ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,
ವಿರಾಟಪುರ ವಿರಾಗಿ” ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜೀವನ ಚರಿತ್ರೆ ಆಧಾರಿತ ಚಿತ್ರ ಬಿಡುಗಡೆಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತ,
ಪರಮಪೂಜ್ಯ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು , ಶ್ರೀ ಗುರುದೇವ ಸೇವಾ ಸಂಸ್ಥೆಯ ಅಡಿಯಲ್ಲಿ ನಿರ್ಮಿಸಿದ ,ಶ್ರೀ ಬಿ.ಎಸ್.ಲಿಂಗದೇವರು ಚಿತ್ರಕಥೆ ಬರೆದು ನಿರ್ದೇಶಿಸಿದ ಚಿತ್ರ “ವಿರಾಟಪುರ ವಿರಾಗಿ” ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ ಜೀವನ ಚರಿತ್ರೆ ಆಧಾರಿತ ಚಿತ್ರ ಬಿಡುಗಡೆಯ ದಿನಾಂಕ ೧೩ ಜನೆವರಿ ೨೦೨೩ ಎಂದು ಘೋಷಣೆಯಾಗಿರುವದು ಅತ್ಯಂತ ಸಂತೋಷದ ಸಂಗತಿ.
ಪ್ರಸ್ತುತ ಚಿತ್ರದ ಕಾರ್ಯಕಾರಿ ನಿರ್ಮಾಪಕತ್ವ ಹೊಣೆಹೊತ್ತು ಸತತ ಮೂರುವರ್ಷಗಳ ನಿರಂತರ ಪರಿಶ್ರಮದಿಂದ ನವದೆಹಲಿಯ ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ್) ಕಾರ್ಯಕಾರಿ ನಿರ್ಮಾಪಕತ್ವದ ಎಲ್ಲ ಜವಾಬ್ದಾರಿಗಳನ್ನು ಭಕ್ತಿ ಶ್ರದ್ಧೆಯಿಂದ ಪೂರೈಸಿ ದಿ. 1 ಡಿಸೆಂಬರ್ 2022 ರಂದು ಪರಮಪೂಜ್ಯ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಗೆ ಹಸ್ತಾಂತರಿಸಿದ ವಿಷಯವನ್ನು ಪ್ರಕಟಿಸಲು ಹೆಮ್ಮೆಯೆನಿಸುತ್ತದೆ.
ದಿ.29 ಫೆಬ್ರವರಿ 2020 ರಂದು ದೆಹಲಿಗೆ ದಯಮಾಡಿಸಿದ್ದ ಪರಮಪೂಜ್ಯ ಶ್ರೀ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳು ,ನಮ್ಮ ಸೇವಾ ಸಮಿತಿಯು ವಾರಣಾಸಿಯಲ್ಲಿ ಲೋಕಾರ್ಪಣೆ ಮಾಡಿದ್ದ ಶ್ರೀಕುಮಾರೇಶ್ವರರ ಆಂಗ್ಲ ಭಾಷೆಯ ಸಾಕ್ಷ್ಯಚಿತ್ರ “ಯುಗಪುರುಷ”ವನ್ನು ಗಮನಿಸಿ ,ಕನ್ನಡ ಬೆಳ್ಳಿತೆರೆಗೆ ಶ್ರೀ ಕುಮಾರೇಶ್ವರರ ಚಿತ್ರ ನಿರ್ಮಿಸುವ ಜವಾಬ್ದಾರಿಯನ್ನು ನೀಡಿದ್ದರು.
30 ಸೆಪ್ಟೆಂಬರ್ 2020 ರಂದು ಚಲನಚಿತ್ರದ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಕಾರ್ಯಾರಂಭ ಮಾಡಿದ ದೆಹಲಿಯ ಸೇವಾ ಸಮಿತಿ, ಚಿತ್ರದ ಕಥಾಹಂದರ ,ಚೌಕಟ್ಟುಗಳನ್ನು ಯೋಜಿಸಿ ಬೇಕಾದ ಎಲ್ಲ ಸಾಹಿತ್ಯಗಳನ್ನು ಮತ್ತು ಸಾಹಿತ್ಯಕೃತಿಗಳ ಅನುಮತಿ ಪತ್ರಗಳನ್ನು ಪಡೆದು ಚಿತ್ರ ನಿರ್ದೇಶಕರಿಗೆ ಸಲ್ಲಿಸಿ, ಹಲವು ಬಾರಿ ದೆಹಲಿಯಿಂದ ಕರ್ನಾಟಕಕ್ಕೆ ಪ್ರಯಾಣ ಮಾಡಿ ಚಿತ್ರ ನಿರ್ದೇಶಕರು ರಚಿಸಿ ಕೊಟ್ಟ ಕರಡುಪ್ರತಿ (ಸ್ಕ್ರಿಪ್ಟ) ಗೆ ಹಲವು ಚಾರಿತ್ರಿಕ ವಿಷಯಗಳ ತಿದ್ದುಪಡಿಗಳನ್ನು ಮಾಡಿ , ಹಿರಿಯ ಸ್ವಾಮೀಜಿಗಳ ಮುಂದೆ ಗಮನಕ್ಕೆ ತಂದು ಅನುಮತಿ ಪಡೆದು , 2021 ನವಂಬರ ದಂದು ಹೊರಾಂಗಣ ಚಿತ್ರೀಕರಣವನ್ನು ಆರಂಭಿಸಿ ಆಗಸ್ಟ್ ತಿಂಗಳು 2022ಕ್ಕೆ ಸಂಪೂರ್ಣ ಹೊರಾಂಗಣ ಚಿತ್ರೀಕರಣವನ್ನು ಮುಕ್ತಾಯ ಕನ್ನಡ ಚಲನಚಿತ್ರ ಮಂಡಳಿಯ ನಿಯಮಾವಳಿಗಳಂತೆ ಹೊರಾಂಗಣ ಚಿತ್ರೀಕರಣ ನಡೆಯಿಸಲಾದ ಎಲ್ಲ ಸ್ಥಳಗಳಲ್ಲಿ ಜಿಲ್ಲಾಡಳಿತ,ಪೊಲೀಸ ಠಾಣಾಧಿಕಾರಿಗಳ ಪೂರ್ವಾನುಮತಿ ,ಪುರಸಭೆಗಳ ಅನುಮತಿ, ಮಠಗಳ,ವಿಶ್ವವಿದ್ಯಾಲಯದ, ಹಳೆಯ ಮನೆಗಳ ವಾಡೆಗಳ ಮಾಲೀಕರ ಪೂರ್ವಾನುಮತಿಗಳನ್ನು ಪಡೆದು ನಿರ್ವಹಿಸಿದ ಕಾರ್ಯ ನಮ್ಮ ಸೇವಾ ಸಮಿತಿಗೆ ದೊಡ್ಡ ಸವಾಲನ್ನೇ ಸೃಷ್ಠಿಸಿತು. ಚಿಕ್ಕಪುಟ್ಟ ಒಂದೆರಡು ತೊಂದರೆಗಳನ್ನು ಬಿಟ್ಟರೆ ,ಯಾವ ತೊಂದರೆಯೂ ಇಲ್ಲದೇ ಚಿತ್ರ ನಿರ್ಮಾಣವಾಗಿದ್ದು ನಮ್ಮ ಸುದೈವವೇ ಸರಿ.
ಯಾವುದೇ ಸಂಭಾವನೆ ಮತ್ತು ಹಣಕಾಸು ವ್ಯವಹಾರಗಳ ಒಪ್ಪಂದವಿಲ್ಲದ ಪ್ರಾಂಜಲ ಸೇವೆಯ ನವದೆಹಲಿಯ ಹಾನಗಲ್ಲ ಶ್ರೀಕುಮಾರ ಶಿವಯೋಗಿ ಸೇವಾ ಸಮಿತಿಯ ಶ್ರಮ, ಮಾನವ ಸಹಜ ಮತ್ತು ಚಾಣುಕ್ಯ ಪ್ರವಾಹಕ್ಕೆ ಸಿಲುಕಿ, ಇತಿಹಾಸದ ಕಾಲಗರ್ಭದಲ್ಲಿ ಅನಾಮಧೇಯವಾಗಿ ಲೀನವಾಗುವ ಲೌಕಿಕ ಲೀಲೆಯ ಇಳಿಹೊತ್ತಿನಲ್ಲಿ ಹೇಳಿ ಹೋಗುವ ಕೃತಜ್ಞತಾ ಸಂಸ್ಕೃತಿಯಂತೆ, ನಾಡಿನ ಹಲವಾರು ಪೂಜ್ಯ ಜಗದ್ಗುರುಗಳು, ಮಹಾಸ್ವಾಮಿಗಳು, ಭಕ್ತಾದಿಗಳು , ಕರ್ನಾಟಕ ಸರಕಾರದ ಮಂತ್ರಿ ಮಹೋದಯರು ಮತ್ತು ರಾಜಕೀಯ ಧುರಿಣರು ಪರಮಪೂಜ್ಯ ಶ್ರೀಕುಮಾರ ಶಿವಯೋಗಿಗಳ ಮೇಲಿಟ್ಟಿರುವ ಅನುಪಮ ಭಕ್ತಿ ಗೌರವಗಳಿಂದ ,ಕೆಲವೊಂದು ಪ್ರದೇಶಗಳಲ್ಲಿ ನಾವು ಅಪರಿಚಿತರಾದರೂ ನಮಗೆ ತೋರಿದ ಪ್ರೀತಿ ಅಂಥಕರುಣೆ ಮತ್ತು ಸಹಾಯಗಳನ್ನು , ನೆನೆದು ಕೃತಾರ್ಥರಾಗಲು ಬಯಸುತ್ತೇವೆ..
ಜನೆವರಿ ೨೦೨೩ ಸಂಚಿಕೆಯ ಲೇಖನಗಳ ವಿವರ
- ಕಾವ್ಯ : “ ಪಾಹಿ ಶಿವ ನೀ ಪಾಹಿ ಶಿವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೨೦ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- : ನಿಜಗುಣ ಶಿವಯೋಗಿಕೃತ ಕೈವಲ್ಯ ಪದ್ಧತಿಯಲ್ಲಿಯ ‘ʼಜ್ಞಾನಪ್ರತಿಪಾದನ ಸ್ಥಲʼ’ಸ. ಸ. ಮಾಳವಾಡ
- ದ್ಯಾಂಪುರದ ಚನ್ನಕವಿಗಳ ಮಂತ್ರ ರಹಸ್ಯ-ಕೃತಿ ಕುರಿತು ಡಾ|| ಎಸ್. ಎಂ. ಹಿರೇಮಠ
- ಶೈವ-ವೀರಶೈವ : ಪರಿಕಲ್ಪನೆ • ಡಾ. ಬಿ. ವ್ಹಿ. ಶಿರೂರ
- ಆಡಿಯೋ ಬುಕ್ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು
ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
- ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ
- ಅರ್ಪಿಸುವ
- “ ನೀನೇಕೆ ಮರೆಯಾದೆ ಗುರು ಸದಾಶಿವ”
ರಚನೆ: ಪೂಜ್ಯ ಶ್ರೀ ಕುಮಾರದೇವರು ಅಂತೂರುಬೆಂತೂರು
ಗಾಯನ: ಶ್ರೀಮತಿ ಉಷಾ ಪ್ರಭು ಹುನಗುಂದ್ ಕ್ಯಾಲಿಫೋರ್ನಿಯ.ಅಮೇರಿಕಾ
- ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿ
- ಅರ್ಪಿಸುವ
- “ಜಯ..ಜಯ.. ಶ್ರೀಕುಮಾರೇಶ”
ಸಂಗೀತ -ಗಾಯನ : ಶ್ರೀ ಸಿದ್ಧೇಂದ್ರಕುಮಾರ ಹಿರೇಮಠ
ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ
ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
ಅವರಿಗೆ ತುಂಬು ಹೃದಯದ ಕೃತಜ್ಞತೆಗಳು
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ