General

ಕ್ಯಾಸನೂರಿ(ಖೇಚರಿಪುರ)ನ ಲಿಂ. ಶ್ರೀ ಗುರುಬಸವ ಶಿವಾಚಾರ್ಯರ ಕ್ರಿಯಾ ಸಮಾಧಿಯ  ಜಾಗೃತ ಸ್ಥಳವನ್ನು ನೋಡುವ ಭಾಗ್ಯ ನನಗೊದಿಗೆ ಬಂದದ್ದು ದಿ.೧೪-೧೦-೨೦೨೪ ರಂದು ಕೆಳದಿಯ ಪಂಚಮಠಗಳಲ್ಲೊಂದಾದ ಗೊಗ್ಗಿಹಳ್ಳಿ ಹಿರೇಮಠದ ಕಾರ್ಯಕ್ರಮದಲ್ಲಿ.

ಪೂಜ್ಯ ಶ್ರೀ ಮ.ನಿ.ಪ್ರ. ಶಿವಬಸವ ಮಹಾಸ್ವಾಮಿಗಳು ಅಕ್ಕಿಆಲೂರು,ಪೂಜ್ಯಶ್ರೀ ಮ.ನಿ.ಪ್ರ. ಚನ್ನಬಸವ ಮಹಾಸ್ವಾಮಿಗಳು  ಮೂಲಗದ್ದೆ ಮತ್ತು ಪೂಜ್ಯ ಷ.ಬ್ರ.ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರು ಕ್ಯಾಸನೂರು ಅವರುಗಳ ಅಂಥಕರುಣೆಯ ಕರೆ ನನಗೆ  ಕ್ಯಾಸನೂರು ಶ್ರೀಮಠದ ದರ್ಶನದ ಭಾಗ್ಯವನ್ನೊದಗಿಸಿಕೊಟ್ಟಿತ್ತು.

ಶ್ರೀಶೈಲ ಪೀಠದ ಶಾಖಾಮಠವಾದ ಕ್ಯಾಸನೂರಿನ ಸಂಸ್ಥಾನ ಹಿರೇಮಠ  ಆವರಣವನ್ನು ಪ್ರವೇಶಿಸುತ್ತಿದ್ದಂತೆ ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಶ್ರೀ ಮಠದ   ಭೂದೃಶ್ಯ ವಿನ್ಯಾಸ ( landscape ).ಕರಾರುವಕ್ಕಾದ  ಭೂಮಿಯ ಸದ್ಬಳಕೆ.

ಮುಖ್ಯ ಪ್ರವೇಶ ದ್ವಾರದಿಂದ  ಲಿಂ.ಗುರುಬಸವ ಶಿವಾಚಾರ್ಯರರ ಗದ್ದುಗೆಯ ಸುಂದರ ಮಂದಿರ, ಶ್ರೀ ಮೂಕೇಶ್ವರ ಸ್ವಾಮಿಯವರ ಗದ್ದುಗೆ ಮಂದಿರ ಮತ್ತು ಶಕ್ತಿ ದೇವತೆ ಚೌಡೇಶ್ವರಿ ದೇವಿಯ ಮಂದಿರಗಳ ರಚನೆ ಮತ್ತು  ಮುಖ್ಯ ದ್ವಾರ ಮತ್ತು ಮಂದಿರಗಳ ಮಧ್ಯದ ವಿಶಾಲ ಜಾಗ ವಿಶೇಷವೆನಿಸಿತು .ಈ ಮಧ್ಯದ ವಿಶಾಲ ಜಾಗದಲ್ಲಿ ನಿರ್ಮಿಸಿರುವ ಬಯಲು ಸಭಾ ವೇದಿಕೆ  ಮಠದಲ್ಲಿ ಜರಗುವ  ಧಾರ್ಮಿಕ ಸತ್ಸಂಗಗಳನ್ನು ಸಾಕ್ಷೀಕರಿಸಿತು.

ಶ್ರೀ ಮಠದ   ಅಧ್ಯಾತ್ಮ ಕೇಂದ್ರದ ಭೂದೃಶ್ಯ ವಿನ್ಯಾಸವು (spiritual center landscape design) ಶಾಂತಿ, ಪ್ರಾಕೃತಿಕ ಸೌಂದರ್ಯ, ಮತ್ತು ಅಧ್ಯಾತ್ಮಿಕತೆಯ ಶ್ರೇಷ್ಠತೆಯನ್ನು ಸಾರುವ ಎಲ್ಲ ಅಂಶಗಳನ್ನು ಹೊಂದಿದ್ದು ಸ್ವಚ್ಛ,ನಿರ್ಮಲ ಮತ್ತು ಪ್ರಶಾಂತ ವಾತಾವರಣವನ್ನು ಹೊಂದಿದೆ.

೧೮೯೪ ರಲ್ಲಿ ಪರಮಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು ಲಿಂಗೈಕ್ಯ ರಾದ ಮೇಲೆ ಗುರುಗಳ ಅಗಲಿಕೆಯ ನೋವಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಅನುಷ್ಠಾನ ಕ್ಕೆ ಆಯ್ಕೆ ಮಾಡಿಕೊಂಡ ಐತಿಹಾಸಿಕ ಸ್ಥಳ ಕ್ಯಾಸನೂರು ಶ್ರೀ ಗುರು ಬಸವ ಶಿವಯೋಗಿಗಳ ಶ್ರೀ ಮಠ.

ಈ ಕ್ಷೇತ್ರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರನ್ನು  ಸಮಾಜ ಸೇವೆಯತ್ತ ಸೆಳೆದಕೊಂಡ , ಸಮಾಜ ಸೇವೆಯಲ್ಲಿಯೇ ಅನುಷ್ಠಾನ ದ ಶಕ್ತಿಯನ್ನು ತೋರಿಸಿಕೊಟ್ಟ ವಿಶೇಷ ನೆಲ. ಶ್ರೀ ಮಠದ  ಸದ್ಯದ  ಪೀಠಾಧಿಪತಿ ಗಳಾದ ಪೂಜ್ಯ ಶ್ರೀ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಕರ್ತತ್ವ ಶಕ್ತಿಯ ಪ್ರತಿಫಲವಾಗಿ ಶ್ರೀ ಮಠದ ಪರಿಸರ ವಿಶೇಷ ವಾಗಿ ವಿನ್ಯಾಸ ಗೊಂಡಿದೆ. ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರ ಅನುಷ್ಠಾನ ದ ಸ್ಥಳವಂತೂ  ಕೆಂಪು ಚಿರಿ ಕಲ್ಲುಗಳಿಂದ ( ಲ್ಯಾಟರೈಟ್ ಸ್ಟೋನ್)ಆಶ್ರಮ ವಿನ್ಯಾಸ ದಲ್ಲಿ ರೂಪಗೊಂಡಿದ್ದು ನೋಡುಗರನ್ನು 18ನೆಯ ಶತಮಾನದ ಅಂತಿಮ ವರ್ಷಗಳ ಚಿತ್ರಣವನ್ನು ಕಟ್ಟಿಕೊಡುವ ದರ ಜೊತೆಗೆ ಅಲ್ಲಿನ ನಿರ್ಮಲ ಮತ್ತು ಪ್ರಶಾಂತ ವಾತಾವರಣ – ಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರ “ಇರುವು”ವನ್ನು  ಸಾಕ್ಷೀಕರಿಸುತ್ತದೆ.

ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳ ಜೊತೆಗೆ ಅವರ ಶಿಷ್ಯರಾದ ಪೂಜ್ಯ ಹಾಲಯ್ಯ ( ಹಾನಗಲ್ಲ ಶ್ರೀ ಕುಮಾರೇಶ್ವರರ ಪೂರ್ವಾಶ್ರಮದ ಹೆಸರು ) ಲೋಕಸಂಚಾರ ಮಾಡುತ್ತ  ಅಣ್ಣಿಗೇರಿಯ ತೊಂಟದಾರ್ಯ ಶಾಖಾ ಮಠದಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳವರಿಗೆ ದೇಹಲಾಸ್ಯಯುಂಟಾಗುತ್ತದೆ.ದೇಹಾಲಸ್ಯ ಉಲ್ಭಣಿಸಿ ಅನೀರಿಕ್ಷಿತವಾಗಿ  ಶ್ರೀ ಬಸವಲಿಂಗ ಶಿವಯೋಗಿಗಳು ಶಾಲಿವಾಹನ ಶಖೆ ೧೮೧೫ ಮತ್ತು ವಿಕ್ರಮ ಸಂವಸ್ಥರ ೧೯೫೦ ಪುಷ್ಯ ಶು.೫ (  12-01-1894)  ರಂದು  ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು ಲಿಂಗೈಕ್ಯರಾಗುತ್ತಾರೆ. ಕ್ರಿಯಾ ಸಮಾಧಿಯ ವಿಧಿ ವಿಧಾನಗಳನ್ನು ಮುಗಿಸಿದ ಮೇಲೆ ಗುರುಗಳ ಅಗಲಿಕೆಯ ನೋವಿನಲ್ಲಿ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ಅನುಷ್ಠಾನಕ್ಕೆ ಆಯ್ಕೆ ಮಾಡಿಕೊಂಡ ಐತಿಹಾಸಿಕ ಸ್ಥಳ ಕ್ಯಾಸನೂರು ಶ್ರೀ ಗುರು ಬಸವ ಶಿವಯೋಗಿಗಳ ಶ್ರೀ ಮಠ.

ನನಗೊಂದು ಕೂತೂಹಲವಿತ್ತು ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರು ತಮ್ಮ ಗುರುಗಳನ್ನು ಕಳೆದುಕೊಂಡಿದ್ದು ಬಯಲುಸೀಮೆಯ ಗದಗ ಜಿಲ್ಲೆಯ ಅಣ್ಣಿಗೇರಿ ಎಂಬ ಪುಟ್ಟ ಪಟ್ಟಣದಲ್ಲಿ, ಗುರುಗಳ ಅಗಲಿಕೆಯ ನೋವು ಮರೆಯಲು ಅನುಷ್ಠಾನಕ್ಕೆ ಹೋಗಿದ್ದು ಮಲೆನಾಡು ಪ್ರದೇಶಕ್ಕೆ ೧೬೦ ಕಿ.ಮಿ. ದೂರದ ಸೊರಬ ತಾಳೂಕಿನ ಕ್ಯಾಸನೂರು ಎಂಬ ಗ್ರಾಮಕ್ಕೆ. ಏಕೆ ಮತ್ತು ಯಾವ ಕಾರಣಕ್ಕಾಗಿ ? ಎಂದು.

ಆ ಸನ್ನಿವೇಷವನ್ನು ಪೂಜ್ಯ ಗುರುಕಂದ ಅವರು ತಮ್ಮ “ಶ್ರೀಕುಮಾರೇಶ ಚರಿತೆ” ಯಲ್ಲಿ ಹೀಗೆ ವರ್ಣಿಸಿದ್ದಾರೆ,

“….ಆ ತುರ್ಯಾತೀತ ಸಮಾಧಿಯಲ್ಲಿ ತಮ್ಮ ಪರಮಾರಾಧ್ಯ ಶ್ರೀಗುರು ಮೂರ್ತಿಯನ್ನು ದರ್ಶಿಸುತ್ತ ಪರಮಾನಂದದೊಳಗೆ ಮುಳುಗಿದ್ದ ಹಾಲಸ್ವಾಮಿ ದೇಶಿಕರು ರೆಪ್ಪೆಯಲುಗಿಸಿ ಬಹಿರ್ಮುಖರಾದಾಗ ಮೂಡಣ ದಿಶೆಯಲ್ಲಿ ಮುಂಜಾವದ ಬೆಳಗು ಸೂಸಿ ಹರಡಿತ್ತು . ಶ್ರೀ ಬಸವಲಿಂಗಸ್ವಾಮಿಗಳ ಗದ್ದುಗೆಗೆ ಮಣಿದು ಪೂಜೆ-ಪ್ರಸಾದ ಪೂರೈಸಿಕೊಂಡ ಹಾಲಸ್ವಾಮಿ ದೇಶಿಕರು ಅಣ್ಣಿಗೇರಿಯಿಂದ ಮಲೆನಾಡ ಪ್ರಾಂತ್ಯದತ್ತ ಹೆಜ್ಜೆಗಳನ್ನಿರಿಸಿದ್ದರು.

`ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಗದ್ದುಗೆ ದರ್ಶನ ಮಾಡು….’ ಶ್ರೀ ಬಸವಲಿಂಗ ಸ್ವಾಮಿಗಳು ಅಂತರಂಗದೊಳಗೆ ತಮಗೆ ನೀಡಿದ ನಿರ್ದೇಶನದಲ್ಲಿ ತಮ್ಮ ಶ್ರೀ ಗುರುವೀಗ ಆಂತರ್ಯದಲ್ಲಿ ನೆಲೆಗೊಂಡಿದ್ದಾರೆ ಎಂಬ ಭಾವದಲ್ಲಿ ಹಾಲಸ್ವಾಮಿ ದೇಶಿಕರು ದೃಢ ಹೆಜ್ಜೆಗಳನ್ನಿರಿಸುತ್ತ ಹೊರಟಿದ್ದರು. `ಹಿಂದೊಂದು ಕಾಲದಲ್ಲಿ ಶಿವಯೋಗಿಗಳು ಈ ನಾಡಲ್ಲೆಲ್ಲ ತುಂಬಿದ್ದರು. ಮಲೆನಾಡ ಪ್ರಾಂತ್ಯದಲ್ಲಿ ವಿಶೇಷ ಪ್ರಭಾವ ಬೀರಿದ್ದರು.’ ಶ್ರೀ ಬಸವಲಿಂಗಸ್ವಾಮಿಗಳು ಒಮ್ಮೆ ಹೇಳಿದ್ದ ನುಡಿ ಹಾಲಸ್ವಾಮಿ ದೇಶಿಕರ ಸ್ನೃತಿಯಲ್ಲಿ ಹಾದುಹೋಗಿತ್ತು”

27 ವರ್ಷದ ಹಾಲಯ್ಯನವರು ಅಣ್ಣಿಗೇರಿಯಿಂದ ಕ್ಯಾಸನೂರಿಗೆ ಕಾಲ್ನಡಿಗೆಯಿಂದ ಸಂಚರಿಸಿದ  ೧೬೦ ಕಿ.ಮಿ. ಮಾರ್ಗ (ಊಹೆ)

 

(ಪೂಜ್ಯ ಗುರುಕಂದ ಅವರು ತಮ್ಮ “ಶ್ರೀಕುಮಾರೇಶ ಚರಿತೆ”ಯ ಮುಂದುವರೆದ ಭಾಗ)

“…..ಶ್ರೀಗುರುಬಸವ ಸ್ವಾಮಿಗಳ ಗದ್ದುಗೆಯಲ್ಲಿ ಅನುಷ್ಠಾನ ನಡೆಸಬೇಕು ಎಂಬ ಹಾಲಸ್ವಾಮಿ ದೇಶಿಕರ ಸದಾಶಯಕ್ಕೆ ಒಡಂಬಟ್ಟಿದ್ದ ಉಳವಿಮಠದ ಗುರುಬಸವಯ್ಯ ಹಾಗೂ ಮಳಗುದ್ದಿ ಕೆಂಡಪ್ಪಗೌಡ ಎಂಬ ಈ ಭಾಗದ ಪ್ರಮುಖರು ಅನುಷ್ಠಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಡಲು ಮುಂದಾಗಿದ್ದರು.

ಶ್ರೀ ಹಾಲಸ್ವಾಮಿ ದೇಶಿಕರು ನಡೆಸಬೇಕೆಂದಿದ್ದ ಅನುಷ್ಠಾನ ವಿಶಿಷ್ಟವಾಗಿತ್ತು . ಉಪ್ಪು, ಹುಳಿ, ಕಾರ ಸಕ್ಕರೆಯಂಥ ಪದಾರ್ಥಗಳನ್ನು ಸೇವಿಸದೆ ಹಸುವಿನ ಹಾಲು- ಅನ್ನವನ್ನು ಪ್ರಸಾದವಾಗಿ ಅರ್ಪಿತಗೊಳಿಸಿ ಮೌನಾಚರಣೆಯೊಂದಿಗೆ ಮೂರುವರುಷ ಗಳವರೆಗೆ ಅಖಂಡ ಅನುಷ್ಠಾನ ನಡೆಸಬೇಕು ಎಂಬ ಸದುದ್ದೇಶ ಇರಿಸಿಕೊಂಡಿದ್ದರು. ಇಂಥ ಅನುಷ್ಠಾನ ನಡೆಸುವ ಮೊದಲು ಹಿರಿಯ ಶಿವಯೋಗಿಗಳ ಅನುಗ್ರಹ ಪಡೆಯುವುದು ಸೂಕ್ತ ಎಂಬ ಸಲಹೆಯನ್ನು ಕೆಂಡಪ್ಪಗೌಡರು ನೀಡಿದ್ದರು. ಕೆಂಡಪ್ಪಗೌಡರು ಪರಮಗುರುಭಕ್ತರು. ಗುರುಸೇವಾ ಕಾರ್ಯಗಳಿಗೆ ಸದಾ ಮುಂದಾಗುವ ಗುಣವಂತರು. ಇವರು ಆಗಾಗ ಹಾನಗಲ್ಲಿನ ಕುಮಾರಸ್ವಾಮಿಗಳ ಮಠಕ್ಕೆ  ಹೋಗಿಬರುತ್ತಿದ್ದರು. ಈ ವಿರಕ್ತಮಠದಲ್ಲಿ ಆಗ ಶ್ರೀ ಫಕೀರೇಶ್ವರ ಸ್ವಾಮಿಗಳು ಪೀಠಾಧಿಪತಿಗಳಾಗಿದ್ದರು. ತಮ್ಮ ವೈರಾಗ್ಯ ತಪೋನಿಷ್ಠೆಯಿಂದ ಶಿವಯೋಗ ಸಾಧನೆಯಲ್ಲಿ ಪಂಚಪರುಷ ಸಿದ್ಧಿಗೊಂಡ ಶ್ರೀ ಫಕೀರಸ್ವಾಮಿಗಳು ಹಸ್ತಮುಟ್ಟಿ ಕೊಟ್ಟದ್ದು ಫಲದಾಯಕವಾಗುತ್ತಿತ್ತು . ನುಡಿದ ವಾಣಿ ಅನುಗ್ರಹವಾಗುತ್ತಿತ್ತು . ಮುಪ್ಪಿನಲ್ಲಿದ್ದ ಶ್ರೀ ಫಕೀರ ಸ್ವಾಮಿಗಳು ತಮ್ಮ ಪೀಠಕ್ಕೆ ಒಬ್ಬ ಯೋಗ್ಯ ಉತ್ತರಾಧಿಕಾರಿಯನ್ನು ನೋಡಿ ಎಂದು ಭಕ್ತರಿಗೆ ಆಗಾಗ ಹೇಳುತ್ತಿದ್ದರು. ಹಾಲಸ್ವಾಮಿ ದೇಶಿಕರು ಹಾನಗಲ್ಲ ವಿರಕ್ತಮಠಕ್ಕೆ ಸೂಕ್ತ ಉತ್ತರಾಧಿಕಾರಿ ಎಂದು ಕಂಡುಕೊಂಡಿದ್ದ ಕೆಂಡಪ್ಪಗೌಡರು ತಾವು ಈ ವಿಷಯವನ್ನು ಪ್ರಸ್ತಾಪಿಸಿದರೆ ಒಪ್ಪುವರೋ ಇಲ್ಲವೇ ಎಂಬ ಅನುಮಾನದಲ್ಲಿಯೇ, ಅನುಷ್ಠಾನಕ್ಕೆ ಮೊದಲು ಶ್ರೀ ಫಕೀರೇಶ್ವರ ಸ್ವಾಮಿಗಳಂಥ ಶಿವಯೋಗಿಗಳ ಅನುಗ್ರಹ ಪಡೆಯುವುದು ಒಳ್ಳೆಯದು ಎಂದು ಸೂಚಿಸಿ ಹಾನಗಲ್ಲಿಗೆ ಹಾಲಸ್ವಾಮಿ ದೇಶಿಕರನ್ನು ಕರೆದುಕೊಂಡು ಹೋಗುವ ಸನ್ನಾಹ ನಡೆಸಿದ್ದರು. ಶ್ರೀ ಫಕೀರೇಶ್ವರ ಸ್ವಾಮಿಗಳ ಬಗೆಗೆ ಹೇಳಿದ ಸಂಗತಿಗಳನ್ನೆಲ್ಲ ಕೇಳಿ ಅಂಥ ಹಿರಿಯ ಶಿವಯೋಗಿಗಳ ಅನುಗ್ರಹ ತಮ್ಮ ಅನುಷ್ಠಾನಕ್ಕೆ ಅವಶ್ಯ ಎಂದುಕೊಂಡು ಹಾಲಸ್ವಾಮಿ ದೇಶಿಕರು ಹಾನಗಲ್ಲಿಗೆ ಹೋಗಲು ಸಮ್ಮತಿಸಿದ್ದರು; ಉಳವಿಮಠದ ಗುರುಬಸಯ್ಯ ಹಾಗೂ ಕೆಂಡಪ್ಪಗೌಡರೊಂದಿಗೆ ಹಾನಗಲ್ಲಿನತ್ತ ಹೊರಟಿದ್ದರು.

ಹಾನಗಲ್ಲು ತಲುಪಿ ಕುಮಾರ ಮಠದಲ್ಲಿ ಶ್ರೀ ಫಕೀರೇಶ್ವರ ಸ್ವಾಮಿಗಳ ದರ್ಶನ ಮಾಡಿದಾಗ ಶಿವಯೋಗಿವರ್ಯರ ಬಗೆಗೆ ತಾವು ಕೇಳಿದ್ದು ದಿಟವೆಂಬುದು ಹಾಲಸ್ವಾಮಿ ದೇಶಿಕರಿಗೆ ಪ್ರತ್ಯಕ್ಷವಾಗಿ ಕಂಡಿತ್ತು. ಶಿವಯೋಗದ ಮಹತಿಯನ್ನು ಕಣ್ಣೆದುರೇ ತೋರುವ ಇಂಥ ಶಿವಯೋಗಿಗಳು ಎಲ್ಲ ಕಾಲದಲ್ಲೂ ಯಾವುದೋ ಒಂದೆಡೆ ಗುಪ್ತವಾಗಿ ಇರುತ್ತಾರೆ ಎನಿಸಿತ್ತು . ಹಾಲಸ್ವಾಮಿ ದೇಶಿಕರು ಹೃದಯದುಂಬಿ ಶ್ರೀ ಫಕೀರಸ್ವಾಮಿಗಳ ಶ್ರೀ ಚರಣಗಳಿಗೆ ಮಣಿದಿದ್ದರು. ಸ್ನಾನ-ಪೂಜಾರ್ಚನೆಗಳು ಸಾಂಗವಾಗಿ ಪೂರೈಸಿದ್ದವು. ತಮ್ಮ ಪೀಠಕ್ಕೆ ಯೋಗ್ಯ ಉತ್ತರಾಧಿಕಾರಿ ಕೊನೆಗೂ ತಮ್ಮೆದುರು ಬಂದನೆಂಬುದನ್ನು ಶ್ರೀ ಫಕೀರೇಶ್ವರ ಸ್ವಾಮಿಗಳು ತಮ್ಮ ಲಿಂಗಪೂಜೆಯಲ್ಲಿ ಕಂಡಿದ್ದರು……”

ಮುಂದೆ ನಡೆದಿದ್ದು ಒಂದು ಅಪೂರ್ವ ಇತಿಹಾಸ.ಮನೋವ್ಯಾಕುಲತೆಯ ನಿಗ್ರಹಕ್ಕೆ ಬಂದು ಪೂಜ್ಯ ಗುರುಬಸವ ಶಿವಾಚಾರ್ಯರ ಗದ್ದುಗೆ ಬಳಿಬಂದು ಅನುಷ್ಠಾನಕ್ಕೆ ಕುಳಿತರೆ ಆ ಅಮೋಘಶಕ್ತಿಯ ಶಿವಯೋಗಿಯ ಜಾಗೃತ ಸ್ಥಳ ಹಾಲಯ್ಯ ದೇಶಿಕರನ್ನು ಮನ್ನಿರಂಜನ ಪ್ರಣವ ಸ್ವರೂಪಿ ಸದಾಶಿವ ಕುಮಾರ ಸ್ವಾಮಿಗಳನ್ನಾಗಿಸಿ, ಸತ್ತ ಸಮಾಜದ ಮರು ಹುಟ್ಟಿಗಾಗಿ ಸಮಾಜ ಸಂಜೀವಿನಿಯನ್ನಾಗಿ  ನೀಡಿದ್ದು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದ್ದು.

ಈ ಕ್ಷೇತ್ರ ಪೂಜ್ಯ ಹಾನಗಲ್ಲ ಶ್ರೀಕುಮಾರೇಶ್ವರರನ್ನು  ಸಮಾಜ ಸೇವೆಯತ್ತ ಸೆಳೆದಕೊಂಡ , ಸಮಾಜ ಸೇವೆಯಲ್ಲಿಯೇ ಅನುಷ್ಠಾನದ ಶಕ್ತಿಯನ್ನು ತೋರಿಸಿಕೊಟ್ಟ ವಿಶೇಷ ನೆಲ.

`ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಗದ್ದುಗೆ ದರ್ಶನ ಮಾಡು….’ ಎಂದು ಯಳಂದೂರು ಬಸವಲಿಂಗ ಶಿವಯೋಗಿಗಳು  ಶ್ರೀಕುಮಾರೇಶ್ವರರಿಗೆ ಹೇಳಿದ ಆ ನುಡಿಗಳು ನನ್ನನ್ನು ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಕುರಿತು ಮಾಹಿತಿ ಸಂಗ್ರಹಿಸುವಲ್ಲಿ ಪ್ರೇರಣೆ ನೀಡಿದವು.

  1. ಸಪ್ತ ಕಾವ್ಯದ ಗುರುಬಸವಸ್ವಾಮಿಗಳ ಕುರಿತು ಸಂಗ್ರಹಿಸಿದ ಮಾಹಿತಿಗಳು

ವಿಜಯನಗರ ಪ್ರೌಡದೇವರಾಯನ ಸಮಕಾಲೀನರಾದ (೧೪೧೯-೧೪೫೦) ಕನ್ನಡದಲ್ಲಿ ಸಪ್ತಕಾವ್ಯಗಳ ಕರ್ತೃ; ಸಪ್ತ ಕಾವ್ಯಗಳ ಗುರುಬಸವ ಎಂದು ಖ್ಯಾತರಾದ  ಮತ್ತು ನೂರೊಂದು ವಿರಕ್ತರಲ್ಲಿ ಒಬ್ಬರಾದ ಶ್ರೀ ಗುರುಬಸವ ಶಿವಾಚಾರ್ಯರು ಮೂಲತಃ ಸೊರಬ ತಾಲೂಕಿನ ಕ್ಯಾಸನೂರು (ಖೇಚರಿಪುರ) ಸಂಸ್ಥಾನ ಹಿರೇಮಠದವರು. ಪೂಜ್ಯರ ಕ್ರಿಯಾಸಮಾಧಿ ಶ್ರೀಮಠದಲ್ಲಿರುವದು.ಮತ್ತು ಶ್ರೀ ಮಠವು ಕೆಳದಿ ಸಂಸ್ಥಾನದ ಪಂಚಮಠಗಳ ಪೈಕಿ ಒಂದು ಶ್ರೀಮಠ ವಾಗಿರುತ್ತದೆ.

ಶ್ರೀಗುರುಬಸವ ರಿಂದ ರಚಿಸಲ್ಪಟ್ಟ ಸಪ್ತ ಕಾವ್ಯಗಳು ಹೀಗಿವೆ.

  1. ಶಿವಯೋಗಾಂಗ ವಿಭೂಷಣ,
  2. ಸದ್ಗುರು ರಹಸ್ಯ,
  3. ಕಲ್ಯಾಣೇಶ್ವರ,
  4. ಸ್ವರೂಪಾಮೃತ,
  5. ವೃಷಭಗೀತೆ,
  6. ಅವಧೂತಗೀತೆ ಮತ್ತು
  7. ಮನೋವಿಜಯ

ಶ್ರೀ ಗುರು ಬಸವರಿಂದ  ಕೆಲವು ಸ್ವರವಚನಗಳು ರಚಿತವಾಗಿರುವುದಾಗಿ ತಿಳಿದುಬಂದಿದೆ. ಶ್ರೀ ಗುರುಬಸವ ರಿಗೆ

  • ಭಕ್ತಜನಮನೋಮಂದಿರ,
  • ಶಿವಯೋಗಜನಸೇವಿತಚರಣಾರವಿಂದ,
  • ಷಟ್‍ಸ್ಥಲಜ್ಞಾನ ಪ್ರಭಾಪುಂಜರಂಜಿತಾಂತರಂಗ,
  • ವೀರಶೈವಮತಸ್ಥಾಪನಾಚಾರ್ಯ

ಮುಂತಾದ ಬಿರುದುಗಳಿದ್ದವೆಂದು ಮನೋವಿಜಯಕ್ಕೆ ತಾತ್ಪರ್ಯವನ್ನು ಬರೆದ ವಿರಕ್ತ ತೋಂಟದಾರ್ಯರು ತಿಳಿಸಿದ್ದಾರೆ. ಆದರೆ ಸ್ವವಿಷಯವಾಗಿ ಕವಿ ಏನನ್ನೂ ಹೇಳಿಕೊಂಡಿಲ್ಲ. ಕವಿ ವಿರಕ್ತರಾಗಿದ್ದುದೇ ಇದಕ್ಕೆ ಕಾರಣವಾಗಿರಬೇಕು.

ವಿಜಯನಗರ ಸಾಮ್ರಾಜ್ಯವನ್ನು ಸ್ಥಿರಗೊಳಿಸಿದ ಪ್ರೌಢದೇವರಾಯನ (ಕ್ರಿ.ಶ. 1419-1446) ಕಾಲದಲ್ಲಿ ಶ್ರೀ ಗುರುಬಸವರಿದ್ದರೆಂದು  ಚೆನ್ನಬಸವಪುರಾಣದಿಂದ ತಿಳಿದುಬರುತ್ತವೆ. ಪ್ರೌಢದೇವರಾಯ ವೀರಶೈವನಾಗಿದ್ದು ಕನ್ನಡ ಸಾಹಿತ್ಯ ಸಂಸ್ಕೃತಿಯ ಅಭಿವೃದ್ಧಿಗೆ ತುಂಬ ನೆರವಾದುದು ಇತಿಹಾಸಾವಲೋಕನದಿಂದ ಶ್ರುತವಾಗಿದೆ. ಆತನ ಕಾಲದಲ್ಲಿ ನೂರೊಂದು ವಿರಕ್ತರು ಉದಿಸಿ, ಹಂಪೆಯಲ್ಲಿ ನೆರೆದು ವೀರಶೈವಧರ್ಮವನ್ನು ಪ್ರಚುರಗೊಳಿಸಿದುದೂ ಅಷ್ಟೇ ಪ್ರಸಿದ್ಧವಾದ ವಿಷಯ. ಈ ವಿರಕ್ತರ ತಪಃಭಾವ ನಿಜವಾಗಿಯೂ ಅವರ್ಣನೀಯವಾದುದು. ಅವರು ಸಂಸಾರದ ಅಸಾರತೆಯನ್ನು ಕಂಡುಕೊಂಡು, ಜಂಗಮಸ್ಥಲವನ್ನಾಶ್ರಯಿಸಿ ಪರಮವೈರಾಗ್ಯಶೀಲರಾಗಿ ಮೆರೆದಿದ್ದಾರೆ. ಅವರಲ್ಲಿ ಕರಸ್ಥಲದ ನಾಗಿದೇವರಿಗೂ ಗುರುಬಸವರಿಗೂ ಮಹತ್ತ್ವದ ಸ್ಥಾನವಿದೆ. ಇವರಿಬ್ಬರ ಒಡನಾಟವನ್ನು ಚೆನ್ನಬಸಪುರಾಣದಲ್ಲಿ ವಿವರಿಸಲಾಗಿದೆ. ಅಲ್ಲಿ ಹೇಳಿರುವುದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಒಂದೆರಡು ಮಾತುಗಳು ಸ್ಪಷ್ಟವಾಗುತ್ತವೆ. ಗುರುಬಸವರ ಅರಮನೆ (ಮಠ) ವಿಜಯನಗರದಲ್ಲಿತ್ತು. ಕರಸ್ಥಲದ ನಾಗಿದೇವ ಆ ಮಠಕ್ಕೆ ಒಮ್ಮೆ ಬಂದು ಗುರುಬಸವರನ್ನು ಕಂಡಿದ್ದ. ಗುರುಬಸವರು ವೇದ, ವೇದಾಂತ, ಪುರಾಣಾಗಮ, ಇತಿಹಾಸಾದಿಗಳಲ್ಲಿ ಬಲ್ಲಿದವರಾಗಿದ್ದು ಯೋಗಶಕ್ತಿಯಿಂದ ಅನೇಕ ಪವಾಡಗಳನ್ನು ಮೆರೆದರೆಂದೂ ಪ್ರೌಢದೇವರಾಯನ ಸಮ್ಮುಖದಲ್ಲಿ ಪರವಾದಿಗಳನ್ನು ಗೆದ್ದು ಶಾರದೆಯ ಪೀಠವನ್ನು ಅಲಂಕರಿಸಿದರೆಂದೂ ಖೇಚರಶಕ್ತಿಯನ್ನು ಪ್ರದರ್ಶಿಸಿ, ಗಗನದಲ್ಲಿ ಈಜುತ್ತ ಸಕಲ ರಾಗಗಳನ್ನು ಹಾಡಿ, ಬಯಲಿನೊಳಗೆ ಬಯಲಾದರೆಂದೂ ಅದೇ ಪುರಾಣದಿಂದ ತಿಳಿದುಬರುತ್ತದೆ.

ಗುರುಬಸವರು ವಿಜಯನಗರಕ್ಕೆ ಬರುವ ಪೂರ್ವದಲ್ಲಿ ಎಲ್ಲಿದ್ದರು?, ಅವರ ಮೂಲ ಮಠ ಯಾವುದು?, -ಎಂಬ ಪ್ರಶ್ನೆಗಳಿಗೆ ಬಿ. ಶಿವಮೂರ್ತಿ ಶಾಸ್ತ್ರಿಗಳು ಕೊಡುವ ಪರಿಹಾರಗಳನ್ನು ಗಮನಿಸಬಹುದು. ಕವಿ ಗುರುಬಸವರು ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಮಠಾಧ್ಯಕ್ಷರಾಗಿದ್ದರೆಂದೂ ವಿಜಯನಗರದ ರಾಯರ ಕಾಲದಲ್ಲಿಯೂ ಕೆಳದಿಯ ದೊರೆಗಳ ಕಾಲದಲ್ಲಿಯೂ ಕ್ಯಾಸನೂರು ಎಂಬುದಕ್ಕೆ ಸಂಸ್ಕೃತದಲ್ಲಿ ಖೇಚರಿಪುರ ಎಂದು ಹೇಳುವರೆಂದೂ ಶಿವಯೋಗಿಯಾದ ಗುರುಬಸವರು ತಮ್ಮ ಯೋಗ ಸಾಮಥ್ರ್ಯದಿಂದ ಆಕಾಶದಲ್ಲಿ ಸಂಚರಿಸುತ್ತ ಇದ್ದುದರಿಂದ ಅವರಿದ್ದ ಊರಿಗೆ ಖೇಚರಪುರ ಎಂದು ಹೆಸರಾಯಿತೆಂದೂ ಐತಿಹ್ಯವುಂಟು. ಖೇಚರಿಪುರ ಎಂಬುದರ ಅಪಭ್ರಂಶವೇ ಕ್ಯಾಸನೂರು-ಎಂಬುದು ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿಗಳ ಅಭಿಮತವಾಗಿದೆ.

ಗುರುಬಸವರು ಪ್ರೌಢದೇವರಾಯನ ಕಾಲದಲ್ಲಿ ಜೀವಿಸಿದ್ದನೆಂಬುದರ ಮೇಲೆ ಇವರ ಕಾಲ ಕ್ರಿ.ಶ. 1430ರ ಸುಮಾರು ಎಂದು ಖಚಿತವಾಗಿ ಹೇಳಬಹುದು. ಇವರ ಸಪ್ತ ಕಾವ್ಯಗಳು ವೇದಾಂತವನ್ನು ಬೋಧಿಸುತ್ತವೆ; ಲಿಂಗಾಂಗಸಾಮರಸ್ಯಕ್ಕೆ ಯೋಗವೇ ಮೂಲವೆಂದು ಸಾರುತ್ತವೆ. ವಚನಾಗಮ, ವೇದೋಪನಿಷತ್ತುಗಳ ಸಾರವನ್ನು ಹೀರಿ, ನಿತ್ಯಸಾಧನೆಯನ್ನು ಬೋಧನೆಯ ರೂಪದಲ್ಲಿ ಕವಿ ನೀಡಿದ್ದಾರೆ.

ಗುರುಬಸವರ ಕೃತಿಗಳಲ್ಲಿ

  1. ಸದ್ಗುರು ರಹಸ್ಯ ನಿಜತತ್ತ್ವವನ್ನು ಬೋಧಿಸುತ್ತದೆ. ಈ ಕೃತಿ ಭಾಮಿನಿ ಷಟ್ಟದಿಯಲ್ಲಿ ರಚಿತವಾಗಿದೆ.
  2. ಕಲ್ಯಾಣೇಶ್ವರ ಪರಿವರ್ಧಿನಿಯ ವಿವಿಧ ರಾಗಗಳಲ್ಲಿ ಮೂಡಿಬಂದು ಷಟ್‍ಸ್ಥಲ ವಿವರಣೆ ಮಾಡುತ್ತದೆ.
  3. ಸ್ವರೂಪಾಮೃತ ಜೀವಪರಮರ ಸ್ವರೂಪವನ್ನು ತಿಳಿಸಿ, ಅವರ ಪರಸ್ಪರ ಮಿಲನವೇ ಮುಕ್ತಿಯೆಂಬುದನ್ನು ಹೇಳುತ್ತದೆ.
  4. ಅವಧೂತಗೀತೆ ನೂರೊಂದು ಚೌಪದಿಗಳಲ್ಲಿ ಮೂಡಿ ಬಂದಿದೆ. ಜ್ಞಾನೋತ್ತರ ಮಾರ್ಗದ ವಿಧವಿಧಗಳನ್ನು ಅನುಭವಿಸುವವನೇ ಅವಧೂತನೆಂದು ಕವಿಯ ಮತವಾಗಿದೆ.
  5. ಮನೋವಿಜಯ ಕುಸುಮಷಟ್ಪದಿಯಲ್ಲಿದ್ದು ಮನೋನಿಗ್ರಹವನ್ನು ತಿಳಿಸುವ ಶ್ರೇಷ್ಠ ಕೃತಿ.
  6. ಶಿವಯೋಗಾಂಗ ವಿಭೂಷಣ ಯೋಗಗಳ ಅಂಗಗಳನ್ನು ವಿವರಿಸುತ್ತ ಶಿವಯೋಗದ ಮೇಲ್ಮೈಯನ್ನು ಹೇಳುತ್ತದೆ.
  7. ವೃಷಭಗೀತೆ ಭೋಗಷಟ್ಪದಿಯಲ್ಲಿದ್ದು ಒಂದು ಶತಕಕೃತಿ ಎನಿಸಿಕೊಂಡಿದೆ.

ಗುರುಬಸವರ ಸಪ್ತಕಾವ್ಯಗಳಲ್ಲಿ ವೈವಿಧ್ಯವಿದೆ; ವೈಶಿಷ್ಟ್ಯವಿದೆ. ಈ ಕೃತಿಗಳು ಗುರು ಶಿಷ್ಯರ ಸಂವಾದರೂಪದಲ್ಲಿ ರಚಿತವಾಗಿವೆ. ಸುವಿವೇಕನೆಂಬ ಶಿಷ್ಯನಿಗೆ ದೇಶಿಕರು ಬೋಧೆ ಮಾಡುತ್ತಾರೆ. ವಿಷಯ ಸುಖದಲ್ಲಿ ಲೀನವಾದ ಶಿಷ್ಯನ ಮನಸ್ಸನ್ನು ಶಿವಯೋಗಾನಂದ ಸಾಗರಕ್ಕೆ ಸಾಗಿಸಬೇಕೆಂಬುದೇ ಸದ್ಗುರುವಿನ ಸಾಹಸ.

ಗುರುಬಸವರ ಸಂಗೀತಜ್ಞಾನ ಅಗಾಧವಾದ್ದು. ಶಾಸ್ತ್ರಕ್ಕೆ ಸಂಗೀತದ ಒಪ್ಪವಿದ್ದರೆ ಮೃದುಮಧುರವಾಗುವುದೆಂದು ಕವಿ ಅರಿತಿದ್ದಾರೆ. ಕನ್ನಡ ಛಂದೋಮಟ್ಟುಗಳಲ್ಲಿ ರಾಗಬದ್ಧವಾಗಿ ಹಾಡಲು ಕವಿಗೆ ಹೆಚ್ಚಿನ ಉತ್ಸಾಹವಿದೆ. ಸಂಸ್ಕೃತ ಛಂದಸ್ಸನ್ನು ಅಲ್ಲಗಳೆದು ಕನ್ನಡ ಷಟ್ಪದಿಯನ್ನು ಅಪ್ಪಿಕೊಂಡುದು ಕವಿಯ ಶೈಲಿಯ ವೈಶಿಷ್ಟ್ಯವೆನ್ನಬಹುದು. ಕವಿಯ ವಾಣಿಯಲ್ಲಿ ಪ್ರಾಸದ ಗುಣವಿದೆ; ಭಾಷೆಯಲ್ಲಿ ಹದವಿದೆ. ಒಟ್ಟಿನಲ್ಲಿ, ಈ ಕವಿ ತತ್ತ್ವನಿರೂಪಣೆಗಾಗಿ ಬಳಸಿಕೊಂಡಿರುವ ನಿರ್ವಿಕಾರ ಮಾರ್ಗ, ತತ್ತ್ವಸಮನ್ವಯ ರೀತಿ, ಸಂಗೀತದ ಸೊಗಸು ಮನೋಹರವಾಗಿವೆ. ಸಪ್ತಕಾವ್ಯಗಳು ಶಾಸ್ತ್ರನಿರೂಪಣೆ ಮಾಡುವ ಕೃತಿಗಳಾದುದರಿಂದ ಮೋಕ್ಷಾಪೇಕ್ಷಿಗಳ ಮನಸ್ಸನ್ನು ಸೆಳೆಯಬಲ್ಲವು.

(ಸೌಜನ್ಯ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ)

೧೯೭೧ರಲ್ಲಿ ಶ್ರೀ  ಶಿವಾನಂದ ವಿರಕ್ತಮಠ ಅವರು ಡಾ. ಆರ್. ಸಿ. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಎಂಬ ಬೃಹತ್ ಮಹಾಪ್ರಬಂಧವನ್ನು ಅರ್ಪಿಸಿ, ಪಿಎಚ್.ಡಿ. ಪದವಿ ಪಡೆದರು. ಈ ಕೃತಿ ೧೯೭೮ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಗಿ ಕನ್ನಡ ಸಾಹಿತ್ಯ ಲೋಕಕ್ಕೆ  ಒಂದು ಮಾರ್ಗವನ್ನೇ ತೋರಿಸಿಕೊಟ್ಟಿತು.

ಮಹಾಪ್ರಬಂಧದ ಹೃದಯ ಭಾಗ ‘ಪ್ರೌಢದೇವರಾಯನ ಕಾಲದ ಕನ್ನಡ ಸಾಹಿತ್ಯ’ ಎಂಬ ಎರಡನೆಯ ಭಾಗ. ಈ ಕಾಲದ ವೀರಶೈವ/ಲಿಂಗಾಯತ ಸಾಹಿತ್ಯ, ಈ ಕಾಲದ ಬ್ರಾಹ್ಮಣ ಸಾಹಿತ್ಯ, ಈ ಕಾಲದ ಜೈನ ಸಾಹಿತ್ಯ, ಈ ಕಾಲದ ಇತರ ಸಾಹಿತ್ಯ ಎಂಬ ವಿಭಾಗದಲ್ಲಿ ಸುದೀರ್ಘವಾಗಿ ಚರ್ಚಿಸಿದ್ದಾರೆ. ಅದರಲ್ಲೂ ಈ ಕಾಲದ  ವೀರಶೈವ/ಲಿಂಗಾಯತ ಸಾಹಿತ್ಯ ವಿಭಾಗದಲ್ಲಿ ಮುಖ್ಯವಾಗಿ ನೂರೊಂದು ವಿರಕ್ತರ ವಿಷಯವಾಗಿ ಮೊದಲ ಬಾರಿಗೆ ಇಲ್ಲಿ ತುಂಬ ಗಂಭೀರವಾಗಿ ಚರ್ಚಿಸಿದ್ದಾರೆ. ನೂರೊಂದು ವಿರಕ್ತರು ಯಾರು, ಅವರ ಸಂಖ್ಯಾ ನಿರ್ಣಯ, ಹೆಸರಿನ ಬಗೆಗಿರುವ ಗೊಂದಲಗಳು, ನೂರೊಂದು ವಿರಕ್ತರ ಸಾಹಿತ್ಯ ಸೃಷ್ಟಿ ಕುರಿತು ಅತ್ಯಂತ ಸ್ಪಷ್ಟವಾಗಿ ದಾಖಲೆಗಳನ್ನು ಪರಿಶೀಲಿಸಿ, ಹೊಸ ಹೊಳವುಗಳನ್ನು ಕೊಟ್ಟಿದ್ದಾರೆ. ‘ನೂರೊಂದು ವಿರಕ್ತರು ಇದ್ದರೆಂಬುದು ತ್ರಿಕಾಲ ಸತ್ಯ, ಆದರೆ ಇದು ಅವರ ಅಭಿಧಾನಗಳನ್ನು ಕುರಿತ ಸಮಸ್ಯೆ ಅಷ್ಟೆ’ (ಪು.೯೩) ಎಂದು ಕೊನೆಯಲ್ಲಿ ಹೇಳುವ ಮೂಲಕ ನೂರೊಂದು ವಿರಕ್ತರು ಚಾರಿತ್ರಿಕವಾಗಿ ಇದ್ದರೆಂಬುದನ್ನು ಸಿದ್ಧಪಡಿಸಿದ್ದಾರೆ.

ನೂರೊಂದು ವಿರಕ್ತರಲ್ಲಿ ‘ಗುರುಬಸವ’ ವೆನ್ನುವವರು ಏಳು ಕೃತಿಗಳನ್ನು ರಚಿಸಿ, ಸಪ್ತಕಾವ್ಯದ ಗುರುಬಸವ ಎಂಬ ಕೀರ್ತಿಗೆ ಪಾತ್ರನಾದವರು. ಅಷ್ಟೇ ಅಲ್ಲ, ಅವರು ತಮ್ಮ ಬದುಕಿನ ಪೂರ್ವಾರ್ಧದಲ್ಲಿ ಅವಧೂತರೂ, ವೇದಾಂತಿಗಳೂ ಆಗಿದ್ದವರು. ಕೊನೆಗೆ ಶರಣರಾಗಿ ವೀರಶೈವ/ಲಿಂಗಾಯತ ಧರ್ಮದ ಮಹಿಮೆಯನ್ನು ಸಾರಿದವರು. ಇನ್ನೂ ವಿಶೇಷವೆಂದರೆ ಆ ಕಾಲಘಟ್ಟದಲ್ಲಿ ತಮ್ಮ ಮತವೇ ಶ್ರೇಷ್ಠವೆಂಬ ವಿಷಯವಾಗಿ ಅನೇಕ ಧರ್ಮದವರೊಡನೆ ವಾದ-ಸಂವಾದಗಳು ನಡೆಯುತ್ತಿದ್ದವು. ಈ ವಾದದಲ್ಲಿ ಗೆದ್ದವರು ಸೋತವರ ಸ್ವತ್ತಿಗೆ ಹಕ್ಕುದಾರರಾಗುತ್ತಿದ್ದರು. ಈ ಸಪ್ತಕಾವ್ಯದ ಗುರುಬಸವರು  ಶೃಂಗೇರಿ ಶಾರದಾ ಪೀಠವನ್ನು ವಾದದಲ್ಲಿ ಗೆದ್ದು, ಆ ಶಾರದಾ ಪೀಠವನ್ನು ಆರೋಹಣ ಮಾಡಿ, ಅದರಲ್ಲೂ ವೈರಾಗ್ಯ ತಾಳಿ, ಅದನ್ನು ಮರಳಿ ಶೃಂಗೇರಿ ವೇದಾಂತಿಗಳಿಗೆ ಮರಳಿ ಕೊಟ್ಟು ಬಂದರೆಂದು ವಿರೂಪಾಕ್ಷ ಪಂಡಿತ ತನ್ನ ಚನ್ನಬಸವ ಪುರಾಣದಲ್ಲಿ ಹೇಳುತ್ತಾನೆ. ಈ ವಿಷಯ ಕುರಿತು ವೀರಶೈವ/ಲಿಂಗಾಯತರು ಹೆಮ್ಮೆ ಪಡಬೇಕು. ಅದ್ವೈತಮಠವೊಂದರ ಶ್ರೇಷ್ಠ ಪೀಠವೊಂದನ್ನು ವೀರಶೈವ/ಲಿಂಗಾಯತನೊಬ್ಬ ಏರಿದ ಘಟನೆ ನಿಜಕ್ಕೂ ಅಭಿಮಾನ ಪಡುವ ಸಂಗತಿ. ಈ ವಿಷಯ ಕುರಿತು ಡಾ. ಶಿವಾನಂದರ ಮಾತುಗಳಲ್ಲಿಯೇ ಕೇಳಬೇಕು.

“ಶೃಂಗೇರಿ ಪೀಠವು ಅಂದು ಅದ್ವೈತ ಮತ ಪ್ರಸಾರ ಕೇಂದ್ರವಾಗಿತ್ತು. ಗುರುಬಸವರ ಕಾಲಕ್ಕೆ ಅಲ್ಲಿ ಅನೇಕ ಪಂಡಿತರು ಅದ್ವೈತ ತತ್ವಗಳನ್ನು ಚರ್ಚಿಸುತ್ತಿದ್ದರೆಂದು ಕಾಣುತ್ತದೆ. ತನ್ನ ಕಾವ್ಯಗಳಲ್ಲಿ ಅದ್ವೈತ ತತ್ವದ ಸುರಿಮಳೆಗರೆದ ಗುರುಬಸವ ಅಂದಿನ ಪ್ರಕಾಂಡ ಪಂಡಿತರನ್ನು ಸೋಲಿಸಿ ಪೀಠಾರೋಹಣ ಮಾಡಿ ಅದ್ವೈತಾಚಾರ್ಯ ಪ್ರಶಸ್ತಿಗೆ ಕಾರಣವಾಗಿರಬೇಕು. ವಿರೂಪಾಕ್ಷ ಪಂಡಿತನು ‘ಶಾರದೆಯ ಪೀಠವನ್ನೇರಿ ಮರಳಿ ಬಂದು ಪ್ರೌಢನರಮನೆಯಲ್ಲಿದ್ದ ಯೋಗಿಯನ್ನು ಸೋಲಿಸಿದನೆಂದು’ ಸ್ಪಷ್ಟವಾಗಿ ಹೇಳಿರವುದರಿಂದ, ಈ ಪೀಠವು ನಾರಾಯಣ ಶಾಸ್ತ್ರಿಗಳು ಹೇಳುವಂತೆ ಹಂಪೆಯಲ್ಲಿರದೆ ಶೃಂಗೇರಿಯದೇ ಆಗಿರಬೇಕು. ಅಲ್ಲಿಂದ ಅವನು ‘ಮರಳಿ’ ಬಂದಿರಬೇಕು. ಗುರುಬಸವನವರ ಓಲಗವು ಸಕಲ  ವೇದಾಂತಿಗಳ ಬೀಡಾಗಿತ್ತೆಂದು ಹೇಳುವುದರಿಂದ ವೇದಾಂತಕ್ಕೆ ಒಲಿದ ಗುರುಬಸವರ ಅದ್ವೈತ ಸಿದ್ಧಾಂತದ ಶ್ರೀರೋಹಣ ಗಿರಿಯಾದ ಶೃಂಗೇರಿಯ ಶಾರದಾಪೀಠವನ್ನೇ ಏರಿರುವುದು ಖಂಡಿತ. ಅದು ವೀರಶೈವ/ಲಿಂಗಾಯತ ಯೋಗಿಗಳ ಅಂದಿನ ವಿದ್ಯೆ, ಅನುಭಾವ, ಪ್ರಭಾವಗಳ ಪ್ರತೀಕ.” (ಪು. ೧೩೭)

ಗುರುಬಸವವರಂತಹ ಸಾಧಕರು ತಮ್ಮ ಸಾಧನೆಯಿಂದ ವೀರಶೈವ/ಲಿಂಗಾಯತದ ಹಿರಿಮೆ ಗರಿಮೆಗಳನ್ನು ಎತ್ತರೆತ್ತರಕ್ಕೆ ಬೆಳೆಸಿದರೆಂಬ ಸಂಗತಿಯನ್ನು ಮೊದಲ ಬಾರಿಗೆ ಡಾ. ಶಿವಾನಂದ ಅವರು ಅನೇಕ ಆಧಾರಗಳಿಂದ ಸಿದ್ಧಪಡಿಸಿ ತೋರಿಸಿರುವುದು ಅವರ ಸಂಶೋಧನಾ ವಿಚಕ್ಷಣತೆಗೆ ಸಾಕ್ಷಿಯಾಗಿದೆ.

(ಸೌಜನ್ಯ ಪುಸ್ತಕ ವಿಮರ್ಶಾಲೇಖನ: ಶ್ರೀ ಪ್ರಕಾಶ.ಗಿರಿಮಲ್ಲನವರ)

 ಶ್ರೀ ಗುರುಬಸವ ರ ಬಾಲ್ಯದ ಮಾಹಿತಿ

 ತಂದೆಯ ಹೆಸರು ವೆ. ಸದಾಶಿವಯ್ಯ ಮತ್ತು ತಾಯಿಯ ಹೆಸರು ಶಿವಲಿಂಗಮ್ಮ.

ವಿದ್ಯಾಭ್ಯಾಸ: ಶ್ರೀಶೈಲ  ಜಗದ್ಗುರು ಶ್ರೀ ಶ್ರೀ ಶ್ರೀ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ ಭಗವತ್ಪಾದರ ಆಶ್ರಯದಲ್ಲಿ.

ಪೂರ್ವಾಶ್ರಮದ ಹೆಸರು : ಬಸವಾರ್ಯ

ಶ್ರೀಶೈಲ ಜಗದ್ಗುರುಗಳಿಂದ ಬಸವಾರ್ಯರು ವಿಶೇಷವಾಗಿ ಕಲಿತುಕೊಂಡಿದ್ದು ವೈಶಿಷ್ಟ್ಯಪೂರ್ಣ ಯೋಗ “ಖೇಚರೀ ಮುದ್ರೆ”

(ಸೌಜನ್ಯ:  “ಖೇಚರಯೋಗಿ” ಲೇಖಕಿ:ವಿದ್ಯಾ.ಡಿ.ಪಾಟೀಲ್ ವಡಗೇರಿ)‌

 ಕರ್ನಾಟಕದ ಕವಿ ಚರಿತೆ”” ಸಂಪುಟ೨ ಯಲ್ಲಿ ದಾಖಲಾದ ಮಾಹಿತಿಗಳು

೧೯೧೯ ರಲ್ಲಿ ರಾವ್‌ ಬಹದ್ದೂರು ಆರ್.ನರಸಿಂಹಾಚಾರ್ಯ ಅವರು ಬರೆದ “ಕರ್ನಾಟಕದ ಕವಿ ಚರಿತೆ””  ಸಂಪುಟ-೨ ರಲ್ಲಿ ಶ್ರೀ ಗುರುಬಸವ ಅವರ ಕುರಿತು ಮತ್ತು ಅವರ ಕೃತಿಗಳ ಕುರಿತು ವಿಶೇಷ ಬೆಳಕು ಚಲ್ಲುತ್ತದೆ. ಆ ಪುಸ್ತಕದ ಪುಟ ಸಂಖ್ಯೆ ೭೪ ರಿಂದ ೮೦ ರವರೆಗೆ ವಿಸ್ತೃತ ಲೇಖನದ ಪೂರ್ಣ ಪಾಠ ಹೀಗಿದೆ.

ಗುರುಬಸವ, ಸು 1430

ಈತನು ಶಿವಯೋಗಾಂಗಭೂಷಣ, ಸದ್ಗುರುರಹಸ್ಯ, ಕಲ್ಯಾಣೇಶ್ವರ, ಸ್ವರೂಪಾಮೃತ, ವೃಷಭಗೀತೆ, ಅವಧೂತಗೀತೆ, ಮನೋವಿಜಯಕಾವ್ಯ ಈ ಗ್ರಂಥಗಳನ್ನು  ಬರೆದಿದ್ದಾನೆ. ಗುರುಬಸವಾರ್ಯರ ವಚನ ಎಂಬ ಹಾಡಿನ ರೂಪವಾದ ಒಂದು ಗಂಥವು ದೊರೆಯುತ್ತದೆ. ಇದೂ ಏತತ್ಕವಿಕೃತವಾಗಿರಬಹುದೋ ಏನೋ ತಿಳಿಯದು.

ಇವನು ವೀರಶೈವ ಕವಿ . ಮನೋವಿಜಯಕಾವ್ಯದ ಕೊನಯ ಗದ್ಯದಲ್ಲಿ “ಶಿವಯೋಗಜನಸೇವಿತಚರಣಾರವಿಂದ ಷಟ್‌ ಸ್ಥಲ ಜ್ಞಾನಪ್ರಭಾಪುಂಜರಂಜಿತಾಂತರಂಗ ವೀರಶೈಮತ ಸ್ಥಾಪನಾಚಾರ್ಯನಪ್ಪ ಶ್ರೀಮದ್ಗುರು ಬಸವೇಶ್ವರಂ “ಎಂಬ ಹೇಳಿರುವದರಿಂದ  ಈತನು ಬಹಳಾ ಪ್ರಸಿದ್ಧನಾದ ವೀರಶೈವಗುರುವಾಗಿದ್ದಂತೆ  ತಿಳಿಯುತ್ತದೆ. ಚನ್ನಬಸವ ಪುರಾಣದ ೬೩ ನೆಯ ಸಂಧಿಯ ೧೫,೧೬,೩೫ ನೆಯ ಪದ್ಯಗಳಿಂದ ಇವನು ವಿಜಯನಗರದ ರಾಜನಾದ ೨ ನೆಯ ಪ್ರೌಢದೇವರಾಯನ (1419-1446) ಕಾಲದಲ್ಲಿ ಇದ್ದಂತೆ ತಿಳಿಯಬರುತ್ತದೆ. ಇವನ ಕಾಲವು ಸುಮಾರು ೧೪೩೦ ಆಗ ಬಹುದು.

ಇವನ 7 ಗ್ರಂಥಗಳು ಸಪ್ತಕಾವ್ಯವೆಂದು ಪ್ರಸಿದ್ಧವಾಗಿವೆ. ಎಲ್ಲವೂ ವೀರಶೈವವೇದಾಂತ ಪ್ರತಿಪಾದಕವಾಗಿಯೂ ಗುರುಶಿಷ್ಯಸಂವಾದರೂಪವಾಗಿಯೂ ಇವೆ. ಒಟ್ಟು 1243 ಪದ್ಯಗಳಿವೆ.

ಈ ಗ್ರಂಥಗಳಲ್ಲಿ

1 ಶಿವಯೋಗಾಂಗಭೂಷಣ

ಇದು ಪರಿವರ್ಧಿನೀ ಷಟ್ಪದಿಯಲ್ಲಿ ಬರೆದಿದೆ. ಸಂಧಿ 6, ಪದ 278. ಈ ಗ್ರಂಥದಲ್ಲಿ ಯೋಗಾಭ್ಯಾಸಕ್ರಮ, ಯೋಗಾಸನ, ಮುಂತಾದ ವಿಷಯಗಳು ಹೇಳಿವೆ. ಇದರ ಉತೃಷ್ಟತೆಯನ್ನು ಕವಿ ಈ ಪದ್ಯದಲ್ಲಿ ಹೇಳಿದ್ದಾನೆ:

ಶ್ರುತಿವನಿತೆಯ ಮುಖಗನ್ನಡಿ ಶಾಸ್ತ್ರ |

ಪ್ರತತಿಯ ನಿಲುಕಡೆ ತರ್ಕಂಗಳ ಸ |

ನ್ಮತ ನಿಖಿಲಾಗಮತತ್ವರಹಸ್ಯಂಗಳ ಘನಚೇತನವು ||

ಸ್ಮೃತಿಗಳ ಮುದ ಪೌರಾಣಂಗಳ ನಿಜ |

ಮತಿಯಖಿಲಾದ್ಯರ ವಚನಂಗಳ ನಿ |

ಶ್ಚಿತಮತವೀಯೋಗಾಂಗವಿಭೂಷಣವೆಂದನು ದೇಶಿಕನು |

ಈ ಗ್ರಂಥಕ್ಕೆ ಶಿವಯೋಗಾಂಗಭೂಷಣ ಎಂಬ ಹೆಸರು ಬರಲಿಕ್ಕೆ ಕಾರಣವು ಈ ಪದ್ಯದಲ್ಲಿ ಹೇಳಿದೆ-

ಸತ್ಯ ವಿರತಿ ಗುತಲಾಲಸನಿಶ್ಚಲ |

ಯುಕ್ತಿ ಮನೋಮತನಿರಸನವೆಚ್ಚ |

ನಿತ್ಯಸ್ವ ಪ್ರತ್ಯಕ್ಷತೆಸಂತೃಪ್ತಿಗಳೆ ಯಮಾದಿಗಳು ||

ಅತ್ಯುತ್ಸಾಹದೊಳಿವನನುದಿನ ನಿಜ |

ಭಕ್ತಿಸಹಿತ ಭೂಷಿಸಿ ಶಿವನೊಳು ಸಂ |

ವ್ಯಕ್ತದಲೇ ಬೆರಸುವ ಕಾರಣವಿದು ಯೋಗಾಂಗವಿಭೂಷಣವು ||

ಪದ್ಯಗಳು ಪ್ರಾಯಿಕವಾಗಿ ಎಂದನು ದೇಶಿಕನು, ಪೇಳಿದ ದೇಶಿಕನು, ಎಂದು ಮುಗಿಯುತ್ತವೆ. ಗ್ರಂಥಾಂತ್ಯದಲ್ಲಿ ಕೆಲವು ಅನುಷ್ಟುಪ್‌ಶ್ಲೋಕಗಳೂ ಇವೆ. ಈ ಗ್ರಂಥದಿಂದ ಒಂದೆರಡು ಪದ್ಯಗಳನ್ನು ಉದ್ಧರಿಸಿ ಬರೆಯುತ್ತೇವೆ-

ಇದುಹೆಯ ಕೋಶವನಬುಜಭವಾಂಡವ|

ನರಣಿಯ ಮೇರುಗಿರಿಯ ದಿಕ್ಪುಂಜವ |

ಕರಸಂಪುಟಿಕೆಯನಂಬುನಿಧಿಯ ಚುಲುಕೋದಕಮಾತ್ರಕವಂ ||

ತರಣಿಯ ಖದ್ಯೋತನ ಗೋಷ್ಪದಮಂ|

ಧರಣಿಯ ಸಮವೆಂದೆನಿಸುವಮಹಿಮೆಯ |

ಹರವರಿಯಿಂ  ಸು   ದಾಡುವನಿಳೆಯೊಳಗೆಂದನು ದೇಶಿಕನು ||

ಹಸಿಯದೆ ಹುಸಿಯದೆ ಕುಸಿಯದೆ ನೆಸೆಯದೆ |

ಹಸಗೆಡದಖಿಳರೊಳಗೆ ಕಾರುಣ್ಯಂ |

ಮಸುಳಿಸದುದ್ರೇಕಿಸದೆ ವೃಧಾ ದೈನ್ಯದಿ ವಿಷಯಂಗಳೊಳು ||

ಪಸರಿಸಿ ಹರಿದಾಡದೆ ಲೌಕಿಕರಿಂ |

ವಸನಾಗಿರದೆ ಮನಸ್ಸಂಸಾರದ |

ಬೆಸುಗೆಯದು ಸುಯುತ್ತಿಹನಿಳೆಯೊಳಗೆಂದನು ದೇಶಿಕನು |

2 ಸದ್ಗುರುರಹಸ್ಯ

ಇದು ಭಾಮಿನೀಷಟ್ಪದಿಯಲ್ಲಿ ಬರೆದಿದೆ; ಉಪದೇಶ 9, ಪದ್ಯ 237. ಈ ಗ್ರಂಥದ  ವಿಷಯವಾಗಿ ಕವಿ ಹೀಗೆ ಬರೆದಿದ್ದಾನೆ-

ವೇದದಂತುಟಿದಲ್ಲ ಶಾಸ್ತ್ರದ |

ಹೋದ ಹೋಲಬಲ್ಲೆಲೆ ಪುರಾಣದ |

ಗಾದೆಗಳ ಜಂಜಡದ ಜಾಡ್ಯದ ಜಿನುಗು ತಾನಲ್ಲ ||

ಆದರಿಸಿ ಕೇಳುವಡೆ ಪರಮಸ |

ಮಾಧಿಶಾಂಭವಸತ್ಯ ಸಮ್ಯ |

ಗ್ಬೋಧಲೀಲಾಲೋಲಶೀಲಾನ್ವಯರಹಸ್ಯವಿದು ||

ಗ್ರಂಥಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಕೆಲವು ಪದ್ಯಗಳನ್ನು  ತೆಗೆದು ಬರೆಯುತ್ತೇವೆ

ಬಸವಸ್ತುತಿ

ಘಟವನದಾಕಾಶದಂತುಟು |

ಪಟವನದಿಹ ಚಿತ್ರದಂತುಟು |

ಸಟೆಯನದುರುಸತ್ಯದಂತುಟುಪಾಧಿಯಂ ಪದು ||

ನಟಿಸಿ ತೋರುವ ದೀಪದಂತುಟು |

ಕುಟಿಲಮಾಯೆಯನದು ನಿಜದೊಳ್ |

ಘಟಿಸಿದಮಲಬ್ರಹ್ಮಗುರುಬಸವಂಗೆ ಶರಣೆಂಬೆ ||

ಶಿಷ್ಯನಿಗೆ ಉವದೇಶ

 ನೊಂದು ತಾಪತ್ರಯಗಳಿಂದ |

ಮುಂದುಗೆಟ್ಟಹ ಜಗವ ಕಾಣುತ |

ಹಂದೆಯಂ ಹಾವಡರಿದಂತವಿವೇಕದಿಂ ತನ್ನ ||

ಬೆಂದ ತುಂದನಿಮಿತ್ತ ಪೆರಂ |

ಕೊಂದು ಕೂಗಿ ನಿರರ್ಧ ನಿರಯದೊ |

ಳೊಂದಬೇಡೆಂದೈದೆ ಪೇಳಿದ ದೇಶಿಕೋತ್ತಮನು ||

ಕರ್ಮ ಪಟವ ನಂಬಿ ಪರಮನ |

ವರ್ಮವಯದೆ ವಾಗ್ವಿಲಾಸದಿ |

ಬೊಮ್ಮವಾರ್ತೆಯ ನುಡಿದು ಶಿಶ್ನೋದರಪರಾಯಣದ ||

ಧರ್ಮದಲಿ ನೀ ನಡೆದು ಹಮ್ಮಿನ |

ಬಿಮ್ಮು ಮಿಗೆ ತಲೆಗೇ ಮಗನೇ |

ಗಮ್ಮ ನಿಯಲ್ಬೇಡ ನಿರಯದೊಳೆಂದ ದೇಶಿಕನು |

  1. ಕಲ್ಯಾಣೇಶ್ವರ

 ಇದು ಪರಿವರ್ಧಿನೀಪಟ್ಪದಿಯಲ್ಲಿದೆ ; ಪದ್ಯ 102 “ಕಲ್ಯಾಣೇಶ್ವರನೆನಿಸುವ ಬಸವನ ಕಾರುಣ್ಯದಿಂ ಭಾವಿಸುತಿಹುದೆಂದನು ದೇಶಿಕನು” ಎಂಬುದರಿಂದ ಈ ಗ್ರಂಥದ ಕಲ್ಯಾಣೇಶ್ವರ ಎಂಬ ಹೆಸರಿಗೆ ಕಾರಣವು ಊಹಿಸಬಹುದಾಗಿದೆ. ಇದರಲ್ಲಿ- ಬಸವನ ಸಹಚರಿಯಾದ ನಂದಿನಿ ತನ್ನ ಕಿಂಕರ ನಾದ ವಿಚಿತ್ರಕನೆಂಬ ಗಣೇಶ್ವರನು  ಸುಜ್ಞಾನಚರಿತ್ರನಾಗಲು ಮಾಡಿದ ಜ್ಞಾನಬೋಧೆಯನ್ನು ದೇಶಿಕನು ಶಿಷ್ಯನಿಗೆ ನಿರೂಪಿಸಿದಂತೆ ಹೇಳಿದೆ. ಗ್ರಂಥಾವತಾರದಲ್ಲಿ ಬಸವಸ್ತುತಿಯೂ ಬಸವಸಹಚರಿಯಾದ ನಂದಿನಿಯ ಸ್ತುತಿಯೂ ಇವೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ.

ಪ್ರಳಯಾರ್ಕನ ದೀಪ್ತಿಯನೊಳಕೊಂಡು|

ಜ್ಜ್ವಲಿಸುವ ಲಿಂಗದ್ಯುತಿ ಸರ್ವಾಂಗವ ಬಳಸಿ ಮಹಾತೇಜಃಪುಂಜೀಕೃತವಾಗಿ ಬಹಿಷ್ಕರಿಸಿ ||

ಮಲೆಯುತ ದಳವೇತ ಧಳಧಳಿಸುತ |

ಘುಳುಘುಳಿಸುತಷೂರ್ಮಿಸುತ ಸಮಸ್ತವ ಸುಸುಗೊಳುತಿಹುದೀಗ ಮಹಾಸಿದ್ಧಿಗೆ ಕುಹಯೆಂದ ||

ಆಡುತಲನುಭವದೊಳು ಗುರುವಚನವ ಪಾಡುತ ಸುಮನೋದೃಷ್ಟಿಯೊಳೊಲವಿಂ |

ನೋಡುತ ಲಿಂಗವ ಚಿತ್ತಾಂತರ್ಗತವಹ ಬಹುಬಾಧೆಗಳಂ ||

ಝೂಡಿಸಿ ಸತ್ಯಾನಂದಾಂಬುಧಿತುಳು |

ಕಾಡುತ ನಿಜವಿಶ್ರಾಂತಿಯೊಳೀ ಪರಿ | ರೂಢಿಯೊಳಗೆ ನಿರುಪಮಸುಖದಿಂದಿಹುದೆಂದನು ದೇಶಿಕನು ||

4 ಸ್ವರೂಪಾಮೃತ

ಇದು ಭಾಮಿನೀಪಟ್ಪದಿಯಲ್ಲಿದೆ; ಪರಿಚ್ಛೇದ 3, ಪದ್ಯ 77. ಗ್ರಂಥಾದಿಯಲ್ಲಿ ಬಸವಸ್ತುತಿ ಇದೆ. ಇದರಿಂದ ಒಂದೆರಡು ಪದಗಳನ್ನುಗದ್ಧರಿಸಿ ಬರೆಯುತ್ತೇವೆ

ತೆಗೆದು ವಾಯುಗಳಂ ಸದಾತ್ಮನು |

ಬಿಗಿದು ಧಾತುಗಳಂ ಶರೀರವ |

ನಗಲದಿರುತಿರಲಿಹುದದಲ್ಲದಿರಲ್ ಕ್ಷಣಾರ್ಧದೊಳು ||

ಹಗಲು ನಾಯ್ನರಿನೋಣಗಳೀ ಕಾ |

ಗೆಗಳು ನೊರಜುಗಳೀ ಶರೀರವ |

ಸೊಗಸದೊಗಡಿಸದೆಳಸುವುವೆ ನೀಂ ತಿಳಿದು ನೋಡೆಂದ ||

ವಿಷಯತಳಿರಿಂ ತಳಿತು ಕೊರ್ವಿದ |

ದಶವಿಧೇಂದ್ರಿಯಶಾಖೆಗಳನೆ |

ಣ್ದೆಸೆಯೊಳಿಟ್ಟುದ್ದಾನವಾಗಿ ಶರೀರ ಭೂರುಹವು ||

ವ್ಯಸನಪುಷ್ಪದಿ ಕರ್ಮಫಲದಿಂ |

ದೆಸೆದಿರಲು ತತ್ಪಲವನುಲ್ಲಾ |

ಲಸದಿ ಮಾನಸವಕ್ಕಿ ಎಸಟಂಬರಿದು ತಿನುತಿಹುದು ||

  1. ವೃಷಭಗೀತೆ

ಇದು ಭೋಗಪಟ್ಪದಿಯಲ್ಲಿ ಬರೆದಿದೆ; ಪದ್ಯ 101, ಪದ್ಯಗಳು ಪ್ರಾಯಿಕವಾಗಿ ಬಾಲ್ವನವ ಕೃತಾರ್ಥನು, ತಿಳಿವನವ ಕೃರ್ತಾಥನು ಎಂದು ಮುಗಿಯುತ್ತವೆ. ಈ ಗ್ರಂಥವು ಬಸವಸ್ತುತಿರೂಪವಾಗಿಯೂ ವೀರಶೈವವೇ ದಾಂತಪ್ರತಿಪಾದಕವಾಗಿಯೂ ಇದೆ. ಇದರಿಂದ ಒಂದೆರಡು ಪದ್ಯಗಳನ್ನು ತೆಗೆದು ಬರೆಯುತ್ತೇವೆ~

ಪಯದಿಹುದೆ ಧರ್ಮ ತನುವ |

ಕೆಳೆಯದಿಹುದೆ ಸಿದ್ಧಿ ಚಿತ್ತ |

ವಲುಗದಿಹುದೆ ಮುಕ್ತಿ ಮದು ನುಡಿದ ವಕ್ಕಣೆ ||

ಹೊಳೆಯದಿಹುದೆ ಸತ್ಯ ರೋಷ |

ದಳೆಯದಿಹುದೆ ಶಾಂತಿ ಕಪಟ |

ಮೊಳೆಯದಿಹುದೆ ಸೌಖ್ಯವಿದನು ತಿಳಿಯಲವ  ಕೃತಾರ್ಧನು ||

ಶಮದಮಾದಿಗುಣವಿಶಿಷ್ಟ |

ವಿಮಲಚಿತ್ರಪುಷ್ಪನಷ್ಟ |

ಮಮತೆಹೀನ ದುಃಖಸುಖಸಮಾನವಾಗಿಯೇ ||

ಭ್ರಮಣಭವವಿಕಾರನಾಟ್ಯ |

ವಿಮುಖನಾಗಿ ತನ್ನ ತಾನೆ |

ಸಮವನದ ನನ್ಯಸುಖದೊಳಿರ್ಪನವ ಕೃತಾರ್ಧನು ||

  1. ಅವಧೂತಗೀತೆ

ಇದು ವಿರಕ್ತಿ ಬೋಧಕವಾದ ಹಾಡಿನ ರೂಪದಲ್ಲಿದೆ; ಹಾಡು 101. ಅಂತ್ಯದಲ್ಲಿ  ಅವಧೂತಲಕ್ಷಣವು ಹೇಳಿದೆ ಗ್ರಂಧಾದಿಯಲ್ಲಿ ಬಸವಸ್ತುತಿ ಇದೆ.  ಇದರಿಂದ ಒಂದೆರಡು ನುಡಿಗಳನ್ನು ತೆಗೆದು ಬರೆಯುತ್ತೇವೆ

ಹಸುಗಯದೆ ಸೊಣಗನು ಮತಿಗೆಟ್ಟು |

ಮುಸುರೆಯ ಮಡಕೆಯೊಳಗೆಮೊಗವಿಟ್ಟು |

ದೆಸೆಗಾಣದೆ ಬಾಧೆಗೆ ತನುಗೊಟ್ಟು |

ಪೆಸರ್ಗೊಳಲಿದು ಸಂಸಾರದ ಗುಟ್ಟು ||

ವಡಬ ಜಡಂ ಗುಣಮಹಿಸಂತಾನ |

ಸುಡುವ ವಿಷಂ ಪೀಯೂಷಸಮಾನ I

ಪೊಡೆವ ಸಿಡಿಲ್ ಮಂಜುಳವರಗಾನ |

ಮೃಡಗುರುಕರುಣಕಟಾಕ್ಷದ ಭಾನ ||

  1. ಮನೋವಿಜಯಕಾವ್ಯ

ಇದು ಕುಸುಮಪಟ್ಪದಿಯಲ್ಲಿ ಬರೆದಿದೆ; ಪ್ರಕರಣ 9; ಪದ್ಯ 355, ಈ ಗ್ರಂಥದಲ್ಲಿ ಸುವಿವೇಕನೆಂಬ ಜ್ಞಾನಿ ಸಂಸಾರಕಲಸಿ ಗುರುವಿಡಿದು ತನ್ನ ನಿಜ ತಾನಾದ ಸಂಗತಿ ಹೇಳಿದೆ. ಇದರ ಉತ್ಕೃಷ್ಟತೆಯನ್ನು ಕವಿ ಈ ಪದ್ಯಗಳಲ್ಲಿ ಹೇಳಿದ್ದಾನೆ-

ಸದುಗುರುಕಟಾಕ್ಷದಿಂ |

ದುದಿಸಿದ ನಿಜಾನುಭವ |

ದುದಯದಿಂದಖಿಲಾದ್ಯರನುಮತದೊಳು ||

ವಿದಿತವೇದಾಗಮೋ |

ಕ್ತ ದೊಳುಪನಿಷತ್ತುಗಳೊ |

ಳೊದವಿಸಿದ ಸಮ್ಮ ತಿಯ ಸಂಗ್ರಹವಿದು ||

ಇದು ಶ್ರುತಿಸ್ಮೃತಿಯ ಸೌ |

ಖ್ಯದ ಸುಖಂ ವೇದಾಂತ |

ದೊದವು ನಿಜಶೈವಸಿದ್ದಾಂತಮತದ ||

ಹೃದಯವಾದ್ಯರ ಕರುಣ |

ದುದಯದನುಭವಸಿದ್ಧ |

ವಿದನವರೀಸುವಿಧದವವರು ||

ಗ್ರಂಥಾವತಾರದಲ್ಲಿ ಬಸವಸ್ತುತಿ ಇದೆ. ಬಳಿಕ ಕವಿ ಅಲ್ಲಮ, ಚನ್ನಬಸವ, ಮಡಿವಾಳ, ಸಿದ್ಧರಾಮ, ಇವರುಗಳನ್ನೂ ನೂತನಪುರಾತನರನ್ನೂ ಸ್ತುತಿಸಿದ್ದಾನೆ. ಗ್ರಂಥಾತ್ಯದಲ್ಲಿ ಈ ಗದ್ಯವಿದೆ—

ಶ್ರೀಮತ್ಪರಮಪರಮಾನಂದನಿತ್ಯ ನಿರ್ಮಲನಿರಘನಿರ್ಗುಣನಿರಾವರಣಸಕಲಜಗದ್ಧ

ರಿತಭಕ್ತ ಜನಮನೋ…………ವಯೋಗಿಜನಸೇವಿತಚರಣಾರವಿಂದ ಷಟ್ತ್ಸಲಜ್ಞಾನಪ್ರ ಭಾಪುಂಜರಂಜಿತಾಂತರಂಗ ವೀರಶೈವಮತಸ್ಥಾಪನಾಚಾರ್ಯನಪ್ಪ ಶ್ರೀಮದ್ಗುರುಬಸವೇಶ್ವರಂ ಸಕಲಭಕ್ತ ಜನಹಿತಾರ್ಧವಾಗಿ ಸುಜ್ಞಾನಿಗಳಿಗಾನಂದನಪ್ಪ….ಸ್ತುಶಿವಯೋಗೀಶ್ವರರದಾಚರಿಸಲೆಂದು ವೇದಾಗಮೋಪನಿಷತ್ಸಮ್ಮತಿಯಿಂ ನಿರೂಪಿಸಿದ ಮನೋ ವಿಜಯವೆಂಬ ಪ್ರಕರಣಂ ಪರಿಸಮಾಪ್ತಂ.

ಈ ಗ್ರಂಥದಿಂದ ಕೆಲವು ಪದ್ಯಗಳನ್ನು ತೆಗೆದು ಬರೆಯುತ್ತೇವೆ  –

ಹಿಸುಣತೆಗೆ ಹಿಗ್ಗಿ ಮಿಗೆ |

ಕಿಸುಕುಳದೊಳೊಗ್ಗಿ ಸಂ |

ತಸವಟ್ಟು ಕಳವುಹಾದರಹಿಂಸೆಗೆ ||

ಬೆಸಗೆಯ್ದು ನಿಂದೆತಾ |

ಮಸಕುಟಿಲಕುಹಕದೊಳ |

ಗೆಸೆದು ಮನವಿನಿಸಳ್ ಬೆಸೆದಿರ್ಪುದು ||

ಚಿಪ್ಪಿನೊಡಕಂ ಬೆಳ್ಳಿ |

ಯಪ್ಪುದೆಂದದ ಪಿಡಿಯ |

ಲಪ್ಪದೇ ಭ್ರಾಂತಿಯಾಪುತ್ತಿನೆಡೆಯೊಳ್ ||

ಇರ್ಪ ಸರವಿಯೆ ಸರ್ಪ |

ನಪ್ಪುದೆಂದಂಜಿಯಿಂ |

ತಿರ್ಪುದೇ ಸಂಶಯವಿದೆಂದವುದು ||

ನಳಿನಮಿತ್ರನ ಕಿರಣ |

ತಳಿಗೆಯೊಳ್‌ ಬೆಳಗಲದು |

ತೊಳಗದೇ ಶತಗುಣೋತ್ತರಮದಾಗಿ ||

ಹವುಂಟೆ ರವಿಗ ಸಂ |

ಚಳ ತಳಿಗೆಯಿಂದೈಸೆ |

ತಿಳಿವುದಾಪರಿಯ ಪರಮಾತ್ಮನಿರವಂ ||

ಆವುಮವೆಗಳೆರಡ |

ರತದಿಂ ಹುಸಿದಿಟಗ |

೪ಬಸಿ೦ ನಾನು ನೀನೆಂಬುಭಯದ ||

ಸ ಕಿನಿಂ ಮನವೆಂಬು | ದ ಕುವರ ನೀ ಜಾಗ್ರ |

ದು ಸುಪ್ತಿ ಮಧ್ಯದೊಳ್ ಕನಸಿನಂತೆ ||

  1.  ಏನಿರಬಹುದು ಈ ಖೇಚರೀ ಮುದ್ರೆಯ ಯೋಗದಲ್ಲಿ ?

ಖೇಚರಯೋಗಿ ಎನ್ನುವ ವಿಶೇಷ ಶಬ್ಧಕ್ಕೆ ಶ್ರೀ ೧೦೦೮ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಅಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅತ್ಯಂತ ಸುಂದರವಾಗಿ ಹೀಗೆ ವಿವರಿಸಿದ್ದಾರೆ.

ಸಂಸ್ಕೃತದಲ್ಲಿ “ಖ” ಎಂದರೆ ಆಕಾಶ ಎಂದರ್ಥ,ಅದರ ಸಪ್ತಮಿ ವಿಭಕ್ತಿ ರೂಪ “ಖೇ”. ಚರ ಎಂದರೆ ಸಂಚರಿಸು ಎಂದರ್ಥ.

“ಖೇ ಚರತೇತಿಖೇಚರ” ಎಂಬ ವ್ಯುತ್ಪತ್ತೀಯ ಆಧಾರದ ಮೇರೆಗೆ “ ಖೇಚರಯೋಗಿ” ಎಂದರೆ ತನ್ನ ಯೋಗ ಬಲದಿಂದ ಆಕಾಶಮಾರ್ಗದಲ್ಲಿಯೂ ಕೂಡ ಸಂಚರಿಸಬಲ್ಲ ಶಕ್ತಿಯನ್ನು ಸಂಪಾದಿಸಿಕೊಂಡ ಸಿದ್ಧಪುರುಷರು ಎಂದರ್ಥ.

ಅಂತಹ ವೈಶಿಷ್ಟ್ಯಪೂರ್ಣ ಯೋಗ “ಖೇಚರೀ ಮುದ್ರೆ”ಯ ಸಿದ್ದಪುರುಷರಾಗಿದ್ದವರು ಶ್ರೀ ಗುರುಬಸವ ಅವರು.ಅವರ “ಖೇಚರೀ ಮುದ್ರೆ”ಯ ಯೋಗ ಸಾಧನೆಯ ಪ್ರಸಿದ್ಧಿಯಿಂದಲೆ ಕ್ಯಾಸನೂರಿನ ಮೂಲ ಹೆಸರು ಖೇಚರಿಪುರ !.

 1926 ರಲ್ಲಿ ಪ್ರಕಟವಾದ ಯೋಗಾನಂದ ಅವರ  ಹೋಮ್ ಸ್ಟಡಿ ಕೋರ್ಸ್‌ನ ಆರಂಭಿಕ ಆವೃತ್ತಿಯಲ್ಲಿ ಯೋಗಾನಂದರು ಖೇಚರಿ ಬಗ್ಗೆ ಬರೆದಿದ್ದಾರೆ. ಅವರು ಕೆಳಗೆ ಉಲ್ಲೇಖಿಸಿರುವ “ಪುಟ್ಟ ನಾಲಿಗೆ” ಎಂದರೆ ಉವುಲಾ , ಬಾಯಿಯ ಛಾವಣಿಯಿಂದ ಗಂಟಲಿನ ಹಿಂಭಾಗದಲ್ಲಿ ನೇತಾಡುವ ಮೃದು ಅಂಗಾಂಶ:

ಈ ಕುಂಡಲಿನಿಯು ಮೆದುಳಿನ ಕಡೆಗೆ ಚಲಿಸುತ್ತದೆ ಮತ್ತು ನಾಲಿಗೆಯ ತುದಿಯಲ್ಲಿರುವ ನರಗಳ ಒಕ್ಕೂಟ ಮತ್ತು “ಚಿಕ್ಕ ನಾಲಿಗೆ” ಮತ್ತು ಮೂಗಿನ ಕುಹರದ ಕೆಲವು ಕೇಂದ್ರಗಳಿಂದ ಸಹಾಯ ಮಾಡುತ್ತದೆ, ಜೀವ ಶಕ್ತಿ ಮತ್ತು ಕಾಸ್ಮಿಕ್ ಶಕ್ತಿಯ ಒಕ್ಕೂಟದೊಂದಿಗೆ ದ್ರವದ ಸ್ರವಿಸುವಿಕೆಯನ್ನು ತರುತ್ತದೆ.

ಮಕರಂದ ಮತ್ತು ಶಕ್ತಿಗಳ ಒಕ್ಕೂಟದ ಈ ಸ್ರವಿಸುವಿಕೆಯು ಯಾವುದೇ ನಷ್ಟವನ್ನು ಒಳಗೊಳ್ಳುವುದಿಲ್ಲ, ಆದರೆ ಅಪಾರ ಆಧ್ಯಾತ್ಮಿಕ ಸಾಕ್ಷಾತ್ಕಾರವನ್ನು ಅರ್ಥೈಸುತ್ತದೆ.

ಯೋಗದಲ್ಲಿ ಖೇಚರಿ ಮುದ್ರೆ ಎಂದು ಕರೆಯಲ್ಪಡುವ ಮೂಲಕ ಈ ಒಕ್ಕೂಟವನ್ನು ಭೌತಿಕವಾಗಿಯೂ ಸಾಧಿಸಬಹುದು – ನಾಲಿಗೆಯ ತುದಿಯನ್ನು ಮೂಗಿನ ಮಾರ್ಗದಲ್ಲಿರುವ ನರಗಳಿಗೆ ಅಥವಾ ಬಾಯಿಯ ಹಿಂಭಾಗದಲ್ಲಿರುವ ಉವುಲಾಕ್ಕೆ ಸ್ಪರ್ಶಿಸುವುದು.

– ಸ್ವಾಮಿ ಕ್ರಿಯಾಾನಂದರಿಂದ ಯೋಗಾನಂದರೊಂದಿಗಿನ ಸಂಭಾಷಣೆಗಳು

ಆರಂಭಿಕ ಲೇಖನದಲ್ಲಿ ಯೋಗಾನಂದರು ಖೇಚರಿ ಮುದ್ರೆಯನ್ನು ಅಭ್ಯಾಸ ಮಾಡುವ ಪ್ರಯೋಜನಗಳಲ್ಲಿ ಒಂದನ್ನು ವಿವರಿಸಿದ್ದಾರೆ:

ಇದು ದೊಡ್ಡ ನಾಲಿಗೆಯ ತುದಿಯನ್ನು ಚಿಕ್ಕ ನಾಲಿಗೆಯೊಂದಿಗೆ (ಉವುಲಾ) ಸಂಪರ್ಕಿಸುವ ಮೂಲಕ ಸೆರೆಬ್ರಮ್ ಮತ್ತು ಮೆಡುಲ್ಲಾದಿಂದ ಶಕ್ತಿಯನ್ನು ಸೆಳೆಯುತ್ತದೆ.

ಅವರು 1935-6 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಪನ್ಯಾಸವೊಂದರಲ್ಲಿ ಹೆಚ್ಚು ನಿಗೂಢ ವಿವರಣೆಯನ್ನು ನೀಡಿದರು:

ಕ್ರಿಯಾವನ್ನು ಅಭ್ಯಾಸ ಮಾಡುವಾಗ… ಸಹಸ್ರಾರದಿಂದ (ಚಕ್ರ, ಅಥವಾ ಬೆನ್ನುಮೂಳೆಯ ಕೇಂದ್ರ, ತಲೆಯ ಮೇಲ್ಭಾಗದಲ್ಲಿ) ದೈವಿಕ ಮಕರಂದದಂತಹ ಪ್ರವಾಹವು ಹರಿಯುತ್ತದೆ .

ಖೇಚರಿ ಮುದ್ರೆಯ ಪ್ರದರ್ಶನದ ಮೂಲಕ, ನಾಲಿಗೆಯ ತುದಿಯನ್ನು ಉವುಲಾಕ್ಕೆ ಸ್ಪರ್ಶಿಸುವುದು, ಅಥವಾ “ಪುಟ್ಟ ನಾಲಿಗೆ” (ಅಥವಾ ಉವುಲಾದ ಹಿಂದೆ ಮೂಗಿನ ಕುಳಿಯಲ್ಲಿ ಇಡುವುದು), ಆ ದೈವಿಕ ಜೀವನ-ಪ್ರವಾಹವು ಪ್ರಾಣವನ್ನು ಇಂದ್ರಿಯಗಳಿಂದ ಬೆನ್ನುಮೂಳೆಯೊಳಗೆ ಸೆಳೆಯುತ್ತದೆ. ಮತ್ತು ಅದನ್ನು ಚಕ್ರಗಳ ಮೂಲಕ ವೈಷ್ಣವರಕ್ಕೆ (ಯುನಿವರ್ಸಲ್ ಸ್ಪಿರಿಟ್ ) ಸೆಳೆಯುತ್ತದೆ , ಪ್ರಜ್ಞೆಯನ್ನು ಚೈತನ್ಯದೊಂದಿಗೆ ಒಂದುಗೂಡಿಸುತ್ತದೆ.

ಇಡೀ ದೇಹವು ಆ ಮೂಲಕ ಆಧ್ಯಾತ್ಮಿಕ ಮತ್ತು ಶಕ್ತಿಯುತವಾಗಿರುತ್ತದೆ. ಪರಿಣಾಮವಾಗಿ, ದೇಹದಿಂದ ಗ್ರಹಿಸಬಹುದಾದ ಹೊಳಪು ಹೊರಹೊಮ್ಮಬಹುದು.

-ಮೆಜ್ದಾ: ದಿ ಫ್ಯಾಮಿಲಿ ಅಂಡ್ ದಿ ಅರ್ಲಿ ಲೈಫ್ ಆಫ್ ಪರಮಹಂಸ ಯೋಗಾನಂದರಿಂದ ಸಾನಂದ ಲಾಲ್ ಘೋಷ್, ಪುಟಗಳು 279-28

ಪ್ರಯೋಜನಗಳು

  1. ಇದು ಬಾಯಾರಿಕೆ, ಹಸಿವು ಮತ್ತು ಸೋಮಾರಿತನವನ್ನು ಜಯಿಸಲು ಸಹಾಯ ಮಾಡುತ್ತದೆ
  2. ಸಾಧಕರು / ಯೋಗಿ ಯಾವುದೇ ರೋಗ, ಕೊಳೆತ ಅಥವಾ ಸಾವಿನಿಂದ ಬಳಲುವದಿಲ್ಲ.
  3. ಇದು ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ಮಿಸುತ್ತದೆ ಮತ್ತು ದೇಹವನ್ನು ದೈವಿಕವಾಗಿಸುತ್ತದೆ
  4. ಘೇರಾಂಡ ಸಂಹಿತಾ ಮತ್ತು ಹಠಯೋಗ ಪ್ರದೀಪಿಕಾ ಪ್ರಕಾರ, ಯೋಗಿ ವಿಷ ಮತ್ತು ಹಾವು ಕಡಿತದಿಂದ ರೋಗನಿರೋಧಕವಾಗುತ್ತಾನೆ.
  5. ಸಾಧಕನಿಗೆ ಅಂದರೆ ಅತಿಮಹತ್ವದ ಪ್ರಜ್ಞೆಯ ಸ್ಥಿತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ
  6. ಸ್ರವಿಸುವಿಕೆಯು ಅಂದರೆ ಮಕರಂದವು ವಯಸ್ಸಾದ ವಿರೋಧಿ ಪರಿಣಾಮವನ್ನು ಹೊಂದಿದೆ ಮತ್ತು ದೇಹಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ
  7. ಇದು ಎಲ್ಲಾ ಚಕ್ರಗಳನ್ನು ಉತ್ತೇಜಿಸುತ್ತದೆ ಮತ್ತು ದೇಹದಾದ್ಯಂತ ಶಕ್ತಿಯುತ ಮಾರ್ಗಗಳ ಸಮತೋಲನಕ್ಕೆ ಸಹಾಯ ಮಾಡುತ್ತದೆ. ದೇವತೆಗಳ ಅಮೃತವು ಬಿಡುಗಡೆಯಾಗುತ್ತದೆ ಮತ್ತು ದೇಹದಾದ್ಯಂತ ಮೂರನೇ ಕಣ್ಣಿನ ಚಕ್ರದಿಂದ ಹರಿಯುವುದರಿಂದ ಸಾಧಕನ ಸಂಪೂರ್ಣ ದೇಹವು ಪುನರುಜ್ಜೀವನಗೊಳ್ಳುತ್ತದೆ.
  8. ಇದು ಕುಂಡಲಿನಿ ಶಕ್ತಿಯನ್ನು ಹೆಚ್ಚಿಸಲು ಮತ್ತು ತಲೆಯಲ್ಲಿ ಅಮೃತದ ವಿವಿಧ ಮಳಿಗೆಗಳನ್ನು ಪ್ರವೇಶಿಸಲು ಶಕ್ತಗೊಳಿಸುತ್ತದೆ. ಇದು ತರುವಾಯ ದೇಹವನ್ನು ಪ್ರವಾಹ ಮಾಡುತ್ತದೆ. (ಖೇಚರಿವಿದ್ಯಾ – ಹಠಯೋಗ ಪಠ್ಯ)
  9. ಇದು ಭಕ್ತ/ಯೋಗಿಯನ್ನು ದೇವರ ಸಾರ್ವತ್ರಿಕ ಅರಿವಿನ ಸ್ಥಿತಿಗೆ ತಳ್ಳುತ್ತದೆ
  10. ಇದು ಮಾತಿನ ಮೇಲೆ ನಿಯಂತ್ರಣವನ್ನು ನೀಡುತ್ತದೆ

 

*****************************************************************************************

 

 

 

 

 

 

 

 

 

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ.

 

ಪಂಚೇಂದ್ರಿ ಲಿಂಗದೊಳು | ಸಂಚರಿಸುವ ನಿಃಪ್ರ-

ಪಂಚ ಮಹಲಿಂಗ – ಕಂಚುಕ ನಿನಗೆಂದ ನಿ

ರ್ವಂಚನೆಯ ಗುರುವೆ ಕೃಪೆಯಾಗು    ||೧೫೬||

 

ಶಿವಕವಿಯು ಇಲ್ಲಿ ಇದನ್ನು ಸಮನ್ವಯಗೊಳಿಸುತ್ತಾನೆ. ಗುದದಲ್ಲಿ ಆಚಾರ ಲಿಂಗವನ್ನು, ಗುಹ್ಯದಲ್ಲಿ ಗುರುಲಿಂಗವನ್ನು, ಪಾದಗಳಲ್ಲಿ ಶಿವಲಿಂಗವನ್ನು, ಕರಗಳಲ್ಲಿ ಜಂಗಮಲಿಂಗವನ್ನು, ವಾಣಿಯಲ್ಲಿ ಪ್ರಸಾದಲಿಂಗವನ್ನು ಪ್ರತ್ಯೇಕವಾಗಿ ಅಳವಡಿಸಿ ಕೊಳ್ಳುವದನ್ನು ಅರಿತಿದ್ದೇವೆ. ಆಯಾ ಕರ್ಮೇಂದ್ರಿಯಗಳಲ್ಲಿ ಆಯಾ ಲಿಂಗಗಳ ಅರಿವನ್ನು ಮಾಡಿಕೊಳ್ಳಬೇಕು. ಆದರೆ ಈ ಎಲ್ಲ ಇಂದ್ರಿಯಗಳ ವ್ಯವಹಾರ ಸ್ವತಂತ್ರವಾದುದಲ್ಲ. ಈ ಇಂದ್ರಿಯಗಳ ಕಾರ್ಯವ್ಯಾಪ್ತಿ ಕಾರ್ಯತೃಪ್ತಿ ಆತ್ಮನಿಗೆ ವೇದ್ಯವಾಗಬೇಕು. ಮಹಾಲಿಂಗಕ್ಕೆ ನೈವೇದ್ಯವಾಗಬೇಕು. ಆತ್ಮಸಂತೃಪ್ತಿಯಿಂದ ನಡೆಯುವ ಇಂದ್ರಿಯ ಕರ್ಮವೇ ಮಹಾಲಿಂಗನಿಗೆ ತೃಪ್ತಿಯಾಗುವದು.

 

ವಸ್ತುತಃ ಮಹಾಲಿಂಗವು ನಿಃಪ್ರಪಂಚಿಯು. ಪ್ರಪಂಚದ ಲೇಪ ಮಹಾಲಿಂಗಕ್ಕೆ ಇಲ್ಲ. ಅದಕ್ಕೆ ಅಂಟುವದೂ ಇಲ್ಲ. ಪಂಚೇಂದ್ರಿಯಗಳು ಪಂಚಲಿಂಗಮುಖವಾಗಿ ವ್ಯವಹರಿಸಿದರೆ ಮಹಾಲಿಂಗದ ರಕ್ಷಾಕವಚವು ಭಕ್ತನನ್ನು ಕಾಯುತ್ತದೆ. ಸಂತೈಸುತ್ತದೆ ಹಾಗೂ ಸಂತೃಪ್ತಿಯನ್ನೂ ನೀಡುತ್ತದೆ. ಪಂಚೇಂದ್ರಿಯಗಳ ತೃಪ್ತಿಯ ಅರಿವಾಗುವದು ಮಹಾಲಿಂಗಕ್ಕೇನೆ. ಮಹಾಲಿಂಗವು ಕ್ರಿಯಾಲಿಂಗಮುಖವಾಗಿ ಬಂದುದನ್ನು ಮಾತ್ರ ಸಂತೃಪ್ತಿಯಿಂದ ಸ್ವೀಕರಿಸುತ್ತದೆ.

 

ಈ ವಿಚಾರ ವ್ಯವಹಾರಿಕವಾಗಿ ಕಠಿಣವೆನಿಸಿದರೂ ಆಚರಿಸಿದಲ್ಲಿ ಸುಲಭವಾಗುವದೆಂದು ಗುರುನಾಥನು ಯಾವ ವಂಚನೆಯಿಲ್ಲದೆ ತತ್ತ್ವದ ತಿರುಳನ್ನು ತಿಳಿಸುತ್ತಾನೆ. ತತ್ತ್ವನಿಷ್ಠನಾದ ಸದ್ಗುರುವಿಗೆ ಉಪದೇಶಿಸುವಲ್ಲಿ ಅದಾವ ಸಂಕೋಚ ಆವರಿಸೀತು ! ಇಲ್ಲಿ ವಂಚನೆಗೂ ಇಂಬಿಲ್ಲ.

 

ಆದರೆ ಶಿಷ್ಯನು ಗುರುಕೃಪೆಯನ್ನು ಸಂಪಾದಿಸಬೇಕು. ಕರುಣೆಯನ್ನು ಪಡೆಯ ಬೇಕು. ಅದಕ್ಕಾಗಿಯೇ ಈ ಶರಣರು ನುಡಿಗೊಮ್ಮೆ ಗುರುಕೃಪೆಯನ್ನು ಯಾಚಿಸಿದ್ದಾರೆ.

 

 

ಕರ್ಮೇಂದ್ರಿಯಗಳಿಷ್ಟ | ಬ್ರಹ್ಮದಂಘ್ರಿಗಳೆಂಬ

ಮರ್ಮವನು ತೋರಿ-ನಿರ್ಮಲನೆನಿಸಿದ ಸ

ಧರ್ಮಿ ಶ್ರೀ ಗುರುವೇ ಕೃಪೆಯಾಗು   ||೧೫೭||

 

ಪೃಥ್ವಿಯ ಪಂಚೀಕರಣದಿಂದ ಹುಟ್ಟಿದ ಈ ಪಂಚಕರ್ಮೇಂದ್ರಿಯಗಳಲ್ಲಿ ಕ್ರಿಯಾಲಿಂಗವನ್ನು ಅಳವಡಿಸಿಕೊಳ್ಳುವದರಿಂದಾಗುವ ಫಲಶೃತಿಯನ್ನಿಲ್ಲಿ ತಿಳಿಸಿದ್ದಾನೆ.

 

ಇಷ್ಟಲಿಂಗವು ಕ್ರಿಯಾಲಿಂಗವು, ಅದನ್ನು ಆಯಾ ಇಂದ್ರಿಯಗಳಲ್ಲಿ ಧಾರಣ ಮಾಡುವದರಿಂದ ಆ ಇಂದ್ರಿಯಗಳ ಪೂರ್ವಾಶ್ರಯವಳಿಯುವದು. ಆಗ ಅಲ್ಲಿ ಕರ್ಮೆ೦ದ್ರಿಯ ಭಾವವಿರುವದಿಲ್ಲ. ಆ ವ್ಯವಹಾರವೂ ಉಳಿಯುವದಿಲ್ಲ. ಅದುಕಾರಣ ಲಿಂಗವಂತನು ಕರ್ಮೆಂದ್ರಿಯಗಳ ಎಲ್ಲ ವ್ಯವಹಾರವನ್ನು ಲಿಂಗಮುಖವಾಗಿ ಮಾಡಬೇಕು. ಅಂದರೆ ಇಂದ್ರಿಯಗಳಲ್ಲಿ ಇಷ್ಟಲಿಂಗದ ಅಂಫ್ರಿ (ಚರಣ)ಗಳಾಗುತ್ತವೆ.  ಆ ಲಿಂಗದ ಚರಣಗಳೇ ಭಕ್ತನ ಚರಣಗಳಾಗುತ್ತವೆ. ಆಗ ಆ ಲಿಂಗಭಕ್ತನು ಲಿಂಗಮುಂತಾಗಿ ಅರ್ಥಾತ್ ಲಿಂಗವನ್ನು ಮುಂದೆ ಮಾಡಿಯೇ ಆಚರಿಸುವನು. ಲಿಂಗಮುಖವಾಗಿ ನಡೆಯುವವನ ಕ್ರಿಯೆಗಳೆಲ್ಲ ಸತ್ಕ್ರಿಯಗಳಾಗುವವು. ಮಲತ್ರಯಗಳೆಲ್ಲ ನಿರ್ಮೂಲವಾಗಿ ನಿರ್ಮಲನೆನಿಸುವನು. ಇದುವೆ ಲಿಂಗಗಳನ್ನು ಅಂಗಾಂಗಗಳಲ್ಲಿ ಧರಿಸುವ ಮರ್ಮವೆಂದು ಶ್ರೀ ಗುರುನಾಥನು ಶಿಷ್ಯನಿಗೆ ಬೋಧಿಸುವನು. ಈ ತೆರನಾಗಿ ಕರುಣೆಯಿಂದ ಗುರುವು ಕರ್ಮೆಂದ್ರಿಯಗಳಿಗೆ ಕ್ರಿಯಾಲಿಂಗ (ಇಷ್ಟಲಿಂಗ) ದೊಳಗಿನ ಆರು ಲಿಂಗಗಳ ಸಂಬಂಧವನ್ನು ತೋರಿಸುತ್ತಾನೆ.

 

ಗುರುವೇ ! ಎನ್ನ ಕರ್ಮೇಂದ್ರಿಯಗಳಲ್ಲಿ ಕ್ರಿಯಾಲಿಂಗಗಳನ್ನು ಧರಿಸುವ ಶಕ್ತಿಯನ್ನು ದಯಪಾಲಿಸು, ಕ್ರಿಯಾಲಿಂಗಗಳನ್ನು ಇಂದ್ರಿಯಗಳಲ್ಲಿ ಧರಿಸಿ ಲಿಂಗ ಕಾಯನನ್ನಾಗಿಸು. ಇದು ನಿನ್ನ ಧರ್ಮ.

ಲೇಖಕರು-ಜ.ಚ.ನಿ

ವಿದ್ಯಾಪರಿಣತನಾದೊಡ

ಮುದ್ಯಮ ವಿರಹಿತನದೆಂತು ಪಡೆವಂ ಸಿರಿಯಂ

ಉದ್ಯಾನದಲ್ಲಿ ತರುವಿಂ

ಹೃದ್ಯಫಲಂ ಮಂತ್ರಬಲದೆ ಬೀಳ್ವುದೆ ಧರೆಯೊಳ್

ನೀತಿ ಮಂಜರಿ

 

“ಕೋಟಿವಿದ್ಯೆಗಳಿಗಿಂತ ಮೇಟಿ ವಿದ್ಯೆಯು ಮೇಲು’ ‘ಕರ್ಷತೋ ನಾಸ್ತಿ ದುರ್ಭಿಕ್ಷಂ ಎಂಬ ಗೈಮೆಯ ಹಿರಿಮೆಯನ್ನು ಬೆಳಸಿನ ಭಾಗ್ಯವನ್ನು, ಯಥಾರ್ಥವಾಗಿ ಗಮನಿಸಿದ ಸ್ವಾಮಿಗಳು ಅತಿವಿರಳ. ಕುಮಾರಯೋಗಿಗಳು ಕೃಷಿಯ ಮೇಲೆಯು ಕಣ್ಣು ಚೆಲ್ಲಿದ್ದರೆಂದರೆ ಅನೇಕರಿಗೆ ಆಶ್ಚರ್ಯವಾಗಬಹುದು; ಆಗುವಂತಹದೆ.

 

ಸ್ವಾಮಿಗಳವರ ಸಮ್ಯಕ್ ದೃಷ್ಟಿ ಜೀವಸೃಷ್ಟಿಯ ಮೂಲವಾವುದೆಂಬುದನ್ನು ಕಂಡುಕೊಂಡಿತ್ತು. ಜೀವಶಕ್ತಿ ಯಾವುದರಲ್ಲಿದೆಯೆಂಬುದನ್ನು ಅರಿತಿತ್ತು. ಅನ್ನ ದೇವರ ದೇವರು. ಅದಕ್ಕಿನ್ನು ಬೇರೆ ದೇವರಿಲ್ಲ. ಅದನುಳಿದು ಬಾಳುವ ಬಗೆ ಬೇರಿಲ್ಲ. ಬೆಳಗುವ ಜ್ಯೋತಿ ಬೇರೊಂದರಲ್ಲಿಲ್ಲ, ಎಂಬುದನ್ನು ಸ್ವಾಮಿಗಳವರು ಚನ್ನಾಗಿ ಗಮನಿಸಿದ್ದರು. ಅದಕ್ಕಾಗಿ ಅವರು ವ್ಯವಸಾಯದತ್ತ ವಿಶೇಷ ಲಕ್ಷ್ಯವಿಟ್ಟಿದ್ದರು.

 

ಕೃಷಿ ವಿಜ್ಞಾನವು ಕನ್ನಡ ನಾಡಿಗೆ ಬಂದ ಪ್ರಥಮದಲ್ಲಿಯೆ ಅದರ ಉಪಯೋಗವನ್ನು ಪಡೆದವರು ಸ್ವಾಮಿಗಳವರು. ಊಳುವ ಯಂತ್ರದ ನೇಗಿಲ (ಟ್ರ್ಯಾಕ್ಟರ್)ನ್ನು ಹೆಚ್ಚು ಹಣವಿಕ್ಕಿ ತರಿಸಿ ಮೊತ್ತಮೊದಲು ಶಿವಯೋಗಮಂದಿರದಲ್ಲಿ ನೆಲವನ್ನು ಊಳಿಸಿದರು. ಹೀಗೆಯೆ ಬಗೆಬಗೆಯಾಗಿ ನೆಲವನ್ನು ಹದಗೊಳಿಸುವ ಬಲಗೊಳಿಸುವ ಪ್ರಯೋಗಗಳನ್ನು ಮಾಡಿಸುತ್ತಿದ್ದರು. ನೂರಾರು ದನಕರುಗಳನ್ನು ಸಾಕಿ ಗೊಬ್ಬರ ಒದಗಿಸುತ್ತಿದ್ದರು. ನೀರಾವರಿಗಾಗಿ ನೀರೆತ್ತುವ ಯಂತ್ರವನ್ನು ತರಿಸಿ ಹಾಕಿಸಿದ್ದರು. ಮೈಸೂರು ಸಂಸ್ಥಾನದ ಕಪ್ಪನಹಳ್ಳಿಯಲ್ಲಿ ಸ್ಥಾಪಿಸಿದ ಶಾಖಾಮಂದಿರದಲ್ಲಿ ಎಂಜನ ಸಹಾಯದಿಂದ ನೀರೆತ್ತಿ ಕಬ್ಬು ಬೆಳೆವಂತೆ ಮಾಡಿದರು. ಅಲ್ಲದೆ ಶಿವಯೋಗಮಂದಿರದ ಬಳಿ ಹಳೆಯ ಮಾಕೂಟದ ನೀರಿನಿಂದ ಅಲ್ಲಿ ಒಂದು ಬಾಳೆಯ ಬನವನ್ನು ಬೆಳೆಯಿಸಿದ್ದ ಸಂಗತಿಯನ್ನು ಈ ಮೊದಲೆ ಉಲ್ಲೇಖಿಸಲಾಗಿದೆ.

 

ಎಲ್ಲಕ್ಕೂ ವ್ಯವಸಾಯ ಮೂಲೆಂಬ ಮರ್ಮವನ್ನು ಚನ್ನಾಗಿ ಅರಿತಿದ್ದರು. ಅದು ಕಾರಣ ಬಲ್ಲ ವ್ಯವಸಾಯಗಾರರಿಂದ ಬೇಸಾಯದ ರಹಸ್ಯವನ್ನು ಕೇಳಿ ತಿಳಿದು ಕೊಳ್ಳುತ್ತಿದ್ದರು. ಸಂಸ್ಥೆಯ ಒಕ್ಕಲುತನವು ಉತ್ತಮ ಸ್ಥಿತಿಗೆ ಬರಬೇಕೆಂದು ಪಾಟ ಪಡುತ್ತಿದ್ದರು. ವ್ಯವಸಾಯಕ್ಕೆ ಬೇಕಾದ ಎತ್ತು ಎಮ್ಮೆ ಹಸುಗಳ ಮೇಲೆ ಸ್ವಾಮಿಗಳವರಿಗೆ ಹೆಚ್ಚು ಪ್ರೇಮವಿತ್ತು. ಅವುಗಳ ರಕ್ಷಣೆಯತ್ತ ಹೆಚ್ಚು ಲಕ್ಷ್ಯ ಕೊಡುತ್ತಿದ್ದರು. ಅದನ್ನ ಕಾಪಾಡುವವರ ಮೇಲೆ ಅವರ ಕೃಪಾದೃಷ್ಟಿಯಿರುತ್ತಿತ್ತು.

 

ಆಹಾರ ಮುಗ್ಗಟ್ಟಿಲ್ಲದ ಆ ಕಾಲದಲ್ಲಿಯೇ ಸ್ವಾಮಿಗಳವರು ಗೈಮೆಗೆ  ಗಮನಿಸಬೇಕಾದರೆ ಅವರ ದೃಷ್ಟಿ ಎಷ್ಟು ಆಳವಾದದ್ದು. ಅನನ್ಯ ಸಾಧಾರಣವಾದದ್ದು, ಎಂಬುದನ್ನು ವಾಚಕರೆ ಊಹಿಸಿಕೊಳ್ಳಲಿ; ಸ್ವಾಮಿಗಳವರ ಈ ದೂರದೃಷ್ಟಿಗೆ ತಲೆದೂಗಲಿ.

 

ಎರಡನೆಯದಾಗಿ ‘ದ್ರವ್ಯಮೂಲಂ ಜಗತ್’ ಎಂಬುದನ್ನು ಅವರು ಮರೆತಿರಲಿಲ್ಲ. ಯಾವುದಕ್ಕು ದುಡ್ಡುಬೇಕು. ದುಡ್ಡಿದ್ದವನೆ ದೊಡ್ಡಪ್ಪ ಹಣವೇ ಗುಣ, ಅಂತಹ ಹಣ ಬರುವ ದಾರಿ ವಾಣಿಜ್ಯ.

 

ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ

ಹರದ ಕುಳ್ಳಿರ್ದ ನಮ್ಮ ಮಹದೇವಶೆಟ್ಟಿ…

 

ಎಂಬುದಾಗಿ ಹೇಳಿ ಬಸವಣ್ಣನು ಹರನನ್ನೆ ಹಿರಿಯ ಹರದನನ್ನಾಗಿ ಮಾಡಿದ್ದಾನೆ. ಪರಮಾತ್ಮನಿಗೇನೆ ವ್ಯಾಪಾರದ ಅಗತ್ಯ ಇರುವಾಗ ಉಳಿದವರ ಮಾತೇನು ? ಒಂದಿಲ್ಲೊಂದು ರೀತಿಯಲ್ಲಿ ವ್ಯಾಪಾರ ಎಲ್ಲರಿಗೂ ಬೇಕು. ಅದು ಪದಾರ್ಥಕ್ಕೆ ಪದಾರ್ಥ ವಿನಿಮಯವಾಗಿಯಾದರು ಇರಬಹುದು ಇಲ್ಲವೆ ಪದಾರ್ಥಕ್ಕೆ ಪರಮಾರ್ಥ ವಿನಿಮಯವಾಗಿಯಾದರು ಇರಬಹುದು. ಈ ದೃಷ್ಟಿಯಿಂದ ನೋಡುವಲ್ಲಿ ಚತುರಾಶ್ರಮಿಗಳು ವ್ಯಾಪಾರಕ್ಕೆ ಹೊರಗಾಗುವಂತಿಲ್ಲ. ಅಂತೆಯೇ ಅಣ್ಣ ಈ ದೃಷ್ಟಿಯಲ್ಲಿ ಹರನೂ ಹರದನಾಗಿದ್ದಾನೆ.

 

ಈ ತತ್ವಕ್ಕನುಸರಿಸಿ ಸ್ವಾಮಿಗಳವರು ಒಂದು ಅಂಗಡಿಯನಿಕ್ಕಿಸಿದರು. ವ್ಯಾಪಾರ ಸಾಗುತ್ತಿತ್ತು. ‘ವ್ಯಾಪಾರಂ ದ್ರೋಹ ಚಿಂತನ’ ಎಂದು ಜನರು ಹೇಳುವದನ್ನು ಸ್ವಾಮಿಗಳವರು ಒಪ್ಪುತ್ತಿರಲಿಲ್ಲ. ದ್ರೋಹ ಮಾಡುವುದು ವ್ಯಾಪಾರದ ಲಕ್ಷಣವೇ ಅಲ್ಲ. ಪರಸ್ಪರ ಹಿತಚಿಂತನೆಯೆ ವ್ಯಾಪಾರದ ಮೂಲೋದ್ದೇಶ. ಅದು ಹೊರಟು ಹೋಗಿ ಬರುಬರುತ್ತ ದ್ರೋಹ ಚಿಂತನೆಯ ವ್ಯಾಪಾರದ ಮೂಲವೆಂಬ ದುರ್ಭಾವನೆಗೆ ದುರ್ವತ್ತಿಗೆ ಇಳಿದಿದೆ ಜಗತ್ತು ಎಂದು ಅಪ್ಪಣೆ ಕೊಡಿಸುತ್ತಿದ್ದರು. ಸಂಸ್ಥೆಯು ಅಂಗಡಿಯಲ್ಲಿ ಇದು ನಡೆಯಬಾರದೆಂಬುದು ಶ್ರೀಗಳವರ ಘನೋದ್ದೇಶವಾಗಿತ್ತು . ಅಂಗಡಿಯನ್ನು ಈಚಿಗೆ ಕಮೀಟಿಯವರು ತೆಗೆದು ಹಾಕಿದ್ದಾರೆ. ಸ್ವಾಮಿಗಳವರು ಬಾಗಲಕೋಟೆಯಲ್ಲಿ ಜಿನ್ನಿಂಗ್ ಪ್ರೆಸ್ ಒಂದನ್ನು ಸ್ಥಾಪಿಸಿದ್ದಾರೆ. ಅದು ಈವಾಗಲು ಸುವ್ಯವಸ್ಥಿತವಾಗಿ ಸಾಗುತ್ತಿದೆ. ಅದನ್ನು ಮ್ಯಾನೇಜರ್ ಶ್ರೀ ಬಳ್ಳಾರಿ ಬಸಪ್ಪನವರು ನಡೆಯಿಸಿಕೊಂಡು ಬರುತ್ತಿದ್ದಾರೆ. ಅದುವೆ ಈಗ ಶಿವಯೋಗ ಮಂದಿರದ ನಿಜವಾದ ಆಸ್ತಿ ಅದರಿಂದಲೆ ಇದೀಗ ಶಿವಯೋಗಮಂದಿರ ಕಾರ್ಯನಿರ್ವಹಣ, ಅದರ ಆದಾಯದಿಂದಲೇ ಸಂಸ್ಥೆಯು ತನ್ನ ಸಾಲವನ್ನೆಲ್ಲ ತೀರಿಸಿಕೊಂಡು ಈಗ ಸರ್ವಸ್ವತಂತ್ರವಾಗಿ ನಿಂತಿದೆ. ಹೀಗೆ ಸ್ವಾಮಿಗಳವರಲ್ಲಿ ವ್ಯವಸಾಯ ವಾಣಿಜ್ಯ ರೂಪ ಔದ್ಯೋಗಿಕ ಪ್ರೇಮವಿತ್ತು.

ಲೇಖಕರು: ಪೂಜ್ಯ ಜಗದ್ಗುರು ಡಾ|| ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

‘ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ’, ‘ನಹಿಜ್ಞಾನೇನ ಸದೃಶ್ಯಂ ಪವಿತ್ರಮಿಹ ವಿದ್ಯತೇ’, ‘ಜ್ಞಾನಾದೇವರು ಕೈವಲ್ಯಂ’ ಇವೆಲ್ಲ ಜ್ಞಾನದ ಹಿರಿಮೆಯನ್ನು ಸಾರುವ ವಾಕ್ಯಗಳು. ಜ್ಞಾನ ವ್ಯಕ್ತಿಯ ಇಹಪರಗಳ ಸುಖಕ್ಕೆ ಕಾರಣವಾಗಿದೆ. ಜ್ಞಾನವೇ ನಿಜವಾದ ಸಂಪತ್ತು. ಅದು ವ್ಯಕ್ತಿಯ ಬಂಧನ ಹಾಗು ದುಃಖಕ್ಕೆ ಕಾರಣವಾದ ಅಜ್ಞಾನವನ್ನು ನಾಶ ಮಾಡುತ್ತದೆ. ಜಗತ್ತಿನಲ್ಲಿ ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಎಲ್ಲವನ್ನು ಪವಿತ್ರಗೊಳಿಸುವ ಅಪರಿಮಿತ ಶಕ್ತಿ ಇದಕ್ಕಿದೆ. ಮೋಕ್ಷಕ್ಕೆ ಜ್ಞಾನವೇ ದಾರಿದೀಪ ಎಂದೆಲ್ಲ ಹೇಳಲಾಗುತ್ತಿದೆ. ಈ ಜ್ಞಾನದಲ್ಲಿಯೂ ಲೌಕಿಕ ಜ್ಞಾನ ಮತ್ತು ಅಧ್ಯಾತ್ಮಜ್ಞಾನವೆಂದು ಎರಡು ವಿಧ. ಲೌಕಿಕ ಜ್ಞಾನವು ಸಾಮಾನ್ಯ ಹಾಗು ಸಾಧಾರಣ ಜ್ಞಾನವಾಗಿದ್ದು, ಬುದ್ಧಿಯಿಂದ ಪ್ರಾಪ್ತವಾಗುತ್ತದೆ. ಅದಕ್ಕೆ ವಿಜ್ಞಾನವೆಂದೂ ಕರೆಯಲಾಗುತ್ತದೆ. ವಿಜ್ಞಾನದಿಂದ ಪರಮಸತ್ಯದ ಅಥವಾ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಿಲ್ಲ. ಏಕೆಂದರೆ ಬೌದ್ಧಿಕ ಜ್ಞಾನ (ವಿಜ್ಞಾನ)ವು ಇಂದ್ರಿಯಗಳಿಂದ ಪ್ರಾಪ್ತವಾಗಿದೆ. ಇಂದ್ರಿಯಗಳಿಗೆ ಪರಮಸತ್ಯವನ್ನು ಕಾಣುವ ಶಕ್ತಿ ಇಲ್ಲ. ಆದರೆ ಅಧ್ಯಾತ್ಮ ಜ್ಞಾನವುಳ್ಳವರು ಪರಮಾತ್ಮನ ಸಾಕ್ಷಾತ್ಕಾರ ಹೊಂದುತ್ತಾರೆ; ಪರಮಶಾಂತಿಯನ್ನು ಪಡೆದುಕೊಳ್ಳುತ್ತಾರೆ.

 

ಅಧ್ಯಾತ್ಮ ಜ್ಞಾನ ಸುಲಭ ಸಾಧ್ಯವಲ್ಲ. ಅದಕ್ಕಾಗಿ ಚಿತ್ತಶುದ್ಧಿಯ ಆವಶ್ಯಕತೆ ಇದೆ. ಶರೀರ, ಇಂದ್ರಿಯಗಳನ್ನು ಬಾಹ್ಯ ಆಕರ್ಷಣೆಗಳಿಂದ ಮುಕ್ತಗೊಳಿಸಬೇಕಾಗುತ್ತದೆ. ‘ಸಂಸಾರವೆಂಬುದೊಂದು ಗಾಳಿಯ ಸೊಡರು….ಮರೆಯದೇ ಪೂಜಿಸು ಕೂಡಲಸಂಗಮದೇವನ’ ಎಂಬ ಬಸವವಾಣಿಯಂತೆ ಸಂಸಾರದ ಕ್ಷಣಭಂಗುರತೆಯನ್ನು ಅರಿಯಬೇಕಾಗುತ್ತದೆ. ಮನಸ್ಸನ್ನು ವಿಷಯ ವಾಸನೆಗಳಿಂದ ಮುಕ್ತಗೊಳಿಸಿ ಪರಮಾರ್ಥ ಚಿಂತನೆಯಲ್ಲಿರಿಸಬೇಕಾಗುತ್ತದೆ. ಹೀಗೆ ‘ಜೀತೇಂದ್ರಿಯನಾದ ಸಾಧನಪಾರಾಯಣನಾದ ಶ್ರದ್ಧಾವಂತನೆ ಅಧ್ಯಾತ್ಮಜ್ಞಾನಕ್ಕೆ ಅರ್ಹನೆನಿಸುತ್ತಾನೆ ಎಂಬುದು ಗೀತೋಕ್ತಿ.

 

ಅಧ್ಯಾತ್ಮಜ್ಞಾನವು ಎಷ್ಟೇ ಶ್ರೇಷ್ಠವಾಗಿದ್ದರೂ ಸತ್ಕ್ರಿಯಾರಹಿತವಾಗಿದ್ದರೆ ತನ್ನ ಮೌಲ್ಯವನ್ನು ಕಳೆದುಕೊಂಡು ನಿಷ್ಟ್ರಯೋಜಕವೆನಿಸುತ್ತದೆ. ಗುರಿ ತಲುಪಲು ಕಣ್ಣು ಕಾಲುಗಳೆರಡೂ ಆವಶ್ಯವಾಗಿರುವಂತೆ ಮೋಕ್ಷಕ್ಕೆ ಜ್ಞಾನ ಕ್ರಿಯೆಗಳೆರಡೂ ಬೇಕು. ಪರಮಾತ್ಮನೊಡನೆ ಆತ್ಮನನ್ನು ಬೆಸೆಯುವ ತಂತ್ರವೇ ಕ್ರಿಯೆ. ಅದುವೇ ಜ್ಞಾನ. ಕ್ರಿಯೆಯೇ ಜ್ಞಾನ, ಜ್ಞಾನವೇ ಕ್ರಿಯೆ, ಜ್ಞಾನವೆಂದರೆ ತಿಳಿಯುವುದು, ಕ್ರಿಯೆಯೆಂದರೆ ತಿಳಿದಂತೆ ಮಾಡುವುದು. ಪರಸ್ತ್ರೀ ಭೋಗಿಸಬಾರದೆಂಬುದೇ ಜ್ಞಾನ, ಅದರಂತೆ ಆಚರಿಸುವುದೇ ಕ್ರಿಯೆ. ಅಂತು ಆಚರಿಸದಿದ್ದರೆ ಅದೇ ಅಜ್ಞಾನ’ ಎಂದು ಶರಣರು ಸ್ಪಷ್ಟಪಡಿಸುತ್ತಾರೆ. ವ್ಯಕ್ತಿ ಎಂತಹ ಶ್ರೇಷ್ಠಜ್ಞಾನಿಯಾಗಿದ್ದರೂ ಸತ್ಕ್ರಿಯಾಚರಣೆ ಯುಳ್ಳವನಾಗಬೇಕಾಗುತ್ತದೆ. ನೀತಿ ನಿಯಮಗಳಿಗೆ ಒಳಪಡಬೇಕಾಗುತ್ತದೆ. ‘ಜ್ಞಾನವಾಯಿತ್ತೆಂದು ಮನಕ್ಕೆ ಬಂದ ಹಾಗೆ ಮೀರಿ ನುಡಿದು ನಡೆದೆನಾದಡೆ ಶ್ವಾನಗರ್ಭದಲ್ಲಿ ಹುಟ್ಟಿಸದೇ ಬಿಡುವನೇ ಚನ್ನಮಲ್ಲಿಕಾರ್ಜುನಯ್ಯ’ ಎಂದು ಅಕ್ಕಮಹಾದೇವಿ ಪ್ರಶ್ನಿಸುತ್ತಾಳೆ.

 

ಜ್ಞಾನ ಕ್ರಿಯೆಗಳೆರಡೂ ಒಂದಕ್ಕೊಂದು ಪೂರಕ. ಜ್ಞಾನವಿಲ್ಲದ ಕ್ರಿಯೆ ಜಡವಾಗುತ್ತದೆ. ಕ್ರಿಯೆ ಇಲ್ಲದ ಜ್ಞಾನ ಬರೀ ಭ್ರಮೆ ಹಾಗು ವಾಗ್ಜಾಲವೆನಿಸಿಕೊಳ್ಳುತ್ತದೆ. ಅನಂತಾಕಾಶದಲ್ಲಿ ಹಾರುವ ಹಕ್ಕಿಗೆ ಇರುವ ಎರಡು ರೆಕ್ಕೆಗಳಂತೆ ಪರಮಾತ್ಮನೆಡೆಗೆ ಪಯಣಿಸುವ ಜೀವಾತ್ಮನೆಂಬ ಪಕ್ಷಿಗೂ ಜ್ಞಾನ-ಕ್ರಿಯೆಗಳೆಂಬ ರೆಕ್ಕೆಗಳೆರಡರ ಆವಶ್ಯಕತೆ ಇದೆ ಎಂದು ವಚನಕಾರರು ಪ್ರತಿಪಾದಿಸುತ್ತಾರೆ. ಕ್ರಿಯೆ ಇಲ್ಲದ ಜ್ಞಾನಿ ಕಾಲಿಲ್ಲದ ಹೆಳವ (ಕುಂಟ)ನಂತೆ ಗಂತವ್ಯವನ್ನು ತಲುಪಲಾರ. ಸತಿಯೆಗಳಿಂದ ಸದ್ಭಾವ ಸುಜ್ಞಾನಗಳು ಗೋಚರಿಸುತ್ತವೆ. ಸುಜ್ಞಾನದಿಂದ ಇಂದ್ರಿಯ ಶುದ್ಧಿ, ಇಂದ್ರಿಯ ಶುದ್ಧಿಯಿಂದ ಚಿತ್ತಶುದ್ಧಿ. ಚಿತ್ತಶುದ್ಧಿಯಿಂದಲೆ ಪರಮಾತ್ಮನ ನೆಲೆಕಲೆಗಳನ್ನು ಅರಿಯಲು ಸಾಧ್ಯವಾಗುವುದು.

ಅಂತಹ ಜ್ಞಾನಕ್ರಿಯಾಶೀಲರಿಂದಲೇ ಲೋಕಕಲ್ಯಾಣ.

ಲೇಖಕ: ಶ್ರೀಕಂಠ.ಚೌಕೀಮಠ

 

ಕಾರಣಿಕ ಯುಗಪುರುಷ ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಹಾಗೂ ಗದುಗಿನ ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಯಡೆಯೂರು ಪಾದಯಾತ್ರೆಯು ಕನ್ನಡಿಗರ ಮತ್ತು ವೀರಶೈವ/ಲಿಂಗಾಯತ ಧರ್ಮೀಯರ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವದ ಅಧ್ಯಾಯವನ್ನು ಬರೆದಿತ್ತು. ಬರುವ ಡಿಸೆಂಬರ್ 6, 2024ರಂದು, ಈ ಐತಿಹಾಸಿಕ ಪಾದಯಾತ್ರೆಗೆ 107 ವರ್ಷಗಳು ತುಂಬುತ್ತವೆ.(6 ಡಿಸೆಂಬರ್ 1917 )

ಈ ಪಾದಯಾತ್ರೆಯು ಆ ಕಾಲದಲ್ಲಿ ಚಾರಿತ್ರಿಕ ಸಂಚಲನವನ್ನು ಮೂಡಿಸಿತ್ತು.

ಈ ಪಾದಯಾತ್ರೆಯು ಕೇವಲ ಧಾರ್ಮಿಕ ಉತ್ಸವವಾಗಲಿಲ್ಲ.

ಇದು ಸಮಾಜದ ವೈಚಾರಿಕ ಚೇತನವನ್ನು ತೋರುವ ಸಂಚಾರವಾಗಿತ್ತು.

ಇದು ಭಕ್ತಿಯೊಂದಿಗೆ ತಪಸ್ಸಿನ ಅನುಭಾವವನ್ನು ಬೆಸೆದು ಸಾಮಾನ್ಯ ಜನರ ಬದುಕಿಗೆ ಅಧ್ಯಾತ್ಮಿಕ ಸಂಕೇತಗಳನ್ನೂ ಬೆಸೆಯಿತು.

ಶ್ರೀ ಕುಮಾರ ಶಿವಯೋಗಿಗಳ ಈ ಪಾದಯಾತ್ರೆ, ಜನರಲ್ಲಿ ಸಮಾನತೆ, ತ್ಯಾಗ, ತಾಳ್ಮೆ, ಸಹನೆ ಹಾಗೂ ಭಕ್ತಿ ಇಂತಹ ಗುಣಗಳನ್ನು ಪ್ರೇರಣೆಗೊಳಿಸಿತು. ಪಾದಯಾತ್ರೆಯು ಗ್ರಾಮೀಣ ಪ್ರದೇಶಗಳಲ್ಲಿ ಧಾರ್ಮಿಕ ಜಾಗೃತಿಯನ್ನು ಉಂಟುಮಾಡಿತು ಮತ್ತು ಜನರ ಹೃದಯದಲ್ಲಿ ಅಧ್ಯಾತ್ಮಿಕತೆಯ ಬೆಂಕಿಯನ್ನು ಹೊತ್ತಿಸಿ ಅವರ ನೈತಿಕ ಮತ್ತು ಸಾಂಸ್ಕೃತಿಕ ಆಳವನ್ನು ವೃದ್ಧಿಸಿತು.

ಈ ಹಿನ್ನಲೆಯಲ್ಲಿ, ಯಡೆಯೂರು ಪಾದಯಾತ್ರೆಯ 107ನೇ ವರ್ಷವನ್ನು ಸ್ಮರಿಸುವುದು ಕೇವಲ ಒಂದು ಸಾಂಕೇತಿಕವಲ್ಲ; ಇದು ನಮ್ಮ ಸಂಸ್ಕೃತಿಯ ಒಂದು ಅಂಶವಾಗಿ, ಭಕ್ತಿ ಮತ್ತು ತ್ಯಾಗದ ಮಹತ್ವವನ್ನು ಮನಗಾಣಿಸುವ ಧಾರ್ಮಿಕ ಚಳುವಳಿಯೇ ಆಗಿದೆ.

ಯಡೆಯೂರು ಪಾದಯಾತ್ರೆಯಲ್ಲಿ ಭಾಗವಹಿಸಿದವರ ಅನುಭವಗಳನ್ನು ಸಂಗ್ರಹಿಸಿದ ಮತ್ತು ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳನ್ನು ಅತೀ ಹತ್ತಿರ ದಿಂದ ಕಂಡಿದ್ದ ಕವಿರತ್ನ ದ್ಯಾಂಪುರ ಚನ್ನಕವಿಗಳು ತಮ್ಮ  ಶ್ರೀಕುಮಾರೇಶ್ವರ ಪುರಾಣದಲ್ಲಿ ಅತ್ಯಂತ ಹೃದಯ ಸ್ಪರ್ಷಿಯಾಗಿ ಹೀಗೆ ವರ್ಣಿಸಿದ್ದಾರೆ ( ಭಾವಾರ್ಥ ಸೌಜನ್ಯ : ಪೂಜ್ಯ ಅಭಿನವ ಸಿದ್ಧಾರೂಡ ಮಹಾಸ್ವಾಮಿಗಳು)

ಎಡೆಯೂರ ಶ್ರೀಸಿದ್ಧಲಿಂಗಸುಕ್ಷೇತ್ರಕ್ಕೆ

ಸಡಗರದೊಳಾ ಜಗದ್ಗುರು ತೋಂಟದಾರ್ಯರೀ

ಮೃಡಯೋಗಿವರ ಕುಮಾರೇಶನಂ ಶಿವಯೋಗಮಂದಿರದ ಸಾಧಕರನು

ಒಡಗೊಂಡು ದಯಮಾಡಿಸಿದರೊಮ್ಮೆ ಭಕ್ತಿಯಿಂ

ನಡೆದವರೊಡನೆ ಕೆಲ ಭಕ್ತಮಾಹೇಶ್ವರರು

ಪೊಡವಿಯೊಳು ಪೆಸರಾಗುವಂತೆ ಮೆರೆದುದು ಪಯಣವದು ಬಣ್ಣಿಸಲ್ಸಾಲ್ಗುಮೇ

ಭಾವಾರ್ಥ : ಎಡೆಯೂರ ಶ್ರೀ ಸಿದ್ಧಲಿಂಗೇಶ್ವರ ಸುಕ್ಷೇತ್ರಕ್ಕೆ ಸಂಭ್ರಮದಲ್ಲಿ ಆ ಜಗದ್ಗುರು ತೋಂಟದ ಸಿದ್ಧೇಶ್ವರ ಮಹಾಸ್ವಾಮಿಗಳು ಈ ಶಿವಯೋಗಿವರನಾದ ಕುಮಾರೇಶನು ಶಿವಯೋಗ ಮಂದಿರದ ಸಾಧಕರನ್ನು ಕೂಡಿಕೊಂಡು, ಭಕ್ತಿಯಿಂದ ಮಹಾತ್ಮರೊಡನೆ ಕೆಲವು ಭಕ್ತರು ಜಂಗಮರು ಪಾದಯಾತ್ರೆ ಹೊರಟರು. ಭೂಲೋಕದಲ್ಲಿ ಹೆಸರಾಗುವಂತೆ ಪ್ರಸಿದ್ಧವಾದ ಆ ಪಾದಯಾತ್ರೆಯನ್ನು ನನಗೆ ವರ್ಣಿಸಲು ಅಸಾಧ್ಯ.

 

ಮೊಳಗುತಿರೆ ವಿವಿಧವಾದ್ಯಂಗಳುಂ ಸದ್ವಂದಿ-

ಗಳು ಪೊಗಳುತಿರೆ ಪಥದೊಳಲ್ಲಲ್ಲಿ ಭಕ್ತಸಂ-

ಕುಳವೈದಿ ಪೂಜೋಪಚಾರದಿಂ ಗಣಸಮಾರಾಧನೆಯನೆಯಸಗುತಿರಲು

ಉಳಿದೆಡೆಗಳಲ್ಲಿ ವ್ಯಾಖ್ಯಾನಕೀರ್ತನಗಳುಂ

ಹಲವು ವಿಷಯಪ್ರವಚನಂಗಳುಂ ಜರಗುತಿರ

ಲೆಳಸಿ ದರ್ಶನಕಾಗಿ ಬಂದ ಭಕ್ತರಿಗೆ ಶುಭವಾದನಂಗೈವುತಿರಲು

ಭಾವಾರ್ಥ : ವಿವಿಧ ವಾಧ್ಯಗಳು ನುಡಿಯುತ್ತಿರುವವು, ಜಯಘೋಷದವರು ಸ್ತುತಿಸುತ್ತಿರುವರು, ಅಲ್ಲಲ್ಲಿ ಭಕ್ತ ಸಮೂಹವು ಬಂದು ಪೂಜೆ ಸೇವಾದಿಗಳಿಂದ ಜಂಗಮ ತೃಪ್ತಿಯನ್ನು ಮಾಡುತ್ತಿರಲು, ಇನ್ನುಳಿದ ಕಡೆಗಳಲ್ಲಿ ಉಪನ್ಯಾಸ ಶಿವಕೀರ್ತನಗಳು ಹಲವು ವಿಷಯಕವಾಗಿ ಪ್ರವಚನಗಳು ನಡೆಯುತ್ತಿದ್ದವು. ದರ್ಶನ ಆಶೆಯಿಂದ ಬಂದ ಭಕ್ತರಿಗೆ ಮಂಗಲಾಶೀರ್ವಾದಗಳನ್ನು ಮಾಡುತ್ತಿದ್ದರು.

 

ಶಿವಯೋಗ ಪರಂಪರೆಯ ನಿಗೂಢತೆ ತುಂಬಾ ಆಕರ್ಷಕ ಮತ್ತು ಆಳವಾದದ್ದು, ಇದರ ನಿಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ನಡೆಸಿದ ಪ್ರತಿಯೊಂದು ಪ್ರಯತ್ನವೂ ಹೊಸತನವನ್ನು ನೀಡುತ್ತಲೇ ಹೋದಂತೆ. ವೀರಶೈವ/ಲಿಂಗಾಯತ ಪರಂಪರೆಯ ಪುನರುಜ್ಜೀವನ ಮತ್ತು ಶರಣರ ಕಾರ್ಯವನ್ನು ಪುನಃ ಜೀವಂತಗೊಳಿಸಿದ ಮಹಾನುಭಾವರಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಪಾತ್ರ ಅತಿ ಮಹತ್ವದ್ದಾಗಿದೆ. ತಮ್ಮ ಏಳುನೂರು ವಿರಕ್ತ ಶಿಷ್ಯರೊಂದಿಗೆ ನಾಡಿನ ಮೂಲೆ ಮೂಲೆಗೂ ಹಾಸುಹೊಕ್ಕು ವೀರಶೈವ/ಲಿಂಗಾಯತ ಮತದ ಬೋಧನೆ, ಶರಣರ ಸಾಹಿತ್ಯ ಮತ್ತು ಷಟ್‌ಸ್ಥಲ ತತ್ತ್ವದ ವೈಚಾರಿಕತೆಯನ್ನು ಜನರ ಮನಸ್ಸಿನಲ್ಲಿ ನೆಲೆಗೊಳಿಸಿದರು.

 

ಶ್ರೀ ಸಿದ್ಧಲಿಂಗೇಶ್ವರರ ಸಾಮಾಜಿಕ ಮತ್ತು ಧಾರ್ಮಿಕ ಪ್ರಭಾವ

ಶ್ರೀ ಸಿದ್ಧಲಿಂಗೇಶ್ವರರು ಪುರಾತನ ವೀರಶೈವ/ಲಿಂಗಾಯತ ಶರಣರ ಸಾಹಿತ್ಯವನ್ನು ಸಮಗ್ರವಾಗಿ ಸಂಗ್ರಹಿಸುವಲ್ಲಿ, ಅದಕ್ಕೆ ಹೊಸ ಆಯಾಮ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. “ಷಟ್‌ಸ್ಥಲ ಜ್ಞಾನ ಸಾರಾಮೃತ” ಎಂಬ ಮಹತ್ವದ ಕೃತಿ ರಚನೆ ಮೂಲಕ ಷಟ್‌ಸ್ಥಲ ತತ್ತ್ವಕ್ಕೆ ನಿರ್ದಿಷ್ಟರೂಪವನ್ನು ನೀಡಿದರು. ಇದರಿಂದ ವಚನ ಸಾಹಿತ್ಯವು ಹೊಸ ಸೃಜನಶೀಲತೆಯನ್ನು ಹೊಂದಿ ಪುನರುಜ್ಜೀವಿತವಾಯಿತು. ಈ ಕೃತಿಗಳ ಪ್ರೇರಣೆಯಿಂದ, ಶರಣರ ಆದರ್ಶಗಳು, ತತ್ವಗಳು ಮತ್ತು ಜೀವನದ ಮಾರ್ಗದರ್ಶನಗಳು ಜನಸಾಮಾನ್ಯರ ನಡುವೆ ಸ್ಪಷ್ಟವಾಗಿ ಪ್ರಚಾರಕ್ಕೆ ಬಂದವು.

ಸಮಾಜದ ಅಧ್ಯಾತ್ಮಿಕ ನೆಲೆಯಲ್ಲಿ ಶ್ರೀ ಸಿದ್ಧಲಿಂಗೇಶ್ವರರ ಸಾಧನೆ

ವೀರಶೈವ/ಲಿಂಗಾಯತ ಮತದ ಆಳವಾದ ಸಂಸ್ಕಾರಗಳನ್ನು ಜೀವಂತವಾಗಿರಿಸಲು ಶ್ರೀ ಸಿದ್ಧಲಿಂಗೇಶ್ವರರು ನಾಡಿನಾದ್ಯಂತ ವಿವಿಧ ಮಠಗಳನ್ನು ಸ್ಥಾಪಿಸಿದರು. ಜಂಗಮರನ್ನು ಮಠಾಧಿಪತಿಗಳಾಗಿ ನೇಮಕ ಮಾಡಿದ್ದು, ವೀರಶೈವ/ಲಿಂಗಾಯತ ತತ್ವಗಳ ಆಚರಣೆ ಮತ್ತು ಅಭ್ಯಾಸವನ್ನು ಹೆಚ್ಚು ಶಕ್ತಿಶಾಲಿಯಾಗಿ ಮಾಡಿಕೊಂಡು ಹೋದರು. ಈ ಮೂಲಕ ಅವರು ವೀರಶೈವ/ಲಿಂಗಾಯತ ಧರ್ಮದ ಭಕ್ತ ವಲಯದಲ್ಲಿ ನಂಬಿಕೆ ಮತ್ತು ಆಚರಣೆಗಳನ್ನು ಬಲಗೊಳಿಸಿದರು.

ಶ್ರೀ ಕುಮಾರ ಶಿವಯೋಗಿಗಳ ಪಾದಯಾತ್ರೆಯ ಹಿನ್ನೆಲೆ

ಶಿವಯೋಗ ಪರಂಪರೆಯಲ್ಲಿನ ವ್ಯತ್ಯಾಸ ಮತ್ತು ಸಮಯಾಚಾರ ಭಿನ್ನತೆಗಳ ಬಗ್ಗೆ ಸ್ವತಃ ಶ್ರೀ ಕುಮಾರ ಶಿವಯೋಗಿಗಳು ಸ್ಪಷ್ಠವಾಗಿ ಅರಿತುಕೊಳ್ಳಲು ಇಚ್ಛಿಸಿ, ಮಲ್ಲನಕೆರೆ ಶ್ರೀ ಚೆನ್ನಬಸವ ಸ್ವಾಮಿಗಳ ಸಲಹೆ ಮೇರೆಗೆ 1917ರಲ್ಲಿ ಯಡೆಯೂರಿಗೆ ಪಾದಯಾತ್ರೆ ಕೈಗೊಂಡರು. ಅವರ ಈ ಯಾತ್ರೆ, ವೀರಶೈವ/ಲಿಂಗಾಯತ ಧರ್ಮದ ಬೃಹತ್ ಪರಂಪರೆಯ ಆಚರಣೆ ಮತ್ತು ಅಂತರಂಗವನ್ನು ಅರಿಯಲು ನಡೆಸಿದ ಒಗ್ಗಟ್ಟಿನ ಪ್ರಯತ್ನವಾಗಿತ್ತು. ಶಿವಯೋಗ ಮಂದಿರದ ಸಾಧಕರು, ,ಗುರು ವಿರಕ್ತರನ್ನೊಳಗೊಂಡ ಮತ್ತು ಐದು(ಕುಮಾರ,ಮುರುಘ,ಸಂಪಾದನೆ,ಕೆಂಪಿನ ಮತ್ತು ಚಿಲ್ಲಾಳ)  ಸಮಯಗಳ ಪರಂಪರೆಯ ಯತಿಗಳನ್ನೊಡಗೂಡಿ ತೋಂಟದಾರ್ಯ ಮಠದ ಶ್ರೀ ಸಿದ್ಧೇಶ್ವರ ಜಗದ್ಗುರುಗಳ ನೇತೃತ್ವದಲ್ಲಿ ಈ ಯಾತ್ರೆ ಪ್ರಾರಂಭಗೊಂಡಿತು.

ಈ ಪಾದಯಾತ್ರೆಯು ಶಿವಯೋಗದ ಪರಂಪರೆ, ವೈಚಾರಿಕತೆ ಮತ್ತು ತಾತ್ವಿಕತೆಗಳನ್ನು ಪುನರುಜ್ಜೀವನಗೊಳಿಸುವ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿತ್ತು. ಶ್ರೀ ಕುಮಾರ ಸ್ವಾಮಿಗಳು ಯಡೆಯೂರಿನಲ್ಲಿ ಕಂಡುಹಿಡಿದ ಈ ಅಂಶಗಳು ಅವರ ಧಾರ್ಮಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಚಿಂತನೆಗೆ ಹೊಸ ಆಳವನ್ನು ತಂದುಕೊಟ್ಟವು.

ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳಲ್ಲಿ ಅಪ್ರತಿಮ ಸಂಚಲನ ಉಂಟುಮಾಡಿದ ಈ ಪಾದಯಾತ್ರೆಯು ಎರಡು ಪ್ರಮುಖ ಕೊಡುಗೆಗಳನ್ನು ಕರ್ನಾಟಕದ ಭಕ್ತಸಮೂಹಕ್ಕೆ ನೀಡಿತು:

  1. ಯಡೆಯೂರು ಕ್ಷೇತ್ರದ ಪರಿಚಯ ಮತ್ತು ಉತ್ತರ ಕರ್ನಾಟಕದ ಭಕ್ತರೊಂದಿಗೆ ಅವಿನಾಭಾವಸಂಬಂಧ:
    ಈ ಪಾದಯಾತ್ರೆಯ ಮಹತ್ವದ ಸಾಧನೆಗಳಲ್ಲಿ ಒಂದು ಎಂದರೆ ಉತ್ತರ ಕರ್ನಾಟಕದ ಭಕ್ತರು ಯಡೆಯೂರು ಕ್ಷೇತ್ರದ ಮಹತ್ವವನ್ನು ಅರಿತುಕೊಂಡು, ಆ ಸ್ಥಳದೊಂದಿಗೆ ಅಧ್ಯಾತ್ಮಿಕವಾಗಿ ಪ್ರೇರಣೆ ಸಿಕ್ಕಿತು. ಇದರಿಂದ ಭಕ್ತರು ಯಡೆಯೂರು ಕ್ಷೇತ್ರವನ್ನು ಕೇವಲ ತೀರ್ಥಕ್ಷೇತ್ರವಲ್ಲ, ಒಂದು ಜೀವನ ಶೈಲಿಯಾಗಿ, ಅಧ್ಯಾತ್ಮಿಕ ಕೇಂದ್ರವಾಗಿ ಗುರುತಿಸಿದರು. ಈ ಸಂಬಂಧವು ಜನರ ನಿತ್ಯ ಜೀವನದಲ್ಲೂ ಪ್ರಭಾವ ಬೀರಿತು, ಹಾಗೂ ತಾತ್ವಿಕ ಶ್ರದ್ಧೆಯ ಬಲವರ್ಧನೆಗೆ ಸಹಾಯ ಮಾಡಿತು.
  2. ಯಡೆಯೂರಿನಲ್ಲಿ ಸಂಸ್ಕೃತ ಪಾಠ ಶಾಲೆಯ ಆರಂಭ:
    ಈ ಪಾದಯಾತ್ರೆಯು ಧಾರ್ಮಿಕ ಶಿಕ್ಷಣ ಮತ್ತು ಸಂಸ್ಕೃತಿಕ ಪ್ರವೃತ್ತಿಗಳಿಗೆ ಹೊಸ ಕಿರಣ ನೀಡಲು ಯಡೆಯೂರಿನಲ್ಲಿ ಸಂಸ್ಕೃತ ಪಾಠ ಶಾಲೆಯನ್ನು ಸ್ಥಾಪಿಸಿತು. ಈ ಪಾಠ ಶಾಲೆಯು ವೇದ, ಶಾಸ್ತ್ರ, ವಚನ ಸಾಹಿತ್ಯದ ಅಧ್ಯಯನವನ್ನು ಉತ್ತೇಜಿಸಿತು ಮತ್ತು ನವಯುಗದ ವೀರಶೈವ/ಲಿಂಗಾಯತ ಧರ್ಮದ ತತ್ವಜ್ಞಾನವನ್ನು ಪೋಷಿಸಲು ಅಧ್ಯಾತ್ಮಿಕ ಕೇಂದ್ರವಾಯಿತು. ಇದರಿಂದ ಪೀಳಿಗೆಯ ನಂತರ ಪೀಳಿಗೆಗೆ ಶರಣರ ಸಾಹಿತ್ಯ, ಷಟ್‌ಸ್ಥಲ ತತ್ತ್ವ ಮತ್ತು ವಚನಗಳ ತಾತ್ವಿಕ ವಿವರಣೆಗಳು ತಿಳಿಯುವಂತಾದವು.

ಈ ಪಾದಯಾತ್ರೆಯು ಧಾರ್ಮಿಕ ಮತ್ತು ಸಾಂಸ್ಕೃತಿಕ ಪೋಷಣೆಗಾಗಿ ನಿಂತ ಒಂದು ದೀರ್ಘಕಾಲೀನ ಪರಂಪರೆಯನ್ನು ಬೆಳೆಸಿದ್ದು, ಯಡೆಯೂರಿನ ಮಹತ್ವವನ್ನು ಕರ್ನಾಟಕದ ದಾರ್ಶನಿಕ ಭೂಮಿಯಲ್ಲಿ ಸ್ಥಾಪಿತಗೊಳಿಸಿತು.

ಪಾದಯಾತ್ರೆಯ ಫಲಶೃತಿಯಾಗಿ ೧೯೧೭ರಲ್ಲಿ ಯಡೆಯೂರಿನಲ್ಲಿ ಪೂಜ್ಯ ಚಿಕ್ಕತೊಟ್ಟಲಕೆರೆಯ ಅಟವಿ ಸಿದ್ಧೇಶ್ವರ ಶಿವಯೋಗಿಗಳು ಸ್ಥಾಪಿಸಿದ್ದ ಮತ್ತು ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ  ಸಂಸ್ಕೃತ ಪಾಠಶಾಲೆ ಪುನರಾಂಭಗೊಂಡಿತು, ಆ ಕಾಲದಲ್ಲಿ ಮಹತ್ವದ ಧಾರ್ಮಿಕ ಮತ್ತು ಶಿಕ್ಷಣಾತ್ಮಕ ಸಾಧನೆಯಾಗಿತ್ತು. ಈ ಪಾಠಶಾಲೆಗೆ ಆರ್ಥಿಕ ಬೆಂಬಲವು ವಿವಿಧ ಮೂಲಗಳಿಂದ ಸಿಕ್ಕಿತ್ತು:

  • ಗದಗ  ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ: ೫,೦೦೦ ರೂ.
  • ಶಿವಯೋಗ ಮಂದಿರ ಸಂಸ್ಥೆ: ೧,೦೦೦ ರೂ.
  • ಬೀರೂರ ಪತ್ರಿ ಚನ್ನವೀರಯ್ಯನವರು: ೧,೦೦೦ ರೂ.
  • ಗದುಗಿನ ಶ್ರೀಮಂತ ಭಕ್ತರು: ೩,೦೦೦ ರೂ.

ಈ ಎಲ್ಲಾ ದಾನಗಳನ್ನು ಸೇರಿಸಿ, ಒಟ್ಟು ೧೦,೦೦೦ ರೂ. ಮೂಲಧನವನ್ನಾಗಿ ಉಪಯೋಗಿಸಿ, ಈ ಪಾಠಶಾಲೆ  ಆರಂಭಗೊಂಡು , ಭಾರತೀಯ ಶಾಸ್ತ್ರಗಳ, ವಿಶೇಷವಾಗಿ ಸಂಸ್ಕೃತ ಮತ್ತು ವೈದಿಕ ಪಾಠಶಾಲೆಯ ಶಿಕ್ಷಣದ ಮೂಲಶಕ್ತಿಯಾಯಿತು.

ಈ ಪಾಠಶಾಲೆಯ  ಮರುಸ್ಥಾಪನೆ ಮತ್ತು ನಿರ್ವಹಣೆ, ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ನೇತೃತ್ವದಲ್ಲಿ ನಡೆದ ಮಹತ್ವದ ಸಾಧನೆ ಮತ್ತು ಅವರ ಕಾರ್ಯಕ್ಷಮತೆ, ಧಾರ್ಮಿಕ ಅಂಕಿತತೆ ಹಾಗೂ ಶ್ರದ್ಧೆಯ ಉದಾಹರಣೆಯಾಯಿತು. ಪಾಠಶಾಲೆಯು ಹಲವಾರು ಪೀಳಿಗೆಗಳ ವಿದ್ಯಾರ್ಥಿಗಳಿಗೆ ಸಂಸ್ಕೃತ, ಶಾಸ್ತ್ರ ಮತ್ತು ಧಾರ್ಮಿಕ ತತ್ವದ ವಿದ್ಯೆಯನ್ನು ಒದಗಿಸಿ, ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪೋಷಿಸಲು ಪ್ರೇರಣೆ ನೀಡಿತು.

ಇಂದಿಗೂ ಸಂಸ್ಕೃತ ವೈದಿಕ ಪಾಠಶಾಲೆ ಯಶಸ್ವಿಯಾಗಿ ನಡೆದುಕೊಂಡು ಬರುವುದಂತೆಯೇ ಅದು ಧಾರ್ಮಿಕ, ಅಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅಸ್ಥಿತ್ವದ ಪ್ರಬಲ ಸಂಕೇತವಾಗಿದೆ. ಪಾಠಶಾಲೆಯು ಮೂಲಧಾರ್ಮಿಕ ವಿದ್ಯೆಯನ್ನು ಪೀಳಿಗೆಗಿಂತ ಪೀಳಿಗೆಗೆ ಸತತವಾಗಿ ಪೋಷಿಸುತ್ತಾ ಬಂದು, ಸಮಾಜದಲ್ಲಿ ಭಾರತೀಯ ಸಂಸ್ಕೃತಿಯನ್ನೂ ಉಳಿಸಿದೆ.

ಸಂಸ್ಕೃತ ಪಾಠಶಾಲೆಯು ವೇದ-ಶಾಸ್ತ್ರಗಳ ಅಧ್ಯಯನ, ಧಾರ್ಮಿಕ ಗ್ರಂಥಗಳ ಪರಿಶೀಲನೆ ಮತ್ತು ವೈದಿಕ ಪಾಠದ ಸಾಂಪ್ರದಾಯಿಕ ತರಬೇತಿಯನ್ನು ಮುಂದುವರಿಸುತ್ತಿರುವುದು ನಮ್ಮ ಪರಂಪರೆಯು ಸದೃಢವಾಗಿ ಉಳಿಯಲು ಸಾಕ್ಷಿಯಾಗಿದೆ. ಶ್ರೀ ಕುಮಾರ ಶಿವಯೋಗಿಗಳ ನಿಕಟ ನೇತೃತ್ವದಲ್ಲಿ ಸ್ಥಾಪಿತಗೊಂಡ ಈ ಸಂಸ್ಥೆಯು, ಅದರ ಆಧುನಿಕ ಅವಶ್ಯಕತೆಗಳಿಗೆ ತಕ್ಕಂತೆ ಧಾರ್ಮಿಕ ಅಭ್ಯಾಸಗಳಲ್ಲಿ ಆದ್ಯತೆ ನೀಡುತ್ತಾ ಭಾರತೀಯ ತತ್ವಜ್ಞಾನವನ್ನು ಸಾರುತ್ತಿದೆ.

ಈ ಪಾಠಶಾಲೆಯ ಸತತ ಯಶಸ್ಸು ಆ ಪಾಠಶಾಲೆಗೆ ಬೆಂಬಲ ನೀಡಿದವರ ತ್ಯಾಗ, ಸಹಕಾರ ಮತ್ತು ಶ್ರೀ ಸಿದ್ಧಲಿಂಗೇಶ್ವರರ ಆಶೀರ್ವಾದದ ಫಲವೆಂದು ಹೇಳಬಹುದು.

೧೯೧೭ ರ ಐತಿಹಾಸಿಕ ಯಡೆಯೂರು  ಪಾದಯಾತ್ರೆಯಲ್ಲಿ ಭಾಗವಹಿದ ಪೂಜ್ಯರು.

      1. ಶ್ರೀ ಜಗದ್ಗುರು ತೋಂಟದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಗದಗ
      2. ಶ್ರೀ ಮ.ನಿ.ಪ್ರ. ಹಾನಗಲ್ಲ ಕುಮಾರ ಮಹಾಸ್ವಾಮಿಗಳು,
      3. ಶ್ರೀ ಮ.ನಿ.ಪ್ರ. ಶಿವಬಸವಮಹಾಸ್ವಾಮಿಗಳು ಹಾವೇರಿ,
      4. ಶ್ರೀ ನಿ. ಪ್ರ. ಶಿವ ಮೂರ್ತಿಸ್ವಾಮಿಗಳು ಚರಂತಿಮಠ, ಬಾಗಲಕೋಟೆ,
      5. ಶ್ರೀ ನಿ. ಪ್ರ. ಅಪ್ಪಯ್ಯಸ್ವಾಮಿಗಳು ಬಿದರಿ ಸವದತ್ತಿ,
      6. ಶ್ರೀ ಷ. ಬ್ರ, ವ್ಯಾಕರಣಾಳ ಪಟ್ಟಾಧ್ಯಕ್ಷರು,
      7. ಶ್ರೀ ನಿ. ಪ್ರ. ಗವಿಮಠದ ಬಸವಲಿಂಗಸ್ವಾಮಿಗಳು ನವಲಗುಂದ,
      8. ಶ್ರೀ ನಿ. ಪ್ರ ಕೊಪ್ಪದ ಮಹಾಂತಸ್ವಾಮಿಗಳು ಇಲಕಲ್,
      9. ಶ್ರೀ ನಿ. ಪ್ರ. ಬಸವಲಿಂಗ ಸ್ವಾಮಿಗಳು ನಿರಡಗಂಬ,
      10. ಶ್ರೀ ನಿ. ಪ್ರ. ಶಿವಬಸವಸ್ವಾಮಿಗಳು ರುದ್ರಾಕ್ಷಿಮಠ ನಾಗನೂರ,
      11. ಶ್ರೀ ಷ. ಬ್ರ, ಶಿರೂರ ಪಟ್ಟಾಧ್ಯಕ್ಷರು ಬಾಗಲಕೋಟೆ,
      12. ಶ್ರೀ ನಿ. ಪ್ರ. ಮಹೇಶ್ವರಸ್ವಾಮಿಗಳು ಹಾನಗಲ್,
      13. ಶ್ರೀ ಷ. ಬ್ರ. ಬಿದರಿ ಪಟ್ಟದ್ದೇವರು,
      14. ಶ್ರೀ ನಿ. ಪ್ರ ಚರಂತಪ್ಪನವರು ಸಂಪಗಾವ,
      15. ಶ್ರೀ ಸೊನ್ನದ ಮರಿದೇವರು,
      16. ಶ್ರೀ ರೇಣುಕದೇವರು ಹಾನಗಲ್ (ಲಿಂ. ಸದಾಶಿವಸ್ವಾಮಿಗಳು),
      17. ಶ್ರೀ ಷ. ಬ್ರ. ಕೆಂಚಬಸವ ಪಟ್ಟದ್ದೇವರು ಗುಲಬರ್ಗಾ,
      18. ಶ್ರೀ ನಿ. ಪ್ರ. ಓಲಿಮಠದ ಸ್ವಾಮಿಗಳು ಜಮಖಂಡಿ,
      19. ಶ್ರೀ ಘನಲಿಂಗ ದೇವರು ಶಿಶಂಬರ,
      20. ಅನಂತರಪುರದ ಶ್ರೀ ಸಚ್ಚಿದಾನಂದದೇವರು.
      21. ಶ್ರೀ ಆದಿನಾಥದೇವರು ಖೇಳಗಿ,
      22. ಶ್ರೀ ಸಿದ್ಧವೀರದೇವರು ನವಲಗುಂದ,
      23. ಶ್ರೀ ನಿ. ಪ್ರ ರಾಮಗಡ್ಡಿ ಸ್ವಾಮಿಗಳು,
      24. ಶ್ರೀ ಗುರುಲಿಂಗ ದೇವರು, ಹಾರನಹಳ್ಳಿ,
      25. ಶ್ರೀ ಚಿದ್ಘನಾರ್ಯರು ಅನಂತಪುರ,
      26. ಶ್ರೀ ಷ. ಬ್ರ. ರೇವಣಸಿದ್ಧ ಪಟ್ಟದ್ದೇವರು ಕೆಳದಿ,
      27. ಶ್ರೀ ಹಾರನಹಳ್ಳಿ ಮರಿದೇವರು,
      28. ಶ್ರೀ ಕೆಂಪಯ್ಯ ದೇವರು ಮರಡಿಮಠ, ಕೊಣ್ಣೂರ,
      29. ಶ್ರೀ ಷ. ಬ್ರ. ಸಖರಾಯಪಟ್ಟದ್ದೇವರು,
      30. ಶ್ರೀ ನಿ. ಪ್ರ ನೊಣವಿನಕೆರೆ ಶ್ರೀಗಳು,
      31. ಶ್ರೀ ನಿ. ಪ್ರ ತುರುವಿನಕೆರೆ ಸ್ವಾಮಿಗಳು,
      32. ಶ್ರೀ ನಿ. ಪ್ರ ತರೀಕೆರೆ ಶ್ರೀಗಳು,
      33. ಶ್ರೀ ನಿ. ಪ್ರ ನಂದಗಡ ಶ್ರೀಗಳು,
      34. ಶ್ರೀ ನಿ. ಪ್ರ ಗುರುಪಾದಸ್ವಾಮಿಗಳು ಗುಲಗಂಜಿಮಠ, ರೋಣ,
      35. ಶ್ರೀ ಷ. ಬ್ರ ಶಿಗ್ಗಾಂವಿ ಪಟ್ಟದ್ದೇವರು,
      36. ಶ್ರೀ ಷ. ಬ್ರ ಸವಡಿಪಟ್ಟದ್ದೇವರು,
      37. ಶ್ರೀ ಷ. ಬ್ರ, ಸತ್ತಿಗೇರಿ ಪಟ್ಟದ್ದೇವರು,
      38. ಶ್ರೀ ಷ. ಬ್ರ, ಅಬ್ಬಿಗೇರಿ ಪಟ್ಟದ್ದೇವರು
      39. ಶ್ರೀ ಷ. ಬ್ರ. ಮಂಗಳೂರು ಪಟ್ಟದ್ದೇವರೇ ಮುಂತಾದವರು ಮತ್ತು ಭಕ್ತ ವೃಂದ

ಪೂಜ್ಯ ಜಗದ್ಗುರು ತೋಂಟದ ಸಿದ್ದೇಶ್ವರ ಮಹಾಸ್ವಾಮಿಗಳವರ ಸಂಸ್ಥಾನ ಮಠದ ವಾಹನಗಳು ಮತ್ತು ರಕ್ಷಣಾ ಸಾಮಗ್ರಿಗಳು ಮತ್ತು ಸಿಬ್ಬಂದಿಗಳ ವಿವರ.

      1. ಆನೆ-೧
      2. ಒಂಟೆಗಳು-೪,
      3. ಕುದುರೆಗಳು-೨೫
      4. ಮೇಣೆ,-೧
      5. ಮೋಟಾರಕಾರ ಗಳು-೨,
      6. ಡಮಣಿಗಾಡಿ ಗಳು-೧೦,
      7. ಕುದುರೆ ಗಾಡಿಗಳು-೮,
      8. ಎತ್ತಿನಗಾಡಿಗಳು-೧೦೦,
      9. ಲಾಂಡಾ ಗಾಡಿ ಗಳು-೨,
      10. ಬಂದೂಕಗಳು-೧೦,
      11. ರಿವಾಲ್ವರ ಗಳು-೨,
      12. ಖಡ್ಗಗಳು-೧೦,
      13. ಭಲ್ಲೆಗಳು -೪ ಇವುಗಳ ಜತೆ
      14. ಸಂಸಾನ ಮಠದ ಬೆಳ್ಳಿ ಬಂಗಾರದ ಉತ್ಸವದ ಸಾಮಾನುಗಳು ಒಯ್ಯಲ್ಪಟ್ಟವು.
      15. ಇದಕ್ಕೆ ಸರಿಯಾಗಿ ೫೦೦ ಸಿಬ್ಬಂದಿ ಜನರು ಇದ್ದರು.

ದಾಖಲೆಯಾಗಿ ದೊರಕಿರುವ ಕಪ್ಪು ಬಿಳುಪಿನ  ಭಾವಚಿತ್ರದ ಆಧಾರದ ಮೇಲೆ  ೬-೧೨-೧೯೧೭ ರಂದು  ಪಾದಯಾತ್ರೆಯ ತಂಡ ಯಡೆಯೂರು ತಲುಪಿರುತ್ತದೆ. ಈ ಪಾದಯಾತ್ರೆ ಗದುಗಿನಿಂದ ೩೮೦ ಕಿ.ಮಿ. ಗಳನ್ನು ಕ್ರಮಿಸಿದೆ. ಸರಾಸರಿ ದಿನಕ್ಕೆ ೨೫ ಕಿಮಿ ಗಳ ಸಾಮರ್ಥ್ಯದಿಂದ  ನೋಡಿದರೆ ಬಹುಷಃ ಈ ಪಾದಯಾತ್ರೆಗೆ ೧೬ ದಿನಗಳು ತಗುಲಿರಬಹುದು ಅಂದರೆ ನವಂಬರ ೨೦ ೧೯೧೭ ರಂದು ಈ ಪಾದಯಾತ್ರೆ ಆರಂಭಗೊಂಡಿರಬಹುದು ಎಂಬ ಊಹೆ.

ಕ್ರಮಿಸಿದ ಮಾರ್ಗ ಸೂಚಿ ಹೀಗಿದೆ ( ಶ್ರೀ ಸಿದ್ದೇಶ್ವರ ಪುರಾಣ ಪುಸ್ತಕದಲ್ಲಿ ಪಂಡಿತ ವೈ .ನಾಗಭೂಷಣ ಶಾಸ್ತ್ರಿಗಳು ದಾಖಲಿಸಿದಂತೆ)

 

ಕ್ರ.ಸಂ. ಸ್ಥಳಗಳು ಕಿ.ಮಿ ವಿಶೇಷತೆಗಳು
ಗದಗ
ಡಂಬಳ ೧೮.೨
ಮುಂಡರಗಿ ೧೬.೩ ಕರ್ತೃ ಸ್ಥಾನಗಳ ಸಂದರ್ಶನ ಮಾಡಿಕೊಂಡ ಈ ಮಹಾಯಾತ್ರಿಕರು ಮುಂಡರಗಿ ಸಮೀಪದ ತುಂಗಭದ್ರಾ ತೀರದಲ್ಲಿ ಬೀಡುಬಿಟ್ಟರು
ಹಂಪಸಾಗರ ೭.೮ ಹಂಪಸಾಗರದ ಆಗರ್ಭ ಶ್ರೀಮಂತರಾದ ಶ್ರೀ ಮರ್ತೂರ ಸಂಗಪ್ಪನವರು ಮತ್ತು ಶ್ರೀ ಮಸಗಿ ಗುರುಬಸಪ್ಪನವರೇ ಮುಂತಾದ ಪ್ರಮುಖ ಭಕ್ತಾಗ್ರೇಸರರು ಶ್ರೀ ಜಗದ್ಗುರು ಸನ್ನಿಧಿಯವರನ್ನು ಹಾಗು ಸನ್ನಿಧಿಯೊಡನೆ ಆಗಮಿಸಿದ ಹರ-ಗುರು- ಚರ ಸಮೂಹವನ್ನು ಹಾನಗಲ್ಲ ಶ್ರೀಗಳೊಡನೆ ಆಗಮಿಸಿದ ಶಿವಯೋಗ ಮಂದಿರದ ಸಾಧಕರು ಹಾಗು ವಟುಗಳನ್ನು ಕ್ರಮೋಪಚಾರಗಳಿಂದ ಸತ್ಕರಿಸಿ ಮಹಾಗಣಾರಾಧನೆ ಯನ್ನೆಸಗಿದರು
ಹೂವಿನ ಹಡಗಲಿ ೧೫.೮ ಭಕ್ತರಾದ ಸರ್ವಶ್ರೀ ಮುಂಡರಗಿ ರುದ್ರಪ್ಪನವರು, ಡಂಬಳದ ಬಂಗಾರಶೆಟ್ಟಿ ಬಂಗಾರೆಪ್ಪನವರು ಮತ್ತು ಷಣ್ಮುಖಪ್ಪನವರೇ ಮೊದಲಾದವರು ವಾದ್ಯ ವೈಭವದಿಂದ ಪಾದಯಾತ್ರಾ ನಿಯೋಗವನ್ನು ಬರಮಾಡಿಕೊಂಡು ತಮ್ಮ ಸೇವೆ ಸಲ್ಲಿಸಿದರು.
ಹರಪನಹಳ್ಳಿ ೨೮.೨೨ ಇಲ್ಲಿಯ ವೇ ಶಿವರುದ್ರಶಾಸ್ತ್ರಿಗಳು ತಮ್ಮ ಪಾಠಾಶಾಲಾ ವಿದ್ಯಾರ್ಥಿಗಳೊಡನೆ ವೇದಘೋಷದಿಂದ ಶ್ರೀ ಗಳವರನ್ನು ಬರಮಾಡಿಕೊಂಡ ಮೇಲೆ ಆ ಊರಿನ ಪ್ರಮುಖ ಮುಂದಾಳುಗಳಿಂದ ಅತಿಥಿಗಳಿಗೆಲ್ಲ ಪ್ರಸಾದ ಸಂತರ್ಪಣೆಯಾಯಿತು. ಅದೇ ಸಮಯದಲ್ಲಿ ಶ್ರೀ ಶಾಸ್ತ್ರಿಗಳವರ ಕೋರಿಕೆಯ ಮೇರೆಗೆ ಮದ್ರಾಸಿನಲ್ಲಿ ಬಿ. ಎ. ತರಗತಿಯಲ್ಲಿರುವ ಅವರ ಮಗನಿಗೆ ಮಾಸಿಕ ಸಹಾಯ ಮಾಡುವ ಕುರಿತು ಶ್ರೀಗಳಿಂದ ಆಶೀರ್ವಾದವಾಯಿತು.

 

ದಾವಣಗೇರೆ ೩೬.೯ ಮೈಸೂರ ಸರಕಾರದವರು ಶ್ರೀ ಗಳವರ ಸವಾರಿಯೊಂದಿಗೆ ಇರಬೇಕಾದ ರಕ್ಷಣಾ ಸಿಬ್ಬಂದಿ ಮೊದಲಾದವುಗಳ ವ್ಯವಸ್ಥೆಯನ್ನು ಏರ್ಪಡಿಸಿದ್ದರು. ಡಾವಣಗೇರಿಯ ಪುರಪ್ರಮುಖರು ಊರಲ್ಲೆಲ್ಲ ತಳಿರು ತೋರಣಗಳನ್ನು ಕಟ್ಟಿಸಿ ಮಹಾಸನ್ನಿಧಿಯನ್ನು ಅಭೂತಪೂರ್ವ ಉತ್ಸವದಿಂದ ಸ್ವಾತಿಸಿದರು. ಶಿವಯೋಗ ಮಂದಿರದ ಸಾಧಕರು, ವಟುಗಳು ಹಾಗು ಇನ್ನುಳಿದ ಹರ-ಗುರು-ಚರಮೂರ್ತಿಗಳಿಂದ

ಅಲ್ಲಿಯ ಸಭೆ ಪರಶಿವನ ಒಡೋಲಗದಂತೆ ಕಂಗೊಳಿಸಿತು. ಸಭೆಯಲ್ಲಿ ವಿದ್ವಜ್ಜನರ ಭಾಷಣಗಳಾದವು. ಕನ್ನಡ-ಸಂಸ್ಕೃತ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಪಂಡಿತ ಪ್ರಭಪ್ಪನವರು ಸ್ವರಚಿತ ಜಗದ್ಗುರುಗಳವರ ‘ಸ್ತೋತ್ರ ಪಂಚಕ’ವನ್ನು ಪ್ರಸ್ತಾಪಿಸಿ ಶ್ರೀ ಸನ್ನಿಧಿಗೆ ಅದನ್ನು ಭಕ್ತಿ ಪೂರ್ವಕವಾಗಿ ಸಮರ್ಪಿಸಿದರು.

ಮಾರನೆಯ ದಿನ ಪ್ರಾತಃಕಾಲ ಡಾವಣಗೇರಿಯ ಸದ್ಭಕ್ತರಾದ ಬಾಗಿಲಮನೆಯ ಶ್ರೀ ಷಡಕ್ಷರಪ್ಪನವರು ಶ್ರೀಗಳವರ ಪಾದಧೂಳಿ ತಮ್ಮ ಮನೆಯಲ್ಲಿ ಬೀಳಲೆಂದು ಅಪೇಕ್ಷಿಸಿದ್ದರಿಂದ ಶ್ರೀ ಮಹಾಸನ್ನಿಧಿಯವರು ಅವರ ಮನೆಗೂ ದಯಮಾಡಿಸಿದರು. ಆ ಸಂದರ್ಭದಲ್ಲಿ ಶ್ರೀ ಷಡಕ್ಷರಪ್ಪನವರು ೨೧ ತೋಪುಗಳನ್ನು ಹಾರಿಸಿ ಶ್ರೀಗಳನ್ನು ಸ್ವಾಗತಿಸಿದರು

 

ಹೊಳಲಕೆರೆ ೫೪.೩೮ ಪಾದಪೂಜೆ
ಹೊಸದುರ್ಗ ೨೯.೭೪ ಪಾದಪೂಜೆ
೧೦ ಅಜ್ಜಂಪುರ ೩೦.೨೪ ಪಾದಪೂಜೆ
೧೧ ಬೀರೂರು ೧೭.೩೫ ಬೀರೂರಲ್ಲಿ ವೇ. ಪತ್ರಿ ಚನ್ನವೀರಯ್ಯನವರು ತಮ್ಮ ಇನ್ನುಳಿದ ಪ್ರತಿಷ್ಠಿತರೊಡನೆ ಸಲ್ಲಿಸಿದ ಸೇವೆ ಅವಿಸ್ಮರಣೀಯ, ಶ್ರೀ ಪತ್ರಿ ಚನ್ನವೀರಯ್ಯನವರ ಉದ್ಯಾನದಲ್ಲಿಯೇ ಅಂದಿನ ರಾತ್ರಿ ಶ್ರೀ ಗಳವರ ಬಿಡಾರವಾಯಿತು. ಮಾರನೆಯ ದಿನ ಪ್ರಾತಃಕಾಲ ಶ್ರೀ ಚನ್ನವೀರಯ್ಯನವರ ಮನೆಯಲ್ಲಿ ಶ್ರೀ ಗಳವರ ಪಾದಪೂಜೆ ಜರುಗಿತು. ಶ್ರೀ ಪತ್ರಿಯವರ ಮನೆಯವರಿಗೆ ಮತ್ತು ಬೀರೂರ ಸದ್ಭಕ್ತರಿಗೆ ಆಶೀರ್ವಾದ ಅನುಗ್ರಹಿಸಿ ಅವರೆಲ್ಲರಿಗೂ ತಮ್ಮೊಡನೆ ಶ್ರೀ ಎಡೆಯೂರ ಕ್ಷೇತ್ರಕ್ಕೆ ಬರಲು ಅಪ್ಪಣೆ ಮಾಡಿ ಪ್ರಯಾಣ ಮುಂದುವರಿಸಿದರು
೧೨ ಬಾಣಾವರ ೩೧.೫೮ ಬೀರೂರ ಶ್ರೀ ಸಣ್ಣಕ್ಕಿ ಪಶ್ವತಯ್ಯನವರ ವ್ಯವಸ್ಥೆ
೧೩ ಅರಸಿಕೇರೆ ೧೫.೩೦ ಬೀರೂರ ಶ್ರೀ ಸಣ್ಣಕ್ಕಿ ಪಶ್ವತಯ್ಯನವರ ವ್ಯವಸ್ಥೆ
೧೪ ತಿಪಟೂರು ೨೩.೩೦ ಬೀರೂರ ಶ್ರೀ ಸಣ್ಣಕ್ಕಿ ಪಶ್ವತಯ್ಯನವರ ವ್ಯವಸ್ಥೆ
೧೫ ನೊಣವಿನಕೆರೆ ೧೩.೧೭ ನೊಣವಿನಕೆರೆಯ ಶಿವಾನುಭವ ಚರವರ್ಯರಾದ ಸೋಮಕಟ್ಟಿ, ಶ್ರೀ ಕರಿವೃಷಭೇಂದ್ರಸ್ವಾಮಿಗಳವರ ಮಠದಲ್ಲಿ ಅಂದು ವಾಸ್ತವ್ಯಮಾಡಿ ಅಲ್ಲಿ ಭಕ್ತಾದಿಗಳ ಸೇವೆಯನ್ನು ಸ್ವೀಕರಿಸಿ ಮುಂದೆ ಪ್ರಯಾಣ ಬೆಳೆಯಿಸಲಾಯಿತು.
೧೬ ತುರುವಕೆರೆ ೧೩.೨೪ ತುರುವೆಕೆರೆಯ ಭಕ್ತರು ಶ್ರೀ ಸನ್ನಿಧಿಯವರು ವಿಶ್ರಾಂತಿ ತೆಗೆದುಕೊಳ್ಳಲು ಸುಂದರವಾದ ಮಂಟಪ ರಚಿಸಿದ್ದರು. ಅಲ್ಲಿ ಆ ಭಕ್ತಾದಿಗಳ ಕೋರಿಕೆಯ ಮೇರೆಗೆ ಕೆಲ ಸಮಯ ವಿಶ್ರಾಂತಿ ತೆಗೆದುಕೊಂಡು ಅಲ್ಲಿಯ ಭಕ್ತರೆಲ್ಲರಿಗೆ ಆಶೀರ್ವದಿಸಿ ಮುಂದೆ ಎಲ್ಲಿಯೂ ನಿಲ್ಲದೆ ಶ್ರೀ ಯಡೆಯೂರ ಕ್ಷೇತ್ರವನ್ನು ಪ್ರವೇಶಿಸಿದರು
೧೭ ಯಡೆಯೂರು ೨೪.೩೭

 

ಶ್ರೀ ಕ್ಷೇತ್ರದ ಅದ್ಭುತ ದರ್ಶನವೊಡನೆ, ಶ್ರೀ ಜಗದ್ಗುರುಗಳು ಹಾನಗಲ್ಲ ಶ್ರೀಗಳ ಪವಿತ್ರ ಹಸ್ತದಲ್ಲಿ ತಮ್ಮ ಹಸ್ತವನ್ನಿಟ್ಟು, ಪಾದಯಾತ್ರಿ ಯಾಗಿ ನಡೆದರು. ಅವರ ಜೊತೆಯಲ್ಲಿ, ಎಲ್ಲಾ ಹರ-ಗುರು-ಚರಮೂರ್ತಿಗಳು ಶ್ರದ್ಧೆಯ ಪ್ರತಿಬಿಂಬವಾಗಿ ಹಿಂಬಾಲಿಸುತ್ತಿದ್ದರು.

ಈ ಪಾದಯಾತ್ರೆಯು ಕೇವಲ ಒಂದು ಸಮಾರಂಭವಲ್ಲ, ಇದು ಶ್ರೀ ಕ್ಷೇತ್ರದ ದರ್ಶನಕ್ಕೆ ಶ್ರೀಗಳಿಗೆ ಸಲ್ಲಿಸುವ ಅಧ್ಯಾತ್ಮಿಕ ಸಮರ್ಪಣೆ, ಗೌರವ ಹಾಗೂ ಭಕ್ತಿಯ ಸಂಕೇತವಾಗಿತ್ತು. ಶ್ರೀಗಳಿಗೆ ಪೂರ್ವಭಾವಿಯಿಂದ, ಹಿಂದಿನಿಂದ ಗಮಕಿ, ಗಾಯಕರ ಕಲಾನೈಪುಣ್ಯವು ಪುರಾತನ ಪರಂಪರೆಯ ಸ್ಮರಣೆ ಬಯಸುವಂತೆ ಪ್ರತಿಫಲಿಸುತ್ತಿತ್ತು. ಶಾಸ್ತ್ರಜ್ಞರು ಹಾಗೂ ಅಪಾರ ಭಕ್ತಸಮೂಹವು ಕ್ರಮಿಸಿದ ದಾರಿ ಹಾಗು ಹೃದಯದಲ್ಲಿ ಭಕ್ತಿ ತುಂಬಿಕೊಂಡು, ಮಂಗಳಕಾರವಾದ ಮೇಳ-ತಾಳಗಳ ಭೋರ್ಗರೆತದೊಂದಿಗೆ ಸಾಗುತ್ತಿದ್ದದು.

ಛತ್ರ – ಚಾಮರಗಳ ಅಲಂಕಾರಗಳೊಂದಿಗೆ ಸರ್ವಪೂಜಿತ ಶ್ರೀಗಳು ಶ್ರೀ ಕ್ಷೇತ್ರವನ್ನು ಸಮೀಪಿಸುತ್ತಿದ್ದಂತೆ, ಧರ್ಮದರ್ಶಿಗಳು ಹಾಗೂ ಅರ್ಚಕರು ಪೂರ್ಣ ಕುಂಭ ಸ್ವಾಗತದೊಂದಿಗೆ ಸ್ವಾಗತಿಸಿದರು. ವೇದಘೋಷದ ಮಹತ್ವದಿಂದ, ದೇವಸ್ಥಾನದ ಪವಿತ್ರ ವಾತಾವರಣವು ಭಕ್ತಿಯಲ್ಲೂ ಶ್ರದ್ಧೆಯಲ್ಲೂ ಪರಿಪೂರ್ಣವಾಯಿತು. ಶ್ರೀಗಳಿಗೆ ಅರ್ಪಿಸಲಾದ ಮಂಗಳಸ್ವಾಗತವು, ಪವಿತ್ರ ಕ್ಷೇತ್ರದ ಅಧ್ಯಾತ್ಮಿಕ ಭವ್ಯತೆಯನ್ನು ಬೆಳಗಿಸಿತು.

ಕಾರ್ತಿಕ ಬಹುಳ ಪಂಚಮಿಯ ಪವಿತ್ರ ದಿನ, ಶ್ರೀ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಮಹತ್ವದ ಸಭೆಯು ಭಕ್ತರ ಹೃದಯದಲ್ಲಿ ಭಕ್ತಿ ಮತ್ತು ಭಾವನೆಯನ್ನು ತುಂಬಿತು.

 

ಈ ಸಂದರ್ಭದಲ್ಲಿ, ಶ್ರೀ ಹಾನಗಲ್ಲ ಶ್ರೀಗಳ ಅಪ್ಪಣೆಯಂತೆ, ಆದರ್ಶ ಶಿಕ್ಷಕರೂ, ಪ್ರಸಿದ್ಧ ಕವಿಯೂ ಹಾಗೂ ವಾಗ್ಮಿಗಳೂ ಆದ ಶ್ರೀ ಜಿಗಳೂರ ಲಿಂಗಪ್ಪ ಮಾಸ್ತರರು, ಅನಾದಿ ಸಿದ್ಧಲಿಂಗೇಶ್ವರರಿಂದ  ಹಿಡಿದು ತೋಂಟದಾರ್ಯ ಪರಂಪರೆಯ ಶ್ರೀ ಜಗದ್ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ವರೆಗಿನ ಅದ್ಭುತ ಚರಿತ್ರೆಯನ್ನು ನಿರೂಪಿಸಿದರು. ಅವರ ಚರಿತ್ರೆ ಮತ್ತು ತತ್ವಜ್ಞಾನವನ್ನು ಶ್ರದ್ಧೆಯಿಂದ ಶ್ರವಣಿಸಿದ ಭಕ್ತರು ಮತ್ತು ವಿದ್ವಾಂಸರು ಆ ನೈಜ ಪರಂಪರೆಯ ಮಹತ್ವವನ್ನು ಅರ್ಥಮಾಡಿಕೊಂಡರು. ಅದರೊಂದಿಗೆ ಶ್ರೀ ಕೊಪ್ಪದ ಮಹಾಂತದೇಶಿಕರು ಅವರ ವಿಶಿಷ್ಟ ಉಪನ್ಯಾಸದ ಮೂಲಕ ಸಭೆಗೆ ಮತ್ತಷ್ಟು ಆಳವನ್ನು ತಂದುಕೊಟ್ಟರು.

ಮಾರನೆಯ ದಿನವೂ ವಿದ್ವಜ್ಜನರ ಉಪನ್ಯಾಸಗಳು ನಡೆಯುತ್ತಾ, ಮಹಾಸ್ವಾಮಿಗಳಿಗೆ ತ್ರಿಕಾಲ ರುದ್ರಾಭಿಷೇಕದಂತೆ ವಿಭಿನ್ನ ಧಾರ್ಮಿಕ ಸೇವೆಗಳು ನಡೆಯಿತು. ಸಂಜೆ ದೀಪೋತ್ಸವಾದಿ ಸೇವೆಗಳು ಕ್ಷೇತ್ರವನ್ನು ಪ್ರಕಾಶಮಯಗೊಳಿಸಿದವು, ಭಕ್ತರ ಹೃದಯಗಳಲ್ಲಿ ಅಧ್ಯಾತ್ಮಿಕ ಶಾಂತಿ ಮತ್ತು ಆನಂದ ತುಂಬಿದವು.

ಈ ಧಾರ್ಮಿಕ ಉತ್ಸವದ ಇನ್ನೊಂದು ಮುಖ್ಯ ಅಂಶವಾಗಿ ಗಜ-ಅಶ್ವಗಳ ಮೆರವಣಿಗೆಯೊಂದಿಗೆ, ಭಕ್ತಾದಿಗಳ ಶ್ರದ್ಧಾ ಸಮರ್ಪಣೆಯೊಂದಿಗೆ ಬಿರುದಾವಳಿಗಳ ಸಮ್ಮುಖದಲ್ಲಿ ವೈಭವದಿಂದ ನೆರವೇರಿತು.

ಮಹಾಸ್ವಾಮಿಯವರಿಗೆ ಸಲ್ಲಿಸಿದ ಭಕ್ತಿಯ ಸಂಕೇತವಾಗಿ, ಬೆಟಗೇರಿ ಕಣವಿ ಶ್ರೀ ಮಲ್ಲೇಶಪ್ಪನವರು ಮತ್ತು ನರೇಗಲ್ಲ ಕಣವಿ ಶ್ರೀ ಗುರಪ್ಪಜನವರು ಮಹಾಸ್ವಾಮಿಯ ನಿತ್ಯ ನೈವೇದ್ಯಕ್ಕೆ ಒಂದು ಹೊಲವನ್ನು ಖರೀದಿಸಿ, ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು.

ಮುಂಡರಗಿಯ ಶೆಟ್ಟರ ಸಂಗಪ್ಪಯ್ಯನವರು ಮಹಾಸ್ವಾಮಿಯ ದೀಪಾರಾಧನೆಗಾಗಿ ತಮ್ಮ ನಿಷ್ಠೆಯನ್ನು ವ್ಯಕ್ತಪಡಿಸಿ ಒಂದು ಹೊಲವನ್ನು ದಾನವಾಗಿ ಸಲ್ಲಿಸಿದರು.

ಜಕ್ಕಲಿಯ ಸದ್ಭಕ್ತರಾದ ಕಡಗದ ತೋಟಪ್ಪನವರು ಮಹಾಸ್ವಾಮಿಯ ರಥೋತ್ಸವ ಸಂದರ್ಭದಲ್ಲಿ, ಆ ರಥಕ್ಕೆ ತಗಲುವ ಎಣ್ಣೆ ಖರ್ಚನ್ನು ನೋಡಿಕೊಂಡು ತಮ್ಮ ಶ್ರದ್ಧೆಯ ಮೂಲಕ ಮತ್ತಷ್ಟು ಸಮರ್ಪಣೆಯನ್ನು ತೋರಿಸಿದರು.

ಶ್ರೀ ಕ್ಷೇತ್ರ ಎಡೆಯೂರ ಕಾರ್ಯಕ್ರಮದ ಯಶಸ್ವಿ ಪೂರ್ಣತೆಗೆ ಮುಂದಿನ ಹಂತವಾಗಿ, ಅನಾದಿ ಸಿದ್ಧಲಿಂಗೇಶ್ವರರ ತಪೋಭೂಮಿಯಾದ ಶ್ರೀ ಕಗ್ಗೆರೆ ಕ್ಷೇತ್ರಕ್ಕೆ ಪ್ರಯಾಣವನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ, ಖರ್ಚಿನ ಭಾಗವನ್ನು ಹೊಂಬಳ ಗ್ರಾಮದ ಸದ್ಭಕರಾದ ಶ್ರೀ ಮೈಲಾರ ಶಂಕರಪ್ಪನವರು ತಗೆದುಕೊಂಡರು,

ಶ್ರೀ ಜಗದ್ಗುರುಗಳೊಡನೆ ಪ್ರಯಾಣಿಸಿದವರ ಸಂಖ್ಯೆ ಕನಿಷ್ಠ ೧,೦೦೦ ಜನರಷ್ಟು ಇದ್ದಾಗ, ಕಗ್ಗೆರೆ ಗ್ರಾಮದ ಸುತ್ತಲಿನ ಊರುಗಳಿಂದ ೮-೧೦ ಸಾವಿರ ಜನರು ಶ್ರೀಗಳ ಅವರ ದರ್ಶನಕ್ಕೆ ಧಾವಿಸಿದರು. ಈ ಪೂರಕ ಜನಸಂಖ್ಯೆಗೆ ಪ್ರಸಾದವನ್ನು ವ್ಯವಸ್ಥೆ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಬಿಟ್ಟಿತು , ಏಕೆಂದರೆ ಕಗ್ಗೆರೆಯಲ್ಲಿ ಮಾಡಿದ  ವ್ಯವಸ್ಥೆಯಂತೆ ಕೇವಲ ೧೦೦೦ ಜನರಿಗೆ ಮಾತ್ರ ಪ್ರಸಾದ ನೀಡಲು ಅವಕಾಶವಿತ್ತು.

“ಎಲ್ಲರಿಗೂ ಒಂದು ಮುಷ್ಟಿ ಪ್ರಸಾದ ಕೊಡುವುದಾದರೆ, ಊಟದ ಎಲೆಗಳು ಕೂಡ ದೊರಕುತ್ತವೆ,” ಎಂದು ಯೋಚನೆಯಾಯಿತು. ಹೊತ್ತೊಯ್ಯುವ ಸಾಮಾನುಗಳು ಶ್ರೀ ಕ್ಷೇತ್ರ ಎಡೆಯೂರಿನಲ್ಲಿ ಮಾತ್ರವಿದ್ದು, ಅದು ೮-೧೦ ಮೈಲು ದೂರದಲ್ಲಿತ್ತು. ಸಮೀಪದ ಹಳ್ಳಿಗಳು ಕೂಡ ಕಡಿಮೆ ಜನಸಂಖ್ಯೆ ಇರುವ ಸಣ್ಣ ಸಣ್ಣ ಕೊಂಪೆಗಳು.

ಈ ಧರ್ಮ ಸಂಕಟದಲ್ಲಿ ಏನು ಮಾಡಬೇಕೆಂದು ಯಾರಿಗೂ ತಿಳಿದಿಲ್ಲದಾಗ, ಶ್ರೀ ಹಾನಗಲ್ಲ ಮಹಾಸ್ವಾಮಿಗಳವರು ಧೈರ್ಯದಿಂದ ಸ್ಥಳಕ್ಕೆ ಬಂದು ಹೇಳಿದರು, “ಬುದ್ಧಿ! ಆಲೋಚನೆ ಏಕೆ? ಯಾವ ಮಹಾತ್ಮನು ಒಂದು ಭಾಂಡ ಅನ್ನದಿಂದ ೫೦೦ ಜನರನ್ನು ತಣಿಸಿದನೋ ಆತನು ಈಗಲೂ ಇರುವನು. ಇದು ಆತನದೇ ಪವಿತ್ರ ಕ್ಷೇತ್ರ” ಎಂದು ಧೈರ್ಯ ಹೇಳಿ ಶ್ರೀ ಜಗದ್ಗುರುಗಳವರನ್ನು ಪ್ರಸಾದ ವ್ಯವಸ್ಥೆ ಇದ್ದಲ್ಲಿಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಪ್ರಸಾದಕ್ಕೆ ಜಗದ್ಗುರುಗಳವರ ಹಸ್ತವನ್ನು ಸ್ಪರ್ಶಿಸಿದರು..

ಅಷ್ಟರಲ್ಲಿ, ಒಬ್ಬ ಹಳ್ಳಿಕಾರನು ಧಾವಿಸಿ ಬಂದು, “ಊಟದ ಎಲೆಗಳಿಂದ ತುಂಬಿದ ಗಾಡಿ ಹಳ್ಳದಲ್ಲಿ ನಿಂತಿದೆ, ಸಹಾಯಕ್ಕೆ ಬನ್ನಿ” ಎಂದು ಹೇಳಿದರು. ಯಾತ್ರಿಕರು ಗಾಡಿಯನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿದರು. ಯಾತ್ರಿಕರೆಲ್ಲರಿಗೂ ಎಲೆಗಳನ್ನು ಹಂಚಿ, ಸಮಾನವಾಗಿ ಪ್ರಸಾದ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಯಿತು. ವಿಚಿತ್ರವೆಂದರೆ, ಎಲ್ಲರಿಗೂ ಎಲೆಗಳು ತಲುಪಿದವು, ಪ್ರಸಾದ ಯಾರಿಗೂ ಕಡಿಮೆ ಯಾಗಲಿಲ್ಲ.!

ಮಾರನೆಯ ದಿನ, ಶ್ರೀ ಜಗದ್ಗುರುಗಳು, ಅರ್ಚಕರು, ಧರ್ಮದರ್ಶಿಗಳು ಮತ್ತು ಸೇವಕರಿಗೆ ಸಂಸ್ಥಾನಮಠದಿಂದ ಆಶೀರ್ವಾದ ನೀಡಿದ ಬಳಿಕ, ತುರುವೇಕೆರೆ ಮಾರ್ಗವಾಗಿ ಮರುಪ್ರಯಾಣವನ್ನು ಆರಂಭಿಸಿದರು.

ಮಾರ್ಗ ಮಧ್ಯದಲ್ಲಿ ಶ್ರೀ ಕೊಟ್ಟೂರು ಕ್ಷೇತ್ರವನ್ನು ಭೇಟಿ ಮಾಡಲಾಯಿತು. ವೀರಶೈವ/ಲಿಂಗಾಯತ  ಕ್ಷೇತ್ರಗಳಲ್ಲಿ ಕೊಟ್ಟೂರಿಗೂ ಮಹತ್ವವಿದೆ, ಏಕೆಂದರೆ ಇಲ್ಲಿ ಶ್ರೀ ಕೊಟ್ಟೂರ ಬಸವೇಶ್ವರರು ಲೋಕೋದ್ಧಾರಕ್ಕಾಗಿ ಅಭಿವ್ಯಕ್ತವಾದ ಪಂಚಗಣಾಧೀಶ್ವರರಲ್ಲಿ ಒಬ್ಬರಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಜೀವಂತ ಸಮಾಧಿ ಇದೆ, ಮತ್ತು ಅವರಿಗೆ ಸಲ್ಲಿಸಲಾದ ಪೂಜೆಗಳ ಮೂಲಕ ಅವರುಗಳ ಅಪಾರ ಮಹಿಮೆ ಸಂದರ್ಶನವಾಯಿತು.

ಅಲ್ಲಿಂದ, ಶ್ರೀ ಗಳು ಬಾಚಗೊಂಡನಹಳ್ಳಿ, ಹಿರೇಹಡಗಲಿ ಮತ್ತು ಹಂಪಸಾಗರಗಳನ್ನು ಭೇಟಿಯಾಗಿ ಅಲ್ಲಿನ ತಮ್ಮ ಪೀಠದ ಗುರುಗಳಿಗೆ ಪೂಜೋಪಚಾರಗಳನ್ನು ಸಲ್ಲಿಸಿದರು. ಇದರಿಂದ ಗಣಾರಾಧನೆಯ ಪರಂಪರೆ ಬೆಳೆಯಿತು. ನಂತರ, ಅವರು ಮುಂಡರಗಿಗೆ ಬಂದರು, ಅಲ್ಲಿ ಸದ್ಭಕ್ತರಿಗೆ ನಿರೂಪಣೆ ನೀಡಿದರು ಮತ್ತು ನಂತರ ಡಂಬಳ ಸಂಸ್ಥಾನ ಮಠಕ್ಕೆ ಸಾಗಿದರು. ಅಲ್ಲಿಯೂ ಗಣಾರಾಧನೆ ನಡೆಸಿದ ನಂತರ, ಅಣ್ಣಿಗೇರಿಯತ್ತ ಅವರ ಪ್ರಯಾಣ ಮುಂದುವರಿಯಿತು.

ಅಣ್ಣಿಗೇರಿಗೆ ಬರುವಾಗ, ಅಲ್ಲಿಯ ಪರಮ ಭಕ್ತರಾದ ಶ್ರೀ ಶಂಕರಪ್ಪ ದೇಸಾಯಿಯವರ ಸೇವೆಯನ್ನು ಸ್ವೀಕರಿಸಿದರು. ಅವರು ಅಲ್ಲಿಯ ಭಕ್ತರಿಗೆ ಆಶೀರ್ವದಿಸಿದರು ಮತ್ತು ನಂತರ ಗದುಗಿನ ಕಡೆಗೆ ತಮ್ಮ ಯಾತ್ರೆ ಮುಂದುವರಿಸಿದರು.

ಗಡಿಪರ್ವ: ಶ್ರೀ ಮಹಾಸನ್ನಿಧಿಯು ಗದುಗಿನ ಹೊರವಲಯದಲ್ಲಿರುವ ಮಾನ್ವಿ ಮಲ್ಲೇಶಪ್ಪನವರ ತೋಟದಲ್ಲಿ ವಾಸ್ತವ್ಯ ಮಾಡಿದರು. ಈ ಸಂದರ್ಭದಲ್ಲಿ, ಗದಗ-ಬೆಟಗೇರಿ-ಶಹಪೂರಪೇಟೆಯ ಸದ್ಭಕ್ತರು ನಾನಾವಿಧದ ಪಕ್ವಾನ್ನಗಳನ್ನು ಸಿದ್ಧಪಡಿಸಿ, ಶ್ರೀ ಜಗದ್ಗುರುಗಳ ಸನ್ನಿಧಿಯಲ್ಲಿ ಗಡಿಪರ್ವವನ್ನು ವಿಜೃಂಭಣೆಯಿಂದ ಆಚರಿಸಿದರು.

 

 

ಮೇಲ್ಕಾಣಿಸಿದ ಎಲ್ಲಾ ವಿವರಗಳಿಗೆ ಮಿಗಿಲಾಗಿ, ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರ ಶಿವಯೋಗದ ಬದುಕಿನಲ್ಲಿ ೧೯೧೭ರ ಡಿಸೆಂಬರ್ ೬ರಂದು ಒಂದು ವಿಶೇಷ ಸಂಗತಿ ನಡೆಯಿತು.  ಯಡೆಯೂರಿನಲ್ಲಿ ಸಿದ್ಧಲಿಂಗೇಶ್ವರರ ಕ್ರಿಯಾ ಸಮಾಧಿಯ ದರ್ಶನವಾದ ನಂತರ, ಶ್ರೀ ಕುಮಾರ ಸ್ವಾಮಿಗಳು ದೇವಾಲಯದ ಎಡಭಾಗದ ಪ್ರಾಕಾರದ ಕೆಳ ಅಂತಸ್ತಿನಲ್ಲಿ ಪೂಜಾದಿಗಳಿಗೆ ಪೂರ್ಣಿಸಿ, ಸಂಜೆಯ ಮೇಲೆ ಪವಡಿಸಿದರು.

ನಡುರಾತ್ರಿ, ಅವರಿಗೆ ಒಂದು ಸ್ಫೂರ್ತಿದಾಯಕ ಕನಸು ಕಾಣಿಸಿತು. ಕನಸಿನಲ್ಲಿ, ಶ್ರೀ ಸಿದ್ಧಲಿಂಗೇಶ್ವರರು ಗದ್ದುಗೆಯಲ್ಲಿ ಲಿಂಗಪೂಜೆಯಲ್ಲಿ ಮುಳುಗಿದ್ದಾಗ, ಶಿವಯೋಗಿಗಳು ಅವರಿಂದ ಪಾದೋದಕ ಮತ್ತು ಪ್ರಸಾದ ಪಡೆಯುತ್ತಿದ್ದರು. ಶ್ರೀ ಸಿದ್ಧಲಿಂಗೇಶ್ವರರು ಭಸ್ಮ ಧಾರಣೆಯೊಂದಿಗೆ, ರುದ್ರಾಕ್ಷಿ ಮಾಲೆಗಳ ಶೋಭೆಯಲ್ಲಿ ಬಿಂಬಿತವಾಗಿದ್ದರು. ಜಂಗಮಮೂರ್ತಿಗಳು ಒಬ್ಬೊಬ್ಬರಾಗಿ ಪಾದೋದಕ ಮತ್ತು ಪ್ರಸಾದ ಪಡೆಯುತ್ತಿದ್ದಾಗ, ಅವರು ಕೇವಲ ತಾವು ಮಾತ್ರ ನೋಡುತ್ತ ನಿಂತಂತೆ, ಶ್ರೀ ಕುಮಾರ ಸ್ವಾಮಿಗಳಿಗೆ ತಮ್ಮ ಗುರುಗಳು, ಬಿದರಿ ಶ್ರೀ ಕುಮಾರ ಸ್ವಾಮಿಗಳು, ತಮ್ಮತ್ತ ನೋಡುತ್ತಿದ್ದಂತೆ ಭಾಸವಾಯಿತು.

ಕನಸಿನಿಂದ, ಶ್ರೀ ಕುಮಾರ ಸ್ವಾಮಿಗಳು ಎಚ್ಚರಗೊಳ್ಳಲು. “ಇದು ಶ್ರೀ ಸಿದ್ಧಲಿಂಗೇಶ್ವರನ ವಿಲಾಸ,” ಎಂದು ಅವರು ಯೋಚಿಸಿದರು. ” ಈ ಕ್ಷೇತ್ರವು ಶಿವಯೋಗ ಪರಂಪರೆಯ ಅನಾದಿ ನಿರಂಜನ ಜಗದ್ಗುರುಗಳ ಸ್ಥಳ.” ಈ ದೃಷ್ಟಿಯಿಂದ, ಅವರು ತಮ್ಮಲ್ಲಿದ್ದ ಸಂದೇಹಗಳನ್ನು ಬದಗಿರಿಸಿ,ಭಕ್ತಿಯಿಂದ, ಅವರು ತಮ್ಮ ಕನಸಿನ ವೃತ್ತಾಂತವನ್ನು ಶ್ರೀ ಸಿದ್ಧೇಶ್ವರ ಜಗದ್ಗುರುಗಳಿಗೆ ಹಂಚಿಕೊಂಡರು. ಈ ಸಂದರ್ಭದಲ್ಲಿ, ಶ್ರೀ ಸಿದ್ಧಲಿಂಗೇಶ್ವರರ ಸನ್ನಿಧಾನದಲ್ಲಿ ಮಂಗಳಾರತಿ ನೆರವೇರಿಸಿ, ಶ್ರೀ ಕುಮಾರ ಸ್ವಾಮಿಗಳು ಶ್ರದ್ಧೆಯಿಂದ ಸಾಷ್ಟಾಂಗ ಪ್ರಣಾಮ ಮಾಡಿದರು. ಅವರ ಕಂಗಳಲ್ಲಿ ಆನಂದಭಾಷ್ಪ ಹರಿಯುತ್ತಿತ್ತು, ಭಾವನೆಯಲ್ಲಿ ಉಕ್ಕಿದ ಶ್ರೀ ಸಿದ್ಧಲಿಂಗೇಶ್ವರನ ಸ್ತುತಿ.

ಶ್ರೀ ಜಗದ್ಗುರು ವರತೋಂಟದಾರ್ಯ
ಸುಜನಮನವಾಸ ಘನಸಾರ ಶೌರ್ಯ

ಮಾಯಾ ಮೋಹ ಹೇಯಗೊಳಿಸಿ ಬಿಡದು
ಕಾಯಜ ಮದಹರ ಜಯವೀಯೋ ಪೊರೆದು

ಜನನ ದೂರನೆನಿಸಿ ನೋಡಿ ದಯದಿ
ಗಣಸಮೂಹದಿ ಗಣಿಸೋ ನೀ ಮುದದಿ

ಸಿದ್ಧಲಿಂಗ ಶುದ್ಧ ಕ್ಷೇತ್ರಾಧೀಶ
ತಿದ್ದುತೆ ಮನವನು ಬದ್ಧನೆನಿಸದೆ ತೋಷ

ಎಡೆಯೂರು ಯಾತ್ರೆ ಫಲಿಸಿತು, ಹೃದಯವು ಪ್ರಫುಲ್ಲಗೊಂಡಿತು. ಶ್ರೀ ಕುಮಾರ ಸ್ವಾಮಿಗಳಲ್ಲಿದ್ದ ಸಮಯಭೇದದ ಸಂದೇಹಗಳು ಅಳಿದವು.

ಶಿಷ್ಯ ಪರಂಪರೆ ಮೂಲಕ ಬಾಚನಹಳ್ಳಿ ಕೌದಿ ಶ್ರೀ ಮಹಾಂತ ಸ್ವಾಮಿಗಳಿಂದ ಶ್ರೀ ಅರ್ಧನಾರೀಶ್ವರರಿಗೆ ಅನುಗ್ರಹವಿತ್ತದ್ದು, ಮುಂದೆ ಇವರ ಶಿಷ್ಯ ಪರಂಪರೆಯ ಚರಮೂರ್ತಿಗಳಿಂದ ಸಮಯಭೇದಗಳಾಗಿವೆಯೇ ಹೊರತು ತಾತ್ತ್ವಿಕವಾಗಿ ಈ ಎಲ್ಲವೂ ಶಿವಯೋಗ ಪರಂಪರೆಯವೇ ಎನ್ನುವುದು ನಿಚ್ಚಳವಾಗಿತ್ತು .

ಸಮಯಾಚಾರ ಎನ್ನುವುದು ವೀರಶೈವ ಆಚರಣೆಯನ್ನೇ ಆಧರಿಸಿರುವಂಥಹುದು. ಶಿಷ್ಯ ಪರಂಪರೆಯನ್ನು ಗುರುತಿಸಿಕೊಳ್ಳಲು ಇದು ಹುಟ್ಟಿದೆ. ಅಷ್ಟೇ ಎಂದು ಅರಿವಾಗಿತ್ತು.

೧೯೧೭ರಲ್ಲಿ  ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರೇಶ್ವರರು ಆಯೋಜಿಸಿದ ಯಡೆಯೂರು ಪಾದಯಾತ್ರೆ , ಹರಿದು ಹಂಚಿಹೋಗಿದ್ದ ವೀರಶೈವ/ಲಿಂಗಾಯತ ಧರ್ಮೀಯರ ಒಗ್ಗೂಡುವಿಕೆಯ ಚಳುವಳಿಯ ಫಲಶೃತಿಯಾಗಿ ಸ್ಥಾಪನೆಗೊಂಡ ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶ್ರೀಮದ್ವೀರಶೈವ ಶಿವಯೋಗಮಂದಿರ ಗಳ ಕೊಡುಗೆಗಳಿಗಿಂತ ವಿಭಿನ್ನವಾಗಿ ಹೊರಹೊಮ್ಮಿದ್ದು ಒಂದು ವಿಶೇಷ ಮತ್ತು ವಿಸ್ಮಯ !!.

ಸ್ವಾತಂತ್ರ್ಯದ ಹೋರಾಟಕ್ಕೆ ಮಹಾತ್ಮಾ ಗಾಂಧಿಯವರು ಜಾರಿಗೆ ತಂದ ಚಳುವಳಿಯ ಮಾರ್ಗೋಪಾಯಗಳಾದ  ಪಾದಯಾತ್ರೆ,ಉಪವಾಸ ಮತ್ತು ಸ್ವದೇಶಿ ಖಾದಿ ಕಡ್ಡಾಯಗಳನ್ನು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಶಿವಯೋಗಿಗಳು ಗಾಂಧೀಜಿಯವರಕ್ಕಿಂತಲೂ ಮುಂಚೆಯೇ ಜಾರಿಗೆ ತಂದುಕೊಂಡಿದ್ದರು.

ಪೂಜ್ಯ ಕುಮಾರ ಶಿವಯೋಗಿಗಳು ೩ ದಿವಸ ಉಪವಾಸ ಸತ್ಯಾಗ್ರಹ ಮಾಡಿದ್ದು ಬಳ್ಳಾರಿಯ ೫ನೆಯ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಷನದಲ್ಲಿ ಸಮಾಜ ನಾಲ್ಕು ಚೂರಾಗುವದನ್ನು ನಿಲ್ಲಿಸಲು ಮತ್ತು ಅದರಲ್ಲಿ ಯಶಸ್ವಿಯಾಗಿದ್ದು (ಗಾಂಧೀಜಿಯ ಮೊದಲ ಉಪವಾಸ ಸತ್ಯಾಗ್ರಹ ೧೯೧೭ ಅಹಮದಾಬಾದ ನಲ್ಲಿ).

ಪೂಜ್ಯ ಕುಮಾರ ಶಿವಯೋಗಿಗಳು ಸ್ವದೇಶಿ ಖಾದಿ ವಸ್ತ್ರ ಕಡ್ಡಾಯ ಮಾಡಿದ್ದು ೧೯೦೯ ರಲ್ಲಿ ಶ್ರೀ ಶಿವಯೋಗಮಂದಿರ ಸ್ಥಾಪನೆ ಮಾಡಿದ ವರ್ಷ ( ಗಾಂಧೀಜಿ ಸ್ವದೇಶಿ ಖಾದಿ ವಸ್ತ್ರ ಕಡ್ಡಾಯ ಮಾಡಿದ್ದು ಸಬರಮತಿ ಆಶ್ರಮದಲ್ಲಿ ೧೯೧೮-೧೯ ರಲ್ಲಿ)

ಪೂಜ್ಯ ಕುಮಾರ ಶಿವಯೋಗಿಗಳು ಯಡೆಯೂರು ಪಾದಯಾತ್ರೆ ಸಂಘಟಿಸಿದ್ದು ೧೯೧೭ ರಲ್ಲಿ (ಗಾಂಧೀಜಿ  ಉಪ್ಪಿನ ಸತ್ಯಾಗ್ರಹ ಕ್ಕೆ ಮೊದಲ ಪಾದಯಾತ್ರೆ  ಮಾಡಿದ್ದು ೧೯೩೦ ರಲ್ಲಿ)

.

ಗ್ರಂಥ ಋಣ:

  1. ಶ್ರೀಕುಮಾರೇಶ್ವರ ಪುರಾಣ: ಕವಿರತ್ನ ದ್ಯಾಂಪುರ ಚನ್ನಕವಿಗಳು
  2. ಶ್ರೀಕುಮಾರೇಶ ಚರಿತೆ .ಲೇಖಕರು ಶ್ರೀ ಗುರುಕಂದ
  3. ಶ್ರೀ ವಿರಕ್ತ ತೋಂಟದಾರ್ಯ ವಿರಚಿತ “ ಶ್ರೀ ಸಿದ್ದೇಶ್ವರ ಮಹಾಪುರಾಣ ಪ್ರಕಾಶಕರು ಡಾ. ಸಿದ್ದಲಿಂಗಯ್ಯಾ ರಾಚಯ್ಯಾ ಹಿರೇಮಠ ಗದಗ
  4. ನಿರಂಜನ (೧೯೭೪ -ಪ್ರಕಾಶನ ತೋಂಟದಾರ್ಯ ಮಠ ಗದಗ ಪ್ರಕಾಶನ)

 

 

 

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

  

 ಜಡಸಂಸಾರದ ತೆಕ್ಕೆ| ಸಡಲಿ ಲಿಂಗವ ದೃಢದಿ

ಪಿಡಿವ ಪಾಣಿಯು ತಾ ಒಡೆಯ ಜಂಗಮಲಿಂಗ

ದೊಡಲೆಂದ ಗುರುವೆ ಕೃಪೆಯಾಗು   ||೧೫೪||

 ನಾಲ್ಕನೆಯ ಕರ್ಮೇಂದ್ರಿಯ ಪಾಣಿ, ಪಾಣಿಗೆ ಕರ, ಕೈ, ಹಸ್ತಗಳೆಂದು ಪರ್ಯಾಯಪದಗಳು.  ವಸ್ತುಗಳ ಆದಾನ ಪ್ರದಾನ ಕಾರ್ಯಗಳನ್ನು ಮಾಡುವದು ಕೈಯ ಕೆಲಸ. ಅರ್ಥಾತ್  ತಕ್ಕೊಳ್ಳುವದು (ಗೃಹಿಸುವದು) ಮತ್ತು ಕೊಡುವದನ್ನು ಕರದಿಂದಲೇ ಮಾಡುತ್ತೇವೆ. ಕಾಯಕಕ್ಕೆ ಕರವೇ ಮೂಲವಾಗಿದೆ. ದುಡಿದ ಕೈಗಳಿಂದ ಫಲವನ್ನು ಗ್ರಹಿಸುತ್ತೇವೆ. ಇನ್ನಿತರರಿಗೆ ದಾನವನ್ನು ಕೊಡುತ್ತೇವೆ. ಆದರೆ ಕೊಡುವ ಕೈಗಳಿಂದ ಭಿಕ್ಷೆ ಬೇಡಬಾರದು.

ಶಿವನು ಅನಂತ ಕರಗಳಿಂದ ಕೊಟ್ಟ ಇಳೆ-ಮಳೆ ಬೆಳೆಗಳನ್ನು ಅನುಭವಿಸುವ ಮಾನವನು ಅಹಂಕಾರಿಯಾಗಿ ನಾನು ಮಾಡುತ್ತೇನೆ. ನಾನು ನೀಡುತ್ತೇನೆ. ನಾನೇ ಕೊಡುತ್ತೇನೆಂದು ಅಭಿಮಾನ ಪಡುತ್ತಾನೆ. ನಾನೆಂಬ ಗರ್ವದಿಂದ ಜಡವಾದ ಸಂಸಾರ ಬಂಧನದಲ್ಲಿ ಸಿಲುಕುತ್ತಾನೆ. ಅಜ್ಞಾನದಿಂದ ಸಂಸಾರವು ಜಡವಾಗುವದು. ಈ ಅಜ್ಞಾನದಿಂದಲೇ ಮಹಾದಾನಿ ಮಹದೇವನನ್ನು ಮರೆತು ಅಭಿಮಾನಿಸಿ ಅಹಂಕಾರಪಡುತ್ತಾನೆ.

ಶರಣನಾದವನು ಅಹಂಕರ್ತೃತ್ವವನ್ನು ಸಂಪೂರ್ಣವಾಗಿ ಮರೆತು ಶಿವಕರ್ತೃತ್ವವನ್ನು ನೆನೆಯುತ್ತಾನೆ. ಎಲ್ಲವೂ ಶಿವ (ಲಿಂಗದೇವ) ನ ಪ್ರೇರಣೆಯಿಂದಲೇ ಘಟಿಸುತ್ತದೆಂದು ಭಾವಿಸುತ್ತಾನೆ. ಅದರಂತೆ ಆಚರಿಸುತ್ತಾನೆ. ಸದ್ಗುರೂಪದೇಶದಿಂದ ಜಡಸಂಸಾರದ ತೆಕ್ಕೆಯನ್ನು ಸಡಲಿಸಿ ಬಿಟ್ಟುಬಿಡುತ್ತಾನೆ. ಅರ್ಥಾತ್ ಸಂಸಾರದಲ್ಲಿ ಇದ್ದೂ ಇಲ್ಲದಂತೆ ಶಿವ ಸಂಸಾರದಲ್ಲಿ ಬಾಳುತ್ತಾನೆ. ಗುರುವಿತ್ತ ಇಷ್ಟಲಿಂಗವನ್ನು ಘಟ್ಟಿಯಾಗಿ ಹಿಡಿದುಕೊಳ್ಳುವನು. ಅಂದರೆ ದೃಢಮನಸ್ಸಿನಿಂದ ಲಿಂಗದೇವನನ್ನು ನೆನೆಯಬೇಕು. ನೆರೆನಂಬಬೇಕು. ದೃಢನಂಬಿಗೆಯಿಂದ ಲಿಂಗವನ್ನು ಆರಾಧಿಸುವ

ಮತ್ತು ಗುರು-ಲಿಂಗ-ಜಂಗಮಕ್ಕಾಗಿ ಕಾಯಕ ಮಾಡುವ ಕೈಗಳೇ ”ಗುರುವಿನ ಗುರು ಜಂಗಮವಿಂತೆಂಬುದು ಕೂಡಲ ಸಂಗಯ್ಯನ ವಚನ”ವೆಂದ ಅಣ್ಣನ ವಾಣಿಯಂತೆ ಮೃಡ ಜಂಗಮ ಸ್ವರೂಪಿಗಳಾಗುತ್ತವೆ. ಕರಗಳು ಜಂಗಮಲಿಂಗದ ಒಡಲಾಗುತ್ತವೆ.   ತನುಸೇವೆ ಗುರುವಿಗೆ, ಮನಸೇವೆ ಲಿಂಗಕ್ಕೆ ಸಲ್ಲುವಂತೆ, ಧನಸೇವೆ ಜಂಗಮಕ್ಕೆ ಸಲ್ಲಬೇಕು. ಅರ್ಥಾತ್ ಕೈಗಳಿಂದ ಜಂಗಮಕ್ಕೆ ವಂಚನೆಯಿಲ್ಲದೆ ನೀಡಿದರೆ ಕರಗಳು ಜಂಗಮ ಲಿಂಗದ ಒಡಲಾಗುವವು. ದಾನವೇ ಹಸ್ತಕ್ಕೆ ಭೂಷಣವೆಂದು ಅನುಭವಿಗಳೂ ನುಡಿದಿದ್ದಾರೆ. ಕರದ ಯಥಾರ್ಥತೆಯನ್ನು ೧೨೮ನೆಯ ತ್ರಿಪದಿಯಲ್ಲಿಯೂ ನೋಡ ಬಹುದು.

ಹೇ ಗುರುದೇವ ! ಸಂಸಾರದ ತೆಕ್ಕೆಯನ್ನು ಬಿಡಿಸಿ ಎಂದೆಂದಿಗೂ ಲಿಂಗವನ್ನು ಪಿಡಿಯುವ ಶಕ್ತಿಯನ್ನು ಕರಗಳಿಗೆ ಕೊಡು. ಅಂದರೆ ಈ ಕೈಗಳು ಜಂಗಮಲಿಂಗ ವಾಗಬಲ್ಲವು.

ಶಿವಕವಿಯು ಇಲ್ಲಿ ವೀರಶೈವ ಸಿದ್ಧಾಂತವನ್ನೇ ತುಂಬಿದ್ದಾನೆ. ಲಿಂಗಭಕ್ತನಾದವನು ಲಿಂಗಪೂಜೆಯನ್ನು ಮಾಡುವದು, ಜಂಗಮನ ಬರುವಿಗಾಗಿ ಹಾರೈಸುವದು, ಮತ್ತು ಲಿಂಗದ ಮುಖ ಜಂಗಮವೆಂದು ಅರಿತು ಆತನ ಸಂತೃಪ್ತಿಗೊಳಿಸಬೇಕೆಂಬುದನ್ನು ಮನನ ಮಾಡಿಕೊಳ್ಳಬೇಕು. ನಾನು ಕಾಯಕ ಮಾಡುವದೆಲ್ಲ ಜಂಗಮನ ಸೊತ್ತೆಂದು ಭಾವಿಸಬೇಕು. ಅರ್ಥಾತ್ ಕಾಯಕ ಮಾಡಿದ ಫಲವೆಲ್ಲ ಜಂಗಮನದೆಂದು ನಂಬಬೇಕು. ಯಾಕಂದರೆ ದಾಸೋಹಂಭಾವದಿಂದ ದೊರೆತ ಶೇಷವೇ

ಪ್ರಸಾದವಾಗುವದು. ತ್ಯಾಗಪೂರಿತವಾದ ಭೋಗವೇ ಲಿಂಗಭೋಗೋಪವೆನಿಸುವದು. ಅದಕ್ಕಾಗಿಯೇ ಕೈಗಳು ಜಂಗಮಲಿಂಗವನ್ನು ತೃಪ್ತಿಪಡಿಸಬಲ್ಲವುಗಳೆಂದು ನಿರೂಪಿಸಲ್ಪಟ್ಟಿವೆ.

ಕಾಕು ಸಟೆ ಮಾತುಗಳ | ನಿಃಕರಿಸಿ ನಿಜ ಸತ್ಯ

ವಾಕ್ಕೇ ಸುಪ್ರಸಾ-ದಾಖ್ಯ ಲಿಂಗವಿದು ಬಹು

ಜೋಕೆಂದ ಗುರುವೆ ಕೃಪೆಯಾಗು   ||೧೫೫||

ಐದನೆಯ ಕರ್ಮೇಂದ್ರಿಯ ವಾಣಿಯು, ಐದು ಕರ್ಮೇಂದ್ರಿಯಗಳಲ್ಲಿ ಇದು ಬಹು ಮುಖ್ಯವಾದುದು. ಇದಕ್ಕೆ ಮುಖವೆಂತಲೂ ಹೇಳಬಹುದು. ಬಾಯಿಯಿಂದಲೇ ಮಾತು ವ್ಯಕ್ತವಾಗುವದಲ್ಲದೆ; ಗುರುಲಿಂಗಕ್ಕೂ ಪೋಷಕವಾಗಿದೆ. ಮತ್ತು ಬಾಯಿಯೇ ದೇಹವನ್ನು ಸಂರಕ್ಷಿಸುವ ಪ್ರಮುಖ ಸಾಧನವೂ ಹೌದು. ವಾಣಿಯಿಂದ ತನ್ನ ಭಾವಾಭಿವ್ಯಕ್ತಿಯನ್ನು ಇತರರಿಗೆ ತಿಳಿಸಲು ಸಾಧ್ಯವಾಗುವದು.

ಮಾತು ಯಥಾರ್ಥವಾಗಿರಬೇಕು. ಮಾತಿನಲ್ಲಿ ಕಾಕುತನ, ಸಟೆಗಳಿರಬಾರದು. ಅನ್ಯರಿಗೆ ಕೊಂಕುನುಡಿಯುವದು ಸುಳ್ಳು ಹೇಳುವದು ದೊಡ್ಡ ಅಪರಾಧ. ಶರಣರು ಸುಳ್ಳುನುಡಿಗೆ ಸೇರುವದಿಲ್ಲ. ಸುಳ್ಳುನುಡಿ ಪಾಪಕಾರಕವೆಂದು ನುಡಿದಿರುವರು. ಸತ್ಯಾಸತ್ಯತೆಯ ವಿಚಾರವನ್ನು ಈಗಾಗಲೇ ೧೩೨ನೆಯ ತ್ರಿಪದಿಯ ವ್ಯಾಖ್ಯಾನದಲ್ಲಿ ಮಾಡಲಾಗಿದೆ. ಮಾತಿನಲ್ಲಿ ಪಾವಿತ್ರ್ಯತೆ ಇರಬೇಕು. ನಿಜವಾದ ಸತ್ಯವಿರಬೇಕು. ಆ ಮಾತು ಸಾರ್ಥಕವಾಗುವದು. ಅಣ್ಣ ಬಸವಣ್ಣನವರು –

ನುಡಿದರೆ ಮುತ್ತಿನ ಹಾರದಂತಿರಬೇಕು,

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,

ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು,

ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು,

ನುಡಿಯೊಳಗಾಗಿ ನಡೆಯದಿದ್ದರೆ,

ಕೂಡಲ ಸಂಗಮದೇವನೆಂತೊಲಿವನಯ್ಯಾ.

ಮಹಾಜ್ಞಾನಿ ಅಲ್ಲಮ ಪ್ರಭುಗಳು –

ಮಾತೆಂಬುದು ಜ್ಯೋತಿರ್ಲಿಂಗ

ಸ್ವರವೆಂಬುದು ಪರತತ್ವ

ತಾಳೋಷ್ಟ್ರ ಸಂಪುಟವೆಂಬುದೇ ನಾದಬಿಂದುಕಳಾತೀತ

ಗುಹೇಶ್ವರನ ಶರಣರು ನುಡಿದು

ಸೂತಕಿಗಳಲ್ಲ ಕೇಳಾ ಮರುಳೆ !

ಮಾತು ಮುತ್ತಿನಹಾರದಂತೆ, ಸ್ಪಟಿಕದಂತೆ, ಮಾಣಿಕ್ಯದ ಪ್ರಭೆಯಂತೆ ಮಹತ್ವವುಳ್ಳದ್ದಾಗ ಬೇಕು. ಮಾತಿಗೆ ಮಹಾಲಿಂಗನೂ ತಲೆದೂಗಬೇಕು. ಇಂಥ ಮಾತೇ ಜ್ಯೋತಿರ್ಲಿಂಗ ವಾಗುವದು. ಜ್ಯೋತಿರ್ಲಿಂಗದ ದರ್ಶನ ಮಾಡಿಸಬಲ್ಲ ಶರಣರು ಸೂತಕಿಗಳಲ್ಲ. ಶಿವಶರಣರ ಸೂಳ್ನುಡಿಗಳಲ್ಲಿ ಶಿವಸಾಕ್ಷಾತ್ಕಾರ ನಿಚ್ಚಳವಾಗಿ ತೋರುವದು. “ಕೂಡಲಸಂಗನ ಶರಣರು ಮನದರದು ಮಾತನಾಡಿದರೆ ಲಿಂಗವ ಕಾಣಬಹುದು” ಎಂಬ ಅಣ್ಣನ ವಾಣಿಯಲ್ಲಿ ಅಮೃತ ತೊಟ್ಟು ಧಾರೆಗಟ್ಟಿದೆ. ಅಂತೆಯೇ ಮಹಾನುಭಾವಿಗಳು ನುಡಿದುದು ಪ್ರಸಾದವಾಣಿ, ನಡೆದುದು ಲಿಂಗನಡೆ, ಪ್ರಸಾದವಾಣಿಯಲ್ಲಿಯೇ ಪ್ರಸಾದಲಿಂಗದ ಸಾನಿಧ್ಯ ವೇದ್ಯವಾಗುವದು.

ಪ್ರಸಾದಲಿಂಗನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಬೇಕಾದ ಮುಖದಿಂದ ವ್ಯರ್ಥನುಡಿಗಳನ್ನು ಆಡಬಾರದು. ಜೊಳ್ಳು ಮಾತಿಗೆ ಮನವೆಳಸಬಾರದು. ಗೊಳ್ಳು ಹರಟೆಗೆ ಕಾಲಹರಣ ಮಾಡಬಾರದು. ಅದಕ್ಕಾಗಿ ಬಹು ಜೋಕೆ (ಎಚ್ಚರಿಕೆ) ಯಿಂದ ಮಾತನಾಡಬೇಕೆಂದು ಗುರುರಾಯನು ಎಚ್ಚರಿಕೆಯಿತ್ತಿದ್ದಾನೆ. ಒಳ್ನುಡಿ ಒಳಿತನ್ನೇ ಮಾಡಬಲ್ಲುದು. ಗೊಳ್ಳು ಮಾತು ಜಗಳಕ್ಕೆ ಅವಕಾಶವಾಗುವದು. “ಮಾತು ಬಲ್ಲವ ಮಾಣಿಕ ತಂದ, ಮಾತನರಿಯದವ ಜಗಳವ ತಂದ’ ಎಂಬ ಲೋಕವಾಣಿ ಪ್ರಸಿದ್ಧವಿದೆ. ಕಾರಣ ಮಾತನ್ನು ಎಚ್ಚರಿಕೆಯಿಂದಲೇ ಬಳಸಬೇಕು. ವೈಖರಿಯ ಶಕ್ತಿಯನ್ನು ಸಂಪಾದಿಸಲು ಮೌನವೇ ಉತ್ತಮ ಸಾಧನ. ಅಂತೆಯೇ ಮಾತಿಗಿಂತಲೂ ಮೌನಶ್ರೇಷ್ಠವೆಂದು ಅನುಭವಿಗಳು ಅನುಭವದ ನುಡಿಯನ್ನು ನುಡಿದಿರುವರು.

ಗಾಂಧಿಜಿಯವರು  ಆತ್ಮಶಕ್ತಿಯನ್ನು ಹಾಗೂ ವಾಣಿಶಕ್ತಿಯನ್ನು ಬೆಳೆಸಿಕೊಳ್ಳಲು ಆಗಾಗ್ಗೆ ಮೌನಿಗಳಾಗುತ್ತಿದ್ದುದು ಅವರ ಆತ್ಮಚರಿತೆಯಿಂದ ತಿಳಿದುಬರುತ್ತದೆ. ಜ್ಞಾನಿಗಳು ಬಹುಶಃ ಮೌನಿಗಳಾಗಿಯೇ ಇರುತ್ತಾರೆ. ‘ಮಾತು ಬೆಳ್ಳಿ, ಮೌನ ಬಂಗಾರ”ವೆಂಬುದು ಸತ್ಯವಾಗಿದೆ. ಓ ಗುರುವೇ ! ಎನ್ನ ಮಾತು ಮಂತ್ರವಾಗಿಸಲು ಕೃಪೆಮಾಡು. ಶಿವ ನಾಮವನ್ನು ನೆನೆಯುವ ವಾಣಿಯಲ್ಲಿ ಪ್ರಸಾದಲಿಂಗದ ಪ್ರಸನ್ನತೆಯುಂಟಾಗುವಂತೆ ಹರಸು.

 

ಜ.ಚ.ನಿ

 ನೀರಿಂಗೆ ನೈದಿಲೆಯೆ ಶೃಂಗಾರ

ಸಮುದ್ರಕ್ಕೆ ತೆರೆಯೆ ಶೃಂಗಾರ

ಗಗನಕ್ಕೆ ಚಂದ್ರಮನೆ ಶೃಂಗಾರ

ನಾರಿಗೆ ಗುಣವೆ ಶೃಂಗಾರ….”

 ಕುಮಾರ ಸ್ವಾಮಿಗಳವರು ಸ್ತ್ರೀಯರ ಮುಖಗಳನ್ನು ಈ ಕಣ್ಣುಗಳಿಂದ ನೋಡದಿದ್ದರು ಅವರ ಜೀವನ ಮುಖವನ್ನು ತಮ್ಮ ಜ್ಞಾನನೇತ್ರದಿಂದ ನಿರೀಕ್ಷಿಸುತ್ತಿದ್ದರು. ಬರೀ ನಿರೀಕ್ಷಣೆ ಮಾತ್ರವಲ್ಲ ಸುಧಾರಣೆಗಾಗಿ ಸರ್ವತೋಮುಖದಲ್ಲಿ ಪರೋಕ್ಷವಾಗಿ ಪರಿಶ್ರಮಿಸುತ್ತಿದ್ದರು.

ಪ್ರತಿವರ್ಷ ಶಿವಯೋಗಮಂದಿರ ಜಾತ್ರೆಯ ಸಮಯದಲ್ಲಿ ಮಹಿಳಾ ಸಭೆಯನ್ನು ಕರೆಯುತ್ತಿದ್ದರು. ಮಹಿಳೆಯರನ್ನೆ ಕಾರ್ಯಕರ್ತರನ್ನಾಗಿ ಮಾಡುತ್ತಿದ್ದರು. ಭಾಷಣಕರ್ತರನ್ನಾಗಿ ಏರ್ಪಡಿಸುತ್ತಿದ್ದರು. ಸುಧಾರಣೆಯ ಜೀವಂತ ಪ್ರಶ್ನೆಗಳನ್ನು ತಾವೇ ಕಳುಹಿಸಿ ಚರ್ಚಿಸಹಚ್ಚುತ್ತಿದ್ದರು.

ಸ್ವಾಮಿಗಳವರ ವ್ಯಕ್ತಿತ್ವಕ್ಕೆ ಹೆಣ್ಣಿನ ಅಗತ್ಯವಿಲ್ಲದಿದ್ದರು ಸಮಾಜಕ್ಕೆ ಹೆಚ್ಚು ಅಗತ್ಯವಿದೆಯೆಂಬುದನ್ನು ಚೆನ್ನಾಗಿ ಗ್ರಹಿಸಿದ್ದರು. ಸಮಾಜ ರಥಕ್ಕೆ ಹೆಣ್ಣು ಗಂಡು ಎರಡು ಚಕ್ರಗಳೆಂದು ಸಮಾಜ ಪುರುಷನ ಒಳಮ್ಮೆ, ಹೊರಮೈ ಎಂದು ಇವುಗಳಲ್ಲಿ ಯಾವುದಾದರೊಂದು ಊನವಾದಲ್ಲಿ ಸಮಾಜ ಸುಸೂತ್ರವಾಗಿ ಸಾಗದೆ ಕುಂಟುತ್ತದೆಯೆಂದು  ಒಮ್ಮಿಲ್ಲೊಮ್ಮೆ ಪ್ಪಪಾತಕ್ಕೆ ಬೀಳುತ್ತದೆಯೆಂದು ಅಪ್ಪಣೆ ಕೊಡಿಸುತ್ತಿದ್ದರು. ಪುರುಷರ ಸುದಾರಣೆಯಂತೆ ಸ್ತ್ರೀ ಯರ ಸುಧಾರಣೆಯು ಅತ್ಯಗತ್ಯ ಅನಿವಾರ್ಯ.

ಸ್ವಾಮಿಗಳವರು ಪ್ರಯಾಣದಲ್ಲಿರುವಾಗ ತಂಗಿದ ಹಳ್ಳಿಯಲ್ಲಿ ಯಾರಾದರು ತಮ್ಮ ಮನೆ ಹೆಂಗಸರನ್ನು  ಚನ್ನಾಗಿ ಹೊಡೆದದ್ದು ಅವರ ಕಿವಿಗೆ ಬದ್ದರೆ ಅವರನ್ನು ಕರೆಯಿಸಿ ಏನಪ್ಪ ಯಾತಕ್ಕೆ ಹೆಂಡತಿಯನ್ನು ಹೊಡೆದೆ ? ತಪ್ಪು ಮಾಡದ ಮನುಷ್ಯನಿರುವನೆ ? ತಪ್ಪಿಗೆ ತಕ್ಕ ಶಿಕ್ಷೆ ಇದೆಯೆ ? ನೀನು ತಪ್ಪು ಮಾಡಿದರೆ ನಿನ್ನನ್ನು ಯಾರು ಹೊಡೆಯಬೇಕು ? ಬುದ್ಧಿವಾದವನ್ನು ಹೇಳಿ ತಪ್ಪನ್ನು ತಿದ್ದಬೇಕು. ಹೆಂಡತಿಯೆ ಮನೆಯ ಭಾಗ್ಯದೇವತೆ ! ಮನೆ ಮ್ಕಳ ಪಾಲನೆ ಅವಳ ಪಾಲಿನದು. ಹೆಂಡತಿಯನ್ನು ಹಿಂಸಿಸುವರಿಗೆ ಹರನು ಮೆಚ್ಚಲಾರ.ಘೋರ ನರಕ ತಪ್ಪದು. ನೀನು ನಿನ್ನ ಹೆಂಡತಿಯು ಪರಸ್ಪರ ಪ್ರೇಮ ಸಂತೋಷಗಳಿಂದ ಇದ್ದರೆ ಸುಖ ಸಿಗುತ್ತದೆ. ಸಂಸಾರ ಸುಸೂತ್ರ  ಸಾಗುತ್ತದೆ. ಒಂದು ಕಾಲು ಕುಂಟಾದರೆ ಚೆನ್ನಾಗಿರುತ್ತದೆಯೊ, ಹೇಳು ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎಂದು ಶಿವಶರಣರು ಅಪ್ಪಣೆಕೊಡಿಸಿದ್ದಾರೆ. ನಿಮ್ಮಿಬ್ಬರ ದೇಹಗಳು ಎರಡಾಗಿದ್ದರು ಮನಸ್ಸು ಒಂದಾಗಿರಬೇಕು. ಹೃದಯ ಒಂದಾಗಿರಬೇಕು. ತಿಳಿಯಿತೆ ? ಇನ್ನು ಮೇಲೆ ಹೀಗೆಲ್ಲ ಹುಚ್ಚುಹುಚ್ಚಾಗಿ ಹೊಡೆಯಬೇಡ ಎಂದು ಹೇಳಿ ಕಳಿಸುತ್ತಿದ್ದರು. ಆದರೂ ಸ್ವಾಮಿಗಳ ಮನಸ್ಸು ಸ್ತ್ರೀಯರ ಅಜ್ಞಾನ ಅನಾಚಾರಗಳಿಗಾಗಿ ತುಂಬಾ ನೋಯುತ್ತಿತ್ತು. ಅವುಗಳ ನಿವಾರಣೆಗಾಗಿ ಸದಾ ಆಲೋಚಿಸುತ್ತಿತ್ತು.

ಸ್ವಾಮಿಗಳವರು ಸಿದ್ಧರಾಗಿಯು ಸ್ತ್ರೀಯರ ಮುಖಾವಲೋಕನ ಮಾಡದಿರಲು ಕಾರಣವೇನು ಎಂದು ಕೆಲವರು ಕೇಳದಿರಲಿಲ್ಲ. ಅದಕ್ಕೆ ಹನ್ನೆರಡನೆಯ ಶತಮಾನದಲ್ಲಿ ನಿರ್ವಾಣೆಯಾಗಿ ಅನುಭವ ಮಂಟಪಕ್ಕೆ ಬಂದ ಮಹಾದೇವಿಯಕ್ಕಗಳನ್ನು ‘ಕೇಶದ ಮರೆಯೇಕೆ’ ? ಎಂದು ಕೇಳಿದ ಅಲ್ಲಮಪ್ರಭುವಿಗೆ ‘ನಿಮ್ಮ ಶರಣರಿಗೆ ನೋವಾದೀತೆಂದು’ ಅಕ್ಕಗಳು ಉತ್ತರಿಸಿದಂತೆಯೆ ಇಲ್ಲಿ ಉತ್ತರಿಸಬೇಕಾಗಿದೆ. ಸ್ವಾಮಿಗಳವರಿಗೆ ನಿಜವಾಗಿಯೂ ಮನೋವಿಕಾರವಿರಲಿಲ್ಲ. ಅದರಲ್ಲಿ ಅವರು

ಸಂಪೂರ್ಣ ಸಿದ್ಧಿಯನ್ನು ಪಡೆದಿದ್ದರು. ಆದರೂ ಅವರು ತಮ್ಮ ಅಪರ ವಯಸ್ಸಿನಲ್ಲಿಯು ಆ ವ್ರತವನ್ನು ನಡೆಸಿದರು. ಕಾರಣ ಹಿರಿಯರ ಅನುಕರಣ ಕಿರಿಯರು ಮಾಡಿಯಾರು. ಅದರಲ್ಲಿಯು ಇಂತಹ ವಿಷಯಗಳಲ್ಲಿ ಅನುಕರಣ ಮಾಡುವುದು ವಿಶೇಷ. ನಾವೇ ನೋಡತೊಡಗಿದರೆ ಶಿವಯೋಗ ಮಂದಿರ ಸಾಧಕರು ನೋಡತೊಡಗುವರು. ನಮ್ಮಂತೆ ಅವರ ಮನಸ್ಸಿರುವದಿಲ್ಲ. ಮನಸ್ಸಿನ ಸೆಳೆತಕ್ಕೆ ಮಾರುಹೋದಾರು ಎಂಬುದೇ ಅವರ ಉದ್ದೇಶ. ಹೀಗೆ ಸಾಧಕರ ಶಿಕ್ಷಣಕ್ಕಾಗಿ ಇನ್ನೂ ಅನೇಕ ವ್ರತಗಳನ್ನು ಕೈಬಿಡದೆ ಅವರು ಆಚರಿಸುತ್ತಿದ್ದರು ಅವರಿಗಾಗಿ ಅವರಿದ್ದಿಲ್ಲ.

ಒಂದು ದಿನ ಗಚ್ಚಿನಮಠದಲ್ಲಿ ಎಲ್ಲ ಸಾಧಕರಿದ್ದರು. ಕಲ್ಲುಮಠದ ಮುಂಭಾಗದಲ್ಲಿ ಸ್ವಾಮಿಗಳೊಬ್ಬರೆ ಮೂಹೂರ್ತ ಮಾಡಿದ್ದರು. ಬೆಳಗಿನ ಒಂಭತ್ತು ಗಂಟೆಯ ಸಮಯ. ಯಾರೋ ಪ್ರಯಾಣಿಕರಾದ ಹೆಂಗಸರು ದ್ವಾರದಿಂದ ಸ್ತ್ರೀ ಸಹಜವಾದ ಗಲಾಟೆಯೊಡನೆ ಒಳನುಗ್ಗಿದರು. ಸ್ವಾಮಿಗಳವರು ಸುಮ್ಮನೆ ಇದ್ದರು. ಹೆಂಗಸರು ಎದುರಿಗಿರುವ ಸ್ವಾಮಿಗಳವರನ್ನು ನೋಡಿದ ಮೇಲೆಯು ಹಿಂದಿರುಗಲಿಲ್ಲ. ಬಳಸಿಕೊಂಡು ಗಚ್ಚಿನಮಠದತ್ತ ಹೋಗಹತ್ತಿದರು. ಆಗ ಸ್ವಾಮಿಗಳವರು ತಾವೇ ಎದ್ದು ಅವರನ್ನು ತಾಯಿಗಳೆ, ಎಂದು ನಯವಾಗಿ ಕರೆದು ಅಲ್ಲಿ ಶಿವಯೋಗಿಗಳಿದ್ದಾರೆ. ಅವರು ನಿಮ್ಮನ್ನು ನೋಡುವದಿಲ್ಲ. ನಿಮ್ಮೊಡನೆ ಮಾತೂ ಆಡುವದಿಲ್ಲ. ಅಷ್ಟಕ್ಕು ನೀವು ಅಲ್ಲಿ ನೋಡತಕ್ಕದು ಏನೂ ಇಲ್ಲ. ನೀವು ಹೀಗೆಯೆ ಹೊರಟು ಹೋಗಿರೆಂದು ಹೇಳಿಕಳುಹಿಸಿದರು. ಇದನ್ನು ಕಣ್ಣಾರೆ ಕಂಡಿದ್ದೇನೆ. ಕಿವಿಯಾರೆ ಕೇಳಿದ್ದೇನೆ. ಹೀಗಿರುವಾಗ ಅವರ ಉದ್ದೇಶ ಅವರ ಪ್ರತಾಚರಣೆ ಸಾಧಕರ ನಿಮಿತ್ತವಾಗಿ ಇತ್ತೆಂಬುದು ಸ್ಪಷ್ಟವಾಗುವುದಿಲ್ಲವೆ ?

ವ್ಯಷ್ಟಿ ಜೀವನದ ಸಾಧನ ಕ್ಷೇತ್ರ, ಸಣ್ಣ ಕುಟುಂಬವಾಗಿದ್ದರೆ ಸಮಷ್ಟಿ ಜೀವನದ ಸಾಧನಕ್ಷೇತ್ರ, ವಿಶಾಲವಾದ ವಿಶ್ವಕುಟುಂಬವಾಗಿದೆ. ಈ ವಿಶ್ವಕುಟುಂಬವನ್ನು ಮೀರಿ ಯಾವನೂ ವಿಶ್ವವ್ಯಕ್ತಿಯಾಗಲಾರನು, ವಿಶ್ವಶಾಂತಿ ಕಾರಣನಾಗನು. ಹಾಲಾದರು ಮಧುರ ಪಾಕವಾಗಬೇಕಾದರೆ ಸಕ್ಕರೆಯ ಬೆರಕೆ ಬೇಕೇ ಬೇಕು. ಪ್ರೇಮವೆ ಹಾಲು ಸದ್ಗುಣಗಳೆ ಸಕ್ಕರೆ. ಪ್ರೇಮ ಐಂದ್ರಿಕವಾಗಬಾರದು. ಆಧ್ಯಾತ್ಮಿಕವಾಗಬೇಕು. ಅದರ್ಶಾಕಾಂಕ್ಷೆಯಾಗಬೇಕು. ಸದ್ಗುಣ ಸಂವರ್ಧಿಯಾಗಬೇಕು.

ಬೌದ್ಧಿಕ ಆಧ್ಯಾತ್ಮಿಕ ಜೀವನೋನ್ನತಿಗೆ ಹೆಣಗುವ ವ್ಯಕ್ತಿಗೆ ಹೆಣ್ಣು ಗಂಡೆಂಬ ಭೇದವಿಲ್ಲ. ಬುದ್ಧಿ ಆತ್ಮಗಳು ಉಭಯ ವ್ಯಕ್ತಿತ್ವದಲ್ಲಿ ಸರಿಸಮಾನವಾದವುಗಳು. ಏರುಪೇರುಗಳ ಕವಲಿಲ್ಲ. ಕೊಂಕಿಲ್ಲ. ಆದರು ಸ್ತ್ರೀ ಸಮಾಜೋನ್ನತಿಗೆ ಹೆಣಗಿ ಮುಖದ ಮೇಲೆ ಕಪ್ಪುಕಲೆಯನ್ನು ತಂದುಕೊಳ್ಳದ ವ್ಯಕ್ತಿ ಇತಿಹಾಸದಲ್ಲಿ ಕಾಣುವುದು ವಿರಳ. ಸ್ವಾಮಿಗಳವರು ಈ ವಿಷಯದಲ್ಲಿ ನಿಷ್ಕಳಂಕ ಚರಿತರಾಗಿ ಹುಣ್ಣಿಮೆಯ ಚಂದ್ರನಂತೆ ಬೆಳಗಿದರು. ಉತ್ತರಾಯಣದ ಪ್ರಭಾಕರನಂತೆ ಪ್ರಜ್ವಲಿಸಿದರು.

ಸ್ವಾಮಿಗಳವರು ಹೆಂಗಸರ ಮುಖವನ್ನು ನೋಡದೆ ಇದ್ದುದು ಹೇಳನ ಭಾವದಿಂದಲ್ಲ. ಸತೀತ್ವ ಸ್ವಾಮಿತ್ವ ಧರ್ಮಗಳೆರಡರ ಪರಿಪಾಲನದ ಹೆಚ್ಚಳಿಕೆಯಿಂದ, ಸಾಂಸಾರಿಕ ಜೀವನದಲ್ಲಿದ್ದು ಉರಿಯ ನಾಲಗೆಗಂಜೆ, ಸುರಿಗೆಯ ಮೊನೆಗಂಜೆ ಪರಸ್ತ್ರೀ ಪರಧನವೆಂಬ ಜೂಜಿಂಗಂಜುವೆ” ಎಂದು ಉಸುರಿದ ಬಸವಣ್ಣನ ಬಂಧುರೋಕ್ತಿಯನ್ನು ಸನ್ಯಾಸಜೀವಿಯು ಅದೆಷ್ಟು ಎಚ್ಚರದಿಂದ ಕಾಪಾಡಬೇಕೆಂಬ ಹೊಣೆಗಾರಿಕೆಯನ್ನು ಹೆಚ್ಚಾಗಿ ತಿಳಿದು ಆಚರಣೆಯಲ್ಲಿ ತಂದು ಆ ಉಕ್ತಿಯನ್ನು  ಸಾರ್ಥಕಪಡಿಸಿದ ಸನ್ಮಾನ್ಯರು ಸ್ವಾಮಿಗಳವರು, ಆವ್ರತಶೀಲರಾಗಿಯೇ ಸ್ತ್ರೀ ಸುಧಾರಣೆಯ ಕಾರ್ಯವನೆಸಗಿದ ಕಾರಣಿಕರು ಕುಮಾರಯೋಗಿಗಳವರು.

ಸ್ತ್ರೀಯರಲ್ಲೆ ಬೋಧಕ ವರ್ಗ ತಯಾರಾಗಬೇಕೆಂಬ ಹೆಬ್ಬಯಕೆ  ಸ್ವಾಮಿಗಳವರದಾಗಿತ್ತು. ಅಕ್ಕ ಲಕ್ಕಮ್ಮ, ನೀಲಾಂಬೆ ಮುಂತಾದ ಶರಣೆಯರಂತೆ ಆತ್ಮವೀರರಾಗಿ ಬಾಳಬೇಕೆಂಬ ಮೈತ್ರೇಯಿಯಂತೆ ಪತಿವ್ರತೆಯರಾಗಿ ಪರವಸ್ತು ಪ್ರೇಮಿಗಳಾಗಿ ಬದುಕಬೇಕೆಂಬ ಮಹತ್ವಾಕಾಂಕ್ಷೆ ಸ್ವಾಮಿಗಳವರಲ್ಲಿ ಬಲವಾಗಿ ಬೇರೂರಿತ್ತು. ಚಿಗುರು ಹಾಕಿತ್ತು. ಫಲ ನೋಡುವ ಅನುಭವಿಸುವ ಅವಕಾಶ ಅವರಿಗಿಲ್ಲದೆ ಹೋಯಿತು.

ಪೂಜ್ಯ ಜಗದ್ಗುರು ಡಾ. ಸಿದ್ಧರಾಮ ಮಹಾಸ್ವಾಮಿಗಳು

ಜಗದ್ಗುರು ತೊಂಟದಾರ್ಯ ಸಂಸ್ಥಾನಮಠ ಗದಗ

 

ಭಾರತೀಯ ಸಂಸ್ಕೃತಿಯಲ್ಲಿ ವಿವಾಹವೊಂದು ಪವಿತ್ರ ಬಂಧನ. ವಿವಾಹೇತರ ಸಂಬಂಧಗಳು ಧರ್ಮಬಾಹಿರವಾಗಿದ್ದು, ಸಮಾಜದ ಮನ್ನಣೆಗೆ ಪಾತ್ರವಾಗುವುದಿಲ್ಲ. ಇಂಥ ಸಂಬಂಧಗಳಿಗೆ ನೆಮ್ಮದಿ, ಸುಖ ಶಾಂತಿಗಳು ಗಗನಕುಸುಮವಾಗಿರುವುದರಿಂದ ನೆಮ್ಮದಿಯ ಜೀವನಕ್ಕೆ ವಿವಾಹ ಅನಿವಾರ್ಯ. ವಿವಾಹದಲ್ಲಿ ಬಂಧಿತರಾದ ಸತಿ- ಪತಿಗಳು ಸಮರಸದಿಂದ ಕೂಡಿ ಬಾಳಿದರೆ ನೆಮ್ಮದಿಯೆಂಬುದು ಅಂಗೈಫಲ. ಸರಸ ದಾಂಪತ್ಯವೆಂಬುದು ಸತಿಪತಿಗಳ ಜೀವನಕ್ಕೆ ಸೀಮಿತವಾಗಿರದೆ ಅದು ಕುಟುಂಬದ ನೆಮ್ಮದಿಗೂ ಕಾರಣವಾಗುತ್ತದೆ. ವಿರಸ ದಾಂಪತ್ಯ ಕುಟುಂಬದ ನೆಮ್ಮದಿಯನ್ನು ಹಾಳು ಮಾಡುತ್ತದೆ. ಆಗ ಜೀವನ ಮೃತ್ಯುವಿಗೆ ಸಮವಾಗುತ್ತದೆ.

ಸತಿಪತಿಗಳಿಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡು ಸಂಸಾರ ರಥವನ್ನು ಮುನ್ನಡೆಸಬೇಕು. ಸುಖ-ದುಃಖ, ನೋವು-ನಲಿವು, ಸೋಲು-ಗೆಲವುಗಳನ್ನು ಸಮನಾಗಿ ಹಂಚಿಕೊಳ್ಳಬೇಕು. ಆಚಾರ-ವಿಚಾರ, ಬೇಕು-ಬೇಡ, ನೋಟ-ಮಾಟಗಳಲ್ಲಿ ಇಬ್ಬರೂ ಒಂದಾಗಿರಬೇಕು. ಆಗ ಆ ದಾಂಪತ್ಯದಲ್ಲಿ ಯೋಗದ ಕಳೆ ಬೆಳಗುತ್ತದೆ. ಅದೊಂದು ಅನುಪಮ ಆದರ್ಶದ ಬಾಳೆನಿಸುತ್ತದೆ. ಇಂಥ ಬಾಳನ್ನು ಕಂಡ ನಿಜಗುಣರು- ‘ಸತಿಪತಿಗಳಿವರ ಸಮರತಿಯ ಬಾಳುವೆಗೆ ಪ್ರತಿಯುಂಟೆ ಲೋಕದೊಳು’ ಎಂದು ಉದ್ಗರಿಸುತ್ತಾರೆ.

ಆದರ್ಶ ಕುಟುಂಬದ ಸತಿಪತಿಗಳು ತಮ್ಮಲ್ಲಿರುವ ದೌರ್ಬಲ್ಯಗಳನ್ನು ಪರಸ್ಪರ ತಿದ್ದಿಕೊಳ್ಳುವ ಮತ್ತು ಕ್ಷಮಿಸುವ ಔದಾರ್ಯ ಹೊಂದಿರುತ್ತಾರೆ. ಅವರಲ್ಲಿ ಪರಿಶುದ್ಧವಾದ ನಿಷ್ಕಾಮ ಪ್ರೀತಿಯೊಂದು ಮನೆಮಾಡಿಕೊಂಡಿರುತ್ತದೆ. ಬಡತನ-ಸಿರಿತನಗಳಿಗೆ ಅಲ್ಲಿ ಸ್ಥಾನವಿಲ್ಲ. ಬಡವಿಯಾದ ಸತಿಯೂ ನಿಷ್ಕಾಮ ಮತ್ತು ನಿರ್ವ್ಯಾಜ ಪ್ರೀತಿಯಲ್ಲಿ ಸ್ವರ್ಗವನ್ನು ಕಾಣುತ್ತಾಳೆ. ‘ನಾನು ಬಡವಿ ಆತ ಬಡವ; ಒಲವೆ ನಮ್ಮ ಬದುಕು, ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು’ ಎಂಬ ಕವಿವಾಣಿಯಿಂದ

ಪ್ರೀತಿಯ ಹರವು, ಶ್ರೀಮಂತಿಕೆ ನಮ್ಮರಿವಿಗೆ ಬರುತ್ತದೆ.

ಜೇಡರದಾಸಿಮಾರ್ಯ ಒಬ್ಬ ಶರಣ. ದುಗ್ಗಳೆ ಅವನ ಆದರ್ಶ ಸತಿ. ವ್ಯಕ್ತಿಯೊಬ್ಬ ಸನ್ಯಾಸ ಶ್ರೇಷ್ಠವೋ? ಸಂಸಾರ ಶ್ರೇಷ್ಠವೋ? ಎಂದು ಪ್ರಶ್ನಿಸಿದಾಗ ದಾಸಿಮಾರ್ಯರು ಸಾಕಷ್ಟು ಬೆಳಕಿದ್ದರೂ ‘ನಾನೀಗ ಓದಬೇಕು ದೀಪ ತಗೆದುಕೊಂಡು ಬಾ’ ಎಂದು ಸತಿ ದುಗ್ಗಳೆಗೆ ಹೇಳಿದರೆ ದೀಪ ತಂದು ಮುಂದಿರಿಸುತ್ತಾಳೆ. ಊಟದ ಸಮಯದಲ್ಲಿ ಬಟ್ಟಲಿನಲ್ಲಿರುವ ಅಂಬಲಿ ಆರಿ ತಣ್ಣಗಾಗಿದ್ದರೂ ಬೀಸಣಿಕೆಯ ಗಾಳಿಯಿಂದ ಅಂಬಲಿಯನ್ನು ಆರಿಸಲು ಹೇಳುತ್ತಾರೆ. ದುಗ್ಗಳೆ ಅನ್ಯಮಾತಿಲ್ಲದೆ ಆರಿದ ಅಂಬಲಿಗೆ  ಗಾಳಿ ಬೀಸುತ್ತಾಳೆ. ಆಗ ಪ್ರಶ್ನಿಸಿದ ವ್ಯಕ್ತಿಯು ಇಂಥ ಸತಿ ಸಿಕ್ಕರೆ ಸಂಸಾರ ಶ್ರೇಷ್ಠ, ಸಿಗದಿದ್ದರೆ ಸನ್ಯಾಸ ಶ್ರೇಷ್ಠವೆಂದು ಅರಿಯುತ್ತಾನೆ. ಸಾದ್ವಿಯೂ, ಪ್ರಿಯವಾದಿನಿಯೂ ಆದ ಸತಿ ತನ್ನ ಪ್ರೀತಿ, ತ್ಯಾಗ, ಸಹನೆಗಳಿಂದ ಸದಾ ಪತಿಯ ಮನಸ್ಸನ್ನು ಗೆಲ್ಲುತ್ತಾಳೆ. ಸತಿಪತಿಗಳ ದಾಂಪತ್ಯ ಜೀವನ ಶಾರೀರಿಕ ಸಂಬಂಧವನ್ನು ಮೀರಿ ಆಧ್ಯಾತ್ಮಿಕ ಹಂತಕ್ಕೇರಬೇಕು. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧಫಲ ಪುರುಷಾರ್ಥಗಳ ಪ್ರಾಪ್ತಿಗೆ ಕಾರಣವಾಗಬೇಕು. ಪರಸ್ಪರ ಅರಿತು ಬಾಳಬೇಕು. ಬಾಳು ಬೆಳಗಬೇಕು. ಇಂಥ ಸತಿಪತಿಗಳು ಕೂಡಿ ಮಾಡುವ ಭಕ್ತಿ, ಏಕೋಭಾವ ಶಿವನಿಗೂ ಪ್ರಿಯವಾಗುತ್ತದೆ.

ಲೇಖಕ: ಶ್ರೀಕಂಠ.ಚೌಕೀಮಠ

(ಪರಮಪೂಜ್ಯ ಹಾನಗಲ್ಲ ಶ್ರೀಕುಮಾರ ಮಹಾ ಸ್ವಾಮಿಗಳ ೧೫೭ ನೆಯ ಜಯಂತಿ ಮಹೋತ್ಸವದ ನಿಮಿತ್ತ ಸ್ಮರಣೆ)

 ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು (೧೮೬೭-೧೯೩೦) ಈ ನಾಡುಕಂಡ ಮಹಾನುಭಾವರು .ಅವರು ಹತ್ತೊಂಬತ್ತನೆಯ ಶತಮಾನದ ಆರಂಭದಲ್ಲಿದ್ದು ಅಂದಿನ ಕಾಲಘಟ್ಟದಲ್ಲಿ ಸಾಮಾಜಿಕವಾಗಿ ,ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಶೊಚನೀಯ ಸ್ಥಿತಿ ಯಲ್ಲಿದ್ದ ವೀರಶೈವ -ಲಿಂಗಾಯತ ಧರ್ಮೀಯರನ್ನ ತಮ್ಮ ಸಮಾಜೋದ್ಧಾರ ಯೋಜನೆ ಮತ್ತು ಕಾರ್ಯಗಳಿಂದ ಎತ್ತಿನಿಲ್ಲಿಸಿದವರು.

ಅವರಿಗೆ “ ಕಾರುಣಿಕ ಯುಗ ಪುರುಷ” ,”ಸಮಾಜ ಸಂಜೀವಿನಿ” ಎಂಬೆಲ್ಲ ಬಿರುದು ಉಪಮೆಗಳಿಂದ ಗೌರವಿಸಲಾಗುತ್ತಿದೆ.ಅವರ ೧೫೭ನೆಯ ಜಯಂತಿ ಮಹೋತ್ಸವ ಕರ್ನಾಟಕ ಮತ್ತು ದೇಶ -ವಿದೇಶಗಳ ವಿವಿಧ ಸ್ಥಳಗಳಲ್ಲಿ ಕಳೆದ ತಿಂಗಳನಿಂದ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಅವರು ಕೇವಲ ನುಡಿದು ಮರೆಯಾಗಲಿಲ್ಲ.

ನಡೆದು ಬದುಕಿದವರು

ನಡೆಗಳ ಕಾರ್ಯಕ್ಕೆ ತಮ್ಮ ೬೩ ವರ್ಷಗಳ ಸಮಗ್ರ ಬದುಕನ್ನೇ  ಸಮಾಜಕ್ಕೇ ಅರ್ಪಿಸಿದ ಮಹಾತ್ಮರು

ಅವರ ಬದುಕು ,ಸಾಧನೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು  ಕತ್ತಲು ಕವಿದ ಸಮಾಜಕ್ಕೆ ನೀಡಿದ ಬೆಳಕುಗಳು . ಅವರ ದೂರ ಯೋಚನೆಗಳ “ಯೋಜನೆ” ಗಳು ಶಿವಯೋಗ ಸಂಪನ್ನದ ಅಡಿಪಾಯಗಳಿಂದ ಇಂದು ಹಲವು ಸಂಸ್ಥೆಗಳು  ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ,ಸಮಾಜ ಸೇವೆಯಲ್ಲಿ ಅವಿಛಿನ್ನವಾಗಿ ಶತಮಾನಗಳಿಂದ  ಮುನ್ನೆಡೆಯುತ್ತಿವೆ.

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳ ಚರಿತ್ರೆಯಲ್ಲಿ ಉಲ್ಲೇಖವಾಗಿರುವ ಅವರ ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಗಳ ಜೊತೆಗೆ ಅವರು ಯಶಸ್ವಿಯಾಗಿ ನಿರ್ವಹಿಸಿದ ಸಾಮಾಜಿಕ ಮತ್ತು ಧಾರ್ಮಿಕ ಯೋಜನೆಗಳು ೧೨೦ ವರ್ಷ ಗಳ ನಂತರವೂ ಅವ್ಯಾಹತವಾಗಿ ಮುಂದುವರೆದುಕೊಂಡು ಬರುತ್ತಿರುವದು ಪೂಜ್ಯರ  ಅರ್ಥಪೂರ್ಣ ಯೋಚನೆ ಮತ್ತು ದೃಡ ಯೋಜನೆಗಳಿಗೆ ಸಾಕ್ಷಿಯಾಗಿ ನಿಲ್ಲುತ್ತವೆ

ಪೂಜ್ಯ ಹಾನಗಲ್ಲ ಶ್ರೀಕುಮಾರ ಶಿವಯೋಗಿಗಳು ಓದಿದ್ದು ಕೇವಲ ಏಳನೆಯ ತರಗತಿ.ಅವರು ಏಳನೆಯ ತರಗತಿಯ ಮುಲ್ಕಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು.ಅವರು ಅನುತ್ತೀರ್ಣರಾಗಿದ್ದು- ಅವರು ದಡ್ಡರೆಂದು ಅಲ್ಲ.

ಅವರು ಅನುತ್ತೀರ್ಣರಾದ ಕಾರಣ, ಪರೀಕ್ಷೆಯ ಹಿಂದಿನ ನಾಲ್ಕೈದು ದಿನಗಳ ಕಾಲ  120 ಕಿ.ಮಿ. ದೂರದ ಕಾಲ್ನೆಡಿಗೆಯ ಪ್ರವಾಸ.  ರಾಣೆಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದಿಂದ ಧಾರವಾಡದ ವರೆಗೂ ನಡೆದು ಮುಲ್ಕಿ (ಏಳನೆಯ ತರಗತಿ) ಪರೀಕ್ಷಾ ಕೇಂದ್ರಕ್ಕೆ ಬಂದು ಜ್ವರ ದಿಂದ ಬಳಲಿದ್ದು ಹೊರತು ಅವರು ಅನುತ್ತೀರ್ಣರಾಗುವಂತಹ ದಡ್ಡರಲ್ಲ. ಅವರೊಬ್ಬ ಸ್ವಾಭಿಮಾನಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದವರು. ಅನುತ್ತೀರ್ಣರಾದರೂ ಮರಳಿ ತಮ್ಮ ತಾಯಿಯ ತೌರುಮನೆಯ ಊರು ಲಿಂಗದಹಳ್ಳಿಗೆ ಬಂದು ಗಾವಟಿ ಶಾಲೆ ತೆರೆದು ಊರ ಮಕ್ಕಳಿಗೆ ಪಾಠ ಹೇಳಿದ ಮಹಾನುಭಾವರು.

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಭೌತಿಕವಾಗಿ ನಮ್ಮೊಂದಿಗೆ ಇಲ್ಲ .ಆದರೆ ಅವರು ಸಮಾಜಕ್ಕೆ ನೀಡಿ ಹೋದ ಹಲವು  ಕಾರ್ಯಗಳ ಫಲಶೃತಿ ಅವರನ್ನು ಅಜರಾಮರರನ್ನಾಗಿಸಿದೆ.ಅವರನ್ನು ಕಾರಣಿಕ ಯುಗಪುರುಷರರನ್ನಾಗಿಸಿದೆ.

ಅವರ “ಇರುವ”ನ್ನು ಮೃಡಗಿರಿ ಶ್ರೀ ಜಗದ್ಗುರುಗಳು ಅತ್ಯಂತ ಅರ್ಥಗರ್ಭಿತವಾಗಿ ತಮ್ಮ ವಚನದಲ್ಲಿ ವರ್ಣಿಸಿದ್ದಾರೆ

ಕಾರಣಿಕ ಯುಗಪುರುಷ ಗುರು ಕುಮಾರನ ಇರವ ನೋಡಿರೆ !

ಜನಿಸಿದಾಗಲೆ ತನ್ನನು ಭಿಕ್ಷೆಗೈಯಿಸಿದಾತನಯ್ಯಾ ;

ಮಾತೃಋಣ ತೀರಿಸಿ,

ಗುರು ಋಣ ತೀರಿಸಲೆಂದೇ  ಶಿವಯೋಗ ಮಂದಿರವ ಸಂಸ್ಥಾಪಿಸಿದನಯ್ಯಾ.

ಸಮಾಜಋಣದಿಂ ಮುಕ್ತನಾಗಲೆಂದೇ

ಅಖಿಲಭಾರತ ವೀರಶೈವ ಮಹಾಸಭೆಯ ರಚಿಸಿದನಯ್ಯಾ.

ತ್ರಿವಿಧ ಋಣಮುಕ್ತ,

ತ್ರಿವಿಧ ಲಿಂಗ ಪೂಜಕ

ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದ

ಗುರುಕುಮಾರೇಶನಿವನಯ್ಯಾ ಮೃಡಗಿರಿ ಅನ್ನದಾನೀಶ.

-ಮೃಡಗಿರಿ ಶ್ರೀ ಜಗದ್ಗುರುಗಳು

ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು,“ತ್ರಿವಿಧ” ಋಣಮುಕ್ತ ರು ಮಾತೃ ಋಣ,ಗುರು ಋಣ ಮತ್ತು ಸಮಾಜ ಋಣ ಗಳಿಂದ ಮುಕ್ತರಾದವರು.ಅವರು ತ್ರಿವಿಧ ಲಿಂಗ ಪೂಜಕರು .ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು,ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು,ಶಿವಯೋಗ ಸಂಪನ್ನರಾದವರು.

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು (ತ್ರಿವಿಧ ಜಂಗಮಲಿಂಗಸ್ಥಲಗಳು: ಸ್ವಯ, ಚರ, ಪರ)

(ಸೌಜನ್ಯ :ಹಾನಗಲ್ಲ ಕುಮಾರಸ್ವಾಮಿಗಳ ದೃಷ್ಟಿಯಲ್ಲಿ ‘ ಜಂಗಮ ‘ ತತ್ವ : ಲೇಖಕರು : ಪೂಜ್ಯಶ್ರೀ ಜಗದ್ಗುರು ತೋಂಟದ ಡಾ . ಸಿದ್ಧರಾಮ ಸ್ವಾಮಿಗಳು ,ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠ ಡಂಬಳಗದಗ ಲೇಖನದ ಆಯ್ದ ಭಾಗ)

ವೀರಶೈವ-ಲಿಂಗಾಯತ ಧರ್ಮದಲ್ಲಿ ವಿಶಿಷ್ಟಸ್ಥಾನ ಹೊಂದಿರುವ ಜಂಗಮ ತತ್ವದಲ್ಲಿ ಕರ್ತವ್ಯ ಭೇದದಿಂದ ಸ್ವಯ , ಚರ ಮತ್ತು ಪರ ಎಂಬುದಾಗಿ ಮೂರು ಭೇದಗಳಿವೆ .

  1. ಸ್ವಯ ಜಂಗಮನು ಸದಾ ಮಠದಲ್ಲಿಯೇ ವಾಸಿಸುವವನು . ಹಾಗೆ ಅವನು ಮಠದಲ್ಲಿರುವಾಗ ಅನೇಕ ಸದ್ಭಕ್ತರು ದರ್ಶನಾರ್ಥಿಗಳಾಗಿ ಭಕ್ತಿಯಿಂದ ಮಠಕ್ಕೆ ಬರುತ್ತಾರೆ . ಬಂದ ಭಕ್ತರನ್ನು ಕುರಿತು ಉಪದೇಶ ಪರ ಮಾತುಗಳನ್ನು ಹೇಳುತ್ತ ಅವರು ಸನ್ಮಾರ್ಗದಲ್ಲಿ ನಡೆಯುವಂತೆ ನೋಡಿಕೊಳ್ಳುವನು , ಮಠಕ್ಕೆ ಬಂದ ಭಕ್ತರಿಗೆ ದಾಸೋಹ ಏರ್ಪಡಿಸಿ ಅವರನ್ನು ಪ್ರಸಾದದಿಂದ ತೃಪ್ತಿಪಡಿಸುವನು . ಇಷ್ಟೆಲ್ಲ ಮಾಡಿಯೂ ವ್ಯವಹಾರದಲ್ಲಿ ಇದ್ದೂ ಇಲ್ಲದಂತೆ ಇದ್ದು ಏಕಾಂತದ ಆನಂದಾನುಭೂತಿಯನ್ನು ಯೋಗಮುಖವಾಗಿ ಅರಿತು ಅನುಭವಿಸಿ ಅನುಷ್ಠಾನಿಸುವ ಶಿವಸ್ವರೂಪಿ ಜಂಗಮನೆ ಸ್ವಯ ಜಂಗಮನೆನಿಸುವನು .
  2. ಜಂಗಮದ ಎರಡನೆಯ ಭೇದವನ್ನು ಚರಜಂಗಮವೆಂದು ಕರೆಯಲಾಗಿದೆ . ತನ್ನನ್ನು ನಂಬಿದ ಸಜ್ಜನ ಸದ್ಭಕ್ತರಲ್ಲಿಗೆ ಲಿಂಗವಾಗಿ ಗಮನಿಸಿ ಅವರನ್ನು ಉದ್ಧರಿಸಿ ನಿರ್ಗಮನಿಯಾಗಿ ಸುಳಿಯುವವನು ಚರ ಜಂಗಮನೆನಿಸುವನು. ಭಕ್ತರಿರುವಲ್ಲಿಗೆ ಹೋಗಿ ಅವರ ಭಕ್ತಿಯನ್ನು ಸ್ವೀಕರಿಸುತ್ತ ಉಪದೇಶವನ್ನು ಮಾಡುವ ಮೂಲಕ ಶಿಷ್ಯರನ್ನು ಮತ್ತು ಭಕ್ತರನ್ನು ಉದ್ಧಾರ ಮಾಡುವವನು ಚರಜಂಗಮ.

ವಾಸ್ತವವಾಗಿ ಚರಜಂಗಮನು ಲೋಕದೆಲ್ಲೆಡೆ ಸಂಚರಿಸಿ ಜನರಿಗೆ ಶಾಂತಿಯ ಮಾರ್ಗವನ್ನು ತೋರುವ ಮೂಲಕ ಲೋಕಪೂಜ್ಯನೆನಿಸುತ್ತಾನೆ . ವಸಂತದ ಗಾಳಿಯಂತೆ ಸುಳಿಯುವ ಅವನ ನಡೆ ನುಡಿಗಳಲ್ಲಿ ಸಾಮರಸ್ಯ ಕಂಡು ಬರುತ್ತದೆ . ಅಮೂರ್ತ ಪರಶಿವನ ಸಾಕಾರ ಚರಮೂರ್ತಿಯಾಗಿರುವ ಅವನು ಚಲಿಸಿದಲ್ಲಿ ಭಕ್ತಿಯಬೆಳಸು , ಜ್ಞಾನದ ಬೆಳಕು ಹೊರಹೊಮ್ಮುತ್ತದೆ . ಆದ್ದರಿಂದ ಅವನು ವಿಶ್ವ ಪರಿಪೂರ್ಣನೂ , ಜಗದ್ಭರಿತನೂ ಆಗಿರುವನು . ಇನ್ನೂ ಮೂರನೆಯದಾಗಿ ಪರಜಂಗಮವನ್ನು ಕುರಿತು- ‘ ಕೋಪ ತಾಪಮಂ ಬಿಟ್ಟು , ಭ್ರಾಂತಿ ಭ್ರಮೆಯಂ ಬಿಟ್ಟು ಜಂಗಮವಾಗಬೇಕು ಕಾಣಿರೋ ‘ ಎಂದು ಶರಣರು ಹೇಳುವ ಮೂಲಕ ಪರಜಂಗಮದ ಲಕ್ಷಣವನ್ನು ತಿಳಿಸಿದ್ದಾರೆ . ಪರಜಂಗಮನು ಸ್ವಯ ಮತ್ತು ಚರ ಜಂಗಮರಿಗಿಂತಲೂ ಶ್ರೇಷ್ಠನೆನಿಸುವನಲ್ಲದೆ ಅವರಿಗೆ ಮಾರ್ಗದರ್ಶನವನ್ನೂ ಮಾಡುವನು . ಮುಖ್ಯವಾಗಿ ಅವನು ಅನುಭಾವಿ , ಪರಶಿವನೊಡನೆ ಬೆರೆದು ಬೇರಾಗದಂತಿರುವವನು , ಸದಾ ಲಿಂಗಾಂಗ ಸಾಮರಸ್ಯ ಸುಖದಲ್ಲಿರುವವನು .

 

  1. ಪರ ಜಂಗಮನು ಪಾಪ ಪುಣ್ಯಗಳ ಎಲ್ಲೆಯನ್ನು ಮೀರಿದವನು . ಕಾಮ , ಕ್ರೋಧ , ಲೋಭ ಮೋಹಾದಿ ದುರ್ಗುಣಗಳನ್ನು ನಾಶ ಮಾಡಿದವನು . ಅಂದರೆ ಅವುಗಳ ವಿಕಾರಕ್ಕೆ ಒಳಗಾಗದವನು . ಜಗತ್ತಿನ ಜಂಜಡವನ್ನು ಧಿಕ್ಕರಿಸಿದವನು , ಹಾಗೆಯೆ ಮೋಸ ವಂಚನೆಗಳಿಂದ ಮುಕ್ತನಾಗಿ ಶಿವನೇ ತಾನಾದವನು ಪರ ಜಂಗಮನೆನ್ನುತ್ತಾರೆ . ವಾಸ್ತವವಾಗಿ ತಥ್ಯಮಿಥ್ಯ , ರಾಗ ದ್ವೇಷ ಅಳಿದವನು , ಸ್ತುತಿ ನಿಂದೆಗಳನ್ನು ಸಮನಾಗಿ ಕಂಡವನು , ದ್ವೈತಾದ್ವೈತಗಳಿಂದ ಮುಕ್ತನಾದವನು , ಸತ್ಯ ಸದಾಚಾರವೇ ಅಂಗವಾಗಿರುವವನು , ಭಕ್ತಿ , ಜ್ಞಾನ – ವೈರಾಗ್ಯಗಳನ್ನು ಆಭೂಷಣಗಳನ್ನಾಗಿಸಿಕೊಂಡವನು ಪರಜಂಗಮನೆನಿಸುವನು . ಅವನು ತನ್ನ ಅಂಗ , ಮನ , ಪ್ರಾಣ , ಸಕಲ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಲೀಯವಾಗಿಸಿ ಅಂದರೆ ಸ್ಪಟಿಕ ಘಟದಲ್ಲಿ ಜ್ಯೋತಿಯನ್ನಿರಿಸಿದಂತೆ ಒಳಗೂ ಹೊರಗೂ ಮಹಾಜ್ಞಾನದ ಬೆಳಕೇ ತುಂಬಿದಂತೆ ತೊಳಗಿ ಬೆಳಗುವ ಮಹಾಚೈತನ್ಯ ಮೂರ್ತಿಯಾಗಿರುವನು

ಅವರು ತ್ರಿವಿಧ ಜಂಗಮತ್ವದ ನಿಲವಿಗೇರಿ ಮೆರೆದವರು ಎಂಬುದಕ್ಕೆ ಸಾಕ್ಷಿಯಾಗಿ  ಅವರು ತಮ್ಮ ಜೀವಿತಾವಧಿಯಲ್ಲಿ ಕಾರ್ಯಗತಗೊಳಿಸಿದ ಎಲ್ಲ ಯೋಜನೆಗಳ ಯಶೋಗಾಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರ ಮುಂದಾಲೋಚನೆ, ಯೋಜನೆ,ಸಂಪಲ್ಮೂನಗಳ ಕ್ರೋಢಿಕರಣ ಮತ್ತು ದೃಡ ಸಂಕಲ್ಪಗಳು ಮಹಾಶಕ್ತಿಗಳಾಗಿ ಅತ್ಯಧ್ಬುತವಾಗಿ ಗೋಚರಿಸುತ್ತವೆ.

ಅವುಗಳಲ್ಲಿ ಅತ್ಯಂತ ಮಹತ್ವವಾದ ಕೊಡುಗೆಗಳು ಹೀಗಿವೆ

  1. ೧೮೮೧-೮೩ ಪೂಜ್ಯರ ೧೪ನೆಯ ವರ್ಷದಲ್ಲಿಯೇ ಲಿಂಗದಹಳ್ಳಿಯಲ್ಲಿ ಗಾವಟಿ ಶಾಲೆ ಸ್ಥಾಪನೆ
  2. ೧೮೯೭ ನಾಡಿನಲ್ಲಿ ಬರಗಾಲ ಹಾನಗಲ್ಲಿನಲ್ಲಿ ಬರಪೀಡಿತರಿಗೆ ದಾಸೋಹ ಕೇಂದ್ರ ಸ್ಥಾಪನೆ.
  3. ೧೮೯೮ ಹಾನಗಲ್ಲ ಶ್ರೀ ಮಠದಲ್ಲಿ ಪಾಠಶಾಲೆ ಆರಂಭ.
  4. ೧೯೦೧ ಕಾಡಶೆಟ್ಟಿಹಳ್ಳಿಯಲ್ಲಿ ಗದಿಗೆಯ್ಯ ನೆಂಬ ಅಂಧ ಬಾಲಕನನ್ನು ಸಂಗೀತ ಶಿಕ್ಷಣ ವ್ಯವಸ್ಥೆ ಮಾಡಿದ್ದು ಮುಂದೆ ಅದೇ ಬಾಲಕ ಪಂಚಾಕ್ಷರಿ ಗವಾಯಿಗಳಾಗಿ ಪ್ರಸಿದ್ದಿ ಹೊಂದಿದ್ದು
  5. ೧೯೦೪ ಸಾಮಾಜಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗಾಗಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ. ಇಲ್ಲಿಯವರೆಗೆ ೨೫ ಅಧ್ಯಕ್ಷರುಗಳ ಸೇವೆ ಪಡೆದು ಸಾಮಾಜಿಕ ಕ್ಷೇತ್ರದ ಸೇವೆಯಲ್ಲಿ ಮಹಾಸಭೆ ತನ್ನದೇ ಆದ ಗೌರವಾದರಗಳನ್ನು ಹೊಂದಿದೆ.
  6. ೧೯೦೯ ಧಾರ್ಮಿಕ ಮತ್ತು ಅಧ್ಯಾತ್ಮಿಕ ಅಭ್ಯುದಯಕ್ಕೆ ಶ್ರೀ ಶಿವಯೋಗಮಂದಿರ ಸ್ಥಾಪನೆ ಶ್ರೀ ಶಿವಯೋಗಮಂದಿರದ ಮೂಲಕ ಸಹಸ್ರಾರು ಸ್ವಾಮಿಗಳು ಅಧ್ಯಾತ್ಮಿಕ ,ಧಾರ್ಮಿಕ ಮತ್ತು ಶೈಕ್ಷಣಿಕ ಶಿಕ್ಷಣ ಪಡೆದು ಶಿವಯೋಗ ಸಂಪನ್ನರಾಗಿ ನಾಡಿನಾದ್ಯಂತ ಸಮಾಜ ಸೇವೆ ಯನ್ನು ವಿವಿಧ ರಂಗಗಳಲ್ಲಿ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು.

ಶತಮಾನದಿಂದ ಹಲವು ಶಾಸ್ತ್ರಿಗಳು ,ಕೀರ್ತನಕಾರರು,ಪುರಾಣಿಕರು,ಸಾಹಿತಿಗಳು ,ಶಿಕ್ಷಣ ತಜ್ಞರು , ಸಂಗೀತಗಾರರು ಶ್ರೀ ಶಿವಯೋಗಮಂದಿರದಿಂದ ಶಿಕ್ಷಣ ಕಲಿತು ಆಯಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಸಲ್ಲಿಸುತ್ತಿರುವರು

  1. ೧೯೦೯ ನಾಡಿನ ಪ್ರಪ್ರಥಮ ಗೋಶಾಲೆ ಆರಂಭ
  2. ೧೯೧೦ಪ್ರಪ್ರಥಮ ಶಾಸ್ತ್ರೋಕ್ತ ವಿಭೂತಿ ನಿರ್ಮಾಣ ಕೇಂದ್ರ ಆರಂಭ
  3. ೧೯೧೧ ಯೋಗ ಪಾಠ ಶಾಲೆ ಆರಂಭ
  4. ೧೯೧೨ ಆಯುರ್ವೇದ ಚಿಕಿತ್ಸಾ ಕೇಂದ್ರ ಆರಂಭ
  5. ಪ್ರಪ್ರಥಮ ಮಹಿಳಾ ವಿದ್ಯಾಲಯ ಆರಂಭ
  6. ೧೯೧೦ ಗ್ರಂಥಾಲಯ ಸ್ಥಾಪನೆ .ವಚನಕಟ್ಟುಗಳ ಸಂಗ್ರಹ ,ತಾಳೆಯೋಲೆಗಳ ಸಂಗ್ರಹ
  7. ೧೯೧೦ ಬಳ್ಳಾರಿ ವೀರಶೈವ ವಿದ್ಯಾವರ್ದಕ ಸಂಸ್ಥೆ ಸ್ಥಾಪನೆಗೆ ಚಾಲನೆ
  8. ೧೯೧೧ ಬಾಗಲಕೋಟೆ ಯಲ್ಲಿ ಶಿವಾನಂದ ಜಿನ್ನಿಂಗ ಮಿಲ್ಲ ಸ್ಥಾಪನೆ
  9. ೧೯೧೧ ಗದುಗಿನ ವೀರೇಶ್ವರ ಪುಣ್ಯಾಶ್ರಮ-ಸರ್ವ ಧರ್ಮ ಗಳ ಅಂಧ-ಅನಾಥ ಮಕ್ಕಳ ಶಿಕ್ಷಣ ಕೇಂದ್ರಕ್ಕೆ ಪಂ.ಪಂಚಾಕ್ಷರಿ ಗವಾಯಿಗಳ ಮೂಲಕ ಚಾಲನೆ.ಪಂ. ಮಲ್ಲಿಕಾರ್ಜುನ ಮನಸೂರ,ಪಂ. ಬಸವರಾಜ ರಾಜಗುರು ಅವರಿಂದ ಹಿಡಿದು ಪಂ. ವೆಂಕಟೇಶ್‌ ಕುಮಾರ ಅವರವರೆಗೂ ಸಹಸ್ರಾರು ಖ್ಯಾತನಾಮ ಸಂಗೀತ ಗಾರರ ಸಂಗೀತ ಶಿಕ್ಷಣ ನೀಡಿದ ಹೆಗ್ಗಳಿಕೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ್ದು.

ಗದುಗಿನ ವೀರೇಶ್ವರ ಪುಣ್ಯಾಶ್ರಮ ಕೇವಲ ಸಂಗೀತ ಕ್ಷೇತ್ರಕ್ಕೆ ಮೀಸಲಾಗಲಿಲ್ಲ. ನಾಟಕ ರಂಗಕ್ಕೂ ಪ್ರೋತ್ಸಾಹ ನೀಡಿ .ನಾಡಕ ಸಂಘಗಳನ್ನೂ ಸ್ಥಾಪಿಸಿತು.

  1. ೧೯೧೨ ಬಾಗಿಲಕೋಟೆಯಲ್ಲಿ ಶ್ರೀಗುರುಸಿದ್ದೇಶ್ವರ ಚಿತ್ರಮಂದಿರ ಸ್ಥಾಪನೆ.ಉತ್ತರ ಕರ್ನಾಟಕದ ಪ್ರಪ್ರಥಮ ಚಲನಚಿತ್ರ ಮಂದಿರ ಮೂಲಕ ಆಧುನಿಕ ಕಲೆಗೆ ಪ್ರೋತ್ಸಾಹ.
  2. ೧೯೧೩ ರಲ್ಲಿ ಅಸ್ಪೃಶ್ಯರು ಎಂಬ ಭೇದಭಾವ ಸವರ್ಣಿಯರಿಂದ ಉಂಟಾದಾಗ ಸ್ವಾಭಿಮಾನದ ಪ್ರಕ್ರಿಯೆಯಾಗಿ ಅಸ್ಪೃಶ್ಯರು ಎಂದು ಕರೆಯಿಸಿಕೊಂಡವರಿಗಾಗಿಯೇ ಶಿವಯೋಗಮಂದಿರದ ಸಮೀಫ ಮಂಗಳೂರು ಎಂಬ ಗ್ರಾಮದಲ್ಲಿ ಶಾಲೆಯನ್ನು ತೆರೆದಿದ್ದು
  3. ೧೯೧೪ ನಿಡುಗುಂದಿಕೊಪ್ಪ ಸೇರಿ ನಾಲ್ಕು ಶಾಖಾ ಶಿವಯೋಗಮಂದಿರಗಳ  ಸ್ಥಾಪನೆ
  4. ೧೯೧೫ ಶಿರಸಂಗಿ ಲಿಂಗರಾಜರ ಆಸ್ತಿ ಸಮಾಜಕ್ಕೇ ಸಲ್ಲಲು ಮುಂಬೈ ಹೈಕೋರ್ಟನಲ್ಲಿ ಸಾಂಘಿಕ ಕಾನೂನು ಹೋರಾಟಕ್ಕೆ ಹಣಕಾಸು ಸಹಾಯ ಮತ್ತು ಗೆಲವು.ಈ ಗೆಲವು ಬೆಳಗಾವಿಯ ಕೆ.ಎಲ್.ಇ ಸೋಸೈಟಿಯ ಅಭಿವೃದ್ಧಿಗೆ ಸುಭದ್ರ ಅಡಿಪಾಯವಾಯಿತು
  5. ೧೯೧೭ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕಾಳೇನಹಳ್ಳಿನಲ್ಲಿ ಶಾಖಾ ಶಿವಯೋಗ ಮಂದಿರ ಸ್ಥಾಪನೆ
  6. ೧೯೧೭ ಕಾಳೇನಹಳ್ಳಿ ಯ ನಾಲ್ಕು ನೂರು ಎಕರೆ ಭೂಮಿಯಲ್ಲಿ ಆಧುನಿಕ ಕೃಷಿಗೆ ಚಾಲನೆ ಪ್ರಪ್ರಥಮ ಬಾರಿಗೆ ಟ್ರಾಕ್ಟರ ಖರೀಧಿ ಕೃಷಿಗೆ ಉತ್ತೇಜನೆ
  7. ೧೯೧೭ ಗದುಗಿನಿಂದ ಯಡೆಯೂರು ಕ್ಷೇತ್ರ ಪಾದಯಾತ್ರೆ ಮಾಡಿ ಧಾರ್ಮಿಕ ಸಂಚಲನೆಯನ್ನುಂಟು ಮಾಡಿದ್ದು.
  8. ೧೯೨೦ ವಚನಪಿತಾಮಹ ಫ.ಗು.ಹಳಕಟ್ಟಿಯವರಿಗೆ ವಚನ ಸಂಗ್ರಹಕ್ಕೆ ಆರ್ಥಿಕ ಸಹಾಯ ಮಾಡಿಸಿ ಶಿವಯೋಗಮಂದಿರದಲ್ಲಿ ಸಂಗ್ರಹವಾಗಿದ್ದ ವಚನ ಕಟ್ಟುಗಳನ್ನು ನೀಡಿ ಪ್ರೋತ್ಸಾಹಿಸಿದ್ದು. ಕೃತಜ್ಞತೆ-ಗೌರವಕ್ಕೆ ಶ್ರೀ ಫ.ಗು.ಹಳಕಟ್ಟಿಯವರು ತಮ್ಮ ಗ್ರಂಥ ”ವಚನಶಾಸ್ತ್ರಸಾರ”ದ ಮೊದಲ ಭಾಗವನ್ನು ಬೆಳಗಾವಿಯಲ್ಲಿ ಮುದ್ರಿಸಿ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ  ಅರ್ಪಿಸಿದ್ದು
  9. ೧೯೨೯ ಮಹಾರಾಷ್ಟ್ರದ ಪರಳಿ ದೇಗುಲದ ಪ್ರವೇಶ ಕುರಿತು ಹೈದ್ರಾಬಾದ ನಿಜಾಮ ಕೋರ್ಟನಲ್ಲಿ ವೀರಶೈವರಿಗೂ ಹಕ್ಕು ಎಂದು ಸತತ ಐದು ವರ್ಷಗಳ ಕಾನೂನು ಹೋರಾಟ ನಡೆಯಿಸಿ  ಜಯಗಳಿಸಿದ್ದು
  10. ೧೯೦೪ ರಿಂದ ೧೯೩೦ ರ ವರೆಗೆ ಕರ್ನಾಟಕ-ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಒಟ್ಟು ೧೦ ಅಖಿಲ ಭಾರತ ವೀರಶೈವ ಮಹಾಸಭೆ ಮಹಾ ಅಧಿವೇಶನಗಳ ಆಯೋಜನೆ ಕರ್ನಾಟಕ ಏಕೀಕರಣದ ಹೋರಾಟಕ್ಕೆ ವೀರಶೈವ ಮಹಾಸಭೆಯ ಅಧಿವೇಶನಗಳು ಗುಪ್ತಗಾಮಿನಿಯಾಗಿ ಕೆಲಸ ಮಾಡಿದವು
  11. ಹರಿದು ಹಂಚಿಹೋಗಿದ್ದ,ಕರ್ನಾಟಕ, ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯ ಸಾಂಸೃತಿಕವಾಗಿ ಒಂದುಗೂಡುವದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.ಆದರೆ ಈ ನಾಲ್ಕೂ ಭಾಗಗಳಲ್ಲಿದ್ದ ಕರ್ನಾಟಕದ ಬಹುಸಂಖ್ಯಾತ ಸಮಾಜ ಬಾಂಧವರಾದ ವೀರಶೈವ-ಲಿಂಗಾಯತರು ಒಂದಾಗಿದ್ದರ ಪರಿಣಾಮ ಕರ್ನಾಟಕದ ಏಕೀಕರಣಕ್ಕೆ ಆನೆಬಲ ತಂದುಕೊಟ್ಟಿತು

ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ವೀರಶೈವ-ಲಿಂಗಾಯತ ಧರ್ಮದ ವಿಶಿಷ್ಟ ಪಾರಿಭಾಷಿಕ ಶಬ್ದ ಮತ್ತು ತತ್ವವಾಗಿರುವ ಜಂಗಮದ ಪ್ರಮುಖ ಭೇದವಾಗಿರುವ ಸ್ವಯ , ಚರ ಮತ್ತು ಪರ ಜಂಗಮದ ಅಂತಸ್ಸತ್ವವನ್ನು ಅರಿತು ಆಚರಿಸಿದ ಮಹಿಮರು  ಮತ್ತು  ತ್ರಿವಿಧ ಜಂಗಮತ್ವದ   ನಿಲವಿಗೇರಿ ಮೆರೆದ ಮಹಾತ್ಮರು.

 

ಲೇಖಕ: ಶ್ರೀಕಂಠ.ಚೌಕೀಮಠ

ಅಧ್ಯಕ್ಷ ಅಖಿಲ ಭಾರತ ವೀರಶೈವ ಮಹಾಸಭಾ ದೆಹಲಿ ರಾಜ್ಯ ಘಟಕ.

ಅಧ್ಯಕ್ಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಮತ್ತು ಕರ್ನಾಟಕ

 

 

 

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

 

  ಪರರ ಸಂಗವೆ ಕೆಟ್ಟ | ದುರಿತವೆಂದದ ಬಿಟ್ಟ

ವರ ಗುಹ್ಯ ದಿಟ್ಟ – ಗುರುಲಿಂಗವೆಂಬುದೆ-

ಚ್ಚರಗೊಟ್ಟ ಗುರುವೆ ಕೃಪೆಯಾಗು   ||೧೫೨||

ಎರಡನೆಯ ಕರ್ಮೇಂದ್ರಿಯ ಗುಹ್ಯ. ಇದಕ್ಕೆ ಗುಪ್ತಾಂಗವೆಂತಲೂ ಹೆಸರು, ಜೀವಾತ್ಮರ ಉತ್ಪತ್ತಿಗೆ ಕಾರಣವಾದುದು ಗುಹೇಂದ್ರಿಯವೇ. ಸಂಗಸುಖಕ್ಕೂ ಇದುವೇ ಮೂಲ. ಸಂಗವು ಸ್ವಸ್ತ್ರೀಯೊಡನಾದರೆ ದೋಷವಿಲ್ಲ. ಪರಸ್ತ್ರೀ ಸಂಗವು ದುರಿತಕ್ಕೆ ದಾರಿಮಾಡುವದು. ಪರಸ್ತ್ರೀಸಂಗವನ್ನು ಶರಣಬಳಗವು ಅತ್ಯಂತ ಕಟುವಾಗಿ ಖಂಡಿಸಿರುವದನ್ನು ೧೩೦ ನೆಯ ತ್ರಿಪದಿಯ ವಿವರಣೆಯಲ್ಲಿಯೂ ನೋಡಬಹುದು. ಪ್ರಾಸಂಗಿಕವಾಗಿ ಮತ್ತೆ ಕೆಲವು ವಚನಗಳನ್ನು ಉದಾಹರಿಸುವದು ಅಪ್ರಸ್ತುತವೇನಲ್ಲ.   ಪರಶಿವನಿಂದ ತವನಿಧಿ ಪಡೆದ ದೇವರದಾಸಿಮಯ್ಯನವರು –

ವೇಶಿಯ ಎಂಜಲ ತಿಂದು, ಈಶ್ವರ ಪ್ರಸಾದವ

ಭುಂಜಿಸಿದೊಡೆ ಓಸರಿಸಿತ್ತಯ್ಯ ಲಿಂಗವು

ಆತ ದ್ರೋಹಿ, ಭಾಷೆ ತಪ್ಪುಕನವನು

ಭವದಲ್ಲಿ ಬಳಲುವನು, ಅಂತಹನ ಕಂಡು

ಹೇಸಿ, ಕಡೆಗೆ ತೊಲಗಿದೆ ಕಾಣಾ ರಾಮನಾಥ |

ಭಕ್ತಿ ಭಾಂಡಾರಿ ಬಸವಣ್ಣನವರ ಆಪ್ತಕಾರ್ಯದರ್ಶಿ ಹಡಪದಪ್ಪಣ್ಣನವರು

ದಾಸಿಯಸಂಗ ಎರಡನೆಯ ಪಾತಕ

ವೇಶಿಯ ಸಂಗ ಮೂರನೆಯ ಪಾತಕ

ಮೀಸಲಳಿದ ಪರಸ್ತ್ರೀಯರ ಸಂಗ ಪಂಚ ಮಹಾಪಾತಕ,

ಇನಿಸು ಶಿವಭಕ್ತರಿಗೆ ಸಲ್ಲವು

ಇವನರಿದರಿದು ಮಾಡಿದನಾದರೆ ಯಮ ಪಟ್ಟಣವೆ ವಾಸವಾಗಿಪ್ಪರಲ್ಲದೆ

ಈ ದೇಶಕ್ಕೆ ಮರಳಿ ಬರಲಿಲ್ಲ. ನೋಡಾ

ಬಸವಪ್ರಿಯ ಕೂಡಲ ಚನ್ನಬಸವಣ್ಣ

 

ಭಕ್ತನಿಗೆ ವೇಶಿಯ ಸಂಗ, ದಾಸಿಯ ಸಂಗ, ಪರಸ್ತ್ರೀಯರ ಸಂಗ ಯಾವುದೂ ಉಚಿತವಲ್ಲ. ಈ ಸಂಗದಿಂದ ಪಂಚಮಹಾಪಾತಕವೇ ಪ್ರಾಪ್ತವಾಗುವದೆಂದು ಶರಣರು ಎಚ್ಚರಕೊಟ್ಟಿದ್ದಾರೆ. ಅದುಕಾರಣ ಪರಸ್ತ್ರೀಸಂಗವು ಬಹುಕೆಟ್ಟದ್ದು ಮತ್ತು

ದುರಿತಕಾರಕವೆಂದು ಅರಿತು ಅದರಿಂದ ದೂರವಾಗಿರಬೇಕು. ಇಲ್ಲವಾದರೆ ಇಂಥವರಿಗೆ ಯಮಪುರದ ವಾಸವೇ ಸ್ಥಿರವಾಗುವದು. ರೌರವನರಕದಲ್ಲಿ ಬಿದ್ದು ದುಃಖಿಯಾಗಬೇಕಾಗುವದು. ಪರಸ್ತ್ರೀ ಸಂಗದಿಂದ ದೂರಾದವರ ಗುಹ್ಯವೇ ಶ್ರೇಷ್ಠವೆನಿ

ಸುವದು. ಅದುವೆ ದಿಟ್ಟತನದ ಪ್ರತೀಕ. ಯಾಕಂದರೆ ರಾಷ್ಟ್ರಕವಿ ಕು.ವೆಂ.ಪು. ಇವರು

‘ರಾಮಾಯಣ ದರ್ಶನ’ದಲ್ಲಿ “

ಇಂದ್ರ ವಿಜಯಿಗಿಂ ನೂರ್ಮಡಿ ವೀರವಿಕ್ರಮಿಯಲ್ತೆ ಇಂದ್ರಿಯ ವಿಜಯಿ”

 

ಅರಣ್ಯವಾಸದಲ್ಲಿ ಬ್ರಹ್ಮಚಾರಿಯಾದ ಲಕ್ಷ್ಮಣನು ಇಂದ್ರ ವಿಜಯಿಯಾದ. ಇಂದ್ರಜಿತ್ (ರಾವಣನ ಮಗ) ನನ್ನು ಜಯಿಸಿದಾಗ ಅವನನ್ನು ಪ್ರಶಂಸಿಸುತ್ತ ಬರೆದ ಮಹಾಕಾವ್ಯವಿದಾಗಿದೆ. ಇಂದ್ರಿಯ ವಿಜಯಿಯಾದವನೇ ಮಹಾವೀರ. ಅಂತೆಯೇ ಶಿವಕವಿಯ ದಿಟ್ಟ ಗುರುಲಿಂಗ’ ವೆಂದು ಉದಾಹರಿಸಿದ್ದು ಅತ್ಯಂತ ಮನನೀಯವಾಗಿದೆ.

ಇಂಥ ವೀರತ್ವವನ್ನೇ ಸಾಧಿಸಬಲ್ಲ ಗುಹೇಂದ್ರಿಯದಲ್ಲಿ ಗುರುಲಿಂಗವನ್ನು ಸಾಧಿಸಬೇಕು. ಅಳವಡಿಸಿಕೊಳ್ಳಬೇಕು ಎಂದು ಗುರುನಾಥನು ಶಿಷ್ಯನಿಗೆ ಎಚ್ಚರ ಕೊಡುತ್ತಾನೆ. ಸಮಯೋಚಿತ ಎಚ್ಚರಿಕೆಯನ್ನು ನೀಡುವ ಆತ್ಮೀಯ ಗುರುವೆ ! ಕೃಪೆದೋರು.

 

ಬಿಡದೆ ಸತ್ಪಥಮಾರ್ಗ | ನಿಡಿದು ತಾ ನುಡಿದಂತೆ

ನಡೆವ ಪಾದವು ತಾ-ಮೃಡನು ಶಿವಲಿಂಗವೆಂದು

ನುಡಿದ ಶ್ರೀಗುರುವೆ ಕೃಪೆಯಾಗು   ||೧೫೩||

 

ಪಾದಗಳೆರಡು ಮೂರನೆಯ ಕರ್ಮೇದ್ರಿಯಗಳು. ಪಾದಗಳಿಂದ ಚಲನ- ವಲನ ನಡೆಯುವದು. ನಡೆಯುವದು ಪಾದಗಳ ಕರ್ಮವಾದರೂ ಅದು ಸತ್ಕರ್ಮವಾಗಬೇಕು. ಸಾರ್ಥಕವಾಗಬೇಕು. ವ್ಯರ್ಥವಾದ ನಡೆಯಾಗಬಾರದು. ನಡೆಯ ಅರ್ಥ ನುಡಿಯಲ್ಲಿದೆ.

ಪಾದಗಳು ಕ್ರಿಯಾದ್ಯೋತಕವೆಂದು ಅರಿತಿದ್ದೇವೆ. ಪಾದಗಳಿಂದಲೇ ಗಮನಾಗಮನಗಳನ್ನು ಸಾಧಿಸಲು ಬರುವದು. ಓಟಗಳ ಪಂದ್ಯಗಳಲ್ಲಿ ಪಾದಗಳ ಪಾತ್ರ ಬಹು ಮುಖ್ಯವಾದುದು. ಬಂಧುರ ಕಾಲುಗಳುಳ್ಳ ಪ್ರಾಣಿಗಳು ಅತ್ಯಂತ ವೇಗದಲ್ಲಿ ಓಡುತ್ತವೆ. ಅವುಗಳಲ್ಲಿ ಕುದುರೆ ಮತ್ತು ಜಿಂಕೆಗಳು ಮುಖ್ಯ ಪ್ರಾಣಿಗಳು. ಓಟಗಳ ಸ್ಪರ್ಧೆ ಜಾಗತಿಕವಾಗಿ ನಡೆಯುತ್ತದೆ. ಓಲಿಂಪಿಕ್ ಸ್ಪರ್ಧೆಗಳಲ್ಲಿ ೨೬ ಮೈಲು (ಮ್ಯಾ ರೇಥಾನ) ಇತಿಹಾಸವಿದೆ. ಇದುವೆ ಅತ್ಯಂತ ಕಠಿಣ ಪಂದ್ಯವೆನಿಸುವದೆಂದು ಕ್ರೀಡಾಪಟುಗಳ ಅಭಿಪ್ರಾಯ .

ಓಟದ  ಸ್ಪರ್ಧೆಗಳು ಜೀವನ ಶ್ರೇಯಸ್ಸಿಗೆ ಕಾರಣವಾಗಬಹುದು. ಆದರೆ ಆತ್ಮೋನ್ನತಿಯತ್ತ ತಿರುಗಿದರೆ ಅದನ್ನು ಸಾಧಿಸಬಹುದು. ಆತ್ಮೋನ್ನತಿಗೆ ನಡೆ-ನುಡಿಗಳ ಹೊಂದಾಣಿಕೆಯೇ ಮುಖ್ಯ. ಅದ ಕಾರಣ ನಡೆಗೆ ಕಾರಣವೆನಿಸಿದ ಪಾದಗಳು ಸತ್ಪಥವನ್ನು ಬಿಡದಂತೆ ಸನ್ಮಾರ್ಗದಲ್ಲಿ ನಡೆಯಬೇಕು. ಮಹಾತ್ಮರ ನಡೆಯನ್ನು ಅನುಸರಿಸಿ ನಡೆಯಬೇಕು. ಸಜ್ಜನರ ನಡೆಯಲ್ಲಿ ಶಿವನಿರುತ್ತಾನೆಂಬ ಸರ್ವಜ್ಞನ ಈ ಮಾತು ಮನೋಜ್ಞವಾಗಿದೆ –

 

ಲಜ್ಜೆಯನು ತೊರೆದು ನೀ | ಹೆಜ್ಜೆಯನು ಸಾಧಿಪಡೆ

ಸಜ್ಜೆಯಲ್ಲಿ ಶಿವನ ಧರಿಸಿಪ್ಪ ಶರಣರ

ಹೆಜ್ಜೆಯಲಿ ನಡೆಯೋ ಸರ್ವಜ್ಞ

 

ಸಜ್ಜನರ ನಡೆಯನ್ನು ಅನುಸರಿಸುವಲ್ಲಿ ನಾಚಿಕೆಯನ್ನು ತೊರೆದು ಮುನ್ನಡೆಯಬೇಕು ನಿಜಗುಣರು ಶಿವನಲ್ಲಿ –

 

“ಶಾಂತರೊಸೆದಹುದೆಂದು ಬಣ್ಣಿಸುವ ವರ್ತನವನ್ನೇ ಬೇಡಿದ್ದಾರೆ.

ಇದುವೆ ನಿಜವಾದ ನಡೆಯಾಗಿದೆ. ಆಗ “ನುಡಿದಂತೆ ನಡೆ ಇದೇ ಜನ್ಮಕಡೆ” ಎಂಬ ಶರಣವಾಣಿ ಯಥಾರ್ಥವಾಗಿ ತೋರುವದು. ಮಹಾತ್ಮರ ನಡೆಯನ್ನು ಸಂಪೂರ್ಣವಾಗಿ ಅನುಸರಿಸಲು ಸಾಧ್ಯವಾಗದಿದ್ದರೂ ಸ್ವಲ್ಪಾದರು ಆಚರಿಸಲು ಪ್ರಯತ್ನಿಸುವವನಿಗೂ ಕೇಡಿಲ್ಲ. ಅದುಕಾರಣ ಮಹಾನುಭಾವರು ತೋರಿಸಿದ ಸನ್ಮಾರ್ಗವನ್ನು ಚಾಚೂ ತಪ್ಪದಂತೆ ನಡೆಯಬೇಕು. ಇಂಥ ನಡೆಯಲ್ಲಿ ಶಿವನು ಮನೆ ಮಾಡಿಕೊಂಡಿರುವನಲ್ಲದೆ ಶಿವಲಿಂಗದ ಸಾಕ್ಷಾತ್ಕಾರವಾಗುವದೆಂದು  ಶ್ರೀಗುರುರಾಯನು ಮನೋಜ್ಞವಾಗಿ ನುಡಿಯುತ್ತಾನೆ. ಶ್ರೀಗುರುವಿನ ತೇಜೋಮಯ ಶಿವಲಿಂಗದ ದರ್ಶನವಾಗಬಲ್ಲದು. ಓ ಗುರುವೆ ! ಎನ್ನ ಪಾದಂಗಳಲ್ಲಿ ಶಿವಲಿಂಗವನ್ನು ಕಾಣುವ ಒಳ್ನಡೆಯನ್ನು ಕರುಣಿಸು.