Editorial

ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

 

ವಚನ ಪಿತಾಮಹ, ಹೆಸರಾಂತ ಲೇಖಕ ಶ್ರೀ ಫ.ಗು. ಹಳಕಟ್ಟಿ (ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ) ಅವರ ಜನ್ಮದಿನದ ಗೌರವ ನಮನಗಳು. ⁣

ಫ.ಗು.ಹಳಕಟ್ಟಿ  1880ರ ಜುಲೈ 2 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಗುರುಬಸಪ್ಪ ಹಳಕಟ್ಟಿ ಮತ್ತು ತಾಯಿ ದಾನಾದೇವಿ.  ಹಳಕಟ್ಟಿ ಎಂಬುದು ಇವರ ಮನೆತನದ ಹೆಸರು. ಶಿಕ್ಷಕರಾಗಿದ್ದ ತಂದೆ ಸಾಹಿತಿಗಳಾಗಿ ಇಂಗ್ಲೆಂಡಿನ ಇತಿಹಾಸ, ಏಕನಾಥ ಸಾಧುಗಳ ಚರಿತೆ, ಫ್ರಾನ್ಸ್ ದೇಶದ ರಾಜ್ಯಕ್ರಾಂತಿ, ಸಿಕಂದರ ಬಾದಶಹನ ಚರಿತ್ರೆ ಮುಂತಾದ ಕೃತಿಗಳನ್ನು ರಚಿಸಿ ಆ ಕಾಲಕ್ಕೆ  ಸಾಕಷ್ಟು ಹೆಸರುಗಳಿಸಿದ್ದರು. ಜೊತೆಗೆ ಆಗಿನ ಪ್ರಮುಖ ಪತ್ರಿಕೆಯಾದ “ವಾಗ್ಭೂಷಣ”ದಲ್ಲಿ ಹಲವಾರು ಲೇಖನಗಳನ್ನು ಬರೆದು ನಾಡಿನ ಗಮನ ಸೆಳೆದಿದ್ದರು. ಹೀಗಾಗಿ ಹಳಕಟ್ಟಿಯವರಿಗೆ ಸಾಹಿತ್ಯವೆಂಬುದು ರಕ್ತಗತವಾಗಿ ಒಲಿದು ಬಂದಿತ್ತು.

ಕನ್ನಡವನ್ನು ಉಸಿರಾಗಿಸಿಕೊಂಡಿದ್ದಷ್ಟೇ ವಚನ ಸಾಹಿತ್ಯಕ್ಕೆ ಮಾರುಹೋಗಿದ್ದ ಹಳಕಟ್ಟಿಯವರು ಅಂದು ವಚನಸಾಹಿತ್ಯದ ಹಸ್ತಪ್ರತಿಗಳಿಗಾಗಿ, ಓಲೆಗರಿ ಗ್ರಂಥಗಳಿಗಾಗಿ ಹುಡುಕಾಡದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ, ಅನ್ವೇಷಣೆಗೈಯದ ಆಲಯಗಳಿಲ್ಲ, ಸಂಶೋಧನೆ ನಡೆಸದ ಸ್ಥಳಗಳಿಲ್ಲವೆನ್ನಬಹುದು. ಒಂದು ರೀತಿಯಲ್ಲಿ ಇದಕ್ಕಾಗಿ ದೇಶಸುತ್ತಿದವರಿವರು. ಜಗತ್ತನ್ನೇ ಅಲೆದವರಿವರು. ಹೀಗೆ ತಿರುತಿರುಗಿ ತಾವು ತಂದು ಸಂಗ್ರಹಿಸಿದ ಹಸ್ತ ಪ್ರತಿರೂಪದ ವಚನರಾಶಿಯನ್ನು 1920ರಲ್ಲಿ ಬಿಜಾಪುರದಲ್ಲಿ ಪ್ರದರ್ಶಿಸಿ ಇದರ ಮೌಲ್ಯವನ್ನು ಇಂಚಿಂಚೂ ಬಿಡದಂತೆ ಎಲ್ಲರಿಗೂ ಇವರು ತಿಳಿಸಿದರು

ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ “ವಚನ ಸಾಹಿತ್ಯ ಸಾರ”ವಂತೂ ಅಪೂರ್ವ ವಚನಗಳುಳ್ಳ ಒಂದು ಅದ್ಭುತ ಕೃತಿ. ಈ ಬೃಹತ್ ಗ್ರಂಥ ಹಲವು ಸಂಪುಟಗಳಲ್ಲಿ 1923 ರಿಂದ 1939ರ ಅವಧಿಯಲ್ಲಿ ಪ್ರಕಟಗೊಂಡು ವಚನಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಇವರ ಸ್ವತಂತ್ರ ಕೃತಿಗಳು ಸೇರಿದಂತೆ ಸಂಪಾದಿಸಿದ ವಚನಸಾಹಿತ್ಯ ಕೃತಿಗಳು 175ಕ್ಕೂ ಹೆಚ್ಚೆಂದರೆ  ಹಳಕಟ್ಟಿಯವರ ವಚನ ಸಾಹಿತ್ಯದ ದೈತ್ಯಶಕ್ತಿಯನ್ನು ಯಾರು ಬೇಕಾದರೂ ಊಹಿಸಬಹುದು.   ಶೂನ್ಯ ಸಂಪಾದನೆ, ಶಿವಾನುಭವ, ಕೃಷಿವಿಜ್ಞಾನ, ಪ್ರಭುದೇವರ ವಚನಗಳು, ಹರಿಹರನ ರಗಳೆ, ಪ್ರದೀಪಿಕೆ, ಶಬ್ದಕೋಶ, ಆದಿಶೆಟ್ಟಿ ಪುರಾಣ….. ಮುಂತಾದವುಗಳು ಇವರ ಪ್ರಮುಖ ಕೃತಿಗಳು..

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಮತ್ತು ಶ್ರೀ ಫ.ಗು.ಹಳಕಟ್ಟಿಯವರ ಸಂಬಂಧಗಳು  ಹೇಗಿದ್ದವು ಎನ್ನುವದಕ್ಕೆ ಸಾಕ್ಷಿ ಅವರ ಲೇಖನದ ಒಂದು ಭಾಗ

ಸೌಜನ್ಯ : ಶಿವಾನುಭವ ಮಾಸಪತ್ರಿಕೆ ಸಂಪುಟ ೪ ಸಂಚಿಕೆ ೧೧ ಫೆಬ್ರುವರಿ ೧೯೩೦.      ಸಂಗ್ರಹ : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,  ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ.

“ನಮ್ಮ ಪ್ರಕಾರ ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳವರು ಈಗಿನ ಕಾಲಕ್ಕೆ ಒಬ್ಬ ಶ್ರೇಷ್ಠ ಸಮಾಜ ಸುಧಾರಕರಂತೆ ವರ್ತಿಸಿ ಹೋದರು.

ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು ಈಗಿನ ಕಾಲದಲ್ಲಿ ಷಟ್‌ಸ್ಥಲ ಶಾಸ್ತçದಲ್ಲಿ ಬಹಳ ಪ್ರಾವೀಣ್ಯತೆಯನ್ನು ಹೊಂದಿದವರಾಗಿದ್ದರು.ಅವರ ಮರ್ಮಗಳು ಅವರಿಗೆ ಗೊತ್ತಿದ್ದಷ್ಟು ಬೇರೆ ಯಾರಿಗೂ ಬಹುಶಃ ಗೊತ್ತಿರಲಿಕ್ಕಿಲ್ಲ.

ವಚನ ಶಾಸ್ತçದಲ್ಲಿ ಅವರು ಪಾರಂಗತರಾದ್ದರಿಂದಲೇ ಆಗ, ಅವರು ಈ ಸಂಗತಿಗಳು ಅವರಿಗೆ ಪೂರ್ಣ ಮನವರಿಕೆಯಾಗಿದ್ದವು.

ಅವರ ಬಗ್ಗೆ ಈ ಸಂಗತಿಯನ್ನು ನಾವು ಸ್ವತಃ ಬಲ್ಲೆನು. ನಾನು ವಚನ ಶಾಸ್ತ್ರಸಾರ ೧ ನೇ ಭಾಗವನ್ನು ರಚಿಸಿದ ಕಾಲಕ್ಕೆ ಈ ಸಂಗತಿಯನ್ನು ಅವರು ಕೇಳಿದ ಕೂಡಲೆ ಅವರು ಕೆಲವು ಶಾಸ್ತ್ರಿಗಳನ್ನು ಕರೆದುಕೊಂಡು ವಿಜಾಪುರಕ್ಕೆ ಸಮಕ್ಷಮ ಬಂದು ಆ ಗ್ರಂಥದ ಬಹು ಭಾಗವನ್ನು ನನ್ನಿಂದ ಓದಿಸಿದರು. ನಾನು ವಿಷಮಜ್ವರದಿಂದ ಅಶಕ್ತನಾಗಿದ್ದ ಕಾರಣ ತಾವೇ ವಿಜಾಪುರಕ್ಕೆ ಹೀಗೆ ಕೇಳಲಿಕ್ಕೆ ಬಂದಿದ್ದರ ಮೇಲಿಂದ ಅವರು ಈ ವಿಷಯದ ಬಗ್ಗೆ ಎಷ್ಟು ಮಹತ್ತರ ಪ್ರೀತಿಯುಳ್ಳವರಾಗಿದ್ದರೆಂಬುದು ಯಾರಾದರೂ ಊಹಿಸಬಹುದಾಗಿದೆ.

ಮತ್ತು ಅವರೇ ಈ ಗ್ರಂಥವನ್ನು ಅಚ್ಚುಹಾಕಲು ನನಗೆ ಉತ್ತೇಜನ ಕೊಟ್ಟರು. ಅವರು ಶಿವಯೋಗಮಂದಿರದಲ್ಲಿ ಅಸಂಖ್ಯ ಪುರಾತನ ತಾಡವಾಲೆ ಗ್ರಂಥಗಳನ್ನು ಸಂಗ್ರಹಿಸಿರುವರು. ಅವುಗಳಲ್ಲಿ ಅನೇಕವುಗಳು ಬಹಳ ಬೆಲೆಯುಳ್ಳ ಗ್ರಂಥಗಳಾಗಿವೆ. ನನಗೆ ಬೇಕಾಗುವ ಗ್ರಂಥಗಳ ಬಗ್ಗೆ ಶಿವಯೋಗಮಂದಿರಕ್ಕೆ ನಾನು ಬರೆದ ಕೂಡಲೇ ಅವರು ಅವುಗಳನ್ನ ನನ್ನ ಕಡೆಗೆ ತಪ್ಪದೆ ಕಳಿಸಿ ಕೊಡುವ ವ್ಯವಸ್ಥೆ ಮಾಡಿದ್ದರು. ಇದರ ಮೇಲಿಂದ ಧಾರ್ಮಿಕ ಶೋಧ ಮಾಡುವವರಿಗೆ ಅವರು ಎಷ್ಟು ಪ್ರೋತ್ಸಾಹಿಸುತ್ತಿದ್ದರೆಂಬದು ತಿಳಿದು ಬರುತ್ತದೆ.””

ಇನ್ನೊಂದು ಲೇಖನ “ಕೆಲವು ನೆನಪುಗಳು” ಎಂಬ ತಲೆ ಬರಹದಲ್ಲಿ ಶ್ರೀ ಹಳಕಟ್ಟಿಯವರು ಶ್ರೀ ಕುಮಾರ ಶಿವಯೋಗಿಗಳ ಬಗ್ಗೆ ಹೀಗೆ ಉಲ್ಲೇಖಿಸುತ್ತಾರೆ “ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳವರು ಹೇಗೆ ಧನ ಸಂಚಯ ಮಾಡುತ್ತ ಬಂದರೋ ಹಾಗೆಯೇ ಅವರು ಗ್ರಂಥ ಸಂಚಯವನ್ನು ಸಹ ಮಾಡುತ್ತ ಬಂದರು. ಅವರ ಈ ಕಾರ್ಯವು ಅತ್ಯಂತ ಮಹತ್ತರವಾದುದು . ಶ್ರೀ ಸ್ವಾಮಿಗಳವರ ದರ್ಶನ ಹೊಂದಲು ಎಲ್ಲ ಕಡೆಯಿಂದಲೂ ಪ್ರಮುಖ ವ್ಯಕ್ತಿಗಳು ಈ ಮಂದಿರಕ್ಕೆ ಬರುವದು ರೂಢಿಯಾಗಿತ್ತು . ಅವರನ್ನು ಶ್ರೀ ಸ್ವಾಮಿಗಳು ಕಂಡು ಅವರ ಗ್ರಾಮದಲ್ಲಿ ತಾಡವೋಲೆಯ ಗ್ರಂಥಗಳು ಇವೆಯೋ ಹೇಗೆ ಎಂಬುದನ್ನು ಪ್ರಶ್ನೆ ಮಾಡದೇ ಬಿಡುತ್ತಿದ್ದಿಲ್ಲ . ಯಾರಾದರೂ ತಮ್ಮಲ್ಲಿ ಇಂಥ ಗ್ರಂಥಗಳು ಇವೆ ಎಂದು ಉತ್ತರ ಕೊಟ್ಟಲ್ಲಿ ಅವುಗಳನ್ನು ಮಂದಿರಕ್ಕೆ ಕಳಿಸಬೇಕೆಂದು ಶ್ರೀ ಸ್ವಾಮಿಗಳು ತಪ್ಪದೆ ಹೇಳುವರು ಅವರನ್ನು ಕಾಣ ಬಂದವರಲ್ಲಿ ಯಾರೂ ತಾವು ಕಳಿಸುವದಿಲ್ಲ ಎಂದು ಅನ್ನುತ್ತಿದ್ದಿಲ್ಲ . ಎಲ್ಲರೂ ಭಕ್ತಿಯಿಂದ ತಮ್ಮಲ್ಲಿಯ ಗ್ರಂಥಗಳನ್ನು ಅವರ ಕಡೆಗೆ ಸಮರ್ಪಿಸುತ್ತಿದ್ದರು . ಈ ಪ್ರಕಾರ ಮಂದಿರದಲ್ಲಿ ವೀರಶೈವ ಗ್ರಂಥಗಳ ಒಂದು ದೊಡ್ಡ ಸಂಗ್ರಹವು ಸ್ವಲ್ಪ ದಿವಸಗಳಲ್ಲಿ ಉಂಟಾಯಿತು .

ಶ್ರೀ ಸ್ವಾಮಿಗಳವರು ಮಂದಿರದ ಒಂದು ದೊಡ್ಡ ನಿಧಿಯನ್ನು ಕೂಡಿಸಿದ್ದೂ , ಅಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೂ ಮಹತ್ವದ ಕಾರ್ಯಗಳೆಂಬುದು ನಿಃಸಂದೇಹವಾದದ್ದು, ಆದರೆ ಹಣಕ್ಕಿಂತಲೂ ಮಹತ್ವವೆನಿಸಿಕೊಳ್ಳುವ ಗ್ರಂಥಗಳ ಸಂಗ್ರಹ ಮಾಡುವದು ಅಷ್ಟೇ ಶ್ರೇಯಸ್ಕರವಾದದ್ದು ಇರುತ್ತದೆ . ಇಂಥ ಗ್ರಂಥಗಳು ಸಮಾಜದಲ್ಲಿ ಇರದಿದ್ದರೆ ಸಂಸ್ಕೃತಿಯು ಬಾಳುವ ಸಂಭವವೇ ಇಲ್ಲ .

ಇದೇ ಕಾಲದಲ್ಲಿ ನಾನು ವಚನಶಾಸ್ತ್ರದ ಉಕ್ತಿಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದೆನು . ಈ ಸಂಗತಿಯನ್ನು ನಾನು ಸ್ವಾಮಿಗಳವರ ನಿದರ್ಶನಕ್ಕೆ ಆಗಿಂದಾಗ್ಗೆ ತರುತ್ತಿದ್ದೆನು . ಅವರು ಇದನ್ನು ನೋಡಿ ಬಹಳ ಸಂತೋಷಿಸುತ್ತಿದ್ದರು ಮತ್ತು ನನಗೆ ಅದರಲ್ಲಿ ಪ್ರೋತ್ಸಾಹವನ್ನೂ ಕೊಡುತ್ತಿದ್ದರು .

ಮುಂದೆ ನಾನು ‘ವಚನಶಾಸ್ತ್ರಸಾರ ‘ ಎಂಬ ಗ್ರಂಥವನ್ನು ನಿರ್ಮಾಣ ಮಾಡಿ ಅದರಲ್ಲಿ ನಾಲ್ಕು ಭಾಗಗಳನ್ನು ತಯಾರಿಸಿದ್ದೆನು . ಮೊದಲನೆಯ ಭಾಗವು ಪೂರ್ಣವಾದುದನ್ನು ಬಾಗಲಕೋಟೆಯ ಕೆಲ ಮಹನೀಯರು ಸ್ವಾಮಿಯವರಿಗೆ ಹೇಳಲು ಅವರು ಖುದ್ದಾಗಿ ನಾನಿದ್ದ ಮನೆಯ ಸಮೀಪದಲ್ಲಿ ಸೊನ್ನದ ಶ್ರೀಮಂತ ಗಂಗಪ್ಪ ದೇಸಾಯಿಯವರ ಕಟ್ಟಡವು ಪ್ರಾರಂಭವಾಗಿದ್ದು ಅದೇ ಮನೆಯಲ್ಲಿ ಅವರು ಇಳಿದರು. ಆಗ ನಾನು ವಿಷಮಜ್ವರ ಪೀಡಿತನಾಗಿದ್ದೆ ; ಚನ್ನಾಗಿ ಕುಳ್ಳಿರಲಿಕ್ಕೆ ಬರುತ್ತಿದ್ದಿಲ್ಲ , ಆದರೂ ಶ್ರೀ ಸ್ವಾಮಿಗಳು ನನ್ನ ಅನುಕೂಲತೆಗಾಗಿ ಈ ಗೃಹದಲ್ಲಿ ಇಳಿದು ಕೆಲವು ದಿವಸಗಳವರೆಗೆ ನಾನು ಸಂಗ್ರಹಿಸಿದ ಉಕ್ತಿಗಳನ್ನು ನನ್ನ ಕಡೆಯಿಂದ ಓದಿಸಿಕೊಳ್ಳುತ್ತಿದ್ದರು . ಅವುಗಳಲ್ಲಿರುವ ವಚನಗಳಲ್ಲಿಯ ಉಚ್ಛ ವಿಚಾರ ಮತ್ತು ಸುಂದರ ನುಡಿಗಳನ್ನು ಕೇಳಿ ಅವರು ಹರ್ಷಿಸುತ್ತಿದ್ದರು ಮತ್ತು ನನಗೆ ಈ ಗ್ರಂಥವನ್ನು ಅಚ್ಚು ಹಾಕಲಿಕ್ಕೆ ಪ್ರೋತ್ಸಾಹಿಸಿದರು . ಈ ಅಚ್ಚು ಹಾಕುವ ಕಾವ್ಯದಲ್ಲಿ ನನಗೆ ಶ್ರೀಮಂತ ಗಂಗಪ್ಪ ದೇಸಾಯಿಯವರು ಧನ ಸಹಾಯವನ್ನು ಮಾಡಲು ಒಪ್ಪಿದರು . ಶ್ರೀ ಸ್ವಾಮಿಗಳು ಅದನ್ನು ಕೇಳಿ ಸಂತೋಷ ಪ್ರದರ್ಶನವನ್ನು ಮಾಡಿದರು. ಗ್ರಂಥದ ಮುದ್ರಣವನ್ನು ಬೆಳಗಾವಿಯಲ್ಲಿ ಮುಗಿದ ಬಳಿಕ ನಾನು ಅದನ್ನು ಅವರಿಗೆ ಅರ್ಪಿಸಿದೆನು .

ಸ್ವಾಮಿಗಳವರ ಹಸ್ತದಲ್ಲಿ ಈ ಗ್ರಂಥವು ಬಂದ ಬಳಿಕ ಅವರು ತಮ್ಮ ಭೋಜನೋತ್ತರ ಕಾಲದಲ್ಲಿ ಅದರಲ್ಲಿಯ ಶ್ರೇಷ್ಠ ಉಕ್ತಿಗಳನ್ನು ತಮ್ಮನ್ನು ಕಾಣಲಿಕ್ಕೆ ಬಂದ ಜನರಿಗೆ ತಿಳಿಸಿ ಹೇಳುವರು . ಈ ಕಾರ್ಯವನ್ನು ಅವರು ಬಹುದಿನ ಮಾಡುತ್ತ ಬಂದರು . ಹೀಗೆ ತಾವಷ್ಟೇ ಅಲ್ಲ, ಮಂದಿರಕ್ಕೆ ಬಂದ ಮಠಾಧಿಕಾರಿಗಳಿಗೂ ಶಾಸ್ತಿçಗಳಿಗೂ ‘ಶಿವಶರಣರು ಎಂಥ ಮಹತ್ವದ ಕಾರ್ಯವನ್ನು ಮಾಡಿದ್ದಾರೆ, ನೋಡಿರಿ ‘ ಎಂದು ತಿಳಿಸಿ ಹೇಳುವರು .

 

ಶ್ರೀಕುಮಾರ ತರಂಗಿಣಿ  ಜುಲೈ ೨೦೨೫   ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಶಿವಮೂರ್ತಿಯೆ | ತವೆ ಪೂಜಿಸುವೆ |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೪೨ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶಿಷ್ಯ ಸಂಪತ್ತು -ಕಾರುಣಿಕ ಕುಮಾರಯೋಗಿ ಧಾರವಾಹಿ: -ಲೇಖಕರು-ಜ.ಚ.ನಿ
  4. ಕರ್ತವ್ಯಪ್ರಜ್ಞೆಯೆ ಧರ್ಮ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
  5. ಬಾಲಲೀಲಾ ಮಹಾಂತ ಶಿವಯೋಗಿಗಳವರ ಕೈವಲ್ಯ ದರ್ಪಣ ಲೇಖಕರು:ಕೆ. ವಿ. ಬಾಳಿಕಾಯಿ.

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

ಸಂಪಾದಕೀಯ :

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

-ಮೃಡಗಿರಿ ಶ್ರೀ ಜಗದ್ಗುರುಗಳು

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

ಮುಖಪುಟ

ಶ್ರೀಕುಮಾರ ತರಂಗಿಣಿ  ಜನೆವರಿ ೨೦೨೫   ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಪರ ಶಿವಯೋಗದ ಸಾರ|” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೪೧ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: -ಲೇಖಕರು-ಜ.ಚ.ನಿ
  4. : ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
  5. ಹಾನಗಲ್ಲ ಶ್ರೀಕುಮಾರೇಶ್ವರರ ತಪೋಭೂಮಿ ಕ್ಯಾಸನೂರು ಶ್ರೀ ಕ್ಷೇತ್ರ :ಲೇಖಕ: ಶ್ರೀಕಂಠ.ಚೌಕೀಮಠ.

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

ಸಹೃದಯ ಓದುಗರಿಗೆ ,

ಪರಮ ಪೂಜ್ಯ ಶ್ರೀ  ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ದಾರ್ಶನಿಕ ಕಾವ್ಯ “ಮಾನವಾ, ನೀನಾರೋ? ಕಾಯಾ” ಎಂಬ ಈ ಕವನವು ಮಾನವನ ಜೀವನದ ಗೂಢಾರ್ಥವನ್ನು ಮತ್ತು ಜೀವನದ ನಿಜವಾದ ಅರ್ಥವನ್ನು ತಿಳಿಸುವಂತಾಗಿದೆ.

ಕವನವು ಮಾನವನ ಅಸ್ತಿತ್ವ, ಅವನ ಜೀವನದ ಮೂಲಭೂತ ಅರ್ಥ ಮತ್ತು ಅಂತರಾತ್ಮದ ಪಯಣವನ್ನು ಆಳವಾಗಿ ಪರಿಶೀಲಿಸುತ್ತದೆ.

ಮಾನವಾ ! ನೀನಾರೋ ? ಕಾಯ

ಮನ ಮರುತ ನಿನಗಿವೇನೋ ? || ಪ ||

ಕವಿಯು ಮೊದಲ ಸಾಲುಗಳಲ್ಲಿ  ಮಾನವನಿಗೆ ಕೇಳುತ್ತಾರೆ, “ನೀನು ಯಾರು? ಈ ದೇಹದ ಹಿಂದೆ ಇರುವ ನಿಜವಾದ ತತ್ವವೇನು?” ಎನ್ನುವುದನ್ನು. ಈ ಪ್ರಶ್ನೆ ಮೂಲಕ ಮಾನವನ ಮನಸ್ಸು ಮತ್ತು ದೇಹದ ಪಯಣದ ಬಗ್ಗೆ ಬೆಳಕು ಚೆಲ್ಲಲಾಗುತ್ತದೆ.

ಭ್ರಮಾತ್ಮಕ ಸಂಸಾರವಿದು

ಕುಮತಿಯು ತರಬಿಡದೈಸೆ

ಮಮತೆಯಿಂದ ಬಾಧಿಪುದೈಸೆ || 1 ||

ಇಲ್ಲಿ ಕವಿ ಸಂಸಾರವನ್ನು ಭ್ರಮಾತ್ಮಕವೆಂದು ವರ್ಣಿಸುತ್ತಾರೆ. ಕರ್ಮ ಮತ್ತು ಮಮತೆಗಳಿಂದ ಮಾನವನು ಬಂಧಿತನಾಗಿ, ತಪ್ಪು ಕಲ್ಪನೆಗಳಲ್ಲಿ ಸಿಲುಕಿದ ಹೆಜ್ಜೆಯನ್ನು ತೆಗೆದುಕೊಳ್ಳುತ್ತಿದ್ದಾನೆ ಎಂದು ವಿವರಿಸುತ್ತಾರೆ. “ಮಮತೆಯ” ಎಂಬ ಅಹಂಕಾರ ಮತ್ತು ಸ್ವಾರ್ಥದಿಂದ ಮುಕ್ತಿಯ ಅಗತ್ಯತೆಯನ್ನು ಕವಿ ಪ್ರಸ್ತಾಪಿಸುತ್ತಾರೆ.

ಅನಾದಿ ವೃಥಾ ಮೂಢಮತಿ

ಜನನ ಮರಣದೊಳು ಕೂಡಿ

ಘನಸುಖ ಕೆಡಿಪುದು ನೋಡೋ || 2 ||

ಜನನ ಮತ್ತು ಮರಣದ ಚಕ್ರದಲ್ಲಿ ಬಂಧಿತವಾಗಿರುವ ಮಾನವನ ಸ್ಥಿತಿಯನ್ನು ಕವಿ ವಿವರಿಸುತ್ತಾರೆ. ಈ ನಿರಂತರ ಚಕ್ರವು “ಘನ ಸುಖ” (ನಿಜವಾದ ಆನಂದ)ವನ್ನು ಅಡಚಣೆ ಮಾಡುತ್ತದೆ. ಜೀವನದ ಮೂಢಮತಿಯ ಪರಿಣಾಮವನ್ನು ಹೀರಿಕೊಳ್ಳುತ್ತಾ, ನಿಜವಾದ ಶಾಂತಿಯನ್ನು ಹುಡುಕಬೇಕಾದ ಅವಶ್ಯಕತೆಯನ್ನು ಈ ಪದ್ಯದಲ್ಲಿ ಸ್ಪಷ್ಟಪಡಿಸುತ್ತಾರೆ.

ಪರಾತ್ಮಕ ಸಂಸಾರವಹ

ಪರ ಶಿವಯೋಗವನೈದಿ

ಸುರಸ ಸುಖವ ನೀ ಹೊಂದೋ || 3 ||

ಪರಾತ್ಮಕ ಜೀವನವನ್ನು ಅರ್ಥಮಾಡಿಕೊಳ್ಳಲು ಕವಿ ಸಲಹೆ ನೀಡುತ್ತಾರೆ. ಪರಶಿವಯೋಗದ ಮೂಲಕ, ಆಧ್ಯಾತ್ಮಿಕ ಅನುಭವಗಳ ಮೂಲಕ, ನಿಜವಾದ ಆನಂದ ಮತ್ತು ಶ್ರೇಷ್ಠ ಶಾಂತಿಯನ್ನು ಸಾಧಿಸಬಹುದು. ದೈವಿಕ ಯೋಗವೇ ಜೀವನದ ನಿಜವಾದ ಅರ್ಥವನ್ನು ಮತ್ತು ಉನ್ನತತೆಯನ್ನು ತಲುಪಲು ಮಾರ್ಗವಾಗಿದೆ ಎಂದು ಅವರು ಉಪದೇಶಿಸುತ್ತಾರೆ.

ಈ ಕವನವು ಮಾನವನಿಗೆ ಆತ್ಮಪರಿಶೀಲನೆ ಮಾಡಲು ಪ್ರೇರೇಪಿಸುತ್ತಿದ್ದು, ಸಂಸಾರಿಕ ಬಂಧನದಿಂದ ಮುಕ್ತಿಯ ದಾರಿಯನ್ನು ತೋರಿಸುತ್ತದೆ.

ಶ್ರೀಕುಮಾರ ತರಂಗಿಣಿ  ಡಿಸೆಂಬರ   ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಮಾನವಾ ! ನೀನಾರೋ |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೪೦ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: ವ್ಯವಸಾಯ-ವಾಣಿಜ್ಯ -ಲೇಖಕರು-ಜ.ಚ.ನಿ
  4. ಜ್ಞಾನ-ಕ್ರಿಯೆ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

  1. ಕಾವ್ಯ: ಹರನಾಮವನು ಬಿಡದೆ ಜಪಿಸಬಲ್ಲವರ ಭವ ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು
  2. ಶತಮಾನೋತ್ಸವದ ಪಾದಯಾತ್ರೆ:ಲೇಖಕ: ಶ್ರೀಕಂಠ.ಚೌಕೀಮಠ.
  3. ಕರುಣಿಸಿ ಕರೆದುಕೊ ;ರಚನೆ. ಶಶಿಧರ ಜಿಗಜಿನ್ನಿ ಬಾಗಲಕೋಟೆ

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

ಸಹೃದಯ ಓದುಗರಿಗೆ ,

ಕಳೆದ ತಿಂಗಳು ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ೧೫೭ನೆಯ ಜಯಂತಿ ಮಹೋತ್ಸವ ಕಾರ್ಯಕ್ರಮ ನಾಡಿನಾದ್ಯಂತ,ದೇಶದ ವಿವಿಧ ಭಾಗಗಳಲ್ಲಷ್ಟೆ ಅಲ್ಲ ಚಿಕ್ಯಾಗೋ ಮತ್ತು ಜರ್ಮನಿಯಲ್ಲೂ  ಸಡಗರ ಸಂಭ್ರಮ ಗಳಿಂದ ನೆರವೇರಿದವು

ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು,ಅವರು ಕೇವಲ ನುಡಿದು ಮರೆಯಾಗಲಿಲ್ಲ.

ನಡೆದು ಬದುಕಿದವರು

ನಡೆಗಳ ಕಾರ್ಯಕ್ಕೆ ತಮ್ಮ ೬೩ ವರ್ಷಗಳ ಸಮಗ್ರ ಬದುಕನ್ನೇ  ಸಮಾಜಕ್ಕೇ ಅರ್ಪಿಸಿದ ಮಹಾತ್ಮರು

ಅವರ ಬದುಕು ,ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು  ಕತ್ತಲು ಕವಿದ ಸಮಾಜಕ್ಕೆ ನೀಡಿದ ಬೆಳಕುಗಳು . ಅವರ ದೂರ ಯೋಚನೆಗಳ “ಯೋಜನೆ” ಗಳು ಶಿವಯೋಗ ಸಂಪನ್ನದ ಅಡಿಪಾಯಗಳಿಂದ ಇಂದು ಹಲವು ಸಂಸ್ಥೆಗಳು  ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ,ಸಮಾಜ ಸೇವೆಯಲ್ಲಿ ಅವಿಛಿನ್ನವಾಗಿ ಶತಮಾನಗಳಿಂದ  ಮುನ್ನೆಡೆಯುತ್ತಿವೆ.

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅವರ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳ ಜೊತೆಗೆ ಅವರು ಯಶಸ್ವಿಯಾಗಿ ನಿರ್ವಹಿಸಿದ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಗಳು ೧೨೦ ವರ್ಷ ಗಳ ನಂತರವೂ ಅವ್ಯಾಹತವಾಗಿ ಮುಂದುವರೆದುಕೊಂಡು ಬರುತ್ತಿರುವದು ಪೂಜ್ಯರ  ಅರ್ಥಪೂರ್ಣ ಯೋಚನೆ ಮತ್ತು ದೃಡ ಯೋಜನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ

ಶ್ರೀಕುಮಾರ ತರಂಗಿಣಿ  ಅಕ್ಟೋಬರ  ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಮಾನವಾ ! ನೀನಾರೋ |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: ಸ್ತ್ರೀಸುಧಾರಣೆ -ಲೇಖಕರು-ಜ.ಚ.ನಿ
  4. ಸತಿ-ಪತಿ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು. ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ
  5. ಕಾವ್ಯ: ಪರಮೇಶ್ವರಿಯ ಪುಣ್ಯನಾಮವನು ರಚನೆ:ಪೂಜ್ಯ ನಿಜಗುಣ ಶಿವಯೋಗಿಗಳು
  6. ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ ಪೂಜ್ಯ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು:ಲೇಖಕ: ಶ್ರೀಕಂಠ.ಚೌಕೀಮಠ.

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

ಸಪ್ಟಂಬರ ತಿಂಗಳು ಪರಮಪೂಜ್ಯ ಹಾನಗಲ್‌ ಶ್ರೀ ಕುಮಾರ ಶಿವಯೋಗಿಗಳ ಜಯಂತಿಯ ಪವಿತ್ರ ಮಾಸ.

ಕಾರಣಿಕ ಯುಗ ಪುರುಷರ ಹುಟ್ಟು ಈ ಯುಗದ ಸಮಾಜೋತ್ಸಾಹ ! ಶ್ರೀಕುಮಾರೇಶ ಚರಿತ ದ ಸಾಹಿತಿ ಪೂಜ್ಯ ಗುರುಕಂದ ಅವರ ಸುಂದರ ಈ  ಸಾಲುಗಳು ಓದಿದಷ್ಟು ಮತ್ತೊಮ್ಮೆ ಓದಿಸಿಕೊಳ್ಳುವ ಸಾಲುಗಳು…..

“ತಾಯಿ ನೀಲಮ್ಮನವರ ಗರ್ಭದ ಕೂಸು ಶಿವಾಂಶಿಕನೆಂಬುದು ಹೀಗೆ ಮತ್ತೆ ಕುರುಹಿಟ್ಟಿತ್ತು . ಏಳನೂರೆಪ್ಪತ್ತು ಅಮರಗಣರೊಂದಿಗೆ ಮತ್ರ್ಯದಲ್ಲಿ ಅವತರಿಸಿದ್ದ ದ್ವಿತೀಯ ಶಂಭುವೆನಿಸಿದ ನಂದಿ ಅಂದು ಕಲ್ಯಾಣದಲ್ಲಿ ಬಸವಣ್ಣನಾಗಿ ಚರಿತ್ರೆ ನಿರ್ಮಿಸಿದ್ದ . ಬಾಗೇವಾಡಿಯ ನಂದೀಶ್ವರನ ಅನುಗ್ರಹದಿಂದ ಆ ಮಾದಲಾಂಬಿಕಾ ತಾಯಿ ಬಸವಣ್ಣನವರನ್ನು ಪಡೆದು ಶಿವಶರಣಧರ್ಮ ಮೆರೆಸಲು ಕೂಡಲ ಸಂಗನ ಅಡಿಗಳಿಗೆ ನೀಡಿದ್ದರು. ಆ ಶಿವಶರಣರ ಕಾರ್ಯವನ್ನು ಪುನರುಜ್ಜೀವನಗೊಳಿಸುವ ಕಾರ್ಯಕ್ಕೆ ಆ ನಂದಿಯೇ ಮತ್ತೆ ತಾಯಿ ನೀಲಮ್ಮನವರ ಗರ್ಭದಿಂದ ಅವತರಣಗೊಳ್ಳುವ ಕುರುಹನ್ನು ಹೀಗೆ ನಂದಿಕೇಶ್ವರ ಜಾತ್ರೆಯಲ್ಲಿ ಆ ಸಾದ್ವಿ ನೀಲಮ್ಮನವರಿಗೆ ಕುರುಹಿತ್ತಿದ್ದ. ಆ ಶಿವಪ್ರಸಾದ ಉತ್ತತ್ತಿಯನ್ನು ಜತನವಾಗಿ ಇರಿಸಿಕೊಂಡು ಮನೆಗೆ ಮರಳಿದ ನೀಲಮ್ಮನವರು ಲಿಂಗಪೂಜೆ ಮುಗಿಸಿ ಅರ್ಪಿತಗೊಳಿಸಿ ಸೇವಿಸಿದ್ದರು. ದಿನಗಳು ಉರುಳುತ್ತಿದ್ದವು. ಕೂತರೂ ನಿಂತರೂ, ಮಲಗಿದರೂ ಶಿವಧ್ಯಾನಕ್ಕೆಳಸುವ ಅಂತರಂಗದ ಸೆಳೆತ ಗರ್ಭದ ನೋವನ್ನು ಕ್ಷಣಾರ್ಧದಲ್ಲೇ ಮರೆಮಾಚುವ ಶಿವಮಂತ್ರದ ಶಕ್ತಿಗೆ ನೀಲಮ್ಮ ಬೆರಗಾಗಿದ್ದರು. ತನ್ನೊಳಗೇ ಯಾರೋ ಆ ಮಹಾಮಂತ್ರವನ್ನು ಎಡೆಬಿಡದೆ ಮೆಲ್ಲಗೆ ಉಸುರುತ್ತಿರು ವಂತಾಗಿತ್ತು ಆ ತಾಯಿಗೆ.

ಮುಂಗಾರಮಳೆಗೆ ಭೂಮಿ ಹಸನಾಗಿ ಸುತ್ತಣ ಸೀಮೆಯ ಹೊಲಗಳಲ್ಲಿ ಬಿತ್ತನೆ ಕೆಲಸಗಳೆಲ್ಲ ಮುಗಿದು ಹಸಿರ ಪೈರು ಕಂಗೊಳಿಸುತ್ತ ಪ್ರಕೃತಿ ಸಸ್ಯಶ್ಯಾಮಲೆಯಾಗಿ ನಳನಳಿಸುತ್ತ ಶ್ರಾವಣ ಉರುಳಿ ಭಾದ್ರಪದ ಮಾಸ ಅಡಿಯಿರಿಸಿತ್ತು . ಗೌರಿ-ಗಣೇಶ ಹಬ್ಬ ಸಂಭ್ರಮದಿಂದ ಜರುಗಿತ್ತು. ದಿನ ತುಂಬಿ ಜನನ ಕಾಲ ಸಮೀಪಿಸಿದೆ ಎಂದು ಮನೆಯವರೆಲ್ಲ ನೀಲಮ್ಮನವರತ್ತ ಸದಾ ಒಂದು ಕಣ್ಣಿರಿಸಿದ್ದರು. ಅಂದು ಮಂಗಳವಾರ ರಾತ್ರಿ ಮನೆಯವರೆಲ್ಲರೂ ಪ್ರಸಾದ ಮುಗಿಸಿ ಎಂದಿನಂತೆ ಮಲಗಿದ್ದರು. ನಡು ಇರುಳು ಹಿಂದೆ ಸರಿದಿತ್ತು. ನೀಲಮ್ಮ ನೋವಿನಿಂದ ಒಮ್ಮೆ ಹೊರಳಿದ್ದರು. ಕಾತರಿಸುವ ಜನನ ಕಾಲ ಸಮೀಪಿಸಿತೆಂದು ದೀಪ ಹೊತ್ತಿಸಿ ಮನೆಯ ಹೆಂಗಳೆಯರು ನೀಲಮ್ಮನವರ ಸುತ್ತ ನೆರೆದಿದ್ದರು. ಒಂದು ಮಗುವಿನ ಪ್ರಸವವೆಂದರೆ ಗರ್ಭ ಧರಿಸಿದ ಹೆಣ್ಣಿಗೆ ಹೋದ ಜೀವ ಮತ್ತೆ ಮರಳಿದಂತೆ. ಪ್ರಸವದ ನೋವಿಗೆ ನೀಲಮ್ಮನವರನ್ನು ಸಾಂತ್ವನ ಗೊಳಿಸಲು ನೆರೆದ ಹೆಂಗಸರಿಗೆ ಅಚ್ಚರಿಯಾಗಿತ್ತು. ತಾಯಿ ನೀಲಮ್ಮ ಹೆಚ್ಚು ನೋವಿಲ್ಲದೆ ಗರ್ಭದ ಕೂಸನ್ನು ಹೆತ್ತಿದ್ದರು. ಗರ್ಭ ಹೊತ್ತ ತಾಯಿಗೆ ನೋವು ನೀಡದೆಯೇ ಕೂಸು ಜನಿಸಿತ್ತು. `ಗಂಡು ಕೂಸು’ ! ಹೊರಗಿನವರಿಗೆ ಕೇಳುವಂತೆ ಹೆಂಗಳೆಯರು ಉದ್ಗರಿಸಿದ್ದರು. ಮೂಡಣ ದಿಶೆಯಲ್ಲಿ ನಸುಕು ಕುಡಿದೋರಲು ಅಣಿಯಾಗಿತ್ತು. ಅದು ಬುಧವಾರದ ಮುಂಜಾವ ಬ್ರಾಹ್ಮೀಕಾಲ. ಕೂಸು ಜನಿಸಿದ ಕಾಲಕ್ಕೆ ಶ್ರವಣ ನಕ್ಷತ್ರ ಮೂರನೇ ಪಾದವಿತ್ತು. ಭಾರತೀಯ ಕಾಲಮಾನದಂತೆ ಶಾಲಿವಾಹನ ಶಕೆ 1789ರ ಪ್ರಭವ ಸಂವತ್ಸರ ಭಾದ್ರಪದ ಶುಕ್ಲ ತ್ರಯೋದಶಿ ಬುಧವಾರ ಶ್ರವಣ ನಕ್ಷತ್ರದಲ್ಲಿ ಕಾರಣಿಕ ಕೂಸು ಜನಿಸಿತ್ತು. ಕ್ರಿಸ್ತ ಶಕೆಯಂತೆ ಅದು 1867 ನೇ ಇಸವಿ.”

“ ಶ್ರೀ ಕುಮಾರೇಶರು ಅವತರಿಸಿದ್ದು ಧರ್ಮದ ಬುನಾದಿ ಸಡಿಲಗೊಂಡು ಸಮಾಜ ಇಬ್ಬಂದಿತನದಲ್ಲಿ ಮುಳುಗಿದ್ದ ಅತಂತ್ರ ಸ್ಥಿತಿಯನ್ನು ದೂರ ಮಾಡಲೆಂದು. ಒಬ್ಬೊಬ್ಬ ಸಂತ ಮಹನೀಯರ ಜೀವಿತವೂ ಒಂದೊಂದು ವೈಚಿತ್ರವನ್ನು ತೋರುವಂಥಹುದು. ಎಲ್ಲ ಯೋಗಿ ಮಹಾತ್ಮರೂ ಬೆಳಕಿನತ್ತ ಮುಖ ಮಾಡಿರುವಂಥವರೇ. ತನ್ನ ಮೋಕ್ಷವನ್ನಷ್ಟೇ ಗುರಿಯಾಗಿಸಿಕೊಂಡ ಸಾಧಕ ಜಗತ್ತಿಗೆ ಬೆಳಕು ತೋರಲಾರ; ಅಲ್ಲಿ ಸ್ವಾರ್ಥವೇ ಅಂತಿಮಗುರಿ. ಶ್ರೀ ಕುಮಾರೇಶರಂಥ ಶಿವಯೋಗಿವರ್ಯ ಅಂಥ ಸ್ವಾರ್ಥಕ್ಕೆ ದೂರರಾಗಿ ತನ್ನ ಬಳಿಗೆ ಬಂದವರಿಗೆ ಮಹಾಬೆಳಗಿನ ಹಾದಿ ಎಂಥಹುದೆಂಬುದನ್ನು ತೋರುತ್ತ ಆ ಪರಾತ್‍ಪರ ಪರಮನಿರಂಜನ ವಸ್ತುವಿನ ಕಾಣ್ಕೆಗೆ ಕಾರಣಿಕನಾಗಿ ಮೆರೆದ ಜ್ಯೋತಿಪುಂಗವ, ಈ ಜಂಗಮಜ್ಯೋತಿ ಲೋಕಕ್ಕೆ ಅವತರಿಸಿದ್ದು ಒಂದು ಬಡ ಕುಟುಂಬದಲ್ಲಿ .”

ಸರ್ವರಿಗೂ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ೧೫೭ ನೆಯ ಜಯಂತಿ ಮಹೋತ್ಸವದ ಹಾರ್ದಿಕ ಶುಭ ವಂದನೆಗಳು

 

ಮುಖಪುಟ

ಶ್ರೀಕುಮಾರ ತರಂಗಿಣಿ  ಸಪ್ಟಂಬರ  ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಶಂಕರ ಕಾಯೊ ಸದಾ ಕಿಂಕರನು |” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: ಪರಳಿ ವ್ಯಾಜ್ಯದಲ್ಲಿ ಪ್ರಯತ್ನ-ಲೇಖಕರು-ಜ.ಚ.ನಿ
  4. ಮಹಾನುಭಾವಿ ಮೈಲಾರ ಬಸವಲಿಂಗ ಶರಣರು : ಶಾಪಗ್ರಸ್ಥರಲ್ಲ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  5. ನಡೆ-ನುಡಿ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

  1. ಸಮಾಜದ ಕಣ್ಣುಗಳು ಹಾನಗಲ್ಲ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಮತ್ತು

ಚಿತ್ರದುರ್ಗ ಪೂಜ್ಯ ಶ್ರೀ ಜಗದ್ಗುರು ಜಯದೇವ ಮಹಾಸ್ವಾಮಿಗಳು :ಲೇಖಕ: ಶ್ರೀಕಂಠ.ಚೌಕೀಮಠ.

  1. ಹಾನಗಲ್ಲ ಕುಮಾರಸ್ವಾಮಿಗಳಿಗೆ ಪಾದಪೂಜೆ : ಕವಿ : ..ಡಾ. ಕಿರಣ ಪೇಟಕರ

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

 

 

 

 

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

ಈ ತಿಂಗಳ ಬ್ಲಾಗನಲ್ಲಿ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಅತ್ಯಂತ ಹತ್ತಿರದಿಂದ ಕಂಡ ಇಬ್ಬರು ಮಹಾನುಭಾವರ ಉತ್ಕೃಷ್ಟ ಲೇಖನಗಳನ್ನು ಪ್ರಕಟಿಸಲು ಅತೀವ ಸಂತಸವಾಗುತ್ತಿದೆ.ಆ ಲೇಖನಗಳ ಆಯ್ದ ಭಾಗದ ಪ್ರಾಮಾಣಿಕ ಅನಿಸಿಕೆಗಳು ಇಂತಿವೆ

ವಚನ ವಾಙ್ಮಯದ ಮಹತ್ವ: ಲೇಖಕರು-ಲಿಂ. ಫ. ಗು. ಹಳಕಟ್ಟಿ, ವಿಜಾಪೂರ

ಶರಣರ ನಡೆ ನುಡಿ ಆಚಾರ ವಿಚಾರಗಳಂತೆ ವರ್ತಿಸುವದೇ ತಮ್ಮ ಜೀವಿತದ ಕರ್ತವ್ಯವೆಂದು ತಿಳಿದು ಹಾಗೆ ನಡೆಯುವ ಜನರು ಕೆಲವು ವರ್ಷಗಳ ಹಿಂದೆ ಬಹು ಜನರು ದೊರಕುತ್ತಿದ್ದರು. ಇವರು ವಚನ ಶಾಸ್ತ್ರ ಗ್ರಂಥವನ್ನು ಯಾವಾಗಲೂ ಅತಿ ಭಕ್ತಿಯಿಂದ ಓದುತ್ತಿದ್ದರು ಮತ್ತು ಶಕ್ತ್ಯಾನುಸಾರ ಹಾಗೆ ನಡೆಯುತ್ತಲೂ ಇದ್ದರು. ಆದರೆ ಇಂಥ ಜನರು ವೀರಶೈವ ಸಮಾಜದಲ್ಲಿ ಈಗ ಬಹು ವಿರಳರಾಗುತ್ತಲಿದ್ದಾರೆ. ಇಷ್ಟೇ ಅಲ್ಲ, ವಚನ ಶಾಸ್ತ್ರವೆಂದರೆ ವೀರಶೈವರ ಒಂದು ಮಹತ್ವದ ಧಾರ್ಮಿಕ ವಾಙ್ಮಯವೆಂಬ ತಿಳುವಳಿಕೆಯು ಸಹ ಜನರಲ್ಲಿ ಹಾರಿ ಹೋಗಿರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ವರ್ತಿಸಿದವರೆಂದರೆ, ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳೇ ಇದ್ದಾರೆ. ಈ ಮಹಾನುಭಾವರು ಶಿವಶರಣರ ನಡೆ ನುಡಿಗಳಲ್ಲಿ ಬಹು ಶ್ರದ್ಧೆಯನ್ನು ವಹಿಸಿದವರಾಗಿದ್ದರು ಮತ್ತು ಅವರು ವಚನ ಶಾಸ್ತ್ರ ತತ್ವಗಳನ್ನು ಬಲ್ಲವರು ಎಲ್ಲಾದರೂ ಇದ್ದಾರೆಂದು ತಿಳಿದ ಕೂಡಲೆ ಅವರಲ್ಲಿಗೆ ಹೋಗಿ ಅವುಗಳ ತತ್ವಗಳ ಬಗ್ಗೆ ವಿಚಾರ ಮಾಡಲು ಮುಂದುವರೆಯುತ್ತಿದ್ದರು. ಈ ದೃಷ್ಟಿಯಿಂದ ಶ್ರೀ ಸ್ವಾಮಿಗಳವರ ಮೇಲು ಪಂಕ್ತಿಯನ್ನು ಪ್ರತಿ ಒಬ್ಬ ವೀರಶೈವನು ಈ ಕಾಲಕ್ಕೆ ಅನುಸರಿತಕ್ಕದ್ದಾಗಿದೆ

ಶಿವಶರಣರ ಸಂದೇಶ;   ಹರ್ಡೆಕರ ಮಂಜಪ್ಪನವರು

ಆದಕಾರಣ ನೈತಿಕ ತತ್ವಗಳನ್ನು ಆಚರಣೆಯಲ್ಲಿ ತಂದ ಮಹಾತ್ಮರು ಧರ್ಮಾಚಾರಗಳನ್ನು ಆಚರಿಸಿದಾಗಲೇ ಅವುಗಳ ದಿವ್ಯ ತೇಜವು ಪ್ರಕಟವಾಗುತ್ತದೆ. ಲಿಂಗಪೂಜೆ, ಜಪ, ತಪಾದಿಗಳ ಮಹತ್ವವು ಆಗಲೇ ವ್ಯಕ್ತವಾಗುತ್ತದೆ. ಈ ಪ್ರಕಾರ ನೈತಿಕ ಮತ್ತು ಧಾರ್ಮಿಕ ಬಲಗಳುಳ್ಳವರೇ ಜಗತ್ತಿನಲ್ಲಿ ಅವತಾರಿ ಪುರುಷರೆಂದು ಎಣಿಸಲ್ಪಡುತ್ತಿದ್ದಾರೆ. ಯಾವ ಮಹನೀಯರಲ್ಲಿ ಯಾವ ಪ್ರಮಾಣದಿಂದ ಉಭಯಶಕ್ತಿಗಳು ಇರುತ್ತವೆಯೋ ಆ ಪ್ರಮಾಣದಿಂದ ಅವರು ಲೋಕವಂದ್ಯರೂ ಲೋಕೋದ್ಧಾರಕರೂ ಆಗುತ್ತಾರೆ. ಲಿಂಗೈಕ್ಯರಾದ ಪರಮ ಪೂಜ್ಯ ಶ್ರೀ ಹಾನಗಲ್ಲ ಕುಮಾರಸ್ವಾಮಿಗಳವರು ಶಿವಶರಣರ ಸಂದೇಶದಂತೆ ನೈತಿಕ ಮತ್ತು ಧಾರ್ಮಿಕ ಬಲಗಳನ್ನು ಹೊಂದಿದ ಮಹಾವಿಭೂತಿಗಳಾಗಿದ್ದುದರಿಂದಲೇ ಸಮಾಜೋದ್ಧಾರದ ಅನೇಕ ಮಹತ್ಕಾರ್ಯಗಳು ಜರುಗಿ ಸಮಾಜಕ್ಕೆ ಆ ಮಹಾಪೂಜ್ಯಪಾದರು ಅತ್ಯಂತ ವಂದ್ಯರಾದರು ಶಿವಶರಣರ ಈ ದಿವ್ಯ ಸಂದೇಶವನ್ನು ತೇಜೋಮಯವಾದ ಈ ಸತ್ಯ ಸಂದೇಶವನ್ನು, ನಿರ್ದಾಕ್ಷಿಣ್ಯದ ಈ ಸ್ಪಷ್ಟ ಸಂದೇಶವನ್ನು, ಕೇಳಿ ಜಾಗೃತರಾಗಿ ತಮ್ಮಲ್ಲಿ ನೈತಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕೆಂಬುದೇ ಇಂತಹ ಮಹಾವಿಭೂತಿಗಳ ಸ್ಮಾರಕದ ಉದ್ದೇಶವಾಗಿದೆ. ಈ ಉದ್ದೇಶವು ನೆರವೇರುವಂತೆ ನಮ್ಮಲ್ಲಿ ನೈತಿಕ ಬಲವು ಹೆಚ್ಚಿ ಆ ಮೂಲಕ ಸಮಾಜದಲ್ಲಿ ಸಮಾನತ್ವ ಮತ್ತು ಸ್ವಾತಂತ್ರ್ಯಗಳುಂಟಾಗಿ ಸುಖಶಾಂತಿಗಳು ನೆಲೆಸುವ ಸುಸಮಯವು ಜಾಗ್ರತೆ ಪ್ರಾಪ್ತವಾಗಲಿ.

ಶ್ರೀಕುಮಾರ ತರಂಗಿಣಿ  ಅಗಸ್ಟ  ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ಶಿವಮೂರ್ತಿಯೆ ತವೆ ಪೂಜಿಸುವೆ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೭ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಕಾರುಣಿಕ ಕುಮಾರಯೋಗಿ ಧಾರವಾಹಿ: ಗುರು-ವಿರಕ್ತ ಸಹಕಾರ ಲೇಖಕರು-ಜ.ಚ.ನಿ
  4. ಸದ್ಗುಣ ದುರ್ಗುಣ: ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

  1. ವಚನ ವಾಙ್ಮಯದ ಮಹತ್ವ: ಲೇಖಕರು-ಲಿಂ. ಫ. ಗು. ಹಳಕಟ್ಟಿ, ವಿಜಾಪೂರ
  2. ಶಿವಶರಣರ ಸಂದೇಶ;  ಹರ್ಡೆಕರ ಮಂಜಪ್ಪನವರು

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಂಪಾದಕೀಯ :ಶ್ರೀಕುಮಾರ.ಕಾಮ್‌ ಕುರಿತು

ಶ್ರೀಕಂಠ.ಚೌಕೀಮಠ.

ಸಂಪಾದಕರು.”ಶ್ರೀಕುಮಾರ ತರಂಗಿಣಿ “    ಮಾಸಿಕ ಬ್ಲಾಗ್

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ ,

ಶ್ರೀಕುಮಾರೇಶ್ವರರ ಕುರಿತು ವೆಬ್‌ ಸೈಟ ನ ಎಲ್ಲ ವಿನ್ಯಾಸದ ಕಾರ್ಯಗಳು ಅಂತಿಮ ಹಂತಕ್ಕೆ ಬಂದಿದೆ ಎಂದು ತಿಳಿಸಲು ಬಹಳ ಸಂತೋಷವಾಗುತ್ತದೆ.

ಪರಮಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಜೀವನ-ಸಿದ್ಧಾಂತ ಮತ್ತು ಕೊಡುಗೆಗಳ ಕುರಿತು ಒಂದು ವಿಶಾಲ ವೇದಿಕೆಯನ್ನು ಅನಾವರಣ ಮಾಡಲಾಗುವದು.ಅಲ್ಲಿ ವಿಷಯ ಸಂಗ್ರಹ ನಿರಂತರ .ಯುವಜನತೆ,ವಿದ್ಯಾರ್ಥಿಗಳು ,ಸಂಶೋಧಕರು ಮತ್ತು ವಿದ್ವಾಂಸರಿಗೆ ಅನೂಕೂಲವಾಗುವಂತೆ ವಿಷಯ ಸಂಗ್ರಹ ವಿಸ್ತಾರವಾಗುತ್ತ ಹೋಗುತ್ತದೆ

 

ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕೊಡುಗೆಗಳ ಸಾರಾಂಶ

ಸಂಗ್ರಹಿಸಲು ಕುಳಿತುಕೊಂಡಾಗ ,ಎಲ್ಲಿಂದ ಪ್ರಾರಂಭ ಮಾಡಲಿ ,ಎಲ್ಲಿಗೆ ಕೊನೆಗೊಳಿಸಲಿ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.ಸಂಗ್ರಹದ ಪುಟ್ಟ ಪ್ರಯತ್ನದ ಸಾಲುಗಳು ಹೀಗಿವೆ

  1. ವ್ಯಕ್ತಿ ಯಾವನೇ ಇರಲಿ ಅವನು ಮಾನವೀಯತೆಯನ್ನು ಮೈಗೂಡಿಸಿಕೊಂಡು ಮೇಲೆರಬೇಕು, ಅನ್ಯರಿಗೂ ಬದುಕು ಕೊಡಬೇಕು, ಶ್ರೀ ಕುಮಾರ ಶಿವಯೋಗಿಗಳ ಸಂಕಲ್ಪವನ್ನು ಸಾಕಾರಗೊಳಿಸಲು ಲಿಂಗರಾಜ ದೇಸಾಯಿಯವರಂಥ ತ್ಯಾಗಿಗಳು ಮತ್ತು ಹಲವು ಗಣ್ಯ ವ್ಯಕ್ತಿಗಳು ಮುಂದೆ ಬಂದರು. ಈ ಮಹತ್ಕಾರ್ಯದ ಪ್ರತಿಫಲವಾಗಿ ಶ್ರೀ ಕುಮಾರ ಶಿವಯೋಗಿಗಳು 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಠೆ ಯನ್ನು ಸ್ಥಾಪಿಸಿದರು.
  2. ಶ್ರೀ ಕುಮಾರ ಶಿವಯೋಗಿಗಳು ಸಮಾಜವನ್ನು ಆಧುನಿಕ ಸಾಮಾಜಿಕ ದೃಷ್ಟಿಕೋನದಿಂದ ನೋಡಿ, ಯುವಜನಾಂಗದ ಗಮನವನ್ನು ತಮ್ಮ ಬದಲಾವಣೆಗಳತ್ತ ಸೆಳೆದು, ಅವರಲ್ಲಿ ಶಿಕ್ಷಣ ,ಕಾಯಕ ನಿಷ್ಠೆ ಮತ್ತು ಸಮಾಜ ನಿಷ್ಠೆ,ಯ ಚಿಂತನೆಯನ್ನು ಅಳವಡಿಸಿದರು.
  3. ಶ್ರೀ ಕುಮಾರ ಶಿವಯೋಗಿಗಳು ಸಮಕಾಲಿನ ಯುಗದ ಮಹಾನ್ ಸಾಮಾಜಿಕ ಚಿಂತಕರು, ಅವರು ಪ್ರತಿಯೊಂದು ಸಾಧನೆಗೂ ತ್ಯಾಗವೇ ಮೂಲವೆಂದು ಆಚರಿಸಿ ತೋರಿಸಿದವರು. “ಸ್ವಾಮಿಯ ಮೂಲ ಲಕ್ಷಣವೆಂದರೆ ಸರ್ವತ್ಯಾಗ” ಇದಕ್ಕಾಗಿಯೇ ವಿಶ್ವ ಶ್ರೇಷ್ಥ ಧಾರ್ಮಿಕ ಸಂಸ್ಥೆಯನ್ನು “ಶಿವಯೋಗಮಂದಿರ” ಎಂಬ ಹೆಸರಿನಲ್ಲಿ 1909ರಲ್ಲಿ ಸ್ಥಾಪಿಸಿದರು. ಶಿವಯೋಗಮಂದಿರದ ಮೂಲ ಉದ್ದೇಶ ಶ್ರೇಷ್ಠ ಮಠಾಧೀಶರನ್ನು ರೂಪಿಸುವದು.
  4. ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು  ಶ್ರೀಕುಮಾg ಶಿವಯೋಗಿಗಳ ಮೇರು ಕೊಡುಗೆ ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ  ಕಣ್ಣು ತೆರೆದು ನೋಡಿ ಕಿವಿ ತುಂಬ ಕೇಳಿ ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ  ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.ಪಂಚಾಕ್ಷರಿ ಗವಾಯಿಗಳವರು  ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು.   ಬಡವ ಬಲ್ಲಿದÀ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.
  5. ಶ್ರೀ ಕುಮಾರ ಶಿವಯೋಗಿಗಳ ಅನುಕಂಪ ಕೇವಲ ಮಾನವರಿಗಾಗಿ ಮೀಸಲಾಗಿರಲಿಲ್ಲ ಪ್ರಾಣಿಗಳಿಗೂ ತಮ್ಮ ಮಾತೃ ಪ್ರೇಮವನ್ನು ತೋರಿಸಿದವರು.  ಶಿವಯೋಗಮಂದಿರದ ಗೋ ಶಾಲೆ ಇದಕ್ಕೊಂದು ಉತ್ತಮ ಉದಾಹರಣೆ.  ಅಂದು ನಿರ್ಮಿಸಿದ ಗೋ ಶಾಲೆ, ಇಂದಿಗೂ ತನ್ನ ಸ್ವಸ್ವರೂಪದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲದೆ  ಶಿವಯೋಗಮಂದಿರದಿಂದ ವಿಭೂತಿ ನಿರ್ಮಾಣ ಕೇಂದ್ರಕ್ಕೆ, ಪ್ರಸಾದ ನಿಲಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದೆ.
  6. ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‍ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ಗ್ರಂಥಗಳ ಸಂಗ್ರಹ, ಸಂಸ್ಕøತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ ಇವೆಲ್ಲವೂ  ಶ್ರೀಮದ್‍ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು, ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದಲ್ಲಿ ರೇವಣಸಿದ್ದೇಶ್ವರ ವಾಚನಾಲಯವನ್ನು  ಸ್ಥಾಪಿಸಿ, ಗ್ರಂಥ ರಕ್ಷಣೆಯ ವ್ಯವಸ್ಥೆ ಮಾಡಿದರು, ವಚನ ಸಾಹಿತ್ಯ, ತಾಡಓಲೆಗಳ ಗ್ರಂಥಗಳು  ವೀರಶೈವ ತತ್ವಜ್ಞಾನದ ಅಪೂರ್ವ ಗ್ರಂಥಗಳ ರಾಶಿಗಳು, ವೇದ ವೇದಾಂತದ ಪುಸ್ತಕಗಳು, ಬೇರೆ ಬೇರೆ ಭಾಷೆಗಳಲ್ಲಿ ವೀರಶೈವ ತತ್ವಜ್ಞಾನದ  ರಚನೆಗಳು ಈ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ.
  7. ಶ್ರೀ ಎಪ್.ಜಿ. ಹಳಕಟ್ಟಿಯವರ ತ್ಯಾಗ, ಶ್ರಮಗಳನ್ನು ಗುರುತಿಸಿದ ಶ್ರೀ ಕುಮಾರ ಶಿವಯೋಗಿಗಳು , ಮೊಟ್ಟ ಮೊದಲ ಬಾರಿಗೆ ಸಮಗ್ರ ಶಿವಶರಣರ ವಚನ ಸಾಹಿತ್ಯ ಸಂಗ್ರಹ ಮಾಡಿದರು. ಇದು ವಚನ ಲೋಕಕ್ಕೆ ಶ್ರೀ ಕುಮಾರ ಶಿವಯೋಗಿಗಳ ಮಹತ್ತರ ಕೊಡುಗೆ, ವಚನ ಸಾಹಿತ್ಯ ಸಂಗ್ರಹಣೆಗೆ ಶ್ರೀ ಹಳಕಟ್ಟಿಯವರಿಗೆ ಸ್ಪೂರ್ತಿ ಸೆಲೆಯಾಗಿ ನಿಂತವರು ಶ್ರೀ ಕುಮಾರ ಶಿವಯೋಗಿಗಳು .
  8. ಶಿವಯೋಗಮಂದಿರದಲ್ಲಿ ಸ್ವಾಮಿಗಳಾಗುವವರ ಆರೋಗ್ಯ ಆತ್ಮಜ್ಞಾನ ರಕ್ಷಣಿ ಹಾಗೂ ಬೆಳವಣಿಗೆಗಾಗಿ ಯೋಗಾಭ್ಯಾಸವನ್ನು ಹುಟ್ಟುಹಾಕಿದವರು ಶ್ರೀ ಕುಮಾರ ಶಿವಯೋಗಿಗಳು , ಶರೀರ, ಮಾನಸಿಕ ಯೋಗಗಳ ಜೊತೆಗೆ ಶಿವಯೋಗದ ಕಲಿಕೆಗೂ ಅನುಕೂಲತೆಗಳನ್ನು ಮಾಡಿದರು. ಅಷ್ಟಾಂಗಯೋಗದ ಜೊತೆಗೆ ಪತಂಜಲಿ ಯೋಗ ತರಬೇತಿಯನ್ನು ಪ್ರಾರಂಭಿಸಿ, ಉಳಿಸಿ ಬೆಳೆಸಿದರು.
  9. ಉದ್ಯಮ ಸೃಷ್ಟಿ : ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಸಂಪದಭಿವೃದ್ಧಿಗೆ ಮೂಲವಾದ ಆಧುನಿಕ ಯಾಂತ್ರಿಕ ಉದ್ಯೋಗಗಳ ಪ್ರಸ್ತಾವನೆಗೆ ಹೆಚ್ಚು ಶ್ರಮಪಟ್ಟವರು, ಶಿವಯೋಗಮಂದಿರದ ಆರ್ಥಿಕ ಭದ್ರತೆಯನ್ನು ಲಕ್ಷಿಸಿ, ಶ್ರೀಗಳವರು ಬಾಗಲಕೋಟೆಯಲ್ಲಿ ‘ಶಿವಾನಂದ ಜಿನ್ನಿಂಗ್‌ ಮತ್ತು ಪ್ರೆಸ್ಸಿಂಗ್‌ ಫ್ಯಾಕ್ಟರಿಯನ್ನು ಆಗ ಎರಡು ಲಕ್ಷ ರೂಪಾಯಿಗಳ ದೊಡ್ಡ ಬಂಡವಾಳ ಹಾಕಿ ಸ್ಥಾಪಿಸಿದರು, ಅದು ಶಿವಯೋಗಮಂದಿರ ಬೆನ್ನೆಲುವಿನಂತಿದೆ, ವಿರಕ್ತಸ್ವಾಮಿಗಳೊಬ್ಬರ ಉದ್ಯಮ ಸೃಷ್ಟಿಯ ಈ ಮಹದ್ಯೋಜನೆ ಎಂತಹ ಚಾಣಾಕ್ಷಸಿರಿವಂತನ ಉದ್ಯೋಗ ಪ್ರಗತಿಯ ಕಾರ್ಯದಕ್ಷತೆಯನ್ನೂ ಮೀರಿ ನಿಲ್ಲುತ್ತದೆ. ಶ್ರೀಗಳವರಲ್ಲಿಯ ಬುದ್ಧಿವೈಭವ, ದೂರದೃಷ್ಟಿ ಅಪರಿಮಿತವಾಗಿದ್ದವು, ಆಸಾಧಾರಣವಾಗಿದ್ದವು. ಅವರ ದೂರದೃಷ್ಟಿಯಿಂದಾಗಿ ಅಂದಿನ ಯುಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೊಸ ಸೃಷ್ಟಿಯೇನಿರ್ಮಿತವಾಗಿ ಅದು ಉಳಿದ ಉದ್ಯಮ ಪ್ರೇಮಿಗಳಿಗೂ ಮಾದರಿಯಾಯಿತು.
  10. ಬಾಗಲಕೋಟೆಯ ಶ್ರೀ ಗುರುಸಿದ್ದೇಶ್ವರ ಚಿತ್ರಮಂದಿರ:

ಶಿವಯೋಗಮಂದಿರ ಸಂಸ್ಥೆಯು ತನ್ನ ಕಾಲಮೇಲೆ ತಾನು ನಡೆಯುವಂತೆ ಮಾಡುವುದಕ್ಕಾಗಿ ಜಿನ್ನಿಂಗ್ ಫ್ಯಾಕ್ಟರಿ, ಕಬ್ಬಿಣ ವ್ಯಾಪಾರ ಕೇಂದ್ರ ಸ್ಥಾಪಿಸಿದರೆಂದು ಸ್ಪಷ್ಟ, ಬಾಗಲಕೋಟೆಯ ಶ್ರೀ ಶಿವಾನಂದ ಜೆನ್ನಿಂಗ್ ಫ್ಯಾಕ್ಟರಿಗೆ ಹೊಂದಿಕೊಂಡ ಪ್ರಾಯಶಃ ಶ್ರೀಗುರುಸಿದ್ಧೇಶ್ವರ ಚಿತ್ರಮಂದಿರವನ್ನು ೧೯೨೪ರ ವೇಳೆಗೆ ಸ್ಥಾಪನೆ ಮಾಡಿದರು.

ಈ ಕಾರ್ಯವನ್ನು ಸ್ವಾಮಿಗಳೇಕೆ ಕೈಕೊಂಡರು? ಎಂಬ ಪ್ರಶ್ನೆ ಉದ್ಭವಿಸುವುದು

ಸಹಜ. ಆದರೆ ಇದರ ಹಿಂದಿರುವ ಹಿನ್ನೆಲೆ ಉದ್ದೇಶ,ಕುಮಾರಶಿವಯೋಗಿಗಳ ಈ ಬಗೆಯ ಉದ್ದೇಶ ಮತ್ತು ದೂರದರ್ಶಿತ್ವವನ್ನು ಈ ಕೆಳಗಿನ

ಅಂಶಗಳಿಂದ ಮನವರಿಕೆ ಮಾಡಿಕೊಳ್ಳಬಹುದಾಗಿದೆ.

೧. ಕಲಾಕಾರರಿಗೆ ಪ್ರೋತ್ಸಾಹ.

೨. ರಂಗಕಲೆ, ಚಿತ್ರೋದ್ಯಮಕ್ಕೆ ಪ್ರೋತ್ಸಾಹ.

೩ ಸಂಗೀತ ವಾದನ ಕಲೆಗೆ, ಶಿವಧರ್ಮ ಪ್ರಚಾರಾದಿಗಳಿಗೆ ಪ್ರೋತ್ಸಾಹ.

ಈ ಮೂರು ಅವಶ್ಯಕತೆಗಳ ಜೊತೆಗೆ ಶಿವಯೋಗಮಂದಿರ ಸಂಸ್ಥೆಗೆ ಆರ್ಥಿಕ ಭದ್ರತೆ ಸರಿದೂಗಿಸಲು ಕೈಕೊಂಡ ಯೋಜನೆಯು.

ಒಂದು ಕಾಲಕ್ಕೆ ಬೇಕಾಗುವ ಅಗತ್ಯತೆಗಳನ್ನು ಗುರುತಿಸುವಲ್ಲಿ ಮತ್ತು ಅವುಗಳು ಸಾಕಾರಗೊಳ್ಳುವಲ್ಲಿ ಶ್ರೀ ಕುಮಾರಶಿವಯೋಗಿಗಳ ಕಾರ್ಯ ವೈಖರಿಯು ಮುಂದಿನವರಿಗೆ ಆದರ್ಶಪ್ರಾಯವಾಗಿ ಪರಿಣಮಿಸಿದೆ.

  1. ಭೂ ಅಭಿವೃದ್ಧಿ ಕಾರ್ಯ :

ಶಿವಯೋಗಮಂದಿರ ಸಂಸ್ಥೆಯು ಅಬಾಧಿತವಾಗಿ ಮುನ್ನಡೆಯಲೆಂಬ ಕಾರಣದಿಂದ ಶ್ರೀ ಕುಮಾರಶಿವಯೋಗಿಗಳು ನೂರಾರು ಎಕರೆ ಜಮೀನನ್ನು ಕೂಡಿಹಾಕಿದರು. ಅದರಲ್ಲಿ ನವೀನ ಮಾದರಿಯ ಕೃಷಿಯನ್ನು ಅಳವಡಿಸಿದರು. ಸ್ವತಃ ನೇಗಿಲು ಹಿಡಿದು ಉಳಿಮೆಯನ್ನು ಮಾಡಿದರು. ನೂರಾರು ಎತ್ತುಗಳನ್ನು, ಗೋವುಗಳನ್ನು ಸಾಕಿ ಸಲುಹಿದರು. ಸ್ವತಃ ಪರಿಸರ ಪ್ರೇಮಿಯಾಗಿದ್ದ ಶ್ರೀ ಕುಮಾರಶಿವಯೋಗಿಗಳು ಮಲಪ್ರಭಾ ನದಿಯಿಂದ ಭೂಮಿಗೆ ನೀರು ಒದಗಿಸಿ ಔಷಧೀಯ ಸಸ್ಯಗಳನ್ನು ಬೆಳೆಸಿ ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸಿದ್ದಾರೆ. ಶಿವಯೋಗಮಂದಿರದ ಸುತ್ತಮುತ್ತ ಹಸಿರನ್ನು ಸಮೃದ್ಧಗೊಳಿಸಿದ್ದಾರೆ. ಅವರು ಬೆಳೆಸಿದ ಲತಾಮಂಟಪ, ವೃಕ್ಷಮೂಹ, ಔಷಧೀಯ ಸಸ್ಯ ಇಂದಿಗೂ ಶಿವಯೋಗಮಂದಿರದಲ್ಲಿ ಸಾಕ್ಷಿಯಾಗಿ ಬದುಕಿವೆ.

  1. ಶ್ರೀ ಕುಮಾರ ಸ್ವಾಮಿಗಳ ಪ್ರಭಾವ ಪರಿಮಳ ನಾಡಿನ ತುಂಬೆಲ್ಲ  ಗುಪ್ತಗಾಮಿನಿಯಾಗಿ ಪಸರಿಸಿ ನಾಡಿನ ತುಂಬ ಹಲವಾರು ಶಿಕ್ಷಣ ಸಂಸ್ಥೆಗಳು ,ಶಾಲಾ ಕಾಲೇಜುಗಳು ಮತ್ತು ಬಡ ವಿಧ್ಯಾರ್ಥಿಗಳಿಗೆ ಉಚಿತ ವಸತಿ ಭೋಜನ ಶಾಲೆಗಳು ಆರಂಭಗೊಂಡು,ಜಾತಿ,ಮತ ಪಂಥಗಳನ್ನು ಪರಿಗಣಿಸದೆ ಸಮಾಜದ ಸರ್ವ ಜನತೆಗೆ ಸೇವೆಯ ಗುರಿಯನ್ನಾಗಿಸಿಕೊಂಡವು.

ಹಾಗೆ ಆರಂಭಗೊಂಡ ಶಿಕ್ಷಣ ಸಂಸ್ಥೆ ಗಳು ನೂರಾರು ಅವುಗಳಲ್ಲಿ

ಬಳ್ಳಾರಿಯ ವೀರಶೈವ ವಿದ್ಯಾವರ್ದಕ ಸಂಘ

ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ದಕ ಸಂಘ

ಬೆಂಗಳೂರಿನ ಕರ್ನಾಟಕ ವೀರಶೈವ ವಿದ್ಯಾಭಿವೃದ್ದಿ ಸಂಸ್ಥೆ

ಪ್ರಮುಖವಾದುವು.

ಆರ್ಥಿಕ ಸಂಕಷ್ಠದಲ್ಲಿದ್ದ ಬೆಳಗಾವಿಯ ಕೆ.ಎಲ್.ಇ ಶಿಕ್ಷಣ ಸಂಸ್ಥೆ ಆರ್ಥಿಕ ಸಹಾಯ ಮಾಡಿದ್ದು ಚಿರಸ್ಮರಣೀಯ

ಹಾನಗಲ್‌ ಶ್ರೀ ಕುಮಾರ ಶಿವಯೋಗಿಗಳ ಹೆಸರಿನಲ್ಲಿಯೇ ಆರಂಭಗೊಂಡ ಉಚಿತ ವಿದ್ಯಾರ್ಥಿ ಪ್ರಸಾದ ನಿಲಯಗಳು   ಗಡಿನಾಡ ಭಾಗಗಳಾದ ಬೆಳಗಾವಿ ಮತ್ತು ಬೀದರಿನ ಭಾಲ್ಕಿಗಳಲ್ಲಿ  ಬಹುದೊಡ್ಡ ಕ್ರಾಂತಿಯನ್ನು ಮಾಡಿದ್ದು ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು

 

ಜುಲೈ  ೨೦೨೪  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : “ದೇವ ದೇವ ಜೀವಗುಣವ ಜೀವದಿ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೬ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶ್ರೀಗಳವರ ಮಹತ್ಕಾರ್ಯಗಳು ಲೇಖಕರು :- ಶ್ರೀ ಷ.ಬ್ರ. ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ
  4. ಕಾರುಣಿಕ ಕುಮಾರಯೋಗಿ ಧಾರವಾಹಿ: ನಾಡ ಸಂಚಾರ, ಧರ್ಮ ಪ್ರಚಾರ ಲೇಖಕರು-ಜ.ಚ.ನಿ
  5. ಸುಗುಣ ನಿರ್ಗುಣ ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

  1. ಶ್ರೀಕುಮಾರ ಶಿವಯೋಗಿಗಳು ಹಾಗೂ ಶಿವಯೋಗ ಮಂದಿರ.ಲೇಖಕರು :- ಪೂಜ್ಯ ಶ್ರೀ ಸಿದ್ದೇಶ್ವರ ದೇಶಿಕರು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ ಬೂದಗುಂಪ
  2. ವಚನ ಸಂಪಾದನೆ ಪರಂಪರೆ ಲೇಖಕರು: ಡಾ|| ಬಿ. ನಂಜುಂಡಸ್ವಾಮಿ
  3. ಹಾನಗಲ್ಲ ದೈವ ಶ್ರೀಕುಮಾರಸ್ವಾಮಿ ಲೇಖಕರು: ಡಾ. ಕಿರಣ ಪೇಟಕರ

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

 

 

 

 

ಸಂಪಾದಕೀಯ:

ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

 

ಶ್ರೀಕುಮಾರ ತರಂಗಿಣಿ ಮಾಸಿಕ ಬ್ಲಾಗ್‌ ತನ್ನ ಮೂರನೆಯ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಕ್ಕೆ ತುಂಬು ಹೃದಯದ ಕೃತಜ್ಞತೆಗಳು.

ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿಯ ಐದನೆಯ ವಾರ್ಷಿಕೋತ್ಸವ, ಶ್ರೀಕುಮಾರ ತರಂಗಿಣಿ ಯ ಮೂರನೆಯ ವಾರ್ಷಿಕೋತ್ಸವ, ಶ್ರೀಕುಮಾರೇಶ್ವರ ಸೇವಾ ಬಳಗ ಜೋಯಿಸರಹರಳಹಳ್ಳಿ ಸದ್ಭಕ್ತರ ಪಾದಯಾತ್ರೆ ದಿ.12-05-2024 ರಂದು ಶ್ರೀ ಶಿವಯೋಗಮಂದಿರ ದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.ಕಾರ್ಯಕ್ರಮ ದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ.ಮ.ನಿ.ಪ್ರ.ಸದಾಶಿವ ಮಹಾಸ್ವಾಮಿಗಳು ವಹಿಸಿದ್ದರು. ಪೂಜ್ಯ ಶ್ರೀ.ಡಾ. ಶಿವಯೋಗಿ ದೇವರು ನೇತೃತ್ವವಹಿಸಿದ್ದರು.ಪೂಜ್ಯ ಶ್ರೀ ಸಿದ್ಧಲಿಂಗ ದೇಶಿಕರು,ಪೂಜ್ಯ ಶ್ರೀ ಮರಿಕೊಟ್ಟೂರು ದೇಶಿಕರು ಮತ್ತು ಪೂಜ್ಯ ಶ್ರೀ ಸಿದ್ದೇಶ್ವರ ದೇಶಿಕರು ಶ್ರೀಕುಮಾರ ತರಂಗಿಣಿ ಕುರಿತು ಅನುಭಾವ ಗಳನ್ನು ದಯಪಾಲಿಸಿದರು.

ಪೂಜ್ಯ ವಟು ಸಾಧಕರ ಸಮ್ಮುಖದಲ್ಲಿ,

ಧರ್ಮದರ್ಶಿಗಳಾದ ಶ್ರೀ ಹಂಗರಗಿ ಯವರು ಮತ್ತು ಪೂಜ್ಯ ಶ್ರೀ ಅನ್ನದಾನ ಶಾಸ್ತ್ರಿಗಳು  ಆಗಮಿಸಿ ಶುಭಹಾರೈಸಿದರು.

ಕಾರ್ಯಕ್ರಮ ದ ಯಶಸ್ವಿ ಕಾರಣೀಭೂತ ರಾದ ಶ್ರೀ ಶಿವಯೋಗಮಂದಿರದ ಆಡಳಿತ ಮಂಡಲಿಯವರಿಗೆ,ಸಿಬ್ಬಂದಿ ಯವರಿಗೆ,ಜೋಯಿಸರಹರಳಹಳ್ಳಿ ಯ ಗುರು ಹಿರಿಯರಿಗೆ ,ಭಜನಾಮಂಡಲಿಯವರಿಗೆ,ಸಂಗೀತಕಾರರಿಗೆ ಮತ್ತು ಸಭೆಗೆ  ಆಗಮಿಸಿದ ಎಲ್ಲ ಸಭಿಕರಿಗೆ,ಹಾಗೂ ಕಾರ್ಯಕ್ರಮ ನಿರೂಪಿಸಿದ ಪೂಜ್ಯ ಶಿವಪ್ರಸಾದ ದೇವರಿಗೆ ಸೇವಾ ಸಮಿತಿಯ ತುಂಬು ಹೃದಯದ ಕೃತಜ್ಞತೆಗಳು .

ನಾವು ನಮ್ಮ ತರಂಗಿಣಿ ಮಾಸಿಕ್‌ನ ಈ ಮೂರನೆಯ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆವೆ ಹಾಗೂ ನಮ್ಮ ಅನುಭವಗಳ ಸಾಕ್ಷಿಯಾಗಿ ನಿಮ್ಮ ಪ್ರತಿಕ್ರಿಯೆ ಪಡೆಯುವುದು ನಮಗೆ ಹೆಚ್ಚು ಉತ್ತೇಜನ ತರುತ್ತದೆ.

 

ನಮ್ಮ ತರಂಗಿಣಿ ಮಾಸಿಕ್‌ ಬ್ಲಾಗ್ ನ ಬಳಗ  ಮುಂದಿನ ಅಭಿವೃದ್ಧಿಯ ದಾರಿಯಲ್ಲಿ ಮುಂದುವರಿಯುತ್ತಾ ಹೋಗಲು ನಿಮ್ಮ ಪ್ರೋತ್ಸಾಹ ಮತ್ತು ಆತ್ಮೀಯತೆ ನಮಗೆ ಅತ್ಯಂತ ಆವಶ್ಯಕ.

 

ಧನ್ಯವಾದಗಳು!

 

 

ಶ್ರೀಕುಮಾರ ತರಂಗಿಣಿ  ೨೦೨೪ ಜೂನ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : ಮಾನವಾ, ನೀನಾರೋ ? ಕಾಯಾ. ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-‌೩೫ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶಿವಯೋಗ ಮಂದಿರ ಸ್ಥಾಪನೆ: “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. “ರಾಗ-ದ್ವೇಷ” ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
  5. ಷಣ್ಮುಖ ಶಿವಯೋಗಿಗಳು; ಇತಿವೃತ್ತ ಮತ್ತು ಕೃತಿಗಳು: ಲೇಖಕರು: ಡಾ|| ಸಿ .ನಾಗಭೂಷಣ
  6. ಒಂದು ನಿರಾಧಾರ ಆರೋಪದ ಕುರಿತು : ಲೇಖಕರು ಶ್ರೀಕಂಠ.ಚೌಕೀಮಠ

 

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಶ್ರೀಕುಮಾರ ತರಂಗಿಣಿ ಮಾಸಿಕ ಬ್ಲಾಗ್‌ ತನ್ನ ಮೂರನೆಯ ವರ್ಷದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ಪ್ರೋತ್ಸಾಹ ಮತ್ತು ಬೆಂಬಲ ನೀಡಿದ್ದಕ್ಕೆ ತುಂಬು ಹೃದಯದ ಕೃತಜ್ಞತೆಗಳು.

ನಮ್ಮ ಶ್ರೀಕುಮಾರ ತರಂಗಿಣಿ ಮಾಸಿಕ ಬ್ಲಾಗ್‌ನ ಮೂರನೆಯ ವರ್ಷದ ಹುಟ್ಟುಹಬ್ಬವನ್ನು ಸಮರ್ಪಿಸುತ್ತಿದ್ದೇವೆ! ಈ ವರ್ಷ ನಾವು ನಮ್ಮ ಓದುಗರಿಗೆ ಹೊಸದೊಂದು ಅನುಭವವನ್ನು ಕೊಡುವುದಕ್ಕಾಗಿ ಉತ್ಸಾಹಪೂರ್ಣವಾಗಿ ಕೆಲಸ ಮಾಡಿದ್ದೇವೆ. ನಮ್ಮ ಮಾಧ್ಯಮ ನಮ್ಮ ಓದುಗರ ಬದಲಾವಣೆಗೆ ತಕ್ಕಂತೆ ಹೊಸ ಅನುಭವಗಳನ್ನು ತಂದುಕೊಡಲು ಕಾರ್ಯಮಗ್ನರಾಗಿದ್ದೇವೆ.

ನಾವು ಒಂದು ಹೆಜ್ಜೆ ಮುಂದುವರಿಸುತ್ತೇವೆ. ನಮ್ಮ ಅನುಭವಗಳ ಸಾಕ್ಷಿಯಾಗಿ ನಮ್ಮ ಓದುಗರು ಇನ್ನೂ ಹೆಚ್ಚಿನ ಮೌಲ್ಯವನ್ನು ಪಡೆಯುವುದಕ್ಕೆ ಸಹಕಾರಿಗಳಾಗಿರಬೇಕು. ಆದ್ದರಿಂದ, ನಾವು ಸಾಗಿಸುತ್ತಿರುವ ಈ ಪ್ರಯತ್ನ ನಮ್ಮ ನಿಜವಾದ ಗುರಿ.

ಈ ಹೊಸ ವರ್ಷದ ಮೂಲಕ, ನಾವು ಹೆಚ್ಚು ವಿಸ್ತಾರವಾಗಿ, ಆಳವಾಗಿ ಮತ್ತು ವಿನಂತಿಯಿಂದ ನಮ್ಮ ಮಾಸಿಕ ಬ್ಲಾಗ್ನ ವಿಭಾಗವನ್ನು ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳುತ್ತೇವೆ. ನಮ್ಮ ವಾಚಕರಿಗೆ ಹೊಸ ಆಸಕ್ತಿಯ ವಿಷಯಗಳಲ್ಲಿ ವಿವಿಧ ವಿಚಾರಗಳನ್ನು ತಂದುಕೊಡುವುದರ ಮೂಲಕ, ಅವರ ಬುದ್ಧಿ ಮತ್ತು ಆಸಕ್ತಿಯನ್ನು ಕೂಡಿಕೊಳ್ಳುವ ಪ್ರಯತ್ನ ನಮ್ಮ ಧ್ಯೇಯ.

ನಾವು ನಮ್ಮ ತರಂಗಿಣಿ ಮಾಸಿಕ್‌ನ ಈ ಮೂರನೆಯ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆವೆ ಹಾಗೂ ನಮ್ಮ ಅನುಭವಗಳ ಸಾಕ್ಷಿಯಾಗಿ ನಿಮ್ಮ ಪ್ರತಿಕ್ರಿಯೆ ಪಡೆಯುವುದು ನಮಗೆ ಹೆಚ್ಚು ಉತ್ತೇಜನ ತರುತ್ತದೆ.

ನಮ್ಮ ತರಂಗಿಣಿ ಮಾಸಿಕ್‌ ಬ್ಲಾಗ್ ನ ಬಳಗ  ಮುಂದಿನ ಅಭಿವೃದ್ಧಿಯ ದಾರಿಯಲ್ಲಿ ಮುಂದುವರಿಯುತ್ತಾ ಹೋಗಲು ನಿಮ್ಮ ಪ್ರೋತ್ಸಾಹ ಮತ್ತು ಆತ್ಮೀಯತೆ ನಮಗೆ ಅತ್ಯಂತ ಆವಶ್ಯಕ.

ಧನ್ಯವಾದಗಳು!

ಶ್ರೀಕುಮಾರ ತರಂಗಿಣಿ  ೨೦೨೪ ಮೆ  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಪ್ರಥಮ ಸಂಚಿಕೆಗೆ ಸಂದ ಆಶೀರ್ವಚನ. ಲಿಂ. ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು
  3. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-‌೩೫ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  4. ಸಮಾಜ ಸಂಸ್ಕರಣ, ಸಂಸ್ಕೃತಿ ಸಂರಕ್ಷಣ : “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  5. “ಸ್ತುತಿ-ನಿಂದೆ” ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
  6. ಕಾರುಣಿಕ ಜಂಗಮ ಶ್ರೀ ಕುಮಾರ ಶಿವಯೋಗಿ: ಲೇಖಕರು: ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ, ಹಾಲಕೆರೆ
  7. ಶ್ರೀಕುಮಾರವಾಣಿ : ಸಂಗ್ರಹ -ಸೌಜನ್ಯ -ಮಹಾಜಂಗಮ (ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು ಒಂದು ಅಧ್ಯಯನ ಡಾ.ಜಿ.ಕೆ.ಹಿರೇಮಠ)

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,‌

ಸೊರಬ ತಾಲೂಕಿನ ಗೊಗ್ಗಿಹಳ್ಳಿ ಪಂಚಮಮಠದ ವಿಶೇಷತೆ.

ವೀರಶೈವರು ಶೂದ್ರರು ಅವರು ಪರಳಿ ಶ್ರೀ ವೈದ್ಯನಾಥೇಶ್ವರ ಜ್ಯೋತಿರ್ಲಿಂಗ ವನ್ನು ಸ್ಪರ್ಶಿಸಿ ಪೂಜೆ ಮಾಡಲು ಹಕ್ಕಿಲ್ಲವೆಂದು ನಿರ್ಬಂಧ ಹೇರಿದವರ ಮೇಲೆ 1924 ರಲ್ಲಿ ಹೈದರಾಬಾದ್ ನಿಜಾಮ್ ಕೋರ್ಟ್ ನಲ್ಲಿ ಕಟ್ಲೆ ಹೂಡಿದ ಪರಮಪೂಜ್ಯ ಹಾನಗಲ್ ಶ್ರೀ ಕುಮಾರೇಶ್ವರ ರ ಜೊತೆ ಹಗಲಿರಳು ದುಡಿದವರಲ್ಲಿ ಇಟಗಿಯ ಪಂಡಿತ್ ಸೋಮನಾಥ ಶಾಸ್ತ್ರಿಗಳು . ಅವರು ವಕೀಲ ಪದವಿ ಹೊಂದಿಲ್ಲದಿದ್ದರೂ ನ್ಯಾಯಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರಾಗಿದ್ದರು.

(ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ ವತಿಯಿಂದ ಪಂಡಿತ್ ಸೋಮನಾಥ ಶಾಸ್ತ್ರಿಗಳ ಪುಣ್ಯಸ್ಮರಣೆ ಮತ್ತು ಗೌರವ ಪ್ರತೀಕವಾಗಿ ಹಾಗೆ ಮುಂಬರುವ ತಲೆಮಾರಿನ ಜನತೆಗೆ ಸದಾ ಸ್ಮರಣೀಯಗೊಳಿಸಲು ಅವರ ಜನ್ಮ ಸ್ಥಳ ಇಟಗಿ ಗ್ರಾಮದಲ್ಲಿ ಸ್ಥಾಪಿಸಲು ಯೋಜಿಸಿದ ಪಂಡಿತ ಸೋಮನಾಥ ಶಾಸ್ತ್ರಿಗಳ ಅಮೃತ ಶಿಲೆಯ ಪುತ್ಥಳಿ)

ಹೈದರಾಬಾದ್ ವಕೀಲರು ಕೇವಲ ಹೆಸರಿಗೋಸ್ಕರವಿದ್ದರೆ ನಿಜದ  ನ್ಯಾಯಜ್ಞಾನ ಪಂಡಿತ್ ಸೋಮನಾಥ ಶಾಸ್ತ್ರಿಗಳದ್ದಾಗಿತ್ತು.ಗ್ರಹಸ್ಥರಾದರೂ ಸಂತರಂತೆ ಬದುಕಿ ಸಮಾಜ ಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.ಪರಮಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ತಮ್ಮ ಜೊತೆ ಸಮಾಜ ಸೇವೆ ಕೈಜೋಡಿಸಿದ ಯಾವ ಶಿಷ್ಯನನ್ನೂ ಕಡೆಗೆಣಿಸಲಿಲ್ಲ. ಒಬ್ಬ ಶಿಷ್ಯ ನ ಶ್ರಮ-ಸಾಧನೆಯನ್ನು ಮತ್ತೊಬ್ಬ ಶಿಷ್ಯ ನಿಗೆ ಕೊಡಿಸಿ ಶಿಷ್ಯ ಶೋಷಣೆಯನ್ನು ಕನಸು ಮನಸಿನಲ್ಲಿ ನೆನದವರಲ್ಲ . ಆದರೆ ಶಿಷ್ಯರ ಭವಿಷ್ಯದ ಬದುಕಿಗೆ ರಕ್ಷಣೆ ನೀಡುವ ಹತ್ತು ಹಲವು ಮುಂದಾಲೋಚನೆ ಪೂಜ್ಯರದಾಗಿತ್ತು.

ಅಂತೆಯೇ ಪರಕೀಯರ ವಶದಲ್ಲಿದ್ದ  ಗೋಗ್ಗಿಹಳ್ಳಿಯ ಪಂಚಮ ಶಿವಾಚಾರ್ಯ ಮಠ ವನ್ನು 1928 ರಲ್ಲಿ ಆ ಕಾಲದ ಮೂರು ಸಾವಿರ ರೂಪಾಯಿ ಗಳನ್ನು ಕೊಟ್ಟು ಮಠ ಮತ್ತು ಆಸ್ತಿ ಗಳನ್ನು ಬಿಡಿಸಿ ಪಂಡಿತ್ ಸೋಮನಾಥ ಶಾಸ್ತ್ರಿಗಳಿಗೆ ನಿರ್ವಹಣೆ ಗೆ ಕೊಟ್ಟು, ಗೋಗ್ಗಿಹಳ್ಳಿಯ ಮಠ ದಲ್ಲಿ 15 ದಿವಸ ಅನುಷ್ಠಾನ ಮಾಡಿದ ಪವಿತ್ರ ಸ್ಥಳ.

ಕೆಳದಿ ಅರಸರು ಕಟ್ಟಿಸಿದ, ಶ್ರೀಶೈಲ ಪೀಠ ಪರಂಪರೆಯ, ಅಲ್ಲಮಪ್ರಭು ಗಳ ಸಮಕಾಲೀನ ಗೊಗ್ಗಯ್ಯ ಶರಣರ ಬಾಳಿ ಬದುಕಿದ  ವವ ಗೋಗ್ಗಿಹಳ್ಳಿಯ ಪ್ರಾಚೀನ ಮಠದ ಆವರಣದಲ್ಲಿರುವ. ಪಂಡಿತ್ ಸೋಮನಾಥ ಶಾಸ್ತ್ರಿಗಳ ಗದ್ದುಗೆ ಮತ್ತು ಪೂಜ್ಯ ಶ್ರೀ ನಿಜಗುಣ ಶಿವಾಚಾರ್ಯ ರ ಕ್ರಿಯಾ ಸಮಾಧಿ,ಧ್ಯಾನ ಮಂದಿರ ,ಮಠಕ್ಕೆ ಉರುಳಿ ಬಂದ ಚೌಡೇಶ್ವರಿ ದೇವಿಯ ರಥದ ಗಾಲಿಗಳು ಜೊತೆಗೆ ನಿಸರ್ಗ ರಮಣೀಯ ತೋಟ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರ ರ ತಪೋಭೂಮಿ ಹೃದಯಸ್ಪರ್ಶಿಯಾಗಿದೆ

ಶ್ರೀಕುಮಾರ ತರಂಗಿಣಿ  ೨೦೨೪ ಎಪ್ರಿಲ್  ಸಂಚಿಕೆಯ ಲೇಖನಗಳ ವಿವರ

  1. ಕಾವ್ಯ : ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-‌೩೪ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಮಹಾಸಭೆಯ ಸಂಸ್ಥಾಪನೆ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
  4. “ಸುಖ-ದುಃಖ” ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
  5. ಸಮಾಜೋದ್ಧಾರಕ್ಕಾಗಿ ಜನಿಸಿದ ಸಂತ: ಲೇಖಕರು: ಚಿದಾನಂದ ಎಸ್ ಮಠದ, ರಾಷ್ಟ್ರೀಯ ಕಾರ್ಯದರ್ಶಿ,  ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)

-ಶ್ರೀಕಂಠ.ಚೌಕೀಮಠ.

ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ