-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯ ಓದುಗರಿಗೆ
ನಮಸ್ಕಾರಗಳು.
ಫೆಬ್ರುವರಿ ತಿಂಗಳು ಶ್ರೀ ಮದ್ವೀರಶೈವ ಶಿವಯೋಗಮಂದಿರ ೧೧೩ ನೇಯ ಸಂಸ್ಥಾಪನಾ ದಿನಾಚರಣೆಯ ವಾರ್ಷಿಕೋತ್ಸವವನ್ನುಅತ್ಯಂತ ಅರ್ಥಗರ್ಭಿತವಾಗಿ ಆಚರಿಸಿಕೊಳ್ಳುತ್ತಿದೆ.
ಶ್ರೀ ಮದ್ವೀರಶೈವ ಶಿವಯೋಗಮಂದಿರ.
ಎಲ್ಲಿ ಶಿವ ಸಂಬಂಧವಾದ ವಿಚಾರಗಳು,ಶಿವಾಚಾರ-ಶಿವಾನುಭವ-ಶಿವಯೋಗದ ವಿಷಯಗಳನ್ನು ಅಭ್ಯಾಸ ಮಾಡುವ ಶಿಷ್ಯರೂ,ಉಪದೇಶಿಸಿರುವ ಗುರುಗಳು ನಿರ್ವಿಕಾರ ಚಿತ್ತದಿಂದ ವಾಸಮಾಡುವರೋ ಅಂತಹ ಸ್ಥಾನ ವಿಶೇಷವು ಮತ್ತು ಶಿವಯೋಗಮಂದಿರ”ವೆಂದು ಹೇಳಲ್ಪಡುವುದು.
ಇಂಥಃ ಘನೋದ್ದೇಶವನ್ನಿರಿಸಿಕೊಂಡು ಸ್ಥಾಪಿಸಲ್ಪಟ್ಟಿರುವ ಈ ಶಿವಯೋಗಮಂದಿರ ಮತ್ತು ಅದರ ಕರ‍್ಯಕಲಾಪಗಳು ಪರಮಪೂಜ್ಯ .ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳವರ (೧೮೬೭-೧೯೩೦) ಅವಿಶ್ರಾಂತ ಪರಿಶ್ರಮದ ಫಲಶೃತಿ ಯಾಗಿರುತ್ತವೆ.
ಇದು ವೀರಶೈವ(ಲಿಂಗಾಯತ)ರಿಗಾಗಿ, ವೀರಶೈವ(ಲಿಂಗಾಯತ) ಮಠಾಧಿಪತಿಗಳಾಗಲಿರುವ ವಟು-ಸಾಧಕರಿಗೆ ಶಿಕ್ಷಣ ತರಬೇತಿಯ ಗುರುಕುಲವಾಗಿರುತ್ತದೆ.
ವೀರಶೈವ(ಲಿಂಗಾಯತ) ಧರ್ಮವು ತಾತ್ವಿಕ ಧರ್ಮ, ತತ್ವ ನಿಷ್ಠವಾದುದು ;ವ್ಯಕ್ತಿ ನಿಷ್ಠ ಧರ್ಮವಲ್ಲ..ಯಾವುದೇ ಜಾತಿಯವನಾಗಲಿ,ವರ್ಣ-ವರ್ಗದವನಾಗಲಿ ಶ್ರೀ ಗುರುವಿನಿಂದ ಶಿವದೀಕ್ಷೆಯನ್ನು ಪಡೆದು ಲಿಂಗಧಾರಿಯಾಗಲು ಅರ್ಹನಿರುತ್ತಾನೆ.ಸಂಸ್ಕಾರವೇ ಮುಖ್ಯವಾದ ಧರ್ಮವಿದು.ಸಾಧನೆಯೇ ಮುಖ್ಯವಾದ ಧರ್ಮವಿದು..ಧರ್ಮದ ತತ್ವ ಮತ್ತು ಸಂಪ್ರದಾಯಗಳ ಮೂಲಕ ಧರ್ಮ ಗುರುಗಳಾಗುವವರಿಗೆ ವಿದ್ಯಾ,ವಿರಕ್ತಿ ಮತ್ತು ಇಂದ್ರಿಯ ನಿಗ್ರಹಗಳ ಮೂಲಕ ಶಿಕ್ಷಣ ಕೊಟ್ಟು ಭವ್ಯ ಉದ್ದೇಶಕ್ಕೆ ಹಾಗೂ ಉತ್ತಮ ಆರ‍್ಶಗಳನ್ನು ಸಫಲಗೊಳಿಸುವದಕ್ಕಾಗಿ ಶ್ರೀ ಶಿವಯೋಗಮಂದಿರ ಸ್ಥಾಪಿತವಾಗಿದೆ.
ಈ ಮಹಾಮಂದಿರ ನಿರ‍್ಮಾಣಕ್ಕೆ ಅನೇಕ ಮಹಾವ್ಯಕ್ತಿಗಳ ದಿವ್ಯಶಕ್ತಿ ಕಾರಣವಾಗಿರುತ್ತದೆ. ಶಂಭುಲಿಂಗನಬೆಟ್ಟದಲ್ಲಿ ಯಳಂದೂರ ಬಸವಲಿಂಗಸ್ವಾಮಿಗಳು ಶಿವಯೋಗಮಂದಿರ ನಿರ‍್ಮಾಣದ ಬೀಜಾರೋಪಣಗೈದಿದ್ದರು . ಹಾನಗಲ್ಲ ವಿರಕ್ತ ಮಠದಲ್ಲಿ ಬಾಗಲಕೋಟೆಯ ವೈರಾಗ್ಯ ಮಲ್ಲಣಾರ್ಯರು ಆ ಬೀಜಕ್ಕೆ ನೀರೆರದರು . ಪುನಃ ಬಾಗಲಕೋಟೆಯ ನಾಲ್ಕನೆಯ ಅಖಿಲ ಭಾರತ ವೀರಶೈವ ಮಹಾ ಅಧಿವೇಶನದಲ್ಲಿ ಅಂಕುರವೊಡೆಯಿತು . ಬೀಳೂರು ಗುರುಬಸವರ ವೈರಾಗ್ಯ ಬಲವೆಂಬ ಗೊಬ್ಬರ ಹಾಕಲಾಯಿತು . ಇಲಕಲ್ಲಿನ ಶ್ರೀ ವಿಜಯಮಹಾಂತರು ತೋರಿದ ತಾಣದಲ್ಲಿ ಕಾರಣಿಕ ಯುಗಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಆ ಸಸಿಯನ್ನು ಸ್ಥಾಪಿಸಿದರು. ಹಾವೇರಿ ಶಿವಬಸವ ಸ್ವಾಮಿಗಳು ಬೆಳಸಿ ಸ್ಥಿರವಾಗಿ ಉಳಿಯುವಂತೆ ಶ್ರಮಿಸಿದರು ..
ಶ್ರೀ ಮದ್ವೀರಶೈವ ಶಿವಯೋಗ ಮಂದಿರವು ಶ್ರೀ ಮನೃಪ ಶಾಲಿವಾಹನ ಶಕೆ ೧೮೩೦ ನೇ ಕೀಲಕ ನಾಮ ಸಂವತ್ಸರದ ಮಾಘ ಮಾಸ ಕೃಷ್ಣಪಕ್ಷ ಸಪ್ತಮಿ ಮಿತಿಗೆ , ಸರಿಯಾದ ಸನ್ ೧೯೦೯ ನೆಯ ಫೆಬ್ರುವರಿ ತಿಂಗಳು ತಾರೀಖು ೭ ರಲ್ಲಿ ವಿದ್ಯುಕ್ತವಾಗಿ ಸ್ಥಾಪನೆಯಾಯಿತು.
ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‌ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ವಚನ ಸಾಹಿತ್ಯ ಗ್ರಂಥಗಳ ಸಂಗ್ರಹ, ಸಂಸ್ಕೃತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ ಯೋಗ ಮತ್ತು ಸಂಗೀತ ತರಬೇತಿ ಇವೆಲ್ಲವೂ ಶ್ರೀಮದ್‌ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು.
ಫೆಬ್ರುವರಿ ೨೦೨೨ ಸಂಚಿಕೆಯ ಲೇಖನಗಳ ವಿವರ
- 😐 “ ಮಾನವಾ ! ನೀನಾರೋ ? ಕಾಯ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ಶಿವಯೋಗಮಂದಿರ ಸೃಷ್ಟಿ – ದೃಷ್ಟಿ – ಶ್ರೀ ಜ.ಚ. ನಿಡುಮಾಮಿಡಿ ಶ್ರೀಶೈಲ ಸಂಸ್ಥಾನ (೧೯೫೯)
- ಶಿವಯೋಗ ಮಂದಿರ ಸಂದರ್ಶನ ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ
- ನಿರೀಕ್ಷಣೆ – ಶ್ರೀ ನಿ. ಪ್ರ. ನೀಲಕಂಠ ಸ್ವಾಮಿಗಳು, ಚಿಕ್ಕೋಡಿ
- ಬಾಳಲಿ.- ಡಾ.ಚೆನ್ನಮಲ್ಲ ಸ್ವಾಮೀಜಿ ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ
- ನಿಸರ್ಗ ಸೌಂದರ್ಯ-ಡಿ. ಎಸ್. ಕರ್ಕಿ
- ಸದಾಶಿವ”ನ ಐದು ಸೃಷ್ಟಿಗಳು ಶ್ರೀ ಬುದ್ಧಯ್ಯನವರು, ಪುರಾಣಿಕ
- ಮಂಗಳ ಮೂರ್ತಿ ರೂಪ ಶ್ರೀ ಸ್ವರೂಪ ರಥ ಲೇಖಕರು : ಪೂಜ್ಯ ಸದಾಶಿವ ದೇವರು ವಳಬಳ್ಳಾರಿ
- ಹೃದ್ಗತ ಅಭಿಪ್ರಾಯಗಳು
ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ
ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ
ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ
ಪೂಜ್ಯ ನಾಗನಾಥ ದೇವರು ಸೋಮಸಮುದ್ರ
ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ
ಅವರಿಗೆ ತುಂಬು ಹೃದಯದ ಕೃತಜ್ಞತೆಗಳು
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ