ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ
ಸಹೃದಯ ಓದುಗರಿಗೆ , ನನ್ನ ನಮಸ್ಕಾರಗಳು,
ಈ ತಿಂಗಳು ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ ಎರಡು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಶ್ರೀ ಕುಮಾರೇಶ್ವರರ ಭಜನ್
“ಗುರುದೇವ ದೇವ ಗುರುಕುಮಾರ”
ರಚನೆ:ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಶ್ರೀ ಸಿದ್ಧೇಶ್ವರಮಠ. ಹಂದಿಗುಂದ.
ಪರಿಕಲ್ಪನೆ : ಶ್ರೀಕಂಠ ಚೌಕೀಮಠ ನವದೆಹಲಿ
ಗಾಯಕರು :ಶ್ರೀ ರಾಮಚಂದ್ರ ಹಡಪದ
ಕನ್ನಡ ಚಲನಚಿತ್ರ ರಂಗದ ಹಿನ್ನಲೆ ಗಾಯಕರು
ನವೀನ ಸಂಗೀತ ಸಂಯೋಜನೆಯ ಅಲ್ಬಂ ಲೋಕಾರ್ಪಣೆ ಮತ್ತು ಕವಿರತ್ನ ದ್ಯಾಂಪುರ ಚನ್ನಕವಿಗಳ ಸಮಾಧಿ ಮಂಟಪ ಜೀರ್ಣೋದ್ಧಾರ ಮತ್ತು ಅಮೃತಶಿಲಾ ಮೂರ್ತಿಯ ಲೋಕಾರ್ಪಣೆಯನ್ನು ಅವರ ಪುಣ್ಯಸ್ಮರಣೆ -ಮಹಾಶಿವರಾತ್ರಿಯಂದು ನೆರವೇರಿಸವ ಹರ್ಷವನ್ನು ತಮ್ಮ ಜೊತೆ ಹಂಚಿಕೊಳ್ಳಲು ಸಂತಸವೆನಿಸುತ್ತದೆ.
ಈ ತಿಂಗಳು ಪೂಜ್ಯ ಶ್ರೀ ಕುಮಾರಶಿವಯೋಗಿಗಳ ಪುಣ್ಯಾರಾಧನೆ ಒಂದು ವಿಶೇಷ ಲೇಖನ ವನ್ನು ಸುಕುಮಾರ ಪ್ರಕಟಿಸುತ್ತಿದೆ, “ಹಾನಗಲ್ಲ ಶ್ರೀಗಳವರ ವ್ಯಕ್ತಿತ್ವ” ಲೇಖಕರು :ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ.
ಈ ಲೇಖನದ ಮೊದಲ ಸಾಲುಗಳು ..
“ ಈ ಜಗತ್ತೆಂಬ ರಂಗಭೂಮಿಗೆ ಬಂದವರು, ತಾವು ಹೋಗುವಾಗ ತಮ್ಮದೊಂದು ಚರಿತ್ರೆಯನ್ನು ಅನ್ಯರಿಗಾಗಿ ಬಿಟ್ಟುಹೋಗಬೇಕಾಗುತ್ತದೆ. ಬಾಳಿದವರ ಸಚ್ಚರಿತ್ರೆ ಮುಂದೆ ಬಾಳುವವರಿಗೆ ಆದರ್ಶಮಯವಾಗುವುದರಲ್ಲಿ ಸಂದೇಹವಿಲ್ಲ. ಜೀವನದಲ್ಲಿ ಬದುಕಿ ಸತ್ತವರಿಗಿಂತಲೂ ಸತ್ತು ಬದುಕಿದವರು ಮೇಲು, ಇಂತಹ ಆದರ್ಶವ್ಯಕ್ತಿಗಳ ಮಾಲಿಕೆಯಲ್ಲಿ ಮಧ್ಯಸ್ಥಾನವು ಹಾನಗಲ್ಲ ಶ್ರೀಗಳವರಿಗೆ ದೊರೆಯುವುದೆಂಬ ಹೇಳಿಕೆ ನಿಸ್ಸಂದೇಹವಾದುದು.
ಹನ್ನೆರಡನೆಯ ಶತಮಾನದ ಶ್ರೀ ಬಸವ ಮಹಾನುಭಾವರಂತೆ ಸಮಾಜದ ಧಾರ್ಮಿಕ, ನೈತಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳವರು ಹೊಸದೊಂದು ವಾತಾವರಣವನ್ನೇ ನಿರ್ಮಿಸಿ, ಇಪ್ಪತ್ತನೆಯ ಶತಮಾನದ ಬಸವನೆನಿಸಿಕೊಂಡರು. ಇವರು ಕೇವಲ ಮುಖಕ್ಕೆ ಹಾಕಿದ ಮುಸುಕಿನ ಮರೆಯಲ್ಲಿ ಮಣಿಗಳನ್ನೆಣಿಸುತ್ತ ದೇವರನ್ನು ಹುಡುಕಲಿಲ್ಲ; ಅದರ ಜೊತೆಗೆ, ಜಗವ ತುಂಬಿದ ಶಿವತತ್ವವನ್ನು ಕಂಡು ನಲಿದು-ಸೇವಿಸುವ ಮಹಾಸ್ವಾಮಿಗಳಾಗಿದ್ದರು”
ಈ ಸಾಲುಗಳು ಸಾಮಾನ್ಯ ಸಾಲುಗಳಲ್ಲ ! ಅಸಮಾನ್ಯವ್ಯಕ್ತಿತ್ವ ವನ್ನು ವರ್ಣಿಸುವ ಅನರ್ಘ್ಯ ಸಾಲುಗಳು !!
ಫೆಬ್ರುವರಿ ೨೦೨೩ ಸಂಚಿಕೆಯ ಲೇಖನಗಳ ವಿವರ
- ಕಾವ್ಯ : “ ಪಾಹಿ ಶಿವ ನೀ ಪಾಹಿ ಶಿವ” ರಚನೆ : ಪೂಜ್ಯ ಹಾನಗಲ್ಲ ಶ್ರೀ ಕುಮಾರ ಶಿವಯೋಗಿಗಳು
- ಧಾರವಾಹಿ: ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿಯಲ್ಲಿ ವೀರಶೈವ ದಾರ್ಶನಿಕ ಸಿದ್ಧಾಂತ ಭಾಗ-21 : ಲೇಖಕರು :ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
- ಸಂಸ್ಕತಿ-ನಾಗರಿಕತೆ-ಪೂಜ್ಯ ಜಗದ್ಗುರು ಡಾ|| ಸಿದ್ದರಾಮ ಮಹಾಸ್ವಾಮಿಗಳು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಗದಗ
- ಹಾನಗಲ್ಲ ಶ್ರೀಗಳವರ ವ್ಯಕ್ತಿತ್ವ -ಪೂಜ್ಯಶ್ರೀ ಲಿಂ. ಬಸವಲಿಂಗ ಸ್ವಾಮಿಗಳು, ನವಲಗುಂದ
- ಮೈಲಾರ ಬಸವಲಿಂಗ ಶರಣರು-ಡಾ. ಎಸ್. ವಿ. ಅಯ್ಯನಗೌಡರ.
- – ಶ್ರೀ ನಿರಂಜನ ಪ್ರಭು ಡಾ.ಚೆನ್ನಮಲ್ಲ ಮಹಾಸ್ವಾಮಿಗಳು ಶ್ರೀ ಸುವರ್ಣಗಿರಿ ಸಂಸ್ಥಾನ ವಿರಕ್ತಮಠ ಕನಕಗಿರಿ
- ಇಷ್ಟಲಿಂಗ : ಪರಿಕಲ್ಪನೆ- ಡಾ. ಎಂ. ಶಿವಕುಮಾರಸ್ವಾಮಿ.
- ಗುರುವೆ ಸುಜನಕುಲ ಕಲ್ಪತರುವೆ -ಶ್ರೀ ವೇ.ಮೂ.ಲಿಂ.ಪಂಡಿತ ಚೆನ್ನಬಸವ ಶಾಸ್ತ್ರಿಗಳು ಸೋ.ಹಿರೇಮಠ
- ಹಾನಗಲ್ಲ ಸ್ವಾಮಿ ನಿಮಗೆ ವಂದಿಸುವೆ-ಪೂಜ್ಯ ಕೇದಾರನಾಥ ದೇವರು ಯಾಳವಾರ
- ಆಡಿಯೋ ಬುಕ್ : ಶ್ರೀ ಮೈಲಾರ ಬಸವಲಿಂಗ ಶರಣರ ಗುರುಕರುಣ ತ್ರಿವಿಧಿ ಲೇಖಕರು : ಶ್ರೀ ಮನ್ನಿರಂಜನ ಪ್ರಣವ ಸ್ವರೂಪ ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ಸಂಸ್ಥಾನಮಠ. ಮುಂಡರಗಿ
ತ್ರಿವಿಧಿ ಗಾಯನ : ಪೂಜ್ಯಶ್ರೀ ಕೊಟ್ಟೂರು ದೇಶಿಕರು, ಶ್ರೀ ಸಂಗನಬಸವೇಶ್ವರಮಠ, ದರೂರು
ನಿರೂಪಣೆ ಪೂಜ್ಯಶ್ರೀ ಸಿದ್ಧಲಿಂಗ ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಸೋಮಸಮುದ್ರ
- ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿಅರ್ಪಿಸುವ“ ನೀನೇಕೆ ಮರೆಯಾದೆ ಗುರು ಸದಾಶಿವ”
ರಚನೆ: ಪೂಜ್ಯ ಶ್ರೀ ಕುಮಾರದೇವರು ಅಂತೂರುಬೆಂತೂರು
ಗಾಯನ: ಶ್ರೀಮತಿ ಉಷಾ ಪ್ರಭು ಹುನಗುಂದ್ ಕ್ಯಾಲಿಫೋರ್ನಿಯ.ಅಮೇರಿಕಾ
- ಹಾನಗಲ್ಲ ಶ್ರೀ ಕುಮಾರ ಶಿವಯೋಗಿ ಸೇವಾ ಸಮಿತಿ ನವದೆಹಲಿಅರ್ಪಿಸುವ“ಜಯ..ಜಯ.. ಶ್ರೀಕುಮಾರೇಶ”
ಸಂಗೀತ -ಗಾಯನ : ಶ್ರೀ ಸಿದ್ಧೇಂದ್ರಕುಮಾರ ಹಿರೇಮಠ
ಸುಕುಮಾರ ಬ್ಲಾಗ ಗಾಗಿ ಪರಿವರ್ತನೆಗೊಳ್ಳುವ ಯುನಿಕೋಡ ಪ್ರತಿಗಳನ್ನು ಕೂಲಂಕುಷವಾಗಿ ನೋಡಿ ಮುದ್ರಣತಪ್ಪುಗಳನ್ನು ಸರಿಪಡಿಸಿ ಕೊಟ್ಟ
ಪೂಜ್ಯಶ್ರೀ ಮರಿಕೊಟ್ಟೂರು ದೇವರು, ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠ, ಶ್ರೀಧರಗಡ್ಡೆ
ಅವರಿಗೆ ತುಂಬು ಹೃದಯದ ಕೃತಜ್ಞತೆಗಳು
-ಶ್ರೀಕಂಠ.ಚೌಕೀಮಠ.
ವ್ಯವಸ್ಥಾಪಕ -ಸಂಪಾದಕರು.
ಹಾನಗಲ್ಲ.ಶ್ರೀ ಕುಮಾರಶಿವಯೋಗಿ ಸೇವಾ ಸಮಿತಿ (ಟ್ರಸ್ಟ) ನವದೆಹಲಿ