ರಚನೆ: ಗುರು ಪಾದ ಸೇವಕ
ಶ್ರೀ ರೇವಣಸಿದ್ದಯ್ಯ ಹಿರೇಮಠ
ಆಕಾಶವಾಣಿ ಕಲಾವಿದರು ಚಿಂಚೋಳಿ
ಕಲಿಯುಗದಿ ಸತ್ಯ ಸಾರಿದ ಕಾರಣಿಕ ಶಿವಯೋಗಿ |
ಕಾವಿ ಲಾಂಛನಕ್ಕೆ ಬೆಲೆ ತಂದ ಸಮರ್ಥ ಗುರುವಾಗಿ |
ಅರಿವು ಆಚಾರ ಶುಚಿಯಾಗಿಸಿದ ಸಮಾಜ ಜಾಗ್ರತೆಗಾಗಿ |
ವಿಶ್ವಮಾನ್ಯ ವ್ಯಕ್ತಿತ್ವದ ವೀರಶೈವ ಧರ್ಮದ ನಿಜಯೋಗಿ ||ಪ||
ಭರತ ಖಂಡದಲ್ಲಿ ಅಧ್ಯಾತ್ಮ ನಕ್ಷತ್ರದ ಜೊತಿಯಾಗಿ|
ಆಧ್ಯಾತ್ಮಿಕ ಸಿರಿಯಲ್ಲಿ ವಿಶ್ವದೆತ್ತರಕ್ಕೆ ತಾ ಬೆಳಗಿ|
ಘನವಂತ ಗುಣವಂತ ದಯಾವಂತ ಸ್ವಾಮಿಯಾಗಿ|
ಜನ ಮನ ಕೊಟಿಯ ಸತ್ಯಯುಗದ ಶ್ರೇಷ್ಠಯೋಗಿ ||೧||
ಜಗದ ಲೇಸನೆ ಬಯಸಿದ ವಿರಾಟ್ಟುರದ ಯತಿಯಾಗಿ |
ಬರದ ಭವಣೆ ನೀಗುವರೆಗೆ ಲೋಟ ಗಂಜಿ ಕುಡಿದ ಹಠಯೋಗಿ |
ಪೂರ್ಣ ಬ್ರಹ್ಮ ನಿರಾಕಾರ ಮೂರ್ತಿ ಲಿಂಗವೆಂದರುಹಿದ ಲಿಂಗಾಗಿ |
ವೀರಶೈವ ವಿಶ್ವಧರ್ಮವೆಂಬ ಸತ್ಯ ಸಾರಿದ ಕುಮಾರ ಶಿವಯೋಗಿ ||೨||
ಧರ್ಮತತ್ವ ಭೋಧೆಗೈವ ಧರ್ಮಸಭೆ ರಚಿಸಿದ ಶಿವಯೋಗಿ |
ವೀರ ವೈರಾಗ್ಯದ ಅಪರಂಜಿ ರನ್ನ ಜೊತಿ ನಿಜ ವಿರಕ್ತನಾಗಿ |
ಗುರುವಿರಕ್ತರ ಹೃದಯದಿ ಬೆಳಗುತ್ತಿದೆ ನಿರಂಜನ ನಂದಾದೀಪವಾಗಿ |
ಕರ ಮುಗಿದು ಬರೆದನು ಪುಟ್ಟ ರಸಿಕನು ಮಂದಿರದ ಶಿಶುವಾಗಿ ||೩||