ಶ್ರೀಕಂಠ.ಚೌಕೀಮಠ.
ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ
ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ೧೮೬೭-೧೯೩೦ ಕಾಲಮಾನ ಮತ್ತು ಅಂದಿನ ಸಮಾಜದ ಸ್ತಿತಿ ಗತಿಗಳ ಬಗ್ಗೆ ವಿವರವಾದ ಸಂಗತಿಗಳ ಸಂಗ್ರಹ ಸಂಧರ್ಭದಲ್ಲಿ ಶ್ರೀ ಬಸವರಾಜ ಪುರಾಣಿಕ ಅವರ ಒಂದು ಲೇಖನ ಗಮನ ಸೆಳೆಯಿತು
ಶ್ರೀ ಕುಮಾರ ಶಿವಯೋಗಿಗಳ ಕಾಲವು ವೀರಶೈವ ಸ್ಥಿತಿಗತಿಗಳ ಶೋಚನೀಯ ಕಾಲವೂ ಹೌದು, ಸೌಭಾಗ್ಯದ ಕಾಲವೂ ಹೌದು ಎಂದೆನಬೇಕಾಗುತ್ತದೆ. ಹಲವಾರು ಆಂತರಿಕ ಹಾಗೂ ಬಾಹ್ಯ ಕಾರಣಗಳಿಂದಾಗಿ
ಸಮಾಜವು ಒಮ್ಮೆಲೇ ಮೈಕೊಡವಿಕೊಂಡು ಎಚ್ಚತ್ತು ವಿವೇಕಯುತವಾಗಿ ವರ್ತಿಸಿ ಸಮಾಜದ ನಿಶ್ಚಿತ ಗತಿ ಗಮನಗಳನ್ನು ಗುರುತಿಸಿಕೊಂಡುದು, ಸಕ್ರಿಯವಾಗಿ, ಸಾಂಘಿಕವಾಗಿ ಸಾಗಿ ಬಂದು ಸಾರ್ಥಕತೆಯ ನೆಲೆ ತಲುಪಿದುದನ್ನು ಇತಿಹಾಸವಿಂದು ತಿಳಿಯಪಡಿಸುತ್ತದೆ.
ಈ ಕಾಲ ಸಂದರ್ಭದ ವೀರಶೈವ ಸಮಾಜದಲ್ಲಿ ಅನೇಕ ಮಹನೀಯರು ಕಂಡುಬರುತ್ತಾರೆ.
ಗ್ರಂಥ ಪ್ರಚಾರ ಮಾಡಿದ ಮಹನೀಯರು ಕೆಲವರು,
ವಿದ್ಯಾಪ್ರಚಾರ ಮಾಡಿದ ಪುಣ್ಯಾತ್ಮರು ಕೆಲವರು
ತತ್ವೋಪದೇಶ ಮಾಡಿದವರು ಕೆಲವರು,
ಪಾಠಶಾಲೆಗಳನ್ನು ಸ್ಥಾಪಿದವರು ಕೆಲವರು,
ಯೋಗವಿದ್ಯೆಯನ್ನು ಕಲಿಸಿದವರು ಕೆಲವರು,
ಪರವಾದಿಗಳ ನಿಗ್ರಹ ಮಾಡಿದವರು ಕೆಲವರು,
ಸದಾಚಾರಕ್ಕೆ ಮಾರ್ಗದರ್ಶಕ ರಾದವರು ಕೆಲವರು,
ಸಮಾಜದ ಸಂಘಟನೆಗಾಗಿ ಪ್ರಯತ್ನಿಸಿದವರು ಕೆಲವರು,
ಸರ್ವಾರ್ಪಣ ಮಾಡಿದವರು ಕೆಲವರು,
ಜನರನ್ನು ಸಂಘಟಿಸಿ ಒಂದು ಧೈಯಕ್ಕೆ ಒಡ್ಡಿದವರು ಕೆಲವರು.
ಈ ಎಲ್ಲರನ್ನೂ ಇವೆಲ್ಲವನ್ನೂ ಸಾಧಿಸಿದ ಸಿದ್ಧಿಸಿದ ಏಕೈಕ ವ್ಯಕ್ತಿ ಎಂದರೆ ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು,
ಶ್ರೀಗಳು ಕೀರ್ತಿಯನ್ನು ತಿರಸ್ಕರಿಸಿದರು. ಆದರೆ ಕೀರ್ತಿ ಅವರನ್ನು ಎಡಬಿಡದೆ ಪುರಸ್ಕರಿಸಿತು.
ಅವರು ಪಲ್ಲಕ್ಕಿಯನ್ನೇರಲಿಲ್ಲ. ಆದರೆ ಪಲ್ಲಕ್ಕಿಯನ್ನೇರಿದವರು ಇವರ ಸನ್ನಿಧಿಗೆ ಎರಗದಿರಲಿಲ್ಲ.
ಪರಮಾಶ್ಚರ್ಯ ದ ಸಂಗತಿಯೆಂದರೆ,
ಶ್ರೀಗಳ ೬೩ ವರ್ಷದ ಈ ಜೀವನ ಯಾತ್ರೆಯಲ್ಲಿ ಅವರು ಸಾರ್ವಜನಿಕ ರಂಗಕ್ಕೆ ಪ್ರವೇಶಿಸಿದ್ದು ತಮ್ಮ ೩೬ನೆಯ ಪ್ರಾಯಕ್ಕೆ, ಮುಂದಿನ ೨೭ ವರ್ಷದ ಆಯುಷ್ಯದ ಪ್ರತಿ ಕ್ಷಣವೂ ಅವರ ಪ್ರಾಣವೀಣೆ ಸಮಾಜೋನ್ನತಿಯ ರಾಗವನ್ನು ಹಾಡುತ್ತಿತ್ತು ಸಮಾಜದ ಏಳೆಯ ಬಯಕೆಯು ಅವರ ಹಸ್ತವು ಅವರ ಸನಿಹಕ್ಕೆ ಬರುತ್ತಿದ್ದ ಸಮರ್ಥ ವ್ಯಕ್ತಿ ತಂತಿಗಳನ್ನು ಮೀಟುತ್ತಿತ್ತು’ ಎಂಬ
ಜಚನಿಯವರ ಮಾತುಗಳು ಕಾವ್ಯಮಯವಾಗಿದ್ದರೂ ಶ್ರೀಗಳ ಅಂತಶ್ವೇತನದ ಚಿತ್ರವನ್ನೇ ನೀಡುತ್ತವೆ.
ಶ್ರೀಕುಮಾರ ತರಂಗಿಣಿ ೨೦೨೪ ಫೆಭ್ರುವರಿ ಸಂಚಿಕೆಯ ಲೇಖನಗಳ ವಿವರ
- ಕಾವ್ಯ : ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-32 : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ತಪೋಭೂಮಿ-ತತ್ವಪ್ರೇಮಿ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
- ಆಶೆ-ಆಮಿಷ;ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
- ಗುರುವಿನ ಅವಶ್ಯಕತೆ ನಮಗೆ ಏಕೆ ಬೇಕು : ಶ್ರೀ ಮ.ನಿ.ಪ್ರ.ಚನ್ನವೀರ ಮಹಾಸ್ವಾಮಿಗಳು ಹೂವಿನಶಿಗ್ಲಿ ಶ್ರೀ ವಿರಕ್ತಮಠ
- ಶ್ರೀ ಮೈಲಾರ ಬಸವಲಿಂಗ ಶರಣರ ದೃಷ್ಟಿಯಲ್ಲಿ ಅಷ್ಟಾವರಣ. ಸಂಗ್ರಹ -ಸಂಪಾದನೆ : ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
ಶ್ರೀಕುಮಾರ ತರಂಗಿಣಿ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣ ತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.
-ಶ್ರೀಕಂಠ.ಚೌಕೀಮಠ.
ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ