ಲೇಖಕರು :
ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ
ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ.
ಮುಂಡರಗಿ
ಭ್ರೂಮಧ್ಯಾಜ್ಞೇಯ ನಿ | ಸ್ಸೀಮ ಪರಬ್ರಹ್ಮವನು
ನೇಮಿಸುತಲೆನ್ನ–ವಾಮ ಹಸ್ತದೊಳಿತ್ತ
ಸ್ವಾಮಿ ಶ್ರೀಗುರುವೆ ಕೃಪೆಯಾಗು ||೮೬||
ಎರಡು ಹುಬ್ಬುಗಳ ಮಧ್ಯಸ್ಥಾನವೇ ಭ್ರೂಮಧ್ಯ. ಹಿಂದೆ ಅದಕ್ಕೆ ಹುಬ್ಬಳ್ಳಿ ಪೇಟೆಯೆಂಬುದಾಗಿ ತಾತ್ತ್ವಿಕವಾಗಿ ವರ್ಣಿಸಲಾಗಿದೆ. ಈ ಭ್ರೂಮಧ್ಯದಲ್ಲಿರುವದು ಆಜ್ಞೇಯಚಕ್ರ. ಇದಕ್ಕೆ ಆಜ್ಞಾಚಕ್ರವೆಂತಲೂ ಹೆಸರು. ಭ್ರೂಮಧ್ಯಕ್ಕೆ ತ್ರಿಕೂಟವೆಂತಲೂ ಇನ್ನೊಂದು ನಾಮವುಂಟು. ಇಲ್ಲಿ ಈಡಾ ಪಿಂಗಳಾ ಮತ್ತು ಸುಷುಮ್ನಾ ನಾಡಿಗಳ ಕೂಟವಿರುವದರಿಂದ ತ್ರಿಕೂಟವೆನಿಸಿದೆ. ʼʼಶಿವಯೋಗ ಪ್ರದೀಪಿಕೆʼ’ಯ ಟೀಕಾಕಾರರು
“ಇಡಾ ವಹತಿ ವಾಮೇ ಚ ಪಿಂಗಳಾ ಯಾತಿ ದಕ್ಷಿಣೇ
ಇಡಾ ಪಿಂಗಳಯೋರ್ಮ ಧ್ಯೆ ಸುಷುಮ್ನಾ ಸುಖರೂಪಿಣೀ ||”
ಎಂದು ಪ್ರತಿಪಾದಿಸಿದ್ದಾರೆ. ಇಂಥ ಭ್ರೂಮಧ್ಯದ ಆಜ್ಞಾಚಕ್ರದಲ್ಲಿರುವ ಬ್ರಹ್ಮನು ನಿಸ್ಸೀಮನು. ಇವನಿಗೆ ಸೀಮೆಯೆಂಬುದಿಲ್ಲ. ಅವನು ಅತ್ಯತಿಷ್ಠದ್ದಶಾಂಗುಲ” ನೆನಿಸಿದ್ದಾನೆ. ಇಲ್ಲಿ ಐಕ್ಯನೇ ಅಂಗನು. ನಿಸ್ಸೀಮಬ್ರಹ್ಮನೇ ಮಹಾಲಿಂಗನು. ಭಕ್ತನು ಆಧಾರಾದಿ ಚಕ್ರಗಳಿಂದ ಮೇಲೆರುತ್ತ ಆಜ್ಞಾಚಕ್ರದಲ್ಲಿ ಮಹಾಲಿಂಗವನ್ನು ಕಂಡು ಮಹಾಲಿಂಗವೇ ತಾನಾಗಿ ಬ್ರಹ್ಮರಂದ್ರದ ನಿಷ್ಕಳಬ್ರಹ್ಮನಲ್ಲಿ ಆನಂದಿಸುವ ಸ್ಥಿತಿಯೇ ಸಮಾಧಿಸ್ಥಿತಿಯೆನಿಸುವದು. ಈ ಭ್ರೂಮಧ್ಯದ ಆಜ್ಞಾಚಕ್ರದ ಸ್ಪಷ್ಟವಾದ ವಿವರವನ್ನು “ಉದ್ಧರಣೆಯ ವಾಚ್ಯ”ದಲ್ಲಿ ಅವಲೋಕಿಸಿ –
ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ,
ಆ ಭೂತತಮಂಧಕಾರ, ದ್ವಿದಳಪದ್ಮ, ಆ ಪದ್ಮ ಅನಂತೆಳೆ
ಮಿಂಚಿನವರ್ಣ, ಆ ದಳದಲ್ಲಿ ‘ಹಂಸ’ (ಹಂಕ್ಷಂ) ಎಂಬೆರಡಕ್ಷರ
ಆ ಕರ್ಣಿಕಾಮಧ್ಯದಲ್ಲಿ ಓಂಕಾರವೆಂಬ ಬೀಜಾಕ್ಷರ
ಆ ಓಂಕಾರ ಅನಂತ ಬೀಜಾಕ್ಷರಂಗಳನೊಳಕೊಂಡಿಹುದು
ನಾದಬಿಂದು-ಕಲೆಗಳಿಗೆ ಆಶ್ರಯವಾಗಿಹುದು
ತತ್ಪದ, ತ್ವಂಪದ, ಅಸಿಪದವೆಂಬಿವನೊಳಕೊಂಡು
ಭ್ರೂಮಧ್ಯದಲ್ಲಿ ಉತ್ತುಂಗ ಕಿರಣರಾಶಿಯೆಂಬ
ತೇಜೋವರ್ಧನಕ್ಕೆ ತಾನೆಯಾಗಿಹುದು.
ಅದು ಪ್ರಣವನಾದ, ಅಲ್ಲಿ ಮಹಾಲಿಂಗ
ಅದಕ್ಕೆ ಪಾತಾಳದಿಕ್ಕನುಳ್ಳ ಹೃದಯವೆಂಬ ಮುಖ
ಶಾಂತ್ಯತೀತೋತ್ತರ ಕಲಾಪರ್ಯಾಯನಾಮವನುಳ್ಳ ಚಿಚ್ಛಕ್ತಿ.
ಆ ಶಕ್ತಿಗೆ ಮಹಾಘನ ಬೆಳಗಿನ ಜ್ಯೋತಿವರ್ಣ
ಅಲ್ಲಿ ನಿರ್ಮುಕ್ತ ಸಾದಾಖ್ಯ ನಿರಾಳವೆಂಬ ಸಂಜ್ಞೆ ಗಂಭೀರದಿಕ್ಕು
ಅಲ್ಲಿ ಅಜಪೇಯನುಚ್ಚರಿಸುತ್ತ ಸದ್ಭಾವವೆಂಬ ಹಸ್ತದಿಂ
ಸುತೃಪ್ತಿದ್ರವ್ಯವನು ಹೃದಯವೆಂಬ ಮುಖಕ್ಕೆ
ಸಮರಸ ಭಕ್ತಿಯಿಂದರ್ಪಿಸುವಳಾ ಶಕ್ತಿ.
ಪರಶಿವ ಪೂಜಾರಿ, ಶಕ್ತಿಡಾಕಿನಿ, ಮಹಾಶ್ರೀಗುರು ಅಧಿದೇವತೆ
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಓಂಕಾರವೆಂಬಬೀಜಾಕ್ಷರ
ಅದು ಪ್ರಣವದ ಜ್ಯೋತಿರಾಕೃತಿಯೊಳಿಹುದು
ಓಂ ಓಂ ಓಂ ಓಂ ಓಂ ಓಂ ಎಂಬ ಬ್ರಹ್ಮಾನಾದಮಂತ್ರ ಮೂರ್ತಿ
ಪ್ರಣವಕ್ಕೆ ನಮಸ್ಕಾರವು.
ಸದ್ಗುರುವು ಈ ಅಜ್ಞಾಚಕ್ರದ ನಿಸ್ಸೀಮಬ್ರಹ್ಮನನ್ನು ಮಹಾಲಿಂಗವನ್ನಾಗಿ ಕರದಿಷ್ಟಲಿಂಗದಲ್ಲಿ ಎರಕಗೊಳಿಸುವನು. ಮಹಾಲಿಂಗವನ್ನು ಆರಾಧಿಸುವ ಐಕ್ಯನು ಸಕಲ ಪದಾರ್ಥಗಳ ತೃಪ್ತಿಯನ್ನು ಸಂತೃಪ್ತಿ ಪ್ರಸಾದವನ್ನಾಗಿಸಿ ಮಹಾಲಿಂಗದ ಸಮರಸದಲ್ಲಿ ಸವಿದು ಬೆರೆದೇಕಮಯನಾಗುವನು. ಇಂಥ ಸಂತೃಪ್ತಿಗೆ ಕಾರಣವಾದ ನಿಸ್ಸೀಮಬ್ರಹ್ಮವನ್ನು ಅಜ್ಞಾಚಕ್ರದಿಂದ ಹೊರತೆಗೆದು ಇಷ್ಟಲಿಂಗದಲ್ಲಿಯೇ ಮಹಾಲಿಂಗವನ್ನಾಗಿ ಕರುಣಿಸಿದ ಶ್ರೀಗುರು ಎನ್ನ ಮಹಾಸ್ವಾಮಿಯೆನಿಸಿದ್ದಾನೆ. ಸರ್ವತಂತ್ರ ಸ್ವತಂತ್ರ ಸ್ವಾಮಿತ್ವ ಅಥವಾ ಪ್ರಭುತ್ವವನ್ನು ಪಡೆದ ನಿರಾಭಾರಿ ಗುರುಪುಂಗವನೆನಿಸಿದ್ದಾನೆ.
ಮಾನಿತ ಶ್ರೀ–ಕಂಠ | ಸ್ಥಾನ ವಿಶುದ್ಧಿಯ ವಿ
ಜ್ಞಾನ ಬ್ರಹ್ಮವನು – ನೀನೊಲಿದು ಕರಕೆ ಕೊ
ಟ್ಟಾನೈಜ ಗುರುವೆ ಕೃಪೆಯಾಗು ||೮೭ ||
ಮಾನವನ ದೇಹದಲ್ಲಿ ಕಂಠವು ಸುಂದರವಾದ ಅವಯವಾಬಗಿದೆ. ಇದಕ್ಕೆ ಎಲುವಿನ ಆಸರವಿಲ್ಲ. ಕೇವಲ ಸ್ನಾಯುಗಳಿಂದ ಸಂಯೋಜಿತವಾಗಿದೆ. ಶರೀರದ ರುಂಡ-ಮುಂಡಗಳನ್ನು ಒಂದುಗೂಡಿಸಿದೆ ಕಂಠ, ಈ ಕಂಠವು ಜ್ಞಾನೇಂದ್ರಿಗಳ ಕಾರ್ಯಕ್ಕೆ ಅತ್ಯಂತ ಸಹಕಾರಿಯಾಗಿದೆ. ಅದರ ಶ್ರೇಷ್ಠತೆಯನ್ನರಿತ ಶಿವಕವಿಯು ಕಂಠಕ್ಕೆ ಶ್ರೀಕಂಠವೆಂದು ಕರೆದಿದ್ದಾನೆ. ಕಂಠವು ಶರೀರದಲ್ಲಿ ಸುಂದರಾಂಗವೆನಿಸಿದಂತೆ ಮಹತ್ವಯುತವೂ ಆಗಿದೆ. ಬ್ರಹ್ಮರಚನೆಯ ಸೊಬಗು ಕಂಠದಿಂದ ಮೇಲೆಯೇ ವ್ಯಕ್ತವಾಗುತ್ತದೆ. ಪಂಚಜ್ಞಾನೇಂದ್ರಿಯಗಳು, ಮೂಲಬ್ರಹ್ಮಸ್ಥಾನವೆನಿಸಿದ ಪಶ್ಚಿಮಚಕ್ರ, ಶಿಖಾಚಕ್ರ, ಬ್ರಹ್ಮರಂಧ ಹಾಗೂ ಆಜ್ಞಾಚಕ್ರಗಳು ಕಂಠದ ಮೇಲ್ಬಾಗದಲ್ಲಿಯೇ ಇವೆ.
ವೈಖರೀವಾಣಿಯ ಉಗಮಸ್ಥಾನವೂ ಕಂಠವಾಗಿದೆ. ಈ ಕಂಠದಲ್ಲಿರುವದು ವಿಶುದ್ಧಿ ಚಕ್ರವು. ಕಂಠವು ಸ್ವರಗಳ ಹಾಗೂ ಧ್ವನಿಗಳ ಪೆಟ್ಟಿಗೆಯೆಂದು ಭಾಷಾ ವಿಜ್ಞಾನಿಗಳು ಬರೆದಿದ್ದಾರೆ. ಕಂಠವಿದು ನಾದಬ್ರಹ್ಮನ ವ್ಯಕ್ತಸ್ಥಾನ. ನಾದವನ್ನು ಸುನಾದವನ್ನಾಗಿ ತೋರುವ ಸ್ಥಾನವೂ ಇದುವೆ. ಸಂಗೀತಸರಸ್ವತಿಗೆ ಆಶ್ರಯಸ್ಥಾನ, ಮತ್ತು ಕಂಠವು ಜೀವನದ ಬೇವು-ಬೆಲ್ಲ (ಕಹಿ-ಸಿಹಿ)ಗಳನ್ನು ನುಂಗವ ಸ್ಥಾನ. ಜೀವನದಲ್ಲಿ ಸುಖ-ದುಃಖಗಳನ್ನು ಸಹಿಸುವದು ಕಂಠ. ಸಮುದ್ರ ಮಂಥನದ ಕಾಲಕ್ಕೆ ಪ್ರಾದುರ್ಭವಿಸಿದ ಘೋರ ವಿಷವನ್ನು ಕಂಠದಲ್ಲಿರಿಸಿಕೊಂಡು ಶಿವನು ನೀಲಕಂಠ ನಾದನು. ಜೀವನದಲ್ಲಿ ಸಂಸಾರದ ಎಂಥ ಸಮಸ್ಯೆಗಳನ್ನಾದರೂ ತಾಳಿಕೊಂಡಿರೆಂತಲೂ ಪತಿಯ ಸೌಭಾಗ್ಯದ ಚಿನ್ಹವೆನಿಸಿದ ತಾಳಿಯನ್ನು ಸತಿಗೆ ಕಟ್ಟುವದು ಕಂಠಕ್ಕಲ್ಲವೆ!
ಜೀವನಾವಶ್ಯಕವಾದ ಲಾಲಾರಸ (ದುಗ್ದರಸ) ಗ್ರಂಥಿಗಳು ಕಂಠದಲ್ಲಿಯೇ ಇರುತ್ತವೆ. ಈ ಗ್ರಂಥಿಗಳಿಗೆ ʼʼಪಿಟ್ಯುಟರಿ ಥೈರಾಯಿಡ್” ಮತ್ತು ‘ಪ್ಯಾರಾಥೈರಾಯಿಡ್ʼ ಎಂದೂ ಕರೆಯುತ್ತಾರೆ. ಸರ್ವಗ್ರಂಥಿ ನಿಯಂತ್ರಕವೆನಿಸಿಕೊಂಡಿರುವ ಪಿಟ್ಯುಟ ಗ್ರಂಥಿಯು ಎಲ್ಲ ಗ್ರಂಥಿಗಳ ಕ್ರಿಯೆಗಳ ಮೇಲೆ ಹತೋಟಿಯಿದೆʼ’ ಮತ್ತು ಮನುಷ್ಯನ ವ್ಯಕ್ತಿತ್ವ ನಿರ್ಧರಿಸುವದು ನಿರ್ನಾಳ (ಪಿಟ್ಯುಟರಿ) ಗ್ರಂಥಿಗಳೆಂಬುದು ಆಶ್ಚರ್ಯವೆನಿಸಿದರೂ ಸತ್ಯ”ವೆ೦ದು ವೈದ್ಯರು ಅನುಭವದಿಂದ ಈ ಮಾತನ್ನು ಬರೆದಿದ್ದಾರೆ. ಅಂದಮೇಲೆ ವಿವಿಧ ರೀತಿಯಲ್ಲಿ ಮಹತ್ವವೆನಿಸಿದ ಈ ಕಂಠವು ಶ್ರೀಕಂಠವಲ್ಲವೆ ! ಇಂಥ ಮನ್ನಣೆವೆತ್ತ ಶ್ರೀಕಂಠದಲ್ಲಿರುವುದು ವಿಶುದ್ಧಿ ಚಕ್ರವು, ಈ ಚಕ್ರ ಪರಿಶುದ್ಧವಾಗಿರುವದರಿಂದಲೆ ವಿಶುದ್ಧಿಯೆನಿಸಿದೆ.
ಶ್ರೀಕಂಠದಲ್ಲಿಯ ವಿಶುದ್ಧಿ ಚಕ್ರದಲ್ಲಿರುವ ಬ್ರಹ್ಮವಸ್ತವು ವಿಜ್ಞಾನಬ್ರಹ್ಮನೆನಿಸಿದ್ದಾನೆ. ವಿಶುದ್ಧತೆಯಲ್ಲಿರುವುದು ವಿಜ್ಞಾನ, ವಿಶುದ್ಧಿಗೆ ಆಧಾರವಾದ ಕಂಠವು ಪರಿಶುದ್ಧವಾಗಿದ್ದರೆ ನಾದವಿಜ್ಞಾನ ಯಥಾರ್ಥವಾಗುವದು. ಕಂಠವು ಅಶುದ್ಧವಾದರೆ ಸ್ವರ ಸಂಯೋಗ ವಿಕೃತವಾಗುವದು. ನಾದವು ಕಠೋರ-ಕರ್ಕಶವೆನಿಸುವದು. ಕಾರಣ ವಿಶುದ್ಧವಾದ ಪದ್ಮದಲ್ಲಿರುವ ಪರಶಿವನು ವಿಜ್ಞಾನಮಯನು. ಇವೆರಡರಲ್ಲಿ ಅದೆಂತಹ ಸಾಮ್ಯ ! ತತ್ತ್ವಜ್ಞಾನಿಗಳ ಪರಿಶೋಧನೆ ಅದ್ಭುತವಾದುದು ಅನುಪಮವಾದುದು. ಇಂಥ ವಿಜ್ಞಾನಬ್ರಹ್ಮವನ್ನು ಗುರುವು ಪ್ರಸಾದಲಿಂಗವನ್ನಾಗಿ ಕರದಿಷ್ಟ ಲಿಂಗದಲ್ಲಿಯೇ ಬೆರೆಯಿಸುತ್ತಾನೆ.
ಸಿಹಿಕಹಿಗಳ ಅನುಭವವನ್ನು ಕಂಠಸ್ಥಾನದ ಶಬ್ದ ದ್ರವ್ಯಗಳನ್ನು ಪ್ರಸಾದಗೊಳಿಸಿ ಪ್ರಸಾದಲಿಂಗಕ್ಕರ್ಪಿಸುವ ಮಹಾನುಭಾವನು ಶರಣನಾಗಿದ್ದಾನೆ. ಶ್ರೀಕಂಠದ ಮುಖಾಂತರ ಕಾರ್ಯವನ್ನು ಪ್ರವೇಶಿಸುವ ಪಡಿಪದಾರ್ಥಗಳಲ್ಲಿ ಪ್ರಾಸಾದಿಕ ಶಕ್ತಿಯನ್ನು ತುಂಬಬಲ್ಲವನೇ ಶರಣನು. ಕಾಯವನ್ನೇ ಪ್ರಸಾದಮಯನಾಗಿಸುವನು ಶರಣನು. ಈ ವಿಶುದ್ಧಿ ಚಕ್ರದ ವಿಶೇಷ ವಿಚಾರವನ್ನು ʼʼಉದ್ಧರಣೆಯ ವಾಚ್ಯʼʼ ದಿಂದ ಅಳವಡಿಸಿಕೊಳ್ಳಿ –
ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ ಆಕಾಶವೆಂಬ ಮಹಾಭೂತ.
ಆ ಭೂತ ಕೃಷ್ಣ (ನೀಲ) ವರ್ಣ, ವರ್ತುಳಾಕಾರ.
ಷೋಡಶದಳ ಪದ್ಮ, ಆ ಪದ್ಮ ನೀಲವರ್ಣ.
ಆ ದಳದಲ್ಲಿ ಅ, ಆ, ಇ, ಈ, ಉ, ಊ, ಋ, ಋ, ಲೈ
ಲೈ, ಏ, ಐ, ಓ, ಔ, ಅಂ, ಅ ಎಂಬ ಹದಿನಾರಕ್ಷರ,
ಆ ಕರ್ಣಿಕಾ ಮಧ್ಯದಲ್ಲಿಯ ಕಾರವೆಂಬ ಬೀಜಾಕ್ಷರ
ಆ ಯಕಾರ ನೀಲವರ್ಣ. ಅದು ಮೇಘಧ್ವನಿ.
ಅಲ್ಲಿ ಪ್ರಸಾದಲಿಂಗ, ಅದಕ್ಕೆ ನೀಲವರ್ಣವನುಳ್ಳ ಈಶಾನ್ಯಮುಖ.
ಶಾಂತ್ಯತೀತ ಕಲಾಪರ್ಯಾಯ ನಾಮವನುಳ್ಳ ಪರಾಶಕ್ತಿ,
ಆ ಶಕ್ತಿ ನೀಲವರ್ಣ, ಅಲ್ಲಿ ಶಿವಸಾದಾಖ್ಯಪರವೆಂಬ ಸಂಜ್ಞೆ.
ಊರ್ಧ್ವದಿಕ್ಕು. ಶಿವಗಾಯತ್ರಿವೇದವನುಚ್ಚರಿಸುತ್ತ
ಸುಜ್ಞಾನಹಸ್ತದಿಂ ಸುಶಬ್ದದ್ರವ್ಯವನ್ನು ಶ್ರೋತ್ರವೆಂಬ
ಮುಖಕ್ಕೆ ಆನಂದ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ.
ಸದಾಶಿವ ಪೂಜಾರಿ. ಆ ಶಕ್ತಿ ತಾಕಿನಿ.
ಮಹಾದೇವ (ಸದಾಶಿವ) ನದಿ ದೇವತೆ. ಇಂತಿವೆಲ್ಲಕ್ಕೂ
ಮಾತೃಸ್ಥಾನವಾಗಿಹುದು ಯ ಕಾರವೆಂಬ ಬೀಜಾಕ್ಷರ
ಅದು ಪ್ರಣವದರ್ಪಣಾಕೃತಿಯಲ್ಲಿಹುದು.
ಓಂ ಓಂ ಓಂ ಯಾಂ ಯಾಂ ಎಂಬ ಬ್ರಹ್ಮನಾದ
ಮಂತ್ರಮೂರ್ತಿ ಪ್ರಣವಕ್ಕೆ ನಮಸ್ಕಾರವು.
ಇದು ವಿಶುದ್ಧಿಚಕ್ರ, ಶರಣಸ್ಥಲ.
ಈ ವ್ಯಾಖ್ಯೆಯಿಂದ ವಿಜ್ಞಾನಬ್ರಹ್ಮ ಹಾಗೂ ವಿಶುದ್ಧಿ ಚಕ್ರದ ಸ್ವರೂಪವು ವೇದ್ಯವಾಗುವದು. ಇಂಥ ವಿಜ್ಞಾನಬ್ರಹ್ಮವನ್ನು ನೈಜವಾಗಿ ಪ್ರಸಾದಲಿಂಗವನ್ನಾಗಿ ಕರುಣಿಸುವವನು ಶ್ರೀಗುರುವು. ಅವನಿಗೆ ಇದರಲ್ಲಿ ಅಸ್ವಾಭಾವಿಕತೆಯೆಂಬುದು ಇಲ್ಲವೇ ಇಲ್ಲ.
ಕುಂದದಾ ಸದುಹೃದಯ | ಮಂದಿರದನಾಹತಾ-
ನಂದಬ್ರಹ್ಮವನು-ತಂದೆನ್ನ ಕರಕಿತ್ತ
ತಂದೆ ಶ್ರೀಗುರುವೆ ಕೃಪೆಯಾಗು ॥ ೮೮ |
ನ್ಯೂನತೆಯಿಲ್ಲದ, ಸಂಕುಚಿತವಾಗದ, ಕುಂದಿಲ್ಲದ, ಕುಂದದ, ವಿಶಾಲವೂ ದಯಾಪೂರಿತವೂ ಆದ ಹೃದಯ ಮಂದಿರವೇ ಅನಾಹತ ಚಕ್ರಕ್ಕೆ ಆಧಾರ. ಹೃದಯ ವೈಶಾಲ್ಯತೆಯೇ ಮುಖದ ಕನ್ನಡಿ.
ಹೃದಯ ಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ
ಆ ಭೂತ ಮಾಂಜಿಷ್ಠವರ್ಣ, ಷಟ್ಕೋಣ ದ್ವಾದಶದಳಪದ್ಮ
ಆ ಪದ್ಮ ಕುಂಕುಮ (ಮಾಂಜಿಷ್ಣ) ವರ್ಣ
ಆ ದಳಗಳಲ್ಲಿ-ಕ, ಖ, ಗ, ಘ, ಙ, ಚ, ಛ,ಜ,ಝ,ಞ,ಟ,ಠ
ಎಂಬ ಹನ್ನೆರಡಕ್ಷರ
ಆ ಕರ್ಣಿಕಾ ಮಧ್ಯದಲ್ಲಿ ವಾ ಕಾರವೆಂಬ ಬೀಜಾಕ್ಷರ.
ಆ ವಾ ಕಾರ ಶ್ವೇತ (ಶುಭ್ರ) ವರ್ಣ. ಅದು ಭೇರಿನಾದ.
ಅಲ್ಲಿ ಜಂಗಮಲಿಂಗ ಅದಕ್ಕೆ ಕೆಂಪು ವರ್ಣವನುಳ್ಳ ತತ್ಪುರುಷ ಮುಖ.
ಶಾಂತಿಕಲಾಪರ್ಯಾಯ ನಾಮವನುಳ್ಳ ಆದಿಶಕ್ತಿ
ಆ ಶಕ್ತಿ ಮಾಂಜಿಷ್ಠವರ್ಣ ಅಲ್ಲಿ ಅಮೂರ್ತಸಾದಾಖ್ಯ
ಗೂಢ (ಲಿಂಗಕ್ಷೇತ್ರ)ವೆಂಬ ಸಂಜ್ಞೆ ಉತ್ತರದಿಕ್ಕು
ಅಥರ್ವಣವೇದವನುಚ್ಚರಿಸುತ್ತ ಸುಮನವೆಂಬ ಹಸ್ತದಿಂ
ಸುಸ್ಪರ್ಶನ ದ್ರವ್ಯವನು ತ್ವಕ್ಕು ಎಂಬ ಮುಖಕ್ಕೆ
ಅನುಭವ ಭಕ್ತಿಯಿಂದರ್ಪಿಸುವಳಾ ಶಕ್ತಿ . ಈಶ್ವರ ಪೂಜಾರಿ.
ಶಕ್ತಿ ಕಂಕಾಳಿ ಭೀಮ (ಈಶ್ವರ) ನಧಿದೇವತೆ.
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ವಾ ಕಾರವೆಂಬ ಬೀಜಾಕ್ಷರ.
ಅದು ಪ್ರಣವದ ಅರ್ಧಚಂದ್ರಾಕೃತಿಯಲ್ಲಿಹುದು.
ಓಂ ಓಂ ಓಂ ವಾಂ ವಾಂ ವಾಂ ಎಂಬ ಬ್ರಹ್ಮನಾದ
ಮಂತ್ರಮೂರ್ತಿ ಪ್ರಣವಕ್ಕೆ ನಮಸ್ಕಾರವು.
ಇದು ಅನಾಹತ ಚಕ್ರ, “ಪ್ರಾಣಲಿಂಗಸ್ಥಲ’ವು (ಉ. ವಾಚ್ಯ)
ಹೀಗೆ ಪ್ರಾಣ ಲಿಂಗಿಯು ಹೃದಯಮಂದಿರದ ಅನಾಹತಚಕ್ರದ ಆನಂದ ಬ್ರಹ್ಮವನ್ನು ಜಂಗಮ ಲಿಂಗವನ್ನಾಗಿ ಅಳವಡಿಸಿಕೊಳ್ಳುತ್ತಾನೆ. ಈ ಕಲೆಯನ್ನು ಕರಕಿತ್ತ ತಂದೆಯು ಶ್ರೀಗುರುವು.
ಜೀವನದಲ್ಲಿ ಸದುಹೃದಯವುಳ್ಳವನು ಆನಂದವನ್ನು ಅನುಭವಿಸುತ್ತಾನೆ. ಅಂಥವನ ಹೃದಯಭೂಮಿಕೆಯನ್ನು ದುಃಖ-ದುಮ್ಮಾನಗಳು ಪ್ರವೇಶಿಸಲಾರವು. ಅವನ ಆನಂದಕ್ಕೂ ಕುಂದು ಕೊರತೆ ಬಾರದು. ಆನಂದಬ್ರಹ್ಮವೇ ಅನಾಹತ ಚಕ್ರದಿಂದ ಹೊರಹೊಮ್ಮಿ ಕರದಿಷ್ಟಲಿಂಗದಲ್ಲಿ ಜಂಗಮಲಿಂಗವಾಗಿ ರೂಪುಗೊಳ್ಳು ವದು. ಜಂಗಮನು ಜ್ಞಾನಮೂರ್ತಿಯು, ಜ್ಞಾನಿಯಾದವನ ಆನಂದಕ್ಕೆ ಕುಂದೆಂಬುದು ತೋರುವದಿಲ್ಲ. ತಂದೆಯು ಮಗನಿಗೆ ಸದಾ ಆನಂದವನ್ನು ಉಂಟುಮಾಡಲು ಬಯಸಿದಂತೆ ಗುರುತಂದೆಯು ಆನಂದಬ್ರಹ್ಮವನ್ನು ತೋರಿಸಿಕೊಟ್ಟ ಮೇಲೆ ನಾನು ಆನಂದ ಭರಿತನಲ್ಲವೆ ! ಚನ್ನ ಸದಾಶಿವಯೋಗಿಯ ‘ʼಶಿವಯೋಗ ಪ್ರದೀಪಿಕೆ” ಯಲ್ಲಿ.
ಅಧೋಮುಖಾಷ್ಟ-ಪತ್ರಾಬ್ಜ–
ಯುಕ್ತಂ ಹೃಚ್ಚಕ್ರಮಿಷ್ಟದಂ |
ತನ್ಮಧ್ಯ ಕರ್ಣಿಕಾಂ ಜ್ಯೋತಿ-
ಲಿಂಗಾಕಾರಮಿಮಾಂ ಸ್ಮರೇತ್ ||
ಎಂದು ಅನಾಹತ ಚಕ್ರದ ವಿವರಣೆಯನ್ನು ಪ್ರತಿಪಾದಿಸಿದರೆ ಅದಕ್ಕೆ ನಿಜಗುಣರು ತಮ್ಮ ಪಾರಮಾರ್ಥ ಪ್ರಕಾಶಿಕೆಯ ತೃತೀಯ ಪರಿಚ್ಛೇದದಲ್ಲಿ ‘ʼಹೃದಯ ಸ್ಥಾನದಲ್ಲಿಯ ಅನಾಹತನಾದಕ್ಕೆ ಕಾರಣಮಪ್ಪುದರಿಂದನಾಹತ ಸಂಜ್ಞೆಯುಳ್ಳ ʼʼಹೃದಯಚಕ್ರವು ಕದಳೀ ಕುಸುಮದಂತಧೋಮುಖವಾಗಿ ವಿಕಾಸಮಾದ ಬಾಹ್ಯದಳಂಗಳೆಂಟರ ಮಧ್ಯದಲ್ಲಿ ಗೋಪ್ಯಮಾದ ನಾಲ್ಕು ದಳಂಗಳುಳ್ಳುದಾ ಕಮಲಕರ್ಣಿಕೆಯನೆ ಜ್ಯೋತಿರ್ಮಯ ಲಿಂಗಾಕಾರ ಮಾಗಿ ಧ್ಯಾನಿಸಲ್ವೇಳ್ಕುಂ |” ಎಂಬ ಅರ್ಥವಿಸ್ತಾರವನ್ನು ಗೈದಿರುವರು.
ಹೃದಯದ ದ್ವಾದಶದಳದ ಅನಾಹತಪದ್ಮವು ಬಾಳೆಯ ಗೊನೆಯಂತೆ (ಹೂವಿನಗೊನೆ) ಕೆಳಮುಖವಾದ ಎಂಟುದಳಗಳಿಂದ ಕೂಡಿದ್ದು ಒಳಭಾಗದಲ್ಲಿ ಗೋಪ್ಯವೆನಿಸಿದ ನಾಲ್ಕು ದಳಗಳು ಮೇಲ್ಮುಖವಾಗಿ ಶೋಭಿಸುತ್ತವೆ. ಕುಂಕುಮವರ್ಣದ ಕಮಲದಲ್ಲಿರುವ ಆನಂದಬ್ರಹ್ಮವೇ ಕರದಿಷ್ಟಲಿಂಗದಲ್ಲಿ ಜಂಗಮಲಿಂಗ ವಾಗಿರುವದು.
ಹೃದಯದ ಕಮಲವು ಎಂಟುದಳಗಳಿಂದ ಸ್ಫುಟವಾಗಿಯೂ ಅದರಲ್ಲಿ ನಾಲ್ಕು ದಳಗಳು ಗೋಪ್ಯವಾಗಿರುವದರಿಂದ ಅನೇಕರು ಹೃನ್ಮಾನಸ-ಸರೋವರದಲ್ಲಿ ಅಷ್ಟದಳ ಕಮಲವೆಂದೇ ವರ್ಣಿಸಿರುವರು. ಈ ಕಮಲದ ಮಧ್ಯಭಾಗದ ಚತುರ್ದಳಗಳ ಮಧ್ಯದಲ್ಲಿಯೇ ಶಿವನಿರುವನು ಪರಶಿವನು ಹೃದಯ, ಭ್ರೂಮಧ್ಯ ಮತ್ತು ಬ್ರಹ್ಮ ರಂಧ್ರಗಳೆಂಬ ಈ ಮೂರು ಸ್ಥಾನಗಳಲ್ಲಿರುವನೆಂಬ ಮಾತನ್ನು ಅನುಭವಿಗಳು ಪ್ರತಿಪಾದಿಸಿದ್ದುಂಟು. ಅಜ್ಞಾನಾವೃತವಾದ ಚೈತನ್ಯವು ಜೀವವೆನಿಸುವದು. ಜೀವಾತ್ಮನು ಅಷ್ಟದಳಕಮಲದಲ್ಲಿ ಸಂಚಾರಮಾಡುತ್ತಿದ್ದು ಗೋಪ್ಯಮುಖದ ಚತುರ್ದಳಗಳಲ್ಲಿಯ ಈಶ್ವರ ಚೈತನ್ಯವನ್ನು ಅರಿಯದೆ ದಳಗತವಾದ ವೃತ್ತಿಯನ್ನು ಅನುಭವಿಸುತ್ತಿರುವನು. ಚನ್ನಬಸವಣ್ಣನವರು ಅಷ್ಟದಳ ಕಮಲದ ವಿವರವನ್ನು ಈ ರೀತಿಯಾಗಿ ವಿವರಿಸಿರುವರು –
ಇಂದ್ರದಳವೇರಲು ಗುಣಿಯಾಗಿಹನು.
ಅಗ್ನಿದಳವೇರಲು ಹಸಿವನು.
ಯಮದಳವನೇರಲು ದುರಿತಚೇಷ್ಟಿತನಾಗಿಹನು.
ನೈಋತ್ಯದಳವೇರಲು ಕೋಪಿಸುತ್ತಿಹನು.
ವರುಣದಳವೇರಲು ನಿದ್ರೆಗೈವನು
ವಾಯವ್ಯದಳವೇರಲು ಸಂಚಲನಾಗಿಹನು
ಕುಬೇರದಳವೇರಲು-ಧರ್ಮಬುದ್ಧಿಯಾಗಿಹನು
ಈಶಾನ್ಯದಳವೇರಲು ವಿಷಯಾತುರನಾಗಿಹನು
ಮಧ್ಯಸ್ಥಾನಕ್ಕೆ ಬಂದಲ್ಲಿ ಸದ್ಭಾವಿಯಾಗಿ
ಮೋಕ್ಷವ ಬಯಸುತ್ತಿಹನು
ಇಂತೀ ಅಷ್ಟದಳಂಗಳಲ್ಲಿ ತಿರುಗುವ ಹಂಸನ
ನೆಲೆಯ ಕೆಡಿಸಿ ಸದ್ಭಾವಿಯಾಗಿರಬಲ್ಲ
ಕೂಡಲಚನ್ನಸಂಗಾ ! ನಿಮ್ಮ ಶರಣ.
ಮಾನಸಸರೋವರ ಮಧ್ಯದ ಹಂಸನಾದ ಜೀವಾತ್ಮನು ಪೂರ್ವದಿಕ್ಕಿನ ಇಂದ್ರದಳಕ್ಕೆ ಬರಲು ಸದ್ಗುಣಿಯಾಗುವನು. ಆಗ್ನೀಯದಿಕ್ಕಿನ ಅಗ್ನಿದಳದಲ್ಲಿ ಹಸಿವುಳ್ಳವನೂ, ದಕ್ಷಿಣ ದಿಕ್ಕಿನ ಯಮದಳದಲ್ಲಿ ದುರಿತಕರ್ಮಸ್ವಭಾವವುಳ್ಳವನೂ, ನೈಋತ್ಯ ದಿಕ್ಕಿನ ನೈಋತ್ಯ ದಳದಲ್ಲಿ ಕೋಪವುಳ್ಳವನೂ, ಪಶ್ಚಿಮ ದಿಕ್ಕಿನ ವರುಣನ ದಳದಲ್ಲಿ ನಿದ್ರಾಪರನೂ, ವಾಯವ್ಯದಿಕ್ಕಿನ ವಾಯವ್ಯದಳದಲ್ಲಿ ಚಂಚಲನೂ, ಉತ್ತರ ದಿಕ್ಕಿನ ಕುಬೇರನ ದಳದಲ್ಲಿ ಧರ್ಮ ಬುದ್ಧಿಯುಳ್ಳವನೂ, ಈಶಾನ್ಯದಿಕ್ಕಿನ ಈಶಾನ್ಯದಳದಲ್ಲಿ ವಿಷಯಾತುರನೂ ಆಗುವನು. ಆಯಾ ದಳಗಳನ್ನು ಆಶ್ರಯಿಸುತ್ತಿರಲು ಆಯಾಗುಣವುಳ್ಳ ಜೀವನು ಧರ್ಮಬುದ್ಧಿಯಿಂದ ಮಧ್ಯಸ್ಥಾನಕ್ಕೆ ಬರಲು ಮಹಾ ಚೈತನ್ಯನ ಸನ್ನಿಧಿಯಲ್ಲಿ ಸದ್ಭಾವಿ ಯಾಗಿ ಮೋಕ್ಷಾಪೇಕ್ಷಿಯಾಗುವನು. ಶರಣರು ಈ ಅಷ್ಟದಳಂಗಳಲ್ಲಿ ಸಂಚರಿಸುವ ಜೀವಾತ್ಮನಾದ ಹಂಸನ ನೆಲೆಯನ್ನು ಬದಲಿಸಿ ಆಧಾರಾದಿ ಚಕ್ರಗಳಲ್ಲಿ ಭಕ್ತಾದಿ ಸ್ಥಲಕ್ಕನುಗುಣವಾಗಿ ಆಚಾರಾದಿ ಲಿಂಗಗಳನ್ನು ಅರ್ಚಿಸುತ್ತ ಭ್ರೂಮಧ್ಯದ ಮಹಾಲಿಂಗದಲ್ಲಿ ಐಕ್ಯಸ್ಥಿತಿಯನ್ನು ಹೊಂದುವ ಶಕ್ತಿಯನ್ನು ಪಡೆದಿರುತ್ತಾರೆ. ಸದ್ಗುರುವು ಶರಣನಿಗೆ ನವಚಕ್ರಗತಬ್ರಹ್ಮನನ್ನು ನವಲಿಂಗಗಳನ್ನಾಗಿ ಸಂಸ್ಕರಿಸುತ್ತಾನೆ; ಕರುಣಿಸುತ್ತಾನೆ.
ಸಾಮಾನ್ಯವಾಗಿ ಆತ್ಮನ ವಿಚಾರಬರಲು ಹೃದಯವನ್ನೇ ಪ್ರತಿಯೊಬ್ಬನು ಮುಟ್ಟಿಕೊಳ್ಳುತ್ತಾನೆ. ಅಂತೆಯೇ ಆತ್ಮನನ್ನು ಅರಿಯುವ ಶಾಸ್ತ್ರಕ್ಕೆ ಅಧ್ಯಾತ್ಮ ಅಥವಾ ಆಧ್ಯಾತ್ಮ ಶಾಸ್ತ್ರವೆಂಬ ಹೆಸರು ಸಾರ್ಥಕವಾಗಿದೆ. ಉಪನಿಷದಾಗಮಗಳೂ ಸಹ ಆತ್ಮನನ್ನು ಹೃದಯದಲ್ಲಿಯೇ ವರ್ಣಿಸಿವೆ ‘ಶ್ವೇತಾಶ್ವತರೋಪನಿಷತ್ತಿ’ನಲ್ಲಿ-
“ಅಂಗುಷ್ಠ ಮಾತ್ರಃ ಪುರುಷಃ
ಅಂತರಾತ್ಮಾ ಸದಾ ಜನಾನಾಂ ಹೃದಯೇ ಸನ್ನಿವಿಷ್ಠಃ |ʼʼ
ಅಂಗುಷ್ಠ ಪ್ರಮಾಣದ ಪುರುಷನು ಜನರ ಹೃದಯ ಮಂದಿರದಲ್ಲಿರುತ್ತಾನೆಂದು ಹೇಳಿದೆ ಭಗವದ್ಗೀತೆಯಲ್ಲಿ
“ಈಶ್ವರಃ ಸರ್ವಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ ।”
ಸಕಲ ಪ್ರಾಣಿಗಳ ಹೃದಯಸ್ಥಾನದಲ್ಲಿ ಈಶ್ವರನಿದ್ದಾನೆಂದು ಅರ್ಜುನನಿಗೆ ಕೃಷ್ಣನು ಬೋಧಿಸಿದ್ದಾನೆ. ಹೃದಯ ಕಮಲ ಕರ್ಣಿಕಾ ವಾಸದಲ್ಲಿರುವ ಹಂಸನನ್ನು ಅರಿಯ ಬೇಕೆನ್ನುವ ಅನೇಕ ಪ್ರಮಾಣಗಳು ಕಾಣಬರುತ್ತವೆ.
“ಪಶ್ಯಾಮಿ ತಂ ಸರ್ವಜನಾಂತರಸ್ಥಂ
ನಮಾಮಿ ಹಂಸಂ ಪರಮಾತ್ಮರೂಪಮ್ ।।’
ಯೋಗ ಶಿಖೋಪನಿಷತ್ಕಾರರು ಸಕಲರ ಹೃದಯಾಂತರಾಳದಲ್ಲಿ ನೆಲಸಿದ ಪರಮಾತ್ಮನಿಗೆ ವಂದಿಸಿದ್ದಾರೆ. ಮತ್ತು –
“ಹಂಸ ಏವ ಪರೋ ರುದ್ರಃ ಹಂಸ ಏವ ಪರಾತ್ಪರಃ |
ಸರ್ವದೇವಸ್ಯ ಮಧ್ಯಸ್ಥೋ ಹಂಸ ಏವ ಮಹೇಶ್ವರಃ |’
ಸರ್ವರ ದೇಹ ಮಧ್ಯಸ್ಥನಾದ ಹಂಸನೇ ರುದ್ರರೂಪನು. ಪರಾತ್ಪರ ಪರಮೇಶ್ವರ ನೆನಿಸಿದ್ದಾನೆ. ಅಂತೆಯೇ ಕನ್ನಡ ಜಾನಪದಕವಿಯೆಂದು ಕೀರ್ತಿವೆತ್ತ ಸರ್ವಜ್ಞನು ‘ತನ್ನಂತೆ ಪರರ ಬಗೆದೊಡೆ ಕೈಲಾಸಬಿನ್ನಾಣವಕ್ಕು” ಯೆಂದು ಸಾರಿದ್ದಾನೆ. ಜ್ಞಾನಿಗಳು ಇಂಥ ಹಂಸನನ್ನು ಅರಿತು ಸಮದೃಷ್ಟಿಯನ್ನು ಸಂಪಾದಿಸಿ ಪರಮಹಂಸರೆನಿಸುತ್ತಾರೆ.
‘ಹಂಸ’ ಮಂತ್ರಕ್ಕೆ ಹಂಸ-ವಿದ್ಯೆ” ”ಯೆಂತಲೂ ಕರೆಯುತ್ತಾರೆ. ಹಂಸಜಪವನ್ನು ಜಪಿಸದಿರುವ ಜಂತುಗಳು ಇರುವದಿಲ್ಲ. ಉಸಿರಾಡಿಸುವ ಪ್ರತಿಯೊಂದು ಪ್ರಾಣಿಯು ಹಂಸವನ್ನು ಉಚ್ಚರಿಸುತ್ತದೆ. ಆದರೆ ಅದಕ್ಕೆ ಅದರ ಅರಿವಿರುವದಿಲ್ಲ. ಶ್ವಾಸವು ಹೊರಬರುವಾಗ ‘ಹ’ಕಾರದಿಂದಲೂ ಒಳಗೆ ಹೋಗುವಾಗ ‘ಸʼ ಕಾರವಾಗಿಯೂ ಅಭಾಸವಾಗುತ್ತದೆ. ಹಿಂದೆ ತಿಳಿಸಿದಂತೆ ಪ್ರತಿನಿತ್ಯ ಜೀವಾತ್ಮನು ೨೧,೬೦೦ ಸಲ ಉಸಿರಾಡಿಸುತ್ತಾನೆ. ಅದನ್ನು ಕ್ರಮಗೊಳಿಸಿ ಜ್ಞಾನಪೂರ್ವಕ ಪ್ರಣವದೊಡನೆ ಉಸಿರಾಡಿಸಿದರೆ ಅದುವೆ ಹಂಸಮಂತ್ರವಾಗುವದು. “ಸಿದ್ಧಾಂತ ಶಿಖಾಮಣಿ’ಯಲ್ಲಿ
ಹಂಸರೂಪಂ ಪರಾತ್ಮಾನಂ
ಸೋಽಹಂಭಾವೇನ ಭಾವಯೇತ್ ||
ಹಂಸರೂಪ ಪರಮಾತ್ಮನನ್ನು ‘ಸೋಹಂ’ ಭಾವದಿಂದ ಭಾವಿಸಬೇಕೆಂದು ಪ್ರತಿಪಾದಿ ಸಲ್ಪಟ್ಟಿದೆ. ‘ಹಂಸ’ ಮಂತ್ರವು ವೈಕೃತ ಪ್ರಾಣಾಯಾಮವಾಗಿ ‘ಸೋಹಂ’ ಎಂದೆನಿಸುವದು. ವೈಕೃತಪ್ರಾಣಾಯಾಮವೆಂದರೆ ರೇಚಕ-ಪೂರಕ-ಕುಂಭಕಗಳಿಂದ ಪ್ರಾಣ ನಿರೋಧಿಸಲ್ಪಡುವಂಥಹದು. ಈ ವಿಚಾರಗಳು ಜ. ಚ. ನಿ.ಯವರ ‘ಪರಮ ಹಂಸ’ ಪುಸ್ತಿಕೆಯಲ್ಲಿ ಅವಗತವೆನಿಸುವವು.
ಹಂಸ ಅಥವಾ ಸೋಹಂ ಸಾಧನೆಗಿಂತ ಶರಣರ ಷಟ್‌ಸ್ಥಲ ಸಿದ್ಧಾಂತ ಮಿಗಿಲಾಗಿದೆ. ಪರಮಹಂಸವೆನಿಸುವವನು ಕೇವಲ ಜ್ಞಾನ ಮಾರ್ಗಾವಲಂಬಿಯಾಗಿರುತ್ತಾನೆ. ಶರಣನು ಅಷ್ಟದಳಂಗಳಲ್ಲಿ ತಿರುಗುವ ಹಂಸನ ನೆಲೆಯನ್ನು ಕೆಡಿಸಿ ಜ್ಞಾನಕ್ರಿಯೆಗಳಿಂದ ಸದ್ಭಾವಿಯಾಗಿ ಅನಾಹತ ಚಕ್ರದ ಅರಿವುಳ್ಳವನಾಗಿ ಆನಂದ ಬ್ರಹ್ಮವನ್ನು ಜಂಗಮಲಿಂಗವನ್ನಾಗಿ ಅರ್ಚಿಸಿ ಅನುಭವಿಯಾಗುತ್ತಾನೆ. ಹೃದಯ ಕಮಲದಿಂದ ಮೇಲೇರಿ ಭ್ರೂಮಧ್ಯಕ್ಕೆ ಬಂದು ಮಹಾಲಿಂಗನ ದರ್ಶನ ಪಡೆಯುತ್ತಾನೆ. ಬಾಲಲೀಲಾ ಮಹಾಂತರ
ಅಷ್ಟದಳದ ಕಮಲ ತೊಟ್ಟಿಲೊಳಗೆ ಮಲಗಿ |
ಶ್ರೇಷ್ಠ ಸದ್ಗುಣ ಹಸ್ತ ಪದಗಳನಾಡುತ |
ನೆಟ್ಟನೆ ನಿಟಲಭ್ರೂಮಧ್ಯದ ಜ್ಯೋತಿಯ |
ದೃಷ್ಟಿಸಿ ನೋಡುತ ಕುಲುಕುಲು ನಗುತಿಹ
ಎನ್ನುವ ಈ ನುಡಿ ಸುಂದರ ಪ್ರಮಾಣವಾಗಿದೆ. ಅದು ಕಾರಣ ಹೃದಯಕಮಲದ ಆನಂದ ಬ್ರಹ್ಮವನ್ನು ತಿಳಿದು ಆನಂದಿಸಬೇಕು. ಆನಂದಿಸಿ ಕುಂದಿಲ್ಲದಂತಿರಬೇಕು. ಸಕಲ ವಸ್ತುವಿನಲ್ಲಿಯೂ ಶಿವಭಾವಿಯಾಗಿ ಬಾಳಬೇಕು.
ಎಲಸಿತದ ನಾಭಿಮಂ | ಡಲದ ಮಣಿಪೂರಕ ಸತ್
ಕಲೆಯ ಬ್ರಹ್ಮವನು-ಒಲಿದೆನ್ನ ಕರಕಿತ್ತು
ಸಲಹಿದೈ ಗುರುವೆ ಕೃಪೆಯಾಗು
॥ ೮೯ ||
ನವಚಕ್ರಗಳಲ್ಲಿ ಆರನ್ನು ಪ್ರವೃತ್ತಿಕ್ರಮದಲ್ಲಿ ಪ್ರತಿಪಾದಿಸಿ ಏಳನೆಯದಾದ
ಮಣಿಪೂರಕ ಚಕ್ರದ ವಿವರವನ್ನು ಇಲ್ಲಿ ಹೇಳಿದ್ದಾನೆ. ಮಣಿಪೂರಕ ಚಕ್ರವು ನೆಲಸಿದ್ದು
ವಿಲಸಿತವಾದ ನಾಭಿಮಂಡಳದಲ್ಲಿ ನಾಭಿಮಂಡಲಕ್ಕೆ ಹೊಕ್ಕಳೆಂತಲೂ ಕರೆಯುತ್ತಾರೆ.
ನಾಭಿಯು ಕರುಳಿಗೆ ಸಂಬಂಧವುಳ್ಳದು. ಗರ್ಭಾವಸ್ಥೆಯಲ್ಲಿ ಶಿಶುವು ನಾಭಿಯ
ಮುಂಖಾಂತರವಾಗಿಯೇ ತಾಯಿಯ ಆಹಾರಾದಿ ಅನ್ನರಸವನ್ನು ಗ್ರಹಿಸುತ್ತದೆ. ಇದು
ಶರೀರದ ಸಮತೋಲನವನ್ನು ಕಾಯುವ ಮಧ್ಯಸ್ಥಾನವೂ ಹೌದು. ಇಲ್ಲಿರುವ
ಕರದಿಷ್ಟ ಲಿಂಗದಲ್ಲಿ ಶಿವಲಿಂಗವಾಗಿ ಪರಿಣಮಿಸುವನು.
ಮಣಿಪೂರಕ ಕಮಲದಲ್ಲಿ ಸತ್ಕಲಾಬ್ರಹ್ಮನು ವಾಸವಾಗಿರುತ್ತಾನೆ. ಈ ಸತ್ಕಲಾ ಬ್ರಹ್ಮನೇ
ಜ್ಞಾನೇಂದ್ರಿಯಗಳಲ್ಲಿ ಪ್ರಧಾನವಾದ ಕಣೇ ಶಿವಲಿಂಗಕ್ಕೆ ಮೂಲವಾಗಿದೆ.
ಕಣ್ಣಿಗೆ ಕಾಂತಿಯ (ತೇಜನ್ನು ಕೊಡುವ ಶಿವಲಿಂಗವು ಕಳಾಮಯವಾಗಿರುತ್ತದೆ.
ಅದರಂತೆ ನಾಭಿಮಂಡಲದ ಮಣಿಪೂರಕ ಚಕ್ರದ ಬ್ರಹ್ಮವೂ ಸತ್ಕಲಾ ಬ್ರಹ್ಮನಾಗಿದ್ದಾನೆ.
ನಾಭಿಸ್ಥಾನದಲ್ಲಿ ಜಠರಾಗ್ನಿಯ ತೇಜವೂ ತುಂಬಿದೆ. ಆದ್ದರಿಂದಲೇ ನಾಭಿಯಲ್ಲಿಯ
ಬ್ರಹ್ಮನು ಕಳಾಪೂರ್ಣನಾಗಿದ್ದಾನೆ. ಇಂಥ ಅನುಭವ ವೇದ್ಯವಾದ ಕಲಾಬ್ರಹ್ಮದ
ಅರಿವು ಸದ್ಗುರು ಕೃಪೆಯಿಲ್ಲದೆ ಆಗದು. ಗುರುನಾಥನು ಕೃಪೆ ಗೈದು ನಾಭಿಯ ಸತ್ಕಲೆಯ
ಬ್ರಹ್ಮವನ್ನು ಎನ್ನ ಕರದಿಷ್ಟಲಿಂಗದಲ್ಲಿ ಶಿವಲಿಂಗವನ್ನಾಗಿ ಸಂಯೋಜಿಸಿದ್ದಾನೆ.
ಶಿವಲಿಂಗವನ್ನು ಅರ್ಚಿಸುವ ಅಂಗನು ಪ್ರಸಾದಿಯಾಗಿದ್ದಾನೆ.
ಈ ನಾಭಿಯ ಮಣಿಪೂರಕ ಚಕ್ರದ ವಿಶೇಷವಾದ ಅನುಭವವನ್ನು
ಅನುಭವಿಗಳು ಕೆಳಗಿನಂತೆ ತಿಳಿಪಡಿಸಿದ್ದಾರೆ –
ನಾಭಿಸ್ಥಾನದಲ್ಲಿ ಮಣಿಪೂರಕ ಚಕ್ರ, ಅಗ್ನಿಯೆಂಬ ಮಹಾಭೂತ,
ಆ ಭೂತ ರಕ್ತವರ್ಣ ಇ; ತ್ರಿಕೋಣ ಅಲ್ಲಿ ದಶದಳ ಪದ್ಮ
ಆ ಪದ್ಮ ರಕ್ತವರ್ಣ, ಆ ದಳದಲ್ಲಿ ಡ, ಢ, ಣ. ತ. ಥ. ದ. ಧ. ನ.
ಪ. ಫ. ಎಂಬ ಹತ್ತಕ್ಷರ
ಆ ಕರ್ಣಿಕಾ ಮಧ್ಯದಲ್ಲಿ ಶಿ ಕಾರವೆಂಬ ಬೀಜಾಕ್ಷರ
ಆ ಶಿಕಾರ ರಕ್ತವರ್ಣ, ಅದು ಘಂಟಾನಾದ, ಅಲ್ಲಿ ಶಿವಲಿಂಗ ;
ಅದಕ್ಕೆ ರಕ್ತವರ್ಣವುಳ್ಳ ಅಘೋರ ಮುಖ.
ವಿದ್ಯಾಕಲಾಪರ್ಯಾಯ ನಾಮವನುಳ್ಳ ಇಚ್ಛಾಶಕ್ತಿ
ಆ ಶಕ್ತಿ ಕೆಂಪು ವರ್ಣ, ಅಲ್ಲಿ ಮೂರ್ತಿ ಸಾದಾಖ್ಯ
ಶರೀರವೆಂಬ ಸಂಜ್ಞೆ ದಕ್ಷಿಣದಿಕ್ಕು, ಅಲ್ಲಿ ಸಾಮವೇದವ-
ನುಚ್ಚರಿಸುತ್ತ ನಿರಹಂಕಾರವೆಂಬ ಹಸ್ತದಿಂದ ಸುರೂಪದ್ರವ್ಯವನು
ನೇತ್ರವೆಂಬ ಮುಖಕ್ಕೆ ಸಾವಧಾನ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ
ರುದ್ರ ಪೂಜಾರಿ ಶಕ್ತಿ ಲಾಕಿನಿ ರುದ್ರ (ಹರ) ನಧಿದೇವತೆ.
ಇಂತಿವೆಲ್ಲಕ್ಕು ಮಾತೃಸ್ಥಾನ ವಾಗಿಹುದು ಶಿಕಾರವೆಂಬ ಬೀಜಾಕ್ಷರ
[15:58, 11/28/2022] Mangala Choukimath: ಓಂ ಓಂ ಓಂ ಶೀಂ ಶ್ರೀಂ ಶೀಂ ಎಂಬ
ಅದು ಪ್ರಣವದ ಕುಂಡಲಾಕೃತಿಯಲ್ಲಿ ಹುದು
ಬ್ರಹ್ಮನಾದ ಮಂತ್ರ-
ಮೂರ್ತಿ ಪ್ರಣವಕ್ಕೆ ನಮಸ್ಕಾರವು,
ಇದು ಪ್ರಸಾದಿಸ್ಥಲ ಇಲ್ಲಿ ಶಿವಲಿಂಗ ಇದಿರುವದು ಮಣಿಪೂರಕದಲ್ಲಿ
೮. ಸ್ವಾಧಿಷ್ಟಾನಚಕ್ರ-ಪಿಂಡಬ್ರಹ್ಮ (ಗುರುಲಿಂಗ)
|| ೯೦ ||
ಅಂಡಜದ ಅಗ್ರದ ಅ | ಖಂಡ ಸ್ವಾಧಿಷ್ಠಾನ
ಪಿಂಡಬ್ರಹ್ಮವನು-ಕಂಡೆನ್ನ ಕರಕಿತ್ತು-
ದಂಡ ಶ್ರೀಗುರುವೆ ಕೃಪೆಯಾಗು
“ಆತ್ರೋದ್ಧರಣೆ ವಾಚ್ಯ’ದಲ್ಲಿ ಸ್ವಾಧಿಷ್ಠಾನ ಚಕ್ರದ ವಿವರಣೆ ಕೆಳಗಿನಂತಿದೆ-
ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ ಅಪ್ಪುವೆಂಬ ಮಹಾಭೂತ
ಆ ಭೂತ ಶ್ವೇತವರ್ಣ; ಧನುರ್ಗತಿ ಅಲ್ಲಿ ಷಡ್‌ಳಪದ್ಮ,
ಆ ಪದ್ಮಪಚ್ಛಿಯ ವರ್ಣ, ಆ ದಳದಲ್ಲಿ ಬ, ಭ, ಮ, ಯ, ರ, ಲ, ಎಂಬ ಆರಕ್ಷರ
ಆ ಕರ್ಣಿಕಾ ಮಧ್ಯದಲ್ಲಿ ಮಕಾರವೆಂಬ ಬೀಜಾಕ್ಷರ.
ಆ ಮಕಾರ ಶ್ವೇತವರ್ಣ ಅದು ವೇಣುನಾದ.
ಅಲ್ಲಿ ಗುರುಲಿಂಗ, ಅದಕ್ಕೆ ಶ್ವೇತವರ್ಣವನುಳ್ಳ ವಾಮದೇವಮುಖ
ಪ್ರತಿಷ್ಠಾಕಲಾ ಪರ್ಯಾಯ ನಾಮವನುಳ್ಳ ಜ್ಞಾನಶಕ್ತಿ
ಆ ಶಕ್ತಿ ಶ್ವೇತವರ್ಣ ಅಲ್ಲಿ ಕರ್ತೃ ಸಾದಾಖ್ಯ
ಗೂಢವೆಂಬ ಸಂಜ್ಞೆ ಪಶ್ಚಿಮ ದಿಕ್ಕು.
900
ಅಲ್ಲಿ ಯಜುರ್ವೇದವನುಚ್ಚರಿಸುತ್ತ ಸುಬುದ್ಧಿಯೆಂಬ ಹಸ್ತದಿಂ
ಸುರಸ ದ್ರವ್ಯವನು ಜಿಹ್ನೆಯೆಂಬ ಮುಖಕ್ಕೆ
ನೈಷ್ಠಿಕಾ ಭಕ್ತಿಯಿಂದ ಅರ್ಪಿಸುವಳಾ ಶಕ್ತಿ
ವಿಷ್ಣು ಪೂಜಾರಿ ಶಕ್ತಿರಾಕಿನಿ ವಿಷ್ಣು (ಮೃಡ) ಅಧಿದೇವತೆ
ಇಂತಿವೆಲ್ಲಕ್ಕು ಮಾತೃಸ್ಥಾನವಾಗಿಹುದು ಮ ಕಾರವೆಂಬ ಬೀಜಾಕ್ಷರ
ಅದು ಪ್ರಣವದ ದಂಡಕಾಕೃತಿಯಲ್ಲಿಹುದು
“ಓಂ ಓಂ ಓಂ ಮಾಂ ಮಾಂ ಮಾಂ’ ಎಂಬ ಬ್ರಹ್ಮನಾದ
ಮಂತ್ರ ಮೂರ್ತಿ ಪ್ರಣವಕ್ಕೆ ನಮಸ್ಕಾರವು
ಇದು ಮಾಹೇಶ್ವರಸ್ಥಲವು
ಈ ರೀತಿಯಾದ ಸ್ವಾದಿಷ್ಠಾನ ಚಕ್ರದ ವಿವರಣೆಯಿಂದ ಸದ್ಗುರುವಿನ ಸತ್ಸಂಸ್ಕಾರದ
ಅರಿವಾಗುವದು. ಜೀವಾತ್ಮನ ಅಂಡಕೋಶದ ಮೇಲ್ಬಾಗದಲ್ಲಿ (ಗುಹ್ಯ) ಖಂಡವಾಗದೇ
[15:58, 11/28/2022] Mangala Choukimath: ಇರುವ ಅಂದರೆ ಅಖಂಡ ಅಥವಾ ಪರಿಪೂರ್ಣವಾದ ಚಕ್ರ ಸ್ವಾಧಿಷ್ಠಾನ. ಇಲ್ಲಿರುವ
ಬ್ರಹ್ಮನು ಪಿಂಡಬ್ರಹ್ಮನು. ಅಂಡ (ತತ್ತಿ) ದಲ್ಲಿರುವ ಪಿಂಡ (ಮರಿ)ವು ವ್ಯಕ್ತವಾಗಿ
ಜೀವಿಯಾಗುವಂತೆ ಅಂಡದಗ್ರದಲ್ಲಿರುವ ಪಿಂಡಬ್ರಹ್ಮನನ್ನು ಗುರುವು ಗಟ್ಟಿಗತನದಿಂದ
ಹಾಗೂ ಚಾಣಾಕ್ಷತನದಿಂದ ಎನ್ನ ಕರಕಮಲದಲ್ಲಿ ಗುರುಲಿಂಗವನ್ನಾಗಿ ಕರುಣಿಸುವನು.
ಗುಹ್ಯಸ್ಥಾನದ ಅಂಡಕೋಶವು ಮೂತ್ರ ಸಂಗ್ರಹಕ್ಕೂ, ರೇತಸ್ಸಿನ ಆಶ್ರಯಕ್ಕೂ
ಕಾರಣವಾಗಿದೆ. ಇಲ್ಲಿರುವ ಪಿಂಡಬ್ರಹ್ಮನು ರಸಪದಾರ್ಥವನ್ನು ಗ್ರಹಿಸುವಂತೆ
ಜ್ಞಾನೇಂದ್ರಿಯದ ಗುರುಲಿಂಗವು ರಸಪ್ರಸಾದವನ್ನು ಸ್ವೀಕರಿಸುವದು. ಜ್ಞಾನೇಂದ್ರಿಯ
ಶೋಧಿಸಿರುವರೆಂಬುದು ಅಗಾಧವಾಗಿದೆ. ಅಸದೃಶವಾಗಿದೆ. ಪಿಂಡಬ್ರಹ್ಮನಿಂದಲೇ
ಗಳಿಗೂ ಅಂತರದಲ್ಲಿಯ ಚಕ್ರಗಳಿಗೂ ಎಂಥಹ ಸಾಮಂಜಸ್ಯವನ್ನು ಶಿವಾನುಭವಿಗಳು
ಜಗದುತ್ಪತ್ತಿಯಾಗುವಂತೆ ಅಂಡ (ಗುಹ್ಯ) ಕೋಶದಿಂದಲೇ ಜೀವಿಗಳ ಪ್ರಾದುರ್ಭಾ
ವವನ್ನು ಕಾಣುತ್ತೇವೆ.