ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯರಿಗೆ ನನ್ನ ನಮಸ್ಕಾರಗಳು.
ಕಳೆದ 22 ನವಂಬರ 2021 ರಂದು ಪೂಜ್ಯ ಜಗದ್ಗುರು ಶ್ರೀ ಸಂಗನಬಸವ ಮಹಾಸ್ವಾಮಿಗಳು ಶಿವನಲ್ಲಿ ಒಂದಾದದಿನ. ಪೂಜ್ಯರ ಭೌತಿಕ ಲಿಂಗದೇಹ ಅಗಲುವಿಕೆಯಿಂದ ಲಕ್ಷಾಂತರ ಭಕ್ತರ ಹೃದಯಗಳು ನೋವು ಹತಾಶೆಗಳಿಂದ ಕನಲಿದವು.
ನವಂಬರ ೧೦ ರವರೆಗೆ ಸತತ ಎರಡುತಿಂಗಳ ಪರ್ಯಂತ ಹಾಲಕೆರೆಯ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀಗಳ ಪಟ್ಟಾಧಿಕಾರ ಮತ್ತು ಚಿನ್ಮಯ ದೀಕ್ಷೆಗಳ ಎಲ್ಲ ಕಾರ್ಯಗಳಲ್ಲಿ ಪಾಲ್ಗೊಂಡು, ಸಲಹೆ ಸೂಚನೆಗಳನ್ನು ನೀಡಿ, ಭಕ್ತರ ಉತ್ಸಾಹ ಗಳನ್ನು ಕಣ್ತುಂಬ ತುಂಬಿಕೊಂಡು, ಆನಂದ ಭಾಷ್ಪಗಳನ್ನು ಸುರಿಸಿದ್ದು ಪೂಜ್ಯರ ಮಮತೆಯ ಹೃದಯಕ್ಕೆ ಸಾಕ್ಷಿಯಾಗಿತ್ತು. ಅವರ ದೃಢ ನಿಶ್ಚಯ ಪೂರ್ಣಗೊಳ್ಳುವವರೆಗೂ ಶಿವನ ಕರೆಯನ್ನು ನಿಲ್ಲಿಸಿಕೊಂಡಂತೆ ಜರುಗಿದ ಅಭೂತಪೂರ್ವ ಪಟ್ಟಾಧಿಕಾರ ಕಾರ್ಯಕ್ರಮ ಪವಾಡಸದೃಶಮಯವಾಯಿತು .
ಪೂಜ್ಯ ಜಗದ್ಗುರುಗಳು ತಮ್ಮ ಎಲ್ಲ ಆಶೀರ್ವಚನಗಳ ಆರಂಭಕ್ಕೆ ಬಸವೇಶ್ವರರ ಒಂದೇ ಒಂದು ವಚನದಿಂದ ಪ್ರಾರಂಭಿಸುತ್ತಿದ್ದುದನ್ನು ನೆನಪಿಸಿಕೊಳ್ಳುತ್ತಿರುವೆ.
“ಹರನೀವ ಕಾಲಕ್ಕೆ ಸಿರಿಯು ಬೆನ್ನಲ್ಲಿ ಬರ್ಕು .
ಹರಿದು ಹೆದ್ದೊರೆಯು ,ಕೆರೆ ತು೦ಬಿದ೦ತಯ್ಯಾ .
ನೆರೆಯದು ವಸ್ತು ನೆರೆವುದು ನೋಡಯ್ಯಾ
ಅರಸು ಪರಿವಾರ ಕೈವಾರ ನೋಡಯ್ಯಾ.
ಪರಮ ನಿರಂಜನನ ಮರೆವ ಕಾಲಕ್ಕೆ
ತುಂಬಿದ ಹರವಿಯ ಕಲ್ಲು ಕೊಂಡಂತೆ , ಕೂಡಲಸಂಗಮದೇವಾ.”
ಭಗವಂತನು ಕೊಡುವ ಕಾಲಕ್ಕೆ ಸಂಪತ್ತು ಬೆನ್ನುಹತ್ತಿ ಬರುತ್ತದೆ ; ಹೆದ್ದೊರೆಯೆ ಹರಿದು ಕೆರೆ ತುಂಬಿದಂತೆ ಲಭಿಸದೇ ಇರುವ ವಸ್ತುಗಳು ಲಭಿಸುತ್ತವೆ . ಅರಸು ಮನ್ನಣೆ , ಪರಿವಾರ , ಕೈವಾರ ಈ ಎಲ್ಲವೂ ದೊರಕುತ್ತವೆ . ಆದರೆ ಆ ಪರಮನಿರಂಜನ ನಮ್ಮನ್ನು ಮರೆತರೆ ಅಥವಾ ನಾವೇನಾದರೂ ಅವನನ್ನು ಮರೆತರೆ , ತುಂಬಿದ ಮಣ್ಣಿನ ಕೊಡಕ್ಕೆ ಕಲ್ಲೇಟು ಬಿದ್ದು ಅದು ಒಡೆದು ಹೋದಂತೆ ಆಗುತ್ತದೆ . ಭಗವಂತನ ಕೃಪೆಯನ್ನು ಕುರಿತ ಈ ಶ್ರದ್ಧೆ , ಸ್ವಪ್ರಯತ್ನದಿಂದ ವಿಮುಖಗೊಳಿಸುವುದಿಲ್ಲ ; ಸಾಧನೆಯಲ್ಲಿರುವ ನಿಷ್ಠೆಯನ್ನು ಬಲಗೊಳಿಸುತ್ತಿದೆಯೆಂದು ಭಾವಿಸಬೇಕು.
ಪೂಜ್ಯರು ನಮಗೆ ನೀಡಿ ಹೋದ ಸಂದೇಶ !!!.

ಪೂಜ್ಯರ ಅಂತಃಕರುಣೆಯ ಪವಿತ್ರಾತ್ಮ ದಲ್ಲಿ ಅವರು ಸಂದೇಶ ನೀಡಿದಂತೆ-” ನಮ್ಮ ಸಾಧನೆಯಲ್ಲಿರುವ , ನಮ್ಮ ನಿಷ್ಠೆಯನ್ನು ಬಲಗೊಳಿಸಲಿ “ಎಂದು ಪ್ರಾರ್ಥಿಸಿಕೊಳ್ಳುವೆ
ಈ ಸಂಚಿಕೆಯ ಲೇಖನಗಳ ವಿವರ
- | “ ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಭಾಗ-೮ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳ- ಗದಗ
- , ಅಕ್ಕಿಆಲೂರು
- . ಲೇಖಕರು: ಶ್ರೀ ಚನ್ನಬಸವ ಸೋಮನಾಥಶಾಸ್ತ್ರೀ ಹಿರೇಮಠ ಇಟಗಿ ಗ್ರಂಥ ಋಣ: ಸುಕುಮಾರ ದೀಪ್ತಿ ಸಂಪಾದಕರು : ಪೂಜ್ಯ ಸದ್ಗುರು ಅಭಿನವ ಸಿದ್ಧಾರೂಡ ಸ್ವಾಮಿಗಳು ಹುಬ್ಬಳ್ಳಿ -ವಿಜಯಪುರ
ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ
ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ
ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ
ಪೂಜ್ಯ ನಾಗನಾಥ ದೇವರು ಸೋಮಸಮುದ್ರ
ಅವರಿಗೆ ತುಂಬು ಹೃದಯದ ಕೃತಜ್ಞತೆಗಳು
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ