ಕರ್ನಾಟಕ ಏಕೀಕರಣಕ್ಕೆ ಅಗೋಚರ ಮತ್ತು ಅಪೂರ್ವ ಕೊಡುಗೆ
ಪೂಜ್ಯ ಲಿಂಗೈಕ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ಸಾಮಾಜಿಕ ಸಂಘಟನೆ
ಸಹೃದಯರಿಗೆ ನನ್ನ ನಮಸ್ಕಾರಗಳು
ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು
ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಸಂಗ್ರಹಿಸುತ್ತಿರುವಾಗ ಒಂದು ಸಂಗತಿ ಗೋಚರಿಸಿತು.ಇಲ್ಲಿಯವರೆಗೆ ಇತಿಹಾಸದಲ್ಲಿ ದಾಖಲಾಗದ ಅಥವಾ ಪ್ರತಿ ಕನ್ನಡ ರಾಜ್ಯೊತ್ಸವದಲ್ಲಿ ಸ್ಮರಣೆಗೊಳ್ಳದ ಕರ್ನಾಟಕದ ಅಪೂರ್ವ ಯೋಗಿಗಳಾದ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಹೆಸರನ್ನು ಕಂಡು ಕೌತುಕಗೊಂಡೆ. ವಾರ್ತಾ ಭಾರತಿ ೨೦೧೭ ರ ಪತ್ರಿಕೆಯಲ್ಲಿ “Unification Of Karnatak” ಎಂಬ ತಲೆಬರಹದ ಅಡಿಯಲ್ಲಿ ಶ್ರೀ ಬಿ.ಎಮ್ ಚಂದ್ರಶೇಖರ್ ಅವರು ಈ ಕೆಳಗಿನಂತೆ ದಾಖಲಿಸಿರುವರು
“……………………
Cultural Renaissance
The impact of the British rule was the cultural awakening in the different regions of India. Karnataka, like other states of India, witnessed the cultural Renaissance. European scholars particularly missionaries as well as Kannada stalwarts promoted the Kannada Renaissance. Kannada newspapers also accelerated the cultural awakening. One may recall the services of those now no more with us, Prof. B. M. Sreekantaiah, Sri Hanagal Kumaraswamy, Hardekar Manjappa, Aluru Venkata Rao and many other literary and social leaders who worked with devotion and zeal for the cause of Kannada. Men of letters thus provided the necessary emotional and philosophical background of the agitation for the ‘Karnataka Ekikarana’, which was taken up and was organized by politicians like S. Nijalingappa and Kengal. Hanumantaiah and many others………….”
ಕರ್ನಾಟಕದ ಏಕೀಕರಣಕ್ಕೆ ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳವರ ಕೊಡುಗೆ ಎನ್ನುವ ವಿಷಯದ ಕುರಿತು ಕೂತೂಹಲಗೊಂಡೆ.ಪೂಜ್ಯರ ಕುರಿತು ಪ್ರಕಟವಾದ ಹಲವು ಪುಸ್ತಕಗಳಲ್ಲಿ ಹುಡುಕಾಡಿದೆ.ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳವರ ಜೀವಿತಾವಧಿಯ ಕಾಲಘಟ್ಟದ ಕರ್ನಾಟಕದ ವಸ್ತುಸ್ಥಿತಿ, ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳವರು ನಿರ್ಧಿಷ್ಟ ಬಹುಸಂಖ್ಯಾತ ಧರ್ಮೀಯರನ್ನು ಸಾಂಸ್ಕೃತಿಕ ವಾಗಿ ಮತ್ತು ಧಾರ್ಮಿಕವಾಗಿ ಒಂದುಗೂಡಿಸಿದ ಕ್ರಾಂತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಸಮರ್ಪಕ ಉತ್ತರ ನನಗೆ ದೊರಕಿತು,ನಿಖರ ಮಾಹಿತಿಯೂ ನನಗೆ ದೊರೆಯಿತು.
ಕರ್ನಾಟಕ ಮತ್ತು ಹೊರರಾಜ್ಯ ಗಳಲ್ಲಿ ಹರಿದು ಹಂಚಿಹೋಗಿದ್ದ ವೀರಶೈವ-ಲಿಂಗಾಯತ ಧರ್ಮದ ೯೯ ಒಳಪಂಗಡಗಳನ್ನು ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳವರು ಅಖಿಲ ಭಾರತ ವೀರಶೈವ ಮಹಾಸಭಾ ದ ಮೂಲಕ ಸಂಘಟಿಸಿದ್ದು ಕರ್ನಾಟಕದ ಏಕೀಕರಣದ ಹೋರಾಟಕ್ಕೆ ಆನೆಬಲ ತಂದುಕೊಟ್ಟಿತು.
೧೯೦೪ ರಿಂದ ಪೂಜ್ಯರು ಲಿಂಗೈಕ್ಯ ರಾದ ೧೯೩೦ ರವರೆಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಳಲ್ಲಿ ನಡೆದ ೧೦ ಸಮ್ಮೇಳನಗಳು ಮತ್ತು ೧೯೩೦ ರಿಂದ ೧೯೫೫ ರವರೆಗೆ ನಡೆದ ೬ ಅಖಿಲ ಭಾರತ ವೀರಶೈವ ಮಹಾಸಭಾ ಸಮ್ಮೇಳನಗಳು ಕರ್ನಾಟಕದ ಏಕೀಕರಣಕ್ಕೆ ತನ್ನದೇಆದ ಶಕ್ತಿಯನ್ನು ತುಂಬಿದ್ದು ಸುಳ್ಳಲ್ಲ.
ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳವರು ೧೯೦೯ ರಲ್ಲಿ ಸ್ಥಾಪಿಸಿದ ಶ್ರೀ ಮದ್ವೀರಶೈವ ಶಿವಯೋಗಮಂದಿರ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿಯನ್ನೇ ಮಾಡಿತು. ಅಲ್ಲಿಂದ ಶಿಕ್ಷಣ ಪಡೆದ ಶ್ರೀಗಳು ಗಡಿ ಪ್ರದೇಶಗಳಾದ ಬೆಳಗಾವಿ ರುದ್ರಾಕ್ಷಿಮಠ ಮತ್ತು ಭಾಲ್ಕಿಯ ಹಿರೇಮಠ ಮತ್ತು ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳವರು ಸ್ಥಾಪಿಸಿದ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘಗಳು ಸ್ಥಾಪಿಸಿದ ವಿದ್ಯಾಲಯಗಳು ಮತ್ತು ಉಚಿತ ಪ್ರಸಾದ ನಿಲಯಗಳು ಏಕೀಕರಣ ಹೋರಾಟಕ್ಕೆ ಜೀವ ತುಂಬಿದವು.
ಜೊತೆಗೆ ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳವರಿಂದ ಪ್ರೇರಣೆಗೊಂಡ ರಾಜ್ಯದ ಹಲವು ಶಿಕ್ಷಣ ಸಂಸ್ಥೆಗಳು ಹಾಗು ಗದುಗಿನ ವೀರೇಶ್ವರ ಪುಣ್ಯಾಶ್ರಮ ರಾಜ್ಯ ಮತ್ತು ಹೊರ ರಾಜ್ಯದ ದ ವಿವಿಧ ಸರ್ವಧರ್ಮದವರ ಮತ್ತು ದಿವ್ಯಾಂಗದವರಿಗೆ ಉಚಿತ ವಸತಿ,ಪ್ರಸಾದ ಮತ್ತು ಶಿಕ್ಷಣದ ಕ್ರಾಂತಿ ಏಕೀಕರಣಕ್ಕೆ ಸಂಗೀತ ಮತ್ತು ಕಲೆಯ ಸಂಸೃತಿಯ ರಕ್ಷಣೆಯ ಮೂಲಕ ಬಲವನ್ನು ನೀಡಿತು.
ಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳವರು ಕರ್ನಾಟಕ ಏಕೀಕರಣ ಎಂಬ ವಿಷಯದ ಮೇಲೆ ಹೋರಾಟ ಮಾಡದೇ ಇರಬಹದು .ಆದರೆ ಒಂದು ಕರ್ನಾಟಕದ ಬಹುಸಂಖ್ಯಾತ ಸಮುದಾಯದ ಏಕಿಕರಣಕ್ಕೆ ಮಾಡಿದ ಹೋರಾಟ ಮತ್ತು ಅದರ ಫಲಶೃತಿಯ ಪರಿಣಾಮಗಳು ೧೯೫೬ರಲ್ಲಿ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆಗೆ ಅಂತರ್ಗಾಮಿಯಾಗಿ ಚೈತನ್ಯವನ್ನು ತುಂಬಿತು ಎನ್ನುವದರಲ್ಲಿ ಎರಡು ಮಾತಿಲ್ಲ.
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು. “ಸುಕುಮಾರ” ಬ್ಲಾಗ
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
https://journal.shrikumar.com