ಆಶೀರ್ವಚನ
ಶ್ರೀ ಗುರು ಬಸವಲಿಂಗಾಯ ನಮಃ

ಹಂಪಿಹೇಮಕೂಟಶೂನ್ಯಸಿಂಹಾಸನಾಧೀಶ್ವರ
ಪೂಜ್ಯಶ್ರೀಜಗದ್ಗುರುಡಾ. ಸಂಗನಬಸವಮಹಾಸ್ವಾಮಿಗಳವರು
ಅಧ್ಯಕ್ಷರು, ಶ್ರೀಮದ್ವೀರಶೈವಶಿವಯೊಗಮಂದಿರಸಂಸ್ಥೆ, ಶಿವಯೋಗಮಂದಿರ.
ಶ್ರೀಜಗದ್ಗುರು ಕೊಟ್ಟೂರುಸ್ವಾಮಿಸಂಸ್ಥಾನಮಠಹೊಸಪೇಟೆ–ಬಳ್ಳಾರಿ–ಹಾಲಕೆರೆ
ಪೂಜ್ಯರಆಶೀರ್ವಚನ
ಕೈ ಬರಹದ ಸುಕುಮಾರ ಪತ್ರಿಕೆಯು ಸಾಧಕರಿಂದ ಪ್ರಾರಂಭವಾಯಿತು.
೧೯೩೩ ರಲ್ಲಿ ಶಿವಯೋಗಮಂದಿರಕ್ಕೆ ಆಗಮಿಸಿದ ಶತಾಯುಗಳಾದ ಸಿದ್ಧಗಂಗಾಸ್ವಾಮಿಗಳವರ ಅಮೃತನುಡಿಗಳು ಹೀಗಿವೆ
“ಇದರಲ್ಲಿ ಇರುವ ಸಾಮಾಜಿಕ, ನೀತಿಬೋಧಕ ಹಾಗೂ ತಾತ್ವಿಕಲೇಖನಗಳು ಸಾಧಕರ ಅನುಪಮ ಶ್ರದ್ಧಾ, ಭಾಷಾಸೌಷ್ಠವ, ಕನ್ನಡಪ್ರೇಮ ಮತ್ತು ವಿದ್ಯಾನಿಪುಣತೆ ಇವುಗಳನ್ನು ಉತ್ಕಟವಾಗಿ ಸ್ಪಷ್ಟಿಕರಿಸುತ್ತದೆ. ಇದರಲ್ಲಿ ಬರೆದಿರುವ ಚಿತ್ರಗಳು ಮುದ್ದಾಗಿಯು ಮನೋಹರವಾಗಿಯೂ ಇವೆ. ಸಣ್ಣಸಣ್ಣ ಕವನಗಳು ಹೃದಯಂಗಮನವಾಗಿ ಮಹಾಮಂದಿರದ ಸನ್ನಿವೇಷದ ಮಹತ್ವವನ್ನು ವರ್ಣಿಸತಕ್ಕವಾಗಿವೆ,”
ಈ ಕೈಬರಹ ಸುಕುಮಾರ ಪತ್ರಿಕೆಯು ೧೯೫೦ ಶಿವರಾತ್ರಿಯ ಶುಭಸಂದರ್ಭದಲ್ಲಿ ಅಚ್ಚಿನಸ್ವರೂಪದಲ್ಲಿ ಪ್ರಕಟವಾಗಿದ್ದು ಎಲ್ಲರಿಗೂ ಸಂತೋಷವಾಯಿತು. ವೀರಶೈವಧರ್ಮಕ್ಕೆ ಸಮ್ಮಂದಿಸಿದ ಸಣ್ಣಪುಸ್ತಕಗಳನ್ನು ಪ್ರಕಟಿಸಬೇಕೆಂಬ ಶ್ರೀಹಾನಗಲ್ಲ ಕುಮಾರ ಶಿವಯೋಗಿಗಳವರ ಸತ್ಯಸಂಕಲ್ಪವು ಈಡೇರಿದಂತಾಯಿತು. ಈ ಪತ್ರಿಕೆಯು ಕೆಲವೇ ವರ್ಷಗಳಲ್ಲಿ ಪಂಡಿತರ, ಸಂಶೋಧಕರ, ಸಾಹಿತಿಗಳ ಮೆಚ್ಚುಗೆಗೆ ಪಾತ್ರವಾಯಿತೆಂದು ಹೆಮ್ಮೆಯೆನಿಸುತ್ತದೆ.
ಈ ಸುಕುಮಾರಪತ್ರಿಕೆಯು ಅಂತರ್ಜಾಲದಲ್ಲಿ ಪ್ರಕಟವಾಗಲು ಶ್ರೀಹಾನಗಲ್ಲ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ ಇದರ ಅಧ್ಯಕ್ಷರು ಶ್ರೀಕುಮಾರೇಶನ ತತ್ವಗಳನ್ನು ದೇಶವಿದೇಶಗಳಲ್ಲಿ ಪ್ರಚಾರಪಡಿಸಬೇಕೆಂಬ ಪ್ರಬಲ ಹಂಬಲವಿರುವ ಆದರಣೀಯಶ್ರೀಕಂಠ ಚೌಕಿಮಠ ಇವರ ಪಾತ್ರ ಬಹಳ ಮಹತ್ವದ್ದಾಗಿದೆ. ಈಪತ್ರಿಕೆಯು ತೀರ್ವವಾಗಿ ಬೆಳೆದು ಅಂತರ್ಜಾಲದಲ್ಲಿ ತನ್ನದೆಆದ ವಿಶಿಷ್ಟಸ್ಥಾನವನ್ನುಗಳಸಲೆಂದು ಹಾರೈಸುತ್ತೇವೆ.