ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯ ಓದುಗರಿಗೆ ,
ಕಳೆದ ಸಪ್ಟಂಬರ ತಿಂಗಳು ಪೂರ್ತಿ ಕರ್ನಾಟಕ , ಮಹಾರಾಷ್ಟ್ರ ಮತ್ತು ದೆಹಲಿಗಳಲ್ಲಿ ಜರುಗಿದ ಪೂಜ್ಯ ಹಾನಗಲ್ಲ ಶ್ರೀ ಕುಮಾರಶಿವಯೋಗಿಗಳ ಜಯಂತಿ ಮಹೋತ್ಸವ ಅಭೂತಪೂರ್ವವಾಗಿದ್ದವು.
ಪೂಜ್ಯಜಗದ್ಗುರು ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಬರೆದ ಲೇಖನದ ಸಾಲುಗಳು ಅತ್ಯಂತ ಅರ್ಥಗರ್ಭಿತ
ಕುಮಾರ ಶಿವಯೋಗಿಗಳು ಏನು ಮಾಡಿದ್ದಾರೆ ಏನ್ನ ಬೇಕಿಲ್ಲ; ಏನು ಮಾಡಿಲ್ಲ ಎಂದು ಕೇಳಬೇಕು. ನಡೆಗಲಿಸಿದ, ನುಡಿಗಲಿಸಿದ, ಉಡಗಲಿಸಿದ, ಉಣಗಲಿಸಿದ ಏನೆಲ್ಲವನ್ನೂ ಅರುಹಿ, ಇಲ್ಲಿ ಸಲ್ಲಿ, ಎಲ್ಲೆಲ್ಲಿಯೂ ಸಲ್ಲುವ ಬಲ್ಲಿದರನ್ನಾಗಿಸಿದ ಜನತೆಯನ್ನು, ಅವರು ಪವಾಡಗಳನ್ನು ಮಾಡಲಿಲ್ಲ; ಅವರ ಜೀವನವೇ ಒಂದು ದೊಡ್ಡ ಪವಾಡ. ಅವರ ಜೀವನವೇ ತೆರೆದಿಟ್ಟ ಪುಸ್ತಕ.
ಸಮಗ್ರ ಅರವತ್ತೂರು ವರ್ಷದ ತಮ್ಮ ಜೀವಿತ ಕಾಲದಲ್ಲಿ : ನಾಡು, ನುಡಿ, ಧರ್ಮ, ಸಮಾಜ ಇವುಗಳ ಚಿಂತನೆಯಲ್ಲಿ ಸ್ವಸ್ವಾಸ್ಥ್ಯವನ್ನು ಗಮನಿಸದೆ, ಅವಿಶ್ರಾಂತವಾಗಿ ದುಡಿದು, ಮೈ ಮುಪ್ಪಾಗಿದ್ದರೂ ಮನ ಮುಪ್ಪಾಗದ ತೇಜಸ್ವಿ ಶಿವಯೋಗಿಗಳು, ಕಾಯಿಲೆಯಿಂದ ಹಾಸಿಗೆ ಹಿಡಿದಾಗಲೂ, ಲೋಕದ ಲೋಗರ ಕಲ್ಯಾಣದ ಬಗ್ಗೆ ಚಿಂತಿಸುತ್ತಿದ್ದರು. ಆರೋಗ್ಯದ ಬಗ್ಗೆ ವಿಚಾರಿಸಿದಾಗ ನೊಂದು : ʼʼ ನನ್ನ ಆರೋಗ್ಯ ಏನು ಮಾಡ್ತಿರಿ, ಸಮಾಜದ ಬಗ್ಗೆ ಯೋಚಿಸಿ ಕಾರ್ಯಪ್ರವೃತ್ತರಾಗಿರಿ; ಎಚ್ಚರಾಗಿ ಜಾಗ್ರತೆ ಗುರಿಯನ್ನು ಸಾಧಿಸಿರಿ ʼʼಎನ್ನುತ್ತಿದ್ದರು. ಕೊನೆಯಲ್ಲೂ ಈ ಸಮಾಜ, ಸಮಾಜ ” ಎಂದು ಕನವರಿಸುತ್ತಿದ್ದುದಲ್ಲದೆ, ಅವಶ್ಯ ಬಿದ್ದರೆ ಮತ್ತೊಮ್ಮೆ ಜನ್ಮವೆತ್ತುವೆನೆಂದು ನುಡಿದ ಆ ಜ್ಯೋತಿ, ಮಹಾ ಜ್ಯೋತಿಯಲ್ಲಿ ಒಡವೆರೆದು ಒಂದಾಗಿ, ನಾಡ ನಂದಾದೀಪವಾಗಿ ಎಲ್ಲರ ಹೃನ್ಮಂದಿರದಲ್ಲಿ ಬೆಳಗುತ್ತಿದೆ.
ಅಕ್ಟೋಬರ ೨೦೨೨ ಸಂಚಿಕೆಯ ಲೇಖನಗಳ ವಿವರ
- ಕಾವ್ಯ : “ಬೋಧವ ಕೊಡು ದೇವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೧೭ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ಶಿವಯೋಗಮಂದಿರದ ಮೊದಲ ಸಪ್ತರ್ಷಿಗಳು : ಸೌಜನ್ಯ “ಬೆಳಗು”
- ಶಾಖಾ ಶಿವಯೋಗಮಂದಿರಗಳು : ಸೌಜನ್ಯ “ಬೆಳಗು”
- ಯುಗಾದಿ ಲೇಖಕರು : ಲಿಂ. ಡಾ :ಗುರುಸಿದ್ದದೇವ ಶಿವಾಚಾರ್ಯ ಮಹಾಸ್ವಾಮಿಗಳು, ಕೆಳದಿ. ಸಂಸ್ಥಾನ ರಾಜಗುರು ಹಿರೇಮಠ, ಕೆಳದಿ,-ಶಿವಯೋಗಮಂದಿರ – ಮಂಗಳೂರು
- ಯೋಗಪರಂಪರೆಯ ಇತಿಹಾಸ
- ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಶ್ರೀ ಮಲ್ಲಿಕಾರ್ಜುನದೇವರು, ಬಿ. ಎ., ಆನಂದಪುರಂ
- ಸದಾಶಿವ ಲೀಲೆ ; ಕವಿರತ್ನ ದ್ಯಾಂಪುರ ಚನ್ನಕವಿಗಳು
- ಆಡಿಯೋ ಬುಕ್ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು
ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ
ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು
ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ