ಶ್ರೀಕಂಠ.ಚೌಕೀಮಠ.
ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ
ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,
ಸೊರಬ ತಾಲೂಕಿನ ಗೊಗ್ಗಿಹಳ್ಳಿ ಪಂಚಮಮಠದ ವಿಶೇಷತೆ.
ವೀರಶೈವರು ಶೂದ್ರರು ಅವರು ಪರಳಿ ಶ್ರೀ ವೈದ್ಯನಾಥೇಶ್ವರ ಜ್ಯೋತಿರ್ಲಿಂಗ ವನ್ನು ಸ್ಪರ್ಶಿಸಿ ಪೂಜೆ ಮಾಡಲು ಹಕ್ಕಿಲ್ಲವೆಂದು ನಿರ್ಬಂಧ ಹೇರಿದವರ ಮೇಲೆ 1924 ರಲ್ಲಿ ಹೈದರಾಬಾದ್ ನಿಜಾಮ್ ಕೋರ್ಟ್ ನಲ್ಲಿ ಕಟ್ಲೆ ಹೂಡಿದ ಪರಮಪೂಜ್ಯ ಹಾನಗಲ್ ಶ್ರೀ ಕುಮಾರೇಶ್ವರ ರ ಜೊತೆ ಹಗಲಿರಳು ದುಡಿದವರಲ್ಲಿ ಇಟಗಿಯ ಪಂಡಿತ್ ಸೋಮನಾಥ ಶಾಸ್ತ್ರಿಗಳು . ಅವರು ವಕೀಲ ಪದವಿ ಹೊಂದಿಲ್ಲದಿದ್ದರೂ ನ್ಯಾಯಶಾಸ್ತ್ರದಲ್ಲಿ ಪ್ರಕಾಂಡ ಪಂಡಿತರಾಗಿದ್ದರು.
(ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ ವತಿಯಿಂದ ಪಂಡಿತ್ ಸೋಮನಾಥ ಶಾಸ್ತ್ರಿಗಳ ಪುಣ್ಯಸ್ಮರಣೆ ಮತ್ತು ಗೌರವ ಪ್ರತೀಕವಾಗಿ ಹಾಗೆ ಮುಂಬರುವ ತಲೆಮಾರಿನ ಜನತೆಗೆ ಸದಾ ಸ್ಮರಣೀಯಗೊಳಿಸಲು ಅವರ ಜನ್ಮ ಸ್ಥಳ ಇಟಗಿ ಗ್ರಾಮದಲ್ಲಿ ಸ್ಥಾಪಿಸಲು ಯೋಜಿಸಿದ ಪಂಡಿತ ಸೋಮನಾಥ ಶಾಸ್ತ್ರಿಗಳ ಅಮೃತ ಶಿಲೆಯ ಪುತ್ಥಳಿ)
ಹೈದರಾಬಾದ್ ವಕೀಲರು ಕೇವಲ ಹೆಸರಿಗೋಸ್ಕರವಿದ್ದರೆ ನಿಜದ ನ್ಯಾಯಜ್ಞಾನ ಪಂಡಿತ್ ಸೋಮನಾಥ ಶಾಸ್ತ್ರಿಗಳದ್ದಾಗಿತ್ತು.ಗ್ರಹಸ್ಥರಾದರೂ ಸಂತರಂತೆ ಬದುಕಿ ಸಮಾಜ ಕ್ಕೆ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.ಪರಮಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ತಮ್ಮ ಜೊತೆ ಸಮಾಜ ಸೇವೆ ಕೈಜೋಡಿಸಿದ ಯಾವ ಶಿಷ್ಯನನ್ನೂ ಕಡೆಗೆಣಿಸಲಿಲ್ಲ. ಒಬ್ಬ ಶಿಷ್ಯ ನ ಶ್ರಮ-ಸಾಧನೆಯನ್ನು ಮತ್ತೊಬ್ಬ ಶಿಷ್ಯ ನಿಗೆ ಕೊಡಿಸಿ ಶಿಷ್ಯ ಶೋಷಣೆಯನ್ನು ಕನಸು ಮನಸಿನಲ್ಲಿ ನೆನದವರಲ್ಲ . ಆದರೆ ಶಿಷ್ಯರ ಭವಿಷ್ಯದ ಬದುಕಿಗೆ ರಕ್ಷಣೆ ನೀಡುವ ಹತ್ತು ಹಲವು ಮುಂದಾಲೋಚನೆ ಪೂಜ್ಯರದಾಗಿತ್ತು.
ಅಂತೆಯೇ ಪರಕೀಯರ ವಶದಲ್ಲಿದ್ದ ಗೋಗ್ಗಿಹಳ್ಳಿಯ ಪಂಚಮ ಶಿವಾಚಾರ್ಯ ಮಠ ವನ್ನು 1928 ರಲ್ಲಿ ಆ ಕಾಲದ ಮೂರು ಸಾವಿರ ರೂಪಾಯಿ ಗಳನ್ನು ಕೊಟ್ಟು ಮಠ ಮತ್ತು ಆಸ್ತಿ ಗಳನ್ನು ಬಿಡಿಸಿ ಪಂಡಿತ್ ಸೋಮನಾಥ ಶಾಸ್ತ್ರಿಗಳಿಗೆ ನಿರ್ವಹಣೆ ಗೆ ಕೊಟ್ಟು, ಗೋಗ್ಗಿಹಳ್ಳಿಯ ಮಠ ದಲ್ಲಿ 15 ದಿವಸ ಅನುಷ್ಠಾನ ಮಾಡಿದ ಪವಿತ್ರ ಸ್ಥಳ.
ಕೆಳದಿ ಅರಸರು ಕಟ್ಟಿಸಿದ, ಶ್ರೀಶೈಲ ಪೀಠ ಪರಂಪರೆಯ, ಅಲ್ಲಮಪ್ರಭು ಗಳ ಸಮಕಾಲೀನ ಗೊಗ್ಗಯ್ಯ ಶರಣರ ಬಾಳಿ ಬದುಕಿದ ವವ ಗೋಗ್ಗಿಹಳ್ಳಿಯ ಪ್ರಾಚೀನ ಮಠದ ಆವರಣದಲ್ಲಿರುವ. ಪಂಡಿತ್ ಸೋಮನಾಥ ಶಾಸ್ತ್ರಿಗಳ ಗದ್ದುಗೆ ಮತ್ತು ಪೂಜ್ಯ ಶ್ರೀ ನಿಜಗುಣ ಶಿವಾಚಾರ್ಯ ರ ಕ್ರಿಯಾ ಸಮಾಧಿ,ಧ್ಯಾನ ಮಂದಿರ ,ಮಠಕ್ಕೆ ಉರುಳಿ ಬಂದ ಚೌಡೇಶ್ವರಿ ದೇವಿಯ ರಥದ ಗಾಲಿಗಳು ಜೊತೆಗೆ ನಿಸರ್ಗ ರಮಣೀಯ ತೋಟ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರ ರ ತಪೋಭೂಮಿ ಹೃದಯಸ್ಪರ್ಶಿಯಾಗಿದೆ
ಶ್ರೀಕುಮಾರ ತರಂಗಿಣಿ ೨೦೨೪ ಎಪ್ರಿಲ್ ಸಂಚಿಕೆಯ ಲೇಖನಗಳ ವಿವರ
- ಕಾವ್ಯ : ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೪ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ಮಹಾಸಭೆಯ ಸಂಸ್ಥಾಪನೆ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
- “ಸುಖ-ದುಃಖ” ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
- ಸಮಾಜೋದ್ಧಾರಕ್ಕಾಗಿ ಜನಿಸಿದ ಸಂತ: ಲೇಖಕರು: ಚಿದಾನಂದ ಎಸ್ ಮಠದ, ರಾಷ್ಟ್ರೀಯ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ)
-ಶ್ರೀಕಂಠ.ಚೌಕೀಮಠ.
ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ