ವರದಿ ನಿರೂಪಕರು.
ಪೂಜ್ಯ ಶಿವಬಸವ ದೇವರು ಧಾರವಾಡ
ಪೂಜ್ಯ ಅಡವೀಶ ದೇವರು ತಾರಿಹಾಳ
ಪೂಜ್ಯ ಆನಂದ ದೇವರು ಹುಣಶ್ಯಾಳ (ಚಿತ್ರಗಳ ಸಂಗ್ರಹ)
(ಸುಮಾರು ೪೦ ಸಾಧಕರು ಶಿವಯೋಗ ಮಂದಿರದಲ್ಲಿ ಅಧ್ಯಯನ ಮಾಡಿದವರು ಅನೇಕ ಮಠಗಳಿಗೆ ಉತ್ತರಾಧಿಕಾರಿಗಳಾದವರು, ಹಾಗೂ ಪಟ್ಟಾಧಿಕಾರಿಗಳಾದವರು ಎಲ್ಲರೂ ಸೇರಿಕೊಂಡು 5 ದಿವಸ ಶಿವಯೋಗ ಮಂದಿರದಲ್ಲಿ ಇದ್ದುಕೊಂಡು ಗೋಶಾಲೆ ಸ್ವಚ್ಛತೆ ,ಎಲ್ಲ ಗೋಡೆಗಳಿಗೂ ಬಣ್ಣ ಹಚ್ಚುದ ಕೆಲಸ, ನದಿಯ ಪಕ್ಕದಲ್ಲಿರುವ ಸ್ವಚ್ಛತೆ, ಭಸ್ಮ ತಯಾರಿಸುವ ಕಟ್ಟಡದ ಸ್ವಚ್ಛತೆ , ಬಣ್ಣ ಹಚ್ಚುವ ಕೆಲಸ ಜೊತೆಗೆ ಗುರು ಕುಮಾರೇಶ್ವರ ಗದ್ದುಗೆ ಸ್ವಚ್ಛತೆ ಮತ್ತು ವಾಟರ್ ಫ್ರೆಶರ್ ಮಶಿನ್ ಕೊಡುಗೆಯ ಸೇವೆ ಮಾಡಿದ ಯುವ ಯತಿಗಳ ಸೇವೆ ಅನನ್ಯವಾದುದು.
”ಶ್ರೀಕುಮಾರ ತರಂಗಿಣಿ” ಬ್ಲಾಗ್ ವರದಿ ರೂಪದಲ್ಲಿ ಪ್ರಕಟಿಸಲು ಹಲವು ಬಾರಿ ಕೇಳಿಕೊಂಡರೂ ಬಹಳ ಸಂಕೋಚಪಟ್ಟುಕೊಂಡ ಯುವಯತಿಗಳ ಪ್ರಚಾರಪ್ರಿಯವಲ್ಲದ ಅನುಪಮ ಸೇವೆ ಮುಂದಿನ ತಲೆಮಾರಿನ ಯುವ ಯತಿಗಳಿಗೆ ದಿಕ್ಸೂಚಿಯಾಗಲೆಂಬ ಒಂದೇ ಒಂದು ಆಶಯದೊಂದಿಗೆ ಒತ್ತಾಯಪೂರ್ವಕ ಈ ವರದಿಯನ್ನು ಸಿದ್ದಪಡಿಸಲಾಗಿದೆ.
ಈ ಸೇವೆಯ ಉದ್ದೇಶವೇನು ಎಂದು ಕೇಳಿದಾಗ ,ಸಾಧಕರ ಈ ಪ್ರಾಮಾಣಿಕ ಮತ್ತು ಪ್ರಾಂಜಲ ಅಂತರಾಳದ ನುಡಿಗಳು ಹೀಗೆ ವ್ಯಕ್ತವಾಗಿವೆ
“ಈ ನಮ್ಮ ಅಂದ ಬದುಕಿಗೆ ಜ್ಞಾನದ ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.”
ಸಂಪಾದಕ-”ಶ್ರೀಕುಮಾರ ತರಂಗಿಣಿ” ಬ್ಲಾಗ್)

ಸಮಾಜ ಸೇವಾ ದೀಕ್ಷೆ ತೊಟ್ಟಿರುವ ಅಧ್ಯಾತ್ಮ ಸಾಧಕರಿಗೆ ಒಂದು ಸೇವಾ ಕಲ್ಪನೆ ಮೂಡಿತು.ಅದು ಎಲ್ಲ ಸಾಧಕರ ಮನಸ್ಸಿನಲ್ಲಿ ವಿಚಾರವಾಗಿ ತೋರಿದಾಗ ಅದನ್ನು ಎಲ್ಲ ಮರೀದೇವರುಗಳು ಮನಸಾ ಪೂರ್ವಕವಾಗಿ ಒಪ್ಪಿಕೊಂಡರು. ಆ ಸೇವಾ ತೃಪ್ತಿ ಕಾಯಕವೇ ಪರಮಪೂಜ್ಯ ಶ್ರೀ ಹಾನಗಲ್ಲ ಗುರು ಕುಮಾರೇಶನ ಶಿವಯೋಗ ತಾಣ ಶಿವಯೋಗ ಮಂದಿರ. ಈ ಪುಣ್ಯ ಕ್ಷೇತ್ರದಲ್ಲಿ ಸ್ವಲ್ಪ ದಿನಗಳವರೆಗೆ ಸೇವೆ ಮಾಡುವುದಾಗಿ ನಿರ್ಣಯ ಮಾಡಲಾಯತು.
ಗುರು ಕುಮಾರ ಶಿವಯೋಗಿಗಳು ಪರಿಸರ ಪ್ರೇಮಿಗಳು ಹಾಗೂ ಕೃಷಿ ಆಸಕ್ತಿ ಪ್ರೇರಣಾದಾಯಕರು, ತತ್ ಕಾರಣ ಎಲ್ಲ ಸಾಧಕರು 2022 ರ ಆಷಾಢ ಮಾಸದಲ್ಲಿ ಶಿವಯೋಗ ಮಂದಿರದಲ್ಲಿ ಸುಮಾರು ಒಂದು ಸಾವಿರ (1000) ಸಸಿ ನೆಡುವ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಂಡು. ಸಸಿಗಳನ್ನ ನೆಟ್ಟೆವು.
ಅದೇ ರೀತಿಯಾಗಿ ಈ ವರ್ಷದ 2023 ರ ಆಷಾಢ ಮಾಸದ ಸೇವಾ ಕೈಂಕರ್ಯ.
ಶ್ರೀ ಶಿವಯೋಗ ಮಂದಿರದಲ್ಲಿ ಶತಮಾನದ ಹಿಂದೆ ಸ್ಥಾಪಿಸಿದ.ಸುಮಾರು 500ಕ್ಕೂ ಹೆಚ್ಚು ದೇಶಿ ಹಸುಗಳನ್ನು ಪಾಲನೆ ಮಾಡಿರುವ ಗೋಶಾಲೆ ಅಲ್ಲಿನ ಪ್ರಕೃತಿ ವೈಭವಕ್ಕೆ ಸಾಕ್ಷಿಯಾಗಿದೆ .
ಆ ಗೋಶಾಲೆ ಸ್ವಚ್ಛಗೊಳಿಸುವುದು ಮೊದಲ ಸೇವಾ ಕಾಯಕವಾಯಿತು. ಜೊತೆಗೆ ಎಲ್ಲ ಗೋಶಾಲೆಗಳ ಗೋಡೆಗಳಿಗೆ ಹಾಗೂ ಕಂಬಗಳಿಗೆ ಬಣ್ಣ ಲೇಪನ ಮಾಡುವ ಕೆಲಸವನ್ನು ಸ್ವತಃ ಎಲ್ಲ ಸಾಧಕರೇ ಮಾಡಿದರು. ಅದೊಂದು ಸಾಧಕರ ಆತ್ಮ ತೃಪ್ತಿ ಸೇವೆ ಎಂದಿನಿಸಿತ್ತು.

ಹಸುಗಳಿಂದ ದೊರೆತ ಪವಿತ್ರ ಗೋಮಯದಿಂದ (ಸಗಣಿ) ತಯಾರಾಗುವ ಶುದ್ಧ ಭಸ್ಮ ತಯಾರಿಕಾ ಕೇಂದ್ರವನ್ನು ನಾವು ಶಿವಯೋಗ ಮಂದಿರದಲ್ಲಿ ನೋಡಬಹುದು. ಆ ಭಸ್ಮ ತಯಾರಿಕ ಕೇಂದ್ರ ಕಟ್ಟಡದ ಗೋಡೆಗಳಿಗೂ ಬಣ್ಣ ಲೇಪನ ಮಾಡುವ ಸೇವೆ ನಮ್ಮ ಸಾಧಕರಾದ್ದಾಗಿತ್ತು.

ಶಿವಯೋಗ ಮಂದಿರದಲ್ಲಿ ಉಳಿದ ಎಲ್ಲ ಕೆಲಸಗಳನ್ನು ಮಾಡುವುದಾಗಿ ನಿರ್ಣಯಿಸಿದೆವು.
ಸೇವಾ ಕಾರ್ಯಕ್ಕೆ ಬೇಕಾದ ಎಲ್ಲ ಹೊಸ ಸಾಮಗ್ರಿಗಳನ್ನು ಸಾಧಕರು ನೀಡಿರುವಂತಹ ಹಣದಿಂದ ಕೊಂಡು ತರಲಾಯಿತು.

ಎಲ್ಲ ಸಾಧಕರು ತಮ್ಮ ವಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಒಂದು ವಾರ ಶಿವಯೋಗಮಂದಿರದಲ್ಲಿ ಇದ್ದುಕೊಂಡು ಸೇವೆ ಮಾಡುವುದು ಎಂದು ನಿರ್ಣಯಿಸಿ ಸೇವೆ ಸಲ್ಲಿಸಿದರು.
ಸಾಧಕರ ಸೇವೆಯ ಹಿನ್ನಲೆ
ಹಿಂದಿನ ಕಾಲದಿಂದಲೂ ಭಾರತೀಯ ಪರಂಪರೆಯಲ್ಲಿ ಸೇವೆ ಮಾಡುವುದು ಒಂದು ಪ್ರತಿತಿ ಇದೆ ಸೇವೆ ಎಂದರೆ ಪೂಜಿಸು ಎಂದರ್ಥ ಪೂಜಿಸು ಎಂದರೆ ಗಂಧ ಅಕ್ಷತೆ ದೂಪದೀಪಾರತಿಗಳಿಂದ ಪೂಜಿಸುವದಷ್ಟೇ ಅಲ್ಲ..
ತಂದೆ ತಾಯಿಯನ್ನು ಮಕ್ಕಳಂತೆ ಉಪಚರಿಸುವುದು, ಭಕ್ತಿಯಿಂದ ಗುರು ಸೇವೆ ಮಾಡುವುದು ಮತ್ತು ಮೂಕ ಪ್ರಾಣಿಗಳನ್ನು ಉಪಚರಿಸುವುದು ಒಂದು ಪುಣ್ಯದ ಕೆಲಸವೇ.
ರಾಮಾಯಣದಲ್ಲಿ ರಾಮನ ಅಜ್ಜ ದಿಲೀಪ ಮಹಾರಾಜನು ಕೂಡ ಗೋಸೇವೆಯನ್ನು ಮಾಡಿ ಸದ್ಗತಿ ಹೊಂದಿದ್ದನ್ನು ನೋಡಬಹುದು. ಸೇವೆ ಮಾಡುವುದು ಎಂದರೆ ಏನನ್ನು ಅಪೇಕ್ಷೆ ಪಡದೆ ನಿಸ್ವಾರ್ಥವಾಗಿ ಉಪಚರಿಸುವುದೇ ಸೇವೆ.ಸೇವೆ ಮಾಡುವುದರಿಂದ ತನುಮನ ಶುದ್ಧಗೊಳ್ಳುವವು.
ಈ ನಮ್ಮ ಅಂದ ಬದುಕಿಗೆ ಜ್ಞಾನದ ಕಣ್ಣನು ನೀಡಿ ಅನ್ನ ಅರಿವು ಆಶ್ರಯ ನೀಡಿದ ತಾಣ ಶ್ರೀ ಶಿವಯೋಗ ಮಂದಿರ. ಅಲ್ಲಿ ನಾವುಗಳೆಲ್ಲ ಪಡೆದುಕೊಂಡಂತಹ ಆಚಾರ, ವಿಚಾರ, ಸಂಸ್ಕಾರ ಇವತ್ತಿನ ಅಧ್ಯಾತ್ಮ ದಾರಿಯ ದೀಪವಾಗಿದೆ. ನಾವು ಕುಮಾರೇಶನ ಮಡಿಲಿನಲ್ಲಿ ಬೆಳೆದಂತಹ ಸಮಾಜದ ಮಕ್ಕಳು ನಮ್ಮೆಲ್ಲರಿಗೆ ಕುಮಾರೇಶನ ಸೇವೆ ಮಾಡುವುದು ನಮಗೆ ಅತೀವ ಸಂತೋಷ. ಸೇವೆ ಮಾಡುವುದರಲ್ಲಿನ ಉತ್ಸಾಹ ಬೇರೆ ಯಾವ ಕಾಯಕ ಕೆಲಸದಲ್ಲಿಯೂ ಬರುವುದಿಲ್ಲ.
ಕುಮಾರೇಶ್ವರ ಸೇವೆಯು ಪುಣ್ಯ ಪವಿತ್ರವಾದದ್ದು. ಶ್ರೀ ಶಿವಯೋಗ ಮಂದಿರಕ್ಕೆ ಸುಮಾರು 40 ಸಾಧಕರು ಸೇವೆಯಲ್ಲಿ ತಮ್ಮನು ತಾವು ತೊಡಗಿಸಿಕೊಂಡಿದ್ದರು ಸೇವೆ ಮಾಡಲು ಬಂದಿರುವ ಸಾಧಕರಲ್ಲಿ ಸೇವೆಯ ಉತ್ಸಾಹ, ಸಂತೋಷ ಎದ್ದು ಕಾಣುತ್ತಿತ್ತು.
ಲಿಂ.ಹಾನಗಲ್ಲ ಗುರುಕುಮಾರ ಮಹಾಶಿವಯೋಗಿಗಳ ಕನಸಿನ ಶ್ರೀ ಮದ್ವಿರಶೈವ ಶಿವಯೋಗ ಮಂದಿರ 1909 ರಲ್ಲಿ ನಾಡಿನ ಹಲವು ಮಹಾತ್ಮರ ಸಾಕ್ಷಿ ಸಾನಿಧ್ಯದಲ್ಲಿ ಶಿವಯೋಗಿಗಳ ಅಮೃತ ಹಸ್ತದಿಂದ ಸ್ಥಾಪಿಸಲಾಯಿತು.
ಶಿವಯೋಗ ಮಂದಿರದ ಗೋಶಾಲೆ ಮತ್ತು ಪೂಜ್ಯ ಯಳಂದೂರು ಬಸವಲಿಂಗ ಮಹಾಶಿವಯೋಗಿಗಳ ಗೋಶಾಲೆ ಸ್ವಚ್ಛಗೊಳಿಸುವ ಕಾರ್ಯಕ್ರಮದಲ್ಲಿ ತೊಡಗಿಕೊಂಡೆವು,ಗೋವುಗಳನ್ನು ಕಾಳಜಿಯಿಂದ,ಪ್ರೀತಿಯಿಂದ ಮುದ್ದಿಸುವುದು ಸಾಧಕರಾದಂತಹ ನಮಗೆಲ್ಲ ಒಂದು ಸವಿನೆನಪು. ಗೋಶಾಲೆಯ ಗೋವುಗಳು ಮೇಯಲು ಹೊರಗಡೆ ಹೋದಮೇಲೆ ಗೋಶಾಲೆಯಲ್ಲಿರುವಂತಹ ಸಗಣಿಯನ್ನು ಒಂದು ಕಡೆ ಗೂಡಿಸಿ ಅದನ್ನು ಭಸ್ಮ ತಯಾರಿಕಾ ಕೇಂದ್ರಕ್ಕೆ ಕಳಿಸಿಕೊಟ್ಟೆವು ತದನಂತರ ಸಾಧಕರಿಂದ ಕೊಡುಗೆಯಾಗಿ ತೆಗೆದುಕೊಂಡು ಬಂದಿರುವಂತಹ ಸುಮಾರು 48000 ರೂ ವೆಚ್ಚದ ಫ್ರೆಶರ್ ಕ್ಲಿನಿಂಗ ಮಷೀನ್ ಮೂಲಕ ಗಟ್ಟಿಯಾದಂತಹ ಸಗಣಿ ಮತ್ತು ಗೋಶಾಲೆಯನ್ನು ಶುಚಿಗೋಳಸಿ ಔಷದ ಉಪಕರಣಗಳಿಂದ ಗೋಶಾಲೆಯಲ್ಲಿ ಹುಳಗಳು ಆಗದಂತೆ ಗೋಶಾಲೆಯನ್ನು ಶುಚಿ ಗೊಳಿಸಿದೆವು.
ಕುಮಾರೇಶ್ವರ ಶ್ರೀ ಗದ್ದುಗೆಯ ಗೋಡೆಗಳು ಹಾಗೂ ಸದಾಶಿವ ಮಹಾಸ್ವಾಮಿಗಳ ಗದ್ದುಗೆಯ ಭವನದ ಶಿಲಾಮಂಟಪವನ್ನು ಸ್ವಚ್ಛಗೊಳಿಸಿದೆವು. ಕಲ್ಲುಗಳಿಗೆ ಅಂಟಿಕೊಂಡಿರುವಂತಹ ಕಪ್ಪು ಕಲೆ ಮತ್ತು ಪಾಚಿಯನ್ನು ಸ್ವಚ್ಛಗೊಳಿಸಿದೆವು.


ವಿಶೇಷವಾಗಿ ಎಲ್ಲ ಸಾಧಕರು ತಮ್ಮ ಶ್ರೀ ಮಠಗಳ ಗ್ರಾಮದಿಂದ ಭಕ್ತಜನರನ್ನು ಕರೆದುಕೊಂಡು ಬಂದು ಒಂದು ಪೂರ್ಣ ದಿನದ ಸೇವೆಯನ್ನು ಭಕ್ತರಿಂದ ಸೇವೆ ಸಲ್ಲಿಸಲಾಯಿತು.
ತೋಟಗಳ ಸ್ವಚ್ಛತೆ ನದಿ ದಡದಲ್ಲಿ ಬಿದ್ದಿರುವ ಹೂಳು ತೆಗಿಸುವ ಸೇವೆ,ಗೋಶಾಲೆ ಗೋಡೆಗಳಿಗೆ ಬಣ್ಣ ಲೇಪಿಸುವ ಕೆಲಸ ಇನ್ನಿತರ ಕೆಲಸಗಳನ್ನ ಭಕ್ತರು ಶ್ರದ್ಧೆಯಿಂದ, ಭಕ್ತಿಯಿಂದ ಮಾಡಿದರು.
ಭಕ್ತರ ಒಂದು ದಿನದ ಕುಮಾರೇಶ್ವರ ಸೇವೆಯು ಬಹಳ ಭಕ್ತಿ ಭಾವದಿಂದ ನೆರವೇರಿತು.
ಸೇವಾರ್ಥಿಗಳಿಗೆ ಶಿವಯೋಗ ಮಂದಿರ ವತಿಯಿಂದ ಭಸ್ಮ ರುದ್ರಾಕ್ಷಿ ಹಾಗೂ ಕುಮಾರೇಶ್ವರ ಭಾವಚಿತ್ರವನ್ನು ಆಶೀರ್ವಾದ ರೂಪದಲ್ಲಿ ನೀಡಲಾಯಿತು.

ಶಿವಯೋಗ ಮಂದಿರ ಸಂಸ್ಥೆಯ ಉಪಾಧ್ಯಕ್ಷರಾದ ಹಾವೇರಿಯ ಪೂಜ್ಯ ಸದಾಶಿವ ಸ್ವಾಮಿಗಳವರ ಪರವಾನಿಗೆ ಪಡೆದು ಎಲ್ಲ ಸೇವೆ ಸಲ್ಲಿಸಲಾಯಿತು.
ಶಿವಯೋಗ ಮಂದಿರದ ಮಡಿಲಿನಲ್ಲಿ ಬೆಳೆದಂತಹ ನಮಗೆಲ್ಲ ಶ್ರೀ ಕುಮಾರ ಶಿವಯೋಗಿಗಳ ಶಿವಯೋಗತಾಣದ ಸೇವೆ ಮಾಡುವುದೇ ಪುಣ್ಯ.ನಮ್ಮ ಜೀವನವೇ ಧನ್ಯ.
ಕುಮಾರೇಶನ ಸೇವೆ ನಮ್ಮ ಬದುಕಿನುದ್ದಕ್ಕೂ ಮಾಡಿದರು ಸಾಕೇನಿಸದು.ಕುಮಾರೇಶನ ಸೇವೆ ಅದು ಸಾಮಾಜದ ಸೇವೆ ಅದು ಸ್ವಾಮಿ ಸಂಕುಲದ ಏಳಿಗೆ.ಸಮಾಜ ಸೇವಾ ದೀಕ್ಷಾ ತೊಟ್ಟಿರುವ ನಮಗೆ ಕುಮಾರೇಶನೆ ದಾರಿ ದೀಪ.
ಶಿವಯೋಗ ಮಂದಿರದಲ್ಲಿ ಪ್ರತಿ ನಿತ್ಯ ಮಾಡುವ ಸೇವಾ ಕಾಯಕದಲ್ಲಿ ಒಂದು ವಾರ ನಾವು ಸೇವಾ ಕಾಯಕಕ್ಕೆ ಸಾಕ್ಷಿ ಆದೆವು
ಗುರುಮಾರೇಶ್ವರ ವಾಣಿ:
ಸ್ವಾಮಿ ಎಂದರೆ.. ಒಡೆಯನಲ್ಲ ಸಮಾಜದ ನಿಷ್ಠಾವಂತ ಸೇವಕ…
ಇಡೀ ಸಮಾಜಕ್ಕೆ ಗುರುಕುಮಾರೇಶ್ವರ ಸಮಾಜ ಶಕ್ತಿ
🌹 ಸಾಧಕರ ಸಮಾಜ ಸೇವಾ ಸಂಕಲ್ಪ ಯಾತ್ರ🌹