ರಚನೆ: ಪರಮ ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
ಶಿವಮಂಗಲವನು ಕೊಡು ಬೇಗ
ಭವದುಃಖದಿ ಬಳಲುವೆವೀಗ ||
ಭುವಿಗವತರಿಸಿದ ಕಾರಣವ
ಜವದೊಳು ನೆನೆಯುತೆ ಗುರುದೇವ ||೧||
ಮನುಜ ಜನ್ಮವನು ತೊಟ್ಟಿಹೆವು
ಘನಮಹಿಮರ ಪಥ ಬಿಟ್ಟಿಹೆವು ||
ಮನದಿಹೀನಗುಣ ತೊಡರಿಹೆವು
ಮುನಿವಂದ್ಯನೆ ನಮಿಸುತ್ತಿಹೆವು || 2 ||
ಹುಟ್ಟಿ ಹುಟ್ಟಿ ಸಾಯ್ವುದ ನೋಡಿ
ಕಷ್ಟ ತೆರದಿ ಬಹು ಚರಿಸಾಡಿ ||
ದುಷ್ಟರೆನಿಸಿಕೊಂಬುದ ನೋಡಿ
ಶಿಷ್ಟನೆ ನೀನತಿದಯೆಗೂಡಿ || 3 ||
ಇದ್ದ ಗುಣಗಳೆಲ್ಲವಮರಿಸಿ
ಶುದ್ಧಗುಣದಮನವನ್ನಿರಿಸಿ ||
ಸಿದ್ಧರಾಮ ಗುರುದಯಕರಿಸಿ
ತಿದ್ದುವದತಿ ನೀ ಮುದವಿರಿಸಿ ||೪ ||
(ಶಿವಯೋಗ ಮಂದಿರ ರಾಗ ಸಂಯೋಜನೆ : ರಾಗ ಮಾಂಡ)