Editorial

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ನಮಸ್ಕಾರಗಳು.

ಸುಕುಮಾರ ಅಂತರ್ಜಾಲದ ಬ್ಲಾಗ್‌ ನ ವಾರ್ಷಿಕೋತ್ಸವ ಸಂಭ್ರಮದ ತಿಂಗಳು ಅಕ್ಷಯ ತೃತೀಯ ಬಸವಜಯಂತಿ.

ಸುಕುಮಾರದ ಬ್ಲಾಗ್‌ ನ ರಚನೆಯ ಹಿನ್ನಲೆ  ಒಂದು ಅವಿಸ್ಮರಣೀಯ ಅನುಭವ!.

ದಿನಾಂಕ ೮ ಎಪ್ರಿಲ್‌ ೨೦೨೧ ರಂದು ಪರಮ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಸದ್ಯದ ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ ಅವರ ಜೊತೆ ದೂರವಾಣಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ಹುಟ್ಟಿದ ಒಂದು ಚಿಂತನೆ “ಸುಕುಮಾರ “ ದ ಬ್ಲಾಗ್‌ ಗೆ ನಾಂದಿ ಹಾಡಿತು.

ಪೂಜ್ಯರು ತಡಮಾಡದೆ, ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ. ಅವರಿಂದ ಅನುಮತಿ ಆಶೀರ್ವಾದಗಳನ್ನು ಕೊಡಿಸಿಯೇ ಬಿಟ್ಟರು .

ಪೂಜ್ಯರ ಬೆಂಬಲ ಮತ್ತು ಆಶೀರ್ವಾದಗಳು ನನ್ನಲ್ಲಿ ಹೊಸ ಹುರುಪು ಚೈತನ್ಯ ವನ್ನು ತುಂಬಿದವು  ಐತಿಹಾಸಿಕ ಸುಕುಮಾರಕ್ಕೆ ಓರ್ವ ವಿದ್ವಾಂಸರನ್ನು ಸಂಪಾದಕ ಸ್ಥಾನಕ್ಕೆ ಗೊತ್ತುಮಾಡಿದೆವು.ಆದರೆ ಅವರು ಒಪ್ಪಿಕೊಳ್ಳಲಿಲ್ಲ ಪೂಜ್ಯರು ಸಂಪಾದಕತ್ವದ ಹೊಣೆಯನ್ನು ನನಗೊಪ್ಪಿಸಿದರು

ಕೇವಲ ಒಂದು ತಿಂಗಳಲ್ಲಿ  ಬ್ಲಾಗ್‌ ನ ವಿನ್ಯಾಸ ,ಲೇಖನಗಳ ಸಂಗ್ರಹಗಳು ಸಿದ್ಧಗೊಂಡವು. ಹಲವು ತೊಂದರೆಗಳು ಆಕಸ್ಮಿಕವಾಗಿ ಬಂದರೂ ,ಬ್ಲಾಗನ ವಿನ್ಯಾಸಕಾರ ತಂಡದ ಸದಸ್ಯರು ಕೊರೊನಾ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿದರೂ. ಬಸವ ಜಯಂತಿ -ಸುಕುಮಾರ  ಲೋಕಾರ್ಪಣೆಯ ಎರಡುದಿನದ ಮೊದಲು ನನ್ನ ಹಿರಿಯ ಸಹೋದರ  ಲಿಂಗೈಕ್ಯರಾದರೂ,ಸುಕುಮಾರ ೨೦೨೧ ರ ಬಸವಜಯಂತಿಯ ಪವಿತ್ರ ದಿನದಂದು  ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರ ಅಮೃತಹಸ್ತದಿಂದ ಲೋಕಾರ್ಪಣೆ ಗೊಂಡಿತು.

ಆರಂಭದಲ್ಲಿ ಕೇವಲ ೮೫ ಓದುಗರಿಂದ  ಅಂಬೆಗಾಲನ್ನಿಕ್ಕಿದ ಸುಕುಮಾರ ಬ್ಲಾಗ್‌ ಹನ್ನೊಂದು ತಿಂಗಳಲ್ಲಿ 90 ಅಪರೂಪದ ಲೇಖನಗಳು,14 ಪದ್ಯಗಳು , 4 ಅಡಿಯೋ ಬುಕ್‌ ,11 ಧಾರವಾಹಿಗಳು, ಮತ್ತು11 ಸಂಗೀತ ಮುದ್ರಿಕೆ ವಿಡಿಯೊಗಳನ್ನು  ಪ್ರಕಟಿಸಿ ದೇಶ ವಿದೇಶಗಳಿಂದ ಎಳು ಸಾವಿರಕ್ಕೂಹೆಚ್ಚು ಓದುಗರನ್ನು ಪಡೆದುಕೊಂಡಿದೆ.

ಈ ಯಶಸ್ಸಿನ ಹಿಂದೆ ನನ್ನನ್ನು ತಿದ್ದಿದ ,ಲೇಖನಗಳ ಯುನಿಕೋಡ ಪರಿವರ್ತನೆಯಲ್ಲಿ ಆಗುವ ತಪ್ಪುಗಳನ್ನು ಪರಿಷ್ಕರಿಸಿದ

ಪೂಜ್ಯಶ್ರೀ ಮ.ನಿ.ಪ್ರ. ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ, ಹೊಸಪೇಟೆ-ಬಳ್ಳಾರಿ

ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾ

ಪೂಜ್ಯರುಗಳನ್ನು ಈ ಸಂದರ್ಭದಲ್ಲಿ ಹೃದಯಪೂರ್ವಕ ನೆನೆದು ಕೊಳ್ಳುತ್ತೇನೆ.

ಸುಕುಮಾರ ಬ್ಲಾಗ್‌ನ ಪ್ರಕಟಣೆಗಳಿಗೆ ಲೇಖನಗಳನ್ನಕೊಟ್ಟು ಪ್ರೋತ್ಸಾಹಿಸಿದ

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ.

ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ.

ಪೂಜ್ಯ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ

ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳವರು ,ಹಂದಿಗುಂದ

ಪೂಜ್ಯ ಪ್ರಭು ಚೆನ್ನಬಸವ ಸ್ವಾಮಿಗಳು ಮೋಟಗಿ ಮಠ ಅಥಣಿ

ಪೂಜ್ಯ ಮ.ನಿ.ಪ್ರ.ಶಿವಬಸವ ಸ್ವಾಮಿಗಳು  ವಿರಕ್ತಮಠ, ಅಕ್ಕಿಆಲೂರು

ಪೂಜ್ಯ ಡಾ.ಚೆನ್ನಮಲ್ಲ ಸ್ವಾಮೀಜಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ

ಪೂಜ್ಯ ಸದಾಶಿವ ದೇವರು ವಳಬಳ್ಳಾರಿ.

ಪೂಜ್ಯರ ಪಾದಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವೆ

ಸುಕುಮಾರದ ಶ್ರೇಯೋಭಿವೃದ್ದಿಗೆ ಬೆಂಬಲ ಮತ್ತು ಆಶೀರ್ವಾದಗಳನ್ನು ದಯಪಾಲಿಸಿದ

ಶ್ರೀಮನ್ಮಹರಾಜ ನಿರಂಜನ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿಗಳು.  ಶ್ರೀ ಜಗದ್ಗುರು ಮೂರುಸಾವಿರಮಠ ಹುಬ್ಬಳ್ಳಿ

ಪೂಜ್ಯ ಮ.ನಿ.ಪ್ರ. ಶ್ರೀ ಸದಾಶಿವ ಸ್ವಾಮಿಗಳು ಹುಕ್ಕೇರಿಮಠ ಹಾವೇರಿ ಉಪಾಧ್ಯಕ್ಷರು ಶ್ರೀ  ಶಿವಯೋಗಮಂದಿರ

ಪೂಜ್ಯರ ಪಾದಗಳಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುವೆ

ಹಾಗೂ ಲೇಖನಗಳನ್ನು ಬರೆದು ಕಳುಹಿಸಿಕೊಟ್ಟ ಎಲ್ಲ ಲೇಖಕರನ್ನು  ತುಂಬು ಹೃದಯದ ಕೃತಜ್ಞತೆಗಳೊಂದಿಗೆ ಸ್ಮರಿಸಿಕೊಳ್ಳತ್ತೇನೆ

ಸಹೃದಯರ ಕೈಸೇರುತ್ತಿರುವ ಹೊಸಹುಟ್ಟು ಪಡೆದ ಈ “ ಸುಕುಮಾರ ” ಪತ್ರಿಕೆಗೆ ಉಜ್ವಲ ಇತಿಹಾಸವಿದೆ. ಆ ಇತಿಹಾಸದ ಒಂದು ನೋಟವನ್ನು ಹೀಗೆ ಅವಲೋಕಿಸಬಹುದು :

ಲಿಂಗೈಕ್ಯ ಶ್ರೀ ಕುಮಾರಸ್ವಾಮಿಗಳವರಿಂದ ಸ್ಥಾಪನೆಗೊಂಡ ಶ್ರೀ ಶಿವಯೋಗಮಂದಿರ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದ ಸಾಧಕರ ಶಿಕ್ಷಣಕ್ಕೆ ನೆರವಾಗಲೆಂಬ ಸದುದ್ದೇಶದಿಂದ ಆಗ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ನವಲಗುಂದದ ಪೂಜ್ಯ

ಶ್ರೀ ಬಸವಲಿಂಗ ಸ್ವಾಮಿಗಳವರು “ ಶ್ರೀ ರೇವಣಸಿದ್ದೇಶ್ವರ ವಾಚನಾಲಯ ‘ವನ್ನು ಮಂದಿರದ ಗ್ರಂಥಾಲಯದಲ್ಲಿ ಆರಂಭಿಸಿದರು. ಗ್ರಂಥಾಲಯ ಮತ್ತು ವಾಚನಾಲಯದಲ್ಲಿ ಲಭ್ಯವಿದ್ದ ಅಮೂಲ್ಯ ಪುಸ್ತಕ ಮತ್ತು ಉನ್ನತ ಮಟ್ಟದ ಪತ್ರಿಕೆಗಳ ಓದಿನಲ್ಲಿ ಸಾಧಕರು ತಮ್ಮನ್ನು ತಾವು ತೊಡಗಿಸಿಕೊಂಡರು. ಇದಲ್ಲದೆ ನಾಡಿನ ಹಿರಿಯ ಸಾಹಿತಿಗಳ ಮತ್ತು ವಿದ್ವಾಂಸರ ಪಾಂಡಿತ್ಯಪೂರ್ಣ, ವೈಚಾರಿಕ ಉಪನ್ಯಾಸ ಕೇಳುವ ಅವಕಾಶವೂ ಸಾಧಕರಿಗೆ ಆಗಾಗ ದೊರೆಯುತ್ತಿತ್ತು. ತತ್ಫಲವಾಗಿ ತಾವೂ ಏನನ್ನಾದರೂ ಬರೆಯಬೇಕೆಂಬ ಉತ್ಸುಕತೆ ಸಾಧಕರಲ್ಲಿ ಉಂಟಾಗುವುದು ಸಹಜ. ಅದನ್ನು ಗುರುತಿಸಿದ ಪೂಜ್ಯ ಶ್ರೀಗಳು, ಆ ಉತ್ಸಾಹ ಕಾರ್ಯರೂಪಕ್ಕಿಳಿಯಲೆಂದು ಹಾರೈಸಿ, ಆಹೊತ್ತಿಗಾಗಲೇ ಸ್ಥಾಪನೆಗೊಂಡಿದ್ದ “ ಶಿವಯೋಗಿ ಸಂಘ ‘ದ ಹಿರಿಯ ಸದಸ್ಯರ ಬೆನ್ನು ತಟ್ಟಿದರು. ಅರ್ಥಪೂರ್ಣ ಹೆಸರು ಹೊತ್ತ ʼ ಸುಕುಮಾರ ‘ ಪತ್ರಿಕೆಯನ್ನು ಅವರು ಹೊರತಂದೇ  ಬಿಟ್ಟರು(ಕ್ರಿ.ಶ. ೧೯೩೩), ಪತ್ರಿಕೆಯ ಉತ್ತಮಿಕೆಗಾಗಿ, ಅದರ ಶ್ರೇಯೋಭಿವೃದ್ಧಿಗಾಗಿ ಶಿವಯೋಗಿ ಸಂಘದ ಸದಸ್ಯರು ಒಮ್ಮನದಿಂದ ದುಡಿದರು.

 ಆಗ “ ಸುಕುಮಾರ ‘ ಪತ್ರಿಕೆ ಇದ್ದುದು ಕೈಬರಹದಲ್ಲಿ, ಅದನ್ನು ತಮ್ಮ  ಮುತ್ತಿನಂತಹ ಅಕ್ಷರಗಳಿಂದ ಬರೆಯುತ್ತಿದ್ದವರು ಶ್ರೀ ಚಂದ್ರಶೇಖರ ದೇವರು ಅಡೂರ (ಮುಂದೆ ಜ. ಚ. ನಿ.), ಅದರ ಮುಖಪುಟವನ್ನು ತಮ್ಮ ಭಾವದುಂಬಿದ ಚಿತ್ರಗಳಿಂದ

ವಿನ್ಯಾಸಗೊಳಿಸುತ್ತಿದ್ದವರು, ಅಂದಿನ ಹಿರಿಯ ಸಾಧಕರೂ ಹುಟ್ಟು ಕಲಾವಿದರೂ ಆಗಿದ್ದ ಶ್ರೀ ರೇವಣಸಿದ್ಧ ದೇವರು (ಮುಂದೆ ಹಾನಗಲ್ ಸದಾಶಿವ ಸ್ವಾಮಿಗಳು), ಪತ್ರಿಕೆಯ ಸಂಪಾದಕರು ಶ್ರೀ ಬಸವಲಿಂಗದೇವರು ಗುತ್ತಲ (ಮುಂದೆ ಬಸವಲಿಂಗ ಪಟ್ಟಾಧ್ಯಕ್ಷರು, ತೆಲಸಂಗ). ಹೀಗೆ ಅತ್ಯಂತ ಹುರುಪಿನಿಂದ ಆರಂಭಗೊಂಡ ಪತ್ರಿಕೆ ತದನಂತರದ  ವರ್ಷಗಳಲ್ಲಿ ಏಳು-ಬೀಳುಗಳನ್ನು ಕಂಡರೂ ನಿಲ್ಲದೆ ಕೈಬರಹ ರೂಪದಲ್ಲಿಯೇ ಮುಂದುವರಿದುಕೊಂಡು ಬಂದಿತು.

ಹುಬ್ಬಳ್ಳಿಯ ಮೂರುಸಾವಿರ ಮಠದ ಅಂದಿನ ಪೂಜ್ಯ ಜಗದ್ಗುರುಗಳಾಗಿದ್ದ ಶ್ರೀ ಗುರುಸಿದ್ಧರಾಜಯೋಗೀಂದ್ರ  ಮಹಾಸ್ವಾಮಿಗಳವರ ಉದಾರ ಕೃಪೆ ಮತ್ತು ಅಂದು ಸಂಸ್ಥೆಯ ಅಧ್ಯಕ್ಷರಾಗಿದ್ದ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಶಿವಬಸವ ಸ್ವಾಮಿಗಳವರ ಪ್ರೋತ್ಸಾಹದಿಂದ “ ಸುಕುಮಾರ ‘ ಪತ್ರಿಕೆ ಶ್ರೀ ಶಿವಯೋಗ ಮಂದಿರದ ಸದಾಶಿವ ಮುದ್ರಣಾಲಯ ‘ದಲ್ಲಿಯೇ ಅಚ್ಚಾಗಿ ಹೊರಬರಲಾರಂಭಿಸಿತು (೨೦-೧೦-೧೯೫೦ ವಿಜಯದಶಮಿ). ಆಗ ಅದರ ಸಂಪಾದಕರಾಗಿದ್ದವರು ಶ್ರೀ ಜಿ. ಎಂ. ಉಮಾಪತಿ ಶಾಸ್ತ್ರಿಗಳು. ಅದನ್ನು ಉದ್ಘಾಟಿಸಿದವರು ಪೂಜ್ಯ ಹಾನಗಲ್ ಸದಾಶಿವ ಮಹಾಸ್ವಾಮಿಗಳವರು. ಅವರು ಪತ್ರಿಕೆ ಬಿಡುಗಡೆಯ ಭಾಷಣದಲ್ಲಿ “ ವಿನಾಶದತ್ತ ನಡೆದಿರುವ ಸಮಾಜದ ಸುಧಾರಣೆಗಾಗಿ ಕರುಣಾಳು ಪರಮ ಪೂಜ್ಯ ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳವರು ಈ ಮಂದಿರವನ್ನು ಕಟ್ಟಿದರು. ಶರಣರ ವ್ಯಾಪಕ ತತ್ವಗಳ ಪ್ರಚಾರದ ಮೂಲಕ ವಿಶ್ವಧರ್ಮ ಪ್ರಸಾರದ ಸದುದ್ದೇಶದಿಂದ ಪತ್ರಿಕೆಯೊಂದನ್ನು ಪ್ರಕಟಿಸಲು ಈ ಅಚ್ಚುಕೂಟವನ್ನು ಏರ್ಪಡಿಸಿದ್ದರು. ಇಂದು ಆ

ಆಚ್ಚಿನಮನೆಯಿಂದಲೇ ಅವರ ಸತ್ಸಂಕಲ್ಪವು ಅಂಕುರಿತವಾಗಿದೆ. ಅದು ಚಿಗುರಿ ಫಲಿಸಿ ಆ ಫಲದ ಸುಸ್ವಾದವನ್ನು ಸಮಾಜದ ಜನರೆಲ್ಲ ಉಣ್ಣುವಂತಾಗಲಿ ” ಎಂದು ಅಪ್ಪಣೆ ಕೊಡಿಸುವುದರ ಜೊತೆಗೆ ಈ ಸುಪ್ತ ಸಮಾಜವನ್ನು ಎಚ್ಚರಿಸಿ, ಸನ್ಮಾರ್ಗದಲ್ಲಿ

ಪ್ರವೃತ್ತಿಯನ್ನುಂಟುಮಾಡುವಂತಹ ಲೇಖನಗಳು ಪತ್ರಿಕೆಗಳಿಗೆ ಭೂಷಣಪ್ರಾಯವಾದವು. ಪತ್ರಿಕೆಯ ಉದ್ಯಮವು  ಅರ್ಥಾಗಮದ ಸಾಧನವಾಗಬಾರದು. ಹಾಳು ಹರಟೆಯ ನೋಟೀಸುಗಳಿಂದ ಅಶೋಭನೀಯವಾಗಬಾರದು. ಸಮಾಜದ ಪ್ರಗತಿಯ ಸಾಮಯಿಕ ಸಮಸ್ಯೆಗಳನ್ನು ಕುರಿತು ವಿವೇಚಿಸಿದ ಪ್ರೌಢಲೇಖನಗಳು ಬೇಕು. ಮಾನವನ ನೈತಿಕಮಟ್ಟವನ್ನು

ಉನ್ನತಗೊಳಿಸುವ ನೈತಿಕ ನಿಬಂಧ ಮತ್ತು ಪ್ರಬಂಧಗಳು ಪ್ರಕಟವಾಗಬೇಕು…. ಸಮಾಜಸೇವೆಯೊಂದಿಗೆ ಕನ್ನಡ ನುಡಿ ಮತ್ತು ಸಾಹಿತ್ಯ ಸೇವೆಗಾಗಿ ಪ್ರಕಟವಾದ ಚೆನ್ನಿಗ ʼ ಸುಕುಮಾರ ‘ನು ಕನ್ನಡಿಗರ ಹೃದಯವನ್ನು ಬೆಳಗಿ ಕನ್ನಡ ಮಾತೆಗೆ ಉನ್ನತ ಕೀರ್ತಿಯನ್ನು ತರಲಿ” ಎಂದು ಹಾರೈಸಿದರು.

 ಪೂಜ್ಯರ ಈ ಮಾತುಗಳಲ್ಲಿ ಲಿಂ. ಶ್ರೀ ಕುಮಾರ ಸ್ವಾಮಿಗಳವರ ಸತ್ಸಂಕಲ್ಪ ಅವರ ಸದುದ್ದೇಶ, ಸಮಾಜ ಸುಧಾರಣೆಯ ಬಗ್ಗೆ ಅವರಿಗಿದ್ದ ಕಾಳಜಿ, ಕಳಕಳಿಗಳನ್ನು ಗುರುತಿಸಬಹುದಾಗಿದೆ. ಅವರ ಮಾತುಗಳಲ್ಲಿರುವ ಇನ್ನೊಂದು ಮಹತ್ವದ ಅಂಶವೆಂದರೆ

ಪತ್ರಿಕೆಯಲ್ಲಿ ಎಂತಹ ಲೇಖನಗಳಿರಬೇಕು, ಎಂತಹ ಲೇಖನಗಳಿರಬಾರದು, ಅದರ ಧೈಯೋದ್ದೇಶಗಳೆಂಥವಿರಬೇಕು ಎಂಬುದರ ವಿವೇಚನೆ. ಇವು ಅಂದಿನ ಸಂಪಾದಕರನ್ನು ಕುರಿತು ಹೇಳಿರುವ ಮಾತುಗಳಾದರೂ ಇಂದಿನ ಸಂಪಾದಕರಿಗೂ ಅನ್ವಯಿಸುತ್ತವೆ.

 ಹೀಗೆ ಕ್ರಿ. ಶ. ೧೯೫೦ ರಿಂದ ಪ್ರೊ. ಜಿ. ಎಂ. ಉಮಾಪತಿ ಶಾಸ್ತ್ರಿ ಅವರ ಸಂಪಾದಕತ್ವದಲ್ಲಿ ಮುದ್ರಣರೂಪದಲ್ಲಿ ಪ್ರಕಟವಾಗುತ್ತ ಬಂದ ‘ ಸುಕುಮಾರ ‘ ಪತ್ರಿಕೆ ಹಲವಾರು ವರ್ಷ ಸರಾಗವಾಗಿ ನಡೆದುಕೊಂಡು ಬಂದು, ಮುಂದೆ ನಿಂತು ಹೋಯಿತು.

ಶಿವಯೋಗ ಮಂದಿರ, ಒಂದು ವಿಶಿಷ್ಟ ಧಾರ್ಮಿಕ ಸಂಸ್ಥೆ. ಇಲ್ಲಿ ತರಬೇತಿ ಹೊಂದಿದ ಸಾವಿರಾರು ಸಾಧಕರು ನಾಡಿನ ತುಂಬ ಹರಡಿರುವ ಮಠಗಳ ಮಠಾಧಿಪತಿಗಳಾಗಿ ಧರ್ಮ, ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮುಂತಾದ ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆ. ಮಠಾಧಿಪತಿಗಳ ಟಂಕಸಾಲೆಯಾಗಿರುವ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಹಾಗೂ ಧ್ಯೇಯೋದ್ದೇಶಗಳನ್ನು ಪ್ರಚುರಪಡಿಸುವಲ್ಲಿ ಸಂಸ್ಥೆಯ ಮುಖಪತ್ರಿಕೆಯ ಅವಶ್ಯಕತೆಯನ್ನರಿತು ಇತ್ತೀಚೆಗೆ ದಿನಾಂಕ ೭-೫-೨೦೦೨ ರಂದು ಸಭೆ

ಸೇರಿದ ಶಿವಯೋಗಮಂದಿರ ಸಂಸ್ಥೆಯ ಗೌರವಾನ್ವಿತ ಸದಸ್ಯರು ನಿಂತು ಹೋಗಿರುವ ʼ ಸುಕುಮಾರ ” ಪತ್ರಿಕೆಯನ್ನು ಪುನಃ ಪ್ರಕಟಿಸಬೇಕೆಂದು  ಸರ್ವಾನುಮತದಿಂದ ನಿರ್ಣಯಿಸಿದ ಹಿನ್ನೆಲೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಹುಬ್ಬಳ್ಳಿ ಮೂರುಸಾವಿರಮಠದ

ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗೂ ಉಪಾಧ್ಯಕ್ಷರಾದ ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮ ಸ್ವಾಮಿಗಳು ಪತ್ರಿಕೆಯ ಸಂಪಾದಕತ್ವದ ಹೊಣೆಯನ್ನು ಡಾ.ಬಿ.ವಿ.ಮಲ್ಲಾಪೂರ,ಡಾ.ಬಿ.ಆರ್.ಹಿರೇಮಠ ಮತ್ತು ಪ್ರೋ. ಬಿ.ವಿ.ಗುಂಜೆಟ್ಟಿ ಯವರಿಗೆ ವಹಿಸಿಕೊಟ್ಟರು. ಅವರೆಲ್ಲ ಅತ್ಯಂತ ಪ್ರಾಮಾಣಿಕವಾಗಿ ಕೆಲಸಮಾಡಿದರು ನಂತರ ಕೆಲವು ಕಾರಣಾಂತರಗಳಿಂದ ಸುಕುಮಾರ ಸ್ಥಗಿತಗೊಂಡಿತು. ಕಳೆದ ವರ್ಷ ಸುಕುಮಾರ ಮತ್ತೆ ಚಿಗರೊಡೆಯಿತು.

ಇಂಥ ಗುರುತರ ಕಾರ್ಯವನ್ನು ಆಗುಮಾಡುವುದಕ್ಕೆ ಕುಮಾರೇಶನ ಕೃಪಬೇಕು. ಹಾಗೆಯೇ ವಿದ್ವಾಂಸರ, ಸಂಶೋಧಕರ, ಸಾಹಿತಿಗಳ ಸಮಯೋಚಿತ ಸಹಾಯ- ಸಹಕಾರಗಳೂ ಬೇಕು. ಮೌಲಿಕ, ವೈಚಾರಿಕ ಹಾಗೂ ಸಂಶೋಧನಾತ್ಮಕ ಲೇಖನಗಳು ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ. ಕಾರಣ ಅಂಥ ಲೇಖನಗಳನ್ನು ನಾವು ನಿರೀಕ್ಷಿಸುತ್ತೇವೆ. ಹೊಸಹುಟ್ಟು, ಹೊಸರೂಪ ಪಡೆದು ಹೊರಬರುತ್ತಿರುವ ‘ ಸುಕುಮಾರ ʼಪತ್ರಿಕೆಯನ್ನು ಸಹೃದಯರು ತುಂಬು ಹೃದಯದಿಂದ ಸ್ವಾಗತಿಸುವರೆಂದು ಭಾವಿಸಿದ್ದೇನೆ.

ಮೇ ತಿಂಗಳ ಸುಕುಮಾರ ಸಂಚಿಕೆಯ ಲೇಖನಗಳ ವಿವರ.

  1. ಗುರು ಬಸವೇಶ- ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು
  2. ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-12

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ

  • ಶ್ರೀ ಹಾನಗಲ್ಲ ಕುಮಾರ ಶಿವಯೋಗಿ – ಪ್ರೋ. ಎಸ್, ಡಿ, ಇಂಚಲ.
  • ಕನ್ನಡಕ್ಕೆ ಬಸವಣ್ಣನವರ ಕಾಣಿಕೆ -ಡಾ. ಜಿ. ಎಸ್. ಶಿವರುದ್ರಪ್ಪ
  • ಅಕ್ಕಮಹಾದೇವಿ – ಡಾ. ಜಿ.ಎಸ್. ಶಿವರುದ್ರಪ್ಪ
  • ಅಲ್ಲಮನ ಅನುಭಾವ ಮತ್ತು ಅಭಿವ್ಯಕ್ತಿ ;ಡಾ. ಸಿ.ವಿ.ಪ್ರಭುಸ್ವಾಮಿಮಠ
  • ಬಸವ ಮತ್ತು ತುಕಾರಾಂ-ಡಾ.ಸರಜೂ ಕಾಟಕರ.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ನಮಸ್ಕಾರಗಳು.

ಪರಮಗುರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು  ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗಮಂದಿರ ದ ಮಹಾರಥೋಥ್ಸವ  ಮಹಾಶಿವರಾತ್ರಿಯ ಮರುದಿನ ಅತ್ಯಂತ ವೈಭವಯುತವಾಗಿ ಜರುಗಿತು .

ಈ ಸಂಧರ್ಭದಲ್ಲಿ ನವದೆಹಲಿಯ ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ಪೂಜ್ಯ ಶ್ರೀ ಕುಮಾರೇಶ್ವರರ ಪಂಚಲೋಹದ ಪುತ್ಥಳಿ, ಶ್ರೀ ಶಿವಯೋಗಮಂದಿರದ ಪಲ್ಲಕ್ಕಿಗೆ ರಾಜವೈಭವದಾಲಂಕಾರಗಳನ್ನು ಸಮರ್ಪಿಸುವ ಸೇವೆ ದೊರಕಿಸಿಕೊಂಡಿದ್ದು ವಿಶೇಷವಾಗಿತ್ತು

ಈ ತಿಂಗಳು ಮಹಾನುಭಾವಿ ಶ್ರೀ ಚನ್ನಮಲ್ಲಿಕಾರ್ಜುನ ಪುಣ್ಯತಿಥಿಯ ಸ್ಮರಣೆ ಯ ವಿಶೇಷ ಲೇಖನ ಸುಕುಮಾರ ಪ್ರಕಟಿಸುತ್ತಿದೆ. .      ಧರ್ಮ ಸಾಹಿತ್ಯ ಸಂಸ್ಕೃತಿಗಳ ಸಮುನ್ನತಿಗಾಗಿ  ಶ್ರಮಿಸಿದಂತಹ ಮತ್ತು ಶರಣರ ಬಾಳಿದಂತೆ  ಬದುಕಿದ ಶ್ರೀ ಚನ್ನಮಲ್ಲಿಕಾರ್ಜುನರು ಒಬ್ಬ ಅಪರೂಪದ ಸಾಹಿತಿ, ಲೇಖಕ, ಸಂಶೋಧಕ, ಶರಣ.

ಶ್ರೀ ರೇಣುಕಾಚಾರ್ಯರ ಜಯಂತಿಯ ಪ್ರಯುಕ್ತ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಿಂದ ಆಯ್ದ ಮಾಹಿತಿಗಳನ್ನು ಪ್ರಕಟಿಸಲಾಗಿದೆ

ಈ  ಸಂಚಿಕೆ ಸುಕುಮಾರ ಒಂದು ವಿಶಿಷ್ಠವಾಗಿ ತಮ್ಮ ಕೈ ಸೇರುತ್ತಿದೆ.

ಎಪ್ರಿಲ  ೨೦೨೨ ಸಂಚಿಕೆಯ ಲೇಖನಗಳ ವಿವರ

  1. 😐 “ ಸುಶಾಂತ ಗುರುವರೇಣ್ಯ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೧೧ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು , ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
  4. ಬಸವ ಪುರಾಣ ವೈಭವ :ಲೇಖಕರು : ಪೂಜ್ಯ ಡಾ. ಅಭಿನವ ಕುಮಾರ ಚನ್ನಬಸವ ಸ್ವಾಮಿಗಳು ಓಲೆಮಠ ಜಮಖಂಡಿ
  5. ಕುಮಾರ ಶಿವಯೋಗಿಗಳ ದೂರ ದೃಷ್ಟಿ:ಲೇಖಕರು
  6. ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾ
  7.   :ಜಗದ್ಗುರು ರೇಣುಕಾಚಾರ್ಯ ಜಯಂತಿ.ಮಾಹಿತಿ ಆಧಾರ:  ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
  8. ಚನ್ನಮಲ್ಲಿಕಾರ್ಜುನರು :ಲೇಖಕರು : ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
  9.  
  10.  
  11. ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

          ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು

ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯಶ್ರೀ ನಿರಂಜನಪ್ರಭು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಕುರುಗೋಡು

ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ನಮಸ್ಕಾರಗಳು.

ಫೆಬ್ರುವರಿ ತಿಂಗಳು ಶ್ರೀ ಮದ್ವೀರಶೈವ ಶಿವಯೋಗಮಂದಿರ ೧೧೩ ನೇಯ ಸಂಸ್ಥಾಪನಾ ದಿನಾಚರಣೆಯ ವಾರ್ಷಿಕೋತ್ಸವವನ್ನುಅತ್ಯಂತ ಅರ್ಥಗರ್ಭಿತವಾಗಿ ಆಚರಿಸಿಕೊಳ್ಳುತ್ತಿದೆ.

ಶ್ರೀ ಮದ್ವೀರಶೈವ ಶಿವಯೋಗಮಂದಿರ.

ಎಲ್ಲಿ ಶಿವ ಸಂಬಂಧವಾದ ವಿಚಾರಗಳು,ಶಿವಾಚಾರ-ಶಿವಾನುಭವ-ಶಿವಯೋಗದ ವಿಷಯಗಳನ್ನು ಅಭ್ಯಾಸ ಮಾಡುವ ಶಿಷ್ಯರೂ,ಉಪದೇಶಿಸಿರುವ ಗುರುಗಳು ನಿರ್ವಿಕಾರ ಚಿತ್ತದಿಂದ ವಾಸಮಾಡುವರೋ ಅಂತಹ ಸ್ಥಾನ ವಿಶೇಷವು ಮತ್ತು ಶಿವಯೋಗಮಂದಿರ”ವೆಂದು ಹೇಳಲ್ಪಡುವುದು.

ಇಂಥಃ ಘನೋದ್ದೇಶವನ್ನಿರಿಸಿಕೊಂಡು ಸ್ಥಾಪಿಸಲ್ಪಟ್ಟಿರುವ ಈ ಶಿವಯೋಗಮಂದಿರ ಮತ್ತು ಅದರ ಕರ‍್ಯಕಲಾಪಗಳು ಪರಮಪೂಜ್ಯ .ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರ (೧೮೬೭-೧೯೩೦)  ಅವಿಶ್ರಾಂತ ಪರಿಶ್ರಮದ ಫಲಶೃತಿ ಯಾಗಿರುತ್ತವೆ.

ಇದು ವೀರಶೈವ(ಲಿಂಗಾಯತ)ರಿಗಾಗಿ, ವೀರಶೈವ(ಲಿಂಗಾಯತ) ಮಠಾಧಿಪತಿಗಳಾಗಲಿರುವ ವಟು-ಸಾಧಕರಿಗೆ ಶಿಕ್ಷಣ ತರಬೇತಿಯ ಗುರುಕುಲವಾಗಿರುತ್ತದೆ.

ವೀರಶೈವ(ಲಿಂಗಾಯತ) ಧರ್ಮವು ತಾತ್ವಿಕ ಧರ್ಮ, ತತ್ವ ನಿಷ್ಠವಾದುದು ;ವ್ಯಕ್ತಿ ನಿಷ್ಠ ಧರ್ಮವಲ್ಲ..ಯಾವುದೇ ಜಾತಿಯವನಾಗಲಿ,ವರ್ಣ-ವರ್ಗದವನಾಗಲಿ ಶ್ರೀ ಗುರುವಿನಿಂದ ಶಿವದೀಕ್ಷೆಯನ್ನು ಪಡೆದು ಲಿಂಗಧಾರಿಯಾಗಲು ಅರ್ಹನಿರುತ್ತಾನೆ.ಸಂಸ್ಕಾರವೇ ಮುಖ್ಯವಾದ ಧರ್ಮವಿದು.ಸಾಧನೆಯೇ ಮುಖ್ಯವಾದ ಧರ್ಮವಿದು..ಧರ್ಮದ ತತ್ವ ಮತ್ತು ಸಂಪ್ರದಾಯಗಳ ಮೂಲಕ  ಧರ್ಮ ಗುರುಗಳಾಗುವವರಿಗೆ ವಿದ್ಯಾ,ವಿರಕ್ತಿ  ಮತ್ತು ಇಂದ್ರಿಯ ನಿಗ್ರಹಗಳ ಮೂಲಕ ಶಿಕ್ಷಣ ಕೊಟ್ಟು  ಭವ್ಯ ಉದ್ದೇಶಕ್ಕೆ ಹಾಗೂ ಉತ್ತಮ ಆರ‍್ಶಗಳನ್ನು ಸಫಲಗೊಳಿಸುವದಕ್ಕಾಗಿ ಶ್ರೀ ಶಿವಯೋಗಮಂದಿರ ಸ್ಥಾಪಿತವಾಗಿದೆ.

ಈ ಮಹಾಮಂದಿರ ನಿರ‍್ಮಾಣಕ್ಕೆ ಅನೇಕ ಮಹಾವ್ಯಕ್ತಿಗಳ ದಿವ್ಯಶಕ್ತಿ ಕಾರಣವಾಗಿರುತ್ತದೆ. ಶಂಭುಲಿಂಗನಬೆಟ್ಟದಲ್ಲಿ ಯಳಂದೂರ ಬಸವಲಿಂಗಸ್ವಾಮಿಗಳು ಶಿವಯೋಗಮಂದಿರ ನಿರ‍್ಮಾಣದ ಬೀಜಾರೋಪಣಗೈದಿದ್ದರು . ಹಾನಗಲ್ಲ ವಿರಕ್ತ ಮಠದಲ್ಲಿ ಬಾಗಲಕೋಟೆಯ ವೈರಾಗ್ಯ ಮಲ್ಲಣಾರ್ಯರು  ಆ ಬೀಜಕ್ಕೆ ನೀರೆರದರು . ಪುನಃ ಬಾಗಲಕೋಟೆಯ ನಾಲ್ಕನೆಯ ಅಖಿಲ ಭಾರತ ವೀರಶೈವ ಮಹಾ ಅಧಿವೇಶನದಲ್ಲಿ ಅಂಕುರವೊಡೆಯಿತು . ಬೀಳೂರು ಗುರುಬಸವರ ವೈರಾಗ್ಯ ಬಲವೆಂಬ ಗೊಬ್ಬರ ಹಾಕಲಾಯಿತು . ಇಲಕಲ್ಲಿನ ಶ್ರೀ ವಿಜಯಮಹಾಂತರು ತೋರಿದ ತಾಣದಲ್ಲಿ ಕಾರಣಿಕ ಯುಗಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಆ ಸಸಿಯನ್ನು ಸ್ಥಾಪಿಸಿದರು. ಹಾವೇರಿ ಶಿವಬಸವ ಸ್ವಾಮಿಗಳು ಬೆಳಸಿ ಸ್ಥಿರವಾಗಿ ಉಳಿಯುವಂತೆ ಶ್ರಮಿಸಿದರು ..

ಶ್ರೀ ಮದ್ವೀರಶೈವ ಶಿವಯೋಗ ಮಂದಿರವು  ಶ್ರೀ ಮನೃಪ ಶಾಲಿವಾಹನ ಶಕೆ ೧೮೩೦ ನೇ ಕೀಲಕ ನಾಮ ಸಂವತ್ಸರದ ಮಾಘ ಮಾಸ ಕೃಷ್ಣಪಕ್ಷ ಸಪ್ತಮಿ ಮಿತಿಗೆ , ಸರಿಯಾದ ಸನ್ ೧೯೦೯ ನೆಯ ಫೆಬ್ರುವರಿ ತಿಂಗಳು ತಾರೀಖು ೭ ರಲ್ಲಿ ವಿದ್ಯುಕ್ತವಾಗಿ ಸ್ಥಾಪನೆಯಾಯಿತು.

ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‌ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ವಚನ ಸಾಹಿತ್ಯ ಗ್ರಂಥಗಳ ಸಂಗ್ರಹ, ಸಂಸ್ಕೃತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ ಯೋಗ ಮತ್ತು ಸಂಗೀತ ತರಬೇತಿ  ಇವೆಲ್ಲವೂ  ಶ್ರೀಮದ್‌ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು.

ಫೆಬ್ರುವರಿ ೨೦೨೨ ಸಂಚಿಕೆಯ ಲೇಖನಗಳ ವಿವರ

  1. 😐 “ ಮಾನವಾ ! ನೀನಾರೋ ? ಕಾಯ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶಿವಯೋಗಮಂದಿರ ಸೃಷ್ಟಿ – ದೃಷ್ಟಿ  – ಶ್ರೀ ಜ.ಚ. ನಿಡುಮಾಮಿಡಿ ಶ್ರೀಶೈಲ ಸಂಸ್ಥಾನ (೧೯೫೯)
  4. ಶಿವಯೋಗ ಮಂದಿರ ಸಂದರ್ಶನ  ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ
  5.   ನಿರೀಕ್ಷಣೆ   – ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು, ಚಿಕ್ಕೋಡಿ
  6. ಬಾಳಲಿ.- ಡಾ.ಚೆನ್ನಮಲ್ಲ ಸ್ವಾಮೀಜಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ
  7. ನಿಸರ್ಗ ಸೌಂದರ್ಯ-ಡಿ. ಎಸ್. ಕರ್ಕಿ
  8. ಸದಾಶಿವ”ನ ಐದು ಸೃಷ್ಟಿಗಳು ಶ್ರೀ ಬುದ್ಧಯ್ಯನವರು, ಪುರಾಣಿಕ
  9. ಮಂಗಳ ಮೂರ್ತಿ ರೂಪ ಶ್ರೀ ಸ್ವರೂಪ ರಥ  ಲೇಖಕರು : ಪೂಜ್ಯ ಸದಾಶಿವ ದೇವರು ವಳಬಳ್ಳಾರಿ
  10. ಹೃದ್ಗತ ಅಭಿಪ್ರಾಯಗಳು

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ನಮಸ್ಕಾರಗಳು.

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.

ನೋವು-ಸಂತಸ ಗಳ ಮಿಶ್ರವಾಗಿದ್ದ ೨೦೨೧ ಕ್ಕೆ ವಿದಾಯ ವನ್ನೀಯುತ್ತ ೨೦೨೨ ವರ್ಷವನ್ನು ಹಾರ್ಧಿಕವಾಗಿ ಬರಮಾಡಿಕೊಳ್ಳುವ ಪರ್ವದಲ್ಲಿ

ಮೂವರು ಮಹಾನ್‌ ಶಿವಯೋಗಿಗಳ  ಪವಿತ್ರ ಸ್ಮರಣೆ ಮಾಡುವ ಪುಣ್ಯ ಯೋಗ “ಸುಕುಮಾರ” ಕ್ಕೆ ಸಿಕ್ಕಿರುವುದು  ಒಂದು ಸುಯೋಗ.

ಶಿವಯೋಗಿಗಳು ಶಿವನಲ್ಲಿ ಒಂದಾಗಿ ಶಿವಸ್ವರೂಪಿಗಳಾದವರು

ಮಹಾಗುರುವಿನ ಗುರು ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು (೧೮೯೪)

ಯೋಗಿಗಳಲ್ಲಿ ಯೋಗಿ ಪರಮ ಪೂಜ್ಯ ಬಿದರಿ ಕುಮಾರ ಶಿವಯೋಗಿಗಳು (೧೯೧೧)

ರಾಜಯೋಗಿ ಪರಮ ಪೂಜ್ಯ ಶಿವಬಸವ ಶಿವಯೋಗಿಗಳು ಹಾವೇರಿ (೧೯೫೪)

ಈ ಮಹಾತ್ಮರು ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪಾವನ ಜೀವನದಲ್ಲಿ ಮತ್ತು ಸಮಾಜಮುಖಿ ಹೆಜ್ಜೆಗಳಿಗೆ  ಅವಿಸ್ಮರಣೀಯ ಕೊಡುಗೆಗಳನ್ನಿತ್ತವರು.

ಮಹಾಗುರುವಿನ ಗುರು ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಚಿನ್ಮಯ ದೀಕ್ಷೆಯನ್ನಿತ್ತವರು.

ಯೋಗಿಗಳಲ್ಲಿ ಯೋಗಿ ಪರಮ ಪೂಜ್ಯ ಬಿದರಿ ಕುಮಾರ ಶಿವಯೋಗಿಗಳು ಪೂಜ್ಯ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ನಿರಂಜನ ಪಟ್ಟಾಧಿಕಾರ ಅನುಗ್ರಹ ವನ್ನಿತ್ತವರು.

ರಾಜಯೋಗಿ ಪರಮ ಪೂಜ್ಯ ಶಿವಬಸವ ಶಿವಯೋಗಿಗಳು ಪೂಜ್ಯ  ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ದೇಹ ಎರಡಾದರೂ ಒಂದೇ ಆತ್ಮದಂತೆ ,ಹೆಗಲಿಗೆ ಹೆಗಲು ಕೊಟ್ಟುಶ್ರೀ ಮದ್ವೀರಶೈವ ಶಿವಯೋಗಮಂದಿರಕ್ಕೆ ಮಾತೃಸ್ವರೂಪರಾಗಿ  ದುಡಿದವರು.

ಪರಮಪೂಜ್ಯರ ಕುರಿತು ವಿಶೇಷ ಲೇಖನಗಳ ಸಂಗ್ರಹ ಜನೇವರಿ ೨೦೨೨ ರಲ್ಲಿಮೂಡಿಬರುತ್ತಿವೆ.

ಸಂತಸದ ವಿಷಯ ವೇನೆಂದರೆ ಸುಕುಮಾರ ಪತ್ರಿಕೆಯ ಓದುಗರ ಸಂಖ್ಯೆ ೫೦೦೦ ರ ಗಡಿ ದಾಟಿದೆ. ವಿದೇಶದ ಕನ್ನಡಿಗ ಓದುಗರ ಅಭಿಮಾನದ ಜೊತೆಗೆ ಕರ್ನಾಟಕದ ಓದುಗರ ಸಹಕಾರದ ರಕ್ಷಾಕವಚ ಸುಕುಮಾರವನ್ನು ಲಕ್ಷದ ಗಡಿ ದಾಟುವ ಸಮಯ ದೂರವಿಲ್ಲ.

ಜನೆವರಿ ೨೦೨೨ ಸಂಚಿಕೆಯ ಲೇಖನಗಳ ವಿವರ

  1. 😐 “ ಯೋಗಿರಾಡ್ಜಯ ಮಂಗಲಂ|| ಪರತರಶಿವ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಮೂಲ ಲೇಖನ :ಲಿಂ. ಕುಮಾರ ಸ್ವಾಮಿಗಳು ಕಲ್ಮಠ ಸವದತ್ತಿ-ಬಿದರಿ.

ಮಾಹಿತಿ ಸಹಾಯ : ಪೂಜ್ಯ ಮ.ನಿ.ಪ್ರ. ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ.ಹಾವೇರಿ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯರಿಗೆ ನನ್ನ ನಮಸ್ಕಾರಗಳು.

ಕಳೆದ 22 ನವಂಬರ 2021 ರಂದು ಪೂಜ್ಯ ಜಗದ್ಗುರು ಶ್ರೀ ಸಂಗನಬಸವ ಮಹಾಸ್ವಾಮಿಗಳು ಶಿವನಲ್ಲಿ ಒಂದಾದದಿನ. ಪೂಜ್ಯರ ಭೌತಿಕ ಲಿಂಗದೇಹ ಅಗಲುವಿಕೆಯಿಂದ  ಲಕ್ಷಾಂತರ ಭಕ್ತರ ಹೃದಯಗಳು ನೋವು ಹತಾಶೆಗಳಿಂದ ಕನಲಿದವು.

ನವಂಬರ ೧೦ ರವರೆಗೆ  ಸತತ ಎರಡುತಿಂಗಳ ಪರ್ಯಂತ  ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀಗಳ ಪಟ್ಟಾಧಿಕಾರ ಮತ್ತು ಚಿನ್ಮಯ ದೀಕ್ಷೆಗಳ ಎಲ್ಲ ಕಾರ್ಯಗಳಲ್ಲಿ ಪಾಲ್ಗೊಂಡು, ಸಲಹೆ ಸೂಚನೆಗಳನ್ನು ನೀಡಿ, ಭಕ್ತರ ಉತ್ಸಾಹ ಗಳನ್ನು ಕಣ್ತುಂಬ ತುಂಬಿಕೊಂಡು, ಆನಂದ ಭಾಷ್ಪಗಳನ್ನು ಸುರಿಸಿದ್ದು ಪೂಜ್ಯರ ಮಮತೆಯ ಹೃದಯಕ್ಕೆ ಸಾಕ್ಷಿಯಾಗಿತ್ತು. ಅವರ ದೃಢ ನಿಶ್ಚಯ ಪೂರ್ಣಗೊಳ್ಳುವವರೆಗೂ ಶಿವನ ಕರೆಯನ್ನು ನಿಲ್ಲಿಸಿಕೊಂಡಂತೆ ಜರುಗಿದ ಅಭೂತಪೂರ್ವ ಪಟ್ಟಾಧಿಕಾರ ಕಾರ್ಯಕ್ರಮ ಪವಾಡಸದೃಶಮಯವಾಯಿತು .

ಪೂಜ್ಯ ಜಗದ್ಗುರುಗಳು ತಮ್ಮ ಎಲ್ಲ ಆಶೀರ್ವಚನಗಳ ಆರಂಭಕ್ಕೆ ಬಸವೇಶ್ವರರ ಒಂದೇ ಒಂದು ವಚನದಿಂದ ಪ್ರಾರಂಭಿಸುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಿರುವೆ.

ಹರನೀವ ಕಾಲಕ್ಕೆ ಸಿರಿಯು ಬೆನ್ನಲ್ಲಿ ಬರ್ಕು .

ಹರಿದು ಹೆದ್ದೊರೆಯು ,ಕೆರೆ ತು೦ಬಿದ೦ತಯ್ಯಾ .

ನೆರೆಯದು ವಸ್ತು ನೆರೆವುದು ನೋಡಯ್ಯಾ

ಅರಸು ಪರಿವಾರ ಕೈವಾರ  ನೋಡಯ್ಯಾ.

ಪರಮ ನಿರಂಜನನ ಮರೆವ ಕಾಲಕ್ಕೆ

ತುಂಬಿದ ಹರವಿಯ ಕಲ್ಲು ಕೊಂಡಂತೆ , ಕೂಡಲಸಂಗಮದೇವಾ.”

 ಭಗವಂತನು ಕೊಡುವ ಕಾಲಕ್ಕೆ ಸಂಪತ್ತು ಬೆನ್ನುಹತ್ತಿ ಬರುತ್ತದೆ ; ಹೆದ್ದೊರೆಯೆ ಹರಿದು ಕೆರೆ ತುಂಬಿದಂತೆ ಲಭಿಸದೇ ಇರುವ ವಸ್ತುಗಳು ಲಭಿಸುತ್ತವೆ . ಅರಸು ಮನ್ನಣೆ , ಪರಿವಾರ , ಕೈವಾರ ಈ ಎಲ್ಲವೂ ದೊರಕುತ್ತವೆ . ಆದರೆ ಆ ಪರಮನಿರಂಜನ ನಮ್ಮನ್ನು ಮರೆತರೆ ಅಥವಾ ನಾವೇನಾದರೂ ಅವನನ್ನು ಮರೆತರೆ , ತುಂಬಿದ ಮಣ್ಣಿನ ಕೊಡಕ್ಕೆ ಕಲ್ಲೇಟು ಬಿದ್ದು ಅದು ಒಡೆದು ಹೋದಂತೆ ಆಗುತ್ತದೆ . ಭಗವಂತನ ಕೃಪೆಯನ್ನು ಕುರಿತ ಈ ಶ್ರದ್ಧೆ , ಸ್ವಪ್ರಯತ್ನದಿಂದ ವಿಮುಖಗೊಳಿಸುವುದಿಲ್ಲ ; ಸಾಧನೆಯಲ್ಲಿರುವ ನಿಷ್ಠೆಯನ್ನು ಬಲಗೊಳಿಸುತ್ತಿದೆಯೆಂದು ಭಾವಿಸಬೇಕು.

ಪೂಜ್ಯರು ನಮಗೆ ನೀಡಿ ಹೋದ ಸಂದೇಶ !!!.

“ ಸುಕುಮಾರ” ಪತ್ರಿಕೆಯನ್ನು ಬ್ಲಾಗ ರೂಪದಲ್ಲಿ ಅಂತರ್ಜಾಲದಲ್ಲಿ ಪ್ರಕಟಿಸಲು ಅನುಮತಿ ನೀಡಿ ಆಶೀರ್ವದಿಸದವರು ಪೂಜ್ಯ ಜಗದ್ಗುರುಗಳು.

 

ಪೂಜ್ಯರ ಅಂತಃಕರುಣೆಯ ಪವಿತ್ರಾತ್ಮ ದಲ್ಲಿ  ಅವರು ಸಂದೇಶ ನೀಡಿದಂತೆ-” ನಮ್ಮ ಸಾಧನೆಯಲ್ಲಿರುವ , ನಮ್ಮ ನಿಷ್ಠೆಯನ್ನು ಬಲಗೊಳಿಸಲಿ “ಎಂದು ಪ್ರಾರ್ಥಿಸಿಕೊಳ್ಳುವೆ

ಈ ಸಂಚಿಕೆಯ ಲೇಖನಗಳ ವಿವರ

  1. | “ ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2.      ಭಾಗ-೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3.   ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
  4. , ಅಕ್ಕಿಆಲೂರು
  5. . ಲೇಖಕರು: ಶ್ರೀ ಚನ್ನಬಸವ ಸೋಮನಾಥಶಾಸ್ತ್ರೀ ಹಿರೇಮಠ ಇಟಗಿ ಗ್ರಂಥ ಋಣ: ಸುಕುಮಾರ ದೀಪ್ತಿ  ಸಂಪಾದಕರು : ಪೂಜ್ಯ ಸದ್ಗುರು ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ -ವಿಜಯಪುರ
  6.  

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಕರ್ನಾಟಕ ಏಕೀಕರಣಕ್ಕೆ ಅಗೋಚರ  ಮತ್ತು ಅಪೂರ್ವ ಕೊಡುಗೆ

ಪೂಜ್ಯ ಲಿಂಗೈಕ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ಸಾಮಾಜಿಕ ಸಂಘಟನೆ

ಸಹೃದಯರಿಗೆ ನನ್ನ ನಮಸ್ಕಾರಗಳು

ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸುತ್ತಿರುವಾಗ ಒಂದು ಸಂಗತಿ ಗೋಚರಿಸಿತು.ಇಲ್ಲಿಯವರೆಗೆ ಇತಿಹಾಸದಲ್ಲಿ ದಾಖಲಾಗದ ಅಥವಾ ಪ್ರತಿ ಕನ್ನಡ ರಾಜ್ಯೊತ್ಸವದಲ್ಲಿ ಸ್ಮರಣೆಗೊಳ್ಳದ  ಕರ್ನಾಟಕದ ಅಪೂರ್ವ ಯೋಗಿಗಳಾದ  ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಹೆಸರನ್ನು ಕಂಡು ಕೌತುಕಗೊಂಡೆ. ವಾರ್ತಾ ಭಾರತಿ ೨೦೧೭ ರ ಪತ್ರಿಕೆಯಲ್ಲಿ  “Unification Of Karnatak”  ಎಂಬ ತಲೆಬರಹದ ಅಡಿಯಲ್ಲಿ ಶ್ರೀ ಬಿ.ಎಮ್‌ ಚಂದ್ರಶೇಖರ್‌ ಅವರು ಈ ಕೆಳಗಿನಂತೆ ದಾಖಲಿಸಿರುವರು

“……………………

Cultural Renaissance

The impact of the British rule was the cultural awakening in the different regions of India. Karnataka, like other states of India, witnessed the cultural Renaissance. European scholars particularly missionaries as well as Kannada stalwarts promoted the Kannada Renaissance. Kannada newspapers also accelerated the cultural awakening. One may recall the services of those now no more with us, Prof. B. M. Sreekantaiah, Sri Hanagal Kumaraswamy, Hardekar Manjappa, Aluru Venkata Rao and many other literary and social leaders who worked with devotion and zeal for the cause of Kannada. Men of letters thus provided the necessary emotional and philosophical background of the agitation for the ‘Karnataka Ekikarana’, which was taken up and was organized by politicians like S. Nijalingappa and Kengal. Hanumantaiah and many others………….”

ಕರ್ನಾಟಕದ ಏಕೀಕರಣಕ್ಕೆ ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳವರ ಕೊಡುಗೆ ಎನ್ನುವ ವಿಷಯದ ಕುರಿತು ಕೂತೂಹಲಗೊಂಡೆ.ಪೂಜ್ಯರ ಕುರಿತು ಪ್ರಕಟವಾದ  ಹಲವು ಪುಸ್ತಕಗಳಲ್ಲಿ ಹುಡುಕಾಡಿದೆ.ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರ ಜೀವಿತಾವಧಿಯ ಕಾಲಘಟ್ಟದ ಕರ್ನಾಟಕದ ವಸ್ತುಸ್ಥಿತಿ, ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರು ನಿರ್ಧಿಷ್ಟ ಬಹುಸಂಖ್ಯಾತ ಧರ್ಮೀಯರನ್ನು ಸಾಂಸ್ಕೃತಿಕ ವಾಗಿ  ಮತ್ತು ಧಾರ್ಮಿಕವಾಗಿ ಒಂದುಗೂಡಿಸಿದ ಕ್ರಾಂತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸಮರ್ಪಕ ಉತ್ತರ ನನಗೆ ದೊರಕಿತು,ನಿಖರ ಮಾಹಿತಿಯೂ ನನಗೆ ದೊರೆಯಿತು.

ಕರ್ನಾಟಕ ಮತ್ತು ಹೊರರಾಜ್ಯ ಗಳಲ್ಲಿ ಹರಿದು ಹಂಚಿಹೋಗಿದ್ದ  ವೀರಶೈವ-ಲಿಂಗಾಯತ ಧರ್ಮದ ೯೯ ಒಳಪಂಗಡಗಳನ್ನು ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರು ಅಖಿಲ ಭಾರತ ವೀರಶೈವ ಮಹಾಸಭಾ ದ ಮೂಲಕ ಸಂಘಟಿಸಿದ್ದು ಕರ್ನಾಟಕದ ಏಕೀಕರಣದ ಹೋರಾಟಕ್ಕೆ ಆನೆಬಲ ತಂದುಕೊಟ್ಟಿತು.

೧೯೦೪ ರಿಂದ ಪೂಜ್ಯರು ಲಿಂಗೈಕ್ಯ ರಾದ ೧೯೩೦ ರವರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಳಲ್ಲಿ ನಡೆದ ೧೦ ಸಮ್ಮೇಳನಗಳು ಮತ್ತು ೧೯೩೦ ರಿಂದ  ೧೯೫೫ ರವರೆಗೆ ನಡೆದ ೬ ಅಖಿಲ ಭಾರತ ವೀರಶೈವ ಮಹಾಸಭಾ ಸಮ್ಮೇಳನಗಳು ಕರ್ನಾಟಕದ ಏಕೀಕರಣಕ್ಕೆ ತನ್ನದೇಆದ ಶಕ್ತಿಯನ್ನು ತುಂಬಿದ್ದು ಸುಳ್ಳಲ್ಲ.

ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರು ೧೯೦೯ ರಲ್ಲಿ ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗಮಂದಿರ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಯನ್ನೇ ಮಾಡಿತು. ಅಲ್ಲಿಂದ ಶಿಕ್ಷಣ ಪಡೆದ ಶ್ರೀಗಳು ಗಡಿ ಪ್ರದೇಶಗಳಾದ ಬೆಳಗಾವಿ ರುದ್ರಾಕ್ಷಿಮಠ ಮತ್ತು ಭಾಲ್ಕಿಯ ಹಿರೇಮಠ ಮತ್ತು ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರು ಸ್ಥಾಪಿಸಿದ  ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘಗಳು ಸ್ಥಾಪಿಸಿದ ವಿದ್ಯಾಲಯಗಳು ಮತ್ತು ಉಚಿತ ಪ್ರಸಾದ ನಿಲಯಗಳು   ಏಕೀಕರಣ ಹೋರಾಟಕ್ಕೆ ಜೀವ ತುಂಬಿದವು.

ಜೊತೆಗೆ ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರಿಂದ ಪ್ರೇರಣೆಗೊಂಡ ರಾಜ್ಯದ ಹಲವು ಶಿಕ್ಷಣ ಸಂಸ್ಥೆಗಳು ಹಾಗು ಗದುಗಿನ ವೀರೇಶ್ವರ ಪುಣ್ಯಾಶ್ರಮ ರಾಜ್ಯ ಮತ್ತು ಹೊರ ರಾಜ್ಯದ ದ ವಿವಿಧ ಸರ್ವಧರ್ಮದವರ ಮತ್ತು  ದಿವ್ಯಾಂಗದವರಿಗೆ ಉಚಿತ ವಸತಿ,ಪ್ರಸಾದ ಮತ್ತು ಶಿಕ್ಷಣದ ಕ್ರಾಂತಿ ಏಕೀಕರಣಕ್ಕೆ ಸಂಗೀತ ಮತ್ತು ಕಲೆಯ ಸಂಸೃತಿಯ ರಕ್ಷಣೆಯ ಮೂಲಕ  ಬಲವನ್ನು ನೀಡಿತು.

ಪೂಜ್ಯ ಹಾನಗಲ್ಲ  ಕುಮಾರ ಶಿವಯೋಗಿಗಳವರು ಕರ್ನಾಟಕ ಏಕೀಕರಣ ಎಂಬ ವಿಷಯದ ಮೇಲೆ ಹೋರಾಟ ಮಾಡದೇ ಇರಬಹದು .ಆದರೆ ಒಂದು ಕರ್ನಾಟಕದ ಬಹುಸಂಖ್ಯಾತ  ಸಮುದಾಯದ ಏಕಿಕರಣಕ್ಕೆ ಮಾಡಿದ ಹೋರಾಟ ಮತ್ತು ಅದರ ಫಲಶೃತಿಯ ಪರಿಣಾಮಗಳು ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆಗೆ ಅಂತರ್ಗಾಮಿಯಾಗಿ ಚೈತನ್ಯವನ್ನು ತುಂಬಿತು ಎನ್ನುವದರಲ್ಲಿ ಎರಡು ಮಾತಿಲ್ಲ.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು. “ಸುಕುಮಾರ” ಬ್ಲಾಗ

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

https://journal.shrikumar.com

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯರಿಗೆ ನನ್ನ ನಮಸ್ಕಾರಗಳು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಯೌವನಾವಸ್ಥೆಯಲ್ಲಿರುವ  ಒಂದು ಅಪರೂಪದ ಚಿತ್ರವನ್ನು  ಶ್ರೀಧರಗಡ್ಡಿ ಶ್ರೀ ಕೊಟ್ಟೂರೇಶ್ವರಮಠದ ಉತ್ತರಾಧಿಕಾರಿಗಳಾದ ಪೂಜ್ಯ ಮರಿಕೊಟ್ಟೂರ ಸ್ವಾಮಿಗಳು (ವಾಗೀಶ್ವರ ದೇವರು ) ಇತ್ತೀಚಿಗಷ್ಟೆ ಹುಡುಕಿರುವರು. ಈ ಚಿತ್ರವನ್ನು  ಮದ್ರಾಸಿನ ಗುರು ಬಸವ ಪ್ರಿಂಟರ್ಸ ನವರು ಮುದ್ರಿಸಿರುವರು.ಬಹುಶಃ ಈ ಚಿತ್ರವನ್ನು  ಗುರುಗಳ ೨೮-೨೯ ರ ವಯಸ್ಸಿನಲ್ಲಿ ತಗೆದುಕೊಂಡಿರಬಹುದು.(ಹಾನಗಲ್ಲ ಮಠದ ಅಧಿಕಾರ ಪಡೆದ ಸಮಯದಲ್ಲಿ ೧೮೯೬) ಪುಷ್ಠಿಯಾಗಿ ಹಾನಗಲ್ಲ ಮಠದಲ್ಲಿ ಈ ಚಿತ್ರದ ಬ್ರಹತ್‌ ತೈಲ ಚಿತ್ರವಿದೆ.ಗಂಭೀರ ಮುಖಭಾವ ಮತ್ತು ಚೈತನ್ಯಯುಕ್ತ ತೇಜಸ್ಸುಗಳನ್ನು  ನೋಡುತ್ತ ,ನೋಡುತ್ತ ಜ.ಚ.ನಿ ಯವರ  ಪುಸ್ತಕ “ಕಾರುಣಿಕ ಕುಮಾರಯೋಗಿ” ಯ “ನಾನು ಕಂಡ ಕುಮಾರ ಯೋಗಿ” ಯ ವರ್ಣನೆಯ ಶಬ್ಧಗಳು ಮಾರ್ಧನಿಸಿದವು .

ಷಟ್‌ಸ್ಥಲಮೂರ್ತಿ ಸುಖಾಸನದಲ್ಲಿ ಕುಳಿತಿತ್ತು . ನಿರಂಜನ ಮೂರ್ತಿ ನಿರಾಡಂಬರ ವೇಷದಲ್ಲಿ ಮೂರ್ತ ಮಾಡಿತ್ತು ನಿರಾಭಾರಿ ಸ್ವಾಮಿ ನಿರ್ಮಲ ಮನಸ್ಸಿನಿಂದ ಮಂಡಿಸಿತ್ತು . ಪ್ರಣವ ಸ್ವರೂಪಿ ಪ್ರಶಾಂತ ಕಲೆಯಿಂದ ಆಸೀನವಾಗಿತ್ತು ಷಟ್‌ಶಾಸ್ತ್ರ ಶಿವಾನುಭಾವಿ ಉಜ್ವಲ ಓಜದಿಂದ ಒಡರಿತ್ತು . ಕೂತುಕೊಳ್ಳುವುದರಲ್ಲಿ ಅವರದೇ ಒಂದು ಠೀವಿ . ಅದು ಯೋಗ ಠೀವಿ , ಅರ್ಜವ ದೇಹ ಅಜಾನುಬಾಹು , ವಿಶಾಲವಾದ ಹಣೆ , ಎವೆಯಿಕ್ಕದ ಕಣ್ಣು , ಜಗತ್ತನ್ನೇ ಜರಿದಿದ್ದರು ಸಮಾಜದ ಪ್ರಗತಿ ವಿಚಾರ ಭಾವರೇಖೆ ನೀಳವಾದ ಮೊಗದಲ್ಲಿ ಆಳವಾಗಿ ಮೂಡಿ ತೋರುತ್ತಿತ್ತು . ಅನುಭವದ ಆಗರವಾಗಿದ್ದರೂ ಅದರ ಕ್ಷೀಣತೆಯ ನೆನೆದು ಅಭಿವೃದ್ಧಿಯ ಹಂಬಲ ಹೆಚ್ಚಿ ಹೊಮ್ಮುತ್ತಿತ್ತು . ಯೋಗ ಬಲ್ಲಿದರಾಗಿದ್ದರೂ ಯೋಗದ ಏಳೆಗಾಗಿ ಪಡುತ್ತಿದ್ದ ಚಾಕಚಕ್ಯತೆ ಚಿಮ್ಮುತ್ತಿತ್ತು . ಸ್ವತಃ ಸಾಹಿತಿಗಳಾಗದಿದ್ದರೂ ಪ್ರಾಚೀನ ಸಾಹಿತ್ಯ ಸಂಗ್ರಹದ ಆಸಕ್ತಿಆಸೇಚನವಾಗಿತ್ತು . ವಿದ್ಯೆಯನ್ನು ವಿಶೇಷ ಕಲಿಯದಿದ್ದರೂ ವಿಚಾರ ಪ್ರೌಢಿಮೆಯಿಂದ ವಿದ್ವಾಂಸರನ್ನು ನಿಬ್ಬೆರಗುಗೊಳಿಸುತ್ತಿದ್ದ ಪ್ರಕಾಂಡ ಪ್ರಭಾವವಿತ್ತು . ಸಂನ್ಯಾಸಿಗಳಾಗಿದ್ದರೂ ಸ್ತ್ರೀಯರ ಸತ್ಕರ್ಮ – ಸದ್ಧರ್ಮಗಳ ಉಳಿಮೆಗೆ ಹೆಣಗುತ್ತಿದ್ದ ಹೆಚ್ಚಳದ ಪೆಂಪಿತ್ತು . ನಿಷ್ಕಾಮಿ ಗಳಾಗಿದ್ದರೂ ಲೋಕಕಲ್ಯಾಣ ಕ್ರಿಯಾಪ್ರೇಮ ಕೌಶಲ್ಯವಿತ್ತು . ವಿರಕ್ತ ಶಿಖಾಮಣಿ ಯಾಗಿದ್ದರೂ ವಿನಯಶೀಲಶ್ರೀ ವಿರಾಜಿಸುತ್ತಿತ್ತು . ಜೀವನ ನಿರ್ವಹಣದ ಯಾವ ಯೋಚನೆಯಿಲ್ಲದಿದ್ದರೂ ವೈದ್ಯದ ಶೋಧ – ಪ್ರಯೋಗಗಳ ಸಂಭ್ರಮ ಸೂರೆ ಗೊಂಡಿತ್ತು . ದೀನ ದರಿದ್ರರಲ್ಲಿದ್ದ ದಯಾಂತಃಕರಣ ದಿವ್ಯವಾಗಿತ್ತು . ಪ್ರಗತಿಶೀಲರಿಗೆ ಪ್ರೋತ್ಸಾಹದಾಯಕ ಗುಣ ಪ್ರಭೂತವಾಗಿತ್ತು . ಬರಿ ದಯೆ – ಪ್ರೋತ್ಸಾಹ ಮಾತ್ರವಲ್ಲ ಆಶ್ರಯ- ಪೋಷಣಗಳನ್ನು ಕೊಡುತ್ತಿದ್ದ ಒಮ್ಮನದ ಔದಾರ್ಯವಿತ್ತು . ಮಂದಮತಿ ಶಿಷ್ಯರಿಗೆ ಸ್ವಂತ ಪಾಠ ಪ್ರವಚನ ಹೇಳಿ ಕೇಳಿ ಪಳಗಿಸುತ್ತಿದ್ದ ಪ್ರತಿಭೆಯಿತ್ತು . ಅಂತಹ ಅನುಪಮ ಜಗಜ್ಯೋತಿಯೊಂದನ್ನು ಕಂಡೆ,  ಅವರೆ ನಾ ಕಂಡ ಕಾರಣಿಕ ಕುಮಾರ ಯೋಗಿಗಳು ,

ಅವರು ಆಗಳೆ ಸಮಾಜ ಬಾಂದಳದಿ ಕ್ರಿಯಾ ಕಿರಣಗಳನು ನೀಡಿ ಜ್ಞಾನ ಬೆಳಗನು ಹರಡಿ ಜಗಚ್ಚಕ್ಷುವಿನಂತೆ ಜಗಜಗಿಸಿದ್ದರು . ಅಂದು ಆ ಬಿಂಬವ ಕಂಡೆ ನಾನು ಕಂಡ ಕುಮಾರ ಯೋಗಿ ಕಂಡೆನ್ನ ಕಂಗಳು ಧನ್ಯವಾದವು . ಜನ್ಮ ಸಾರ್ಥಕವಾಯಿತು . ಆಟ ಆ ಲೋಕೋತ್ತರ ಮಹಾಮೂರ್ತಿಯನ್ನು ಎಷ್ಟು ಸಲ ಎಷ್ಟು ಬಗೆಯಲ್ಲಿ ನೋಡಿದರೂ ಬರ ಹಿಂಗದು , ಬೇಸರ ಬಾರದು .

ನಿಮ್ಮ ನೋಟವನಂತ ಸುಖ ,

ನಿಮ್ಮ ಕೂಟ ಪರಮ ಸುಖವಯ್ಯ

 ಅಷ್ಟಕೋಟಿ ರೋಮಂಗಳೆಲ್ಲ ಕಂಗಳಾಗಿ

ನೋಡುತ್ತಿದ್ದೆನಯ್ಯ ಕುಮಾರ ಯೋಗೀಶ್ವರ ನಿಮ್ಮ ನೋಡಿ ನೋಡಿ

 ಮನದಲ್ಲಿ ರತಿಹುಟ್ಟಿ ನಿಮಿರ್ದವೆನ್ನ ಕಂಗಳು

ಎಂದು ಅಣ್ಣನ ಅಮೃತವಾಣಿಯಲ್ಲಿ ಹಾಡಿ ನೆಟ್ಟ ನೋಟದಿಂದ ನೋಡಿ ನಲಿಯಲು ಮುಂದುವರಿಯಲಾಗಿದೆ , ಉಲಿಯಲು ಮೊದಲು ಮಾಡಲಾಗಿದೆ .

.

ಈ ಸಂಚಿಕೆಯ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಅಪೂರ್ವ ಲೇಖನಗಳ ವಿವರ

  1. ಕಾವ್ಯ :” ಶಿವಮಂಗಲವನು ಕೊಡು ಬೇಗ  | “ ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಕಾವ್ಯ : “ಮತ್ತೆ ಬರುವನೆಂದು ಹೇಳಿ ಪೋದೆಯ್ಯ .ಮತ್ತೇಕೆ ಬರಲಿಲ್ಲಿ ಪೇಳೋ ಹಾಲಯ್ಯ ? : ಶ್ರೀ ಚನ್ನವೀರದೇವರು ಕಲ್ಯಾಣಮಠ , ಹುಬ್ಬಳ್ಳಿ
  • ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೬ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ವಿಶೇಷ ಲೇಖನಗಳು:

  • ಶ್ರೀ ಅನ್ನದಾನ ಶ್ರೀಗಳವರು ಹಾಗೂ ಶಿವಯೋಗಮಂದಿರ : ಡಾ ಶಿವಬಸವ ಮಹಾಸ್ವಾಮಿಗಳು ನಾಗನೂರ – ಬೆಳಗಾವಿ
  • ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗಮಾಡಿದ ತ್ಯಾಗವೀರ ಶಿರಸಂಗಿ ಲಿಂಗರಾಜರು.: ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
  • ಶ್ರೀಗುರು ಅನ್ನದಾನಿ ಮಹಾಸ್ವಾಮಿಗಳವರ  ದರ್ಶನ ದೂರ-ಸಮೀಪ : • ಪ್ರೊ. ಎಸ್. ಎಸ್. ಭೂಸನೂರಮಠ
  • ಶ್ರೀಗುರು ಅನ್ನದಾನ ಮಹಾಸ್ವಾಮಿಗಳು ಮತ್ತು ಶಿಕ್ಷಣ: ಸದಾಶಿವ ಒಡೆಯರ, ಧಾರವಾಡ
  • ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳು : ಈಶ್ವರ ಸಣಕಲ್ಲ ( ಲೇಖನ ಸಂಗ್ರಹ)
  • ಪೂಜ್ಯಶ್ರೀ ಡಾ. ಶಿವಬಸವ ಸ್ವಾಮಿಗಳು: ಪ್ರಕಾಶ ಗಿರಿಮಲ್ಲನವರ
  • ವೈರಾಗ್ಯದ ಮಲ್ಲಣಾರ‍್ಯರು : ಸಂಗ್ರಹ : ಎ. ಎಸ್. ಪಾವಟೆ, ವಿಶ್ರಾಂತ ಪ್ರಾಚಾರ್ಯರು, ಬಾಗಲಕೋಟ
  • ಶ್ರೀ ಗುರು ಕುಮಾರೇಶ್ವರರ ಕಾಣಿಕೆಗಳು : ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ,

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯರಿಗೆ ನನ್ನ ನಮಸ್ಕಾರಗಳು.

ಈ ತಿಂಗಳು ವಿಶೇಷ ವಾದುದು. ಸಪ್ಟೆಂಬರ್‌ ೧೧ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ೧೫೪ ನೇಯ ಜಯಂತಿ ಮಹೋತ್ಸವ !. ಪೂಜ್ಯರು ಸ್ಥಾಪಿಸಿದ ಶ್ರೀ ಶಿವಯೋಗಮಂದಿರದ ಪರಿಸರದಲ್ಲಿ ಪೂಜ್ಯ ವಟುಗಳ ಬರಿಗಾಲಿನಲ್ಲಿ ನಡೆದುಹೋಗುವ  ಚಿತ್ರವೊಂದು ಕೆಳಗಿನ ಸಾಲುಗಳನ್ನು ಬರೆಯಲು ಪ್ರೇರೆಪಿಸಿದವು.

ಪುಟ್ಟ ಪುಟ್ಟ ಹೆಜ್ಜೆಗಳು

ಶಿವ ನಡೆದ ದಾರಿ

ಯೋಗ ಪಡೆದ ಪರಿ

ಗುರು ನೀಡಿದ ಗುರಿ-

-ಯ ಕಡೆಗೆ

ಮನೆಯಿಲ್ಲ -ಮನವುಂಟು

ಮಠವಿಲ್ಲ- ಘಟ ವುಂಟು.

ಮಳೆಯುಂಟು-ಛತ್ರಿಗಳಿಲ್ಲ

ಛಳಿಯುಂಟು -ಕಂಬಳಿಗಳಿಲ್ಲ

ಕಣ್ಣರಿಯದಿದ್ದರೂ ಕರುಳರಿತ ಭಾವ……!!!

ಆ ಮಾರ್ಗ -ಪೂಜ್ಯರು ಸ್ವತಃ ಬದುಕಿದ ಮಾರ್ಗ , ಅಂತ್ಯ ಕಂಡಿದ್ದ ಸಮಾಜವನ್ನು ಹೊಡೆದೆಬ್ಬಿಸಿದ ಮಾರ್ಗ , ಅದು ತ್ಯಾಗ ಮತ್ತು ಸೇವೆ ಗಳ ಮಾರ್ಗ.

ಈ ವಿಶೇಷ ಸಂಚಿಕೆಗೆ ಸಂಗ್ರಹಿಸಿದ ಒಂದು ಲೇಖನ  ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಒಂದು ಮಹತ್ಕಾರ್ಯ ಇತಿಹಾಸದಮೇಲೆ ಬೆಳಕು ಚಲ್ಲುತ್ತದೆ. ಪೂಜ್ಯ ಶ್ರೀಕುಮಾರ ಶಿವಯೋಗಿಗಳನ್ನು ಅತ್ಯಂತ ಹತ್ತಿರದಿಂದ ನೋಡಿದ ಪೂಜ್ಯ ನವಲಗುಂದದ ಲಿಂ.ಬಸವಲಿಂಗ ಸ್ವಾಮಿಗಳು  “ನುಡಿಲಿಂಗ” ಎಂಬ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ

“ ಶ್ರೀಗಳವರು ಲಿಂಗಾಯತ ಸಮಾಜದ ಒಳಬೇನೆಯನ್ನರಿತು, ಅದರ ನಿವಾರಣೆಗೆ ಗುರು ಜ೦ಗಮರ ಸುಧಾರಣೆಯ ಜೀವನವೇ ಮುಖ್ಯವಾದದ್ದೆಂದು ಗ್ರಹಿಸಿದರು. ಕೇವಲ ಪುರುಷರಲ್ಲಿ ಧರ್ಮಜಾಗ್ರತೆಯಾದರೆ ಸಾಲದು, ಸ್ತ್ರೀ ವರ್ಗದಲ್ಲಿಯೂ ಕರ್ತವ್ಯಜ್ಞಾನದ ಉದಯವಾಗಲೆಂದು ಹಾರೈಸಿದರು, ಇಷ್ಟಲ್ಲದೆ, ಆಗಿನ ಕಾಲಕ್ಕೆ ಅಗತ್ಯವೆನಿಸಿಕೊಂಡ ಅಸ್ಪೃಶ್ಯರ ಶಿಕ್ಷಣದ ಕಡೆಗೆ ಅವರ ಲಕ್ಷ್ಯ ಹರಿದಿತ್ತು.

ಚಲವಾದಿಗಳ ಸಲುವಾಗಿ ಒಂದು ಶಾಲೆಯನ್ನು ಪ್ರಾರಂಭಿಸಿ, ಸರಿಯಾದ ಶಿಕ್ಷಣ ಕೊಟ್ಟರು; ಅವರಿಂದಲೂ ಸಮಾಜ ಸುಧಾರಣೆಯಾಗಲಿದೆಯೆಂದು ಮೇಲಿಂದ ಮೇಲೆ ಕೇಳುತ್ತಿದ್ದರು, ಪ್ರಯತ್ನವೇ ಅವರಿಗೆ ಸಹಜಗುಣವಾಗಿತ್ತು.

ಅಡಿಯ ಮಂದಿಗೆ ಸ್ವರ್ಗ | ಅಡಿಯ ಹಿಂದಿಡೆ ನರಕ

ಅಡಿಗಶ್ವಮೇಧಘಲವಕ್ಕು  ಸ್ವಾಮಿ ಕಾರ್ಯಕ್ಕೆ

ದುಡಿಯಲೆ ಬೇಕು ಸರ್ವಜ್ಞ

ಈ ಪದ್ಯದ ಭಾವ ಅವರ ಜೀವನದ ಉಸಿರಾಗಿತ್ತು, ಪ್ರಯತ್ನದಲ್ಲಿ ಸೋತರೂ ಅವರಿಗೊಂದು ಹೆಮ್ಮೆ ಮಹತ್ಕಾರ್ಯಕ್ಕಾಗಿ, ಲೋಕಸೇವೆಗಾಗಿ ಸಮಸ್ತ ಜೀವಮಾನವನ್ನೇ ತೇದು, ತುದಿಯಲ್ಲಿ ಸಿರಿಗೊಬಗಿಲ್ಲದೆ ಒಣಗಿಹೋಗುವುದರಲ್ಲಿಯೂ ಒಂದು ಆನಂದವನ್ನು ಶ್ರೀಗಳವರು ಅನುಭವಿಸುತ್ತಿದ್ದರು, ಈ ರೀತಿಯಿಂದ ಬಹುಮುಖ ಪ್ರಯತ್ನ ಮಾಡಿ, ಲಿಂಗಾಯತ ಸಮಾಜದ ಎಳ್ಗೆಗಾಗಿ ದುಡಿದರು; ಸಮಾಜ ಬಂಧುಗಳಲ್ಲಿ ನವಜಾಗೃತಿಯನ್ನುಂಟು ಮಾಡಿದರು “

ಈ ಸಾಲುಗಳು ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಘನವ್ಯಕ್ತಿತ್ವ ವನ್ನು ಮತ್ತು ಸ್ವಾಭಿಮಾನವನ್ನು ಪ್ರತಿಬಿಂಭಿಸುತ್ತವೆ.

ಈ ವಿಶೇಷಾಂಕದ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಅಪೂರ್ವ ಲೇಖನಗಳ ವಿವರ

  1. ಕಾವ್ಯ :”ಶಂಕರ ಕಾಯೊ ಸದಾ  ಕಿಂಕರನು | “ ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೫ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ವಿಶೇಷ ಲೇಖನಗಳು:

  • ಜನಮಾನ್ಯ ಗುರುದೇವ: ಪೂಜ್ಯ ಶ್ರೀ ಲಿಂ. ಡಾ. ಶಿವಬಸವ ಸ್ವಾಮಿಗಳು,ರುದ್ರಾಕ್ಷಿಮಠ ನಾಗನೂರ
  • ಹಾನಗಲ್ಲ ಶ್ರೀಗಳವರ ವ್ಯಕ್ತಿತ್ವ : ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ
  • ದಾಸೋಹ ಮೂರ್ತಿ ಶ್ರೀ ಕುಮಾರ  ಶಿವಯೋಗಿ : ಲೇಖಕರು :ಪೂಜ್ಯ ವಿಜಯಪ್ರಭು ದೇವರು ಬೂದಗುಂಪ
  • ಶ್ರೀ ಹಾನಗಲ್ಲ ಕುಮಾರ ಸ್ವಾಮಿಗಳು. ಲಿಂ. ಡಾ , ಫ . ಗು . ಹಳಕಟ್ಟಿ : ಬಿ.ಎ.ಎಲ್.ಎಲ್.ಬಿ ; ಡಿ.ಲಿಟ್ . ಸೌಜನ್ಯ ಶಿವಾನುಭವ ಮಾಸಪತ್ರಿಕೆ ಸಂಪುಟ ೪ ಸಂಚಿಕೆ ೧೧ ಫೆಬ್ರುವರಿ ೧೯೩೦  

ಸಂಗ್ರಹ ಸಹಕಾರ: ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,

ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ

  • ಕ್ರಾಂತಿಕಾರಿ ಶ್ರೀ ಕುಮಾರಯೋಗಿ : ಲೇಖಕರು : ಆಸ್ಥಾನ ವಿದ್ವಾನ್, ಪಂಡಿತರತ್ನ ಶ್ರೀ ಬಿ. ಶಿವಮೂರ್ತಿಶಾಸ್ತ್ರಿಗಳು
  • ದಾರ್ಶನಿಕ ಕಂಡ ನಾಡಿನಲ್ಲಿ : ಡಾ. ಹಿರೇಮಲ್ಲೂರ ಈಶ್ವರನ್
  • ವಿರಾಗವಿಭು ಹಾನಗಲ್ಲ ಕುಮಾರ ಸ್ವಾಮಿಗಳು : ಡಾ. ಸಿದ್ಧಯ್ಯ ಪುರಾಣಿಕ
  • ಕಾರಣಪುರುಷ ಹಾನಗಲ್ಲ ಶ್ರೀ ಕುಮಾರ ಸ್ವಾಮಿಗಳು : ಲೇಖಕರು : ಶ್ರೀ ಡಾ. ಜಿ.ವೆಂಕಟೇಶ ಮಲ್ಲೇಪುರಂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು
  • ಕ್ರಾಂತದರ್ಶಿ ಕುಮಾರಯೋಗಿ : ಡಾ.ಜಿ.ಕೆ.ಹಿರೇಮಠ.
  • ಕವನ: ಸದ್ಧರ್ಮದ ಮಾಣಿಕ್ಯ, ಕುಮಾರೇಶ : ಶ್ರೀ ರೇವಣಸಿದ್ದಯ್ಯ ಹಿರೇಮಠ.ಆಕಾಶವಾಣಿ ಕಲಾವಿದರು ಚಿಂಚೋಳಿ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಮತ್ತು  ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯರಿಗೆ ನನ್ನ ನಮಸ್ಕಾರಗಳು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಪರಮಶಿಷ್ಯ ರಾದ ಪೂಜ್ಯ ಲಿಂ. ಪಂಚಾಕ್ಷರಿ ಗವಾಯಿಗಳ ಪುಣ್ಯ ತಿಥಿ ಮತ್ತು ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ “ಸುಕುಮಾರ” ಸಂಗೀತ ವಿಶೇಷ ಸಂಚಿಕೆಯನ್ನು ಪ್ರಕಟಿಸಲು ಹೆಮ್ಮೆಯೆನಿಸುತ್ತದೆ.

ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು  ಶ್ರೀಕುಮಾರ ಶಿವಯೋಗಿಗಳ ಮೇರು ಕೊಡುಗೆ. ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ  ಕಣ್ಣು ತೆರೆದು ನೋಡಿ, ಕಿವಿ ತುಂಬ ಕೇಳಿ ,ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ  ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ. ಪಂಚಾಕ್ಷರಿ ಗವಾಯಿಗಳವರು  ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು.   ಬಡವ ಬಲ್ಲಿದ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.

ಈ ಪಾವನ ಸಮಯದಲ್ಲಿ  ನವದೆಹಲಿಯ ಹಾನಗಲ್ಲ ಶ್ರಿ ಕುಮಾರ ಶಿವಯೋಗಿ ಸೇವಾ ಸಮಿತಿ ಅರ್ಪಿಸಿದ ಕವಿರತ್ನ ಚನ್ನಕವಿಗಳು ವಿರಚಿತ ಶ್ರೀಕುಮಾರೇಶ್ವರ ನಾಮಾವಳಿ  ಸಂಗೀತ ಧ್ವನಿ ಸುರಳಿಯನ್ನು ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರು ಅಧ್ಯಕ್ಷರು, ಶ್ರೀ ಮದ್ವೀರಶೈವ ಶಿವಯೊಗ ಮಂದಿರ ಸಂಸ್ಥೆ, ಶಿವಯೋಗ ಮಂದಿರ. ಶ್ರೀ ಜಗದ್ಗುರು  ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರ ಅಮೃತಹಸ್ತ ದಿಂದ ಶ್ರೀ ಶಿವಯೋಗಮಂದಿರದಲ್ಲಿ ಲೋಕಾರ್ಪಣೆ ಗೊಂಡಿದ್ದು ವಿಶೇಷ ವಾಗಿತ್ತು.

ಈ ವಿಶೇಷಾಂಕದ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

  1. ಕಾವ್ಯ  ಚಿತ್ತದ ರಾಗ ರಚನೆ : ಲಿಂ. ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಧಾರವಾಹಿ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ..
  3. ಸಂಗೀತ ಕ್ಷೇತ್ರಕ್ಕೆ ಶಿವಯೋಗಮಂದಿರದ ಕೊಡುಗೆಗಳು : ಆಕರ ಗ್ರಂಥ : ಶಿವಯೋಗಮಂದಿರ ಶತ ಸಂವತ್ಸರ  ಸಂಪಾದಕರು ಡಾ. ಮೃತ್ಯುಂಜಯ ರುಮಾಲೆ
  4. ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶ್ರೀಗಳವರ ಸಂಗೀತ ಸಂಪ್ರೀತಿ. ಲೇಖಕರು :ಲಿಂ. – ಪಂ. ಪುಟ್ಟರಾಜ ಗವಾಯಿಗಳು
  5. ಪುಣ್ಯಸ್ಮರಣೆ ಪೂಜ್ಯ ಪಂಚಾಕ್ಷರಿ ಗವಾಯಿಗಳು .ಲೇಖಕರು ಶ್ರೀ ಶಿರೀಷ ಜೋಶಿ  ಸೌಜನ್ಯ: ಸುಕುಮಾರ ದೀಪ್ತಿ .ಸಂಪಾದಕರು ಪೂಜ್ಯ ಶ್ರೀ ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ
  6. ಕಲಾಯೋಗಿ ಲೇಖಕರು : – ಶ್ರೀ ಗಂಗಾಧರ ಶಾಸ್ತ್ರಿಗಳು, ಚಿತ್ತರಗಿ.
  7. ನಾದ-ಲೇಖಕರು : ಶ್ರೀ ರಾಮೇಶ್ವರ ಬಿಜ್ಜರಗಿ ಸೊಲ್ಲಾಪುರ
  8. Guru – Supriya Antin Kaddargi Vice President, JP Morgan Chase Bank Greater Chicago.USA
  9. ಸಂಗೀತವೆಂಬ ಜೀವನ ಚೈತನ್ಯ ಲೇಖಕರು :  ಗುರು ಹಿರೇಮಠ, ಹಗರಿಬೊಮ್ಮನಹಳ್ಳಿ
  10. ನೆನಪು : ಶಿವಯೋಗಮಂದಿರದ ತೆಂಗಿನ ಗಿಡಗಳು ಮತ್ತು  ಲಿಂ. ಪೈಲವಾನ ವೀರಭದ್ರಪ್ಪನವರು ಮೂಲ ಲೇಖಕರು ಶ್ರೀ ಕಿಶನ್.ಕುಲಕರಣಿ ಕುಷ್ಟಗಿ ಸಂಗ್ರಹ : ಶ್ರೀ ಕುಮಾರ ಹಿರೇಮಠ  ಮತ್ತು ಶ್ರೀ ರವಿ ಹುಲಕೋಟೆ
  11. ಸಂಗೀತ ಸಂಚಿಕೆಗೆ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವಿರಚಿತ ಕಾವ್ಯಗಳನ್ನು ಸುಶ್ರಾವ್ಯ ವಾಗಿ ಹಾಡಿದ ತುಮಕೂರಿನ ಶ್ರೀ ಸಿದ್ದೇಂದ್ರಕುಮಾರ ಹಿರೇಮಠ ಅವರಿಗೆ ಕೃತಜ್ಞತೆಗಳು

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಪಥಿಕನ ಟಿಪ್ಪಣೆಗಳು

ಸಹೃದಯರಿಗೆ ನನ್ನ ನಮಸ್ಕಾರಗಳು.

ವಿಶ್ವ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತ,ಕಳೆದ ಜೂನ ತಿಂಗಳ ಸುಕುಮಾರ  ಬ್ಲಾಗ್‌ ನ ವಿಶೇಷ ಸಂಚಿಕೆಯಲ್ಲಿ ಮೂಡಿಬಂದ “ ಮಹಾಜ್ಯೋತಿ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು”  ಲೇ.ಡಾ.ಸಿದ್ದಣ್ಣ ಉತ್ನಾಳ ಅವರ ಲೇಖನದ ಸಾಲುಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ.

“ಜೀವ ಶಿವನಾಗುವತ್ತ ಮಾಡುವ ಸಾಧನೆಯೇ ಯೋಗ . ಇದರಲ್ಲಿ ಮಂತ್ರ ಯೋಗ , ಲಯಯೋಗ , ಹಠಯೋಗ , ರಾಜಯೋಗ ಹಾಗೂ ಶಿವಯೋಗ ಎಂದು ಐದು ಪ್ರಕಾರಗಳುಂಟು . ‘ ಪರಿಪೂರ್ಣಯೋಗ ‘ ವೆಂದು ಪರಿಪೂರ್ಣ ಯೋಗವೇ ಮುಖ್ಯವೆಂದು ಭಾವಿಸುವವರುಂಟು , ಆದರೆ ” ಶಿವಯೋಗ’ವೇ ಪರಿಪೂರ್ಣ ಅರ್ಥಾತ್ ಪೂರ್ಣ ಯೋಗ.

ಆ ಪರಶಿವನಲ್ಲಿ ಮನವನ್ನು ಲೀನಗೊಳಿಸಿ ಧ್ಯಾನಿಸುವುದೇ ಮಂತ್ರಯೋಗ , ಕರಣೇಂದ್ರಿಯ ಭೋಗದಿಂದ ಬಿಡುಗಡೆ ಹೊಂದಿ , ಪರಶಿವನಲ್ಲಿ ಚಿತ್ವನ್ನು ಲಯಗೊಳಿಸುವದೇ ಲಯಯೋಗ . ಸರಾಗವಾಗಿ ಸಂಚರಿಸುತ್ತಿರುವ ಪ್ರಾಣ ವಾಯುವನ್ನು ಮೂಗಿನ ರಂಧ್ರದ ಮೂಲಕ ತಡೆಹಿಡಿದು ತೂಬಿಸಿ ಹಣೆಯಲ್ಲಿ ಹೊಳೆಯುವ ಪ್ರಕಾಶವನ್ನೇ ತದೇಕ ಚಿತ್ತದಿಂದ ನೋಡುವುದೇ ಹಠಯೋಗ . ಈ ಜಗತ್ತಿನಲ್ಲಿ ಒಳ – ಹೊರಗೆಲ್ಲಾ ತುಂಬಿರುವ ಪ್ರಕಾಶವೇ ( ಪರತತ್ವವೆ ) ತಾನೆಂದು ತಿಳಿದು , ಆ ಅರಿವನ್ನೂ ಮೀರಿ ನಿಲ್ಲುವುದೇ ರಾಜಯೋಗ , ಒಂಭತ್ತು ಚಕ್ರಗಳಲ್ಲಿ ಒಂದು ಮಹಾಜ್ಯೋತಿ ಸಂಚರಿಸುವುದು . ಆ ಜ್ಯೋತಿಯೇ ಗುರುಸಿದ್ಧ ಮೂರ್ತಿ : ಗುರುಸಿದ್ಧ ನೇ ಶಿವಸ್ವರೂಪಿ ಎಂದು ಎರಡಿಲ್ಲದೇ ಭಾವಿಸಿ ನಂಬಿ ಧ್ಯಾನಿಸುವುದೇ ಶಿವಯೋಗ .

 ಪರತತ್ವವು ತನಗೆ ತಾನೇ ಗೋಚರಿಸು ವುದು . ಶರೀರದಲ್ಲಿ ಪರಂಜ್ಯೋತಿಯಿದೆ , ಪರತತ್ವವೂ ಇದೆ . ಆ ಜ್ಯೋತಿಯೇ ಮೂಲಸ್ವರೂಪ ; ಇದನ್ನೇ ಪರಬ್ರಹ್ಮ ಸ್ವರೂಪವೆನ್ನುತ್ತಾರೆ . ಈ ದೇಹದಲ್ಲಿ ಇರುವ ನವಚಕ್ರಗಳನ್ನು ಸಂಧಿಸಿ ಚಿಜ್ಯೋತಿಯನ್ನು ಕಾಣಬಹುದು . ಇದುವೇ ಪರಿಪೂರ್ಣ‌ ಲಿಂಗ , ಪರಶಿವತತ್ವ , ಹೀಗೆ ಪರಶಿವತತ್ವ ಕಂಡು ಶಿವಯೋಗಿ ಗಳಾದರು.

ಈ ಸಾಲುಗಳ ಬೆನ್ನು ಹತ್ತಿ  ಹುಡುಕಾಟ ಆರಂಬಿಸಿದ ನನಗೆ ಈ ತಿಂಗಳ ವಿಶೇಷಾಂಕದ ಲೇಖನಗಳ  ಸಂಗ್ರಹ ಸಂಪಾದನೆ ಅದ್ಭುತ ಉತ್ತರವನ್ನೇ ನೀಡಿತು !.

ಪರಮಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ಕಾವ್ಯದ ಸಾಲುಗಳಂತೂ  “ಚಿದ್ಬಿಂದು” ವಿನ ದರ್ಶನ ಮಾಡಿಸಿದ್ದು ಒಂದು “ಅನುಭೂತಿ “!!.

“ನೇತ್ರದಾಟನಿಲ್ಲಿಸಿ ಸೂತ್ರದಿಯ ಸುಮತಿಯಗೂಡಿ

ಗಾತ್ರತ್ರಯವಳಿಯುತೆ ಚಿತ್ತದ ಚಿದ್ಬಿಂದು ತೋರಿ| ಚಿನ್ಮಯ ಪ್ರಭು”

ಈ ವಿಶೇಷಾಂಕದ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಧಾರವಾಹಿ

 ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩ : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಕಾವ್ಯ

  1. ಪರಮ ಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕಾವ್ಯ “ಶಿವಯೋಗ”
  2. “ಯೋಗ”: ಜಡೆಯೊಡೆಯ ತ್ರಿವಿಧಿ :ಪರಮಪೂಜ್ಯ ಮೌನತಪಸ್ವಿ ಶ್ರೀ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು  ಸಮಾಧಾನ ಕಲಬುರಗಿ  ವ್ಯಾಖ್ಯಾನ : ಶ್ರೀ ರಾಮೇಶ್ವರ ಬಿಜ್ಜರಗಿ -ಸೋಲಾಪುರ
  • ಯೋಗ :ಸಂಗೀತ ಗಾಯನ : ಪೂಜ್ಯ ಪ್ರಭು ಚನ್ನಬಸವ ಸ್ವಾಮಿಗಳು ಅಥಣಿ (ಧ್ವನಿ ಮುದ್ರಣ ಎರಡು ಯೋಗದ ಕುರಿತು ಹಾಡುಗಳು).
  • ಶಿವಯೋಗಮಂದಿರ : ಪೂಜ್ಯ ಮುಪ್ಪಿನ ಬಸವಲಿಂಗ ದೇವರು  ಶ್ರೀ ಅನ್ನದಾನೇಶ್ವರ ಸಂಸ್ಥಾನ ಹಾಲಕೆರೆ

ಲೇಖನಗಳು

  1. ಸಾಧಕರ ಯೋಗಾಸನಗಳು  :ಪೂಜ್ಯ ಲಿಂ.ವ್ಯಾಕರಣಾಳು ಸಿದ್ಧಲಿಂಗ ಪಟ್ಟಾಧ್ಯಕ್ಷರು
  2. ಯೋಗ ಸಾಧನೆ : ಲಿಂ. ಪೂಜ್ಯ ಶ್ರೀ ಸಂಗನಬಸವಸ್ವಾಮಿಗಳು, ಬಂಥನಾಳ
  3. ಯೋಗಿರಾಜ ಶ್ರೀ ಪ್ರಭು ಕುಮಾರ ಪಟ್ಟಾಧ್ಯಕ್ಷರು ಲೇಖಕರು : ಜ.ಚ.ನಿ.
  4. ತತ್ವಪದ ಹಾಗು ವಚನಗಳ ಮುಕ್ತಿತತ್ವ” ಪೂಜ್ಯ ಶ್ರೀ ವಿವೇಕಾನಂದ ದೇವರು ಕಲ್ಯಾಣೇಶ್ವರ ಹಿರೇಮಠ ಗುಣದಾಳ
  5. ಯೋಗಯುಕ್ತ – ರೋಗ ಮುಕ್ತ : ಪೂಜ್ಯ  ವೀರಬಸವ ದೇವರು,  ಆಸಂಗಿ
  6. ಯೋಗವೂ ವೀರಶೈವರೂ : ಲಿಂ. ಶ್ರೀ ಎಸ್. ಸಿ. ನಂದಿಮಠ, ಗೋಕಾಕ
  7. ಮಾನವೀಯತೆಯ ಮಹಾಮೂರ್ತಿ ಸಿಂದಗಿ ಪಟ್ಟಾಧ್ಯಕ್ಷರು.:ಡಾ. ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು
  8. ಯೋಗಸಾಧಕ ಬೋಧಕರಾಗಿ ಹಾನಗಲ್ಲ ಶ್ರೀಗಳವರು

ಲೇಖಕರು:ಡಾ. ಶಾಂತಾದೇವಿ.ಎಲ್.ಸಣ್ಣೆಲ್ಲಪ್ಪನವರ.

Rtd. Professor and Chairman Institute of Kannada Studies and Former Hon. Professor Institute of Yoga Studies Karnatak University, Dharwad.

  • ಯೋಗ ಪ್ರಸಾರ ಸೇವೆಯಲ್ಲಿ ಗದುಗಿನ ಯೋಗ ಪಾಠಶಾಲೆ

(ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ)

  • ಕೆ. ಎಸ್. ಪಲ್ಲೇದ ಪ್ರಾಚಾರ್ಯರು, ಬಸವಯೋಗ ಕೇಂದ್ರ, ಗದಗ

ಯೋಗ ವಿಡಿಯೋ : ಪೂಜ್ಯ  ವೀರಬಸವ ದೇವರು,  ಆಸಂಗಿ ಮತ್ತು ಪೂಜ್ಯ ಆನಂದ ದೇವರು ಹಾವೇರಿ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ