ಲೇಖಕರು

ಪೂಜ್ಯಶ್ರೀ ಸಿದ್ದೇಶ್ವರ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಬೂದಗುಂಪಾ

ಪ್ರಿಯ ಸಹೃದಯರೆ ಈ ಹುಟ್ಟು ಸಾವಿನ ಪ್ರಪಂಚದಲ್ಲಿ ನೊಂದು,ಬೆಂದ ಮಾನವರ ಕೂಗು,ಅಜ್ಞಾನ,ಅಂಧಶ್ರದ್ಧೆ,ಆರ್ತನಾದ ಹೀಗೆ ಬಳಲುತ್ತಿರುವ ಮರ್ತ್ಯಲೋಕದ ಮಹಾಮನೆಯ ಪುನರುಜ್ಜೀವನ ಗೊಳಿಸಲು ಪರಮಾತ್ಮ ಮಹಾತ್ಮರನ್ನ ಈ ಭುವಿಗೆ ಕಳಿಸುತ್ತಾನೆ. ಅಂತಹ ಮಹಾತ್ಮರ ಸಾಲಿನಲ್ಲಿ ಯುಗಪುರುಷ ಪೂಜ್ಯ ಶ್ರೀ ಕುಮಾರ ಶಿವಯೋಗಿಗಳು ಒಬ್ಬರು.ಇಂತಹ ಮಹಾತ್ಮರ ಪ್ರಭಾವದಿಂದ ಈ ಭೂಮಿಯ ನರ- ಹರನಾದ, ಜೀವ- ಶಿವನಾದ, ಮಾತು- ಮಂತ್ರವಾಯಿತು,ಸಮಾನತೆಯ ಬೆಳಕು ಹರಡಿತು,ನಿರ್ಮಲಭಾವ ಹುಟ್ಟಿತು, ಸ್ವಚ್ಛ ಆಚಾರ- ಉಚ್ಚ ವಿಚಾರ, ಸಕಲಜೀವಾತ್ಮರಿಗೆ ಲೇಸಬಯಸುವ ಮನೋಭಾವ ಹೀಗೆ ಹಲವಾರು ಉಚ್ಚ ವಿಚಾರಗಳ ಸರಮಾಲೆ ಜನ್ಮತಾಳಿತು.

  “ಕಾರ್ತಿಕದ ಕಗ್ಗತ್ತಲೆಯಲ್ಲಿ ಆಕಾಶದ ದೀಪವಾಗಿ ನೀ ಬಂದೆ”ಅನ್ನುವ ಕವಿವಾಣಿ ಪೂಜ್ಯರ ಜೀವನದಲ್ಲಿಯೂಕೂಡಾ ಅನ್ವಯವಾಗಿ ಅಕ್ಷರಶಃ ಸತ್ಯವಾಗಿದೆ.

ಶರಣ ವಾಣಿಯಂತೆ:- ಹೋನಿಂಗೆ ಬಂದಾತನಲ್ಲ, ಹೆಣ್ಣಿಂಗೆ ಬಂದಾತನಲ್ಲ, ಮಣ್ಣಿಂಗೆ ಬಂದಾತನಲ್ಲ,ಅಶನಕ್ಕೆ ಬಂದಾತನಲ್ಲ,ವ್ಯಸನಕ್ಕೆ ಬಂದಾತನಲ್ಲ,ಕೂಡಲಚನ್ನಸಂಗಯ್ಯ ಭಕ್ತಿಯ ಪಥವ ತೋರ ಬಂದನಯ್ಯ ನಮ್ಮ ಬಸವಣ್ಣ.

ಅವಿರಳಜ್ಞಾನಿ ಚನ್ನಬಸವೇಶ್ವರರು ತಿಳಿಸಿದಹಾಗೆ ಅಲ್ಲಿ ಬಸವಣ್ಣ ಭಕ್ತಿಯ ಪಥವ ತೋರ ಬಂದವನು,ಇಲ್ಲಿ ಕುಮಾರಶಿವಯೋಗಿಗಳು ಸ್ವಾಮಿತ್ವದ ಶಕ್ತಿಯ ಪಥವ ತೋರ ಬಂದವರು.

ಸ್ವಾಮಿತ್ವದ ಘನತೆ ಹೆಚ್ಚಿಸಲು ಶಿವಯೋಗ ಮಂದಿರವನ್ನು ಸ್ಥಾಪಿಸಿ ಅಲ್ಲಿ ಕರಗಿಹೋಗುವ, ಸೊರಗಿ ಹೋಗುವ, ಕಳೆದು ಹೋಗುವ ಭೌತಿಕ ಸಂಪತ್ತನ್ನು ಸಂಪಾದಿಸಲಿಲ್ಲ, ಸವೆಯದ, ಸಾಕೆನಿಸದಾ, ಕಳೆಗುಂದದ, ಮತ್ತೊಂದು ಬೇಕೆನಿಸದ, ಅಧ್ಯಾತ್ಮಿಕ ಜ್ಞಾನ, ಅರಿವು- ಆಚಾರ, ಯೋಗ- ಶಿವಯೋಗ, ವೇಷ್ಠಿಹಿತಕ್ಕಿಂತ-ಸಮಷ್ಠಿಹಿತ ಮುಖ್ಯ,ಸ್ಥಾನಮಾನಕ್ಕಿಂತ-ಸೇವಾಮನೋಭಾವ ಮುಖ್ಯ,ಜನ ನಾಯಕನಿಗಿಂತ-ಜನಸೇವಕ ಮುಖ್ಯ ಇಂತಹ ಸಂಪತ್ತನ್ನು ಗಳಿಸಿ ಈ ನಾಡಿಗೆ,ನುಡಿಗೆ,ಸಂಸ್ಕೃತಿಗೆ ಕೊಟ್ಟವರು ಕುಮಾರ ಶಿವಯೋಗಿಗಳು. ”      “ಉಣಗಲಿಸಿದ ನಮ್ಮ ಕುಮಾರ,

 ಉಡಗಲಿಸಿದ ನಮ್ಮ ಕುಮಾರ,

 ನುಡಿಗಲಿಸಿದ ನಮ್ಮ ಕುಮಾರ,

  ನಡೆಗಲಿಸಿದ ನಮ್ಮ ಕುಮಾರ “ಹೀಗೆ ಎಲ್ಲವನ್ನ ಕಲಿಸಿ ಅದರ ಅರಿವನ್ನ ಪಡೆದು, ಅನುಭವಿಸಿ, ಆಚರಿಸಿ ಅದರಂತೆ ಬಾಳಿಬದುಕಿ ಸಮಾಜಕ್ಕೆ ಮಾದರಿಯ ವ್ಯಕ್ತಿಗಳಾಗಿ, ಕೇವಲ ಸಮಾಜದ ವ್ಯಕ್ತಿಗಳಾಗಬೇಡಿ, ಸಮಾಜದ ಶಕ್ತಿಯಾಗಿ ಎನ್ನುವ ಉದಾತ್ತ ವಿಚಾರಗಳನ್ನು ನಾಡಿಗೆ ಬಿತ್ತರಿಸಿದ ಮಹಾಂತರು .

ಇಷ್ಟೆಲ್ಲ ವಿಷಯಗಳನ್ನ ಪೂಜ್ಯರ ಕುರಿತು ಹೇಳುವ ಉದ್ದೇಶ, ಪೂಜ್ಯರು ಶಿವಯೋಗಮಂದಿರ ಸ್ಥಾಪಿಸಿ ಇಲ್ಲಿಗೆ ನನ್ನ ಕೆಲಸ ಮುಗಿಯಿತು ಅಂತ ಕೈಚೆಲ್ಲಿ ಕುಳಿತವರಲ್ಲ, ಮಂದಿರಕ್ಕೆ ಬರುವ ಸಾಧಕ ವಟುಗಳಿಗೆ ವ್ಯವಸ್ಥೆ, ಬಂದ ಭಕ್ತರಿಗೆ ಅನ್ನ, ಅರಿವು, ಆನಂದ, ಆಶ್ರಯ, ಅನುಭವವನ್ನ ಕೊಡುವಂತಹ ಹಲವಾರು ಉದ್ದೇಶವನ್ನರಿಸಿಕೊಂಡು ಶಿವಯೋಗಮಂದಿರ ಸ್ಥಾಪನೆಯಾದ ಪ್ರಥಮ ಭಾಗದಲ್ಲಿ ಸಂಸ್ಥೆಯಲ್ಲಿ ಮುಖ್ಯವಾಗಿ 19 ಸದುದ್ದೇಶಗಳನ್ನ, ಉಪಾಯಗಳನ್ನ  ಜಾರಿಗೆ ತಂದರು. ಅವುಗಳು ಈ ಕೆಳಗಿನಂತಿವೆ.

1)ಶಿವಯೋಗ ಮಂದಿರ ಸಂಸ್ಥೆಗೆ ಅಧ್ಯಯನ ಗೈಯಲು ಬಂದು ಉತ್ತಮ ಸಂಸ್ಕಾರಪಡೆದು, ಯೋಗ್ಯ ಮಠಾಧಿಪತಿಗಳಾಗಲು,ಸಮಾಜಸೇವಾ ದೀಕ್ಷೆ ಪಡೆಯಲು ಸಂಸ್ಥೆಗೆ  ಸಂಸ್ಥೆಗೆ ಬಂದ 12 ವರ್ಷದವರಿಗೆ ವಟುಗಳೆಂದು, ಮುಂದೆ ಸಂಸ್ಥೆಯ ಸಂಸ್ಕಾರದಲ್ಲಿ ನುರಿತವರ್ಗೆ ಸಾಧಕರೆಂದು ಕರೆಯುವುದು.

ವಟುಗಳು,ಸಾಧಕರು,ವ್ಯಸ್ಥಾಪಕರು,ಅನುಭಾವಿಗಳು,ಸನ್ನುತ ಅಧ್ಯಾಪಕರು,ಗ್ರಂಥ ಶೋಧಕರು, ಬಹುಮನ್ನಣೆಯನ್ನಪಡೆದ  ಸೇವಕರನ್ನ ಹೀಗೆ ಏಳು ವರ್ಗಗಳನ್ನ ಪೂಜ್ಯರು ಸಂಸ್ಥೆಯಲ್ಲಿ ತೂಡಕಾಗದಂತೆ ನಿಯಮಿಸಿದರು.

2)ಅಲ್ಲಿ ಅಧ್ಯಯನ ಗೈಯುವಂತಹ ಗುರುಚರವರೇಣ್ಯರು ಸದಾಚಾರ,ಸುಜ್ಞಾನ,ನಿರುಪಮ ವಿರಕ್ತಿಗಳಾಗಿರಬೇಕು, ಸದ್ಭಕ್ತಿ ಷಟ್ಸ್ಥಲಶಾಸ್ತ್ರ ಪರಿಣತೆ ಹೊಂದಿರಬೇಕು, ಸುಭಾಷಣ, ದ್ವೈತಾದಿ ಸಿದ್ಧಾಂತ ಸುವಿಚಾರ, ಯೋಗನೀತಿ,ಕರುಣಾದಿ ಸದ್ಗುಣಗಳಿಂದಕೂಡಿ,ಮುಂದೆ ಶಿವಮತವನುದ್ದರಿಸಬೇಕೆಂಬುದೊಂದು ಪೂಜ್ಯರ ಮಹದೊದ್ದೇಶ.

3)ಸಂಸ್ಥೆಗೆ ಬಂದ ವಟುಗಳನ್ನ ಬಿಡದೆ ಇರಿಸಿಕೊಂಡು ಅವರಿಗೆ ಸರಿಯಾಗಿ ನ್ಯಾಯ,ವ್ಯಾಕರಣ,ವೇದಾಂತ ಶಾಸ್ತ್ರಗಳ ಪರಿಚಯಮಾಡಿಕೊಟ್ಟು,ಧರ್ಮ ಗ್ರಂಥಗಳ ಪರಿಕರಗಳಾದ ಆಗಮ, ಆಮ್ನಾಯ,ಉಪನಿಷತ್ತು, ಸ್ಮೃತಿ,ಇತಿಹಾಸ,ಪುರಾಣ, ಶರಣರ ವಚನವನೋದಿಸಿ, ಜೋತೆಗೆ ಲಿಂಗಾಂಗ ಸಾಮರಸ್ಯ ಜ್ಞಾನವನ್ನ ಕೊಟ್ಟು ಹೀಗೆ ಎಲ್ಲ ವಿಷಯವನ್ನ ಅರಿಯುವತನಕ 25ವರ್ಷ ಅಥವಾ 35,45,ವರ್ಷಗಳವರೆಗೆ ಇದ್ದು,ಬ್ರಹ್ಮಚರ್ಯಾದಿ ಸದ್ಗುಣ ವೃತ್ತಿ ಗಳಿಸಿಕೊಂಡು ಶಿವಯೋಗಿಯಾಗಿ,ಗುರುಜಂಗಮರ ಮಂಗಲಪೀಠಕ್ಕೆ  ಅಧಿಕಾರಿಯಾಗಬೇಕೆಂಬುವದೊಂದು ಶ್ರಿಸಂಸ್ಥೆಯ ಉದ್ದೇಶ.

4) ಅಲ್ಲಲ್ಲಿ ಶಿವಯೋಗ ಮಂದಿರದ ಶಾಖೆಗಳು ಸಲ್ಲಲಿತವಾಗಿ, ಶೋಭನಾಶ್ರ ಮವಾಗಿ ನೆಲೆಸಬೇಕು ಅಲ್ಲಿ ಸರ್ವರಿಗೂ ಶಿವಾನುಭವ ಬೋಧೆದೊರೆಯಬೇಕು.

ಮಂದಿರಕ್ಕೆ ಬಂದವರಿಗೆ ಓದಲು ಅನುಕೂಲವಾಗುವ, ಎಲ್ಲ ಧರ್ಮಗ್ರಂಥಗಳುಳ್ಳ

ಸದ್ವಾಚನಾಲಯವನ್ನ ಬಲ್ಲವರು ಮನವಪ್ಪುವಂತೆ ನಿರ್ಮಿಸಬೇಕು .

5)ಮತಾಸುಧಾರಣೆಗೆ ಅವಶ್ಯವೇನಿಸುವ ಸದ್ವಿಷಯಗಳನ್ನೊಳಗೊಂಡ ಕೀರ್ತನೆಗಳನ್ನು ರಚಿಸಿ ಕೇಳುಗರಿಗೆ ಪ್ರಿಯವಾಗಿ ಹೇಳುವ ಪುರಾಣಿಕರನ್ನ, ಪ್ರವಚನಕಾರನ್ನ ಘನವಾಗಿ ಹೆಚ್ಚಿಸುವುದು .

6)ನುತದಾರ್ಮಿಕ,ವ್ಯಾವಹಾರಿಕ,ಮಹಾಶಾಸ್ತ್ರಮತಿಯುಳ್ಳ ಬೋಧಕರನ್ನ ಎಲ್ಲ ಕಡೆಗಳಲ್ಲಿ ಕಳುಹಿಸಿ ಅವರ ಸತತ ಉಪದೇಶದಿಂದ ಜನರನ್ನ,ಸಮಾಜವನ್ನ ಎಚ್ಚರಿಸುವಂತೆ ಮಾಡುವದೊಂದು  ಸದುಪಾಯ.

7)ಮಂದಿರದಲ್ಲಿ ಗೋ ಶಾಲೆ ಸ್ಥಾಪಿಸಿ ಆ ಎಲ್ಲ ಗೋವುಗಳ ಗೋಮಯದಿಂದ ತನ್ಮೂಲಕ ವೀರಶೈವರಿಗೆ ಮುಖ್ಯವಾದ ಅಷ್ಟಾವರಣಗಳಲ್ಲಿ ಒಂದಾದ ಭಸ್ಮವನ್ನ ವಿಧ್ಯುಕ್ತವಾಗಿ ರಚಿಸಿ,ಅಷ್ಟೇ ಅಲ್ಲದೆ ಆ ಭಸ್ಮ ರಚನಾಕ್ರಮವನ್ನ ಬೇರೆ ಸ್ಥಳಗಳಲ್ಲಿಯೂ ಪರಿಶುದ್ಧವಾದ ರೀತಿಯಿಂದ ತಯಾರಿಸುವುದಕ್ಕೆ ಮಾರ್ಗದರ್ಶನ ನೀಡುವುದು .

8)ಶಿವಮತಿಯರಿಗೆ  ಅತ್ಯಂತ ಅವಶ್ಯವಾಗಿರುವ,ಜೀವನರೂಪವಾಗಿರುವ          ಇಷ್ಟಲಿಂಗವನ್ನ ಕ್ರಮತಪ್ಪದೆ ಶಾಸ್ತ್ರೋಕ್ತ ರೀತಿಯಿಂದ ಪಂಚಸೂತ್ರ ಲಿಂಗಗಳನ್ನ ಸುವಿಚಾರವಾಗಿ ಲಿಂಗಗಳನ್ನ ತಯಾರುಮಾಡುವ ಶಾಲೆ ಮಂದಿರದೊಳಗಾಗಬೇಕು  ಆ ಕ್ರಮವನ್ನೇ ಸರ್ವತ್ರ ಪ್ರಚಾರದಲ್ಲಿ ತರುವುದೊಂದು ಉಪಾಯ.

9) ಶಿಕ್ಷಕರು, ಸರ್ಕಾರಿ ಉದ್ಯೋಗಸ್ಥರು ವರ್ಷಕ್ಕೆ ಒಂದು ತಿಂಗಳು ರಜೆಯನ್ನ ಪಡೆದು ಅಥವಾ ಅನುಕೂಲವಿದ್ದ ಕಾಲದಲ್ಲಿ ಮಂದಿರಕ್ಕೆ ಬಂದು ಮತತತ್ವ ವಿಚಾರ ಮಾಡಿಕೊಂಡು ಹೋಗಿ ತಾವು ವಾಸಿಸುವ ಗ್ರಾಮದ ಮತ್ತು ನೆರೆಹೊರೆಯ ಗ್ರಾಮ ಗಳ ಭಕ್ತರಿಗೆ ನಮ್ಮ ವೀರಶೈವ ಧರ್ಮದ ಕುರಿತು ಉಪನ್ಯಾಸವನ್ನ ಪ್ರಾಕೃತ ಭಾಷೆಯಲ್ಲಿ ಸುಲಭ ಶೈಲಿಯಿಂದ ಸರ್ವರಿಗೂ ತಿಳಿಯುವಂತೆ ಹೇಳಿ ಶಿವಾನುಭವ ವಿಷಯ ಕುರಿತು ಚಿಕ್ಕ ಚಿಕ್ಕ ಪುಸ್ತಕಗಳನ್ನ ರಚಿಸಿ ಧರ್ಮ ತತ್ವವನ್ನ ಸರ್ವತ್ರ ವ್ಯಾಪಿಸುವಂತೆ ಮಾಡುವುದು.

10) ವೃದ್ಧರಾದ ಭಕ್ತ ಮಾಹೇಶ್ವರರು, ಹಾಗೂ ಮುಮುಕ್ಷುಗಳು ಮಂದಿರಕ್ಕೆ ಬಂದು ಶಿವಾನುಭವ ಶಾಸ್ತ್ರಗಳನ್ನು ಓದಿ, ಕೇಳಿ ತಿಳಿದುಕೊಂಡು ತಮ್ಮ ಬಂಧುಬಳಗದವರಿಗೆ, ಪರಿಚಿತರಿಗೆ ಜೊತೆಗೆ ಸ್ತ್ರೀಯರಿಗೆ ಮತಧರ್ಮ ಜ್ಞಾನವನ್ನು ಪಸರಿಸುವಂತೆ ಮಾಡುವುದು, ಜೊತೆಗೆ ಶಿವಯೋಗ ಸಾಧನಾಸಕ್ತರಿಗೆ ಮಂದಿರದಲ್ಲಿ ಸ್ಥಿರವಾಗಿರಲಿಕ್ಕೆ ಮಂದಿರದ ನಿಯಮಕ್ಕನುಸರಿಸಿ ಅನುಕೂಲ ಪಡಿಸುವುದು.

11) ಧರ್ಮ ಪ್ರಸಾರವನ್ನು ಮಾಡುವುದಕ್ಕೆ ಮುಖ್ಯವಾದ ಶಿವ ಕೀರ್ತನೆ, ಶಿವ ಭಜನೆ, ಶಿವ ಪುರಾಣ ಮುಂತಾದ ಅನೇಕ ಮಾರ್ಗಗಳಿಂದ ಹೆಚ್ಚುಹೆಚ್ಚಾಗಿ ಶೀಘ್ರವಾಗಿ ಧರ್ಮಬೋಧನೆ ಮಾಡಬಹುದು, ಅವುಗಳಿಗೆಲ್ಲ ಸಾಧನವಾದ ಸಂಗೀತ ವಿದ್ಯೆಯನ್ನು ತಕ್ಕವರಿಗೆ ಕಲಿಸುವಂತೆ ಅನುಕೂಲ ಮಾಡಿಕೊಡುವುದು.

12) ಕೃಷಿ ಕಾದಿ ಕಾಯಕ, ಒಕ್ಕಲುತನ, ವ್ಯಾಪಾರ ಮಾಡುವಂತಹ ಜನರು ಅನುಕೂಲ ಕಾಲದಲ್ಲಿ ಶಿವಯೋಗ ಮಂದಿರಕ್ಕೆ ಬಂದು ಸಾಧ್ಯವಾದ ಮಟ್ಟಿಗೆ ಧರ್ಮಜ್ಞಾನ ಮಾಡಿಕೊಳ್ಳುವಂತೆ ಏರ್ಪಡಿಸುವುದು, ಅನುಕೂಲ ಮಾಡುವುದು.

13) ಅನಾದಿಕಾಲದಿಂದ ಬಂದ ವೀರಶೈವ ಮತ ಬೋಧಕ ಕಾರ್ಯವನ್ನು ಕೈಕೊಂಡ  ಕಾಯಕದ ಗಣಂಗಳು ತಮ್ಮ ಕರ್ತವ್ಯವನ್ನು ಮರೆತು, ಕೇವಲ ತಮ್ಮ ಹೊಟ್ಟೆ ಹೊರೆದುಕೊಳ್ಳುವುದಕ್ಕೆ ರೂಪದಾರಿಗಳಾಗಿ ಮಾತ್ರ ಸಂಚರಿಸಿ, ದುಡ್ಡು ಸೆಳೆಯುತ್ತಿರುವರು ಇಂತಹ ದುಸ್ತರಪರಿಸ್ಥಿತಿ ನೋಡಿ ಪೂಜ್ಯರು ನಮ್ಮ ಪುರಾತನರು ಈ ಕಾಯಕ ಸ್ಥಾಪನೆಮಾಡಿದ ಉದ್ದೇಶ ಉದಾತ್ತತತ್ವವನ್ನು ಪ್ರಚಾರದಲ್ಲಿ ತರುವುದಕ್ಕಾಗಿ, ಇಂತಹ ವೇಷಧಾರಿಗಳನ್ನು ಶಿವಯೋಗ ಮಂದಿರಕ್ಕೆ ಬರಮಾಡಿಕೊಂಡು, ಅವರಿಗೆ ತಕ್ಕಶಿಕ್ಷಣವನ್ನು ಕೊಟ್ಟು, ಅವರ ಸ್ಥಿತಿಯನ್ನು ಸುಧಾರಿಸಿ ಬಳಿಕ ಅವರವರ ಕಾಯಕಗಳನ್ನು ಮಾಡಲಿಕ್ಕೆ ಅಪ್ಪಣೆಕೊಟ್ಟು ಶಿವ ಧರ್ಮವನ್ನು ಪ್ರಚಾರ ಪಡಿಸುವಂತೆ ಮಾಡುವುದು.

14) ವೀರಶೈವಧರ್ಮ ಜೀವನದ ರೂಪವಾದ ಅತ್ಯಂತ ಮುಖ್ಯವಾದ ಲಿಂಗಧಾರಣೆ, ಲಿಂಗಪೂಜೆ ಮುಂತಾದ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಯೊಂದು ಗ್ರಾಮದ ಗುರು ಸ್ಥಳದ ಮಹೇಶ್ವರರಿಗೆ (ಅಯ್ಯನವರಿಗೆ) ಅಭ್ಯಾಸ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟು ಅವರಿಂದ ಆ ಎಲ್ಲ ವಿಧಿಗಳನ್ನು ಶಾಸ್ತ್ರೋಕ್ತವಾಗಿ ಪ್ರಚಾರಕ್ಕೆ ತರುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದು.

15) ಸಂಸ್ಕೃತ ಭಾಷೆಯಲ್ಲಿರುವ ವೀರಶೈವ ಧರ್ಮಶಾಸ್ತ್ರ ಪ್ರಮಾಣಗ್ರಂಥಗಳನ್ನು, ಎಲ್ಲರೂ ಓದಿ ತಿಳಿದು ನಡೆಯಲಿ ಎಂಬ ದೂರದೃಷ್ಟಿಯಿಂದ ಸಂಸ್ಕೃತ ಪಂಡಿತರಿಂದ ಕನ್ನಡ ಭಾಷೆಗೆ ಪರಿವರ್ತನಗೊಳಿಸಿ, ಮುದ್ರಣವ ಮಾಡಿಸಿ ಆ ಗ್ರಂಥಗಳು ಎಲ್ಲರಿಗೂ ಅಲ್ಪಬೆಲೆಗೆ ಸಿಗುವಂತೆ ಮಾಡುವುದು.

16) ಪೂಜ್ಯರು ಸಂಸ್ಕೃತ ಗ್ರಂಥಗಳನ್ನು ಕೇವಲ ಕನ್ನಡಭಾಷೆಗೆ ಪರಿವರ್ತನೆ ಗೊಳಿಸುವುದು ಅಷ್ಟೇ ಅಲ್ಲ, ಇಂಗ್ಲಿಷ್ ಪಂಡಿತರನ್ನು ಶಿವಯೋಗ ಮಂದಿರಕ್ಕೆ ಕರೆಯಿಸಿಕೊಂಡು, ಮತಶಾಸ್ತ್ರ ಧರ್ಮಗ್ರಂಥಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆಯಿಸಿ, ಜೊತೆಗೆ ಆ ಇಂಗ್ಲಿಷ ಪಂಡಿತ ರಿಂದಲೇ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ತಿಳಿಯುವಂತೆ ಉಪನ್ಯಾಸದ ಮೂಲಕ ಧರ್ಮಸಂಬಂಧದ  ವ್ಯಾಖ್ಯಾನಗಳನ್ನು ಕೊಡಿಸಿ, ಜೊತೆಗೆ ದೇಶದೆಲ್ಲೆಡೆ ನಡೆಯುವ ಧರ್ಮ ಪರಿಷತ್ತುಗಳಿಗೆ ಕಳುಹಿಸಿ ತತ್ವ ಪ್ರಚಾರ ಮಾಡುತ್ತ, ತಕ್ಕ ಪ್ರಸಂಗಗಳನ್ನು ನೋಡಿ ಇಂಗ್ಲಿಷ್ ಭಾಷೆಯಲ್ಲಿ ಸರ್ಕಾರಕ್ಕೆ ಧರ್ಮರಕ್ಷಣೆಯಬಗ್ಗೆ ಬೇಕಾಗುವ ಯಥಾರ್ಥ ಮಾಹಿತಿಯನ್ನ ಪತ್ರಗಳ ಮೂಲಕ ತಿಳಿಸುವುದು, ಜಗತ್ತಿನಲ್ಲಿ ನಡೆಯುವ ಧರ್ಮ ಸಂಸ್ಥೆಗಳ ಪರಿಚಯವನ್ನು ಮಾಡಿಕೊಂಡು, ಅವರ ಜೊತೆಗೆ ಪತ್ರ ವ್ಯವಹಾರ ನಡೆಸುವಂತೆ ಮಂದಿರದಲ್ಲಿ ವ್ಯವಸ್ಥೆ ಮಾಡುವುದು.

17) ವೀರಶೈವಮತ ಪರವಾದ ಭಾಷೆಗಳು, ಆಗಮಗಳು, ಉಪನಿಷತ್ತುಗಳು, ಜೊತೆಗೆ ಈ ಮತದ ಪೂರ್ವಿಕರಿಂದ ಕ್ರೋಡಿಕರಿಸಲ್ಪಟ್ಟ ಅನೇಕ ಸಂಸ್ಕೃತ, ಕನ್ನಡ ಗ್ರಂಥಗಳನ್ನು, ತಾಡೋಲೆಗಳನ್ನು, ಎಲ್ಲೆಡೆ ಶೋಧಿಸಿ ಸರಿಯಾಗಿ ಮುದ್ರಣ ಗೊಳಿಸಿ ತನ್ಮೂಲಕ ಎಲ್ಲೆಡೆ ಧರ್ಮಸಿದ್ಧಾಂತ ಪ್ರಚಾರ ಮಾಡಿಸುವುದು.

18) ಬರೀಸಂಸಾರದಲ್ಲಿ ಇದ್ದರೆ ಏನಾಯ್ತು ಸಾಧ್ಯವಾದ ಭಕ್ತ ಮಾಹೇಶ್ವರರಲ್ಲಿ ಸಂಸಾರಿಗಳಾದರೂ ಬ್ರಹ್ಮಚರ್ಯ ಪಾಲನೆ ಮಾಡಿದ ಭಕ್ತ ಮಹೇಶ್ವರರಿಗೆ ಮಂದಿರದಲ್ಲಿ ಸಾಧ್ಯವಾದ ಮಟ್ಟಿಗೆ ಶಿವಮತ ತತ್ವಗಳನ್ನು ಅಭ್ಯಾಸ ಮಾಡಲಿಕ್ಕೆ ಅನುಕೂಲ ಮಾಡಿಕೊಡುವುದು, ಜೊತೆಗೆ ವೀರಶೈವಮತ ಧರ್ಮವನ್ನ  

ಸೂಕ್ರಮದಿಂದ ಪ್ರಚಾರಕ್ಕೆ ತರಲಿಎಂಬ ಭಾವದಿಂದ, ಧರ್ಮಗ್ರಂಥಗಳ ಅಭ್ಯಾಸದ ಜೊತೆಗೆ ಪರೀಕ್ಷೆಯನ್ನ ಇಟ್ಟು ಆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಂದಿರದಲ್ಲಿ ನಡೆಯುವ ಪ್ರಮುಖ ಸಭೆಯಲ್ಲಿ ತಕ್ಕ ಬಹುಮಾನವನ್ನು ನೀಡಿ, ಧರ್ಮದ ವಿಷಯದಲ್ಲಿ ಅವರಿಗೆ ಉತ್ತೇಜನ ಮಾಡುತ್ತಾ, ಪ್ರೋತ್ಸಾಹಿಸುವುದೊಂದುಪಾಯ.

19) ವರ್ಷಕ್ಕೊಮ್ಮೆ ಶಿವರಾತ್ರಿಯಲ್ಲಿ ಎಲ್ಲ ಜನರನ್ನ ಮಂದಿರಕ್ಕೆ ಬರಮಾಡಿಕೊಂಡು ಧರ್ಮಜ್ಞರಾದ ವಿದ್ಯಾವಂತರಿಂದ, ಪಂಡಿತರಿಂದವ್ಯಾಖ್ಯಾನ, ಕೀರ್ತನ, ಪುರಾಣ, ಶಿವಭಜನೆ, ಪ್ರವಚನ, ಸಂಗೀತಾದಿಗಳಿಂದ  ಹೀಗೆ ಮುಂತಾದ ದ್ವಾರಗಳಿಂದ ಶಿವಯೋಗ ಮಂದಿರದಲ್ಲಿ ಪ್ರತಿವರ್ಷ ಧರ್ಮಬೋಧನೆ ಕಾರ್ಯ ನಡೆಯುತ್ತಿರಬೇಕು.

 ಹೀಗೆ ಕುಮಾರ ಶಿವಯೋಗಿಗಳು ಕೇವಲ ಮಂದಿರವನ್ನ ಸ್ಥಾಪಿಸಿ ಸುಮ್ಮನೆ ಕುಳಿತವರಲ್ಲ.ಅಲ್ಲಿ ಪ್ರತಿದಿನ ಯಾವೆಲ್ಲ ಕಾರ್ಯಗಳು ನಡೆಯುತ್ತಿರಬೇಕು,ಅಲ್ಲಿನ ವ್ಯವಸ್ಥೆ ಹೇಗಿರಬೇಕು ಎಂಬುವದನ್ನು  ಮೊದಲೇ ತಮ್ಮ ಅಂತಃಚಕ್ಷುವಿನಿಂದ ಕಂಡು ಶಿವಯೋಗ ಮಂದಿರದಲ್ಲಿ 19 ಉಪಾಯಗಳನ್ನ, ಧ್ಯೇಯೋದ್ದೇಶಗಳನ್ನ  ನಿರ್ಣಯಮಾಡಿದರು ಇದುವೇ ಕುಮಾರಶಿವಯೋಗಿಗಳ ದೂರದೃಷ್ಟಿ . ಇಂತಹ ದೂರದೃಷ್ಟಿಯನ್ನ ಇಟ್ಟುಕೊಂಡು  ಮಂದಿರವನ್ನ ಸ್ಥಾಪಿಸಿದ್ದರಿಂದಲೇ  ಇಂದಿಗೂ ಒಂದುನೂರಾಹದಿಮೂರು ವಸಂತಗಳನ್ನು ಯಾವುದೇ ವಿಘ್ನವಿಲ್ಲದೆ ಸಾಗಿಬಂದೆದೆ ಅಂದ್ರೆ ಅದು ಕುಮಾರಶಿವಾಯೋಗಿಗಳ ಶಕ್ತಿ,  ಇಚ್ಛಾಶಕ್ತಿ, ಸಂಕಲ್ಪಶಕ್ತಿ,ಕ್ರಿಯಾಶಕ್ತಿ, ಈ ಮೂರು ದಿವ್ಯಶಕ್ತಿಗಳ ಪುಣ್ಯ ಸಂಗಮವೇ ಶಿವಯೋಗಮಂದಿರ ಸಂಸ್ಥೆ..  ಈ ಸಂಸ್ಥೆಯನ್ನ ಸ್ಥಾಪಿಸುವಾಗ ಪೂಜ್ಯರು ಹಲವಾರು ಕಷ್ಟ,ನಷ್ಟ,ನೋವನ್ನ ಅನುಭವಿಸುತ್ತಾ,ಯಾರ ಮನಸ್ಸನ್ನು ನೋಯಿಸದೆ ನಗುನಗುತಾ ಬಾಳಿ ಬದುಕಿದ ಮಹಾಚೇತನ,ಕಾವಿ ಲೋಕದ ತಂದೆ ಕುಮಾರ ಶಿವಯೋಗಿಗಳು.

         ಸಿದ್ದನೆಂದರೆ ಯಾರು ಮನವನೋಯಿಸದಾತ

             ನೂರುನೋವನು ಸಹಿಸಿ ನಗುತಲಿರುವಾತ,

         ಒಂದಾದ ನಡೆ-ನುಡಿಗೆ, ದಿಕ್ಕು-ದಶೆ ತೋರ್ವಾತ

              ಪರಮಗುರು ಆ ಸಾಧು  – ಮುದ್ದುರಾಮ

ಮಾಹಿತಿ ಆಧಾರ:  ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ರೇಣುಕಾಚಾರ್ಯರು ವೀರಶೈವ ಪಂಚಾಚಾರ್ಯರಲ್ಲೊಬ್ಬರು. ಅವರು ಕೈಲಾಸದ ಪ್ರಮಥರಲ್ಲಿ ಒಬ್ಬರು. ಪಾಲ್ಕುರಿಕೆ ಸೋಮನಾಥನ ಗಣಸಹಸ್ರದಲ್ಲಿ ಪ್ರಮಥಗಣರಲ್ಲಿ ಇವರ ಉಲ್ಲೇಖವಿದೆ. ಇವರನ್ನು ಕುರಿತು ಸಂಸ್ಕೃತದಲ್ಲಿ ರೇಣುಕಾಗಸ್ತ್ಯ ಎಂಬ ಗ್ರಂಥವಿದೆ. ಇದರಲ್ಲಿ ವೀರಶೈವ ಏಕೋತ್ತರ ಷಟ್‍ಸ್ಥಲಗಳನ್ನು ವಿಸ್ತಾರವಾಗಿ ನಿರೂಪಿಸಲಾಗಿದೆ.

ಆಗಮಗಳ ಪ್ರಕಾರ ರೇಣುಕಾಚಾರ್ಯರು ಈಗಿನ ಆಂಧ್ರ ಪ್ರಾಂತ್ಯದಲ್ಲಿನ ಕೊಲ್ಲಿಪಾಕಿ ಎಂಬಲ್ಲಿ ಜನಿಸಿದರು. ಇವರು ಮಲಯಾಚಲದಲ್ಲಿ ಅಗಸ್ತ್ಯರಿಗೆ  ತತ್ತ್ವೋಪದೇಶ ಮಾಡಿದರೆಂಬ ಹೇಳಿಕೆ ಇದೆ. ಅನಂತರ ಲಂಕೆಗೆ ಹೋಗಿ ರಾವಣನ ತಮ್ಮ ವಿಭೀಷಣನ ಇಷ್ಟದಂತೆ ಮೂರುಕೋಟಿ ಲಿಂಗಗಳನ್ನು ಸ್ಥಾಪಿಸಿದರಂತೆ. ಇವರ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಚೋಳರೇಣುಕ ಸಂವಾದ ಗ್ರಂಥ ಸಂಸ್ಕೃತದಲ್ಲಿದೆ. ಇದನ್ನು ರೇಣುಕಾಚಾರ್ಯರ ಅವತಾರವೆನಿಸಿದ ರೇವಣಸಿದ್ಧರು (12ನೆಯ ಶತಮಾನ) ಕಂಚಿಯ ರಾಜೇಂದ್ರ ಚೋಳನಿಗೆ ಉಪದೇಶಿಸಿದ ಗ್ರಂಥವೆಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ರೇಣುಕಾಚಾರ್ಯ (ಸಿದ್ಧರೇವಣ)ರನ್ನು ಮಹಾನ್ ಸಿದ್ಧಪುರುಷರೆಂದು  ಉಲ್ಲೇಖಿಸಲಾಗಿದೆ.

ರೇಣುಕಾಚಾರ್ಯರನ್ನು ಪುರಾಣದೊಂದಿಗೆ ಬೆಸೆದಿರುವುದರಿಂದ  ಚಾರಿತ್ರಿಕವಾಗಿ ಇವರ ಬಗ್ಗೆ ಖಚಿತವಾದ ವಿಚಾರಗಳು ಲಭ್ಯವಾಗಿಲ್ಲ. ಅನೇಕ ವೀರಶೈವ ಮಠಗಳಲ್ಲಿ ರೇಣುಕಾಚಾರ್ಯರ ಲಿಂಗೋದ್ಭವಲೀಲೆಯ ಮೂರ್ತಿಪೂಜೆ ನಡೆಯುತ್ತಿದೆ.

ರೇವಣಸಿದ್ಧ

ರೇವಣಸಿದ್ಧ ಸು.10-12ನೆಯ ಶತಮಾನದಲ್ಲಿ ಕಲ್ಯಾಣದ ಪರಿಸರದಲ್ಲಿ ಜನ್ಮವೆತ್ತಿ ವಿಭೂತಿಪುರುಷರಾಗಿ ಮೆರೆದು ಸಮಾಜಸೇವೆ ಸಲ್ಲಿಸಿ ಬಯಲಾದರೆನ್ನಲಾದ ಪ್ರಸಿದ್ಧ ವೀರಶೈವ ಆಚಾರ್ಯರು. ಇವರ ಜೀವನದ ಚಾರಿತ್ರಿಕ ಅಂಶಗಳು ಪೌರಾಣಿಕಾಂಶಗಳೊಂದಿಗೆ ಬೆರೆತು ಮಸುಕಾಗಿವೆ. ಸಂಪ್ರದಾಯದ ಪ್ರಕಾರ ರೇವಣಸಿದ್ಧರು ವೀರಶೈವ ಪಂಚಾಚಾರ್ಯರಲ್ಲೊಬ್ಬರು. ಸು. 12ನೆಯ ಶತಮಾನದ ಸಿರಿವಾಳ ಶಾಸನದಲ್ಲಿ ಸಿದ್ಧರೇವಣ, ರೇವಣಾಚಾರ್ಯರನ್ನು (ರೇಣಕಾಚಾರ್ಯ) ಮಹಾನ್ ಸಿದ್ಧಪುರುಷರೆಂದು ಉಲ್ಲೇಖಿಸಲಾಗಿದೆ. ಇವರನ್ನು ಕೈಲಾಸದ ಪ್ರಮಥ ರೇಣುಕನೊಂದಿಗೆ ಹೋಲಿಸಲಾಗಿದೆ. ಬಸವಾದಿಗಳಿಗೆ ಸಮಕಾಲೀನರಾಗಿದ್ದು ಧರ್ಮಗುರು ವೆನಿಸಿದ್ದ ರೇವಣಸಿದ್ಧರೇ ಈ ಸಿದ್ಧರೇವಣ್ಣ. ಆದರೆ ಸಿದ್ಧರಾಮ, ಆದಯ್ಯ ಇವರ ವಚನಗಳಲ್ಲಿ ರೇವಣಸಿದ್ಧರ ಉಲ್ಲೇಖವಿದೆ. ಶಿವತತ್ತ್ವರತ್ನಾಕರದ ಕರ್ತೃ ಬಸವಭೂಪಲನು ರೇವಣಸಿದ್ಧೇಶ್ವರರು ಶೃಂಗೇರಿಯ ಪ್ರಸಿದ್ಧ ಚಂದ್ರಮೌಳೀಶ್ವರ ಲಿಂಗದ ದಾತೃವೆಂದು ಉಲ್ಲೇಖಿಸಿದ್ದಾನೆ.

ಹರಿಹರಾದಿಗಳು ತಿಳಿಸುವಂತೆ ರಾಜೇಂದ್ರ ಚೋಳ ರೇವಣಸಿದ್ಧರ ಸಮಕಾಲೀನ.

ಬಸವಣ್ಣನವರ ಅನಂತರ ವೀರಶೈವಧರ್ಮದ ಪುನರುಜ್ಜೀವನವನ್ನು ಕೈಗೊಳ್ಳಲು ಧಾರ್ಮಿಕ ಕ್ರಾಂತಿಯನ್ನು ಮುಂದುವರಿಸಲು ವೀರಶೈವರು ರುದ್ರಮುನಿಯನ್ನು ನಾಯಕನನ್ನಾಗಿ ಆರಿಸಿದರಂತೆ. ಆ ರುದ್ರಮುನಿ ರೇವಣಸಿದ್ಧರ ಔರಸಪುತ್ರ. ಈ ಸಂಗತಿ ಚಾರಿತ್ರಿಕವಾದ್ದು. ಕಲ್ಯಾಣದ ಬಿಲ್ವವನದ ಮಧ್ಯೆ ಈಗಲೂ ಇರುವ ರುದ್ರಮುನಿ ಗುದ್ದುಗೆ ಇದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಕಲ್ಯಾಣದ ಸಮೀಪದಲ್ಲಿ ಸಿದ್ಧಗಿರಿಯೆಂದು ಹೆಸರಾದ ತಾಣ ಈ ರೇವಣಸಿದ್ಧರ ತಪೋಭೂಮಿ ಎನ್ನಲಾಗಿದೆ. ಇವಲ್ಲದೆ ರೇವಣಸಿದ್ಧ ಗದ್ದುಗೆ, ರುದ್ರಮುನಿಗದ್ದುಗೆ ಎಂಬ ತೋರು ಗದ್ದುಗೆಗಳು ಕರ್ನಾಟಕದಲ್ಲಿ ಅನೇಕವಿವೆ. ಬೆಂಗಳೂರು ತಾಲ್ಲೂಕಿನ ರಾಮನಗರದ ಬಳಿ ಇರುವ ರೇವಣಸಿದ್ಧೇಶ್ವರ ಬೆಟ್ಟ ಆ ಭಾಗದಲ್ಲಿ ಪವಿತ್ರ ಕ್ಷೇತ್ರವಾಗಿ ಇಂದಿಗೂ ಪ್ರಸಿದ್ಧವಿದೆ. ರೇವಣಸಿದ್ಧರಿಂದ ರಚಿತವಾದ ಗ್ರಂಥಗಳ ಬಗ್ಗೆಯಾಗಲೀ ಅವರ ವೈಯಕ್ತಿಕ ಜೀವನದ ಹೆಚ್ಚಿನ ವಿವರಗಳಾಗಲೀ ತಿಳಿದುಬಂದಿಲ್ಲ.

ಲೇಖಕರು :

ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ

ಶ್ರೀ ಗುರುವೇ ಎನಗೆ ಕಾಯವು, ಶ್ರೀ ಗುರುವೇ ಎನಗೆ ಪ್ರಾಣವು ಶ್ರೀ ಗುರುವೇ ಎನಗೆ ಇಹವು,  ಶ್ರೀ ಗುರುವೇ ಎನಗೆ ಪರವು, ಶ್ರೀಗುರುವೇ ಎನಗೆ ಗತಿಯು, ಶ್ರೀ ಗುರುವೇ ಎನಗೆ ಮತಿಯು,  ಶ್ರೀ ಗುರುಪಾದವೇ ಎನಗೆ ಘನತರ ಮುಕ್ತಿಗೆ ಕಾರಣವೂ ಗುಹೇಶ್ವರಾ ಇದು ಸತ್ಯ, ಇದು ಸತ್ಯ.

             19ನೇ ಶತಮಾನದಲ್ಲಿ ಭಾರತದ ಧಾರ್ಮಿಕ ಕ್ಷಿತಿಜದಲ್ಲಿ ನೂರಾರು ನಕ್ಷತ್ರಗಳು ಮೂಡಿ ಅತ್ಯಂತ ಪ್ರಖರವಾದ ತೇಜಸ್ಸನ್ನು ಹೊಂದಿ, ಪ್ರಕಾಶಮಾನವಾಗಿ ಬೆಳಗಿ ನಾಡನ್ನೆಲ್ಲ ಪವಿತ್ರಗೊಳಿಸಿದವು. ಅಂತಹ ದಿವ್ಯ ಪ್ರಭೆಯನ್ನು              ಬೀರಿರುವ ದಿಟ್ಟ ಚೇತನಗಳ ಸಾಲಿನಲ್ಲಿ ಅತ್ಯಂತ ಪ್ರಖರವಾಗಿ ಬೆಳಗಿದ ಮಹಾಜ್ಯೋತಿ ಮತ್ತು ಈ ಲೋಕವು ಕಂಡರಿಯದ ಕೇಳರಿಯದ ಮಹಾಮೇರು ವ್ಯಕ್ತಿತ್ವವನ್ನು ಹೊಂದಿರುವವರು ಶ್ರೀ ಹಾನಗಲ್ಲಕುಮಾರ ಶಿವಯೋಗಿಗಳು. ಕಲ್ಯಾಣಕ್ರಾಂತಿಯ ನಂತರ ಇಂದಿನವರೆಗೆ (800 ವರ್ಷಗಳವರೆಗೆ) ಮರೆಯಾಗಿ ಹೋಗುತ್ತಿದ್ದ ಬಸವಾದಿ ಶರಣರ ತತ್ವಗಳನ್ನು, ಸಂದೇಶಗಳನ್ನು ಮತ್ತು ಸಾಹಿತ್ಯವನ್ನು ಜನಸಾಮಾನ್ಯರಿಗೆ ಮುಟ್ಟಿಸುವುದಲ್ಲದೇ ಉಳಿಸಿ-ಬೆಳೆಸಿ ದಂತಹ ಪೂಜ್ಯರಲ್ಲಿ ಅಗ್ರಗಣ್ಯರು.

           ವೀರಶೈವ ಸಮಾಜದ ಇತಿಹಾಸ ಮತ್ತು ಧರ್ಮಗಳು   ವಿಶ್ವಮಾನ್ಯತತ್ವಗಳನ್ನು ಮೌಲ್ಯಗಳನ್ನು ಒಳಗೊಂಡಿದ್ದು ವಿಶ್ವಮಾನ್ಯ ನೆಲೆಗಟ್ಟಿನಲ್ಲಿ ಈ ತತ್ವಗಳನ್ನು ಬಿತ್ತರಿಸುವ ಸಾಧನೆಗಳೇ ಪತ್ರಿಕೆಗಳು ಎಂಬುದನ್ನರಿತ ಶಿವಯೋಗಿಗಳು ಅನೇಕ ಪತ್ರಿಕೆಗಳನ್ನು ಪ್ರಾರಂಭಿಸಿದರು ಪ್ರೋತ್ಸಾಹಿಸಿದರು ಪ್ರೇರೇಪಿಸಿದರು. ಇಷ್ಟೇಅಲ್ಲದೆ ಧಾರ್ಮಿಕವಾಗಿ ಸಾಮಾಜಿಕ ವಾಗಿ ಸಾಂಸ್ಕೃತಿಕವಾಗಿ ವೈಚಾರಿಕವಾಗಿ ನೈತಿಕವಾಗಿ ಸಮಾಜವನ್ನು ಮೇಲೆತ್ತಿದರು.

               ಶ್ರೀ ಹಾನಗಲ್ಲ ಕುಮಾರ ಮಹಾಶಿವಯೋಗಿಗಳ ಪ್ರೋತ್ಸಾಹ ಮತ್ತು ಪ್ರೇರಣೆಯ ಮೂಲಕ ಡಾ|| ಫ ಗು.ಹಳಕಟ್ಟಿ ಯವರು ತಮ್ಮ “ಶಿವಾನುಭವ” ಪತ್ರಿಕೆ, ಶಿರಸಿಯ ಶ್ರೀ ಗುರುಮೂರ್ತಿ ಶಾಸ್ತ್ರಿಯವರು “ಶಿವಪ್ರತಾಪ” ಪತ್ರಿಕೆ ಮತ್ತು ಶ್ರೀ ಶಿವಲಿಂಗ ಶಾಸ್ತ್ರಿಗಳ “ಧರ್ಮತರಂಗಿಣಿ” ಪತ್ರಿಕೆಯಂತೆ ಶ್ರೀ ಚನ್ನಮಲ್ಲಿಕಾರ್ಜುನರು ತಮ್ಮ “ಸದ್ಧರ್ಮ ದೀಪಿಕೆ” ಪತ್ರಿಕೆಯನ್ನು ಮುವತ್ತೊಂದು ವರ್ಷಗಳವರೆಗೆ ನಮ್ಮ ಶರಣ ಸಂಸ್ಕೃತಿಯನ್ನು ಬೆಳೆಸಿದ್ದಾರೆ. ವಿಶೇಷವೆಂದರೆ ಈ ಪತ್ರಿಕೆಯು ನೂರು ವರ್ಷಗಳ ಹಿಂದೆ ವಿದೇಶದಲ್ಲಿಯೂ ಸಹಿತ ಮಾನ್ಯತೆಯನ್ನು ಪಡೆದಿತ್ತು.(ಇಷ್ಟೇ ಅಲ್ಲದೆ ಶ್ರೀ ಕುಮಾರ ಶಿವಯೋಗಿಗಳು “ಮೈಸೂರು ಸ್ಟಾರ್” ಮತ್ತು “ಕರ್ನಾಟಕ ಟೈಮ್ಸ್” ಪತ್ರಿಕೆಗಳಿಗೂ ಆರ್ಥಿಕವಾದ ನೆರವನ್ನು ಇತ್ತ ಸಂಗತಿ ತಿಳಿದು ಬರುತ್ತದೆ.)

         ಶ್ರೀ ಚನ್ನಮಲ್ಲಿಕಾರ್ಜುನರು ವಿದ್ರೂಪವಾಗಿದ್ದರೂ  ಅದಮ್ಯ ಚೈತನ್ಯ ಉಳ್ಳವರಾಗಿದ್ದರು, ಆಚಾರ-ವಿಚಾರ ಸಂಪನ್ನರು, ಶರಣ ಸಂಸ್ಕೃತಿಯ ಪರಿಪಾಲಕರಾಗಿದ್ದು ಎಲೆಮರೆಯ ಕಾಯಿಯಂತೆ ಇವರ ಜೀವನವಿತ್ತು.  ಶ್ರೀ ಕುಮಾರ ಮಹಾಶಿವಯೋಗಿಗಳೆಂದರೆ ಇವರಿಗೆ ಪಂಚಪ್ರಾಣ. ಶ್ರೀ ಮಲ್ಲಿಕಾರ್ಜುನರು ಅನೇಕ ವಚನ ಗ್ರಂಥಗಳನ್ನು ಸಂಶೋಧನಾತ್ಮಕ ಗ್ರಂಥಗಳನ್ನು, ಸ್ತೋತ್ರ ಸಾಹಿತ್ಯ ತ್ರಿಪದಿ ಷಟ್ಪದಿ ಕಂದ-ಪದ್ಯ ಮುಂತಾದವುಗಳನ್ನು ಪ್ರಕಟಿಸಿದ್ದಾರೆ. ಕನ್ನಡ ಇಂಗ್ಲಿಷ್ ಸಂಸ್ಕೃತ ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದಿದ್ದ ಮಲ್ಲಿಕಾರ್ಜುನರು ಶ್ರೀ ಕುಮಾರ ಮಹಾಶಿವಯೋಗಿಗಳವರ ಮಾರ್ಗದರ್ಶನದಲ್ಲಿ ಶಿವಾನುಭವ ಶಾಸ್ತ್ರದ ಆಳವಾದ ಜ್ಞಾನವನ್ನು ಪಡೆದರು. ಶಿವಾನುಭವವನ್ನು ಹೇಳಲು ಕುಳಿತರೆ ದೊಡ್ಡ ದೊಡ್ಡ ಪಂಡಿತರಿಗೆ ಅರ್ಥವಾಗದಂತಹ ಗಹನ ತತ್ವಗಳನ್ನು ಸಿದ್ಧಾಂತಗಳನ್ನು ಸರಳವಾಗಿ ತಿಳಿಸುವಂತಹ ಕಲೆಯನ್ನು ಹೊಂದಿದ್ದರು ಮತ್ತು ಕಬ್ಬೂರು ಶರಣರೊಡನೆ, ಗುತ್ತಲದ ಅಗಡಿ ಮಠದ ಶ್ರೀ  ನಿ ಪ್ರ ರುದ್ರಸ್ವಾಮಿಗಳು ಮತ್ತು ಹಾನಗಲ್ಲ ಕುಮಾರ ಶಿವಯೋಗಿಗಳೊಂದಿಗೆ ಶಿವಾನುಭವದ ಗಹನ ತತ್ವಗಳನ್ನು ಮೇಲಿಂದ ಮೇಲೆ ಚರ್ಚಿಸುತ್ತಿದ್ದರು.1904 ರಲ್ಲಿ ಪ್ರಾರಂಭವಾದ ಅಖಿಲ ಭಾರತ ವೀರಶೈವ ಮಹಾಸಭೆಯ ಮತ್ತು 1909 ರಲ್ಲಿ ಪ್ರಾರಂಭವಾದ ಶಿವಯೋಗ ಮಂದಿರದ ಸ್ಥಾಪನೆಯ ಸಮಾರಂಭಗಳಿಗೆ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳೊಂದಿಗೆ ಹೋಗಿ ಎಲ್ಲೆಡೆ ಅನುಭಾವ, ಪ್ರವಚನಗಳನ್ನು ನೀಡುತ್ತಿದ್ದರು. 1924ರಲ್ಲಿ ಜರುಗಿದ “ಪರಳಿಯ ವ್ಯಾಜ್ಯ”ದಲ್ಲಿ ಕುಮಾರ ಶಿವಯೋಗಿಗಳವರ ಕೋರಿಕೆಯ ಮೇರೆಗೆ ತಾವು ಅಧ್ಯಯನ ಮಾಡಿ ಸಂಗ್ರಹಿಸಿದ ಅನೇಕ ದಾಖಲೆಗಳನ್ನು ಒದಗಿಸಿ ಕೊಟ್ಟರು.

            ಶ್ರೀ ಕುಮಾರ ಶಿವಯೋಗಿಗಳವರ ಅನುಗ್ರಹದಿಂದ ಸದ್ಧರ್ಮ ದೀಪಿಕೆ ಎಂಬ ಪತ್ರಿಕೆಯನ್ನು ಆರಂಭಿಸಿದಂತಹ ಶ್ರೀ ಚನ್ನಮಲ್ಲಿಕಾರ್ಜುನರಿಗೆ ಬಾಲ್ಯದಲ್ಲಿಯೇ ಸಿಡುಬು ರೋಗದಿಂದ ಕಣ್ಣಿನಲ್ಲಿ ಹೂ ಬಿದ್ದು ಅದು  ಬರುಬರುತ್ತಾ ಬಹಳ ಬಾಧೆ ನೀಡಲಾರಂಭಿಸಿತು. ಸಾಲದ್ದಕ್ಕೆ ಜನರು ಇದು ಒಂದು ಕಣ್ಣಿಂದ ಇನ್ನೊಂದು ಕಣ್ಣಿಗೆ ಹಬ್ಬಿ ಎರಡು ಕಣ್ಣುಗಳು ಹೋಗುತ್ತವೆ ಎಂದು ಮಾತನಾಡಲಾರಂಭಿಸಿದರು.

ಇದರಿಂದ ಶ್ರೀ ಚನ್ನಮಲ್ಲಿಕಾರ್ಜುನರು ಚಿಂತೆಗೊಳಗಾದರು.

ಹೀಗೆ ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು ಒಮ್ಮೆ ಶಿರಾಳಕೊಪ್ಪಕ್ಕೆ ದಯಮಾಡಿಸಿದರು. ಆ ಸಂದರ್ಭದಲ್ಲಿ ಶ್ರೀಗಳು ಚೆನ್ನಮಲ್ಲಿಕಾರ್ಜುನರ ಆರೋಗ್ಯವನ್ನು ವಿಚಾರಿಸಿ ದಾಗ ತಮಗಾದ ಕಣ್ಣಿನ ತೊಂದರೆಯನ್ನು ನಿವೇದಿಸಿ ಕೊಂಡರು. ಆಗ ಶ್ರೀಗಳು “ನಿಮ್ಮ ಕಣ್ಣುಗಳಿಗೆ ಏನೂ ಆಗುವುದಿಲ್ಲ ಯೋಚನೆ ಮಾಡಬೇಡಿ, ಶಿವನ ಸೇವೆಯನ್ನು ಮನಮುಟ್ಟಿ ಮಾಡಿ, ಶಿವ ನಿಮಗೆ ಒಳಿತನ್ನು ಮಾಡುತ್ತಾನೆ” ಎಂದು ಶ್ರೀ ಚನ್ನಮಲ್ಲಿಕಾರ್ಜುನರ ಕಣ್ಣಿನತ್ತಲೆ ದೃಷ್ಟಿನೆಟ್ಟು ಒಂದು ಕ್ಷಣ ದೃಷ್ಟಿಸಿದ್ದರು. ಆ ಒಂದು ದಿವ್ಯದೃಷ್ಟಿಗೆ ಶ್ರೀ ಚೆನ್ನಮಲ್ಲಿಕಾರ್ಜುನರ ದೃಷ್ಟಿಬಾಧೆ ನೀಗಿ ತಮ್ಮ ಜೀವಿತದ ಅಂತ್ಯದವರೆಗೂ ಮತ್ತೆ ಯಾವ ಬಾಧೆಯೂ ಉಂಟಾಗಲಿಲ್ಲ.(ಇದು ಶಿವಯೋಗ ಮಂದಿರದ ಬೆಳಗು ಪತ್ರಿಕೆಯಲ್ಲಿ ಉಲ್ಲೇಖವಿದೆ.)

 .               ಧರ್ಮ ಸಾಹಿತ್ಯ ಸಂಸ್ಕೃತಿಗಳ ಸಮುನ್ನತಿಗಾಗಿ  ಶ್ರಮಿಸಿದಂತಹ ಮತ್ತು ಶರಣರ ಬಾಳನ್ನು ಬದುಕಿರುವ ಶ್ರೀ ಚನ್ನಮಲ್ಲಿಕಾರ್ಜುನರು ಒಬ್ಬ ಅಪರೂಪದ ಸಾಹಿತಿ, ಲೇಖಕ, ಸಂಶೋಧಕ, ಶರಣ. ಇಂತಹ ಎಷ್ಟೋ ಮಹನೀಯರು ಧರ್ಮದ ಏಳಿಗೆಗಾಗಿ ಸಂಘಟನೆಗಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದಾರೆ ಇಂತಹ ಮಹನೀಯರ ಬದುಕು ನಮಗೂ ನಿಮಗೂ ಆದರ್ಶವಾಗಬೇಕು. ಇತಿಹಾಸದ ಪುಟಗಳಲ್ಲಿ ಮರೆಯಾಗಿರುವ ಇಂತಹ ಅನೇಕ ಮಹನೀಯರಿಂದ ನಮ್ಮ ದೇಶದ, ನಮ್ಮರಾಷ್ಟ್ರದ, ನಮ್ಮ ನಾಡಿನ ಸಂಸ್ಕೃತಿ ಉತ್ಕೃಷ್ಟವಾಗಿದೆ, ಉಜ್ವಲವಾಗಿದೆ ಮತ್ತು ಉತ್ತರೋತ್ತರವಾಗಿ ಬೆಳೆಯಲಿದೆ, ಇಂತಹ ಸಾವಿರಾರು ಮಕ್ಕಳನ್ನು ಹೆತ್ತ ಭೂಮಿ ಹೊತ್ತ ನಾಡು ಪುಣ್ಯದಾಲಯ, ಇಂತಹ ಭೂಮಿಯಲ್ಲಿ ಉದಿಸಿದ ನಾವೆಲ್ಲರೂ ಧನ್ಯರು. ತಮಗೆಲ್ಲರಿಗೂ ಧನ್ಯವಾದಗಳು.

ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ಸಹೃದಯ ಓದುಗರಿಗೆ

ನಮಸ್ಕಾರಗಳು.

ಪರಮಗುರು ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು  ಮಹಾಲಿಂಗದಲ್ಲಿ ಲೀನವಾಗಿ ೯೨ ವಸಂತಗಳ ಪುಣ್ಯ ಸಂಸ್ಮರಣೆಯ ಪವಿತ್ರ ಮಾಸದ ಸಂಚಿಕೆ ಸುಕುಮಾರ ಒಂದು ವಿಶಿಷ್ಠವಾಗಿ ತಮ್ಮ ಕೈ ಸೇರುತ್ತಿದೆ.

ಉತ್ತರಭಾರತದ ಜನಪ್ರಿಯ ಸಂಗೀತವಾದ “ಕಬೀರ ವಾಣಿ -ದೊಹೆ” ಗಳ ಆಧಾರವನ್ನಾಗಿಸಿಕೊಂಡು “ಶ್ರೀ ಕುಮಾರ ದೊಹೆ” ಗಳನ್ನ ಸಾಹಿತ್ಯ ಮತ್ತು ಗಾಯನ ರೂಪ ದಲ್ಲಿ  ಅರ್ಪಿಸುತ್ತಿದ್ದೇವೆ.

ಪೂಜ್ಯ ಮ.ನಿ.ಪ್ರ. ಶಿವಾನಂದ ಮಹಾಸ್ವಾಮಿಗಳು (ಹಂದಿಗುಂದ ಶ್ರೀ ಮಠ) ಅವರ ಪ್ರಬದ್ಧ ಲೇಖನಿಯಿಂದ ಮೂಡಿಬಂದ ಕನ್ನಡ ದ್ವಿಪದಿಗಳು ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿವೆ.

ಹುಟ್ಟಿದೆ ಗುರುವೆ ಪುಣ್ಯದ ರೂಪದಿ ಕನ್ನಡಾಂಬೆಯ ಮಡಿಲಲಿ

ನಾಡಿನ ಪುಣ್ಯವೆ ಹಣ್ಣಾದಂತೆ ಜೊಯಿಸರಳ್ಳಿಯಲಿ……. ಕುಮಾರ  

ಮಹಾಲಿಂಗದೊಳು ಲೀನವಾಯ್ತು ಶ್ರೀ ಕುಮಾರ

ಜೀವ ಉರಿಯ ಉಂಡ ಕರ್ಪೂರದಂತೆ ಬೆಳಗಿ ಬೆಳಕಾದ….. ಕುಮಾರ 

ಬಾರೊ ಗುರುವೆ ಮರಳಿ ಬಾರೊ ವಟುಗಳ ಮೊರೆಯನು ಕೇಳಿ

ಕರುಣಾಮಯನೆ ಕರುಳಿಲ್ಲೇನು ಕೇಳದೆ ನಮ್ಮಕರೆ ……..ಕುಮಾರ 

ಕನ್ನಡನಾಡಿನ ಇಪ್ಪತ್ತ್ತನೆಯ ಶತಮಾನದ ಅವಿಸ್ಮರಣೀಯ ಕಾಲಘಟ್ಟದಲ್ಲಿ ನಾಡೇ ಕಂಡರಿಯದ ಮಾನವತಾವಾದಿ, ಹೊಸಯುಗವೊಂದನ್ನು ಹುಟ್ಟು ಹಾಕಿ, ಶಿವಶರಣರ ಬದುಕಿನ ಮೌಲ್ಯಗಳನ್ನು ಉತ್ತಿಬಿತ್ತಿ ಬೆಳೆದು, ಸ್ವಾರ್ಥರಹಿತ ಅರ್ಥಪೂರ್ಣವಾದ ಬಾಳನ್ನು ಬೆಳಗಿದ, ಕಾರಣಿಕ ಯುಗ ಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು. ಸಮಸ್ತ ಮಾನವ ಕುಲದ ತಾತ್ವಿಕ, ಸಾಮಾಜಿಕ ಸಮಸ್ಯೆಗಳ ಕುರಿತು ಬಿಚ್ಚು ಮನಸ್ಸಿನ ಚರ್ಚಗೆ ಉತ್ತಮ ವಾತಾವರಣವನ್ನು ನಿರ್ಮಿಸಿದರು. ವ್ಯಷ್ಠಿ ಯಿಂದ ಸಮುಷ್ಠಿಯುತ್ತ ಚಿಂತನೆ ರೂಪಿಸಿದ ಮಹಾಶಕ್ತಿಯಾಗಿ ಹೊರಹೊಮ್ಮಿದರು.

ಮಹಾಚೇತನಕ್ಕೆ ಭಕ್ತಿಪೂರ್ವಕ ನಮನಗಳು

ಮಾರ್ಚ ೨೦೨೨ ಸಂಚಿಕೆಯ ಲೇಖನಗಳ ವಿವರ

  1. 😐 “ ಮನವನು ಪರಿಪಾಲಿಸು ನೀ ಜ್ಞಾನದಾನ ಮಾಡಿಶಿವ ||” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
  2. ಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ      ಭಾಗ-೯ : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
  3. ಶ್ರೀ ಕುಮಾರೇಶ್ವರ  ದೊಹೆ (ದ್ವಿಪದಿ ಗಳು ) ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳವರು ,ಹಂದಿಗುಂದ ವಿರಚಿತ
  4. ಪುರುಷ- ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು ಇಂಗ್ಲೀಷ ಮೂಲ: ಶ್ರೀಕಂಠ ಚೌಕೀಮಠ ಕನ್ನಡ ಭಾಷಾಂತರ :ಶ್ರೀ ಎಮ್.ಎ.ಹಿರೇವಡೆಯರ
  5. ಸ್ವಧರ್ಮಅನುಯಾಯಿ ಪರಧರ್ಮ ಪ್ರೇಮಿ. ಲೇಖಕರು :ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ
  6. ಯೋಗ”ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ
  7. ಶ್ರೀ ದ್ಯಾoಪುರ ಚೆನ್ನಕವಿ ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ
  1. ವಿಡಿಯೋ ೧ ಶ್ರೀ ಕುಮಾರೇಶ್ವರ ನಾಮಾವಳಿ
  2. ವಿಡಿಯೋ ೨ ಶ್ರೀ ಕುಮಾರೇಶ್ವರ ದೊಹೆ
  • ಆಡಿಯೋ ಬುಕ್‌ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ ನಿರೂಪಣೆ ಪೂಜ್ಯ ನಾಗನಾಥ ದೇವರು ಸೋಮಸಮುದ್ರ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ

ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ

ಪೂಜ್ಯ ನಾಗನಾಥ ದೇವರು  ಸೋಮಸಮುದ್ರ

ಪೂಜ್ಯ ವಿಜಯಪ್ರಭು ದೇವರು ಬೂದಗುಂಪಾ

ಅವರಿಗೆ ತುಂಬು ಹೃದಯದ ಕೃತಜ್ಞತೆಗಳು

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

 

ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ

ಶ್ರೀಗುರುವಿನ ನಗುವಿಗೆ ಕಾರಣವನ್ನು ಮಾನವನು ಮೂಢನಾಗುವ ಪರಿಯನ್ನು ಶಿವಕವಿಯು ಇನ್ನು ಮುಂದೆ ನಿರೂಪಿಸುತ್ತಾನೆ. ಕಾಲ-ಕರ್ಮ ಮಾಯೆಗಳ ಬಲೆಯಲ್ಲಿ ಜೀವಾತ್ಮನು ಹೇಗೆ ತತ್ತರಿಸುತ್ತಾನೆಂಬ ವಿಚಾರವನ್ನು ಕ್ರಮೇಣ ನೋಡಿ.

ನಡುಮಧ್ಯ ಮಾವುತನು | ಎಡಬಲದೆ ಆನೆಗಳು

ಒಡಗೂಡೆ ನೋಡಿ-ಎಡರು ಕಂಟಕ ಲಿಪಿಯ

ತೊಡೆಯಯ್ಯ ಗುರುವೆ ಕೃಪೆಯಾಗು

|| ೪೧ ||

ಸಂಸಾರಹೇಯ ಸ್ಥಲವನ್ನು ನಿರೂಪಿಸುವಾಗ ಹಿಂದಿನ ಅನುಭಾವಿಗಳು ಬೆಡಗಿನ ಮಾತುಗಳಲ್ಲಿ ಬೋಧಿಸುತ್ತ ಬಂದಿರುವರು. ಶರಣರ ವಚನಗಳಲ್ಲಿ ಬೆಡಗಿನ ವಚನಗಳು ಧಾರಾಳವಾಗಿ ಸಿಕ್ಕುತ್ತವೆ. ದಾಸರೂ ಈ ಮಾತನ್ನು ಅನುಸರಿಸದೇ ಬಿಟ್ಟಿಲ್ಲ. ಕನಕದಾಸರ ಮುಂಡಿಗೆಯೆಂದು ಪ್ರಸಿದ್ಧವಾಗಿದೆ. ನಮ್ಮ ಶಿವಕವಿಗಳೂ ಕಾಲ-ಕಾಮ-ಮಾಯೆ ಜಗದುತ್ಪತ್ತಿಯ ಪರಿಯನ್ನು ವಿವರಿಸುವಲ್ಲಿ ಬೆಡಗಿನ ಮಾತನ್ನೇ ಅನುಸರಿಸಿದ್ದಾರೆ. ಬೆಡಗಿನ ವಚನಗಳು ಸಾಧಕನಿಗೆ ಹೆಚ್ಚಿನ ಶ್ರಮವನ್ನು ಹಚ್ಚುತ್ತವೆ. ಅಲ್ಲದೇ ಹೆಚ್ಚು ಶ್ರಮವಹಿಸಿ ಮಾಡಿದ ಅಧ್ಯಯನ ಮನದಟ್ಟಾಗುತ್ತದೆ. ಮತ್ತು ವಿಷಯ ಗ್ರಹಿಕೆಯಾದ ಮೇಲೆ ಮರಹು ಆವರಿಸುವದಿಲ್ಲ. ಮಾಯಾ ಮೋಹಗಳು ಮಾನವನನ್ನು ಅತಿಯಾಗಿ ಆವರಿಸುವದರಿಂದ ಬೆಡಗಿನ ವಚನಗಳ ಪಾತ್ರ ಹಿರಿದಾಗಿ ಕೆಲಸ ಮಾಡುತ್ತದೆ. ಮತ್ತು ಗೌಪ್ಯವಾದ ಆಧ್ಯಾತ್ಮ ಶಾಸ್ತ್ರದ ಘನತೆಯನ್ನು ವ್ಯಕ್ತ ಮಾಡುವಲ್ಲಿಯೂ ಬೆಡಗಿನ ವಚನಗಳು ಬೆರಗುಗೊಳಿಸಿವೆ.

ಮಾನವ ಜೀವನದಲ್ಲಿ ಸಾಂಸಾರಿಕ ವಿಷಯಗಳು ಅನಿತ್ಯವಾಗಬಹುದು. ಆದರೆ ನಿತ್ಯ-ಸತ್ಯವಾಗಿ ಬರುವದು ಮರಣ ಮಾತ್ರ. ಮರಣದ ಭಯ ಬಹಳ. ಅದಕ್ಕಾಗಿ ಶರಣ ಕವಿಗಳು ಮರಣದ ಅಧಿದೇವತೆಯಾದ ಯಮನ ವಿಷಯವನ್ನು ಪ್ರಥಮತಃ ಪ್ರತಿಪಾದಿಸಿದ್ದಾರೆ.

ಆನೆ ನಡೆಸುವ ಮಾವುತನು ಒಂದಾನೆಯನ್ನು ತನ್ನ ವಶವರ್ತಿಯನ್ನಾಗಿ ಇರಿಸ ಬಹುದು. ತಾನೊಬ್ಬನಾಗಿ ಬಹಳ ಆನೆಗಳು ಸುತ್ತುವರಿದಾಗ ಮಾವುತನ ಗತಿ ದೇವರೇ ಬಲ್ಲ. ಸಿಟ್ಟಿಗೆದ್ದ ಮದಗಜವು ಸಿಕ್ಕವನನ್ನು ತುಳಿದು ಸೀಳಿ ಹಾಕುತ್ತದೆ. ಘೀಳಿಡುವ ಆನೆಗಳ ಮಧ್ಯದಲ್ಲಿ ಸಿಕ್ಕ ಮಾವುತನಾದರೂ ಮರಣವನ್ನಪ್ಪಬೇಕಾದೀತು. ಅವನು ತನ್ನ ಎಡಬಲದ ಆನೆಗಳು ಒಡಗೂಡು (ಒಂದುಗೂಡು) ವದನ್ನು ದೂರೀಕರಿಸುತ್ತ ತನ್ನ ಆನೆಯಿಂದಲೇ ಪಾರಾಗಬೇಕು. ಮದವೇರಿದ ಆನೆಗಳನ್ನು ಪಳಗಿಸಬಲ್ಲ ಮಾವುತನೇ ಜಾಣ್ಮೆಯಿಂದ ಎಡರು-ಕಂಟಕಗಳನ್ನು ಪರಿಹರಿಸಿಕೊಳ್ಳಬಲ್ಲನು.

ಒಳಬಾಳಿನಲ್ಲಿ ಹಮ್ಮಿನ ಜೀವಾತ್ಮನೆಂಬ ಮಾವುತನು ಅಷ್ಟಮದಗಜಗಳಿಂದ ಪಾರಾಗುವದು ಸುಲಭ ಸಾಧ್ಯವಲ್ಲ. ಇದು ಗುರುಕೃಪೆಯಿಂದ ಮಾತ್ರ ಪರಿಹಾರ ವಾಗಬಹುದು. ಕುಲಮದ, ಧನಮದ, ರೂಪಮದ, ಯೌವನಮದ, ವಿದ್ಯಾಮದ, ಭಾರ್ಯಾಮದ, ಅಧಿಕಾರಮದ, ಹಾಗೂ ರಾಜ್ಯಮದಗಳೆಂಬ ಎಂಟು ಅಹಂಕಾರಗಳೇ ಅಷ್ಟಗಜಗಳೆನಿಸುವವು. ಆನೆಗೆ ಮದಬಂದರೆ ಹಿಡಿಯಲುಬಾರದು. ಅಹಂಕಾರ ರೂಪ ಆನೆಯು ಮದೋನ್ಮತ್ತವಾದರೆ ಹೇಳುವದೇನು ? ಎಡರು ಕಂಟಕಗಳು ಕೈಯಲ್ಲೇ ಇರುವವು. ಕಾಲ(ಯಮ)ನೆಂಬ ಕಂಟಕ ತೀವ್ರವಾಗಿ ಆವರಿಸುವನು. ಅಹಂಕಾರಿಯು ಯಮಪಾಶದಲ್ಲಿ ಸಿಕ್ಕು ರೌರವ ನರಕದಲ್ಲಿ ಕೊಳೆಯಬೇಕಾಗುವದು. ಈ ಕಾಲ ಕಂಟಕನ ಎಡರು-ಕಂಟಕ ಲಿಪಿಯನ್ನು ಕಳೆಯಬಲ್ಲವನು ಗುರುನಾಥ ನೊಬ್ಬನೇ. ಅವನೇ ಸಮರ್ಥ. ಅಂಥ ಸದ್ಗುರುವಿನಲ್ಲಿ ಶರಣಾಗತನಾಗಬೇಕು.

ನಾರಾಯಣನೆಂಬ ಹಿಂದೀ ಕವಿಯು ಜೀವನದಲ್ಲಿ ಮರೆಯದ ಎರಡು ಮಾತುಗಳನ್ನು ಹೇಳಿದ್ದಾನೆ. ಕೇಳಿ-

“ದೋ ಬಾತನ ಕೊ ಭೂಲ ಮತ, ಜೋ ಚಾಹೈ ಕಲ್ಯಾಣ |

ನಾರಾಯಣ ಇಕ ಮೌತ ದೂಜೇ ಶ್ರೀಭಗವಾನ ||”

ಕಲ್ಯಾಣವನ್ನು ಬಯಸುವ ಮಾನವನು ಈ ಎರಡು ಮಾತುಗಳನ್ನೆಂದೂ ಮರೆಯಕೂಡದು. ಒಂದನೆಯದು ಮರಣ, ಎರಡನೆಯದು ಮಹಾದೇವ. ಹುಟ್ಟಿದವನು ಮರಣವನ್ನಪ್ಪಲೇ ಬೇಕಾಗುವದು. ಜೈಮಿನಿಯು ತನ್ನ ಭಾರತ ಕಾವ್ಯದಲ್ಲಿ- ”ಮನುಜರ್ಗೆ ಮರಣಂ ಎಂದಿರ್ದೊಡಂ ತಪ್ಪದು” ಎಂದಿದ್ದಾನೆ. ಇದು ಕಾಲ ಚಕ್ರದ ನಿಯಮ. ಇದನ್ನು ಅರಿಯಲೇ ಬೇಕಾಗುವದು. ಮಾನವನು ನಾನು ನಿಶ್ಚಿತವಾಗಿ ಸಾಯುತ್ತೇನೆಂಬುದನ್ನು ಮರೆತು, ಇಳೆ-ಬೆಳೆ-ಮಳೆಗಳನ್ನಿತ್ತ ಮಹಾದೇವ ನನ್ನು ಮರೆತು ಎಲ್ಲವೂ ನಾನೇ, ನನ್ನಿಂದಲೇ ಎಲ್ಲ ನಡೆಯಬಲ್ಲುದು. ನಾನೇ ಎಲ್ಲವನ್ನು ಮಾಡುತ್ತೇನೆಂಬ ಅಹಂಕಾರದಿಂದ ಮುಂದುವರೆಯುತ್ತಾನೆ. ಸೊಕ್ಕಿದ ಆನೆಯು ವನಮಧ್ಯದ ಮರವನ್ನು ಕಿತ್ತಿಹಾಕುವಂತೆ, ಈ ಅತಿಯಾದ ಅಹಂಕಾರವು ಮಾನವನನ್ನು ಮುಗಿಸಿಬಿಡುತ್ತದೆ. ಬರುವಾಗ ಏನೂ ತರಲಿಲ್ಲ. ಹೋಗುವಾಗ ಏನೂ ಒಯ್ಯದೇ ಮರಳಬೇಕಾಗುವದು. ಕಾರಣ, ಮರಣ ಸನ್ನಿಹಿತವಾಗಿದೆಯೆಂದು ಸತ್ಕರ್ಮಗಳನ್ನು ತಪ್ಪದೇ ಮಾಡಬೇಕು. ಸದ್ಗುರುನಾಥನನ್ನು ಮೊರೆಹೊಕ್ಕು ಮಹಾ ದೇವನನ್ನು ಅರಿಯಬೇಕು.

ಗುರುವೆ ! ನಿನ್ನ ಕರುಣಾಮೃತ ಸಿಂಚನದಿಂದ ಜೀವಾತ್ಮನಾದ ನನ್ನ ಅಹಂಕಾರ ವನ್ನು ಕಳೆದು ಅದರಿಂದ ಬರುತ್ತಿದ್ದ ಎರಡು-ಕಂಟಕಗಳನ್ನು ತೊಡೆದು ಹಾಕು. ಬಾಗಿದ ಬೆತ್ತ ಪೂಜ್ಯರಿಗೆ ದಂಡಿಗೆಯಾಗುವಂತೆ ಮದವನ್ನು ಕಳೆದು ನಿನ್ನ ಪಾದತೊಡುಗೆಯನ್ನಾಗಿಸು. ಈ ಅಹಂಕಾರ ನಿರ್ಮೂಲವಾದಲ್ಲದೆ ಶರಣ ಮಾರ್ಗವು ಸಿಕ್ಕಲಾರದು. ಕರುಣಿಸು ನಿಮ್ಮ ಧರ್ಮ.

ದಾಕ್ಷಿಣ್ಯ ಪುರವರ್ಗ | ಮೋಕ್ಷಹೀನಾಚಾರ್ಯ

ಶಿಕ್ಷೆಗೊಳಗಾಗಿ ಈ ಕ್ಷಿತಿಗೆ ಬಂದನೈ

ಈ ಕ್ಷಣದಿ ಗುರುವೆ ಕೃಪೆಯಾಗು

|| ೪೨ ||

ತಾರಕಾಕ್ಷ, ಮಕರಾಕ್ಷ, ವಿದ್ಯುನ್ಮಾಲರೆಂಬ ರಾಕ್ಷಸರು; ಲೋಹ, ಬೆಳ್ಳಿ, ಬಂಗಾರದ ಮೂರು ಪಟ್ಟಣಗಳನ್ನು ಕಟ್ಟಿಕೊಂಡಿದ್ದರೂ ಕೊನೆಗೊಮ್ಮೆ ಗುರಿಯನ್ನು ಕಾಣದೆ ನಾಶವಾದರು. ಜೀವಾತ್ಮನು ನಶ್ವರವಾದ ಸ್ಫೂಲ, ಸೂಕ್ಷ್ಮ, ಕಾರಣವೆಂಬ ಮೂರು ತನುಗಳನ್ನು ಹೊಂದಿದ್ದಾನೆ. ಈ ಶರೀರಗಳು ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ವರ್ಗ ಅರ್ಥಾತ್ ಅನಿಮಿತ್ತ ವೈರಿಗಳೊಡನೆ ಒಡಂಬಡಿಸುವ ದಾಕ್ಷಿಣ್ಯಕ್ಕೆ ಒಳಗಾಗಿ ಅಹಂಕಾರ, ಮಮಕಾರಗಳಿಂದ ಬಂಧಿತವಾಗುತ್ತವೆ. ಆಗ ಬಂಧನದ ಆಚಾರ್ಯನಾದ ಯಮನ ಶಿಕ್ಷೆಗೆ ಒಳಪಟ್ಟು ಮೋಕ್ಷದಿಂದ ವಂಚಿತರಾಗಬೇಕಾಗುವದು. ಕಾಲನ ಕಠಿಣ ಶಿಕ್ಷೆಯನ್ನು ತಾಳಲಾರದೆ ಈ ಇಳೆಗೆ ಇಳಿದು ಬರಬೇಕಾಗುವದು. ಯಮಯಾತನೆಗೆ ಕೊನೆಯಿಲ್ಲ. ಇದರ ಕೊನೆ ಶ್ರೀಗುರು ಸನ್ನಿಧಿಯಿಂದ ಮಾತ್ರ ಸಾಧ್ಯವಾಗಬಹುದು.

ಓ ಗುರುವೆ ! ಕಾಲನ ಕಠಿಣ ಶಿಕ್ಷೆಯಿಂದ ಬಳಲಿರುವೆ. ತಡಮಾಡದೆ ಈ ಕ್ಷಣದಲ್ಲೇ ನನ್ನನ್ನು ರಕ್ಷಿಸು. ಜನಿ ಮೃತಿಗಳಿಗೆ ಒಳಗಾಗದಂತೆ ಮಾಡು. ನೀನು ಪುರಹರನೂ, ಕಾಲಹರನೂ, ಮಾಯಾವಿದೂರನೂ ಆಗಿರುವೆ. ಕಾಲನ ಕಂಟಕವನ್ನು ಕಳೆಯಲು ನಿನ್ನಿಂದ ಮಾತ್ರ ಸಾಧ್ಯ. ನಿನ್ನ ಕೃಪಾಕಟಾಕ್ಷೇಕ್ಷಣವನ್ನು ಈ ಕ್ಷಣದಲ್ಲೇ ಬೀರು. ಈ ಕ್ಷಣದಿಂದ ನನ್ನ ಮೂರು ಶರೀರಗಳ ಜಾಡ್ಯತ್ವವು ಬಯಲಾಗಿ ಮಂತ್ರಮಯವಾಗುತ್ತದೆ. ತಂದೆಯೆ ! ತಳುವದೆ ಪರಶಿವಲಿಂಗವನ್ನು ಒಲಿಸಲು ಯೋಗ್ಯವಾದ ಪ್ರಸಾದ ಕಾಯವನ್ನಾಗಿ ಮಾಡು. ಅದರಿಂದ ಅಷ್ಟ ಮದಗಳ ಹಾಗೂ ಅರಿಷಡ್ ವೈರಿಗಳ ಉಪಟಳ ಇಲ್ಲವಾಗುತ್ತದೆ.

ಇಲ್ಲಿ ‘ಈಕ್ಷಣದಿ’ ಪದನಾಮವಾಗಿಯೂ, ಪ್ರಯೋಗಿಸಲ್ಪಟ್ಟು ಶ್ಲೇಷಾರ್ಥದ ವೈಶಿಷ್ಟ್ಯ ವ್ಯಕ್ತವಾಗಿದೆ. ಈಕ್ಷಣ (ದೃಷ್ಟಿ ಪಾತ)ವು ಈ ಕ್ಷಣದಿ (ತೀವ್ರವಾಗಿ) ಆದರೆ, ನನ್ನ ದೋಷಗಳು ದೂರವಾಗುತ್ತವೆಯೆಂದು ಅರ್ಥೈಸಿದ್ದಾನೆ.

ಧರ್ಮನಾಮವ ತಾಳಿ | ಎಮ್ಮೆ ಮಗನೊಯ್ಯಾಳಿ

ಕರ್ಮದ ಕೇಳಿಯಿಂ- ಮೆರೆವವನ ಉಪಟಳಕೆ

ಅಮ್ಮೆನೈ ಗುರುವೆ ಕೃಪೆಯಾಗು

|| 43 ||

ಶರಣಕವಿಯು ಕಾಲನ ಪೌರಾಣಿಕ ಸ್ವರೂಪ ಚಿತ್ರವನ್ನು ಶಬ್ದಗಳಿಂದ ಚಿತ್ರಿಸಿದ್ದಾನೆ. ಆತನಿಗೆ ಯಮಧರ್ಮ’ನೆಂಬ ನಾಮ. ಅವನ ಸಂಚಾರ ಎಮ್ಮೆಯ ಮಗನಾದ ಕೋಣನಮೇಲೆ, ಅವನ ಕಾರ್ಯ ಜೀವಿಗಳನ್ನು ಸಂಹಾರಮಾಡುವದು. ಈ ಸಂಹಾರ ಕರ್ಮದ ವಿಲಾಸದಿಂದ ಮೆರೆಯುತ್ತಿರುವ ಕಾಲನ ಉಪಟಳವು ಮಿತಿಮೀರಿದೆ. ಆದ್ದರಿಂದ ನಾನೂ ಅವನ ಬಾಧೆಯಿಂದ ಹೊರಗಾಗಿಲ್ಲ. ಈ ಬಾಧೆಯು ಸಹಿಸಲತಿಯಾಗಿದೆ. ಮೃತ್ಯುಂಜಯನಾದ ಸದ್ಗುರುವಿನ ಒಲುಮೆಯಿಂದ ಮೃತ್ಯುವಿನ ಬಾಧೆ ನೀಗಬಲ್ಲದು. ಮಾನವನಿಗೆ ಅತಿಭಯಾನಕವಾದುದದೆಂದರೆ ಸಾವೆ. ಈ ಸಾವಿಗೆ ಸಾವುಕೊಡುವವನು ಶಿವನು. ಶಿವರೂಪಿ ಗುರುವೆ | ಕೈಹಿಡಿದು ಕಾಪಾಡು.

ಯಮನು ಭಯಾನಕವಾಗಿದ್ದರೂ ಯಮಧರ್ಮನೆಂಬ ಹೆಸರನ್ನು ಪಡೆದಿದ್ದಾನೆ. ಅವನ ಕಾರ್ಯದಲ್ಲಿ ಧರ್ಮ ಹುದುಗಿಕೊಂಡಿದೆ. ಅವನು ಧರ್ಮವಂತರನ್ನು ದೇವರತ್ತ ಕಳಿಸುತ್ತಾನೆ. ಧರ್ಮವಂತನು ಜ್ಞಾನಿಯೂ ಆಗಿರಬೇಕು. ಅಜ್ಞಾನಿಗಳು ಧರ್ಮದ ಗುರಿಯನ್ನು ಗುರುತಿಸದೇ ಯಮನ ಭಾಧೆಗೆ ಒಳಗಾಗುವರು. ಅದಕ್ಕಾಗಿ ಕೋಣನ ವೈಹಾಳಿ ಪದವನ್ನು ಪ್ರಯೋಗಿಸಿ ಸಾಂಕೇತಿಕ ಅರ್ಥವನ್ನು ವ್ಯಕ್ತ ಮಾಡಿದ್ದಾನೆ. ಕೋಣ = ದಡ್ಡತನದ ಪ್ರತೀಕ. ಒಣಹೆಮ್ಮೆ ಹೋರಾಟಗಳ ಸಂಕೇತ. ಜ್ಞಾನವಿಲ್ಲದೆ ಹೆಮ್ಮೆಯಿಂದ ಮಾನವನು ಮೈಮರೆತು ಮರಣವನ್ನಪ್ಪುತ್ತಾನೆ. ಇಂಥ ಕೋಣನ ಸವಾರಿ ಮಾಡುವವರ ಮೇಲೆ ಕಾಲನು ಬಲು ಪ್ರೀತಿ, ಶಿವಕವಿ ಕ.ಬ. ಅಂಗಡಿಯವರು ಶ್ರೀಜಗದ್ಗುರು ಅನ್ನದಾನೀಶ್ವರ ಲೀಲಾಮೃತದಲ್ಲಿ –

“ಬುದ್ಧಿಹೀನರೆ ಕೋಣಮರಿಗಳು

ಶ್ರದ್ದೆಯಿಲ್ಲದವರು ಕುರಿಗಳೈ (೧೧-೧೪)

ಬುದ್ಧಿಹೀನರಿಗೆ ಕೋಣನೆಂದು ಅರ್ಥೈಸಿದ್ದು ಸಮಂಜಸವಾಗಿದೆ. ಡಾಂಭಿಕನು ಸುಜ್ಞಾನವಿಲ್ಲದೆ ಒಣಹೆಮ್ಮೆ ಹೋರಾಟಗಳ ಗೊಂದಲದಲ್ಲಿ ಯಮನ ಸನ್ನಿಧಿ ಸೇರುತ್ತಾನೆ. ಶ್ರದ್ದೆಯಿಲ್ಲದವರು ಕುರಿಗಳಂತೆ ಕಾಲನೆಂಬ ಕಟುಕರ ಕೈಯಲ್ಲಿ ಸಿಕ್ಕು ಮಣ್ಣು ಮುಕ್ಕುತ್ತಾರೆ.

ಶಿವಶರಣರು ಸಾವಿಗಂಜದೆ ಧೀರರಾದರು. ಮತ್ತು

“ನಾಳೆಬಪ್ಪುದು ನಮಗಿಂದೇ ಬರಲಿ,

ಇಂದು ಬಪ್ಪುದು ನಮಗೀಗಲೇ ಬರಲಿ.

ಇದಕಾರಂಜುವರು ? ಇದಕಾರಳುಕುವರು ?

‘ಜಾತಸ್ಯ ಮರಣಂ ಧೃವಂ’ ಎಂದುದಾಗಿ

ನಮ್ಮ ಕೂಡಲ ಸಂಗಮ ದೇವರು ಬರೆದ ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲಾ! ಬರುವ ಮರಣ ನಿಶ್ಚಿತ, ಅಂಜಿದರಾಗದು, ಅಳುಕಿದರಾಗದು. ಮರಣವನ್ನು ತಪ್ಪಿಸಲು ಹರಿಬ್ರಹ್ಮಾದಿಗಳಿಂದಲೂ ಸಾಧ್ಯವಿಲ್ಲವೆಂದರಿದು –

”ಮರಣವೇ ಮಹಾನವಮಿ’ ಎಂದು

ಧೀರೋದಾತ್ತತೆಯಿಂದ ಆತ್ಮಸಾಕ್ಷಾತ್ಕಾರವನ್ನು ಹೊಂದಿದರು. ಲಿಂಗಾಂಗಸಾಮರಸ್ಯವು ಬಲಹೀನನಿಂದ ಸಾಧಿಸಲು ಸಾಧ್ಯವಿಲ್ಲ. ಆತ್ಮಬಲಬೇಕು. ಯಮ ಬಾಧೆಯನ್ನು ಗೆಲ್ಲಬೇಕು, ಸುಜ್ಞಾನವನ್ನು ಸಂಪಾದಿಸಬೇಕು. ಗುರುಕೃಪೆಯನ್ನು ಪಡೆಯಬೇಕು. ಅಂತಾದರೆ ಮಾನವ ಜನ್ಮ ಸಾರ್ಥಕವಾಗುವದು.

ಓ ಗುರುವೆ ! ಮೃತ್ಯುಂಜಯನೆ ! ಕಾಲದ ಉಪಟಳವನ್ನು ನೀಗಿಸಬಲ್ಲ ಧರ್ಮ ಧೀಮಂತನನ್ನಾಗಿಸು, ಧರ್ಮಭೀರುತನವನ್ನು ಹೋಗಲಾಡಿಸು. ಸುಜ್ಞಾನಿಯನ್ನಾಗಿ ರಕ್ಷಿಸು.

ಕರಿಯ ಕಬ್ಬಿನ ಬಿಲ್ಲು | ಅರಳು ಮಲ್ಲಿಗೆ ಬಾಣ

ನುರುವಣಿಗೆ ಲೋಕ-ಉರುಳಲ್ಕೆ ನಾ ನಿಮ್ಮ

ಮೊರೆ ಹೊಕ್ಕೆ ಗುರುವೆ ಕೃಪೆಯಾಗು

11 ೪೪ ||

ಮಾನವನಿಗೆ ಮರಣದ ಭಯವಿದ್ದರೂ ಕಾಮದ ಕೇಳಿಯಲ್ಲಿ ಮೈಮರೆಯುತ್ತಾನೆ. ಇದು ಪ್ರಕೃತಿಯ ನಿಯಮ. ಪ್ರಕೃತಿ ವಿಕೃತಿಯಾದರೆ ಕಾಮನ ಕೈಯಲ್ಲಿ ಉರುಳುವದು ಸಹಜ. ಸಂಸ್ಕೃತಿಯಿಲ್ಲದೆ ವಿಕೃತಿಗೊಂಡವರ ಮೇಲೆ ಕಾಮನ ಉಪಟಳ ಹೇಳತೀರದು. ಶಿವಕವಿಯು ಇದನ್ನೇ ನಿರೂಪಿಸುವವನಾಗಿ ಮೊದಲು ಕಾಲನ ಶಬ್ದ ಚಿತ್ರವನ್ನು ಚಿತ್ರಿಸಿದಂತೆ ಇಲ್ಲಿ ಕಾಮನ ಕಮನೀಯ ರೂಪವನ್ನು ಕಾಣಿಸುತ್ತಾನೆ.

ಕಾಮನು ಅನಂಗ, ಅವನಿಗೆ ಅವಯವಗಳಿಲ್ಲ. ಶಿವನು ಕಾಮನನ್ನು ದಹಿಸಿ ಬಿಟ್ಟಿದ್ದಾನೆ. ಆದರೆ ಮನಸಿಜನಾಗಿ ಮೈದೋರಲು ಹರಸಿದ್ದಾನೆ. ಅದು ಕಾರಣ ಪ್ರಕೃತಿಯ ಸೌಂದರ್ಯದಲ್ಲಿ ಕಾಮನು ಅವತರಿಸಿ ಬರುತ್ತಾನೆ. ಪ್ರೇಮಿಗಳ ಮನಸ್ಸಿನಲ್ಲಿ ಉದ್ಭವಿಸುತ್ತಾನೆ. ಕಾಮನು ಕಬ್ಬಿನ ಬಿಲ್ಲನ್ನು ಹೆದೆಏರಿಸುತ್ತಾನಂತೆ. ಅರಳಿದ ಮಲ್ಲಿಗೆಯ ಬಾಣಗಳನ್ನು ಬಿಡುತ್ತಾನಂತೆ. ಕೈ ಮೈ ಇಲ್ಲದವನಿಂದ ಬಿಟ್ಟ ಬಾಣದ ಉರುವಣಿಗೆಗೆ ಉರುಳದ ಮರುಳರಿಲ್ಲ. ಲೋಕವೆಲ್ಲ ತತ್ತರಿಸುತ್ತದೆ.

ಗಂಡು ಹೆಣ್ಣುಗಳ ನೋಟದಲ್ಲಿ ಕಾಮ ಕಾಣಿಸಿಕೊಳ್ಳುವನು. ತನ್ನ ಚೇಷ್ಟೆಯನ್ನು ಪ್ರಾರಂಭಿಸುವನು. ಸ್ತ್ರೀಯಳ ಹುಬ್ಬೆಂಬ ಕರಿಯ ಬಿಲ್ಲಿನಿಂದ ಅಪಾಂಗ ನೋಟವೆಂಬ ಅರಳು ಮಲ್ಲಿಗೆಯ ಬಾಣವು ಪುರುಷನ ಮನಸ್ಸನ್ನು ತಲ್ಲಣಿಸುತ್ತದೆ. ಕಣ್ಣಿಗೆ ಕಾಣದ ಕಾಮನ ಬಾಣಗಳು ಅರವಿಂದ, ಆಶೋಕ, ಮಾವು, ಅರಳುಮಲ್ಲಿಗೆ ಮತ್ತು ಕನ್ನೈ ದಿಲೆಗಳೆಂದು ಐದಾಗಿವೆ ಎಂದು ಅಮರಕೋಶಕಾರನು ಬರೆದಿದ್ದಾನೆ. ಸ್ತ್ರೀಯಳ ಜೀವನದ ಮುಖವೇ ಅರವಿಂದ. ಹರ್ಷಚಿತ್ತವೇ ಅಶೋಕ, ಕೆಂದುಟಿಯೇ ಮಾವಿನಚಿಗುರು, ನಗೆಯೇ ಅರಳು ಮಲ್ಲಿಗೆ, ವಿಶಾಲ ನೀಲನೇತ್ರಗಳೇ ಕನ್ನೈದಿಲೆಗಳು. ಈ ಪಂಚಬಾಣಗಳು ಎಂಥ ಧೀರನನ್ನೂ ಚಂಚಲ ಗೊಳಿಸದೇ ಇರವು. ವಸಂತಕಾಲವು ಕಾಮನಿಗೆ ಮಂತ್ರಿಯಂತೆ ಸಹಾಯಕನಾದರೆ, ಕೋಗಿಲೆಯು ಅವನ ಜಯಗಾನವನ್ನು ಹಾಡುತ್ತಿದೆ. ವಿರಹಿಗಳ ಮನವನ್ನು ಕಲಕುತ್ತಿದೆ. ಆಗ ಕಾಮನ ಆಟವು ನಡೆಯುವದೆಂದು ಕವಿಗಳು ತಮ್ಮ ಕಾವ್ಯಗಳಲ್ಲಿ ವರ್ಣಿಸಿದ್ದಾರೆ. ರಾಜನಿಂದ ರಂಕನ ವರೆಗೆ ಎಲ್ಲರಲ್ಲಿಯೂ ಕಾಮನ ಚೇಷ್ಟೆ. ಕೇವಲ ಮಾನವರಲ್ಲಿ ಮಾತ್ರವಲ್ಲ. ಪಶುಪಕ್ಷಿಗಳಲ್ಲಿಯೂ ಕಾಮಚೇಷ್ಟೆ ಕಾಣುತ್ತಿದೆ. ನೀತಿಕಾರರೂ –

“ಆಹಾರ-ನಿದ್ರಾ ಭಯ-ಮೈಥುನಾನಿ

ಸಾಮಾನ್ಯಮೇತತ್ ಪಶುಭಿರ್ನರಾಣಾಮ್” ||

ಆಹಾರ-ನಿದ್ರೆ ಹಾಗೂ ಭಯಗಳಂತೆ ಮೈಥುನವೂ ಪಶು ಮತ್ತು ಮಾನವರಲ್ಲಿ ಸಾಮಾನ್ಯವಾಗಿದೆಯೆಂದು ವಿಶದಪಡಿಸಿದ್ದಾರೆ. ಕಾಮನು ಅನಂಗನಾಗಿ ಇಂಥ ಅದ್ಭುತ ಕಾರ್ಯವನ್ನೆಸಗುತ್ತಿರುವದು ಪ್ರಕೃತಿಯ ಕೊಡುಗೆ. ವಯಸ್ಸಿಗೆ ಬಂದ ಗಂಡು-ಹೆಣ್ಣು

ಜೀವಿಗಳಲ್ಲಿ ಕಾಮನ ಮಧ್ಯಸ್ಥಿಕೆಯಿಲ್ಲದಿದ್ದರೆ, ಜಗತ್ತು ವಿಸ್ತಾರಗೊಳ್ಳುತ್ತಿರಲಿಲ್ಲ. ಇಂದ್ರಿಯಗಳು ಬಹಿರ್ಮುಖವಾಗಿ ಹರಿಯುತ್ತಿರುವದು ಬ್ರಹ್ಮನ ರಚನೆಯಾಗಿದೆ. ಉಪನಿಷತ್ಕಾರರು-

”ಪರಾಂಚಿಖಾನಿ ವ್ಯತೃಣತ್ ಸ್ವಯಂಭೂ: ಪರಾಜ್ ಪಶ್ಯತಿ” | ಪರಮಾತ್ಮನು ಜೀವಾತ್ಮರ ಇಂದ್ರಿಯಗಳನ್ನು ಬಹಿರ್ಮುಖವಾಗಿ ಸೃಷ್ಟಿಸಿದ್ದರಿಂದ ಅವು ಬಹಿರ್ವಿಷಯ ಗಳನ್ನು ಗ್ರಹಿಸಲು ಹಾತೊರೆಯುತ್ತವೆಯೆಂದು ನಿರೂಪಿಸಿದ್ದಾರೆ. ಇಳುಕಲು ಮುಖವಾದ ನೀರು ತೀವ್ರವಾಗಿ ಹರಿಯುವಂತೆ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ಪಂಚ ವಿಷಯಗಳೇ ಲಕ್ಷ್ಯವಾಗಿಯುಳ್ಳ ಕಿವಿ, ತ್ವಕ್ಕು, ನೇತ್ರ, ನಾಲಿಗೆ, ಮೂಗು ಐದಿಂದ್ರಿಯಗಳು ಆ ವಿಷಯ ಸಂಪರ್ಕವಾಗುತ್ತಲೇ ಗ್ರಹಿಸುತ್ತವೆ. ಇಂದ್ರಿಯ ಗ್ರಹಿಕೆ ಬಲವತ್ತರವಾಗಿದೆ.

“ಮಾತ್ರಾ ಶ್ವಸ್ರಾ, ದುಹಿತ್ರಾ ವಾ ನೈಕಶಯ್ಯಾಸನೋ ಭೂತ್ |

ಬಲವಾನಿಂದ್ರಿಯ ಗ್ರಾಮೋ ವಿದ್ವಾಂಸಮಪಿ ಕರ್ಷತಿ ||”

ತಾಯಿ, ಅತ್ತೆ, ಸೊಸೆ, ಮಗಳು ಯಾರೇ ಇರಲಿ, ಏಕಾಂತದಲ್ಲಿ ವಯಸ್ಕರಾದ ಹೆಣ್ಣು ಮಕ್ಕಳೊಡನೆ ಏಕಾಸನನಾಗಿ ಕುಳಿತುಕೊಳ್ಳಬಾರದು. ಯಾಕೆಂದರೆ ಇಂದ್ರಿಯಗಳ ಶಕ್ತಿಯು ಅದ್ಭುತವಾಗಿದೆ. ಪಂಡಿತನನ್ನು ಸಹ ವಿಷಯದತ್ತ ಹರಿಸುವದು. ಈ ಅಭಿಪ್ರಾಯವನ್ನು ಓದಿದ ವ್ಯಾಸರ ಶಿಷ್ಯನಾದ ಜೈಮಿನಿಯು ಶ್ಲೋಕದ ನಾಲ್ಕನೆಯ ಚರಣದಲ್ಲಿ ವಿದ್ವಾಂಸಂ ನಾಪಕರ್ಷತಿ ವಿದ್ಯಾವಂತನನ್ನು ವಿಷಯವು ಎಳಸುವದಿಲ್ಲ ವೆಂದು ತಿದ್ದುವನು. ಅದನ್ನರಿತ ಗುರುಗಳು ನಾರದನನ್ನು ಕರೆಯಿಸಿ ಜೈಮಿನಿಯ

ಸತ್ಯಪರೀಕ್ಷೆಯನ್ನು ಮಾಡಲು ತಿಳಿಸುವರು. ನಾರದನ ಅಪ್ಪಣೆಯಂತೆ ಕಾಮದೇವನು ಕುದುರೆ ಸವಾರನಾಗಿ ಬಂದು ಜೈಮಿನಿಯನ್ನು ಕಂಡು ಕೆಲವು ಕ್ಷಣಗಳ ನಂತರ ಸುಂದರ ಸ್ತ್ರೀಯಾಗುತ್ತಾನೆ. ಅವನ ಆಶ್ರಮದ ಸಮೀಪಕ್ಕೆ ಬರುವನು. ಹೆಣ್ಣಿನ ಕೋಮಲ ಧ್ವನಿಯನ್ನು ಆಲಿಸಿದ ಮುನಿಯು ಹೊರಬಂದು ತೊಯ್ಸಿಸಿಕೊಳ್ಳುತ್ತಿರುವದನ್ನು ಕಾಣುತ್ತಾನೆ. ರಾಜಕುಮಾರಿಯಂತಹ ಸೌಂದರ್ಯ ವನ್ನು ಕಂಡು ಬೆರಗಾಗುತ್ತಾನೆ.

ಆಶ್ರಮದೊಳಗೆ ಕರೆಯುವನು. ಏಕಾಂತದ ವಾತಾವರಣದಲ್ಲಿ ಅವಳ ಮೋಹಕ ರೂಪವು ಮುನಿಯ ಮನವನ್ನು ಚಂಚಲಗೊಳಿಸುವದು. ಕುಮಾರಿಯ ವೃತ್ತಾಂತವನ್ನರಿತು ಲಗ್ನದ ಸಮಾಚಾರಕ್ಕೆ ಬರುವನು. ಅವಳ ಕರಾರಿನಂತೆ ಜೈಮಿನಿಯು ಆಕೆಯನ್ನು ಹೆಗಲಮೇಲೆ ಹೊತ್ತುಕೊಂಡು ಸಮೀಪದ ಅಶ್ವತ್ಥ ವೃಕ್ಷವನ್ನು ಮೂರು ಸುತ್ತು ಸುತ್ತಹೋಗುವನು. ಒಂದೆರಡು ಸುತ್ತಿನಲ್ಲಿ ಭಾರವಾಗಿ ಮೇಲೆ ನೋಡಲು, ಕನೈಯಾಗದೆ ಕುದುರೆ ಸವಾರನ ದೃಶ್ಯಕಾಣುವದು. ಆಗ ಮುನಿಯ ಮನ ನಾಚುತ್ತದೆ. ಕ್ಷಮೆ ಕೇಳಲು ಕಾಮದೇವನು ಮರದ ಮೇಲಿನ ವ್ಯಾಸರನ್ನು ತೋರಿಸುವನು. ಗುರುಗಳು ವಿದ್ವಾಂಸನಾದ ಶಿಷ್ಯನ ಹೀನಸ್ಥಿತಿಗಾಗಿ ನಗುವರು. ಗರ್ವವೆಲ್ಲ ದೂರವಾಯಿತೆಂದು ಕ್ಷಮೆಕೇಳುವನು. ವ್ಯಾಸರು ಜೈಮಿನಿಗೆ ಇಂದ್ರಿಯ ಶಕ್ತಿಯ ಸ್ವರೂಪವನ್ನು ಯಥೋಚಿತವಾಗಿ ತಿಳಿಸುವರು. (ಮಾನವ ಧರ್ಮ ಪುಟ ೬೮೯)

ಕೇವಲ ಗಾಳಿ, ನೀರು, ಒಣಗಿದ ಎಲೆಗಳನ್ನು ತಿಂದು ತಪಗೈದ ವಿಶ್ವಾಮಿತ್ರ ಪರಾಶರ-ಶಾಂಡಿಲ್ಯ ಮೊದಲಾದ ಋಷಿಗಳೂ ಸಹ ಮೇನಕಾ, ರಂಭಾ, ಸತ್ಯವತಿ ಮೊದಲಾದ ದೇವಲೋಕದ ಸುಂದರಿಯರನ್ನು ಕಂಡು ಮೋಹಿತರಾದರು. ಅಂದಮೇಲೆ ಪ್ರತಿನಿತ್ಯ ಹಾಲು-ತುಪ್ಪ ಮೊಸರು ಯುಕ್ತವಾದ ಮೃಷ್ಟಾನ್ನವನ್ನು ಉಣ್ಣುವ ಮಾನವರಿಂದ ಇಂದ್ರಿಯ ನಿಗ್ರಹಮಾಡುವದು ದುಸ್ಸಾಧ್ಯವೇ ಆಗಿದೆ. ವಿಷಯಗಳಲ್ಲಿ ಇಂದ್ರಿಯಗಳನ್ನು ಆಕರ್ಷಿಸುವ ಬಲವಿದೆ. ಅದಕ್ಕಾಗಿ ಆಕರ್ಷಣ ಶಕ್ತಿಯುಳ್ಳ ಇಂದ್ರಿಯಗಳ ಗ್ರಹಿಕೆಯು ಸಾಮಾಜಿಕವಾಗಿ, ನೈತಿಕವಾಗಿ ಮತ್ತು ಧಾರ್ಮಿಕವಾಗಿ ಯಥೋಚಿತವಾಗಬೇಕು. ಅಂದರೆ ಯೋಗ್ಯ. ಇಲ್ಲವಾದರೆ ಜೀವಾತ್ಮನು ಭವಭಂಧನಕ್ಕೊಳಗಾಗುವನು. ಕಮಲದ ಎಲೆಯಂತೆ ನೀರಿನ ಲೇಪವಿಲ್ಲದೆ ಇರುವ ಹಾಗೆ, ಜ್ಞಾನಿಯು ಮಾತ್ರ ವಿಷಯವನ್ನು ಭೋಗಿಸಿಯೂ ಆದರಿಂದ ನಿರ್ಲಿಪ್ತನಾಗುತ್ತಾನೆ. ಆದರೆ ವಿಷಯವು ಕೇವಲ ಭೋಗದಿಂದ ಶಾಂತವಾಗಲಾರದು.

ನ ಜಾತು ಕಾಮಃ ಕಾಮಾನಾಮುಪಭೋಗೇನ ಶಾಮ್ಯತಿ ||

ಹವಿಷಾ ಕೃಷ್ಣವರ್ತ್ಮೇವ ಭೂಯ ಏವಾಭಿವರ್ಧತೇ ||

ತುಪ್ಪದಿಂದ ಬೆಂಕಿಯು ಪುನಃ ಪುನಃ ಪ್ರಜ್ವಲಿಸುವಂತೆ ವಿಷಯೋಪಭೋಗವೆಂಬ ಕಾಮವನ್ನು ಭೋಗದಿಂದ ತೃಪ್ತಿಗೊಳಿಸುವದು ಎಂದೂ ಸಾಧ್ಯವಿಲ್ಲೆಂದು ಶಾಸ್ತ್ರಕಾರರು ಸಾರಿದ್ದಾರೆ.

ಭಾರತೀಯ ದಾರ್ಶನಿಕರು ಕಾಮವನ್ನು ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳಲ್ಲಿ ಸೇರಿಸಿದ್ದಾರೆ. ಕಾಮವೆಂದರೆ, ಬಯಕೆ ಅಪೇಕ್ಷೆ ಅಥವಾ ಮನದ ಮುಂದಣ ಆಶೆ, ಅದು ಧರ್ಮದಿಂದ ಸಂಗ್ರಹಿಸಿದ ಧನದಿಂದ ಪೂರೈಸುವ ಅಪೇಕ್ಷೆಯಾಗಬೇಕು. ಆಗ ಕಾಮವೂ ಒಂದು ಪುರುಷಾರ್ಥವಾಗಬಹುದು. ಕಾಮವು ಕೇವಲ ಸ್ವಾರ್ಥಪರವಾದರೆ ವಾಸನೆಯೆನಿಸುವದು. ವಾಸನೆಯನ್ನು ನಿವಾರಿಸುವದು ಬಲುಕಷ್ಟ, ಧರ್ಮ ಮತ್ತು ಅರ್ಥಗಳನ್ನು ಅನುಸರಿಸಿದ ಕಾಮನೆಯಲ್ಲಿ ಪರಿಶುದ್ಧತೆ ಹಾಗೂ ಪರಿಪಕ್ವತೆಗಳು ಕಾಣುತ್ತವೆ. ಅಪಕ್ವವಾದ ಕಾಮವು ಮೋಹಕವಾಗಿ ಬಂಧನಕಾರಿಯಾಗುವುದು.

ಮನೋವಿಜ್ಞಾನಿಗಳು ಅತೃಪ್ತ ಕಾಮನೆಯಿಂದ ಮನಸ್ಸು ಮಲಿನವಾಗುವದು. ಅದು ವಿಕೃತಗೊಳ್ಳಲು ಅವಕಾಶಹೊಂದುವದು, ಆದ್ದರಿಂದ ಕಾಮನೆಯನ್ನು ಅತೃಪ್ತ (ಮೊಟಕು)ಗೊಳಿಸಬಾರದು. ಅರ್ಥಾತ್ ಇಂದ್ರಿಯಗಳನ್ನು ನಿಗ್ರಹಿಸಬಾರದು. ಎಂದು ಅಭಿಪ್ರಾಯ ಪಡುತ್ತಾರೆ. ಶಿವಶರಣರು –

”ಇಂದ್ರಿಯ ನಿಗ್ರಹವ ಮಾಡಿದರೆ ಹೊಂದುವವು ದೋಷಗಳು,

ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು’

ಎಂದು ಮನೋವಿಜ್ಞಾನಿಗಳ ಅರ್ಥವನ್ನೇ ಅನುಸರಿಸಿದ್ದರೂ ಇಲ್ಲಿ ಕಾಮನೆಗಳನ್ನು ಪ್ರಸಾದಗೊಳಿಸಿ ಲಿಂಗೋಪಭೋಗಿಯಾಗಿ ಸ್ವೀಕರಿಸುವ ಕಲೆಯನ್ನು ಕಂಡಿದ್ದಾರೆ. ಕಾಮನೆಯಲ್ಲಿ ಭಾವ ಪರಿಶುದ್ಧವಾಗಬೇಕು. ಪರಧನ ಪರಸ್ತ್ರೀಯರಲ್ಲಿ ಕಾಮ ಬೇಡವೆಂದೂ, ಪರಸ್ತ್ರೀಯೆಂಬ ಜೂಬಿಗಂಜುವೆವೆಂದೂ ಶರಣರು ನೈತಿಕ ಹೊಣೆಯನ್ನು ಹೊತ್ತು ನಡೆದರು. ಪರಸ್ತ್ರೀಯನ್ನು ಮಹಾದೇವಿಯನ್ನಾಗಿ ಕಂಡರು. ಏಕಪತ್ನಿ ವ್ರತಸ್ಥರಾಗಿ ಪುರುಷ ಬಾಳಿದರೆ ಪ್ರತಿವೃತೆಯರಾಗಿ ಸ್ತ್ರೀಯರು ಬಾಳುವರು. ಹೀಗೆ ತನ್ನ ವಸ್ತುವಿನಲ್ಲಿ ಕಾಣುವ ಕಾಮನೆ ಪುರುಷಾರ್ಥವಾಗುವದು. ಅದರಿಂದ ಮೋಕ್ಷ ದೊರೆಯುವದು.

ಗುರುವೇ ! ಕಾಮಾರಿಯೇ ! ಇಂಥ ಕಾಮನ ಉರುವಣಿಗೆಯನ್ನು ನಿವಾರಿಸುವ ಶಕ್ತಿ ನಿನ್ನಲಿದೆ. ನಿನ್ನ ಕೃಪೆಯಲ್ಲಿದೆ. ನಾನು ನಿನ್ನ ಮೊರೆಹೊಕ್ಕಿರುವೆ. ಮನವನ್ನು ಸುಮನವನ್ನಾಗಿಸಿ ವಿಷಯಗಳನ್ನು ಶಿವಪ್ರಸಾದವನ್ನಾಗಿ ಕಾಣುವ ಕಂಗಳನ್ನಿತ್ತು ಕಾಮನಕಾಟವನ್ನು ಕಳೆ. ನೀನಲ್ಲದೆ ಎನಗೆ ಇನ್ನಾರು ರಕ್ಷಕರು

ಬೀಸಿರ್ದ ಬಲೆಯೊಳಗೆ | ಕಾಸಿ ಮೀಸೆಯ ಮೃಗವು .

ತಾಸೋತು ಬಿದ್ದು ಘಾಸಿಯಾಗಲು ನಿಮ್ಮ

ನಾಶ್ರೈಸಿದೆ ಗುರುವೆ ಕೃಪೆಯಾಗು

 ||45||       

ಬೇಟೆಗಾರನ ಬಲೆಯೊಳಗೆ ಉದ್ದಮೀಸೆಯುಳ್ಳ ಮೊಲವು ಸಿಕ್ಕು ನಾಶವಾಗು ವಂತೆ; ಮಾನವನ ಮನಸ್ಸನ್ನು ಮಥಿಸುವ ಮನ್ಮಥನು ಬೀಸಿದ ಮಾಯಾಬಲೆಯೊಳಗೆ ಅಹಂಕಾರವುಳ್ಳ ಜೀವನು ಸಿಕ್ಕು ಶರೀರದ ಶಕ್ತಿಯೆಲ್ಲ ಹ್ರಾಸವಾಗಿ ಘಾಸಿಯಾಗುವನು. ಕಾಮನ ಬಲೆ ಭದ್ರವಾದುದು. ಜೀವಾತ್ಮನು ಆ ಬಲೆಯಿಂದ ಬಿಡಿಸಿಕೊಳ್ಳಲಾರದೇ ಬಳಲಬೇಕಾಗುವದು. ಷಣ್ಮುಖಶಿವಯೋಗಿಗಳು –

‘ಕಾಮವೆಂಬ ಬೇಟೆಗಾರನು ಕಂಗಳಲೋಹಿನಿಂದ ನಿಂದು

ಕಳವಳದ ಬಾಣವನೆಸೆದು ಭವವೆಂಬ ಬಲೆಯಲ್ಲಿ

ಸಕಲ ಪ್ರಾಣಿಗಳ ಕೆಡಹಿಕೊಂಡು ಕೊಲ್ಲುತ್ತಿದ್ದಾನೆ” ಎಂದು.

ಕಾಮನ ಕಠೋರ ಕರ್ಮವನ್ನು ವರ್ಣಿಸಿದ್ದಾರೆ. ಅಜ್ಞಜೀವಿಯು ವಿಷಯವೆಂಬ ಸುಖಕ್ಕಾಗಿ ಆಶಿಸುತ್ತದೆ. ವಿಷಕ್ಕಿಂತಲೂ ಈ ವಿಷಯವು ಘೋರವಾದುದೆಂದು ಅನುಭವಿಗಳು ಬೋಧಿಸಿದ್ದಾರೆ. ವಿಷವು ಒಂದು ಜನ್ಮವನ್ನು ಹರಣಮಾಡಿದರೆ; ವಿಷಯವಾಸನೆಯು ಜನ್ಮ ಜನ್ಮಾಂತರದಲ್ಲಿಯೂ ಕಾಡುವದು. ವಿಷಯರಹಿತನಾಗ ಬೇಕಾದರೆ ಗುರುಕಾರುಣ್ಯವೇಬೇಕು. ಅದುವೇ ಮುಖ್ಯ ಸಾಧನವಾಗಿದೆ. ಈ ಮಾತನ್ನು ಅಣ್ಣ ಬಸವಣ್ಣನವರು –

ವಿಷಯವೆಂಬ ಹಸುರನೆನ್ನ ಮುಂದೆ ತಂದು ಪಸರಿಸಿದೆಯಯ್ಯಾ !

ಪಶುವೇನು ಬಲ್ಲುದು, ಹಸುರೆಂದೆಳಸುವದು.

ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ

ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯಾ

ಕೂಡಲಸಂಗಮದೇವಾ !

ಎಂದು ದೃಷ್ಟಾಂತ ಪೂರ್ವಕವಾಗಿ ತಿಳಿಸಿದ್ದಾರೆ. ಗುರುವಿನಲ್ಲಿ ವಿಷಯರಾಹಿತ್ಯವನ್ನು ಕರುಣಿಸುವ ಸುಬುದ್ಧಿಯನ್ನು ಬೇಡಿದ್ದಾರೆ. ಪಶುವು ಹಸಿಹುಲ್ಲಿಗಾಗಿ ಆಶೆ ಪಡುವಂತೆ ಜೀವಾತ್ಮನು ತನ್ನ ಸುತ್ತ ಹರಡಿದ ವಿಷಯ ಸುಖಕ್ಕಾಗಿ ಹಲುಬುತ್ತಿದ್ದಾನೆ. ಪ್ರಾಣಿಗಳು

ಕೇವಲ ಒಂದೊಂದು ವಿಷಯಕ್ಕಾಗಿ ಆಶಿಸಿ ಸಾಯುತ್ತವೆ. ಘ್ರಾಣೇಂದ್ರಿಯ ವಿಷಯವಾದ (ಸಂಪಿಗೆಯ) ಸುಗಂಧಕ್ಕಾಗಿ ಭ್ರಮರವು ಕೆಟ್ಟರೆ, ರಸನೇಂದ್ರಿಯ ವಿಷಯವಾದ ರಸಪದಾರ್ಥ (ಮೀನದ ಗಾಳಕ್ಕೆ ಹಚ್ಚಿದ್ದು)ದ ಆಶೆಗಾಗಿ ಮೀನವು ಮೀನಗಾರನ ಬಲ್ಲೆಯಲ್ಲಿ ಬಿದ್ದು ಸಾಯುತ್ತದೆ. ನಯನೇಂದ್ರಿಯ ವಿಷಯವಾದ ರೂಪವನ್ನು ಮೋಹಿಸಿ ಪತಂಗವು ದೀಪದ ಜ್ವಾಲೆಯಿಂದ ಸತ್ತರೆ, ತ್ವಗಿಂದ್ರಿಯ ವಿಷಯವಾದ ಸ್ಪರ್ಶಸುಖವನ್ನು ಬಯಸಿ ರಾಜರ ಕೃತಕದಲ್ಲಿ ಆನೆಯು ಕೆಡುವದು ಶ್ರವಣೇಂದ್ರಿಯ ವಿಷಯವಾದ ಸುಶ್ರಾವ್ಯ ಶಬ್ದವನ್ನು ಮೋಹಿಸಿ ಚಿಗುರೆಯು ಬೇಟೆಗಾರನ ಬಾಣಕ್ಕೆ ಬಲಿಯಾಗುವದು. ಆದರೆ ಪಂಚೇಂದ್ರಿಯಗಳಿಂದ ಪಂಚ ವಿಷಯಗಳನ್ನು ಊಹಿಸಲುಬಾರದು. *ವಿನಾಶ ನಿಶ್ಚಿತವೆಂಬುದು ಪ್ರತ್ಯಕ್ಷವಿದೆ.

ಗುರುವೆ ! ಈ ಕಾಮನ ಬಲೆಯಿಂದ ಪಾರಾಗುವ ಸುಬುದ್ಧಿಯನ್ನು ಕರುಣಿಸಿ ಕಾಪಾಡು. ನಿನ್ನನ್ನೇ ಆಶ್ರಯಿಸಿರುವೆ.

ಶಿವಕವಿಯ ಒಂದೊಂದು ಪದಪ್ರಯೋಗದಲ್ಲಿಯೂ ಸಾರ್ಥಕತೆಯಿದೆ, ಅರ್ಥ ಪೂರ್ಣವಾಗಿದೆ. ಕಾಸಿಮೀಸೆಯ ಮೃಗವೆಂದರೆ ಮೊಲ ಮತ್ತು ಹಮ್ಮಿನಜೀವನೆಂದೂ ಅರ್ಥೈಸಿದ್ದೇವೆ. ಮೊಲದಂತೆ ಜೀವಾತ್ಮನ ಶಕ್ತಿಯೂ ಚಿಕ್ಕದು. ಆದರೆ ಅವನಿಗೆ ಅಂಟಿರುವ ಅಜ್ಞಾನ ಮತ್ತು ಅಹಂಕಾರಗಳು ಮೀಸೆಯಂತೆ ದೊಡ್ಡದಾಗಿ ಬೆಳೆದಿವೆ. ಆಜ್ಞಾನ ಹಾಗೂ ಅಹಂಕಾರವುಳ್ಳ ಜೀವಿಯು ಕಾಮನಬಲೆಯಲ್ಲಿ ಸಿಕ್ಕು ಸೋತು ಪಾರಾಗದೆ ಘಾಸಿಯಾಗುವದು. ಕೊನೆಗೆ ಸಾಕುಸಾಕಾಗಿ ಶ್ರೀಗುರುವಿನ ಪಾದಕಮಲ ವನ್ನು ಆಶ್ರಯಿಸದೇ ಶಾಂತಿಯಿಲ್ಲವೆಂಬುದು ಈ ಶರಣನ ಬಯಕೆಯಾಗಿದೆ.

ರಚನೆ : ಪರಮಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಮನವನು ಪರಿಪಾಲಿಸು ನೀ ಜ್ಞಾನದಾನ ಮಾಡಿಶಿವ|

ಚಿನ್ಮಯ ಪ್ರಭು | ಮಾಯಾರಿ ! ಮಾರಾರಿ!! ಕಾಲಾರಿ!!! ||ಪ||೧

ನೇತ್ರದಾಟನಿಲ್ಲಿಸಿ ಸೂತ್ರದಿಯ ಸುಮತಿಯಗೂಡಿ

ಗಾತ್ರತ್ರಯವಳಿಯುತೆ ಚಿತ್ತದ ಚಿದ್ಬಿಂದು ತೋರಿ| ಚಿನ್ಮಯ ಪ್ರಭು ||೨

ನಾದಬ್ರಹ್ಮ ಭೇದವ ಶೋಧಿಸಿ ದೃಢಚಿತ್ತನಾಗಿ

ಸಾಧಿಸಿ ಶಿವಕಲೆಯನ್ನು ಮೋದಗೊಳ್ಳುವಂತೆ ಮಾಡಿ | ಚಿನ್ಮಯ ಪ್ರಭು!! ೩

ಲಿಂಗಾಂಗಸಂಗದ ಇಂಗಿತದ ಬೋಧವಿತ್ತು |

ಲಿಂಗೈಕ್ಯನ ಮಾಡುತೆ ಮಂಗಲ ಶಿವಯೋಗಿಯೆನಿಸಿ | ಚಿನ್ಮಯ ಪ್ರಭು||೪

ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳವರು ,ಹಂದಿಗುಂದ ವಿರಚಿತ

ಹುಟ್ಟಿದೆ ಗುರುವೆ ಪುಣ್ಯದ ರೂಪದಿ ಕನ್ನಡಾಂಬೆಯ ಮಡಿಲಲಿ

ನಾಡಿನ ಪುಣ್ಯವೆ ಹಣ್ಣಾದಂತೆ ಜೊಯಿಸರಳ್ಳಿಯಲಿ ಕುಮಾರ   || ೧||     

ಮನೆಯಬಿಟ್ಟೆ ಶಪಥವ ತೊಟ್ಟೆ ಬಂಧು ಬಳಗವಬಿಟ್ಟೆ

ಯಳಂದೂರ ಬಿದರಿ ಯತಿಗಳ ನಂಬಿದೆ ಮನಮುಟ್ಟಿ ಕುಮಾರ  || ೨ ||

ಜೋಳಿಗೆ ಬಿಟ್ಟೆ ಹಠವನು ತೊಟ್ಟೆ ಶಾಲೆ ಕಲಿಯಲೆಂದು

ಅಕ್ಷರ ಕಲಿಯುತ ಶಿಕ್ಷಣ ನೀಡಿದೆ ನಾಡಮಕ್ಕಳಿಗೆ ಕುಮಾರ  || ೩ ||

ಲಿಂಗವಿರದ ನಡೆ ಏನುಭೂಷಣ ಲಿಂಗಸಂಗವೆ ಲೇಸು

ಲಿಂಗವಿರದ ಭವಿಗಳ ಸಂಗ ಎಂದೆಂದಿಗೂ ಬೇಡ ಕುಮಾರ  || ೪ ||

ಮಠವು ಎಂದರೆ ಏನದಕರ್ಥ ಧರ್ಮ ಸಂಸ್ಕೃತಿ ಕೇಂದ್ರ

ನೊಂದ ಜೀವಕೆ ಸಾಂತ್ವನ ನೀಡುವ ನೆಮ್ಮದಿಯ ತಾಣ ಕುಮಾರ  || ೫ ||

ಅನ್ನ ಅರಿವು ಆಶ್ರಯ ನೀಡುವ ಪುಣ್ಯತಾಣ ಮಠಗಳು

 ಅನ್ನದಾಸೋಹ ಕನ್ನಡ ನಾಡಿನ ಹೆಮ್ಮೆ ನಮ್ಮ ಮಠವು ಕುಮಾರ  || ೬ ||

ಬಯಸದೆ ಬಂದಿತು ಮಠದಧಿಕಾರ ಹಾನಗಲ್ಲ ಮಠವು

ಮಲ್ಹಣಾರ್ಯನು ಕೈ ಹಿಡಿದು ಕರೆದನು ನಾಡಸೇವೆಗೆಂದು ಕುಮಾರ  || ೭ ||

ಹಳ್ಳಿ ಪಟ್ಟಣಗಳ ನಿಲ್ಲದೆ ಸುತ್ತಿದೆ ಬರಿಗಾಲಲಿ ನಡೆದೆ

ಧರ್ಮಜಾಗೃತಿಗಾಗಿ ಭಕ್ತ ಮನೆಯ ಬಾಗಿಲಿಗೆ ಕುಮಾರ  || ೮ ||

 ಶಿವಯೋಗ ಮಂದಿರ ಮಹಾಸಭೆಯನು ನಿಷ್ಠೆಯಿಂದಲಿ ಕಟ್ಟಿ

ವಚನದ ಕಟ್ಟನು ಶೋಧಿಸಿ ರಚಿಸಲು ಹಳಕಟ್ಟಿಗೆ ಕೊಟ್ಟೆ ಕುಮಾರ  || ೯ ||

ಗುರು ವಿರಕ್ತರು ನಾಡಿನ ಭಕ್ತರು ಕೂಡಿ ನಡೆಯೆ ಶಕ್ತಿ

ಸಮಯಭೇದವ ಕಳೆದು ಸಮರಸ ದಾರಿ ತೋರಿದನು ಕುಮಾರ  || ೧೦ ||

ಮಕ್ಕಳಿರದ ಶಿರಸಂಗಿ ದೊರೆಗೆ ಮನ ಒಲಿಸಿದೆ ತಿಳಿಸಿ

ನಾಡ ಮಕ್ಕಳ ಶಿಕ್ಷಣಕಾಗಿ ದಾನ ನೀಡಿಸಿದೆ ಕುಮಾರ   || ೧೧ ||

ಸ್ವಾಮಿ ಎಂದರೆ ಒಡೆಯನು ಅಲ್ಲ ನಿಜದಿ ಸೇವಕನು

 ಕಾಯ ವಾಚಾ ಮನಸ್ಸಿನಲ್ಲಿ ನಿರ್ಮೋಹಿಯು ನೀನು ಕುಮಾರ  || ೧೨ ||

ರಾಷ್ಟ್ರ ನಿಷ್ಠೆಗೆ ಖಾದಿ ಧರಿಸಿದೆ  ರೋಗಿಗಳನುಪಚರಿಸಿ

 ಬರಗಾಲದಿ ದಾಸೋಹ ಗೈದು ಜನರ ಬದುಕಿಸಿದೆ ಕುಮಾರ  || ೧೩ ||

ಅಂಧ ಅನಾಥರು ಆಶ್ರಯ ರಹಿತರು ಯಾರಿಗೂ ಬೇಡಾದವರು

 ಗಾನಯೋಗಿ ಪಂಚಾಕ್ಷರಿ ಎಂದು ನಾಡ ಬೆಳಗಿದರು ಕುಮಾರ  || ೧೪ ||

ಯಾರಿಗೆ ಯಾರು ಯಾರಿಂದೇನು ನಮಗಾದವನೆ ದೈವ

 ಹಣೆಬರಹ ಬದಲಿಸಿ ಬಾಳಲು ಕಲಿಸಿದ ಅಂಧರ ತಂದೆಯು ನೀ ಕುಮಾರ  || ೧೫ ||

 ಲಿಂಗ ವಿಭೂತಿ ರುದ್ರಾಕ್ಷಿ ರೂಪ ಮಹಾ ಜಂಗಮ ನೀನೆ

 ಅಂಧ ಅನಾಥರ ದೈವ ನೀನೆ ತಾಯಿಯ ಪ್ರತಿರೂಪ ಕುಮಾರ || ೧೬ ||

 ಇಳಕಲ್ ಪೂಜ್ಯರು ವಿಜಯ ಮಹಾಂತರು ಹಾವೇರಿಯ ಶಿವಬಸವರು

 ಎಲ್ಲ ಯತಿಗಳು ಕೂಡಿ ಬೆಳಸಿದರು ಶಿವಯೋಗ ಮಂದಿರವ ಕುಮಾರ || ೧೭ ||

ಲಿಂಗವಂತರು ಶೂದ್ರರೆಂಬ ಪರಳಿಯ ವಾದದಲಿ

 ಶಾಸ್ತ್ರಸಮ್ಮತವಾಗಿ ಮಿಗಿಲೆಂದು ವ್ಯಾಜ್ಯ ಗೆಲ್ಲಿಸಿದೆ ಕುಮಾರ || ೧೮ ||

 ಶರಣರು ಮೆಟ್ಟಿದ ಧರೆಯು ಪಾವನ ಸೊನ್ನಲಿಗೆಯ ಪುರವು

ನಾಲತವಾಡದ ವೀರೇಶ್ವರರು ಕರುಳ ಕುಡಿಯವರು ಕುಮಾರ || ೧೯ ||

 ನಂಬಿ ಕೊಂಡರೆ ಶಿವನಪ್ರಸಾದ ನಂಬದಿರ್ದೊಡೆ ವಿಷವು

 ತುತ್ತಿಗೊಮ್ಮೆ ಶರಣೆಂದು ಉಂಡರೆ ಲಿಂಗ ಪ್ರಸಾದ ಕುಮಾರ  || ೨೦ ||

 ಬಯಸಿ ಉಣಲಿಲ್ಲ ಹಬ್ಬದೂಟವ ಬಾಯ ಚಪಲಕೆ ಬೇಡಿ

 ಬಯಸದಿಹ ಲಿಗಭೋಗವು ಲಿಂಗಕರ್ಪಿತವು ಕುಮಾರ  || ೨೧ ||

 ಬಸವನ ನೆನೆಯುತ ಧರಿಸೊ ಭಸ್ಮವ ಮುಕ್ತಿಯು ನಿನಗಹುದು

ಜಾಣ ಜಾಣರು ಸಂತ ಯತಿಗಳು ಮೋಕ್ಷ ಪಡೆದಿಹರು ಕುಮಾರ  || ೨೨ ||

ಭಸ್ಮಧೂಳಿಯು ಪಾವನ ಚಿನ್ನ ಶಿವನ ಮೈ ಬೆಳಗು

 ಶರಣರ ನೆನೆಯುತ ಧರಿಸಲು ನಿತ್ಯ ಪಾಪ ನಾಶವು ಕುಮಾರ  || ೨೩||

 ಹಿಡಿದ ನೇಮವ ಬಿಡದ ಹಠವು ತ್ಯಾಗಭಾವ ಸಿರಿಯು

ಎಲ್ಲರೊಂದಿಗೆ ಬೆರೆತು ಬಾಳುವ  ಸಮತೆಯ ಸನ್ನಿಧಿಯು ಕುಮಾರ  || ೨೪ ||

 ಪೂಜಿಪೆಯಾದರೆ ಯಾವುದು ಪೂಜೆ ತಿಳಿದು ಮಾಡು ಮನುಜ

ಸಮಾಜ ಸೇವೆಯೆ ಲಿಂಗಪೂಜೆ ಮಾಡಿತೋರಿದೆ ನೀ ಕುಮಾರ  || ೨೫ ||

 ಉಳಿಯ ಮುಟ್ಟದ ಲಿಂಗವೆಂತು ಮನವ ಮುಟ್ಟುವುದು

ಕೊಟ್ಟ ಗುರುವಿನ ಕಷ್ಟವೇನು ಯಾರು ಬಲ್ಲವರು ಕುಮಾರ  || ೨೬ ||

 ಲಿಂಗ ಪ್ರಾಣ ಪ್ರಾಣವೆ ಲಿಂಗ ಇಷ್ಟಲಿಂಗದಿ ನಿಷ್ಠೆ

 ಲಿಂಗತಾನು ತಾನೆ ಲಿಂಗವು ಲಿಂಗ ರೂಪನು ಕುಮಾರ  || ೨೭ ||

 ಕಿಂಕರನಾದವ ಶಂಕರ ನೋಡು ಕಿಂಕರನಾಗಿರ ಬೇಕು

ಮೇಲು ಗದ್ದುಗೆ ಬಯಸದ ಜೀವ ದ್ವಿತಿಯ ಶಿವನಾಯ್ತು ಕುಮಾರ  || ೨೮ ||

 ಸುಖವ ಬಯಸದೆ ದುಡಿದ ಜೀವ ನಾಡಿನೇಳ್ಗೆಯ ಬಯಸಿ

ನೊವನುಂಗಿ ನಂಜನುಂಡು ನೀಡಿದೆ ಅಮೃತವ ಕುಮಾರ  || ೨೯ ||

 ಸಾವು ನೋವಿಗೆ ಹೆದರುವಿ ಯಾಕೊ ಸಾಯದವರು ಯಾರು

ಕಾಯ ಮಾಯಾ ಮೋಹನಳಿದು ಮರಣ ಗೆಲಿದವನೊ ಕುಮಾರ  || ೩೦ ||

 ಮುಕ್ತಿಯಂತೆ ಯಾವುದು ಮುಕ್ತಿ ಮೋಕ್ಷ ಅವರಿಗಿರಲಿ

ಜನ್ಮ ಜನ್ಮದಲು ಸೇವೆಗಾಗಿ ಮತ್ತೆ ಬರುವೆನೆಂದ ಕುಮಾರ  || ೩೧ ||

 ಕೋಪವಂಟಿದ ಯತಿಯ ತಪವು ಪಾಪ ಕೂಪ ಕೆಸರು

ಸಹಜ ಪ್ರವೃತ್ತಿ ಶಾಂತಮತಿ ಪಡೆವನೊ ಸದ್ಗತಿ ಕುಮಾರ  || ೩೨ ||

 ಮಹಾಲಿಂಗದೊಳು ಲೀನವಾಯ್ತು ಶ್ರೀ ಕುಮಾರ

ಜೀವ ಉರಿಯ ಉಂಡ ಕರ್ಪೂರದಂತೆ ಬೆಳಗಿ ಬೆಳಕಾದ ಕುಮಾರ  || ೩೩ ||

 ಸಮಾಜ ಸೇವೆಯೆ ತಮ್ಮಯ ಉಸಿರು ಸಮಾಜ

ನಿಮ್ಮ ಮಠವು ಸಮಾಜ ಸಮಾಜ ಸಮಾಜವೆಂದು ಪ್ರಾಣ ನೀಗಿದೆ ನೀ ಕುಮಾರ || ೩೪ ||

 ಬಾರೊ ಗುರುವೆ ಮರಳಿ ಬಾರೊ ವಟುಗಳ ಮೊರೆಯನು ಕೇಳಿ

ಕರುಣಾಮಯನೆ ಕರುಳಿಲ್ಲೇನು ಕೇಳದೆ ನಮ್ಮಕರೆ ಕುಮಾರ  || ೩೫ ||

 ನಿನ್ನ ಹೊರತು ಯಾರಿಲ್ಲ ಗತಿ ಮತಿ ನಾಸ್ತಿ ಅನ್ಯಥಾ ನಾಸ್ತಿ

 ನಿನ್ನ ಪಾದಕೆ ಕೋಟಿ ಕೊಟಿ ಶರಣು ಶರಣಾರ್ಥಿ ಕುಮಾರ  || ೩೬ ||

ಇಂಗ್ಲೀಷ ಮೂಲ: ಶ್ರೀಕಂಠ ಚೌಕೀಮಠ

ಕನ್ನಡ ಭಾಷಾಂತರ :ಶ್ರೀ ಎಮ್.ಎ.ಹಿರೇವಡೆಯರ

“ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾದಾಗಲೆಲ್ಲ ನಾನು ನನ್ನ ಸ್ವರೂಪವನ್ನು ತೊರಿಸುತ್ತೇನೆ. ಸಾಧು ಪುರುಷರನ್ನು ಉದ್ಧ್ದರಿಸುವುದಕ್ಕಾಗಿ, ಪಾಪಕರ್ಮ ಮಾಡುವವರನ್ನು ವಿನಾಶಮಾಡಲಿಕ್ಕಾಗಿ ಮತ್ತು ಧರ್ಮವನ್ನು ಸದೃಢವಾಗಿ ಸ್ಥಾಪಿಸುವದಕ್ಕಾಗಿ ಸಾಕಾರ ರೂಪದಿಂದ ನಾನು ಯುಗ-ಯುಗಗಳಲ್ಲಿ ಪ್ರಕಟವಾಗುತ್ತಿರುತ್ತೇನೆ.

ಕನ್ನಡನಾಡಿನ ಇಪ್ಪತ್ತ್ತನೆಯ ಶತಮಾನದ ಅವಿಸ್ಮರಣೀಯ ಕಾಲಘಟ್ಟದಲ್ಲಿ ನಾಡೇ ಕಂಡರಿಯದ ಮಾನವತಾವಾದಿ, ಹೊಸಯುಗವೊಂದನ್ನು ಹುಟ್ಟು ಹಾಕಿ, ಶಿವಶರಣರ ಬದುಕಿನ ಮೌಲ್ಯಗಳನ್ನು ಉತ್ತಿಬಿತ್ತಿ ಬೆಳೆದು, ಸ್ವಾರ್ಥರಹಿತ ಅರ್ಥಪೂರ್ಣವಾದ ಬಾಳನ್ನು ಬೆಳಗಿದ, ಕಾರಣಿಕ ಯುಗ ಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು. ಸಮಸ್ತ ಮಾನವ ಕುಲದ ತಾತ್ವಿಕ, ಸಾಮಾಜಿಕ ಸಮಸ್ಯೆಗಳ ಕುರಿತು ಬಿಚ್ಚು ಮನಸ್ಸಿನ ಚರ್ಚಗೆ ಉತ್ತಮ ವಾತಾವರಣವನ್ನು ನಿರ್ಮಿಸಿದರು. ವ್ಯಷ್ಠಿ ಯಿಂದ ಸಮುಷ್ಠಿಯುತ್ತ ಚಿಂತನೆ ರೂಪಿಸಿದ ಮಹಾಶಕ್ತಿಯಾಗಿ ಹೊರಹೊಮ್ಮಿದರು.

19ನೇ ಶತಮಾನದ ಉತ್ತರಾರ್ಧದಲ್ಲಿ ಜನಿಸಿ, 20ನೇಯ ಶತಮಾನದ ಪೂರ್ವಾರ್ಧಭಾಗದವರೆಗೆ ಜೀವಿಸಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಈ ನಾಡಿನ ಯಾವದೇ ಒಂದು ಭಾಗ ಅಥವಾ ಕಾಲಕ್ಕೆ ಸಂಬಂಧ ಪಟ್ಟವರಲ್ಲ ,ಅವರು ಸಮಗ್ರ ಮನುಕುಲಕ್ಕೆ ಸಂಭಂಧ  ಪಟ್ಟವರು. ಶ್ರೀ ಕುಮಾರ ಶಿವಯೋಗಿಗಳ ಜೀವನ ಅವಿಸ್ಮರಣೀಯ, “ಸಮಾಜಸೇವೆಯೇ ಶಿವಪೂಜೆ” ಎಂಬ ಸೂಕ್ತಿ ಇವರಿಗೆ ಸಹಜವೆಂಬಂತೆ ಸಂದಿದೆ.

ಹಾವೇರಿ ಜಿಲ್ಲೆಯ ಜೋಯಿಸರ ಹರಳಹಳ್ಳಿ  ಎಂಬ ಪುಟ್ಟ ಹಳ್ಳಿಯ ಬಡ ಕುಟುಂಬ ಒಂದರಲ್ಲಿ, ಆತ್ಮಬಲ ಆಧ್ಯಾತ್ಮ ಸಾಧನೆಯಲ್ಲಿ ಜೀವಿಸುತ್ತಿದ್ದ ಬಸಯ್ಯ-ನೀಲಮ್ಮ ಎಂಬ ದಂಪತಿಗಳ ಪವಿತ್ರ ಗರ್ಭದಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜನನವಾಯಿತು.

              ಅಂದೊಂದು ದಿನ ರಾತ್ರಿ ಒಬ್ಬ ಜಂಗಮ ಶಿವಯೋಗಿ ತಾಯಿ ನೀಲಮ್ಮನ ಕನಸಿನಲ್ಲಿ ಕಂಡು, ಸುಂದರವಾದ ಸುವಾಸನೆಯ ಹೂವೊಂದನ್ನು  ಕೊಟ್ಟು “ತಾಯಿ ನೀಲಮ್ಮ  ನಿನ್ನ ಗರ್ಭದಲ್ಲಿ ಶಿವನ ಅಪೇಕ್ಷೆಯ ಮೇರೆಗೆ ಕಾರಣಿಕ ಪುರುಷನ ಜನನ ವಾಗುವುದೆಂದು” ಹೇಳಿದ ವಾಣಿ ಹೊಸಯುಗದ ನಾಂದಿ ಹಾಡಿತು.

 ಪ್ರಭನಾಮ ಸಂವತ್ಸರ ಭಾದ್ರಪದ ಶುಕ್ಲ ಪಕ್ಷ ತ್ರಯೋದಶಿಯ ಬುಧವಾರ ಬೆಳಗಿನಜಾವದಲ್ಲಿ ಸಪ್ಟಂಬರ 11ರಂದು, ಕ್ರಿ.ಶ, 1867ರಲ್ಲಿ ಶ್ರೀ ಕುಮಾರ ಶಿವಯೋಗಿಗಳ ಜನನವಾಯಿತು. ಹುಟ್ಟಿದ ಮಗುವಿಗೆ ಹಾಲಯ್ಯ ನೆಂದು ನಾಮಕರಣ, ಹುಟ್ಟಿನಿಂದಲೇ ಅದ್ಭುತಗಳನ್ನು ಮೆರೆದ ಮಗು ಹುಣ್ಣಿಮೆಯ ಚಂದ್ರನಂತೆ ಅರಳಿ, ಆರುವರ್ಷಗಳು ತುಂಬಿದಾಗಲೇ ಓದು-ಬರಹಗಳಲ್ಲಿ ಪ್ರಾವಿಣ್ಯತೆಯನ್ನು ಪಡೆದ ಹಾಲಯ್ಯನಿಗೆ ಅಕ್ಷರ ದೀಕ್ಷೆ ನೀಡಿದವರು ಮನೆಯನ್ನೆ ಶಾಲೆಯನ್ನಾಗಿ ಮಾಡಿದ ಅಜ್ಜ ಕೊಟ್ಟೂರು ಬಸವಾರ್ಯರು.

              ಹುಟ್ಟಿನಿಂದಲೇ ತ್ಯಾಗ ಮನೋಭಾವನೆಯನ್ನು ಹೊತ್ತು ತಂದ ಹಾಲಯ್ಯ ಸುತ್ತಲಿನ ಪ್ರಪಂಚವನ್ನು ಕರುಣೆÂ ಪ್ರೀತಿಗಳಿಂದಲೇ ಕಾಣುತ್ತ ಬೆಳೆದವರು. ವಿನಯಶೀಲತೆ ಅನುಕಂಪ ಹಾಲಯ್ಯನ ಹುಟ್ಟುಗುಣಗಳು. ಆಗಾಗ ಧ್ಯಾನಾಸಕ್ತನಾಗಿ ಮೌನದಲ್ಲಿಯೇ ಮುಳಗುತ್ತಿದ ಹಾಲಯ್ಯ ಬೆಳೆದಂತೆ ಬೇರೆಯವರೊಡನೆ ಆಡುವ ಆಟಪಾಠಗಳನ್ನು ತ್ಯಜಿಸಿ ಮೌನಿಯಾಗಿ ಜೀವಿಸಹತ್ತಿದ. ಶಾಲಾ ಅಭ್ಯಾಸದಲ್ಲಿ ಅಭಿರುಚಿ ಇದ್ದರೂ, ತ್ಯಾಗ, ಅನುಕಂಪ, ಆತ್ಮಜ್ಞಾನಗಳಕಡೆಗೆ ಬಾಲಕನ ಒಲವು ಇದ್ದಂತೆ ಭಾಸವಾಗುತ್ತಿತ್ತು.

ಹಾಲಯ್ಯ ಹುಟ್ಟಿದ ಕುಟುಂಬ ಬಡತನದಲ್ಲಿಯೇ ಮುಳುಗಿ ಏಳುವ ಆ ಕರುಣಾಜನಕ ಸ್ಥಿತಿಯಲ್ಲಿ  ಮತ್ತೊಂದು ಕರುಣಾಜನಿಕ ಘಟನೆಯನ್ನು ದೈವಿಶಕ್ತಿ ತಂದೊಡ್ಡಿತು. ತಂದೆ ಬಸಯ್ಯನವರ ಅಕಾಲಿಕ ಮರಣ, ತಾಯಿಗೆ ಸಿಡಿಲು ಬಡಿದಂತಾಯಿತು. ಇದನ್ನು ಕಂಡುಂಡ ಬಾಲಕ ಹಾಲಯ್ಯನ ಅಂತರಂಗದ ತುಡಿತ ಒóಂದು Pಡೆಯಾದರೆ ಬಡತನದ ತುಳಿತ ಮತ್ತೊಂದು ಕಡೆ.

              ಕಂತೆ ಭಿಕ್ಷವೇ ಮನೆತನದ ಬಡತನ ಕಳೆಯುವ ಜೀವನಾಧಾರ  ಮತ್ತು ಶಿವನ ಉಂಬಳಿ ಎಂಬಂತೆ, ಮನಸ್ಸ್ಸಿಲ್ಲದಿದ್ದರೂ ಮನೆ ಮನೆಯ  ಕಂತೆ ಭಿಕ್ಷಕ್ಕೆ ಹೊರಟ ಬಾಲಕ ಹಾಲಯ್ಯನಿಗೆ ಒಂದು ಘಟನೆ ಬಯಸದೆ ಬಂದ ಭಾಗ್ಯವಾಗಿ ಬಂದಿತು. ಆ ಘಟನೆ ಬಾಲಕ ಹಾಲಯ್ಯನ ಜೀವನದ ಹೊಸ ಘಟ್ಟಗಳಿಗೆ ನಾಂದಿ ಹಾಡಿತು. ಬಾಗಿಲು ಬಳಿ ನಿಂತ ಹಾಲಯ್ಯನಿಗೆ, ಭರಮಪ್ಪನೆಂಬ ಯಜಮಾನನ ಭಾರವಾದ ಮಾತುಗಳು ಹೊಸ ದಿಕ್ಕನ್ನೆ ತೋರಿಸಿತು.” ಈಗ ನಿನಗೆ 12 ವರ್ಷಗಳು ತುಂಬಿವೆ, ಇನ್ನೂ ಎಷ್ಟುದಿನ ಭಿಕ್ಷೆಬೇಡಿ ಜೋಳಿಗೆ ತುಂಬುವ ಸಾಹಸ ಮಾಡುವೆ? ಹೋಗು ಬದುಕಲು ಶಿಕ್ಷಣದ ಮೊರೆ ಹೋಗು ” ಎಂಬ ಬಿರು ನುಡಿಗಳು  ಬಾಲಕನ ಮೇಲೆ ಪರಿಣಾಮ ಬೀರಿ  ಎಚ್ಚರಗೊಳ್ಳುವಂತೆ ಮಾಡಿದವು. ಹಾಲಯ್ಯನ ಮನದಂಗಳಲ್ಲಿ ಭರಮಪ್ಪನ ಬಿರುನುಡಿಗಳು ಪ್ರತಿಧ್ವನಿಸ ತೊಡಗಿದವು.

              ಮರುದಿನ ಬಟ್ಟೆ ತೊಳೆಯಲೆಂದು ಊರಹೊರಗಿನ ಬಾವಿಗೆ ಹೋದ ಹಾಲಯ್ಯ ಮರಳಿ ಮನೆಗೆ ಬರಲಿಲ್ಲಿ. ಬಟ್ಟೆತೊಳೆಯುವ  ಕೆಲಸ ಮುಗಿಸಿ, ಅವುಗಳನ್ನು ಮನೆಗೆ ಮುಟ್ಟಿಸುವ ಜವಾಬ್ದಾರಿಯನ್ನು ಮಿತ್ರರೊಬ್ಬರಿಗೆ ಹೊರಸಿ ಹಾಲಯ್ಯ, ಕಜ್ಜರಿ ಎಂಬ ಊರಿಗೆ ಕಾಲುನಡಿಗೆಯ ಪ್ರಯಾಣ ಬೆಳೆಸಿದ. ಎಲ್ಲಿಗೆ ಹೋಗಲಿ…? ಹಾಲಯ್ಯನ ಅಂತರಂಗದ ಪ್ರಶ್ನೆ ಮೈಮನಗಳೆಲ್ಲ ತತ್ತರಿಸಿದರೂ ತಾಳ್ಮೆಗೆಡದ ಹಾಲಯ್ಯ  ಮಾರ್ಗದ ಬದಿಗಿದ್ದ ಮರದ  ಕಟ್ಟೆಯ ಮೇಲೆ ಕೈಕಟ್ಟಿಕೊಂಡು ಕುಳಿತಾಗ ರಾಚಯ್ಯ ಹಿರೇಮಠರೆಂಬ ಯಜಮಾನರು ಹಾಲಯ್ಯನ ಮೈತಟ್ಟಿ ಮಾತನಾಡಿಸಿದರು. ಆತನ ದಿವ್ಯಮುಖದ ತೇಜಸ್ಸಿಗೆ ಮಾರು ಹೋಗಿ, ಮನಕರಗಿದಂತಾಗಿ ಬಾಲಕ ಹಾಲಯ್ಯನನ್ನು ಮನೆಗೆ ಕರೆದುಕೊಂಡು ಹೋದರು, ಹಸಿದ ಹೊಟ್ಟೆಗೆ ಪ್ರಸಾದ ನೀಡಿದ ನಂತರ, ಮನದ ಹಸಿವೆಯನ್ನು ಅರ್ಥಮಾಡಿಕೊಂಡ ರಾಚಯ್ಯ ಹಾಲಯ್ಯನಿಗೆ ಪ್ರಾಥಮಿಕ ಶಿಕ್ಷಣ ಪೂರೈಸುವ ಸರ್ವಾನುಕೂಲತೆಯನ್ನು ಮಾಡಿದರು, ಹಾಲಯ್ಯನಿಗೆ ಎಂದಿಲ್ಲದ ಸಂಬ್ರಮ, ಸಮಾಧಾನ..

              ಅಂದಿನಕಾಲದಲ್ಲಿ ಕನ್ನಡ ಏಳನೆ ಇಯತ್ತೆಯ ಮೂಲ್ಕಿ ಪರೀಕ್ಷೆಯಲ್ಲಿ ಪಾಸಾದರೆ ಮಾಮಲೇದಾರನಿಗೆ ಸಿಕ್ಕಷ್ಟು ಗೌರವ, ಕಜ್ಜರಿ ಗ್ರಾಮದಿಂದ 123 ಕಿ.ಮಿ. ದೂರ ಇದ್ದ ಧಾರವಾಡ ಪಟ್ಟಣದಲ್ಲಿ ಮೂಲ್ಕಿ ಪರೀಕ್ಷೆ ಪತ್ರಿಕೆ ಬರೆಯಲು ಕಾಲುನಡಿಗೆಯಿಂದ ಸಹಚರರೊಡನೆ ಹಾಲಯ್ಯ£ವರು ಪ್ರಯಾಣಿಸಿದರು, ಬರಿಗಾಲಿನ ಹಾಲಯ್ಯ ಧಾರವಾಡ ವನ್ನು ಮುಟ್ಟಿ ಪರೀಕ್ಷೆ ಬರೆಯುವಾಗ ಹಾಲಯ್ಯನವರಿಗೆ  ಮೈತುಂಬ ಜ್ವರದ ಬಾಧೆ !!s

              ದೈವದಾಟವನ್ನು ಅರಿತವರಾರು? ಹಾಲಯ್ಯ ಮೂಲ್ಕಿ ಪರೀಕ್ಷೆಯಲ್ಲಿ ಅನುತ್ತೀರ್uನಾಗಿ ಮೈಮರೆಸಿಕೊಂಡು ಕುಳಿತು ಗಾಡಾಂಧಕಾರದಲ್ಲಿಯೇ ಕಾಲ ಕಳೆಯ ಬೇಕಾಯಿತು. 15 ದಿವಸಗಳವರೆಗೆ ಹಾಲಯ್ಯನಿಗೆ ಎಕಾಂತದ ಆಶ್ರಯ,  ಶಿಕ್ಷಕರೊಬ್ಬರು ಬಂದು ಹಾಲಯ್ಯನನ್ನು ಸಂತೈಸಿ ಮೂಲ್ಕಿ ಮರು ಪರೀಕ್ಷೆಗೆ ಕಟ್ಟಲು ಮಮತೆಯಿಂದ ಮನವಲಿಸುವ ಪ್ರಯತ್ನ ಮಾಡಿದರು. ಮರು ಪರೀಕ್ಷೆಗೆ ಕಟ್ಟಲು ಮನಸ್ಸುಮಾಡದ ಹಾಲಯ್ಯನವರಿಗೆ  ತಾಯಿಯ  ಮನೆಯ  ನೆನಪಾಗಿ, ಎನಾದರೊಂದು ಕಾಯಕಮಾಡಿ ಕಾಯವನ್ನು ಕಾಪಾಡುವ ನಿರ್ಣಯದೊಂದಿಗೆ ತಾಯಿಯ ತೌರುಮನೆ ಲಿಂಗದ ಹಳ್ಳಿಗೆ ತೆರಳಿದರು.

              ಹಾಲಯ್ಯ ಲಿಂಗದ ಹಳ್ಳಿಯಲ್ಲಿ ಸಣ್ಣಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ಕೊಡುವದರ ಜೊತೆಗೆ ಸ್ವ ಅಧ್ಯಯನ ಹಂಬಲದಿಂದ ನಿಜಗುಣ ಶಿವಯೋಗಿಗಳ ತತ್ವಜ್ಞಾನ ಅರಿಯಲು, ಅಲ್ಲಿನ ಹಿರಿಯರಾದ ಬಸಯ್ಯ ನವರ ಸಂಪರ್ಕದಲ್ಲಿ ನಿಜಗುಣರ ತತ್ವ ಶಾಸ್ತ್ರದ ಕವಿತೆಗಳ ಅಧ್ಯಯನ ಪ್ರಾರಂಭಿಸಿದರು.

ಹಾಲಯ್ಯ ಲಿಂಗದ ಹಳ್ಳಿಯಲ್ಲಿರುವೆನೆಂದು ತಿಳಿದ ತಾಯಿ ನೀಲಮ್ಮ ಮಗನನ್ನು ಕಾಣಲು ಅಲ್ಲಿಗೆ ಬರುತ್ತಾರೆ. ಹರೆಯದ ಮಗನನ್ನು ಕಂಡು ಸಂತೋಷಭರಿತಳಾದ ತಾಯಿ ಮಗನ ಮದುವೆಯ  ಪ್ರಸ್ತಾಪ ಮಾಡಿದಾಗ ಮಗ ಹಾಲಯ್ಯನಿಂದ ಅತ್ಯಂತ ಅನಿರೀಕ್ಷಿತ ಉತ್ತರವಾಗಿತ್ತು.

“ಮದುವೆ ಮಾಡಿಕೊಂಡು ನಾನು ಸಂತೋಷಪಡಬೇಕಾಗಿಲ್ಲ ನಾನು ಬ್ರಹ್ಮಚಾರಿಯಾಗಿಯೇ ಜನಿಸಿದ್ದೇನೆ.  ನಿನ್ನ ಜೀವನ ಪೋಷಣೆಗಾಗಿ ಮತ್ತೊಬ್ಬ ಮಗನಿದ್ದಾನೆ ಮನೆಗೆ ಬಂದ ಸೊಸೆ ಮತ್ತು ಮಗ ನಿನ್ನ ವೃದ್ಧಾಪ್ಯ ಜೀವನಕ್ಕೆ ರಕ್ಷಣೆ ಕೊಡುತ್ತಾರೆ”. ಎಂಬ ದೃಢ ನಿರ್ಧಾರದ  ಹಾಲಯ್ಯ ನವರ ಮಾತುಗಳು ತಾಯಿಗೆ ತಡೆಯಲಾರದ ದು:ಖವನ್ನು  ತಂದೊಡ್ಡಿದವು.

ಹಾಲಯ್ಯ ತನ್ನ ಹದಿಹರೆಯದಲ್ಲಿಯೇ,ತಾನು ಇಂದ್ರಿಯ ಸುಖಕ್ಕಾಗಿ ಜನಿಸಿದವನಲ್ಲ ಎಂಬ ಕೊನೆಯ ನಿರ್ಧಾರಕ್ಕೆ ಬಂದಿದ್ದರು. ತನ್ನ ಸ್ವಸಂತೋಷದಲ್ಲಿಯೂ ಅವರ ನಂಬಿಕೆ ಇರಲಿಲ್ಲ. ಹಾಲಯ್ಯ£ವರ ಹುಟ್ಟುಗುಣ ವೆಂದರೆ ತ್ಯಾಗ, ಸುತ್ತಲಿನ ಸಮಾಜದ ಸುಖವೇ  ಅವರ ಅಂತರಂಗದ ಮೂಲಮಂತ್ರವಾಗಿತ್ತು. ಮಾತೆಯ ಮಮತೆಗೆ ಮರುಮಾತನಾಡುವವನೂ ತಾನಲ್ಲವೆಂಬ ತನ್ನ ಮಾತೃಪ್ರೇಮದ ಎಳೆಯನ್ನು ಮಾತೆಯ ಮುಂದೆ ಬಿಚ್ಚಿಟ್ಟರು.  vಮ್ಮ  ಜವಾಬ್ದಾರಿಯ ಅರಿವನ್ನು ತಾಯಿಯ ಅರಿವಿನಲ್ಲಿ ಮಾಡಿಸಿದರು. ಶಿಕ್ಷಕನ ಕಾಯಕದಿಂದ  ತಾವು ಕೂಡಿಟ್ಟ ಮುನ್ನೂರು ರೂಪಾಯಿಗಳನ್ನು ತುಂಬು ಹೃದಯದಿಂದ  ಹಾಲಯ್ಯ ಮಾತೆಯ  ಮಡಿಲಿನ ಕಂದನಾಗಿ ಉಡಿಯನ್ನು ತುಂಬಿದರು.

“ಇಂದಿನಿಂದ ನಾನು ನಿನ್ನ ಮಗನಲ್ಲ. ತಾಯಿಮಗನೆಂಬ ಕರುಳಕುಡಿ ಇಂದಿಗೆ ಹರಿಯಿತು. ಜೀವನದಲ್ಲಿ ನಾನು  ಆರಿಸಿಕೊಂಡ ಶಿವಮಾರ್ಗದಲ್ಲಿ  ಶಾಶ್ವತವಾಗಿ ಮುನ್ನಡೆಯುವಂತೆ ನನ್ನನ್ನು ಬಿಡಬೇಕು, ಇದು ನನ್ನ ಅಂತರಂಗದ ಒಲವು.”  ಎಂದು ನುಡಿದ ಹಾಲಯ್ಯ  ಕ್ಷಣಮಾತ್ರ  ನಿಲ್ಲದೆ ಅಲ್ಲಿಂದ ಹೊರಟು ಹೋದರು. ಮಗನ ನುಡಿಗಳನ್ನು ಕೇಳಿದ  ನೀಲಮ್ಮನ ಮಾತುಗಳು  ಮೌನವಾದವು,

ನಿಜಗುಣ ಶಿವಯೋಗಿಗಳ ತತ್ವ ಜ್ಞಾನದ ಸವಿಯನ್ನು  ಸವಿಯಬೇಕೆಂಬ ಉತ್ಕಟ  ಇಚ್ಛೆಯಿಂದ ಹಾಲಯ್ಯ£ವರ ಹೆಜ್ಜೆಗಳು ಹುಬ್ಬಳ್ಳಿಯ ಕಡೆಗೆ ನಡೆದವು.   ನಿಜಗುಣರ ಮಾರ್ಗದರ್ಶನ ಪಡೆಯುವುದು  ಹಾಲಯ್ಯ£ವರ  ಮನದಾಳದ ಬಯಕೆಯಾಗಿತ್ತು,  ಇದೇ ನಿನಗೆ ಮುಕ್ತಿಮಾರ್ಗವೆಂದು ಅಂತರಂಗ ಒತ್ತಿ ಒತ್ತಿ ಹೇಳುತ್ತಿತ್ತು. ಚಿಕ್ಕ ವಯಸ್ಸಿನಲ್ಲಿಯೇ  ಹಾಲಯ್ಯ£ವರ ಹೃದಯ  ಪರಿಪೂರ್ಣತೆಯನ್ನು ಹೊಂದಿ, ಭೋಗವನ್ನು ಬೀಸಾಡಿ ತ್ಯಾಗ ಮಾರ್ಗದತ್ತ ಮುನ್ನಡೆಯಲು ,  ಆರೂಢಾವಸ್ಥೆಯನ್ನು ಪಡೆದು ಭಕ್ತರಿಗೆ  ನಿಜಗುಣ ಶಿವಯೋಗಿಗಳ ಶಾಸ್ತ್ರಾಧ್ಯಯನವನ್ನು ಉಣಬಡಿಸುತ್ತಿದ್ದ ಸಿದ್ಧಾರೂಢರ ಮಠದತ್ತ ಹಾಲಯ್ಯ£ವರು  ತೆರಳಿದರು

ಸಿದ್ಧಾರೂಢರು   ಅಂದಿನಕಾಲದ  ಅತಿ ದೊಡ್ಡ ಸಿದ್ಧಿಪುರುಷರಾಗಿದ್ದರು,  ಗುರುಸಿದ್ಧಾರೂಢರ ಮಾರ್ಗದರ್ಶನದಲ್ಲಿ ಹಾಲಯ್ಯ  ಷಟ್‍ಸ್ಥಲ ಸಿದ್ಧಾಂತವನ್ನು ಅಧ್ಯಯನ ಪ್ರಾರಂಭಿಸಿ ಸಿದ್ಧಾರೂಢರ ಅಂತರಂಗವನ್ನು ಗೆದ್ದುಕೊಂಡು, ಗುರುವಿನ ಪಾದಕಮಲಗಳಡಿಯಲ್ಲಿ  ಅಧ್ಯಯನ ಮಾಡುತ್ತಿದ್ದರೂ  ಆ ಗುರು ಮಠದ   ಪರಿಸರz ಅನಾನುಕೂಲತೆಗಳಿಂದ,  ತನ್ನ  ಲಿಂಗಪೂಜೆ ಪ್ರಸಾದಕ್ಕಾಗಿ ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಅನುಕೂಲಮಾಡಿಕೊಂಡು, ಪಾಠ ಪ್ರವಚನಕ್ಕೆ  ಮಾತ್ರ   ಸಿದ್ದಾರೂಢರ ಮoಕ್ಕೆ ಹಾಲಯ್ಯನವರು  ಹೋಗುತ್ತಿದ್ದರು.

ಧರ್ಮಗ್ರಂಥಗಳ ಅಧ್ಯಯನದಲ್ಲಿ ಮುಳುಗಿದ್ದರೂ, ಲಿಂಗಪೂಜಾ  ನಿಷ್ಥೆಗೆ ಸಂಭಂಧಪಟ್ಟಂತೆ  ಕೆಲವು ಪ್ರಶ್ನೆಗಳು ಹಾಲಯ್ಯನನ್ನು ಕಾಡುತಿದ್ದವು. ಈ ಕಳವಳದ ನಿವಾರಣೆಗಾಗಿ ಎಮ್ಮೀಗನೂರ ಜಡೇಸಿದ್ಧರನ್ನು ಸಂದರ್ಶಿಸುವ ಮಹಾಘಟನೆಯೊಂದು  ಹಾಲಯ್ಯನ ಜೀವನದಲ್ಲಿ ನಡೆಯಿತು. ಜಡೇಸಿದ್ಧರು .ಅಂದಿನ ಕಾಲದ ವಿಶಿಷ್ಟಗುಣಗಳ ಹಠಯೋಗಿಗಳೆಂದು ಹೊರಹೊಮ್ಮಿ ಸರ್ವರ ಪ್ರೀತ್ಯಾಧರಗಳಿಗೆ ಪಾತ್ರರಾಗಿದ್ದರು.ಹಾಲಯ್ಯ£ವರುÀ ಬರುವ ಮುನ್ಸೂಚನೆಯನ್ನು ಅಂತರಂಗದಲ್ಲಿ ಅನುಭವಿಸಿದ ಎಮ್ಮೀಗನೂರ ಜಡೇಸಿದ್ಧರು ಹಾಲಯ್ಯ£ವರ ಬರುವಿಕೆಗಾಗಿ ಕಾಯುತ್ತಿದ್ದರು. ಹಾಲಯ್ಯ£ವರು ಜಡೇಸಿದ್ಧರ   ಸಂದರ್ಶನದ ಸ್ಥಳ  ಮುಟ್ಟಿದಾಗ ಸಿದ್ಧರು ತಮ್ಮ ಕೊರಳಲ್ಲಿ ಲಿಂಗವನ್ನೊಳಗೊಂಡ ಲಿಂಗವಸ್ತ್ರವಂದನ್ನು ಕಟ್ಟಿಕೊಂಡು ಓಂಕಾರ ಪಠಿಸುತ್ತ ಕುಳಿತುಕೊಂಡಿದ್ದರು. ಸಿದ್ಧಿಪುರುಷರ ದಿವ್ಯದರ್ಶನ ಪಡೆದುಕೊಂಡ ಹಾಲಯ್ಯನವರಿಗೆ ಮನದ  ಸಂಧಿಗ್ಧತೆ ಮಾಯವಾಗಿ ಲಿಂಗಪೂಜೆಯ ಹಂಬಲ ಸ್ಥಿರಗೊಂಡಿತು. ಮನಸ್ಸು ಹಗುರಾಯಿತು.

              ಹಾಲಯ್ಯ£ವರ ಅಂತರಂಗ, ಯೋಗ್ಯಗುರುವಿನ ದರ್ಶನಾರ್ಶೀವಾದಕ್ಕಾಗಿ ಸದಾವಕಾಲ ಮಿಡಿಯುತ್ತಿತ್ತು. ತನ್ನರಿವೆ ತನಗೆ ಗುರುವೆಂಬಂತೆ ಕೊಳ್ಳೆಗಾಲ ತಾಲೂಕಿನ ವಿರಕ್ತಮಠದ ಪೂಜ್ಯ ಎಳಂದೂರು ಬಸವಲಿಂಗ ಸ್ವಾಮಿಗಳ ದರ್ಶನ ಹುಬ್ಬಳ್ಳಿಯ ಸಿದ್ಧಾರೂಢರ ಮಠದದಲ್ಲಿ ಆದದ್ದು ಹಾಲಯ್ಯನ ಜೀವನಕ್ಕೆ ಹೊಸ ತಿರುವು ನೀಡಿತು. ಆರೂಢರಲ್ಲಿ ಹಲವು ವಿಷಯಗಳನ್ನು ಚರ್ಚಿಸಲು ಬಂದ ಶ್ರೀ ಬಸವಲಿಂಗ ಸ್ವಾಮಿಗಳಿಗೆ ಹಾಲಯ್ಯನನ್ನು ಕಂಡು ಅರಸುವ ಬಳ್ಳಿ ಕಾಲ್ತೊಡಕಿದಂತಾಗಿ ತಮ್ಮ ಅಂತರಂಗದಲ್ಲಿ ಹಾಲಯ್ಯನಿಗೆ ಹಿರಿದಾದ ಸ್ಥಾನಕೊಟ್ಟರು. ಪೂರ್ವಜನ್ಮದ ಪುಣ್ಯವೆಂಬಂತೆ ಎರಡು ಆತ್ಮಗಳು ಒಂದಾಗಿ ಗುರು-ಶಿಷ್ಯರ ರೂಪದಲ್ಲಿ ಒಬ್ಬರನೊಬ್ಬರು ಕಂಡಂತಾಯಿತು. ನಿಬ್ಬೆರಗೊಂಡ ಹಾಲಯ್ಯನವರು  ಗುರುವಿನ ಪಾದಗಳಿಗೆ ತಮ್ಮನ್ನೆ ತಾವು  ಅರ್ಪಿಸಿಕೊಂಡರು.

              ಹಾಲಯ್ಯನವರು ಹಾಗೂ ಗುರುಗಳಾದ ಎಳಂದೂರ ಬಸವಲಿಂಗಸ್ವಾಮಿಗಳವರು ಹುಬ್ಬಳ್ಳಿಯ ಸಿದ್ಧಾರೂಢಮಠದಿಂದ ತಮ್ಮ ಆಧ್ಯಾತ್ಮ ಜೀವನದ ಯಾತ್ರೆಯನ್ನಾರಂಭಿಸಿ ಆತ್ಮಸಾಕ್ಷಾತ್ಕಾರದ ಹಸಿವು ಹಿಂಗಿಸಿಕೊಳ್ಳಲು ಶಪಥಮಾಡಿ ಮುಂದುವರೆದರು. ಪರಸ್ಪರರಲ್ಲಿರುವ ಸತ್ಯ ಸಂಶೋಧನೆಯ ಹಸಿವು ಇಬ್ಬರನ್ನೂ ಒಂದುಗೂಡಿಸಿತು. ದೇಹಗಳೆರಡು ಆತ್ಮ ಒಂದೇ ಎಂಬಂತೆ, ಕೊಳ್ಳೆಗಾಲದ ಶಂಭುಲಿಂಗನ ಬೆಟ್ಟದ ಗುಹೆಯೊಂದರಲ್ಲಿ ಗುರುಶಿಷ್ಯರು ಸತತ 12 ವರ್ಷ ಅನುಷ್ಠಾನ ಮಾಡಿ ಅಷ್ಟಾವರಣಗಳನ್ನು ಆತ್ಮವಾಗಿಸಿಕೊಂಡು ಲಿಂಗಾಂಗದ ಸಾಮರಸ್ಯವನ್ನು ಸವಿದರು.

ಶಿವಯೋಗ ಸಾಮರಸ್ಯವನ್ನು ಸವಿದ ನಂತರ ಗುರುಶಿಷ್ಯರ  ಆಧ್ಯಾತ್ಮ ಜೀವನದ ಯಾತ್ರ್ರೆ ಯಾವ ಆತಂಕವಿಲ್ಲದೆ ಶಿವಧ್ಯಾನದಲ್ಲಿಯೇ ಮುಂದುವರೆಯಿತು. ಪವಿತ್ರ ವಾತಾವರಣದ ದಿನವೊಂದರಂದು ಹಾಲಯ್ಯನವರಿಗೆ ಗುರೋಪದೇಶದ ದೀಕ್ಷೆಯಾಯಿತು. ಶಿವಯೋಗಿಯೆಂದರೆ ಶಿವಯೋಗದಾನಂದವನ್ನು ತನ್ನಷ್ಟಕ್ಕೆ ತಾನೆ ಸವಿಯುವಾತ£ಲ್ಲ, ಅದನ್ನು ಇತರರೆಲ್ಲರಿಗೂ ಉಣಬಡಿಸಬೇಕು. ಆಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಸಮಾಜದ ಮೇಲೆ ಶಿವಯೋಗ ಜ್ಞಾನವೆಂಬ ಬೆಳಕು ಚೆಲ್ಲಿ ಸುಜ್ಞಾನದೊಡನೆ ಕರೆದೊಯ್ಯಬೇಕು. ಮುಳುಗಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುತ್ಥಾನಗೊಳಿಸಿ ಸಮಾಜದ ಸರ್ವರೂ ಸವಿಯುವ ಅವಕಾಶಕ್ಕೆ ಅನುವುಮಾಡಿಕೊಡಬೇಕು.

ಹೀಗೆ ಗುರುಶಿಷ್ಯರ ಜೀವನವಾಹಿನಿ ಮುಂದುವರಿಯುತ್ತಿರುವಾಗ ಅನೀರಿಕ್ಷಿತವಾಗಿ ಪೂಜ್ಯ ಎಳಂದೂರು ಬಸವಲಿಂಗ ಸ್ವಾಮಿಗಳು ಶಿವನ ಕರೆಗೆ ಒಗೊಟ್ಟು ಲಿಂಗದೊಳಗಾದರು. ಈ ಅನಿರೀಕ್ಷಿತ ಘಟನೆ ಹಾಲಯ್ಯನವರಿಗೆ ಮಾತೆಯನ್ನೇ ಕಳೆದುಕೊಂಡ ಹಸುಗೂಸಿನ ಪರಿಸ್ಥಿತಿಯನ್ನು ತಂದೊಡ್ಡಿತು. ತಾಯಿಯನ್ನು ಕಳೆದುಕೊಂಡ ಕರುವಿನಂತಾದ ಹಾಲಯ್ಯನವರಿಗೆ, ಕಾರ್ಗತ್ತಲೆ ಆವರಿಸಿದಂತಾಗಿ ದುಖಃದ ಮಡಲಿನಲ್ಲಿ ಕಾಲಕಳೆಯಬೇಕಾಯಿತು. ಆಂತರಿಕ ದುಖಃದಿಂದ ಹೊರಗೆ ಬರುವ ಒಂದೇ ಒಂದು ಹಾದಿಯು ಅನುಷ್ಠಾನ ಎಂದು ಅರಿತ ಹಾಲಯ್ಯನವರು  ಶಿವಧ್ಯಾನದ ಮೊರೆ ಹೋಗಬೇಕಾಯಿತು.ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸೊರಬ ಪ್ರದೇಶದಲ್ಲಿ ಅನುಷ್ಠಾ£ದಲ್ಲಿ ತಲ್ಲೀನಗೊಂಡರು.

ದೇವರು ಅಗೋಚರ ಆತನ ಸ್ಪರ್ಶ – ಸಂತೊಷ ಪಡೆಯುವುದಂತೂ ಅಸಾಧ್ಯವೇ ಸರಿ. ಆದರೆ ಆತನು ಅಗೋಚರವಾಗಿದ್ದರೂ ಆತನ ದೃಷ್ಠಿ ಆತನಲ್ಲಿಯೇ ಮುಳುಗಿದವರ ಮೇಲೆ ಬೀಳುವುದು. ಆತನ ಅಸ್ತಿತ್ವದಷ್ಟೇ ಸತ್ಯ ದೇವಭಾಷೆಯನ್ನು ಅರಿತು ಅರ್ಥಮಾಡಿಕೊಳ್ಳುವುದು ಅಸಾಧ್ಯ. ದೇವವಾಣಿ ದೈವೀ ಸೂತ್ರದ ಸಂಗೀತ ಸಂಕೇತಗಳ ಅಂತ್ಯ ಆಳವನ್ನು ಅರಿಯುವುದು ಅಸಾಧ್ಯ. ಮಾನವನ ಅಳತೆ ಪ್ರಮಾಣಗಳಿಗೆ ದೈವಿಶಕ್ತಿ ಸಿಗುವುದು ಅಸಾಧ್ಯವೇ ಸರಿ.

ಹಾನಗಲ್ಲ ಕುಮಾg ಶಿವಯೋಗಿ ಎಂದು ಹೆಸರು ಗಳಿಸಿದ ಹಾಲಯ್ಯನಿಗೂ ಹಾನಗಲ್ಲ ವಿರಕ್ತ ಮಠಕ್ಕೂ ಯಾವುದೇ ಅಗೋಚರ ಸಂಬಂಧವೊಂದು ಇರಲೇಬೇಕು ಹಾನಗಲ್ಲ ಕುಮಾರಸ್ವಾಮಿಗಳೆಂದರೆ ಎಂದೂ ಮುಳಗದ ಸೂರ್ಯನಿದ್ದಂತೆ ಅಮವಾಸ್ಯೆಯನ್ನೇ ಕಾಣದ ಚಂದ್ರನಿದ್ದಂತೆ, ಹಾನಗಲ್ಲ ವಿರಕ್ತಮಠ ಹಾಗೂ ಶ್ರೀ ಕುಮಾರ ಶಿವಯೋಗಿಗಳ ಹೆಸರುಗಳು ವೀರಶೈವ ಧರ್ಮದ  ದಿಗಂತದಲ್ಲಿ ಸೂರ್ಯಚಂದ್ರರಿರುವಷ್ಟು ಕಾಲ ಅಮರ.

ಪೂಜ್ಯ ಫಕೀರಸ್ವಾಮಿಗಳವರ ವಿಶ್ವಾಸ ಅನುಕಂಪಗಳನ್ನು ಹೊತ್ತ ಹಾಲಯ್ಯ ಕುಮಾರ ಸಮಯಾಂತರ್ಗತ ಹಾನಗಲ್ಲ ವಿರಕ್ತ ಪೀಠದ ಅಧಿಪತಿಯಾಗಿ ಕುಮಾರ ಶಿವಯೋಗಿ ಎಂಬ ನಾಮಾಂಕಿತವನ್ನು ಪಡೆದರು. ಹಣತೆ ಆಧಾರದಿಂದ ಜ್ಯೋತಿ ಬೆಳಗುವಂತೆ ಹಾನಗಲ್ಲ ಮಠವನ್ನು ಆಧಾರವನ್ನಾಗಿಟ್ಟುಕೊಂಡು ಸಮಾಜಕ್ಕೆ ಬೆಳಕು ನೀಡಿದವರು ಹಾನಗಲ್ಲ ಶ್ರೀ ಕುಮಾರ ಶಿವÀಯೋಗಿಗಳು

ಶ್ರೀ ಕುಮಾರ ಶಿವಯೋಗಿಗಳು ,ಹಾನಗಲ್ಲ ಪೀಠದ ಅಧಿಕಾರವಹಿಸಿಕೊಂಡಾಗ ಸಮಾಜದ ತುಂಬೆಲ್ಲಾ ಮೇಲು ಕೀಳೆಂಬ ಕಚ್ಚಾಟಗಳು, ಅಧಿಕಾರ ಅಂತಸ್ತುಗಳಿಗಾಗಿ ಕಿತ್ತಾಟಗಳು, ಧರ್ಮದ  ಸಂಕುಚಿv ಭಾವನೆಗಳು  ಜನರ ನಿತ್ಯ ಬದುಕಿನಲ್ಲಿ ಕಾಡುತ್ತಿದ್ದವು. ಬ್ರಾಹ್ಮಣ – ವೀರಶೈವ ಲಿಂಗಾಯತರ ನಡುವಿನ ಬಿರುಕು ಎದ್ದು ಕಾಣುತ್ತಿತ್ತು. ವೀರಶೈವ – ಲಿಂಗಾಯತರಿಗೆ ಆಗಿದ್ದ ಸಂಸ್ಕøತ ಪಾಠಶಾಲೆಗಳಲ್ಲಿ ಪ್ರವೇಶವಿದ್ದಿಲ್ಲ. ಇದನ್ನು ಕಂಡರಿತ ಕುಮಾರಸ್ವಾಮಿಗಳು ಹಾನಗಲ್ಲಿನಲ್ಲಿ ಪ್ರಥಮ ಸಂಸ್ಕøತ ಪಾಠಶಾಲೆಯನ್ನು ತೆರೆದು ಜಾತಿ ಭೇಧವನ್ನು ಮಾಡದೇ ಸರ್ವ ಸಮಾಜದ ವಿಧ್ಯಾರ್ಥಿಗಳಿಗೆ  ಅಧ್ಯಯನ ಮತ್ತು ಪ್ರಸಾದದ ವ್ಯವಸ್ಥೆಯನ್ನು ಮಾಡಿದರು. ಊಟ ವಸತಿ ಪಾಠಶಾಲೆಗಳು ಪ್ರಾರಂಭವಾದವು.

ಸಮುಷ್ಠ್ಟಿ ಪ್ರಜ್ಞೆಯ ಶಕ್ತಿಯನ್ನು ಅರಿತ ಸಮಾಜ, ಅವರು ಕೊಟ್ಟ ಸ್ಫೂರ್ತಿ ಶಕ್ತಿಗೆ ಸ್ಪಂಧಿಸಿತು. ಸುತ್ತಮುತ್ತಲಿನ ಗ್ರಾಮಗಳಿಗೆಲ್ಲ ಸಂಚರಿಸಿ ಸಂಕಷ್ಟದಲ್ಲಿದ್ದವರಿಗೆಲ್ಲ ಸಹಾಯ ಹಸ್ತ ನೀಡಿ ಎಲ್ಲರಿಗೂ  ಕೂಡಿ ಜೀವಿಸುವ ಹೊಸ ವಿಧಾನವನ್ನು ಕಲಿಸಿದರು. ಜನರು ಪರಸ್ಪರರನ್ನು ಅರಿತು ಜೀವಿಸಬೇಕೆಂದು ಅವರ  ಮೊದಲ ಪಾಠವಾಗಿತ್ತು. ಮಾತೃಹೃದಯದ ಶ್ರೀ ಕುಮಾರ ಶಿವಯೋಗಿಗಳು ಕೇವಲ ಹಾನಗಲ್ಲ ಮಠದ ವ್ಯಾಪ್ತಿಯಲ್ಲಿಯೇ ಉಳಿಯದೇ ಭೂಮಿಗೆ ಬೆಳಕುಕೊಡುವ ಸೂರ್ಯನೋಪಾದಿಯಲ್ಲಿ ಸಮಗ್ರ ಸಮಾಜವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಗುರುತಿಸಿಕೊಂಡರು. ಆ ಭಾಗದಲ್ಲಿ ಬರ ಆವರಿಸಿದಾಗ ಸಾರ್ವಜನಿಕ ಪ್ರಸಾದ ನಿಲಯಗಳನ್ನು ವ್ಯವಸ್ಥಿತಗೊಳಿಸಿ ಸಮಗ್ರ ಸಮಾಜದ ಹಸಿವನ್ನು ನೀಗಿಸಿದ ಕೀರ್ತಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ  ಸಲ್ಲುತ್ತದೆ.  

ಅಂದಿನ ಕಾಲಘಟ್ಟದಲ್ಲಿ ಆ ಭಾಗದ  ಜನತೆಗೆ ಗುರುಳೆ ರೋಗವೆಂಬ ವ್ಯಾಧಿ ಆವರಿಸಿದಾಗ ಶ್ರೀ ಕುಮಾರ ಶಿವಯೋಗಿಗಳು ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ತ್ಯಾಗ ಮಹಿಮಾಪುರುಷರಾಗಿ ಮನೆಯಿಂದ ಮನೆಗೆ ಹೋಗಿ ಕೈ ಮುಟ್ಟಿ ಉಪಚರಿಸಿ ಅಂದಿನ ಜನರ ದುಃಖಗಳಲ್ಲಿ ಬೆರೆತು ಅವರಲ್ಲಿ ಒಂದಾದರು.

ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಪರಿಶುದ್ಧತೆಯೇ ಶ್ರೀ ಕುಮಾರ ಶಿವಯೋಗಿಗಳ ಮುಖ್ಯ ಉದ್ಧೇಶ. ಪುರುಷನಾಗಲಿ ಮಹಿಳೆಯಾಗಲಿ ವ್ಯಕ್ತಿಯ ಬಾಹ್ಯ ಸ್ವರೂಪಕ್ಕಾಗಲಿ ಜಾತಿಗಳಿಗಾಗಲಿ ಅವರು ಮಹತ್ವ ನೀಡಲಿಲ್ಲ ಬದಲಾಗಿ ಆತ್ಮದ ಅಸ್ತಿತ್ವಕ್ಕೆ ಬೆಲೆ ಕೊಟ್ಟರು, ದೇವರು ಸೃಷ್ಟಿಸಿದ ನಿಸರ್ಗದ ಪಂಚಮಹಾಭೂತಗಳಿಗೆ ಸಮಗ್ರ ಸೃಷ್ಟಿಗೆ ಹಾನಿಯಾಗದಂತೆ ಮಾನವ ತನ್ನ ಆಂತರಿಕ ಹಾಗೂ ಬಾಹ್ಯ ಜೀವನದಲ್ಲಿ ಶುಚಿತ್ವವನ್ನು ಅಳವಡಿಸಿ ಆಂತರ್‍ಬಾಹ್ಯ ಸಮತೋಲನೆಯೊಂದಿಗೆ ಮುನ್ನಡೆಯಬೇಕು. ಶ್ರೀ ಕುಮಾರ ಶಿವಯೋಗಿಗಳಿಗೆ ನಿಸರ್ಗದ ಮೇಲೆ ಬಹಳ ಪ್ರೀತಿ, ಸಮಾಜವೇ ಅವರ ಮನೆ ,ಸಂಸ್ಕøತಿ ಅವರ ಬದುಕು, ಸಮಾಜ ಸಂಸ್ಕøತಿಗಳ ಉನ್ನತಿಯೇ ಅವರ ಭಾಗ್ಯ ತಮ್ಮ ಸರ್ವ ಸುಧಾರಣೆಗಳನ್ನು ಮೂಲತಃ ಹಾನಗಲ್ಲ ಮಠದಿಂದಲೇ ಪ್ರಾರಂಭಿಸಿದರು.

ಅಂದಿನ ಕಾಲದ ಸಾಮಾಜಿಕ ಕ್ರಾಂತಿಗೆ ಸಂಬಂಧಪಟ್ಟಂತೆ ವೀರಶೈವ ಲಿಂಗಾಯತ ಧರ್ಮದ ಒಳಿತಿಗಾಗಿ ಚರ ಜಂಗಮರಾದ  ಬಾಗಲಕೋಟೆ ಮಲ್ಲಣಾರ್ಯರು ಕುಮಾರ ಶಿವಯೋಗಿಗಳಿಗೆ ಸಕಾಲಿಕವಾಗಿ ಎಚ್ಚರಿಸಿದ ಘಟನೆ ಸಮಗ್ರ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಇದೊಂದು ರೀತಿಯ ಆಧ್ಯಾತ್ಮಿಕ ಕ್ರಾಂತಿ ವ್ಯಕ್ತಿ ಮಟ್ಟದಿಂದ ಹಿಡಿದು ಸಮಗ್ರ ಸಮಾಜಕ್ಕೆ ಇದರ ಪರಿಣಾಮವಾಯಿತು  ಕುಮಾg ಶಿವಯೋಗಿಗಳ ಪವಿತ್ರವಾದ ಸ್ವಪ್ರಜ್ಞೆಯಿಂದ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟವರು. ಮಲ್ಲಣಾರ್ಯರ ಬಯಕೆಯನ್ನು ತಮ್ಮ ಕರ್ತವ್ಯವೆಂದು ತಿಳಿದು ತಮ್ಮ ಆಯುಷ್ಯವನ್ನೆಲ್ಲಾ ಧರ್ಮ ಜಾಗೃತಿ ಸಮಾಜ ಸುಧಾರಣೆಗೋಸ್ಕರ ವ್ಯಯಮಾಡಿದರು.

ನಾಡಿನುದ್ದಗಲಕ್ಕೂ ಕಾಲುನಡಿಗೆಯಿಂದ ಸಂಚರಿಸಿ ಸರ್ವ ಸಮಾಜದ ಮುಖಂಡರನ್ನು ಸಂಧಿಸಿ ಅವರೊಡನೆ ಚಿಂತನ-ಮಂಥನ ಮಾಡಿ ಹೌದು ಅಲ್ಲಗಳನ್ನು ವಿಶ್ಲೇಷಿಸಿ ಒಂದು ಸಂಸ್ಥೆಯನ್ನು ಸ್ಥಾಪಿಸುವುದಕ್ಕಾಗಿ ಸದಾವಕಾಲ ಶ್ರಮಿಸಿದವರು. ಈ ನಿಟ್ಟಿನಲ್ಲಿ ಮೊದಲ ವೀರಶೈವ ಸಮ್ಮೇಳನವು ನವಲಗುಂದ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಜಾಯಪ್ಪ ಸರ್ ದೇಸಾಯಿ ಇವರ ಅಧ್ಯಕ್ಷತೆಯಲ್ಲಿ 1904 ಮೇ ತಿಂಗಳು 13,14 ಮತ್ತು 15,ರಂದು ಧಾರವಾಡದ ದರ್ಬಾರ ಹಾಲ್ ಈಗಿನ ಲಿಂಗಾಯತ ಟೌನ್ ಹಾಲ್  ದಲ್ಲಿ ವ್ಯವಸ್ಥೆಗೊಳಿಸಿದರು. ಸಮಾಜದ ಸರ್ವ ಸ್ತರಗಳ ಜನತೆ ಇಲ್ಲಿ ಸೇರಿ ಬದುಕಿನ ಸರ್ವ ಮುಖಗಳಿಗೂ ಗಮನ ಹರಿಸಿತು. ಸಮಾಜದ  ಬಡವ ಬಲ್ಲಿದರೆಂಬ ಕಂದಕವನ್ನು ಕಿತ್ತೊಗೆದು , ಶ್ರೀಮಂತರ ಮನೋಧರ್ಮದಲ್ಲಿ ಪರಿವರ್ತನೆಯಾಗಬೇಕು ಎಂದು ಹೇಳಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಪ್ರಯತ್ನಿಸಿ ಸಫಲರಾದವರು ಶ್ರೀ ಕುಮಾರ ಶಿವಯೋಗಿಗಳು.

ವ್ಯಕ್ತಿ ಯಾವನೇ ಇರಲಿ ಅವನು ಮಾನವೀಯತೆಯನ್ನು ಮೈಗೂಡಿಸಿಕೊಂಡು ಮೇಲೆರಬೇಕು, ಅನ್ಯರಿಗೂ ಬದುಕು ಕೊಡಬೇಕು, ಶ್ರೀ ಕುಮಾರ ಶಿವಯೋಗಿಗಳ ಸಂಕಲ್ಪವನ್ನು ಸಾಕಾರಗೊಳಿಸಲು ಲಿಂಗರಾಜ ದೇಸಾಯಿಯವರಂಥ ತ್ಯಾಗಿಗಳು ಮತ್ತು ಹಲವು ಗಣ್ಯ ವ್ಯಕ್ತಿಗಳು ಮುಂದೆ ಬಂದರು. ಈ ಮಹತ್ಕಾರ್ಯದ ಪ್ರತಿಫಲವಾಗಿ ಶ್ರೀ ಕುಮಾರ ಶಿವÀಯೋಗಿಗಳು 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಠೆ ಯನ್ನು ಸ್ಥಾಪಿಸಿದರು.

ಶ್ರೀ ಕುಮಾರ ಶಿವಯೋಗಿಗಳು  ಸಮಾಜವನ್ನು ಆಧುನಿಕ ಸಾಮಾಜಿಕ ದೃಷ್ಟಿಕೋನದಿಂದ ನೋಡಿ, ಯುವಜನಾಂಗದ ಗಮನವನ್ನು ತಮ್ಮ ಬದಲಾವಣೆಗಳತ್ತ ಸೆಳೆದು, ಅವರಲ್ಲಿ ಶಿಕ್ಷಣ ,ಕಾಯಕ ನಿಷ್ಠೆ ಮತ್ತು ಸಮಾಜ ನಿಷ್ಠೆ,ಯ ಚಿಂತನೆಯನ್ನು ಅಳವಡಿಸಿದರು. ಶ್ರೀ ಕುಮಾರ ಸ್ವಾಮಿಗಳ ಪ್ರಭಾವ ಪರಿಮಳ  ನಾಡಿನ ತುಂಬೆಲ್ಲ  ಗುಪ್ತಗಾಮಿನಿಯಾಗಿ ಪಸರಿಸಿ ನಾಡಿನ ತುಂಬ ಹಲವಾರು ಶಿಕ್ಷಣ ಸಂಸ್ಥೆಗಳು ,ಶಾಲಾ ಕಾಲೇಜುಗಳು ಮತ್ತು ಬಡ ವಿಧ್ಯಾರ್ಥಿಗಳಿಗೆ ಉಚಿತ ವಸತಿ ಭೋಜನ ಶಾಲೆಗಳು ಆರಂಭಗೊಂಡು,ಜಾತಿ,ಮತ ಪಂಥಗಳನ್ನು ಪರಿಗಣಿಸದೆ ಸಮಾಜದ ಸರ್ವ ಜನತೆಗೆ ಸೇವೆಯ ಗುರಿಯನ್ನಾಗಿಸಿಕೊಂಡವು.

ಶ್ರೀ ಕುಮಾರ ಶಿವಯೋಗಿಗಳು ಸಮಕಾಲಿನ ಯುಗದ ಮಹಾನ್ ಸಾಮಾಜಿಕ ಚಿಂತಕರು, ಅವರು ಪ್ರತಿಯೊಂದು ಸಾಧನೆಗೂ ತ್ಯಾಗವೇ ಮೂಲವೆಂದು ಆಚರಿಸಿ ತೋರಿಸಿದವರು. “ಸ್ವಾಮಿಯ ಮೂಲ ಲಕ್ಷಣವೆಂದರೆ ಸರ್ವತ್ಯಾಗ” ಇದಕ್ಕಾಗಿಯೇ ವಿಶ್ವ ಶ್ರೇಷ್ಥ ಧಾರ್ಮಿಕ ಸಂಸ್ಥೆಯನ್ನು “ಶಿವಯೋಗಮಂದಿರ” ಎಂಬ ಹೆಸರಿನಲ್ಲಿ 1909ರಲ್ಲಿ ಸ್ಥಾಪಿಸಿದರು. ಶಿವಯೋಗಮಂದಿರದÀ ಮೂಲ ಉದ್ದೇಶ ಶ್ರೇಷ್ಠ ಮಠಾಧೀಶರನ್ನು ರೂಪಿಸುವದು.

ಶಿವಯೋಗಮಂದಿರವನ್ನು ಸ್ಥಾಪಿಸುವ ಹಂತzಲ್ಲಿಯಾಗಲಿ ಹಾಗೂ ತದನಂತರ ಅದರ ಅಭೀವೃದ್ಧಿಗಳಿಗೆ ಚಿತ್ತರಗಿ-ಇಲಕಲ್ ಮಹಾಂತಸ್ವಾಮಿಗಳ ಮಾರ್ಗದರ್ಶನ, ಸಹಕಾರ ಪಡೆದರು, ಶ್ರೀ ವಿಜಯಮಹಾಂತ ಶಿªಯೋಗಿ ಹಾಗೂ ಅವರ ಸದ್ಭಕ್ತರೊಂದಿಗೆ ಶಿವಯೋಗಮಂದಿರದ ಸ್ಥಳದ ಆಯ್ಕೆಯ ಪ್ರಯತ್ನ ಒಂದು ಇತಿಹಾಸವಾಗಿ ಹೋಯಿತು.

ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು  ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು  ಶ್ರೀಕುಮಾರ ಶಿವಯೋಗಿಗಳ ಮೇರು ಕೊಡುಗೆ ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ  ಕಣ್ಣು ತೆರೆದು ನೋಡಿ ಕಿವಿ ತುಂಬ ಕೇಳಿ ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ  ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.ಪಂಚಾಕ್ಷರಿ   ಗವಾಯಿಗಳವರು  ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು.   ಬಡವ ಬಲ್ಲಿದ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.

ಶ್ರೀ ಕುಮಾರ ಶಿವಯೋಗಿಗಳ ಅನುಕಂಪ ಕೇವಲ ಮಾನವರಿಗಾಗಿ ಮೀಸಲಾಗಿರಲಿಲ್ಲ ಪ್ರಾಣಿಗಳಿಗೂ ತಮ್ಮ  ಮಾತೃ ಪ್ರೇಮವನ್ನು ತೋರಿಸಿದವರು.  ಶಿವಯೋಗಮಂದಿರದ ಗೋ ಶಾಲೆ ಇದಕ್ಕೊಂದು ಉತ್ತಮ ಉದಾಹರಣೆ.  ಅಂದು ನಿರ್ಮಿಸಿದ ಗೋ ಶಾಲೆ, ಇಂದಿಗೂ ತನ್ನ ಸ್ವಸ್ವರೂಪದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲದೆ  ಶಿವಯೋಗಮಂದಿರದಿಂದ ವಿಭೂತಿ ನಿರ್ಮಾಣ ಕೇಂದ್ರಕ್ಕೆ, ಪ್ರಸಾದ ನಿಲಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದೆ.

              ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‍ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ಗ್ರಂಥಗಳ ಸಂಗ್ರಹ, ಸಂಸ್ಕøತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ  ಇವೆಲ್ಲವೂ  ಶ್ರೀಮದ್‍ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು, ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದಲ್ಲಿ ರೇವಣಸಿದ್ದೇಶ್ವರ ವಾಚನಾಲಯವನ್ನು  ಸ್ಥಾಪಿಸಿ, ಗ್ರಂಥ ರಕ್ಷಣೆಯ ವ್ಯವಸ್ಥೆ ಮಾಡಿದರು, ವಚನ ಸಾಹಿತ್ಯ, ತಾಡಓಲೆಗಳ ಗ್ರಂಥಗಳು  ವೀರಶೈವ ತತ್ವಜ್ಞಾನದ ಅಪೂರ್ವ ಗ್ರಂಥಗಳ ರಾಶಿಗಳು, ವೇದ ವೇದಾಂತದ ಪುಸ್ತಕಗಳು, ಬೇರೆ ಬೇರೆ ಭಾಷೆಗಳಲ್ಲಿ ವೀರಶೈವ ತತ್ವಜ್ಞಾನದ  ರಚನೆಗಳು ಈ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ.

              ಶ್ರೀ ಎಪ್.ಜಿ. ಹಳಕಟ್ಟಿಯವರ ತ್ಯಾಗ, ಶ್ರಮಗಳನ್ನು ಗುರುತಿಸಿದ ಶ್ರೀ ಕುಮಾರ ಶಿವಯೋಗಿಗಳು , ಮೊಟ್ಟ ಮೊದಲ ಬಾರಿಗೆ ಸಮಗ್ರ ಶಿವಶರಣರ ವಚನ ಸಾಹಿತ್ಯ ಸಂಗ್ರಹ ಮಾಡಿದರು.   ಇದು ವಚನ ಲೋಕಕ್ಕೆ ಶ್ರೀ ಕುಮಾರ ಶಿವಯೋಗಿಗಳ ಮಹತ್ತರ ಕೊಡುಗೆ, ವಚನ ಸಾಹಿತ್ಯ ಸಂಗ್ರಹಣೆಗೆ ಶ್ರೀ ಹಳಕಟ್ಟಿಯವರಿಗೆ ಸ್ಪೂರ್ತಿ ಸೆಲೆಯಾಗಿ ನಿಂತವರು ಶ್ರೀ ಕುಮಾರ ಶಿವಯೋಗಿಗಳು .

              ಶಿವಯೋಗಮಂದಿರದಲ್ಲಿ ಸ್ವಾಮಿಗಳಾಗುವವರ ಆರೋಗ್ಯ ಆತ್ಮಜ್ಞಾನ ರಕ್ಷಣಿ ಹಾಗೂ ಬೆಳವಣಿಗೆಗಾಗಿ ಯೋಗಾಭ್ಯಾಸವನ್ನು ಹುಟ್ಟುಹಾಕಿದವರು ಶ್ರೀ ಕುಮಾರ ಶಿವಯೋಗಿಗಳು , ಶರೀರ, ಮಾನಸಿಕ ಯೋಗಗಳ ಜೊತೆಗೆ ಶಿವಯೋಗದ ಕಲಿಕೆಗೂ ಅನುಕೂಲತೆಗಳನ್ನು ಮಾಡಿದರು.  ಅಷ್ಟಾಂಗಯೋಗದ ಜೊತೆಗೆ ಪತಂಜಲಿ ಯೋಗ ತರಬೇತಿಯನ್ನು ಪ್ರಾರಂಭಿಸಿ, ಉಳಿಸಿ ಬೆಳೆಸಿದರು.

              ಮಹಾರಾಷ್ಟ್ರದ ಪರಳಿ ವೈಜನಾಥದೇವಾಲಯದಲ್ಲಿ ವೀರಶೈವರಿಗೂ ಪೂಜೆ ಸಲ್ಲಿಸಲು ಹಕ್ಕಿದೆ ಎಂದು ನ್ಯಾಯಾಲಯದಲ್ಲಿ ನಿರಂತರವಾಗಿ ಹೋರಾಡಿ ಗೆದ್ದು ನಿಯಮ ಜಾರಿಗೆ ತಂದದ್ದು, ವೀರಶೈವ ಸಮಾಜಕ್ಕೆ ಶ್ರೀ ಕುಮಾರ ಶಿವಯೋಗಿಗಳು  ನೀಡಿದ ಗಮನಾರ್ಹ ಕೊಡುಗೆ.

              ತಮ್ಮ ಆರೋಗ್ಯ,  ಜೀವನದ ಸುಖಗಳನ್ನೆಲ್ಲ ತ್ಯಾಗಮಾಡಿ, ಹಗಲು ರಾತ್ರಿಯನ್ನದೆ, ಶ್ರೀ ಕುಮಾರ ಶಿವಯೋಗಿಗಳು ಶ್ರಮಿಸಿದರು, ಕಾಯಕ ನಿಷ್ಠೆಯಲ್ಲಿ ತೊಡಗಿ ಪ್ರಸಾದ ಪೂಜೆಗಳನ್ನು ಮರೆತ ಶ್ರೀ ಕುಮಾರ ಶಿವಯೋಗಿಗಳು , ಫೆಬ್ರುವರಿ 19,1930 ಬುಧವಾರ ಕುಮಾg ಶಿವಯೋಗಿಗಳಿಗೆ ವಿಪರೀತ ಜ್ವರಬಾಧೆಯುಂಟಾಗಿ ಕ್ಷಣಮಾತ್ರದಲ್ಲಿ ಅಪಾಯ  ತಂದೊಡ್ಡಿತು. ಶ್ರೀ ಕುಮಾರ ಶಿವಯೋಗಿಗಳು ಲಿಂಗದೊಳಗೆ ಬೆರೆಯುವ ಸ್ವ ಇಚ್ಛೆಯನ್ನು ಪ್ರಕಟಿಸಿ ವಟು ಸಾಧಕರು ದೇಶಿಕರನ್ನೊಳಗೊಂಡು ಸರ್ವರನ್ನು ಸರ್ವ ಸಮಾಜದವರನ್ನು ದುಃಖತಪ್ತರನ್ನಾಗಿ ಮಾಡಿದರು .ಅನಂತತೆಯಲ್ಲಿ ಬೆರೆಯುವುದು ತಮ್ಮ ಸ್ವ ಇಚ್ಛೆಯಾಗಿದೆ ಎಂದು ದೃಢಪಡಿಸಿ  ಅಂದು ಸಾಯಂಕಾಲ  3 ಘಂಟೆಗೆ  ದೇಶಿಕರನ್ನು, ಸಾಧಕರನ್ನು, ವಟುಗಳನ್ನು, ಶಿವಯೋಗ ಮಂದಿರದ ವಿವಿಧ ಶಾಖೆಗಳಲ್ಲಿ ಕಾಯಕ ಮಾಡುವವರನ್ನು, ಗೋ ರಕ್ಷಕರನ್ನು ,ಪ್ರಸಾದ, ವಿಭೂತಿ, ವ್ಯವಸ್ಥಾಪಕರನ್ನು ಕರೆದು ಕುಮಾರಯೋಗಿಗಳು ಹೇಳಿದ ಮಾತುಗಳು ಕರುಣಾ ಸಾಗರದಲ್ಲಿ ಹರಿಯುವ ಮುತ್ತುಗಳಾಗಿ ಪರಿಣಮಿಸಿದವು.

“ಓ, ನನ್ನ ನಿರಂಜನ ದೇಶಿಕರೇ, ನೀವೆಲ್ಲಾ ನನ್ನ ಪೋಷಕರು  ನಿಮ್ಮ ಬಾಹ್ಯ ತಪ್ಪುಗಳಿಗೆ ನೀವೇ ಕಾರಣರು .ನಿಮ್ಮ ಅಂತರಂಗದ ತಪ್ಪುಗಳಿಗೆ ನಾನು ಕಾರಣ” ಎಂಬ ನುಡಿಮುತ್ತುಗಳನ್ನು ಉಸುರಿ ಸಮಾಜ , ಸಮಾಜ , ನನ್ನ ಸಮಾಜವೆಂದು ನುಡಿದು ಸಮಾಜ ಸೇವೆಗಾಗಿ ಹುಟ್ಟಿ ಬರುವೆನೆಂದು ಭರವಸೆ ಕೊಟ್ಟು ಕೊನೆಯುಸಿರೆಳೆದರು.

ದೃಢ ಸಂಕಲ್ಪದಿಂದ ಕೊನೆಯುಸಿರೆಳೆದರು. ಸಮಾಜ ಸೇವೆಗೆ ಮರಳಿ ಹುಟ್ಟಿ ಬರುವೆನೆಂದು ನುಡಿದ ಮಾತುಗಳು ದೈವಿ ಸಂಕಲ್ಪ ಸಾಧನೆಯ ಕುರುಹು. ಶ್ರೀ ಕುಮಾರ ಶಿವಯೋಗಿಗಳ ದೇಹ ಕಣ್ಣಿಗೆ ಕಾಣದಿದ್ದರೂ ಅಂದಿಗೂ ಇಂದಿಗೂ ಮುಂದೆಂದಿಗೂ ಅವರು ಕೊಟ್ಟ ಸ್ಪೂರ್ತಿ ಸಮಾಜಕ್ಕೆ ಅವರು ದಯಪಾಲಿಸಿದ ಅಮರವಾಣಿ ಶಾಶ್ವತವಾಗಿ ಉಳಿಯುತ್ತದೆ.

ಶ್ರೀ ಕುಮಾರ ಶಿವಯೋಗಿಗಳು ಧರ್ಮದ ಹಾದಿಯಲ್ಲಿ ತಮ್ಮದೇ ಆದ ವಿಶಿಷ್ಟ ಮಾರ್ಗ ತುಳಿದವರು . ಅವರು  ದೈವಿಪುರುಷರಾಗಿ   ಶಿವನಲ್ಲಿ ಬೆರೆತು ಶಿವ ಶಕ್ತಿಯಾಗಿ ಶಿವಯೋಗಮಂದಿರದಲ್ಲಿ ವಾಸವಾಗಿದ್ದಾರೆ.

ನೀರು ಹರಿಯುತ್ತದೆ, ತನ್ನ ಸ್ವಾರ್ಥಕ್ಕಾಗಿ ಅಲ್ಲ .ಸರ್ವರ ತೃಷೆಯನ್ನು  ಹಿಂಗಿಸುವುದಕ್ಕಾಗಿ ಅದು ಗಿಡ ಮರಗಳನ್ನು ರಕ್ಷಿಸುತ್ತದೆ. ಜೀವಿಗಳಿಗೆ ಪ್ರಾಣಿಗಳಿಗೆ ಜೀವ ತುಂಬುತ್ತದೆ. ಹೂ ಅರಳಿಸುತ್ತದೆ. ಹಣ್ಣುಗಳಿಗೆ ಮಧುರತೆಯನ್ನು ತರುತ್ತದೆ,  ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು ಹೀಗೆಯೇ ಜೀವಿಸಿದರು.

 ಸತ್ಯಂ,ಶಿವಂ, ಸುಂದರಮ್,

ಲೇಖಕರು :ಪೂಜ್ಯ ಪರ್ವತ ದೇವರು ವಿರಕ್ತಮಠ ಕುರುಗೊಡ

ನೂರಾರು ಮತವಿಹುದು ಲೋಕದುಗ್ರಾಣದಲಿ ।

ಆರಿಸಿಕೊ ನಿನ್ನ ರುಚಿಗೊಪ್ಪುವುದನದರೊಳ್ ॥

ಸಾರದಡುಗೆಯನೊಳವಿಚಾರದೊಲೆಯಲಿ ಮಾಡು ।

ಬೇರೆ ಮತಿ ಬೇರೆ ಮತ – ಮಂಕುತಿಮ್ಮll

  ಪ್ರಪಂಚವು ಬಹಳಷ್ಟು ವಿಶಾಲವಾಗಿದೆ.ಅದರೊಂದಿಗೆ ಇಲ್ಲಿನ ಮನುಕುಲವೂ ಸಹ.ಇಲ್ಲಿನ ಮನುಕುಲದಲ್ಲಿ ಹಲವಾರು ಜನಾಂಗಗಳನ್ನು ನಾವು ಕಾಣುತ್ತೇವೆ. ಆ ಪ್ರತಿಯೊಂದು ಜನಾಂಗಕ್ಕೂ ಸಹ ಅವುಗಳದ್ದೇ ಆದ ಪದ್ಧತಿ,ಆಚರಣೆ,ಕಟ್ಟಲೆಗಳು ಇವೆ.ಇವುಗಳೇ ಮುಂದೆ ಬೆಳೆಯುತ್ತಾ ಬೆಳೆಯುತ್ತಾ ಸಬಲವಾಗಿ ಮುಂದೆ ಧರ್ಮವಾಗಿ ರೂಪುಗೊಂಡವು.ಇವುಗಳು ಶತಮಾನ, ಶತಮಾನಗಳಿಂದ ಬಂದಿವೆ.ಇವುಗಳ ಉದ್ದೇಶ  ಮಾನವನ ಆಂತರಿಕ ,ಸಾಮಾಜಿಕ,ದೈಹಿಕವಾಗಿ ವಿಕಾಸ ಹೊಂದುವುದೇ ವಿನಃ ತಮ್ಮ ತಮ್ಮಲ್ಲೇ ಉಚ್ಛ ನೀಚತ್ವವನ್ನು ಬೇಧಿಸಲು, ಭಿನ್ನಾಭಿಪ್ರಾಯ ಕಲಹಗಳನ್ನು ಸೃಷ್ಠಿಸಿ ನಮ್ಮ ಅಂತ್ಯವನು ನಾವೇ ಮಾಡಿಕೊಳ್ಳಲು ಅಲ್ಲ.

ಆದರೆ ಇಂದು ನಡೆಯುತ್ತಿರುವ ಪರಿಸ್ಥಿತಿ ಹೀಗೆ ಇದೆ.

ಇಂದು ಸಮಗ್ರ ವಿಶ್ವವನ್ನು ಗಮನಿಸಿದಾಗ ಒಟ್ಟು ಇಲ್ಲಿ 4,300 ಧರ್ಮಗಳು ಹುಟ್ಟಿಕೊಂಡಿವೆ.ಇವೆಲ್ಲ ಧರ್ಮಗಳು ಇರೋದು ಮಾನವನಿಗಾಗಿಯೆ ಹೊರತು ಪ್ರಾಣಿಗಳಿಗಲ್ಲ.

ಇಷ್ಟಾದರೂ ಸಹ ಈ ಮಾನವನಿಗಾಗಿಯೇ ಇರುವ ಧರ್ಮಗಳ ಅರ್ಥವನ್ನು ಮಾನವನು ತಿಳಿಯದೇ ಮಂಕಾಗಿ,ಯಾವುದೋ ಆಮಿಷಕ್ಕೆ ಒಳಗಾಗಿ ತನ್ನ ತನವನ್ನು ಮರೆತು, ಬೀದಿಗೆ ಬಂದು ಧರ್ಮಗಳಲ್ಲಿ ಬಿರುಕು ಹುಟ್ಟಿಸುವ ಕೆಲಸ ಮಾಡ್ತಾ ಇದ್ದಾನೆ.ಧರ್ಮಗಳ ಉದ್ದೇಶ ಇದು ಅಲ್ಲ.ಆದರೆ ನಮ್ಮ ಉದ್ದೇಶ ಇದರ ಹೊರತಿಲ್ಲ. ನೋಡಿ ಎಷ್ಟು ದಯನೀಯ ಸಂಗತಿ.

ಇಲ್ಲಿ ಯಾವುದೂ ಶ್ರೇಷ್ಠವಿಲ್ಲ ಮತ್ತು ಕನಿಷ್ಠನೂ ಇಲ್ಲ.ಎಲ್ಲವೂ ಸಹ ಅವರವರ ಮನೋಭಾವದಲ್ಲಿ ಅಡಗಿದೆ.ನಾವು ಪಾಲಿಸುವ ಧರ್ಮವನ್ನು ಅರಿತು ನಾವು ನಡೆಯಬೇಕಷ್ಟೇ.ನಮ್ಮಲ್ಲಿಯೇ ಭೇದ-ಭಾವ ಮಾಡಿ ವಿನಾಕಾರಣ ನಮ್ಮ ನಾಶಕ್ಕೆ ನಾವೇ ಗುರಿ ಆಗೋದಲ್ಲ.ಇದನ್ನೇ ಶರಣರು ಹೇಳಿದ್ದು.ಇದಕ್ಕಾಗಿಯೇ ಕಲ್ಯಾಣ ಕ್ರಾಂತಿ ಆಗಿದ್ದು.

“ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ,

ಜಲವೊಂದೇ ಶೌಚ ಆಚಮನಕ್ಕೆ,”

ಎಂದು ಶರಣರು ಸ್ಪಷ್ಟ ವಾಗಿ ತಿಳಿಸಿದ್ದಾರೆ.ಹೋಗಲಿ  ಬೇರೆ ಧರ್ಮ ನಿನಗೆ ತೃಪ್ತಿ ಕೊಟ್ಟಿಲ್ಲ ಅಂದಾಕ್ಷಣ ಅದರ ಬಗ್ಗೆ ತಿಳಿಯದೆ ಇಲ್ಲ ಸಲ್ಲದ ಹಾಗೆ ಮಾತನಾಡೋದು,ಅದನ್ನು ನಿಂದಿಸೋದು, ಅವಮಾನಿಸೋದು ನಿನ್ನ ಹಕ್ಕಲ್ಲ.ಹೇಗೆ ನಿನ್ನ ಧರ್ಮದ ಮೇಲೆ ನಿನಗೆ ಪ್ರೇಮವೋ ಹಾಗೇ ಅವರದು ಅವರಿಗೆ ಪ್ರೇಮ,.ಅದಕ್ಕೆಂದೇ ಇಲ್ಲಿ ಡಿ. ವಿ. ಜಿ. ಯವರು ತಿಳಿಸಿದ್ದಾರೆ.ಈ ಲೋಕವೆಂಬ ಸಂಗ್ರಹಣಾ ಕೊಠಡಿಯಲ್ಲಿ(store room) ನೂರಾರು ಧರ್ಮಗಳಿವೆ.ನಿನಗೆ ಹಿಡಿಸಿದ್ದನ್ನು ನೀನು ಆಯ್ಕೆ ಮಾಡಿಕೋ.ನಿನ್ನ ಮನಸ್ಸಿನ ಒಲೆಯಲ್ಲಿ ಆ ವಿಚಾರವನ್ನು ಅಡುಗೆಮಾಡಿ ಸಾರವನ್ನು ಅನುಭವಿಸು. ಯಾರ ಬುದ್ಧಿ ಹೇಗಿರುತ್ತದೋ ಹಾಗೆ ಅವರ ಮತ.ಅದನ್ನು ನೀನು ಪ್ರೀತಿಸುವುದಾದರೆ ಪ್ರೀತಿಸು,ಆಗದಿದ್ದರೆ ಸುಮ್ಮನಿರು. ಆದರೇ ಅನ್ಯರ ಭಾವ ಅಭಿಪ್ರಾಯ ಅಥವಾ ಮತವನ್ನು ಕುಹಕವಾಡುವುದಾಗಲೀ, ಅಲ್ಲಗೆಳೆಯುವುದಾಗಲೀ, ಖಂಡಿಸುವುದಾಗಲೀ ಸಲ್ಲ. ಏಕೆಂದರೆ ಯಾರ ಬುದ್ಧಿ ಮತ್ತು ವಿಚಾರ ಹೇಗಿರುತ್ತದೆಯೋ ಅವರ ಮತವೂ ಹಾಗಿರುತ್ತದೆ.

          ಒಂದೇ “ಪರವಸ್ತು”ವನ್ನು ಕಂಡುಕೊಳ್ಳಲು ಸಾವಿರಾರು ಮಾರ್ಗಗಳು ಇವೆ. ಆ ಮಾರ್ಗಕ್ಕೆ ತಕ್ಕಂತೆ ಧರ್ಮಗಳಿವೆ.ಹೀಗೆ ಆ ಮಾರ್ಗದಲ್ಲಿ ಆ ಧರ್ಮಿಯನಿಗೆ ಅವನದೇ ಆದ ಅಧಿಕಾರ ಮತ್ತು ಸಂಪೂರ್ಣ ಸ್ವಾತಂತ್ರ್ಯ ಉಂಟು.ಯಾರು ಹೇಗೆ ಕಂಡುಕೊಳ್ಳುತ್ತಾರೆಯೋ ಹಾಗೆ ಅದರ ದರ್ಶನವಾಗುತ್ತದೆ.ಪ್ರತಿಯೊಬ್ಬರ ದರ್ಶನವು ಅವರವರ ವಿಚಾರಗಳ ಆಧಾರದ  ಮೇಲೆ ಸೃಷ್ಟಿಯಾಗಿರುವವು.ಅವುಗಳ ಮಾರ್ಗದಲ್ಲಿ ಭಿನ್ನತೆಯನ್ನು ನಾವು ಕಂಡರೂ ಸಹ ಅವುಗಳ ಗುರಿ ಮಾತ್ರ ಒಂದೇ ಆಗಿರುತ್ತದೆ. ‘आकाशात् पतितं तोयं यथा गच्छति सागरम्। सर्वदेव नमस्कारः केशवं प्रति गच्छति’।। ಎಂದರು ನಮ್ಮ ಹಿರಿಯರು.  ಯಾವ ಪದ್ದತಿಯನ್ನು ಅನುಸರಿಸಿ, ಯಾವುದೇ ಹೆಸರಿನಿಂದ ನಮಸ್ಕರಿಸಿದರೂ, ಆಕಾಶದಿಂದ ಬಿದ್ದ ಮಳೆಯ ನೀರು ಹರಿಯುವಾಗ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಟ್ಟ ನದಿಗಳಾದರೂ ಸೇರುವುದು ಒಂದೇ ಕಡಲೆಂಬಂತೆ, ನಮ್ಮೆಲ್ಲ ಆಚರಣಾ ಮಾರ್ಗಗಳು ಬೇರೆಯಾದರೂ ಸಹ,ನಮ್ಮ ಭಕ್ತಿ ಸಲ್ಲೋದು ಮಾತ್ರ ಪರಾತ್ಪರ ವಸ್ತುವನ್ನೆ.ಅಲ್ಲಿ ಉಚ್ಛ ನೀಚವಿಲ್ಲ, ಭಿನ್ನತೆ ಇಲ್ಲ,ಅಲ್ಲಿ ನಾಮವಿಲ್ಲ,ಅಲ್ಲಿ ಸಾಕಾರ ನಿರಾಕಾರ ಭೇದವಿಲ್ಲ.ಯಾವುದೇ ವ್ಯತ್ಯಾಸವಿಲ್ಲ. ಹಾಗಾಗಿ ಆ ಪರತತ್ವವನ್ನು ಕುರಿತಾದ ನಮ್ಮ ಚಿಂತನೆಗೆ, ಜಗತ್ತಿನಲ್ಲಿರುವ ಸಾವಿರಾರು ಮಾರ್ಗಗಳಲ್ಲಿ ಯಾವುದಾದರೊಂದು ಮಾರ್ಗವನ್ನು ಹುಡುಕಿಕೊಂಡು, ಆ ಮಾರ್ಗವನ್ನು ದೃಢವಾಗಿ ನಂಬಿ ನಡೆದು ಗುರಿ ತಲುಪಬೇಕೇ ವಿನಃ ಅನ್ಯರ ಭಾವ ಅಭಿಪ್ರಾಯ ಅಥವಾ ಮತವನ್ನು ಕುಹಕವಾಡುವುದಾಗಲೀ, ಅಲ್ಲಗೆಳೆಯುವುದಾಗಲೀ, ಖಂಡಿಸುವುದಾಗಲೀ ಸಲ್ಲ.

ಸ್ವಧರ್ಮದಲಿ ನಿಷ್ಠೆ,ಪರಧರ್ಮ ಸಹಿಷ್ಣುತೆ ಇರಬೇಕು.ಆಗ ಬದುಕು ಸಾರ್ಥಕ.

ಹೀಗೆ ಒಂದು ಪ್ರಸಂಗ. ಒಂದು ಬಾರಿ ಶಿವಯೋಗ ಮಂದಿರದಲ್ಲಿ ಸಾಧಕರಾಗಿದ್ದ ನವಿಲುಗುಂದದ ಶ್ರೀ ಬಸವಲಿಂಗ ಸ್ವಾಮಿಗಳು ಒಮ್ಮೆ ಮಂದಿರಕ್ಕೆ ಬಂದ ಅಥಿತಿಗಳೊಂದಿಗೆ  ಭಾಷಣ ಮಾಡುವಾಗ ಉತ್ಸಾಹದಿಂದ ” ನ ವೀರಶೈವ ಸಮಮ್ ಮತಮಸ್ತಿ ಭೂತಲೆ”,ಎನ್ನುವ ಆಗಮದ ಸಂಸ್ಕೃತೋಕ್ತಿಯನ್ನು ಉದ್ಧರಿಸಿ ಜಗತ್ತಿನ ಸರ್ವ ಶ್ರೇಷ್ಠ ಧರ್ಮ ನಮ್ಮ ವೀರಶೈವ ಧರ್ಮ ಎಂದು ತಮ್ಮ ಧರ್ಮವನ್ನು ಪ್ರತಿಪಾದಿಸಿದ್ದರು. ಈ ಸಭೆಯಲ್ಲಿ ಕುಮಾರ ಶ್ರೀಗಳು ಸಹ ಉಪಸ್ಥಿತರಿದ್ದರು.ಸಭೆ ಮುಗಿದ ಬಳಿಕ ಬಸವಲಿಂಗ ಶ್ರೀಗಳನ್ನು ಬರ ಹೇಳಿದರು.ಇದನ್ನು ತಿಳಿದ ಬಸವಲಿಂಗ ಸ್ವಾಮಿಗಳು “ನನ್ನ ಭಾಷಣವನ್ನ ಕೇಳಿ ಪ್ರಶಂಸಿಸಲು ಕರೆದಿದ್ದಾರೆ.” ಎಂದು ಖುಷಿಯಿಂದ ಹೊರಟರು.ಆದರೆ ಅಲ್ಲಿ ಕುಮಾರ ಶ್ರೀಗಳ ಗಾಂಭೀರ್ಯ ಮುಖವನ್ನು ನೋಡಿದಾಕ್ಷಣ ಇವರ ಮುಖದ ಸಂತೋಷ ಬಾಡಿ ಹೋಗಿತ್ತು.  “ಯಾವ ಯಾವ ಧರ್ಮಗಳ ಬಗೆಗೆ  ಓದಿಕೊಂಡಿರುವಿರಿ”? ಎಂದು ಗಾಂಭೀರ್ಯದಿಂದ ಕುಮಾರ ಶ್ರೀಗಳು ಪ್ರಶ್ನಿಸಿದಾಗ,ಬಸವಲಿಂಗ ಸ್ವಾಮಿಗಳ ಬಾಯಲ್ಲಿ ಮಾತೇ ಹೊರಡದೆ ಸುಮ್ಮನೆ ನಿಂತಿದ್ದರು.       “ಯಾಕೆ ಸುಮ್ಮನಾದಿರಿ”? ಎಂದು ಗುರುಗಳು  ಮತ್ತೆ ಪ್ರಶ್ನಿಸಿದಾಗ ಬಸವಲಿಂಗ ಶ್ರೀಗಳು ಇನ್ನೂ ಮೌನದಿಂದಿರುವುದರಲ್ಲಿ ಅರ್ಥವಿಲ್ಲ ಎಂದು ಅರಿತು ಭಯದಿಂದ ‘ ಇಲ್ಲ ಬುದ್ಧಿ,ನಾನು ವೀರಶೈವ ಧರ್ಮ ಬಿಟ್ಟು ಬೇರೆ ಧರ್ಮದ ಬಗೆಗೆ ಏನನ್ನು ತಿಳಕೊಂಡಿಲ್ಲ.’ ಎಂದು ಅಳುಕುತ್ತ  ಉತ್ತರಿಸಿದಾಗ, ಗುರುಗಳು ಶಾಂತರಾಗಿ ” ನಿಮ್ಮ ಧರ್ಮದ ಬಗ್ಗೆ ಮಾತ್ರ ತಿಳಿದ ನೀವು ಜಗತ್ತಿನ ಉಳಿದ ಧರ್ಮಗಳಿಗಿಂತ ನಿಮ್ಮ ಧರ್ಮವೇ ಶ್ರೇಷ್ಠ ಎಂದು ಹೇಗೆ ಹೇಳಿದಿರಿ?ಅದಕ್ಕೇನು ಅಧಾರಗಳಿವೆಯೇ? ಎಲ್ಲರಿಗೂ ಅವರವರ ಧರ್ಮ ಶ್ರೇಷ್ಠ. ಇವತ್ತಿನ ನಿಮ್ಮ ಭಾಷಣ ಕೇಳಿ ಅತಿಥಿಗಳು ಏನು ಭಾವಿಸಿಕೊಂಡಿರಬಹುದು? ಶಿವಯೋಗ ಮಂದಿರದ ಬಗ್ಗೆ ತಪ್ಪು ಭಾವನೆ ಅವರಿಗೆ ಬಂದಂತೆ ಅಗಲಿಲ್ಲವೆ ನೀವಾಡಿದ ನುಡಿಗಳು?ನಿಮ್ಮ ನುಡಿ ಬೇರೆಯವರ ಮನಕ್ಕೆ ನೋವು ತರಬಾರದು.ನುಡಿ ಸತ್ಯವಿರಬೇಕು.ಎಲ್ಲ ಧರ್ಮವು ಶ್ರೇಷ್ಠವೇ.ನಿಮ್ಮ ಧರ್ಮದಲ್ಲಿ ನಿಮಗೆ ನಿಷ್ಠೆಯ ಪರಿಪಾಲನೆ ಇರಬೇಕು,ಹಾಗೆ ಪರ ಧರ್ಮಗಳಲ್ಲಿ ಸಹಿಷ್ಣುತೆ, ಗೌರವ ಇರಬೇಕು ಆಗಲೇ ನಿಮ್ಮ ಸಾಧನೆ ಪೂರ್ಣವಾಗುತ್ತದೆ ಮತ್ತು ಭಗವಂತನಿಗೆ ಮೆಚ್ಚ್ಚುಗೆ ಆಗುತ್ತದೆ.”ಎಂದು ಸಂಪೂರ್ಣ ಎಲ್ಲ ಧರ್ಮಗಳ ಬಗ್ಗೆ ಅರಿತ ಕುಮಾರ ಶ್ರೀಗಳು, ತಮ್ಮ ಧರ್ಮದಲ್ಲಿ ನಿಷ್ಠಾವಂತರಾಗಿ,ಪರ ಧರ್ಮಗಳಲ್ಲಿ ಗೌರವವನ್ನು ನೀಡುವ ದಿವ್ಯ ಬೋಧೆಯನ್ನೂ ಅವರ ಮೂಲಕ ಈ ಸಮಾಜಕ್ಕೆ ಸೂಕ್ಷ್ಮವಾಗಿ ತಿಳಿಸಿದ್ದರು.

ಪೂಜ್ಯ ವಾಗೀಶ ದೇವರು ಶ್ರೀಧರಗಡ್ಡಿ

            ನಮ್ಮಭಾರತೀಯ ಅಧ್ಯಾತ್ಮಿಕ ಸಂಸ್ಕೃತಿಯಲ್ಲಿ ಪ್ರಾಚೀನಕಾಲದಿಂದಲೂ ಯೋಗಕ್ಕೆ ಮಹತ್ವ ಪೂರ್ಣ ವಾದಂತಹ ಸ್ಥಾನವನ್ನು ಕಲ್ಪಿಸಲಾಗಿದೆ. ಧರ್ಮದ ಆತ್ಯಂತಿಕ ಗುರಿಯಾದ ಮೋಕ್ಷ ಸಾಧನೆ, ಲಿಂಗಾಂಗ ಸಾಮರಸ್ಯ ಅಥವಾ ಶಿವಸಾಯುಜ್ಯ ಹೊಂದುವದೇ ಯೋಗದ ಮುಖ್ಯಗುರಿ. ಈ ಸಂದೇಶವನ್ನು ಪ್ರಾಚೀನಕಾಲದಿಂದಲೂ ಅನೇಕ ಋಷಿ ಮಹರ್ಷಿಗಳು ವಚನಗಳಲ್ಲಿ, ವೇದಗಳಲ್ಲಿ, ಉಪನಿಷತ್ತುಗಳಲ್ಲಿ,ಭಗವದ್ಗೀತೆಯಲ್ಲಿ ಹೀಗೆ ಹಲವಾರು ಧಾರ್ಮಿಕ ಗ್ರಂಥಗಳಲ್ಲಿ ಯೋಗದ ಮೂಲ ಗುರಿಯನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. (ಆಗಮ ಕರ್ತೃ ವಾದಂತಹ ಪರಶಿವನೇ ನಮ್ಮ ಪ್ರಾಚೀನ ಋಷಿಮುನಿಗಳಿಗೆ ಯೋಗದ ಉಪದೇಶವನ್ನು ಮಾಡುತ್ತಾ ಬಂದಿದ್ದಾನೆ ಎಂಬುದು ನಮ್ಮ ಪುರಾತನರ ನಂಬಿಕೆ).

                         ಯೋಗಕ್ಕೆ ಅನಂತ ಪರಿಭಾಷೆಗಳಿವೆ. ಎಲ್ಲ ಧರ್ಮಗಳು, ಎಲ್ಲ ದರ್ಶನಗಳು, ಎಲ್ಲ ಮತಗಳು ತಮ್ಮದೇ ಆದಂತಹ ವಿಶಿಷ್ಟ ಕ್ರಿಯೆಗಳನ್ನು ಒಳಗೊಂಡಿವೆ, ಆದರೆ ಗುರಿ ಮಾತ್ರ ಒಂದೇ. ಜೀವನು ಶಿವ ನಾಗುವ, ಜೀನನು ಜೈನ ನಾಗುವ, ಬದ್ಧನು ಬುದ್ಧನಾಗುವ ಶ್ರೇಷ್ಠ ಮಾರ್ಗವನ್ನು ಈ ಯೋಗಮಾರ್ಗವು ಬೋಧಿಸುತ್ತದೆ. ಒಂದೇ ಮಾರ್ಗವನ್ನು ನಮ್ಮ ಪ್ರಾಚೀನ ಸಂತರು ಭಿನ್ನ ಭಿನ್ನವಾಗಿ ಚಿತ್ರಿಸಿದ್ದಾರೆ. ಸ್ವಾಮಿ ವಿವೇಕಾನಂದರು ರಾಜಯೋಗವನ್ನು, ಅರವಿಂದರ ಪೂರ್ಣಯೋಗವನ್ನು, ಮಹಾವೀರರು ಅಹಿಂಸಾ ಮಾರ್ಗ ವನ್ನು, ಬುದ್ಧರ ತ್ಯಾಗ ಮಾರ್ಗವನ್ನು, ಮಹಾದೇವಿ ಅಕ್ಕನವರು ವೈರಾಗ್ಯವನ್ನು, ಬಸವಣ್ಣನವರ ಭಕ್ತಿ ಮಾರ್ಗ ಹೀಗೆ ಅನೇಕ ಮಹಾತ್ಮರು ಲೋಕೋದ್ಧಾರಕ್ಕಾಗಿ ಆತ್ಮ ಉನ್ನತಿಗಾಗಿ ಅನೇಕ ಮಾರ್ಗಗಳನ್ನು ತೋರಿದ್ದಾರೆ.

ಯೋಗವು ವ್ಯಕ್ತಿಯಲ್ಲಿರುವ ಮೂಲಭೂತ ವಾದಂತಹ ಸ್ವಭಾವಗಳನ್ನು ನಿಯಂತ್ರಿಸಿ  ಆ ನಿಯಂತ್ರಣದ ಮೂಲಕ ವ್ಯಕ್ತಿಯನ್ನು ಪರಿಪೂರ್ಣದೆಡೆಗೆ, ಔನತ್ಯದ ಕಡೆಗೆ ಕೊಂಡೊಯ್ಯುವ ವಿಶಿಷ್ಟ ಮಾರ್ಗವಾಗಿದೆ.

ಈ ಮಾರ್ಗವನ್ನು ಅನುಷ್ಠಾನ ಮಾಡಿ, ಅನುಸಂಧಾನ ಮಾಡಿ ಅನುಭವಿಸ ಬೇಕಲ್ಲದೆ ಬುದ್ಧಿಯಿಂದ ವಿವರಿಸಲಾಗುವುದಿಲ್ಲ. ಒಂದು ಹಣ್ಣನ್ನು ಅಥವಾ ಸಿಹಿಯಾದ ಪದಾರ್ಥವನ್ನು ತಿಂದು ಅದರ ಸಂಪೂರ್ಣ ರುಚಿ, ಸ್ವಾದ ಅನುಭವಿಸಬೇಕಲ್ಲದೆ ಅದು ಹೇಗಿದೆ,ಅದರ ರುಚಿ ಹೇಗಿದೆ ಎಂದು ಪ್ರಶ್ನಿಸುವುದರಿಂದ ಅದರ ಸಂಪೂರ್ಣ ಅರಿವು ನಮಗೆ ಉಂಟಾಗುವುದಿಲ್ಲ. ಅರಿತವನು ಜ್ಞಾನಿಯಾಗುತ್ತಾನೆ, ಸಾಧಿಸಿದವನು ಸಿದ್ಧನಾಗುತ್ತಾನೆ, ಅನುಭವಿಸಿದವರು ಯೋಗಿಯಾಗುತ್ತಾನೆ. ಇಂತಹ ಸಿದ್ದರು ಸಂತರು ಮಹಾತ್ಮರು ಯೋಗಿಗಳು ಲೋಕದೊಳಗೆ ಇದ್ದು ಅಲೌಕಿಕವಾದ ಜೀವನವನ್ನು ಸಾಗಿಸುತ್ತಾರೆ

   ಈ ಯೋಗಮಾರ್ಗದಲ್ಲಿ ಮುಂದುವರೆಯುವವನಿಗೆ ವಿವೇಕ ವೈರಾಗ್ಯಗಳೆರಡು ಅತ್ಯವಶ್ಯಕ.  ಸಾಧಕರು ಆತ್ಮಸಂಯಮ ದೊಂದಿಗೆ ಶಾಸ್ತ್ರಗ್ರಂಥಗಳ ಅಧ್ಯಯನವನ್ನು ಮಾಡುತ್ತಾ ವಿವೇಕ ವೈರಾಗ್ಯಗಳನ್ನು ಗಳಿಸಿಕೊಳ್ಳುತ್ತಾ ಗುರುವಿನ ಮಾರ್ಗದರ್ಶನದಲ್ಲಿ ಮುನ್ನಡೆದರೆ ಈ ಸಾಧನೆ ಸಾಧ್ಯ ಎಂಬುದು ಗಮನೀಯ ವಾದಂತಹ ಸಂಗತಿ ಅದಕ್ಕೆ ಗೀತೆಯಲ್ಲಿ ಒಂದು ಉದಾಹರಣೆಯನ್ನು ಭಗವಂತನು ತಿಳಿಸಿದ್ದಾನೆ. 

“ಮನುಷ್ಯಾಣಾಂ ಸಹಸ್ರೇಷು ಕಸ್ತಿದ್ ಯತತಿ ಸಿದ್ಧಯೇ

ಯತತಾನಾಮಪಿ ಸಿದ್ದಾನಾಂ ಕಶ್ಚಿನ ಮಾಂ ವೇತ್ತಿ ತತ್ವ ತಹ”

                              ಸಾವಿರ ಜನರಲ್ಲಿ ಒಬ್ಬನು ಮಾತ್ರ ಈ ಸಾಧನೆಗಾಗಿ ಪ್ರಯತ್ನಿಸುತ್ತಾನೆ. ಇದಕ್ಕಿಂತ ಶ್ರೇಷ್ಠವಾದ ಸಾಧನೆ ಮತ್ತೊಂದಿಲ್ಲ. ಇದಕ್ಕಾಗಿ ಪ್ರಯತ್ನಿಸಿದಂತಹ  ಸಾವಿರಾರು ಜನರಲ್ಲಿ ಒಬ್ಬನು ಮಾತ್ರ ಈ ದುರ್ಲಭವಾದ ದಿವ್ಯ ಮಾರ್ಗವನ್ನು ಅನುಸರಿಸುತ್ತಾನೆ. ಈ ಅಪೇಕ್ಷೆ ಬೆಳೆದಂತೆಲ್ಲ ಭೌತಿಕ ವಸ್ತು ವಿಷಯಗಳಲ್ಲಿ ಮನಸ್ಸು ಉದಾಸೀನಭಾವವನ್ನು ತಾಳುತ್ತದೆ, ಉದಾತ್ತಿಕರಣಗೊಳ್ಳುತ್ತದೆ.

        “ಆತ್ಮ ವಿದ್ಯಾ ತಪೋ ಮೂಲಮ್”  ಎಂಬುವುದನ್ನು

ಅರಿತಂತಹ ಶ್ರೀ ಕುಮಾರ ಮಹಾಶಿವಯೋಗಿಗಳು ತಮ್ಮ ಗುರುಗಳಾದಂತಹ ಶ್ರೀ ಬಸವಲಿಂಗ ಮಹಾ ಶಿವಯೋಗಿಗಳವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಲೋಕ ಲೌಕಿಕಗಳೆರಡರ ಜ್ಞಾನವನ್ನು ಪಡೆಯುತ್ತಾ ಲೋಕ ಸಂಚಾರ ಗೈಯುತ್ತಾ ಶಂಭುಲಿಂಗನ ಬೆಟ್ಟದಲ್ಲಿ ತಪವನ್ನಾಚರಿಸಿ ತಮ್ಮ ಗುರುಗಳ ಮಾನಸ ಪುತ್ರರಾಗಿ ಹೊರಹೊಮ್ಮಿದರು. ಬಸವಲಿಂಗ ಮಹಾಶಿವಯೋಗಿಗಳು ತಮ್ಮ ದಿವ್ಯ ಶಕ್ತಿಯನ್ನೆಲ್ಲ ಶಿಷ್ಯನಿಗೆ ಧಾರೆಯೆರೆದರು. ಒಬ್ಬ ಸಮರ್ಥವಾದ ಗುರು ನಿಸ್ವಾರ್ಥತೆಯಿಂದ ತನ್ನೆಲ್ಲಾ ಶಕ್ತಿಯನ್ನು ಶಕ್ತಿಪಾತ ದೀಕ್ಷೆಯ ಮುಖಾಂತರ ತನ್ನ ಶಿಷ್ಯನಿಗೆ ಧಾರೆ ಎರೆಯುವುದನ್ನು ನಾವು ಭಾರತೀಯ ಪುರಾತನ ಪರಂಪರೆಯಲ್ಲಿ ಕಾಣುತ್ತೇವೆ ಇಂತಹ ದಿವ್ಯಶಕ್ತಿಯನ್ನು ಹೊಂದಿ, ಲೋಕ ಕಲ್ಯಾಣದಲ್ಲಿಯೇ ಆತ್ಮ ಕಲ್ಯಾಣವನ್ನು ಸಾಧಿಸುವ ದಿವ್ಯತೆಯನ್ನು ಹೊಂದಿ ಒಬ್ಬ ಶ್ರೇಷ್ಠ ಯೋಗಿಗಳಾಗಿ ಸಂತರಾಗಿ ಮಹಾತ್ಮರಾಗಿ ಹೊರಹೊಮ್ಮಿದರು. ಆದ್ದರಿಂದ ಈ ಯೋಗಮಾರ್ಗವು ನಿರಂತರವಾಗಿ ಮುನ್ನಡೆಯಲಿ ಎಂದು ಯೋಗದ ಮಹತ್ವವನ್ನು ನಮಗೆ ಅರುಹುತ್ತಾ ಬಂದಿದ್ದಾರೆ. ಒಟ್ಟಾರೆಯಾಗಿ  ಈ ಯೋಗಮಾರ್ಗವು ಸಾಮಾನ್ಯರನ್ನು ಮಾನವರನ್ನಾಗಿ, ಮಾನವರನ್ನು ಮಹಾ ಮಾನವರನ್ನಾಗಿ, ಮಹಾ ಮಾನವರನ್ನು ದೇವ ಮಾನವರನ್ನಾಗಿ ಮಾಡುವಂತಹ ಒಂದು ಪ್ರಕ್ರಿಯೆ ಆದ್ದರಿಂದ ನಾವೆಲ್ಲರೂ ಈ ಮಾರ್ಗವನ್ನು ಅನುಸರಿಸೋಣ, ನಮ್ಮ ಜೀವನವನ್ನು ಪಾವನ ವನ್ನಾಗಿ ಮಾಡಿಕೊಳ್ಳೋಣ, ತಮಗೆಲ್ಲರಿಗೂ ಶುಭವಾಗಲಿ