ಲೇಖಕರು : ಪೂಜ್ಯ ಸದಾಶಿವ ದೇವರು ವಳಬಳ್ಳಾರಿ

ಭಾರತಾಂಬೆಯು ತನ್ನ ಮಡಿಲಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಇಟ್ಟು ತೂಗುತ್ತಿರುವಳು. ಈ ಮೂರುಗಳನ್ನು ನಮ್ಮ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲೂ ಭಾರತವನ್ನು ಮೆರೆಸುತ್ತಿದ್ದೇವೆ. ಭಾರತದ ಕಲೆ ವಿಶ್ವದಲ್ಲಿಯೇ ತನ್ನದೇ ಒಂದು ಅಪ್ರತಿಮ ಸ್ಥಾನವನ್ನು ಪಡೆದಿದೆ. ಬೇಲೂರು, ಹಳೆಬೀಡು, ಎಲ್ಲೋರಾ, ಅಜಂತಾ, ಪಟ್ಟದಕಲ್ಲು, ಬಾದಾಮಿ, ಐಹೊಳೆ ಹೀಗೆ ದೇಶದ ಮೂಲೆ ಮೂಲೆಯಲ್ಲಿ ಹಬ್ಬಿದೆ, ಆ ಕಲೆ ಶಿವಯೋಗಮಂದಿರದಲ್ಲಿಯೂ ಹರಡಿದೆ. ಇಲ್ಲಿರುವ ಮಹಾ ಗುರುಗಳಾದ ಶ್ರೀ ಕುಮಾರೇಶ್ವರ ಕರ್ತೃ ಗದ್ದುಗೆ ಹಾಗೂ ಕಾಷ್ಟದಿಂದ ನಿರ್ಮಿಸಿದ ರಥ ಇದು ವಿಶ್ವದಲ್ಲಿಯೇ ಅತೀ ಎತ್ತರದ ಕಲಾಕೃತಿಯ ರಥವೆನಿಸಿದೆ.
ದ್ರೋಣಾಚಾರ್ಯರ ಶಿಷ್ಯೋತ್ತಮನಾದ ಏಕಲವ್ಯನಿಂದ ಹೆಬ್ಬೆರಳು ಪಡೆದುಕೊಂಡರೆ. ವೀರಶೈವ ಧರ್ಮಕ್ಕೆ ಅಪಾರವಾದ ಸೇವೆ ಸಲ್ಲಿಸಿ ಅಖಿಲ ಭಾರತ ವೀರಶೈವ ಮಹಾಸಭೆ ಹಾಗೂ ಶಿವಯೋಗಮಂದಿರದಂಥ ಮಹಾಸಂಸ್ಥೆಯನ್ನು ಸ್ಥಾಪಿಸಿ ವೀರಶೈವದಲ್ಲಿಯೇ ವೀರಶೈವ ಜ್ಞಾನದ ಬೃಹತ್ ಬೆಳಕನ್ನು ಸದಾಕಾಲ ನಡೆಯುವಂತೆ ಮಾಡಿದ ವೀರಶೈವಧರ್ಮ ಎಂದೆಂದೂ ಅದಃಪತನ ವಾಗದಂತೆ ಮಂದಿರದಿಂದ ಮಹಾ ಪೂಜ್ಯರನ್ನು ತಯಾರುಮಾಡುವ ಕಮ್ಮಟ ಶಾಲೆಯನ್ನಾಗಿ ಪರಿವರ್ತಿಸಿದವರು ಪರಮಪೂಜ್ಯ ದಿವ್ಯಜ್ಯೋತಿ ಲಿಂ. ಹಾನಗಲ್ಲ ಗುರು ಕುಮಾರ ಶಿವಯೋಗಿಗಳು.
‘ಕಲ್ಲರಳಿ ಹೂವಾಗಿ ಕುಮಾರೇಶನ ಗೋಪುರಕ್ಕೆ ಬೆಳಕಾಗಿ’ ಬೆಳಗುವಂತೆ ಅವರ ಶಿಷ್ಯೋತ್ತಮ ರಲ್ಲಿ ಅಗ್ರಗಣ್ಯ ಅವತಾರಿ, ಸದಾಕಾಲ ಸಮಾಜ ಸೇವೆ, ಕ್ರಾಂತಿಯ ಹರಿಕಾರ, ಶಿಕ್ಷಣ ಪ್ರೇಮಿ ‘ನ ಭೂತೋ ನ ಭವಿಷ್ಯತಿ’ ಎನ್ನುವ ರೀತಿಯಲ್ಲಿ ಶಿವಯೋಗ ಮಂದಿರದ ಪ್ರಭೆಯನ್ನು ಭೂಮಿಯ ನಾನಾ ಮೂಲೆಯಲ್ಲಿ ಪಸರಿಸಿ ಪ್ರವಾಸಿ ತಾಣಗಳ ಮಾದರಿಯಲ್ಲಿ ಶಿವಯೋಗ ಮಂದಿರವನ್ನು ಪರಿವರ್ತಿಸಿದರು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು ಹೊಸಪೇಟೆ-ಬಳ್ಳಾರಿ-ಹಾಲಕೆರೆ.
ಶ್ರೀಗಳು ಏನೇ ಮಾಡಿದರು ಅದ್ಭುತ. ಅಮೂಲ್ಯ ಕಾರ್ಯಗಳನ್ನೇ ಕೈಗೊಳ್ಳುವರು ಅಂಥ ಅದ್ಭುತಗಳಲ್ಲಿ ಜಗತ್ತಿಗೆ ಮಾದರಿಯಾದ ಎತ್ತರವಾದ ಮಹಾರಥವನ್ನು ತಮ್ಮ ಮಠದ ಸ್ವಂತ ಖರ್ಚಿನಿಂದ ಶಿವಯೋಗ ಮಂದಿರಕ್ಕೆ ಅರ್ಪಣೆ ಮಾಡಿರುವ ಮಹಾ ಸಾಧಕರಿವರು, ಅಲ್ಲದೆ ಸಾಹಿತ್ಯ ಅಭಿಮಾನಿಗಳಾದ ಇವರು ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸ್ವತಃ ಪೂಜ್ಯರು ಆಧುನಿಕ ವಿಜ್ಞಾನಕ್ಕೆ ಸವಾಲಾದವರು. ಇವರು ಅರ್ಪಿಸಿದ ಬೃಹತ್ ರಥದ ವಿವರಣೆಯನ್ನು ಈ ಕೆಳಗೆ ನೀಡಿದ್ದೇನೆ.

ರಥದ ಶೈಲಿ = ಕರ್ನಾಟಕ ಚಾಲುಕ್ಯ,ಕಲ್ಯಾಣ ಚಾಲುಕ್ಯ,ಹೊಯ್ಸಳ ಶೈಲಿ.
ರಥದ ತಾಳಿಕೆ = ಸುಮಾರು 500 ವರ್ಷಗಳ ಕಾಲ ತಾಳಿಕೆ ಬರಬಹುದು.
ರಥಕ್ಕೆ ಬಳಸಿದ ಕಟ್ಟಿಗೆಗಳು = ಭೋಗಿ, ಸಾಗವಾನಿ,ಮತ್ತಿ, ರಂಜಾ.
ರಥ ನಿರ್ಮಾಣದ ಅವಧಿ = ಸತತ ಐದು ತಿಂಗಳಲ್ಲಿ ಪೂರ್ಣಗೊಂಡಿತು.
ಶ್ರೀ ಕುಮಾರೇಶ್ವರ ರಥದ ಎತ್ತರ
- ಶ್ರೀ ಕಳಸ = 5 ಅಡಿ.
- ಗೋಲಾಕಾರದ ಶಿಖರ 1 = 4ಅಡಿ.
- ಗೋಲಾಕಾರದ ಶಿಖರ 2 = 9 ಅಡಿ.
- ಶರಣರ ಮಂಟಪ = 14 ಅಡಿ.
- ದೇವರ ಮಂಟಪ = 9 ಅಡಿ.
- ಗಡ್ಡೆ = 23 ಅಡಿ.
- ಗಾಲಿ = 9* ಅಡಿ.
ರಥದ ಒಟ್ಟು ಎತ್ತರ = 73 ಅಡಿಗಳು
[* ಗಾಲಿಯ ಅರ್ಧ ಭಾಗಕ್ಕೆ ರಥ ಬರುವುದರಿಂದ ಗಾಲಿಯನ್ನು 4 – 1/2 ಅಡಿ ಗಣನೆಮಾಡಲಾಗಿದೆ.]
ಭಾವಚಿತ್ರ – ರಥದ ಸುತ್ತಲೂ 12 ಶಿವಶರಣರ ಭಾವಚಿತ್ರ ರಚಿಸಲಾಗಿದೆ.
ದೇವರ ಮಂಟಪದ ಸುತ್ತಲೂ =
1) ಶ್ರೀ ಬಸವೇಶ್ವರರು. 2) ರೇಣುಕಾಚಾರ್ಯರು.
3) ಅಲ್ಲಮಪ್ರಭುದೇವರು. 4) ಸಿದ್ಧಲಿಂಗೇಶ್ವರರು.
ಮೊದಲನೇ ಶರಣ ಮಂಟಪದಲ್ಲಿ=
1) ಸಿದ್ದರಾಮೇಶ್ವರರು. 2) ಅಕ್ಕಮಹಾದೇವಿ.
3) ಮಡಿವಾಳ ಮಾಚಯ್ಯ. 4)ಮೋಳಿಗೆ ಮಾರಯ್ಯಾ.
ಎರಡನೇ ಶರಣ ಮಂಟಪದಲ್ಲಿ=
1) ಎಳಂದೂರು ಬಸವಲಿಂಗ ಸ್ವಾಮಿಗಳು. 2) ಶ್ರೀವಿಜಯ ಮಹಾಂತ ಸ್ವಾಮಿಗಳು.3) ಬಿದರಿ ಕುಮಾರಸ್ವಾಮಿಗಳು. 4) ವೈರಾಗ್ಯದ ಮಲ್ಲಣ್ಣಾರ್ಯರು.
ಕಂಬಗಳು = ರಥದಲ್ಲಿ 24 ಕಂಬಗಳಿವೆ ಇವು ದಿನದ 24 ಗಂಟೆಗಳ ಸಂಕೇತಗಳಾಗಿವೆ. ದಿನದ ಗಂಟೆಗಳು ಮನುಷ್ಯನ ಜೀವನ ಉತ್ತಮವಾಗಿರಲಿ ಎಂದು, ಪ್ರತಿಯೊಂದು ಕಂಬಕ್ಕೆ ಹಿತ್ತಾಳೆ ಕಳಸವಿದೆ.
ಗಂಟೆಗಳು – ಗಡ್ಡೆಯ ಮೇಲ್ಭಾಗದಲ್ಲಿ 365 ಗಂಟೆಗಳಿವೆ ಒಂದು ವರ್ಷದ ದಿನಗಳು ಸಂಕೇತವಾಗಿವೆ. ವರ್ಷ ಪೂರ್ಣವೂ ಗಂಟೆಯ ಸುಮಧುರ ನಾದದಂತೆ ಜೀವನವು ಮಧುರವಾಗಿರಲಿ.
ಲಿಂಗ ಪೂಜಾ ವಸ್ತುಗಳು = ಬಿಲ್ವಪತ್ರೆ, ರುದ್ರಾಕ್ಷಿ, ಹೂವಿನ ಮಾಲೆಯ ಚಿತ್ರ, ಜೀವನದಲ್ಲಿ ಈ ಮೂರು ವಸ್ತುಗಳು ಮನಸ್ಸಿಗೆ, ದೇಹಕ್ಕೆ ಮತ್ತು ಆತ್ಮಕ್ಕೆ ಶಾಂತಿ ದೊರೆಯಲೆಂದು ಈ ಶಾಂತವಸ್ತುಗಳನ್ನು ಚಿತ್ರಿಸಲಾಗಿದೆ.
ಗಡ್ಡೆಯ ಮಧ್ಯಭಾಗ – ವೀರಶೈವ ಧರ್ಮದ ಪ್ರಮುಖ 24 ಯತಿಗಳ ಭಾವಚಿತ್ರ ಅಳವಡಿಸಿದೆ.
1) ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು.
2) ಎಮ್ಮಿಗನೂರು ಶ್ರೀ ಜಡೆಯಸಿದ್ದರು.
3) ಕಪ್ಪನಹಳ್ಳಿ ಶ್ರೀ ರುದ್ರಮುನಿ ಶಿವಯೋಗಿಗಳು.
4) ಗೋಣಿಬೀಡು ಶ್ರೀ ಸಿದ್ಧವೀರ ಸ್ವಾಮಿಗಳು.
5) ಹಾಲಕೇರಿಯ ಶ್ರೀ ಹಿರಿಯ ಅನ್ನದಾನ ಮಹಾಸ್ವಾಮಿಗಳು. (ಗಡ್ಡದ ಅಜ್ಜನವರು)
6) ಒಳಬಳ್ಳಾರಿ ಶ್ರೀ ಚನ್ನಬಸವ ತಾತನವರು.
7) ಬಳ್ಳಾರಿಯ ಶ್ರೀ ಜ. ಕೊಟ್ಟೂರು ಸ್ವಾಮಿಗಳು.
8) ಹಾವೇರಿಯ ಶಿವಬಸವ ಸ್ವಾಮಿಗಳು.
9) ಶ್ರೀ ಡಾ. ಜಚನಿಯವರು.
10) ಅನಂತಪುರದ ಶ್ರೀ ಲಿಂಗ ಮಹಾಸ್ವಾಮಿಗಳು.
11) ಬಾಗಲಕೋಟೆ ಕರವೀರಮಠದ ಶ್ರೀ ಶಾಂತವೀರ ಸ್ವಾಮಿಗಳು.
12) ರೋಣದ ಶ್ರೀ ಗುರುಪಾದ ಸ್ವಾಮಿಗಳು.
13) ಸವದತ್ತಿ ಶ್ರೀಅಪ್ಪಯ್ಯಸ್ವಾಮಿಗಳು.
14) ಕಂಚುಗಲ್ ಬಿದರಿ ಶ್ರೀ ಪ್ರಭುಕುಮಾರ ಪಟ್ಟಾಧ್ಯಕ್ಷರು.
15) ಸಿಂದಗಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು.
16) ಹಾನಗಲ್ಲ ಶ್ರೀ ಸದಾಶಿವ ಸ್ವಾಮಿಗಳು.
16) ಹುಬ್ಬಳ್ಳಿಯ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು.
17) ನಾಲ್ವತವಾಡ ಶ್ರೀವೀರೇಶ್ವರ ಶರಣರು.
18) ನಾಗನೂರು ಶ್ರೀ ಡಾ. ಶಿವಬಸವ ಸ್ವಾಮಿಗಳು.
19) ಹಾವೇರಿ ಶ್ರೀ ಶಿವಲಿಂಗ ಸ್ವಾಮಿಗಳು.
20) ಹುಬ್ಬಳ್ಳಿಯ ಜ. ಶ್ರೀ ಗಂಗಾಧರ ಸ್ವಾಮಿಗಳು.
22) ಪಂಚಾಕ್ಷರಿ ಶ್ರೀ ಗವಾಯಿಗಳು.
23) ಹಾಲಕೇರಿಯ ಶ್ರೀ ಅನ್ನದಾನ ಸ್ವಾಮಿಗಳು. (ಬೆತ್ತಜ್ಜನವರು)
24) ಹೊಸಪೇಟೆಯ ಶ್ರೀ ಜಗದ್ಗುರು ಡಾ.ಸಂಗನಬಸವ ಸ್ವಾಮಿಗಳು.
ಶಿವಾವತಾರಿಗಳು = ಶಿವನು ಭಕ್ತೋದ್ದಾರಕ್ಕಾಗಿ ಅವತರಿಸಿದ ಎಂಟು ಅವತಾರಗಳ ಚಿತ್ರಗಳು ರಚಿತ ಗೊಂಡಿದೆ.
ದಿಕ್ಪಾಲಕರು = ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಆಗ್ನೇಯ, ನೈಋತ್ಯ, ವಾಯುವ್ಯ, ಈಶಾನ್ಯ ಕ್ರಮವಾಗಿ ಇಂದ್ರ, ಅಗ್ನಿ, ಯಮ, ನಿರುತ, ವರುಣ, ವಾಯು, ಕುಬೇರ, ಈಶ.
ನಂದಿ ಮೂರ್ತಿ = 4 ನಂದಿಮೂರ್ತಿಗಳು.
ಚತುರ್ವಿಧ ಸಾಂಕೇತವಾಗಿವೆ ಇವು ಮಾನವನು ಧರ್ಮ, ಅರ್ಥ, ಕಾಮ, ಮೋಕ್ಷವೆಂಬ ಪುರುಷಾರ್ಥಗಳನ್ನು ಸಾಧಿಸಿ ಮುಕ್ತನಾದಬೇಕೆಂಬುದು ಇದರ ಸಂಕೇತ.
ಗಣಪತಿ – ಮಹಾದ್ವಾರದ ಕೆಳಗೆ ವಿಗ್ನ ವಿನಾಶಕನಾದ ಪ್ರಸನ್ನ ಗಣಪತಿಯ ಮೂರ್ತಿ ಇದೆ.
ರಥದ ದ್ವಾರಪಾಲಕರು – ದೇವಲೋಕದ ದ್ವಾರಪಾಲಕರಾದ ಜಯ – ವಿಜಯರ ಭಾವಚಿತ್ರ.
“ರಥ ನಿರ್ಮಾಣ ಮಾಡುವ ನಿಯಮಗಳಲ್ಲಿ ರಥದಲ್ಲಿ ಸಿಂಹ, ಸರ್ಪ ಮತ್ತು ಮೊಸಳೆಯ ಚಿತ್ರಣವಿರುವ ಬೇಕು” ಆದರೆ ಅವು ಕ್ರೂರ ಪ್ರಾಣಿಗಳು. ರಥವು ಶಾಂತಿಸ್ವರೂಪ ಇರಲೆಂದು ಬಿಲ್ವಪತ್ರೆ, ರುದ್ರಾಕ್ಷಿ, ಹೂವಿನ ಮಾಲೆಯನ್ನು ಕೆತ್ತಲಾಗಿದೆ.
ರಾಶಿಗಳು = ವರ್ಷದ 12 ತಿಂಗಳುಗಳ ಸಾಂಕೇತವಾಗಿ ಮೇಷದಿಂದ ಮೀನದವರಿಗೆ -12 ರಾಶಿಗಳಿವೆ.
ರಥದ ಅಶ್ವಗಳು = ದಶದಿಕ್ಕುಗಳು ಸಾಂಕೇತವಾಗಿ 10 ಕುದುರೆಗಳಿವೆ.
ಆನೆಗಳು = ರಥದ ಮುಂಭಾಗ ಮತ್ತು ಹಿಂಭಾಗದಲ್ಲಿ ಒಟ್ಟು 14 ಆನೆಗಳಿವೆ ಚತುರ್ದಶ ಭುವನಗಳ ಸಾಂಕೇತಿಕವಾಗಿ.

ಗಾಲಿಗಳು = 6 ರಥದ ಗಾಲಿಗಳು ಇರುವವು.
ನಾಲ್ಕು ಯುಗ ಹಾಗೂ ಎರಡು ಆಯನಗಳ ಸಾಂಕೇತವಾಗಿ.

ಮುಂದಿನ ಎರಡು ಗಾಲಿಗಳು – ಕೃತಯುಗ, ತ್ರೇತಾಯುಗ.
ಹಿಂದಿನ ಎರಡು ಗಾಲಿಗಳು – ದ್ವಾಪರಯುಗ, ಕಲಿಯುಗ.
ಮಧ್ಯದ ಎರಡು ಗಾಲಿಗಳು – ಉತ್ತರಾಯಣ, ದಕ್ಷಿಣಾಯಣ.
ರಥದ ತೂಕ = 63 ಟನ್; ಶ್ರೀ ಕುಮಾರೇಶ್ವರ ಜೀವಿತ ಕಾಲ ಹಾಗೂ 63 ಪುರಾತನರ ಸಾಂಕೇತವಾಗಿ.
ರಥದ ಬೀದಿ = 600 ಫೂಟ್ ಉದ್ದ.
ರಥದ ಹಗ್ಗ = 108 ಅಡಿ ಉದ್ದವಿದೆ.
ರಥದ ಮಂಟಪ = 75 ಅಡಿ ಎತ್ತರವಿದೆ.
ರಥ ನಿರ್ಮಾಣದ ಸಂಪೂರ್ಣ ವೆಚ್ಚದ ವಿವರ.
- ಕಟ್ಟಿಗೆಗೆ = 1,00,00,000
- ಕಬ್ಬಿಣಕ್ಕೆ = 6,00,000
- ಹಿತ್ತಾಳೆಗೆ = 1,50,000
- ವೇತನಕ್ಕೆ = 30,00,000
- ರಥವು ಮಂದಿರಕ್ಕೆ ತಲುಪಿಸಲು = 6,00,000
- ಇತರೆ = 30,00,000
- ರಥದ ನಿರ್ಮಾಣದ ವೆಚ್ಚ = 1,73,50,000
- ರಥಬೀದಿ = 2,17,450
- ರಥದ ಹಗ್ಗ = 57,050
- ರಥದ ಮಂಟಪ = 22,00,000
- ಒಟ್ಟು ವೆಚ್ಚ = 24,74,450
= 1,73,50,000
= 25,74,000
ರಥ ನಿರ್ಮಾಣ,ಹಗ್ಗ,ಬೀದಿ,
ಮಂಟಪ ಸಂಪೂರ್ಣ ವೆಚ್ಚದ ವಿವರ = 1,98,24,4540
– ರಥ ನಿರ್ಮಾಣ ಸ್ಥಳ = ಉಡುಪಿಯ ಹೊಸನಗರದಲ್ಲಿ – -ಪೆರ್ಡೂರಿಯ ಬುಕ್ಕಿಗುಡಿಯಂಬಲ್ಲಿ ನಿರ್ಮಾಣಗೊಂಡಿದೆ.
– ನಿರ್ಮಾಣ ಸಂಸ್ಥೆ = ಶ್ರೀ ಡಿಸೈನರ್ಸ ಸಂಸ್ಥೆ.
– ರಥದ ಹಗ್ಗ ನಿರ್ಮಾಣ ಸ್ಥಳ = ಚೆನ್ನೈಯಲ್ಲಿ ನಿರ್ಮಾಣಗೊಂಡಿದೆ.
– ಕುಶಲ ಶಿಲ್ಪಿಗಳು = 53 ಜನ ಸತತ ಕಾರ್ಯ ನಿರ್ವಹಿಸಿದ್ದಾರೆ.
– ನಿರ್ದೇಶಕರು = ಶ್ರೀ ರಾಜಶೇಖರ ಹೆಬ್ಬಾರ್.
– ನಿರ್ಮಾಪಕರು

ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳು.
ಜಗದ್ಗುರು ಶ್ರೀ ಕೊಟ್ಟೂರುಸ್ವಾಮಿ ಸಂಸ್ಥಾನಮಠ. ಹೊಸಪೇಟೆ-ಬಳ್ಳಾರಿ.
ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ. ಹಾಲಕೆರೆ.

ನಮ್ಮ ದೇಶದ ಸಂಸ್ಕೃತಿಯನ್ನು ಧಾರ್ಮಿಕ ಹಿನ್ನೆಲೆಯಲ್ಲಿ ತೋರಿಸಲು ರಥಗಳ ಪಾತ್ರ ಪ್ರಮುಖವಾಗಿವೆ. ಅದರಂತೆ ನಮ್ಮ ಶಿವಯೋಗ ಮಂದಿರದ 69 ಅಡಿ ಎತ್ತರದ ಮಹಾರಥ ವೀರಶೈವ ಧರ್ಮದ ತತ್ವಾಚರಣೆ ಹಾಗೂ ವೀರಶೈವ ದಾರ್ಶನಿಕರ ಚರಿತ್ರೆಯನ್ನು ಸಾರುವಂತಿದೆ, ಶ್ರೀ ಗುರು ಕುಮಾರೇಶ್ವರನ ಕೀರ್ತಿ ಗಗನಚುಂಬಿತವಾಗಿದೆ. ಪ್ರಪಂಚದ ಅತಿ ಎತ್ತರದ ಅಖಂಡ ರಥವಾಗಿದೆ. ರಥದ ನಿರ್ಮಾಣದ ವೆಚ್ಚ 1,73,50,000 ₹ಗಳ ವೆಚ್ಚವಾಗಿದೆ. ಶಿವರಾತ್ರಿಯ ಪುರಾಣದ ಮಂಗಲೋತ್ಸವದಂದು ರಥವನ್ನು ಮಹಾಗುರುಗಳ ಪಾದಕ್ಕೆ ಅರ್ಪಣೆ ಮಾಡಿ ರಥವನ್ನು 8-4-2010 ರಂದು ಎಳೆಯಲಾಯಿತು. ಈ ಭವ್ಯವಾದ ಕಾರ್ಯಕ್ರಮದಲ್ಲಿ ನಾಡಿನ ಗಣ್ಯ ಮಾನ್ಯರು ರಾಜಕೀಯದಲ್ಲಿ ಬಾನೆತ್ತರ ಬೆಳೆದ ಶ್ರೀ ಸೋನಿಯಾ ಗಾಂಧಿಯವರು. ಮಾನ್ಯಶ್ರೀ ಎಲ್.ಕೆ. ಅಡ್ವಾಣಿಯವರು. ಕನ್ನಡ ನಾಡಿನ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು. ಪದ್ಮಭೂಷಣ ಶ್ರೀ ಪುಟ್ಟರಾಜ ಕವಿ ಗವಾಯಿಗಳು.ನಾಡಿನ ಎಲ್ಲಾ ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಗಣ್ಯ ಮಾನ್ಯರು ಆಗಮಿಸಿ ಶ್ರೀ ಗುರು ಕುಮಾರೇಶ್ವರರ ಚಿತ್ದರ್ಶನ, ಪ್ರಸಾದ ಸ್ವೀಕರಿಸಿ ಪುನೀತರಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಮಹಾಶಿವರಾತ್ರಿಯ ಮರುದಿನದಿಂದು ನೂರಾರು ಶಿವಯೋಗಿಗಳ ಸಮ್ಮುಖದಲ್ಲಿ, ಸಾವಿರಾರು ಭಕ್ತರ ನಡುವೆ ಶ್ರೀ ಕುಮಾರೇಶ್ವರ ಮಹಾರಥವನ್ನು ಎಳೆಯುವರು.