ಶರಣು …..ಲೇಖಕರು ಪೂಜ್ಯ ಪರ್ವತದೇವರು

ಲೇಖಕರು : ಪೂಜ್ಯ ಪರ್ವತದೇವರು

19 ನೇಯ ಶತಮಾನದ ಅಂತ್ಯದಲ್ಲಿ  ಈ ಸಮಾಜ ಸೇವೆಗಾಗಿ ತಮ್ಮನ್ನೇ ತಾವು ತೆತ್ತು, ಉದರ ಪೋಷಣೆಗಾಗಿ ತಾವು ಹಂಬಲಿಸದೇ, ದೇಹ ಪೋಷಣೆಗಾಗಿ ಬೆಲೆ ಕೊಡದೇ,ಅಂತರಂಗ ಪೋಷಣೆಗಾಗಿ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೂ ಆ ಅಂತರಂಗದ ಬೆಳಕು ನನ್ನ ಆತ್ಮ ಸಾಧನೆಗೆ ಮಾತ್ರ ನೆರವಾದರೆ ನಾನು ಸ್ವಾರ್ಥಿ ಆಗುವೆ ಎಂದು ಉನ್ನತ ವಿಚಾರಿಕರಿಸಿ, ಆ ಅಂತರಂಗದ ಅರಿವಿನ ಬುತ್ತಿಯನ್ನು ಮಹಾ ಮಹಾ ಪಂಚ ಪರುಷರಾದ ಪಂಚ ಗುರುಗಳ ಸನ್ನಿಧಿಯಲ್ಲಿ ಕಾಲ ಕಾಲಕ್ಕೆ ತಕ್ಕಂತೆ   ತಮ್ಮ ನೆತ್ತಿಗಿತ್ತು ಆ ಬುತ್ತಿಯಲ್ಲಿಯ ಅಘಾಧವಾದ ಜ್ಞಾನವನ್ನು ಸಮಾಜದ ನೆತ್ತಿಗೆ ಪಸರಿಸಲು ಸದಾ ಹವಣಿಸಿ ಹಾತೊರೆದು ಸಮಾಜವನ್ನು ಸುವ್ಯವಸ್ಥೆಗೆ ತಂದವರು ಶ್ರೀ ಗುರು ಕುಮಾರ ಸನ್ನಿಧಿಯವರು.

“ವಜ್ರಾದಪಿ ಕಠೋರಾಣಿ ಮೃದೂನೀ ಕುಸುಮಾದಪಿ”

ಎಂಬ ಮಹಾತ್ಮರ ವ್ಯಕ್ತಿತ್ವ ವನ್ನೂ ತಿಳಿಸುವ ಲೋಕ ವಾಣಿಯಂತೆ ತಮ್ಮ ವಿಷಯದಲ್ಲಿ ಅತ್ಯಂತ ಕಠೋರ ಸ್ವಭಾವದವರು ಅಂದರೆ ತಮ್ಮ ಹಿತ ದೃಷ್ಟಿಯನ್ನು ,ತಮ್ಮ ಸುಖದ ಲೋಲುಪತೆಯನ್ನು, ತಮ್ಮ ಆಸೆ ಆಕಾಂಕ್ಷೆಗಳ ವಿಚಾರವನ್ನು ಬದಿಗೊತ್ತಿ ಲೋಕ ಹಿತಾರ್ಥಕ್ಕಾಗಿ ಸಂಪೂರ್ಣ ತ್ರಿಕರಣ ಪೂರ್ವಕವಾಗಿ ನಡೆದು ತೋರಿಸಿದ ಯತಿಷಾ ಶ್ರೀ ಕುಮಾರೇಶ.

ಶಿವಯೋಗ ಮಂದಿರದ ಸ್ಥಾಪನೆಯ ನಂತರ ಬಹು ಕಾರ್ಯ ಬಹುಲ್ಯದಲ್ಲೀ ಅವರು ತೊಡಗಿಕೊಳ್ಳುತ್ತಾರೆ,

Simple living high thinking ಎನ್ನುವ ಮಾತಿನಂತೆ 

ಅವರದ್ದು ಪವಿತ್ರವಾದ ಲಿಂಗ ದೇಹಕ್ಕೆ ಒಂದು ಮಬ್ಬಾದ ಕಾವಿ ಕಪನಿ,ಸದಾ ಸಮಾಜದ ಚಿಂತನೆಯಲ್ಲಿ ತೊಡಗಿದ ಮಸ್ತಕಕ್ಕೆ ಒಂದು ಚಾವುಕಾದ ಪಾವುಡ,ತನ್ನಂಗವನ್ನು ಲಿಂಗದಲ್ಲಿ ನೋಡು ಎನ್ನುವ ಆ ಲಿಂಗಕ್ಕೆ ಒಂದು ವಸ್ತ್ರ,ಸದಾ ಸಮಾಜ ಲೌಕಿಕ ಹಿತಾಸಕ್ತಿಯ ಲಿ ಮೈಮರೆತು ನಡೆಯುವಾಗ ಅದನ್ನು ಎಚ್ಚರಿಸುವ ಒಂದು ಬೆತ್ತ,ಜಂಗಮನ ಶ್ರೀಪಾದಕ್ಕೆ ಆವುಗೆ ಇವಿಷ್ಟು ಅವರ ವಸ್ತ್ರ ವಿನ್ಯಾಸ.ಎಂದು ಹೊಸಬಟ್ಟೆಯನ್ನು ಬಯಸಲಿಲ್ಲ,

ಸಮಾಜ ಬಟ್ಟೆ ಗೆಟ್ಟು ನಿಂತಾಗ ತಾವೇ ಬಟ್ಟೆಯಾಗಿ ನಿಂತರು,ಎಂದು ರುಚಿ ರುಚಿಯಾದ ಆಹಾರ ಬಯಸಲಿಲ್ಲ ತಮ್ಮ ಕೈಯ್ಯಿಂದ ಆಹಾರ ವಿಲ್ಲದೆ ಬೀದಿ ಪಾಲದವರಿಗೆ ಒಂದೊಂದು ಸ್ಥಾನವನ್ನು ಇತ್ತು ಆಹಾರ ನೀಡಿದರು,

ಎಂದು ತಾವು ಉನ್ನತ ಸ್ಥಾನವನ್ನು ಬಯಸಲಿಲ್ಲ ಇದ್ದ ಸ್ಥಾನವನ್ನೇ ಉನ್ನತಿಕರೆಸಿದರು.

ಯಾವುದೇ ಪವಾಡ ಮಾಡಲಿಲ್ಲ ಅವರು ಮಾಡಿದ ಕಾರ್ಯಗಳೆಲ್ಲವೂ ಪವಾಡವೇ ಆಗಿ ಹೋದವು,

ಸರಳತೆಯ ಸಾಕಾರ ಮೂರ್ತಿ 

ತಾತ್ವಿಕ ವಿಚಾರಗಳನ್ನು ಸಾತ್ವಿಕ ತಳಹದಿಯ ಮೇಲೆ ಇಡೀ ಜಗತ್ತಿಗೆ ಕರುಣಿಸಿ ತೋರ್ಪಡಿಸಿ ಉಣಬಡಿಸಿದ ಪೂಜ್ಯರು ನಮ್ಮ ಶ್ರೀ ಕುಮಾರೇಶ್ವರರು.

ಇವರ ಉದಾತ್ತ ನಿಲುವು, ಅಘಾದವದ ವೈಚಾರಿಕತೆ,

ಸರ್ವ ಸಮನ್ವಯ ಭಾವ ಎಲ್ಲರಿಗೂ ಬಾರದಿದ್ದರೂ ಅದರ ಒಂದಂಶ ನಾವುಗಳು ನಮ್ಮ ನಿತ್ಯ ಜೀವನದಲ್ಲಿ ಸಂಕಲಿಸೋಣ,ನಮ್ಮ ಬದುಕಿನ ಏಳ್ಗೆಗೆ ಸಮಾಜದ ಏಳ್ಗೆಗೆ ಸದ್ವಿನಿಯೊಗಿಸೋಣ.ಶರಣು ಶರಣಾರ್ಥಿ.

ಲೇಖಕರು : ಪೂಜ್ಯ ಪರ್ವತದೇವರು

Related Posts