ಲೇಖಕರು :ಲಿಂ. – ಪಂ. ಪುಟ್ಟರಾಜ ಗವಾಯಿಗಳು

ಸಂಗೀತವು ಲಲಿತ ಕಲೆಗಳಲ್ಲಿ ಒಂದಾಗಿದೆ. ವಾಸ್ತುಶಿಲ್ಪ, ಮೂರ್ತಕಲೆ, ಚಿತ್ರಕಲೆ, ಸಂಗೀತ ಇವೆಲ್ಲ ಲಲಿತಕಲೆಗಳು. ಇವೆಲ್ಲವುಗಳಲ್ಲಿ ಸೌಂದರ್ಯ (ಲಾಲಿತ್ಯ)ವಿದೆ, ಆನಂದವನ್ನುಂಟುಮಾಡುವದೆ ಸೌಂದರ್ಯ.ಸುಂದರ ವಸ್ತುವು ನಮ್ಮ ಕಣ್ಮನಗಳನ್ನು ಆಕರ್ಷಿಸುತ್ತದೆ. ಸೌಂದರ್ಯ ಇಂದ್ರಿಯಗತ್ಯ. ವಾಸ್ತು-ಮೂರ್ತಿಚಿತ್ರಗಳಲ್ಲಿಯ ಸೌಂದರ್ಯದ ಅನುಭವಕ್ಕೆ ನೇತ್ರೇಂದ್ರಿಯ  ಕಾರಣ, ಅವುಗಳಲ್ಲಿ ಆಕಾರ, ಭಾವಭಂಗಿ,ವರ್ಣ ರೇಖಾವಿನ್ಯಾಸವಿರುತ್ತವೆ. ಅವನ್ನು ಕಂಡು ಆನಂದಪಡಲು ಕಣ್ಣು ಬೇಕು. ಕಣ್ಣಿಲ್ಲದವರಿಗೆ ವಾಸ್ತು ಮೂರ್ತಿ ಚಿತ್ರಕಲೆಗಳ ಸೌಂದರ್ಯ ಶೂನ್ಯ. ಆದರೆ ಸಂಗೀತ ಕಲೆಯು ಶಬ್ದಮಯವಾದುದು. ಶಬ್ದ ಶ್ರುತಿಗಮ್ಯ, ಸಂಗೀತದಲ್ಲಿ ನಾದಮಾಧುರ್ಯವಿರುತ್ತದೆ. ಅದನ್ನು ಕೇಳಿಯೇ ಸವಿಯಬೇಕು. ಸಮ್ಯಕ್ ಗೀತ ಕೇಳುವ ರಸಿಕರಿಗೆ ಇಂಪಾಗುವಂತೆ ಹಾಡಲ್ಪಟ್ಟುದೆ ಸಂಗೀತವು. ಅಂತೆಯೆ, ಗೀತವು ರಸಪ್ರಧಾನವಾದ ಉತ್ತಮ ಕಲೆಯೆಂದು ಪ್ರಶಸ್ತಿಯನ್ನು ರಸಿಕರಿಂದ ಪಡೆದಿದೆ.

‘ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತ ಮುಚ್ಯತೆ’

ಎಂಬಂತೆ ಗೀತ, ವಾದ್ಯ, ನೃತ್ಯಗಳ ಸಮ್ಮೇಳವೆ ಸಂಗೀತವೆನಿಸುತ್ತದೆ. ಇಲ್ಲಿ ಗೀತಕ್ಕೆ ಮೊದಲನೆಯ ಸ್ಥಾನವಿದೆ. ಸಂಗೀತಕ್ಕೆ ರಸಾತ್ಮಕವಾದ ಕಾವ್ಯವೂ ಸಹಕಾರಿಯಾಗಿದೆ. ಗೀತವು ಶ್ರವ್ಯ ಕಾವ್ಯದ ಒಂದು ಪ್ರಕಾರ ಸ್ವರಯುಕ್ತವಾಗಿ ಹಾಡಿದ ಗೀತವು ಸುಶ್ರಾವ್ಯವಾಗಿ ಕೇಳುವವರಿಗೆ ಆನಂದವನ್ನುಂಟು ಮಾಡುತ್ತದೆ. ಸಂಗೀತದ ಸಹಾಯದಿಂದ ಕಾವ್ಯದ ಸ್ವಾರಸ್ಯ ಹೆಚ್ಚುತ್ತದೆ. ಕಾವ್ಯದಲ್ಲಿಯ ಛಂದಸ್ಸು ಸಂಗೀತದ ತಾಲ-ಲಯಗಳನ್ನೇ ಸೂಚಿಸುತ್ತದೆ. ಉಳಿದ ಕಾವ್ಯ ಪ್ರಕಾರಕ್ಕೆ ಸಂಗೀತವಿದ್ದೇ ತೀರಬೇಕೆಂಬ ನಿಯಮವಿಲ್ಲವಾದರೂ ಗಮಕಿಯು ಸಂಗೀತಜ್ಞನು ಹಾಡಿದ ಕಾವ್ಯ ರಸಮಯವಾಗಿರುತ್ತದೆ. ಸಂಗೀತದ ನೆರವಿನಿಂದ ಕಾವ್ಯದ ರಸಾತ್ಮಕತೆ ಸಹಜವಾಗಿ ಪ್ರಕಟವಾಗುತ್ತದೆ. ಗೀತಕ್ಕೆ ಸಂಗೀತವೆ ಪ್ರಾಣ. ಸಂಗೀತದಲ್ಲಿ ಗೀತಕ್ಕೆ ಗೌರವದ ಸ್ಥಾನವಿದೆ. ‘ಸಂಗೀತ ರತ್ನಾಕರ’ದಲ್ಲಿ

ನೃತ್ಯಂ ವಾದ್ಯಾನುಗಂ ಪ್ರೋಕ್ತಂ ವಾದ್ಯಂ ಗೀತಾನುವೃತಿ ಚ |

ಆತೋ ಗೀತಂ ಪ್ರಧಾನಂ ತತ್ ತದಾದಾವಭಿಧೀಯತೆ ||

ನೃತ್ಯವು ವಾದ್ಯವನ್ನು ಅನುಸರಿಸುತ್ತದೆ. ವಾದ್ಯವು ಗೀತವನ್ನು ಆದುದರಿಂದ ಗೀತವೆ ಪ್ರಧಾನವು.ಅಂತೆಯೆ ಸ್ವರಶಾಸ್ತ್ರಕ್ಕೆ ಸಂಗೀತವೆಂಬ ಹೆಸರು ಮೊದಲಿನಿಂದಲೂ ಸಾರ್ಥಕವಾಗಿ ಬಂದಿದೆ. ಗೀತವಿಲ್ಲದ ಸಂಗೀತ ನಿರ್ಗೀತವಾಗಿ ನೀರಸವಾಗುವದು.

ಗೀತ-ವಾದ್ಯ-ನೃತ್ಯಗಳ ಸಮ್ಮಿಳನದಿಂದ ಸಂಗೀತವು ಸರ್ವಾಂಗ ಸುಂದರ ಕಲೆಯಾಗಿ ವಿಕಾಸಗೊಂಡಿದೆ.ಬಾಳುವೆಯಲ್ಲಿ ತಾಳ್ಮೆಯಿಲ್ಲದವರಿಗೂ ತನ್ಮಯತೆಯನ್ನು ತಂದು ಕೊಡುವ ತಾತ್ವಿಕ ಸತ್ಯವಿದೆ.ಸಂಗೀತದಲ್ಲಿ. ಶಿಶುವು, ಪಶುವೂ ಸಂಗೀತದ ನಾದ ಮಾಧುರ್ಯಕ್ಕೆ ಮನಸೋಲುತ್ತವೆ. ಅಳುವ ಕೂಸು ತಾಯ ಜೋಗುಳ ಕೇಳಿ ಸುಮ್ಮನಾಗುತ್ತದೆ. ಪುಂಗಿಯ ಇಂಪಾದ ನಾದಕ್ಕೆ ನಾಗರ ಹೆಡೆ ಎತ್ತಿ ತಲೆದೂಗುತ್ತದೆ.ಚಿಗರೆ ಹುಲ್ಲು ಮೆಲ್ಲುವದನ್ನು ಬಿಟ್ಟು ಮಂಜುಳ ನಾದಕ್ಕೆ ಕಿವಿಗೊಡುತ್ತದೆ. ಪ್ರಕೃತಿಯನ್ನೇ ಕರಗಿಸಿ ನೀರು ಮಾಡುವ ಮಹೋನ್ನತ ಶಕ್ತಿ ಸಂಗೀತದಲ್ಲಿದೆ. ಗಾಯಕನ ನಾದಲೀಲೆಯಲ್ಲಿ ರಾಗಮಾಲಿಕೆಯಲ್ಲಿ ಮೋಡದಿಂದ ಮಳೆ ತರಿಸುವ ಶಕ್ತಿಯಿದೆ, ನಂದಿದ ದೀಪವನ್ನು ಹೊತ್ತಿಸುವ ಸತ್ತ್ವವಿದೆ.

ಇಂತಹ ಅಗಾಧವಾದ ಸಂಗೀತ ಕಲೆಯ ಸದುಪಯೋಗ ಮಾಡಿಕೊಳ್ಳುವಲ್ಲಿ ಮಾನವನ ಯೋಗ್ಯತೆ ಕಂಡು ಬರುತ್ತದೆ. ಗಾನವಿದ್ಯೆಯು ಒಂದು ಸುಕರ್ಮವೆ. ಅದರಲ್ಲಿ ಅದ್ಭುತ ಕೌಶಲ್ಯವಿದೆ, ಸ್ವರ ಸಾಧನೆಯ ತಪಸ್ಸು ಇದೆ. ಅಂತೆಯೆ, ಅದೂ ಒಂದು ಉತ್ತಮ ಯೋಗವೆ. ಈ ಯೋಗವೂ ಚಿತ್ತವೃತ್ತಿಗಳ ನಿರೋಧವನ್ನು ಮಾಡಿ ಸಾಧಕನಿಗೆ ಮನಶ್ಯಾಂತಿಯನ್ನು ಕೊಡುತ್ತದೆ. ಹಠಯೋಗದಂತೆ ಇದು ಕಠಿಣವಲ್ಲ, ನೀರಸವಲ್ಲ.ಮಾನವನು ಸಂಗೀತ ವಿದ್ಯೆಯಿಂದ ಲೌಕಿಕ ಪಾರಮಾರ್ಥವೆರಡನ್ನೂ ಸಾಧಿಸಬಹುದು. ಭಕ್ತಿಯಿಂದ ಒಲಿದು ಹಾಡಿದ ಗೀತದಲ್ಲಿ ಬಾಹ್ಯ ವೃತ್ತಿಯನ್ನು ಬದಲಿಸಿ ಮಾನವನನ್ನು ಸದ್ಭಾವದತ್ತ ಒಯ್ಯುವ ಬಲವಿದೆ.

ಭಾರತೀಯ ಸಂಗೀತದ ಕ್ಷೇತ್ರವು ಬಹು ವಿಶಾಲವಾಗಿದೆ. ಭಾರತೀಯ ಜನ ಜೀವನದಲ್ಲಿ ಸಂಗೀತವು ಒಂದು ಅಸಾಧಾರಣವಾದ ಆನಂದದಾಯಕ ಸಾಧನೆಯಾಗಿದೆ, ವಿನೋದ-ಮನರಂಜನೆಗಳ ಪರಮೋಪಾಯ ವಾಗಿದೆ. ಸಂಗೀತವು ನಿತ್ಯದ ಜನಜೀವನದಲ್ಲಿ ನವಚೈತನ್ಯವನ್ನು ತರುವ ಒಂದು ಉತ್ತಮ ಬಗೆಯಾಗಿದೆ.ಸಾಮವೇದವು ಸಂಗೀತಮಯವಾಗಿದೆ. ಉಪನಿಷತ್ತು ನಾದವನ್ನು ಬ್ರಹ್ಮವೆಂದು ಸಂಬೋಧಿಸಿದೆ.ನಾದದಲ್ಲಿ ಆನಂದವಿದೆ. ಆನಂದವು ಬ್ರಹ್ಮನ ಐದು ಲಕ್ಷಣಗಳಲ್ಲಿ ಒಂದು. ನಾದಾನುಸಂಧಾನದಿಂದ ಮಾನವನು ಅಕ್ಷರನನ್ನು ಕಾಣಬಹುದಾಗಿದೆ, ಅಮೃತತ್ವವನ್ನು ಪಡೆಯ ಬಹುದಾಗಿದೆ.

ಭಾರತೀಯರ ಭವ್ಯ ದೃಷ್ಟಿಯಲ್ಲಿ ಸಂಗೀತವು ಬರಿಯ ಕಲೆಯಲ್ಲ, ಮನರಂಜನೆಯನ್ನು ಮಾಡುವ ಸಾಧನ ಮಾತ್ರವಲ್ಲ. ಅದು ಮುಕ್ತಿಯ ಪರಮೋತ್ಕೃಷ್ಠ ಸಾಧನವೂ ಅಹುದು. ಅಂತೆಯೆ, ಅದಕ್ಕೆ ಕಲೆಗಳಲ್ಲಿ ಅತ್ಯುನ್ನತ ಸ್ಥಾನವಿದೆ. ಅದು ದಾನ-ಯಜ್ಞ ಜಪಾದಿಗಳನ್ನೂ ಮೀರಿ ನಿಂತಿದೆ.

ತ್ರಿವರ್ಗಫಲದ್ಯಾ: ಸರ್ವೆ ಜ್ಞಾನಯಜ್ಞಜಪಾದಯಃ |

ಏಕಂ ಸಂಗೀತ ವಿಜ್ಞಾನಂ ಚತುರ್ವಗ್ರಫಲಪ್ರದಂ ||

ಸಂಗೀತ ಮೋಕ್ಷವನ್ನೊಳಗೊಂಡ ನಾಲ್ಕು ಪುರುಷಾರ್ಥಗಳಿಗೂ ಸಾಧನವಾಗಿದೆ. ಆದುದರಿಂದ,ಅದನ್ನು ನಾವು ಪುರುಷಾರ್ಥ ಸಾಧನಗಳಲ್ಲಿ ಪರಮೋತ್ತಮವಾದುದೆಂದು ಗ್ರಹಿಸಬಹುದಾಗಿದೆ.ಭಕ್ತಿಗೂ ಗೀತೆಗೂ ನಿಕಟವಾದ ಸಂಬಂಧವಿದೆ. ಕನ್ನಡ ಸಾಹಿತ್ಯದಲ್ಲಿ ಗೀತಗಳ ಪರಂಪರೆಗೆ ವೀರಶೈವ ಕವಿಗಳೇ ಮೂಲ ಕರ್ತೃಗಳು, ವೀರಶೈವ ಸಾಹಿತ್ಯದಲ್ಲಿ ಅವುಗಳಿಗೆ ‘ಸ್ವರವಚನ’ವೆಂಬ ಅನ್ವರ್ಥಕ ಅಭಿಧಾನ ಒಪ್ಪುತ್ತದೆ. ಶಿವಶರಣರು ವಚನ ಸಾಹಿತ್ಯವನ್ನಲ್ಲದೆ ಈ ಅನುಭವ ಗೀತೆಗಳನ್ನು ಹಾಡಿ ಶಿವನೊಲುಮೆಯನ್ನು ಪಡೆದಿದ್ದಾರೆ. ಈ ಪರಂಪರೆಯನ್ನು ತಮ್ಮ ಅನುಭಾವ ಮತ್ತು ಸಂಗೀತ ಪ್ರತಿಭೆಯಿಂದ ಅಚ್ಚಳಿಯದೆ ಉಳಿಸಿ ಬೆಳೆಸಿದ ಶ್ರೇಯಸ್ಸು  ಶ್ರೀ ನಿಜಗುಣ ಶಿವಯೋಗಿಗಳವರದು. ಹರಿದಾಸರ ಕೀರ್ತನಗಳಿಗೂ ಕನ್ನಡ ಗೀತ ಸಾಹಿತ್ಯದಲ್ಲಿ ವಿಶಿಷ್ಟವಾದ ಸ್ಥಾನವಿದೆ.ಅನನ್ಯ ಭಾವದಿಂದ ದೇವನ ನಾಮವನ್ನು ಹಾಡುವದೂ ಭಕ್ತಿಯ ಒಂದು ಪ್ರಕಾರವಾಗಿದೆ. ‘ವಚನದಲ್ಲಿ ನಾಮಾಮೃತ ತುಂಬಿ’ ಎಂಬ ಬಸವಣ್ಣನವರ ವಚನ ಭಕ್ತಿಗೀತಗಳ ಮಹತಿಯನ್ನು ಒತ್ತಿ ಹೇಳುವಂತಿದೆ. ಕರ್ನಾಟಕವು ಕಲೆಗಳಿಗೆ ತವರು ಮನೆಯಾಗಿದೆ. ಸಂಗೀತಕಲೆಗೂ ಕರ್ನಾಟಕವೆ ಜನ್ಮಭೂಮಿ. ಎಲ್ಲ ಗಾಯಕರೂ ಮೊದಲು ವಾತಾಪಿ (ಬದಾಮಿ)ಯ ಗಣಪತಿಯನ್ನೇ ಪ್ರಾರ್ಥಿಸುವ ಸಂಪ್ರದಾಯ ಸನಾತನವಾಗಿ ನಡೆದು ಬಂದಿದೆ. ಶ್ರೀ ನಿಜಗುಣ, ತ್ಯಾಗರಾಜ ಮತ್ತು ಕನಕದಾಸ ಮೊದಲಾದ ಯೋಗಿಗಳ ಮತ್ತು ಸಂತರ ಭಕ್ತಿ ರಸಪೂರ್ಣವಾದ ಪದಗಳು ಪ್ರತಿಯೊಬ್ಬ ಗಾಯಕನ ಕಂಠದಿಂದ ಇಂದಿಗೂ ಕೇಳಿ ಬರುತ್ತಿವೆ.

ಭಾರತೀಯ ಸಂಗೀತದಲ್ಲಿ ಔತ್ತರೇಯ (ಹಿಂದುಸ್ತಾನಿ) ಮತ್ತು ದಕ್ಷಿಣಾದಿ (ಕರ್ನಾಟಕ) ಎಂದು ಎರಡು ಪದ್ಧತಿಗಳಿವೆ. ಈ ಸಂಪ್ರದಾಯಗಳಲ್ಲಿ ಶಾಸ್ತ್ರೀಯವಾಗಿ ವ್ಯತ್ಯಾಸಗಳಿವೆಯಾದರೂ ಕಲಾತ್ಮಕವಾಗಿ ಭೇದವಿಲ್ಲ. ಉಭಯ ಗಾನದಿಂದ ರಸಿಕನು ಸಮಾನವಾದ ರಸಾನುಭವವನ್ನು ಪಡೆಯಬಹುದು.ಕಲ್ಲುಸಕ್ಕರೆಯ ಯಾವ ಭಾಗವನ್ನು ಆಸ್ವಾದಿಸಿದರೂ ಅದು ಸವಿಯಾಗಿಯೇ ಸುಮಧುರವಾಗಿಯೆ ಇರುವಂತೆ ಭಾರತೀಯ ಗಾನದ ಯಾವ ಪದ್ಧತಿಯನ್ನೂ ಆಲಿಸಿದರೂ ಆನಂದದಾಯಕವೆ. ಯಾವುದೇ ಪದ್ಧತಿಯನ್ನು ಅನುಸರಿಸಲಿ, ಗಾಯಕನಿಗೆ ಮಧುರಕಂಠ ಅನಿವಾರ್ಯ. ಕಂಠ ಮಾಧುರ್ಯ ಗಾಯಕನ ದೈವದತ್ತವಾದ ದೇಣಿಗೆ, ಜೊತೆಗೆ ವಿದ್ವತ್ ಪ್ರತಿಭೆಯೂ ಬೇಕು. ಹಿಂದುಸ್ತಾನಿ ಸಂಗೀತಜ್ಞರು ಧ್ವನಿಯ ಮಾಧುರ್ಯಕ್ಕೆ ವಿಶೇಷ ಗಮನಕೊಡುತ್ತಾರೆ. ಕರ್ನಾಟಕೀಯ ಗಾಯಕರು ವಿದ್ವತ್ತಿಗೆ ಹೆಚ್ಚಿನ ಮನ್ನಣೆಯನ್ನು ಕೊಡುತ್ತಾರೆ. ಅಂದರೆ, ದಾಕ್ಷಿಣಾತ್ಯರಿಗೆ ಮಧುರವಾದ ಕಂಠ ಹಾಗೂ ಔತ್ತರೇಯರಿಗೆ ವಿದ್ವತ್ತು ಇಲ್ಲವೆಂಬ ಭಾವವಲ್ಲ. ಎಷ್ಟೋ ಕರ್ನಾಟಕೀಯ ಸಂಗೀತಜ್ಞರು ತಮ್ಮಲ್ಲಿ ಅಷ್ಟೊಂದು ಕಂಠ ಮಾಧುರ್ಯವಿರದಿದ್ದರೂ ವಿದ್ವತ್ ಪ್ರತಿಭೆಯಿಂದಾಗಿ ವಿದ್ವಾಂಸರ ಮನ್ನಣೆಗೆ ಪಾತ್ರರಾಗುತ್ತಾರೆ, ರೀಜಿಸಿಕೊಳ್ಳುತ್ತಾರೆ. ಅದೇ ಪ್ರಕಾರ, ಹಿಂದುಸ್ತಾನಿ ಸಂಗೀತದ ಗವಾಯಿಯು ಶಾಸ್ತ್ರೀಯವಾಗಿ ಪಳಗಿರದಿದ್ದರೂ ಮಧುರವಾದ ಧ್ವನಿಯಿಂದ ಪರಿಪೂರ್ಣನಾಗಿ, ಆ ಶ್ರುತಿಯಲ್ಲಿಯೇ ತನ್ಮಯತೆಯನ್ನು ತಾಳಿ ನಿಂದು ನಾದಾನುಸಂಧಾನಿಯಾಗಿ ಶೋತೃಗಳೆಲ್ಲರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತಾನೆ. ಯಾವುದೇ ಗಾಯಕನಾಗಲಿ ಅವನು ಸಂಗೀತ ಪ್ರಪಂಚದಲ್ಲಿ ಗಣ್ಯತೆ ಪಡೆಯಲು ಸಾಧನೆಯನ್ನು ಮಾಡಿ ಪ್ರತಿಭೆಯನ್ನು ಶಕ್ತಿಯನ್ನು ಗಳಿಸಲೇಬೇಕು.

ಅದೊಂದು ಸಮಯ. ಪರಮಪೂಜ್ಯ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಧಾರ್ಮಿಕ ಕ್ರಾಂತಿಯ ಪತಾಕೆಯು ನಾಡಿನ ತುಂಬೆಲ್ಲ ತನ್ನದೆ ಆದ ಆತ್ಮಶಕ್ತಿಯ ಪ್ರಭಾವದಿಂದ ಹಾರಾಡುತ್ತಲಿತ್ತು.ಶ್ರೀಗಳು ಖಿಲವಾಗಿದ್ದ ಸಮಾಜದ ಪರಿಪೂರ್ಣ ಪ್ರಗತಿಯತ್ತ ತಮ್ಮ ಕೃಪಾದೃಷ್ಟಿಯನ್ನಿಟ್ಟಿದ್ದರು. ಅವರ ಆ ದೃಷ್ಟಿಯಲ್ಲಿ ವೈಶಿಷ್ಟ್ಯವಿತ್ತು. ವೈಶಾಲ್ಯವಿತ್ತು; ಜನತೆಯ ಬರಿದಾದ ಬಾಳಿಗೆ ಬೆಳಗನ್ನು ಕೊಡುತ್ತಲಿತ್ತು.ಅವರ ಉದಾತ್ತ ಉಪದೇಶಗಳ ಸಾಮರ್ಥ್ಯದಿಂದ ಜನಾಂಗವೇ ಚೇತರಿಸಿಕೊಂಡು ಏಳುವಂತಾಯಿತು.

ಶ್ರೀಗಳವರಿಗೆ ಸಂಗೀತ ಬಾರದೇ ಇದ್ದರೂ ಬಹುವಾಗಿ ಬಲ್ಲವರಾಗಿದ್ದರು. ಸರಾಗವಾಗಿ ಹಾಡುವ ಹಂಬಲವಿಲ್ಲದಿದ್ದರೂ ; ಸುಖವಾಗಿ ಸರಸವಾಗಿ ಹಾಡುವ ಗಾಯಕರಿಂದ ಕೇಳುವ ಅಭಿರುಚಿ ಇತ್ತು. ಹೊಸ ಹೊಸ ರಾಗಗಳಲ್ಲಿ ಭಾವ ಗೀತೆಗಳನ್ನು ರಚಿಸಿರುವುದು ಅವರ ನಾದಾನುಸಂಧಾನವನ್ನು ಸಂಗೀತ ಪ್ರೇಮವನ್ನುಸೂಚಿಸುತ್ತದೆ. ಅವರ ಪ್ರಾರ್ಥನೆಯ ಪ್ರತಿಯೊಂದು ಪದ್ಯವೂ ಭಾವಗರ್ಭಿತವಾಗಿದೆ, ನೀತಿಯುಕ್ತವಾಗಿದೆ, ಸಂಗೀತಮಯವಾಗಿದೆ. ಅವರ ಗೀತಗಳು ಇಂದಿನ ಜನಾಂಗಕ್ಕೆ ದಾರಿದೀಪಗಳಾಗಿವೆ, ಧ್ವನಿಮುದ್ರಿಕೆಗಳಾಗಿವೆ.ವಿರಾಗಿ ಶ್ರೀಗಳವರಿಗೆ ಸಂಗೀತದಲ್ಲಿ ಸಂಪೂರ್ಣ ಅನುರಾಗವಿದ್ದಿತು. ಸಂಗೀತ ಕಲಾಭಿವೃದ್ಧಿಗೆ ಅವರು ಮಾಡಿದ ಸಹಾಯ ಸಂಪತ್ತಿಸಣ್ಣದಲ್ಲ. ಭಾರತೀಯ ಕಲೆಗಳ ಪುನರುದ್ಧಾರವಾಗಬೇಕು, ಪ್ರಚಾರವಾಗಬೇಕೆಂದು ಶ್ರೀಗಳು ಅಹೋರಾತ್ರಿ ಕಾರ್ಯಮಾಡಿದ ಕಲಾಭಿಮಾನಿಗಳು.

ಶ್ರೀ ಕುಮಾರ ಮಹಾಸ್ವಾಮಿಗಳವರು ಹಾನಗಲ್ಲ ತಾಲೂಕಿನಲ್ಲಿ ಭಿಕ್ಷೆಗೆಂದು ದಯಮಾಡಿಸಿದ್ದರು.ಕಾಡಶೆಟ್ಟಿಹಳ್ಳಿಯ ಹಿರಿಯಮಠದ ಅಯ್ಯಪ್ಪನವರು ಇಬ್ಬರು ಹುಟ್ಟು ಕುರುಡ ಮಕ್ಕಳನ್ನು ಕರೆದುಕೊಂಡು ಶ್ರೀಗಳವರ ಸನ್ನಿಧಾನಕ್ಕೆ ಬಂದರು; ದೀರ್ಘದಂಡ ನಮಸ್ಕಾರ ಮಾಡಿ “ಬುದ್ದಿ, ಈ ಕುರುಡ ಮಕ್ಕಳನ್ನು ಸಲುಹುವ ಶಕ್ತಿ ನನಗೆ ಸಾಲದು. ನಾನೊಬ್ಬ ಬಡಪಾಯಿ ಜಂಗಮ, ತಾವು ಈ ನಿರ್ಭಾಗ್ಯ ಮಕ್ಕಳ ಮೇಲೆ ದಯೆತೋರಿ ರಕ್ಷಿಸಬೇಕು’ ಎಂದು ದೈನ್ಯದಿಂದ ಬೇಡಿಕೊಂಡರು. ದೀನರ ದುಃಖವನ್ನು ಕಂಡು ದಯಾಳು ಶ್ರೀಗಳವರ ಮನಸ್ಸು ಬಿಸಿಗೆ ತಾಕಿದ ಬೆಣ್ಣೆಯಂತೆ ಕರಗಿ ಹೋಗುತ್ತಿತ್ತು, ಸಮಯೋಚಿತವನ್ನರಿತು ಸಹಾಯ ಸಹಕಾರಗಳನ್ನು ನೀಡುತ್ತಲಿತ್ತು. ಇದು ಸ್ವಾಮಿತ್ವದ ಲಕ್ಷಣ. ಶ್ರೀಗಳವರು ಆ ಜನ್ಮಾಂಧ ಕಂದರನ್ನು ಮುಂದಕ್ಕೆ ಕರೆದು ವಾತ್ಸಲ್ಯದಿಂದ ಮೈದಡವಿ ಹಾಡಿಸಿ ನೋಡಿದರು; ಅವರ ಇಂಪಾದ ಹಾಡನ್ನು ಕೇಳಿ ಹರುಷಿತರಾದರು. ಇಬ್ಬರೂ ಚೆನ್ನಾಗಿ ಹಾಡುತ್ತಾರೆ. ಇವರಿಗೆ ಒಳ್ಳೆಯ ಭವಿಷ್ಯವಿದೆ. ಇವರು ಭಾಗ್ಯವಂತರು.ಇವರನ್ನು ನಮಗೆ ಒಪ್ಪಿಸಿಬಿಡು. ಚಿಂತಿಸುವದು ಬೇಡ.” ಎಂದು ಅಭಯವಿತ್ತರು. ಆ ಬಡ ಜಂಗಮಯ್ಯ ಮಕ್ಕಳನ್ನು ನಿರ್ಭಾಗ್ಯರೆಂದು ಬಗೆದಿದ್ದರು; ಆದರೆ ಕೃಪಾಳು ಶ್ರೀಗಳವರದೃಷ್ಟಿಯಿಂದ ಅವರು ಪುಣ್ಯವಂತ ರಾಗಿರುವದನ್ನು ಕಂಡು ಅಚ್ಚರಿಪಡುವಂತಾಯಿತು.

ಹಣ್ಣಿನ ಗುಣವನ್ನು ಹೀಚಿನಲ್ಲಿಯೆ ಗುರುತಿಸುವಂತೆ ಶ್ರೀಗಳವರು ಆ ಅನಾಥ ಕುಮಾರರ ಭಾವಿ ಜೀವನದ ರೂಪುರೇಷೆಯನ್ನು ತಮ್ಮ ದಿವ್ಯದೃಷ್ಟಿಯಲ್ಲಿ ಕಂಡುಕೊಂಡರು. ಕಣ್ಣಿಲ್ಲದಿದ್ದರೂ ಆ ಬಾಲಕರಿಗೆ ಮಂಜುಳವಾದ ಕಂಠವಿತ್ತು. ಅವರನ್ನು ತಮ್ಮ ಖಾಸಾ ಪರಿವಾರಕ್ಕೆ ಸೇರಿಸಿಕೊಂಡರು; ಅವರ ಸಂಗೀತವಿದ್ಯಾಭ್ಯಾಸಕ್ಕೆ ಪ್ರಾರಂಭಿಸಿದರು. ಅವರಿಬ್ಬರ ಸಂಗೀತಾಭಿರುಚಿಯನ್ನು ಎಳೆಯ ವಯಸ್ಸಿನಲ್ಲಿಯೇ ಕಂಡು ಶ್ರೀಗಳವರೆಗೆ ತುಂಬಾ ಸಂತೋಷವೆನಿಸಿತು. ಅವರ ಹೆಚ್ಚಿನ ಸಂಗೀತ ವಿದ್ಯೆಯ ವ್ಯಾಸಂಗಕ್ಕೆ ಉದಾರ ಸಹಾಯ ನೀಡಿ ಕರ್ನಾಟಕ ಸಂಗೀತವನ್ನು ಹೇಳಲು ನುರಿತ ಶಿಕ್ಷಕರೊಬ್ಬರನ್ನು ನೇಮಿಸಿದರು. ಅವರಿಬ್ಬರು ಲವಕುಶರಂತೆ ಜೊತೆಯಾಗಿ ಶ್ರೀಗಳವರ ಕೃಪಾಛತ್ರದಲ್ಲಿ ನಕ್ಕು ನಲಿದು ಸಂಗೀತ ಪಾಠವನ್ನು ಕಲಿಯುತ್ತಿದ್ದರು.ದುರ್ದೈವದಿಂದ ಹಿರಿಯ ಬಾಲಕನು ತೀರಿಕೊಂಡನು. ಶ್ರೀಗಳವರು ಕುಮಾರನ ಅಕಾಲ ಮೃತ್ಯುವನ್ನು ನೆನೆದು ಬಹಳ ದುಃಖಿಸಿದರು. ಉಳಿದ ಕುಮಾರನಿಗೆ ಸರಿಯಾದ ಶಿಕ್ಷಣದ ವ್ಯವಸ್ಥೆಯನ್ನು ಮಾಡಿಸಿದರು. ಅವನು ಭಾರತಕ್ಕೆ ಹೆಸರಾಂತ ಗಾಯನ ವಿಶಾರದನಾಗಬೇಕು. ಅವನಿಂದ ನಾಡಿನಲ್ಲಿ ಸಂಗೀತ ವಿದ್ಯೆಯ ಉದ್ಧಾರ ವಾಗಬೇಕು, ಪ್ರಸಾರವಾಗಬೇಕೆಂಬ ಕನಸನ್ನು ಕಟ್ಟಿದ್ದರು. ಅದಕ್ಕಾಗಿ ಪಂಚಾಕ್ಷರಯ್ಯನವರಿಗೆ ಮಿರ್ಜಿಯ ನೀಲಕಂಠ ಬುವಾ ಅವರಲ್ಲಿಯೂ ಹಿಂದುಸ್ತಾನಿ ಸಂಗೀತದ ಕ್ರಮವರಿತ ಶಿಕ್ಷಣವನ್ನು ಕೊಡಿಸಿದರು. ಅದಕ್ಕೂಪೂರ್ವದಲ್ಲಿ ಶಿರಿಯಾಳಕೊಪ್ಪದ ಪಂ. ಗದ್ದಿಗೆಯ್ಯ ಗವಾಯಿಗಳವರಲ್ಲಿ ಕರ್ನಾಟಕ ಸಂಗೀತದ ಶಿಕ್ಷಣಕ್ಕೆ ಏರ್ಪಾಡು ಮಾಡಿದ್ದರು. ಹೀಗೆ ಶ್ರೀಗಳವರ ಕೃಪೆಯಿಂದ ಪಂಚಾಕ್ಷರಯ್ಯನವರು ಉಭಯ ಸಂಗೀತವಿಶಾರದರಾದರು. ಶ್ರೀಗಳವರು ಅವರ ಶಿಕ್ಷಣಕ್ಕಾಗಿ ೧೫ ಸಾವಿರ ರೂಪಾಯಿಗಳನ್ನು ಅಂದಿನ ಕಾಲದಲ್ಲಿ ವಿನಿಯೋಗಿಸಿದ್ದು ಸಣ್ಣ ಸಾಹಸವಲ್ಲ, ಸಾಮಾನ್ಯರ ಶಕ್ತಿಯಲ್ಲ.

ಶ್ರೀಗಳವರ ಅಪ್ಪಣೆಯಂತೆ ಶ್ರೀ ಪಂಚಾಕ್ಷರ ಗವಾಯಿಗಳು ಆಜನ್ಮ ಬ್ರಹ್ಮಚಾರಿಗಳಾಗಿ ಪೂಜಾನಿಷ್ಠರಾಗಿ ಉಳಿದರು. ಪೂಜ್ಯರ ಮಾರ್ಗದರ್ಶನದಂತೆ ಸಂಗೀತದ ಪ್ರಸಾರ ಕಾರ್ಯವನ್ನು ಕೈಕೊಂಡು ಶ್ರೀ ಗವಾಯಿಗಳು ಇಡಿಯ ನಾಡಿನ ಮೂಲೆ ಮೂಲೆಯಲ್ಲಿ ಸಂಚರಿಸಿದರು. ಶಿವಯೋಗಮಂದಿರದಲ್ಲಿ ಸಂಗೀತ ಮಹಾವಿದ್ಯಾಲಯ’ ಅವರಿಂದಲೇ ಸ್ಥಾಪಿತವಾಗಿತ್ತು. ಸಂಚಾರಿ ಪಾಠಶಾಲೆ ಬೇರೆ. ಅವರೊಂದಿಗೆ ಯಾವಾಗಲೂ ೨೫-೩೦ ಕುರುಡ ವಿದ್ಯಾರ್ಥಿಗಳು ಸಂಗೀತ ಪಾಠವನ್ನು ಕಲಿಯಲು ಇರುತ್ತಿದ್ದರು. ಸಂಗೀತ ವಿದ್ಯೆಯನ್ನು ಜಾತಿ-ಮತ-ಪಂಥಗಳ ಭೇದಭಾವನೆಯಿಲ್ಲದೆ ಎಲ್ಲರಿಗೂ ಉಚಿತವಾಗಿ ಕೊಟ್ಟು ನಾಡ ನುಡಿಯ ಸೇವೆಮಾಡಬೇಕೆಂದು ಶ್ರೀಗಳವರ ಕಟ್ಟಪ್ಪಣೆಯಾಗಿತ್ತು. ಅದನ್ನು ಶ್ರೀ ಗವಾಯಿಗಳು ಕೊನೆಯ ವರೆಗೂ ಪಾಲಿಸಿದರು. ಅದೇ ಆದರ್ಶವನ್ನು ಇಟ್ಟುಕೊಂಡು ಅವರೇ ಗದಗಿನಲ್ಲಿ ಸ್ಥಾಪಿಸಿದ ‘ಸಂಗೀತ ವಿದ್ಯಾಲಯ’ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದಿಗೂ ಸರಾಗವಾಗಿ ನಡೆಯುತ್ತಿರುವುದಕ್ಕೆ ಶ್ರೀಗಳವರ ಅನುಗ್ರಹವೇ ಕಾರಣ.

ಶ್ರೀ ಪಂಚಾಕ್ಷರ ಗವಾಯಿಗಳವರ ಪ್ರತಿಭೆ ನಾಡಿನ ತುಂಬೆಲ್ಲ ಬೆಳಗಿತು. ಭಾರತದಲ್ಲೆಲ್ಲ ಅವರ ಜಯಭೇರಿಯನ್ನು ಅವರ ನೂರಾರು ಜನ ಶಿಷ್ಯರು ಮೊಳಗಿಸಿದರು. ಶ್ರೀ ಗವಾಯಿಗಳು ‘ಉಭಯಗಾನಾಚಾರ್ಯ’ರೆಂದು ನಾಡಿನ ಎಲ್ಲ ವಿದ್ವಾಂಸರಿಂದ ಕಲಾ ಪ್ರೇಮಿಗಳಿಂದ ಪ್ರಶಸ್ತಿ ಮನ್ನಣೆಗಳನ್ನು ಪಡೆದು ಪರಮಪೂಜ್ಯ ಶ್ರೀಗಳವರ ಕೀರ್ತಿಯನ್ನು ದಿಗಂತವಾಗಿ ಒಯ್ದರು ; ಶ್ರೀಗಳವರ ಕನಸನ್ನು ನನಸಾಗಿಸಿದರು. ಈಗ ಕನ್ನಡ ನಾಡಿನಲ್ಲಿ ಹಿಂದುಸ್ತಾನಿ ಸಂಗೀತದ ಪ್ರಸಾರವಾಗಿರುವದಕ್ಕೆ ಅವರೇ ಕಾರಣರು. ಅವರ ಕೈಯಲ್ಲಿ ಪಳಗಿದ ಹಲವಾರು ಪ್ರತಿಭಾವಂತ ಕಲೆಗಾರರು ಸಂಗೀತವಿದ್ಯೆಯ ಬಗೆಗೆ ಜನತೆಯಲ್ಲಿ ಗೌರವವನ್ನು ಅಭಿರುಚಿಯನ್ನು ಹುಟ್ಟಿಸಿದ್ದಾರೆ; ಸಂಗೀತ ಕಲೆಯ ಪಾವಿತ್ರ್ಯವನ್ನು ಉಳಿಸಿಕೊಂಡು ಬಂದಿದ್ದಾರೆ. ಇದಕ್ಕೆಲ್ಲ ಪರಮಪೂಜ್ಯ ಹಾನಗಲ್ಲ ಕುಮಾರ ಮಹಾಸ್ವಾಮಿಗಳ ಸಂಗೀತ ಸಂಪ್ರೀತಿಯೆ ಕಾರಣವಾಯಿತು.

ಲೇಖಕರು : ಶ್ರೀ ರಾಮೇಶ್ವರ ಬಿಜ್ಜರಗಿ ಸೊಲ್ಲಾಪುರ

( ಈ ಲೇಖನ ಮುಖ್ಯ ಉದ್ದೇಶವೇನೆಂದರೆ  ಸಂಗೀತದಲ್ಲಿ ಬರುವ ಪದಗಳ ಅರ್ಥ ತಿಳಿದುಕೊಳ್ಳುವದಾಗಿದೆ. ಚಿಕ್ಕ ಮಕ್ಕಳ ಸಂಗೀತ ಸ್ಪರ್ಧೆಯನ್ನು ದೂರ ದರ್ಶನದಲ್ಲಿ ವೀಕ್ಷಿಸುವಾಗ ಪರೀಕ್ಷಕರು ಏನಾದರೊಂದು ತಿದ್ದುಪಡೆ ಸೂಚಿಸುತ್ತಾರೆ. ಆಗ ನಮಗೆ ಸಂಗೀತದಲ್ಲಿ ಉಪಯೋಗಿಸಲಾಗುವ ಪದಗಳ ಅರ್ಥ ತಿಳಿಯುವದಿಲ್ಲ  “ಸ್ವಲ್ಪಮಟ್ಟಿಗದರೂ ಇದನ್ನು ತಿಳಿದುಕೊಳ್ಳಬೇಕೆಂಬ” ನಿರ್ಧಾರದಿಂದ ಸ್ವಲ್ಪಮಟ್ಟಿಗೆ  ಲೇಖಕರು ಸಂಗ್ರಹಿಸಿರುವರು . ಧ್ಯಾತ್ಮದಲ್ಲಿಯೂ ಈ ನಾದದ ಮಹತ್ವವಿರುವುದನ್ನು ತಿಳಿದುಕೊಂಡೆ. ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಬಯಕೆಯೂ ಲೇಖಕರಿಗಿದೆ)

ಅಸಂಖ್ಯ ಗ್ರಹಗಳು ಮತ್ತು ಅಗಣಿತ ತಾರೆಗಳನ್ನೊಳಗೊಂಡ ಈ ಜಗತ್ತಿಗೆ ನಾದವೇ ಮೂಲ ಕಾರಣ. ಅಚೇತನನಾದ ಶಿವನಿಗೆ ಜಗ ನಿರ್ಮಾಣಮಾಡಬೇಕೆಂಬ  ಕಲ್ಪನೆ ತಲೆದೋರಿದಾಗ ಸೂಕ್ಷ್ಮ ಕಂಪನ ಉತ್ಪನ್ನವಾಯಿತು. ಆ ಕಂಪನದಿಂದ ಓಂಕಾರ ನಾದ ಹುಟ್ಟಿತು. ಆ ಓಂಕಾರ ನಾದವೆ ಜಗ ನಿರ್ಮಾಣಕ್ಕೆ ಕಾರಣವಾಯಿತು. ಈ ಓಂಕಾರ ನಾದವು ಅ ಉ ಮ ಅಕ್ಷರಗಳನ್ನೊಳಗೊಂಡಿದೆ. “ಅ” ವು ಶಿವನ ಪ್ರತಿಕವಾದರೆ  “ಮ”  ಶಕ್ತಿಯ ಪ್ರತೀಕವಾಗಿದ್ದು  “ಉ” ಈ ಶಿವ ಶಕ್ತಿಯರ ಸಂಪುಟ ವಾಗಿದೆ. ಈ ಶಿವ ಶಕ್ತಿಯರ ಸಂಪುಟದಿಂದ ಉತ್ಪನ್ನವಾದುದೆ ಓಂಕಾರ ನಾದ. ಇದರಿಂದ ಜಗವೆಲ್ಲ ನಾದಾತ್ಮಕ ವಾಗಿದೆ. ಅದು ಪರಂಜ್ಯೋತಿಯಾಗಿದ್ದು ಪರಬ್ರಹ್ಮಸ್ವರೂಪವಾಗಿದೆ.

ನಾದವೆಂದರೆ ಇಂಪಾದ ಧ್ವನಿ. ಧ್ವನಿಯಲ್ಲಿ  ಸಂಗೀತಮಯ ಧ್ವನಿ(Musical sound) ಮತ್ತು ಅಸಂಗೀತಮಯ ಧ್ವನಿ (Non musical sound) ಎಂಬ ಎರಡು ಪ್ರಕಾರಗಳು. ಅಸಂಗೀತಮಯ ಧ್ವನಿ ಕರ್ಕಶವಾಗಿದ್ದು ಇದನ್ನು ಯಾರೂ ಪ್ರೀತಿಸುವದಿಲ್ಲ. ಸಾಮಾನ್ಯವಾಗಿ ಸಂಗೀತಮಯ ಧ್ವನಿಯೇ ನಾದವೆನಿಸುತ್ತದೆ.   ನಾದವಿಲ್ಲದೆ ಗೀತೆ, ಸ್ವರ, ರಾಗ ಇತ್ಯಾದಿ ಯಾವುದೂ ಸಾಧ್ಯವಿಲ್ಲ.

ನಾದದಲ್ಲಿ ಎರಡು ವಿಧಗಳಿವೆ.

ಆಹಾತ.

ಅನಾಹತ.

ಆಹತ ನಾದ ಸಂಗೀತಕ್ಕೆ ಉಪಯುಕ್ತವಾಗಿದ್ದು ಅನಾಹತನಾದ ಸಂಗೀತಕ್ಕೆ ಉಪಯುಕ್ತವಾಗಿಲ್ಲ.

ಅನಾಹತ ನಾದ:

ಇದು ನಾಭಿ ಕಮಲದಲ್ಲಿ ಸ್ಥಿತವಾಗಿದ್ದು ಆಘಾತ ವಿಲ್ಲದೆ ಉತ್ಪನ್ನವಾಗುತ್ತದೆ. ಈ ನಾದವು ಜನ ಸಾಮಾನ್ಯರಿಗೆ ಕೇಳಿಸುವದಿಲ್ಲ.” ನಾದ ಬಿಂದು” ಉಪನಿಷತ್ತಿನಲ್ಲಿ ನಾದಾನುಸಂಧಾನವೆಂಬ ಕಠಿಣ ಸಾಧನೆಯ ವಿವರ ವಿದೆ.. ಈ ಸಾಧನೆ ಮಾಡಿದ ಸಿದ್ಧ ಪುರುಷರು ಮಾತ್ರ ಅನಾಹತ  ನಾದವನ್ನು ಕೇಳಬಹುದು. ಈ ಬಗ್ಗೆ ಪರಮ ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಒಂದು ತ್ರಿವಿಧಿ ಹೀಗಿದೆ.

ಕೇಳು ಕೇಳೆಲೆ ಮನವೆ l ನಾಲಿಗಿಲ್ಲದ ಗಂಟೆl

ಓಲೈಸಿ, ನಾದ- ಮಾಡುವದು, ಧರ್ಮದಿಂ-l

ದಾಲಿಸೈ, ಎನಿಸು, ಜಡೆಯೊಡೆಯ! l

ಎಲೆ ಮನವೆ ನಾಲಿಗೆ ಇಲ್ಲದ ಗಂಟೆ ಅಂದರೆ ಆಘಾತವಿಲ್ಲದೆ ಬಾರಿಸುವ ಗಂಟೆಯ  ನಾದವನ್ನು  ನಾನು ಕೇಳುವಂತೆ ಮಾಡು ಎಂದು  ಪ್ರಾರ್ಥಿಸಿದ್ದಾರೆ. ಇಲ್ಲಿ ಇನ್ನೂ ಒಂದು ಸಂಗತಿ ಅಂದರೆ ಧರ್ಮದಿಂದಾಲೈಸು ಅನ್ನುತ್ತಾರೆ ಅಂದರೆ ಲಕ್ಷ್ಯಕೊಟ್ಟು ಕೇಳು ಎಂದಾಗುತ್ತದೆ.

 ನಾಲಿಗೆ ಇಲ್ಲದ ಗಂಟೆ ನಾದ ಮಾಡಲು ಸಾಧ್ಯವೇ ಇಲ್ಲ. ಆದರೆ ಪೂಜ್ಯರು ಇಲ್ಲಿ ಹೇಳಿದ ನಾದಕ್ಕೆ ಗಂಟೆಯೇ ಬೇಕಾಗಿಲ್ಲ.! ಈ ಸಾಧನೆಯಲ್ಲಿ ಸಾಧಕನು ಪ್ರಶಾಂತವಾದ ಸ್ಥಳದಲ್ಲಿ ಸ್ಥಿರವಾಗಿ ಕುಳಿತು ತನ್ನ ಕಣ್ಣು, ಬಾಯಿ, ಕಿವಿ, ಮನಸ್ಸು ಅಂತರ್ಮುಖವಾಗಿಸಿ ಒಳಗಿನ ಧ್ವನಿ ಅಂದರೆ ಅಂತರ್ನಾದ ಕೇಳಲು ಪ್ರಯತ್ನಿಸಬೇಕು. ಸಾಧಕನ ಸಾಧನೆ ಮುಂದುವರೆದಂತೆ ಹಂತಹಂತವಾಗಿ ದಶವಿಧ ಅಂದರೆ ಹತ್ತು ಪ್ರಕಾರದ ನಾದಗಳು ಕೇಳಿಸುತ್ತವೆ. ಪ್ರಥಮದಲ್ಲಿ ಭ್ರಮರಿ ನಾದ ಅದಾದ ಮೇಲೆ, ವೀಣೆಯ ನಾದ, ಅದಾದಮೇಲೆ ಕ್ರಮೇಣ ಘಂಟಾ ನಾದ, ಭೇರಿ ನಾದ,ಮೇಘ ನಾದ , ಪ್ರಣವ ನಾದ, ದಿವ್ಯನಾದ, ಸಿಂಹನಾದ, ಶರಭ (ಒಂದು ಭಯನಕವಾದ ಪ್ರಾಣಿ)ನಾದ,ಮಹಾ ನಾದ. ಈ ದಶವಿಧ ನಾದಗಳನ್ನು ಕೇಳಿ ಸಾಧಕನು ಧನ್ಯನಾಗುತ್ತಾನೆ. ಈ ನಾದಗಳು ಧ್ಯಾನದ ಏಕಾಗ್ರತೆಯಲ್ಲಿ ಸಾಧಕನಿಗೊಬ್ಬನಿಗೇ ಕೇಳಿಸುತ್ತವೆ. ಅಕ್ಕಪಕ್ಕದವರಿಗೆ ಕೇಳಿಸುವದಿಲ್ಲ. ನಾದಸಾಧನೆಯಿಂದ ಅನೇಕ ಸಿದ್ಧಿಗಳು ಪ್ರಾಪ್ತವಾಗುತ್ತವೆ.

ಆಹತ ನಾದ.:

ಇದನ್ನು ಜನಸಾಮಾನ್ಯರು ಕೇಳಬಹುದಾಗಿದೆ.

ಇದೇ ಸಂಗೀತಮಯ ಧ್ವನಿ. ಇದರಲ್ಲಿ ಸ್ವರ ಉತ್ಪನ್ನವಾಗುತ್ತದೆ.

ಸ್ವರ:

ಯಾವುದನ್ನು ಕೇಳಿದಾಗ ಮನಸ್ಸು ಪ್ರಫುಲ್ಲಿತವಾಗುತ್ತದೋ ಅದು ಸ್ವರ ಅನಿಸುತ್ತದೆ.

ಸಂಗೀತದಲ್ಲಿ ಯಾವ ಶಬ್ದಕ್ಕೆ ನಿಶ್ಚಿತವಾದ ರೂಪವಿದೆ ಮತ್ತು ಅದರ ಕೋಮಲತೆ, ಅಥವಾ ತೀವ್ರತೆ ಅಥವಾ ಏರಿಳಿತಗಳನ್ನು ಕೇಳಿ ಸಹಜವಾದ ಅನುಭೂತಿಯಾಗುತ್ತದೆ ಅದು ಸ್ವರವೆನಿಸುತ್ತದೆ.

ಈ ಸ್ವರಗಳ ಕೋಮಲತೆ, ತೀವ್ರತೆ, ಮತ್ತು ಏರಿಳಿತಗಳ ಅನುಸಾರವಾಗಿ ಭಾರತೀಯ ಸಂಗೀತದಲ್ಲಿ ಏಳು ಸ್ವರಗಳನ್ನು ಗುರುತಿಸಲಾಗಿದೆ. ಅವುಗಳಾವವೆಂದರೆ,

ಷಡ್ಜ,ಋಷಭ,ಗಾಂಧಾರ,ಮಧ್ಯಮಾ,ಪಂಚಮ,

ಧೈವತ ಮತ್ತು ನಿಷಾದ.

ಸಾ, ರೇ, ಗ, ಮ, ಪ, ಧ, ನಿ.

ಸಂಗೀತ ಶಾಸ್ತ್ರದಲ್ಲಿ ಈ ಸ್ವರಗಳನ್ನು ಅವುಗಳ ಕಂಪನ ಸಂಖ್ಯೆಯ(ಕಂಪನ ಪಟ್ಟಿ) ಮೇರೆಗೆ ಅಳೆಯಲಾಗುತ್ತದೆ.

256 ಕಂಪನಗಳಾದರೆ ಷಡ್ಜ,

298 ಕಂಪನಗಳಾದರೆ ಋಷಭ,

320 ಕಂಪನಗಳಾದರೆ ಗಾಂಧಾರ,— ಹೀಗೆ

ಹೆಚ್ಚುತ್ತ ಹೋಗಿ ಕೊನೆಗೆ

480 ಕಂಪನಗಳಾದರೆ ನಿಷಾದ.

ಹೀಗೆ ಕಂಪನ ಹೆಚ್ಚಿಗೆ ಆದಂತೆ ಸ್ವರ ಏರುತ್ತ ಹೋಗುತಗದೆ. ಈ ಸ್ವರಗಳ ಸಂಖ್ಯೆ ಏಳು ಆಗಿರುವದರಿಂದ  ಆ ಸಮೂಹಕ್ಕೆ ” ಸಪ್ತಕ” ಎಂತಲೂ ಹೇಳುತ್ತಾರೆ.

ಈ ಸ್ವರಗಳು ಕಂಠದಿಂದ ಹೊರ ಬಂದರೂ ಬೇರೆ ಬೇರೆ ಸ್ಥಾನಗಳಲ್ಲಿ ಹುಟ್ಟುತ್ತವೆ.

ಮೊದಲನೆಯ ಸ್ವರ ಮೂಗು, ಕಂಠ, ಉರ (ಎದೆ), ಅಂಗಳ, ನಾಲಿಗೆ, ಮತ್ತು ಹಲ್ಲು ಈ ಆರು ಸ್ಥಳಗಳಲ್ಲಿ ಹುಟ್ಟುವಾದರಿಂದ ಅದಕ್ಕೆ ಷಡ್ಜ ಅನ್ನುತ್ತಾರೆ.ಎರಡನೆಯ ಸ್ವರ  ನಾಭಿಯಿಂದ ನೆತ್ತಿಯವರೆಗೆ ತಲ್ಪುವದರಿಂದ ಋಷಭ ಅನ್ನುತ್ತಾರೆ.

ಇದಲ್ಲದೆ ಪ್ರಾಚೀನ ಋಷಿಗಳಪ್ರಕಾರ ಈ ಸಪ್ತ ಮೂಲ ಸ್ವರಗಳಲ್ಲಿ ಒಂದೊಂದು ಬಣ್ಣ ಮತ್ತು ಹಕ್ಕಿ ಅಥವಾ ಪ್ರಾಣಿಗಳ ಕೂಗಿದೆ.

ಸಾ- ಹಸಿರು ಬಣ್ಣ ನವಿಲಿನ ಕೂಗು

ರೇ- ಕೆಂಪುಬಣ್ಣ,ಬಾನಾಡಿ (ಆಕಾಶದಲ್ಲಿ     ಹಾರಾಡುವ ಪಕ್ಷಿ)ಗಳ ಕೂಗು

ಗ- ಚಿನ್ನದ ಬಣ್ಣ,ಹಂಸ ಪಕ್ಷಿಯ ಕೂಗು.

ಮ- ಹಳದಿ ಮಿಶ್ರಿತ ಬಿಳಿ ಬಣ್ಣ ಮತ್ತು ಕ್ರೌoಚ ಪಕ್ಷಿಯ ಕೂಗು.

ಪ – ಕಪ್ಪು ಬಣ್ಣ ಮತ್ತು ಬುಲ್ ಬುಲ್ ಪಕ್ಷಿಯ ಕೂಗು.

ಧ- ಹಳದಿ ಬಣ್ಣ ಮತ್ತು ಕುದುರೆಯ ಕೂಗು.

ನಿ- ಎಲ್ಲ ಬಣ್ಣಗಳ ಸಮ್ಮೇಳ ಮತ್ತು ಆನೆ ಕೂಗು.

ಸಂಗೀತ

 ” ಔಚಿತ್ಯಪೂರ್ಣ ನಿರಂತರ ಗಾಯನವೇ ಸಂಗೀತ”ವೆನಿಸುತ್ತದೆ.

ಇನ್ನೂ ಒಂದು ಕಡೆಗೆ ” ಆಸಕ್ತಿ ಉತ್ಪನ್ನ ಮಾಡುವ ಸುವ್ಯವಸ್ಥಿತ ಧ್ವನಿಯೇ ಸಂಗೀತ’ ವೆನಿಸುತ್ತದೆ.ಎಂದು ಹೇಳಲಾಗಿದೆ.

ಗಾಯನ, ವಾದನ ಮತ್ತು ನೃತ್ಯ ಸೇರಿ ಸಂಗೀತವಾಗುತ್ತದೆಂದೂ ಹೇಳಲಾಗಿದೆ.

ಗಾಯನ ಮಾನವನಿಗೆ ಸ್ವಾಭಾವಿಕವಾಗಿ ಬರುತ್ತದೆ. ಬಹುಶಃ ಈ ಭೂಮಿಯಮೇಲೆ ಗಾಯನ ಮಾಡಲಾರದ ವ್ಯಕ್ತಿ ( ಮೂಕನನ್ನು ಬಿಟ್ಟು) ಸಿಗಲಾರನೆನ್ನಬಹುದು.

ಸಾಮ ವೇದದಲ್ಲಿ ಸಂಗೀತ ಶಾಸ್ತ್ರವನ್ನು ಕುರಿತು ವಿಶ್ವದಲ್ಲಿಯೇ ಅತೀ ಪ್ರಾಚೀನವಾದ ಬರವಣಿಗೆ ಕಂಡು ಬರುತ್ತದೆ. ” ಬ್ರಹ್ಮ, ವಿಷ್ಣು, ಮಹೇಶ ಈ ತ್ರಿಮೂರ್ತಿಗಳು ಮೊದಲ ಸಂಗೀತಕಾರರು. ಶಿವನು ನಟರಾಜನ ರೂಪದಲ್ಲಿ ತಾಂಡವ ನೃತ್ಯ ಮಾಡುತ್ತ ಲಯಕ್ಕೆ ಕಾರಣನಾದ. ಬ್ರಹ್ಮ ತಾಳ ಬಡಿಯುತ್ತಿದ್ದರೆ ವಿಷ್ಣು ಮೃದಂಗ ನುಡಿಸುತ್ತಿದ್ದನಂತೆ. ಶಿವನ ಲಯಕ್ಕನುಗುಣವಾಗಿ ಅವರಿಬ್ಬರ ಸಂಗೀತ ಇರುತ್ತಿತ್ತು. ಸರಸ್ವತಿ ದೇವಿಯ ಕೈಯಲ್ಲಿರುವ ವೀಣೆ ಎಲ್ಲ ತಂತು ವಾದ್ಯಗಳಿಗೆ ಮಾತೃ ಎನಿಸಿದೆ. ವಿಷ್ಣು ಕೃಷ್ಣಾವತಾರದಲ್ಲಿ ಕೊಳಲಿನಿಂದ ಮಾಯೆಯ ಭ್ರಾoತಿಯಿಂದ ಅಲೆಯುತ್ತಿರುವ ಮಾನವರ ಆತ್ಮಗಳನ್ನು ತಮ್ಮ ವಾಸ್ತವ ನೆಲೆಗೆ ಹಿಂತಿರುವಂತೆ ಪರವಶ ಗೊಳಿಸುವ ಗಾನವನ್ನು ನುಡಿಸುತ್ತಾನೆ.

ರಾಗ:

ರಾಗವೆಂದರೆ ಸ್ವರಗಳನ್ನು ಒಂದು ವಿಶಿಷ್ಟ ಧ್ವನಿ ಸಮೂಹದಲ್ಲಿ ಹೊಂದಿಸುವದು. ಇದರಿಂದ ಕೇಳುವವನ ಮನ ಆನೊಂದುಲ್ಲಾಸ ಭರಿತ ವಾಗುತ್ತದೆ.

ಭಾರತೀಯ ಸಂಗೀತದಲ್ಲಿ ಮೂಲತಃ ಆರು ರಾಗಗಳಿವೆ. ಪ್ರತಿಯೊಂದು ರಾಗಕ್ಕೂ ಆರಾರು ರಾಗಿಣಿಯರು ಅಂದರೆ ಒಟ್ಟು ಮೂವತ್ತಾರು ರಾಗಿಣಿಯರು ಮತ್ತು ಆರಾರು ರಾಜಪುತ್ರರು ಇರುತ್ತಾರೆ.

ಈ ರಾಗಗಳನ್ನು ದಿನದ, ವರ್ಷದ ಅಥವಾ ಋತುವಿನ ವಿಶಿಷ್ಟ ಸಮಯದಲ್ಲಿ ನುಡಿಸಬೇಕು ಎಂದು ಹೇಳಲಾಗಿದೆ. ಈ ಸಮಯದಲ್ಲಿ ಅವುಗಳಿಗೆ ಸಾಮರ್ಥ್ಯ ಕೊಡುವ ದೇವತೆಗಳು ಹೊಂದಿಕೊಳ್ಳುತ್ತಾರೆ.

1. ಹಿಂದೊಳ ರಾಗ:

ವಿಶ್ವಪ್ರೇಮ  ಭಾವ  ಉದ್ಬೋಧ ಗೊಳಿಸಲು ವಸಂತ ಋತುವಿನ ಆದಿಯಲ್ಲಿ ನುಡಿಸುತ್ತಾರೆ.

2. ದೀಪಕ ರಾಗ :

ದಯೆಯನ್ನು ಉದ್ದೀಪನ ಗೊಳಿಸಲು ಬೇಸಿಗೆಯಲ್ಲಿ ಸಂಜೆಯ ವೇಳೆಗೆ ನುಡಿಸಲ್ಪಡುತ್ತದೆ.

3. ಮೇಘ ರಾಗ:

ಧೈರ್ಯವನ್ನು ಆಹ್ವಾನಿಸಲು ಮಳೆಗಾಲದಲ್ಲಿ ನಡು ಹಗಳಲ್ಲಿ ಹಾಡುವ ರಾಗ.

4.ಭೈರವಿ ರಾಗ:

ಶಾಂತಿ ಸ್ಥಾಪಿಸಲು ಆಗಸ್ಟ್ , ಸಪ್ಟೆಂಬರ್, ಮತ್ತು ಅಕ್ಟೋಬರ್ ತಿಂಗಳಲ್ಲಿ ಪ್ರಾಥ:ಕಾಲ ಹಾಡುವ ರಾಗ.

5. ಶ್ರೀ ರಾಗ :

ಶುದ್ಧ ಪ್ರೇಮವನ್ನು ಪಡೆಯಲು ಶರತ್ ಋತುವಿನಲ್ಲಿ ಬೆಳಗಿನ ಸಮಯ ಹಾಡುವ ರಾಗ.

6. ಮಾಲ ಕಂಸ ರಾಗ:

ವೀರ್ಯಕ್ಕಾಗಿ ಚಳಿಗಾಲದ ನಡುರಾತ್ರಿ ಹಾಡುವ ರಾಗ.

 ತಾಲ:

ಸಂಗೀತವನ್ನು ವಿಶಿಷ್ಟ ಸಮಯದಲ್ಲಿ (time ) ಬಂಧಿಸುವದು. ಇದು ಸoಗೀತದಲ್ಲಿ ವ್ಯತಿತವಾಗುವ ಸಮಯವನ್ನು ಅಳೆಯುವ ಮಾಧ್ಯಮ ವಾಗಿದೆ.

ಲಯ:

ಎರಡು ಸ್ವರಗಳ ಮಧ್ಯದ ಅಂತರ. ಮತ್ತು ಹಾಡುವ ಗತಿ ಮತ್ತು ಏರಿಳಿತಗಳನ್ನು ನಿರ್ದೇಶಿಸುತ್ತದೆ.

ಗ್ರಂಥ ಋಣ

೧)ನಿಜಗುಣ ಶಿವಯೋಗಿಯ ಕೈವಲ್ಯ ಪದ್ಧತಿ

೨) ಜಡೆಯೊಡೆಯ ತ್ರಿವಿಧಿ

೩)ಅಂತರ್ಜಾಲ

೪) ಯೋಗ ಪ್ರತಿಪಾದನ ಸ್ಥಲ.ಗದ್ಯಾನುವಾದ ಡಾ. ಎಲ್.ಬಸವರಾಜು

Author: Supriya Antin Kaddargi

Vice President, JP Morgan Chase Bank

Greater Chicago.USA

A Guru is an enlightened preceptor – one who can eradicate darkness and bring about right wisdom in the journey of life. The word ‘Guru’ is derived from Sanskrit, wherein the syllable ‘Gu’ denotes darkness referring to the spiritual ignorance mankind is inflicted with and the syllable ‘Ru’ represents the spiritual knowledge that eradicates this ignorance. In the Lingayat Dharma, the spiritual Guru is the first of the 8 shields of Ashtavaranas, from whose light we all seek to enhance our vision with. Guru parampare has been deep rooted in the Hindu philosophy from times of ancient history and yet with many, the association with a true Guru goes unrealized.

Back in the days, it was not uncommon for young children to be drawn to Gurus and develop  impeccable personalities thereby. Every Guru too has had other Gurus who played prime roles in shaping the personality of disciples. Basavanna, for instance, nurtured his spirituality and gave it the much needed direction and force with guidance from Ishanya Guru of Kudalasangama when he left home at a very young age. Comprehensible only by dint of association, a disciple can discover that the relationship with the Guru is extraordinary where he can learn, serve and seek answers to the most profound questions that have crossed the mind. It is a journey of constant learning where knowledge, fearlessness and simplicity get institutionalized in the disciple. A Guru in the Lingayat Dharma not only initiates spirituality through the rite of Linga Deeksha but also encourages the disciple as a philosopher to go farther in the right realm. With a Guru everything is unbiased. A Guru’s interest lies in uplifting the disciple from ignorance and making him a better soul. His direction is to adopt only the good and develop the clarity to discern the bad to be able to overcome it.

There are multiple facets of taking to a Guru. There could be one or multiple along the path of life. Not everything directed by a Guru will be easy to adopt; the direction shown could be one where by an arduous experience only one would learn the answers sought. The journey with a Guru can be challenging but will certainly be fulfilling. All along, the Guru will stand by, sometimes putting us to test and at other times forgiving and reguiding. The onus of recognizing a genuine Guru lies with the disciple and for that disciple, it is important to identify with the Guru before taking to Him. Merely preaching, resolving an impending problem, curing an ailment or just exhibiting mystical powers cannot be the traits of a genuine Guru. A genuine Guru sets an example and instills faith, goodness, mental strength while bringing us closer to God or the supreme truth. The amount of discipline and tenacity with which a Guru becomes spiritually illumined while abstaining from the worldly pleasures is admirable and hard to achieve. As the vachana describes below, a Guru empowers us to experience God.

The power of knowledge destroys ignorance;

The power of light dissipates darkness;

The power of truth is foe of all untruth;

The power of alchemy enriches ordinary metals;

The sharana’s experience of God is the sole cure of worldliness;

Lord Kudala Sangamadeva

Alongside, is the responsibility of the disciple to first deserve the Guru by submitting himself with no ego or intent of concrete benefits. In a disciple need to be strong unconditional traits of respect, commitment, devotion and obedience. Service to the Guru is also an important aspect the disciple must inculcate since it is an entirely incorrect notion of having to benefit from the Guru without serving Him. It is up to the disciple to draw the most and benefit from the divinity of his Guru.

While being blessed with a Guru is very fortunate, in times of today when we have all migrated to far off lands, it may not be that feasible to always be around an able Guru who will lead the light. But it is certainly achievable to initiate a spark in ourselves to understand the various Gurus that history holds and has been witness to. There are exemplary saints serving the society day and night today and also works of previous Gurus laid out as books or vachanas, which initiate, affirm and bring about the right frame of mind. Visiting these Gurus in India or other parts of the world, learning more about the work they have done and the methods they adopted to impart spirituality, or mere reading on the Gurus who have uplifted mankind in their own ways, will be a very humbling and educative experience. It will render our outlook broader, and perspectives and corresponding deeds more spiritual and meaningful. This initial step of beginning the research on Gurus could open insightful spiritual avenues for humanity to realize in the times to come. Introducing the same to our children, will rightly reinstate a Guru’s existence.

Gurur Brahma Gurur Vishnuhu

Gurur Devo Maheswaraha

Gurur Saakshaat Parabhrahma

Tasmai Sri Gurave Namaha The Guru is Brahma, Vishnu and Shiva. The Guru is the Absolute. I bow before you

ಲೇಖಕರು :  ಗುರು ಹಿರೇಮಠ, ಹಗರಿಬೊಮ್ಮನಹಳ್ಳಿ

ಅಸ್ತಿತ್ವದ ಶ್ರೇಷ್ಠ ಅಭಿವ್ಯಕ್ತಿಯೇ ಕಲೆಯಾಗಿದೆ. ಈ ಅಭಿವ್ಯಕ್ತಿಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದು, ವ್ಯಕ್ತಿಯ ಸ್ವಭಾವ, ಸಂಸ್ಕೃತಿ, ಬೆಳೆದುಬಂದ ರೀತಿ ಮತ್ತು ಜಗತ್ತನ್ನು ಗ್ರಹಿಸುವ ಪರಿ ಇವೆಲ್ಲವುಗಳೂ ಆತನ ಅಭಿವ್ಯಕ್ತಿಯ ಮೇಲೆ ಪ್ರಭಾವ ಹೊಂದಿರುತ್ತವೆ.

ವಾಸ್ತವವಾಗಿ ಈ ಜೀವನವು ಕಲೆಗೆ ಆಧಾರವಾಗಿದ್ದರೆ, ಕಲೆಯು ಜೀವನವನ್ನು ಶ್ರೀಮಂತಗೊಳಿಸುತ್ತದೆ. ಈ ಕಾರಣದಿಂದಲೇ ಜೀವನ ಮತ್ತು ಕಲೆ ಒಂದಕ್ಕೊಂದು ಪೂರಕವಾಗಿವೆ.

ಕಲೆಗಳಲ್ಲಿಯೇ ಸಂಗೀತವು ಅತ್ಯಂತ ಉತ್ಕೃಷ್ಟವಾದದ್ದು.ಏಕೆಂದರೆ ಧರ್ಮಕ್ಕೆ ಮೂಲ ಮತ್ತು ಆಧಾರವಾದದ್ದು ‘ಕರುಣೆ’,ಇದೇ ನಮ್ಮ ಮೂಲ ಸ್ವಭಾವ, ಇದು ತೀವ್ರವಾಗಿ ಪ್ರಕಟಗೊಳ್ಳುವುದೇ ಸಂಗೀತದ ಮೂಲಕ. ಒಂದು ಹಂತದಲ್ಲಿ ಪ್ರೀತಿಯು ಮೊಗ್ಗಿನಂತೆ ಕಂಡುಬಂದರೆ ಕಾರುಣ್ಯವೆನ್ನುವುದು ಪರಿಪೂರ್ಣ ಅರಳುವಿಕೆಯಾಗಿದೆ. ಈ ಪ್ರೀತಿ ಮತ್ತು ಕಾರುಣ್ಯಗಳ ಹಾಗು ನಮ್ಮ ಎಲ್ಲ ಬಗೆಯ ಭಾವಗಳ ಪರಿಪೂರ್ಣ ಅಭಿವ್ಯಕ್ತಿಯ ಸಾಧ್ಯತೆ ಇರುವುದು ಸಂಗೀತ ದಲ್ಲಿ ಮಾತ್ರ. ಸಂಗೀತದ ಅಗಾಧತೆ ಅರ್ಥಮಾಡಿಕೊಳ್ಳುವಂಥದ್ದಲ್ಲ, ಬದಲಾಗಿ ಭಾವಿಸುವಂಥದ್ದು, ಅನುಭವಿಸುವಂಥದ್ದು ಹಾಗೆಯೇ ನಮ್ಮಲ್ಲಿ ನಾವು ಒಂದಾಗುವಂಥದ್ದು. ಇದೇ ನೈಜ ಜೀವನವಾಗಿದೆ.

ಸಂಗೀತವು ಕೇವಲ ಒಂದು ಕಲೆ ಅಷ್ಟೇ ಅಲ್ಲ, ಅದು ವಿಜ್ಞಾನವೂ ಆಗಿದೆ.ಏಕೆಂದರೆ ಅದನ್ನು ನಾವು ಪ್ರಯೋಗಕ್ಕೆ ಮತ್ತು ಸಂಶೋಧನೆಗೆ ಒಳಪಡಿಸಬಹುದು. ಸಂಗೀತ ಚಿಕಿತ್ಸೆ ಮೂಲಕ ಎಷ್ಟೊಂದು ರೋಗಿಗಳ ಕಾಯಿಲೆಗಳು ವಾಸಿಯಾಗಿರುವುದನ್ನು ನಾವು ದಿನ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ.

                   ಸಂಗೀತವು ಅತ್ಯಂತ ಶ್ರೇಷ್ಠ ಶಿಕ್ಷಣವಾಗಿದ್ದು ವ್ಯಕ್ತಿಗೆ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಅಧ್ಯಾತ್ಮಿಕ ಶಿಕ್ಷಣವನ್ನು ನೀಡುತ್ತದೆ. ಈ ಸಾಧ್ಯತೆ ಇರುವುದು ಬಹುಷಹ ಸಂಗೀತಕ್ಕೆ ಮಾತ್ರ. ನಾವು ದಿನನಿತ್ಯ ಎಷ್ಟೊಂದು ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತೇವೆ. ಆದರೆ ನಾವು ಯಾವುದೇ ಕೆಲಸ ಅಥವಾ ಕ್ರಿಯೆಯನ್ನು ಅಖಂಡವಾಗಿ ಮಾಡಲು ಸಾಧ್ಯವಾಗುವುದಿಲ್ಲ. ನಮ್ಮ ದೇಹದ ಅಂಗಾಂಗಗಳು ಕೆಲಸದಲ್ಲಿ ನಿರತವಾದಾಗ ಮನಸ್ಸು ಬೇರೊಂದನ್ನು ವಿಚಾರ ಮಾಡುತ್ತದೆ, ಅಲ್ಲಿ  ಭಾವವೆಂಬುದು ಇರುವುದೇ ಇಲ್ಲ. ಇನ್ನು ಇವೆಲ್ಲವುಗಳಿಗೆ ಸಾಕ್ಷೀಭೂತವಾಗಿ ನಿಲ್ಲುವ ಪ್ರಜ್ಞೆ ಬಹಳ ದೂರದ ಮಾತು.                           

                 ಸಂಗೀತ ಒಂದೇ ನಮ್ಮ ಎಲ್ಲ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ವಲಯಗಳಲ್ಲಿ ಒಂದು ಸಾಮರಸ್ಯವನ್ನು ಸೃಷ್ಟಿಸುತ್ತದೆ. ಈ ಒಂದು ಸಾಮರಸ್ಯ ಅಥವಾ ಒಂದು ಅಖಂಡ ಸ್ಥಿತಿಯು ವ್ಯಕ್ತಿಯಲ್ಲಿ ಅಮಿತವಾದ ಆನಂದವನ್ನು ಉಂಟುಮಾಡುತ್ತದೆ. ಏಕೆಂದರೆ ಅದೇ ಆತನ ಮೂಲ ಸ್ಥಿತಿಯಾಗಿದೆ. ಯಾವ ಪ್ರೀತಿ ಮತ್ತು ಶಾಂತಿಗಾಗಿ ಜಗತ್ತು ಹಾತೊರೆಯುತ್ತದೆಯೋ, ಹೋರಾಡುತ್ತದೆಯೋ ಅದು ಸಂಗೀತದ ಮೂಲಕ ತನಗೆ ಸುಮ್ಮನೆ ಲಭಿಸಿಬಿಡುತ್ತದೆ. ಈ ಕಾರಣಕ್ಕಾಗಿಯೇ ‘ ಸಬ್ ಹೈ ಅಪೂರ್ಣ ಸಂಗೀತ ಬಿನಾ ‘ ಎಂಬ ವಾಕ್ಯವನ್ನು ಇಲ್ಲಿ ಸ್ಮರಿಸಬಹುದು.

                   ನಾವೆಲ್ಲ ಅಸ್ತಿತ್ವವಿಲ್ಲದ ಸತ್ಯಗಳನ್ನು ಸತ್ಯವೆಂದು ಭಾವಿಸಿ ಒಂದು ಸೀಮಿತ ಜಗತ್ತಿನಲ್ಲಿ ಬದುಕುತ್ತೇವೆ. ಜಾತಿ, ಧರ್ಮ, ದೇಶ, ಭಾಷೆ, ನೆಲ, ಜಲ ಮೊದಲಾದ ಸೀಮಿತ ಚೌಕಟ್ಟಿನೊಳಗೆ ಬದುಕುವ ವಿಭಜಿತ ಮನಸ್ಥಿತಿಗೆ ಸಂಗೀತವು ಎಲ್ಲರನ್ನೂ ಒಂದುಗೂಡಿಸುವ ಒಂದು ಸೇತುವೆಯಾಗಿ ಕೆಲಸ ಮಾಡುತ್ತದೆ. ಏಕೆಂದರೆ ಸಂಗೀತವೆನ್ನುವುದು ಒಂದು ವಿಶ್ವಭಾಷೆ.

                  ಜೀವನವನ್ನು ಸಚೇತನಗೊಳಿಸುವ ಸೃಜನಶೀಲತೆ ಸಂಗೀತದ ಮೂಲಕ ಹೊರಹೊಮ್ಮುತ್ತದೆ. ಸಂಗೀತವು ಭಾಷಾ ಸಾಮರ್ಥ್ಯವನ್ನು ಬೆಳೆಸುತ್ತದೆ. ಗ್ರಹಿಕೆ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುತ್ತದೆ. ಸಾಮಾಜಿಕ ಗುಂಪಿನಲ್ಲಿ ಸಾಮರಸ್ಯ ಉಂಟುಮಾಡಿ, ಸಾಮಾಜಿಕ ಕೌಶಲಗಳನ್ನು ಕಲಿಸುತ್ತದೆ ಹಾಗೆ ಮನಸ್ಸಿನ ಒತ್ತಡ ನಿವಾರಿಸಿ ಒಳ್ಳೆಯ ಆರೋಗ್ಯ ವೃದ್ಧಿಗೆ ಸಹಾಯಕವಾಗಿದೆ.

ಹಾಗಾದರೆ ನಮಗೆ ಇಲ್ಲೊಂದು  ಪ್ರಶ್ನೆ ಮೂಡುತ್ತದೆ, ಅದೇನೆಂದರೆ ಎಲ್ಲ ಪ್ರಕಾರದ ಸಂಗೀತವು ಶ್ರೇಷ್ಠತೆಯುಳ್ಳದ್ದಾಗಿದೆಯೇ? ಎಂಬುದು. ಇಲ್ಲ, ಏಕೆಂದರೆ ಯಾವ ಸಂಗೀತದಿಂದ ಮನಸ್ಸು ವ್ಯಾಕುಲತೆಗೆ,  ಪ್ರಕ್ಷುಬ್ಧತೆಗೆ, ಚಿಂತೆಗೆ, ಬಯಕೆಗೆ, ಅಸಮಧಾನಕ್ಕೆ ಒಳಗಾಗುತ್ತದೆಯೋ ಅದು ಅತ್ಯಂತ ಕೀಳುಮಟ್ಟದ್ದಾಗಿರುತ್ತದೆ.ಈ ತೆರನಾದ ಸಂಗೀತವು ತಿರಸ್ಕಾರ್ಹವಾದುದು. ಯಾವ ಸಂಗೀತವನ್ನು ಹಾಡುವುದರಿಂದ, ನುಡಿಸುವುದರಿಂದ, ಆಲಿಸುವುದರಿಂದ, ಮನಸ್ಸು ಪ್ರಸನ್ನಗೊಳ್ಳುತ್ತದೆಯೋ, ಆನಂದ ಪಡೆಯುತ್ತದೆಯೋ, ಹಾಗೆಯೇ ಮನಸು, ಭಾವ, ಬುದ್ಧಿ, ಶುದ್ಧತೆಗೆ ಒಳಗಾಗುತ್ತವೆಯೋ ಅದು ಮಾತ್ರ ಉತ್ಕೃಷ್ಟ ಮಟ್ಟದ ಸಂಗೀತವಾಗಿರುತ್ತದೆ.

                         ಒಟ್ಟಾರೆಯಾಗಿ ವ್ಯಕ್ತಿಯನ್ನು ಪೂರ್ಣತ್ವದೆಡೆಗೆ ಮುನ್ನಡೆಸುವಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಅದರ ಪ್ರಕಾರಗಳು ಬಹಳ ಪ್ರಮುಖ ಪಾತ್ರವಹಿಸಿರುವದನ್ನು ನಾವು ಇಲ್ಲಿ ಸ್ಮರಿಸಬಹುದು.

ಮೂಲ ಲೇಖಕರು  ಶ್ರೀ ಕಿಶನ್.ಕುಲಕರಣಿ ಕುಷ್ಟಗಿ

ಸಂಗ್ರಹ : ಶ್ರೀ ಕುಮಾರ ಹಿರೇಮಠ  ಮತ್ತು ಶ್ರೀ ರವಿ ಹುಲಕೋಟೆ

ಹಸಿರೆ ಉಸಿರೆಂದು ತಿಳಿದಿದ್ದ ಶರಣ ಈ ಸ್ವಾಮಿಗೆ ಹಗಲಿರುಳೂ ಹಸಿರಿನದೇ ಧ್ಯಾನ!

 

ಈ ಕರ್ಮಯೋಗಿ ಸ್ವಾಮಿ ಐದು ಸಾವಿರಕ್ಕೂ ಹೆಚ್ಚು ತೆಂಗಿನ ಮರ, ಸಾವಿರಾರು ಗಿಡಬಳ್ಳಿಗಳನ್ನು ನೆಟ್ಟು ಪೋಷಿಸಿದ್ದಾರೆ. ಕರ್ಮ ಇವರ ಗುರಿ. ಫಲ ಬೇಡುವುದಲ್ಲ. ಈತನೊಬ್ಬ ನಡೆದಾಡುವ ಬೇಲಿ. ಇಡೀ ಜಗತ್ತಿಗೇ ಹಸಿರು ತುಂಬುವ ಹುಮ್ಮಸ್ಸಿನ ಜೀವಿ. ಫಲ ಯಾರಿಗೇ ಸಿಗಲಿ, ಇಡೀ ಭೂಮಿಗೆ ಅದು ಸತ್ಫಲ ಎನ್ನುವ ಯೋಗಿ.

ಬಾದಾಮಿ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ‘ಶಿವಯೋಗಮಂದಿರ’ಕ್ಕೆ ನೀವು ಬಂದಿರಲಿಕ್ಕಿಲ್ಲ. ಬಂದರೂ ಇಲ್ಲಿ ವೀರಭದ್ರಪ್ಪ ದೇಸಾಯಿ ಎಂಬ ಎಂಬತ್ತು ವರ್ಷದ ಯಜಮಾನನ ಕರ್ಮಯೋಗವನ್ನು ನೋಡಿರಲಿಕ್ಕಿಲ್ಲ, ಕೇಳಿರಲಿಕ್ಕಿಲ್ಲ.

ಕಳೆದ ಸುಮಾರು ಐವತ್ತು ವರ್ಷದ ಹಿಂದೆ ಯಾವ ಆಸೆಯಿಲ್ಲದೇ ಈತ ಸಾವಿರಾರು ತೆಂಗಿನ ಗಿಡ, ಸಾವಿರಾರು ಹಣ್ಣಿನ ಗಿಡ, ಸಾವಿರಾರು ಹೂ ಬಳ್ಳಿಗಳನ್ನು ನೆಟ್ಟು ಬೆಳೆಸಿ ಪೋಷಿಸಿದ್ದಾರೆ. ಅದೂ ಒಬ್ಬಂಟಿಯಾಗಿ.

ವೀರಭದ್ರಪ್ಪ ಆಗಿನ್ನೂ ಯುವಕ. ಎಲ್ಲ ಭಕ್ತರಂತೆ ತಾನು ಶಿವಯೋಗಮಂದಿರ ನೋಡಲು ಬೆಳವಡಿಯಿಂದ ಬಂದವನು. ಎಲ್ಲರಂತೆ ಈತ ತಿರುಗಿ ಹೋಗಲಿಲ್ಲ. ಪಟ್ಟದಕಲ್ಲಿನ ಸಮೀಪದ ಕುಮಾರ ಸ್ವಾಮಿಗಳ ಈ ‘ನಿಸರ್ಗಧಾಮ’ ಈತನನ್ನು ಇಲ್ಲಿಯೇ ಕಟ್ಟಿ ಹಾಕಿತು. ಕುಮಾರೇಶನ ಈ ಪವಿತ್ರ ಸ್ಥಾನ ಇವರನ್ನು ‘ನಿನ್ನ ಸೇವೆ ಇಲ್ಲಿ ಅವಶ್ಯ’ವಿದೆ, ಎನ್ನುವ ಹಾಗೆ ಇವರನ್ನು ಇಲ್ಲಿಯೇ ಇರಿಸಿಕೊಂಡಿತು

.

ಸದಾ ದೇವರ ಸ್ಮರಣೆ, ಬಾಯಿ ತೆರೆದರೆ ವಚನ ಸಾಹಿತ್ಯ ತುಂಬಿಕೊಂಡ ಇವರಿಗೆ ಸುತ್ತಮುತ್ತಲಿನ ಜನರು ‘ಶರಣರೆ’ ಎಂದು ಕರೆಯುತ್ತಿದ್ದರು.

ಗೇಣು ಲಂಗೋಟಿ, ಹಣೆಯಲ್ಲಿ ವಿಭೂತಿ, ಮಧ್ಯದಲ್ಲಿ ಕುಂಕುಮ, ಕೊರಳಲ್ಲಿ ರುದ್ರಾಕ್ಷಿಮಾಲೆ ಅದರಲ್ಲೊಂದು ಜಪಮಾಲೆ. ಕೈಯಲ್ಲೊಂದು ಸದಾ ಕೆಲಸಕ್ಕೆ ಸಿದ್ದವಿರುವ ಕುಡುಗೋಲು. ಹೀಗೆ ಮಠದ ತೋಟದಲ್ಲಿ ಹಗಲು ರಾತ್ರಿ ಎನ್ನದೇ ಸಸ್ಯ ಸಂಪತ್ತು ಬೆಳೆಸುವಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದರು

.

ಇಲ್ಲೀಗ ಅವರು ಬೆಳಸಿದ ಐದು ಸಾವಿರಕ್ಕೂ ಹೆಚ್ಚು ತೆಂಗಿನ ಮರಗಳು ಬೆಳೆದು ನಿಂತಿವೆ. ಇದರಲ್ಲಿ ಈಗ ನಾಲ್ಕು ಸಾವಿರಕ್ಕೂ ಮಿಕ್ಕು ಫಲ ನೀಡುತ್ತಿವೆ. ಇದರಿಂದ ಬಂದ ಆದಾಯ ಸಂಪೂರ್ಣ ಮಠಕ್ಕೆ. ವೀರಭದ್ರಪ್ಪನವರು ಆಗಿನ ಸಮಯದಲ್ಲಿ ಕಾಯಿ ಕೀಳಲು ಸ್ವತಃ ಮರ ಹತ್ತುತ್ತಿದ್ದರು.  ವಯಸ್ಸಾದಂತೆಲ್ಲ ಮರ ಹತ್ತುವದನ್ನು ಬಿಟ್ಟು, ಉದ್ದನೆಯ ದೋಟಿ, ಮೂಟೆ ಗಟ್ಟಲೆ ತೆಂಗು ತುಂಬಿದ ಚೀಲಗಳನ್ನು ಹೊರುವುದು, ಸುಲಿಯುವುದು ಗಿಡಗಳಿಗೆ ರಾತ್ರಿ, ಹಗಲು ನೀರುಣಿಸುವುದು, ಇಂತಹ ಎಲ್ಲ ಕೆಲಸ ಮಾಡುತ್ತಿದ್ದರು. ಇವೆಲ್ಲವೂ ಅವರ ಭಕ್ತಿ ಸೇವೆ ಹಾಗೂ ಪರಿಸರದ ಮೇಲಿರುವ ಅವರ ಅಪಾರ ಪ್ರೀತಿ. ‘ಶರಣರೇ, ಈ ವಯಸ್ಸಿನಲ್ಲಿ ಯಾರಿಗಾಗಿ ಈ ಸೇವೆ?’ ಎಂದು ಕೇಳಿದರೆ ತುಟಿ ಪಿಟಕ್ಕೆಂದು ವಚನವೊಂದು ಅವರ ಬಾಯಿಂದ ಹೊಮ್ಮುತ್ತಿತ್ತು.

‘ಆವ ಲೋಹವಾದರೇನು? ಪೌರುಷಕ್ಕೆ ಸಮಭಾವ

                ಆವ ಕಾಷ್ಠವಾದರೇನು? ಅನಲಕ್ಕೆ ಸಮಭಾವ

                ಆವ ಕುಲವಾದರೇನು? ಸದ್ಗುರುವಿಗೆ ಸಮಭಾವ…’

ಸ್ವಾತಂತ್ರ್ಯದ ಪೂರ್ವ ದಿನಗಳನ್ನು ನೆನೆಸಿಕೊಳ್ಳುತ್ತಿದ್ದ ಇವರು ಬೆಳಗಾವಿ ಜಿಲ್ಲೆಯ ಬೆಳವಡಿಯಲ್ಲಿ ಸ್ವಾತಂತ್ರ್ಯದ ಚಳುವಳಿಯಲ್ಲಿ ಭಾಗವಹಿಸಿದ ಸನ್ನಿವೇಶಗಳನ್ನು ವಿವರಿಸುತ್ತಿದ್ದರು. ನೀವೇಕೆ ಸರಕಾರದಿಂದ ಮಾಶಾಸನ ತೆಗೆದುಕೊಳ್ಳಬಾರದೆಂದು ಪ್ರಶ್ನಿಸಿದರೆ….. ‘ಕೆಲಸ ಮಾಡಿದ್ದಕ್ಕೆ ಕೂಲಿ ತೊಗೊಂಡ್ರ ಕೆಲಸ ಮಾಡಿದ ಹೆಮ್ಮೆ ನಮ್ಮತಾಕ ಉಳೀಂಗಿಲ್ರಿ ಬುದ್ದಿ!’ ಎಂದು ನಿರಹಂಕಾರ ಉತ್ತರ ಬರುತ್ತಿತ್ತು. ‘ಬಟ್ಟೆ ಮ್ಯಾಲಾಗಲಿ, ಹೊಟ್ಟೆ ಮ್ಯಾಲಾಗಲಿ ಆಶಾ ಇಲ್ಲದ ಈ ದೇಹಕ್ಕೆ ಮಾಶಾಸನ ಯಾಕೆ ಬೇಕ್ರಿ ಬುದ್ದಿ?’ ಎಂದು ಆ ಸೌಮ್ಯ ಮುಖ ಕಿರುನಗೆ ಬೀರುತ್ತಿತ್ತು.

ಪೂಜ್ಯ ಕುಮಾರ ಸ್ವಾಮಿ ಗಳು  ಲಿಂಗೈಕ್ಯರಾದ ನಂತರ ಮಠಕ್ಕೆ ಸೇರಿದ 60 ಎಕರೆ ಸ್ಥಳದ ನಿರ್ವಹಣೆ ಮಾಡುವವರು ಯಾರೂ ಇರಲಿಲ್ಲ. ಬೇಲಿಯೂ ಇರಲಿಲ್ಲ. ಈತನೇ ನಡೆದಾಡುವ ಬೇಲಿ. ಈಗಿನ ಹಾಗೆ ಆ ಸಮಯದಲ್ಲಿ ಸುತ್ತ ಐದಾರು ಕಿ.ಮೀ ದೂರದಲ್ಲಿ ಯಾವ ಊರೂ ಇಲ್ಲದ ಕಾರಣ, ಇಲ್ಲಿಗೆ ಕಳ್ಳಕಾಕರು ಬರುತ್ತಿರಲಿಲ್ಲ.

ಪಕ್ಕದ ಮಲಪ್ರಭ ನದಿಗೆ ವಿದ್ಯುತ್ ಪಂಪ್ ಅಳವಡಿಸಿ, ಆಗಾಗ ಅದನ್ನು ಚಾಲೂ ಮಾಡುವುದು, ಬೀಜ ನೆಡುವುದು ಈತನ ಕೆಲಸ. ಗಿಡಗಳಿಗೆ ರಸಗೊಬ್ಬರವಿಲ್ಲ. ಎಲ್ಲಾ ನೈಸರ್ಗಿಕ. ಇದು ಅವರ ಭೂಮಿ ಹಾಗೂ ಪರಿಸರದ ಬಗ್ಗೆ ಇರುವ ಕಾಳಜಿ ತೋರಿಸುತ್ತದೆ ಅಲ್ಲವೇ? ತನ್ನಷ್ಟೇ ತನ್ಮಯವಾಗಿ ದುಡಿಯುವ ಆಳುಗಳು ಸಿಕ್ಕರೆ ಉತ್ತಮವೆಂದು ಈತನ ಬಯಕೆ. ಆದರೆ ಎಲ್ಲಿ ಸಿಗುತ್ತಾರೆ ಅಂಥವರು?

ಒಂದೇ ವರ್ಷದಲ್ಲಿ ಹತ್ತು ಸಾವಿರಕ್ಕಿಂತಲೂ ಅಧಿಕ ತೆಂಗಿನ ಕಾಯಿಗಳನ್ನು ಇವರು ಸಂಗ್ರಹಿಸುತ್ತಿದ್ದರು. ಅದರಲ್ಲೂ ಕೆಲವು ಸಸಿ ಮಾಡಲಿಕ್ಕಂತೆ.

ಮತ್ತಷ್ಟು ಸಸಿಗಳೆ? ಯಾವಾಗ ನಿಮಗೆ ವಿಶ್ರಾಂತಿ? ಎಂದು ಕೇಳಿದರೆ,

ಆ ಮುಗ್ದ ಮನಸ್ಸಿನ ಉತ್ತರ ಹೀಗಿತ್ತು ‘ಸ್ವಾಮಿ, ಜಗ ಭಾಳ ದೊಡ್ಡದೈತ್ರಿ, ಇನ್ನೂ ಅದರ ತುಂಬ ತೆಂಗಿನ ಗಿಡ, ಹಣ್ಣಿನ ಗಿಡ, ಹೂವಿನ ಗಿಡ ಹಾಕಬೇಕ್ರಿ. ಇದನ್ನ ಲತಾ ಮಂಟಪ ಮಾಡಬೇಕಾಗೈತ್ರಿ, ಎಷ್ಟು ಹಾಕಿದ್ರೂ ಮುಗೀವಲ್ದು ಎನ್ನುತ್ತಿತ್ತು.

ತೋಟದಲ್ಲಿ ಅಷ್ಟೆಲ್ಲ ದಾಳಿಂಬೆ, ಚಿಕ್ಕು, ಪೇರಲ, ಗಿಡಗಳು ಹಣ್ಣು ನೀಡುತ್ತಿವೆ ‘ಇವುಗಳನ್ನು ಯಾಕೆ ಮಾರೋದಿಲ್ಲ’ ಎಂದು ಕೇಳಿದರೆ,

ಆ ನಿರ್ಮಲ ಮನದ ವೀರಭದ್ರಪ್ಪ ಹೇಳುತ್ತಿದ್ದರು ‘ಹಣ್ಣು ಮಾರಬೇಕಂತ ಗಿಡ ಹಚ್ಚಿಲ್ರೀ ಶಿವಾ! ಇಲ್ಲಿದಾರಲ್ರೀ ಗುರುವಿನ ಗಿಣಿಗಳು, ಇವರು ತಿಂದು ಶಾಂತಿಯಿಂದ ಇರ್ಲಿ ಅಂತಾ ಹಚ್ಚೇನ್ರಿ’ ಎಂದು ನಗುತ್ತಾ ಅಲ್ಲಿ ವಿದ್ಯಾಭ್ಯಾಸ ಮಾಡುವ ಸಾಧಕರನ್ನು ಹಾಗೂ ವಟುಗಳನ್ನು ತೋರಿಸುತ್ತಿದ್ದರು.

ಹಸಿರೆ ಉಸಿರೆಂದು ತಿಳಿದ ಈ ವೀರಭದ್ರಪ್ಪ ಶರಣರು ಈ ಶಿವನ ಮಂದಿರವಾದ ಶಿವಯೋಗಮಂದಿರಕ್ಕೆ ತಮ್ಮ ಜೀವಿತಾವಧಿಯ ಸೇವೆಯನ್ನು ಸಲ್ಲಿಸಿ, ತಮ್ಮ 85-86 ವಯಸ್ಸಿನಲ್ಲಿ ಈಹಲೋಕ ತ್ಯಜಿಸಿದರು.

                                                            .

ಪಥಿಕನ ಟಿಪ್ಪಣೆಗಳು

ಸಹೃದಯರಿಗೆ ನನ್ನ ನಮಸ್ಕಾರಗಳು.

ವಿಶ್ವ ಯೋಗ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತ,ಕಳೆದ ಜೂನ ತಿಂಗಳ ಸುಕುಮಾರ  ಬ್ಲಾಗ್‌ ನ ವಿಶೇಷ ಸಂಚಿಕೆಯಲ್ಲಿ ಮೂಡಿಬಂದ “ ಮಹಾಜ್ಯೋತಿ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು”  ಲೇ.ಡಾ.ಸಿದ್ದಣ್ಣ ಉತ್ನಾಳ ಅವರ ಲೇಖನದ ಸಾಲುಗಳನ್ನು ನೆನಪಿಸಿಕೊಳ್ಳುತ್ತಿದ್ದೇನೆ.

“ಜೀವ ಶಿವನಾಗುವತ್ತ ಮಾಡುವ ಸಾಧನೆಯೇ ಯೋಗ . ಇದರಲ್ಲಿ ಮಂತ್ರ ಯೋಗ , ಲಯಯೋಗ , ಹಠಯೋಗ , ರಾಜಯೋಗ ಹಾಗೂ ಶಿವಯೋಗ ಎಂದು ಐದು ಪ್ರಕಾರಗಳುಂಟು . ‘ ಪರಿಪೂರ್ಣಯೋಗ ‘ ವೆಂದು ಪರಿಪೂರ್ಣ ಯೋಗವೇ ಮುಖ್ಯವೆಂದು ಭಾವಿಸುವವರುಂಟು , ಆದರೆ ” ಶಿವಯೋಗ’ವೇ ಪರಿಪೂರ್ಣ ಅರ್ಥಾತ್ ಪೂರ್ಣ ಯೋಗ.

ಆ ಪರಶಿವನಲ್ಲಿ ಮನವನ್ನು ಲೀನಗೊಳಿಸಿ ಧ್ಯಾನಿಸುವುದೇ ಮಂತ್ರಯೋಗ , ಕರಣೇಂದ್ರಿಯ ಭೋಗದಿಂದ ಬಿಡುಗಡೆ ಹೊಂದಿ , ಪರಶಿವನಲ್ಲಿ ಚಿತ್ವನ್ನು ಲಯಗೊಳಿಸುವದೇ ಲಯಯೋಗ . ಸರಾಗವಾಗಿ ಸಂಚರಿಸುತ್ತಿರುವ ಪ್ರಾಣ ವಾಯುವನ್ನು ಮೂಗಿನ ರಂಧ್ರದ ಮೂಲಕ ತಡೆಹಿಡಿದು ತೂಬಿಸಿ ಹಣೆಯಲ್ಲಿ ಹೊಳೆಯುವ ಪ್ರಕಾಶವನ್ನೇ ತದೇಕ ಚಿತ್ತದಿಂದ ನೋಡುವುದೇ ಹಠಯೋಗ . ಈ ಜಗತ್ತಿನಲ್ಲಿ ಒಳ – ಹೊರಗೆಲ್ಲಾ ತುಂಬಿರುವ ಪ್ರಕಾಶವೇ ( ಪರತತ್ವವೆ ) ತಾನೆಂದು ತಿಳಿದು , ಆ ಅರಿವನ್ನೂ ಮೀರಿ ನಿಲ್ಲುವುದೇ ರಾಜಯೋಗ , ಒಂಭತ್ತು ಚಕ್ರಗಳಲ್ಲಿ ಒಂದು ಮಹಾಜ್ಯೋತಿ ಸಂಚರಿಸುವುದು . ಆ ಜ್ಯೋತಿಯೇ ಗುರುಸಿದ್ಧ ಮೂರ್ತಿ : ಗುರುಸಿದ್ಧ ನೇ ಶಿವಸ್ವರೂಪಿ ಎಂದು ಎರಡಿಲ್ಲದೇ ಭಾವಿಸಿ ನಂಬಿ ಧ್ಯಾನಿಸುವುದೇ ಶಿವಯೋಗ .

 ಪರತತ್ವವು ತನಗೆ ತಾನೇ ಗೋಚರಿಸು ವುದು . ಶರೀರದಲ್ಲಿ ಪರಂಜ್ಯೋತಿಯಿದೆ , ಪರತತ್ವವೂ ಇದೆ . ಆ ಜ್ಯೋತಿಯೇ ಮೂಲಸ್ವರೂಪ ; ಇದನ್ನೇ ಪರಬ್ರಹ್ಮ ಸ್ವರೂಪವೆನ್ನುತ್ತಾರೆ . ಈ ದೇಹದಲ್ಲಿ ಇರುವ ನವಚಕ್ರಗಳನ್ನು ಸಂಧಿಸಿ ಚಿಜ್ಯೋತಿಯನ್ನು ಕಾಣಬಹುದು . ಇದುವೇ ಪರಿಪೂರ್ಣ‌ ಲಿಂಗ , ಪರಶಿವತತ್ವ , ಹೀಗೆ ಪರಶಿವತತ್ವ ಕಂಡು ಶಿವಯೋಗಿ ಗಳಾದರು.

ಈ ಸಾಲುಗಳ ಬೆನ್ನು ಹತ್ತಿ  ಹುಡುಕಾಟ ಆರಂಬಿಸಿದ ನನಗೆ ಈ ತಿಂಗಳ ವಿಶೇಷಾಂಕದ ಲೇಖನಗಳ  ಸಂಗ್ರಹ ಸಂಪಾದನೆ ಅದ್ಭುತ ಉತ್ತರವನ್ನೇ ನೀಡಿತು !.

ಪರಮಪೂಜ್ಯ ಹಾನಗಲ್ಲ ಕುಮಾರ ಶಿವಯೋಗಿಗಳ ಕಾವ್ಯದ ಸಾಲುಗಳಂತೂ  “ಚಿದ್ಬಿಂದು” ವಿನ ದರ್ಶನ ಮಾಡಿಸಿದ್ದು ಒಂದು “ಅನುಭೂತಿ “!!.

“ನೇತ್ರದಾಟನಿಲ್ಲಿಸಿ ಸೂತ್ರದಿಯ ಸುಮತಿಯಗೂಡಿ

ಗಾತ್ರತ್ರಯವಳಿಯುತೆ ಚಿತ್ತದ ಚಿದ್ಬಿಂದು ತೋರಿ| ಚಿನ್ಮಯ ಪ್ರಭು”

ಈ ವಿಶೇಷಾಂಕದ ಲೇಖನ ಮತ್ತು ಲೇಖಕರ ವಿವರಗಳ ಜೊತೆಗೆ ಲೇಖಕರಿಗೆ ಹೃದಯಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಧಾರವಾಹಿ

 ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-೩ : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

ಕಾವ್ಯ

  1. ಪರಮ ಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಕಾವ್ಯ “ಶಿವಯೋಗ”
  2. “ಯೋಗ”: ಜಡೆಯೊಡೆಯ ತ್ರಿವಿಧಿ :ಪರಮಪೂಜ್ಯ ಮೌನತಪಸ್ವಿ ಶ್ರೀ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು  ಸಮಾಧಾನ ಕಲಬುರಗಿ  ವ್ಯಾಖ್ಯಾನ : ಶ್ರೀ ರಾಮೇಶ್ವರ ಬಿಜ್ಜರಗಿ -ಸೋಲಾಪುರ
  • ಯೋಗ :ಸಂಗೀತ ಗಾಯನ : ಪೂಜ್ಯ ಪ್ರಭು ಚನ್ನಬಸವ ಸ್ವಾಮಿಗಳು ಅಥಣಿ (ಧ್ವನಿ ಮುದ್ರಣ ಎರಡು ಯೋಗದ ಕುರಿತು ಹಾಡುಗಳು).
  • ಶಿವಯೋಗಮಂದಿರ : ಪೂಜ್ಯ ಮುಪ್ಪಿನ ಬಸವಲಿಂಗ ದೇವರು  ಶ್ರೀ ಅನ್ನದಾನೇಶ್ವರ ಸಂಸ್ಥಾನ ಹಾಲಕೆರೆ

ಲೇಖನಗಳು

  1. ಸಾಧಕರ ಯೋಗಾಸನಗಳು  :ಪೂಜ್ಯ ಲಿಂ.ವ್ಯಾಕರಣಾಳು ಸಿದ್ಧಲಿಂಗ ಪಟ್ಟಾಧ್ಯಕ್ಷರು
  2. ಯೋಗ ಸಾಧನೆ : ಲಿಂ. ಪೂಜ್ಯ ಶ್ರೀ ಸಂಗನಬಸವಸ್ವಾಮಿಗಳು, ಬಂಥನಾಳ
  3. ಯೋಗಿರಾಜ ಶ್ರೀ ಪ್ರಭು ಕುಮಾರ ಪಟ್ಟಾಧ್ಯಕ್ಷರು ಲೇಖಕರು : ಜ.ಚ.ನಿ.
  4. ತತ್ವಪದ ಹಾಗು ವಚನಗಳ ಮುಕ್ತಿತತ್ವ” ಪೂಜ್ಯ ಶ್ರೀ ವಿವೇಕಾನಂದ ದೇವರು ಕಲ್ಯಾಣೇಶ್ವರ ಹಿರೇಮಠ ಗುಣದಾಳ
  5. ಯೋಗಯುಕ್ತ – ರೋಗ ಮುಕ್ತ : ಪೂಜ್ಯ  ವೀರಬಸವ ದೇವರು,  ಆಸಂಗಿ
  6. ಯೋಗವೂ ವೀರಶೈವರೂ : ಲಿಂ. ಶ್ರೀ ಎಸ್. ಸಿ. ನಂದಿಮಠ, ಗೋಕಾಕ
  7. ಮಾನವೀಯತೆಯ ಮಹಾಮೂರ್ತಿ ಸಿಂದಗಿ ಪಟ್ಟಾಧ್ಯಕ್ಷರು.:ಡಾ. ಲೇಖಕರು  :ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು
  8. ಯೋಗಸಾಧಕ ಬೋಧಕರಾಗಿ ಹಾನಗಲ್ಲ ಶ್ರೀಗಳವರು

ಲೇಖಕರು:ಡಾ. ಶಾಂತಾದೇವಿ.ಎಲ್.ಸಣ್ಣೆಲ್ಲಪ್ಪನವರ.

Rtd. Professor and Chairman Institute of Kannada Studies and Former Hon. Professor Institute of Yoga Studies Karnatak University, Dharwad.

  • ಯೋಗ ಪ್ರಸಾರ ಸೇವೆಯಲ್ಲಿ ಗದುಗಿನ ಯೋಗ ಪಾಠಶಾಲೆ

(ಶ್ರೀ ಮನ್ನಿರಂಜನ ಯಳಂದೂರು ಬಸವಲಿಂಗ ಮಹಾಸ್ವಾಮಿಗಳವರ ಸ್ಮಾರಕ ಯೋಗ ಪಾಠಶಾಲೆ)

  • ಕೆ. ಎಸ್. ಪಲ್ಲೇದ ಪ್ರಾಚಾರ್ಯರು, ಬಸವಯೋಗ ಕೇಂದ್ರ, ಗದಗ

ಯೋಗ ವಿಡಿಯೋ : ಪೂಜ್ಯ  ವೀರಬಸವ ದೇವರು,  ಆಸಂಗಿ ಮತ್ತು ಪೂಜ್ಯ ಆನಂದ ದೇವರು ಹಾವೇರಿ

ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ ಪೂಜ್ಯ ಮುಪ್ಪಿನ ಬಸವಲಿಂಗ ದೇವರು ಶ್ರೀ ಅನ್ನದಾನೇಶ್ವರ  ಸಂಸ್ಥಾನ ಮಠ ಹಾಲಕೆರೆ ಹಾಗು ಪೂಜ್ಯ ಪರ್ವತ ದೇವರು ಅವರಿಗೆ ತುಂಬು ಹೃದಯದ ಕೃತಜ್ಞತೆಗಳು.

-ಶ್ರೀಕಂಠ.ಚೌಕೀಮಠ.

ವ್ಯವಸ್ಥಾಪಕ -ಸಂಪಾದಕರು.

ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ

ರಚನೆ : ಪರಮಪೂಜ್ಯ ಲಿಂ.ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು

ಮನವನು ಪರಿಪಾಲಿಸು ನೀ ಜ್ಞಾನದಾನ ಮಾಡಿಶಿವ|

ಚಿನ್ಮಯ ಪ್ರಭು | ಮಾಯಾರಿ ! ಮಾರಾರಿ!! ಕಾಲಾರಿ!!! ||ಪ||೧

ನೇತ್ರದಾಟನಿಲ್ಲಿಸಿ ಸೂತ್ರದಿಯ ಸುಮತಿಯಗೂಡಿ

ಗಾತ್ರತ್ರಯವಳಿಯುತೆ ಚಿತ್ತದ ಚಿದ್ಬಿಂದು ತೋರಿ| ಚಿನ್ಮಯ ಪ್ರಭು ||೨

ನಾದಬ್ರಹ್ಮ ಭೇದವ ಶೋಧಿಸಿ ದೃಢಚಿತ್ತನಾಗಿ

ಸಾಧಿಸಿ ಶಿವಕಲೆಯನ್ನು ಮೋದಗೊಳ್ಳುವಂತೆ ಮಾಡಿ | ಚಿನ್ಮಯ ಪ್ರಭು!! ೩

ಲಿಂಗಾಂಗಸಂಗದ ಇಂಗಿತದ ಬೋಧವಿತ್ತು |

ಲಿಂಗೈಕ್ಯನ ಮಾಡುತೆ ಮಂಗಲ ಶಿವಯೋಗಿಯೆನಿಸಿ | ಚಿನ್ಮಯ ಪ್ರಭು||೪

ರಚನೆ :ಪರಮಪೂಜ್ಯ ಮೌನತಪಸ್ವಿ ಶ್ರೀ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮಿಗಳು  ಸಮಾಧಾನ ಕಲಬುರಗಿ

ವ್ಯಾಖ್ಯಾನ : ಶ್ರೀ ರಾಮೇಶ್ವರ ಬಿಜ್ಜರಗಿ -ಸೋಲಾಪುರ

ಯೋಗ ಮಾಡಿದರಿಲ್ಲl ಭೋಗದೊಳ್ ಮೊದಲಿಲ್ಲ,l

ತ್ಯಾಗದೊಂದಿಗಿದೆ,ಶಿವ”ಲಿಂಗ-ಭೋಗೋಪ-l

ಭೋಗ” ದಲಿ- “ಶಾಂತಿ” ಜಡೆಯೊಡೆಯ!

ಜೀವನದಲ್ಲಿ ಮನುಷ್ಯನು ಬಯಸುವದು ಸುಖ ಶಾಂತಿಯನ್ನು. ಜೀವನು ಶರೀರ ಹೊತ್ತು  ಹುಟ್ಟಿಬಂದಮೇಲೆ ನೋವು ನಲಿವುಗಳು ಅನಿವಾರ್ಯವಾಗಿವೆ. ನಲಿವಿಗಿಂತ ನೋವು

 ಹೆಚ್ಚಿಗೆ ಬರುವದರಿಂದ ಮನುಷ್ಯ ಜೀವನದಲ್ಲಿ ಸುಖ-ಶಾಂತಿ ಪಡೆಯಲು ಭೋಗ ವಸ್ತುಗಳನ್ನು ಕೊಂಡುಕೊಂಡು ಅದರಿಂದ ಸುಖ ಪಡೆಯಲು ಪ್ರಯತ್ನಿಸುತ್ತಾನೆ. ಆದರೆ ಕೆಲವೇ ದಿನಗಳಲ್ಲಿ ಅದು ಬೇಸರ ತರುತ್ತದೆ. ಆಗ ಯೋಗದ ಕಡೆಗೆ ಗಮನ ಹರಿಸುತ್ತಾನೆ. ಯೋಗ ಅಂದರೆ ಶಿವ ಜೀವ ಸಂಯೋಗ. ಯೋಗದಲ್ಲಿ ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಹಠಯೋಗ, ಅಷ್ಟಾಂಗಯೋಗ ಶಿವಯೋಗ,  ಹೀಗೆ ಅನೇಕ ಪ್ರಕಾರಗಳಿವೆ. ಯೋಗ ಅಂದರೆ ಸರ್ವಸಾಮಾನ್ಯರ ಭಾಷೆಯಲ್ಲಿ ಅಷ್ಟಾಂಗ ಯೋಗಕ್ಕೆ ಹೀಗೆ ಹೇಳುತ್ತಾರೆ. ಆದರೆ ಇದರಲ್ಲಿ ಹೆಸರಿಗೆ ತಕ್ಕಂತೆ ಎಂಟು ಭಾಗಗಳಿವೆ.

1.  ಯಮ- ನಿಶಿದ್ಧವಾದ ಕಾರ್ಯಗಳನ್ನು ತ್ಯಾಗ ಮಾಡುವದು ಅಂದರೆ ಬೇರೆಯವರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು.

2.  ನಿಯಮ- ಆಚರಣ ಪದ್ಧತಿಗಳ ಬಗ್ಗೆ ನಿಯಮಗಳು.

3.  ಆಸನ- ದೇಹ ಆರೋಗ್ಯವಾಗಿರಲು ಮಾಡುವ ವ್ಯಾಯಾಮ ಪ್ರಕಾರಗಳು.

4.  ಪ್ರಾಣಾಯಾಮ- ಶ್ವಾಸೋಚ್ಚಸ್ವಾಸಗಳನ್ನು ನಿಯಂತ್ರಿಸುವದು.

5.  ಪ್ರತ್ಯಾಹಾರ- ಮನಸ್ಸನ್ನು ಪಂಚೇಂದ್ರಿಯಗಳ ಕಡೆಗೆ ಹರಿಯುವದನ್ನು ತಡೆಯುವದು.

6   ಧ್ಯಾನ- ಒಂದೇ ಕಡೆಗೆ ಅಥವಾ ವಸ್ತುವಿನಲ್ಲಿ ಮನ ಕೇಂದ್ರೀಕರಿಸುವದು.

ಪರಮ ಪೂಜ್ಯ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ  ಒಂದು ತ್ರಿವಿಧಿ ಹೀಗಿದೆ.

“ಒಂದೇ ವಸ್ತುವಿನೊಳುl ಚಂದದಿಂದಲಿ ಲಕ್ಷl

ಸಂದು ಬಿಡದಲಿರಿಸಿlನೆನವುದು ಅದು ಧ್ಯಾನ-l

ವೆಂದೆನಿಸುವದು ಜಡೆಯೊಡೆಯ!

ಅಂದರೆ ಒಂದೇ ವಸ್ತುವಿನಲ್ಲಿ ಎಡಬಿಡದೆ ಸಂಪೂರ್ಣ ಲಕ್ಷ ಕೇಂದ್ರೀಕರಿಸುವದೇ ಧ್ಯಾನ ಎನಿಸುವದು.

7.  ಧಾರಣ- ಚಿತ್ತವನ್ನು ಒಂದೆಡೆ ತಡೆಯುವದು.

8.  ಸಮಾಧಿ- ಸಮಾಧಿ ಅಂದರೆ  ಶಿವ ಜೀವ ಯೋಗ.! ಇಲ್ಲಿಯವರೆಗೆ ಹೋಗುವದು.ಅತಿ ಕಷ್ಟದ ಕೆಲಸ. ಸಾಮಾನ್ಯವಾಗಿ ಜನರೆಲ್ಲ ಯೋಗ ಅಂದರೆ ಪ್ರಾಣಾಯಾಮ, ಆಸನಗಳು, ಧ್ಯಾನ ಇವುಗಳನ್ನೇ ಯೋಗವೆಂದು ತಿಳಿಯುತ್ತಾರೆ ಸಮಾಧಿವರೆಗೂ ಹೋಗುವದೇ ಇಲ್ಲ. ಹೀಗಾಗಿ ಈ ಮಾರ್ಗದಿಂದ ಮುಕ್ತಿ ಪಡೆಯುವದು ಕಷ್ಟವಾಗುತ್ತದೆ. ಸುಖವಂತೂ ಸಿಗುವದೇ ಇಲ್ಲ. ಅದೇ ರೀತಿ ಭೋಗದಿಂದಲೂ ಸುಖ ಸಿಗುವದಿಲ್ಲ. ಇವೆಲ್ಲದಕ್ಕಿಂತ ನಿಜವಾದ ಸುಖವು ತ್ಯಾಗದಲ್ಲಿದೆ. ತ್ಯಾಗದಲ್ಲಿ ಯಾವ ಅಪೇಕ್ಷೆಯೂ ಇರುವದಿಲ್ಲ ಇದು ನನ್ನದಲ್ಲ ಎಂದು ತ್ಯಜಿಸುವುದು! ತ್ಯಾಗ ಎಂದರೆ ಆಶೆಯನ್ನು ಮೀರುವದು. ಆಶೆ ಮೀರಿದರೆ ಮಾಯೆಯನ್ನು ಗೆದ್ದಂತೆ. ಇಂತಹ ನಿರ್ಮಲ ಕಾಯನು ಶಿವಭಕ್ತಿ ಮಾಡಿದಾಗ ಶಿವಯೋಗ ಸಮನಿಸುವದು. ಶಿವಯೋಗ ಅಂದರೆ ಜಡೆಯೊಡೆಯ! ಶಿವ ಜೀವ ಒಂದಾಗುವದು. ಲಿಂಗಾಂಗ ಸಾಮರಸ್ಯ.- ಲಿಂಗ- ಅಂಗ ಒಂದಾಗುವದು. ಇದುವೇ ಲಿಂಗ ಭೋಗೋಪಭೋಗ ಇದುವೇ “ಮುಕ್ತಿ” ಇದರಲ್ಲಿ ನಿಜವಾದ ಶಾಂತಿ ಸಿಗುತ್ತದೆ. ಮುಕ್ತಿ ಸಿಗುವದು ತ್ಯಾಗದಿಂದ ಎಂದು ಪೂಜ್ಯರು ಈ ತ್ರಿವಿಧಿಯಲ್ಲಿ ತಿಳಿಸುತ್ತಾರೆ. ತ್ಯಾಗ ಅಂದರೆ ತನ್ನದನ್ನು ನಿರಪೇಕ್ಷ ಭಾವದಿಂದ ದಾನ ಮಾಡುವದು. ಬೇರೆಯವರದ್ದಕ್ಕೆ ಆಶೆ ಪಡದೆ ಇರುವದು. ಮುಕ್ತಿ ಪಡೆಯಲು ಆಶೆಯನ್ನು ಸಂಪೂರ್ಣವಾಗಿ ಬಿಟ್ಟಿರಬೇಕು.

ಖೇಚರಿಯ, ಷ ಣ್ಮುಖಿಯ,l ಸೂಚಿಸಿದರು ಶಾಂಭವಿಯ,l

ಗೋಚರಿಸಿ,ಕೊಡುವ ಗುರು-ವರನ ಸೇವಿಪ ವಿ-l

ವೇಚನೆಯ ನೀಡು, ಜಡೆಯೊಡೆಯ!

ಶಿವಯೋಗ ಸಾಧನೆಯಲ್ಲಿ ಖೇಚರಿ, ಷ ಣ್ಮುಖಿ, ಮತ್ತು ಶಾಂಭವಿ ಮುದ್ರೆಗಳು ಉಪಯುಕ್ತವಾಗಿವೆ ಎಂದು ಹೇಳುತ್ತಾರೆ. ಈ ಮುದ್ರೆಗಳು ತುಂಬಾ ಕಷ್ಟಕರವಾಗಿವೆ. ಖೇಚರಿ ಮುದ್ರೆಯನ್ನು ಕುಂಡಲಿನಿ ಜಾಗೃತಗೊಳಿಸುವ ಸಲುವಾಗಿ ಮಾಡಲಾಗುತ್ತದೆ. ಇದರಲ್ಲಿ ನಾಲಿಗೆಯ ತುದಿಯನ್ನು ಅಂಗಳಕ್ಕೆ ಹಚ್ಚಿ ಹಿಂದೆ ಗಂಟಲಲ್ಲಿ ಹೋಗಿಸುವ ಪ್ರಯತ್ನ ಮಾಡಲಾಗುತ್ತದೆ. ಷಣ್ಮುಖಿ ಮುದ್ರೆಯನ್ನು ಮನಸ್ಸಿನ ಏಕಾಗ್ರತೆಗಾಗಿ ಮಾಡಲಾಗುತ್ತದೆ. ಇದರಲ್ಲಿ ಆರು ಮುಖಗಳು ಅಂದರೆ ಮೂಗಿನ ಹೊಳ್ಳೆಗಳು ಎರಡು, ಎರಡು ಕಣ್ಣುಗಳು, ಮತ್ತು ಎರಡೂ ಕಿವಿಗಳು ಹೀಗೆ ಈ ಆರು ಮುಖಗಳನ್ನು ಮುಚ್ಚಿ ಉಸಿರಾಟ ನಿಯಂತ್ರಿಸ ಬೇಕು. ಶಾಂಭವಿ ಮುದ್ರೆಯಲ್ಲಿ ದೃಷ್ಟಿಯನ್ನು ಆಜ್ಞಾ ಚಕ್ರದಲ್ಲಿ ಕೇಂದ್ರೀಕರಿಸಬೇಕು.ಇದರಿಂದ .ಮೂರನೆಯ ಕಣ್ಣು ಜಾಗೃತವಾಗಿ ಮನುಷ್ಯನ ವ್ಯಕ್ತ ಮತ್ತು ಅವ್ಯಕ್ತ ಭಾವಗಳನ್ನು ತಿಳಿದುಕೊಳ್ಳಬಹುದು. ಈ ಮೂರು ಮುದ್ರೆಗಳನ್ನು ಮಾಡುವದು ಎಂದರೆ ಬಲು ಕಷ್ಟ ಪಡಬೇಕು. ಇವನ್ನೆಲ್ಲ ಬಿಟ್ಟು ಪ್ರತ್ಯಕ್ಷವಾಗಿ ನಿನ್ನ ಕಣ್ಣಮುಂದೆ ಇದ್ದು ನಿನಗೆ ಇಷ್ಟವಾದದ್ದನ್ನು ಕೊಡುವ ಗುರುವಿನ ಸೇವೆಯನ್ನು ಮಾಡುವ ಸುಬುದ್ಧಿಯನ್ನು ಕೊಡು ಎಂದು ಜಡೆಯೊಡೆಯನಲ್ಲಿ ಪೂಜ್ಯರು ಕೇಳಿಕೊಂಡಿದ್ದಾರೆ.

ಮೂರ್ವಿಧದ ಮುದ್ರೆಯನುl ಆರಿಗಾವುದು ಹಿತವೋ?l

ಆರಿಸಿದನರಗಿಸಿದರು, ಮೂರನಪ್ಪಿದರ್l

“ವೀರಶೈವರೈ” ಜಡೆಯೊಡೆಯ!

ಮೂರ್ವಿಧದ ಮುದ್ರೆಗಳು ಅಂದರೆ, ಖೇಚರಿ, ಷಣ್ಮುಖಿ, ಮತ್ತು ಶಾಂಭವಿ ಈ ಮೂರು ಪ್ರಕಾರದ ಮುದ್ರೆಗಳು ಶಿವಯೋಗ ಸಾಧನೆಗೆ ಅನುಕೂಲವಾಗಿವೆ ಎನ್ನುವರು. ಆದರೆ ಯಾವುದು ಯಾರಿಗೆ ಹಿತವೋ ಅದನ್ನು ಆರಿಸಿ ಅದನ್ನು ಸಾಧಿಸಬೇಕು. ಇದನ್ನು ಯೋಗ ಮುದ್ರೆಗಳಲ್ಲಿ ನಿಪುಣರಾದವರು ಮಾಡಬಹುದು. ಅಂತಹ ಮಹಾತ್ಮರನ್ನು ಹುಡುಕುವದು ಕಷ್ಟ ಮತ್ತು ಮುದ್ರಾ

ಸಾಧನೆಯೂ ಕಠಿಣವಾದ್ದರಿಂದ ಜಡೆಯೊಡೆಯ ! ವೀರಶೈವರು ಗುರು ಲಿಂಗ ಜಂಗಮರ ಸೇವೆಯೇ ಸಾಧನೆ ಎಂದು ಮುಕ್ತಿಯನ್ನು ಇಚ್ಚಿಸಿದರು.

ಲೇಖಕರು :

ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ

ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.

ಮುಂಡರಗಿ

( ಓದುಗರಲ್ಲಿ ವಿಶೇಷ ಸೂಚನೆ ; ಗುರು ಕರುಣ ತ್ರಿವಿಧಿ ಒಂದು ಮಹತ್ವಪೂರ್ಣ ಕೃತಿ ಅದು ಕೇವಲ ಪಾರಾಯಣಕ್ಕೆ ಮಾತ್ರ ಸೀಮಿತವಲ್ಲದ ವಿಶಿಷ್ಟ ಕೃತಿ ೩೩೩ ತ್ರಿಪದಿಗಳ ದಾರ್ಶನಿಕತ್ವ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವ ಪೂಜ್ಯ ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.ಮುಂಡರಗಿ ಸನ್ನಿಧಿಯವರ  ಸಮಗ್ರ ಸಾಹಿತ್ಯ ಅನುಭಾವ ಸಂಪದ-೧ ಬ್ರಹತ್‌ ಗ್ರಂಥದಿಂದ ವ್ಯಾಖ್ಯಾನ ಗಳನ್ನು ಪ್ರತಿ ತಿಂಗಳೂ ೩-೫ ತ್ರಿಪದಿ ಗಳಂತೆ ಪ್ರಕಟಿಸಲಾಗುವದು. ಅಂತರಜಾಲದ ಸುಕುಮಾರ  ಬ್ಲಾಗ ಕ್ಕೆ ಪ್ರಕಟಿಸಲು ಅನುಮತಿ ಕೊಟ್ಟ ಪೂಜ್ಯ ಜಗದ್ಗುರು ಸನ್ನಿಧಿಗೆ ಭಕ್ತಿಪೂರ್ವಕ ಕೃತಜ್ಞತೆಗಳು )

ಜುಲೈ ೨೦೨೧ ರ ಸಂಚಿಕೆ

ಗುರುವಿನ ಮಹತ್ವ

ನ ಗುರೋರಧಿಕವೆಂದು | ಜಗದಲ್ಲಿ ಸಾರುತಿಹ

ನಿಗಮ ಶೃತಿಗೇಳಿ-ಗುರುವೆ ನಾ ನಿಮ್ಮ ಪದ

ಯುಗವ ಬಣ್ಣಿಪೆನು ಕೃಪೆಯಾಗು     ||೬||

ಶಿವ ಕವಿಯು ಮೇಲೆ ಹೇಳಿದ ಸಾಧ್ಯ, ವೇಧ್ಯ, ಭೇಧ್ಯ ಸ್ವರೂಪನಾದ ಗುರುವು ಅನುಪಮನಾಗಿದ್ದಾನೆಂಬುದ ಕುರಿತು ಶೃತಿ ಮಾತನ್ನು ಎತ್ತಿಹೇಳುತ್ತಾನೆ. ‘ನ ಗುರೋರಧಿಕಂ, ನ ಗುರೋರಧಿಕಂ” ಗುರುವಿಗಿಂತ ಮಿಗಿಲಾದ ವಸ್ತು ಜಗತ್ತಿನಲ್ಲೇ ಇಲ್ಲ. ಗುರು ಮಹತ್ವವು  ಅಸದಳವಾಗಿದೆ, ಅಗಣಿತವಾಗಿದೆ.

ಸದ್ಭಕ್ತಿಯಿಲ್ಲದವರಿಗೆ ಸದ್ಗುರು ಸಾಧ್ಯವಾಗುವದಿಲ್ಲ. ಲಿಂಗಾಂಗ ಸಾಮರಸ್ಯವನ್ನು ಪಡೆಯದವರಿಗೆ ವೇದ್ಯನಾಗುವದಿಲ್ಲ. ಸತ್ಪ್ರಮಥರಲ್ಲದವರಿಗೆ ಭೇದ್ಯನಾಗುವದಿಲ್ಲ.ಇಂಥ ಗುರುವಿನ ಗರಿಮೆಯನ್ನು ಹೇಳಿದರಾಗದು. ಲಿಖಿಸಿದರಾಗದು. ಗುರುವಿಗೆ ಸಮನಾದ ಬೇರೊಂದು ಉಪಮಾನವೂ ಇಲ್ಲ. ಅಂತೆಯೇ ಆದಿ ಶಂಕರಾಚಾರ್ಯರು.

ದೃಷಾಂತೋ ನೈವ ದೃಷ್ಟಃ ತ್ರಿಭುವನಜಠರೇ

ಸದ್ಗುರೋಃ  ಜ್ಞಾನಧಾತುಃ |

ಜ್ಞಾನಪ್ರದಾಯಕನಾದ ಸದ್ಗುರುವಿಗೆ ಸದೃಶವಾದ ದೃಷ್ಟಾಂತವು ಮೂರು ಲೋಕದಲ್ಲಿಲ್ಲವೆಂದು ಗುರು ಗರಿಷ್ಕತೆಯನ್ನು ಹೃದಯ ತುಂಬಿ ಹಾಡಿದ್ದಾರೆ. ಇದನ್ನೆಲ್ಲಕೇಳಿ ತಿಳಿದು ಓ ಗುರುವೆ ! ನಾನು ನಿನ್ನ ಪಾದದ್ವಯವನ್ನು ನುತಿಸುವೆನು. ಎನ್ನ ಮೇಲೆ ನಿನ್ನ ಕೃಪಾಮೃತವನ್ನು ಸಿಂಚಿಸಿ ತಣಿಸಲಾರೆಯಾ ?

ಹರನಿಂದಲಧಿಕ ಸ | ದ್ಗುರುವೆಂಬುದನು ಕೇಳಿ

ಗುರುವೆ ನಾ ನಿನ್ನ ಚರಣವನು ನುತಿಸುವೆನು

ಕರುಣದಿಂದೆನಗೆ ಕೃಪೆಯಾಗು  II ೭ II

ಗುರುವಿನ ಆಧಿಕ್ಯತೆ ಅಧಿಕವಾಗಿದೆ. ಶಿವನಿಗಿಂತಲೂ ಸದ್ಗುರು ಮಿಗಿಲಾಗಿದ್ದಾನೆ.

ಶಿವನು ನಿರಾಕಾರ ನಿರ್ಗುಣನು.

ವಾ ಙ್ಮನಕ್ಕಗೋಚರನು, ಅದು ಕಾರಣ

ಭಕ್ತಹಿತಕಾಗಿ ಗುರುರೂಪವ ಧರಿಸಿ ಧರೆಗಿಳಿದು ಬಂದವನು

ಶಿವನಲ್ಲದೆ ಗುರು ಬೇರಲ್ಲವೆಂದ

ನಮ್ಮ ಮೃಡಗಿರಿ ಅನ್ನದಾನೀಶ | (ವ.ವ. ೧೧)

ಮತ್ತು-

ಹರನಿಗಿಂತಲೂ ಗುರುವಧಿಕ,

ಹರ ಮುನಿದರೂ ಗುರು ಕಾಯುವನು

ಗುರು ಮುನಿದರೆ ಹರಕಾಯನೆಂಬುದನರಿದು

ಗುರು ವಚನದಂತೆ ನಡೆವವಗೆ ದುಃಖವಿಲ್ಲೆಂದ

ನಮ್ಮ ಮೃಡಗಿರಿ ಅನ್ನದಾನೀಶ (ವ. ವ. ೧೩)

ಅಪ್ರತ್ಯಕ್ಷನಾದ ಶಿವನಿಗಿಂತಲೂ ಸದ್ರೂಪನಾಗಿ ಸದ್ಭಕ್ತರಿಗೆ ಪ್ರತ್ಯಕ್ಷವಾಗಿ ಸಂದರ್ಶನವನ್ನೀಯುವ ಸದ್ಗುರುವು ಶ್ರೇಷ್ಠವೆಂಬುದರಲ್ಲಿ ಯಾವ ಸಂಶಯವಿಲ್ಲ. ಹರ ಕಾಣನು. ಗುರು ದರ್ಶನವಿತ್ತು ಕೃಪೆ ದೋರುತ್ತಾನೆ. ಹರ ಮುನಿದರೂ ಗುರು ರಕ್ಷಿಸಬಲ್ಲನು. ಗುರು ಮುನಿದರೆ ಕಾವ ಶಕ್ತಿಹರನಲ್ಲಿಲ್ಲ. ಅಂತೆಯೇ ನಿರ್ಗುಣ-ಸಗುಣ ಭಕ್ತಿಮಾರ್ಗದ ಹಿಂದೀ ಕವಿಗಳೂ ಸಹ ಗುರುಮಹತ್ವವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಕಬೀರದಾಸರು :

ಸತಗುರು ಕೀ ಮಹಿಮಾ ಅನಂತ, ಅನಂತ, ಕಿಯಾ ಉಪಗಾರ

ಗುರು-ಗೋವಿಂದ ದೋನೋಂ ಖಡೆ, ಕಾಕೆ ಲಾಗೂ೦ ಪಾಯೀ |

ಬಲಿಹಾರೀ ಯಾ ಗುರುಕೀ, ಗೋವಿಂದ ದಿಯಾ ಬತಾಯೀ |

ಸೂರದಾಸರು :

ಗುರು ಬಿನಾ ಐಸೀ ಕೌನ ಕರೈ ?

ಮಾಲಾತಿಲಕ ಮನೋಹರ ಬಾನೀ, ಲೈ ಸಿರ ಛಟಾ ಧರೆ |

ಭವಸಾಗರತೆಂ  ಬೂಢತ ರಾಖ್ಯೆ, ದೀಪಕ ಹಾಥ ಧರೈ |

ಸೂರದಾಸ ಗುರು ಐಸಾ ಸಮರಥ ಛಿನ ಮೈಂ ಲೆ ಊಧರೈ |

ನಿರ್ಗುಣ ಭಕ್ತಿಮಾರ್ಗಿಗಳಾದ ಕಬೀರದಾಸರು ಸದ್ಗುರುವಿನ ಮಹಿಮೆ ಅನಂತ ಅನಂತವೆಂದು ಹೇಳಿದ್ದಾರೆ. ಯಾಕೆಂದರೆ ಗುರುಕರುಣೆ ದೋರುತ್ತಾನೆ. ಆಕಸ್ಮಾತ್ತಾಗಿ ಗುರು ಮತ್ತು ಹರ ಏಕಕಾಲಕ್ಕೆ ಬಂದರೆ ನಾನು ಸದ್ಗುರುವಿಗೇನೆ ಮೊದಲು ಮಣಿಯುತ್ತೇನೆಂದು ತಮ್ಮ ಗುರು ಭಕ್ತಿಯನ್ನು ನಿರೂಪಿಸಿದ್ದಾರೆ. ಸಗುಣಭಕ್ತಿ ಮಾರ್ಗಿಗಳಾದ ಸೂರದಾಸರು ಗುರು ಮಹಿಮೆಯನ್ನು ವಿಚಾರಪೂರ್ವಕವಾಗಿ ಮಂಡಿಸಿದ್ದಾರೆ. ಮಾಲಾ ತಿಲಕವನ್ನು, ಜಟಾಜೂಟವನ್ನು ಧರಿಸಿ, ಮನೋಹರವಾದ ಮಾತುಳ್ಳ ಸದ್ಗುರುನಾಥನು ಜ್ಞಾನದೀಪವನ್ನು ಕೈಯಲ್ಲಿ ಹಿಡಿದು ಭವಸಾಗರದಲ್ಲಿ ಮುಳುಗುವ ನಮ್ಮನ್ನು ಉದ್ಧರಿಸುತ್ತಾನೆ. ಇಂಥ ಗುರು ಸಮರ್ಥನಾಗಿದ್ದಾನೆ. ಮನಸ್ಸು ಮಾಡಿದರೆ ಭಕ್ತನನ್ನು ಕ್ಷಣದಲ್ಲಿ ಉದ್ಧರಿಸಬಲ್ಲನೆಂದು ಗುರು ಗರಿಮೆಯನ್ನು ವಿಶದೀಕರಿಸಿದ್ದಾರೆ.

ಕವಿಗಳು ಸ್ವತಃ ಜ್ಞಾನಿಗಳಾಗಿದ್ದರು. ಅನುಭಾವಿಗಳಾಗಿದ್ದರು. ಗುರುಚರಣ ಮಹಿಮೆಯನ್ನು ನುತಿಸುವಲ್ಲಿ ಅಪಾರ ಪ್ರೇಮವನ್ನು ವ್ಯಕ್ತಮಾಡಿದ್ದಾರೆ. ಗುರುಸ್ತುತಿಗೈಯ್ಯುವದು ಶಿಷ್ಯನ ಗುರಿಯಾದರೆ, ಕರುಣೆ ದೋರುವದು ಗುರುವಿನ ಅಗ್ಗಳಿಕೆ ಯಾಗಿದೆ. ಗುರುಕರುಣೆಯೇ ಮಾನವ ಜೀವನದ ಸಾರಸರ್ವಸ್ವವೆಂಬುದು ಶರಣರ ಸಂದೇಶವಾಗಿದೆ.

ಗುರು ಕೃಪಾಬಲವೇ ಶಿಷ್ಯರಿಗೆ ಜೀವಾಳ ;

ಗುರು ಕೃಪಾಬಲವೇ ಲಿಂಗಾಂಗ ಸಮರಸದ ಮುಂಬೆಳಗು ;

ಗುರು ಕೃಪಾಬಲವೇ ವೀರಶೈವನ ಒಳಬೆಳಗು,

ಗುರು ಸೇವೆಯ ಮಾಡಿ ಗುರು ಕೃಪೆಯ ಪಡೆಯೆಂದ

ನಮ್ಮ ಮೃಡಗಿರಿ ಅನ್ನದಾನೀಶ (ವ.ವ. ೧೬)

********

ಎಲ್ಲ ದೈವಕೆ ನಿಮ್ಮ | ಮೆಲ್ಲಡಿಯೇ ಘನವೆಂದು

ಸೊಲ್ಲಿಗೊಮ್ಮೊಮ್ಮೆ ನುತಿಪೆನಾಂ ಗುರುರಾಯ

ಸಲ್ಲೀಲೆಯಿಂದ ಕೃಪೆಯಾಗು         || ೮ ||

ಈ ಜಗತ್ತಿನಲ್ಲಿ ದೇವತೆಗಳ ಸಂಖ್ಯೆ ಹೇಳತೀರದಷ್ಟಿದೆ. ಶಿವನ ಸೃಷ್ಟಿ ಮಾನವ.ಮಾನವನ ಸೃಷ್ಟಿ ದೇವತೆಗಳಾಗಿವೆ. ”ನಾ ಮಾಡಿದಲ್ಲದೆ ನೀ ದೇವನಲ್ಲ’ವೆಂಬ ಅಲ್ಲಮಪ್ರಭುಗಳ ವಾಣಿ ನಿದರ್ಶನವಾಗಿದೆ. ಮಾನವನು ಭಿನ್ನ ಭಿನ್ನ ವಸ್ತುಗಳನ್ನುದೇವರನ್ನಾಗಿಸಿದ್ದಾರೆ. ಅಣ್ಣ ಬಸವಣ್ಣನವರು ಈ ಬಹು ದೇವತಾ ವಾದವನ್ನು ಚನ್ನಾಗಿ ಖಂಡಿಸಿದ್ದಾರೆ.

ಮಡಕೆ ದೈವ, ಮೊರದೈವ, ಬೀದಿಯ ಕಲ್ಲುದೈವ

ಹಣಿಗೆ ದೈವ, ಬಿಲ್ಲನಾರಿ ದೈವ ಕಾಣಿರೋ

ಕೋಳಗ ದೈವ, ಗಿಣ್ಣಿಲು ದೈವ ಕಾಣಿರೋ

ದೈವ ದೈವವೆಂದು ಕಾಲಿಡಲಿಂಬಿಲ್ಲ.

ದೈವನೊಬ್ಬನೆ ಕೂಡಲ ಸಂಗಮದೇವ.

ಅರಗು ತಿಂದು ಕರಗುವ ದೈವವ

ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯಂಬೆನಯ್ಯಾ

ಅವಸರ ಬಂದಡೆ ಮಾರುವ ದೈವವನೆಂತು ಸರಿಯಂಬೆನಯ್ಯಾ ?

ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯಂಬೆನಯ್ಯಾ ?

ಸಹಜಭಾವ ನಿಜೈಕ್ಯ ಕೂಡಲಸಂಗಮನೊಬ್ಬನೆ ದೇವ.

ಪ್ರತಿಯೊಂದು ವಸ್ತುವಿಗೆ ದೇವರೆಂದು ಕರೆದರೆ ಕಾಲಿಡಲೂ ಸ್ಥಳವಿಲ್ಲವಾಗುವದು. ತನ್ನನ್ನು ತಾನು ರಕ್ಷಿಸಿಕೊಳ್ಳದ ವಸ್ತುವು ದೇವರಾಗದು. ಜನರು ನೀರಕಂಡಲ್ಲಿಮುಳುಗಿ, ಮರವ ಕಂಡಲ್ಲಿ ಸುತ್ತುತ್ತ ಮೌಢ್ಯರಾಗಿದ್ದಾರೆ. ಒಣಗುವ ಗಿಡವನ್ನುನಂಬುವ ಜನರು ನಿಜವಾದ ದೇವರನ್ನು ನಂಬಲಾರರು. ಕಲ್ಲ ಮನೆಯಮಾಡಿ, ಕಲ್ಲದೇವರನ್ನು ಪ್ರತಿಷ್ಠಿಸಿ, ಆಕಸ್ಮಿಕವಾಗಿ ಗುಡಿ ಮೇಲಿನ ಕಲ್ಲು ಕೆಳಗೆ ಬಿದ್ದರೆ ದೇವರೆ ಹೊದನೆಂದು ಪ್ರಭುದೇವರು ವಿಡಂಬಿಸಿದ್ದಾರೆ.ಪ್ರತಿಷ್ಠಾಪನೆ ಹೊಂದುವ ಪ್ರತಿಯೊಂದು  ದೇವತೆಯಾದರೂ ನಾಶ ಹೊಂದುವದು. ಅಲ್ಲದೆ ಪ್ರತಿಷ್ಠಾಪನೆಯಾಗುವ ಕಾಲಕ್ಕೆ ಗುರುಚರಣವೇ ಸಕಲ ದೇವತೆಗಳಿಗೆ ಘನವಾಗಿದೆ. ಸದ್ಗುರುವಿನ ಮೆಲ್ಲಡಿಯ ಮಹಿಮೆ ಅಪಾರವಾದುದು.

ಗುರು ಚರಣಂ ಭವಹರಣಂ

ಶರಣಜನ ಹೃದಾಭರಣಮಾತ್ಮ ಸುಖಕರಣಂ ||

ಮರಣ ಭಯಾದುತ್ತರಣಂ

ತರುಣಾರುಣಕಿರಣವರ್ಣಮಹಮೀಡೇ ||

ಭವಹರಣಕ್ಕೆ ಕಾರಣವಾದ ಗುರುಚರಣವು ಶರಣ ಜನರ ಹೃದಯಾಭರಣವಾಗಿದೆ. ಗುರುಚರಣ ಗಾನವು ಆತ್ಮಕ್ಕೆ ಸುಖವನ್ನು ನೀಡುವದು. ಮರಣ ಭಯವನ್ನುನಿವಾರಿಸುವದು. ಬಾಲಸೂರ್ಯನ ಕಿರಣಕ್ಕೆ ಸಮನಾದ ಗುರುಚರಣವನ್ನುನುಡಿ-ನುಡಿಗೊಮ್ಮೆ ಉಸುರಿಗೊಮ್ಮೆ ನುಡಿಸಿ ಧನ್ಯರಾಗುವದೇ ಮಾನವನ ಕರ್ತವ್ಯ.ಶರಣನ ನಿಜನಿಷ್ಠೆ, ನೈಜವಾದ ಗುರುನುಡಿಯು ಗುರುಕೃಪೆಗೆ ಕಾರಣವಾಗುವದು.ಇಂಥ ನುಡಿಗೆ ಗುರುತಂದೆಯು ಸಲೀಲೆಯಿಂದ ಕೃಪೆದೋರುವನು. ಪೂರ್ವಜರು ಏಳುವಾಗ, ಮಲಗುವಾಗ, ಪೂಜೆ ಮೊದಲಾದ ಶುಭ ಪ್ರಸಂಗಗಳಲ್ಲಿಯೂ ಗುರು ಸ್ತುತಿಯನ್ನು ತಪ್ಪದೇ ಮಾಡುತ್ತ ಬಂದಿರುವರು.

ಗುರುದೇವೋ ಮಹಾದೇವೋ ಗುರುದೇವಃ ಸದಾಶಿವಃ |

ಗುರುದೈವಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ||

ಗುರುಬ್ರ್ರಹ್ಮಾ ಗುರುರ್ವಿಷ್ಣು ಗುರುರ್ದೇವೋ ಮಹೇಶ್ವರಃ |

ಗುರುಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀಗುರವೇ ನಮಃ |

ಆವಾಚ್ಯಾತ್ಮ ಸ್ವರೂಪಾಯ ಶಿವಭಾವಪ್ರದಾಯಿನೇ |

ನಮಸ್ಸದ್ಗುರುನಾಥಾಯ ಷಟ್‌ಸ್ಥಲಬ್ರಹ್ಮಮೂರ್ತಯೇ ||

**********

ನರಜೀವಿಗಳಿಗೋರ್ವ | ಹರನೆ ಕಾರಣಕರ್ತ

ಶರಣ ಸಂತತಿಗೆ ಗುರುವೆ ನೀಕರ್ತನೆಂ

ದೆರಗಿರ್ವನಡಿಗೆ ಕೃಪೆಯಾಗು  || ೯ ||

ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಲ್ಲ, ಎಂಬತ್ನಾಲ್ಕು ಲಕ್ಷ ಜೀವಿಗಳನ್ನುನಿರ್ಮಿಸಿದನು ಹರನು. ಎಲ್ಲ ಜೀವಿಗಳಿಗಿಂತ ನರಜೀವಿಯೇ ಮಿಗಿಲು. ಆದರೆ ಈ ನರನು ಹುಟ್ಟು ಸಾವುಗಳ ಮಧ್ಯದಲ್ಲಿ ಸಿಕ್ಕು ಬಳಲಿ ತೊಳಲಾಡುತ್ತಿದ್ದಾನೆ. ಹರನ ಸೃಷ್ಟಿಯ ನರನು ಕಷ್ಟಜೀವಿಯಾಗಿದ್ದಾನೆ. ಭವ-ಭವಾಂತರಗಳಲ್ಲಿ ಹುಟ್ಟಿ ಹುಟ್ಟಿ ಮಾನವನು ಸಾಯುತ್ತಾನೆ. ಜಗತ್ತಿನಲ್ಲಿ ಅತ್ಯಂತ ಭಯಾನಕವಾದ ವಸ್ತುವೇ ಸಾವು.ಸಾವಿಗಂಜದ ಮಾನವರಿಲ್ಲ. ಶಿವನು ತನ್ನ ಲೀಲೆಗೋಸ್ಕರ ಜೀವಿಗಳನ್ನು ಭವಚಕ್ರ ದಲ್ಲಿ ತಿರುಗಿಸುತ್ತಾನೆ.

ಗುರುದೇವನು ಕರುಣಾಮಯನು. ಭವಬಂಧನದಲ್ಲಿ ಬಿದ್ದು ದುಃಖಿಯಾಗುತಿರುವ ಮಾನವರನ್ನು ಉದ್ಧರಿಸುತ್ತಾನೆ. ಮಾಂಸಮಯ ಶರೀರವನ್ನು ಮಂತ್ರ ಮಯವನ್ನಾಗಿಸುತ್ತಾನೆ. ಶಿಷ್ಯನಿಗೆ ತನ್ನ ಹಸ್ತಕಮಲದಲ್ಲಿ ಪುನರ್ಜನ್ಮವನ್ನೀಯುತ್ತಾನೆ.ಅದುಕಾರಣವೇ ಶರಣರು ಗುರುಕರಸಂಜಾತರೆಂದು ಹೆಸರು ಪಡೆಯುತ್ತಾರೆ. ಶರಣನಿಗೆ ಹುಟ್ಟು-ಸಾವಿನ ಕೀಲವನ್ನು ತಿಳಿಸಿ ಮುಕ್ತನಾಗುವ ಮಾರ್ಗವನ್ನು

ತಿಳಿಸುತ್ತಾನೆ. ತನುತ್ರಯಗಳನ್ನು ಪಾವನಗೊಳಿಸಿ ಲಿಂಗತ್ರಯವನ್ನು ಕರುಣಿಸುತ್ತಾನೆ. ಮಹಾಮಂತ್ರವನ್ನು ಬೋಧಿಸಿ ಶರಣ ಮಾರ್ಗವನ್ನು ತಿಳಿಸುತ್ತಾನೆ. ಮರವೆಯನ್ನುದೂರಗೊಳಿಸಿ ಅರಿವನ್ನು ಜಾಗೃತಗೊಳಿಸುತ್ತಾನೆ. ಅರಿವಿನ ಕುರುಹೇ ಲಿಂಗವೆಂದು ಮನವರಿಕೆ ಮಾಡಿಕೊಡುತ್ತಾನೆ. ಇಂಥ ಶರಣನು ಭವಚಕ್ರವನ್ನು ದಾಟಿ ಮುಕ್ತ ನಾಗುತ್ತಾನೆ. ಪುನರ್ಜನ್ಮವನ್ನು ಕಳೆದುಕೊಳ್ಳುತ್ತಾನೆ. ಶಿವನ ದೃಷ್ಟಿಯಿಂದ ಪಾರಾಗುತಾನೆ. ಪ್ರಭುಲಿಂಗಲೀಲೆಯಲ್ಲಿ ಶಿವನಿಗೆ ಪಾರ್ವತಿಯು ‘ಹೇ ದೇವಾ ನಾಮ-ರೂಪಕ್ರಿಯೆಗಳನ್ನು ಗೆಲ್ಲಬಲ್ಲ ನಿತ್ಯ ಮುಕ್ತನಾಗುವ ನಿರ್ಮಲವಾದ ಉದ್ಯೋಗವಾವುದು??ಎಂದು ಕೇಳಲು ಆಗ ಶಿವನು “ಭೋಗ ಭೂಮಿಯಾದ ಭೂತಲದಲ್ಲಿ ಮಾನವ ಶರೀರಿಯಾಗಿ ಹುಟ್ಟಿ ಶರಣನಾಗಿ ಶಿವಯೋಗ ಮಾರ್ಗದಿಂದ ನಿಜವನ್ನು ಸಾಧಿಸಿ ಮುಕ್ತರಾಗಬಹುದು” ಎಂದು ತಿಳಿಸಿದ ಮಾತುಗಳು ಮನನೀಯವಾಗಿವೆ.

ಶಿವಕವಿಯು ‘ಓರ್ವಹರ’ನೆಂಬ ಪದಪ್ರಯೋಗದಲ್ಲಿಯೂ ವಿಶೇಷತೆಯನ್ನುತುಂಬಿದ್ದಾನೆ. ಈ ಜಗತ್ತನ್ನು ಹಾಗೂ ಸಕಲ ಜೀವಜಂತುಗಳನ್ನು ನಿರ್ಮಾಣ ಮಾಡುವ ಶಿವನು ಒಬ್ಬನೇ ಇದ್ದಾನೆ. ಶಿವನು ಎಷ್ಟೇ ಜೀವಗಳನ್ನು ಹುಟ್ಟಿಸಿದರೂ ಅವೆಲ್ಲಅವನಿಗಿಂತ ಭಿನ್ನವಾಗಿವೆ. ಕುಂಬಾರನು ಎಷ್ಟೇ ಗಡಿಗೆ ಮಡಿಕೆಗಳನ್ನು ತಯಾರಿಸಿದರೂ ಅವು ಅವನಿಗಿಂತ ಭಿನ್ನವಾಗಿರುವದಿಲ್ಲವೇ ! ಹಾಗೆ ಶಿವನು ತನ್ನಂತೆ ಮಾಡಿಕೊಳ್ಳುವದಿಲ್ಲ. ಜೀವನು ಶಿವನಾದ ಮೇಲೆಯೇ ದುಃಖದಿಂದ ಮುಕ್ತ ನಾಗುವನು. ಈ ದುಃಖಿಯಾದ ಜೀವನನ್ನು ಶಿವನನ್ನಾಗಿ ಮಾಡುವ ಮಹಾಶಕ್ತಿ ಸದ್ಗುರುವಿನಲ್ಲಿದೆ. ದೀಪದಿಂದ ಮತ್ತೊಂದು ದೀಪ ಬೆಳಗುವಂತೆ ಗುರುವರನು ಸಚಿಷ್ಯರನ್ನು ತನ್ನಂತೆ ಮಾಡಿಕೊಳ್ಳುತ್ತಾನೆ. ಅನೇಕ ಗುರುಬಳಗವನ್ನೇ ತಯಾರಿಸುವನು. ಒಬ್ಬ ಶರಣನನ್ನಲ್ಲ.ಶರಣ ಸಂತತಿಗೇನೇ ಕಾರಣ ಕರ್ತನಾಗುವನು.

ಇಂಥ ಅಪಾರಶಕ್ತಿಯನ್ನು ಪಡೆದ ಓ ಗುರುವೆ ! ನಿನ್ನಡಿಯ ಬಯಸಿ ಬಂದಿರುವೆ, ನಿನ್ನ ಸಿರಿಯಡಿಗೆ ಮುಡಿಯಿಡುವೆ. ಪಿಡಿದೆತ್ತಿ ಬಿಡೆದಲೆ ನೀ ಕಾಪಾಡು.

********

ಶಿವನ ಸನ್ನಿಧಿಯರ್ಗೆ| ಭವ ಮರಣವುಂಟೆಂದು

ತವಪಾದ ಪದ್ಮ ಸನ್ನಿಧಿಯ ಬಯಸಿ ಬಂ-

ದವನೆನಗೆ ಗುರುವೆ ಕೃಪೆಯಾಗು II ೧O II

ಶಿವಕವಿಯು ಮೇಲಿನ ಅರ್ಥವನ್ನೇ ಪುಷ್ಟಿಗೊಳಿಸುತ್ತಾನೆ. ಶಿವನಸನ್ನಿಧಿ ಹಾಗೂ ಗುರುಸನ್ನಿಧಿಯ ಮರ್ಮವನ್ನು ತಿಳಿಸುತ್ತಾನೆ. ಪುಣ್ಯವನ್ನು ಗಳಿಸಿದ ಮಾನವರು ಚತುರ್ವಿಧ ಮೋಕ್ಷಗಳಾದ ಸಾಲೋಕ್ಯ,ಸಾಮೀಪ್ಯ, ಸಾರೂಪ್ಯ, ಸಾಯುಜ್ಯಗಳನ್ನು ಸಂಪಾದಿಸುತ್ತಾರೆ.

“”ಕ್ಷೀಣೇ ಪುಣ್ಯೇ ಮರ್ಥ್ಯಲೋಕಂ ವಿಶಂತಿ.”

ಸ್ವರ್ಗಲೋಕದಲ್ಲಿ ಪುಣ್ಯವಿರುವವರೆಗೆ ಅನಂತ ಸುಖಗಳನ್ನು ಅನುಭವಿಸಿದ ಮಾನವರು ಪುಣ್ಯತೀರಲು ಪುನಃ ಮರ್ತ್ಯಲೋಕಕ್ಕೆ ಬರಬೇಕಾಗುವದು. ಶಿವನ ಸನ್ನಿಧಿಯು ಸ್ಥಿರವಾದುದಲ್ಲ. ಚುನಾವಣೆಯಲ್ಲಿ ಜನಮತವನ್ನು ಪಡೆದ ವ್ಯಕ್ತಿಯು ಆ ಅವಧಿ ಮುಗಿಯುವ ವರೆಗೆ ರಾಜಕೀಯ ಅಧಿಕಾರದ ಸುಖವನ್ನು ಅನುಭವಿಸಿ ಸಮಯ ಮುಗಿದ ಬಳಿಕ ಪುನಃ ತನ್ನ ನೆಲೆಗೆ ಬರುವಂತೆ, ಮಾನವನು ಪುಣ್ಯ ಮುಗಿದ ಬಳಿಕ ಭೂಲೋಕದಲ್ಲಿ ಹುಟ್ಟಬೇಕಾಗುವದು. ಪಾಪಮಾಡಿದವನು ರೌರವ ನರಕ ಗಳಲ್ಲಿ ಬೀಳಬೇಕಾಗುವದು. ಪುಣ್ಯವೆಂಬುದು ಬೆಲೆಯಿದ್ದಂತೆ. ಬೆಲೆತೆತ್ತು ಅನೇಕ ಲೌಕಿಕ ಭೋಗಗಳನ್ನು ಭೋಗಿಸುವಂತೆ ಪುಣ್ಯವೆಂಬ ಬೆಲೆಯಿಂದ ಸ್ವರ್ಗಲೋಕದ ಸುಖವನ್ನು ಅನುಭೋಗಿಸುವನು.

ಇಂದಿನ ವೈಜ್ಞಾನಿಕ ಯುಗದಲ್ಲಿ ಪುಣ್ಯ-ಪಾಪಗಳ ಸ್ವರ್ಗ-ನರಕ ಲೋಕಗಳ ಕಲ್ಪನೆ ಸ್ಥಿರವಾಗದಿದ್ದರೂ, “ಪುಣ್ಯಪಾಪವೆಂಬುದು ನಿಮ್ಮಿಷ್ಟ ಕಾಣಿರೆ” “ಅಯ್ಯಾ ಎಂದಡೆ ಸ್ವರ್ಗ, ಎಲ್ಲವೋ ಎಂದಡೆ ನರಕ’ ಎನ್ನುವ ಶರಣವಾಣಿಗೆ ಚ್ಯುತಿಯಿಲ್ಲ. ಮಾನವನ ನಡತೆಗೆ ತಕ್ಕಂತೆ ಗುಣಾವಗುಣಗಳು ಲಭ್ಯವಾಗುತ್ತವೆ. ಒಟ್ಟಿನ ಮೇಲೆ ಪುಣ್ಯದ ದಾರಿಯಲ್ಲಿ ನಡೆವವಗೆ ಪುನರ್ಜನ್ಮವಿದೆ. ಯಾಕೆಂದರೆ ಪುಣ್ಯದಲ್ಲಿ ಸಕಾಮ ಕರ್ಮವಿದೆ. ಅಂತೆಯೇ ವೀರಶೈವ ಸಂಸ್ಕೃತಿಯು ಪುಣ್ಯಪಾಪಗಳನ್ನು ಮೀರಿನಿಂತಿದೆ. “ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿ ಸತ್ಯವಾಗಿದೆ. ಪ್ರತಿಯೊಬ್ಬನೂ ಗುರುಪಾದಪದ್ಮ ಸೇವೆಯನ್ನು ಬಯಸಬೇಕು. ಗುರುಪಾದ ಸನ್ನಿಧಿಯು ಭವರೋಗವನ್ನು ಕಳೆಯುವದು. ಭೌತಿಕದ ಆಶೆಯನ್ನುಬಿಡಿಸುವದು. ಭವ-ಮರಣವನ್ನು  ನಿವಾರಿಸುವದು. ಗುರುಪಾದ ಸನ್ನಿಧಿಯು ಚಿನ್ನಿಧಿಯಂತೆ ಸದಾ ಬೆಳಗಿಸಬಲ್ಲದು. ಪರಮ ಪೂಜ್ಯ ಗುರುವರರು ಅರಸರ ಹಿಂದೆ, ಗುರುಗಳ ಮುಂದೆ” ಇರಬೇಕೆಂದು ಅಪ್ಪಣೆ ಮಾಡುತ್ತಿದ್ದರು. ಅರಸ ಕ್ಷಣಚಿತ್ತದವ; ಯಾವಕಾಲಕ್ಕೆ ಏನು ಆಜ್ಞೆಯನ್ನುಮಾಡುವನೋ ತಿಳಿಯದು. ಒಮ್ಮೆ ಲಾಭವಾಗಬಹುದು, ಮತ್ತೊಮ್ಮೆ ಹಾನಿಯಾಗಬಹುದು. ಅದಕ್ಕಾಗಿ ಅವರು ನಡೆದಂತೆ ಹಿಂಬಾಲಿಸುವದೇ ಸುಗಮದಾರಿ. ಆದರೆ ಗುರುಗಳ ಮುಂದೆ ಸೇವಾತತ್ಪರರಾಗಿದ್ದರೆ; ಗುರುಸನ್ನಿಧಿಯಲ್ಲಿ ಕಾಯಕ ತತ್ಪರನಾಗಿದ್ದರೆ ಗುರುಕೃಪೆ ಅವಶ್ಯವಾಗಿ ಘಟಿಸುವದು. ಗುರು ಕೃಪಾದೃಷ್ಟಿ ಹರಿದುಬರುವದು. ಆದ್ದರಿಂದ ಗುರುಸನ್ನಿಧಿಯ ಮಹತ್ವ ಅಪಾರವಾಗಿದೆ, ಅನುಪಮವಾಗಿದೆ. ಇದನ್ನರಿತ ಶಿವಕವಿಗಳು ಗುರುಪಾದಪದ್ಮ ಸನ್ನಿಧಿಯನ್ನು ಬಯಸಿದರು. ಕರುಣಾಮಯ ಗುರುವು ಪಾದಸನ್ನಿಧಿಯನ್ನು ಬಯಸಿಬಂದ ಭಕ್ತನನ್ನು ಉದ್ಧರಿಸದೇ ಬಿಡನೆಂಬ ದೃಢ ವಿಶ್ವಾಸವೂ ಅವರಲ್ಲಿ ವ್ಯಕ್ತವಾಗುತ್ತದೆ

ಲೇಖಕರು : ಪೂಜ್ಯ ಲಿಂ.ವ್ಯಾಕರಣಾಳು ಸಿದ್ಧಲಿಂಗ ಪಟ್ಟಾಧ್ಯಕ್ಷರು

ಬೆಳಗಿನ ೬-೩೦ ರ ಗಂಟೆಯಾಗುತ್ತಲೆ ವಟುಗಳು ಮತ್ತು ಸಾಧಕರು ತಮ್ಮ ತಮ್ಮ ಆಸನಗಳೊಂದಿಗೆ

ಕಲ್ಲುಮಠದ ಪಟಾಂಗಣದಲ್ಲಿ ಬಂದು ಸಾಲಾಗಿ ನಿಂತು ವಂದನೆಯ ಮುದ್ರೆಯೊಂದಿಗೆ ಶಿವಯೋಗ

ಮಂದಿರದ ಗೀತೆಗಳನ್ನು ಹಾಡಿದ ನಂತರ

ಗುರುದೇವೋ ಮಹಾದೇವೋ ಗುರುದೇವಃ ಸದಾಶಿವಃ

ಗುರುದೇವಾತ್ಪರಂ ನಾಸ್ತಿ ತಸ್ಮೈ ಶ್ರೀ ಗುರವೇ ನಮಃ,

ಎಂದು ಶ್ರೀ ಸದಾಶಿವ ಗುರುದೇವವನ್ನು ಭಕ್ತಿ ಭಾವದಿಂದ ಸ್ಮರಿಸಿ ಸೆಕ್ರೆಟರಿ ಸಾಧಕರೊಬ್ಬರ ಹಿರಿಯತನದಲ್ಲಿ ಯೋಗಾಸನಗಳನ್ನು ಹಾಕಲು ಪ್ರಾರಂಭಿಸುತ್ತಾರೆ.

ಹಠಯೋಗವು ಶಿವಯೋಗಕ್ಕೆ ಸಹಕಾರಿಯಾಗಿದೆ. ಆದುದರಿಂದ ಪರಮ ಪೂಜ್ಯ ಲಿಂ. ಹಾನಗಲ್ಲ

ಕುಮಾರ ಮಹಾಸ್ವಾಮಿಗಳವರು ಶಿವಯೋಗಮಂದಿರದಲ್ಲಿಯ ಶಿವಯೋಗಸಾಧಕರ ನಿತ್ಯದ ಕಾರ್ಯಕ್ರಮ ಗಳಲ್ಲಿ ಯೋಗಾಸನಗಳಿಗೆ ಪ್ರಥಮ ಸ್ಥಾನವನ್ನು ಕಲ್ಪಿಸಿದ್ದಾರೆ. ಇಲ್ಲಿ ಶಿವಯೋಗ ಸಾಧಕರು ಮತ್ತು ವಟುಗಳು ಪ್ರತಿನಿತ್ಯ ಮುಂಜಾನೆ ಯೋಗಾಸನಗಳನ್ನು ಮಾಡಿಯೇ ಮುಂದಿನ ಪಾಠಪ್ರವಚನಾದಿ ಕಾರ್ಯಗಳನ್ನು  ಪ್ರಾರಂಭಿಸುತ್ತಾರೆ.

ಪಾತಂಜಲಯೋಗದ ಯಮಾದಿ ಅಷ್ಟಾಂಗಗಳಲ್ಲಿ ಆಸನವು ಮೂರನೆಯದು, ನಿರೋಗವಾದ ಶರೀರವೆ ಧರ್ಮಕ್ಕೆ ಮೊದಲ ಸಾಧನ. ರೋಗದಿಂದ ಚಿತ್ತ ವಿಕ್ಷೇಪ ಉಂಟಾಗುತ್ತದೆ. ಅದನ್ನು ಕಳೆದು ಶರೀರವನ್ನು ಸ್ವಸ್ಥವನ್ನಾಗಿಡಲು ಯೋಗಾಸನಗಳು ಪರಮೋಪಾಯ, ಆಸನಗಳು ಸಾತ್ವಿಕ ಅಂಗಸಾಧನೆಗಳು.ಶರೀರದ ಅಂಗಾಂಗಗಳಿಗೆಲ್ಲ ಸಮನಾದ ವ್ಯಾಯಾಮವು ಆಸನಗಳಿಂದ ದೊರೆಯುತ್ತದೆ.

ಆಸನಗಳ ಮಹತ್ವವನ್ನು ಗುರು ಮುಖದಿಂದ ತಿಳಿದು ನಿತ್ಯವೂ ನಿಯಮಿತವಾಗಿ ಅಭ್ಯಾಸ ಮಾಡಬೇಕು. ಅದರಿಂದ ನಾಡಿಗಳು ಪರಿಶುದ್ಧವಾಗಿ ಶರೀರವು ಹಗುರಾಗುತ್ತದೆ; ಹಸಿವೆ ಹೆಚ್ಚುತ್ತದೆ; ಜಾಡ್ಯವು ದೂರಾಗುತ್ತದೆ. ಹಠಯೋಗದಲ್ಲಿ ಆಸನವೆ ಪ್ರಥಮಾಂಗ (ಹ.ಪ್ರ. ಪ್ರಥಮ ಉಪದೇಶ) ವಸಿಷ್ಠ ಮತ್ಸೇಂದ್ರ ಮೊದಲಾದ ಮುನಿಗಳು ಅನೇಕ ಆಸನಗಳನ್ನು ಕಂಡುಹಿಡಿದು ಅವುಗಳ ಸಾಧನೆಯಿಂದ ಸಿದ್ಧಿಯನ್ನು ಪಡೆದಿದ್ದಾರೆ. ಪ್ರಾಣಾಯಾಮ

ಸಾಧನೆಗೆ ಆಸನ ಪ್ರಥಮೋಪಾಯ, ಈ ಯೋಗಾಸನಗಳು ೮೪ ಎಂದು ಪರಿಗಣಿತವಾಗಿವೆ.

(೧) ಸಿದ್ಧಾಸನ,

(೨) ಮತಾಂತರ ಸಿದ್ಧಾಸನ,

(೩) ಶಿರಸಿದ್ಧಾಸನ,

(೪) ಸ್ವಸ್ತಿಕಾಸನ,

 (೫) ವೀರಾಸನ,

(೬) ಸುಖಾಸನ,

(೭) ಪದ್ಮಾಸನ,

(೮) ಬದ್ಧಪದ್ಮಾಸನ,

(೯) ಕುಕ್ಕುಟಾಸನ,

(೧೦) ಗರ್ಭಾಸನ,

(೧೧) ಟಿಟ್ಟಿಭಾಸನ

(೧೨) ಗ್ರಂಥಿಕಾಸನ,

(೧೩) ಮತ್ಸ್ಯಾಸನ,

(೧೪) ಮತಾಂತರ ಮಾಸನ,

(೧೫) ಕೂರ್ಮಾಸನ,

(೧೬) ವೃಕ್ಷಾಸನ,

(೧೭) ಹಸ್ತ ವೃಕ್ಷಾಸನ,

(೧೮) ಮುಕ್ತ ಹಸ್ತ ವೃಕ್ಷಾಸನ,

(೧೯) ಶಲಭಾಸನ,

(೨೦) ಶ್ರೀ ಪಾದಧನುರಾಸನ,

 (೨೧) ಏಕ ಪಾದ ದೀರ್ಘಾಸನ,

(೨) ದೀರ್ಘಪಾದ ಅಂಗುಷ್ಠಾಸನ,

(೨೩) ಪಶ್ಚಿಮೋತ್ಥಾನಾಸನ

 (೨೪) ಉಭಯಪಾದ ಶಿರಾಸನ,

 (೨೫) ಉತ್ಥಾನ ವಿಶಾಲ ಪಾದಾಸನ,

(೨೬) ಏಕಪಾದ ಭುಜಾಸನ,

(೨೭) ಉಭಯಪಾದ ಶಿರಾಸನ,

 (೨೮) ಉತ್ಥಾನ ಪಾದ ಶಿರಾಸನ,

(೨೯) ಸುಪ್ತಶಿರಾಸನ

(೩೦) ಗರುಡಾಸನ

(೩೧) ಭುಜಂಗಾಸನ

 (೩೨) ಹಂಸಾಸನ

 (೩೩) ಸರ್ವಾಂಗಾಸನ,

(೩೪) ಹಲಾಸನ,

(೩೫) ಪ್ರಾಣಾಸನ,

(೩೬) ಶ್ವಾಸಗಮನಾಸನ,

(೩೭) ಅಂಗುಷ್ಠಾಸನ,

(೩೮) ವಾತಾಯನಾಸನ,

 (೩೯) ಗೋಮುಖಾಸನ,

(೪೦) ಜಾನ್ಸಾಸನ,

(೪೧) ಅರ್ಧ ಶವಾಸನ,

(೪೨) ಊರ್ಧ್ವಪದ್ಮಾಸನ,

 (೪೩) ಪವನಮುಕ್ತಾಸನ,

 (೪೪) ಸಿಂಹಾಸನ,

 (೪೫) ಚಕ್ರಾಸನ,

(೪೬) ದೃಢಾಸನ,

(೪೭) ಶವಾಸನ,

(೪೮) ವಜ್ರಾಸನ,

 (೪೯) ಸುಪ್ತವಜ್ರಾಸನ,

 (೫೦) ಉಷ್ಟ್ರಾಸನ,

 (೫೧) ಗೋರಕ್ಷಾಸನ,

(೫೨) ಭದ್ರಾಸನ,

(೫೩) ಮಂಡೂಕಾಸನ,

 (೫೪) ತಾಡಾಸನ,

 (೫೫) ಉತ್ಥಾನತಾಡಾಸನ,

(೫೬) ತೋಲಾಸನ,

(೫೭) ಅರ್ಧಪಾದಾಸನ,

 (೫೮) ಮಯೂರಾಸನ,

(೫೯) ಪದ್ಮಾಸನಯುಕ್ತ ಮಯೂರಾಸನ,

(೬೦) ಉತ್ಕಟಾಸನ,

(೬೧) ಮತಾಂತರ

(೬೧) ಮತಾಂತರ ಶಲಭಾಸನ,

(೬೨) ಧನುರಾಸನ,

(೬೩) ಊರ್ಧ್ವಧನುರಾಸನ,

(೬೪) ಯೋಗ ನಿದ್ರಾಸನ,

(೬೫) ಅಪಾನಪಾದಾಸನ,

(೬೬) ಧ್ಯಾನಾಸನ,

(೬೭) ಪ್ರಾರ್ಥನಾಸನ,

 (೬೮) ಭೇಕಾಸನ,

(೬೯) ವೃಶ್ಚಿಕಾಸನ,

 (೭೦) ಪಾರ್ಶ್ವಾಸನ,

(೭೧) ದಕ್ಷಿಣಪಾದ ಪಾರ್ಶ್ವಾಸನ,

(೭೨) ವಾಮಪಾದ ಪಾರ್ಶ್ವಾಸನ

(೭೩) ತ್ರಿಕೋಣಾಸನ,

(೭೪) ದಕ್ಷಿಣಪಾದ ತ್ರಿಕೋಣಾಸನ,

(೭೫) ವಾಮಪಾದ ತ್ರಿಕೋಣಾಸನ,

 (೭೬) ಮತ್ಸೆಂದ್ರಾಸನ,,

 (೭೭) ವಾಮಪಾದ ಮತ್ಸೆಂದ್ರಾಸನ,,

(೭೮) ಭುಜಾಸನ,

 (೭೯) ವಾಮಪಾದ ಭುಜಾಸನ,

(೮೦) ದಕ್ಷಿಣಪಾದ ಭುಜಾಸನ,

(೮೧) ಉಭಯಪಾದ ಭುಜಾಸನ,

 (೮೨) ಉತ್ಥಾನ ಭುಜಾಸನ,

 (೮೩) ಕಂದಪೀಡಾಸನ,

(೮೪) ಮತಾಂತರ ಕಂದಪೀಡಾಸನ.

ಪ್ರತಿನಿತ್ಯ ಆಸನಗಳನ್ನು ಹಾಕುವ ಕ್ರಮವು ಕೆಳಗಿನಂತಿದೆ :

ಸೋಮವಾರ ಹಾಕುವ ಆಸನಗಳು :

೧ ಸಿದ್ಧಾಸನ, ೨. ಶಿರಸಿದ್ಧಾಸನ, ೩ ಬದ್ಧಪದ್ಮಾಸನ, ೪. ಊರ್ಧ್ವಪದ್ಮಾಸನ, ೫ ಗರ್ಭಾಸನ; ಮಂಗಳವಾರ :

೧. ಕುಕ್ಕುಟಾಸನ, ೨. ಗ್ರಂಥಿಕಾಸನ, ೩ ಉತ್ಕಟಾಸನ, ೪, ಗೋಮುಖಾಸನ, ೫. ಕೂರ್ಮಾಸನ, ಬುಧವಾರ

೧ ಭುಜಾಸನ, ೨. ತೋಲಾಸನ, ೩. ಗೋರಕ್ಷಾಸನ, ೪. ವೃಕ್ಷಾಸನ, ೫. ವಜ್ರಾಸನ,

 ಗುರುವಾರ :

೧ ಟಿಟ್ಟಿಭಾಸನ ೨. ವಾತಾಯನಾಸನ, ೩ ಗೋರಕ್ಷಾಸನ, ೪, ವೃಕ್ಷಾಸನ, ೫. ಶಿರಾಸನ;

 ಶುಕ್ರವಾರ:

೧. ಸ್ವಸ್ತಿಕಾಸನ, ೨. ಹಸ್ತವೃಕ್ಷಾಸನ, ೩. ದೀರ್ಘಪಾದಾಸನ, ೪. ಉತ್ಥಾನ ಶಿರಾಸನ, ೫. ಚಕ್ರಾಸನ;

ಶನಿವಾರ :

೧. ಧನುರಾಸನ, ೨. ಹಂಸಾಸನ, ೩. ಪಶ್ಚಿಮೊತ್ಥಾನಾಸನ, ೪ ಮತ್ಸ್ಯಾಸನ, ೫ ಅಂಗುಷ್ಠಾಸನ;

೧ ಗರುಡಾಸನ, ೨. ಊರ್ಧ್ವಧನುರಾಸನ, ೩. ಸರ್ವಾಂಗಾಸನ, ೪. ಉಷ್ಟ್ರಾಸನ,

೫. ಶಲಭಾಸನ, ಇವೆಲ್ಲ ಆಸನಗಳನ್ನು ಎರಡು ಮಿನಿಟಿಗೊಂದರಂತೆ ಹಾಕಬೇಕು. ಇವಲ್ಲದೆ ಪ್ರತಿನಿತ್ಯವೂ

೧. ವೃಶ್ಚಿಕಾಸನ, ೨. ಮಯೂರಾಸನ, ೩. ತ್ರಿಕೋಣಾಸನ, ೪, ಪಾರ್ಶ್ವಾಸನ, ೫, ಮತ್ಸೇಂದ್ರಾಸನ ಮತ್ತು

೬ ಕಂದಪೀಡಾಸನ, ಈ ಆರು ಆಸನಗಳನ್ನು ಮೂರು ಮಿನಿಟಿಗೊಂದರಂತೆ ತಪ್ಪದೇ ಹಾಕುವ ಕ್ರಮವಿದೆ.

ಈ ಆಸನಗಳನ್ನು ಹಾಕುವಾಗ ನಾಸಿಕಾಗ್ರ, ಊರ್ಧ್ವ, ಪೌರ್ಣಿಮೆ, ಮತ್ತು ಅಮಾವಾಸ್ಯೆ ದೃಷ್ಟಿಗಳು; ಜಿಹ್ವಾ ಮತ್ತು ಮೂಲ ಮೊದಲಾದ ಬಂಧಗಳು; ವಂದನಾದಿ ಮುದ್ರೆಗಳೂ ಅನಿವಾರ್ಯವಾಗಿ ಬೇಕು. ಅದೆಲ್ಲ ಕ್ರಮವನ್ನು ಗುರುಮುಖವಾಗಿ ತಿಳಿದು ಸಾಧನೆ ಮಾಡಬೇಕು. ವಾರದಲ್ಲಿ ೮೪ ಆಸನಗಳನ್ನು ಹಾಕಿ ಮುಗಿಸುವ ಕ್ರಮವರಿತ ಯೋಜನೆಯಿದೆ.

ಇವುಗಳಲ್ಲಿ ಸಿದ್ಧಾಸನವು ಬಹಳ ಶ್ರೇಷ್ಠವಾದುದು. ಸಿದ್ಧಾಸನದ ಅಭ್ಯಾಸದಿಂದ ಯೋಗಿಯು ಸಿದ್ಧಿಯನ್ನು ಪಡೆಯುತ್ತಾನೆ. ‘ಏತನ್ಮೋಕ್ಷಕವಾಟ ಭೇದಜನಕಂ ಸಿದ್ಧಾಸನಂ ಪ್ರೋಚ್ಯತೆ ‘ ಎಂದು ಹಠಯೋಗ ಪ್ರದೀಪಿಕೆಯಲ್ಲಿ (ಹ. ಪ್ರ. ಉ. ೧, ೩೫) ಇದರ ಸತತ ಮತ್ತು ನಿಯಮಿತ ಸಾಧನೆಯಿಂದ ಚಿತ್ತಚಾಪಲ್ಯವು ನಿಂತು ಹೋಗುತ್ತದೆ. ಇದೊಂದು ಆಸನವನ್ನು ಬಿಟ್ಟು ಉಳಿದ ಹಗುರಾದ ಆಸನಗಳನ್ನು ಗೃಹಸ್ಥರೂ ಹಾಕಬಹುದು.

ಶೀರ್ಷಾಸನವು ತಲೆನೋವು, ದೃಷ್ಟಿಮಾಂದ್ಯವನ್ನು ಕಳೆಯುತ್ತದೆ. ಮಯೂರಾಸನ, ಸರ್ವಾಂಗಾಸನಗಳು ಮಲಬದ್ಧತೆಯನ್ನು ಕಳೆಯುತ್ತವೆ. ಲಿಂ. ಪೂಜ್ಯಪಾದರು ೧೦೮ ಆಸನಗಳನ್ನು ಕಲ್ಪಿಸಿ ಸಾಧಕರಿಂದ ಹಾಕಿಸುತ್ತಿದ್ದರು.