ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,
ಬದುಕು ಮತ್ತು ಸವಿಸುವ ದಾರಿಯಲ್ಲಿ ಸಂಚರಿಸುವಾಗ ಜರಗುವ ಪ್ರಕ್ರಿಯೆಗಳು ನಮಗೊಂದು ದೊಡ್ಡ ಪಾಠವಾಗಿ ಮಾರ್ಪಾಡುತ್ತವೆ ಎನ್ನುವದರ ಕುರಿತು ಚಿಂತಿಸುವಾಗ,
ಹನ್ನೆರಡನೆಯ ಶತಮಾನದಲ್ಲಿ ಬರೆದಿಟ್ಟಿರುವ ಬಸವಣ್ಣನವರ ಈ ವಚನ ಬದುಕಿನ ಕರಾಳ ಮುಖದ ವಿರಾಟದರ್ಶನ ಮಾಡಿಸಿತು
ಮಾಡಿದೆನೆಂಬುದು ಮನದಲ್ಲಿ ಹೊಳೆದರೆ,
ಏಡಿಸಿ ಕಾಡಿತ್ತು ಶಿವನ ಡಂಗುರ!
ಮಾಡಿದೆನೆನ್ನದಿರಾ ಲಿಂಗಕ್ಕೆ,
ಮಾಡಿದೆನೆನ್ನದಿರಾ ಜಂಗಮಕ್ಕೆ.
ಮಾಡಿದೆನೆಂಬುದು ಮನದಲ್ಲಿಲ್ಲದಿದ್ದರೆ,
ಬೇಡಿತ್ತನೀವ ಕೂಡಲಸಂಗಮದೇವ
If it flashes across the mind that one is performing service,
the drum of Lord Shiva warns with a harsh sound.
Never say that you served the Lord!
Never say that you served His wandering (mobile) devotees!
If the thought that you served does not occur in your mind,
the Lord Kudala Sangama will grant you whatever you aspire for.
ಭಕ್ತನು ಸೇವಕ, ಶಿವನು ಯಜಮಾನ. ಸೇವಕನು ಯಜಮಾನನ ಕೆಲಸವನ್ನು ಮಾಡಿ-ಮಾಡಿಸಿದವನು ಯಜಮಾನನೆಂದು-ಅವನ ಹೆಸರನ್ನು ಮುಂದುಮಾಡದೆ ತಾನೇ ಮಾಡಿದವನೆಂದು-ಒಳಗೊಳಗೇ ಆದರೂ ಬಡಿವಾರ ಮಾಡಿದರೆ ಯಜಮಾನನು ಗಮನಿಸಿ ಶಿಕ್ಷಿಸುತ್ತಾನೆ.
ಹಾಗೆಯೇ ಭಕ್ತನು ತನ್ನ ಯಜಮಾನನಾದ ಶಿವನಿಗಾಗಲಿ, ಅವನ ಪ್ರತಿನಿಧಿಯಾದ ಜಂಗಮಕ್ಕಾಗಲಿ ಮಾಡಿ ನೀಡಿ ದಾಸೋಹಂಭಾವದಿಂದಿರದೆ ಅಹಂಭಾವಿಯಾದರೆ ಸವಾಲೆಸೆದು ಕಾಡುತ್ತಾನೆ. ಮಾಡುವವನು ನೀನೆ ಮಾಡಿಸುವವನು ನೀನೆ ಎಂದು ಶಿವನಿಗೆ ವಿನಮ್ರವಾಗಿ ನಡೆದರೆ ಅವನನ್ನು ಶಿವನು ತನ್ನ ಅರ್ಧಾಸನದಲ್ಲಿ ತೊಡೆಯಲ್ಲಿ ತಲೆಯಲ್ಲಿ ಮೆರೆಸುತ್ತಾನೆ.
– ವ್ಯಾಖ್ಯಾನಕಾರರು
ಡಾ.ಎಲ್. ಬಸವರಾಜು
ಶ್ರೀಕುಮಾರ ತರಂಗಿಣಿ ೨೦೨೩ ಎಪ್ರಿಲ್ಸಂಚಿಕೆಯ ಲೇಖನಗಳ ವಿವರ
- ಕಾವ್ಯ : “ ದೇವ ಕಾಯೋ ನೀ ಮಾಯಾತೀತನೆ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೨೩ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ನಾನು ಕಂಡ ಕುಮಾರ ಯೋಗಿ: ಲೇಖಕರು: ಪೂಜ್ಯ ಜ.ಚ.ನಿ
- ಷಟ್‌ಸ್ಥಲ : ಪರಿಕಲ್ಪನೆ :• ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ದೃಷ್ಟಿ- ಸೃಷ್ಟಿ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
- ವಚನ ವಾಙ್ಮಯದ ಮಹತ್ವ :ಫ. ಗು. ಹಳಕಟ್ಟಿ, ವಿಜಾಪೂರ
- ಅಪ್ಪ ಹಾನಗಲ್ಲ ಕುಮಾರೇಶ : ರಚನೆ:ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
- ಆಡಿಯೋ೧ : ವಿಶೇಷ ಉಪನ್ಯಾಸ
- ಶ್ರೀಕುಮಾರೇಶ್ವರರ ಶಿಷ್ಯ ಸಂಪತ್ತು” ಪರಮಪೂಜ್ಯ
- ಶ್ರೀ ಮ.ನಿ.ಪ್ರ. ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ
- ಶ್ರೀ ಅನ್ನದಾನೇಶ್ವರ ದೇವಮಂದಿರಮಠ.ಸುಕ್ಷೇತ್ರ ಮಣಕವಾಡ
- ಆಡಿಯೋ ೨ : ದೇವ..ದೇವಾ..ಶ್ರೀಕುಮಾರೇಶ
- ಗಾಯನ: ಶ್ರೀಸಿದ್ಧೇಂದ್ರಕುಮಾರ ಹಿರೇಮಠ
- ರಚನೆ : ಶ್ರೀಕಂಠ. ಚೌಕೀಮಠ
ಶ್ರೀಕುಮಾರ ತರಂಗಿಣಿ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ
ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
ಅವರಿಗೆ ತುಂಬು ಹೃದಯದ ಕೃತಜ್ಞತೆಗಳು
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ