ರತಿಗಳಿಂದ 49 ವಚನಗಳನ್ನು ಸಂಗ್ರಹಿಸಿದ್ದಾರೆ.

ಬಾಹೂರ ಬೊಮ್ಮಯ್ಯಗಳ ವಚನ

ಬಾಹೂರ ಬೊಮ್ಮಯ್ಯನ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲವೆಂದು ತೋರುತ್ತವೆ. ಅದಕ್ಕೆ ಹಳಕಟ್ಟಿಯವರು ವಚನಕಾರನ ಪರಿಚಯ ಲೇಖನ ಬರೆದಿಲ್ಲ. ಬಾಹೂರ ಬೊಮ್ಮಯ್ಯನ 44 ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿದ್ದಾರೆ.

ಶಿವಶರಣರ ಸಂಕೀರ್ಣ ವಚನಗಳು ಭಾಗ-3

ಈ ಸಂಪುಟ ಪುಸ್ತಕ ರೂಪದಲ್ಲಿ ಬರಲಿಲ್ಲ ಶಿವಾನುಭವ ಸಂಪುಟ 15, 16, 17, 18 ನೇ ಸಂಪುಟದಲ್ಲಿ ಈ ಕೆಳಕಂಡ ವಚನಕಾರರ ವಚನಗಳು ಪ್ರಕಟಗೊಂಡವು.

ಭಂಡಾರಿ ಶಾಂತಯ್ಯನ ವಚನ

ಹಲವು ಹಸ್ತಪ್ರತಿಗಳಿಂದ ಸಂಗ್ರಹಿಸಿ 32  ವಚನಗಳನ್ನು ಸಂಕಲಿಸಿದ್ದಾರೆ. ಈ ಸಂಕಲನಕ್ಕೆ ಎರಡು ಹಸ್ತಪ್ರತಿಗಳನ್ನು ವಿಶೇಷವಾಗಿ ಬಳಸಿಕೊಂಡಿದ್ದಾರೆ. ಕಲ್ಲುಮಠದ ಪ್ರಭುದೇವರ `ಲಿಂಗಲೀಲಾ ವಿಳಾಸ’ ಸಿಂಗಳದ ಸಿದ್ಧಬಸವರಾಜದೇವರು ವ್ಯಾಖ್ಯಾನಿಸಿದ `ಸಕಲ ಪುರಾತನರ’ ಬೆಡಗಿನ ವಚನಗಳು.

ಪ್ರಕಟಿತ `ಲಿಂಗಲೀಲಾ ವಿಲಾಸ’ ಪುಸ್ತಕದಲ್ಲಿ ಭಂಡಾರಿ ಶಾಂತಯ್ಯನ ವಚನಗಳು ಇಲ್ಲ ಅವರೆ ಹಳಕಟ್ಟಿಯವರು ನೋಡಿದ ಹಸ್ತಪ್ರತಿಯನ್ನು ಭಂಡಾರಿ ಶಾಂತಯ್ಯನ ವಚನಗಳ ಟೀಕೆ ಇದ್ದಿರಬೇಕು ಈ ಬಗ್ಗೆ ಸೂಕ್ಷ್ಮವಾದ ಅಧ್ಯಯನವನ್ನು ಯುವ ವಿದ್ವಾಂಸರು ಮಾಡಬೇಕು ಭಂಡಾರಿ ಶಾಂತಯ್ಯನ 32 ವಚನಗಳನ್ನು ಸಂಗ್ರಹಿಸಿದ ಹಳಕಟ್ಟಿಯವರು 21 ವಚನಗಳನ್ನು ಟೀಕಾ ಸಮೇತ ಮುದ್ರಿಸಿದ್ದಾರೆ.

ರೆಮ್ಮವ್ವೆಯ ವಚನಗಳು

ವೀರಶೈವರು ಅಂಧತೆಯಿಂದ ತಮ್ಮ ಕ್ರಿಯಾದಿಗಳನ್ನು ನೆರವೇರಿಸಿದಲ್ಲಿ ಅವರಲ್ಲಿ ಪ್ರಗತಿಯಾಗಲಾರದೆಂದು ವಚನಕಾರರು ಭಾವಿಸುತ್ತಾರೆ. ರೆಮ್ಮವ್ವೆಯ 64 ವಚನಗಳನ್ನು ಹಲವು ಹಸ್ತಪ್ರತಿಯಿಂದ ಸಂಗ್ರಹಿಸಿದ್ದಾರೆ.

ಏಲೇಶ ಕೇತಯ್ಯಗಳ ವಚನ

ಹಲವು ಹಸ್ತಪ್ರತಿಗಳಿಂದ 23 ವಚನಗಳನ್ನು ಸಂಗ್ರಹಿಸಿದ್ದಾರೆ. ಏಲೇಶ ಕೇತಯ್ಯ 63 ಶೀಲಾಚರಣೆಗೆ ಬಹಳ ಮಹತ್ವ ಕೊಟ್ಟವನು. ರೆಮವ್ವೆಯ ವಚನಗಳಿಗೆ ಈತನ ವಚನಗಳಿಗೂ ಬಹಳ ಸಾಮ್ಯವಿದೆ. ಈತನ ಗ್ರಾಮ ಯಾದಗಿರಿ ಹತ್ತಿರನ ಏಳೇರಿ ಇರಬೇಕು ಎಂದು ಹಳಕಟ್ಟಿಯವರು ಊಹಿಸಿದ್ದಾರೆ. ಷಟ್‍ಸ್ಥಲಗಳಲ್ಲಿ ಕೇತಯ್ಯನ ವಚನಗಳನ್ನು ವಿಂಗಡಿಸಿದಲ್ಲದೆ ಪ್ರತಿಯೊಂದು ವಚನಗಳಿಗೆ ಸರಳ ಗದ್ಯಾನುವಾದವನ್ನು `ಭಾವ’ ಎಂದು ಪ್ರತಿಯೊಂದು ವಚನದ ಕೆಳಗೆ ಕೊಟ್ಟಿದ್ದಾರೆ.

ಸೊಡ್ಡಳ ಬಾಚರಸನ ವಚನಗಳು

ಬಾಚರಸನು ಮೂಲತಃ ಗುಜರಾತದೇಶದವನು ಬಿಜ್ಜಳನಲ್ಲಿಗೆ ಬಂದು ನೌಕರಿಯನ್ನು ಸಂಪಾದಿಸಿಕೊಂಡು ಉಪಜೀವಿಸುತ್ತ ಬಂದವನು. ಬಾಚರಸನು ಸೌರಾಷ್ಟ್ರ ಸೋಮೇಶ್ವರನ ಪೂರ್ಣಭಕ್ತನು. ಬಸವೇಶ್ವರನು ಬಲದೇವ ಮಂತ್ರಿ ಮಗಳು ಗಂಗಾಂಬಿಕೆಯನ್ನು ವಿವಾಹವಾಗಲು ಕಲ್ಯಾಣಕ್ಕೆ ಬಂದಾಗ ಬಸವೇಶ್ವರನನ್ನು ಬಾಚರಸನ ಮನೆಯಲ್ಲಿಯೇ ಇಳಿಸಿದ್ದನು. ಶಿವಾನುಭವ ಗೋಷ್ಠಿಯಲ್ಲಿ ಬಾಚರಸನು ಭಾಗವಹಿಸುತ್ತಾ ಇದ್ದನು. 56 ವಚನಗಳನ್ನು ಹಳಕಟ್ಟಿಯವರು ಸಂಗ್ರಹಿಸಿ ಷಟ್‍ಸ್ಥಲ ರೂಪದಲ್ಲಿ ವಿಂಗಡಿಸಿ ಪ್ರತಿಯೊಂದು ವಚನಗಳಿಗೆ ಭಾವ ಎಂದು ಸರಳ ಗದ್ಯಾನುವಾದ ಕೊಟ್ಟಿದ್ದಾರೆ.

ಗುಮ್ಮಳಾಪುರದ ಸಿದ್ಧಲಿಂಗದೇವರ ವಚನಗಳು

`ಷಟ್‍ಸ್ಥಲ ಲಿಂಗಾಂಗ ಸಂಬಂಧದ ನಿರ್ವಚನ’ ಎಂಬ ವಚನ ಕಟ್ಟಿನ ಕರ್ತೃ ಗುಮ್ಮಳಾಪುರದ ಸಿದ್ಧಲಿಂಗದೇವ. ಶೂನ್ಯಸಂಪಾದನೆಯ ಕರ್ತೃ. ತೋಂಟದ ಸಿದ್ಧಲಿಂಗೇಶ್ವರ ಮತ್ತು ಬೋಳಬಸವೇಶ್ವರನ ಶಿಷ್ಯ ಪರಂಪರೆಯವನು. ಈತ ಶೂನ್ಯಸಿಂಹಾಸನದ ಅಧಿಪತಿಯೂ ಆಗಿದ್ದ. ಎಡೆಯೂರಿನ ಶಿಲಾಶಾಸನದಲ್ಲಿ ತೋಂಟದ ಸಿದ್ಧಲಿಂಗೇಶ್ವರನ ಜೊತೆ ಇದ್ದ ವಿರಕ್ತರೊಡನೆ ಗುಮ್ಮಳಾಪುರದ ಸಿದ್ಧಲಿಂಗದೇವನ ಹೆಸರು ಇದೆ. ಇವನ ಅಂಕಿತ “ಪರಂಜ್ಯೋತಿ ಮಹಾಲಿಂಗ ಗುರುಸಿದ್ಧಲಿಂಗ ಪ್ರಭುವಿನಲ್ಲಿ ಬಸವಣ್ಣನವರು ಅರುಹಿಕೊಟ್ಟ ಸಿದ್ಧೇಶ್ವರನ ಶ್ರೀಪಾದಪದ್ಮದಲ್ಲಿ ಭೃಂಗವಾಗಿರ್ದೆನಯ್ಯ ಬೋಳಬಸವೇಶ್ವರಾ ನಿಮ್ಮ ಧರ್ಮ ನಿಮ್ಮ ಧರ್ಮ.’’ ಈತನ 18 ವಚನಗಳನ್ನು ಶಿವಾನುಭವ ಪತ್ರಿಕೆ ಸಂಪುಟ 17 ಮತ್ತು 18ರಲ್ಲಿ 1943-44ರ ಕಾಲಮಾನದಲ್ಲಿ ಸಂಪಾದಿಸಿ ಪ್ರಕಟಿಸಿದ್ದರು.

ಕಾಲಜ್ಞಾನದ ವಚನಗಳು

1)          ಚೆನ್ನಬಸವರಾಜ ದೇವರು ಉಳಿವಿಗೆ ಚಿತ್ತೈಸಿದ ಪ್ರಸ್ತಾವದ ವಚನ

2)          ಪ್ರಭುದೇವರು ನಿರೂಪಿಸಿದ ಕಾಲಜ್ಞಾನದ ವಚನ

3)          ಎಲ್ಲಾ ಪುರಾತನರು ನಿರೂಪಿಸಿದ ಕಾಲಜ್ಞಾನದ ವಚನ

4)         ಬಸವರಾಜ ದೇವರು ನಿರೂಪಿಸಿದ ಕಾಲಜ್ಞಾನದ ವಚನ

5)          ಕಲ್ಯಾಣಿಯಮ್ಮನವರ ಕಾಲಜ್ಞಾನದ ವಚನ

6)          ಕೂಗಿನ ಮಾರಯ್ಯಗಳ ಕಾಲಜ್ಞಾನದ ವಚನ

7)          ಚನ್ನಬಸವೇಶ್ವರ ದೇವರು ನಿರೂಪಿಸಿದ ಕಾಲಜ್ಞಾನ ವಚನ

8)          ಸರ್ವಜ್ಞಸ್ವಾಮಿ ನಿರೂಪಿಸಿದ ಕಾಲಜ್ಞಾನ ವಚನ

9)          ಘಟಿವಾಳಯ್ಯನವರ ಕಾಲಜ್ಞಾನದ ವಚನ

 

ಘನಲಿಂಗನ ವಚನಗಳು

ಶಿವಾನುಭವ ಗ್ರಂಥಮಾಲೆಯ ಹದಿಮೂರನೇ ಪುಸ್ತಕವಾಗಿ ಘನಲಿಂಗನ ವಚನಗಳ ಪುಸ್ತಕ 1927ರಲ್ಲಿ ಪ್ರಕಟವಾಗಿವೆ. ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ ವಚನಗಳ ಸಂಖ್ಯೆ 60, 1907ರಲ್ಲಿ ಮೈಸೂರು ವೀರಶೈವಮತ ಸಂವರ್ಧಿನೀ ಸಭಾ ವತಿಯಿಂದ ಎಂ. ಬಸವಲಿಂಗಶಾಸ್ತ್ರೀಯಿಂದ ಸಂಪಾದನೆಗೊಂಡು ಪ್ರಕಟವಾದ ಗ್ರಂಥದಲ್ಲಿ 63 ವಚನಗಳು ಇವೆ. ಇತ್ತೀಚೆಗೆ ಎಸ್. ಶಿವಣ್ಣನವರು ಈತನ ಒಂದು ಹೊಸವಚನ ಸಂಶೋಧಿಸಿದ್ದಾರೆ. ಈತನ ಸಮಾಧಿ ಕುಣಿಗಲ್ ತಾಲ್ಲೂಕು ಕಗ್ಗೇರೆಯಲ್ಲಿದೆ.

 

ಶಿವಾನುಭವ ಸೃಷ್ಟಿಯ ವಚನಗಳು

ಶಿವಾನುಭವ ಗ್ರಂಥಮಾಲಾ 56ನೇ ಪುಸ್ತಕವಾಗಿ 1941ರಲ್ಲಿ ಪ್ರಕಟವಾಗಿದೆ. ಈ ಗ್ರಂಥದಲ್ಲಿ 1 ಮುಕ್ತ್ಯಾಂಗನಾ ಕಂಠಮಾಲೆ, ಸ್ವತಂತ್ರ ಸಿದ್ಧಲಿಂಗೇಶ್ವರನ 21 ವಚನಗಳನ್ನು ಸಂಕಲಿಸಿ ಅವುಗಳಿಗೆ ಟೀಕೆ ಬರೆದವನು ಚೆನ್ನದೇವನೆಂಬುವನು. ಇದರಲ್ಲಿ ಸೃಷ್ಟಿಯ ಉಗಮವು ಹೇಗೆ ಉಂಟಾಯಿತು. ಪರಮಾತ್ಮನ ಮೂಲ ಚೈತನ್ಯ ರೂಪು ಜಗತ್ ಸೃಷ್ಟಿಗೆ ಹೇಗೆ ಕಾರಣವಾಯಿತು. ಇವೇ ಮೊದಲಾದ ವಿಷಯಗಳನ್ನು ವಿವರಿಸಿ ಆಮೇಲೆ ಮುಕ್ತಿಗೆ ಸಾಧನವಾದ ಲಿಂಗಧಾರಣ ವಿಷಯವನ್ನು ಹೇಳಿದ್ದಾನೆ.

“ಜ್ಯೋತಿರ್ಮಯ ಶಾಂಭವೀ ದೀಕ್ಷೆ” ಪ್ರಭುದೇವರ 37 ವಚನಗಳನ್ನು ಪಾಲ್ಕುರಿಕೆ ಸೋಮಾರಾಧ್ಯರು ಪ್ರಭುದೇವರ ವಚನಗಳನ್ನು ಸಂಕಲಿಸಿ ಈ ಸಂಕಲನವನ್ನು ಸಿದ್ಧಮಾಡಿದವರು. ಈ ಎರಡು ಗ್ರಂಥಗಳು ಈ ಮೊದಲೇ ಮುದ್ರಣವಾದದ್ದನ್ನು ಹಳಕಟ್ಟಿಯವರು ಗಮನಿಸಿದ್ದಾರೆ. ಮೊದಲನೇ ಗ್ರಂಥವನ್ನು ಡಿ.ಆರ್. ತಿಪ್ಪಯ್ಯಶಾಸ್ತ್ರಿ, ಎರಡನೇ ಗ್ರಂಥವನ್ನು ಶ್ರೀ ಚೆನ್ನಮಲ್ಲಪ್ಪನವರು ಅಥವಾ ಸದ್ಧರ್ಮದೀಪಿಕೆ ಚೆನ್ನಮಲ್ಲಿಕಾರ್ಜುನರು ಸಂಪಾದಿಸಿ ಪ್ರಕಟಿಸಿದ್ದಾರೆ.

ಸಕಲಾಗಮ ಶಿಖಾಮಣಿ ವಚನ

ಈ ವಚನ ಗ್ರಂಥ ಪುಸ್ತಕ ರೂಪದಲ್ಲಿ ಪ್ರಕಟವಾಗಿಲ್ಲ. ಶಿವಾನುಭವ ಪತ್ರಿಕೆ ಸಂಪುಟ 28, 29, 30 ನೇ ಸಂಪುಟಗಳಲ್ಲಿ ವಚನಗಳು ಮುದ್ರಣವಾಗಿವೆ 518 ವಚನಗಳು ಇವೆ.

ಸಂಗನ ಬಸವೇಶ್ವರ ವಚನಗಳು

ಶಿವಾನುಭವ ಗ್ರಂಥಮಾಲೆಯ 12 ಪುಸ್ತಕವಾಗಿ 1927ರಲ್ಲಿ ಪ್ರಕಟವಾದ ಈ ಕೃತಿಯನ್ನು 70ನೇ ಹಸ್ತಪ್ರತಿಯಿಂದ ಸಂಪಾದಿಸಲಾಗಿದೆ. ಇನ್ನು ಹೆಚ್ಚಿನ ವಿಷಯಕ್ಕೆ ಸಮಗ್ರ ವಚನ ಸಂಪುಟ ಹತ್ತು ಸಂಪಾದಕ ಡಾ. ವೀರಣ್ಣ ರಾಜೂರವರು ಸಂಪಾದಿಸಿದ ಪುಸ್ತಕವನ್ನು ಅವಲೋಕಿಸಬೇಕಾಗಿ ವಿನಂತಿ.

ವೇಮಣ್ಣಯೋಗಿಯ ವಚನಗಳು

ಶಿವಾನುಭವ ಗ್ರಂಥಮಾಲೆಯ 72ನೇ ಪುಸ್ತಕವಾಗಿ 1951ರಲ್ಲಿ ಪ್ರಕಟವಾಗಿದೆ. ಪ್ರಕಟಿತ ಪುಸ್ತಕದಲ್ಲಿ 507 ವಚನಗಳಿವೆ.

ವಚನಶಾಸ್ತ್ರಸಾರ ಭಾಗ-1

ವಚನಶಾಸ್ತ್ರಸಾರ ಭಾಗ-1 ಮೊದಲ ಆವೃತ್ತಿ ಬಂದಿದ್ದು 1923 ಬೆಳಗಾವಿಯ ಶ್ರೀಯುತ ದೇವೇಂದ್ರಪ್ಪ ಫಡೆಪ್ಪಾ ಚೌಗುಲೆ ಇವರು ಶ್ರೀ ಮಹಾವೀರ ಪ್ರಿಂಟಿಂಗ್ ವಕ್ರ್ಸ್‍ನಲ್ಲಿ ಮುದ್ರಣವಾಗಿದ್ದು ಈ ಪುಸ್ತಕ ಮುಂದೆ ಪೂರ್ವಾರ್ಧ 10-8-1931 ಉತ್ತರಾರ್ಥ 26-9-1933ರಲ್ಲಿ ಪ್ರಕಟಗೊಂಡಿತು. ಹೀಗೆ ಹಳಕಟ್ಟಿಯವರಿಂದ ಎರಡು ಸಾರಿ ಮುದ್ರಣವಾಯಿತು. ಡಾ. ಎಂ.ಎಂ. ಕಲಬುರ್ಗಿ ಮತ್ತು ಡಾ. ವೀರಣ್ಣ ರಾಜೂರರವರಿಂದ ಪರಿಷ್ಕರಣಗೊಂಡು 1982ರಲ್ಲಿ ಗದಗಿನ ತೋಂಟದಾರ್ಯ ಮಠದಿಂದ ಪ್ರಕಟವಾಯಿತು. ಗದಗಿನ ಜಗದ್ಗುರು ತೋಂಟದ ಸಿದ್ಧಲಿಂಗೇಶ್ವರ ಸ್ವಾಮಿಗಳ ರಜತಮಹೋತ್ಸವದಲ್ಲಿ 1999ರಲ್ಲಿ ಮುದ್ರಣವಾಯಿತು. 2005ರಲ್ಲಿ ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯದಲ್ಲಿ ಡಾ. ಎಂ.ಎಂ. ಕಲಬುರ್ಗಿ ಅವರಿಂದ ಮತ್ತೆ ಪರಿಷ್ಕರಣೆಗೆ ಒಳಗಾಗಿ ಮುದ್ರಣವಾಯಿತು.

ವಚನಶಾಸ್ತ್ರಸಾರ ಭಾಗ-2

1938ರಲ್ಲಿ ಸಂಕಲನಗೊಂಡು ಶಿವಾನುಭವ ಗ್ರಂಥಮಾಲೆ 27ನೇ ಪುಷ್ಪವಾಗಿ ವಚನಶಾಸ್ತ್ರಸಾರ ಭಾಗ-2 ಮುದ್ರಣವಾಗಿತ್ತು. ಆರನೂರ ಐದು ಪುಟಗಳ ಸಂಪುಟ ಪ್ರಕಟವಾಗಿತ್ತು.

2004ರಲ್ಲಿ ಗದಗಿನ ತೋಂಟದಾರ್ಯ ಮಠದಿಂದ ಡಾ ವೀರಣ್ಣ ರಾಜೂರರವರಿಂದ ಮತ್ತು ಇತರ ವಿದ್ವಾಂಸರಿಂದ ಮರು ಪರಿಷ್ಕರಣಗೊಂಡು ಪ್ರಕಟವಾಯಿತು.

ವಚನಶಾಸ್ತ್ರಸಾರ ಭಾಗ-3 (ಪೂರ್ವಾರ್ಧ) 1939ರಲ್ಲಿ ಮುದ್ರಣವಾಗಿದೆ.

ವಚನಶಾಸ್ತ್ರ ಸಾರ ಭಾಗ-3 (ಉತ್ತರಾರ್ಧ)

ಶಿವಾನುಭವ ಗ್ರಂಥಮಾಲಾ ನಂ 52 ಪುಸ್ತಕವಾಗಿ 1953ರಲ್ಲಿ ಪ್ರಕಟವಾಗಿದೆ.

ಶಿವಾನುಭವ ಶಬ್ದಕೋಶ

1943ರಲ್ಲಿ ಶಿವಾನುಭವ ಗ್ರಂಥಮಾಲೆಯ 28ನೇ ಪುಷ್ಪವಾಗಿ ಪ್ರಕಟಗೊಂಡಿದೆ.

ಭಕ್ತಿಯ ವಚನಗಳು

1943 ರಲ್ಲಿ ಶಿವಾನುಭವ ಗ್ರಂಥಮಾಲೆಯ ಹತ್ತನೇ ಪುಷ್ಪವಾಗಿ ಪ್ರಕಟವಾದ ಈ ಕೃತಿಯ ಬೆಲೆ ಹತ್ತಾಣೆ. ಬಸವೇಶ್ವರನ ನೂರು ವಚನಗಳನ್ನು ಆಯ್ದು ಈ ಗ್ರಂಥದಲ್ಲಿ ಕೊಟ್ಟಿದ್ದಾರೆ.

ನೈತಿಕ ಮತ್ತು ಭಕ್ತಿಯ ವಚನಗಳು

1927ರಲ್ಲಿ ಮುದ್ರಣವಾದ ಈ ಕೃತಿಯ ಎರಡನೇ ಆವೃತ್ತಿ 1931ರಲ್ಲಿ ಪ್ರಕಟವಾಗಿದೆ. ವೀರಶೈವ ಶಿವಶರಣರು ತಮ್ಮ ಗ್ರಂಥಗಳಲ್ಲಿ ನೈತಿಕಾಚರಣೆಗೂ ಭಕ್ತಿಗೂ ಅತ್ಯಂತ, ಶ್ರೇಷ್ಠ ಸ್ಥಾನವನ್ನು ಕೊಟ್ಟಿರುತ್ತಾರೆ. ಈ ವಿಷಯಗಳ ಬಗ್ಗೆ ಇರುವ ಅವರ ವಾಕ್ಯಗಳು ಬಹಳ ಉದಾತ್ತವಾಗಿರುತ್ತವೆ.

ಭಕ್ತಿಯ ವಚನಗಳು ಭಾಗ-2

ಇಪ್ಪತ್ತನೆಯ ಶತಮಾನದ ಬಹಳ ಮುಖ್ಯವಾದ ಸಂಕಲನ ಎಂದರೆ ತಪ್ಪಾಗಲಾರದು. ಸಹಸ್ರಾರು ವಚನಗಳನ್ನು ಓಲೆಯಿಂದ ಪ್ರತಿ ಮಾಡುವಾಗಲೇ ಓದಿದ ಹಳಕಟ್ಟಿಯವರು ಅವುಗಳ ವಿಶಾಲಾರ್ಥವನ್ನು ಗ್ರಹಿಸಿ ವಚನಶಾಸ್ತ್ರಸಾರ ಭಾಗ-1 ರ ನಂತರ ಇಂತಹ ಮಹತ್ತ ್ವವಾದ ಕೃತಿಗಳನ್ನು ಹೊರತರಲು ಸಾಧ್ಯವಾಯಿತು.

ಪರಮಾತ್ಮನ ಸ್ವರೂಪದ ವಚನಗಳು

1948ರಲ್ಲಿ ಶಿವಾನುಭವ ಗ್ರಂಥಮಾಲೆಯ 11ನೇ ಪುಷ್ಪವಾಗಿ ಪ್ರಕಟವಾಗಿದೆ.

ಲಿಂಗ ಪರಮಾತ್ಮ (1927) ಪರಮಾತ್ಮನ ಸ್ವರೂಪ ಭಾಗ-1 ಲಿಂಗಸ್ವರೂಪ ಭಾಗ-2 ಸಾಮರಸ್ಯ ಭಾಗ-3, ಶಿವಾನುಭವ ಸತ್ಯಮಾರ್ಗ ಈ ಪುಸ್ತಕಗಳು ವಚನ ಸಾಹಿತ್ಯದ ಅಧ್ಯಯನದ ಫಲ.

ಸದ್ಧರ್ಮ ದೀಪಿಕೆ ಚೆನ್ನಮಲ್ಲಿಕಾರ್ಜುನರು ಅಥವಾ

ಚೆನ್ನಮಲ್ಲಪ್ಪನವರು

ನಿವೃತ್ತ ಕನ್ನಡ ಶಾಲೆಯ ಅಧ್ಯಾಪಕರಾಗಿ ಅಪರಿಮಿತವಾದ ಸೇವೆಯನ್ನು ವಚನ ಸಾಹಿತ್ಯಕ್ಕೆ ಸಲ್ಲಿಸಿದರು. ಇವರು ಪ್ರಕಟಿಸಿದ ಸಮಗ್ರ ವಚನ ಸಾಹಿತ್ಯದ ವಿವರ ಇಂದಿನವರೆಗೂ ಸರಿಯಾಗಿ ದಾಖಲಾಗಿಲ್ಲ. ಯುವ ವಿದ್ವಾಂಸರು ಈ ನಿಟ್ಟಿನಲ್ಲಿ ಸಂಶೋಧನೆ ಮಾಡಬೇಕು.

  1. ಅಕ್ಕಗಳ ಸೃಷ್ಟಿವಚನ 1959
  2. ಅಕ್ಕಮಹಾದೇವಿಯ ವಚನಾರ್ಥ ಪ್ರಥಮ ಭಾಗ
  3. ಉಡುತಡಿಯ ಮಹಾದೇವಿಯಕ್ಕನ ವಚನಾರ್ಥ-ಎರಡನೇ ಭಾಗ
  4. ಕೊರವಂಜಿ ವಚನ – ಅಕ್ಕಮಹಾದೇವಿ
  5. ಗುರುವರ್ಗದ ವಚನಗಳು
  6. ದೇವರ ದಾಸಿಮಯ್ಯಗಳು = ಜೇಡರ ದಾಸಿಮಯ್ಯಗಳ ಮುಂಡಿಗೆಯ ವಚನ
  7. ಶಿವಲೆಂಕ ಮಂಚಣ್ಣಗಳ ವಚನ
  8. ಸರ್ವ ಪುರಾತನರ ವಚನ 1000 ವಚನದ ಸಂಕಲನ
  9. ಮೂರು ಸಾವಿರ ವಚನಗಳು, ಸದ್ಧರ್ಮ ದೀಪಿಕೆಯಲ್ಲಿ ಪ್ರಕಟವಾಗುತ್ತಾ ಬಂದಿದೆ. ಪುಸ್ತಕದ ರೂಪದಲ್ಲಿ ಹೊರಬಂದಿಲ್ಲ.
  10. ಸಿದ್ಧೇಶ್ವರನ ವಚನಗಳು

ಪ್ರಕಟಿತ ಸಾಹಿತ್ಯವನ್ನು ಮುಂದೆ ಇಟ್ಟುಕೊಂಡು ಪರಿಶೀಲನೆ ಮಾಡಿ ಪುಸ್ತಕಗಳನ್ನು ವಿಂಗಡಿಸಬೇಕು.

 

ಪ್ರೊ|| ಸಂ.ಶಿ. ಭೂಸನೂರಮಠ

ಹಿರಿಯ ಕನ್ನಡ ವಿದ್ವಾಂಸರಾದ ಪ್ರೊ. ಸಂ.ಶಿ. ಭೂಸನೂರಮಠರು ಅಪರಿಮಿತವಾದ ಸೇವೆಯನ್ನು ವಚನ ಸಾಹಿತ್ಯಕ್ಕೆ ಸಲ್ಲಿಸಿದ್ದಾರೆ.

  1. ಲಿಂಗಲೀಲಾ ವಿಲಾಸ – ಕಲ್ಲುಮಠದ ಪ್ರಭುದೇವ
  2. ಏಕೋತ್ತರ ಶತಸ್ಥಲ – ಮಹಾಲಿಂಗದೇವ
  3. ಶೂನ್ಯಸಂಪಾದನೆ – ಗೂಳೂರು ಸಿದ್ಧವೀರಣ್ಣೊಡೆಯ
  4. ಮೋಳಿಗೆ ಮಾರಯ್ಯ ಮತ್ತು ರಾಣೀ ಮಹಾದೇವಮ್ಮನ ವಚನಗಳು (ಉತ್ತಂಗಿ ಅವರ ಜೊತೆ)
  5. ವಚನ ಸಾಹಿತ್ಯ ಸಂಗ್ರಹ

 

ಉತ್ತಂಗಿ ಚೆನ್ನಪ್ಪನವರು

ಹುಟ್ಟುಕನ್ನಡಿಗರಾದ ಉತ್ತಂಗಿ ಚೆನ್ನಪ್ಪನವರು ರೆವರೆಂಡ್‍ರಾಗಿ ಬೈಬಲ್ ಜೊತೆಗೆ ವಚನ ಸಾಹಿತ್ಯವನ್ನು  ಅಧ್ಯಯನ ಮಾಡಿದವರು. ಅವರ ಸೇವೆ ಸದಾ ಸ್ಮರಣೀಯ.

  1. ಸರ್ವಜ್ಞ ವಚನಗಳು
  2. ಆದಯ್ಯನ ವಚನಗಳು – ಮುರುಘಾಮಠ 1957
  3. ಮೋಳಿಗೆ ಮಾರಯ್ಯ ಮತ್ತು ರಾಣಿ ಮಹಾದೇವಮ್ಮನ ವಚನಗಳು

(ಪ್ರೊ. ಸಂ.ಶಿ. ಭೂಸನೂರಮಠರವರ ಜೊತೆ)

ವೀರಭದ್ರಪ್ಪ ಹಾಲಬಾವಿ ಧಾರವಾಡ ಪ್ರಕಾಶಕರು 1950

  1. ಸಿದ್ಧರಾಮ ಸಾಹಿತ್ಯ ಸಂಗ್ರಹ – 1955, ಪ್ರಕಾಶಕರು ಜಯದೇವಿ ತಾಯಿ ಲಿಗಾಡೆಯವರು ಕನ್ನಡ ಕೋಟೆ
  2. ಕುಷ್ಟಗಿ ಕರಿಬಸವೇಶ್ವರರ ವಚನಗಳು

ಪ್ರೊ. ಶಿ.ಶಿ. ಬಸವನಾಳ

ಪ್ರೊ|| ಶಿ.ಶಿ. ಬಸವನಾಳರು ವಚನ ಸಾಹಿತ್ಯ ಸಂಪಾದನೆ ಪ್ರಕಟಣೆ ಇಂಗ್ಲೀಷ್ ಅನುವಾದಕ್ಕೆ ತಮ್ಮ ಪಾಲಿನ ಸೇವೆಯನ್ನು ಸಲ್ಲಿಸಿದ್ದಾರೆ.

  1. ಬಸವಣ್ಣನವರ ಷಟ್‍ಸ್ಥಲದ ವಚನಗಳು
  2. ಬಸವಣ್ಣನವರ ಷಟ್‍ಸ್ಥಲದ ವಚನಗಳು ಗ್ರಂಥಾಲಯ ಆವೃತ್ತಿ 1962
  3. ಬಸವಣ್ಣನವರ ಹೆಚ್ಚಿನ ವಚನಗಳು

 

ಡಾ. ಎಲ್. ಬಸವರಾಜು

ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು ತಮ್ಮ ಜೀವಿತಾವಧಿಯಲ್ಲಿ ವಚನ ಸಂಪಾದನೆಗೆ ಅಪರಿಮಿತವಾದ ಸೇವೆಯನ್ನು ಸಲ್ಲಿಸಿದ್ದಾರೆ. ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಬಗ್ಗೆ ಅಖಿಲ ಭಾರತ ಮಟ್ಟದಲ್ಲಿ ಚರ್ಚೆಯಾಗಬೇಕು.

  1. ಬಸವಣ್ಣನವರ ವಚನಗಳು (ಬಸವೇಶ್ವರ ವಚನ ಸಂಗ್ರಹ) 1952
  2. ಅಲ್ಲಮನ ವಚನ ಚಂದ್ರಿಕೆ (ಪ್ರಭುದೇವರ ವಚನಗಳು ಮತ್ತು ಸ್ವರವಚನಗಳು) 1960
  3. ಬಸವ ವಚನಾಮೃತ ಭಾಗ-1 1966 ಭಾಗ-2 1989
  4. ಅಕ್ಕನ ವಚನಗಳು 1966
  5. ಶಿವಗಣಪ್ರಸಾದಿ ಮಹಾದೇವಯ್ಯನ ಪ್ರಭುದೇವರ ಶೂನ್ಯಸಂಪಾದನೆ – 1969
  6. ದೇವರ ದಾಸಿಮಯ್ಯನ ವಚನಗಳು – 1970
  7. ಅಲ್ಲಮನ ವಚನಗಳು – 1969
  8. ಸರ್ವಜ್ಞನ ವಚನಗಳು – 1970
  9. ಸರ್ವಜ್ಞನ ವಚನಗಳು (ಸಂಗ್ರಹ) 1975
  10. ವಚನ ಚಿಂತನ (1982)
  11. ಅಲ್ಲಮನ ಲಿಂಗಾಂಗ ಸಂವಾದ (ಪ್ರಭುಲಿಂಗಲೀಲೆಯ ಆಧಾರದಿಂದ) 1986
  12. ಬಸವಣ್ಣನ ಷಟ್ಸ್ ್ಥಲದ ವಚನಗಳು (ಸಹ ವ್ಯಾಖ್ಯಾನ ಸಹಿತ) 1990
  13. ಶೂನ್ಯಸಂಪಾದನೆ – 1996 (ಸಂಗ್ರಹ ಕರ್ನಾಟಕ ಸಾಹಿತ್ಯ ಅಕಾಡೆಮಿ)
  14. ಶೂನ್ಯಸಂಪಾದನೆ (ಗೂಳೂರು ಸಿದ್ಧವೀರಣ್ಣೊಡೆಯ ಮೌಲಿಕ ಕೃತಿಯ

ಸರಳ ನಿರೂಪಣೆ) 1997, 2016

  1. ಬೆಡಗಿನ ವಚನಗಳು – 1998
  2. [ಅಲ್ಲಮನು ಮೈಮೇಲೆ ಬಂದಾಗ 2004]
  3. ಪ್ರಭುದೇವರ ಷಟ್ಸ್ ್ಥಲದ ವಚನಗಳು 2005 ಸಹಸ್ಪಂದನ ಸಹಿತ
  4. ಶ್ರೀಘನಲಿಂಗದೇವರ ವಚನಗಳು 2005 ವ್ಯಾಖ್ಯಾನ ಸಹಿತ
  5. ಸೊನ್ನಲಾಪುರದ ಸಂತ ಸಿದ್ಧರಾಮರ ನಿಜವಚನಗಳು 2007
  6. ನೂರಾರು ಶರಣರ ಸಾವಿರ ವಚನಗಳು 2008
  7. [ಕವನ ಕೂಡಲಸಂಗ 2009]
  8. ಬಸವಪೂರ್ವ ವಚನಕಾರರು 2009
  9. ಕಡಕೋಳ ಮಡಿವಾಳಪ್ಪನವರ ಮಹಾಂತ ನಿಜಲೀಲಾನುಭವ ವಚನ ಮತ್ತು ಪದಗಳೂ 2011

ಡಾ. ಆರ್.ಸಿ. ಹಿರೇಮಠ

ವಚನ ಸಾಹಿತ್ಯ ಪ್ರಕಟಣ ಇತಿಹಾಸದಲ್ಲಿ ಡಾ. ಆರ್.ಸಿ. ಹಿರೇಮಠರಿಗೆ ಅಗ್ರಸ್ಥಾನ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ವಚನ ಸಾಹಿತ್ಯದ ಬೃಹತ್ ಹಸ್ತಪ್ರತಿ ಭಂಡಾರವನ್ನು ಸ್ಥಾಪಿಸಿದ್ದು, ವಚನ ಸಾಹಿತ್ಯ ಪ್ರಕಟಣೆಗೆ ದುಡಿಯುವಂತಹ ವಿದ್ವಾಂಸರನ್ನು ತಯಾರು ಮಾಡಿದ್ದು ಇವರ ಜೀವಮಾನದ ಕೊಡುಗೆ.

  1. ಅಖಂಡೇಶ್ವರ ವಚನ (ಸಂಪಾದನೆ) 1956
  2. ಷಟ್‍ಸ್ಥಲ ಜ್ಞಾನಸಾರಾಮೃತ ಮುರುಘಾಮಠ ಧಾರವಾಡ 1964
  3. ಷಟ್‍ಸ್ಥಲಪ್ರಭೆ (ಸಂಶೋಧನೆ) 1965
  4. ಇಪ್ಪತ್ತೇಳು ಶಿವಶರಣೆಯರ ವಚನಗಳು (ಸಂಪಾದನೆ) 1968
  5. ಅಮುಗೆ ರಾಯಮ್ಮನ ಮತ್ತು ಅಕ್ಕಮ್ಮನ ವಚನಗಳು 1968
  6. ಸಿದ್ಧರಾಮೇಶ್ವರ ವಚನಗಳು 1968

6ಎ.      ಬಸವಣ್ಣನವರ ವಚನಗಳು 1968

  1. ವೀರಶೈವ ಚಿಂತಾಮಣಿ 1971
  2. ಮುಕ್ತಿಕಂಠಾಭರಣ 1971
  3. ನೀಲಮ್ಮನ ವಚನಗಳು ಮತ್ತು ಲಿಂಗಮ್ಮನ ವಚನಗಳು 1971
  4. ಶೂನ್ಯಸಂಪಾದನೆ – ಶಿವಗಣಪ್ರಸಾದಿ ಮಹಾದೇವಯ್ಯ 1971
  5. ವಿಶೇಷಾನುಭವ ಷಟ್ಸ್ ್ಥಲ – 1971
  6. ಶೂನ್ಯಸಂಪಾದನೆ – ಗುಮ್ಮಳಾಪುರದ ಸಿದ್ಧಲಿಂಗ ದೇವರ 1972
  7. ಸಕಲ ಪುರಾತನರ ವಚನಗಳು-1 1973
  8. ಬ್ರಹ್ಮಾದ್ವೈತ ಸಿದ್ಧಾಂತ ಷಟ್‍ಸ್ಥಲಾಭರಣ – 1973
  9. ಮಹಾದೇವಿಯಕ್ಕನ ವಚನಗಳು – 1973
  10. ಅಲ್ಲಮಪ್ರಭುದೇವರ ವಚನಗಳು – 1976
  11. Sಡಿi ಅhಚಿಟಿಟಿಚಿbಚಿsಚಿvesತಿಚಿಡಿಚಿ (ಣಡಿಚಿಟಿsಟಚಿಣioಟಿ) 1978

 

ಡಾ. ಎಂ.ಎಂ. ಕಲಬುರ್ಗಿ ವಚನ ಸಂಪಾದನೆ

ವಚನ ಸಾಹಿತ್ಯದ ಪ್ರಕಟಣೆಯಲ್ಲಿ ಅಪರಿಮಿತವಾದ ಸೇವೆಯನ್ನು ಸಲ್ಲಿಸಿದರು. ಸಮಗ್ರ ವಚನ ಸಂಪುಟದ ಪ್ರಧಾನ ಸಂಪಾದಕರಾಗಿ ತಮ್ಮ ಜೀವಿತಾವಧಿಯಲ್ಲಿ ಮೂರು ಸಾರಿ ಸಂಪಾದಿಸಿ ಪ್ರಕಟಿಸಿದ್ದು, ಫಗು. ಹಳಕಟ್ಟಿ ಅವರ ಸಮಗ್ರ ಸಾಹಿತ್ಯ ಪ್ರಕಟಣೆ, ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆ, ಬಸವ ಸಮಿತಿಯ ಬಹುಭಾಷಾ ಯೋಜನೆಯಲ್ಲಿ ವಚನ ಸಾಹಿತ್ಯ ಪ್ರಕಟಣೆ ಹೀಗೆ ವಚನ ಸಾಹಿತ್ಯಕ್ಕೆ ಸಂದ ಇವರ ಸೇವೆ ಬಗ್ಗೆ ಯುವ ವಿದ್ವಾಂಸರು ತಲಸ್ಪರ್ಶಿಯಾಗಿ ಅಧ್ಯಯನ ಮಾಡಬೇಕು.

  1. ಬಸವಸ್ತೋತ್ರದ ವಚನಗಳು ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 1976
  2. ಬಸವಣ್ಣನವರ ಟೀಕಿನ ವಚನಗಳು-1 ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 1970
  3. ಬಸವಣ್ಣನವರ ಟೀಕಿನ ವಚನಗಳು-2 ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡ 1982
  4. ವಚನಶಾಸ್ತ್ರಸಾರ ಭಾಗ-1, (ಫ.ಗು. ಹಳಕಟ್ಟಿ) ಇತರರೊಂದಿಗೆ ತೋಂಟದಾರ್ಯಮಠ ಗದಗ 1982, 1999 ವಿಜಾಪುರ 2007
  5. ಚೆನ್ನಬಸವಣ್ಣನವರ ಷಟ್‍ಸ್ಥಲ ವಚನ ಮಹಾಸಂಪುಟ ತೋಂಟದಾರ್ಯಮಠ ಗದಗ 1992
  6. ವಚನಸಂಕಲನ ಸಂಪುಟ – ನಾಲ್ಕು (ಇತರರೊಂದಿಗೆ) ತೋಂಟದಾರ್ಯಮಠ ಗದಗ 1992
  7. ಬಸವಣ್ಣನವರ ವಚನಗಳು ಕರ್ನಾಟಕ ಸರ್ಕಾರ ಕನ್ನಡ ಸಂಸ್ಕøತಿ ಇಲಾಖೆ, ಪುಸ್ತಕ ಪ್ರಾಧಿಕಾರ 1993, 2002, 2016
  8. ಸಂಕೀರ್ಣ ವಚನ ಸಂಪುಟ-1 ಕನ್ನಡ ಸಂಸ್ಕøತಿ ಇಲಾಖೆ, ಪುಸ್ತಕ ಪ್ರಾಧಿಕಾರ 1993, 2002
  9. ಸಿದ್ಧರಾಮಯ್ಯದೇವರ ವಚನಗಳು (ಡಾ. ಸಾ.ಶಿ ಮರುಳಯ್ಯನವರೊಂದಿಗೆ)
  10. ಷಟ್ಸ್ ್ಥಲ ಶಿವಾಯಣ (ಡಾ. ಸಿ.ಸಿ ಕೃಷ್ಣಕುಮಾರ್‍ರೊಂದಿಗೆ) ತೋಂಟದಾರ್ಯಮಠ ಗದಗ 1999
  11. ವಚನ ಸಂಕಲನ ಸಂಪುಟ-6 (ಇತರರೊಂದಿಗೆ) ತೋಂಟದಾರ್ಯಮಠ ಗದಗ 2002
  12. ಪರಮಾನಂದ ಸುಧೆ (ಡಾ. ವೀರಣ್ಣ ರಾಜೂರ ಜೊತೆ)
  13. ವಚನ : 2 ಬಸವ ಸಮಿತಿ ಬೆಂಗಳೂರು 2012 23 ಭಾಷೆಗೆ ಭಾಷಾಂತರ
  14. ಏಕೋತ್ತರಶತಸ್ಥಲ (ಡಾ. ವೀರಣ್ಣ ರಾಜೂರ) ರವರೊಂದಿಗೆ ತೋಂಟದಾರ್ಯ ಮಠ ಗದಗ 2014
  15. ಶೂನ್ಯಸಂಪಾದನೆ (ಡಾ. ವೀರಣ್ಣ ರಾಜೂರ) ರವರೊಂದಿಗೆ ತೋಂಟದಾರ್ಯ ಮಠ 2015

 

ಎಸ್. ಶಿವಣ್ಣ

ಹಸ್ತಪ್ರತಿ ತಜ್ಞ, ಆಕರ ವಿಜ್ಞಾನಿ ಎಸ್. ಶಿವಣ್ಣನವರು ವಚನ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಬಗ್ಗೆ ವಿವರವಾದ ಅಧ್ಯಯನ ನಡೆಯಬೇಕು. ಅಪ್ರಕಟಿತ ವಚನ ಸಾಹಿತ್ಯದ ಬಗ್ಗೆ ವಿವರವಾದ ಮಾಹಿತಿ ನೀಡುತ್ತಾ ಇದ್ದ ಏಕಮೇವ ವ್ಯಕ್ತಿ ಎಂದರೆ ಅತಿಶಯೋಕ್ತಿ ಅಲ್ಲ. ಹಲವು ಅಪ್ರಕಟಿತ ಬಿಡಿ ಬಿಡಿ ವಚನಗಳು ಪಾತಾಳಗರುಡಿ ಹಾಕಿ ಹುಡುಕಿ ವಿಶೇಷ ಸಂಚಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟವಾಗಿರುವ “ಬಿಡುಮುತ್ತು” (2004) ಸಂಪುಟವನ್ನು ಪರಿಶೀಲಿಸಿದರೆ ವಚನ ಸಂಪಾದನೆಗೆ ಅವರ ಸೇವೆಯ ವಿಸ್ತಾರದ ಅರಿವು ಉಂಟಾಗುತ್ತವೆ.

  1. ಕುಷ್ಟಗಿ ಕರಿಬಸವೇಶ್ವರನ ವಚನಗಳು ತೋಂಟದಾರ್ಯಮಠ ಗದಗ 1990
  2. ಸಮಗ್ರ ವಚನ ಸಂಪುಟ-11 ಕನ್ನಡ ಸಂಸ್ಕøತಿ ಇಲಾಖೆ 1993, 2002
  3. ಚೆನ್ನಬಸವಣ್ಣನವರ ವಚನಗಳು ಬಡಗಿ ಪ್ರಕಾಶನ ತುಮಕೂರು 1995
  4. ಹೊಸ ವಚನಗಳು ಕರ್ಣಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು 1998
  5. ವಚನ ಸಂಕಲನ ಸಂಪುಟ-4
  6. ನೀಲಮ್ಮನ ವಚನಗಳು ಬಸವ ಸಮಿತಿ 1993
  7. ಅಕ್ಕಮಹಾದೇವಿ ವಚನಗಳು ಬೆಂಗಳೂರು 1993
  8. ಏಕೋತ್ತರ ಶತಸ್ಥಲ 2014 ಇತರರೊಂದಿಗೆ ಎಳಂದೂರು ಪರ್ವತ ಶಿವಯೋಗಿ ಕೃತಿ (ಅಪೂರ್ಣ)

 

ಪ್ರೊ. ಎಸ್. ಉಮಾಪತಿ

ನಿವೃತ್ತ ಕನ್ನಡ ಪ್ರಾಧ್ಯಾಪಕರು ದಾವಣಗೆರೆ ಪರಿಸರದಲ್ಲಿ ಹಸ್ತಪ್ರತಿ ಸಂಗ್ರಹ ಸಂಪಾದನೆಗೆ ವಿಶೇಷವಾದ ಸೇವೆಯನ್ನು ಸಲ್ಲಿಸಿದರು. ತಮ್ಮ 88ನೇ ವಯಸ್ಸಿನಲ್ಲಿ ನವೆಂಬರ್ 2020ರಲ್ಲಿ ಮಹಾಲಿಂಗದಲ್ಲಿ ಲೀನವಾದರು.

  1. ಸಕಲೇಶ ಮಾದರಸನ ವಚನಗಳು
  2. ಮಡಿವಾಳ ಮಾಚಿದೇವ ವಚನಗಳು
  3. ಜೇಡರ ದಾಸಿಮಯ್ಯನ ವಚನಗಳು
  4. ಷಟ್‍ಸ್ಥಲ ಬ್ರಹ್ಮಾನಂದ ವಿರಕ್ತ ಚಾರಿತ್ರ ಸಂಪಾದನೆಯ ವಚನಗಳು 1984
  5. ಏಕೋತ್ತರ ಶತಸ್ಥಲ ಏಳಂದೂರು (ಪರ್ವತ ಶಿವಯೋಗಿಯ ವಚನಗಳು) ಎಸ್. ಶಿವಣ್ಣ ಮತ್ತು ಡಾ|| ಬಿ. ನಂಜುಂಡಸ್ವಾಮಿ

 

ಡಾ. ಎಸ್. ವಿದ್ಯಾಶಂಕರ ಸಂಪಾದಿತ ವಚನ ಸಾಹಿತ್ಯ

ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾಗಿ ವಚನಾಭ್ಯಾಸಿಗಳಾಗಿ ವಚನಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಾ ವಚನಗಳ ಸಂಪಾದನೆ, ಪ್ರಕಟಣೆಯಲ್ಲಿ ವಿಶೇಷವಾದ ಸೇವೆಯನ್ನು ಸಲ್ಲಿಸಿದರು. ಸಮಗ್ರ ವಚನ ಸಂಪಾದನೆ ಪ್ರಕಟಣೆಯಲ್ಲಿ ಇವರ ಸೇವೆ ಸಂದಿದೆ. ಅಪ್ರಕಟಿತ ಹಲಗೆಯಾರ್ಯನ ಶೂನ್ಯ ಸಂಪಾದನೆ ಪ್ರಕಟಣೆ ಅವರು ವಚನ ಸಾಹಿತ್ಯಕ್ಕೆ ಕೊಟ್ಟ ದೊಡ್ಡ ಕೊಡುಗೆ.

  1. ಗುಬ್ಬಿಯ ಮಲ್ಲಣ್ಣನ ಗಣಭಾಷ್ಯ ರತ್ನಮಾಲೆ ಪ್ರಕಾಶನ ತೊರೆಮಠ ಗುಬ್ಬಿ ತುಮಕೂರು ಜಿಲ್ಲೆ 2006, ಸ್ನೇಹ ಪ್ರಕಾಶನ 2021
  2. ವಚನ ಪರಿಭಾಷಾ ಕೋಶ – 1993 ಕನ್ನಡ ಸಂಸ್ಕøತಿ ಇಲಾಖೆ, ಬೆಂಗಳೂರು
  3. ಹಲಗೆದೇವರ ಶೂನ್ಯಸಂಪಾದನೆ (ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯನವರೊಡನೆ) 2000, 2010
  4. ಅಂಬಿಗರ ಚೌಡಯ್ಯನ ವಚನಗಳು ಡಾ. ಸಿದ್ಧಾಶ್ರಮ ಇವರೊಡನೆ 1980
  5. ಶ್ರೀ ಸಿದ್ಧರಾಮೇಶ್ವರ ವಚನಗಳು ಸಂಪಾದಿತ 1993 ಕನ್ನಡ ಮತ್ತು ಸಂಸ್ಕøತಿ ಇಲಾಖೆ, 2002, 2016
  6. ಸಂಕೀರ್ಣ ವಚನ ಸಂಪುಟ-2 ಕನ್ನಡ ಮತ್ತು ಸಂಸ್ಕøತಿ ಇಲಾಖೆ 1993, 2002, 2016
  7. ವಚನಗಳು (ವಚನಗಳ ಪ್ರಾತಿನಿಧಿಕ ಸಂಗ್ರಹ) ಕರ್ನಾಟಕ ಸಾಹಿತ್ಯ ಅಕಾಡೆಮಿ 1998
  8. ಸಿದ್ಧಲಿಂಗೇಶ್ವರರ ವಚನಗಳ ಟೀಕೆ ಅಜ್ಞಾತ ಕವಿಕೃತ ಸಮೇತ 2011
  9. ಎನ್ನ ನಾ ಹಾಡಿಕೊಂಬೆ ಟೀಕಾ ಸಮೇತ ಬಸವಣ್ಣನವರ ವಚನಗಳ ಸಾಂಸ್ಕøತಿಕ ಅಧ್ಯಯನ ಪ್ರಿಯದರ್ಶಿನಿ ಪ್ರಕಾಶನ 2012
  10. ಅಲಕ್ಷಿತ ವಚನಕಾರರು 2013 ಪ್ರಿಯದರ್ಶಿನಿ ಪ್ರಕಾಶನ
  11. ಕಲ್ಲುಮಠದ ಪ್ರಭದೇವರ ಕೃತಿಗಳು 2013

 

ಜಿ.ಎ. ಶಿವಲಿಂಗಯ್ಯ

ಮಂಡ್ಯದ ಗುತ್ತಲು ಗ್ರಾಮದ ಗ್ರಾಮಾಂತರ ಪ್ರತಿಭೆ ಜಿ.ಎ. ಶಿವಲಿಂಗಯ್ಯನವರು ಮೈಸೂರು ಮರಿಮಲ್ಲಪ್ಪ ಜೂನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಾ ಅಪ್ರಕಟಿತ ವಚನ ಸಾಹಿತ್ಯದ ಪ್ರಕಟಣೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಾರೆ.

  1. ಮುತ್ತಿನಕಂತೆಯ ದೇವರ ವಚನಗಳು
  2. ಚೆನ್ನಬಸವಣ್ಣನವರ ಮಿಶ್ರಷಟ್ಸ್ ್ಥಲದ ವಚನಗಳು, ತೋಂಟದಾರ್ಯ ಮಠ, ಗದಗ
  3. ಷಟ್‍ಪ್ರಕಾರ ಸಂಗ್ರಹ – 1987 ತೋಂಟದಾರ್ಯ ಮಠ ಗದಗ
  4. `ವಚನೈಕೋತ್ತರ ಶತಸ್ಥಲ’ ಚೆನ್ನಬಸವಣ್ಣನವರು (ಕ್ರಿ.ಶ. 1160) 108 ವಚನಗಳ ಸಂಕಲನರೂಪದ ಗ್ರಂಥ
  5. ಮೋಕ್ಷದರ್ಶನ ಸಂಗ್ರಹ (ಅಪೂರ್ಣ ವಚನ ಸಂಕಲನ)
  6. ಚೆನ್ನಬಸವೇಶ್ವರದೇವರ ಸ್ತೋತ್ರದ ವಚನಗಳು 1991 ತೋಂಟದಾರ್ಯಮಠ
  7. ಎಲ್ಲ ಪುರಾತರ ವಚನ  ಕುಂತೂರು ಮಹಾಂತ ದೇವರು, ವಚನ ಸಂಕಲನ ಸಂಪುಟ II
  8. ಚೆನ್ನಬಸವೇಶ್ವರದೇವರ ರಾಜಯೋಗದ ವಚನ, ವಚನ ಸಂಕಲನ ಸಂಪುಟ II 1990 ತೋಂಟದಾರ್ಯ ಮಠ ಗದಗ

ಪಿ.ಎಂ. ಗಿರಿರಾಜು

ಮೈಸೂರು ವ್ಯಾಪಾರಸ್ಥರ ಮನೆ ಮಗನಾಗಿ ವಚನ ಸಾಹಿತ್ಯ ಪ್ರಕಟಣೆಗೋಸ್ಕರ ತಮ್ಮ ಜೀವನವನ್ನು ಮುಡಿಪಿಟ್ಟು ಹೋರಾಟ ಮಾಡಿದವರು. ವಚನ ಸಾಹಿತ್ಯ ಸಂಪಾದನೆ, ಪ್ರಕಟಣೆಗೆ ಅಪರಿಮಿತವಾದ ಸೇವೆ ಸಂದಿದೆ.

  1. ಆಚರಣೆ ಸಂಬಂಧದ ವಚನಗಳು – ಸಂಪಾದನೆ ಹರತಾಳ ಚನ್ನಂಜಯದೇವರು
  2. ಸಂಬಂಧಾಚರಣೆ ವಚನಗಳು                   3.          ಷಟ್‍ಪ್ರಕಾರ ಸಂಗ್ರಹ
  3. ಚಿದೈಶ್ವರ್ಯ ಚಿದಾಭರಣ                                    5.          ಸಿದ್ಧರಾಮೇಶ್ವರ ವಚನಗಳು
  4. ಬಸವಣ್ಣನವರ 101 ವಚನಗಳು      7.             ಜೇಡರ ದಾಸಿಮಯ್ಯಗಳ ವಚನ
  5. ವಿರತಾಚರಣೆಯ ವಚನಗಳು ಸಂಪಾದನೆ ಸಿದ್ಧವೀರೇಶ್ವರದೇವರು

ಬಿ.ಎಸ್. ಸಣ್ಣಯ್ಯ

ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥ ಸಂಪಾದನೆ ವಿಭಾಗದಲ್ಲಿ ಸಂಪಾದಕರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಬಿ.ಎಸ್. ಸಣ್ಣಯ್ಯನವರು ಅಖಿಲ ಭಾರತ ಮಟ್ಟದಲ್ಲಿ ಹಸ್ತಪ್ರತಿ ಸಂಗ್ರಹಕ್ಕೆ ತಿರುಗಾಡಿದ್ದರು. ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆಗೆ ವಿಶೇಷ ಕ್ರಮವನ್ನು ಹಾಕಿದ ಹಿರಿಯ ವಿದ್ವಾಂಸರು.

  1. ಮೆರೆಮಿಂಡಯ್ಯನ ವಚನಗಳು
  2. ದೇವರ ದಾಸಿಮಯ್ಯನ = ಜೇಡರ ದಾಸಿಮಯ್ಯನ ವಚನಗಳು
  3. ಅರಿವಿನ ಮಾರಿತಂದೆಗಳ ವಚನ   4.             ಕೋಲಶಾಂತಯ್ಯನ ವಚನ
  4. ಗಜೇಶಮಸಣಯ್ಯಗಳ ವಚನ       6.             ಡಕ್ಕೆಯ ಬೊಮ್ಮಣ್ಣಗಳ ವಚನ
  5. ಬಿಬ್ಬಿಬಾಚಯ್ಯನ ವಚನಗಳು       8.             ಮಧುವಯ್ಯಗಳ ವಚನ
  6. ಮೋಳಿಗೆ ಮಾರಯ್ಯನ ವಚನ       10.             ಉರಿಲಿಂಗದೇವನ ವಚನಗಳು

 

ಡಾ. ವೈ.ಸಿ. ಭಾನುಮತಿ

ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥ ಸಂಪಾದನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಾ ಅಪ್ರಕಟಿತ ವಚನ ಸಾಹಿತ್ಯದ ಪ್ರಕಟಣೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸುತ್ತಾ ನಿವೃತ್ತರಾಗಿದ್ದಾರೆ. ಅಪ್ರಕಟಿತ ವಚನ ಸಾಹಿತ್ಯದ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು

  1. ವಚನ ಸಂಕಲನ ಸಂಪುಟ – ಗಿ – 1992 ಗದುಗಿನ ತೋಂಟದಾರ್ಯ ಮಠ, ಈ ಸಂಪುಟದಲ್ಲಿ ಅವಿಧಿತ ಸಂಕಲನಕಾರನ ವಚನಗಳು, ಸಿದ್ಧಲಿಂಗ ಸೂತ್ರ ಶಿಖಾ ಚಕ್ರ ದೀಕ್ಷಾ ವಿಧಾನದ ವಚನಗಳನ್ನು ಈ ಸಂಪುಟದಲ್ಲಿ ಸಂಕಲಿಸಲಾಗಿದೆ.
  2. ಸಮಗ್ರ ವಚನ ಸಂಪುಟದಲ್ಲಿ ಸಂಕೀರ್ಣ ವಚನ ಸಂಪುಟ ಗಿIII, 2021
  3. ಸಮಗ್ರ ವಚನ ಸಂಪುಟದಲ್ಲಿ ಸಂಕೀರ್ಣ ವಚನ ಸಂಪುಟ Iಘಿ,  2021
  4. ಸಮಗ್ರ ವಚನ ಸಂಪುಟದಲ್ಲಿ ಸಂಕೀರ್ಣ ವಚನ ಸಂಪುಟ ಘಿI, 2021 ಸಂಪುಟಗಳನ್ನು ಸಂಪಾದಿಸಿದ್ದಾರೆ.

ಮೈಸೂರು ನಗರದಲ್ಲಿ ವಚನ ಸಾಹಿತ್ಯಕ್ಕೆ ದುಡಿದವರು.ಎಂ. ಬಸವಲಿಂಗಶಾಸ್ತ್ರಿಗಳು, ತಿಪ್ಪಯ್ಯ ಶಾಸ್ತ್ರಿಗಳು, ಅರಮನೆ ಪಂಚಗವಿಮಠದ ಗೌರೀಶಂಕರಸ್ವಾಮಿಗಳು, ಹೆಚ್. ದೇವೀರಪ್ಪ, ಡಾ. ಎಲ್. ಬಸವರಾಜು ಬಿ.ಎಸ್. ಸಣ್ಣಯ್ಯ, ಪಿ.ಎಂ. ಗಿರಿರಾಜು, ಸದ್ಧರ್ಮ ದೀಪಿಕೆ, ಚೆನ್ನಮಲ್ಲಿಕಾರ್ಜುನರು, ಜಿ.ಎ. ಶಿವಲಿಂಗಯ್ಯ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿಗಳು, ಡಾ. ವೈ.ಸಿ. ಭಾನುಮತಿ, ಡಾ. ಇಮ್ಮಡಿ ಶಿವಬಸವಸ್ವಾಮಿಗಳು, ವಿದ್ವಾನ್ ಡಿ. ಸಿದ್ಧಗಂಗಯ್ಯ, ಎಸ್. ಶಿವಣ್ಣ ಇನ್ನು ಮುಂತಾದವರು. ಹಿರಿಯ ವಿದ್ವಾಂಸರಾದ ಪ್ರೊ. ಡಿ.ಎಲ್. ನರಸಿಂಹಾಚಾರ್, ಪ್ರೊ. ತೀ.ನಂ. ಶ್ರೀಕಂಠಯ್ಯ, ವಚನ ಸಾಹಿತ್ಯ ಸಂಪಾದನೆಗೆ ಮಾರ್ಗದರ್ಶನ ಮಾಡಿದ್ದಾರೆ. ಡಾ. ಚಿದಾನಂದಮೂರ್ತಿ, ಡಾ. ಎಚ್. ತಿಪ್ಪೇರುದ್ರಸ್ವಾಮಿ ಡಾ. ದೇಜಗೌ ವಚನ ಸಾಹಿತ್ಯ ಪ್ರಕಟಣೆಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ.

 

ಡಾ. ಬಿ.ಆರ್. ಹಿರೇಮಠ

ಕರ್ನಾಟಕ ಧಾರವಾಡ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅಪ್ರಕಟಿತ ವಚನ ಸಾಹಿತ್ಯ ಸಂಪಾದನೆಯಲ್ಲಿ ವಿಶೇಷವಾದ ಸೇವೆಯನ್ನು ಸಲ್ಲಿಸಿದರು.

  1. ಅದ್ವೈತಾನಂದದ ವಚನಗಳು – 1983 ತೋಂಟದಾರ್ಯಮಠ ಗದಗ
  2. ಕಂಡಿತದ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  3. ಕುಸ್ತಿ ಆಗಮದ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  4. ಗೊಹೇಶ್ವರಯ್ಯನ ವಚನ ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  5. ಚಿದ್ಭಸ್ಮಮಣಿಮಂತ್ರ ಮಹಾತ್ಮೆಯ ಸ್ಥಲದ ವಚನ, ಜಟಾಶಂಕರದೇವರು-ವಚನ ಸಂಕಲನ

ಸಂಪುಟ-I 1990 ತೋಂಟದಾರ್ಯ ಮಠ

  1. `ನಂಜುಂಡ ಶಿವಾ’ ಅಂಕಿತದ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯಮಠ ಗದಗ
  2. ನಿರಾಲಂಬ ಪ್ರಭುದೇವನ ವಚನಗಳು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  3. ಪರಂಜ್ಯೋತಿಯರ ವಚನ ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ
  4. ಬಸವಸ್ತೋತ್ರದ ವಚನಗಳು : 2 ಸಂಪಾದನೆ ಬೋಳಬಸವೇಶ್ವರದೇವರು ವಚನ ಸಂಕಲನ ಸಂಪುಟ-I 1990 ತೋಂಟದಾರ್ಯ ಮಠ ಗದಗ
  5. ಲಿಂಗಸಾವಧಾನದ ವಚನಗಳು ಸಣ್ಣ ಬರೆಹದ ಗುರುಬಸವರಾಜದೇವರು ವಚನ ಸಂಕಲನ ಸಂಪುಟ -I 1990 ತೋಂಟದಾರ್ಯಮಠ ಗದಗ
  6. ಸಂಪಾದನೆಯ ಸಾರಾಮೃತ-ಕಟ್ಟಿಗೆಹಳ್ಳಿ ಸಿದ್ಧಲಿಂಗಸ್ವಾಮಿ-1988 ತೋಂಟದಾರ್ಯಮಠ ಗದಗ

 

ಡಾ. ವೀರಣ್ಣ ರಾಜೂರವರ ವಚನ ಸಾಹಿತ್ಯ ಸಂಪಾದನೆ

ವಚನ ಸಾಹಿತ್ಯ ಸಂಪಾದನೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸಿ ಇಂದಿಗೂ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ. ಡಾ. ಎಂ.ಎಂ. ಕಲಬುರ್ಗಿರವರ ಮಹಾಲಿಂಗದಲ್ಲಿ ಲೀನರಾದ ನಂತರ ಸಮಗ್ರ ವಚನ ಸಂಪುಟದ ಪ್ರದಾನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಾ ಇದ್ದಾರೆ.

  1. ಉರಿಲಿಂಗದೇವರ ವಚನಗಳು (ಎಸ್.ಎನ್. ಭೂಸರೆಡ್ಡಿ ಅವರೊಂದಿಗೆ) ಮಂಗಳ ಪ್ರಕಾಶನ ಧಾರವಾಡ 1978
  2. ವಚನಾಮೃತಸಾರ (ಕಾಶಿ ಪುಟ್ಟಸೋಮಾರಾಧ್ಯರೊಂದಿಗೆ) 1979 ಮಂಗಳ ಪ್ರಕಾಶನ, ಧಾರವಾಡ
  3. ಗಜೇಶ ಮಸಣಯ್ಯನ ವಚನಗಳು (ಕಾಶಿ ಪುಟ್ಟಸೋಮಾರಾಧ್ಯರೊಂದಿಗೆ) 1980 ಮಂಗಳ ಪ್ರಕಾಶನ ಧಾರವಾಡ
  4. ವಚನ ಶಾಸ್ತ್ರಸಾರ ಭಾಗ-1 (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) ವೀರಶೈವ ಅಧ್ಯಯನ ಸಂಸ್ಥೆ, ಗದಗ 1981
  5. ಸರ್ವಜ್ಞನ ವೀರಗಣಸ್ತೋತ್ರದ ವಚನಗಳು (ಎಚ್.ಎಸ್. ಭೂಸರೆಡ್ಡಿ ಅವರೊಂದಿಗೆ) 1981 ಮೂರುಸಾವಿರಮಠ, ಹುಬ್ಬಳ್ಳಿ
  6. ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು ವೀರಶೈವ ಅಧ್ಯಯನ ಸಂಸ್ಥೆ – 1983
  7. ಶೀಲಸಂಪಾದನೆ ವೀರಶೈವ ಅಧ್ಯಯನ ಸಂಸ್ಥೆ ಗದಗ 1984
  8. ಪ್ರಭುದೇವರ ಮಂತ್ರಗೋಪ್ಯ (ವ್ಯಾಖ್ಯಾನ ಸಹಿತ) 1984 ಸಿದ್ಧರಾಮೇಶ್ವರ ಪ್ರಕಾಶನ, ಯಲಬುರ್ಗಾ
  9. ಭಕ್ತ್ಯಾನಂದ ಸುಧಾರ್ಣವ ವೀರಶೈವ ಅಧ್ಯಯನ ಸಂಸ್ಥೆ 1985
  10. ಅರಿವಿನ ಮಾರಿತಂದೆಯ ನೂರೊಂದು ವಚನಗಳು 1986 ಮೂರುಸಾವಿರ ಮಠ, ಹುಬ್ಬಳ್ಳಿ
  11. ಸೂಕ್ಷ್ಮಮಿಶ್ರ ಷಟ್‍ಸ್ಥಲ 1987 ವೀರಶೈವ ಅಧ್ಯಯನ ಸಂಸ್ಥೆ, ಗದಗ
  12. ಎಲ್ಲಾ ಪುರಾತನರ ಸ್ತೋತ್ರದ ವಚನಗಳು 1988 ವೀರಶೈವ ಅಧ್ಯಯನ ಸಂಸ್ಥೆ ಗದಗ
  13. ಪ್ರಭುದೇವ ಷಟ್‍ಸ್ಥಲ ಜಂಗಮಸ್ಥಲ ನಿರ್ದೇಶ 1989 ವೀರಶೈವ ಅಧ್ಯಯನ ಸಂಸ್ಥೆ, ಗದಗ
  14. ವಚನಸಾರ, ವೀರಶೈವ ಅಧ್ಯಯನ ಸಂಸ್ಥೆ, ಗದಗ
  15. ಜ್ಞಾನಷಟ್‍ಸ್ಥಲಸಾರ 1991 ವೀರಶೈವ ಅಧ್ಯಯನ ಸಂಸ್ಥೆ, ಗದಗ
  16. ಶಿವಶರಣೆಯರ ವಚನ ಸಂಪುಟ ಕನ್ನಡ ಸಂಸ್ಕøತಿ ಇಲಾಖೆ 1993, 2001, 2015, 2021
  17. ಸಂಕೀರ್ಣ ವಚನ ಸಂಪುಟ-ಐದು 1993, 2001, 2015, 2021
  18. ಸಂಕೀರ್ಣ ವಚನ ಸಂಪುಟ-ಏಳು 1993, 2001, 2015, 2021
  19. ಸಂಕೀರ್ಣ ವಚನ ಸಂಪುಟ-ಎಂಟು 1993, 2001, 2015, 2021
  20. ಸಂಕೀರ್ಣ ವಚನ ಸಂಪುಟ-ಒಂಭತ್ತು 1993, 2001, 2015, 2021
  21. ಬಸವಣ್ಣ (ಆಯ್ದ ವಚನಗಳು) ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಪ್ರ.ಮು. 1996, ದ್ವಿ.ಮು. 2000
  22. ವಚನಶಾಸ್ತ್ರಸಾರ – ಸಂಪುಟ ಎರಡು (ಇತರರೊಂದಿಗೆ) 1997

ವೀರಶೈವ ಅಧ್ಯಯನ ಸಂಸ್ಥೆ, ಗದಗ

  1. ವಚನ ಶಾಸ್ತ್ರಸಾರ ಸಂಪುಟ-3 2004 ವೀರಶೈವ ಅಧ್ಯಯನ ಸಂಸ್ಥೆ, ಗದಗ
  2. ಷಟ್‍ಸ್ಥಲ ಜ್ಞಾನಸಾರಾಮೃತ ಟೀಕೆಗಳು 2005 ಕರ್ನಾಟಕ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಕ್ಷೇತ್ರ, ಎಡೆಯೂರು
  3. ಎಲ್ಲ ಪುರಾತನರ ವಚನಗಳು ಭಾಗ-1 2006 (ಮೂರುಸಾವಿರ ವಚನಗಳು) ಶ್ರೀ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ, ಮೈಸೂರು
  4. ಫ.ಗು. ಹಳಕಟ್ಟಿ ಸಮಗ್ರ ಸಾಹಿತ್ಯ (ಸಂಪುಟ-6) 2007 ವಚನಶಾಸ್ತ್ರಸಾರ ಭಾಗ 2 ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರ ಬಿ.ಎಲ್.ಡಿ.ಇ., ಸಂಸ್ಥೆ ವಿಜಾಪುರ
  5. ವಚನ ಸಂಕಲನ (ಸಂಪುಟ ಏಳು) 2009 ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ
  6. ಪರಮಾನಂದ ಸುಧೆ (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) 2010 ಲಿಂಗಾಯತ ಅಧ್ಯಯನ ಸಂಸ್ಥೆ ಗದಗ
  7. ಬಸವ ವಚನ ಸಾರಾಮೃತ 2011 ಲಿಂಗಾಯತ ಅಧ್ಯಯನ ಸಂಸ್ಥೆ
  8. ವಚನಸಾರ (ಸಂಪುಟ ಎರಡು) 2014 ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ
  9. ಏಕೋತ್ತರ ಶತಸ್ಥಲ (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) 2014
  10. ಶರಣಸತಿ – ಲಿಂಗಪತಿ 2015 ಮಂಗಳ ಪ್ರಕಾಶನ ಧಾರವಾಡ
  11. ಗಣಭಾಷಿತ ರತ್ನಮಾಲೆ (ಗುಬ್ಬಿ ಮಲ್ಲಣ್ಣ 2016 ಮುರುಘಾಮಠ, ಧಾರವಾಡ)
  12. ಬಸವಣ್ಣನವರ ಷಟ್ಸ್ ್ಥಲ ವಚನಗಳು (ಪ್ರೊ. ಎಸ್.ಎಸ್. ಬಸವನಾಳ) ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ 2016
  13. ಶೂನ್ಯಸಂಪಾದನೆ (ಡಾ. ಎಂ.ಎಂ. ಕಲಬುರ್ಗಿ ಅವರೊಂದಿಗೆ) 2016 ಲಿಂಗಾಯತ ಅಧ್ಯಯನ ಸಂಸ್ಥೆ, ಗದಗ
  14. ಶಿವಶರಣೆಯರ ವಚನಗಳು ಮುರುಘಾಮಠ, ಧಾರವಾಡ
  15. ತೋಂಟದ ಸಿದ್ಧಲಿಂಗೇಶ್ವರರ ಷಟ್ಸ್ ್ಥಲ ಜ್ಞಾನಸಾರಾಮೃತ 2017 ಮುರುಘಾಮಠ, ಧಾರವಾಡ
  16. ಸ್ವತಂತ್ರ ಸಿದ್ಧಲಿಂಗೇಶ್ವರ ಷಟ್ಸ್ ್ಥಲ ವಚನಗಳು 2017 ಮುರುಘಾಮಠ, ಧಾರವಾಡ
  17. ಷಣ್ಮುಖ ಶಿವಯೋಗಿಗಳ ಷಟ್ಸ್ ್ಥಲ ವಚನಗಳು2017 ಮುರುಘಾಮಠ, ಧಾರವಾಡ
  18. ದೇಶೀಕೇಂದ್ರ ಸಂಗನಬಸವಯ್ಯಗಳ ಷಟ್ಸ್ ್ಥಲ ವಚನಗಳು – 2017 ಮುರುಘಾಮಠ, ಧಾರವಾಡ

 

ಡಾ. ಬಿ.ವ್ಹಿ. ಶಿರೂರ

ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕರು. ಶ್ರೀಯುತರು ಕನ್ನಡ ವಿಭಾಗದಲ್ಲಿ ಸಂಶೋಧಕರಾಗಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಹಲವು ಕನ್ನಡ ಕಾವ್ಯ ಮತ್ತು ಕೃತಿಗಳನ್ನು ಸಂಪಾದನೆ ಮಾಡಿ ನಿವೃತ್ತ ಜೀವನವನ್ನು ಹುಬ್ಬಳ್ಳಿಯಲ್ಲಿ ನಡೆಸುತ್ತಿದ್ದಾರೆ.

  1. ಷಟ್‍ಸ್ಥಲ ಜ್ಞಾನಾಮೃತದ ಬೆಡಗಿನ ವಚನದ ಟೀಕೆ – ಸೋಮಶೇಖರ ಶಿವಯೋಗಿಕೃತ
  2. ನಿರಾಳಮಂತ್ರಗೋಪ್ಯ – ಜಕ್ಕಣ್ಣಯ್ಯ ಕೃತ
  3. ಶರಣಚಾರಿತ್ರದ ವಚನಗಳು – ಸಣ್ಣಬರಹದ ಗುರುಬಸವರಾದೇವರು ಸಂಕಲಿಸಿದ್ದು
  4. ಉರಿಲಿಂಗಿಪೆದ್ದಿಯ ನೂರೊಂದು ವಚನಗಳು
  5. ಶರಣ ಮುಖಮಂಡಲ
  6. ಸರ್ವಾಚಾರ ಸಾರಾಮೃತ ಸುಧೆ – ಮೂರುಸಾವಿರ ಮುಕ್ತಿಮುನಿ ವಿರಚಿತ
  7. ಎಲ್ಲ ಪುರಾತನರ ವಚನಗಳು – 2000 ವಚನಗಳ ಕಟ್ಟು ಜೆ.ಎಸ್.ಎಸ್ ಮೈಸೂರು ಪ್ರಕಟಣೆ.

 

ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿ ಪ್ರಕಟಣಾ ಯೋಜನೆ,

ಕನ್ನಡ ಮತ್ತು ಸಂಸ್ಕøತಿ ಇಲಾಖೆ – 1993

  1. ಬಸವಣ್ಣನವರ ವಚನ ಸಂಪುಟ – ಡಾ. ಎಂ.ಎಂ. ಕಲಬುರ್ಗಿ
  2. ಅಲ್ಲಮಪ್ರಭುದೇವರ ವಚನ ಸಂಪುಟ – ಡಾ. ಬಿ.ವ್ಹಿ. ಮಲ್ಲಾಪುರ
  3. ಚನ್ನಬಸವಣ್ಣನವರ ವಚನ ಸಂಪುಟ ಡಾ. ಬಿ.ವ್ಹಿ. ಮಲ್ಲಾಪುರ
  4. ಸಿದ್ಧರಾಮೇಶ್ವರ ವಚನ ಸಂಪುಟ ಡಾ. ಎಸ್. ವಿದ್ಯಾಶಂಕರ್
  5. ಶಿವಶರಣೆಯ ವಚನ ಸಂಪುಟ ಡಾ. ವೀರಣ್ಣ ರಾಜೂರ
  6. ಸಂಕೀರ್ಣ ವಚನ ಸಂಪುಟ-I ಡಾ. ಎಂ.ಎಂ. ಕಲಬುರ್ಗಿ
  7. ಸಂಕೀರ್ಣ ವಚನ ಸಂಪುಟ-II ಡಾ ಎಸ್. ವಿದ್ಯಾಶಂಕರ್
  8. ಸಂಕೀರ್ಣ ವಚನ ಸಂಪಟ-III ಡಾ. ಬಿ.ಆರ್. ಹಿರೇಮಠ
  9. ಸಂಕೀರ್ಣ ವಚನ ಸಂಪುಟ-Iಗಿ ಡಾ. ಬಿ.ಆರ್. ಹಿರೇಮಠ
  10. ಸಂಕೀರ್ಣ ವಚನ ಸಂಪುಟ-ಗಿ ಡಾ. ವೀರಣ್ಣ ರಾಜೂರ
  11. ಸಂಕೀರ್ಣ ವಚನ ಸಂಪುಟ-ಗಿI ಎಸ್. ಶಿವಣ್ಣ
  12. ಸಂಕೀರ್ಣ ವಚನ ಸಂಪುಟ-ಗಿII ಡಾ. ವೀರಣ್ಣ ರಾಜೂರ
  13. ಸಂಕೀರ್ಣ ವಚನ ಸಂಪುಟ-ಗಿIII ಡಾ. ವೀರಣ್ಣ ರಾಜೂರ
  14. ಸಂಕೀರ್ಣ ವಚನ ಸಂಪುಟ-Iಘಿ ಡಾ. ವೀರಣ್ಣ ರಾಜೂರ
  15. ವಚನ ಪರಿಭಾಷಾ ಕೋಶ : ಡಾ. ವಿದ್ಯಾಶಂಕರ

 

ಸಮಗ್ರ ವಚನ ಸಂಪುಟ 2021 ಕನ್ನಡ ಪುಸ್ತಕ ಪ್ರಾಧಿಕಾರ

  1. ಬಸವಣ್ಣನವರ ಸಂಪುಟವನ್ನು ಡಾ. ವೀರಣ್ಣ ರಾಜೂರ
  2. ಅಲ್ಲಮಪ್ರಭುದೇವರ ಸಂಪುಟ ಶ್ರೀ ಸಿದ್ಧರಾಮ ಶರಣರು, ಬೆಲ್ದಾಳ
  3. ಚನ್ನಬಸವಣ್ಣನವರ ಸಂಪುಟ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು, ಬೆಲ್ದಾಳ
  4. ಸಿದ್ಧರಾಮೇಶ್ವರ ವಚನ ಸಂಪುಟ ಪ್ರೊ|| ಮಲೆಯೂರು ಗುರುಸ್ವಾಮಿ
  5. ಶಿವಶರಣೆಯರ ಸಂಪುಟ ಐದು ಡಾ. ವೀರಣ್ಣ ರಾಜೂರ
  6. ಸಂಕೀರ್ಣ ವಚನ ಸಂಪುಟ ಆರು ಡಾ. ಕೆ. ರವೀಂದ್ರನಾಥ್
  7. ಸಂಕೀರ್ಣ ವಚನ ಸಂಪುಟ ಏಳು ಡಾ. ಕೆ. ರವೀಂದ್ರನಾಥ್
  8. ಸಂಕೀರ್ಣ ವಚನ ಸಂಪುಟ ಎಂಟು ಡಾ. ವೈ.ಸಿ. ಭಾನುಮತಿ
  9. ಸಂಕೀರ್ಣ ವಚನ ಸಂಪುಟ ಒಂಭತ್ತು ಡಾ. ವೈ.ಸಿ. ಭಾನುಮತಿ
  10. ಸಂಕೀರ್ಣ ವಚನ ಸಂಪುಟ ಹತ್ತು ಡಾ. ವೀರಣ್ಣ ರಾಜೂರ
  11. ಸಂಕೀರ್ಣ ವಚನ ಸಂಪುಟ ಹನ್ನೊಂದು ಡಾ. ವೈ.ಸಿ. ಭಾನುಮತಿ
  12. ಸಂಕೀರ್ಣ ವಚನ ಸಂಪುಟ ಹನ್ನೆರಡು ಡಾ. ವೀರಣ್ಣ ರಾಜೂರ
  13. ಸಂಕೀರ್ಣ ವಚನ ಸಂಪುಟ ಹದಿಮೂರು ಡಾ. ವೀರಣ್ಣ ರಾಜೂರ
  14. ಸಂಕೀರ್ಣ ವಚನ ಸಂಪುಟ ಹದಿನಾಲ್ಕು ಡಾ. ವೀರಣ್ಣ ರಾಜೂರ
  15. ಸಂಕೀರ್ಣ ವಚನ ಸಂಪುಟ ಹದಿನೈದು ಡಾ. ಬಸವಲಿಂಗ ಸೊಪ್ಪಿಮಠ

 

ಗದಗಿನ ತೋಂಟದಾರ್ಯ ಮಠದಿಂದ ಪ್ರಕಟವಾದ ವಚನ ಸಾಹಿತ್ಯ

ಏಕವ್ಯಕ್ತಿ ವಚನ ಸಂಕಲನಗಳು

ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆಯಲ್ಲಿ ವಿಶೇಷವಾದ ಸೇವೆ ಸಲ್ಲಿಸಿದ ಕೀರ್ತಿ ಗದಗಿನ ತೋಂಟದಾರ್ಯ ಮಠಕ್ಕೆ ಸಲ್ಲುತ್ತದೆ. ಈ ಪ್ರಕಟಣೆ ಹಿಂದೆ ಡಾ. ಎಂ.ಎಂ. ಕಲಬುರ್ಗಿ ಅವರು ಗದಗಿನ ಲಿಂಗೈಕ್ಯ ಜಗದ್ಗುರು ಡಾ. ಶ್ರೀ ಶ್ರೀ ಶ್ರೀ ತೋಂಟದ ಸಿದ್ಧಲಿಂಗಸ್ವಾಮಿಗಳ ಒತ್ತಾಸೆ ಇದ್ದುದರಿಂದ ಅಪ್ರಕಟಿತ ಕೃತಿಗಳ ರಾಶಿ ಪ್ರಕಟ ಮಾಡಲು ಸಾಧ್ಯವಾಯಿತು. ಪ್ರಸ್ತುತ ಗದಗಿನ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಡಾ. ತೋಂಟದ ಸಿದ್ಧರಾಮಸ್ವಾಮಿಗಳು ಅಪ್ರಕಟಿತ ವಚನ ಸಾಹಿತ್ಯ ಪ್ರಕಟಣೆಗೆ ಪ್ರೋತ್ಸಾಹ ನೀಡುತ್ತಾ ಇದ್ದಾರೆ.

  1. ಷಟ್‍ಸ್ಥಲ ಜ್ಞಾನಸಾರಾಮೃತ – ಆರ್.ಸಿ. ಹಿರೇಮಠ
  2. ಬಸವ ಬೋಧಾಮೃತ – ಹರ್ಡೇಕರ ಮಂಜಪ್ಪ
  3. ಷಟ್‍ಸ್ಥಲ ಜ್ಞಾನಸಾರಾಮೃತದ ಬೆಡಗಿನ ವಚನದ ಟೀಕೆ – ಬಿ.ವಿ. ಶಿರೂರ
  4. ಜಕ್ಕಣ್ಣಯ್ಯನ ನಿರಾಳ ಮಂತ್ರಗೋಪ್ಯ ಬಿ.ವಿ. ಶಿರೂರ
  5. ಸರ್ವಾಚಾರ ಸಾರಾಮೃತ ಸುಧೆ – ಬಿ.ವಿ. ಶಿರೂರ
  6. ಪ್ರಭುದೇವರ ಷಟ್‍ಸ್ಥಲ ಜಂಗಮಸ್ಥಳ ನಿರ್ದೇಶ – ವೀರಣ್ಣ ರಾಜೂರ
  7. ಚನ್ನಬಸವಣ್ಣನವರ ಷಟ್ಸ್ ್ಥಲ ಮಹಾಸಂಪುಟ ಎಂ.ಎಂ. ಕಲಬುರ್ಗಿ
  8. ಕುಷ್ಟಗಿ ಕರಿಬಸವೇಶ್ವರನ ವಚನಗಳು – ಎಸ್. ಶಿವಣ್ಣ
  9. ಮಡಿವಾಳ ಮಾಚಿದೇವರ ವಚನಗಳು – ಚನ್ನಕ್ಕ ಪಾವಟೆ

 

ಅನೇಕ ವ್ಯಕ್ತಿ ವಚನಗಳಿಂದ ಕೂಡಿದ ಸ್ಥಳಕಟ್ಟಿನ ಕೃತಿಗಳು

  1. ವಚನಶಾಸ್ತ್ರಸಾರ – ಫ.ಗು. ಹಳಕಟ್ಟಿ ಭಾಗ-1-2-3
  2. ಅದ್ವೈತಾನಂದದ ವಚನಗಳು ಬಿ.ಆರ್. ಹಿರೇಮಠ
  3. ಎಳಮಲೆಯ ಗುರುಶಾಂತದೇವರ ವಚನ ಸಂಕಲನಗಳು ವೀರಣ್ಣ ರಾಜೂರ
  4. ಚನ್ನಬಸವಣ್ಣನವರ ವಚನೈಕೋತ್ತರ ಶತಸ್ಥಲ – ಜಿ.ಎ. ಶಿವಲಿಂಗಯ್ಯ
  5. ಶೀಲಸಂಪಾದನೆ – ವೀರಣ್ಣ ರಾಜೂರ
  6. ಶರಣ ಚಾರಿತ್ರದ ವಚನಗಳು – ಬಿ.ವಿ. ಶಿರೂರ
  7. ಷಟ್‍ಸ್ಥಲ ಬ್ರಹ್ಮಾನಂದ ವಿರಕ್ತ ಚಾರಿತ್ರ ಸಂಪಾದನೆಯ ವಚನಗಳು ಎಸ್. ಉಮಾಪತಿ
  8. ಭಕ್ತ್ಯಾನಂದ ಸುಧಾರ್ಣವ – ವೀರಣ್ಣ ರಾಜೂರ
  9. ಷಟ್ಪ್ರಕಾರ ಸಂಗ್ರಹ – ಜಿ.ಎ. ಶಿವಲಿಂಗಯ್ಯ
  10. ಸೂಕ್ಷ್ಮಮಿಶ್ರ ಷಟ್‍ಸ್ಥಲ – ವೀರಣ್ಣ ರಾಜೂರ
  11. ಸುಖ ಸಂಪಾದನೆಯ ವಚನಗಳು – ಬಿ.ಆರ್. ಹಿರೇಮಠ
  12. ಶಿವಯೋಗ ಚಿಂತಾಮಣಿ – ಉಮಾದೇವಿ
  13. ಶರಣ ಮುಖಮಂಟನ – ಬಿ.ವಿ. ಶಿರೂರ, ಬಿ.ಆರ್. ಹೂಗಾರ
  14. ಎಲ್ಲ ಪುರಾತನರ ಸ್ತೋತ್ರದ ವಚನಗಳು – ವೀರಣ್ಣ ರಾಜೂರ
  15. ಸಂಪಾದನೆಯ ಸಾರಾಮೃತ – ಬಿ.ಆರ್. ಹಿರೇಮಠ
  16. ಅನುಭವಜ್ಞಾನ ಸಾರಾಮೃತ ಸಂಪಾದನೆಯ ಸ್ತೋತ್ರ ಬಿ.ಆರ್. ಹೂಗಾರ, ವೀರಣ್ಣ ರಾಜೂರ
  17. ವಚನಸಾರ – ವೀರಣ್ಣ ರಾಜೂರ
  18. ವಚನ ಸಂಕಲನ ಸಂಪುಟ-1 ಬಿ.ಆರ್. ಹಿರೇಮಠ
  19. ವಚನ ಸಂಕಲನ ಸಂಪುಟ-2 ಜಿ.ಎ. ಶಿವಲಿಂಗಯ್ಯ
  20. ವಚನ ಸಂಕಲನ ಸಂಪುಟ-3 ಎಸ್. ಶಿವಣ್ಣ
  21. ವಚನ ಸಂಕಲನ ಸಂಪುಟ-4 ಡಾ. ಎಂ.ಎಂ. ಕಲಬುರ್ಗಿ, ಬಿ.ಆರ್. ಹಿರೇಮಠ, ಎಸ್. ಶಿವಣ್ಣ
  22. ವಚನ ಸಂಕಲನ ಸಂಪುಟ-5 ವೈ.ಸಿ. ಭಾನುಮತಿ
  23. ವಚನ ಸಂಕಲನ ಸಂಪುಟ-6 ಎಂ.ಎಂ. ಕಲಬುರ್ಗಿ
  24. ವಚನ ಸಂಕಲನ ಸಂಪುಟ-7 – ವೀರಣ್ಣ ರಾಜೂರ
  25. ಚೆನ್ನಬಸವೇಶ್ವರದೇವರ ಸ್ತೋತ್ರದ ವಚನಗಳು – ಜಿ.ಎ. ಶಿವಲಿಂಗಯ್ಯ
  26. ಜ್ಞಾನ ಷಟ್ಸ್ ್ಥಲಸಾರ – ವೀರಣ್ಣ ರಾಜೂರ
  27. ವೀರಶೈವ ಕಾವ್ಯೋಕ್ತ ವಚನ ಸಂಪುಟ ಬಿ.ಆರ್. ಹೂಗಾರ
  28. ಮೋಕ್ಷದರ್ಶನ ಸಂಗ್ರಹ – ಜಿ.ಎ. ಶಿವಲಿಂಗಯ್ಯ
  29. ಪರಮಾನಂದ ಸುಧೆ – ಎಂ.ಎಂ. ಕಲಬುರ್ಗಿ, ವೀರಣ್ಣ ರಾಜೂರ
  30. ಬಸವ ವಚನ ಸಾರಾಮೃತ – ವೀರಣ್ಣ ರಾಜೂರ
  31. ಲಿಂಗಲೀಲಾ ವಿಲಾಸ ಚಾರಿತ್ರ್ಯ ಸಂಗ್ರಹ – ಜಯಾ ರಾಜಶೇಖರ
  32. ಶೂನ್ಯಸಂಪಾದನೆ : ಡಾ. ಎಂ.ಎಂ. ಕಲಬುರ್ಗಿ ಮತ್ತು ವೀರಣ್ಣ ರಾಜೂರ
  33. ಬೆಡಗಿನ ವಚನ ಸಾಹಿತ್ಯ – ವೀರಣ್ಣ ರಾಜೂರ

ವಚನ ಸಾಹಿತ್ಯ ಸಂಪಾದನೆಯಲ್ಲಿ ದುಡಿದ ಎಲ್ಲಾ ಮಹನೀಯರ ಬಗ್ಗೆ ಮಾಹಿತಿ ಸಂಗ್ರಹ ಮಾಡಬೇಕು. ಆ ನಿಟ್ಟಿನಲ್ಲಿ ನಿವೃತ್ತರಾದ ನಂತರ ಬೆಂಗಳೂರಿನಲ್ಲಿ ನೆಲೆಸಿದ ಹೆಚ್. ದೇವೀರಪ್ಪನವರು, ಪ್ರೊ. ಆರ್. ರಾಚಪ್ಪನವರು, ಇಬ್ಬರು ಜಂಟಿಯಾಗಿ ಜೇಡರ ದಾಸಿಮಯ್ಯನ ವಚನಗಳನ್ನು ಸಂಪಾದಿಸಿ ಪ್ರಕಟಿಸಿದರು. ಮೈಸೂರಿನ ಡಾ. ಇಮ್ಮಡಿ ಶಿವಬಸವಸ್ವಾಮಿಗಳು ಪ್ರಭುದೇವರ ಷಟ್‍ಸ್ಥಲ ವಚನಗಳನ್ನು ಮಹಾಲಿಂಗದೇವರ ವ್ಯಾಖ್ಯಾನದೊಂದಿಗೆ ಸಂಪಾದಿಸಿ ಪ್ರಕಟಿಸಿದರು. ಡಾ. ಟಿ.ಜಿ. ಸಿದ್ಧಪ್ಪಾರಾಧ್ಯರು ಮೂಲ ವಚನಗಳನ್ನು ಸಂಪಾದಿಸಿದವರ ಬಗ್ಗೆ ಮಾಹಿತಿ ಇಲ್ಲ ಆದರೆ ಸಂಸ್ಕøತ ಮತ್ತು ಇಂಗ್ಲಿಷ್ ಭಾಷೆಗೆ ಬಸವಣ್ಣ, ಅಲ್ಲಮ ಪ್ರಭುದೇವ, ಚೆನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದವರ ವಚನಗಳನ್ನು ಭಾಷಾಂತರಿಸಿದರು. ಅಲ್ಲಮ ಪ್ರಭುದೇವರ ವಚನಗಳು ಸುಮಾರು 1430 ರಲ್ಲಿ ಮೊಗ್ಗೆಮಾಯಿದೇವರು ಸಂಸ್ಕøತಕ್ಕೆ ಭಾಷಾಂತರಿಸಿದ ಹಸ್ತಪ್ರತಿ ಪ್ರೊ. ಸಿ. ಮಹಾದೇವಪ್ಪನವರ ಹತ್ತಿರ ಇದ್ದು ಅವರು ಅದನ್ನು ಸಮರ್ಥವಾಗಿ ಸಂಪಾದಿಸಿ ಮೂಲ ವಚನಗಳನ್ನು ದೇವನಾಗರಿ ಲಿಪಿಯಲ್ಲಿ ಅನುವಾದವನ್ನು ಇಂಗ್ಲಿಷಿನಲ್ಲಿ ಕೊಟ್ಟಿರುವುದರಿಂದ ವಿಶ್ವದ ಜನತೆ ಅಲ್ಲಮ ಪ್ರಭುವಿನ ವಚನಗಳನ್ನು ಅಧ್ಯಯನ ಮಾಡುವ ಅವಕಾಶ. ಕನ್ನಡ ಭಾಷೆಯಲ್ಲಿ ಅಲ್ಲಮನ ಮೂಲ ವಚನ ಅದರ ಸಂಸ್ಕøತಾನುವಾದವನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಡಾ. ಜ.ಚ.ನಿ ಸನ್ನಿಧಿಯವರು, ಡಾ. ಹುಣಸಿನಾಳರು, ಡಾ. ಸಾ.ಶಿ. ಮರುಳಪ್ಪನವರು, ಪ್ರೊ. ಚ. ಸುಂದರೇಶನ್ ಅ.ನ.ಕೃರವರು ಇನ್ನು ಅನೇಕ ವಿರಕ್ತ ಮೂರ್ತಿಗಳು, ಪಟ್ಟದಸ್ವಾಮಿಗಳು, ಕಾವ್ಯಾಸಕ್ತರು, ಶಾಲಾಧ್ಯಾಪಕರು, ಪ್ರಾಧ್ಯಾಪಕರುಗಳು ತಮ್ಮ ಪಾಲಿನ ಸೇವೆಯನ್ನು ಸಲ್ಲಿಸಿದ್ದಾರೆ. ಈ ಎಲ್ಲಾ ಮಹನೀಯರು ಸಲ್ಲಿಸಿದ ಸೇವೆ ಬಗ್ಗೆ ವಿವರವಾದ ಅಧ್ಯಯನವನ್ನು ಯುವ ವಿದ್ವಾಂಸರು ಮಾಡಬೇಕು. ಅಖಿಲ ಭಾರತ ಮಟ್ಟದಲ್ಲಿ ವಚನ ಸಾಹಿತ್ಯ ಪ್ರಕಟಣೆ ನಡೆದಿದೆ ಆ ಎಲ್ಲಾ ವಿವರವನ್ನು ಸಂಗ್ರಹಿಸಬೇಕು.

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

  

ಶಿಖೆಯೊಳು* ತ್ರಿದಳ | ವ್ಯಾಪಕನಾದ ಬಸವನಾ

ಮಕದ ನಿಶ್ಶೂನ್ಯ – ಸುಕಳಾಲಿಂಗವ ತೋ |

ರ್ದಕಳಂಕ ಗುರುವೆ ಕೃಪೆಯಾಗು    ||೧೪೬||

 

ಬ್ರಹ್ಮರಂಧ್ರದ ಮುಂದೆ ಶಿಖಾಚಕ್ರವು ಗೋಚರವಾಗುತ್ತದೆ. ಇದು ಎಂಟನೆಯದು. ಶಿಖಾಚಕ್ರವು ಪಶ್ಚಿಮ ಶಿಖೆಯ ಮೇಲ್ಬಾಗದಲ್ಲಿರುವದು. ಇದುವೆ ಎಲ್ಲ ಚಕ್ರಗಳಿಗಿಂತ ಉನ್ನತಸ್ಥಾನವನ್ನು ಆಕ್ರಮಿಸಿದೆ. ಇದು ಮಸ್ತಕದ ಸ್ವಲ್ಪು ಹಿಂಬದಿಗೆ ಇರುವದು. ಈ ಶಿಖಾಚಕ್ರದ ದ್ಯೋತಕವೆಂಬಂತೆ ವೈದಿಕ ಸಂಪ್ರದಾಯದಲ್ಲಿ ಶಿಖೆ ಅಥವಾ ಚಂಡಿಕೆಯನ್ನು ಬಿಡುತ್ತಾರೆ. ಈ ಚಕ್ರವು ಮೂರು ದಳಗಳಿಂದ ವಿರಾಜಮಾನವಾಗಿದೆ. ತ್ರಿದಳಗಳಿಂದ ಕೂಡಿದ ಬಿಲ್ವದಲವು ಶಿವನಿಗೆ ಪ್ರಿಯವಾಗಿರುವಂತೆ ಈ ತ್ರಿದಳ ವ್ಯಾಪಕವೆನಿಸಿದ ಶಿಖಾಚಕ್ರವು ನಿಃಶೂನ್ಯ ಸುಕಳಾಲಿಂಗಕ್ಕೆ ಸಂಪ್ರೀತವಾಗಿದೆ. ಈ ತ್ರಿದಳಚಕ್ರದಲ್ಲಿ ಬಸವ” ಎಂಬ ಮಂತ್ರಾಕ್ಷರಗಳು ಶೋಭಿಸುತ್ತವೆ. ಇವು ನಿರಂಜನ ಪ್ರಣವಗಳು.

 

‘ಬಸವ’ ಇದು ವ್ಯಕ್ತಿಯ ಹೆಸರಲ್ಲ. ಈ ‘ಬಸವಾ’ಕ್ಷರಗಳು ಮಹಾಮಂತ್ರವಾಗಿದೆ. ಅದುಕಾರಣ ಇವುಗಳ ಅರ್ಥ ಅನಂತವಾಗಿದೆ. ಶಿಖಾಚಕ್ರ ಹಾಗೂ ನಿಶ್ಶೂನ್ಯ ಬ್ರಹ್ಮ ಮತ್ತು ‘ಬಸವ’ ತತ್ತ್ವದ ಮಹತ್ವವನ್ನು ೮೪ನೇಯ ತ್ರಿಪದಿಯ ವ್ಯಾಖ್ಯಾನದಲ್ಲಿ ಅವಲೋಕಿಸಬಹುದು.

ಶಿಖಾಚಕ್ರದಲ್ಲಿ ತ್ರಿದಳಗಳಲ್ಲಿ ಪರಿಶೋಭಿಸುವ ಬಸವಾಕ್ಷರ ಮಹತ್ವವನ್ನು ಶರಣರೂ, ಕವಿಗಳೂ, ಬಹುವಾಗಿ ಬಣ್ಣಿಸಿದ್ದಾರೆ. ಮಾಯಾ ಕೋಲಾಹಲಿಗಳೂ, ಶೂನ್ಯ ಸಿಂಹಾಸನಾಧಿಪತಿಗಳೂ ನಿರಂಜನ ಜಗದ್ಗುರು ಪ್ರಭುದೇವರು –

 

ಬಸವಗುರುವು ಎನ್ನ ಕರಸ್ಥಲದ ಲಿಂಗದ

ಆದಿಯನರುಹಿ ತೋರಿದ ಕಾರಣ ಗುಹೇಶ್ವರ ಲಿಂಗದ

ನಿಲವ ನಿನ್ನಿಂದಲರಿದೆನು

ಬ ಎಂಬಲ್ಲಿ ಭವ ಹರಿಯಿತು

ಸ ಎಂಬಲ್ಲಿ ಸರ್ವಜ್ಞಾನಿಯಾದೆನು

ವ ಎಂದು ವಚಿಸುವ ಚೈತನ್ಯಾತ್ಮಕನಾದನು.

ಇಂತೀ ಬಸವಾಕ್ಷರತ್ರಯವು ಎನ್ನ ಸರ್ವಾಂಗದಲ್ಲಿ

ತೊಳಗಿಬೆಳಗುವ ಭೇದವನರಿದು ಆನು

ಬಸವ ಬಸವ ಎನುತಿರ್ದೆನು.

 

ಶಿವಯೋಗಿ ಸಿದ್ಧರಾಮೇಶ್ವರರು ರಚಿಸಿದ ಬಸವಸ್ತೋತ್ರ ತ್ರಿವಿಧಿಯಲ್ಲಿ –

 

ಬಸವ ಬಸವಾ ಬಸವ ಬಸವೇಶ ಬಸವರಸ ಬಸವಯ್ಯ

ನಿಮ್ಮಡಿಗೆ ಶರಣು ಶರಣು

ಬಸವ ಬಸವಾಲಿಂಗ ಬಸವಪ್ಪ ಬಸವೇಶ ಬಸವಯ್ಯ

ಶರಣೆಂಬೆ ಯೋಗಿನಾಥ |

ಬಸವ ಭಕ್ತಿಯ ಬೀಜ, ಬಸವ ಯುಕ್ತಿಯ ಬೀಜ

ಬಸವಪ್ಪ ನಿಮ್ಮಡಿಗೆ ಶರಣು ಶರಣು

 

ಮೋಳಿಗೆಯ ಮಾರಯ್ಯನವರು

ಬ ಎಂಬಲ್ಲಿ ಬಳಿಸಂದೆನು

ಸ ಎಂಬಲ್ಲಿ ಸಯವಾದೆನು

ವ ಎಂಬಲ್ಲಿ ನಿರವಯನಾದೆನು

ನಿಃಕಳಂಕ ಮಲ್ಲಿಕಾರ್ಜುನ ಬಸವಣ್ಣನ ನಿಜಪದದಲ್ಲಿ

ಸಂದಿಲ್ಲದೆ ಬೆರಸಿ ನಮೋ ನಮೋ ಎಂಬ ಹಂಗಳಿದುಳಿದೆನು

 

ಗಣದಾಸಿ ವೀರಣ್ಣನವರು

“ಬ ಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ

ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ವನಿರ್ಣಯಂ||ʼʼ

ಮತ್ತು – ಎನ್ನ ಪಶ್ಚಿಮದಲ್ಲಿ ನಿರಂಜನ ಪ್ರಣಮವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಶಿಖೆಯಲ್ಲಿ ಬಸವಾಕ್ಷರ ತ್ರಯವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಬ್ರಹ್ಮರಂಧ್ರದಲ್ಲಿ ಅ-ಉ-ಮ ಅಕ್ಷರತ್ರಯವಾಗಿ

ಪ್ರಸಾದ ಪಂಚಾಕ್ಷರಿಯಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಆಜ್ಞೆಯಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ

 

ಎಂದು ಮುಂತಾಗಿ ಸುದೀರ್ಘವಚನವನ್ನೇ ರಚಿಸಿದ್ದಾರೆ. ಶ್ರೀ ಶೀಲವಂತಯ್ಯನವರು ತಮ್ಮ ತ್ರಿವಿಧಿಯ ಆತ್ಮಲಿಂಗ ಪ್ರಣವ ಸಂಯೋಗಸ್ಥಲದಲ್ಲಿ ಬಸವಾಕ್ಷರ ಮಹತ್ವವನ್ನು ಕೆಳಗಿನಂತೆ ವಿವರಿಸಿದ್ದಾರೆ.

 

“ವೃತ್ತ ಗೋಳಕ ಮುಖ್ಯ ನಿತ್ಯ ಬಸವಾಕ್ಷರವು |

ಮತ್ತೆ ಗುರು-ಲಿಂಗ-ಚರ ತ್ರಿವಿಧ ಬಸವನ ಹಸ್ತದಲಿ

ಕಂಡು ಸುಖಿಯಾದೆ

ಆವಾತನ ಮುಖದಲ್ಲಿ ತೀವಿ ಬಸವಾಕ್ಷರವು ಸಾವಧಾನದೊಳು

ವಚಿಸುತ್ತಿರಲದುವೆ ಗುರುದೇವನಿಹತಾಣವಿದನರಿ

ಬಸವನ ನೆನೆ ಮನವೆ ಬಸವಾ ಎನು ನಾಲಿಗೆಯೆ

ಬಸವನ ಪಾದ ಪೂಜೆ ಮಾಡೈಕರವೆ ಬಸವ, ಗುರುಲಿಂಗ ಚರವೆಂದು

ನಿತ್ಯ ನಿಷ್ಕಲದಿಂದ ಚಿತ್ತು ಬಸವಾಕ್ಷರವು

ಮತ್ತೆ ಚಿತ್ ಪ್ರಣವ ಪರಶಕ್ತಿ  ತ್ರೈಮಾತ್ರೆ ವ್ಯಕ್ತದಿಂ ಪ್ರಣವ ಗುರುಲಿಂಗ

 

ಹರಿಹರ ದೇವನ ರಗಳೆ ಕಾವ್ಯಗಳಲ್ಲಿ

 

ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆಕೇಳ್

ಬಸವನ ರೀತಿ ರೀತಿ ಬಸವಣ್ಣನ ಕಿಂಕರವೃತ್ತಿ ವೃತ್ತಿ ಮೇಣ್

ಬಸವನ ಬಟ್ಟೆ ಬಟ್ಟೆ ಬಸವಣ್ಣನ ಬಿಂಕದ ಭಾಷೆ ಭಾಷೆ ಹೋ

ಬಸವನ ನಿಷ್ಠೆ ನಿಷ್ಠೆ ಬಸವಣ್ಣನ ನೇಮವೇ ನೇಮವುರ್ವಿಯೊಳ್ || ೧ ||

 

ಶ್ರೀ ಪಾಲ್ಕುರಿಕೆಯ ಸೋಮನಾಥರು

 

ಬಾಗುರು ಬಹುಳ ಬ್ರಹ್ಮ | ಸಾಗುರು ಸಾಕಾರ ತತ್ವ ಸಂಘದ ಫಲವೈ

ವಾಗುರು ವಚನ ಮಹತ್ವ | ಕ್ಕಾಗರ ಬಸವಾಕ್ಷರತ್ರಯಂ ಬಸವೇಶಾ

ಬಾ ಎನೆ ಬಂಧನವಳಿವುದು | ಸಾಯೆನೆ ಸಕಲಸಾಯುಜ್ಯ ಸಂಪದಮಕ್ಕುಂ |

ವಾ ಎನೆ ನಿರವಯ ಪದಮಂ | ಮಾಯೆಯ ರಹಿತಂ ಬಸವನೆ ನಿಮ್ಮಯ ನಾಮಂ

ಪ್ರಣವದ ಬಳ್ಳಿ ಬ ಕಾರಂ | ಪ್ರಣವದ ನಾದಾನುಸಾರ ಸಾರ ಸಕಾರಂ |

ಪ್ರಣವದ ಬಿಂದು ವಕಾರಂ | ಪ್ರಣವಂ ಬಸವಾಕ್ಷರ ತ್ರಯಂ ಬಸವೇಶಾ

ಮರೆದೊಮ್ಮೆ ಬಸವ ಎಂದೊಡೆ | ಮರುಜನ್ಮಗಳಲ್ಲಿ ದುರಿತ ವಿಘ್ನಗಳಿಲ್ಲೈ

ಕರಿಗೊರಲನೊಲಿದು ಸಲಹುವ | ಬರಿಜಿಹ್ವೆಯೊಳಿರದೆ ಬಸವನಾಮವ ಜಪಿಸಿ

 

ಸಪ್ತಕಾವ್ಯದ ಗುರುಬಸವದೇವರ ‘ವೃಷಭ ಗೀತೆ’ ಯಲ್ಲಿ –

 

ಬಸವನೆಂದು ಕಂಡು ಪಿರಿಯ |

ಬಸವನೆಂದು ಲೋಕಬಂಧು |

ಬಸವನೆಂದು ಷಟ್‌ಸ್ಥಲ ಸಮಗ್ರ ಸಾರದ |

ಬಸವನೆಂದು ಮತ್ಸಮಸ್ತ |

ಬಸವನೆಂದು ಧರ್ಮರೂಪ

ಬಸವನೆಂದು ಭಜಿಸಿ ಭಜಿಸಿ ಬಾಳ್ವನವ ಕೃತಾರ್ಥನೂ ||

 

ಪ್ರೌಢದೇವರಾಯನ ಮಹಾಕಾವ್ಯವನ್ನು ರಚಿಸಿದ ಅದೃಶ್ಯಕವಿಯು-

 

ಬಸವನೆಂದರೆ ಪಾಪ ದೆಶೆಗಟ್ಟು ಹೋಗುವದು.

ಬಸವನೆಂದೆಂಬ ಮೂರಕ್ಕರದ ಘನತೆಯನು |

ಉಸುರಲೆನ್ನಳವಲ್ಲ ಫಣಿರಾಜಗರಿದರಿದು ಬಸವ ಭವ ಭಯನಾಶವೂ |

 

ಷಡಕ್ಷರದೇವರು “ಬಸವರಾಜ ವಿಜಯ’ದಲ್ಲಿ –

 

ಬಸವನ ನಾಮಂ ಸ್ಮರಿಸುತುಂ ಬಸವೇಶನ ಕಿರ್ತನಂಗಳಂ |

ಪಸರಿಸಿ ಪಾಡುತುಂ ಬಸವನುಜ್ವಲ ಮೂರ್ತಿಯನೊಲ್ದು ಜಾನಿಸು,

ತ್ತೆಸೆವ ನರಂಗೆ ಜನ್ಮತತಿಯುಂಟೆ ಜಡಸ್ಥಿತಿಯುಂಟೆ ಪಾತಕ |

ಪ್ರಸರಮದುಂಟೆ ಮೃತ್ಯುಭಯಮುಂಟೆ ಮದಾಂಧತೆಯುಂಟೆ

ಧಾತ್ರಿಯೋಳ್ ||

 

ಎಂದುಮುಂತಾಗಿ ವರ್ಣಿಸಿದ ಮಹಾನುಭಾವರ ನುಡಿಗಳಿಂದ ಬಸವಾಕ್ಷರ ಮಂತ್ರದ ಮಹತ್ವ ಮನನವಾಗದೇ ಇರದು.

 

ನಿಶ್ಶೂನ್ಯಲಿಂಗ : ‘ಶಿಖಾಚಕ್ರವೇ ನೆಲೆ, ಮಂತ್ರ ನಿಷ್ಪತ್ತಿಯೆ ಕಲೆ; ಉನ್ಮನಿಯ ಮುಖ, ನಿಶ್ಶೂನ್ಯಾಕಾರ, ಅಗಮ್ಯರೂಪು, ತ್ರಿದಳಯುಕ್ತ ನಿಃಕಲ ಪದ್ಮವೇ ಪೀಠ, ಇದು ಸುಜ್ಞಾನಕ್ಕೆ ಸುಜ್ಞಾನವಾಗಿದೆ”. ಎಂದು ನವಲಿಂಗ ಸಾಹಿತ್ಯದಲ್ಲಿ ನಿಶ್ಶೂನ್ಯಲಿಂಗದ

ವರ್ಣನೆಯನ್ನು ಮಾಡಿದ್ದಾರೆ.

 

ಓ ಕಳಂಕರಹಿತನಾದ ಪರಮಗುರುವೆ ! ಶಿಖಾಚಕ್ರದ ಮಹಾಜ್ಯೋತಿ ಪ್ರಕಾಶದಿಂದ ಕೂಡಿದ ನಿಶ್ಶೂನ್ಯ ಸತ್ಕಳಾ ಲಿಂಗವನ್ನು ತೋರಿಸಿ ಉದ್ಧರಿಸಿರುವೆ. ಆ ಲಿಂಗವನ್ನು ಪೂಜಿಸಿ ಧನ್ಯನಾಗುವ ಶಕ್ತಿಯನ್ನೀಡಿ ಕಾಪಾಡು

 

ಮಂಜುಳಮಾದೇಕ ದಳ | ಕಂಜದೊಳೋಂ ಹ ಪ್ರಣವ

ವ್ಯಂಜನವಿಲ್ಲದ ನಿರಂಜನ ಲಿಂಗವನು

ರಂಜಿಸುವ ಗುರುವೆ ಕೃಪೆಯಾಗು   ||೧೪೭||

 

ಮಸ್ತಕದ ಹಿಂಭಾಗದಲ್ಲಿಪ್ಪುದೇ ಏಕದಳಪದ್ಮ. ಅದಕ್ಕೆ ಪಶ್ಚಿಮ ಚಕ್ರವೆಂದು ಹೆಸರು. ಪಶ್ಚಿಮಾಗ್ರವೆಂತಲೂ ಇನ್ನೊಂದು ನಾಮ. ಸಣ್ಣಮೆದುಳೇ ಪಶ್ಚಿಮ ಚಕ್ರವು . ಸ್ಪಟಿಕದಂತೆ ಶುಭ್ರವೂ ಮನೋಹರವೂ ಆಗಿದೆ. ಈ ಚಕ್ರದಲ್ಲಿ ಮಹಾ ಪ್ರಣವ ವೆನಿಸಿದ ‘ಹ್’ ಕಾರ ಮಂತ್ರ ಮೂರ್ತಿಯಾದ ನಿರಂಜನಲಿಂಗವು ಪರಿಶೋಭಿಸು ವದೆಂದು ಬೋಧಿಸಿದ ಗುರುಕೃಪೆ ಅಪಾರವಾದುದು. ಈ ನಿರಂಜನ ಲಿಂಗವು ವಾಙ್ಮನಕ್ಕೆ ಅಗೋಚರವಾದುದು. ಇಂಥ ಅವಾಚ್ಯವಾದ ನಿರಂಜನ ಬ್ರಹ್ಮವನ್ನೇ ಸದ್ಗುರುವು ತನ್ನ ಶುದ್ಧಭಾವದಲ್ಲಿ ಭಾವಿಸಿ ಸಂಸ್ಕರಿಸಿ ಭಾವಲಿಂಗವನ್ನಾಗಿಸುವನು. ಈ ಭಾವಲಿಂಗವೇ ಇಷ್ಟಲಿಂಗದಲ್ಲಿ ನಿರಂಜನಲಿಂಗವಾಗಿ ತೋರುವದು.

ನಿರಂಜನಲಿಂಗ : ಪಶ್ಚಿಮಚಕ್ರವೆ ನೆಲೆ; ಶಿವಾದ್ವೈತವೆ ಕಳೆ, ನಿರಂಜನಾಕಾರ, ಅವಿರಳರೂಪು, ಏಕದಳ, ನಿರಾಳಪದ್ಮವಾಸ, ಜ್ಞಾನಶ್ಶೂನ್ಯ” ಎಂದು ನವಲಿಂಗ ಸಾಹಿತ್ಯಕಾರರು ನಿರಂಜನಲಿಂಗದ ನಿರೂಪಣೆ ಮಾಡಿದ್ದಾರೆ.

 

ಈ ಪಶ್ಚಿಮಚಕ್ರದ ವಿವರವನ್ನು ೮೩ನೆಯ ತ್ರಿಪದಿಯಲ್ಲಿ ನೋಡಬಹುದು. ನಿರಂಜನಲಿಂಗವೇ ಪರಾತ್ಪರ ವಸ್ತುವೆನಿಸಿದೆ. ಇಂಥ ನಿರಂಜನಲಿಂಗವನ್ನು ತೋರಿಸಿ ಪರಿರಂಜಿಸುವ ಗುರುವಿನ ಇರುವೆ ವರ್ಣನಾತೀತವಾದುದು.

ಜ.ಚ.ನಿ

  

ಗಿಡ ಮಾಗಡಿ ಎಂಬ ಪುರದ ಜಂಗಮದೇವ

ಮೃಡಕಣಾ ಭಿಕ್ಷವ ಬೇಡ್ಯಾನು !

ಪೊಡವಿಗೆ ಬಾಗಿ ನೀಡಲು ದೃಢದಿಂದ

ನೀಡಿಸಿಕೊಂಡಾನು |

ಮಲಾಪೂರ ತೀರದಿ ವಿರಕ್ತ ಜಂಗಮನೊಬ್ಬ

ನಲವಿಂದ ಹುಚ್ಚನೆನಿಸ್ಯಾನು !

ಲೋಲ ಜನಗಳು ಹೆಸರನೇ ಇಟ್ಟಾರು ಆ

ಸ್ಥಳದಲ್ಲಿಯೆ ಹೂಳಿಸಿಕೊಂಡಾನು”

ಹಳ್ಳೂರು ಕಾಲಜ್ಞಾನ

 

(ಕುಮಾರ ಯೋಗಿಯ ಶ್ರೀ ಶಿವಯೋಗ ಮಂದಿರ ಸ್ಥಾಪನೆಯ ಮಣಿಹವನ್ನು ಬಿತ್ತರಿಸುವ ಪುರಾತನ ಕಾಲಜ್ಞಾನವಿದು. ಇದರಿಂದ ಕುಮಾರಯೋಗಿಯ ಕಾರಣಿಕತನವು ಕಣ್ಮನಗಳಿಗೆ ಗೋಚರವಾಗುತ್ತದೆ.)

 

ಒಂದು ದಿನ ಬೆಳಗಿನ ಒಂಬತ್ತು ಗಂಟೆ, ಕುಮಾರ ಸ್ವಾಮಿಗಳವರು ಬೆಳಗಿನ ಪೂಜೆಯನ್ನು ಪೂರೈಸಿಕೊಂಡು ಹಾನಗಲ್ಲ ಮಠದ ತೂಗುಮಣೆಯ ಮೇಲೆ ಮಂಡಿಸಿದ್ದಾರೆ. ಪುರಾತನ ತಾಳೆಗರಿಯೊಂದನ್ನು ಹಸ್ತದಲ್ಲಿ ಹಿಡಿದು ಓದುತ್ತಿದ್ದಾರೆ. ಒಮ್ಮೊಮ್ಮೆ ತಟ್ಟನೆ ಸಂಸ್ಥೆಯ ಸ್ಥಾಪನೆಯ ವಿಷಯ ನೆನಪಿಗೆ ಬಂದು ಹಾಗೆಯೆ ಯೋಚನಾಮಗ್ನರಾಗುತ್ತಿದ್ದಾರೆ. ಅವರು ತೂಗುಯ್ಯಾಲೆಯಲ್ಲಿ ಕುಳಿತಿದ್ದರು. ಅದರ ಸೊಗದಲ್ಲಿ ತೂಗಿ ತೊನೆದಿದ್ದಿಲ್ಲ. ತೂಗುಯ್ಯಾಲೆಯಂತೆ ಅವರ ಮನಸ್ಸು, ಒಮ್ಮೆ ಪುರಾತನ ಗ್ರಂಥಪರಿಶೋಧನೆಯತ್ತ ಇನ್ನೊಮ್ಮೆ ಭಾವೀ ಶಿವಯೋಗಮಂದಿರ ಸಂಸ್ಥೆಯ ನಿರ್ಮಾಣಯೋಚನೆಯತ್ತ ತೂಗಾಡುತ್ತಿತ್ತು; ತೂಕಹಾಕುತ್ತಿತ್ತು.

 

ಅಷ್ಟರಲ್ಲಿ ಒಬ್ಬ ಮಹಾವ್ಯಕ್ತಿಯು ಅಲ್ಲಿಗೆ ಹಟಾತ್ತಾಗಿ ಬಂದು ಕಂಡು ಕಾಣದವರಂತೆ ಈ ಮಠದ ಸ್ವಾಮಿಗಳೆಲ್ಲಿ ಎಂದು ಗಟ್ಟಿಯಾಗಿ ಕೇಳಲು ಅಲ್ಲಿಯ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಊಳಿಗದವನು ಭಯಭಕ್ತಿಯುತನಾಗಿ ಕೈಸನ್ನೆಯಿಂದ ತೂಗುಮಣೆಯತ್ತ ತೋರಿಸಿ ಅವರೇ ಸ್ವಾಮಿಗಳೆಂದು ಸೂಚಿಸಿದನು. ಮಹಾವ್ಯಕ್ತಿಯು ತೂಗುಯ್ಯಾಲೆಯ ಬಳಿಗೆ ಬಂದು ನಮಿಸದೆ ಈ ಮಠದ ಸ್ವಾಮಿಗಳು ತಾವೇ ಏನು ? “ಅನ್ನುವರು. ಯಾರು ? ‘ಜನರು.’ ಅನ್ನುವವರು ಮೂರ್ಖರು, ಅವರಿಗೆ ಬುದ್ಧಿಯಿಲ್ಲ, ಕಾವಿ ಧರಿಸಿ ಕೋಲು ಹಿಡಿದರೆ ಸ್ವಾಮಿಯಲ್ಲ, ಹಾವುಗೆ ಹಾಕಿ ಹಾಸುಮಂಚದ ಮೇಲೆ ತೂಗಿದರೆ ಸ್ವಾಮಿಯಲ್ಲ. ಎಲ್ಲ ಭೋಗಭಾಗ್ಯಗಳನ್ನು ತೊರೆದು ಬಾಹ್ಯ ಚಿನ್ನಗಳ ಹುಚ್ಚು ಹರಿದು ನೆಲ ಹಾಸಿಕೆಯಾಗಿ ಮುಗಿಲು ಹೊದಿಕೆಯಾಗಿ ಶಮೆದಮೆಗಳೆಂಬ ಸುಗಂಧ ಪುಷ್ಪಗಳನ್ನು ಅಘ್ರಾಣಿಸಿ ಪ್ರಾತಿಭಾಸಿಕವಾದ ಪ್ರಪಂಚವನ್ನು ಪರಹಿತ ಸಾಧನೆಯ ಮಾರ್ಗದಲ್ಲಿ ಸತ್ಯವೆಂದು ಪರಿಭಾವಿಸಿ ಸೇವೆಗೈಯುವ ಸತ್ಯವಿರತಿಯ ಮಾರ್ಗವೆತ್ತ? ಭೋಗಭಾಗ್ಯದ ಸೆಳೆತಕ್ಕೆ ಸಿಕ್ಕಿ ನಾನು ಮಠಾಧಿಕಾರಿ; ನಾನು ಮಹಾಸ್ವಾಮಿ ಎಂಬ ಅಹಮಿಕೆಯಿಂದ ಸೊಕ್ಕಿ ಭೂತಲಕ್ಕೆ ಪಾದವನ್ನು ಸೋಂಕಿಸದೆ ಅಹಂಕಾರ ಮಮಕಾರ ಸರಪಣಿಗಳಿಂದ ಬಿರನೆ ಬಿಗಿದ ಈ ತೂಗುಮಂಚದ ಸಂಕೋಲೆಯ ಸುಖವೆತ್ತ? ಎಂದು ಮುಂತಾಗಿ ಯಾವ ಅಂಕು ಅಳಕು ಇಲ್ಲದೆ ಅಖಂಡಧೈರ್ಯದಿಂದ ಅರ್ಥಪೂರ್ಣವಾಗಿ ಆತ್ಮಾವೇಶದಿಂದ ಆರೋಪಿಸುತ್ತಿರುವ ಆ ಮಹಾವ್ಯಕ್ತಿಯನ್ನು ಕಂಡು ಸ್ವಾಮಿಗಳವರು ಎಷ್ಟು ಮಾತ್ರಕ್ಕು ಮುನಿಸು ತಾಳಲಿಲ್ಲ. ತಾವು ಆ ಕಟುವಾದ ಆರೋಪಣೆಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರಲ್ಲವೆ ಕೋಪಾವೇಶಗಳ ಆರ್ಭಟ? ಆ ಮಾತುಗಳಿಗೂ ಮನಸ್ಸಿಗೂ ತಾಕಲಾಟ? ಶುದ್ಧಮಾರ್ಗಗಾಮಿಗಳಿಗೆ ಸತ್ಯವಾಕ್ ಪ್ರೇಮಿಗಳಿಗೆ ಆ ನುಡಿಗಳು ಕುಸುಮಗಳಾಗಿಯೆ ಪರಿಣಮಿಸಬಲ್ಲವು. ಸ್ವಾಮಿಗಳವರಿಗೆ ಹಾಗೆಯೆ ಪರಿಣಮಿಸಿವೆ. ನಿಮಿತ್ತ ಮಾತ್ರ ತೂಗುಯ್ಯಾಲೆಯಲ್ಲಿ ಕುಳಿತ ಅವರಿಗೆ ಆ ಮಾತುಗಳಲ್ಲಿ ಕೋಪವೆಲ್ಲಿಯದು? ತಾಪವೆಲ್ಲಿಯದು? ಪ್ರತಿಯಾಗಿ ಇಂತಹ ಅಪೂರ್ವ ವ್ಯಕ್ತಿಗಳು ನಮ್ಮ ಸಮಾಜದಲ್ಲಿ ಇದ್ದಾರಲ್ಲ ಎಂದು ಹೃದಯಾರೆ ಹರುಷಿಸಿ ನೀವಾರು? ಎಲ್ಲಿಂದ ಬಂದುದು? ಏನು ಸಂಗತಿ ? ಸ್ನಾನ ಶಿವಪೂಜೆ ಮಾಡಿಕೊಳ್ಳಿರಿ ಎಂದು ಮೊದಲಾಗಿ ಕುಶಲಪ್ರಶ್ನೆಗಳ ಕೇಳಿದಾರೆ.

 

ಅವರ ಉತ್ತರದಿಂದ ಅವರು ಪ್ರಸಿದ್ಧರಾಗಿದ್ದ ಬಾಗಲಕೋಟೆ ವೈರಾಗ್ಯದ ಮಲ್ಲಣಾರ್ಯರೆಂದು ಮನವರಿಕೆಯಾಗುತ್ತದೆ. ಆಮೇಲೆ ಇಬ್ಬರು ಸೇರಿ ಸ್ನಾನ ಶಿವಪೂಜಾದಿ ಕ್ರಿಯೆಗಳನ್ನು ತೀರಿಸಿಕೊಳ್ಳುತ್ತಾರೆ. ತೀರದ ತೃಪ್ತಿಯಿಂದ ಮತ್ತೆ ಮಲ್ಲಣಾರ್ಯರು ಮಾತಿಗೆ ಮೊದಲು ಮಾಡುತ್ತಾರೆ; ಮನನೀಯವಾಗಿ ಮಾತನಾಡುತ್ತಾರೆ.

 

ಧಮ್ಮೋನ್ನತಿಗೆ ಬ್ರಹ್ಮಬಲ-ಕ್ಷಾತ್ರಬಲ ಎರಡು ಕಾರಣಗಳೇನು ನಿಜ. ವಿಶ್ವದ ಇತಿಹಾಸವನ್ನು ನೋಡಿದರೆ ಕ್ಷಾತ್ರಬಲದಿಂದ ಬೆಳೆದ ಧರ್ಮಕ್ಕೆ ಒಮ್ಮಿಲ್ಲೊಮ್ಮೆ ಬೀಳುಂಟೆಂದು ತಿಳಿದು ಬರುತ್ತದೆ. ಬೆಳಗಿನ ಬೆನ್ನ ಮೇಲೆ ಕತ್ತಲೆಯು ಕಾದಿರುವಂತೆ ಕ್ಷಾತ್ರಬಲದ ಮೇಲೆ ಮತ್ತೊಂದು ಕ್ಷಾತ್ರಬಲ ಕತ್ತಿಯನ್ನೆತ್ತಿ ತನ್ನ ಧರ್ಮಧ್ವಜವನ್ನು ಎತ್ತರದಲ್ಲಿ ಹಾರಿಸುತ್ತದೆ. ಈ ಏರಿಳಿತಗಳ ಸೋಂಕಿಲ್ಲದೆ ಏಕರೀತಿಯಲ್ಲಿ ಎಲ್ಲ ಕಾಲದಲ್ಲಿ ವೈಷಮ್ಯ ವೈಕಲ್ಯಗಳಿಲ್ಲದೆ ಧರ್ಮವು ಮುನ್ನಡೆಯಬೇಕಾದರೆ ಆತ್ಮಬಲದಿಂದ ಮತ್ತು ಅಹಿಂಸೆ ಸತ್ಯ ವಿರತಿ ವಿಶಾಲಮತಿ ಇವುಗಳ ಬೆಂಬಲದಿಂದ ಸ್ಥಾಪಿತವಾದ ಧರ್ಮವೆ ಚಿರಕಾಲ ಉಳಿಯಬಲ್ಲದು.

 

ಈಗ ಕಂದಿ ಕುಂದಿದ ಶಿವಯೋಗ ಧರ್ಮಕ್ಕೆ ಈ ಮಾರ್ಗದಿಂದ ಮೆರಗು  ಕೊಡಬೇಕಾಗಿದೆ. ಇದಕ್ಕಾಗಿ ಸರ್ವಸಮನ್ವಯದ ಒಂದು ದೊಡ್ಡ ಯೋಗ ಸಂಸ್ಥೆಯ  ಅವಶ್ಯಕತೆ ಅನಿವಾರ್ಯವಾಗಿದೆ. ಅದು ನಿಮ್ಮಿಂದ ನೆರವೇರಬೇಕಾಗಿದೆ; ನೆಲೆ ನಿಲ್ಲಬೇಕಾಗಿದೆ. ಏನು ಹೇಳುವಿರಿ?

 

ತಾವು ಮೊದಲೆ ಯೋಚಿಸುತ್ತ ಇದ್ದುದನ್ನೆ ಮಲ್ಲಣಾರ್ಯರು ಸೂಚಿಸಿದುದನ್ನು ಕೇಳಿ ಒಳಗೊಳಗೆ ತುಂಬಾ ಸಂತೋಷಭರಿತರಾದರು. ಮೇಲೆ ಇದಕ್ಕೆ ಅವರ ಬೆಂಬಲವಿದೆ ಇಲ್ಲವೊ ತಿಳಿಯಲು ಈ ಪ್ರಶ್ನೆಯನ್ನು ಹಾಕುತ್ತಾರೆ. ಸಂಸ್ಥೆಯನ್ನು ಸ್ಥಾಪಿಸಬೇಕಾದುದೇನೊ ಸರಿ, ಆದರೆ ಅದು ಅಪಾರ ದ್ರವ್ಯ ಬಲವಿಲ್ಲದೆ ಸಾಧ್ಯವಾಗದು. ಅಷ್ಟೊಂದು ದ್ರವ್ಯ ಈಗ ನಮ್ಮಲ್ಲಿಲ್ಲ. ಏನು ಮಾಡುವುದು?

ಈ ಮಾತಿಗೆ ಮಲ್ಲಣಾರ್ಯರು ಕಾಲು ತಾಗಿದ ಹಾವಿನಂತೆ ಮುನಿದೆದ್ದು ಮಹಾಸ್ವಾಮಿ, ತಮ್ಮಂತಹ ನಿರಾಭಾರಿ ವಿರಕ್ತರು ನಿರಂಜನ ಮೂರ್ತಿಗಳು ಮಠಮಾನ್ಯಗಳ ಮೋಹವನ್ನು ಕಳಚಿ ಮೇಲುಪ್ಪರಿಗೆಯ ತೂಗುಯ್ಯಾಲೆಯ ಸುಖಕ್ಕೆ ನೀರೆರಚಿ ಶಾಂತಿ ವಿಶ್ರಾಂತಿಗಳ ಹವ್ಯಾಸವನ್ನು ನುಣಚಿ ಡಾಂಭಿಕ ಭಕ್ತರ ಪರಡಿ ಪಾಯಸಗಳ ಸವಿಯೂಟವ ಹಿಳಿದು ಹಿಮ್ಮೆಟ್ಟಿ ಮೇಣೆ ಪಲ್ಲಕ್ಕಿಗಳ ವೈಭವವನ್ನು ಕನಸು ಮನಸಿನಲ್ಲಿ ನೆನೆಯದೆ ಸಮಾಜಸೇವೆಯ ಸತ್ಯಸಂಕಲ್ಪದ ಪ್ರತಿಜ್ಞೆ ಮಾಡಿ ಧಾರ್ಮಿಕ ಸಾಧನಗಳಾದ ಜೋಳಿಗೆ ಬೆತ್ತಗಳನ್ನು ಹಿಡಿದು ಆಚಾರನಿಷ್ಠೆಯೆಂಬ ಕುದರೆಯನೇರಿ ಪಯಣ ಬೆಳೆಸಿದರೆ ಲಕ್ಷಾಂತರ ರೂಪಾಯಿಗಳ ರಾಶಿ ‘ನಾ ನೀ’ ಅನ್ನುವದರೊಳಗಾಗಿ ಕೂಡಬೀಳುವುದು. ಇದಕ್ಕೆ ನಿಮ್ಮ ಮನೋಧೈವಿಲ್ಲದಿದ್ದರೆ ನಿಮ್ಮ ಆ ಜೋಳಿಗೆ ಬೆತ್ತಗಳನ್ನು ನನ್ನ ಕೈಗೆ ಕೊಡಿರಿ. ನಾನು ಮುಂದೆ ಮುಂದೆ ಪ್ರಯಾಣ ಮಾಡಿದಂತೆ ತಾವು ನನ್ನ ಹಿಂದೆಯಾದರು ದಯಮಾಡಿರಿ. ಆಮೇಲೆ ಆ ಯೋಗ ಸಂಸ್ಥೆಯು ಹೇಗೆ ಆಗುವುದಿಲ್ಲವೊ ನೋಡೋಣ! ಹಣ ಹೇಗೆ ಒದಗುವದಿಲ್ಲವೊ ನಿರೀಕ್ಷಿಸೋಣ! ಎಂದು ಕೆರಳಿ ನುಡಿದರು. ಕೆಲಸಕ್ಕೆ ಕೆರಳುವಂತೆ, ಕೆಚ್ಚೆದೆಯಿಂದ ತೆರಳುವಂತೆ ಮಾಡಿದರು.

 

ಆ ಭಾವಾವೇಶದ ಭಾಷಣವನ್ನು ಕೇಳಿಯೇ ಸ್ವಾಮಿಗಳವರು ಆ ಕಾರ್ಯಕ್ಕೆ ಮುಂದುವರೆಯುವ ಸನ್ನಿವೇಶ ಇರಲಿಲ್ಲ. ಅವರು ಮೊತ್ತಮೊದಲೆ ಕಾರ್ಯಾಲೋಚನೆಯಲ್ಲಿದ್ದರು. ಆದರೆ ಅವರ ಭಾಷಣದಿಂದ ಇಷ್ಟು ಮಾತ್ರ ಪ್ರಯೋಜನವಾಯಿತು; ಸ್ವಾಮಿಗಳವರು ಮುಂಗೋರುತ್ತಿದ್ದಂತೆ ಸಹಕರಿಸುವ ಒಬ್ಬ ಸಹೋದ್ಯೋಗಿಗಳು ಸಿಕ್ಕಿಂದತಾಯಿತು. ಯೋಚನೆ ಹೋಗಿ ಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟಿತು. ಇಬ್ಬರು ಸೇರಿ ಅರ್ಥವನ್ನು ಅರ್ಜಿಸಿ ಯೋಗಸಂಸ್ಥೆಯೊಂದನ್ನು ಸ್ಥಾಪಿಸುವ ದೃಢಸಂಕಲ್ಪ ಮಾಡಿದರು; ಧುರೀಣರಾಗಿ ನಿಂತರು.

 

ಸೇರಿ ಸಂಕಲ್ಪ ಮಾಡಿದ್ದು ಮಾತ್ರವೆ ! ಸ್ವಲ್ಪ ದಿನಗಳಲ್ಲಿಯೆ ಮಲ್ಲಣಾರ್ಯರು ದೀರ್ಘಕಾಹಿಲೆ ಮಲಗಿ ವಾಸಿಯಾಗದೆ ಉಲ್ಬಣವಾಗಿ ಅದರಲ್ಲಿಯೆ ಲಿಂಗೈಕ್ಯರಾದರು ಅವರಲ್ಲಿದ್ದ ನಿರೀಕ್ಷಣೆ ನೀರಾಯಿತು; ಆಶೆ ನಿರಾಶೆಯಾಯಿತು. ಸ್ವಾಮಿಗಳವರು ಮರಳಿ ಒಬ್ಬಂಟಿಗರಾದರು. ವರ್ಷಾಕಾಲದಲ್ಲಿ ಮಿಂಚು ಮಿಂಚಿದಂತಾಯಿತು. ಮರುಕ್ಷಣದ ಮತ್ತಿಷ್ಟು ಕಗ್ಗತ್ತಲೆ ಕವಿದಂತಾಯಿತು; ಕಣ್ಣು ಕಾಣದಂತಾಯಿತು.

 

ಏನಾದರೇನು ? ಕುಮಾರಸ್ವಾಮಿಗಳವರು ಅಷ್ಟೇನು ಅಳ್ಳೆದೆಯವರಾಗಿರಲಿಲ್ಲ ಸಹಾಯಕರಿರಲಿ ಇಲ್ಲದಿರಲಿ, ಸಿರಿಬರಲಿ ಉರಿಬರಲಿ ಮುನ್ನುಗ್ಗಿದ ಮೇಲೆ ಹಿಂದಡಿಯಿಡುತ್ತಿರಲಿಲ್ಲ. ಹೇಡಿಗಳಂತೆ ಹಿಮ್ಮುಖರಾಗುತ್ತಿರಲಿಲ್ಲ. ಮಾಡಿದ ಸಂಕಲ್ಪವನ್ನು ಕೈ ಬಿಡದೆ ಇನ್ನೂ ಇಮ್ಮಡಿ ಉತ್ಸಾಹದಿಂದ ಕೆಲಸ ಮಾಡಲಾರಂಭಿಸಿದರು. ಮಲ್ಲಣಾರ್ಯರ ಉತ್ಸಾಹ ಶಕ್ತಿ ಬಂದು ಸ್ವಾಮಿಗಳವರಲ್ಲಿ ಸಂಪರ್ಕವಾಯಿತು. ಎರಡಳಿದು ಒ೦ದಾದಂತಾಯಿತು.

 

ಕುಮಾರ ಸ್ವಾಮಿಗಳವರು ಕಂಡ ಕಂಡ ಕಡೆಗೆ ಸುತ್ತಿದರು. ತಮ್ಮ ಮತಿವಂತಿಕೆಯಿಂದ ಧೃತಿವಂತಿಕೆಯಿಂದ ಅನತಿಕಾಲದಲ್ಲಿಯೆ ಹದಿನಾಲ್ಕು ಸಾವಿರಕ್ಕೆ ಕಡಿಮೆಯಿಲ್ಲದಷ್ಟು ಹಣವನ್ನು ಸಂಗ್ರಹಿಸಿದರು. ಅಷ್ಟು ಜಾಗ್ರತೆ ಅಷ್ಟೊಂದು ಅರ್ಥಸಂಗ್ರಹವಾದುದು ಅನೇಕರಿಗೆ ಅಚ್ಚರಿಯೆನಿಸಿರುವಂತೆ ಸ್ವಾಮಿಗಳವರು ವಿಸ್ಮಯಗೊಂಡರು. ನಿಸ್ವಾರ್ಥಿಗಳಿಗೆ ನಿತ್ಯ ಲಕ್ಷ್ಮಿಯು ತಾನೆ ತಾನಾಗಿರುವಳೆಂಬ ಮಾತು ನಿಜವಾಗಿಯು ಸ್ವಾಮಿಗಳವರಲ್ಲಿ ಸಾರ್ಥಕವಾಗಿತ್ತು; ಸಂಪ್ರೋಕ್ತವಾಗಿತ್ತು.

 

ಕ್ರಿ.ಶ. ಸಾವಿರದಾ ಒಂಬೈನೂರು ಎಂಟನೆಯ ಸಾಲು, ಬಾಗಲಕೋಟೆಯಲ್ಲಿ ಆ ಸಲ ವೀರಶೈವ ಮಹಾಸಭೆಯು ಜರುಗಬೇಕೆಂದು ನಿರ್ಧಾರವಾಗಿತ್ತು. ಆಗಳೆ ಅದರ ಪ್ರಕಟಣೆಗು ಆರಂಭವಾಗಿತ್ತು. ಸ್ವಾಮಿಗಳವರು ಅದೇ ಪ್ರಕಟನೆಯಲ್ಲಿಯೆ ಶಿವಯೋಗಮಂದಿರ ಸಂಸ್ಥೆಯ ಸ್ಥಾಪನೆಯ ವಿಷಯವನ್ನು ಪ್ರಕಟಿಸಿದರು. ನಿಯಮಿತ ಕಾಲಕ್ಕೆ ಸಭೆ ಜರುಗಿತು. ಸಭೆಯ ಕಾರ್ಯಕಾರಿ ಸಮಿತಿಯಲ್ಲಿ ಶ್ರೀ ಮ.ನಿ.ಪ್ರ. ಇಳಕಲ್ಲ ಮಹಾಂತಸ್ವಾಮಿಗಳವರು ತೋರಿಸಿದಲ್ಲಿ ಮಂದಿರವನ್ನು ಸ್ಥಾಪಿಸುವಂತೆ ತೀರ್ಮಾನವಾಯಿತು.

ಆಲೋಚಿಸಿದ ಕಾರ್ಯವನ್ನು ಅಲ್ಲಿಗೆ ಕೈ ಬಿಡುವುದು ಕುಮಾರಸ್ವಾಮಿಗಳವರ ಸ್ವಭಾವವಾಗಿರಲಿಲ್ಲ. ಅದು ಬೇಗ ಕಾರ್ಯರೂಪಕ್ಕೆ ಬಾರದ ಅವರಿಗೆ ತೃಪ್ತಿಯಾಗುತ್ತಿರಲಿಲ್ಲ. ಅದರಿಂದಾಗಿ ಸ್ವಾಮಿಗಳವರು ಆ ಕ್ಷಣದಲ್ಲಿಯೆ ಇಳಕಲ್ಲಿಗೆ ಹೋಗಿ ಆ ಶ್ರೀಗಳವರಿಗೆ ಆದ್ಯಂತವನ್ನೆಲ್ಲ ಅರಿಕೆ ಮಾಡಿ ಸ್ಥಳವನ್ನು ತೋರಿಸಲು ಆಗಳೆ ಹೊರಡಿಸಿದರು. ಜೊತೆಗೆ ಜಿಲ್ಲಾಧಿಕಾರಿಗಳಾಗಿದ್ದ ಕಿತ್ತೂರ ರೇವಣಸಿದ್ದಪ್ಪನವರು ಮತ್ತು ಧಾರವಾಡ, ಹುಬ್ಬಳ್ಳಿ, ಗದಗ, ಬಾಗಲಕೋಟ ಮುಂತಾದ ನಗರಗಳ ೨೦-೩೦ ಜನ ಪ್ರಮುಖರು ಸಹ ಹೊರಡುವರು. ಹುನಗುಂದ ಮಾರ್ಗವಾಗಿ ಹೊರಟು ಐತಿಹಾಸಿಕ ಪ್ರಸಿದ್ಧವಾದ ಐಹೊಳೆಯ ಕ್ಷೇತ್ರಕ್ಕೆ ಬಂದರು. ಅಲ್ಲಿನ ಪುರಾತನ ದೇವ ಮಂದಿರಗಳನ್ನು ನೋಡಿ ಕೆಲವರು ಅಲ್ಲಿಯೆ ಸ್ಥಾಪಿಸಲು ಇಷ್ಟಪಟ್ಟರು. ಅದಕ್ಕೆ ಇಳಕಲ್ಲ ಶ್ರೀಗಳವರ ಒಪ್ಪಿಗೆಯಾಗಲಿಲ್ಲ. ಇದು ಏಕಾಂತತೆಗೆ ಭಂಗವೆಂದು ಅವರ ಹೇಳಿಕೆ. ಅಲ್ಲಿಂದ ಮತ್ತೊಂದು ಐತಿಹಾಸಿಕ ಪ್ರಸಿದ್ಧವಾದ ಪಟ್ಟದಕಲ್ಲಿಗೆ ಆಗಮಿಸಿದರು. ಅಲ್ಲಿ ಕೆಲವರು ತಮ್ಮ ಬಯಕೆಯನ್ನು ಬಿಚ್ಚಿ ಬಿನ್ನಿಸಿದರು. ಅದಕ್ಕೆ ಶ್ರೀಗಳವರು ಅಲ್ಲಿಯ ಪಕ್ಕದಲ್ಲಿದ್ದ ನಾಗರಹಾವನ್ನು ತೋರಿಸಿ ಇಲ್ಲಿ ಬೇಡ ಎಂದು ಸಮಾಧಾನ ಹೇಳಿದರು. ಎಲ್ಲರನ್ನು ಶಿವಪೂಜೆಗಾಗಿ ಅಲ್ಲಿಯೆ ಬಳಿಯಲ್ಲಿರುವ ಪುರಾಣಪ್ರಸಿದ್ದವು ಪವಿತ್ರವು ಆದ ಮಾಕೂಟಕ್ಕೆ ಕಳುಹಿಸಿ ತಾವು ಸ್ವಲ್ಪ ಹೊತ್ತು ಪಟ್ಟದಕಲ್ಲಿನಲ್ಲಿಯೆ ವಿಶ್ರಮಿಸಿ ಬಳಿಕ ಮಲಾಪಹಾರಿಣಿ ನದಿಯ ತೀರವನ್ನು ಹಿಡಿದು ಹೊರಟು ಈಗಿರುವ ಶಿವಯೋಗ ಮಂದಿರ ಸ್ಥಳದ ಹತ್ತಿರಕ್ಕೆ ಬರುವರು. ಎತ್ತ ನೋಡಿದರು ಹೆಗ್ಗಾಡು, ಕಗ್ಗಾಡು, ಹೆಜ್ಜೆಯಿಡಲು ಸಾಧ್ಯವಿಲ್ಲದಂತೆ ಮುಳ್ಳು ಗಳ್ಳಿ (ಪಾಪಾಸುಕಳ್ಳಿ) ಬೆಳೆದು ನಿಂತಿದೆ. ಏನೂ ಸರಿಯಾಗಿ ಕಾಣುವಂತಿಲ್ಲ. ಮತ್ತೊಂದೆಡೆಗೆ ಶ್ರೀಗಳು ನೋಡುತ್ತಾರೆ. ಹೊಲದಲ್ಲಿ ಒಬ್ಬ ರೈತನು ಕಾಣಿಸಿಕೊಂಡನು. ಅವನ ಬಳಿಗೆ ಬಂದು ಸ್ಥಳ ಪರಿಚಯವನ್ನು ಕೇಳಿದರು. ಇಲ್ಲಿ ಎಲ್ಲಿಯಾದರು ನದಿಗೆ ಸಮೀಪದಲ್ಲಿ ಬಿಲ್ವಪತ್ರೆಯ ವನವಿರುವ ಸ್ಥಳವನ್ನು ತೋರಿಸು ಎಂದೆನ್ನುವರು. ರೈತನು ಇದೋ ಈ ದಬದಭೆಯ (ದಿಡಗಿನ) ದಂಡೆಯ ಸಮೀಪದಲ್ಲಿ ಬೇಕಾದಷ್ಟು ಪತ್ರೆಯ ಗಿಡಗಳಿವೆ ಎಂದು ತೋರಿಸಿದನು. ಶ್ರೀಗಳವರು ಮೇಲಿನಿಂದ ಕೆಳಕ್ಕೆ ಧೋ ಎಂದು ಶಬ್ದಮಾಡುತ್ತ ಬೀಳುವ ಹೊಳೆಯ ರಮ್ಯತೆಯನ್ನು ನೋಡಿ ಸಂತೋಷಿಸಿದರು. ಇಲ್ಲಿ ಇನ್ನೇನಿದೆ ತೋರಿಸೆಂದು ಕೇಳಿದಕ್ಕೆ ರೈತನು ಅದೇ ನಿಬಿಡವಾಗಿ ಬೆಳೆದ ಮುಳ್ಳಗಳ್ಳಿಯ ಪೊದೆಗಳಲ್ಲಿ ದೂರಿ ಸ್ವಾಮಿಗಳವರನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗುವನು. ಅಲ್ಲಿ ಬಿಲ್ವವನ, ಅದರ ಬಳಿಯಲ್ಲಿ ಒಂದು ಮುರಿದ ಬಿದ್ದ ಸಣ್ಣ ಗುಡಿ, ಅದರಲ್ಲಿ ದೇವರೆ ಇರಲಿಲ್ಲ. ಸ್ವಾಮಿ, ಇದು ಕೊಟ್ಟೂರು ಬಸವೇಶ್ವರ ದೇವಸ್ಥಾನ,

ನಾವೆಲ್ಲ ಶ್ರಾವಣ ಸೋಮವಾರಗಳಲ್ಲಿ ಬಂದು ಇದಕ್ಕೆ ಎಡೆ ಕಾಯಿ ಕಪ್ಪುರಗಳನ್ನು ಸಮರ್ಪಿಸುತ್ತೇವೆ; ಎಂದು ಹೇಳಿದನು.

 

ಶ್ರೀಗಳವರು ಆ ಮಾತಿಗೆ ಓಹೋ ! ಇದು ಕೊಟ್ಟರು ಬಸವ; ಕೊಡದಿದ್ದರು ಬಸವ ಎಂದು ನುಡಿದು ಅಲ್ಲಿಯೆ ಕುದುರೆಯಿಂದಿಳಿದು ಕುಳಿತುಕೊಳ್ಳುವರು. ಅದೇ ರೈತನನ್ನು ಕಳುಹಿಸಿ ಮಾಕೂಟದಲ್ಲಿರುವವರನ್ನೆಲ್ಲ ಕರೆಯಿಸುವರು. ಇದೋ ಇದೆ ಶಿವಯೋಗ ಮಂದಿರವನ್ನು ಕಟ್ಟಲು ತಕ್ಕ ಸ್ಥಳ. ಇಲ್ಲಿಗೆ ನದಿಯು ತೀರ ಹತ್ತಿರದಲ್ಲಿದೆ. ಬೇಕಾದಷ್ಟು ಬಿಲ್ವವೃಕ್ಷಗಳಿವೆ. ಸೊಂಪಾದ ಲತಾ ಮಂಟಪಗಳಿವೆ. ಇಲ್ಲಿಯೆ ಸಂಸ್ಥೆಯನ್ನು ನಿರ್ಮಿಸಲು ಉಚಿತವಾಗಿದೆ ಎಂದು ಅಪ್ಪಣೆ ಮಾಡಿದರು. ಇದಕ್ಕೆ ಅನೇಕರ ಒಪ್ಪಿಗೆಯಿಲ್ಲದಿದ್ದರು ವಿಧಿಯಿಲ್ಲದೆ ಕೊನೆಗೆ ಎಲ್ಲರೂ ಒಪ್ಪಿದರು. ಆ ಕ್ಷಣದಲ್ಲಿಯೇ ಅದೇ ಕೊಟ್ಟೂರು ಬಸವೇಶ್ವರನ ಗದ್ದುಗೆಯ ಮುಂದೆ ಕಪ್ಪುರ ಹಚ್ಚಿ ಕಾಯಿ ಒಡೆದು ಮಂಗಳಾರತಿ ಮಾಡಿದರು. ಆಗ ಸುಮಾರು ಮಧ್ಯಾಹ್ನ ನಾಲ್ಕು ಗಂಟೆಯ ಹೊತ್ತು. ಶ್ರೀಗಳು ಈಗ ನಾವು ಊರಿಗೆ ಹೋಗಿ ಏಳೆಂಟು ದಿನಗಳಲ್ಲಿ ಒದಗುವ ರಥಸಪ್ತಮಿಗೆ ಲಿಂಗಮುದ್ರೆಯನ್ನು ಸ್ಥಾಪಿಸಲು ಬರುತ್ತೇವೆ. ಅಲ್ಲಿಯವರೆವಿಗು ನೀವೆಲ್ಲರು ಇಲ್ಲಿಯ ಇದ್ದು, ಈ ಸ್ಥಳವನ್ನು ವಿಕ್ರಯಕ್ಕೆ ಪಡೆದು ಸ್ವಚ್ಛಮಾಡಿರಬೇಕೆಂದು ಹೇಳಿ ಕುದುರೆಯೇರಿ ಅದೇ ಹೊರಟು ಹೋದರು. ಹಳ್ಳಿಯ ರೈತನು ಹಳ್ಳಿಗೆ ಹೊರಟು ಹೋಗುವನು. ಹೊತ್ತು ಮುಳುಗುವುದು.

 

ಪುಷ್ಯಮಾಸದ ಅಮಾವಾಸ್ಯೆ ಕತ್ತಲೆಯ ಪಾಳೆಯವಾಗಿತ್ತು. ಸುತ್ತಲು ಮುಳ್ಳುಪೊದೆಗಳು ವಿಶೇಷವಾಗಿ ಬೆಳೆದು ನಿಂತಿವೆ. ಕಾಡುಮೃಗಗಳ ಕಳ್ಳಕಾಕರ ಭಯ ಎಲ್ಲರನ್ನು ಬಾಧಿಸತೊಡಗಿತು. ಅಂತಹದರಲ್ಲಿ ಹಾನಗಲ್ಲ ಸ್ವಾಮಿಗಳವರು ತಮ್ಮೊಡನೆ ಬಂದವರಿಗೆಲ್ಲ ಧೈಯ್ಯಹೇಳುತ್ತ ಧೀರೋದಾತ್ತರಾಗಿ ಧುರಂಧರರಾಗಿ ಧರ್ಮನಿಷ್ಠರಾಗಿ ನಿಂತಿದ್ದಾರೆ. ಅಷ್ಟರಲ್ಲಿ ಹಕ್ಕಿಗಳು ಹಾಡಿದವು, ಚುಕ್ಕಿಗಳು ಮೂಡಿದವು. ನದಿಯು ನಿರ್ಮಲೋದಕವ ನೀಡಿತು. ವನದೇವತೆ ವನ್ಯಮೃಗಗಳಿಗೆ ಅಹಿಂಸೆಯಿಂದಿರಲು ಶಾಸಿಸಿತು. ಅದರಿಂದಾಗಿ ಕಾಡ ಹಂದಿಗಳು ಚಿರ್ಚುಗಳು ತಮ್ಮ ಗೂಡ ಸೇರಿದವು. ವನಪಶುಗಳು ಸಹ ಕುಮಾರಸ್ವಾಮಿಗಳವರ ಧಮ್ಮಕಾರ್ಯಕ್ಕೆ ನೆರವಾದವು. ನಿಸರ್ಗವು ಸಹ ಸ್ವಾಮಿಗಳ ದರ್ಮೋದ್ಯಮದ ಮೂರ್ತಿರೂಪವನ್ನು ತಾಳಿದಂತಿತ್ತು. ಯಾವುದರಿಂದ ಯಾವ ಭಯವು ಯಾರಿಗಾಗಲಿಲ್ಲ. ಎಲ್ಲರು ಮರದ ಬುಡದಲ್ಲಿ ಶಿವಪೂಜೆಯನ್ನು ಮಿತಾಹಾರವನ್ನು ನೆರವೇರಿಸಿ ವನ್ಯಭೂಮಿಯ ಮೇಲೆ ಮಲಗಿದರು.

 

ಪುಷ್ಯದ ಮಸುಗು ಹರಿಯಿತು. ಮಾಘದ ಬೆಳಗು ಮೂಡಿತು. ಮುಂದಿನ ಮಹಾಕಾರ್ಯಕ್ಕೆ ಪ್ರಕೃತಿ ದೇವಿ ಚೆಂಬಣ್ಣದ ಚಿಗುರುಡಿಗೆಯನುಟ್ಟು ರವಿತಿಲಕವನಿಟ್ಟು ಕಿರಣಭಸಿತವ ಧರಿಸುವಳು. ನೀಲಾಕಾಶದ ತಳಿಗೆಯಲ್ಲಿ ಜಗಜ್ಯೋತಿಯನ್ನಿಟ್ಟು ಮಂಗಳಾರತಿಯ ಮಾಡುವಳು. ಹಕ್ಕಿಗಳು ಮಂಜುಳ ಘೋಷವ ಮಾಡುವವು. ಲತಾಕುಂಜಗಳು ಮಗ್ಗುಮಂಜರಿಗಳ ಮಾಲೆಯ ಹಾಕಲು ಸಜ್ಜಾಗಿರುವವು. ಸೂರ್ಯೋದಯದೊಡನೆ ಶುಭೋದಯವಾಯಿತು.

 

ಎಲ್ಲರು ಎದ್ದರು. ಮೊಗದೊಳೆದರು. ಮುಂಜಾವಿನ ಆ ನಿಸರ್ಗಮನೋಹರ ದೃಶ್ಯವನ್ನು ಕಣ್ಣುಂಬ ನೋಡಿ ನಲಿದರು. ನಗರಗಳಲ್ಲಿ ಈ ನಿರ್ಮಲ ನಿಸರ್ಗದೃಶ್ಯ ಎಲ್ಲಿಂದ ಬರಬೇಕು ? ಎಷ್ಟು ಕೊಟ್ಟರೆ ದೊರೆಯಬೇಕು ಎಂದು ಮನವಾರೆ ಕೊಂಡಾಡಿದರು. ಮುಂದಿನ ಕಾರ್ಯಕ್ಕೆ ಅಣಿಯಾದರು.

ಕುಮಾರಮಹಾಸ್ವಾಮಿಗಳವರು ಕಿತ್ತೂರ ರೇವಣಸಿದ್ಧಪ್ಪನವರನ್ನು ಗುಳೇದಗುಡ್ಡ ಜಿರ್ಲಿ ಮುರಘಪ್ಪನವರನ್ನು ಕೂಡಿಕೊಂಡು ಪಕ್ಕದಲ್ಲಿರುವ ‘ಮಂಗಳೂರು’ ಎಂಬ ಹಳ್ಳಿಗೆ ಹೋಗುವರು. ಹಲವರನ್ನು ವಿಚಾರಿಸಿ ಆ ಹೊಲದ ಒಡೆಯನನ್ನು ಗುರುತಿಸುವರು. ಅವನು ತೀರ ಬಡವನಾಗಿದ್ದನು. ವಿಶೇಷವಾಗಿ ಮುಳ್ಳುಗಳ್ಳಿ ಬೆಳೆದ ಭೂಮಿಯಲ್ಲಿ ಬೆಳೆಯಿಡಲು ಅವನಿಗೆ ಸಾಧ್ಯವಾಗದೆ ಹೋಗಿತ್ತು. ಅದರಿಂದಾಗಿ ಪ್ರತಿವರ್ಷವು ಕೈಯಿಂದ ಕಂದಾಯ ಕಟ್ಟಿ ಬೇಸತ್ತಿದ್ದನು. ಬೇರೆ ಯಾರು ಅದನ್ನು ತೆಗೆದುಕೊಳ್ಳುವರಿರಲಿಲ್ಲ. ಹೀಗಾಗಿ ಯಾರಾದರು ಗಿರಾಕಿ ಬಂದರೆ ಸಾಕಾಗಿತ್ತು. ತಕ್ಷಣವೆ ಕ್ರಯಕ್ಕೆ ಕೊಡಲೊಪ್ಪಿದನು. ಬೆಲೆ ಇನ್ನೂರು ರೂಪಾಯಿಗಳೆಂದು ನಿರ್ಧಾರವಾಯಿತು. ಹಣವನ್ನು ಆತನಿಗೆ ಕೊಟ್ಟು ಕ್ರಯಪತ್ರ ಬರೆಯಿಸಿಯಾಯಿತು. ಬಂದೊಡನೆ ಬಂದ ಕಾರ್ಯವಾದುದಕ್ಕೆ ಸ್ವಾಮಿಗಳವರಿಗೆ ಸಂತೋಷವಾಯಿತು. ಮುಳ್ಳುಗಳ್ಳಿ ಕಡಿದು ಹಾಕಲು ಮೂವತ್ತು ನಾಲ್ವತ್ತು ಜನ ಆಳುಗಳನ್ನು ಕರೆತಂದು ಕೆಲಸಕ್ಕೆ ಪ್ರಾರಂಭಿಸಿದರು. ನಾಲೈದು ದಿನ ಅದೇ ಒಂದು ದೃಶ್ಯವಾಗಿತ್ತು. ಅದೇ ಒಂದು ಕಾಲಕ್ಷೇಪವಾಗಿತ್ತು.

 

ಆರನೆಯ ದಿನ ಐದಾರು ಪರ್ಣಕುಟೀರ ತೃಣಕುಟೀರಗಳನ್ನು ಅಂದವಾಗಿ ನಿರ್ಮಿಸಿದರು. ಬೆಳಗಾದರೆ ರಥಸಪ್ತಮಿ, ಶಿವಯೋಗ ಮಂದಿರ ಸ್ಥಾಪನೆಯ ದಿನ. ಇಳಕಲ್ಲಿನಿಂದ ಶ್ರೀ ಮಹಾಂತಸ್ವಾಮಿಗಳವರು ಬರುವ ನಿರೀಕ್ಷಣೆ, ಸುತ್ತು ಮುತ್ತಣ್ಣ ಹಳ್ಳಿಗಳ ಜನರಿಗೆಲ್ಲ ಒಂದು ಅಭೂತಪೂರ್ವವಾದ ಉತ್ಸಾಹ. ಗಿಡಗಂಟಿಗಳನ್ನು ಕಡಿದು ಹಸನಮಾಡಿದರು. ಪರ್ಣಕುಟೀರಗಳ ಮುಂದೆ ಮಾಂದಳಿರ ತೋರಣ ಕಟ್ಟಿ ಸಿಂಗರಿಸಿದ್ದರು. ಕಲ್ಲುಗಳ ಮೇಲೆ ಲಿಂಗಮುದ್ರೆಗಳನ್ನು ಕೆತ್ತಿಸಿ ಒಂದೆಡೆಗೆ ಇರಿಸಿದ್ದರು. ಆ ವೇಳೆಗೆ ಇಳಕಲ್ಲಿನಿಂದ ಶ್ರೀಗಳವರು ತಮ್ಮ ಪ್ರೀತಿಯ ಹಸುವಿನೊಂದಿಗೆ ಬರುವರು. ಆ ಸಂಭ್ರಮಕ್ಕೆ ವನದೇವತೆಯು ಬನಶಂಕರಿಯ ರೂಪದಲ್ಲಿ ಬಂದಿದ್ದಳು. ಐಹೊಳೆಯ ಭಕ್ತರು ಐತಂದು ಹೊಳೆ ನೀರಿನಿಂದ ಚಳಕಹೊಡೆದರು. ಪಟ್ಟದಕಲ್ಲಿನವರು ಲಿಂಗಮುದ್ರೆಯ ಕಲ್ಲುಗಳನ್ನು ಸಂಸ್ಥೆಯ ಪಟ್ಟಕ್ಕಾಗಿ ತಯಾರಿಸಿದ್ದರು. ಮಂಗಳೂರಿನವರ ಮಂಗಳವಾದ್ಯದೊಡನೆ ಶಿವಯೋಗ ಮಂದಿರ ಶುಭಸಂಸ್ಥೆಯು ಸ್ಥಾಪಿತವಾಯಿತು. ಬಾದಾಮಿಯವರು ಬಾದಾಮು ತೂರಿದರು. ನಿಲುವಿಗೆಯವರು ನೆಲೆಯಾಗಿ ನಿಲ್ಲುವಂತೆ ನೆರವಿತ್ತರು, ಈ ಎಲ್ಲ ಗ್ರಾಮದವರು ಸೇರಿದ್ದರಿಂದ ಅದೇ ಒಂದು ಮಹಾಕೂಟವಾಯಿತು. ಮಹಾವೈಭವದಿಂದ ನಡೆಯಿತು. ಸುತ್ತಣ ಈ ಗ್ರಾಮನಾಮಗಳಲ್ಲಿ ಮಂಗಲೋತ್ಕರ್ಷಗಳು ತುಂಬಿ ತುಳುಕುತ್ತಿವೆ. ಎಷ್ಟು ಅರ್ಥಪೂರ್ಣವಾದ ಉತ್ಕರ್ಷಪೂರ್ಣವಾದ ಮಂಗಳಪೂರ್ಣವಾದ ಹೆಸರುಗಳಿವು. ಅಂತಹ ಗ್ರಾಮಗಳ ಮಧ್ಯದಲ್ಲಿ ಶಿವಯೋಗ ಮಂದಿರ ಮಹಾಸಂಸ್ಥೆಯು ಸ್ಥಾಪಿತವಾದುದು ಮತ್ತೂ ಹೆಚ್ಚಿನ ಮಾಂಗಲ್ಯೋದಯವಾಯಿತು. ಪುಣ್ಯೋದಯವಾಯಿತು. ಅಯಾಗ್ರಾಮಗಳ ಹೆಸರುಗಳು ಅಂದಿನಿಂದ ಸಾರ್ಥಕವಾದವು, ಅವುಗಳಂತೆ ಶಿವಯೋಗ ಮಂದಿರ ಎಂಬುದು ಅರ್ಥಪೂರ್ಣವಾದ ಅನ್ವರ್ಥನಾಮ. ಭವರೋಗವನ್ನು ಕಳೆದು ಶಿವಯೋಗವನ್ನು ಉಂಟುಮಾಡುವ ಆಶ್ರಮ. ಹಿಂದಿನ ಕ್ಷಣದಲ್ಲಿ ಕ್ರೂರ ಮೃಗಗಳ ವಾಸದಿಂದ ಕಳ್ಳಕಾಕರ ತ್ರಾಸಿನಿಂದ ಭೀಕರವಾದ ಅರಣ್ಯವು ಮರುಕ್ಷಣದಲ್ಲಿಯ ಆಶ್ರಮವಾಗಿ ಸತ್ಪುರುಷರಿಗೆ ಆಶ್ರಯವಾಯಿತು. ನೆರೆದ ಭಕ್ತವೃಂದವು ನೋಡಿ ಸಂತೋಷಪಟ್ಟಿತು. ಸಂತೋಷವಲ್ಲಿ ಶ್ರೀ ಶಿವಯೋಗಮಂದಿರಕ್ಕೆ ಜಯವಾಗಲಿ, ಶ್ರೀ ಹಾನಗಲ್ಲ ಕುಮಾರ ಮಹಾಸ್ವಾಮಿಗಳವರಿಗೆ ಜಯವಾಗಲಿ, ಶ್ರೀ ಇಳಕಲ್ಲ ವಿಜಯಮಹಾಂತ ಶ್ರೀಗಳವರಿಗೆ ವಿಜಯವಾಗಲಿ ಎಂದು ಒಕ್ಕೊರಲಿನಿಂದ ಜಯನಿನಾದ ಮಾಡಿದರು. ಆ ನಿನಾದವು ನಾಲ್ದೆಸೆಗು ಇರುವ ಕಾನನಗಳಲ್ಲಿ ಪ್ರತಿಧ್ವನಿಸಿ ಮುಗಿಲ ಮುಟ್ಟಿತು.

 

ಆಶ್ರಮದ ನಿಸರ್ಗಶೋಭೆ ಆಗಂತುಕರ ಆಯಾಸವನ್ನು ಪರಿಹರಿಸುವಂತಹದು. ಪಕ್ಕದಲ್ಲಿಯೆ ತಿಳಿಯಾಗಿ ಹರಿಯುವ ಮಲಾಪಹಾರಿಣಿ ನದಿಯು, ಅದು ಕಲ್ಲು ಬಂಡೆಗಳ ಮೇಲಿಂದ ದಭ ದಭ ಎಂದು ಉಲಿಯುತ್ತ ಉರುಳುತ್ತದೆ. ಅದರಿಂದ ಅದಕ್ಕೆ ‘ದಭದಭ ಎಂದರೆ ಜಲಪಾತವೆಂದು ಹೆಸರು ಬಂದಿದೆ. ತೊರೆಯ ತೀರದಲ್ಲಿ ಹಚ್ಚಗೆ ಹಸುರು ಮುಡಿದದರ್ಭೆಯ ಹುಲ್ಲು, ಹೂತು ಕಾತು ಕಂಗೊಳಿಸುವ ತರುಲತೆಗಳು. ಹೂಗಂಪನು ಹೊತ್ತು ಹಗುರಾಗಿ ತೀಡುವ ತಂಗಾಳಿ, ಇವು ಪಾಂಥರ ಪರಿಶ್ರಮವನ್ನು ಪರಿಹರಿಸುತ್ತವೆ. ಕುಕಿಲ್ವ ಕೋಕಿಲೆಗಳು ನರ್ತಿಸುವ ನವಿಲುಗಳು, ಹರಿದಾಡುವ ಹರಿಣಗಳು, ಹಾರಾಡುವ ಹಕ್ಕಿಗಳು, ಓಡಾಡುವ ಮೊಲ ಅಳುಲೆಗಳು ನೋಡುವವರ ನೋಟ ತಣಿಸುತ್ತವೆ. ತೊರೆಯ ತೀರದಲ್ಲಿ ಅನುಷ್ಠಾನಕ್ಕೆಂದು ಕಟ್ಟಿಸಿದ ಹುಲ್ಲುಗುಡಿಸಲುಗಳು, ಕಲ್ಲುಗವಿಗಳು ತಾವಾಗಿ ಹಬ್ಬಿ ಹಣೆದು ನಿಂತ ಕುಂಜ ನಿಕುಂಜಗಳು ದಟ್ಟವಾಗಿ ಬೆಳೆದು ಹಣ್ಣು ಗೊಂಚಲುಗಳಿಂದ ರಾಜಿಸುವ ನೇರಲ ವೃಕ್ಷಗಳು ಪ್ರತಿಯೊಬ್ಬರ ಚಿತ್ತವೃತ್ತಿಗಳನ್ನು ಸೆಳೆದು ಶಾಂತಿಗೊಳಿಸುವವು. ಅದರಲ್ಲಿಯು ಚೈತ್ರ ಮಾಸದ ಹುಣ್ಣಿಮೆಯ ತಿಂಗಳ ಬೆಳದಿಂಗಳಿನಲ್ಲಿ ನಿಂತು ಸುತ್ತುಮುತ್ತಣ ಆ ನೈಸರ್ಗಿಕ ವನಸೌಂದರ್ಯವನ್ನು ನಿರೀಕ್ಷಿಸುವ ಪ್ರತಿಯೊಬ್ಬನ ಹೃದಯದಲ್ಲಿ.

“ಅಳಿಸಂಕುಲವೆ ಮಾಮರವೆ ಬೆಳದಿಂಗಳೆ ಕೋಗಿಲೆಯೆ

ನಿಮ್ಮ ನಿಮ್ಮನೆಲ್ಲರನು ಒಂದು ಬೇಡುವೆನು.

ಎನ್ನ ಚನ್ನಮಲ್ಲಿಕಾರ್ಜುನನು ಇದ್ದರೆ ಕರೆದು ತೋರಿರೆ.”

 

ಎಂಬ ವಚನವನ್ನು ಅಕ್ಕಮಹಾದೇವಿಯು ಇಲ್ಲಿಯೇ ನಿಂತು ಹಾಡಿರಬಹುದೆ ಹಂಬಲಿಸಿರಬಹುದೆ ಎಂದು ಭಾಸವಾಗುತ್ತದೆ; ವಾಣಿಯಿಂದ ಅದೇ ವಚನವನ್ನು ಹಾಡಿಸುತ್ತದೆ. ನೋಡುವವರ ಕಣ್ಮನಗಳು ಆ ಕಾಡ ಚಲುವಿನಲ್ಲಿ ತಲ್ಲೀನವಾಗಿ ಬಿಡುತ್ತವೆ.

 

ಕುಮಾರ ಸ್ವಾಮಿಗಳವರ ಪರಿಶ್ರಮದ ಫಲವಾಗಿ ಅಲ್ಲಿ ಹತ್ತು ಹನ್ನೆರಡು ಭವ್ಯ ಕಟ್ಟಡಗಳಾಗಿವೆ. ಯೋಗ ಸಾಧನೆಗಾಗಿ ನೆಲದಲ್ಲಿ ಗವಿಗಳಾಗಿವೆ. ಅಲ್ಲದೆ ಸಂಸ್ಥೆಯ ಸ್ಥಿರಜೀವಿತಕ್ಕೆ ಸ್ವಾಮಿಗಳವರು ನಾಲೈದು ಲಕ್ಷರೂಪಾಯಿಗಳನ್ನು ಕೂಡಿಸಿದರು. ಸುಮಾರು ನಾಲೈದು ಮೈಲಿ ಭೂಮಿ ಸೀಮೆಗಳ ಸ್ವಾಮಿತ್ವವನ್ನು ಸಂಪಾದಿಸಿದರು. ನೂರಿನ್ನೂರು ಗೋವುಗಳನ್ನು ರಕ್ಷಿಸಿದರು. ಅವುಗಳ ಸಲುವಾಗಿ ಐವತ್ತು ಎಕರೆ ಗುಡ್ಡವನ್ನು ಸರಕಾರದಿಂದ ಇನಾಮನ್ನಾಗಿ ಪಡೆದರು. ಬೇರೆಬೇರೆ ಗ್ರಾಮಗಳಲ್ಲಿ ಸದ್ಭಕ್ತರು ನೂರಾರು ಕೂರಿಗೆ ಭೂಮಿಯನ್ನು ಸಂಸ್ಥೆಗೆಂದು ಭಕ್ತಿಯಿಂದ ಸಮರ್ಪಿಸಿದ್ದಾರೆ. ಜೀನಿಂಗ ಮತ್ತು ಪ್ರೆಸಿಂಗ ಫ್ಯಾಕ್ಟರಿಯೊಂದನ್ನು ಬಾಗಲಕೋಟೆಯಲ್ಲಿ ಸ್ಥಾಪಿಸಿದ್ದಾರೆ. ಶಿವಯೋಗ ಮಂದಿರದಲ್ಲಿಯೆ ಒಂದು ದೊಡ್ಡ ಪುಸ್ತಕಾಲಯವನ್ನು ಸ್ಥಾಪಿಸಿದ್ದಾರೆ.  ಅದರಲ್ಲಿ ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲೀಷ್ ಗ್ರಂಥಗಳನ್ನು ಸುಮಾರು ನಾಲೈದು ಸಾವಿರಕ್ಕೆ ಮೇಲ್ಪಟ್ಟು ಶೇಖರಿಸಿದ್ದಾರೆ. ಇದಲ್ಲದೆ ಪುರಾತನ ತಾಳೆಗರಿಗಳನ್ನು ಕೈಬರಹದ ಕಡತಗಳನ್ನು ಏಳೆಂಟುನೂರು ಕಲೆಹಾಕಿದ್ದಾರೆ. ಪರಿಶುದ್ಧವಾದ ಭಸ್ಮ ಪಂಚಸೂತ್ರದ ಪವಿತ್ರಶಿಲೆಯ ಲಿಂಗಗಳನ್ನು ಮಾಡುವ ಏರ್ಪಾಡನ್ನು ಮಾಡಿದ್ದಾರೆ. ವೈದ್ಯದ ಸಂಶೋಧವನ್ನು ಮಾಡಿದ್ದಾರೆ. ಹಲವು ದಿವ್ಯೌಷಧಿಗಳನ್ನು ತಯಾರಿಸಿದ್ದಾರೆ. ಬಿಳುಪನ್ನು ಕಳೆಯುವ ‘ಧೃತಿ’ ಎಂಬ ಸಿದ್ಧೌಷಧಿಯು ಅಲ್ಲಿ ಈಗಲು ಸಿಕ್ಕುತ್ತದೆ. ಅದರಿಂದ ಎಷ್ಟೋ ಜನರು ಗುಣಹೊಂದಿ ಕಳೆದುಕೊಂಡ ಧೃತಿಯನ್ನು ಪಡೆದುಕೊಂಡು ಹೋಗಿದ್ದಾರೆ. ಶಿವರಾತ್ರಿಯಲ್ಲಿ ಸಾಗುವ ಜಾತ್ರೆಯಲ್ಲಿ ಹಲವು ಬಗೆಯ ಧಾರ್ಮಿಕ ಸಾಮಾಜಿಕ ಸಭೆಗಳು ನಡೆವಂತೆ ವ್ಯವಸ್ಥೆ ಮಾಡಿದ್ದಾರೆ.

 

ಆ ಸಂಸ್ಥೆಯಲ್ಲಿ ಅಂದಿನಿಂದ ಇಂದಿನವರೆವಿಗೆ ಸುಮಾರು ಸಾವಿರಾರು ಜನ ಸಾಧಕರು ಅಧ್ಯಯನ ಮಾಡಿದ್ದಾರೆ. ಕನ್ನಡ ಸಂಸ್ಕೃತ ಸಂಗೀತಗಳಲ್ಲಿ ಸಾಕಷ್ಟು ಜ್ಞಾನವನ್ನು ಸಂಪಾದಿಸಿದ್ದಾರೆ. ಅಷ್ಟಾಂಗಯೋಗವನ್ನು ಇಷ್ಟಲಿಂಗದ ವಿಚಾರವನ್ನು ಅರಿತುಕೊಂಡಿದ್ದಾರೆ. ಪ್ರಾಣಾಯಾಮದ ವಿಧಾನವನ್ನು ಪ್ರಾಣಲಿಂಗದ ನೆಲೆಕಲೆಗಳನ್ನು ಗುರುತಿಸಿಕೊಂಡಿದ್ದಾರೆ. ಷಟ್ಕರ್ಮಗಳ ಸಿದ್ಧಿಯನ್ನು ಷಟ್‌ಸ್ಥಲಗಳ ಶುದ್ಧಿಯನ್ನು ಸಂಪಾದಿಸಿಕೊಂಡಿದ್ದಾರೆ. ಒಟ್ಟಾಗಿ ಒಂದೇ ಮಾತಿನಲ್ಲಿ ಹೇಳುವದಾದರೆ ಆ ಸಂಸ್ಥೆಯಿಂದ ಉತ್ತಮ ಭಾಷಣಕಾರರು ಕೀರ್ತನಕಾರರು ಪೌರಾಣಿಕರು ಲೇಖಕರು ಯೋಗಿಗಳು ಅನುಭವಿಗಳು ಸ್ವಾಮಿಗಳು ಸಂಗೀತಜ್ಞರು ಮುಂತಾಗಿ ಅನೇಕರು ಅನೇಕ ಕಲೆಗಳಲ್ಲಿ ತಯಾರಾಗಿದ್ದಾರೆ. ಕೀರ್ತಿಗಳಿಸಿದ್ದಾರೆ. ಕನ್ನಡ ನಾಡಿನ ಬಹುಭಾಗದಲ್ಲಿ ಅನೇಕರು ಮಠಾಧಿಪತ್ಯವನ್ನು ವಹಿಸಿದ್ದಾರೆ; ವಿರಾಜಮಾನರಾಗಿದ್ದಾರೆ. ಸಮಾಜ ಸಾಹಿತ್ಯಾದಿಗಳ ಸೇವೆ ಸಲ್ಲಿಸುತ್ತಿದ್ದಾರೆ.

 

ಈ ಸಂಸ್ಥೆಗೆ ಸಂಬಂಧಪಟ್ಟ ಶಾಖಾಮಂದಿರಗಳನ್ನು ಕಪ್ಪನಹಳ್ಳಿ ಕೋಡಿಕೊಪ್ಪ ಬಾದಾಮಿ ಮುಂತಾದ ಗ್ರಾಮಗಳಲ್ಲಿ ಸ್ಥಾಪಿಸಿದ್ದಾರೆ. ಸಂಸ್ಥೆಯಿಂದ ತಯಾರಾಗಿ ಹೋದ ಹಲವರು ಅಲ್ಲಲ್ಲಿ ಪಾಠಶಾಲೆ ಭೋಜನಶಾಲೆ (ಬೋರ್ಡಿಂಗ್ ಹೋಂ)ಗಳನ್ನು ಸ್ಥಾಪಿಸಿದ್ದಾರೆ. ಇದರಿಂದಾಗಿ ಸಮಾಜಕ್ಕೂ ಸಾಹಿತ್ಯ ಸಂಸ್ಕೃತಿಗೂ ಈ ಸಂಸ್ಥೆಯಿಂದ ಅಪಾರವಾದ ಸೇವೆ ಸಲ್ಲಿದೆ. ಅನೇಕ ಉದ್ದಾಮ ಸಾಹಿತಿಗಳು ಇಲ್ಲಿಗೆ ಬಂದು ಗ್ರಂಥಭಂಡಾರದ ಪ್ರಯೋಜನ ಪಡೆದಿದ್ದಾರೆ. ಗ್ರಂಥ ಪ್ರಕಾಶಕರು ಈ ಸಂಸ್ಥೆಯ ಗ್ರಂಥಾಲಯದಿಂದ ಪ್ರಾಚೀನ ಗ್ರಂಥ ಪ್ರತಿಗಳನ್ನು ಪಡೆದು ಉಪಕೃತರಾಗಿದ್ದಾರೆ.

 

ಈ ಎಲ್ಲ ದೃಷ್ಟಿಗಳಿಂದ ಈ ಸಂಸ್ಥೆಯು ಸಮಾಜಕ್ಕೆ ಆರ್ಯ ಸಮಾಜದ ‘ಕಾಂಗಡಿ ಗುರುಕುಲ ವಿದ್ದಂತೆಯು, ಶಾಂತಿಸಾಧಕರಿಗೆ ರವೀಂದ್ರನಾಥ ಠಾಕೂರವರ ‘ಶಾಂತಿನಿಕೇತನ’ ವಿದ್ದಂತೆಯು, ಅನುಭವ ವಿಚಾರಕ್ಕೆ ೧೨ನೆಯ ಶತಮಾನದ ‘ಅನುಭವ ಮಂಟಪ’ ವಿದ್ದಂತೆಯು ಇದೆಯೆಂದು ಹೇಳಿದಲ್ಲಿ ಯಾವ ತಪ್ಪಾಗಲಿಕ್ಕಿಲ್ಲ. ಆ ಅನುಭವ ಮಂಟಪವನ್ನು ಸ್ಥಾಪಿಸಿ ಬಸವಣ್ಣನು ದ್ವಿತೀಯ ಶಂಭುವೆನಿಸಿದಂತೆ ಈ ಶಿವಯೋಗಮಂದಿರವನ್ನು ಸ್ಥಾಪಿಸಿ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ದ್ವಿತೀಯ ಬಸವಣ್ಣನೆನಿಸಿದರು; ಕಾರಣಿಕ ಪುರುಷರಾದರು.

 

೧೯೨೫ ನೆಯ ಸಾಲಿಗೆ ಶಿವಯೋಗ ಮಂದಿರವು ಹದಿನಾರನೆಯ ವರುಷದಲ್ಲಿ ಹೆಜ್ಜೆಯನ್ನಿಕ್ಕಿತ್ತು. ಏರುಂಜವ್ವನದ ಆರಂಭ ವಯಸ್ಸು, ಎಂಥವರನ್ನು ಬೆರಗುಗೊಳಿಸುವ ವರ್ಚಸ್ಸು. ಆಗ ಶಿವಯೋಗ ಮಂದಿರದಲ್ಲಿ ೩೦-೪೦ ಜನ ಚಿಕ್ಕ ಚಿಕ್ಕ ವಯಸ್ಸಿನ ವಟುಗಳು. ೭೦-೮೦ ಜನ ೧೨ ವರುಷಕ್ಕೆ ಮೀರಿದ ೨೫ ವರ್ಷಕ್ಕೆ ಮಿಂಚದ ಸಾಧಕ ಸಮುದಾಯವು. ಗುರುವಿರಕ್ತರೆಂಬ ಭೇದಭಾವವಿಲ್ಲದೆ ಸಮರಸವಾಗಿದ್ದರು. ಮೇಲು ಕೀಳೆಂಬ ವೈಷಮ್ಯವಿಲ್ಲದೆ ವಾತ್ಸಲ್ಯದಿಂದಿದ್ದರು. ಚಿಕ್ಕ ವಟುಗಳು ಧರಿಸುವುದು ಬಿಳಿಯ ಕಪನಿಗಳು, ಸಾಧಕರು ಧರಿಸುವುದು ಕಾವಿಯ ಕಪನಿಗಳು, ನಿಲುವಂಗಿಗೆ ಕಪನಿಯೆಂದು ಅಲ್ಲಿ ಹೇಳುವ ವಾಡಿಕೆ. ಎಲ್ಲರು ಕೌಪೀನಧಾರಿಗಳು. ವಟುಗಳಿಗೆ ಕಿವಿಟೊಪ್ಪಿಗೆಗಳು. ಸಾಧಕರಿಗೆ ಮಸ್ತಕಪಾವುಡಗಳು. ಚೌಕ ವಸ್ತ್ರಗಳಿಗೆ ಮಸ್ತಕಪಾವುಡಗಳೆಂದು ಹೇಳಿಕೆ. ಇಷ್ಟು ಅಲ್ಲಿನವರ ಉಡುಪುಗಳು. ಕನ್ನಡ ಸಂಸ್ಕೃತ ಇಂಗ್ಲೀಷ್ ಭಾಷೆಗಳಲ್ಲಿ ಅಧ್ಯಯನ ಸಾಗಿತ್ತು. ಇಬ್ಬರು ಸಂಸ್ಕೃತ ಶಿಕ್ಷಣ ಕೊಡುವ ಶಾಸ್ತ್ರಿಗಳು. ಇಬ್ಬರು ಇಂಗ್ಲೀಷ್ ಓದಿಸುವ ಶಿಕ್ಷಕರು. ಒಬ್ಬರು ಕನ್ನಡಾಧ್ಯಾಪಕರು. ಹೀಗೆ ಒಟ್ಟು ಐದು ಮಂದಿ ಶಿಕ್ಷಕರಿದ್ದರು. ಅಭ್ಯಾಸ ಅತ್ಯಂತ ಭರದಿಂದ ಸಾಗಿತ್ತು. ದಿನಾಚರಣೆ ಕ್ರಮವಿಡಿದು ನಡೆದಿತ್ತು.

 

ಪ್ರತಿದಿನ ಬೆಳಗಿನ ನಾಲ್ಕುವರೆ ಗಂಟೆಗೆ ಜಾಗಟೆಯ ಝಣಝಣಲ್ ಶಬ್ದವಾಗುತ್ತಿತ್ತು. ಸುಪ್ರಭಾತ ಸಮಯ ಸುಪ್ರಸನ್ನ ವಾತಾವರಣ. ಆಗ ಎಲ್ಲರು ಶಿವನಾಮಸ್ಮರಣೆಯಿಂದ ಏಳುವುದು. ಎದ್ದೊಡನೆ ಒಂದೆಡೆಗೆ ಸೇರಿ ಹಾರ್ಮೊನಿಯಂ ಬಾಜಿಸುತ್ತ ಸುಶ್ರಾವ್ಯವಾಗಿ ಪ್ರಾರ್ಥನೆಯನೆಸಗುವುದು. ಬೆಳಗಾಗುವವರೆವಿಗು ಅವರವರ ಪಾಠಪ್ರವಚನಗಳನ್ನು ಪ್ರಶಾಂತ ಚಿತ್ತದಿಂದ ಓದುವುದು. ಅನಂತರ ಪ್ರಾತಃಶೌಚ ತೀರಿಸುವುದು. ಏಳು ಗಂಟೆಗೆ ಸರಿಯಾಗಿ ಮರಳಿ ಜಾಗಟೆ ಶಬ್ದವಾಗುತ್ತಿತ್ತು. ಎಲ್ಲರು ಸೇರಿ ಎಂಟು ಗಂಟೆಯವರೆವಿಗು ಆಸನಗಳನ್ನು ಹಾಕುವುದು. ಆಸನ ಹಾಕುವಲ್ಲಿ ಒಂದು ವಿಶಿಷ್ಟ ಪದ್ಧತಿಯಿತ್ತು; ಸಕ್ರಮವಿತ್ತು. ಮಾತಿಗೆ ಅವಕಾಶವಿಲ್ಲ. ಮನದೃಷ್ಟಿಗಳ ಹರಿದಾಟವಿಲ್ಲ. ಸಂದರ್ಭೋಚಿತವಾಗಿ ಊರ್ಧ್ವ, ಪೌರ್ಣಿಮ, ನಾಸಿಕಾಗ್ರ, ಅಮಾವಾಸ್ಯ ದೃಷ್ಟಿಗಳನ್ನಿಡಬೇಕು. ಧ್ಯಾನ ಅವ್ಯಾಹತವಾಗಿ ನಡೆದಿರಬೇಕು. ಅಂಗವೆಲ್ಲ ಆಸನಗಳಲ್ಲಿ ಅನುಷಂಗವಾಗಿರಬೇಕು. ಅಂತರಂಗ ಆತ್ಮಸಂಗವಾಗಿರಬೇಕು.

 

ಎಂಟು ಹತ್ತು ನಿಮಿಷಕ್ಕೆ ಪಾಠ ಪ್ರವಚನಗಳು ಪ್ರಾರಂಭವಾಗಿ ಹತ್ತು ಹತ್ತುವವರೆಗೆ ಪೂರೈಸುವುದು. ಮುಂದೆ ಹನ್ನೆರಡು ಗಂಟೆಯವರೆವಿಗು ತೊರೆಯ ತಿಳಿ ನೀರಿನಲ್ಲಿ ಎಲ್ಲರು ಮೀಯುವುದು. ಮಡಿಯುಟ್ಟು ಮನವಿಟ್ಟು ಶಿವಪೂಜೆ ಪಾದಪೂಜೆಗಳ ಮಾಡುವುದು. ಪಾದೋದಕ ಪ್ರಸಾದಗಳ ಕೊಂಬುವುದು. ಮಧ್ಯಾಹ್ನ ಒಂದು ಗಂಟೆ ವಿಶ್ರಾಂತಿ, ಒಂದು ಗಂಟೆ ಶಿವಾನುಭವ. ಎರಡುಗಂಟೆಯಿಂದ ನಾಲ್ಕುವರೆವರೆವಿಗು ಪಾಠಗಳು. ಐದರವರೆವಿಗು ಸಾಯಂಶೌಚ.  ಆರರವರೆವಿಗು ಪುರಾಣಶ್ರವಣ; ಭಜನೆ, ರಾತ್ರಿ ಎಂಟುವರೆವರೆವಿಗು ಮರಳಿ ಸ್ನಾನ ಶಿವಪೂಜಾದಿಗಳು. ಆಮೇಲೆ ಓದಿಕೊಂಡು ಹತ್ತುಗಂಟೆಗೆ ದೇವ ಪ್ರಾರ್ಥನೆ ಮಾಡಿ ಮಲಗುವುದು ಇದು ಅಲ್ಲಿನ  ಕಾರ್ಯಕ್ರಮ.

 

ಪ್ರಾರ್ಥನೆ ಪುರಾಣ ಶಿವಾನುಭವ ಮುಂತಾದ ಸನ್ನಿವೇಶಗಳಲ್ಲಿ ಒಂದೆಡೆಯಲ್ಲಿ ಸೇರಿ ಸಾಲುಸಾಲಾಗಿ ಕುಳಿತುಕೊಳ್ಳುವ ಆ ದೃಶ್ಯವನ್ನು ನೋಡಿದರೆ ಸಾಕ್ಷಾತ್ ಕೈಲಾಸವನ್ನು ಕಂಡಂತಾಗುತ್ತಿತ್ತು. ಒಂದೇ ಬಣ್ಣದ ಒಂದೇ ಬಗೆಯ ಉಡುಗೆಯ ಆ ನೋಟ ಚಿತ್ತಾಕರ್ಷಕವಾಗಿರುತ್ತಿತ್ತು. ಎಲ್ಲರದು ಒಂದೇ ಸತ್ಕರ್ಮ ಒಂದೇ ಸದ್ಧರ್ಮ; ಯಾವಾಗಲು ಎಲ್ಲರಿಗು ಒಂದೇ ಧ್ಯಯ; ಒಂದೇ ಶೇಯ ಎಲ್ಲರು ಮನೆ ಮಾರು ಊರು ಕೇರಿ ಬಂಧುಬಳಗಗಳನ್ನು ಬಿಟ್ಟು ಸನ್ಯಾಸಕ್ಕೆ ಮೀಸಲಾದವರು. ಪೂರ್ವಾಶ್ರಮದ ಹಂಗನ್ನು ಹಳಚಿದವರು. ಜನ್ಮದಾತರಾದ ಜನನಿ ಜನಕರನ್ನು ನೋಡುವುದು ಒಂದೆಡೆಗಿರಲಿ ಹೆಸರುಗಳನ್ನು ಯಾರೂ ಹೇಳುವಂತಿಲ್ಲ.  ಅರಿಯದವರು ಯಾರಾದರು ಕೇಳಿದರೆ ತಾಯಿ ಚಿಚ್ಛಕ್ತಿಯೆಂತಲು ತಂದೆ ಕುಮಾರ ಸ್ವಾಮಿಗಳೆಂತಲು ವಟುಗಳು ಹೇಳುವ ರೂಢಿಯಾಗಿತ್ತು. ಹಣ ತರಿಸುವಂತಿಲ್ಲ; ಬಳಸುವಂತಿಲ್ಲ, ಪೂರ್ವಾಶ್ರಮ ನಿರಸನದೊಡನೆ ಪೂರ್ವಾಶ್ರಮ ನಿರಸನವು ಜಾರಿಯಲ್ಲಿ ಬರಬೇಕೆಂಬ ಬಯಕೆ. ಅದರಂತೆ ಅಲ್ಲಿಯ ನಡೆವಳಿಕೆ.

 

ಉಪ್ಪು ಹುಳಿ ಖಾರ-ಎಣ್ಣೆಗಳಿಲ್ಲದ ಸಪ್ಪೆ ಆಹಾರ. ಅವರೆ ಹುರುಳಿ, ಕುಂಬಳಕಾಯಿ, ಮುಳ್ಳುಗಾಯಿ, ಜೋಳ, ರಾಗಿ ಮುಂತಾದ ತಾಮಸಾಹಾರಗಳಿಗೆ ಅಲ್ಲಿ ಎಡೆಯಿಲ್ಲ. ಅಕ್ಕಿ, ತೊಗರಿ, ಹೆಸರು, ಗೋಧಿ, ಹಾಲು, ತುಪ್ಪ ಮುಂತಾದ ಸಾತ್ವಿಕಾಹಾರದ ಕಟ್ಟಿಗೆ ಎಲ್ಲರು ಒಳಪಟ್ಟಿರಬೇಕು. ಕೆಲವರು ಪೂರ್ವಾಶ್ರಮದ ಹೆಸರುಗಳು ಚೆನ್ನಾಗಿ ಇಲ್ಲದಿದ್ದರೆ ಅವನ್ನು ಬಿಟ್ಟು ಬೇರೆ ಹೆಸರುಗಳನ್ನು ಇಡುತ್ತಾರೆ. ಹೆಸರಿನ ಮುಂದೆ ಆರ್ಯ, ಆಚಾರ್ಯ, ದೇವ, ದೇಶಿಕ ಎಂಬ ಶ್ರೇಷ್ಠ ಸೂಚಕ ಶಬ್ದಗಳನ್ನು ಜೋಡಿಸುತ್ತಾರೆ. ಆಸನ, ಅಭ್ಯಾಸ, ಅನುಷ್ಠಾನ, ಅನುಭವ ಇವು ಅಲ್ಲಿ ಕಲಿಯತಕ್ಕ ಮುಖ್ಯ ವಿಷಯಗಳು ಇವನ್ನು ಎಲ್ಲರು ಅಭ್ಯಾಸಿಸಲು ಮನಃಪೂರ್ತಿಯಾಗಿ ಪ್ರಯತ್ನಿಸಬೇಕು. ಫಲಾಫಲ ಅವರ ಕರ್ತವ್ಯ ಕೋಟಿಗೆ ಸೇರಿದ್ದು. ಈ ರೀತಿ ಅಲ್ಲಿನ ಅಭ್ಯಾಸಗಳನ್ನು ಆಗುಮಾಡಿಕೊಂಡವರು ಮಠಾಧಿಪತ್ಯವನ್ನು ವಹಿಸಿ ಧರ್ಮ, ವಿದ್ಯೆ ಆಚಾರ, ವಿಚಾರ, ಪ್ರಚಾರ ಮಾಡುವುದು ಅವರ ಕರ್ತವ್ಯ ಸಂಸ್ಥೆಯ ನೇಮ ನೀತಿಗಳಂತೆ ಇರುವುದೇ ಅವರಿಗೆ ವಾಸ್ತವ್ಯ.

 

ಇನ್ನೊಂದೆಡೆಯಲ್ಲಿ ಶ್ರೀ ವಿಜಯಮಹಾಂತೇಶ್ವರ ಪುಸ್ತಕ ಭಂಡಾರ. ಅಲ್ಲಿ ಪುರಾತನ ಪುಸ್ತಕಗಳ ಸಂಗ್ರಹ ಸಂಶೋಧನೆ ಅವಿಶ್ರಾಂತವಾಗಿ ಸಾಗುತ್ತಿತ್ತು. ಅದಕ್ಕಾಗಿ ತಜ್ಞರಾದ ಒಬ್ಬಿಬ್ಬರು ಪಂಡಿತರಿದ್ದರು. ಸಂಶೋಧನೆಯಲ್ಲಿ ಸ್ವಾಮಿಗಳು ಸ್ವತಃ ಭಾಗವಹಿಸುತ್ತಿದ್ದರು. ಲೋಪದೋಷಗಳನ್ನು ಸರಿಪಡಿಸುತ್ತಿದ್ದರು. ಸ್ವಾಮಿಗಳವರಿಂದ ಪರಿಷ್ಕೃತವಾದ ಗ್ರಂಥಗಳೆಲ್ಲ ಪ್ರಕಟವಾಗದಿರುವುದೊಂದು ದೊಡ್ಡ ಕೊರತೆ ! ಈ ಕೊರತೆಯನ್ನು ತುಂಬಿ ತರುವ ಕೆಲಸ ಆಗಬೇಕಾಗಿದೆ.

 

ವೈದ್ಯ ಸಂಶೋಧನವು ಇನ್ನೊಂದೆಡೆಯಲ್ಲಿ ನಡೆದಿತ್ತು. ಕೆಲವು ಮಂದಿ ಸಾಧಕರಿಗೆ ಆಯುರ್ವೇದದ ಜ್ಞಾನವನ್ನು ಸ್ವಾಮಿಗಳವರು ಮಾಡಿಕೊಟ್ಟರು. ಸ್ವಾಮಿಗಳವರು ಸಾಯಂಕಾಲ ಗಾಳಿಗೆ ದಯಮಾಡಿಸಿದರೆ ಸುಮ್ಮನೆ ಅದೆಂದಿಗು ಹೋಗುತ್ತಿರಲಿಲ್ಲ. ಬೆಟ್ಟದ ದಾರಿಗಳಲ್ಲಿ ದಯಮಾಡಿಸುತ್ತಿರುವಾಗ ಅಕ್ಕಪಕ್ಕದಲ್ಲಿರುವ ಗಿಡಮರಗಳನ್ನು ಗೆಡ್ಡೆಗೆಣಸುಗಳನ್ನು, ಬಳ್ಳಿ ಬೇರುಗಳನ್ನು ಶೋಧಿಸುತ್ತ ಹೋಗುತ್ತಿದ್ದರು. ಯಾವುದಾದರೊಂದು ವಿಶೇಷ ವನಸ್ಪತಿಯನ್ನು ತಾರದೆ ಮಠಕ್ಕೆ ಮರಳುತ್ತಿರಲಿಲ್ಲ. ಹೀಗಾಗಿ ವನೌಷಧಿಗಳ ಸಂಶೋಧನವು ದಿನದಿನಕ್ಕೆ ಹೆಚ್ಚುತ್ತಿತ್ತು. ವೈದ್ಯ ವಿದ್ವಾಂಸರಿಗು ಸಹ ಅಸಾಧ್ಯವಾದ ಕೆಲವು ರೋಗಗಳನ್ನು ಸ್ವಾಮಿಗಳವರು ತಮ್ಮ ಔಷಧಿಗಳಿಂದ ವಾಸಿಮಾಡುತ್ತಿದ್ದರು. ಪಾಶ್ಚಾತ್ಯ ಡಾಕ್ಟರುಗಳಿಂದಲು ಸಾಧ್ಯವಾಗದ ಬಿಳಪು (ತೊನ್ನು) ಕಳೆವ ‘ಧೃತಿ’ಯೊಂದನ್ನು ಕಂಡು ಹಿಡಿದು ಅನೇಕ ರೋಗಿಗಳಿಗೆ ಪ್ರಯೋಗಿಸಿ ಫಲಿತಾಂಶ ಪಡೆದರು. ಅನೇಕ ವಿದ್ಯಾರ್ಥಿಗಳಿಗೆ ಸ್ವತಃ ವೇತನವನ್ನು ಕೊಟ್ಟು ಸಾತಾರೆಯ ಆರ್ಯಾಂಗ್ಲ ವಿದ್ಯಾಲಯದಲ್ಲಿ ವೈದ್ಯವಿದ್ಯಾಭ್ಯಾಸವನ್ನು ಮಾಡಿಸಿದರು. ಹೀಗೆ ವೈದ್ಯಭಾಗದ ಸೇವೆಯು ಸಂಸ್ಥೆಯಿಂದ ಸಾಕಷ್ಟು ಸಲ್ಲಿದೆ.

 

ಮತ್ತೊಂದೆಡೆಯಲ್ಲಿ ಭಸ್ಮ ಲಿಂಗಗಳ ಕಾರ್ಮಿಕಾಗಾರ. ಇದಕ್ಕಾಗಿಯೆ ಒಂದು ಮಾಹೇಶ್ವರ ಕುಟುಂಬವರ್ಗವನ್ನು ಅಲ್ಲಿಯೆ ತಂದಿರಿಸಿದ್ದರು. ಈ ವಿಷಯದಲ್ಲಿ ಸ್ವಾಮಿಗಳವರಿಗೆ ತುಂಬಾ ಕುತೂಹಲವಿತ್ತು. ಶುದ್ಧ ಭಸ್ಮಗಳ ಅಭಾವ ಹೆಚ್ಚಿಹೋಗಿತ್ತು. ಸಮಾಜದಲ್ಲಿ ಎಲ್ಲಿಯೂ ಮಾಡುತ್ತಿದ್ದಿಲ್ಲ. ಹಸುಗಳ ಸಗಣಿಯನ್ನು ಮಾತ್ರ ಉಪಯೋಗಿಸುತ್ತಿರಲಿಲ್ಲ. ಮಂತ್ರಶುದ್ಧಿ ಇದ್ದದ್ದು ಇಲ್ಲ. ಹೀಗಾಗಿ ಸ್ವಾಮಿಗಳು ಈ ವಿಷಯದಲ್ಲಿ ಹೆಚ್ಚು ಗಮನವಿತ್ತರು. ಸ್ವತಃ ಹೋಗಿ ಕ್ರಮವನ್ನು ಹೇಳಿ ಮಾಡಿಸುತ್ತಿದ್ದರು. ಅನೇಕ ದಿನಗಳ ಪರಿಶ್ರಮದ ಫಲವಾಗಿ ಶುದ್ಧವು ಶುಭ್ರವು ಆದ ಭಸ್ಮದಗಟ್ಟಿಗಳು ತಯಾರಾದವು. ಸ್ವಾಮಿಗಳವರು ಮೀರಿದ ಸಂತೋಷಪಟ್ಟರು.

ಎರಡನೆಯದಾಗಿ ಲಿಂಗಗಳ ವಿಷಯ. ಎಲ್ಲಿಯೂ ಪಂಚಸೂತ್ರಕ್ಕೆ ಸರಿಯಾಗಿ ಮಾಡುತ್ತಿರಲಿಲ್ಲ. ಮಟ್ಟಗಲ್ಲಿನ ಲಿಂಗಗಳ ಹೊರತು ಶುದ್ಧಶಿಲೆಯ ಲಿಂಗಗಳೇ ಇರಲಿಲ್ಲ. ಇತ್ತ ಪೀಠದವರು ಯಾರು ಗಮನಿಸಿರಲಿಲ್ಲ. ಇದು ಸಮಾಜಕ್ಕೆ ತೀರ ಅಗತ್ಯದ ಕೆಲಸವಾಗಿತ್ತು. ಇದನ್ನು ಕಂಡು ಸ್ವಾಮಿಗಳವರು ಸೂಕ್ತವಾದ ಶುದ್ಧವಾದ ಕಲ್ಲು ತರಿಸಿ ಪಂಚಸೂತ್ರಕ್ಕೆ ಸರಿಯಾಗಿ ಶಾಸ್ರೋಕ್ತವಾಗಿ ನಿರ್ಮಾಣಮಾಡಿಸಿದರು. ಲಿಂಗ ಕಲೆಯನ್ನು ನೆಲೆನಿಲ್ಲಿಸಿದರು. ಈಗಲು ಅನೇಕ ಕಡೆ ತಿಳಿಯದೆ ಸಿಕ್ಕ ಪೀಠಗಳನ್ನು ಧರಿಸುತ್ತಿದ್ದಾರೆ. ಇದು ಹೋದಷ್ಟು ಕ್ಷೇಮ. ಈ ರೀತಿಯಾಗಿ ಸ್ವಾಮಿಗಳವರು ಸಮಾಜಕ್ಕೆ ಅತ್ಯಗತ್ಯವಾದ ಶುದ್ಧ  ಭಸ್ಮ, ಲಿಂಗಗಳ ನಿರ್ಮಾಣ ಮಾಡಿ ಗುರುಲಿಂಗ ಜಂಗಮ ಭಸ್ಮಗಳ ಸುಧಾರಣೆಯ ಮೂಲಕರ್ತರಾದರು; ಮಹಾಪುಣ್ಯಶಾಲಿಗಳಾದರು.

 

ಬೇರೊಂದು ಕಡೆ ಕೃಷಿ ಕರ್ಮ. ಇದಕ್ಕಾಗಿ ಎಂಟು ಹತ್ತು ಎತ್ತುಗಳನ್ನು ಅಷ್ಟೆ ಮನುಷ್ಯರನ್ನು ಇರಿಸಿದ್ದರು. ಹಳೆ ಮಾಕೂಟದ ಬಳಿ ಒಂದು ಬಾಳೆಯ ಬನವನ್ನು ಹಾಕಿಸಿದ್ದರು. ಲಿಂಬೆ, ಮಾವು, ಈರಳೆ ಮೊದಲಾದ ಹಣ್ಣಿನ ಗಿಡಗಳನ್ನು ಬೆಳೆಯಿಸಿದ್ದರು. ಇದಕ್ಕೆ ತಕ್ಕ ವ್ಯವಸ್ಥೆಯನ್ನಿರಿಸಿದ್ದರು. ದಿನ್ನೆಯ ಭೂಮಿಯಲ್ಲಿ ಸಾಕಷ್ಟು ಬೆಳೆಯನ್ನು ತೆಗೆಯಿಸುತ್ತಿದ್ದರು. ಭೂಮಿಗೆ ನೀರುಣಿಸಿ ಹೆಚ್ಚು ಬೆಳೆಯಲು ನೀರಾವರಿ ಯೋಜನೆಗಳನ್ನು ಅನೇಕ ಸಲ ಮಾಡಿದರು. ಹೀಗೆ ಶಿವಯೋಗ ಮಂದಿರದಲ್ಲಿ ಅನೇಕ ಕಾರ್ಯಕಲಾಪಗಳು ನಡೆದವು.

 

ಇವನ್ನೆಲ್ಲ ನೋಡಿಕೊಳ್ಳಲು ಒಬ್ಬ ಮೇಲಾಧಿಕಾರಿಗಳು, ೩-೪ ಮಂದಿ ಬರವಣಿಗೆದಾರರು, ಅದಕ್ಕೆ ತಕ್ಕ ಲೆಕ್ಕ ಪತ್ರಗಳು. ಒಂದು ಅಂಚೆ ಮನೆಯ (ಪೋಷ್ಟಾಫೀಸ)ನ್ನು ಸಂಸ್ಥೆಗಾಗಿಯೆ ಗವರಮೆಂಟಿನಿಂದ ಪಡೆದಿದ್ದಾರೆ. ಶ್ರೀ ರಾಮಕೃಷ್ಣ ಪರಮಹಂಸರ ತತ್ವಗಳನ್ನು ಪ್ರಚಾರ ಮಾಡಲು ವಿವೇಕಾನಂದರು ‘ರಾಮಕೃಷ್ಣಾಶ್ರಮ’ವನ್ನು ಸ್ಥಾಪಿಸಿದಂತೆ ಕುಮಾರ ಸ್ವಾಮಿಗಳವರು ಮೇಲೆ ಕಂಡ ರೂಪುರೇಖೆಯ ಶಿವಯೋಗ ಮಂದಿರವನ್ನು ಸ್ಥಾಪಿಸಿ ಅಲ್ಲಿ ಅನೇಕ ದಿನಗಳಿದ್ದು ಯೋಗ ವಿದ್ಯೆ, ಆಚಾರ-ವಿಚಾರ, ಪುರಾಣ-ಪ್ರವಚನಗಳನ್ನು ಪ್ರಾರಂಭಿಸಿ ಅಭ್ಯಾಸಿಗಳಿಗೆ ತಕ್ಕ ಏರ್ಪಾಟುಗಳನ್ನು ಮಾಡಿ ಮುಂದಿನ ಆ ಸಂಸ್ಥೆಯ ಅಭಿವೃದ್ಧಿಗಾಗಿಯು ಸಾಮಾಜಿಕರಿಗೆ ಧರ್ಮ ನೀತಿ ಮಿತವ್ಯಯ ಮೈತ್ರಿಭಾವ ಮುಂತಾದವುಗಳನ್ನು ಬೋಧಿಸುವದಕ್ಕಾಗಿಯು ನಾಡಿನಲ್ಲಿ ಸಂಚರಿಸುತ್ತಿದ್ದರು. ಅವರ ಜೀವನ ಬಹುಭಾಗ ಪ್ರಯಾಣಮಯವಾಗಿತ್ತು. ಒಂದೆಡೆಗಿದ್ದು ವಿಶ್ರಾಂತಿ ಪಡೆದ ದಿನಗಳು ತೀರ ಕಡಿಮೆ. ಇಲ್ಲವೆಂದರು ಅಲ್ಲಗಳೆಯುವಂತಿಲ್ಲ. ಅವರಿರಬೇಕೆಂದರು ಅವರ ಮನಸ್ಸಿರದು. ಅವರು ಹಮ್ಮಿಕೊಂಡ ಕಾರ್ಯಬಾಹುಲ್ಯವು ಅವರನ್ನು ಇರಲೀಸದು.

ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ್ಯ ಸಂಸ್ಥಾನಮಠ ಗದಗ

 

 

ರಾಗದ್ವೇಷಗಳು ವ್ಯಕ್ತಿಯ ಅಧಃಪತನಕ್ಕೆ ಕಾರಣವಾಗುವುದರಿಂದ ಇವುಗಳಿಗೆ ಹೀನಗುಣಗಳೆಂದು ಕರೆಯಲಾಗಿದೆ. ‘ರಾಗ’ದ ಶಾಬ್ದಿಕ ಅರ್ಥ ಪ್ರೀತಿ, ಒಲವು, ಆಸಕ್ತಿ ಎಂದಿದ್ದರೂ ಅದನ್ನು ‘ವಿಷಯ ವ್ಯಾಮೋಹ’ ಎಂಬರ್ಥದಲ್ಲಿಯೇ ಹೆಚ್ಚಾಗಿ ಬಳಸಲಾಗುತ್ತದೆ. ಸ್ವಾರ್ಥ ಪ್ರೇರಿತನಾದ ವ್ಯಕ್ತಿಯು ಮತ್ಸರ ಭಾವದಿಂದ ಇನ್ನೊಬ್ಬರೊಂದಿಗೆ ಸಾಧಿಸುವ ಹಗೆತನಕ್ಕೆ ‘ದ್ವೇಷ’ ಎನ್ನುತ್ತೇವೆ. ರಾಗಕ್ಕೆ ಮೂಲ ವಿಷಯೇಚ್ಛೆ. ‘ವಿಷಯ’ವೆಂದರೆ ವ್ಯಕ್ತಿಯನ್ನು ಮೋಹ ಪಾಶದಲ್ಲಿ ಬಂಧಿಸುವ ಲೌಕಿಕ ಭೋಗ ಭಾಗ್ಯಗಳು. ವಿಷಯ ಸುಖಕ್ಕೆ ಮರುಳಾದ ವ್ಯಕ್ತಿಯ ಮನಸ್ಸು ವಿಕಾರಕ್ಕೆ ಒಳಗಾಗುತ್ತದೆ. ಮನಸ್ಸು ವಿಕಾರಕ್ಕೊಳಗಾದಾಗ ದ್ವೇಷಾಸೂಯೆಗಳು ಹುಟ್ಟಿಕೊಳ್ಳುತ್ತವೆ. ಆದ್ದರಿಂದ ರಾಗದ್ವೇಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ತೋರುತ್ತವೆ.

 

ರಾಗದಿಂದ ಮನುಷ್ಯನಲ್ಲಿ ಆಶೆ ಆಮಿಷಗಳು ಹುಟ್ಟಿಕೊಳ್ಳುತ್ತವೆ. ಅಹಂಕಾರ ಅವಿವೇಕಗಳು ಹೆಚ್ಚುತ್ತವೆ. ಮದ ಮತ್ಸರಗಳು ಮಿತಿ ಮೀರುತ್ತವೆ. ಆಗ ಮನುಷ್ಯ ಭ್ರಾಂತಿಗೊಳಗಾಗುತ್ತಾನೆ. ವಿಷಯ ಭೋಗದಿಂದಲೇ ತನಗೆ ಸುಖ ದೊರೆವುದೆಂದು ಭಾವಿಸುತ್ತಾನೆ. ತನ್ನತನದ ಅರಿವು ಕಳೆದುಕೊಳ್ಳುತ್ತಾನೆ. ಎಲ್ಲವೂ ತನಗೇ ಬೇಕೆಂಬ ಸ್ವಾರ್ಥಲಾಲಸೆಗಳಿಂದ ಕೂಡಿ ಎಲ್ಲರನ್ನೂ ದ್ವೇಷಿಸಲು ಪ್ರಾರಂಭಿಸುತ್ತಾನೆ. ಹೀಗೆ ರಾಗದಿಂದ ದ್ವೇಷವೂ, ರಾಗದ್ವೇಷಗಳಿಂದ ಮನೋವಿಕಾರವೂ, ಮನೋವಿಕಾರದಿಂದ ಭವಬಂಧನವೂ ಉಂಟಾಗುತ್ತದೆ. ರಾಗದ್ವೇಷಗಳು ಮನಸ್ಸಿನ ಶಕ್ತಿಯನ್ನು ಹಾಳು ಮಾಡುತ್ತವೆ. ಆಗ ಮನಸ್ಸು ವಿಷಯವಾಸನೆಯಲ್ಲಿ ಮುಳುಗಿಹೋಗುತ್ತದೆ. ವಿಷಯ ವಾಸನೆಯಿಂದ ಕೂಡಿದ ಮನಸ್ಸುಳ್ಳ ವ್ಯಕ್ತಿ ಸದಾ ಅನ್ಯರನ್ನು ದ್ವೇಷಿಸುತ್ತಾನೆ. ತನ್ನ ಹಿತಕ್ಕಾಗಿ ಅನ್ಯರ ಹಿತ ಬಲಿಕೊಡುತ್ತಾನೆ. ತನ್ನ ಸುಖ ಸಂತೋಷಕ್ಕಾಗಿ ಅನ್ಯರನ್ನು ಸಂಕಟಕ್ಕೀಡುಮಾಡುತ್ತಾನೆ. ಕೊನೆಗೆ ತಾನೂ ಹಾಳಾಗುತ್ತಾನೆ. ಇತರರನ್ನೂ ಹಾಳುಮಾಡುತ್ತಾನೆ.

 

ದ್ವೇಷದ ಕಿಚ್ಚು ತಂದೆ ಮಕ್ಕಳಲ್ಲಿ, ಅಣ್ಣ-ತಮ್ಮಂದಿರಲ್ಲಿ, ಪತಿ ಪತ್ನಿಯರಲ್ಲಿ, ಗುರು-ಶಿಷ್ಯರಲ್ಲಿ ಹೀಗೆ ಎಲ್ಲಿಯಾದರೂ ಹೊತ್ತಿಕೊಳ್ಳಬಲ್ಲದು. ಈ ದ್ವೇಷ ಎಂಬ ಕಿಚ್ಚು ಒಬ್ಬರಿಂದ ಇನ್ನೊಬ್ಬರನ್ನು ಅಗಲಿಸಿ ಕಷ್ಟಕ್ಕೆ ಗುರಿಪಡಿಸುವುದು. ಅಂತೆಯೇ ಉಪನಿಷತ್ಕಾಲದ ಗುರುಶಿಷ್ಯರು ‘ಮಾ ವಿದ್ವಿಷಾವಹೈ’ ಅಂದರೆ ‘ಹೇ ದೇವರೆ! ನಾವಿಬ್ಬರೂ ಪರಸ್ಪರ ಎಂದೂ ದ್ವೇಷಿಸದಂತೆ ಮಾಡು’ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುವುದನ್ನು ಕಾಣುತ್ತೇವೆ. ಅಣ್ಣತಮ್ಮಂದಿರ ದ್ವೇಷಕ್ಕೆ ಸಂಬಂಧಿಸಿದ ಕಾಲ್ಪನಿಕ ಕಥೆಯೊಂದು ಹೀಗಿದೆ: ಇಬ್ಬರು ಅಣ್ಣ ತಮ್ಮಂದಿರಲ್ಲಿ ಸಂಪತ್ತಿನ ವಿಷಯವಾಗಿ ದ್ವೇಷ ಹುಟ್ಟಿಕೊಂಡಿತು. ಇಬ್ಬರೂ ಒಬ್ಬರಿಗಿಂತ ಒಬ್ಬರು ಹೆಚ್ಚು ಶ್ರೀಮಂತರಾಗುವುದಕ್ಕಾಗಿ ದೇವರಿಂದ ವರ ಪಡೆಯಲು ಕಾಡಿಗೆ ತೆರಳಿ ಉಗ್ರ ತಪವನ್ನಾಚರಿಸಿದರು. ಇವರ ತಪಸ್ಸಿಗೆ ಮೆಚ್ಚಿದ ಶಿವನು ಮೊದಲು ತಮ್ಮನ ಹತ್ತಿರ ಬಂದು ವರ ಕೇಳಲು ಹೇಳಿದನು. ಆಗ ತಮ್ಮನು ‘ನಾನು ಎಷ್ಟು ಸಂಪತ್ತನ್ನು ಕೇಳಿದರೂ ಅದಕ್ಕಿಂತ ಹೆಚ್ಚು ಸಂಪತ್ತನ್ನು ನನ್ನ ಅಣ್ಣ ಕೇಳುವ ಸಾಧ್ಯತೆ ಇರುವುದರಿಂದ ಅಣ್ಣನಿಗೆ ಏನು ಕೊಡುವೆಯೋ ಅದಕ್ಕೆ ದುಪ್ಪಟ್ಟು ತನಗೆ ಬೇಕೆಂದು ಶಿವನನ್ನು ಕೇಳಿದನು. ತಮ್ಮನಿಗೆ ತಥಾಸ್ತು ಎಂದು ಹೇಳಿ ಅಣ್ಣನ ಹತ್ತಿರ ಹೋದ ಶಿವನು ವರ ಕೇಳಿಕೊಳ್ಳಲು ಹೇಳಿದನು. ಆಗ ಅಣ್ಣನು ‘ನನ್ನ ತಮ್ಮನಿಗೆ ಏನು ವರ ಕೊಟ್ಟಿರುವೆ?’ ಎಂದು ಶಿವನನ್ನು ಕೇಳಿದ. “ನೀನು ಏನು ಬೇಡಿಕೊಳ್ಳುವೆಯೋ ಅದರ ದುಪ್ಪಟ್ಟು ಅವನಿಗೆ ಕೊಡುವುದಾಗಿ ವರ ಕೊಟ್ಟಿರುವೆ’ ಎಂದು ಶಿವ ಹೇಳುತ್ತಾನೆ. ಇದನ್ನು ಕೇಳಿ ದ್ವೇಷದಿಂದ ಕುದಿದ ಅಣ್ಣ ‘ಹಾಗಾದರೆ ನನ್ನ ಒಂದು ಕಣ್ಣು ಕಾಣದಂತಾಗಲಿ’ ಎಂದು ಶಿವನಲ್ಲಿ ವರ ಕೇಳಿದ. ಶಿವನು ‘ತಥಾಸ್ತು’ ಎಂದು ಹೇಳಿದ ತಕ್ಷಣ ಅಣ್ಣನ ಒಂದು ಕಣ್ಣು, ತಮ್ಮನ ಎರಡೂ ಕಣ್ಣುಗಳು ಕಾಣದಂತಾದವು. ಇದು ರಾಗದ್ವೇಷಗಳ ಪರಿಣಾಮ.

ರಾಗದ್ವೇಷಗಳು ಎಂತಹ ಬಲ್ಲಿದರನ್ನೂ ದುಃಖಕ್ಕೀಡುಮಾಡದೆ ಬಿಡವು. ಭವಭವಾಂತರದ ಸುಳಿಗೆ ಸಿಲುಕುವಂತೆ ಮಾಡುವುದೇ ಅವುಗಳ ಕೆಲಸ. ರಾಗದ್ವೇಷಗಳ ಈ ಮಾಯಾಪ್ರಪಂಚದಿಂದ ಬಿಡುಗಡೆ ಹೊಂದಲು ಪರಶಿವಜ್ಞಾನವನ್ನು ಸಂಪಾದಿಸಬೇಕಾದುದು ಅನಿವಾರ್ಯ.

ಡಾ||  ಸಿ .ನಾಗಭೂಷಣ

 

ವಚನಸಾಹಿತ್ಯ ವಾಹಿನಿಯ ಮೂರು ಘಟ್ಟಗಳಲ್ಲಿ ಒಂದಾದ ಬಸವೋತ್ತರ ಯುಗದಲ್ಲಿ ಪ್ರಾತಿನಿಧಿಕ ವಚನಕಾರರಾಗಿದ್ದಾರೆ. | ಹನ್ನೆರಡನೇ ಶತಮಾನದ ಬಸವಾದಿ ಪ್ರಮಥರ ವಚನಗಳಿಂದ ಪ್ರಭಾವಿತರಾಗಿ ವಚನಗಳನ್ನು ರಚಿಸಿರುವುದರ ಜೊತೆಗೆ ಸ್ವಂತಿಕೆಯ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳು ಬಸವಯುಗದ ವಚನ ಸಾಹಿತ್ಯದ ಸಮಗ್ರ ಸ್ವರೂಪ ಲಕ್ಷಣಗಳನ್ನು ಪ್ರತಿನಿಧಿಸುತ್ತವೆ ಮತ್ತು ಪೂರ್ವದ ವಚನಕಾರರ ಪರಂಪರೆಯನ್ನು ಮುಂದುವರಿಸಿವೆ.

 

ಅಖಂಡೇಶ್ವರ ವಚನಗಳ ಕರ್ತೃತ್ವದ ಬಗೆಗೆ, ಆರ್. ನರಸಿಂಹಾಚಾರ್ಯರು ತಮ್ಮ ಕವಿಚರಿತೆಯಲ್ಲಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ನಿರಾಲಂಬ ಶರಣನ ಕಾಲ ೧೭೦೦. ಇವನು ವೀರಶೈವ ಕವಿ. ಇವನನ್ನು ಶ್ರೀಮತ್ಪರಮಹ೦ಸ ಪರಿವ್ರಾಜಕ ಸದ್ಗುರು ಸಂಪ್ರದಾಯಕ ಸಿದ್ಧಯೋಗಿಂದ್ರರೆಂದು ಹೇಳಿದ್ದಾರೆ. ಕವಿಚರಿತಕಾರರನ್ನು ಅನುಸರಿಸಿ ರಂ. ಶ್ರೀ. ಮುಗಳಿಯವರು ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳೆಂದು ಹೇಳದೆ ನಿರಾಲಂಬ ಶರಣನಿಗೆ ಷಣ್ಮುಖ ಸ್ವಾಮಿಗಳೆಂದು ಕರೆಯುತ್ತ ಬಂದಿದ್ದಾರೆಂದು ಹೇಳಿದ್ದಾರೆ. ‘ನಿರಾಲಂಬಬಶರಣ’ ಎಂಬುದು ಷಣ್ಮುಖ ಸ್ವಾಮಿಗಳ ಹೆಸರನ್ನು ಪರ್ಯಾಯವಾಗಿ ಸೂಚಿಸಿರುವ ವ್ಯಕ್ತಿಸೂಚಕ ಪದವಾಗಿರದೆ ಅಧ್ಯಾತ್ಮದ ಉನ್ನತ ಸ್ಥರವನ್ನು ಸೂಚಿಸುತ್ತದೆ. ಲೋಕದಲ್ಲಿ ತೊಡಗುವ ಭಕ್ತ ಅನುಭಾವ ಮಾರ್ಗದಲ್ಲಿ ನಡೆದು ಅನುಭಾವಿ  ಶರಣನಾಗಿ ವಚನಗಳನ್ನು ಹೇಳುವಂತಹನಾಗುತ್ತಾನೆ.ಅಂತಹ ಭಕ್ತನ ಅನುಭಾವದ ಸ್ಥಿತಿಯನ್ನೇ ʼತೂರ್ಯನಿರಾಲಂಬ ಶರಣʼ ಎಂಬ ಪದವು ಧ್ವನಿಸುತ್ತದೆ.ಹೀಗಾಗಿ ಅಖಂಡೇಶ್ವರ ಅಂಕಿತದಲ್ಲಿ ವಚನಗಳನ್ನು ರಚಿಸಿರುವ ಕರ್ತೃ ನಿರಾಲಂಬ ಶರಣ ಎಂಬುದಕ್ಕಿಂತ    ಷಣ್ಮುಖ ಸ್ವಾಮಿಗಳು ಎಂದು ಪರಿಗಣಿಸುವುದೇ ಸೂಕ್ತ. ಷಣ್ಮುಖಸ್ವಾಮಿಗಳು ತನ್ನ ವಚನ ವೊಂದರಲ್ಲಿ ‘ಷಣ್ಮುಖನೆಂಬ ಗಣೇಶ್ವರನ ಹೃದಯ ಕಮಲದಲ್ಲಿ’ ಎಂದು ತಮ್ಮ ಹೆಸರನ್ನು ಹೇಳಿ ಹಂತಹಂತವಾಗಿ ಮುನ್ನಡೆದು ಹೇಗೆ ತಾವು ಐಕ್ಯ ಪದವಿಯನ್ನು ಹೊಂದಿದರೆಂಬಲ್ಲಿ ಅವರು ದಾಟಿದ ಅವಸ್ಥೆಗಳನ್ನು ಗಣೇಶ್ವರರ ಹೆಸರುಗಳಿಗೆ ಸಂಕೇತವಾಗಿಸಿ ಕೊಟ್ಟಿದ್ದಾರೆ. ಈ ಅಂಶವೂ ಸಹ ಅಖಂಡೇಶ್ವರ ವಚನಗಳ ಕರ್ತೃ ಷಣ್ಮುಖ ಸ್ವಾಮಿಗಳು ಎಂಬುದನ್ನು ಬೆಂಬಲಿಸುತ್ತದೆ.

 

ಅಖಂಡೇಶ್ವರ ವಚನಗಳು ಹೆಸರಿನ ಬಗೆಗೆ ವಚನಗಳನ್ನು ಸಂಪಾದಿಸಿದ ಸಂಪಾದಕರಲ್ಲಿ ಭಿನ್ನಾಭಿಪ್ರಾಯವಿದೆ. ಎಲ್ಲಾ ತಾಡವೋಲೆ ಮತ್ತು ಕೋರಿ ಕಾಗದಗಳಲ್ಲಿ “ಷಣ್ಮುಖ ಸ್ವಾಮಿಗಳು ನಿರೂಪಿಸಿದ ತೂರ್ಯ ನಿರಾಲಂಬ ಶರಣನ ಅರುಹಿನ ಷಟ್‌ಸ್ಥಲದ ವಚನ” ಎಂದು ಕಂಡುಬರುತ್ತದೆ. ‘ಅಖಂಡೇಶ್ವರ’ ಎಂಬುದು ಷಣ್ಮುಖ  ಶಿವಯೋಗಿಗಳ ವಚನಗಳ  ಅಂಕಿತವಾಗಿದೆ. ತಮ್ಮ ಗುರುವಿನ ಹೆಸರನ್ನೇ ಅಂಕಿತವನ್ನಾಗಿ ಬಳಸಿದ್ದಾರೆ. ಈ ವಚನಗಳನ್ನು ಬಸವಣ್ಣನ ವಚನಗಳು; ಅಲ್ಲಮನ ವಚನಗಳು ಎಂದು ಕರೆಯುವ ಹಾಗೆ ಷಣ್ಮುಖ ಶಿವಯೋಗಿಯ ವಚನಗಳು ಎಂದು ಕರೆಯಬೇಕು. ಆದರೆ ಕೆಲವು ಸಂಪಾದಕರು.

 

೧. ಶ್ರೀ ಷಣ್ಮುಖ ಶಿವಯೋಗಿ ಕೃತ ಅಖಂಡೇಶ್ವರ ವಚನಗಳು (ಶ್ರೀ ಸಿದ್ಧವೀರದೇವರು, ಹೊಸಮಠ) ೨. ಷಣ್ಮುಖ ಶಿವಯೋಗಿ ವಿರಚಿತ ಅಖಂಡೇಶ್ವರ ವಚನಗಳು (ವಿ. ಶಿವಾನಂದ) ಎಂಬ ಹೆಸರಿನಿಂದ ಸಂಪಾದಿಸಿದ್ದಾರೆ. ಈ ಬಗೆಗೆ ಚರ್ಚಿಸಿದ ಹ. ನಂ. ವಿಜಯಕುಮಾರರವರು ಪೂರ್ವದ ವಚನಗಳನ್ನು ಕರ್ತೃಗಳ ಹೆಸರಿನಲ್ಲಿ ಕರೆಯುವ ಹಾಗೆ ‘ಷಣ್ಮುಖ ಸ್ವಾಮಿಗಳ  ವಚನಗಳೆಂದೇ’ ತಾವು ಸಂಪಾದಿಸಿದ ವಚನಗಳಿಗೆ ಹೆಸರಿಟ್ಟಿದ್ದಾರೆ. ಇತ್ತೀಚಿಗೆ ಸಮಗ್ರ ವಚನ ಸಂಪುಟ ಮಾಲಿಕೆಯಲ್ಲಿಯ

ಸಂಕೀರ್ಣ ವಚನ ಸಂಪುಟ ೯ ರಲ್ಲಿ ಷಣ್ಮುಖ ಶಿವಯೋಗಿಯ ವಚನಗಳನ್ನು ‘ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನಗಳು ಎ೦ದು ಕರೆದಿದ್ದಾರೆ. ಹ. ನಂ. ವಿಜಯಕುಮಾರವರು ಸಂಪಾದಿಸಿದ ವಚನಗಳು ಸ್ಥಲ ಕಟ್ಟಿನ ವ್ಯಾಪ್ತಿಯಿಂದ ಹೊರಗುಳಿದಿವೆ. ಉಳಿದ ಸಂಪಾದಕರು ಸ್ಥಲಕಟ್ಟಿಗನುಗುಣವಾಗಿ ವಚನಗಳನ್ನು ಸಂಪಾದಿಸಿದ್ದಾರೆ.

ವಚನಗಳ ಸಂಪಾದನೆಯ ಇತಿಹಾಸ : ವಚನಗಳಲ್ಲೆಲ್ಲ ಪ್ರಪ್ರಥಮವಾಗಿ ಮುದ್ರಿತಗೊಂಡ ವಚನಗಳು ಷಣ್ಮುಖ ಶಿವಯೋಗಿಯ ಷಟ್‌ಸ್ಥಲ ವಚನಗಳೇ ಆಗಿವೆ. ವಚನ ಸಾಹಿತ್ಯದಲ್ಲಿ ಈ ವಚನಗಳಿಗೆ ತನ್ನದೇ ಆದ ಒಂದು ಐತಿಹಾಸಿಕ ಮಹತ್ವ ಇದೆ. ಆರಂಭದಲ್ಲಿ ಪ್ರಕಟಗೊಂಡ ಈ ವಚನಗಳು ಶಾಸ್ತ್ರೀಯವಾಗಿ ಸಂಪಾದಿಸಲ್ಪಟ್ಟಿರುವುಗಳಾಗಿರದೆ ಪೇಟೆ ಅಥವಾ ಬಾಜಾರು ಪ್ರತಿಯಾಗಿದ್ದವು. ಪ್ರಥಮಬಾರಿಗೆ ‘ಅಖಂಡೇಶ್ವರ ವಚನ’ ಶೀರ್ಷಿಕೆಯಡಿಯಲ್ಲಿ ‘ಉಮಾ ಮಹೇಶ್ವರಿ ಪ್ರೆಸ್’ ಚಿತ್ತೂರು ಇವರು ೧೮೮೪ರಲ್ಲಿ ಪ್ರಕಟಿಸಿದರು. ೧೮೯೦ರಲ್ಲಿ ‘ಗ್ರಂಥರತ್ನಾಕರ’ ಮುದ್ರಣ ಶಾಲೆಯವರು ಅಖಂಡೇಶ್ವರ ವಚನ ಶಾಸ್ತ್ರ ಹೆಸರಿನಲ್ಲಿ ೧೩೨ ವಚನಗಳನ್ನು ಪ್ರಕಟಿಸಿದರು. ೧೯೧೧ರಲ್ಲಿ ಶಿವಲಿಂಗಶೆಟ್ರುರವರು ೧೩೦ ವಚನಗಳನ್ನು ಅಖಂಡೇಶ್ವರ ವಚನಶಾಸ್ತ್ರ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸಿದರು. ೧೯೨೩ರಲ್ಲಿ ಬಳ್ಳಾರಿಯ ವೀರಶೈವ ಬುಕ್ ಡಿಪೋದವರು ೧೬೮ ವಚನಗಳನ್ನು ಅಖಂಡೇಶ್ವರ ವಚನವು ಹೆಸರಿನಲ್ಲಿ ಪ್ರಕಟಿಸಿದರು. ೧೯೫೯ರಲ್ಲಿ ಬಿ. ಜೆ. ಜಾನಕಿರವರು ಷಣ್ಮುಖ ಶಿವಯೋಗಿಗಳ ೮೫ ವಚನಗಳನ್ನು ಸಂಪಾದಿಸಿ ಪ್ರಕಟಿಸಿದರು. ಇವೆಲ್ಲವೂ ಜನಪ್ರಿಯ ಸ೦ಪಾದನ ಕೃತಿಗಳಾಗಿದ್ದು ಶಾಸ್ತ್ರೀಯ ಮತ್ತು ಶುದ್ಧಾತ್ಮಕವಾಗಿ ಸಂಪಾದಿತಗೊಂಡವುಗಳಲ್ಲ. ೧೯೪೪ರಲ್ಲಿ ಎರಡು ಹಸ್ತ     ಪ್ರತಿಗಳನ್ನುಪಯೋಗಿಸಿಕೊಂಡು ಸಿದ್ಧವೀರದೇವರು ಹೊಸಮಠರವರು ‘ಶ್ರೀ ಷಣ್ಮುಖ ಸ್ವಾಮಿಕೃತ ಅಖಂಡೇಶ್ವರ  ವಚನಗಳು’ ಹೆಸರಿನಲ್ಲಿ ಸಂಪಾದಿಸಿದರು. ಇದನ್ನು ಶ್ರೀ ಬಾಲಲೀಲಾ ಮಹಾಂತ ಶಿವಯೋಗೀಶ್ವರ ಗ್ರಂಥಮಾಲೆಯ ಎರಡನೆಯ ಕುಸುಮವಾಗಿ ಧಾರವಾಡದ ಮುರುಘಾಮಠದವರು ಪ್ರಕಟಿಸಿದ್ದರು. ೧೯೫೧ರಲ್ಲಿ ಈ ಕೃತಿ ಪುನರ್‌ಮುದ್ರಣ ಪಡೆಯಿತು. ಕೆ. ಎಸ್. ಪಾಟೀಲರವರು ಈ ಆವೃತ್ತಿಯ ಜೊತೆಗೆ ಒಂದು ತಾಳೆಯೋಲೆ ಪ್ರತಿ, ಎರಡು ಕಾಗದದ ಪ್ರತಿ, ಬಳ್ಳಾರಿಯ ಕಲ್ಲಚ್ಚಿನ ಪ್ರತಿಗಳನ್ನುಪಯೋಗಿಸಿಕೊಂಡು ೧೯೫೯ರಲ್ಲಿ ಮುರುಘಾಮಠದ ಮೂಲಕ ಪರಿಷ್ಕರಿಸಿ ಪ್ರಕಟಿಸಿದರು. ಈ ಮೂರು ಆವೃತ್ತಿಯಲ್ಲಿಯ  ಒಟ್ಟು ಪ್ರಕಟವಾದ ವಚನಗಳ ಸಂಖ್ಯೆ ೭೧೭, ಈ ಕೃತಿ ೧೯೮೬ರಲ್ಲಿ ನಾಲ್ಕನೇ ಪರಿಷ್ಕೃತ ಮುದ್ರಣದ ಹೆಸರಿನಲ್ಲಿ ಪ್ರಕಟವಾಗಿದೆ. ಆದರೆ ಮೂರನೆಯ ಮುದ್ರಣದಲ್ಲಿ ಇದ್ದಂತದ ವಿವರಕ್ಕಿಂತ ಯಾವುದೇ ಬದಲಾವಣೆ ಆಗಿಲ್ಲ. ಸಂಪಾದಕರ ಹೆಸರು ಮಾತ್ರ ಶ್ರೀ ನಿ.ಪ್ರ.ಸ್ವ, ಪ್ರಭುಸ್ವಾಮಿಗಳು ಎಂದು ಬದಲಾಗಿದೆ. ಹ. ನಂ. ವಿಜಯಕುಮಾರರವರು ೧೯೫೯ರ  ವೇಳೆಗೆ ಮೂರು ಆವೃತ್ತಿಗಳನ್ನು ಕಂಡಿದ್ದ ೭೧೭ಕ್ಕಿಂತ ಹೆಚ್ಚಿನ ವಚನಗಳು ದೊರೆಯದೆ ಇದ್ದರೂ ಹುಮನಾಬಾದಿನ ವೀರಶೈವ ಕಲ್ಯಾಣ ಪರಿಷತ್ತಿನವರ ಕೋರಿಕೆಯ ಮೇರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿ ವಿಭಾಗದಲ್ಲಿಯ ಎರಡು ತಾಳೆವೋಲೆ ಪ್ರತಿ ಮತ್ತು ೧ ಕಾಗದದ ಪ್ರತಿ ಹಾಗೂ ಶ್ರೀ ಸಿದ್ಧವೀರ ದೇವರು ಹೊಸಮಠ ಸಂಪಾದಿಸಿದ ಮುದ್ರಿತ ಆವೃತ್ತಿಯನ್ನು ಉಪಯೋಗಿಸಿಕೊಂಡು ೧೯೭೭ರಲ್ಲಿ ಶಾಸ್ತ್ರೀಯವಾಗಿ ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಈ ಸಂಪಾದನೆಯ ವಿಶೇಷ ಎಂದರೆ, ಉಳಿದ ಸಂಪಾದನ ಕೃತಿಗಳಲ್ಲಿಯ ಹಾಗೆ ‘ಶ್ರೀ ಷಣ್ಮುಖ ಸ್ವಾಮಿ ಕೃತ ಅಖಂಡೇಶ್ವರ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗದೆ ‘ಷಣ್ಮುಖ ಸ್ವಾಮಿಗಳ ವಚನಗಳು’ ಎಂಬ ಹೆಸರಿನಿಂದ ಪ್ರಕಟವಾಗಿದೆ. ೧೯೮೦ರಲ್ಲಿ ವಿ. ಶಿವಾನಂದರವರು ಷಣ್ಮುಖ ಶಿವಯೋಗಿಗಳು ಜೀವಿಸಿದ್ದ  ಪರಿಸರದಲ್ಲಿ

ದೊರೆತ ಹಸ್ತಪ್ರತಿಗಳನ್ನು ಸಂಗ್ರಹಿಸಿ ಅವುಗಳಲ್ಲಿಯ ಪ್ರಾದೇಶಿಕ ಮಹತ್ವವಿರುವದನ್ನು ಗುರುತಿಸಿ ಒಟ್ಟು ನಾಲ್ಕು ಕೋರಿ ಕಾಗದ ಪ್ರತಿಗಳು ಮತ್ತು ಈಗಾಗಲೇ ಪ್ರಕಟಗೊಂಡ ಎರಡು ಮುದ್ರಿತ ಪ್ರತಿಗಳನ್ನುಪಯೋಗಿಸಿಕೊಂಡು ಸಂಪಾದಿಸಿ ಕೊಟ್ಟಿದ್ದಾರೆ. ಷಣ್ಮುಖ ಶಿವಯೋಗಿಮಠದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ಪ್ರಕಟಿಸಿದ್ದಾರೆ. ಸಮಗ್ರ ವಚನ ಸಂಪುಟದ ಜನಪ್ರಿಯ ಆವೃತ್ತಿಯ ಮಾಲೆಯಲ್ಲಿ ಸಂಕೀರ್ಣ ವಚನ ಸಂಪುಟ – ೯ರಲ್ಲಿ ವೀರಣ್ಣ ರಾಜೂರವರು ಷಣ್ಮುಖ ಸ್ವಾಮಿಗಳ ಷಟ್‌ಸ್ಥಲ ವಚನ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಇದರಲ್ಲಿ ಹೆಚ್ಚಿನ ವಿಶೇಷ ಇಲ್ಲ. ಇದರ ಜೊತೆಗೆ ಅಖಂಡೇಶ್ವರ ಗ್ರಂಥ ಮಾಲೆಯಡಿಯಲ್ಲಿ ಅಖಂಡೇಶ್ವರ ವಚನ ಮಂಜರಿ ಹೆಸರಿನಲ್ಲಿ ೨೦೪ ವಚನಗಳು ಪ್ರಕಟವಾಗಿವೆ.

 

ಷಣ್ಮುಖ ಶಿವಯೋಗಿಗಳ ಕಾಲ

 

ಇವರ ಕಾಲದ ಬಗೆಗೆ ಹಲವಾರು ವಿದ್ವಾ೦ಸರು ಚರ್ಚಿಸಿ   ವ್ಯಕ್ತಪಡಿಸಿರುವ ಅಭಿಪ್ರಾಯದಲ್ಲಿ ಅಷ್ಟಾಗಿ ವಿರೋಧ ಕಂಡು ಬರುವುದಿಲ್ಲ. ವಿ. ಶಿವಾನಂದರವರು ಷಣ್ಮುಖ ಶಿವಯೋಗಿ ವಿರಚಿತ ಅಂಡೇಶ್ವರ ವಚನಗಳು, ಪ್ರಸ್ತಾವನೆಯಲ್ಲಿ ಇವರ ಕಾಲದ ಬಗೆಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಈ ಚರ್ಚೆಯಲ್ಲಿಯ ಎರಡು ಆಧಾರಗಳು ಇವರ ಕಾಲದ ಬಗೆಗೆ ಖಚಿತವಾದ ಮಾಹಿತಿಯನ್ನು ಒದಗಿಸುತ್ತವೆ.

೧.ಕಾಡಸಿದ್ಧೇಶ್ವರ ವಚನಗಳ ಟೀಕೆಯೊಂದು ದೊರೆತಿದ್ದು ಅದರಲ್ಲಿ ಷಣ್ಮುಖ ಶಿವಯೋಗಿ ಮತ್ತು ಅವರ ಸಮಕಾಲೀನ ವ್ಯಕ್ತಿಗಳ ಉಲ್ಲೇಖವನ್ನೊಳಗೊಂಡ ವಚನವೊಂದಿದೆ. ‘ನಿನ್ನಿನವರು ಇಂದಿನವರು ಹೋದ ದಾರಿ ಒ೦ದಲ್ಲದೆ ಎರಡಿಲ್ಲ. ನೋಡೆಂದನಯ್ಯಾ ಕಾಡಿನೊಳಗಾದ ಶಂಕರ ಪ್ರಿಯ ಚನ್ನಕದ೦ಬಲಿಂಗ ಪ್ರಭುವೆ. ಈ ವಚನದ ಟೀಕೆಯಲ್ಲಿ (ಕಾಡಸಿದ್ಧೇಶ್ವರ ವಚನ ಸಂ, ಹೊಳಲು ಚಂದ್ರಶೇಖರಶಾಸ್ತ್ರಿ, ಪು. ೪೭೮ ಹುಬ್ಬಳ್ಳಿ) ನಿನ್ನಿನವರು ಯಾರೆಂಬುದನ್ನು ಹೇಳಿ, ಇಂದಿನವರೆಂದಡೆ ತುರ್ತು ಈ ಕಲಿಯುಗದೊಳಗೆ ಸಿದ್ದೇಶ್ವರ ಸ್ವಾಮಿಗಳು. ಸಿಂಗಳಾಪುರದ ಬಸವರಾಜದೇವರು, ಘನಲಿಂಗದೇವರು, ಬೋಳಬಸವೇಶ್ವರ ಸ್ವಾಮಿಗಳು. ಶೀಲವಂತ ಚೆನ್ನಮಲ್ಲ ಸ್ವಾಮಿಗಳು. ಷಣ್ಮುಖಸ್ವಾಮಿಗಳು ಇಂತೀ ಗಣಂಗಳು ಲಿಂಗೈಕ್ಯ ರಾಗಿರುವಲ್ಲಿ ಗುಪ್ತರಾಗಿರುವರು ಎಂದಿದೆ. ಈ  ವ್ಯಾಖ್ಯಾನದಲ್ಲಿಯ ವಿವರದ ಪ್ರಕಾರ ಷಣ್ಮುಖ ಶಿವಯೋಗಿಗಳು ಕಾಡಸಿದ್ಧೇಶ್ವರರಿಗಿಂತ ಪ್ರಾಚೀನರು ಎ೦ಬುದಾಗಿ ತಿಳಿದುಬರುತ್ತದೆ. ಕಾಡಸಿದ್ದೇಶ್ವರರ  ಕಾಲ ೧೭೦೦-೨೫ ಎ೦ದು ಅಂದಾಜು ಮಾಡಲಾಗಿದೆ. ೧೭೦೦ಕ್ಕಿಂತ ಪೂರ್ವದಿಂದಲೂ ಜೀವಿಸಿದ್ದರು ಎಂಬುದಾಗಿ ತಿಳಿದುಬರುತ್ತದೆ.

 

೨. ಅಖಂಡೇಶ್ವರ ವಚನಗಳ ಪ್ರಾಚೀನ ಮುದ್ರಿತ ಪ್ರತಿಗಳಲ್ಲಿ ಶ್ರೀ ಷಣ್ಮುಖ ಸ್ವಾಮಿಗಳು ಶ್ರೀ ಬಸವಲಿಂಗದೇವರಿಗೆ ನಿರೂಪಿಸಿದ ಅರುಹಿನ ಷಡುಸ್ಥಲದ ವಚನ ಎಂಬ ಉಲ್ಲೇಖ ಇದ್ದು ಈ ಬಸವಲಿಂಗಸ್ವಾಮಿಗಳು ಕಲಬುರ್ಗಿಯ ಗದ್ದುಗೆ ಮಠದ ಮೂಲ ಸ್ಥಾಪಕರಾಗಿದ್ದು ಜೀವಿಸಿದ್ದ ಕಾಲ ೧೭೨೫ ಎಂದು ತಿಳಿದುಬಂದಿದೆ. ಈ ವೇಳೆ ಗಾಗಲೇ ಷಣ್ಮುಖ ಶಿವಯೋಗಿಗಳು ವೃದ್ಧರಾಗಿರಬೇಕು ಎ೦ದೆನಿಸುತ್ತದೆ.  ಜೇವರ್ಗಿಯ ಷಣ್ಮುಖ ಶಿವಯೋಗಿ ಮಠದ ಇತ್ತೀಚಿನ ಮಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ ಮಹಾಸ್ವಾಮಿಗಳು ತಮ್ಮ ಮಠದ ಹಳೆಯ ಕಾಗದಗಳಲ್ಲಿ ದೊರೆತ ಆಧಾರದ ಮೇಲೆ ಇವರ ಕಾಲವನ್ನು ಜನನ ೧೬೩೯ ಶೂನ್ಯ ಪಟ್ಟಕ್ಕೊಡೆಯರಾದ ಕಾಲ ಕ್ರಿ. ಶ. ೧೬೫೯. ಲಿಂಗೈಕ್ಯರಾದ ಕಾಲ ೧೭೧೧ ಎಂದು ನಿರೂಪಿಸಿ ಒಟ್ಟು ೧೬೩೯-೧೭೧೧ರ ವರೆಗೆ ೭೨ ವರ್ಷಗಳ ಕಾಲ ಜೀವಿಸಿದ್ದರು ಎಂಬ ಅಂಶವನ್ನು ಒದಗಿಸಿದ್ದಾರೆ. ಈ ಹೇಳಿಕೆಯನ್ನೇ ಸದ್ಯಕ್ಕೆ ಇಟ್ಟುಕೊಳ್ಳಬಹುದಾಗಿದೆ.

 

ಜೀವನ ಚರಿತ್ರೆ;

ಷಣ್ಮುಖ ಶಿವಯೋಗಿಗಳು ಜೀವಿಸಿದ್ದ ಕಾಲದಲ್ಲಾಗಲೀ ನಂತರದ ಕಾಲದಲ್ಲಾಗಲೀ ಅವರ ಚರಿತ್ರೆಯನ್ನು ಯಾವ ಕವಿಗಳೂ ಬರೆದ ಹಾಗೆ ಕ೦ಡು ಬರುವುದಿಲ್ಲ. ಅವರ ಚರಿತ್ರೆಯನ್ನು ತಿಳಿಯಲು ಇರುವ ಆಧಾರಗಳು, ಜೇವರ್ಗಿಯ ಮಠದಲ್ಲಿಯ ಕೆಲವು ಕಾಗದಗಳಲ್ಲಿಯ ವಿವರಗಳು ಐತಿಹ್ಯಗಳು ಜನಪ್ರತೀತಿ ಗಳಷ್ಟೇ ಆಗಿವೆ. ಇವುಗಳನ್ನು ಸಮರ್ಥಿಸಲು ಬಲವಾದ ಆಧಾರಗಳಿಲ್ಲವಾದರೂ ಒಪ್ಪಿಕೊಳ್ಳಲು ಅಡ್ಡಿಯಿಲ್ಲ. ಈ ಆಧಾರ ಗಳನ್ನೇ ಉಪಯೋಗಿಸಿಕೊಂಡು ಆಧುನಿಕರಲ್ಲಿ ಗುಂಜಿಹಳ್ಳಿ ಶ್ರೀ ಷಡಕ್ಷರ ಕವಿಯವರು ಶ್ರೀ ಷಣ್ಮುಖ ಶಿವಯೋಗೀಶ್ವರ ಕಾವ್ಯರತ್ನಾಕರ ಎಂಬ ಕಾವ್ಯವನ್ನು ರಚಿಸಿದ್ದಾರೆ. ವಿ. ಸಿದ್ಧ ರಾಮಣ್ಣರವರು ಷಟ್‌ಸ್ಥಲಜ್ಯೋತಿ ಷಣ್ಮುಖಸ್ವಾಮಿ ಎಂಬ ಸಂಗೀತ ಪ್ರಧಾನ ನಾಟಕ ರಚಿಸಿದ್ದಾರೆ. ಎಚ್. ತಿಪ್ಪೇರುದ್ರ ಸ್ವಾಮಿಯವರು ‘ಜಡದಲ್ಲಿ ಜಂಗಮ’ ಎ೦ಬ ಕಾದಂಬರಿಯನ್ನು ರಚಿಸಿದ್ದಾರೆ.

 

ಕಲಬುರ್ಗಿ ಜಿಲ್ಲೆಯʼ ಜೇವರ್ಗಿಯು’ ಇವರ ಜನ್ಮಸ್ಥಳ. ಜೇವರ್ಗಿಯ ಹಿರೇಗೌಡರ ಮನೆತನದಲ್ಲಿಯ ಮಲ್ಲಪ್ಪಶೆಟ್ಟಪ್ಪ ಮತ್ತು ದೊಡ್ಡಮ್ಮ ಎಂಬ ದಂಪತಿಗಳಿಗೆ ಪುತ್ರರಾಗಿ ಜನಿಸಿದರು. ಮು೦ದ ಅಖಂಡೇಶ್ವರ ಗುರುಗಳ ಪರಿಸರದಲ್ಲಿ ಬೆಳೆದರು. ಪ್ರಾರಂಭದಲ್ಲಿ ಚರಜ೦ಗಮರಾಗಿ ಲೋಕ ಸಂಚಾರ ಕೈಗೊಂಡು ಸಮಕಾಲೀನ ಜಡ ಸಮಾಜದಲ್ಲಿ ಜ೦ಗಮತೆಯನ್ನು ಮೂಡಿಸುತ್ತ ಪರ್ಯಟನೆ ಮಾಡುತ್ತ ಕೊನೆಗೆ ಜೇವರ್ಗಿ ಸಮೀಪದ ಕೋಳಕೂರ ಗ್ರಾಮದ ಭೀಮಾನದಿ ತಟಾಕದ ಭೀಮಕೊಳ್ಳದಲ್ಲಿ ನೆಲಸಿ ದೀರ್ಘ ತಪಸ್ಸು ಮಾಡಿ ಯೋಗಸಿದ್ಧಿ ಪಡೆದುಕೊಂಡು ವಚನ ರಚನೆ ಮಾಡಿದರು. ಇವರ ದಿವ್ಯ ಸಾಧನೆಯನ್ನು ಮನಗಂಡ ಅಖಂಡೇಶ್ವರ ಸ್ವಾಮಿಗಳು ಜೋಗಿಕೊಳ್ಳದಿಂದ ಜೇವರ್ಗಿಗೆ  ಬರಮಾಡಿಕೊಂಡು ಕ್ರಿ. ಶ. ೧೬೫೯ರಲ್ಲಿ ತಾವು ಸ್ಥಾಪಿಸಿದ್ದ ವಿರಕ್ತ ಮಠದ ಪಟ್ಟಗಟ್ಟಿದರು. ಹೀಗೆ ಇವರು ಅಖಂಡೇಶ್ವರರು ಸ್ಥಾಪಿಸಿದ ಮಠದ ಅಧಿಪತಿಯಾಗಿ ಧರ್ಮತತ್ತ್ವ ಬೋಧನೆ ಮಾಡುತ್ತ ಅಲ್ಲಿಯೇ ಜೀವಿಸಿದ್ದು ಐಕ್ಯವಾದರು. ಇವರು ಗುರು ಅಖಂಡೇಶ್ವರರ ಅಂಕಿತದಲ್ಲಿ ವಚನಗಳನ್ನು ಬರೆದು ಪ್ರಸಿದ್ಧ ರಾದ್ದರಿಂದ ಮತ್ತು ಅಖಂಡೇಶ್ವರರ ನಂತರ ಪ್ರಸಿದ್ಧವಾದ ಆ ಮಠ ಷಣ್ಮುಖ ಶಿವಯೋಗಿಗಳ ಮಠ ಎಂದೇ ಹೆಸರು ಬಂದಿತು.

ಷಣ್ಮುಖ ಶಿವಯೋಗಿಗಳು ಬಸವಯುಗದ ವಚನಗಳ ಪರಿಭಾಷೆ, ವಸ್ತುಧೋರಣ, ರೀತಿ, ನೀತಿ ಇತ್ಯಾದಿಗಳನ್ನು ಬಸವೋತ್ತರ ಯುಗದಲ್ಲಿ ಪ್ರತಿನಿಧಿಸಿದ ವ್ಯಕ್ತಿ ಮಾತ್ರವಾಗಿರದೆ, ಬಸವಾದಿಗಳ ಪ್ರಗತಿಪರ ಸಮಾಜೋಧಾರ್ಮಿಕ ಸುಧಾರಣಾ ತತ್ತ್ವಗಳನ್ನು, ಜೀವಿಸಿದ್ದ ಯುಗದಲ್ಲಿ ಮುಂದುವರೆಸಿದರು. ಇವರು ಅಂತ್ಯಜರಲ್ಲಿ ಕೆಲವರಿಗೆ ಲಿಂಗದೀಕ್ಷೆ ನೀಡಿದ್ದಲ್ಲದೆ ಸಹಭೋಜನ ಮಾಡಿದರು ಎಂಬ ಹೇಳಿಕೆಯನ್ನು ಸಮರ್ಥಿಸುವಂತೆ ಜೇವರ್ಗಿಯ ಹರಿಜನ ಕೇರಿಯಲ್ಲಿ ಇವರ ಗದ್ದುಗೆಯ ಕುರುಹುಗಳನ್ನು ಕಾಣಬಹುದಾಗಿದೆ. ಅಂತ್ಯಜರು ಇವರನ್ನು ಗುರುವಾಗಿ ಸ್ವೀಕರಿಸಿದ್ದರು. ಒಂದು ಮುದಿ ಎತ್ತು ಅವಸಾನದ  ಸ್ಥಿತಿಯಲ್ಲಿರುವಾಗ ಅದನ್ನು ಆರೈಕೆ ಮಾಡಿ ಅದರಿಂದ ಕಂಥಾಭಿಕ್ಷೆ ಕಾಯಕ ಮಾಡಿಸಿದರೆಂಬ ಐತಿಹ್ಯ ಇದೆ. ಈಗಲೂ ಜೇವರ್ಗಿಯ ಮಠದ ಮುಂದುಗಡೆ ನಂದಿಯ ಸಮಾಧಿ ಇದೆ. ಸುರಪುರದ ದೊರೆ ವೆಂಕಟಪ್ಪನಾಯಕನ ಮಹಾಮಂತ್ರಿ ನಿಷ್ಠೆಯ ವೀರಪ್ಪನವರು ಷಣ್ಮುಖ ಶಿವಯೋಗಿಗಳಿಗೆ ರಾಜಮರ್ಯಾದೆ ನೀಡಿ ಅವರನ್ನು ರಾಜಗುರುಗಳೆಂದು ಸ್ವೀಕರಿಸಿ ಜೇವರ್ಗಿಯಲ್ಲಿ ಅವರಿಗಾಗಿ ಒ೦ದು ಮಠವನ್ನು ಕಟ್ಟಿಸಿದ್ದರು. ಹೀಗೆ ಇವರು ವಿರಕ್ತಮಠದ ಅಧಿಪತಿಯಾಗಿ ಲೋಕೋದ್ಧಾರವನ್ನು ಕೈಗೊಳ್ಳುತ್ತಲೇ ಕ್ರಿ. ಶ. ೧೭೧೧ರಲ್ಲಿ ಶಿವಸಾಯುಜ್ಯ ಪದವಿಯನ್ನು ಪಡೆದರು. ಇವರ ಹೆಸರಿನ ರಥೋತ್ಸವವು ಪ್ರತಿವರುಷ ವೈಶಾಖ ಬಹುಳ ಪಂಚಮಿ ತಿಥಿಗೆ ಜೇವರ್ಗಿಯಲ್ಲಿ ಇಂದಿಗೂ ವೈಭವದಿಂದ ನಡೆಯುತ್ತದೆ.

 

 ಕನ್ನಡ ಸಂಸ್ಕೃತಿಯಲ್ಲಿ  ಷಣ್ಮುಖ ಶಿವಯೋಗಿಗಳ ಕುರುಹುಗಳು :

ಕನ್ನಡ ಸಾಂಸ್ಕೃತಿಕ ಪರಿಸರದಲ್ಲಿ ಷಣ್ಮುಖ ಶಿವಯೋಗಿಗಳ ಕುರುಹುಗಳು ಅಲ್ಲಲ್ಲಿ ಸಿಗುತ್ತವೆ. ಇವರು ಐಕ್ಯವಾದ ಗದ್ದುಗೆ ಜೇವರ್ಗಿಯಲ್ಲಿ ಇಂದಿಗೂ ಇದ್ದು ಪೂಜೆಗೊಳ್ಳುತ್ತಿದೆ. ಅಖಂಡೇಶ್ವರರು ಜೇವರ್ಗಿಯಲ್ಲಿ ಮಠವನ್ನು ಕಟ್ಟಿಸಿದ್ದರೂ ಇ೦ದಿಗೂ ಅದನ್ನು ಷಣ್ಮುಖ ಶಿವಯೋಗಿಗಳ ಮಠ ಎಂದೇ ಕರೆಯುತ್ತಾರೆ, ಜೇವರ್ಗಿಯ ಹರಿಜನ ಕೇರಿಯಲ್ಲಿಯೂ ಇವರ ಗದ್ದುಗೆ ಇದೆ. ಇವರ ಹೆಸರಿನ ಮಠಗಳು ಜೀವರ್ಗಿಯಲ್ಲಿ ಮಾತ್ರವಲ್ಲದೆ ಸುರಪುರ, ನೆಲೋಗಿ ಮತ್ತು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿರ್ಲಗಾ ತಾಲ್ಲೂಕಿನ ತಾಂಬಾಳಗಳಲ್ಲಿಯೂ  ಇವೆ. ಇವರು ಪೂಜೆ, ಅಧ್ಯಯನ ಮತ್ತು ಬರವಣಿಗೆಗೆ ತೊಡಗುತ್ತಿದ್ದ ಕೋಳತೂರ ಗ್ರಾಮದ ಭೀಮಾನದಿ ಹತ್ತಿರದ ಯೋಗಿಕೊಳ್ಳದ ಸುಂದರ ತಾಣವನ್ನು ಈಗಲೂ ಕಾಣಬಹುದು.

 

ವಚನಗಳು ಮತ್ತು ಲಘು ಕೃತಿಗಳು:

ಇವರು ವಚನಗಳನ್ನು ಮತ್ತು ಕೆಲವು ಲಘು ಕೃತಿಗಳನ್ನು ಬರೆದಿದ್ದಾರೆ. ಇವರು ಬರೆದಿರುವ ಅಖಂಡೇಶ್ವರ ಅಂಕಿತದ ೭೧೭ ವಚನಗಳೂ ಉಪಲಬ್ಧತವಾಗಿವೆ. ೪೧ ಚೌಪದಿಗಳುಳ್ಳ ಅಖಂಡೇಶ್ವರ ಜೋಗುಳ ಪದಗಳನ್ನು ರಚಿಸಿದ್ದಾರೆ. ಇತ್ತೀಚೆಗೆ ಇವರ ಬರೆದಿದ್ದವುಗಳೆಂದು ಹೇಳಲಾದ ಏಳು ಪರಿವರ್ಧಿನಿ ಷಟ್ಪದಿಯುಳ್ಳ ಪ೦ಚಸಂಜ್ಞೆಗಳ ಪದ ಮತ್ತು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ನಿರಾಳಸದ್ಗುರುಸ್ತೋತ್ರ ದೊರೆತವುಗಳಾಗಿವೆ. ಇವುಗಳ ಜೊತೆಗೆ ಇವರು ಷಣ್ಮುಖ ಶಿವಯೋಗಿಗಳ ನಾಂದ್ಯ, ಪ್ರಾಣಲಿಂಗಸ್ಥಲದ ವ್ಯಾಖ್ಯಾನ ಕಾಲಜ್ಞಾನ ಸಾಹಿತ್ಯಗಳನ್ನು ಬರೆದಿರುವುದಾಗಿ ಜೇವರ್ಗಿಯ ಷಣ್ಮುಖ ಶಿವಯೋಗಿ  ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಶಾಂತಲಿಂಗ  ಮಹಾಸ್ವಾಮಿಗಳು, ಮಠಕ್ಕೆ ನಾನು ಭೇಟಿಕೊಟ್ಟಾಗ ತಿಳಿಸಿದ್ದಾರೆ. ಸದ್ಯಕ್ಕೆ ಇವು ಅನುಪಲಬ್ದವಾಗಿವೆ.

ಷಣ್ಮುಖ ಶಿವಯೋಗಿಗಳೇ ತಮ್ಮ ವಚನಗಳನ್ನು ಸ್ಥಲಕಟ್ಟಿಗನುಗುಣವಾಗಿ ಜೋಡಿಸಿದ್ದಂತೆ ಕಾಣುತ್ತದೆ. ಈ ವಚನಗಳು ಮುಖ್ಯವಾಗಿ ವೀರಶೈವ ಸಿದ್ಧಾಂತವನ್ನು ನಿರೂಪಿಸುವ ಗ್ರಂಥವಾಗಿ ಕಂಡುಬರುತ್ತದೆಯಾದರೂ , ತನ್ನ ಕಾಲದ ಇತರ  ವಚನಕಾರರಲ್ಲಿ ಇಲ್ಲದ ಸಾಮಾಜಿಕ ವಿಡಂಬನೆ ಕ್ರಾಂತಿಕಾರಿಕ ಆಲೋಚನೆ, ಅನುಭಾವ ತತ್ತ್ವದರ್ಶನಗಳನ್ನು  ಕಾಣಬಹುದಾಗಿದೆ. ಇವರ ವಚನಗಳು ೧೪ ಸ್ಥಲಗಳಲ್ಲಿ ವಿಭಜನೆಗೊಂಡಿವೆ. ಪಿಂಡಸ್ಥಲ, ಪಿಂಡಜ್ಞಾನಸ್ಥಲ, ಸಂಸಾರ ಹೇಯಸ್ಥಲ, ಗುರುಕರುಣ ಸ್ಥಲ, ಲಿಂಗಧಾರಣಸ್ಥಲ, ವಿಭೂತಿಸ್ಥಲ, ರುದ್ರಾಕ್ಷಿಸ್ಥಲ ಪ೦ಚಾಕ್ಷರಿಸ್ಥಲ, ಭಕ್ತಸ್ಥಲ, ಮಾಹೇಶ್ವರಸ್ಥಲ, ಪ್ರಸಾದಿಸ್ಥಲ ಪ್ರಾಣಿಲಿಂಗಸ್ಥಲ, ಶರಣಸ್ಥಲ, ಐಕ್ಯಸ್ಥಲ.

ಷಣ್ಮುಖ ಶಿವಯೋಗಿಗಳು ಬಸವಾದಿ ಪರಂಪರೆಯ ವಚನಕಾರರನ್ನು ಭಕ್ತಿ ಪೂರ್ವಕವಾಗಿ ಸ್ಮರಿಸಿದ್ದಾರೆ ಮತ್ತು ವಚನಗಳಿಂದ ಪ್ರಭಾವಿತರಾಗಿದ್ದಾರೆ. ಕರಗಳನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ. ಕೆಳಕಂಡ ವಚನಗಳಲ್ಲಿ ತನಗಿಂತ  ಪೂರ್ವದ ಬಸವಾದಿ ಪ್ರಮಥರನ್ನು ಭಕ್ತಿಪೂರ್ವಕವಾಗಿ ಸ್ತುತಿಸಿದ್ದಾರೆ

ಎನ್ನ ತನುವೆಸವಣ್ಣನು

ಎನ್ನ ಮನವೆ ಚೆನ್ನಬವಣ್ಣನು

ಎನ್ನ ಪ್ರಾಣವೇ ಪ್ರಭುದೇವರು

(ಶರಣಸ್ಥಲ ವ. ಸಂ. ೮೨ ಪು. ೩೩೬)

ಮಾದಾರಚೆನ್ನಯ್ಯನ ಬಾಯಿತಾಂಬೂಲವ ಮೆಲುವೆ

ಡೋಹರ ಕಕ್ಕಯ್ಯನ ಒಕ್ಕುಮಿಕ್ಕುದನು೦ಬೆ

ಚೋಳಿಯಕ್ಕನ ಊಳಿಗದವನಾಗುವೆ

ಶ್ವಪಚಯ್ಯನ ಆಳಾಗಿರುವೆ

ಇನ್ನುಳಿದ ಸಕಲ ಗಣ೦ಗಳ ತೊತ್ತು ಬಂಟಲೆಂಕನಾಗಿ

ರಾಜಾಂಗಣ ಬಳಿಯುವೆನಯ್ಯಾ

(ಪ್ರಸಾದಿಸ್ಥಲ ವ. ಸಂ. ೪೨ ಪು. ೧೮೮೯)

 

ಇದೇ ರೀತಿ ಸಿದ್ಧರಾಮ, ಉರಿಲಿಂಗಪೆದ್ದಿ, ನಿಜಗುಣ ಶಿವಯೋಗಿ, ಅಕ್ಕಮಹಾದೇವಿ, ಬಿಬ್ಬಿ ಬಾಚಯ್ಯ, ಬೇಡರಕಣ್ಣಪ್ಪ ಮುಂತಾದ ನೂತನ ಪುರಾತನರನ್ನು ಒಂಭತ್ತು ವಚನಗಳಲ್ಲಿ ಸ್ಮರಿಸಿದ್ದಾನೆ.

ಬಸವಣ್ಣ, ಅಕ್ಕಮಹಾದೇವಿಯವರ ವಚನಗಳ ಪ್ರಭಾವ ಷಣ್ಮುಖ ಶಿವಯೋಗಿಗಳ ಮೇಲೆ ಯಾವ ರೀತಿ ಆಗಿದೆ ಎಂಬುದನ್ನು  ಹ. ನಂ.ವಿಜಯಕುಮಾರರವರು ತಾವು ಸಂಪಾದಿಸಿದ ಷಣ್ಮುಖ ಶಿವಯೋಗಿಗಳ ವಚನಗಳ ಕೃತಿಯ ಪ್ರಸ್ತಾವನೆಯಲ್ಲಿ   ನಿರೂಪಿಸಿದ್ದಾರೆ. ಆದಯ್ಯನ ವಚನಗಳ ಪ್ರಭಾವವೂ ಇವರ ವಚನಗಳ ಮೇಲಾಗಿರುವುದನ್ನು ಈ ಲೇಖನದಲ್ಲಿ ಪ್ರಥಮವಾಗಿ ಗುರುತಿಸಲಾಗಿದೆ.

ನೆರಕೆನ್ನೆಗೆ ತೆರೆಗಲ್ಲಕೆ

ಶರೀರ ಗೂಡುವೋಗದ ಮುನ್ನ…..  

ಲ್ಲುಹೋಗಿ ಬೆನ್ನುಬಾಗಿ

ಅನ್ಯರಿಗೆ ಹ೦ಗಾಗದ ಮುನ್ನ

(ಸ.ವ.ಸಂ. ೧ ವ.ಸಂ. ೧೬೧ ಪು. ೪೨)

ಬಸವಣ್ಣನವರ ಕಿರಿದಾದ ಈ ವಚನದಿಂದ ಪ್ರಭಾವಿತರಾಗಿ ಷಣ್ಮುಖ ಶಿವಯೋಗಿಗಳು ಸು. ಒಂದೂವರೆ ಪುಟದಷ್ಟು  ದೀರ್ಘವಾಗಿ ನಿರೂಪಿಸಿದ್ದಾರೆ.

ದೇಹವು ನಿಸ್ಸಾರವಾಗಿ ಯೌವ್ವನದ ಬಲಗೆಟ್ಟು

ಮುಪ್ಪಾವರಿಸಿ ಅಚೇತನಗೊಂಡು

ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾನಾಗಿ

ಆದಿವ್ಯಾದಿ ವಿಪತ್ತು

ರೋಗ ರುಜೆಗಳಿಂದ ಬಹು ದುಃಖಟ್ಟು

ಎದೆಗೂಡುಗಟ್ಟಿ ಬೆನ್ನು ಬಾಗಿ ಕಣ್ಣು ಒಳನಟ್ಟು

ಶರೀರ ಎಳಿತಾಟಗೊಂಡು ಕಾಲಮೇಲೆ ಕೈಯನೂರಿ

ಕೋಲ ಹಿಡಿದು ಏಳುತ್ತ ನಾನಾತರದ ದುಃಧಾವತಿಯಿಂದ

ರ್ತಕಟ್ಟು ನಷ್ಟವಾಗಿ ಹೋಯಿತು….

(ಸಂಸಾರ ಹೇಯಸ್ಥಲ ವ. ಸಂ. ೭)

 

ಈ ವಚನವು ಬಸವಣ್ಣನವರ ವಚನವು ಕೊಡುವಷ್ಟು ಸುಂದರವಾಗಿ ಅರ್ಥವಂತಿಕೆಯನ್ನು ಕೊಡಲಾರದು.

 

ನೀನೊಲಿದಡೆ ಕೊರಡು ಕೊನರುವುದಯ್ಯ

ನೀನೊಲಿದಡೆ ಬರಡು ಹಯನಹುದಯ್ಯ

ನೀನೊಲಿದಡೆ ವಿಷವೆಲ್ಲ ಅಮೃತವಹುದಯ್ಯ

ನೀನೊಲಿದಡೆ ಸಕಲಪಡಿ ಪದಾರ್ಥ ಇದರಲ್ಲಿರ್ಪವು

ಕೂಡಲ ಸಂಗಮದೇವ (ಸ. ವ. ಸಂ. ೧ ವ. ಸಂ. ೬೬)

 

ಎ೦ಬ ಬಸವಣ್ಣನವರ ವಚನವನ್ನು ಅನುಸರಿಸಿ ಇವರು

 

ನೀನೊಲಿದಡೆ ಕಲ್ಲೆಲ್ಲ ಕನಕವಯ್ಯ

ನೀನೊಲಿದಡೆ ಹುಲ್ಲೆಲ್ಲ ರಾಜಾನ್ನವಯ್ಯ

ನೀನೊಲಿದಡ ಕೊರಡೆಲ್ಲ ಕಲ್ಪವೃಕ್ಷವಯ್ಯ

ನೀನೊಲಿದಡ ಬರಡೆಲ್ಲ ಕಾಮಧೇನುವಯ್ಯ

ನೀನೊಲಿದಡೆ ಏನುಂಟು ಏನಿಲ್ಲವಯ್ಯ ಅಖಂಡೇಶ್ವರಾ

(ಭಕ್ತಸ್ಥಲ ವ. ಸಂ. ೫೮ ಪು. ೮೫)

 

ಎಂದು ರಚಿಸಿದ್ದಾರೆ. ಈ ವಚನದಲ್ಲಿ ಹೇಳುವ ಧಾಟಿ, ಬಳಸಿರುವ ಭಾಷೆ ಎಲ್ಲವೂ ಬಸವಣ್ಣನಿಂದ ನಿಚ್ಚಳವಾಗಿ ಪ್ರಭಾವಿತವಾಗಿರುವುದನ್ನು ಧ್ವನಿಸುತ್ತದೆ.

ತಂದೆ ನೀನು ತಾಯಿ ನೀನು ಬಂಧು ನೀನು ಬಳಗ ನೀನು ನೀನಲ್ಲದೆ ಮತ್ತಾರೂ ಇಲ್ಲಯ್ಯಾ ಕೂಡಲಸಂಗಮದೇವ

(ಸ. ವ. ಸಂ. ೧ ವ. ಸಂ. ೪೮೧)

 

ಬಸವಣ್ಣನವರ ವಚನ ಪಡಿಯಚ್ಚಿನಂತೆ ಕೆಳಕಂಡ ವಚನವನ್ನು ಶಿವಯೋಗಿಗಳು ರಚಿಸಿದ್ದಾರೆ.

 

ತಂದನೀನಯ್ಯ ಎನಗೆ ತಾಯಿನೀನಯ್ಯ ಎನಗೆ

ಬ೦ಧು ನೀನಯ್ಯ ಎನಗೆ ಬಳಗನೀನಯ್ಯ ಎನಗೆ

ಗತಿಯು ನೀನಯ್ಯ ಎನಗೆ ಮತಿಯು ನೀನಯ್ಯ ಎನಗೆ

ಸಕಲ ಚೈತನ್ಯವು ನೀನೆ ಅಯ್ಯ ಎನಗೆ

 ಅಖಂಡೇಶ್ವರ ನೀನೆದಿಕ್ಕಲ್ಲದೆ ಎನಗೆ ಮತ್ತಾರು ಇಲ್ಲಯ್ಯ

(ಮ.ಸ್ಥ. ವ. ಸಂ. ೭೭ ಪು. ೧೩೩)

 

ಷಣ್ಮುಖ ಶಿವಯೋಗಿಗಳು ಅಕ್ಕಮಹಾದೇವಿಯವರ  ವಚನಗಳಿಂದಲೂ ಪ್ರಭಾವಿತರಾಗಿ ವಚನಗಳನ್ನು ರಚಿಸಿದ ಹಾಗೆ ಕಂಡು ಬರುತ್ತದೆ. ನಿದರ್ಶನಕ್ಕೆ,

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಸರವೆತ್ತಿ ಹಾಡುವ ಕೋಗಿಲೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಎರಗಿ ಬ0ದಾಡುವ ತುಂಬಿಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಕೊಳನತಡಿಯೊಳಾಡುವ ಹ೦ಸೆಗಳಿರಾ

ನೀವು ಕಾಣಿರೆ ನೀವು ಕಾಣಿರೆ

ಗಿರಿಗಹ್ವರದೊಳಗಾಡುವ ನವಿಲುಗಳಿರಾ

ನೀವುಕಾಣಿರೆ ನೀವು ಕಾಣಿರೆ

ಚೆನ್ನಮಲ್ಲಿಕಾರ್ಜುನನಲ್ಲಿದ್ದಹನೆಂದು ಹೇಳಿರೆ

(ಸ. ವ. ಸಂ. ವ. ಸಂ. ೧೭೪ ಪು. ೫೫)

 

ಎ೦ಬ ಅಕ್ಕಮಹಾದೇವಿಯ ವಚನದೊಂದಿಗೆ ಷಣ್ಮುಖ  ಶಿವಯೋಗಿಗಳ ವಚನವನ್ನು ಹೋಲಿಸಿ ನೋಡಿ.

 

ಅರಳಿಯ ಮರದೊಳಗಿರುವ ಅರಗಿಳಿಗಳಿರಾ

ನಮ್ಮ ಅಖಂಡೇಶ್ವರನ ಕಂಡಡೆ ಹೇಳಿರೇ

ಮಾವಿನ ಮರದೊಳಗೆ ಕೂಗುವ ಕೋಗಿಲೆ ಹಿಂಡುಗಳಿರಾ

ನಮ್ಮ ನಾಗಭೂಷಣನ ಕಂಡಡೆ ಹೇಳಿರೇ

ಕೊಳನ ತೀರದೊಳಗಾಡುವ ಕಳ ಹಂಸೆಗಳಿರಾ

ನಮ್ಮ ಎಳೆಯ ಚಂದ್ರನ ಕಂಡಡೆ ಹೇಳಿರೇ

ಮೇಘ ಧ್ವನಿಗೆ ಕುಣಿವ ನವಿಲುಗಳಿರಾ

ನಮ್ಮ ಅಖಂಡೇಶ್ವರನೆಂಬ ಅವಿರಳ

ಪರಶಿವನ ಕಂಡಡೆ ಹೇಳಿರೇ

(ಶರಣಸ್ಥಲ ವ. ಸ. ೩೦ ಪು. ೩೧೫)

 

ವಚನವು ಭಾವಗೀತಾತ್ಮಕತೆಯಿಂದ ಕೂಡಿದ್ದು, ತೀವ್ರವಾದ ಸ೦ವೇದನೆ ಮತ್ತು ಅರಸುವಿಕೆ ಉಕ್ಕಿಬರುತ್ತದೆ. ಆದರೆ, ಅಕ್ಕಳಿಗಿದ್ದ ಇಷ್ಟದೈವವನ್ನು ಅರಸುವಿಕೆಯ ತುರ್ತು ಇವರಿಗಿತ್ತೆ? ಎಂದೆನಿಸುತ್ತದೆ. ಅಂಬಿಗರ ಚೌಡಯ್ಯನಲ್ಲಿಯ,

ಗಾಳಿಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ

ಗಾಳಿನಿನ್ನಧೀನವಲಯ್ಯ,

(ಸ.ವ.ಸಂ. ೧, ಪು. ೧೨೨)  

ಎಂಬ ವಚನ ಷಣ್ಮುಖ ಶಿವಯೋಗಿಗಳಲ್ಲಿ ಕೆಳಕಂಡಂತೆ ಸಿಗುತ್ತದೆ.

 

ಗಾಳಿಬೀಸುವ ವೇಳೆಯಲ್ಲಿ ತೂರಿಕೊಳ್ಳಿರೋ ಬೇಗಬೇಗ

ಗಾಳಿ ನಿರ್ಮಿಚ್ಚೆಯಲ್ಲ ಕೇಳಿರೋ ಜಾಳಮನುಜರಿರಾ

(ಭ.ಸ್ಥ, ವ.ಸಂ. ೨೨)

 

ಮಡಿವಾಳ ಮಾಚಯ್ಯನ ವಚನದ ಪ್ರಭಾವವೂ ಇವರ ಮೇಲಾಗಿದೆ.

ಮನುಷ್ಯ ಜನ್ಮದಲ್ಲಿ ಬಂದು

ಶಿವಜ್ಞಾನವನರಿಯದಿದ್ದರೆ

ಆ ಕಾಗೆ ಕೋಳಿಗಳಿಂದ ಕರಕಷ್ಟ

ಕಾಣಾ ಕಲಿದೇವರದೇವಾ

 

ಎ೦ಬ ಮಡಿವಾಳ ಮಾಚಯ್ಯನ ವಚನದ ಜೊತೆ ಷಣ್ಮು ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಬಹುದು.

 

ಶಿವಭಕ್ತನಾದ ಬಳಿಕ ತನ್ನ ಅರುಹು ಕುರುಹಿನ

ಭಕ್ತಿ ಮುಕ್ತಿಯ ಗೊತ್ತನರಿಯದ ಬಳಿಕ

ಆ ಕೋಳಿ ಕತ್ತೆಗಳಿಂದ ಕರಕಷ್ಟ ನೋಡಾ ಅಖಂಡೇಶ್ವರ

(ಭ. ಸ್ಥ, ವ. ಸಂ. ೩೨ ಪು. ೭೨)

 

ಆದಯ್ಯನಲ್ಲಿ ಬರುವ

 

ತೀರ್ಥಯಾತ್ರೆಯ ಮಾಡಿ ಪಾಪನ ಕಳೆದಿಹನೆಂಬ

ಯಾತನೆ ಬೇಡ ಕೇಳಿರಣ್ಣಾ

ಅನಂತ ಕರ್ಮವಲ್ಲಾ ಒಬ್ಬ ಶಿವಭಕ್ತನ

ದರುಶನ ಸ್ಪರ್ಶನದಿಂದ ಕೆಡುವವು.

(ಸ. ವ. ಸಂ. ೧, ವ. ಸಂ. ೯೬೯)

 

ಎಂಬ ವಚನದ ಜೊತೆಗೆ ಷಣ್ಮುಖ ಶಿವಯೋಗಿಗಳ ಕೆಳಕಂಡ ವಚನವನ್ನು ಹೋಲಿಸಿ ನೋಡಿದರೆ ಆದಯ್ಯನ ವಚನದಿಂದ ಪ್ರಭಾವಿತವಾಗಿದೆ ಎಂದು ಹೇಳಬಹುದು.

 

ಮುಕ್ತಿಯ ಪಡೆವೆನೆಂದು ಯುಕ್ತಿಗೆಟ್ಟು

ಸಕಲ ತೀರ್ಥ ಕ್ಷೇತ್ರಂಗಳಿಗೆಡೆಯಾಡಿ

ತೊಟ್ಟನ ತೊಳಲಿಬಳಲಿ ಬೆಂಡಾಗಲೇಕೊ

ಒಬ್ಬ ಶಿವಭಕ್ತನ ಅಂಗಳದಲ್ಲಿ ಎಂಭತ್ತೆಂಟು ಕೋಟಿ

ಕ್ಷೇತ್ರಂಗಳಿರ್ಪವು

ಆತನದರ್ಶನ ಸ್ಪರ್ಶನವಾದಾತಂಗೆ

ಅನಂತಕೋಟಿ ಭವ ಪಾಕ೦ಗಳು ಪರಿಹರವಪ್ಪುವು ನೋಡಾ

(ಭ.ಸ್ಥ. ವ. ಸಂ. ೮೨, ಪು. ೯

 

ಆದಯ್ಯನ ವಚನ :

ಮುತ್ತು ನೀರೊಳಗೆ ಹುಟ್ಟಿ ಮರಳಿನೀರಾಗದಂತೆ

ತಿಳಿಯ ಕಾಸಿದ ತುಪ್ಪ ಕ್ಷೀರವಾಗದಂತೆ

(ಸ.ವ.ಸಂ. ೧ ವ. ಸಂ. ೧೦೭೨)  

ಎ೦ಬ ಉಪಮೆಯು

ಷಣ್ಮುಖ ಶಿವಯೋಗಿಗಳಲ್ಲಿ :

 

ನೀರು ಘಟ್ಟಿಕೊಂಡು ಮುತ್ತಪ್ಪುದಲ್ಲದೆ ಮುತ್ತುನೀರಪ್ಪುದೇ

ಅಯ್ಯ ?

ಹಾಲು ಹೆಪ್ಪುಗೊ0ಡು ತುಪ್ಪವಪ್ಪುದಲ್ಲದೆ ತುಪ್ಪಹಾಲಪ್ಪುದೇ

ಅಯ್ಯ ?

ಎ೦ದು ನಿರೂಪಿತವಾಗಿದೆ. ಇವರೀರ್ವರ ವಚನದ ವಸ್ತು, ಧಾಟಿ ಒ೦ದೇ ಆಗಿದೆ.

 

ಆದಯ್ಯನು ತನ್ನ ವಚನಗಳಲ್ಲಿ ಬಳಸಿರುವ ಸಂಸ್ಕೃತದ ಪ್ರಮಾಣ ಗ್ರಂಥಗಳಲ್ಲಿಯ ಸಂಸ್ಕೃತ ಶ್ಲೋಕಗಳಲ್ಲಿ ಕೆಲವನ್ನು ಷಣ್ಮುಖ ಶಿವಯೋಗಿಗಳು ಬಳಸಿದ್ದಾರೆ. ಆದಯ್ಯನು ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವ ಸಲುವಾಗಿ ಬಳಸಿರುವ

 

ಯಥಾಭೇರುಂಡ ಪಕ್ಷೀತ್ ದ್ವಿ ಮುಖಾತ್ ಪರಿಭುಂಜತೆ |

ತಥಾ ಭುಂಜಾಮಿ ದ್ವಿಮುಖಾಲ್ಲಿಂ

ಜಂಗಮಯೋರಹಂ

(ಸ.ವ.ಸಂ. ೧ ವ. ಸಂ. ೧೧೧೨)

 

ಎ೦ಬ ಸ೦ಸ್ಕೃತ ಶ್ಲೋಕವನ್ನೇ ಷಣ್ಮುಖ ಶಿವಯೋಗಿಗಳು ಸಹ ಜಂಗಮ ಶ್ರೇಷ್ಠತೆಯನ್ನು ನಿರೂಪಿಸುವಲ್ಲಿ ಬಳಸಿದ್ದಾರೆ.

 

ಯಥಾ ಭೇರುಂಡ ಪಕ್ಷೀತ್ ದ್ವಿಮುಖೇನ ಪ್ರಭುಂಜತೆ |

ತಥಾ ಚ ಉಮಯಾದೇವಿ ಮಮ ತೃಪ್ತಂತು ಜಂಗಮಂ ॥

(ಮ.ಸ್ಥ.ವ.ಸ೦.೮೫)

 

ಇಷ್ಟಲಿಂಗದ ಮಹತ್ತನ್ನು ಎತ್ತಿ ಹಿಡಿಯುವಲ್ಲಿ ಆದ್ಯಯನು ಬಳಸಿರುವ :

 

ಇಷ್ಟಲಿಂಗಮ ವಿಶ್ವಸ್ಯ ತೀರ್ಥ ಲಿಂಗಂತು ಯೋ ಭಜೇತ್ |

ಶುನಾಂ ಯೋನಿಶತಂತ್ವಾ ಚಂಡಾಲ ಗೃಹಮಾವಿಶೇತ್ ||

(ಸ.ವ.ಸಂ. ೧ ವ.ಸಂ. ೧೧೪೯)

 

ಎ೦ಬ ಉಕ್ತಿಯನ್ನೇ ಷಣ್ಮುಖ ಶಿವಯೋಗಿಗಳು ಸಹ ತನ್ನ ದೇಹದ ಮೇಲೆ ಇರುತಿರ್ಪ ಲಿಂಗವ ಸಾಮಾನ್ಯವ ಮಾಡಿ ಕ೦ಡ ಕ೦ಡ ದೇಗುಲದೊಳಗನ ಕಲ್ಲದೇವರೆಂದು ಭಾವಿಸಿ ಪೂಜಿಸುವವರನ್ನು ಹೋಲಿಸಲು ಬಳಸಿದ್ದಾರೆ.

 

ಇಷ್ಟ ಲಿಂಗಮ ವಿಶ್ವಾಸಂ ಸ್ಥಾವರ ಲಿ೦ಗೇನ ಪೂಜನಂ |

ಶ್ವಾನಯೋನಿ ಶತ೦ಗತ೦ ಚಾಂಡಾಲೋಗೃಹಮಾಚರೇತ್ ||   

(ಮ.ಸ್ಥ.ವ.ಸಂ. ೮೬)

 

ಷಣ್ಮುಣ ಶಿವಯೋಗಿಗಳ ಪ್ರಾಣಲಿಂಗಿಸ್ಥಲದಲ್ಲಿ ಬರುವ ವಚನಗಳಂತೂ ಆದಯ್ಯನ ವಚನಗಳನ್ನು ನೆನಪು ಮಾಡಿ  ಕೂಡುತ್ತವೆ.

 

ಪೂರ್ವದ ವಚನ ಸಾಹಿತ್ಯದ ಪ್ರಭಾವ ಷಣ್ಮುಖ ಶಿವಯೋಗಿಗಳ ವಚನಗಳ ಮೇಲೆ ನಿಚ್ಚಳವಾಗಿರುವುದನ್ನು ಮೇಲಿನ ವಿವರಣೆಗಳು ದೃಢೀಕರಿಸುತ್ತವೆ. ಬಸವಣ್ಣ, ಅಕ್ಕಮಹಾದೇವಿ, ಆದಯ್ಯ ಮುಂತಾದ ವಚನಕಾರರ ವಚನಗಳಲ್ಲಿ ಕಾಣಿಸಿಕೊಳ್ಳುವ ಸಂಕ್ಷಿಪ್ತತೆ, ಸೂತ್ರಬದ್ಧತೆ, ಉತ್ಕಟತೆ, ಕಲಾಮಂತಿಕೆ ಅಷ್ಟಾಗಿ ಇವರ ವಚನಗಳಲ್ಲಿ ಕಾಣಬರದೆ ವಾಚ್ಯತೆ, ವಿವರಣಾತ್ಮಕತೆಗೆ ಹೆಚ್ಚಿನ ಅವಕಾಶ ದೊರೆತಿದೆ.

ಒಂದು ಸಾಹಿತ್ಯಕ ಪರಂಪರೆ ತನ್ನ ಎಲ್ಲಾ ಸಾಧ್ಯತೆಗಳನ್ನು ಕಂಡುಕೊಂಡ ಮೇಲೆ ಬರುವ ಕೃತಿಕಾರರು ಆ ಹಿಂದಿನ

ಪರಂಪರೆಯಿಂದ ತಮ್ಮನ್ನು ತಾವು ಬಿಡಿಸಿಕೊಂಡು ಮೌಲಿಕ ರಚನೆ ಮಾಡುವುದು ತ್ರಾಸಿನಕೆಲಸ, ಆದಾಗ್ಯೂ ಪ್ರತಿಭಾಶಾಲಿಗಳು ಆ ಪ್ರಭಾವವನ್ನು ಅರ್ಜಿಸಿಕೊಂಡು ಪರಂಪರೆಯಿಂದ ಬಿಡಿಸಿಕೊಂಡು ಮೌಲಿಕ ಕೃತಿರಚನೆ ಮಾಡುವ ಸಾಧ್ಯತೆ ಇದೆ. ಷಣ್ಮುಖ ಶಿವಯೋಗಿಗಳು ಪೂರ್ವದ ವಚನಕಾರರ ಪರಂಪರೆಯನ್ನು ಗೌರವಿಸಿ ಪ್ರಭಾವಿತರಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೂ ಇವರ ೭೧೭ ವಚನಗಳೆಲ್ಲವೂ ಪೂರ್ವದ ಅನುಸರಣೆಯಿಂದ ಪ್ರೇರಿತವಾಗಿ ರಚಿತವಾದವುಗಳಲ್ಲ. ಸ್ವಂತಿಕೆಯ ವಚನಗಳು ಇವೆ

 

ಇವರು ತನ್ನ ಕಾಲದಲ್ಲಿ ಇದ್ದ ಸಹಗಮನ ಪದ್ಧತಿಯನ್ನು ಒಪ್ಪಿಕೊಂಡಿದ್ದರು ಎಂಬುದು ಕೆಳಕಂಡ ವಚನದಿಂದ ವಿದಿತವಾಗುತ್ತದೆ.

 

ಗ೦ಡಸತ್ತನೆ೦ದು ಗ೦ಡನೊಡನೆ ಕೆಂಡವ ಬೀಳುವನೆಂದು

ಪುಂಡ ವೀರಮಾಸ್ತಿ ತಾನುದಂಡೆಯ ಕಟ್ಟಿಕೊಂಡು

ಖಂಡಯವ ಪಿಡಿದು ತಂಡ ತಂಡದ ಜನರ ಮುಂದೆ

ಮೆರೆದು ಕೊಂಡು ಬಂದು

ಕಿಚ್ಚಿನ ಹೂ೦ಡವಕಂಡು ಹೆದರಿ ಹಿಮ್ಮೆಟ್ಟಿದಡೆ

ಅವಳಿಗದೇ ಭ೦ಗವಲ್ಲದೆ ಶೃಂಗಾರ ಮೆರವುದೇ ಅಯ್ಯ ?

(ಮ.ಸ್ಥ.ವ.ಸು. ೧೩೮)

 

ಪ೦ಚೇಂದ್ರಿಯ, ಅರಿಷಡ್ವರ್ಗ, ಕರಣ ಚತುಷ್ಟಯ ಇತ್ಯಾದಿ ಲೌಕಿಕ ಲೋಕ ವಿಚಾರಗಳಿಂದ ತನ್ನ ತನುಮನಗಳಲ್ಲಿ ಉಂಟಾದ ತುಮುಲ, ದೌರ್ಬಲ್ಯಗಳನ್ನು ಗುರುತಿಸಿ ಅವುಗಳಿಂದ ಪಾರಾಗುವ ನಿರಸನಗೊಳ್ಳುವ, ತನ್ನ ಅಂತರಂಗವನ್ನು ಒರೆಹಚ್ಚಿ ನೋಡುವಂತಹ  ಭಕ್ತನ ಅ೦ತರಂಗದ ನಿರೀಕ್ಷಣೆಯನ್ನು ಸೂಚಿಸುವ ಭಾವತೀವ್ರತೆಯ ಲಕ್ಷಣವನ್ನು, ಇಂತಹ ಸಂದರ್ಭದಲ್ಲಿ ಗುರುವನ್ನು ಮೊರೆ ಹೋಗುವಂತಹ ಅಂಶಗಳನ್ನು ಷಣ್ಮುಖ ಶಿವಯೋಗಿಗಳ ಸಂಸಾರ ಹೇಯಸ್ಥಲದಲ್ಲಿ ಬರುವ ವಚನಗಳಲ್ಲಿ ಕಾಣಬಹುದು.

ನಿದರ್ಶನಕ್ಕೆ,

ಕೆಟ್ಟೆಕೆಟ್ಟೆನಯ್ಯ, ಒಡಲುಪಾಧಿವಿಡಿದು

ಕೆಟ್ಟೆ ಕೆಟ್ಟೆನಯ್ಯ ಒಡಲುದುರ್ಗುಣದೊಡನಾಡಿ

ಕೆಟ್ಟೆ ಕೆಟ್ಟೆನಯ್ಯ ನಿಮ್ಮಡಿಯ ಶತ್ತಿಯ ಮೆರೆದು

(ಸ.ಹೇ.ಸ್ಥ.ವ.ಸಂ. ೧೦)

ಮನವೆಂಬ ಮರ್ಕಟನು ತನುವೆ೦ಬ ವೃಕ್ಷವನೇರಿ

ಇ೦ದ್ರಿಯಗಳೆಂಬ ಶಾಖೆಗೆ ಹಾರಿ ವಿಷಯಗಳೆಂಬ

ಹಣ್ಣು ಫಲಗಳ ಗ್ರಹಿಸಿ

ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ

ಈ ಮನವೆ೦ಬ ಮರ್ಕಟನ ನಿಮ್ಮನೆನಹೆಂಬ ಪಾಶದಲ್ಲಿ ಕಟ್ಟಿ

ಎನ್ನನುಳುಹಿ ಕೊಳ್ಳಯ್ಯ

(ಅದೇ .ಸಂ.೧೪)

 

 

 

 

 

ಕುಸಿವು  ತೈಷಯಂಡಲೆಯಾವರಿಸಿ ಕುಸಿವ

  ದೆಸೆದೆಸೆಗೆ  ತಿರ್ಪದು ನೋಡಾ ತನುವು

ವಿಷಯ ವಿಕಾರದ೦ಡಲೆಯಾವರಿಸಿ

ದೆಸೆದೆಸೆಗೆ ನುಸುಳು ತಿಪ್ಪುದು ನೋಡಾ ಮನವು

ಈತನು ಮನದಲ್ಲಿ ಮುಸುಕಿದ ಮಾಯಾವಾಸನೆಯ ಕಳೆದು

(ಅದೇ ವ. ಸಂ. ೧೭)

ನಿಮ್ಮ ಭಕ್ತಿಯ ಲೇಸು ತೋರಿಸಿ ಬದುಕಿಸಯ್ಯ

ಸಾಕು ಮಾಡದು ಭವಬ೦ಧನ೦ಗಳ

ನೂಕಿಬಿಡದು ಸಕಲಸ೦ಸಾರವ

ಬೇಕೆ೦ದಳಿಸುವದು ವಿಷಯ ಭೋಗಕ್ಕೆ

(ಅದೇ ವ.ಸಂ. ೧೮)

ಸಕಲ ಲೋಕಾದಿಲೋಕಂಗಳು ಮಾಯಾಬಲೆಯಲ್ಲಿ ಸಿಲ್ಕಿ

ಸೆರೆ ಹೋಗುವುದು ಕಂಡು ನಾನಂಜಿ

ನಿಮ್ಮ ಮೊರೆಹೊಕ್ಕೆ ಕಾಯಯ್ಯ ಕಾರುಣ್ಯನಿಧಿಯೇ

(ಅದೇ ವ.ಸಂ. ೨೦)

 

ಷಟ್‌ಸ್ಥಲವು ಇವರಲ್ಲಿ ಕೇವಲ ಸಾಧನೆಯ ಮಾರ್ಗವಾಗಿರದೆ ಸಿದ್ಧಾಂತವಾಗಿಯೂ ನಿರೂಪಿಸಲ್ಪಟ್ಟಿದೆ. ಶಾಸ್ತ್ರೀಯ ನಿರೂಪಣೆ ಯನ್ನು ವಚನಗಳಲ್ಲಿ ಕಾಣಬಹುದು. ಪ್ರತಿಯೊಂದು ಸ್ಥಲದ ಸ್ವರೂಪ, ಲಕ್ಷಣ, ವೈಶಿಷ್ಟ್ಯಗಳು, ಅದರೊಳಗೆ ಸೇರುವ ಭಕ್ತಿಜ್ಞಾನ, ವೈರಾಗ್ಯ, ಅನುಭಾವ, ದಾಸೋಹ, ಕಾಯಕ ಶಿವಯೋಗ, ಶೀಲಚಾರಿತ್ರ ನೇಮ ಎಲ್ಲವೂ ಕ್ರಮಬದ್ಧವಾಗಿ ನಿರೂಪಿಸಲ್ಪಟ್ಟಿದೆ. ಕೆಲವೆಡೆ ಹೋಲಿಕೆಯೊಡನೆ ನಿರೂಪಿಸಲ್ಪಟ್ಟಿದೆ.

ಉದಾ : ಭಕ್ತನಾದವನಿಗೆ ನುಡಿ, ತನು, ಮನ ಭಾವ, ಸರ್ವಕ್ರಿಯೆಯೆಲ್ಲವೂ ಶುದ್ಧವಾಗಿರಬೇಕು. ಲಿಂಗನಿಷ್ಠಾ ಪರನಾಗಿಯೂ, ಜಂಗಮವೇ ಪ್ರಾಣವಾಗಿಯೂ, ಅರ್ಥ ಪ್ರಾಣಾಭಿಮಾನ೦ಗಳು ಶಿವನ ಕೂಡಿರಬೇಕು. ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಾಗಿರುವುದು. ಲಿಂಗಜಂಗಮ ಒಂದೆಯಾಗಿ ಕಾಂಬುದು, ವಿಭೂತಿ, ರುದ್ರಾಕ್ಷಿ ಲಿಂಗಧಾರಣ ಮುಂತಾದ  ಶಿವಲಾಂಛನವುಳ್ಳಂಥ ಶಿವಶರಣರಲ್ಲಿ ಅತಿಭಕ್ತಿ ಯಾಗಿರಬೇಕು ಎಂದು ಭಕ್ತನ ಲಕ್ಷಣವನ್ನು ಹೇಳಿದ್ದಾರೆ. ಪರಸ್ತ್ರೀಯರ ಮುಟ್ಟದಿರುವ, ಪರಧನವ ಅಪಹರಿಸದಿರುವ, ಪರದೈವವ ಪೂಜಿಸದಿರುವ, ಪರಹಿಂಸೆಯ ಮಾಡದಿರುವ ಪರಲೋಕದ ಫಲಪದವ ಬಯಸದಿರುವ, ಇಷ್ಟಲಿಂಗದಲ್ಲಿ ನೈಷ್ಠೆಯನ್ನು ಇಟ್ಟಿರುವವರೇ ವೀರಮಾಹೇಶ್ವರರು ಎಂದು ಹೇಳಿದ್ದಾರೆ.

ಅನುಭಾವಿಯಾದವನು ತಿರುಳುಕರಗಿದ ಹುರಿದ ಬೀಜದಂತಿರಬೇಕು. ದಗ್ಧ ಪಟದಂತಿರಬೇಕು ದರ್ಪಣದೊಳಗಣ ಪ್ರತಿಬಿಂಬದಂತಿರಬೇಕು.

ಇವರ ವಚನಗಳಲ್ಲಿ ಯೋಗ ಶಿವಯೋಗಗಳ ಬಗೆಗೂ ಉಲ್ಲೇಖ ಇದೆ. ಪ್ರಾಣಲಿಂಗಿಸ್ಥಲದ ಬಹುತೇಕ ವಚನಗಳು  ಯೋಗದ ವಿವರಣೆಗಾಗಿಯೇ ಮೀಸಲಾಗಿವೆ. ಮಂತ್ರ, ಲಯ ಹಠಯೋಗ, ರಾಜಯೋಗಗಳೆಂಬ ಚತುರ್ವಿಧಯೋಗಗಳ ಸ್ವರೂಪ, ಅವುಗಳಲ್ಲಿಯ ವಿಧಗಳು ಲಕ್ಷಣ ಇತ್ಯಾದಿಗಳ ಪ್ರತ್ಯಕ್ಷ ಅನುಭವಗಳನ್ನು ಸ್ಫುಟವಾಗಿ ನಿರೂಪಿಸಿ ಇವೆಲ್ಲವುಗಳಿಗಿಂತ ಮಿಗಿಲಾದದ್ದು ‘ಶಿವಯೋಗ’ ಎಂದು ಹೇಳಿ ಇದರಿಂದಲೇ ವ್ಯಕ್ತಿಯ ಪರಿಪೂರ್ಣ ಸಿದ್ಧಿಸಾಧ್ಯ ಎಂದು ನಿರೂಪಿಸಿದ್ದಾರೆ. ಅಷ್ಟಾವರಣಗಳ ಮಹತ್ವದ ಬಗೆಗೂ ವಚನಗಳಲ್ಲಿ ವಿವರವಿದೆ. ಅಷ್ಟಾವರಣಗಳಲ್ಲಿ ಒಂದಾದ ವಿಭೂತಿಯ ಬಗೆಗೆ ಒಂದು ಸ್ಥಲವನ್ನೇ ಮೀಸಲಾಗಿರಿಸಿದ್ದಾನೆ. ವಿಭೂತಿಯ ಲಕ್ಷಣ ಪ್ರಕಾರಗಳು ಮಹತ್ವ ಇತ್ಯಾದಿಗಳ ಬಗೆಗೂ ಸವಿವರವಾದ ನಿರೂಪಣೆ ಇದೆ. ಶ್ರೀ ವಿಭೂತಿಯ ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ ಅನಂತ ಕೋಟಿ ಪಾತಕ೦ಗಳು  ಪರಿಹಾರವಾಗಿ ಶಿವಸಾಯುಜ್ಯ ಪದವು ದೊರೆಕೊಂಬುದು ಎಂದು ಅದರ ಮಹತ್ವವನ್ನು ವಿವರಿಸಿದ್ದಾರೆ. ಏಳು ವಚನಗಳಲ್ಲಿ ರುದ್ರಾಕ್ಷಿಯ ಬಗೆಗೆ ನಿರೂಪಿಸಲಾಗಿದೆ.

ವ್ಯಕ್ತಿಯ ವ್ಯಕ್ತಿತ್ವದ ಉನ್ನತ ಮೌಲ್ಯಗಳಾದ ಶೀಲ ,ಚಾರಿತ್ರ, ವ್ರತ ನೇಮಗಳ ನಿರೂಪಣೆಯು ಇವರ ವಚನಗಳಲ್ಲಿ ನಿರೂಪಿತವಾಗಿದೆ.

ಛಲವಿರಬೇಕು ಶಿವಭಕ್ತಿಯ ಮಾಡುವಲ್ಲಿ,

ಛಲವಿರಬೇಕು ನಿತ್ಯ ನೇಮದಲ್ಲಿ

ಶೀಲವ್ರತದಲ್ಲಿ ಹಿಡಿದು ಬಿಡನೆಂಬ ಸಟೆಯನಾಡದೆ

ಸತ್ಯವಚನವ ನುಡಿವಾತ

ಕುಟಿಲ ಕುಹಕವ ಮರೆತು ಸದಾಚಾರದಲ್ಲಿ

ನಡೆವಾತನೇ ಸದ್ಭಕ್ತ

ಸುರಚಾಪದಂತೆ ತೋರಿ ಅಡಗುವ ಮನವನಚ್ಚ ಬೇಡ

ಪರಧನ ಪರಸ್ತ್ರೀಯರ ಮುಟ್ಟವೆಂಬುದೆ ಎನ್ನ ಶೀಲ

ಒಡಲುಪಾಧಿಕೆಯ ವಿಡಿದು ಅನ್ಯರ ಅನ್ನ ವಸ್ತ್ರಂಗಳ

ಬಾಯ್ದೆರೆದು ಬೇಡನೆಂಬುದ ಎನ್ನ ವ್ರತ

ಸಕಲ ಪದಾರ್ಥ೦ಗಳ ಲಿಂಗಕ್ಕೆ ಕೊಡದೆ ಅ೦ಗದಿಚ್ಛೆಗೆ

ಕೊಳ್ಳೆನೆ೦ಬುದೇ ನೇಮ

ದಯವಿರಬೇಕು ಸಕಲ ಪ್ರಾಣಿಗಳಲ್ಲಿ, ಭಯವಿರಬೇಕು

ಗುರುಲಿಂಗ ಜಂಗಮದಲ್ಲಿ

ನಯವಿರಬೇಕು ಸಕಲ ಗುಣಂಗಳಲ್ಲಿ ಸ್ನೇಹವಿರಬೇಕು

ನುಡಿಗಡಣದಲ್ಲಿ

ಇತ್ಯಾದಿಯಾಗಿ ಆತ್ಮೀಯವಾದ ನುಡಿಗಳಲ್ಲಿ ನವುರಾಗಿ ನೀತಿಬೋಧನೆ ಮಾಡುವುದರ ಮೂಲಕ ವ್ಯಕ್ತಿ ಚಾರಿತ್ರ ಸಂಪನ್ನನಾಗಿ ಸಾರ್ಥಕ ಜೀವನ ಸಾಗಿಸಲು ಪ್ರೇರಣೆ ನೀಡಿದ್ದಾರೆ.

 

ಸಮಕಾಲೀನ ಸಮಾಜದಲ್ಲಿ ಕಂಡು ಬಂದ ಕುಂದು ಕೊರತೆಗಳು ವೈಪರೀತ್ಯಗಳನ್ನು ನವುರಾಗಿಯೂ, ಕಠೋರವಾಗಿಯೂ ವಿಡಂಬಿಸಿ ಅವುಗಳನ್ನು ನಿವಾರಿಸುವ ಯತ್ನವನ್ನು ವಚನಗಳ ಮೂಲಕ ಪ್ರಯತ್ನಿಸಿದ್ದಾರೆ. ಇಲ್ಲೆಲ್ಲಾ ಉಪಮೆ, ರೂಪಕ, ದೃಷ್ಟಾಂತ ನಾಣ್ಣುಡಿ, ಗಾದೆ ಮಾತುಗಳಿಗೆ ಹೆಚ್ಚಿನ ಆದ್ಯತೆ ತಲುಪಿದೆ.

 

ಬ೦ಧನಕ್ಕೊಳಗಾದ ಹುಲಿಗೆ ಬಲತ್ಕಾರ ಉಂಟೆ ಅಯ್ಯ ?

ಸ೦ಸಾರದ೦ದುಗದಲ್ಲಿ ತೊಳಲುವ ಜೀವನಿಗೆ

ಮು೦ದೆ ಮುಕ್ತಿಯನರಸುವ ಜ್ಞಾನ ಉ೦ಟೇ ಅಯ್ಯ

ಸಿರಿ ಬಂದೊದಗಿತ್ತೆಂದು ಹಿರಿದಾಗಿ ಹಿಗ್ಗಬೇಡ

ಸಿರಿಯೆಂಬುದು ಕನಸಿನ ಪರಿಯಂತೆ

ಮಡದಿ ಮಕ್ಕಳು ಪಡೆದ ದ್ರವ್ಯವು ಎನ್ನೊಡವೆ ಎಂದು

ನಚ್ಚಬೇಡಿರೊ ಎಲೆ ಹುಚ್ಚು ಮಾನವರಿರಾ ಎಂದು ಎಚ್ಚರಿಸಿದ್ದಾರೆ.

ಮಹೇಂದ್ರ ಜಾಲದ೦ತೆ ಕಣ್ಣ ಮುಂದೆ ಒಡ್ಡಿದ

ಹುಸಿಯ ಸ೦ಸಾರದಲ್ಲಿಯೇ ಎಡ್ಡಾಗಬೇಡಿರೋ 

 

ಎಂದು ಕಿವಿಮಾತು ಹೇಳಿದ್ದಾರೆ. ಅನ್ಯರಲ್ಲಿ ಅವಗುಣವ ಅರಸುವವರನ್ನು’ ತನ್ನ ಎಡೆಯಲ್ಲಿ ಕಪ್ಪೆ ಸತ್ತು ಬಿದ್ದುದನ್ನು ಅರಿಯದೆ ಪರರ ಎಡೆಯಲ್ಲಿ ನೊಣವ ಅರಸುವ ಮರಳುಗಳಿಗೆ   ಹೋಲಿಸಿದ್ದಾರೆ. ವೇಷದಾರಿ ಮಹಾಂತರನ್ನು ಹೊರಗೆ ಆಡಂಬರದ ವೇಷವ ತಾಳಿ ಜಡೆಯ ಬಿಟ್ಟರೇನು ಆಲದ ಮರಕ್ಕೆ ಬೇರಿಳಿದಂತೆ ಎಂದು ಮೂದಲಿಸಿದ್ದಾರೆ. ಪರಧನ, ಪರಸ್ತ್ರೀಯರ ಬಿಟ್ಟರೆ ಗುರುಲಿಂಗ ಜಂಗಮವು ಸಾಧ್ಯವು ನೋಡಾ ಎಂದು ಒಂದಡೆ ನಿರೂಪಿಸಿದ್ದಾರೆ. ಕನಕ, ಕಾಮಿನಿ ಭೂಮಿಗಾಗಿ ಹೊಡೆದಾಡಿ ಕಟ್ಟಿತೀ ಜಗವೆಲ್ಲಾ ಎಂದು ನೊಂದಿದ್ದಾರೆ. ತನ್ನ ತಾನರಿಯದೆ ಅನ್ಯರ ಗುಣಾವಗುಣಂಗಳ ಎತ್ತಿ ಹಿಡಿಯುವವರನ್ನು, ಸಜ್ಜನ ಸದ್ಭಾವಿ ಸತ್ಪುರಷರುಗಳ ಮನನೋವಂತೆ ಹಳಿದು ಹಾಸ್ಯವ ಮಾಡಿ ದೂಷಿಸುವವರನ್ನು ಶಿವಶರಣರೆಂದು ಹೇಗೆ ಕರೆಯಲಿ ಎಂದು ಚಿಂತಿಸಿದ್ದಾರೆ. ಹೊನ್ನು, ಹೆಣ್ಣು, ಮಣ್ಣಿಗಾಗಿ ಆಸೆಪಟ್ಟರೆ ಸಂಚಿತ ಪ್ರಾರಬ್ಧ ಆಗಾಮಿಕರ್ಮ ಬಿಡದು ಎಂದು ಎಚ್ಚರಿಸಿದ್ದಾರೆ. ಕೇವಲ ಮಾತಿನಲ್ಲಿ ತಾವು ಶಿವಾನುಭಾವಿಗಳೆಂದು ಗಳಹುತ್ತಿರುವವರನ್ನು ಮಾತುಕಲಿತ ಭೂತನಂತೆ ಆ ಮಾತು ಈ ಮಾತು ಹೋಮಾತುಗಳ ಕಂಡಕಂಡಲ್ಲಿ ನಿಂದನಿಂದಲ್ಲಿ ಮುಂದುವರಿದು ಹರಲೆಗುಟ್ಟುವ ಒಣಹರಟೆಗಾರರು ಎಂದೂ, ಅ೦ತರ೦ಗದಲ್ಲಿಯ ಅರಿಷಡ್ವರ್ಗ, ಅಷ್ಟಮದ, ಕರಣ ಚತುಷ್ಟಯಗಳನ್ನು ನಿಗ್ರಹಿಸದೆ ಬಹಿರಂಗದಲ್ಲಿ ಹಲವು ವ್ರತಗಳನ್ನು ಪಾಲಿಸುತ್ತ ತಾವು ಶೀಲವಂತರೆಂದು ಹೇಳಿಕೊಳ್ಳುವವರನ್ನು ‘ಹುತ್ತದೊಳಗಣ ಹಾವ ಕೊಲುವನೆಂದು ಮೇಲೆ ಹುತ್ತವ ಬಡಿವ ಅರೆ ಮರುಳರು ಎಂದು ಹರಿತವಾಗಿ ವಿಡಂಬಿಸಿದ್ದಾರೆ. ಭಕ್ತಿಯ ಮರೆತು ಯುಕ್ತಿ ಶೂನ್ಯರಾಗಿ ಮುಕ್ತಿಯ ಹೊಲಬು ತಪ್ಪಿ ಮಲತ್ರಯಂಗಳ ಕಚ್ಚಿ ಮೂತ್ರದ ಕುಳಿಯೊಳ್ ಮುಳು ಗಾಡುತಿರ್ಪ ಮೂಳ ಹೊಲೆಯರ ಮುಖವ ನೋಡಲಾಗದಯ್ಯ ಎಂದು ಹೀಗಳೆದಿದ್ದಾರೆ. ವೇದಶಾಸ್ತ್ರ ಆಗಮ ಪುರಾಣ ತರ್ಕ ವ್ಯಾಕರಣ ಇತಿಹಾಸ೦ಗಳ ಓದಿ ಹೇಳುವಾತ ಇವರ ಪ್ರಕಾರ ಜಾಣನಲ್ಲ. ಹೊನ್ನೆನ್ನದು, ಮಣ್ಣೆನ್ನದು, ಹೆಣ್ಣೆನ್ನೆದು, ಮನೆಯೆನ್ನದು., ಮಕ್ಕಳೆನ್ನವರೆಂದು ಭಿನ್ನಭಾವದಲ್ಲಿರ್ದು, ಸನ್ನಿಹಿತ ಜಂಗಮರೊಡನೆ ಸಹಭೋಜನ ಮಾಡಿದಡೆ ಕುನ್ನಿ ಕುಕ್ಕಟನ ಬಸುರಲ್ಲಿ ಬರುವುದು ತಪ್ಪದು ಎಂದು ಎಚ್ಚರಿಸಿದ್ದಾರೆ. ಇವರು ಪೂರ್ವದ ವಚನಕಾರರ ತತ್ತ್ವಗಳನ್ನು ಒಪ್ಪಿಕೊಂಡು ಅದರಂತೆ ನಡೆದವರು, ಜನ ಸಾಮಾನ್ಯರಿಗೆ ತಿಳುವಳಿಕೆಯನ್ನು ಹೇಳುವಂತಹ, ಸದಾಚಾರವನ್ನು ಬಯಸುವಂರಹವನ್ನು ಕುರಿತ ವಚನಗಳಲ್ಲಿ ಭಾಷೆಯಲ್ಲಿ ಸರಳತೆ ಇದೆ. ಪ್ರಾಸಬದ್ಧತೆ ಇದೆ. ತನ್ನನ್ನು ಪರೀಕ್ಷಿಸಿಕೊಳ್ಳುವ ಟೀಕಿಸುವ ಗುಣ ಇದೆ.

ಇವರ ವಚನಗಳಲ್ಲಿ ಅನೇಕ ಯೋಗಾಸನಗಳ ಹೆಸರು ,ಆಚರಣೆಗಳು ಕೇಳಿ ಬರುತ್ತವೆ.  ಬಹುಶಃ ಬ್ರಹ್ಮಚಾರಿಗಳಾಗಿದ್ದ ಇವರು ಯೋಗಾಸನಗಳನ್ನು ಕಲಿತಿದ್ದಿರಬಹುದು. ಇವರ ವಚನಗಳಲ್ಲಿ ಹದಿನೈದಕ್ಕೂ ಮೇಲ್ಪಟ್ಟು ಬೆಡಗಿನ ವಚನಗಳನ್ನು ಕಾಣಬಹುದಾಗಿದೆ. ಈ ಬೆಡಗಿನ ವಚನಗಳಲ್ಲಿ ಬಳಸಿರುವ ಭಾಷೆ ಲೌಕಿಕವಾಗಿದ್ದರೂ ತಲೆಕೆಳಕಾಗಿದ್ದು ಆಳವಾದ ಅನುಭಾವ ಮತ್ತು ಪಾಂಡಿತ್ಯದಿಂದ ಅರ್ಥೈಸಬೇಕಾಗುತ್ತದೆ.  ಷಣ್ಮುಖ ಶಿವಯೋಗಿಗಳ ವಚನಗಳು ಧಾರ್ಮಿಕ ತತ್ತ್ವಗಳನ್ನು ಹೊರಸೂಸುತ್ತಿದ್ದರೂ ಅವುಗಳಲ್ಲಿ ಅಲ್ಲಲ್ಲಿ ಸಾಹಿತ್ಯ ಗುಣ ಇಣುಕಿ ಹಾಕಿದೆ. ಕೆಲವು ವಚನಗಳಲ್ಲಿ ತಾನು ಹೇಳುವ ವಿಷಯಗಳನ್ನು ಸಲೀಸಾಗಿ ನಿರೂಪಿಸಲು ಅರ್ಥವಾಗುವಂತೆ ಮಾಡಲು ಉಪಮೆ, ರೂಪಕಗಳು ಗಾದೆಗಳು ನಾಣ್ಣುಡಿಗಳು ಯಥೇಚ್ಛವಾಗಿ ಬಳಸಿದ್ದಾರೆ. ಈ ಪದವಾಕ್ಯಗಳಲ್ಲಿ ಹುದುಗಿರುವ  ಅರ್ಥಗರ್ಭಿತವನ್ನು ಗಮನಿಸಬಹುದು.

ಉದಾ :

ಅಸಲುಕಳೆದ ಬಳಿಕ ಲಾಭ ಉಂಟೆ

ಉಪದೇಶವಿಲ್ಲದ ಲಿಂಗ ಜಡಪಾಷಾಣವೆ೦ದೆನಿಸಿತ್ತು

ಒಡಲಲ್ಲಿ ಕಲ್ಲು ಕಟ್ಟಿಕೊಂಡು ಮಡುವ ಬಿದ್ದಂತಾಯಿತ್ತು

ಕಟ್ಟಿದ ಬುತ್ತಿ ಎಷ್ಟು ದಿನ ಈಡೇರಲಾಪುದು ?

ಕಪಿಯ ಕೈಯಲ್ಲಿ ರತ್ನವ ಕೊಟ್ಟಡೆ ಅದು ಕಡಿದು ನೋಡಿ

ಕಲ್ಲೊಂದು

ಬಿಸಾಡುವಲ್ಲದೆ ಅದರ ಬೆಳಗನರಿವುದೆ ಅಯ್ಯ ?

ಕಬ್ಬಿನ ಸ್ವಾದ ಮದಗಜ ಬಲ್ಲುದಲ್ಲದೆ ಕುರಿ ಎತ್ತ ಬಲ್ಲುದಯ್ಯ?

ಕ್ಷೀರದ ರುಚಿಯ ಹಂಸ ಬಲ್ಲುದಲ್ಲದೆ ನೀರಗೋಳ ಎತ್ತ

ಬಲ್ಲುದಯ್ಯ ?

ತೊಟ್ಟಬಿಟ್ಟ ಹಣ್ಣು ಮರಳಿ ತೊಟ್ಟ ಹತ್ತಬಲ್ಲುದೆ

ಹಗಲ ಕಂಡ ಕಮರಿಯ ಇರುಳೆ ಬೀಳುವರೆ

ಹಂದಿ ಹಡಿಕೆಯ ನೆನಸಿ ಹಾಳುಗೇರಿಗೆ ಹೋಗುವಂತ

ಸಿಂಹದ ಮೊಲೆವಾಲು ಸಿಂಹದ ಮರಿಗಲ್ಲದೆ ಸೀಳುನಾಯಿಗೆ

ಯೋಗ್ಯವೇ ?

ಸುಟ್ಟ ಮಡಕೆಯಲ್ಲಿ ನೀರು ತು0ಬಿದಡೆ ನಿಲುವುದಲ್ಲದೆ

ಹಸಿಯ ಮಡಕೆಯಲ್ಲಿ

ನೀರ ತುಂಬಿದಡ ದಿಟವಾಗಿ ನಿಲ್ಲುವುದೆ

 

ಇತ್ಯಾದಿ ನಿತ್ಯ ಜೀವನದ ಸೂಕ್ತಿಗಳು ಸಂದರ್ಭೋಚಿತವಾಗಿ ವಚನಗಳಲ್ಲಿ ಬಳಸಲ್ಪಟ್ಟಿವೆ.

 

ಇವರ ಶಬ್ಧ ಸಂಪತ್ತಿನಲ್ಲಿ ಸಂಸ್ಕೃತ ಮತ್ತು ಕನ್ನಡ ಉಭಯ ಭಾಷೆಗಳ ಪದಗಳನ್ನು ಗುರುತಿಸಬಹುದು. ಒಂದೇ ವಚನದಲ್ಲಿಯೇ ಅಚ್ಚಗನ್ನಡ ಶಬ್ದಗಳು, ಸಂಸ್ಕೃತ ಭೂಯಿಷ್ಠ ಪದಗಳು ಸಮ್ಮಿಳಿತವಾಗಿರುವುದನ್ನು ನೋಡಬಹುದು. ಇವರ ವಚನಗಳಲ್ಲಿಯ ಅದರಲ್ಲೂ ತಾತ್ವಿಕ ವಚನಗಳ ಶೈಲಿಯು ಹೆಚ್ಚು ವಿಸ್ತೃತದಿಂದ ಕೂಡಿದ್ದು ಗದ್ಯ ಲಯವನ್ನು ಪಡೆದಿದೆ. ಇವರ ವಚನಗಳ ಶಿಲ್ಪ ನಾಲ್ಕು ಸಾಲುಗಳ ಬಂಧದಿಂದ ನಾಲ್ಕು ಪುಟದವರೆಗೂ ದೀರ್ಘಾರ್ತಕವಾಗಿದೆ.

 

ವೀರಶೈವಸಿದ್ಧಾಂತವನ್ನು ತರ್ಕಬದ್ಧವಾಗಿ ನಿರೂಪಿಸಲು ಸಂಸ್ಕೃತ ಪ್ರಮಾಣ ಗ್ರಂಥಗಳಾದ, ಶಿವಧರ್ಮ, ವೀರಶೈವ ಸಂಗ್ರಹ, ವೀರಮಾಹೇಶ್ವರ ಗ್ರಂಥ, ವಾತುಲಾಗಮ, ಶಿವರಹಸ್ಯ, ಸೂಕ್ಷ್ಮಾಗಮ, ಪರಮರಹಸ್ಯ, ಸಿದ್ಧಾಂತ ಶಿಖಾಮಣಿ, ಸ್ಕಾಂದ ಪುರಾಣ, ಪದ್ಮಪುರಾಣ, ಲಿಂಗಪುರಾಣ, ಬ್ರಹ್ಮಾಂಡ ಪುರಾಣ  ಮುಂತಾದ ಕೃತಿಗಳಿಂದ ಸಂಸ್ಕೃತ ಶ್ಲೋಕಗಳನ್ನು ಆಕರಗಳಾಗಿ ಬಳಸಿಕೊಂಡಿದ್ದು, ನಿರೂಪಣೆಯಲ್ಲಿ ಸ೦ದರ್ಭೋಚಿತವಾಗಿ  ಬಳಕೆಯಾಗಿವೆ.

 

ಒಟ್ಟಾರೆ ಇವರ ವಚನಗಳನ್ನು ಕುರಿತು, ಪ್ರಭುಸ್ವಾವಿಗಳು ಬೂದಿಹಾಳಮಠರವರು ಹೇಳಿರುವ ವೀರಶೈವತತ್ತ್ವಗಳನ್ನು ತಿಳಿಯಾದ ಭಾಷೆಯಲ್ಲಿ ತಿಳಿಸುವುದರಿಂದ ಇದು ಒಂದು  ಉಪದೇಶ ಗ್ರಂಥವೆಂದೂ, ಶಿವಾನುಭವ ಶಾಸ್ತ್ರ ಸಾರವೆಂದು, ಶಿವಾನುಭವ ಶಬ್ದಕೋಶವೆಂದು, ಹೇಳಲು ಅಭ್ಯಂತರವಿಲ್ಲ  ಎಂಬ ವಾಕ್ಯಗಳಲ್ಲಿ ಉತ್ಪ್ರೇಕ್ಷೆ ಇದ್ದರೂ ಸ್ವಲ್ಪ ಮಟ್ಟಿಗೆ ಖಚಿತತೆ ಇದೆ. ವೀರಶೈವ ಸಿದ್ಧಾಂತವನ್ನು ನಿರೂಪಿಸುವಲ್ಲಿ ಚೆನ್ನಬಸವಣ್ಣ ಆದಯ್ಯರನ್ನು ನೆನಪಿಗೆ ತಂದು ಕೊಡುತ್ತಾರೆ. ಇವರ ವಚನಗಳು ರಚನೆಯಾದ ನಂತರದ ಕಾಲದಲ್ಲಿ ತುಂಬ ಜನಪ್ರಿಯತೆಯನ್ನು ಗಳಿಸಿದ್ದವು ಎಂಬುದಕ್ಕೆ ಇಲ್ಲಿಯವರೆಗೂ ಪ್ರಕಟಗೊ0ಡ ಆವೃತ್ತಿಗಳೇ ಸಾಕ್ಷಿ. ಪ್ರಪ್ರಥಮವಾಗಿ ಪ್ರಕಟಗೊಂಡ ವಚನಗಳು ಎಂಬ ಖ್ಯಾತಿ ಇವರ ವಚನಗಳಿಗೆ ಸಲ್ಲುತ್ತದೆ. ಇವರ ವಚನಗಳನ್ನು ವಿಶ್ವಕರ್ಮ ಸಮಾಜದ ಪುರವಂತರು ಗುಗ್ಗಳ ಮೊದಲಾದ ಸಮಾರಂಭಗಳಲ್ಲಿ ಒಡಪುಗಳಾಗಿ ಉಗ್ಗಡಿಸುವುದು ವಿಶಿಷ್ಟವಾಗಿದೆ. ಅದ್ವೈತ ತತ್ವಾವಲಂಬಿಗಳು ಇವರ ವಚನಗಳಲ್ಲಿಯ ಯೋಗ ಅಧ್ಯಾತ್ಮಕ್ಕೆ ಸಂಬಂಧಿಸಿದ ವಚನಗಳನ್ನು ಕೆಲವೆಡೆ ಬಳಸಿಕೊಂಡಿದ್ದಾರೆ.

 

ಇವರೇ ಬರೆದರೆಂದು ಹೇಳಲಾದ ಅಖಂಡೇಶ್ವರ ಜೋಗುಳು ೪೧ ಪದಗಳು ದೊರೆತಿವೆ. ಜೋಗುಳ ಪದಗಳಲ್ಲಿ ಬರುವ ಬಹಳಷ್ಟು ವಿಷಯಗಳು ಇವರ ಪ್ರಾಣಿಲಿಂಗಿಸ್ಥಲದ ವಚನಗಳುನ್ನು ನೆನಪಿಗೆ ತಂದುಕೊಡುತ್ತವೆ. ಶಿವಾನುಭವವನ್ನು ನಿರೂಪಿಸಿವೆ. ಕಲ್ಯಾಣಪಟ್ಟಣದಲ್ಲಿ ಬಸವಾದಿ ಪ್ರಮಥರು ಶಿವನರೂಪವಾಗಿ ಕೂಡಿದ್ದರು   ಎಂದು ನೂತನ ಶರಣರುಗಳನ್ನು ನಾಲ್ಕು ಪದ್ಯಗಳಲ್ಲಿ  ಸ್ಮರಿಸಿದ್ದಾರೆ.

ನಿದರ್ಶನಕ್ಕೆ,

ಶುದ್ಧ ಪ್ರಸಾದವನು ಗುರುವಿನಿಂ ಪಡೆದು

ಸಿದ್ಧ ಪ್ರಸಾದವನು ಲಿಂಗದಿಂ ಪಡೆದು

ಚಿದ್ಘನ ಪ್ರಸಾದವನು ಚರದೊಳ್ ಪಡೆದು ಮಹಾ

ರುದ್ರಂಗೆ ಜೋಜೋ ಎಂದಳು ಶರಣೆ

 

ಜೋಜೋ ಎನ್ನಿರಿ ಅಸಮಾಕ್ಷ ಶಿವಗೆ

ಜೋಜೋ ಎನ್ನಿರಿ ಭಸಿತ ಭೂಸಿತಗೆ

ಜೋಜೋ ಎನ್ನಿರಿ ಶಶಿಯ ಸೂಡಿದಗೆ | ಪಾಡಿ |

ಜೋಜೋ ಎನ್ನಿರಿ ವೃಷಭವಾಹನಗೆ

 

ಇತ್ಯಾದಿಯಾಗಿ ಐದು ಪದಗಳಲ್ಲಿ ಶಿವನನ್ನು ಪರ್ಯಾಯ ನಾಮಗಳಿಂದ ಸ್ತುತಿಸಿದ್ದಾರೆ. ಒಂದು ಪದದಲ್ಲಿಯಂತೂ ಜೋಗುಳದ ಪದಗಳನ್ನು ಕೇಳಿದವರಿಗೆ ಶಿವನೊಲಿಯುವನು. ಸಿದ್ದಿ ದೊರಕುವುದು ಎಂದು ಹೇಳಿದ್ದಾರೆ.

 

ನಿರಾಳ ಸದ್ಗುರು ಸೋತ್ರ

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಹಸ್ತಪ್ರತಿವಿಭಾಗದಲ್ಲಿ ಕೆ. ೧೧೭೫/೧೮ ನಂಬರಿನ ಓಲೆಪ್ರತಿಯಲ್ಲಿಯು, ಷಣ್ಮುಖಸ್ವಾಮಿಯವರು ನಿರೂಪಿಸಿದ ನಿರಾಳ ಗುರುಸ್ತೋತ್ರ ಹೆಸರಿನಡಿಯಲ್ಲಿ ೨೫ ಭಾಮಿನಿ ಷಟ್ಪದಿ ಪದ್ಯಗಳಿವೆ. ಗುರುವನ್ನು, ಗುರುವಿನ ಮಹಿಮೆಯನ್ನು ನಾನಾ ತೆರನಾಗಿ ಸ್ತುತಿಸಲಾಗಿದೆ. ನಿದರ್ಶನಕ್ಕೆ ಕೆಲವು ಪದ್ಯಗಳು.

 

ಬಡವ ನಡೆನಡೆಯುತ್ತ ಭಾಗ್ಯವ

ನೆಡಹಿ ತಾಕ೦ಡ೦ತೆ ರೋಗಿಯು

ಹುಡುಕುತಿಪ್ಪೌಷಧಿಯ ಲತೆ ಕಾಲ್ದೊರಿ ಕಾಂಬಂತೆ

ಒಡಲಕ್ಷುಧೆಯಿಂದಲೆವವಗೆ ಪಾ

ಲ್ಗಡಲ ನಿಧಿಯೆನೆ ಕ೦ಡತೆರನೆ

ನ್ನೊಡೆಯ ಶ್ರೀ ಗುರುದೇವನ೦ಘ್ರಿಯ ಕ೦ಡು ಬದುಕಿದೆನು.

 

ಗುರುವೆ ಪರತರ ನಿತ್ಯನಿರುಪಮ

ಗುರುವೆ ಪರತರ ಸತ್ಯನದ್ವಯ

ಗುರುವೆ ಪರಬೊಮ್ಮಸ್ವರೂಪನೆ ಘನತಕೆ ಘನಮಹಿಮಾ

ಗುರುವೆ ಮುಕ್ತಿಗೆ ಮೂಲ ನಿಶ್ಚಲ

ಗುರುವೆ ಸುರಚಿರ ಭೇದ್ಯ ನಿರ್ಮಲ

ಗುರುವ ನಿನಗಿನ್ನಧಿಕಮಿಲ್ಲನುತಿಹುದು ಶೃತಿತತಿಯು

ಉಳಿದ ಲಘು ಕೃತಿಗಳು ಉಪಲಬ್ಧವಿಲ್ಲದೆ ಇರುವುದರಿಂದ ಸದ್ಯಕ್ಕೆ ಆ ಕೃತಿಗಳ ಬಗೆಗೆ ಏನನ್ನೂ ಹೇಳುವಂತಿಲ್ಲ

( ಇತ್ತೀಚಿಗೆ ಮಾನ್ಯ ಶ್ರೀಡಾ. ವಡ್ಡಗೆರೆ ನಾಗರಾಜಯ್ಯನವರು ಈ ಕೆಳಗಿನಂತೆ ಒಂದು ಸುಳ್ಳು ಸುದ್ದಿಯನ್ನು ಪರಮಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳನ್ನು ಕೇಂದ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದರು. ಅವರಿಗೆ ಬರೆದ ಪತ್ರವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ.

ಈ ಲೇಖನ ಮಾನ್ಯ ಶ್ರೀಡಾ. ವಡ್ಡಗೆರೆ ನಾಗರಾಜಯ್ಯನವರು ತಪ್ಪು ಸಂದೇಶವನ್ನು ಸಾರ್ವಜನಿಕರಲ್ಲಿ ಪ್ರಸಾರ ಮಾಡಿದ್ದರಿಂದ ಈ ಸ್ಪಷ್ಟೀಕರಣವಿರುತ್ತದೆ.

 ಅವಸರದಲ್ಲಿ ಮಾಡುವ ನಿರಾಧಾರ ಆರೋಪಗಳು (hasty and unfounded accusations) ಒಂದು ಗಂಭೀರ ವಿಷಯವಾಗಿದೆ. ಇಂತಹ ಆರೋಪಗಳನ್ನು ಮಾಡುವಾಗ ಅಥವಾ ಅವುಗಳನ್ನು ಪರಿಗಣಿಸುವಾಗ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.

 ತಕ್ಷಣದ ಪ್ರಭಾವ: ಯಾರಾದರೂ ಮಾಡುವ ನಿರಾಧಾರ ಆರೋಪಗಳು ಅನೇಕ ಸಂದರ್ಭಗಳಲ್ಲಿ ತಕ್ಷಣದ ಪ್ರಭಾವವನ್ನು ಉಂಟುಮಾಡುತ್ತವೆ.

ಖಚಿತ ಮಾಹಿತಿಯಿಲ್ಲದಿರುವುದು: ಅರ್ಜೆಂಟ್ ಪರಿಸ್ಥಿತಿಯಲ್ಲಿಯೇ ಆರೋಪಗಳನ್ನು ಮಾಡುವುದು, ಸಾಕ್ಷ್ಯಗಳ ಅಥವಾ ಪರಿಶೀಲಿತ ಮಾಹಿತಿಯ ಕೊರತೆಯ ಕಾರಣದಿಂದಾದರೂ ಆಗಬಹುದು.

 ಕಾನೂನು ಸಮಸ್ಯೆಗಳು: ನಿರಾಧಾರ ಆರೋಪಗಳು ಕಾನೂನು ಹಕ್ಕುಗಳನ್ನು ಉಲ್ಲಂಘಿಸಬಹುದಾಗಿದೆ. ತಪ್ಪು ಆರೋಪಗಳು ಮಾನನಷ್ಟ ಮೊಕದ್ದಮೆಗಳಿಗೆ ಕಾರಣವಾಗಬಹುದು.

 ವ್ಯಕ್ತಿಗತ ಮತ್ತು ವೃತ್ತಿಪರ ಪ್ರಭಾವ: ನಿರಾಧಾರ ಆರೋಪಗಳು ವ್ಯಕ್ತಿಗಳ ಖ್ಯಾತಿಗೆ ತೀವ್ರ ಹಾನಿ ಉಂಟುಮಾಡಬಹುದು. ಇದರಿಂದ ಅವರ ವೃತ್ತಿಪರ ಜೀವನದ ಮೇಲೆ ದೊಡ್ಡ ಪರಿಣಾಮ ಬೀಳಬಹುದು.

 ಆತ್ಮವಿಶ್ವಾಸ ಮತ್ತು ಸಂಬಂಧಗಳು: ಇಂತಹ ಆರೋಪಗಳು ಆತ್ಮವಿಶ್ವಾಸವನ್ನು ಹಾಳುಮಾಡಬಹುದು ಮತ್ತು ವ್ಯಕ್ತಿಗಳ ನಡುವಿನ ನಂಬಿಕೆಯನ್ನು ಕುಸಿತಗೊಳಿಸಬಹುದು.

 ಸಮಯವಿಲ್ಲದ ಪರಿಶೀಲನೆ: ಅವಸರದ ಆರೋಪಗಳು ಸತ್ಯಾಸತ್ಯತೆಗಳನ್ನು ನಿಖರವಾಗಿ ಪರಿಶೀಲಿಸಲು ಸಮಯವಿಲ್ಲದ ಕಾರಣದಿಂದ ಉಂಟಾಗಬಹುದು.

ನಿರಾಧಾರ ಆರೋಪಗಳನ್ನು ತಪ್ಪಿಸಲು ಸೂಕ್ತ ಮಾಹಿತಿಯನ್ನು ಸಂಗ್ರಹಿಸಿ, ಸಾಕ್ಷ್ಯಾಧಾರವನ್ನು ಪರಿಶೀಲಿಸಿ, ಮತ್ತು ಆ ನಂತರವೇ ಆರೋಪಗಳನ್ನು ಮಾಡುವುದು ಉತ್ತಮ. ಇವುಗಳನ್ನು ಕೈಗೊಳ್ಳುವುದರಿಂದ ತಪ್ಪು ಆರೋಪಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ ಮತ್ತು ಎಲ್ಲರೂ ನ್ಯಾಯವನ್ನು ಅನುಭವಿಸಬಹುದು. )

  

ದಿ.೨ ಜೂನ ೨೦೨೪

 ಗೆ, ಮಾನ್ಯಶ್ರೀ ಡಾ.ವಡ್ಡಗೆರೆ ನಾಗರಾಜಯ್ಯ

ಬೆಂಗಳೂರು

ಮೊಬೈಲ ಸಂಖ್ಯೆ :  8722724174

ಮಾನ್ಯರೆ,

ವಿಷಯ: ತಾವು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಶ್ರದ್ಧೆಯ ಗುರುಗಳಾದ ಪರಮಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಕುರಿತು ಸುಳ್ಳು ಸಂಗತಿಗಳನ್ನು ಅಪಪ್ರಚಾರ ಮಾಡುತ್ತಿರುವದರ ಕುರಿತು,

 ತಾವು ದಿ. ೩೧-೦೫-೨೦೨೪ ವಾಟ್ಸ್ಯಾಪ ಜಾಲತಾಣಗಳಲ್ಲಿ ಹರಿಬಿಟ್ಟ ವಿಷಯ

 “ಕೊಲ್ಹಾಪುರದ ಶಾಹು ಮಹಾರಾಜರು ಲಿಂಗಾಯತ ಧರ್ಮದ ದೀಕ್ಷೆ ಸ್ವೀಕರಿಸಲು ಒಲವು ತೋರಿಸಿದಾಗ ಲಿಂಗಾಯತ ದೀಕ್ಷೆ ನೀಡುವುದು ಬೇಡವೆಂದು ಪ್ರತಿರೋಧ ಒಡ್ಡಿದವರೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು. ಅಂದು ಶಾಹು ಮಹಾರಾಜರು ಲಿಂಗಾಯತ ಧರ್ಮದ ದೀಕ್ಷೆಯನ್ನು ಸ್ವೀಕಾರ ಮಾಡಿದ್ದಿದ್ದರೆ ಇಂದು  ಮಹಾರಾಷ್ಟ್ರ ರಾಜ್ಯದಲ್ಲಿ ವೀರಶೈವ ಜಂಗಮರೆಂದು ಗುರುತಿಸಿಕೊಂಡಿರುವ ಸಿಂಹಪಾಲು ಜನ ಲಿಂಗಾಯತರಾಗಿ ಉಳಿದಿರುತ್ತಿದ್ದರು. ಅಂತಹ ಸಾಧ್ಯತೆಯನ್ನು ತಪ್ಪಿಸಿದ್ದು ಇದೇ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳು.” 

ಎಂದು ಬರೆದು ನಂತರ ಅದನ್ನು ಫೇಸಬುಕ್ ಜಾಲತಾಣಗಳ ಮೂಲಕ ಪ್ರಚಾರ ಮಾಡಿರುವಿರಿ.

 

ವಿಷಯ ತಿಳಿದು ನಾನು ತಮಗೆ ಅಂದೇ ೩೧-೦೫-೨೦೨೪ ರಂದು ತಮ್ಮ ಮೊಬೈಲ ಸಂಖ್ಯೆ :  8722724174 ಗೆ ಫೋನ ಮಾಡಿ ತಾವು ಪ್ರಚಾರ ಮಾಡುತ್ತಿರುವ ವಿಷಯಕ್ಕೆ ಸಾಕ್ಷಿ ಮತ್ತು ಪುರಾವೆಗಳನ್ನು  ಕೇಳಿದೆ.

ಅದಕ್ಕೆ ಪ್ರತಿಯಾಗಿ ತಾವು ಯಾರದೋ ಬಾಯಿಯಿಂದ ಕೇಳಿದ ವಿಷಯವನ್ನು ಬರೆದಿರುವೆ ಎಂದು ತಿಳಿಸಿರುವಿರಿ.

ಒಬ್ಬ ಸಂಶೋಧಕ,ಕವಿ, ಸಾಹಿತಿ ಮತ್ತು ವಿಶ್ವವಿದ್ಯಾಲಯದಿಂದ ಡಾಕ್ಟರೇಟ ಪಡೆದುಕೊಂಡಿರುವ ತಮ್ಮ ವ್ಯಕ್ತಿತ್ವಕ್ಕೆ ಈ ರೀತಿಯ ಸ್ಪಷ್ಠೀಕರಣಗಳು ಶೋಭೆ ತರುವದಿಲ್ಲ.

 

ಯಾರೋ ಹೇಳಿದರು ಎಂದ ಮಾತ್ರಕ್ಕೆ ಹಿಂದೆ ಮುಂದೆ ನೋಡದೇ  ಜಾಲತಾಣಗಳಲ್ಲಿ ಹರಿಬಿಡಲು ಇದು ಕಾಗಕ್ಕ ಗುಬ್ಬಕ್ಕನ ಕಥೆಯಲ್ಲ.

 

 ತಾವು ಬರೆದಿದ್ದು ನಮ್ಮ ಆರಾಧ್ಯ ಗುರುಗಳಾದ ಪರಮಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರಾದ  ಛತ್ರಪತಿ ಶಾಹು ಮಹಾರಾಜರ ಕುರಿತು ಎಂಬುದನ್ನು ತಾವು ಅಷ್ಠೋಂದು ಲಘುವಾಗಿ ಪರಿಗಣಿಸಬಾರದಾಗಿತ್ತು.

ನಿಮಗೆ ನಿಮ್ಮ ಆರಾಧ್ಯರು ಹೇಗೆ ಶ್ರೇಷ್ಠರೋ ಹಾಗೆ ನಮಗೂ ನಮ್ಮ ಗುರುಗಳು ಶ್ರೇಷ್ಠರು ಎಂದು ತಾವು ಯಾವ ಕ್ಷಣದಲ್ಲೂ ಅಥವ ಯಾರ ಬೆಂಬಲದ ಕೃಪಾ ಛತ್ರದಲ್ಲಿದ್ದಾಗಲೂ ಮರೆಯಬಾರದು.

 ಸಮಾಜದ ಪ್ರಶಾಂತ ವಾತಾವರಣದಲ್ಲಿ ದುರ್ಗಂಧವನ್ನೆಬ್ಬಿಸಿದ ವಿವಾದದ ವಿಷಯ ಕುರಿತು ದಾಖಲೆ ಸಮೇತ ಬರೆಯದೇ, ಬರೆಯುವ ತೆವಲಿಗೆ ಬರೆದು ಜಾಲತಾಣಗಳಲ್ಲಿ ಹರಿಬಿಡುವುದು  ಅಕ್ಷಮ್ಯ ಅಪರಾಧ.ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದೆನಿಸುವದಿಲ್ಲ ಅದು ಅನೈತಿಕ ಬೌದ್ಧಿಕತೆ ಎಂದೆನಿಸುತ್ತದೆ

 ೩೧-೦೫-೨೦೨೪ ರಂದು ತಮ್ಮ ಜೊತೆ ಮಾತನಾಡಿದಾಗ ಸಂಬಂದಿಸಿದ ಮಾಹಿತಿ ಕೊಡಿ ಎಂದು ನನಗೆ ತಾವು ಹೇಳಿದುದರಿಂದ  ನಾನು ಸಂಬಂಧಿಸಿದ ಮಾಹಿತಿಗಳನ್ನು ತಮಗೆ ಒದಗಿಸುತ್ತಿರುವೆ.

ಛತ್ರಪತಿ ಶಾಹು ಮಹಾರಾಜ ಕೊಲ್ಲಾಪುರ

 ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರು ಜನ್ಮ ತಾಳಿದ್ದು  ೨೪.೬.೧೮೭೪ ಮತ್ತು ಮರಣ ಹೊಂದಿದ್ದು  -೬.೫, ೧೯೨೨ (ಜೀವಿತಾವಧಿ ೪೭ ವರ್ಷಗಳು).

ಪರಮಪೂಜ್ಯ ಲಿಂಗೈಕ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಜನ್ಮ ತಾಳಿದ್ದು ೧೧-೦೯-೧೮೬೭ ಮತ್ತು ಲಿಂಗೈಕ್ಯರಾದುದು ೧೯-೦೨-೧೯೩೦.(ಜೀವಿತಾವಧಿ ೬೩ ವರ್ಷಗಳು)

ಇವರೀರ್ವ ಮಹಾತ್ಮರ  ಜೀವಿತಾವಧಿಯ  ಸಮಯದಲ್ಲಿ  ಪರಮಪೂಜ್ಯ ಹಾನಗಲ್ಲ ಶ್ರೀಗಳು  ಮಹಾರಾಷ್ಟ್ರರಾಜ್ಯಕ್ಕೆ ಪ್ರಯಾಣ ಬೆಳಿಸಿದ್ದು ಮೂರುಬಾರಿಯಾದರೂ ಒಮ್ಮೆಯೂ ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರನ್ನು ಭೇಟಿಯಾಗಿಲ್ಲ

  1. ೧೯೦೭ ಸೊಲ್ಲಾಪುರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಮೂರನೆ ಯ ಅಧಿವೇಷನ ಕ್ಕೆ ಹೋಗಿದ್ದು
  2. ೧೯೦೯ ಗಡಹಿಂಗ್ಲಜಗೆ ಇಂಗ್ಲೀಷ ವಿದ್ವಾಂಸರಾದ ಶ್ರೀ ವೀರಭದ್ರ ಶ್ರೇಷ್ಠೀ ಯವರನ್ನು ಕರ್ನಾಟಕದಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ವ್ಯವಸ್ಥೆಮಾಡಲು .
  3. ೧೯೨೦ ಸೊಲ್ಲಾಪುರಕ್ಕೆ ಪೂಜ್ಯ ನಾಲತ್ವಾಡ ವೀರೇಶ್ವರ ಶರಣರ ಅಂತ್ಯಕ್ರಿಯೆಗೆ ಹೋಗಿದ್ದು.

ಶಾಹುಮಹಾರಾಜರು ಕರ್ನಾಟಕಕ್ಕೆ ಎಂದೂ  ಭೇಟಿ ನೀಡಿಲ್ಲ ೧೯೧೯-೨೦ರಲ್ಲಿ ನಡೆದ ದಸರಾ ಉತ್ಸವದ ಸಂದರ್ಭದಲ್ಲಿ ಅಖಿಲ ಭಾರತ ಕಾಸ್ಟ್ ಕಾನ್ಫರೆನ್ಸ್ ನಡೆದಿತ್ತು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಶಾಹು ಮಹಾರಾಜರಿಗೆ ಆಮಂತ್ರಣ ನೀಡಿ, ಈ ಅಧಿವೇಶನದಲ್ಲಿ ಪಾಲ್ಗೊಳ್ಳ ಬೇಕೆಂದು ಕೋರಿದರು. ಆದರೆ ಶಾಹು ಮಹಾರಾಜರು ಅದರಲ್ಲಿ ತಾವು ಭಾಗವಹಿಸದ ಕಾರಣದಿಂದ ಶ್ರೀ ವಿ.ಆರ್.ಶಿಂದೆ ಎಂಬ ಸತ್ಯಶೋಧಕ ಸಮಾಜದ ಮುಖಂಡರನ್ನು ಮೈಸೂರಿಗೆ ಕಳುಹಿಸಿದ್ದರು.

ಮಹಾರಾಷ್ಟ್ರದಲ್ಲಿ ಪೇಶ್ವೆಗಳ ಆಡಳಿತದೊಂದಿಗೆ ಆರಂಭವಾದ ಕಟು ಬ್ರಾಹ್ಮಣವಾದದಿಂದ ಸಂತ್ರಸ್ತವಾದ ಸಮಾಜದಲ್ಲಿ ಸಾಮಾಜಿಕ ಪರಿವರ್ತನೆಯ ಬಿರುಗಾಳಿ ಎಬ್ಬಿಸಿದವರಲ್ಲಿ ಕೊಲ್ಲಾಪುರದ ಶಾಹು ಛತ್ರಪತಿ ಮಹಾರಾಜರು  ಚರಿತ್ರೆಯಲ್ಲಿ ಎದ್ದು ಕಾಣುವ ಹೆಸರು.

೧೮೯೪ ರಲ್ಲಿ ಜರುಗಿದ ಅವರ ಪಟ್ಟಾಭಿಷೇಕದ ಧಾರ್ಮಿಕ ಸಮಾರಂಭದಲ್ಲಿ ರಾಜಮನೆತನದ ಬ್ರಾಹ್ಮಣ ಪುರೋಹಿತ ನಾರಾಯಣ ಭಟ್ ಅವರು ಶಾಹು ಶೂದ್ರ ವರ್ಣಕ್ಕೆ ಸೇರಿದವರು ಎಂದು ನಿರ್ದಿಷ್ಟ ವೇದೋಕ್ತ ವಿಧಿಗಳನ್ನು ಮಾಡಲು ನಿರಾಕರಿಸಿದರು.ಇದು ಶಾಹು ಮಹಾರಾಜರ ಸ್ವಾಭಿಮಾನಕ್ಕೆ ತೀವೃ ಆಘಾತವನ್ನುಂಟುಮಾಡಿತು. ಇದನ್ನು ವೇದೋಕ್ತ ವಿವಾದ ಎಂದು ಕರೆಯಲಾಯಿತು.

ಇದು ಶಾಹು ಮಹಾರಾಜರು  ಆರ್ಯ ಸಮಾಜ ಮತ್ತು ಸತ್ಯಶೋಧಕ್ ಸಮಾಜವನ್ನು ಬೆಂಬಲಿಸಲು ಮತ್ತು ಮರಾಠ ಸಮುದಾಯದ ಹಕ್ಕುಗಳಿಗಾಗಿ ಪ್ರಚಾರ ಮಾಡಲು ಕಾರಣವಾಯಿತೇ ಹೊರತು ವೀರಶೈವ-ಲಿಂಗಾಯತ ಧರ್ಮವನ್ನಲ್ಲ . ಅವರು ಪುರೋಹಿತರನ್ನು ತೆಗೆದುಹಾಕುವ ಮತ್ತು ಕ್ಷತ್ರ ಜಗದ್ಗುರು (ಕ್ಷತ್ರಿಯರ ವಿಶ್ವ ಗುರು) ಎಂಬ ಬಿರುದು ಹೊಂದಿರುವ ಬ್ರಾಹ್ಮಣೇತರರ ಧಾರ್ಮಿಕ ಶಿಕ್ಷಕರಾಗಿ ಯುವಕ ಮರಾಠರನ್ನು ನೇಮಿಸುವ ಧೈರ್ಯದ ಹೆಜ್ಜೆಯನ್ನು ತೆಗೆದುಕೊಂಡರು.

 ಮಾನ್ಯಶ್ರೀ ಡಾ.ವಡ್ಡಗೆರೆ ನಾಗರಾಜಯ್ಯನವರೆ , ದಯವಿಟ್ಟು ಇಲ್ಲಿ ಗಮನಿಸಿ ಆ ಸಂಧರ್ಭದಲ್ಲಿ ವೀರಶೈವ-ಲಿಂಗಾಯತವೂ ಮಹಾರಾಷ್ಟ್ರದಲ್ಲಿ ಶೂದ್ರರ ಸ್ಥಾನದಲ್ಲಿಯೇ ಇತ್ತು ( ಪರಳಿ ವೈದ್ಯನಾಥ ದೇವಾಲಯದಲ್ಲಿ ವೀರಶೈವ-ಲಿಂಗಾಯತರ ಪ್ರವೇಶ ನಿರಾಕರಣೆ ೧೯೧೫-೧೯೨೯) ಹೈದರಾಬಾದ ನಿಜಾಂ ಕೋರ್ಟ-ವಾದ ವಿವಾದ ಮತ್ತು  ೧೯೦೯ ರಲ್ಲಿ ಸೊಲ್ಲಾಪುರದ ವಾರದ ಮಲ್ಲಪ್ಪನವರಿಂದ ವೀರಶೈವ-ಲಿಂಗಾಯತರನ್ನು ಶೂದ್ರ ಸ್ಥಾನದಿಂದ ಮೇಲೆತ್ತಲು “ಲಿಂಗಿ ಬಾಹ್ಮಣ” ರೆಂದು ಮಾಡಿದ ಪ್ರಯತ್ನಗಳು).

ಶಾಹು ಮಹಾರಾಜರು ಬ್ರಾಹ್ಮಣ ಗುಂಪುಗಳ ಅಪಪ್ರಚಾರವನ್ನೆದುರಿಸಲು ಬ್ರಾಹ್ಮಣೇತರರಿಗೆ ಪತ್ರಿಕೆಗಳನ್ನು ಶುರು ಮಾಡಲು ನೆರವು ನೀಡಿದರು. ಆದರೆ ಅವರೆಂದಿಗೂ ಜಾತಿವಾದವನ್ನು ಬೆಂಬಲಿಸಲಿಲ್ಲ.

ಶಾಹು ಮಹಾರಾಜರ  ಅವರ ಈ ಸಾಮಾಜಿಕ ಕ್ರಾಂತಿಯ ಆಂದೋಲನದ ಹಿಂದೆ ಇದ್ದುದು

  1. ಆರ್ಯ ಸಮಾಜ,
  2. ಅನಿಬೆಸಂಟರ ಥಿಯೋಸಾಫಿಕಲ್ ಸೊಸೈಟಿ,
  3. ಮಹಾತ್ಮ ಫುಲೆ ಅವರ ಸತ್ಯಶೋಧಕ ಸಮಾಜ ಮತ್ತು
  4. ಅಮೆರಿಕನ್ ಕ್ರಿಶ್ಚಿಯನ್ ಮಿಷನರಿಯೊಂದರ ಸ್ಪೂರ್ತಿ.

ಹೊರತು ವೀರಶೈವ-ಲಿಂಗಾಯತ ಧರ್ಮ ವಲ್ಲ ( ಉಲ್ಲೇಖ : ರಾಜರ್ಷಿ ಶಾಹು ಛತ್ರಪತಿ.ಲೇಖಕ ಪ್ರೋ.ಹನುಮಂತ.Pages 898. 400.00.Year of Publication: 2018.Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ .Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು 560174 ).

 ವಸ್ತುಸ್ತಿತಿ ಹೀಗಿದ್ದಾಗ ಮತ್ತು ಶಾಹು ಮಹಾರಾಜರ ಜೀವಿತಾವಧಿಯಲ್ಲೇ ವೀರಶೈವ-ಲಿಂಗಾಯತ ಧರ್ಮೀಯರು ಶೂದ್ರರಾಗಿಯೇ ಇದ್ದ ಸಂಧರ್ಭದಲ್ಲಿ ಅವರು ಹೇಗೆ  ಲಿಂಗಾಯತ ಧರ್ಮದ ದೀಕ್ಷೆ ಸ್ವೀಕರಿಸಲು ಒಲವು ತೋರಿಸಲು ಸಾಧ್ಯ ?.

 ಕಾಮಾಲೆಯ ಕಣ್ಣುಗಳನ್ನು ಹೊಂದಿದವರಿಗೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳು ಮಸಕಾಗಿಯೇ ಕಾಣುತ್ತವೆ.   ಅವರ ಧರ್ಮ ಜಾಗೃತಿಗೆ ಒಂದು ಚಿಕ್ಕ ಉದಾಹರಣೆಯನ್ನು ಇಲ್ಲಿ ಉಲ್ಲೇಖಿಸಲೇಬೇಕು.

೧೯೧೦ ರಲ್ಲಿ ಬೀಳಗಿ ತಾಲೂಕಿನ ಹಲಗಲಿ ಗ್ರಾಮಕ್ಕೆ ಶ್ರೀ ಕುಮಾರ ಸ್ವಾಮಿಗಳು ಶಿವಯೋಗ ಮಂದಿರದ ಭಿಕ್ಷೆಗೆಂದು ಹೋಗಿದ್ದರು. ಈ ಊರಿನ ವಿವಿಧ ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಶಿವಸಿದ್ಧ ಸರನಾಯಕ ಎಂಬ ಈ ಊರ ಪ್ರಮುಖರು ಮೂರುಸಾವಿರ ರೂಪಾಯಿಗಳನ್ನು ಕೂಡಿಸಿ ತಮ್ಮೆಲ್ಲರ ಕಾಣಿಕೆಯಾಗಿ ನೀಡಲು ಬಂದರು. ಪೂಜ್ಯರಿಗೆ ಅಲ್ಲಿ ಆಚಾರ ವಿಚಾರಗಳು ಭಿನ್ನವೆನಿಸಿದವು.ಅವರು ಆ ಕಾಣಿಕೆ ಸ್ವೀಕರಿಸಲಿಲ್ಲ.

ಕಾಣಿಕೆ ತೆಗೆದುಕೊಳ್ಳಲೂ ನಿಯಮಗಳಿರುತ್ತವೆ ಎನ್ನುವುದನ್ನು ಶ್ರೀ ಕುಮಾರ ಸ್ವಾಮಿಗಳು ಸ್ಪಷ್ಟಪಡಿಸಿದ್ದರು. ಶ್ರೀ ಕುಮಾರ ಸ್ವಾಮಿಗಳ ಈ ನಿಲವು ಕಾಣಿಕೆ ನೀಡಲು ಬಂದವರನ್ನು ಬಿಕ್ಕಟ್ಟಿನಲ್ಲಿ ಮುಳುಗಿಸಿತ್ತು. ತಮ್ಮ ಜನಾಂಗದೊಳಗಿನ ಸದ್ಯದ ಸ್ಥಿತಿಯನ್ನು ಅವರು ನೋವಿನಿಂದಲೇ ಶ್ರೀ ಕುಮಾರ ಸ್ವಾಮಿಗಳಲ್ಲಿ ಬಿನ್ನವಿಸಿಕೊಂಡಿದ್ದರು. `ನಮ್ಮ ಜನಾಂಗದವರು ಹೆಚ್ಚು ಸಂಖ್ಯೆಯಲ್ಲಿಲ್ಲ ಬುದ್ದಿ. ನಮ್ಮಲ್ಲಿ ಲಿಂಗದೀಕ್ಷೆ ಪಡೆಯಬೇಕು ಅನ್ನೋ ಮನೋಭಾವ ಎಲ್ಲರಲ್ಲೂ ಇಲ್ಲ”

ಮೂರು ಸಾವಿರ ರೂಪಾಯಿಗಳಿಗೆ ಧಾರ್ಮಿಕತೆ ಮಾರಿಕೊಂಡ ನಡತೆ ತಮ್ಮದಲ್ಲವೆಂಬ ಶ್ರೀ ಕುಮಾರ ಸ್ವಾಮಿಗಳ ನಿಷ್ಠುರತೆ ಗೆ ಬೆಚ್ಚಿದ ಹಲಗಲಿ ಗ್ರಾಮದ ಭಕ್ತರು ಸಾಮೂಹಿಕ ಲಿಂಗದೀಕ್ಷೆ ಪಡೆದು  ಗುರುಗಳಿಗೆ ಕಾಣಿಕೆ ಸಲ್ಲಿಸಿದ್ದು ಇತಿಹಾಸ. ಅವರು ಎಂದೂ ನಂಬಿ ಬಂದ ಭಕ್ತರನ್ನು ನಡು ನೀರಿನಲ್ಲಿ ಕೈಬಿಟ್ಟವರಲ್ಲ. ಮನಸ್ಸನ್ನು ಪರಿವರ್ತನೆ ಮಾಡಿ ಭಕ್ತರಿಗೆ ಧಾರ್ಮಿಕ ದೀಕ್ಷೆ ಕೊಟ್ಟವರು

 ತಾವು ತಮ್ಮ  ಸುಳ್ಳು ಸುದ್ದಿ ಹರಡಿದರ ಪರಿಣಾಮ ನಮಗಾದ ನೋವು ತಮಗೆ ಅರ್ಥವಾಗಲಿಕ್ಕಿಲ್ಲ. ಬಹುಷಃ ತಮಗೆ ತಮಾಷೆಯ ವಸ್ತುವಾಗಿರಬಹುದು.

ಕೆಲವರಿಗೆ ಕುಡಿಯುವ ನೀರಿನಲ್ಲಿ ಮೂತ್ರ ಮಾಡಿ ದೂರದಲ್ಲಿ ನಿಂತು ಆ ನೀರನ್ನು ಕುಡಿಯುವವರನ್ನು ಕಂಡು ಸಂತೋಷ ಪಡುವ ಚಾಳಿಯಿರುತ್ತದೆ ತಾವು ಆ ಗುಂಪಿಗೆ ಸೇರಬಾರದು ಎಂಬ ನನ್ನ ಅಭಿಮಾನಪೂರ್ವಕ ಹಕ್ಕೋತ್ತಾಯ.

ತಾವು ಈ ನಾಡು ಕಂಡ ಅಪರೂಪದ ಕವಿ, ಸಂಶೋಧಕ, ಸಂಸ್ಕೃತಿ ಚಿಂತಕ, ಹೋರಾಟಗಾರರು, ಬರೆಯಿರಿ ಆದರೆ ದಾಖಲೆಗಳಿಲ್ಲದೆ ಮತ್ತು ಸಾಕ್ಷಿಗಳಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಬೇಡಿ ಎಂದು ನನ್ನ ಕಳಕಳಿಯ ಮನವಿ.

ಇತಿ ನಮಸ್ಕಾರಗಳೊಂದಿಗೆ,

ಶ್ರೀಕಂಠ.ಚೌಕೀಮಠ

ಅಧ್ಯಕ್ಷ :ಅಖಿಲ ಭಾರತ ವೀರಶೈವ ಮಹಾಸಭಾ .ದೆಹಲಿ ರಾಜ್ಯ ಘಟಕ

ಸೇವಕ:ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ.

ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ

ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು

ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ.

ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ

 

ಪೂಜ್ಯರ ಆಶೀರ್ವಚನ

     ಕೈಬರಹದ ಸುಕುಮಾರ ಪತ್ರಿಕೆಯು ಸಾಧಕರಿಂದ ಪ್ರಾರಂಭವಾಯಿತು. ೧೯೩೩ರಲ್ಲಿ ಶಿವಯೋಗಮಂದಿರಕ್ಕೆ ಆಗಮಿಸಿದ ಶತಾಯುಗಳಾದ ಸಿದ್ಧಗಂಗಾ ಸ್ವಾಮಿಗಳವರ ಅಮೃತ ನುಡಿಗಳು ಹೀಗಿವೆ

 “ಇದರಲ್ಲಿ ಇರುವ ಸಾಮಾಜಿಕ, ನೀತಿಬೋಧಕ ಹಾಗೂ ತಾತ್ವಿಕ ಲೇಖನಗಳು ಸಾಧಕರ ಅನುಪಮ ಶ್ರದ್ಧಾ, ಭಾಷಾಸೌಷ್ಠವ, ಕನ್ನಡ ಪ್ರೇಮ ಮತ್ತು ವಿದ್ಯಾ ನಿಪುಣತೆ ಇವುಗಳನ್ನು ಉತ್ಕಟವಾಗಿ ಸ್ಪಷ್ಟಿಕರಿಸುತ್ತದೆ. ಇದರಲ್ಲಿ ಬರೆದಿರುವ ಚಿತ್ರಗಳು ಮುದ್ದಾಗಿಯು ಮನೋಹರವಾಗಿಯೂ ಇವೆ. ಸಣ್ಣ ಸಣ್ಣ ಕವನಗಳು ಹೃದಯಂಗಮನವಾಗಿ ಮಹಾಮಂದಿರದ ಸನ್ನಿವೇಷದ ಮಹತ್ವವನ್ನು ವರ್ಣಿಸತಕ್ಕವಾಗಿವೆ,”

ಈ ಕೈಬರಹ ಸುಕುಮಾರ ಪತ್ರಿಕೆಯು ೧೯೫೦ ಶಿವರಾತ್ರಿಯ ಶುಭ ಸಂದರ್ಭದಲ್ಲಿ ಅಚ್ಚಿನ ಸ್ವರೂಪದಲ್ಲಿ ಪ್ರಕಟವಾಗಿದ್ದು ಎಲ್ಲರಿಗೂ ಸಂತೋಷವಾಯಿತು. ವೀರಶೈವ ಧರ್ಮಕ್ಕೆ ಸಮ್ಮಂದಿಸಿದ ಸಣ್ಣ ಪುಸ್ತಕಗಳನ್ನು ಪ್ರಕಟಿಸಬೇಕೆಂಬ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರ ಸತ್ಯ ಸಂಕಲ್ಪವು ಈಡೇರಿದಂತಾಯಿತು. ಈ ಪತ್ರಿಕೆಯು ಕೆಲವೇ ವರ್ಷಗಳಲ್ಲಿ ಪಂಡಿತರ, ಸಂಶೋಧಕರ, ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಯಿತೆಂದು ಹೆಮ್ಮೆಯೆನಿಸುತ್ತದೆ.

     ಈ ಸುಕುಮಾರ ಪತ್ರಿಕೆಯು ಅಂತರ್ಜಾಲದಲ್ಲಿ ಪ್ರಕಟವಾಗಲು ಶ್ರೀ ಹಾನಗಲ್ಲ ಕುಮಾರಶಿವಯೋಗಿ ಸೇವಾ ಸಮಿತಿ ನವದೆಹಲಿ ಇದರ ಅಧ್ಯಕ್ಷರು ಶ್ರೀ ಕುಮಾರೇಶನ ತತ್ವಗಳನ್ನು ದೇಶ ವಿದೇಶಗಳಲ್ಲಿ ಪ್ರಚಾರಪಡಿಸಬೇಕೆಂಬ ಪ್ರಬಲ ಹಂಬಲವಿರುವ ಆದರಣೀಯ ಶ್ರೀಕಂಠ ಚೌಕಿಮಠ ಇವರ ಪಾತ್ರ ಬಹಳ ಮಹತ್ವದ್ದಾಗಿದೆ. ಈ ಪತ್ರಿಕೆಯು ತೀರ್ವವಾಗಿ ಬೆಳೆದು ಅಂತರ್ಜಾಲದಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವನ್ನು ಗಳಸಲೆಂದು ಹಾರೈಸುತ್ತೇವೆ.

 

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 ಶಿಖೆಯೊಳು* ತ್ರಿದಳ | ವ್ಯಾಪಕನಾದ ಬಸವನಾ

ಮಕದ ನಿಶ್ಶೂನ್ಯ – ಸುಕಳಾಲಿಂಗವ ತೋ |

ರ್ದಕಳಂಕ ಗುರುವೆ ಕೃಪೆಯಾಗು    ||೧೪೬||

ಬ್ರಹ್ಮರಂಧ್ರದ ಮುಂದೆ ಶಿಖಾಚಕ್ರವು ಗೋಚರವಾಗುತ್ತದೆ. ಇದು ಎಂಟನೆಯದು. ಶಿಖಾಚಕ್ರವು ಪಶ್ಚಿಮ ಶಿಖೆಯ ಮೇಲ್ಬಾಗದಲ್ಲಿರುವದು. ಇದುವೆ ಎಲ್ಲ ಚಕ್ರಗಳಿಗಿಂತ ಉನ್ನತಸ್ಥಾನವನ್ನು ಆಕ್ರಮಿಸಿದೆ. ಇದು ಮಸ್ತಕದ ಸ್ವಲ್ಪು ಹಿಂಬದಿಗೆ ಇರುವದು. ಈ ಶಿಖಾಚಕ್ರದ ದ್ಯೋತಕವೆಂಬಂತೆ ವೈದಿಕ ಸಂಪ್ರದಾಯದಲ್ಲಿ ಶಿಖೆ ಅಥವಾ ಚಂಡಿಕೆಯನ್ನು ಬಿಡುತ್ತಾರೆ. ಈ ಚಕ್ರವು ಮೂರು ದಳಗಳಿಂದ ವಿರಾಜಮಾನವಾಗಿದೆ. ತ್ರಿದಳಗಳಿಂದ ಕೂಡಿದ ಬಿಲ್ವದಲವು ಶಿವನಿಗೆ ಪ್ರಿಯವಾಗಿರುವಂತೆ ಈ ತ್ರಿದಳ ವ್ಯಾಪಕವೆನಿಸಿದ ಶಿಖಾಚಕ್ರವು ನಿಃಶೂನ್ಯ ಸುಕಳಾಲಿಂಗಕ್ಕೆ ಸಂಪ್ರೀತವಾಗಿದೆ. ಈ ತ್ರಿದಳಚಕ್ರದಲ್ಲಿ ಬಸವ” ಎಂಬ ಮಂತ್ರಾಕ್ಷರಗಳು ಶೋಭಿಸುತ್ತವೆ. ಇವು ನಿರಂಜನ ಪ್ರಣವಗಳು.

‘ಬಸವ’ ಇದು ವ್ಯಕ್ತಿಯ ಹೆಸರಲ್ಲ. ಈ ‘ಬಸವಾ’ಕ್ಷರಗಳು ಮಹಾಮಂತ್ರವಾಗಿದೆ. ಅದುಕಾರಣ ಇವುಗಳ ಅರ್ಥ ಅನಂತವಾಗಿದೆ. ಶಿಖಾಚಕ್ರ ಹಾಗೂ ನಿಶ್ಶೂನ್ಯ ಬ್ರಹ್ಮ ಮತ್ತು ‘ಬಸವ’ ತತ್ತ್ವದ ಮಹತ್ವವನ್ನು ೮೪ನೇಯ ತ್ರಿಪದಿಯ ವ್ಯಾಖ್ಯಾನದಲ್ಲಿ ಅವಲೋಕಿಸಬಹುದು.

ಶಿಖಾಚಕ್ರದಲ್ಲಿ ತ್ರಿದಳಗಳಲ್ಲಿ ಪರಿಶೋಭಿಸುವ ಬಸವಾಕ್ಷರ ಮಹತ್ವವನ್ನು ಶರಣರೂ, ಕವಿಗಳೂ, ಬಹುವಾಗಿ ಬಣ್ಣಿಸಿದ್ದಾರೆ. ಮಾಯಾ ಕೋಲಾಹಲಿಗಳೂ, ಶೂನ್ಯ ಸಿಂಹಾಸನಾಧಿಪತಿಗಳೂ ನಿರಂಜನ ಜಗದ್ಗುರು ಪ್ರಭುದೇವರು –

ಬಸವಗುರುವು ಎನ್ನ ಕರಸ್ಥಲದ ಲಿಂಗದ

ಆದಿಯನರುಹಿ ತೋರಿದ ಕಾರಣ ಗುಹೇಶ್ವರ ಲಿಂಗದ

ನಿಲವ ನಿನ್ನಿಂದಲರಿದೆನು

ಬ ಎಂಬಲ್ಲಿ ಭವ ಹರಿಯಿತು

ಸ ಎಂಬಲ್ಲಿ ಸರ್ವಜ್ಞಾನಿಯಾದೆನು

ವ ಎಂದು ವಚಿಸುವ ಚೈತನ್ಯಾತ್ಮಕನಾದನು.

ಇಂತೀ ಬಸವಾಕ್ಷರತ್ರಯವು ಎನ್ನ ಸರ್ವಾಂಗದಲ್ಲಿ

ತೊಳಗಿಬೆಳಗುವ ಭೇದವನರಿದು ಆನು

ಬಸವ ಬಸವ ಎನುತಿರ್ದೆನು.

ಶಿವಯೋಗಿ ಸಿದ್ಧರಾಮೇಶ್ವರರು ರಚಿಸಿದ ಬಸವಸ್ತೋತ್ರ ತ್ರಿವಿಧಿಯಲ್ಲಿ –

ಬಸವ ಬಸವಾ ಬಸವ ಬಸವೇಶ ಬಸವರಸ ಬಸವಯ್ಯ

ನಿಮ್ಮಡಿಗೆ ಶರಣು ಶರಣು

ಬಸವ ಬಸವಾಲಿಂಗ ಬಸವಪ್ಪ ಬಸವೇಶ ಬಸವಯ್ಯ

ಶರಣೆಂಬೆ ಯೋಗಿನಾಥ |

ಬಸವ ಭಕ್ತಿಯ ಬೀಜ, ಬಸವ ಯುಕ್ತಿಯ ಬೀಜ

ಬಸವಪ್ಪ ನಿಮ್ಮಡಿಗೆ ಶರಣು ಶರಣು

ಮೋಳಿಗೆಯ ಮಾರಯ್ಯನವರು

ಬ ಎಂಬಲ್ಲಿ ಬಳಿಸಂದೆನು

ಸ ಎಂಬಲ್ಲಿ ಸಯವಾದೆನು

ವ ಎಂಬಲ್ಲಿ ನಿರವಯನಾದೆನು

ನಿಃಕಳಂಕ ಮಲ್ಲಿಕಾರ್ಜುನ ಬಸವಣ್ಣನ ನಿಜಪದದಲ್ಲಿ

ಸಂದಿಲ್ಲದೆ ಬೆರಸಿ ನಮೋ ನಮೋ ಎಂಬ ಹಂಗಳಿದುಳಿದೆನು

ಗಣದಾಸಿ ವೀರಣ್ಣನವರು

“ಬ ಕಾರಂ ಗುರುರೂಪಂ ಚ ಸಕಾರಂ ಲಿಂಗಮೇವ ಚ

ವಕಾರಂ ಪರಮಾಖ್ಯಾತಂ ತ್ರಿವಿಧಂ ತತ್ವನಿರ್ಣಯಂ||ʼʼ

ಮತ್ತು – ಎನ್ನ ಪಶ್ಚಿಮದಲ್ಲಿ ನಿರಂಜನ ಪ್ರಣಮವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಶಿಖೆಯಲ್ಲಿ ಬಸವಾಕ್ಷರ ತ್ರಯವಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಬ್ರಹ್ಮರಂಧ್ರದಲ್ಲಿ ಅ-ಉ-ಮ ಅಕ್ಷರತ್ರಯವಾಗಿ

ಪ್ರಸಾದ ಪಂಚಾಕ್ಷರಿಯಾಗಿ ನಿಂದಾತ ನಮ್ಮ ಬಸವಣ್ಣ

ಎನ್ನ ಆಜ್ಞೆಯಲ್ಲಿ ಓಂಕಾರವಾಗಿ ನಿಂದಾತ ನಮ್ಮ ಬಸವಣ್ಣ

ಎಂದು ಮುಂತಾಗಿ ಸುದೀರ್ಘವಚನವನ್ನೇ ರಚಿಸಿದ್ದಾರೆ. ಶ್ರೀ ಶೀಲವಂತಯ್ಯನವರು ತಮ್ಮ ತ್ರಿವಿಧಿಯ ಆತ್ಮಲಿಂಗ ಪ್ರಣವ ಸಂಯೋಗಸ್ಥಲದಲ್ಲಿ ಬಸವಾಕ್ಷರ ಮಹತ್ವವನ್ನು ಕೆಳಗಿನಂತೆ ವಿವರಿಸಿದ್ದಾರೆ.

“ವೃತ್ತ ಗೋಳಕ ಮುಖ್ಯ ನಿತ್ಯ ಬಸವಾಕ್ಷರವು |

ಮತ್ತೆ ಗುರು-ಲಿಂಗ-ಚರ ತ್ರಿವಿಧ ಬಸವನ ಹಸ್ತದಲಿ

ಕಂಡು ಸುಖಿಯಾದೆ

ಆವಾತನ ಮುಖದಲ್ಲಿ ತೀವಿ ಬಸವಾಕ್ಷರವು ಸಾವಧಾನದೊಳು

ವಚಿಸುತ್ತಿರಲದುವೆ ಗುರುದೇವನಿಹತಾಣವಿದನರಿ

ಬಸವನ ನೆನೆ ಮನವೆ ಬಸವಾ ಎನು ನಾಲಿಗೆಯೆ

ಬಸವನ ಪಾದ ಪೂಜೆ ಮಾಡೈಕರವೆ ಬಸವ, ಗುರುಲಿಂಗ ಚರವೆಂದು

ನಿತ್ಯ ನಿಷ್ಕಲದಿಂದ ಚಿತ್ತು ಬಸವಾಕ್ಷರವು

ಮತ್ತೆ ಚಿತ್ ಪ್ರಣವ ಪರಶಕ್ತಿ  ತ್ರೈಮಾತ್ರೆ ವ್ಯಕ್ತದಿಂ ಪ್ರಣವ ಗುರುಲಿಂಗ

ಹರಿಹರ ದೇವನ ರಗಳೆ ಕಾವ್ಯಗಳಲ್ಲಿ

ಬಸವನ ಮಾತೆ ಮಾತು ಬಸವಣ್ಣನ ಭಕ್ತಿಯ ಓಜೆಯೋಜೆಕೇಳ್

ಬಸವನ ರೀತಿ ರೀತಿ ಬಸವಣ್ಣನ ಕಿಂಕರವೃತ್ತಿ ವೃತ್ತಿ ಮೇಣ್

ಬಸವನ ಬಟ್ಟೆ ಬಟ್ಟೆ ಬಸವಣ್ಣನ ಬಿಂಕದ ಭಾಷೆ ಭಾಷೆ ಹೋ

ಬಸವನ ನಿಷ್ಠೆ ನಿಷ್ಠೆ ಬಸವಣ್ಣನ ನೇಮವೇ ನೇಮವುರ್ವಿಯೊಳ್ || ೧ ||

ಶ್ರೀ ಪಾಲ್ಕುರಿಕೆಯ ಸೋಮನಾಥರು

ಬಾಗುರು ಬಹುಳ ಬ್ರಹ್ಮ | ಸಾಗುರು ಸಾಕಾರ ತತ್ವ ಸಂಘದ ಫಲವೈ

ವಾಗುರು ವಚನ ಮಹತ್ವ | ಕ್ಕಾಗರ ಬಸವಾಕ್ಷರತ್ರಯಂ ಬಸವೇಶಾ

ಬಾ ಎನೆ ಬಂಧನವಳಿವುದು | ಸಾಯೆನೆ ಸಕಲಸಾಯುಜ್ಯ ಸಂಪದಮಕ್ಕುಂ |

ವಾ ಎನೆ ನಿರವಯ ಪದಮಂ | ಮಾಯೆಯ ರಹಿತಂ ಬಸವನೆ ನಿಮ್ಮಯ ನಾಮಂ

ಪ್ರಣವದ ಬಳ್ಳಿ ಬ ಕಾರಂ | ಪ್ರಣವದ ನಾದಾನುಸಾರ ಸಾರ ಸಕಾರಂ |

ಪ್ರಣವದ ಬಿಂದು ವಕಾರಂ | ಪ್ರಣವಂ ಬಸವಾಕ್ಷರ ತ್ರಯಂ ಬಸವೇಶಾ

ಮರೆದೊಮ್ಮೆ ಬಸವ ಎಂದೊಡೆ | ಮರುಜನ್ಮಗಳಲ್ಲಿ ದುರಿತ ವಿಘ್ನಗಳಿಲ್ಲೈ

ಕರಿಗೊರಲನೊಲಿದು ಸಲಹುವ | ಬರಿಜಿಹ್ವೆಯೊಳಿರದೆ ಬಸವನಾಮವ ಜಪಿಸಿ

ಸಪ್ತಕಾವ್ಯದ ಗುರುಬಸವದೇವರ ‘ವೃಷಭ ಗೀತೆ’ ಯಲ್ಲಿ

ಬಸವನೆಂದು ಕಂಡು ಪಿರಿಯ |

ಬಸವನೆಂದು ಲೋಕಬಂಧು |

ಬಸವನೆಂದು ಷಟ್‌ಸ್ಥಲ ಸಮಗ್ರ ಸಾರದ |

ಬಸವನೆಂದು ಮತ್ಸಮಸ್ತ |

ಬಸವನೆಂದು ಧರ್ಮರೂಪ

ಬಸವನೆಂದು ಭಜಿಸಿ ಭಜಿಸಿ ಬಾಳ್ವನವ ಕೃತಾರ್ಥನೂ ||

ಪ್ರೌಢದೇವರಾಯನ ಮಹಾಕಾವ್ಯವನ್ನು ರಚಿಸಿದ ಅದೃಶ್ಯಕವಿಯು-

ಬಸವನೆಂದರೆ ಪಾಪ ದೆಶೆಗಟ್ಟು ಹೋಗುವದು.

ಬಸವನೆಂದೆಂಬ ಮೂರಕ್ಕರದ ಘನತೆಯನು |

ಉಸುರಲೆನ್ನಳವಲ್ಲ ಫಣಿರಾಜಗರಿದರಿದು ಬಸವ ಭವ ಭಯನಾಶವೂ |

ಷಡಕ್ಷರದೇವರು “ಬಸವರಾಜ ವಿಜಯ’ದಲ್ಲಿ –

ಬಸವನ ನಾಮಂ ಸ್ಮರಿಸುತುಂ ಬಸವೇಶನ ಕಿರ್ತನಂಗಳಂ |

ಪಸರಿಸಿ ಪಾಡುತುಂ ಬಸವನುಜ್ವಲ ಮೂರ್ತಿಯನೊಲ್ದು ಜಾನಿಸು,

ತ್ತೆಸೆವ ನರಂಗೆ ಜನ್ಮತತಿಯುಂಟೆ ಜಡಸ್ಥಿತಿಯುಂಟೆ ಪಾತಕ |

ಪ್ರಸರಮದುಂಟೆ ಮೃತ್ಯುಭಯಮುಂಟೆ ಮದಾಂಧತೆಯುಂಟೆ

ಧಾತ್ರಿಯೋಳ್ ||

ಎಂದುಮುಂತಾಗಿ ವರ್ಣಿಸಿದ ಮಹಾನುಭಾವರ ನುಡಿಗಳಿಂದ ಬಸವಾಕ್ಷರ ಮಂತ್ರದ ಮಹತ್ವ ಮನನವಾಗದೇ ಇರದು.

ನಿಶ್ಶೂನ್ಯಲಿಂಗ : ‘ಶಿಖಾಚಕ್ರವೇ ನೆಲೆ, ಮಂತ್ರ ನಿಷ್ಪತ್ತಿಯೆ ಕಲೆ; ಉನ್ಮನಿಯ ಮುಖ, ನಿಶ್ಶೂನ್ಯಾಕಾರ, ಅಗಮ್ಯರೂಪು, ತ್ರಿದಳಯುಕ್ತ ನಿಃಕಲ ಪದ್ಮವೇ ಪೀಠ, ಇದು ಸುಜ್ಞಾನಕ್ಕೆ ಸುಜ್ಞಾನವಾಗಿದೆ”. ಎಂದು ನವಲಿಂಗ ಸಾಹಿತ್ಯದಲ್ಲಿ ನಿಶ್ಶೂನ್ಯಲಿಂಗದ

ವರ್ಣನೆಯನ್ನು ಮಾಡಿದ್ದಾರೆ.

ಓ ಕಳಂಕರಹಿತನಾದ ಪರಮಗುರುವೆ ! ಶಿಖಾಚಕ್ರದ ಮಹಾಜ್ಯೋತಿ ಪ್ರಕಾಶದಿಂದ ಕೂಡಿದ ನಿಶ್ಶೂನ್ಯ ಸತ್ಕಳಾ ಲಿಂಗವನ್ನು ತೋರಿಸಿ ಉದ್ಧರಿಸಿರುವೆ. ಆ ಲಿಂಗವನ್ನು ಪೂಜಿಸಿ ಧನ್ಯನಾಗುವ ಶಕ್ತಿಯನ್ನೀಡಿ ಕಾಪಾಡು

ಮಂಜುಳಮಾದೇಕ ದಳ | ಕಂಜದೊಳೋಂ ಹ ಪ್ರಣವ

ವ್ಯಂಜನವಿಲ್ಲದ ನಿರಂಜನ ಲಿಂಗವನು

ರಂಜಿಸುವ ಗುರುವೆ ಕೃಪೆಯಾಗು   ||೧೪೭||

ಮಸ್ತಕದ ಹಿಂಭಾಗದಲ್ಲಿಪ್ಪುದೇ ಏಕದಳಪದ್ಮ. ಅದಕ್ಕೆ ಪಶ್ಚಿಮ ಚಕ್ರವೆಂದು ಹೆಸರು. ಪಶ್ಚಿಮಾಗ್ರವೆಂತಲೂ ಇನ್ನೊಂದು ನಾಮ. ಸಣ್ಣಮೆದುಳೇ ಪಶ್ಚಿಮ ಚಕ್ರವು . ಸ್ಪಟಿಕದಂತೆ ಶುಭ್ರವೂ ಮನೋಹರವೂ ಆಗಿದೆ. ಈ ಚಕ್ರದಲ್ಲಿ ಮಹಾ ಪ್ರಣವ ವೆನಿಸಿದ ‘ಹ್’ ಕಾರ ಮಂತ್ರ ಮೂರ್ತಿಯಾದ ನಿರಂಜನಲಿಂಗವು ಪರಿಶೋಭಿಸು ವದೆಂದು ಬೋಧಿಸಿದ ಗುರುಕೃಪೆ ಅಪಾರವಾದುದು. ಈ ನಿರಂಜನ ಲಿಂಗವು ವಾಙ್ಮನಕ್ಕೆ ಅಗೋಚರವಾದುದು. ಇಂಥ ಅವಾಚ್ಯವಾದ ನಿರಂಜನ ಬ್ರಹ್ಮವನ್ನೇ ಸದ್ಗುರುವು ತನ್ನ ಶುದ್ಧಭಾವದಲ್ಲಿ ಭಾವಿಸಿ ಸಂಸ್ಕರಿಸಿ ಭಾವಲಿಂಗವನ್ನಾಗಿಸುವನು. ಈ ಭಾವಲಿಂಗವೇ ಇಷ್ಟಲಿಂಗದಲ್ಲಿ ನಿರಂಜನಲಿಂಗವಾಗಿ ತೋರುವದು.

ನಿರಂಜನಲಿಂಗ : ಪಶ್ಚಿಮಚಕ್ರವೆ ನೆಲೆ; ಶಿವಾದ್ವೈತವೆ ಕಳೆ, ನಿರಂಜನಾಕಾರ, ಅವಿರಳರೂಪು, ಏಕದಳ, ನಿರಾಳಪದ್ಮವಾಸ, ಜ್ಞಾನಶ್ಶೂನ್ಯ” ಎಂದು ನವಲಿಂಗ ಸಾಹಿತ್ಯಕಾರರು ನಿರಂಜನಲಿಂಗದ ನಿರೂಪಣೆ ಮಾಡಿದ್ದಾರೆ.

ಈ ಪಶ್ಚಿಮಚಕ್ರದ ವಿವರವನ್ನು ೮೩ನೆಯ ತ್ರಿಪದಿಯಲ್ಲಿ ನೋಡಬಹುದು. ನಿರಂಜನಲಿಂಗವೇ ಪರಾತ್ಪರ ವಸ್ತುವೆನಿಸಿದೆ. ಇಂಥ ನಿರಂಜನಲಿಂಗವನ್ನು ತೋರಿಸಿ ಪರಿರಂಜಿಸುವ ಗುರುವಿನ ಇರುವೆ ವರ್ಣನಾತೀತವಾದುದು.

ಜ.ಚ.ನಿ

 

ವೀರಶೈವ ಮಹಾಸಭೆಯ ಸ್ಥಾಪನೆಯಿಂದ ಅದರ ಸೇವೆಯಿಂದ ಸ್ವಾಮಿಗಳವರಿಗೆ ಸಂತೃಪ್ತಿಯಾಗಲಿಲ್ಲ. ಸಮಾಜದೇಳ್ಗೆಯ ಕಾರ್ಯವು ಎಷ್ಟು ಮುಖಗಳಿಂದ ನಡೆದರೂ ಇನ್ನೂ ಹಲವು ಮುಖಗಳಿಂದ ನಡೆಯಬೇಕೆಂಬ ಒತ್ತಾಸೆ ಸ್ವಾಮಿಗಳವರದು. ಸಮಾಜದಲ್ಲಿರುವ ಇನ್ನಿತರ ಕೊರತೆಗಳಿಗಾಗಿ ಸ್ವಾಮಿಗಳವರು ಹಗಲಿರುಳು ಕನವರಿಸುತ್ತಿದ್ದರು. ಸಮಾಜದ ಪ್ರತಿಯೊಂದು ವಿಷಯ ಹೇಗೆ ಮುಂದಕ್ಕೆ ಬರುವದೆಂದು ಸದಾ ಯೋಚಿಸುತ್ತಿದ್ದರು. ಸಮಾಜದ ಸರ್ವಾಂಗದೇಳ್ಗೆಯ ಆಸಕ್ತಿಯು ಅವರ ರಕ್ತದ

ಪ್ರತಿಕಣದಲ್ಲಿಯು ಬೆರೆತಿದ್ದಿತು. ಅದಕ್ಕಾಗಿ ಅವರು ಪಟ್ಟ ಪರಿಶ್ರಮವನ್ನು ಊಹಿಸುವುದೆ ಅಸಾಧ್ಯ. ಸಮಾಜದಲ್ಲಿರುವ ಕಸವನ್ನೆಲ್ಲ ರಸವನ್ನಾಗಿ ಮಾಡಲು ಪ್ರಯತ್ನಪಟ್ಟರು. ಆ ಸಮಯದಲ್ಲಿ ತಮ್ಮ ಶರೀರದ ಸೌಖ್ಯವನ್ನು ಶ್ರಮವನ್ನು ಗಣಿಸಲಿಲ್ಲ. ಆ ಕಾರ್ಯದಲ್ಲಿ ಪ್ರವೃತ್ತರಾದಾಗ ಅವರಿಗೆ ಬಿಸಿಲು ಬೆಳದಿಂಗಳಾಗಿಯು ಉಪವಾಸವು ಊಟದಂತೆಯು ಯೋಚನೆಯು ಜಪವಾಗಿಯು ಪರಿಣಮಿಸಿದವು. ಪರಳಿಯ ಪ್ರಕರಣದಲ್ಲಿ ಪ್ರಬಲವಾಗಿ ಹೋರಾಡಿ ಗಳಿಸಿದ ಜಯಕ್ಕೆ ಶ್ರೀಗಳು ಬಹುಮಟ್ಟಿಗೆ ಕಾರಣರಾದ ವಿಷಯ ಚಿರಸ್ಮರಣೀಯವಾಗಿದೆ. ಶಿರಸಂಗಿ ದೇಶಗತಿಯ ವ್ಯಾಜ್ಯದ ನಿರ್ಣಯವು ಲಿಂಗಾಯತ ಫಂಡಿನಂತೆ ಆಗುವದರ ಸಲುವಾಗಿ ಸ್ವಾಮಿಗಳವರು ಹೇರಳ ಹಣವನ್ನು ಕೂಡಿಸಿ ಕೊಟ್ಟುದಲ್ಲದೆ ಹೇಳತೀರದಷ್ಟು ಅಹೋರಾತ್ರಿ ಅವಿಶ್ರಾಂತ ಶ್ರಮವಹಿಸಿ ಕೆಲಸಮಾಡಿದ್ದನ್ನು ವೀರಶೈವ ಸಮಾಜವು ಎಂದಿಗೂ ಮರೆಯುವಂತಿಲ್ಲ.   ಕಲಘಟಗಿ, ಸಿದ್ದಾಪುರ ಮೊದಲಾದ ಕಡೆಗಳಲ್ಲಿ ಹೋಗಿ ಅಲ್ಲಿರುವ ಜನಗಳ ವಾಗದ್ವೈತದ ಹುಚ್ಚನ್ನು ಬಿಡಿಸಿ ಲಿಂಗಯೋಗದ ತತ್ವವನ್ನು ಬೀರಿದರು. ‘ಹಾನಗಲ್ಲ ಶ್ರೀಗಳವರ ಸಿದ್ದಾಪುರದ ಸಾಧು ನಿರಸನ’ ಎಂಬ ತಲೆಬರಹದ ಲೇಖನವನ್ನು ‘ಮೈಸೂರು ಸ್ಟಾರ್‌’ ಪತ್ರಿಕೆಯಲ್ಲಿ ಓದಿದ್ದು ನೆನವಿನಲ್ಲಿದೆ. ಜನರ ಸಣ್ಣ ಪುಟ್ಟ ವ್ಯಾಜ್ಯಗಳನ್ನು ತಮ್ಮ ಬುದ್ಧಿಬಲದಿಂದ ಬಗೆಹರಿಸಿ ಕೋರ್ಟು ಕಚೇರಿಗಳಿಗೆ ದುಡ್ಡು ಸುರಿಯದಂತೆ ಮಾಡುತ್ತಿದ್ದರು. ವಿವಾಹ ಕಾರ್ಯಗಳಲ್ಲಿ ಮದ್ದು ಮೆರವಣೆಗೆಗಳಿಗೆ ಮತ್ತಿತರ ಮೂಢಕಾರ್ಯಗಳಿಗೆ ಮಾಡುತ್ತಿದ್ದ ಅತಿವ್ಯಯವನ್ನು ಎಷ್ಟೋ ಕಡೆಗಳಲ್ಲಿ ಕಡಿಮೆಮಾಡಿಸಿದರು. ‘ಕಾಯಕವೆ ಕೈಲಾಸ’ ಎಂಬ ಶಿವಶರಣರ ದಿವ್ಯ ಬೋಧೆಯನ್ನು ಸಾರಿದರು. ಪ್ರತಿಕ್ಷಣದಲ್ಲಿಯು ಜನಜೀವನದಲ್ಲಿ ಬೆರೆದು ಬೋಧಿಸಿದರು. ಪ್ರತಿಯೊಂದು ಸಣ್ಣಪುಟ್ಟ ದೋಷವನ್ನು ತಿದ್ದಿದರು. ಪ್ರತಿಯೊಂದು ಕಣವನ್ನು ಅನ್ಯಾಯಕ್ಕೆ ವ್ಯಯಮಾಡದಂತೆ ಪ್ರತಿಪಾದಿಸಿದರು.   ಎರಡನೆಯದಾಗಿ ಅವರಿಗೆ ಸಂಸ್ಕೃತಿಯಲ್ಲಿ ಅಪಾರವಾದ ಅಭಿಮಾನವಿತ್ತು. ಅದಕ್ಕಾಗಿ ಅವರು ತಮ್ಮ ತ್ರಿಕರಣಗಳನ್ನು ಸವೆಸಿದರು. ಅಲ್ಲಲ್ಲಿ ಸಭೆಗಳನ್ನು ಕರೆಯುತ್ತ ಸದ್ಬೋಧೆಯನ್ನು ಬೀರುತ್ತ ಸಂಚರಿಸುವಾಗ ಹಲವು ಕಡೆ ‘ಫಂಡುʼ ಮಾಡಿ ಪಾಠಶಾಲೆಗಳನ್ನು ಸ್ಥಾಪಿಸಿದರು. ಹಾವೇರಿ, ಹುಬ್ಬಳ್ಳಿ, ಬಾಗಲಕೋಟೆ, ಅಬ್ಬಿಗೇರಿ, ಅಕ್ಕಿ ಆಲೂರ, ರೋಣ, ಇಳಕಲ್ಲ, ನೀರಡಗುಂಬ, ಅನಂತಪುರ, ಕೆಳದಿ, ಚಿತಾಪುರ ಮುಂತಾದ ಊರುಗಳಲ್ಲಿ ಕೆಲವು ಸ್ವಂತ ಪ್ರಯತ್ನದಿಂದ, ಕೆಲವು ಪ್ರೇರಣೆ ಪ್ರೋತ್ಸಾಹಗಳಿಂದ ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ಈಗ ಕೆಲವು ನಡೆಯುತ್ತಿವೆ. ಕೆಲವು ನಿಂತು ಹೋಗಿವೆ. ಮೊತ್ತಮೊದಲು ಸ್ವಾಮಿಗಳವರ ಉಪದೇಶದಿಂದಲೆ ವೀರಶೈವರಲ್ಲಿ ವಾಚನಮಂದಿರಗಳು ಸ್ಥಾಪಿತವಾದವು. ಪ್ರಾಚೀನ ಗ್ರಂಥಗಳ ಸಂಶೋಧನವನ್ನು ಮಾಡಲಿಕ್ಕೆ ಒಂದು ಮಂಡಳವನ್ನು ಏರ್ಪಡಿಸಲು ಸ್ವಾಮಿಗಳವರು ಪ್ರಯತ್ನಪಟ್ಟರು. ಜನಧನ ಸಹಾಯವು ಸಾಕಷ್ಟಾಗದೆ ಅದು ಸಂಪೂರ್ಣ ಸಿದ್ದಿಗೆ ನಿಲುಕಲಿಲ್ಲ. ಆದರೂ ಶ್ರೀಗಳವರು ಕೆಲವು ಮಂದಿ ಪಂಡಿತರನ್ನು ತ್ರಾವಣಕೋರ, ತಂಜಾವರ, ಮದ್ರಾಸ್  (ಈಗಿನ ಚನ್ನೈ) ಮೊದಲಾದ ಸ್ಥಳಗಳಿಗೆ ಕಳುಹಿಸಿ ಕೆಲವು ಮಹತ್ವದ ಮತಗ್ರಂಥಗಳನ್ನು ಸಂಗ್ರಹಿಸಿ ಅವುಗಳ ಸಂಶೋಧನವನ್ನು ಮಾಡಿಸಿರುವರು. ಶಿವಯೋಗ ಮಂದಿರದಲ್ಲಿ  ವೀರಶೈವ ಶಿಕ್ಷಣ ಸಮ್ಮೇಲನವನ್ನು ಸ್ಥಾಪಿಸಿದ್ದರು. ಅದು ಒಂದು ವರ್ಷ ಮಾತ್ರ ನಡೆಯಿತು. ಇದಲ್ಲದೆ ಕೈ. ವೀರಬಸವ ಶ್ರೇಷ್ಠಿ ಬಿ.ಎ. ಅವರನ್ನು ಪಾಶ್ಚಾತ್ಯ ದೇಶಗಳಿಗೆ ಉಪದೇಶಕ್ಕೆ ಕಳಿಸಿ ಸಂಸ್ಕೃತಿಯ ಪ್ರಚಾರ ಮಾಡಬೇಕೆಂಬ ಮಹತ್ವಾಕಾಂಕ್ಷೆ ಶ್ರೀಗಳವರಲ್ಲಿತ್ತು. ಅದರಂತೆ ಒಮ್ಮೆ ಸಾಹಸ ಮಾಡಿದರು. ಕಾರಣಾಂತರಗಳಿಂದ ಕಾರ್ಯ ಕೊನೆಗಾಣಲಿಲ್ಲ. ಶ್ರೀಗಳವರ ಪ್ರಯತ್ನ ವಿಶೇಷದಿಂದಲೆ ಪರಿಶೋಧ ಪರಿಶ್ರಮದಿಂದಲೆ ಹುಳದ ಬಾಯಿಗೆ ಬಿದ್ದು ಹಾಳಾಗಿ ಹೋಗುತ್ತಿದ್ದ ಎಷ್ಟೋ ವಾಙ್ಮಯವು ಬದುಕಿ ಬೆಳಕಿಗೆ

ಬಂದಿತು. ಹೊಸ ಗ್ರಂಥಗಳಿಗೆ ಶ್ರೀಗಳವರು ಮುಕ್ತಹಸ್ತದಿಂದ ಸಹಾಯ ಮಾಡುತ್ತಿದ್ದರು. ಕನ್ನಡ ಸಂಸ್ಕೃತ ಮತ್ತು ಇಂಗ್ಲೀಷ್ ಓದುವವರಿಗೆ ಹಲವು ವಿಧವಾಗಿ ಸಹಾಯ ಮಾಡಿದರು. ಮೊದಲು ಕಾಶಿಯಲ್ಲಿ ಸಂಸ್ಕೃತಾಭ್ಯಾಸ ಮಾಡುತ್ತಿದ್ದ ಶ್ರೀ ಮ. ನಿ. ಜಗದ್ಗುರು ಜಯದೇವ ಮುರಘರಾಜೇಂದ್ರ ಸ್ವಾಮಿಗಳವರಿಗು, ಶ್ರೀ ಬಾಳೇಹಳ್ಳಿ ವೀರಸಿಂಹಾಸನಾಧೀಶ್ವರ ಜಗದ್ಗುರು ಶಿವಾನಂದ ಸ್ವಾಮಿಗಳವರಿಗು ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು ಧನಸಹಾಯ ಮಾಡಿದ್ದಾರೆ. ಅವರಿಂದ ಸಹಾಯ ಪಡೆದ ಉಳಿದ ಜನರನ್ನು ಹೆಸರಿಸಲು ಸಾಧ್ಯವೇ ಇಲ್ಲ. ‘ಧರ್ಮ ತರಂಗಿಣಿ’ ‘ಶಿವಪ್ರತಾಪ’ ಮೊದಲಾದ ಮಾಸಪತ್ರಿಕೆ ವಾರಪತ್ರಿಕೆಗಳು ಶ್ರೀಗಳ ಕೃಪೆಯಿಂದಲೆ ಹೊರಡುತ್ತಿದ್ದವು. ಹೀಗೆ ಒಂದಲ್ಲ ಎರಡಲ್ಲ ಹಲವು ವಿಧವಾಗಿ ಸ್ವಾಮಿಗಳವರು ಸಂಸ್ಕೃತಿಯ ಸಂರಕ್ಷಣೆಯನ್ನು ಮಾಡಿದರು.

ಸ್ವಾಮಿಗಳವರು ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆದರ್ಶ ಪುರುಷರು; ಧಾರ್ಮಿಕ ಹೃದಯರು. ಅವರು ಅರ್ಚನಾನುಭವ ಜೀವಿಗಳು, ವೀರವಿರಾಗಿಯಾಗಿ ಯುಕ್ತಯೋಗಿಯಾಗಿ ಸತ್ಯಸ್ವಾಮಿಯಾಗಿ ಬಾಳಿದರು. ಜನಾನುರಾಗಿಗಳಾಗಿ ಜೀವನ್ಮುಕ್ತರಾಗಿ ಜಸ ಪಡೆದರು. ಅವರು ಸಮಾಜ ವಿರಾಜಮಾನವಾಗಿ ಮಾಡಿದ  ದಿವ್ಯಜ್ಯೋತಿ ಸಂಗೀತ ಸಾಹಿತ್ಯ ವೈದ್ಯ ಉದ್ಯೋಗಗಳ ಸಂರಕ್ಷಿಸಿ ಸಾಂಸ್ಕೃತಿಕ ಸಿದ್ಧಮೂರ್ತಿ ,ವಿದ್ಯೆ, ವಿಜ್ಞಾನಗಳ ಅಭಿವೃದ್ಧಿಗೊಳಿಸಿದ ವಿದ್ಯಾಭಿಮಾನಿ,  ಪುರಾಣ, ಪ್ರವಚನ,ಕೀರ್ತನ ಭಾಷಣ ಕಲಾಶಿಕ್ಷಣಾಚಾರ್ಯ, ನೀತಿ ಭಕ್ತಿ ನಡೆ ನುಡಿ ಸ್ತ್ರೀ ಸುಧಾರಣೆ ಕಲಿಸಿದ ಪ್ರಥಮಪುಂಗವ. ದೀನರನ್ನು ದರಿದ್ರರನ್ನು ದುರ್ಮಾರ್ಗಿಗಳನ್ನು ಉದ್ದರಿಸಿದ ಉದಾರಚರಿತ . ತನ್ನ ನಡೆನುಡಿಯಿಂದ ಲೋಕದ ಬಾಳನ್ನು ತಿದ್ದಿ ಸಚೇತನಗೊಳಿಸಿದ ಸಂತ. ತನ್ನ ಆಯುಷ್ಯವನ್ನು ಆರೋಗ್ಯವನ್ನು ಲೋಕೋದ್ಧಾರಕ್ಕಾಗಿಯ ಧಾರೆಯರದ ಮಹಾತ್ಮ ಪುರಾತರ ಪ್ರಮಥರ ಆಚಾರ್ಯರ ಹೊಣೆಯನ್ನು ಹೊತ್ತು ನಿತ್ತರಿಸಿದ ಆರ್ಯ.

ಅತ್ಯಂತ ವೈಭವಯುಕ್ತವಾದ ಹಾನಗಲ್ಲ ವಿರಕ್ತಮಠವನ್ನು ಹಿಡಿದು ಪಲ್ಲಕ್ಕಿಯನೇರಿ ಮರೆಯಬಹುದಿತ್ತು. ಅದಕ್ಕೆ ಅವರು ಮನಸ್ಸು ಮಾಡಲಿಲ್ಲ. ಆಗಾಗ ಅನೇಕರು ಅನೇಕ ಕಡೆಗಳಲ್ಲಿ ಅಂದಣವನೇರಲು ಬಲವಂತಿಸಿದರು. ಎಳ್ಳಷ್ಟು ಮನಸ್ಸು ಮಾಡದೆ ಮತ್ತೊಬ್ಬರಿಗೆ ಆ ಉತ್ಸವದ ಭಾಗ್ಯವನ್ನು ಧಾರೆಯೆರೆಯುತ್ತಿದ್ದರು. ಅದು ವೈಭವವೆಂದು ವೈಶಿಷ್ಟ್ಯವೆಂದು ಅವರು ಭಾವಿಸಲಿಲ್ಲ. ಭ್ರಮಿಸಲಿಲ್ಲ. ಜನತಾರೂಪಿ ಜನಾರ್ದನನ ಸೇವೆಗೆ ಮರಸ್ಸು ಮಾಡಿದರು. ಮೈದುಡಿಸಿದರು. ಹಗಲಿರುಳೆನ್ನದೆ ನಾಡ ಸುತ್ತಿದರು; ಕಡಸುತ್ತಿದರು. ನಿಂತಲ್ಲಿಯ ಧಾರ್ಮಿಕ ಜಾಗ್ರತಿ ಮಾಡಿದರು. ಕುಂತಲ್ಲಿಯೆ ದೇವ ಚಿಂತನೆಗೈದರು. ಆತ್ಮಪೂಜೆಯನೆಸಗಿದರು. ಅವರಲ್ಲಿ ಅದ್ಭುತವಾದ ಜನಾಕರ್ಷಣ ಶಕ್ತಿಯಿತ್ತು, ಅನುಪಮವಾದ ಬೋಧನಾಸಕ್ತಿಯಿತ್ತು. ಅನುವಾದ ಅಲ್ಪಕಾಲದಲ್ಲಿಯೆ ಭಕ್ತಿಪ್ರ ಪತ್ತಿಯಿಂದ ಶಿವಪೂಜೆ ಮಾಡುತ್ತಿದ್ದರು. ಭಾವಪ್ರಪೂರ್ತಿಯಿಂದ ಶಿವಾನುಭವ ಜರುಗಿಸುತ್ತಿದ್ದರು. ಸಾಮಾನ್ಯ ಜನರು ದರ್ಶನಕ್ಕೆ ಬಂದರೆ ಅವರ ಉನ್ನತಿಯ ಉಪದೇಶ. ಸಮಾಜ ಪ್ರಮುಖರು ಬಂದರೆ ಅವರೊಡನೆ ಸಮಾಜೋನ್ನತಿಯ ಸಮಾಲೋಚನೆ. ತಮ್ಮ ಬಳಿಯಲ್ಲಿರುವ ಶಿಷ್ಯರು ಬಂದರೆ ಪಾಠಪ್ರವಚನ, ಯಾರೂ ಇಲ್ಲದಿದ್ದರೆ ಆತ್ಮಚಿಂತನ. ಹೀಗೆ ಯಾವಜ್ಜೀವನವು ಕ್ಷಣಕಾಲ ವೃಥಾಕಳೆಯದೆ ಸಮಾಜ ಸಂಸ್ಕೃತಿ ಆತ್ಮಕಲ್ಯಾಣ ಸಾಧನೆಯಲ್ಲಿಯ ನಿರತರಾಗಿದ್ದರು. ಪರೋಪಕಾರಕ್ಕಾಗಿ ದೇಹವನ್ನು ದಣಿಸಿದರು. ಪರಮಾತ್ಮಧ್ಯಾನ ಧಾರಣ ಸಮಾಧಿಗಳಲ್ಲಿ ಮನವನ್ನು ತಣಿಸಿದರು. ಶ್ರೀಗಳು ಲೋಕಚರಿತರು; ಲೋಕೋತ್ತರ ಚರಿತರು.

ಸಂಸಾರಿಯಾಗಲಿ ಸನ್ಯಾಸಿಯಾಗಲಿ ಸ್ವಾರ್ಥವಿಲ್ಲದೆ ಸಮಾಜ ಸಂಸ್ಕೃತಿಗಳ ಸೇವೆ ಮಾಡಬೇಕೆಂಬುದೆ ಅವರ ಮನೀಷೆ;, ಅದನ್ನೇ ಅವರು ಬೋಧಿಸುತ್ತಿದ್ದರು, ಸಾಧಿಸುತ್ತಿದ್ದರು. ಬೋಧನೆಗೆ ಸಾಧನೆಗೆ ಸಿದ್ಧರಾಗಿರುವವರನ್ನು ಅವರು ಮನಸಾರೆ ಮನ್ನಿಸುತ್ತಿದ್ದರು. ಹೃದಯಾರೆ ಹರಸುತ್ತಿದ್ದರು. ಆದರೆ ಅಂಥವರ ಸಂಖ್ಯೆ ತೀರ ಕಮ್ಮಿಯಿತ್ತು. ಸಮಾಜದ ವಿಸ್ತಾರ ದೃಷ್ಟಿಯಲ್ಲಿ ಅಲ್ಲಲ್ಲಿ ಒಬ್ಬಿಬ್ಬರಿರುವ ಸಣ್ಣ ಸಂಖ್ಯೆ ಯಾತಕ್ಕು ನಿಲುಕದಾಗಿತ್ತು. ಸಮಾಜ ಸಂಸ್ಕೃತಿ ಸೇವಕರ ಗುಂಪಿನ ಅವಶ್ಯಕತೆ ಸ್ವಾಮಿಗಳವರ ಮನಸ್ಸಿನಲ್ಲಿ ಮುಮ್ಮೂಡಿನಿಂತಿತು. ಸ್ವಾಮಿಗಳವರ   ಪ್ರವೃತ್ತಿಧರ್ಮವಿವೇಚನೆಯ ಮೇಲೆ ವಿಶೇಷವಾಗಿತ್ತು. ಈ ಅವರ ಬಯಕೆ ಈಚೆಗೆ ವೀರಶೈವ ಮಹಾಸಭೆಯಲ್ಲಿ ನೆರವೇರಲು ಆತಂಕವಾಯಿತು. ಆಂಗ್ಲ ವಿದ್ಯೆಯ ಪದವೀಧರರು ಹೆಚ್ಚಾಗಿ ಸಭೆಯಲ್ಲಿ ಸೇರಿ ಧಾರ್ಮಿಕ ವಿಚಾರಕ್ಕೆ ಕ್ರಮವಾಗಿ ಕೊಡಲಿ ಪೆಟ್ಟು ಬಿದ್ದಿತು. ಅದರಿಂದಾಗಿ ಸ್ವಾಮಿಗಳವರು ಕ್ರಿ.ಶ. ೧೯೦೯ರಲ್ಲಿ ಧರ್ಮೋತ್ತೇಜಕ ನಾಮಾಂಕಿತ ಸಭೆಯೊಂದನ್ನು ಬಂಕಾಪುರದಲ್ಲಿ ಹುಬ್ಬಳ್ಳಿ ಶ್ರೀ ಜಗದ್ಗುರು ಶ್ರೀ ಗಂಗಾಧರ ಸ್ವಾಮಿಗಳವರು ಮೂರುಸಾವಿರಮಠ ಅವರ ಅಧ್ಯಕ್ಷತೆಯಲ್ಲಿ ನೆರವೇರಿಸಿದರು. ಅದನ್ನು ಮೂರುನಾಲ್ಕು ವರುಷ ಪ್ರತ್ಯೇಕವಾಗಿ ನಡೆಯಿಸಿ ಧರ್ಮ ಪ್ರಸಾರ ಮಾಡಿದರು. ಅದರಿಂದಲು ಅವರ ಸಮಾಜ ಸಂಸ್ಕೃತಿಯ ಉತ್ಕೃಮಣ ಸೇವೆ ಸಾಕಷ್ಟು ಸಾಗಲಿಲ್ಲ. ಆ ದಿಸೆಯಲ್ಲಿಯೂ ಅವರಿಗೆ ಸಮಾಜ ಸೇವಕರ ಬೋಧಕರ ಅಭಾವ ಹೆಜ್ಜೆ ಹೆಜ್ಜೆಗೂ ತೋರಿತು; ಹೆಚ್ಚು ಹೆಚ್ಚಾಗಿ ನಿರಾಶೆ ಬೀರಿತು.

ಸಮಾಜದ ಪ್ರತಿ ವ್ಯಕ್ತಿಯನ್ನು ಪ್ರತಿಕಲೆಯನ್ನು ಸುಧಾರಿಸುವ ಕಡೆಯಿಲ್ಲದ ಕುತೂಹಲ ಸ್ವಾಮಿಗಳವರದು. ಸಮಾಜ ಸಂಸ್ಕೃತಿಗಳ ಸೇವೆಯೊಂದಿದ್ದರೆ ಅವರಿಗೆ ಮೋಕ್ಷ ಬಂದರು ಅದು ಬೇಕಿರಲಿಲ್ಲ. ಆದ್ದರಿಂದ ಸಮಾಜದ ವಿಶಿಷ್ಟವರ್ಗವನ್ನು ಸುಧಾರಿಸುವ ಒಂದು ಸಂಸ್ಥೆಯನ್ನು ನಿರ್ಮಿಸುವ ಬಯಕೆ ಮೂಡಿ ಬಂದಿತು. ಗುರುವಿನ ಆದೇಶವು ಅದಾಗಿತ್ತು.

ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯಸಂಸ್ಥಾನಮಠ ಗದಗ.

ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಸ್ತುತಿ ನಿಂದೆಗಳಿಗೆ ಗುರಿಯಾಗುತ್ತಾನೆ. ಹಾಗೆಯೇ ಇನ್ನೊಬ್ಬರ ಸ್ತುತಿ ನಿಂದೆಗಳಿಗೂ ಕಾರಣನಾಗುತ್ತಾನೆ. ಯಾರಾದರು ತನ್ನನ್ನು ಸ್ತುತಿಸಿದರೆ ಸಹಜವಾಗಿಯೇ ಸಂತಸ ಪಡುತ್ತಾನೆ. ನಿಂದಿಸಿದರೆ ವ್ಯಥೆ ಪಡುತ್ತಾನೆ ಮತ್ತು ನಿಂದಿಸಿದವರೊಡನೆ ದ್ವೇಷ ಸಾಧಿಸುತ್ತಾನೆ. ತಾನು ಇನ್ನೊಬ್ಬರನ್ನು ನಿಂದಿಸಿದಾಗ ಅವರಲ್ಲಿಯೂ ತನ್ನ ಹಾಗೆ ದ್ವೇಷ ಹುಟ್ಟಬಹುದೆಂಬ ಅಥವಾ ಅವರ ದುಃಖಿಸುವರೆಂಬ ಅರಿವು ಆ ವ್ಯಕ್ತಿಗಿರುವುದಿಲ್ಲ. ಇದೇ ಮನುಷ್ಯರ ದೌರ್ಬಲ್ಯ.

ಯಾವುದೇ ಒಬ್ಬ ವ್ಯಕ್ತಿ ಆತ್ಮಸ್ತುತಿ ಮಾಡಿಕೊಳ್ಳುವುದಾಗಲಿ ಅಥವಾ ಎಲ್ಲರೂ ತನ್ನನ್ನು ಹೊಗಳುತ್ತಿರಲಿ ಎಂದು ಬಯಸುವದಾಗಲಿ ತೀರ ಆಘಾತಕಾರಿ. ಬದುಕಿನಲ್ಲಿ ಲೋಕಹಿತ ಕಾರ್ಯಗಳನ್ನು ಜರುಗಿಸಿದಾಗ, ಆದರ್ಶಯುತವಾದ ಬದುಕನ್ನು ಬದುಕಿದಾಗ ಲೋಕದ ಜನ ಅನೇಕ ರೀತಿಯಲ್ಲಿ ಹೊಗಳುತ್ತಾರೆ, ಗೌರವಿಸುತ್ತಾರೆ. ಆದರೆ ಜನರು ಹೊಗಳಲಿ, ಗೌರವಿಸಲಿ ಎಂಬ ಭಾವನೆಯಿಂದ ಲೋಕಹಿತ ಕಾರ್ಯಗಳನ್ನು ಮಾಡಬಾರದು. ಒಮ್ಮೊಮ್ಮೆ ತಮ್ಮ ಕಾರ್ಯಸಾಧನೆಗಾಗಿ ಹೊಗಳುಭಟ್ಟರು ವ್ಯಕ್ತಿಯನ್ನು ಹೊಗಳುತ್ತಾರೆ. ಆ ಹೊಗಳಿಕೆಯ ಹಿಂದಿನ ಉದ್ದೇಶವನ್ನರಿತು ಅಂಥ ವ್ಯಕ್ತಿಗಳಿಂದ ದೂರವಿರುವುದು ಒಳ್ಳೆಯದು. ಹೊಗಳಿಕೆ ಅಥವಾ ಸ್ತುತಿಯಿಂದ ವ್ಯಕ್ತಿ ಮದೋನ್ಮತ್ತನಾಗಿ ಅಧಃಪತನ ಹೊಂದುವ ಸಾಧ್ಯತೆಯೂ ಇದೆ. ‘ಎನ್ನವರೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ ಹೊಗಳಿ ಹೊಗಳಿ…. ನೀನು ಒಳ್ಳಿದನಾದರೆ ಎನ್ನ ಹೊಗಳಿಕೆಗೆ ಅಡ್ಡಬಾರಾ ಧರ್ಮಿ’ ಎಂದು ಬಸವಣ್ಣನವರು ದೇವರಲ್ಲಿ ಪ್ರಾರ್ಥಿಸುವುದನ್ನು ಗಮನಿಸಿದರೆ ಈ ಮಾತು ಅತ್ಯಂತ ಸ್ಪಷ್ಟವೆನಿಸುತ್ತದೆ. ಆತ್ಮಸ್ತುತಿಯೂ ಒಂದು ದುರ್ಗುಣ. ವ್ಯಕ್ತಿಯ ಅಂತರಂಗ ಹಾಗು ಬಹಿರಂಗ ಶುದ್ಧಿಗೆ ಮಾರಕವಾಗುವ ಏಳು ದುರ್ಗುಣಗಳಲ್ಲಿ ಇದೂ ಒಂದು. ಅಂತೆಯೇ ‘ತನ್ನ ಬಣ್ಣಿಸಬೇಡ’ ಎಂದು ಬಸವಣ್ಣ ಎಚ್ಚರಿಸುತ್ತಾನೆ.

ಪರರ ದೋಷಗಳನ್ನೆಣಿಸುವುದು ಒಳ್ಳೆಯದಲ್ಲ. ದೋಷೈಕ ದೃಷ್ಟಿ ಅಹಂಭಾವದ ಪ್ರತೀಕ. ಅದು ಪರನಿಂದೆಗೆ ದಾರಿ ಮಾಡಿಕೊಡುತ್ತದೆ. ಪರನಿಂದೆಯಂತಹ ದೊಡ್ಡ ದೋಷ ಇನ್ನೊಂದಿಲ್ಲ. ನಿಂದಕನಿಗಿಂತ ನೀಚ ಮತ್ತೊಬ್ಬನಿಲ್ಲ. ಅವನ ಮೈ, ಮನ,

ಮಾತುಗಳೆಲ್ಲವೂ ದೋಷಯುಕ್ತವಾಗಿರುವ ಕಾರಣ ಇನ್ನೊಬ್ಬರಲ್ಲಿ ದೋಷಗಳನ್ನೆಣಿಸುವದು ಮತ್ತು ಅವರನ್ನು ನಿಂದಿಸುವುದು ಅವನ ಸಹಜ ಗುಣವಾಗಿರುತ್ತದೆ.ಭಕ್ತಕವಿ ತುಳಸೀದಾಸರು ನಿಂದಕರನ್ನು ಕುರಿತು ‘ಸಬಕರ ನಿಂದಾ ಜೋ ನರ ಕರಯಿ |ಸೋ ಚಮಗಾದರ ಹೋ ಅವತರಯಿ||’ ಅಂದರೆ ‘ವಿನಾಕಾರಣ ಎಲ್ಲರನ್ನು ನಿಂದಿಸುವ  ಮನುಷ್ಯ ಮುಂದಿನ ಜನ್ಮದಲ್ಲಿ ಬಾವಲಿಯಾಗಿ ಹುಟ್ಟುತ್ತಾನೆ.’ ಎಂದು ಹೇಳುತ್ತಾರೆ. ಬಾವಲಿಯು ಆಹಾರವನ್ನು ಸ್ವೀಕರಿಸಿದ ಬಾಯಿಯಿಂದಲೇ ಮಲವಿಸರ್ಜನೆಯನ್ನೂ ಮಾಡುವುದರಿಂದ ಅದೊಂದು ಕೀಳು ಪ್ರಾಣಿ ಎಂಬ ನಂಬಿಕೆ ಇದೆ. ನಿಂದೆಯಂತಹ ದುರಿತ ಕರ್ಮ ಬೇರೊಂದಿಲ್ಲ ಎಂದು ಹೇಳಿರುವುದು ಈ ಕಾರಣಕ್ಕಾಗಿಯೇ

ನಾಹಂ ಲೋಕೇ ನ ಲೋಕೋಹಂ ಲೋಕನಿಂದಾ ಕುತೋಮಮ

ಇತಿ ನಿಶ್ಚಯದ್ಭಾವಃ ಶಿವಜ್ಞಾನೀತಿ ಕಥ್ಯತೇ

ಶಿವಜ್ಞಾನಿಗಳಾದವರು ಲೋಕದಲ್ಲಿ ನಾನಿಲ್ಲ, ನಾನು ಲೋಕವಲ್ಲ, ಲೋಕನಿಂದೆಯೂ ನನ್ನದಲ್ಲ. ಎಂಬ ನಿಶ್ಚಯ ಭಾವ ಉಳ್ಳವರಾಗಿರುತ್ತಾರೆ. ಯಾರು ನಿಂದಿಸಿದರೂ ಅವರನ್ನು ಪ್ರತಿಯಾಗಿ ನಿಂದಿಸುವುದಿಲ್ಲ. ನಿಂದೆಗೆ ನಿಂದೆ ಒಳ್ಳೆಯದಲ್ಲ. ನಿಂದಿಸಿದವರನ್ನ ತಂದೆ-ತಾಯಿಗಳೆಂಬ ಭಾವ ಅವರದು. ಲೌಕಿಕ ಸ್ತುತಿ-ನಿಂದೆಗಳು ಅವರನ್ನೆಂದೂ ಅಲುಗಿಸವು, ‘ಆರೇನಂದರೂ ಓರಂತಿಪ್ಪುದೇ ಸಮತೆ, ಆರು ಜರಿದರೂ ಅವರೆನ್ನ ಕಾಳಿಕೆಯ ಕಳೆದರೆಂಬುದೇ ಸಮತೆ, ಆರು ಸ್ತೋತ್ರ ಮಾಡಿಹರೆನ್ನ ಜನ್ಮ ಹಗೆಗಳೆಂಬುದೇ ಸಮತೆ’ ಎಂಬಂತಹ ಚಿತ್ತಸಮತೆಯನ್ನು ಶಿವಜ್ಞಾನಿಗಳು ಹೊಂದಿರುತ್ತಾರೆ. ಸ್ತುತಿನಿಂದೆಗಳು ಬಂದರೆ ಸಮಾಧಾನಿಯಾಗಿರುವುದೇ ಅವರ ಲಕ್ಷಣ. ‘ದೂಷಣೆ ಮಾಡಲದೊಂದೆ ಜನರತಿ ಭೂಷಣ ಮಾಡಲದೊಂದೆ’ ಎಂದು ಘನಮಠದಾರ್ಯರ ಮಾತಿಗೆ ಅವರ ಬದುಕೊಂದು ನಿದರ್ಶನ.

ಜಗತ್ತಿನಲ್ಲಿ ಸ್ತುತಿಸುವವರು ಪುಣ್ಯದ ಫಲವನ್ನೂ, ನಿಂದಿಸುವವರು ಪಾಪದ ಫಲವನ್ನು ಅನುಭವಿಸುತ್ತಾರೆ. ಆದ್ದರಿಂದ ಯಾರನ್ನೂ ಯಾವ ಕಾಲಕ್ಕೂ ನಿಂದಿಸಬಾರದು. ವ್ಯಕ್ತಿಗಳಲ್ಲಿರುವ ದೋಷಗಳನ್ನೆಣಿಸಿ ನಿಂದಿಸುವುದೂ ಉಚಿತವಲ್ಲ. ಅವರ ದೋಷ ದುರ್ಗುಣಗಳನ್ನು ಮರೆತು ಆದರಿಸುವುದೇ ಸೂಕ್ತ. ಇದರಿಂದ ಆ ವ್ಯಕ್ತಿಗಳೂ ತಮ್ಮಲ್ಲಿರುವ ದೋಷಗಳನ್ನು ತಿದ್ದಿಕೊಳ್ಳುತ್ತಾರೆ. ಆಗ ರಾಗ-ದ್ವೇಷಗಳು ಅಳಿದು ಪರಸ್ಪರ ಪ್ರೀತಿ ವಿಶ್ವಾಸಗಳು ಹೆಚ್ಚಿ ಶಾಂತಿ ಸೌಹಾರ್ದತೆ ನೆಲೆಗೊಳ್ಳಲು ಸಾಧ್ಯವಾಗುತ್ತದೆ.