ಸಂಪಾದಕೀಯ:
ಶ್ರೀಕಂಠ.ಚೌಕೀಮಠ.
ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ
ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,
ಶ್ರೀಕುಮಾರ ತರಂಗಿಣಿ ,ವಿಶ್ವಾದ್ಯಂತ ೧೫೦೦೦ ಓದುಗರನ್ನು ಹೊಂದುವದರ ಜೊತೆಗೆ ,ವರ್ಣರಂಜಿತ ಶೋಭೆಯೊಂದಿಗೆ ತಮ್ಮ ಅಕ್ಷಿಪಟಲದ ಮುಂದೆ ಅನಾವರಣಗೊಳ್ಳುತ್ತಿರುವದು ಅತ್ಯಂತ ಹರ್ಷವನ್ನುಂಟು ಮಾಡುತ್ತಿದೆ.
ಹೊಸ ರೂಪದಲ್ಲಿ “ಶ್ರೀಕುಮಾರ ತರಂಗಿಣಿ”ಬ್ಲಾಗ್ ಅನಾವರಣ ವನ್ನು
ಹಂಪಿಹೇಮಕೂಟ ಶೂನ್ಯಸಿಂಹಾಸನಾಧೀಶ್ವರ ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳವರು
ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ-ಬಳ್ಳಾರಿ-ಹಾಲಕೆರೆ ಅವರ ಅಮೃತಹಸ್ತದಿಂದ ಜರಗಿತು.
ಶ್ರೀಕುಮಾರೇಶ್ವರರ ಶಿಲ್ಪಸನ್ನಿಧಿಯಲ್ಲಿ, ನೂತನ ಶಿಲಾ ಮಠ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠ ಹೊಸಪೇಟೆ
ಜರುಗಿದ ಈ ಕಾರ್ಯಕ್ರಮದಲ್ಲಿ
ಪೂಜ್ಯ. ಮ.ನಿ.ಪ್ರ.ಕೊಟ್ಟೂರು ಮಹಾಸ್ವಾಮಿಗಳು ಶ್ರೀ ಸಂಗನಬಸವೇಶ್ವರ ವಿರಕ್ತಮಠ ದರೂರು.
ಪೂಜ್ಯಶ್ರೀ ನಿರಂಜನ ಪ್ರಭು ದೇಶಿಕರು ಶ್ರೀ ಮಠ ಕುರುಗೋಡು
ಪೂಜ್ಯಶ್ರೀ ಸಿದ್ದಲಿಂಗ ದೇಶಿಕರು ಸೋಮಸಮುದ್ರ
ಪೂಜ್ಯಶ್ರೀ ಮರಿಕೊಟ್ಟೂರು ದೇಶಿಕರು ಶ್ರೀಧರಗಡ್ಡೆ
ಪೂಜ್ಯ ಶ್ರೀ ಸಿದ್ದೇಶ್ವರ ದೇವರು ಬೂದಗುಂಪ .
ಪೂಜ್ಯಶ್ರೀ ವಿಶ್ವೇಶ್ವರ ದೇವರು ಅಡನೂರು. ಪೂಜ್ಯರು ಭಾಗವಹಿಸಿದ್ದರು
ಹೊಸರೂಪ ಮತ್ತು ಓದುಗರ ಪ್ರೋತ್ಸಾಹಗಳು ಶ್ರೀಕುಮಾರ ತರಂಗಿಣಿ ಯನ್ನು ಅರ್ಥಪೂರ್ಣವಾಗಿ ಹೊರಬರಲು ಸಹಾಯಕವಾಗಿವೆ.
ಶ್ರೀಕುಮಾರ ತರಂಗಿಣಿ ೨೦೨೪ ಜನೆವರಿ ಸಂಚಿಕೆಯ ಲೇಖನಗಳ ವಿವರ
- ಕಾವ್ಯ : “ಯೋಗಿವರೇಣ್ಯ ನಾನಪರಾಧಿ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩೧ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ಯೋಗ್ಯ ಗುರುವಿನ ಭಾಗ್ಯ “ಕಾರುಣಿಕ ಕುಮಾರಯೋಗಿ “ ಧಾರವಾಹಿ : ಲೇಖಕರು ಜ.ಚ.ನಿ.
- ಭಕ್ತಿ-ಮುಕ್ತಿ ;ಲೇಖಕರು :ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೊಂಟದಾರ್ಯಮಠ ಗದಗ.
- ಪದಾರ್ಥ ಮತ್ತು ಪ್ರಸಾದ:-ಲೇಖಕರು:- ಶ್ರೀ ಸಿದ್ದೇಶ್ವರ ದೇಶಿಕರು ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಶಾಖಾಮಠ ಬೂದಗುಂಪ
ಶ್ರೀಕುಮಾರ ತರಂಗಿಣಿ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.
-ಶ್ರೀಕಂಠ.ಚೌಕೀಮಠ.
ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ