ರೇವಣಸಿದ್ಧ ಗುರುದೇವ ಭಾವಜ ಹರಜೀವ ರಚನೆ :-ಪರಮ ಪೂಜ್ಯ ಲಿಂ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರು

(ರಾಗ – ಕಾಪಿ)

ರೇವಣಸಿದ್ಧ ಗುರುದೇವ | ಭಾವಜ ಹರಜೀವ |

ಓವಿನೀ ಕೊಡು ಮಂಗಲವ | || ಪ ||

ಕಾಮವೆನ್ನನು ಕೂಡಿ ಕಾಡಿ |

ನೇಮ ಸೀಮೆಯ ಕೆಡಿಸದಾಡಿ |

ಪ್ರೇಮದಪ್ಪಿಯು ಭವದೊಳು ನೂಂಕುವ

ನೀ ಮನಸಿಜನನು ಬಿಡಿಸು ಬೇಗ || 1 ||

ದುಷ್ಟ ವಾಸನೆಗಳ ಬಲದಿಂದ |

ಭ್ರಷ್ಟ ಕಾಮನತಾಚ್ಚಲದಿಂದ |

ಮುಟ್ಟಿ ಕೊರಗಿಪೆ ದುರ್ವಾಸನೆಯ |

ಕುಟ್ಟಿ ವರಸುಖವ ಕೊಡು ಜವದಿ || 2 ||

ಅಂಗಹೀನನ ಸೇವೆಯ ಬಿಡಿಸಿ |

ಲಿಂಗದೇವನ ಪೂಜೆಯ ಹಿಡಿಸಿ |

ಕಂಗಳಾಲಯನೀಕ್ಷಿಸು ಭಾವದಿ |

ಮಂಗಲಮಯನೆನಿಸೋ ಯತಿವರ || 3

Related Posts