ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,
ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ಪ್ರಸ್ತುತ ಪಡಿಸಿದ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ಸಾಕ್ಷ್ಯಚಿತ್ರ “ಯುಗ ಪುರುಷ ಮರಾಠಿ ಭಾಷೆಯ ಆವೃತ್ತಿ ದಿ. ೨೧-೦೭-೨೦೨೩”ಲೋಕಾರ್ಪಣೆ
ಶ್ರೀ.ಶ್ರೀ.ಶ್ರೀ.೧೦೦೮ ಜಗದ್ಗುರು.ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಗಿರಿರಾಜ ಸೂರ್ಯಸಿಂಹಾಸನ ಪೀಠ.ಶ್ರೀಶೈಲ ಅವರ ಅಮೃತಹಸ್ತದಿಂದ ಪರಳಿ ವೈದ್ಯನಾಥ ಜ್ಯೋತಿರ್ಲಿಂಗ ಮಂದಿರ ಮಹಾರಾಷ್ಟ್ರ ದಲ್ಲಿ ಜರುಗಿತು.

ಪರಳಿಯ ಮಹತ್ವ :
ಹೈದ್ರಾಬಾದ್ ಸಂಸ್ಥಾನದಲ್ಲಿದ್ದ ಪರಳಿ ವೈಜ್ಯನಾಥ ಹನ್ನೆರಡು ಜ್ಯೋರ್ತಿಲಿಂಗಗಳಲ್ಲೊಂದು. ಆ ಲಿಂಗದ ಪೂಜೆಯನ್ನು ಮೊದಲು ವೀರಶೈವರೇ ಮಾಡುತ್ತಿದ್ದರು. 1925ನೇ ಸಾಲಿನಲ್ಲಿ ವೈಜ್ಯನಾಥನನ್ನು ಬ್ರಾಹ್ಮಣರೇ ಪೂಜಿಸಬೇಕು. ವೀರಶೈವರು, ಶೂದ್ರರು ಇವರಿಗೆ ಲಿಂಗವನ್ನು ಪೂಜಿಸಲು ಹಕ್ಕಿಲ್ಲವೆಂದು ವೀರಶೈವ-ಲಿಂಗಾಯತರನ್ನು ಅಪಮಾನಮಾಡಿದ ಘಟನೆಯೊಂದು ಮಹಾರಾಷ್ಟ್ರ ದಲ್ಲಿ ಜರುಗಿತು. ಅದನ್ನು ಕೇಳಿದ ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳಿಗೆ ತಡೆಯಲಿಕ್ಕಾಗಲಿಲ್ಲ.
ಹಾನಗಲ್ಲ ಮಹಾಸ್ವಾಮಿಗಳವರು ಶೀಲಾಚಾರದಲ್ಲಿದ್ದರೂ ಅನ್ಯಾಯವನ್ನು ಸಹಿಸುತ್ತಿರಲಿಲ್ಲ. ಪಂ.ಸೋಮನಾಥ ಶಾಸ್ತ್ರೀಗಳು ಬಸವಲಿಂಗ ಶಾಸ್ತ್ರಿಗಳು ಮೊದಲಾದವರನ್ನು ಕೂಡಿಕೊಂಡು ಹೈದ್ರಾಬಾದಿಗೆ ದಯಮಾಡಿಸಿದರು. ಅಲ್ಲಿ ಒಂದು ಮನೆಯನ್ನು ಬಾಡಿಗೆ ಹಿಡಿದು ಅನುಕೂಲಮಾಡಿಕೊಳ್ಳಲು ಮೂರು ದಿನ ಉಪವಾಸವಿದ್ದು ವ್ಯವಸ್ಥೆಮಾಡಿಕೊಂಡರು. ಸುಪ್ರಸಿದ್ದ ವಕೀಲರು, ಪಂ.ಬಾಪಟರನ್ನು ಕರೆಸಿದ್ದರು. ಪಂ.ಸೋಮನಾಥ ಶಾಸ್ತ್ರಿಗಳ ಸಂಸ್ಕೃತ ದಲ್ಲಿ ಅಪಾರ ವಿದ್ವಾಂಸರು. ಆದರೆ ವಕೀಲ ಸನದು ಇಲ್ಲದ ಕಾರಣಕ್ಕೆ ಕೋರ್ಟಿನಲ್ಲಿ ವ್ಯಾಜ್ಯ ನಡೆಸಲು ಅನುಮತಿ ಸಿಗಲಿಲ್ಲ. ನವಾಬರ ಸರಕಾರದ ಒಬ್ಬ ವಕೀಲರನ್ನು ನೇಮಿಸಿಕೊಂಡು ಅವರಿಗೆ ಶಾಸ್ತ್ರೀಗಳವರೇ ಎಲ್ಲಾ ವಿಷಯ ತಿಳಿಸಿ ವ್ಯಾಜ್ಯ ನಡೆಸಲು ಬಗೆಯನ್ನು ಹೇಳುತ್ತಿದ್ದರು.
ಬ್ರಾಹ್ಮಣರು ತಂದ ಆಗಮಗಳಲ್ಲಿ ನಾಲ್ಕಾರು ಕಡೆ ‘ಶೂದ್ರ’ ಶಬ್ದ ದೊರೆಯಿತು. ಶಿವಯೋಗ ಮಂದಿರದಲ್ಲಿರುವಾಗಲೇ ಆಗಮಗಳನ್ನು ಅಭ್ಯಸಿಸಿ ಟಿಪ್ಪಣಿ ಮಾಡಿದ್ದು ಉಪಯೋಗವಾಯಿತು. ಮಂದಿರದಿಂದ ಆ ಆಗಮಗಳನ್ನು ತರಿಸಿದರು ಆ ಗ್ರಂಥಗಳಲ್ಲಿ ‘ಶೂದ್ರ’ ವಿದ್ದ ಸ್ಥಳಗಳಲ್ಲಿ ‘ರುದ್ರ’ ವಿರುವುದನ್ನು ಶಾಸ್ತ್ರಿಗಳು ಎಲ್ಲರಿಗೂ ತೋರಿಸಿ ಆಗಮಗಳನ್ನು ತಿದ್ದುಪಡಿ ಮಾಡಿರುವುದನ್ನು ತಿಳಿಸಿದರು. “ವೀರಶೈವರು ರುದ್ರಗಣಾಧೀಶರು” ರುದ್ರವಂಶಜರು ಹೀಗಿರುವಾಗ ‘ಶೂದ್ರ’ರೆಂತಾಗುವರು? ರುದ್ರ ಗಣಾದೀಶರು, ಪೂಜ್ಯರೂ ಉಚ್ಚಕುಲದವರು, ನಿತ್ಯ ಇಷ್ಟಲಿಂಗ ಪೂಜಕರು ಎಂಬುದನ್ನು ತಿಳಿಸಿ ಹೇಳಲು ಶಾಸ್ತ್ರಿಗಳು ಮೂರು ತಿಂಗಳ ಕಾಲ ಅಲ್ಲಿ ಉಳಿದರು. ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳವರು ಈ ವ್ಯಾಜ್ಯಕ್ಕಾಗಿ 1925ರಲ್ಲಿ ಸುಮಾರು 30000 ರೂಗಳ ಸಂಗ್ರಹಿಸಿ ಕೊಟ್ಟರು. ಪಂ.ಸೋಮನಾಥಶಾಸ್ತ್ರಿಗಳು ಅಷ್ಟುಕಾಲ ಹೆಂಡರು ಮಕ್ಕಳನ್ನು ಮರೆತು ಕಾರ್ಯ ಮಾಡಿದ್ದರು. ಹೈದ್ರಾಬಾದ್ ಹೈಕೋರ್ಟಿನಿಂದ ತೀರ್ಮಾನ ಬಂದಿತು. ಜಯಶಾಲಿಗಳಾದರು.
ಈ ಜಯ “ಸ್ಥಾವರ ಲಿಂಗ” ದ ಪೂಜೆ ಗಾಗಿ ಅಲ್ಲ.
ಅದು ಅಖಂಡ ವೀರಶೈವ-ಲಿಂಗಾಯತ ಧರ್ಮೀಯರಿಗೆ ಆದ ಸಾರ್ವಜನಿಕ ಅವಮಾನಕ್ಕೆ ಸ್ವಾಭಿಮಾನದ ಜಯ. ಆ ಜಯವನ್ನು ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ತಂದು ಕೊಟ್ಟಿದ್ದರು ೧೯೨೫-೨೯ ರಲ್ಲಿಯೇ ತಂದುಕೊಟ್ಟಿದ್ದರು. ಆ ಕಾರಣಕ್ಕಾಗಿ ಪರಳಿಯಲ್ಲಿ ಮರಾಠಿ ಭಾಷೆಯ “ಯುಗ ಪುರುಷ” ಲೋಕಾರ್ಪಣೆಯಾಯಿತು.
ಜೊತೆಗೆ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ಪ್ರಸ್ತುತ ಪಡಿಸಿದ “ಶ್ರೀ ಕುಮಾರೇಶ್ವರ ಅಭಂಗ” ಲೋಕಾರ್ಪಣೆ ಕಾರ್ಯಕ್ರಮ ಜರುಗಿತು

ಮಳೆಗಾಗಿ ನಿತ್ಯ ಜಲಾಭಿಷೇಕ ಪೂಜೆಯ ಒಂದು ತಿಂಗಳು ನಡೆದ ಪ್ರಾರ್ಥನೆ ಯ ಮಂಗಲ ಕಾರ್ಯಕ್ರಮ ದಿ.17 ಜುಲೈ 2023 ಖಡಕಲಾಟ ಗ್ರಾಮ (ನಿಪ್ಪಾಣಿ ತಾಲೂಕು)
ಶ್ರೀ ಕುಮಾರೇಶ್ವರರ ವಿರಕ್ತಮಠ
ಮಳೆಯಿಂದಲೇ ಸ್ವಾಗತಿಸಿ
ಮಳೆಯಿಂದಲೇ ಕಾರ್ಯಕ್ರಮ ದ ಸ್ಥಳ ಬದಲಿಸಿ
ಅಭೂತಪೂರ್ವ ಸನ್ನಿವೇಶದಲ್ಲಿ
ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ಪ್ರಸ್ತುತ ಪಡಿಸಿದ
“ಶ್ರೀಕುಮಾರೇಶ್ವರ ಅಭಂಗ” ಲೋಕಾರ್ಪಣೆ ಸಮಾರಂಭ ಖಡಕಲಾಟ ಅಪ್ಪನವರ ಕುಮಾರೇಶ್ವರ ವಿರಕ್ತಮಠದಲ್ಲಿ ಅದ್ದೂರಿಯಾಗಿ ಜರುಗಿತು ಹಿರಿಯ ಶ್ರೀಗಳಾದ ಶ್ರೀ ಮ ನಿ ಪ್ರ ಸ್ವ ಶಿವಬಸವ ಮಹಾಸ್ವಾಮಿಗಳ ಅಮೃತ ಲಿಂಗಹಸ್ತದಿಂದ ಅಭಂಗ ಲೋಕಾರ್ಪಣೆಗೊಂಡಿತು ಸಮ್ಮುಖವನ್ನು ಬಸವನಬಾಗೆವಾಡಿ ಹುಣಶ್ಯಾಳ ಹಿರೇಮಠದ ಪೂಜ್ಯ ಆನಂದ ದೇವರು ವಹಿಸಿದ್ದರು ಅಭಂಗ ಕುರಿತು ಪ್ರೊ ಮಿಥುನ ಅಂಕಲಿ ಪರಿಚಯಿಸಿದ
ಶ್ರೀಕುಮಾರ ತರಂಗಿಣಿ ೨೦೨೩ ಅಗಸ್ಟ ಸಂಚಿಕೆಯ ಲೇಖನಗಳ ವಿವರ
- ಕಾವ್ಯ : “ಶಿವಮೂರ್ತಿಯೆ ತವೆ ಪೂಜಿಸುವೆ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೨೭ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ಕಾರುಣಿಕ ಯುಗಪುರುಷ ಧಾರವಾಹಿ : ಭಾಗ ೫: ವಿದ್ಯಾಶಿಕ್ಷಣ, ವೇದಾಂತ ನಿರೀಕ್ಷಣಲೇಖಕರು: ಪೂಜ್ಯ ಜ.ಚ.ನಿ
- ನಯ-ವಿನಯ:ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
- ಕಾವ್ಯ: ಶಿವಯೋಗಿ ಕುಮಾರಯೋಗಿ ರಚನೆ: ಪೂಜ್ಯ ಶಿವಬಸವ ದೇವರು ಧಾರವಾಡ
- ಸಾಧಕರ ಶಿವಯೋಗ ಮಂದಿರದ ಸೇವಾ ಸಂಕಲ್ಪ ಯಾತ್ರೆಯ ಕಿರುವರದಿ.
- ವಿಶಿಷ್ಠ ವ್ಯಕ್ತಿತ್ವದ ಶ್ರೀ ಆರ್.ಎಸ್.ಕಲ್ಯಾಣಶೆಟ್ಟರು. (ಮಮದಾಪೂರ) .ಆಯ್.ಪಿ.ಎಸ್.(ನಿ) ಲೇಖಕ: ಶ್ರೀಕಂಠ.ಚೌಕೀಮಠ.
- ಆಡಿಯೋ೧ : ಮರಾಠಿ ಭಾಷಾ ಆವೃತ್ತಿ “ ಯುಗ ಪುರುಷ” ಸಾಕ್ಷ್ಯ ಚಿತ್ರ
- ಆಡಿಯೋ ೨ : ಶ್ರೀಕುಮಾರೇಶ್ವರ ಅಭಂಗ
ಶ್ರೀಕುಮಾರ ತರಂಗಿಣಿ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ