ಇಂಗ್ಲೀಷ ಮೂಲ: ಶ್ರೀಕಂಠ ಚೌಕೀಮಠ
ಕನ್ನಡ ಭಾಷಾಂತರ :ಶ್ರೀ ಎಮ್.ಎ.ಹಿರೇವಡೆಯರ
“ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾದಾಗಲೆಲ್ಲ ನಾನು ನನ್ನ ಸ್ವರೂಪವನ್ನು ತೊರಿಸುತ್ತೇನೆ. ಸಾಧು ಪುರುಷರನ್ನು ಉದ್ಧ್ದರಿಸುವುದಕ್ಕಾಗಿ, ಪಾಪಕರ್ಮ ಮಾಡುವವರನ್ನು ವಿನಾಶಮಾಡಲಿಕ್ಕಾಗಿ ಮತ್ತು ಧರ್ಮವನ್ನು ಸದೃಢವಾಗಿ ಸ್ಥಾಪಿಸುವದಕ್ಕಾಗಿ ಸಾಕಾರ ರೂಪದಿಂದ ನಾನು ಯುಗ-ಯುಗಗಳಲ್ಲಿ ಪ್ರಕಟವಾಗುತ್ತಿರುತ್ತೇನೆ.
ಕನ್ನಡನಾಡಿನ ಇಪ್ಪತ್ತ್ತನೆಯ ಶತಮಾನದ ಅವಿಸ್ಮರಣೀಯ ಕಾಲಘಟ್ಟದಲ್ಲಿ ನಾಡೇ ಕಂಡರಿಯದ ಮಾನವತಾವಾದಿ, ಹೊಸಯುಗವೊಂದನ್ನು ಹುಟ್ಟು ಹಾಕಿ, ಶಿವಶರಣರ ಬದುಕಿನ ಮೌಲ್ಯಗಳನ್ನು ಉತ್ತಿಬಿತ್ತಿ ಬೆಳೆದು, ಸ್ವಾರ್ಥರಹಿತ ಅರ್ಥಪೂರ್ಣವಾದ ಬಾಳನ್ನು ಬೆಳಗಿದ, ಕಾರಣಿಕ ಯುಗ ಪುರುಷ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು. ಸಮಸ್ತ ಮಾನವ ಕುಲದ ತಾತ್ವಿಕ, ಸಾಮಾಜಿಕ ಸಮಸ್ಯೆಗಳ ಕುರಿತು ಬಿಚ್ಚು ಮನಸ್ಸಿನ ಚರ್ಚಗೆ ಉತ್ತಮ ವಾತಾವರಣವನ್ನು ನಿರ್ಮಿಸಿದರು. ವ್ಯಷ್ಠಿ ಯಿಂದ ಸಮುಷ್ಠಿಯುತ್ತ ಚಿಂತನೆ ರೂಪಿಸಿದ ಮಹಾಶಕ್ತಿಯಾಗಿ ಹೊರಹೊಮ್ಮಿದರು.
19ನೇ ಶತಮಾನದ ಉತ್ತರಾರ್ಧದಲ್ಲಿ ಜನಿಸಿ, 20ನೇಯ ಶತಮಾನದ ಪೂರ್ವಾರ್ಧಭಾಗದವರೆಗೆ ಜೀವಿಸಿದ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು ಈ ನಾಡಿನ ಯಾವದೇ ಒಂದು ಭಾಗ ಅಥವಾ ಕಾಲಕ್ಕೆ ಸಂಬಂಧ ಪಟ್ಟವರಲ್ಲ ,ಅವರು ಸಮಗ್ರ ಮನುಕುಲಕ್ಕೆ ಸಂಭಂಧ ಪಟ್ಟವರು. ಶ್ರೀ ಕುಮಾರ ಶಿವಯೋಗಿಗಳ ಜೀವನ ಅವಿಸ್ಮರಣೀಯ, “ಸಮಾಜಸೇವೆಯೇ ಶಿವಪೂಜೆ” ಎಂಬ ಸೂಕ್ತಿ ಇವರಿಗೆ ಸಹಜವೆಂಬಂತೆ ಸಂದಿದೆ.
ಹಾವೇರಿ ಜಿಲ್ಲೆಯ ಜೋಯಿಸರ ಹರಳಹಳ್ಳಿ ಎಂಬ ಪುಟ್ಟ ಹಳ್ಳಿಯ ಬಡ ಕುಟುಂಬ ಒಂದರಲ್ಲಿ, ಆತ್ಮಬಲ ಆಧ್ಯಾತ್ಮ ಸಾಧನೆಯಲ್ಲಿ ಜೀವಿಸುತ್ತಿದ್ದ ಬಸಯ್ಯ-ನೀಲಮ್ಮ ಎಂಬ ದಂಪತಿಗಳ ಪವಿತ್ರ ಗರ್ಭದಲ್ಲಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳ ಜನನವಾಯಿತು.
ಅಂದೊಂದು ದಿನ ರಾತ್ರಿ ಒಬ್ಬ ಜಂಗಮ ಶಿವಯೋಗಿ ತಾಯಿ ನೀಲಮ್ಮನ ಕನಸಿನಲ್ಲಿ ಕಂಡು, ಸುಂದರವಾದ ಸುವಾಸನೆಯ ಹೂವೊಂದನ್ನು ಕೊಟ್ಟು “ತಾಯಿ ನೀಲಮ್ಮ ನಿನ್ನ ಗರ್ಭದಲ್ಲಿ ಶಿವನ ಅಪೇಕ್ಷೆಯ ಮೇರೆಗೆ ಕಾರಣಿಕ ಪುರುಷನ ಜನನ ವಾಗುವುದೆಂದು” ಹೇಳಿದ ವಾಣಿ ಹೊಸಯುಗದ ನಾಂದಿ ಹಾಡಿತು.
ಪ್ರಭನಾಮ ಸಂವತ್ಸರ ಭಾದ್ರಪದ ಶುಕ್ಲ ಪಕ್ಷ ತ್ರಯೋದಶಿಯ ಬುಧವಾರ ಬೆಳಗಿನಜಾವದಲ್ಲಿ ಸಪ್ಟಂಬರ 11ರಂದು, ಕ್ರಿ.ಶ, 1867ರಲ್ಲಿ ಶ್ರೀ ಕುಮಾರ ಶಿವಯೋಗಿಗಳ ಜನನವಾಯಿತು. ಹುಟ್ಟಿದ ಮಗುವಿಗೆ ಹಾಲಯ್ಯ ನೆಂದು ನಾಮಕರಣ, ಹುಟ್ಟಿನಿಂದಲೇ ಅದ್ಭುತಗಳನ್ನು ಮೆರೆದ ಮಗು ಹುಣ್ಣಿಮೆಯ ಚಂದ್ರನಂತೆ ಅರಳಿ, ಆರುವರ್ಷಗಳು ತುಂಬಿದಾಗಲೇ ಓದು-ಬರಹಗಳಲ್ಲಿ ಪ್ರಾವಿಣ್ಯತೆಯನ್ನು ಪಡೆದ ಹಾಲಯ್ಯನಿಗೆ ಅಕ್ಷರ ದೀಕ್ಷೆ ನೀಡಿದವರು ಮನೆಯನ್ನೆ ಶಾಲೆಯನ್ನಾಗಿ ಮಾಡಿದ ಅಜ್ಜ ಕೊಟ್ಟೂರು ಬಸವಾರ್ಯರು.
ಹುಟ್ಟಿನಿಂದಲೇ ತ್ಯಾಗ ಮನೋಭಾವನೆಯನ್ನು ಹೊತ್ತು ತಂದ ಹಾಲಯ್ಯ ಸುತ್ತಲಿನ ಪ್ರಪಂಚವನ್ನು ಕರುಣೆÂ ಪ್ರೀತಿಗಳಿಂದಲೇ ಕಾಣುತ್ತ ಬೆಳೆದವರು. ವಿನಯಶೀಲತೆ ಅನುಕಂಪ ಹಾಲಯ್ಯನ ಹುಟ್ಟುಗುಣಗಳು. ಆಗಾಗ ಧ್ಯಾನಾಸಕ್ತನಾಗಿ ಮೌನದಲ್ಲಿಯೇ ಮುಳಗುತ್ತಿದ ಹಾಲಯ್ಯ ಬೆಳೆದಂತೆ ಬೇರೆಯವರೊಡನೆ ಆಡುವ ಆಟಪಾಠಗಳನ್ನು ತ್ಯಜಿಸಿ ಮೌನಿಯಾಗಿ ಜೀವಿಸಹತ್ತಿದ. ಶಾಲಾ ಅಭ್ಯಾಸದಲ್ಲಿ ಅಭಿರುಚಿ ಇದ್ದರೂ, ತ್ಯಾಗ, ಅನುಕಂಪ, ಆತ್ಮಜ್ಞಾನಗಳಕಡೆಗೆ ಬಾಲಕನ ಒಲವು ಇದ್ದಂತೆ ಭಾಸವಾಗುತ್ತಿತ್ತು.
ಹಾಲಯ್ಯ ಹುಟ್ಟಿದ ಕುಟುಂಬ ಬಡತನದಲ್ಲಿಯೇ ಮುಳುಗಿ ಏಳುವ ಆ ಕರುಣಾಜನಕ ಸ್ಥಿತಿಯಲ್ಲಿ ಮತ್ತೊಂದು ಕರುಣಾಜನಿಕ ಘಟನೆಯನ್ನು ದೈವಿಶಕ್ತಿ ತಂದೊಡ್ಡಿತು. ತಂದೆ ಬಸಯ್ಯನವರ ಅಕಾಲಿಕ ಮರಣ, ತಾಯಿಗೆ ಸಿಡಿಲು ಬಡಿದಂತಾಯಿತು. ಇದನ್ನು ಕಂಡುಂಡ ಬಾಲಕ ಹಾಲಯ್ಯನ ಅಂತರಂಗದ ತುಡಿತ ಒóಂದು Pಡೆಯಾದರೆ ಬಡತನದ ತುಳಿತ ಮತ್ತೊಂದು ಕಡೆ.
ಕಂತೆ ಭಿಕ್ಷವೇ ಮನೆತನದ ಬಡತನ ಕಳೆಯುವ ಜೀವನಾಧಾರ ಮತ್ತು ಶಿವನ ಉಂಬಳಿ ಎಂಬಂತೆ, ಮನಸ್ಸ್ಸಿಲ್ಲದಿದ್ದರೂ ಮನೆ ಮನೆಯ ಕಂತೆ ಭಿಕ್ಷಕ್ಕೆ ಹೊರಟ ಬಾಲಕ ಹಾಲಯ್ಯನಿಗೆ ಒಂದು ಘಟನೆ ಬಯಸದೆ ಬಂದ ಭಾಗ್ಯವಾಗಿ ಬಂದಿತು. ಆ ಘಟನೆ ಬಾಲಕ ಹಾಲಯ್ಯನ ಜೀವನದ ಹೊಸ ಘಟ್ಟಗಳಿಗೆ ನಾಂದಿ ಹಾಡಿತು. ಬಾಗಿಲು ಬಳಿ ನಿಂತ ಹಾಲಯ್ಯನಿಗೆ, ಭರಮಪ್ಪನೆಂಬ ಯಜಮಾನನ ಭಾರವಾದ ಮಾತುಗಳು ಹೊಸ ದಿಕ್ಕನ್ನೆ ತೋರಿಸಿತು.” ಈಗ ನಿನಗೆ 12 ವರ್ಷಗಳು ತುಂಬಿವೆ, ಇನ್ನೂ ಎಷ್ಟುದಿನ ಭಿಕ್ಷೆಬೇಡಿ ಜೋಳಿಗೆ ತುಂಬುವ ಸಾಹಸ ಮಾಡುವೆ? ಹೋಗು ಬದುಕಲು ಶಿಕ್ಷಣದ ಮೊರೆ ಹೋಗು ” ಎಂಬ ಬಿರು ನುಡಿಗಳು ಬಾಲಕನ ಮೇಲೆ ಪರಿಣಾಮ ಬೀರಿ ಎಚ್ಚರಗೊಳ್ಳುವಂತೆ ಮಾಡಿದವು. ಹಾಲಯ್ಯನ ಮನದಂಗಳಲ್ಲಿ ಭರಮಪ್ಪನ ಬಿರುನುಡಿಗಳು ಪ್ರತಿಧ್ವನಿಸ ತೊಡಗಿದವು.
ಮರುದಿನ ಬಟ್ಟೆ ತೊಳೆಯಲೆಂದು ಊರಹೊರಗಿನ ಬಾವಿಗೆ ಹೋದ ಹಾಲಯ್ಯ ಮರಳಿ ಮನೆಗೆ ಬರಲಿಲ್ಲಿ. ಬಟ್ಟೆತೊಳೆಯುವ ಕೆಲಸ ಮುಗಿಸಿ, ಅವುಗಳನ್ನು ಮನೆಗೆ ಮುಟ್ಟಿಸುವ ಜವಾಬ್ದಾರಿಯನ್ನು ಮಿತ್ರರೊಬ್ಬರಿಗೆ ಹೊರಸಿ ಹಾಲಯ್ಯ, ಕಜ್ಜರಿ ಎಂಬ ಊರಿಗೆ ಕಾಲುನಡಿಗೆಯ ಪ್ರಯಾಣ ಬೆಳೆಸಿದ. ಎಲ್ಲಿಗೆ ಹೋಗಲಿ…? ಹಾಲಯ್ಯನ ಅಂತರಂಗದ ಪ್ರಶ್ನೆ ಮೈಮನಗಳೆಲ್ಲ ತತ್ತರಿಸಿದರೂ ತಾಳ್ಮೆಗೆಡದ ಹಾಲಯ್ಯ ಮಾರ್ಗದ ಬದಿಗಿದ್ದ ಮರದ ಕಟ್ಟೆಯ ಮೇಲೆ ಕೈಕಟ್ಟಿಕೊಂಡು ಕುಳಿತಾಗ ರಾಚಯ್ಯ ಹಿರೇಮಠರೆಂಬ ಯಜಮಾನರು ಹಾಲಯ್ಯನ ಮೈತಟ್ಟಿ ಮಾತನಾಡಿಸಿದರು. ಆತನ ದಿವ್ಯಮುಖದ ತೇಜಸ್ಸಿಗೆ ಮಾರು ಹೋಗಿ, ಮನಕರಗಿದಂತಾಗಿ ಬಾಲಕ ಹಾಲಯ್ಯನನ್ನು ಮನೆಗೆ ಕರೆದುಕೊಂಡು ಹೋದರು, ಹಸಿದ ಹೊಟ್ಟೆಗೆ ಪ್ರಸಾದ ನೀಡಿದ ನಂತರ, ಮನದ ಹಸಿವೆಯನ್ನು ಅರ್ಥಮಾಡಿಕೊಂಡ ರಾಚಯ್ಯ ಹಾಲಯ್ಯನಿಗೆ ಪ್ರಾಥಮಿಕ ಶಿಕ್ಷಣ ಪೂರೈಸುವ ಸರ್ವಾನುಕೂಲತೆಯನ್ನು ಮಾಡಿದರು, ಹಾಲಯ್ಯನಿಗೆ ಎಂದಿಲ್ಲದ ಸಂಬ್ರಮ, ಸಮಾಧಾನ..
ಅಂದಿನಕಾಲದಲ್ಲಿ ಕನ್ನಡ ಏಳನೆ ಇಯತ್ತೆಯ ಮೂಲ್ಕಿ ಪರೀಕ್ಷೆಯಲ್ಲಿ ಪಾಸಾದರೆ ಮಾಮಲೇದಾರನಿಗೆ ಸಿಕ್ಕಷ್ಟು ಗೌರವ, ಕಜ್ಜರಿ ಗ್ರಾಮದಿಂದ 123 ಕಿ.ಮಿ. ದೂರ ಇದ್ದ ಧಾರವಾಡ ಪಟ್ಟಣದಲ್ಲಿ ಮೂಲ್ಕಿ ಪರೀಕ್ಷೆ ಪತ್ರಿಕೆ ಬರೆಯಲು ಕಾಲುನಡಿಗೆಯಿಂದ ಸಹಚರರೊಡನೆ ಹಾಲಯ್ಯ£ವರು ಪ್ರಯಾಣಿಸಿದರು, ಬರಿಗಾಲಿನ ಹಾಲಯ್ಯ ಧಾರವಾಡ ವನ್ನು ಮುಟ್ಟಿ ಪರೀಕ್ಷೆ ಬರೆಯುವಾಗ ಹಾಲಯ್ಯನವರಿಗೆ ಮೈತುಂಬ ಜ್ವರದ ಬಾಧೆ !!s
ದೈವದಾಟವನ್ನು ಅರಿತವರಾರು? ಹಾಲಯ್ಯ ಮೂಲ್ಕಿ ಪರೀಕ್ಷೆಯಲ್ಲಿ ಅನುತ್ತೀರ್uನಾಗಿ ಮೈಮರೆಸಿಕೊಂಡು ಕುಳಿತು ಗಾಡಾಂಧಕಾರದಲ್ಲಿಯೇ ಕಾಲ ಕಳೆಯ ಬೇಕಾಯಿತು. 15 ದಿವಸಗಳವರೆಗೆ ಹಾಲಯ್ಯನಿಗೆ ಎಕಾಂತದ ಆಶ್ರಯ, ಶಿಕ್ಷಕರೊಬ್ಬರು ಬಂದು ಹಾಲಯ್ಯನನ್ನು ಸಂತೈಸಿ ಮೂಲ್ಕಿ ಮರು ಪರೀಕ್ಷೆಗೆ ಕಟ್ಟಲು ಮಮತೆಯಿಂದ ಮನವಲಿಸುವ ಪ್ರಯತ್ನ ಮಾಡಿದರು. ಮರು ಪರೀಕ್ಷೆಗೆ ಕಟ್ಟಲು ಮನಸ್ಸುಮಾಡದ ಹಾಲಯ್ಯನವರಿಗೆ ತಾಯಿಯ ಮನೆಯ ನೆನಪಾಗಿ, ಎನಾದರೊಂದು ಕಾಯಕಮಾಡಿ ಕಾಯವನ್ನು ಕಾಪಾಡುವ ನಿರ್ಣಯದೊಂದಿಗೆ ತಾಯಿಯ ತೌರುಮನೆ ಲಿಂಗದ ಹಳ್ಳಿಗೆ ತೆರಳಿದರು.
ಹಾಲಯ್ಯ ಲಿಂಗದ ಹಳ್ಳಿಯಲ್ಲಿ ಸಣ್ಣಮಕ್ಕಳಿಗಾಗಿ ಶಾಲೆಯನ್ನು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ಕೊಡುವದರ ಜೊತೆಗೆ ಸ್ವ ಅಧ್ಯಯನ ಹಂಬಲದಿಂದ ನಿಜಗುಣ ಶಿವಯೋಗಿಗಳ ತತ್ವಜ್ಞಾನ ಅರಿಯಲು, ಅಲ್ಲಿನ ಹಿರಿಯರಾದ ಬಸಯ್ಯ ನವರ ಸಂಪರ್ಕದಲ್ಲಿ ನಿಜಗುಣರ ತತ್ವ ಶಾಸ್ತ್ರದ ಕವಿತೆಗಳ ಅಧ್ಯಯನ ಪ್ರಾರಂಭಿಸಿದರು.
ಹಾಲಯ್ಯ ಲಿಂಗದ ಹಳ್ಳಿಯಲ್ಲಿರುವೆನೆಂದು ತಿಳಿದ ತಾಯಿ ನೀಲಮ್ಮ ಮಗನನ್ನು ಕಾಣಲು ಅಲ್ಲಿಗೆ ಬರುತ್ತಾರೆ. ಹರೆಯದ ಮಗನನ್ನು ಕಂಡು ಸಂತೋಷಭರಿತಳಾದ ತಾಯಿ ಮಗನ ಮದುವೆಯ ಪ್ರಸ್ತಾಪ ಮಾಡಿದಾಗ ಮಗ ಹಾಲಯ್ಯನಿಂದ ಅತ್ಯಂತ ಅನಿರೀಕ್ಷಿತ ಉತ್ತರವಾಗಿತ್ತು.
“ಮದುವೆ ಮಾಡಿಕೊಂಡು ನಾನು ಸಂತೋಷಪಡಬೇಕಾಗಿಲ್ಲ ನಾನು ಬ್ರಹ್ಮಚಾರಿಯಾಗಿಯೇ ಜನಿಸಿದ್ದೇನೆ. ನಿನ್ನ ಜೀವನ ಪೋಷಣೆಗಾಗಿ ಮತ್ತೊಬ್ಬ ಮಗನಿದ್ದಾನೆ ಮನೆಗೆ ಬಂದ ಸೊಸೆ ಮತ್ತು ಮಗ ನಿನ್ನ ವೃದ್ಧಾಪ್ಯ ಜೀವನಕ್ಕೆ ರಕ್ಷಣೆ ಕೊಡುತ್ತಾರೆ”. ಎಂಬ ದೃಢ ನಿರ್ಧಾರದ ಹಾಲಯ್ಯ ನವರ ಮಾತುಗಳು ತಾಯಿಗೆ ತಡೆಯಲಾರದ ದು:ಖವನ್ನು ತಂದೊಡ್ಡಿದವು.
ಹಾಲಯ್ಯ ತನ್ನ ಹದಿಹರೆಯದಲ್ಲಿಯೇ,ತಾನು ಇಂದ್ರಿಯ ಸುಖಕ್ಕಾಗಿ ಜನಿಸಿದವನಲ್ಲ ಎಂಬ ಕೊನೆಯ ನಿರ್ಧಾರಕ್ಕೆ ಬಂದಿದ್ದರು. ತನ್ನ ಸ್ವಸಂತೋಷದಲ್ಲಿಯೂ ಅವರ ನಂಬಿಕೆ ಇರಲಿಲ್ಲ. ಹಾಲಯ್ಯ£ವರ ಹುಟ್ಟುಗುಣ ವೆಂದರೆ ತ್ಯಾಗ, ಸುತ್ತಲಿನ ಸಮಾಜದ ಸುಖವೇ ಅವರ ಅಂತರಂಗದ ಮೂಲಮಂತ್ರವಾಗಿತ್ತು. ಮಾತೆಯ ಮಮತೆಗೆ ಮರುಮಾತನಾಡುವವನೂ ತಾನಲ್ಲವೆಂಬ ತನ್ನ ಮಾತೃಪ್ರೇಮದ ಎಳೆಯನ್ನು ಮಾತೆಯ ಮುಂದೆ ಬಿಚ್ಚಿಟ್ಟರು. vಮ್ಮ ಜವಾಬ್ದಾರಿಯ ಅರಿವನ್ನು ತಾಯಿಯ ಅರಿವಿನಲ್ಲಿ ಮಾಡಿಸಿದರು. ಶಿಕ್ಷಕನ ಕಾಯಕದಿಂದ ತಾವು ಕೂಡಿಟ್ಟ ಮುನ್ನೂರು ರೂಪಾಯಿಗಳನ್ನು ತುಂಬು ಹೃದಯದಿಂದ ಹಾಲಯ್ಯ ಮಾತೆಯ ಮಡಿಲಿನ ಕಂದನಾಗಿ ಉಡಿಯನ್ನು ತುಂಬಿದರು.
“ಇಂದಿನಿಂದ ನಾನು ನಿನ್ನ ಮಗನಲ್ಲ. ತಾಯಿಮಗನೆಂಬ ಕರುಳಕುಡಿ ಇಂದಿಗೆ ಹರಿಯಿತು. ಜೀವನದಲ್ಲಿ ನಾನು ಆರಿಸಿಕೊಂಡ ಶಿವಮಾರ್ಗದಲ್ಲಿ ಶಾಶ್ವತವಾಗಿ ಮುನ್ನಡೆಯುವಂತೆ ನನ್ನನ್ನು ಬಿಡಬೇಕು, ಇದು ನನ್ನ ಅಂತರಂಗದ ಒಲವು.” ಎಂದು ನುಡಿದ ಹಾಲಯ್ಯ ಕ್ಷಣಮಾತ್ರ ನಿಲ್ಲದೆ ಅಲ್ಲಿಂದ ಹೊರಟು ಹೋದರು. ಮಗನ ನುಡಿಗಳನ್ನು ಕೇಳಿದ ನೀಲಮ್ಮನ ಮಾತುಗಳು ಮೌನವಾದವು,
ನಿಜಗುಣ ಶಿವಯೋಗಿಗಳ ತತ್ವ ಜ್ಞಾನದ ಸವಿಯನ್ನು ಸವಿಯಬೇಕೆಂಬ ಉತ್ಕಟ ಇಚ್ಛೆಯಿಂದ ಹಾಲಯ್ಯ£ವರ ಹೆಜ್ಜೆಗಳು ಹುಬ್ಬಳ್ಳಿಯ ಕಡೆಗೆ ನಡೆದವು. ನಿಜಗುಣರ ಮಾರ್ಗದರ್ಶನ ಪಡೆಯುವುದು ಹಾಲಯ್ಯ£ವರ ಮನದಾಳದ ಬಯಕೆಯಾಗಿತ್ತು, ಇದೇ ನಿನಗೆ ಮುಕ್ತಿಮಾರ್ಗವೆಂದು ಅಂತರಂಗ ಒತ್ತಿ ಒತ್ತಿ ಹೇಳುತ್ತಿತ್ತು. ಚಿಕ್ಕ ವಯಸ್ಸಿನಲ್ಲಿಯೇ ಹಾಲಯ್ಯ£ವರ ಹೃದಯ ಪರಿಪೂರ್ಣತೆಯನ್ನು ಹೊಂದಿ, ಭೋಗವನ್ನು ಬೀಸಾಡಿ ತ್ಯಾಗ ಮಾರ್ಗದತ್ತ ಮುನ್ನಡೆಯಲು , ಆರೂಢಾವಸ್ಥೆಯನ್ನು ಪಡೆದು ಭಕ್ತರಿಗೆ ನಿಜಗುಣ ಶಿವಯೋಗಿಗಳ ಶಾಸ್ತ್ರಾಧ್ಯಯನವನ್ನು ಉಣಬಡಿಸುತ್ತಿದ್ದ ಸಿದ್ಧಾರೂಢರ ಮಠದತ್ತ ಹಾಲಯ್ಯ£ವರು ತೆರಳಿದರು
ಸಿದ್ಧಾರೂಢರು ಅಂದಿನಕಾಲದ ಅತಿ ದೊಡ್ಡ ಸಿದ್ಧಿಪುರುಷರಾಗಿದ್ದರು, ಗುರುಸಿದ್ಧಾರೂಢರ ಮಾರ್ಗದರ್ಶನದಲ್ಲಿ ಹಾಲಯ್ಯ ಷಟ್‍ಸ್ಥಲ ಸಿದ್ಧಾಂತವನ್ನು ಅಧ್ಯಯನ ಪ್ರಾರಂಭಿಸಿ ಸಿದ್ಧಾರೂಢರ ಅಂತರಂಗವನ್ನು ಗೆದ್ದುಕೊಂಡು, ಗುರುವಿನ ಪಾದಕಮಲಗಳಡಿಯಲ್ಲಿ ಅಧ್ಯಯನ ಮಾಡುತ್ತಿದ್ದರೂ ಆ ಗುರು ಮಠದ ಪರಿಸರz ಅನಾನುಕೂಲತೆಗಳಿಂದ, ತನ್ನ ಲಿಂಗಪೂಜೆ ಪ್ರಸಾದಕ್ಕಾಗಿ ಹುಬ್ಬಳ್ಳಿಯ ರುದ್ರಾಕ್ಷಿಮಠದಲ್ಲಿ ಅನುಕೂಲಮಾಡಿಕೊಂಡು, ಪಾಠ ಪ್ರವಚನಕ್ಕೆ ಮಾತ್ರ ಸಿದ್ದಾರೂಢರ ಮoಕ್ಕೆ ಹಾಲಯ್ಯನವರು ಹೋಗುತ್ತಿದ್ದರು.
ಧರ್ಮಗ್ರಂಥಗಳ ಅಧ್ಯಯನದಲ್ಲಿ ಮುಳುಗಿದ್ದರೂ, ಲಿಂಗಪೂಜಾ ನಿಷ್ಥೆಗೆ ಸಂಭಂಧಪಟ್ಟಂತೆ ಕೆಲವು ಪ್ರಶ್ನೆಗಳು ಹಾಲಯ್ಯನನ್ನು ಕಾಡುತಿದ್ದವು. ಈ ಕಳವಳದ ನಿವಾರಣೆಗಾಗಿ ಎಮ್ಮೀಗನೂರ ಜಡೇಸಿದ್ಧರನ್ನು ಸಂದರ್ಶಿಸುವ ಮಹಾಘಟನೆಯೊಂದು ಹಾಲಯ್ಯನ ಜೀವನದಲ್ಲಿ ನಡೆಯಿತು. ಜಡೇಸಿದ್ಧರು .ಅಂದಿನ ಕಾಲದ ವಿಶಿಷ್ಟಗುಣಗಳ ಹಠಯೋಗಿಗಳೆಂದು ಹೊರಹೊಮ್ಮಿ ಸರ್ವರ ಪ್ರೀತ್ಯಾಧರಗಳಿಗೆ ಪಾತ್ರರಾಗಿದ್ದರು.ಹಾಲಯ್ಯ£ವರುÀ ಬರುವ ಮುನ್ಸೂಚನೆಯನ್ನು ಅಂತರಂಗದಲ್ಲಿ ಅನುಭವಿಸಿದ ಎಮ್ಮೀಗನೂರ ಜಡೇಸಿದ್ಧರು ಹಾಲಯ್ಯ£ವರ ಬರುವಿಕೆಗಾಗಿ ಕಾಯುತ್ತಿದ್ದರು. ಹಾಲಯ್ಯ£ವರು ಜಡೇಸಿದ್ಧರ ಸಂದರ್ಶನದ ಸ್ಥಳ ಮುಟ್ಟಿದಾಗ ಸಿದ್ಧರು ತಮ್ಮ ಕೊರಳಲ್ಲಿ ಲಿಂಗವನ್ನೊಳಗೊಂಡ ಲಿಂಗವಸ್ತ್ರವಂದನ್ನು ಕಟ್ಟಿಕೊಂಡು ಓಂಕಾರ ಪಠಿಸುತ್ತ ಕುಳಿತುಕೊಂಡಿದ್ದರು. ಸಿದ್ಧಿಪುರುಷರ ದಿವ್ಯದರ್ಶನ ಪಡೆದುಕೊಂಡ ಹಾಲಯ್ಯನವರಿಗೆ ಮನದ ಸಂಧಿಗ್ಧತೆ ಮಾಯವಾಗಿ ಲಿಂಗಪೂಜೆಯ ಹಂಬಲ ಸ್ಥಿರಗೊಂಡಿತು. ಮನಸ್ಸು ಹಗುರಾಯಿತು.
ಹಾಲಯ್ಯ£ವರ ಅಂತರಂಗ, ಯೋಗ್ಯಗುರುವಿನ ದರ್ಶನಾರ್ಶೀವಾದಕ್ಕಾಗಿ ಸದಾವಕಾಲ ಮಿಡಿಯುತ್ತಿತ್ತು. ತನ್ನರಿವೆ ತನಗೆ ಗುರುವೆಂಬಂತೆ ಕೊಳ್ಳೆಗಾಲ ತಾಲೂಕಿನ ವಿರಕ್ತಮಠದ ಪೂಜ್ಯ ಎಳಂದೂರು ಬಸವಲಿಂಗ ಸ್ವಾಮಿಗಳ ದರ್ಶನ ಹುಬ್ಬಳ್ಳಿಯ ಸಿದ್ಧಾರೂಢರ ಮಠದದಲ್ಲಿ ಆದದ್ದು ಹಾಲಯ್ಯನ ಜೀವನಕ್ಕೆ ಹೊಸ ತಿರುವು ನೀಡಿತು. ಆರೂಢರಲ್ಲಿ ಹಲವು ವಿಷಯಗಳನ್ನು ಚರ್ಚಿಸಲು ಬಂದ ಶ್ರೀ ಬಸವಲಿಂಗ ಸ್ವಾಮಿಗಳಿಗೆ ಹಾಲಯ್ಯನನ್ನು ಕಂಡು ಅರಸುವ ಬಳ್ಳಿ ಕಾಲ್ತೊಡಕಿದಂತಾಗಿ ತಮ್ಮ ಅಂತರಂಗದಲ್ಲಿ ಹಾಲಯ್ಯನಿಗೆ ಹಿರಿದಾದ ಸ್ಥಾನಕೊಟ್ಟರು. ಪೂರ್ವಜನ್ಮದ ಪುಣ್ಯವೆಂಬಂತೆ ಎರಡು ಆತ್ಮಗಳು ಒಂದಾಗಿ ಗುರು-ಶಿಷ್ಯರ ರೂಪದಲ್ಲಿ ಒಬ್ಬರನೊಬ್ಬರು ಕಂಡಂತಾಯಿತು. ನಿಬ್ಬೆರಗೊಂಡ ಹಾಲಯ್ಯನವರು ಗುರುವಿನ ಪಾದಗಳಿಗೆ ತಮ್ಮನ್ನೆ ತಾವು ಅರ್ಪಿಸಿಕೊಂಡರು.
ಹಾಲಯ್ಯನವರು ಹಾಗೂ ಗುರುಗಳಾದ ಎಳಂದೂರ ಬಸವಲಿಂಗಸ್ವಾಮಿಗಳವರು ಹುಬ್ಬಳ್ಳಿಯ ಸಿದ್ಧಾರೂಢಮಠದಿಂದ ತಮ್ಮ ಆಧ್ಯಾತ್ಮ ಜೀವನದ ಯಾತ್ರೆಯನ್ನಾರಂಭಿಸಿ ಆತ್ಮಸಾಕ್ಷಾತ್ಕಾರದ ಹಸಿವು ಹಿಂಗಿಸಿಕೊಳ್ಳಲು ಶಪಥಮಾಡಿ ಮುಂದುವರೆದರು. ಪರಸ್ಪರರಲ್ಲಿರುವ ಸತ್ಯ ಸಂಶೋಧನೆಯ ಹಸಿವು ಇಬ್ಬರನ್ನೂ ಒಂದುಗೂಡಿಸಿತು. ದೇಹಗಳೆರಡು ಆತ್ಮ ಒಂದೇ ಎಂಬಂತೆ, ಕೊಳ್ಳೆಗಾಲದ ಶಂಭುಲಿಂಗನ ಬೆಟ್ಟದ ಗುಹೆಯೊಂದರಲ್ಲಿ ಗುರುಶಿಷ್ಯರು ಸತತ 12 ವರ್ಷ ಅನುಷ್ಠಾನ ಮಾಡಿ ಅಷ್ಟಾವರಣಗಳನ್ನು ಆತ್ಮವಾಗಿಸಿಕೊಂಡು ಲಿಂಗಾಂಗದ ಸಾಮರಸ್ಯವನ್ನು ಸವಿದರು.
ಶಿವಯೋಗ ಸಾಮರಸ್ಯವನ್ನು ಸವಿದ ನಂತರ ಗುರುಶಿಷ್ಯರ ಆಧ್ಯಾತ್ಮ ಜೀವನದ ಯಾತ್ರ್ರೆ ಯಾವ ಆತಂಕವಿಲ್ಲದೆ ಶಿವಧ್ಯಾನದಲ್ಲಿಯೇ ಮುಂದುವರೆಯಿತು. ಪವಿತ್ರ ವಾತಾವರಣದ ದಿನವೊಂದರಂದು ಹಾಲಯ್ಯನವರಿಗೆ ಗುರೋಪದೇಶದ ದೀಕ್ಷೆಯಾಯಿತು. ಶಿವಯೋಗಿಯೆಂದರೆ ಶಿವಯೋಗದಾನಂದವನ್ನು ತನ್ನಷ್ಟಕ್ಕೆ ತಾನೆ ಸವಿಯುವಾತ£ಲ್ಲ, ಅದನ್ನು ಇತರರೆಲ್ಲರಿಗೂ ಉಣಬಡಿಸಬೇಕು. ಆಜ್ಞಾನ ಅಂಧಕಾರದಲ್ಲಿ ಮುಳುಗಿದ್ದ ಸಮಾಜದ ಮೇಲೆ ಶಿವಯೋಗ ಜ್ಞಾನವೆಂಬ ಬೆಳಕು ಚೆಲ್ಲಿ ಸುಜ್ಞಾನದೊಡನೆ ಕರೆದೊಯ್ಯಬೇಕು. ಮುಳುಗಿ ಹೋಗುತ್ತಿರುವ ಮಾನವೀಯ ಮೌಲ್ಯಗಳನ್ನು ಪುನರುತ್ಥಾನಗೊಳಿಸಿ ಸಮಾಜದ ಸರ್ವರೂ ಸವಿಯುವ ಅವಕಾಶಕ್ಕೆ ಅನುವುಮಾಡಿಕೊಡಬೇಕು.
ಹೀಗೆ ಗುರುಶಿಷ್ಯರ ಜೀವನವಾಹಿನಿ ಮುಂದುವರಿಯುತ್ತಿರುವಾಗ ಅನೀರಿಕ್ಷಿತವಾಗಿ ಪೂಜ್ಯ ಎಳಂದೂರು ಬಸವಲಿಂಗ ಸ್ವಾಮಿಗಳು ಶಿವನ ಕರೆಗೆ ಒಗೊಟ್ಟು ಲಿಂಗದೊಳಗಾದರು. ಈ ಅನಿರೀಕ್ಷಿತ ಘಟನೆ ಹಾಲಯ್ಯನವರಿಗೆ ಮಾತೆಯನ್ನೇ ಕಳೆದುಕೊಂಡ ಹಸುಗೂಸಿನ ಪರಿಸ್ಥಿತಿಯನ್ನು ತಂದೊಡ್ಡಿತು. ತಾಯಿಯನ್ನು ಕಳೆದುಕೊಂಡ ಕರುವಿನಂತಾದ ಹಾಲಯ್ಯನವರಿಗೆ, ಕಾರ್ಗತ್ತಲೆ ಆವರಿಸಿದಂತಾಗಿ ದುಖಃದ ಮಡಲಿನಲ್ಲಿ ಕಾಲಕಳೆಯಬೇಕಾಯಿತು. ಆಂತರಿಕ ದುಖಃದಿಂದ ಹೊರಗೆ ಬರುವ ಒಂದೇ ಒಂದು ಹಾದಿಯು ಅನುಷ್ಠಾನ ಎಂದು ಅರಿತ ಹಾಲಯ್ಯನವರು ಶಿವಧ್ಯಾನದ ಮೊರೆ ಹೋಗಬೇಕಾಯಿತು.ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದ ಸೊರಬ ಪ್ರದೇಶದಲ್ಲಿ ಅನುಷ್ಠಾ£ದಲ್ಲಿ ತಲ್ಲೀನಗೊಂಡರು.
ದೇವರು ಅಗೋಚರ ಆತನ ಸ್ಪರ್ಶ – ಸಂತೊಷ ಪಡೆಯುವುದಂತೂ ಅಸಾಧ್ಯವೇ ಸರಿ. ಆದರೆ ಆತನು ಅಗೋಚರವಾಗಿದ್ದರೂ ಆತನ ದೃಷ್ಠಿ ಆತನಲ್ಲಿಯೇ ಮುಳುಗಿದವರ ಮೇಲೆ ಬೀಳುವುದು. ಆತನ ಅಸ್ತಿತ್ವದಷ್ಟೇ ಸತ್ಯ ದೇವಭಾಷೆಯನ್ನು ಅರಿತು ಅರ್ಥಮಾಡಿಕೊಳ್ಳುವುದು ಅಸಾಧ್ಯ. ದೇವವಾಣಿ ದೈವೀ ಸೂತ್ರದ ಸಂಗೀತ ಸಂಕೇತಗಳ ಅಂತ್ಯ ಆಳವನ್ನು ಅರಿಯುವುದು ಅಸಾಧ್ಯ. ಮಾನವನ ಅಳತೆ ಪ್ರಮಾಣಗಳಿಗೆ ದೈವಿಶಕ್ತಿ ಸಿಗುವುದು ಅಸಾಧ್ಯವೇ ಸರಿ.
ಹಾನಗಲ್ಲ ಕುಮಾg ಶಿವಯೋಗಿ ಎಂದು ಹೆಸರು ಗಳಿಸಿದ ಹಾಲಯ್ಯನಿಗೂ ಹಾನಗಲ್ಲ ವಿರಕ್ತ ಮಠಕ್ಕೂ ಯಾವುದೇ ಅಗೋಚರ ಸಂಬಂಧವೊಂದು ಇರಲೇಬೇಕು ಹಾನಗಲ್ಲ ಕುಮಾರಸ್ವಾಮಿಗಳೆಂದರೆ ಎಂದೂ ಮುಳಗದ ಸೂರ್ಯನಿದ್ದಂತೆ ಅಮವಾಸ್ಯೆಯನ್ನೇ ಕಾಣದ ಚಂದ್ರನಿದ್ದಂತೆ, ಹಾನಗಲ್ಲ ವಿರಕ್ತಮಠ ಹಾಗೂ ಶ್ರೀ ಕುಮಾರ ಶಿವಯೋಗಿಗಳ ಹೆಸರುಗಳು ವೀರಶೈವ ಧರ್ಮದ ದಿಗಂತದಲ್ಲಿ ಸೂರ್ಯಚಂದ್ರರಿರುವಷ್ಟು ಕಾಲ ಅಮರ.
ಪೂಜ್ಯ ಫಕೀರಸ್ವಾಮಿಗಳವರ ವಿಶ್ವಾಸ ಅನುಕಂಪಗಳನ್ನು ಹೊತ್ತ ಹಾಲಯ್ಯ ಕುಮಾರ ಸಮಯಾಂತರ್ಗತ ಹಾನಗಲ್ಲ ವಿರಕ್ತ ಪೀಠದ ಅಧಿಪತಿಯಾಗಿ ಕುಮಾರ ಶಿವಯೋಗಿ ಎಂಬ ನಾಮಾಂಕಿತವನ್ನು ಪಡೆದರು. ಹಣತೆ ಆಧಾರದಿಂದ ಜ್ಯೋತಿ ಬೆಳಗುವಂತೆ ಹಾನಗಲ್ಲ ಮಠವನ್ನು ಆಧಾರವನ್ನಾಗಿಟ್ಟುಕೊಂಡು ಸಮಾಜಕ್ಕೆ ಬೆಳಕು ನೀಡಿದವರು ಹಾನಗಲ್ಲ ಶ್ರೀ ಕುಮಾರ ಶಿವÀಯೋಗಿಗಳು
ಶ್ರೀ ಕುಮಾರ ಶಿವಯೋಗಿಗಳು ,ಹಾನಗಲ್ಲ ಪೀಠದ ಅಧಿಕಾರವಹಿಸಿಕೊಂಡಾಗ ಸಮಾಜದ ತುಂಬೆಲ್ಲಾ ಮೇಲು ಕೀಳೆಂಬ ಕಚ್ಚಾಟಗಳು, ಅಧಿಕಾರ ಅಂತಸ್ತುಗಳಿಗಾಗಿ ಕಿತ್ತಾಟಗಳು, ಧರ್ಮದ ಸಂಕುಚಿv ಭಾವನೆಗಳು ಜನರ ನಿತ್ಯ ಬದುಕಿನಲ್ಲಿ ಕಾಡುತ್ತಿದ್ದವು. ಬ್ರಾಹ್ಮಣ – ವೀರಶೈವ ಲಿಂಗಾಯತರ ನಡುವಿನ ಬಿರುಕು ಎದ್ದು ಕಾಣುತ್ತಿತ್ತು. ವೀರಶೈವ – ಲಿಂಗಾಯತರಿಗೆ ಆಗಿದ್ದ ಸಂಸ್ಕøತ ಪಾಠಶಾಲೆಗಳಲ್ಲಿ ಪ್ರವೇಶವಿದ್ದಿಲ್ಲ. ಇದನ್ನು ಕಂಡರಿತ ಕುಮಾರಸ್ವಾಮಿಗಳು ಹಾನಗಲ್ಲಿನಲ್ಲಿ ಪ್ರಥಮ ಸಂಸ್ಕøತ ಪಾಠಶಾಲೆಯನ್ನು ತೆರೆದು ಜಾತಿ ಭೇಧವನ್ನು ಮಾಡದೇ ಸರ್ವ ಸಮಾಜದ ವಿಧ್ಯಾರ್ಥಿಗಳಿಗೆ ಅಧ್ಯಯನ ಮತ್ತು ಪ್ರಸಾದದ ವ್ಯವಸ್ಥೆಯನ್ನು ಮಾಡಿದರು. ಊಟ ವಸತಿ ಪಾಠಶಾಲೆಗಳು ಪ್ರಾರಂಭವಾದವು.
ಸಮುಷ್ಠ್ಟಿ ಪ್ರಜ್ಞೆಯ ಶಕ್ತಿಯನ್ನು ಅರಿತ ಸಮಾಜ, ಅವರು ಕೊಟ್ಟ ಸ್ಫೂರ್ತಿ ಶಕ್ತಿಗೆ ಸ್ಪಂಧಿಸಿತು. ಸುತ್ತಮುತ್ತಲಿನ ಗ್ರಾಮಗಳಿಗೆಲ್ಲ ಸಂಚರಿಸಿ ಸಂಕಷ್ಟದಲ್ಲಿದ್ದವರಿಗೆಲ್ಲ ಸಹಾಯ ಹಸ್ತ ನೀಡಿ ಎಲ್ಲರಿಗೂ ಕೂಡಿ ಜೀವಿಸುವ ಹೊಸ ವಿಧಾನವನ್ನು ಕಲಿಸಿದರು. ಜನರು ಪರಸ್ಪರರನ್ನು ಅರಿತು ಜೀವಿಸಬೇಕೆಂದು ಅವರ ಮೊದಲ ಪಾಠವಾಗಿತ್ತು. ಮಾತೃಹೃದಯದ ಶ್ರೀ ಕುಮಾರ ಶಿವಯೋಗಿಗಳು ಕೇವಲ ಹಾನಗಲ್ಲ ಮಠದ ವ್ಯಾಪ್ತಿಯಲ್ಲಿಯೇ ಉಳಿಯದೇ ಭೂಮಿಗೆ ಬೆಳಕುಕೊಡುವ ಸೂರ್ಯನೋಪಾದಿಯಲ್ಲಿ ಸಮಗ್ರ ಸಮಾಜವನ್ನೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಗುರುತಿಸಿಕೊಂಡರು. ಆ ಭಾಗದಲ್ಲಿ ಬರ ಆವರಿಸಿದಾಗ ಸಾರ್ವಜನಿಕ ಪ್ರಸಾದ ನಿಲಯಗಳನ್ನು ವ್ಯವಸ್ಥಿತಗೊಳಿಸಿ ಸಮಗ್ರ ಸಮಾಜದ ಹಸಿವನ್ನು ನೀಗಿಸಿದ ಕೀರ್ತಿ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.
ಅಂದಿನ ಕಾಲಘಟ್ಟದಲ್ಲಿ ಆ ಭಾಗದ ಜನತೆಗೆ ಗುರುಳೆ ರೋಗವೆಂಬ ವ್ಯಾಧಿ ಆವರಿಸಿದಾಗ ಶ್ರೀ ಕುಮಾರ ಶಿವಯೋಗಿಗಳು ತಮ್ಮ ಆರೋಗ್ಯವನ್ನೇ ಪಣಕ್ಕಿಟ್ಟು ತ್ಯಾಗ ಮಹಿಮಾಪುರುಷರಾಗಿ ಮನೆಯಿಂದ ಮನೆಗೆ ಹೋಗಿ ಕೈ ಮುಟ್ಟಿ ಉಪಚರಿಸಿ ಅಂದಿನ ಜನರ ದುಃಖಗಳಲ್ಲಿ ಬೆರೆತು ಅವರಲ್ಲಿ ಒಂದಾದರು.
ಪ್ರತಿಯೊಬ್ಬ ವ್ಯಕ್ತಿಯ ಆಂತರಿಕ ಪರಿಶುದ್ಧತೆಯೇ ಶ್ರೀ ಕುಮಾರ ಶಿವಯೋಗಿಗಳ ಮುಖ್ಯ ಉದ್ಧೇಶ. ಪುರುಷನಾಗಲಿ ಮಹಿಳೆಯಾಗಲಿ ವ್ಯಕ್ತಿಯ ಬಾಹ್ಯ ಸ್ವರೂಪಕ್ಕಾಗಲಿ ಜಾತಿಗಳಿಗಾಗಲಿ ಅವರು ಮಹತ್ವ ನೀಡಲಿಲ್ಲ ಬದಲಾಗಿ ಆತ್ಮದ ಅಸ್ತಿತ್ವಕ್ಕೆ ಬೆಲೆ ಕೊಟ್ಟರು, ದೇವರು ಸೃಷ್ಟಿಸಿದ ನಿಸರ್ಗದ ಪಂಚಮಹಾಭೂತಗಳಿಗೆ ಸಮಗ್ರ ಸೃಷ್ಟಿಗೆ ಹಾನಿಯಾಗದಂತೆ ಮಾನವ ತನ್ನ ಆಂತರಿಕ ಹಾಗೂ ಬಾಹ್ಯ ಜೀವನದಲ್ಲಿ ಶುಚಿತ್ವವನ್ನು ಅಳವಡಿಸಿ ಆಂತರ್‍ಬಾಹ್ಯ ಸಮತೋಲನೆಯೊಂದಿಗೆ ಮುನ್ನಡೆಯಬೇಕು. ಶ್ರೀ ಕುಮಾರ ಶಿವಯೋಗಿಗಳಿಗೆ ನಿಸರ್ಗದ ಮೇಲೆ ಬಹಳ ಪ್ರೀತಿ, ಸಮಾಜವೇ ಅವರ ಮನೆ ,ಸಂಸ್ಕøತಿ ಅವರ ಬದುಕು, ಸಮಾಜ ಸಂಸ್ಕøತಿಗಳ ಉನ್ನತಿಯೇ ಅವರ ಭಾಗ್ಯ ತಮ್ಮ ಸರ್ವ ಸುಧಾರಣೆಗಳನ್ನು ಮೂಲತಃ ಹಾನಗಲ್ಲ ಮಠದಿಂದಲೇ ಪ್ರಾರಂಭಿಸಿದರು.
ಅಂದಿನ ಕಾಲದ ಸಾಮಾಜಿಕ ಕ್ರಾಂತಿಗೆ ಸಂಬಂಧಪಟ್ಟಂತೆ ವೀರಶೈವ ಲಿಂಗಾಯತ ಧರ್ಮದ ಒಳಿತಿಗಾಗಿ ಚರ ಜಂಗಮರಾದ ಬಾಗಲಕೋಟೆ ಮಲ್ಲಣಾರ್ಯರು ಕುಮಾರ ಶಿವಯೋಗಿಗಳಿಗೆ ಸಕಾಲಿಕವಾಗಿ ಎಚ್ಚರಿಸಿದ ಘಟನೆ ಸಮಗ್ರ ಸಮಾಜಕ್ಕೆ ಹೊಸ ತಿರುವು ಕೊಟ್ಟಿತು. ಇದೊಂದು ರೀತಿಯ ಆಧ್ಯಾತ್ಮಿಕ ಕ್ರಾಂತಿ ವ್ಯಕ್ತಿ ಮಟ್ಟದಿಂದ ಹಿಡಿದು ಸಮಗ್ರ ಸಮಾಜಕ್ಕೆ ಇದರ ಪರಿಣಾಮವಾಯಿತು ಕುಮಾg ಶಿವಯೋಗಿಗಳ ಪವಿತ್ರವಾದ ಸ್ವಪ್ರಜ್ಞೆಯಿಂದ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟವರು. ಮಲ್ಲಣಾರ್ಯರ ಬಯಕೆಯನ್ನು ತಮ್ಮ ಕರ್ತವ್ಯವೆಂದು ತಿಳಿದು ತಮ್ಮ ಆಯುಷ್ಯವನ್ನೆಲ್ಲಾ ಧರ್ಮ ಜಾಗೃತಿ ಸಮಾಜ ಸುಧಾರಣೆಗೋಸ್ಕರ ವ್ಯಯಮಾಡಿದರು.
ನಾಡಿನುದ್ದಗಲಕ್ಕೂ ಕಾಲುನಡಿಗೆಯಿಂದ ಸಂಚರಿಸಿ ಸರ್ವ ಸಮಾಜದ ಮುಖಂಡರನ್ನು ಸಂಧಿಸಿ ಅವರೊಡನೆ ಚಿಂತನ-ಮಂಥನ ಮಾಡಿ ಹೌದು ಅಲ್ಲಗಳನ್ನು ವಿಶ್ಲೇಷಿಸಿ ಒಂದು ಸಂಸ್ಥೆಯನ್ನು ಸ್ಥಾಪಿಸುವುದಕ್ಕಾಗಿ ಸದಾವಕಾಲ ಶ್ರಮಿಸಿದವರು. ಈ ನಿಟ್ಟಿನಲ್ಲಿ ಮೊದಲ ವೀರಶೈವ ಸಮ್ಮೇಳನವು ನವಲಗುಂದ ಸಂಸ್ಥಾನದ ಶ್ರೀ ಲಿಂಗರಾಜಪ್ಪ ಜಾಯಪ್ಪ ಸರ್ ದೇಸಾಯಿ ಇವರ ಅಧ್ಯಕ್ಷತೆಯಲ್ಲಿ 1904 ಮೇ ತಿಂಗಳು 13,14 ಮತ್ತು 15,ರಂದು ಧಾರವಾಡದ ದರ್ಬಾರ ಹಾಲ್ ಈಗಿನ ಲಿಂಗಾಯತ ಟೌನ್ ಹಾಲ್ ದಲ್ಲಿ ವ್ಯವಸ್ಥೆಗೊಳಿಸಿದರು. ಸಮಾಜದ ಸರ್ವ ಸ್ತರಗಳ ಜನತೆ ಇಲ್ಲಿ ಸೇರಿ ಬದುಕಿನ ಸರ್ವ ಮುಖಗಳಿಗೂ ಗಮನ ಹರಿಸಿತು. ಸಮಾಜದ ಬಡವ ಬಲ್ಲಿದರೆಂಬ ಕಂದಕವನ್ನು ಕಿತ್ತೊಗೆದು , ಶ್ರೀಮಂತರ ಮನೋಧರ್ಮದಲ್ಲಿ ಪರಿವರ್ತನೆಯಾಗಬೇಕು ಎಂದು ಹೇಳಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ನಿರಂತರವಾಗಿ ಪ್ರಯತ್ನಿಸಿ ಸಫಲರಾದವರು ಶ್ರೀ ಕುಮಾರ ಶಿವಯೋಗಿಗಳು.
ವ್ಯಕ್ತಿ ಯಾವನೇ ಇರಲಿ ಅವನು ಮಾನವೀಯತೆಯನ್ನು ಮೈಗೂಡಿಸಿಕೊಂಡು ಮೇಲೆರಬೇಕು, ಅನ್ಯರಿಗೂ ಬದುಕು ಕೊಡಬೇಕು, ಶ್ರೀ ಕುಮಾರ ಶಿವಯೋಗಿಗಳ ಸಂಕಲ್ಪವನ್ನು ಸಾಕಾರಗೊಳಿಸಲು ಲಿಂಗರಾಜ ದೇಸಾಯಿಯವರಂಥ ತ್ಯಾಗಿಗಳು ಮತ್ತು ಹಲವು ಗಣ್ಯ ವ್ಯಕ್ತಿಗಳು ಮುಂದೆ ಬಂದರು. ಈ ಮಹತ್ಕಾರ್ಯದ ಪ್ರತಿಫಲವಾಗಿ ಶ್ರೀ ಕುಮಾರ ಶಿವÀಯೋಗಿಗಳು 1904 ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಸ್ಠೆ ಯನ್ನು ಸ್ಥಾಪಿಸಿದರು.
ಶ್ರೀ ಕುಮಾರ ಶಿವಯೋಗಿಗಳು ಸಮಾಜವನ್ನು ಆಧುನಿಕ ಸಾಮಾಜಿಕ ದೃಷ್ಟಿಕೋನದಿಂದ ನೋಡಿ, ಯುವಜನಾಂಗದ ಗಮನವನ್ನು ತಮ್ಮ ಬದಲಾವಣೆಗಳತ್ತ ಸೆಳೆದು, ಅವರಲ್ಲಿ ಶಿಕ್ಷಣ ,ಕಾಯಕ ನಿಷ್ಠೆ ಮತ್ತು ಸಮಾಜ ನಿಷ್ಠೆ,ಯ ಚಿಂತನೆಯನ್ನು ಅಳವಡಿಸಿದರು. ಶ್ರೀ ಕುಮಾರ ಸ್ವಾಮಿಗಳ ಪ್ರಭಾವ ಪರಿಮಳ ನಾಡಿನ ತುಂಬೆಲ್ಲ ಗುಪ್ತಗಾಮಿನಿಯಾಗಿ ಪಸರಿಸಿ ನಾಡಿನ ತುಂಬ ಹಲವಾರು ಶಿಕ್ಷಣ ಸಂಸ್ಥೆಗಳು ,ಶಾಲಾ ಕಾಲೇಜುಗಳು ಮತ್ತು ಬಡ ವಿಧ್ಯಾರ್ಥಿಗಳಿಗೆ ಉಚಿತ ವಸತಿ ಭೋಜನ ಶಾಲೆಗಳು ಆರಂಭಗೊಂಡು,ಜಾತಿ,ಮತ ಪಂಥಗಳನ್ನು ಪರಿಗಣಿಸದೆ ಸಮಾಜದ ಸರ್ವ ಜನತೆಗೆ ಸೇವೆಯ ಗುರಿಯನ್ನಾಗಿಸಿಕೊಂಡವು.
ಶ್ರೀ ಕುಮಾರ ಶಿವಯೋಗಿಗಳು ಸಮಕಾಲಿನ ಯುಗದ ಮಹಾನ್ ಸಾಮಾಜಿಕ ಚಿಂತಕರು, ಅವರು ಪ್ರತಿಯೊಂದು ಸಾಧನೆಗೂ ತ್ಯಾಗವೇ ಮೂಲವೆಂದು ಆಚರಿಸಿ ತೋರಿಸಿದವರು. “ಸ್ವಾಮಿಯ ಮೂಲ ಲಕ್ಷಣವೆಂದರೆ ಸರ್ವತ್ಯಾಗ” ಇದಕ್ಕಾಗಿಯೇ ವಿಶ್ವ ಶ್ರೇಷ್ಥ ಧಾರ್ಮಿಕ ಸಂಸ್ಥೆಯನ್ನು “ಶಿವಯೋಗಮಂದಿರ” ಎಂಬ ಹೆಸರಿನಲ್ಲಿ 1909ರಲ್ಲಿ ಸ್ಥಾಪಿಸಿದರು. ಶಿವಯೋಗಮಂದಿರದÀ ಮೂಲ ಉದ್ದೇಶ ಶ್ರೇಷ್ಠ ಮಠಾಧೀಶರನ್ನು ರೂಪಿಸುವದು.
ಶಿವಯೋಗಮಂದಿರವನ್ನು ಸ್ಥಾಪಿಸುವ ಹಂತzಲ್ಲಿಯಾಗಲಿ ಹಾಗೂ ತದನಂತರ ಅದರ ಅಭೀವೃದ್ಧಿಗಳಿಗೆ ಚಿತ್ತರಗಿ-ಇಲಕಲ್ ಮಹಾಂತಸ್ವಾಮಿಗಳ ಮಾರ್ಗದರ್ಶನ, ಸಹಕಾರ ಪಡೆದರು, ಶ್ರೀ ವಿಜಯಮಹಾಂತ ಶಿªಯೋಗಿ ಹಾಗೂ ಅವರ ಸದ್ಭಕ್ತರೊಂದಿಗೆ ಶಿವಯೋಗಮಂದಿರದ ಸ್ಥಳದ ಆಯ್ಕೆಯ ಪ್ರಯತ್ನ ಒಂದು ಇತಿಹಾಸವಾಗಿ ಹೋಯಿತು.
ಗಾನಯೋಗಿ ಪಂಚಾಕ್ಷರಿ ಗವಾಯಿಗಳನ್ನು ಬಾಲ್ಯದಿಂದ ಹಿಡಿದು ಸ್ವತಂತ್ರವಾಗಿ ಬದುಕುವವರೆಗೂ ಕೈ ಹಿಡಿದು ನಡೆಸಿ ಸಂಗೀತ ಲೋಕಕ್ಕೆ ಅವರನ್ನು ಅರ್ಪಣೆ ಮಾಡಿದವರು ಶ್ರೀ ಕುಮಾರ ಶಿವಯೋಗಿಗಳು. ಸಂಗೀತ ಸಾಮ್ರಾಜ್ಯಕ್ಕೆ ಇದು ಶ್ರೀಕುಮಾರ ಶಿವಯೋಗಿಗಳ ಮೇರು ಕೊಡುಗೆ ಅಂಧರನ್ನು ಸಂಗೀತ ಸಾಮ್ರಾಜ್ಯದ ರಸ ಋಷಿಗಳನ್ನಾಗಿ ಮಾಡಿ ವಿಶ್ವವೇ ಕಣ್ಣು ತೆರೆದು ನೋಡಿ ಕಿವಿ ತುಂಬ ಕೇಳಿ ಬಾಯಿ ತುಂಬ ಹೊಗಳುವಂತೆ ಮಾಡಿದ ಕೀರ್ತಿ ಶ್ರೀ ಕುಮಾರ ಶಿವಯೋಗಿಗಳಿಗೆ ಸಲ್ಲುತ್ತದೆ.ಪಂಚಾಕ್ಷರಿ ಗವಾಯಿಗಳವರು ಗದುಗಿನ ವೀರೇಶ್ವರಪುಣ್ಯಾಶ್ರಮವನ್ನು ಸ್ಥಾಪಿಸಿ ,ಆಶ್ರಮದ ಜವಾಬ್ದಾರಿಯನ್ನು ತಮ್ಮ ಸಮರ್ಥ ಶಿಷ್ಯ ಪುಟ್ಟರಾಜರಿಗೆ ವಹಿಸಿಕೊಟ್ಟರು. ಬಡವ ಬಲ್ಲಿದ,ಮೇಲು ಕೀಳು,ಆ ಜಾತಿ ಈ ಜಾತಿ ಎಂಬ ಭೇಧಗಳಿಲ್ಲದೇ ಇಂದು ಗದುಗಿನ ವೀರೇಶ್ವರಪುಣ್ಯಾಶ್ರಮ ಸಮಾಜಕ್ಕೆ ಅದ್ಭುತ ಸೇವೆಯನ್ನು ಸಲ್ಲಿಸುತ್ತಿದೆ.
ಶ್ರೀ ಕುಮಾರ ಶಿವಯೋಗಿಗಳ ಅನುಕಂಪ ಕೇವಲ ಮಾನವರಿಗಾಗಿ ಮೀಸಲಾಗಿರಲಿಲ್ಲ ಪ್ರಾಣಿಗಳಿಗೂ ತಮ್ಮ ಮಾತೃ ಪ್ರೇಮವನ್ನು ತೋರಿಸಿದವರು. ಶಿವಯೋಗಮಂದಿರದ ಗೋ ಶಾಲೆ ಇದಕ್ಕೊಂದು ಉತ್ತಮ ಉದಾಹರಣೆ. ಅಂದು ನಿರ್ಮಿಸಿದ ಗೋ ಶಾಲೆ, ಇಂದಿಗೂ ತನ್ನ ಸ್ವಸ್ವರೂಪದಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು ಅಲ್ಲದೆ ಶಿವಯೋಗಮಂದಿರದಿಂದ ವಿಭೂತಿ ನಿರ್ಮಾಣ ಕೇಂದ್ರಕ್ಕೆ, ಪ್ರಸಾದ ನಿಲಯಕ್ಕೆ ತನ್ನದೇ ಆದ ಕೊಡುಗೆ ಕೊಟ್ಟಿದೆ.
ಗೋ ಶಾಲೆಯ ವ್ಯವಸ್ಥೆ, ವಿಭೂತಿ ನಿರ್ಮಾಣ ಕೇಂದ್ರ, ಪ್ರತಿ ತಿಂಗಳು ಶಿವಾನುಭವ ಗೋಷ್ಠಿಗಳ ವ್ಯವಸ್ಥೆ, ಪ್ರತಿನಿತ್ಯ ಪ್ರಸಾದ ವಿತರಣೆ, ಪುರಾಣ ಪ್ರವಚನ, ಶಿವ ಧರ್ಮದ ವ್ಯವಸ್ಥಿತ ಪ್ರಚಾರ, ಆಗಮ, ಉಪನಿಷತ್‍ಗಳ ಅಧ್ಯಯನ, ಅಪರೂಪದ ತಾಡಓಲೆಗಳ, ಗ್ರಂಥಗಳ ಸಂಗ್ರಹ, ಸಂಸ್ಕøತ ವಿಧ್ಯಾಪೀಠ, ವಟುಸಾಧಕರಿಗೆ ಮೇಲ್ಮಠದ ವ್ಯವಸ್ಥೆ ಇವೆಲ್ಲವೂ ಶ್ರೀಮದ್‍ಶಿವಯೋಗಮಂದಿರದ ಅಪರೂಪದ ಕ್ರಿಯಾಶೀಲತೆಗಳು, ಶ್ರೀ ಕುಮಾರ ಶಿವಯೋಗಿಗಳು ಶಿವಯೋಗಮಂದಿರದಲ್ಲಿ ರೇವಣಸಿದ್ದೇಶ್ವರ ವಾಚನಾಲಯವನ್ನು ಸ್ಥಾಪಿಸಿ, ಗ್ರಂಥ ರಕ್ಷಣೆಯ ವ್ಯವಸ್ಥೆ ಮಾಡಿದರು, ವಚನ ಸಾಹಿತ್ಯ, ತಾಡಓಲೆಗಳ ಗ್ರಂಥಗಳು ವೀರಶೈವ ತತ್ವಜ್ಞಾನದ ಅಪೂರ್ವ ಗ್ರಂಥಗಳ ರಾಶಿಗಳು, ವೇದ ವೇದಾಂತದ ಪುಸ್ತಕಗಳು, ಬೇರೆ ಬೇರೆ ಭಾಷೆಗಳಲ್ಲಿ ವೀರಶೈವ ತತ್ವಜ್ಞಾನದ ರಚನೆಗಳು ಈ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ.
ಶ್ರೀ ಎಪ್.ಜಿ. ಹಳಕಟ್ಟಿಯವರ ತ್ಯಾಗ, ಶ್ರಮಗಳನ್ನು ಗುರುತಿಸಿದ ಶ್ರೀ ಕುಮಾರ ಶಿವಯೋಗಿಗಳು , ಮೊಟ್ಟ ಮೊದಲ ಬಾರಿಗೆ ಸಮಗ್ರ ಶಿವಶರಣರ ವಚನ ಸಾಹಿತ್ಯ ಸಂಗ್ರಹ ಮಾಡಿದರು. ಇದು ವಚನ ಲೋಕಕ್ಕೆ ಶ್ರೀ ಕುಮಾರ ಶಿವಯೋಗಿಗಳ ಮಹತ್ತರ ಕೊಡುಗೆ, ವಚನ ಸಾಹಿತ್ಯ ಸಂಗ್ರಹಣೆಗೆ ಶ್ರೀ ಹಳಕಟ್ಟಿಯವರಿಗೆ ಸ್ಪೂರ್ತಿ ಸೆಲೆಯಾಗಿ ನಿಂತವರು ಶ್ರೀ ಕುಮಾರ ಶಿವಯೋಗಿಗಳು .
ಶಿವಯೋಗಮಂದಿರದಲ್ಲಿ ಸ್ವಾಮಿಗಳಾಗುವವರ ಆರೋಗ್ಯ ಆತ್ಮಜ್ಞಾನ ರಕ್ಷಣಿ ಹಾಗೂ ಬೆಳವಣಿಗೆಗಾಗಿ ಯೋಗಾಭ್ಯಾಸವನ್ನು ಹುಟ್ಟುಹಾಕಿದವರು ಶ್ರೀ ಕುಮಾರ ಶಿವಯೋಗಿಗಳು , ಶರೀರ, ಮಾನಸಿಕ ಯೋಗಗಳ ಜೊತೆಗೆ ಶಿವಯೋಗದ ಕಲಿಕೆಗೂ ಅನುಕೂಲತೆಗಳನ್ನು ಮಾಡಿದರು. ಅಷ್ಟಾಂಗಯೋಗದ ಜೊತೆಗೆ ಪತಂಜಲಿ ಯೋಗ ತರಬೇತಿಯನ್ನು ಪ್ರಾರಂಭಿಸಿ, ಉಳಿಸಿ ಬೆಳೆಸಿದರು.
ಮಹಾರಾಷ್ಟ್ರದ ಪರಳಿ ವೈಜನಾಥದೇವಾಲಯದಲ್ಲಿ ವೀರಶೈವರಿಗೂ ಪೂಜೆ ಸಲ್ಲಿಸಲು ಹಕ್ಕಿದೆ ಎಂದು ನ್ಯಾಯಾಲಯದಲ್ಲಿ ನಿರಂತರವಾಗಿ ಹೋರಾಡಿ ಗೆದ್ದು ನಿಯಮ ಜಾರಿಗೆ ತಂದದ್ದು, ವೀರಶೈವ ಸಮಾಜಕ್ಕೆ ಶ್ರೀ ಕುಮಾರ ಶಿವಯೋಗಿಗಳು ನೀಡಿದ ಗಮನಾರ್ಹ ಕೊಡುಗೆ.
ತಮ್ಮ ಆರೋಗ್ಯ, ಜೀವನದ ಸುಖಗಳನ್ನೆಲ್ಲ ತ್ಯಾಗಮಾಡಿ, ಹಗಲು ರಾತ್ರಿಯನ್ನದೆ, ಶ್ರೀ ಕುಮಾರ ಶಿವಯೋಗಿಗಳು ಶ್ರಮಿಸಿದರು, ಕಾಯಕ ನಿಷ್ಠೆಯಲ್ಲಿ ತೊಡಗಿ ಪ್ರಸಾದ ಪೂಜೆಗಳನ್ನು ಮರೆತ ಶ್ರೀ ಕುಮಾರ ಶಿವಯೋಗಿಗಳು , ಫೆಬ್ರುವರಿ 19,1930 ಬುಧವಾರ ಕುಮಾg ಶಿವಯೋಗಿಗಳಿಗೆ ವಿಪರೀತ ಜ್ವರಬಾಧೆಯುಂಟಾಗಿ ಕ್ಷಣಮಾತ್ರದಲ್ಲಿ ಅಪಾಯ ತಂದೊಡ್ಡಿತು. ಶ್ರೀ ಕುಮಾರ ಶಿವಯೋಗಿಗಳು ಲಿಂಗದೊಳಗೆ ಬೆರೆಯುವ ಸ್ವ ಇಚ್ಛೆಯನ್ನು ಪ್ರಕಟಿಸಿ ವಟು ಸಾಧಕರು ದೇಶಿಕರನ್ನೊಳಗೊಂಡು ಸರ್ವರನ್ನು ಸರ್ವ ಸಮಾಜದವರನ್ನು ದುಃಖತಪ್ತರನ್ನಾಗಿ ಮಾಡಿದರು .ಅನಂತತೆಯಲ್ಲಿ ಬೆರೆಯುವುದು ತಮ್ಮ ಸ್ವ ಇಚ್ಛೆಯಾಗಿದೆ ಎಂದು ದೃಢಪಡಿಸಿ ಅಂದು ಸಾಯಂಕಾಲ 3 ಘಂಟೆಗೆ ದೇಶಿಕರನ್ನು, ಸಾಧಕರನ್ನು, ವಟುಗಳನ್ನು, ಶಿವಯೋಗ ಮಂದಿರದ ವಿವಿಧ ಶಾಖೆಗಳಲ್ಲಿ ಕಾಯಕ ಮಾಡುವವರನ್ನು, ಗೋ ರಕ್ಷಕರನ್ನು ,ಪ್ರಸಾದ, ವಿಭೂತಿ, ವ್ಯವಸ್ಥಾಪಕರನ್ನು ಕರೆದು ಕುಮಾರಯೋಗಿಗಳು ಹೇಳಿದ ಮಾತುಗಳು ಕರುಣಾ ಸಾಗರದಲ್ಲಿ ಹರಿಯುವ ಮುತ್ತುಗಳಾಗಿ ಪರಿಣಮಿಸಿದವು.
“ಓ, ನನ್ನ ನಿರಂಜನ ದೇಶಿಕರೇ, ನೀವೆಲ್ಲಾ ನನ್ನ ಪೋಷಕರು ನಿಮ್ಮ ಬಾಹ್ಯ ತಪ್ಪುಗಳಿಗೆ ನೀವೇ ಕಾರಣರು .ನಿಮ್ಮ ಅಂತರಂಗದ ತಪ್ಪುಗಳಿಗೆ ನಾನು ಕಾರಣ” ಎಂಬ ನುಡಿಮುತ್ತುಗಳನ್ನು ಉಸುರಿ ಸಮಾಜ , ಸಮಾಜ , ನನ್ನ ಸಮಾಜವೆಂದು ನುಡಿದು ಸಮಾಜ ಸೇವೆಗಾಗಿ ಹುಟ್ಟಿ ಬರುವೆನೆಂದು ಭರವಸೆ ಕೊಟ್ಟು ಕೊನೆಯುಸಿರೆಳೆದರು.
ದೃಢ ಸಂಕಲ್ಪದಿಂದ ಕೊನೆಯುಸಿರೆಳೆದರು. ಸಮಾಜ ಸೇವೆಗೆ ಮರಳಿ ಹುಟ್ಟಿ ಬರುವೆನೆಂದು ನುಡಿದ ಮಾತುಗಳು ದೈವಿ ಸಂಕಲ್ಪ ಸಾಧನೆಯ ಕುರುಹು. ಶ್ರೀ ಕುಮಾರ ಶಿವಯೋಗಿಗಳ ದೇಹ ಕಣ್ಣಿಗೆ ಕಾಣದಿದ್ದರೂ ಅಂದಿಗೂ ಇಂದಿಗೂ ಮುಂದೆಂದಿಗೂ ಅವರು ಕೊಟ್ಟ ಸ್ಪೂರ್ತಿ ಸಮಾಜಕ್ಕೆ ಅವರು ದಯಪಾಲಿಸಿದ ಅಮರವಾಣಿ ಶಾಶ್ವತವಾಗಿ ಉಳಿಯುತ್ತದೆ.
ಶ್ರೀ ಕುಮಾರ ಶಿವಯೋಗಿಗಳು ಧರ್ಮದ ಹಾದಿಯಲ್ಲಿ ತಮ್ಮದೇ ಆದ ವಿಶಿಷ್ಟ ಮಾರ್ಗ ತುಳಿದವರು . ಅವರು ದೈವಿಪುರುಷರಾಗಿ ಶಿವನಲ್ಲಿ ಬೆರೆತು ಶಿವ ಶಕ್ತಿಯಾಗಿ ಶಿವಯೋಗಮಂದಿರದಲ್ಲಿ ವಾಸವಾಗಿದ್ದಾರೆ.
ನೀರು ಹರಿಯುತ್ತದೆ, ತನ್ನ ಸ್ವಾರ್ಥಕ್ಕಾಗಿ ಅಲ್ಲ .ಸರ್ವರ ತೃಷೆಯನ್ನು ಹಿಂಗಿಸುವುದಕ್ಕಾಗಿ ಅದು ಗಿಡ ಮರಗಳನ್ನು ರಕ್ಷಿಸುತ್ತದೆ. ಜೀವಿಗಳಿಗೆ ಪ್ರಾಣಿಗಳಿಗೆ ಜೀವ ತುಂಬುತ್ತದೆ. ಹೂ ಅರಳಿಸುತ್ತದೆ. ಹಣ್ಣುಗಳಿಗೆ ಮಧುರತೆಯನ್ನು ತರುತ್ತದೆ, ಶ್ರೀ ಹಾನಗಲ್ಲ ಕುಮಾರ ಶಿವಯೋಗಿಗಳು ಹೀಗೆಯೇ ಜೀವಿಸಿದರು.
ಸತ್ಯಂ,ಶಿವಂ, ಸುಂದರಮ್,