ಲೇಖಕರು: ಚಿಂದೋಡಿ ಬಂಗಾರೇಶ
ರಂಗಭೂಮಿ ಕಲಾವಿದರು,ಚಿತ್ರ ನಿರ್ದೇಶಕ ಕಲಾವಿದರು,ರಾಜ್ಯ ಪ್ರಶಸ್ತಿ ಪುರಸ್ಕೃತರು
ಮೊಬೈಲ ಸಂಖ್ಯೆ : +೯೧ ೯೪೮೧೪೫೨೬೩೦. ಬೆಂಗಳೂರು.
“ನಿಮ್ಮನ್ನು ನೆನೆದರೆ ಮುಳ್ಳೆಲ್ಲಾ ಹೂವಾಗುವುದು ಕುಮಾರೇಶ”
ನಿಷ್ಠೆಯಿಂದ ಲಿಂಗವ ಪೂಜಿಸಿ
ಮತ್ತೊಂದು ಪಥವನರಿಯದ ಶರಣರು
ಸರ್ಪನ ಹೆಡೆಯ ಮಾಣಿಕದಂತಿಪ್ಪರು, ಭೂಷಣರಾಗಿ !
ದರ್ಪಣದೊಳಗಣ ಪ್ರತಿಬಿಂಬದಂತೆ ಹಿಂಗದಿಪ್ಪರು,
ಕೂಡಲಸಂಗಮದೇವಾ, ನಿಮ್ಮ ಶರಣರು.
ಹೀಗೆ ಭಕ್ತಿ ಜ್ಞಾನ ಸ್ವರೂಪರಾದ ಶ್ರೀ ಕುಮಾರ ಶಿವಯೋಗಿಗಳು ಬಸವಾದಿ ಪ್ರಮಥರ ತತ್ವಗಳನ್ನು ಬೆಳಸಲು ಶರಣ ಧರ್ಮವನ್ನು ಪುನರ್ಸ್ಥಾಪಿಸಲೆಂದೇ ಜನಿಸಿ ,ಶರಣರಿಗೆ ಸರಿದೊರೆಯಾಗಿ ದೀನರಿಗೆ ದಯಾಮೂರ್ತಿಯಾಗಿ ,ಗುರುಗಳಿಗೆ ಪರಮ ಗುರುವಾಗಿ ಭಕ್ತಿ ಸ್ವಾತಂತ್ರ್ಯ ಕರುಣಿಸಿದರು..ಬತ್ತಿದ ಮನಸುಗಳಿಗೆ ಭಕ್ತಿಯ ಸೇವೆಯ ಮಳೆಯನ್ನೇ ಸುರಿಸಿದರು.ಕರುಣಾಮಯ ಶ್ರೀಕುಮಾರೇಶ.
ಕುಮಾರೇಶರ, ಬಾಲ್ಯ- ಬೆಳವಣಿಗೆ- ಸಾಧನೆ- ಹಾನಗಲ್ಲ ಮಠಕ್ಕೆ ಬಂದು ಅವರ ಸಮಾಜ ಸೇವೆಯ ವೈಭವತೆ,ಎಲ್ಲರು ಬಲ್ಲರು “ಘಟದಿಂದ ಮಠ ಬೆಳೆಯಬೇಕು .ಮಠದಿಂದ ಘಟ ಬೆಳೆಯಬಾರದು” ಇದು ಅವರ ಧ್ಯೇಯ,ಘೋಷ. ಅದರಂತೆ ನಡೆದರು.ನುಡಿದಂತೆ ನಡೆದರು.
ಹರಿದು ಹಂಚಿಹೋಗಿದ್ದ ವೀರಶೈವ-ಲಿಂಗಾಯತರ ಸಮುದಾಯವನ್ನು ಕನ್ನಡನಾಡಿನಾದಯಂತ ಸಂಚರಿಸಿ ಸಮಾಜದ ಹಿರಿಯಶಕ್ತಿಗಳೆನ್ನೆಲ್ಲಾ ಒಂದು ಗೂಡಿಸಿ ಸಮಾಜ ಸಿದ್ದಾಂತ ಉಳಿವಿಗಾಗಿ ,ಜೊಯಿಸರಹರಳಹಳ್ಳಿಯ ಯೋಗಿ,ಜೋಳಿಗೆ ಹಿಡಿದು ಭಿಕ್ಷೆಬೇಡಿ ಸಮಾಜದ ಸರ್ವಶಕ್ತಿಯನ್ನು ಒಂದೇ ನೆಲೆಯಲ್ಲಿ ಸಾಕಾರಗೊಳಿಸಿದ ಸಾಕ್ಷಿ ಸೌಧವೇ ಅಖಿಲಭಾರತ ವೀರಶೈವಮಹಾಸಭೆಯ ಸ್ಥಾಪನೆಯ ರೂವಾರಿ ಶ್ರೀಕುಮಾರೇಶರು, ಇಂದು ನಮಗೆಲ್ಲ ಹೆಮ್ಮೆಯ ಹೆಮ್ಮರವಾಗಿ ನಿಂತಿದೆ.
ಅವರ ಆಸೆಯಂತೆ ಅಖಿಲ ಭಾರತ ವೀರಶೈವ ಮಹಾಸಭೆ ಸೇರಿದ ಆಭವ್ಯ ದೃಶ್ಯವ ನೋಡಿ ಆನಂದಿತರಾಗಿ ಅದರ ನಿರ್ಮಾಣ ರೂವಾರಿಗಳಾದ ಸಮಾಜದ ಗಣ್ಯಾತಿ ಗಣ್ಯರನ್ನು ಅಂದು ನೋಡಿ ಬಸವಣ್ಣನವರ ಒಂದು ವಚನ ನೆನಪಿಸಿಕೊಂಡರಂತೆ.
“ಕಣ್ ಗಳ ನೋಟ ಹೃದಯದ ಜ್ಞಾನ
ಮನದಲ್ಲಿ ಮಾತಅಡುತಿರ್ದಯ್ಯ
ಜೇನು ಮಳೆಗಳು ಕರೆದವು
ಅಮೃತದ ಕಳೆಗಳು ಸುರಇದವು
ಕೂಡಲಸಂಗಮ ದೇವನೆಂಬ
ಸಾಗರದೊಳಡುತಿದ್ದನಯ್ಯ
ಕೂಡಲಸಂಗಮದೇವ.
ಎಂದು ಆನಂದಿರಾದವರಂತೆ ಅದರಂತೆ ಸಮಾಜದ ಇನ್ನೋದು ಮುಖ,ಕಾಯಕ -ದಾಸೋಹ ಸಾಧನೆಗೆ ತರಬೇತಿ ಕನ್ನಡ ವಚನ ಸಾಹಿತ್ಯ ಸಂಸ್ಕೃತಿ ಬೆಳಗಲು ಸ್ಥಾಪಿಸಿದ ಶಿವಯೋಗಮಂದಿರ ಸಂಗೀತ ಲೋಕಕ್ಕೆ ಧೃವತಾರೆಗಳಾದ ಪಂಚಾಕ್ಷರ ಗವಾಯಿಗಳು ,ಪುಟ್ಟರಾಜ ಗವಾಯಿಗಳನ್ನು ಸಮಾಜಕ್ಕೇ ಅಲ್ಲ ದೇಶ-ವಿದೇಶಕ್ಕೆ ಸಂಗೀತ ಸಾಧನೆಯ ಸುಧೆಯನ್ನು ಹರಿಸಿದ ಹರಿಕಾರರು ಇವರು ಶ್ರೀಕುಮಾರ ಶಿವಯೋಗಿಗಳು.
ಆ ಮಹನಿಯರನ್ನು ಎಷ್ಟು ನೆನೆದರು ಸಾಲದು ,ಎಷ್ಟು ಪೂಜಿಸಿದರೂ ಸಾಲದು.ಅವರ ನಿಸ್ವಾರ್ಥ ಸೇವೆಯನ್ನು ನೂರರಲ್ಲಿ ಒಬ್ಬರಾದರು ಅನುಸರಿಸಿದರೆ,ನಡೆದರೆ ಅದೇ ಅವರಿಗೆ ನೀಡುವ ಭಕ್ತಿ ಕಾಣಿಕೆ.
ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ! ನಿಮ್ಮ ಪುರಾತರಾಣೆ.
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ,
ಕೂಡಲಸಂಗಮದೇವಾ.
ಎಂಬ ವಚನದ ಅಕ್ಷರ ಅಕ್ಷರ ಪಾಲಿಸಿದರು.ಮೈಮೇಲೆ ವಸ್ತ್ರ ಹರಿದಿದ್ದರೂ,ತಾವೇ ಹೊಲೆದುಕೊಂಡು,ಮರೆ ಮಾಡಿಕೊಂಡು ,ಸಮಾಜ-ಸಮಾಜ ಸಮಾಜವೆಂದೇ ಶಿವಯೋಗಮಂದಿರದಲ್ಲಿ ಮಹಾಲಿಂಗದೊಳು ಐಕ್ಯವಾದ ಅವರ ಜೀವಾತ್ಮ ಸಕಲರಿಗೆ ಸಂಜೀವಿನಿಯಾಗಿರುವುದು. ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಕಟ್ಟಿದರು.ಒಂದು ಸಭೆಗೂ ಅಧ್ಯಕ್ಷರಾಗದ ನಿಷ್ಕಾಮ ಸಂತರು.ಕುರುಬ ತಂದ ಹಾಲನ್ನು ಶಿವನಿಗರ್ಪಿಸಿ ಸಮಾನತೆಯ ಸಾಕ್ಷಿಭೂತರಾದರು.ಅವರ ಆಸೆಯೊಂದೆ “ ದುಡಿ-ಸುಖ ಪಡಿ”,ಕಾಯಕ ಮಾಡದೇ ಒಂದಗಳ ಅನ್ನವ ಸೇವಿಸಬಾರದು.ಕಾಯಕ-ದಾಸೋಹ-ವಿದ್ಯೆ-ಧರ್ಮ-ಶೃದ್ಧೆ-ಪರೋಪಕಾರದ ಮನಸ್ಥಿತಿಯನ್ನೇ ಬೇಳಗಿಸಿಕೊಳ್ಳಬೇಕೆಂಬ ಸಂದೇಶ ಸಾರಿದ ಜಂಗಮರ ಜಂಗಮ,ಮಹಾ ಜಂಗಮ.
ಅವರಾತ್ಮಕ್ಕೊಂದು ಶರಣು ಶರಣಾರ್ಥಿಗಳು