ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
ಶಂಕರ ಕಾಯೊ ಸದಾ ಕಿಂಕರನು |
ಸಂಕಟವನು ದೂರಿಕರಿಸುತ || ಪ ||
ಭೋಂಕನೆ ಮನದ , ಬಿಂಕವ ಬಿಡಿಸಿ |
ಅಂಕಿತದೊಳಗಿರಿಸಿ ಕಿಂಕರರನು || ೧ ||
ಪರತರ ಶಿವನೀ , ಗುರುಚರವೆನಿಸಿ |
ನಿರುತದಿ ಸಂಚರಿಸಿ ಪರಿಪಾಲಿಸಿ || ೨ ||
ಸಾಭಾರಿ ನಿರಾಭಾರಿ , ಗುರು ನೀನೆ |
ಲೋಭಾದಿಗಳನಳಿದು ಲಾಭದಿಸುಳಿದು || ೩ ||
ದೀಕ್ಷ ಶಿಕ್ಷ ಮೋಕ್ಷ ಗುರು ನೀ ।
ದಕ್ಷನೆ ಮುಮ್ಮಲವ ಈಕ್ಷಿಸಿ ಕಳೆವ || ೪ ||
ಕಾಮಕಾಲ ಮಾಯ , ಸೀಮೆಯ ಬಿಡಿಸಿ |
ಕಾಮಾರಿ ಗುರುವರನೆ ಪ್ರೇಮದಿ ನೀನೆ || ೫ ||
ಇಷ್ಟ ಪ್ರಾಣ , ಶ್ರೇಷ್ಠ ಭಾವದಿ ।
ಕಷ್ಟವನತಿಗಳೆದು ಶಿಷ್ಟತನದಿ || ೬ ||
ತನು ಮೂರರಲಿ ಜನಿಪದೋಷವನು |
ಸನುಮತದಿಂದ ಕಳೆದು ತನುವಳಿದು || ೭ ||
ಸ್ವಯಚರಪರವು , ಭಯಲಯದಿರವು |
ಪಯಶೇಷಕರವಾಗಿ ದಯಯುತನಾಗಿ || ೮ ||
ಶಿವಯೋಗಾಲಯ , ಭುವನದಿ ಮೆರೆಯುವ |
ತವೆ ಸಾಧನವಿರಿಸಿ ನಿವಾಸಿಸಿ || ೯ ||